*ಗರುಡ ಪುರಾಣ* - 177.
ಶಾಲಗ್ರಾಮ ಶಿಲೆ- ಇದರ ಪೂಜೆಯಿಂದ ಎಲ್ಲಾ ರೀತಿಯ ಕಲ್ಯಾಣ, ಮಂಗಳ ದೊರೆಯುತ್ತದೆ.ಸುಂದರವಾಗಿರುವ ಶಿಲಾ ಪೂಜಾ ಯೋಗ್ಯ.
ಈ ಶಿಲಾ ಇರುವ ನದಿಯಲ್ಲಿ ಸ್ನಾನ ಮಾಡಿದರೆ ಸರ್ವ ಪಾಪ ನಾಶವಾಗುತ್ತದೆ. ಹಾಗಾಗಿ ಇದು ತೀರ್ಥಸ್ನಾನ.ಮನೆಯಲ್ಲಿ ಪೂಜಿಸುವವರು ಮತ್ತು ತೀರ್ಥಪ್ರಾಶನ,ತೀರ್ಥಸ್ನಾನ ಮಾಡುವವರು ಆ ಶಿಲೆಯಲ್ಲಿರುವ ಚಕ್ರಗಳನ್ನು ಎಣಿಸಿ ಅದಕ್ಕೆ ಅಂದರೆ ಚಕ್ರಸಂಖ್ಯೆಗೆ ಅನುಸಾರವಾಗಿ ದೇವತೆಗಳ ನಾಮವನ್ನು ಜಪಿಸಬೇಕು.
ಇದು ಅಧಿಕವಾಗಿ ಗಂಡಕಿನದಿಯಲ್ಲಿ ಲಭ್ಯವಾಗುತ್ತದೆ. ಶಿಲೆಯಲ್ಲಿ ಒಂದು ಚಕ್ರವಿದ್ದರೆ ಸುದರ್ಶನ ಚಕ್ರದ ಶಾಲಗ್ರಾಮ ಎಂಬ ಹೆಸರು.ಹೀಗೆ 2 ವಿದ್ದರೆ ಲಕ್ಷೀನಾರಾಯಣ,3-ಅಚ್ಯುತ,4-ಚತುರ್ಭುಜಿ,5-ವಾಸುದೇವ,6-ಪ್ರದ್ಯುಮ್ನ,7-ಸಂಕರ್ಷಣ,8-ಪುರುಷೋತ್ತಮ,9-ನವವ್ಯೂಹ,10-ದಶಾತ್ಮಕ,11-ಅನಿರುದ್ಧ,12-ದ್ವಾದಶಾತ್ಮಕ,ಇದಕ್ಕಿಂತ ಹೆಚ್ಚು ಚಕ್ರವಿದ್ದರೆ ಅನಂತ ಶಾಲಗ್ರಾಮ ಎಂದು ಸಂಕಲ್ಪಿಸಿ ಪೂಜಿಸಬೇಕು.
*ಗರುಡ ಪುರಾಣ* - 178.
ಅಷ್ಟ ರತ್ನಗಳನ್ನು ಅಷ್ಟನಿಧಿಗಳು ಎನ್ನುತ್ತಾರೆ. ಈ ನಿಧಿಗಳಿಂದ ಸಂಪನ್ನನಾದ ಮನುಷ್ಯನು ಸಾತ್ವಿಕನೂ ಮತ್ತು ದಾಕ್ಷಿಣ್ಯ ಗುಣದಿಂದ ಸಂಪನ್ನನಾಗಿರುತ್ತಾನೆ.
ಯಾರು ಈ ನಿಧಿಗಳನ್ನು ಸುವರ್ಣ,ಬೆಳ್ಳಿ ಆದಿ ಮೂಲ್ಯವಾನ್ ಧಾತುಗಳ ಸಂಗ್ರಹ ಮಾಡಿ ಯತಿಗಳಿಗೆ ,ದೇವತೆಗಳಿಗೆ, ಯಾಜ್ಞಿಕರಿಗೆ ದಾನ ಮಾಡುತ್ತಾನೋ ಅವನ ಸಂಪತ್ತು ಅನೇಕ ಪೀಳಿಗೆ ವರೆಗೆ ಇರುತ್ತದೆ.ಇನ್ನು ಕೇವಲ ಒಂದು ರತ್ನವನ್ನು ಮಾತ್ರ ಹೊಂದಿರುವರು ಆ ರತ್ನಕ್ಕೆ ಅನುಗುಣವಾಗಿ ಸತ್ವ,ರಜ,ತಮೋ ಗುಣಗಳನ್ನು ಹೊಂದುತ್ತಾರೆ.ಉದಾಹರಣೆಗೆ ಪದ್ಮನಿಧಿಯನ್ನು ಹೊಂದಿದವನು ಸಾತ್ವಿಕ ಗುಣ ಸಂಪನ್ನನಾಗಿರುತ್ತಾನೆ.
*ಗರುಡಪುರಾಣ* - 179.
ನಮ್ಮೆಲ್ಲರ ಸಾಮಾನ್ಯ ಜೀವಿತ ಅವಧಿ 120 ವರ್ಷ 5 ದಿನ. ಅದರಲ್ಲಿ ವೈಯುಕ್ತಿಕ ಜೀವಿತ ಅವಧಿಯ ಬಗ್ಗೆ ಮಾಹಿತಿಯನ್ನು ಕೊಡುವುದು ಸಾಮುದ್ರಿಕಾಶಾಸ್ತ್ರ.
ಅದರ ಪ್ರಕಾರ ತಜ೯ನೀ ಮತ್ತು ಮಧ್ಯಮ ಬೆರಳುಗಳ (ಮೂಲದಿಂದ) ಮಧ್ಯಭಾಗದವರೆಗೆ ಆಯುರೇಖೆ ತಲುಪಿದ್ದರೆ ಅವನ ಆಯಸ್ಸು ನೂರು ವರ್ಷ.
ಹಾಗೆ ಕನಿಷ್ಠ ಬೆರಳಿನ ಮೂಲದಿಂದ ರೇಖೆ ಹೊರಟು ಮಧ್ಯ ಬೆರಳನ್ನು ಮುಟ್ಟಿ ದಾಟಿದರೆ ಅವನಿಗೂ ಆಯಸ್ಸು ನೂರು ವರ್ಷ.
ದಾಟದೆ ಮಧ್ಯಬೆರಳನ್ನು ಮುಟ್ಟಿದರೆ ಅರವತ್ತು ವರ್ಷ. ಆಯಸ್ಸು.
ಹಣೆಯಿಂದ ಕಿವಿಯವರೆಗೆ ಎರಡು ರೇಖೆವಿದ್ದರೆ ಅವನ ಆಯಸ್ಸು ಎಪ್ಪತ್ತು. ಅಲ್ಲಿಯೇ ಮೂರು ರೇಖೆವಿದ್ದರೆ ಆಗ ಆಯಸ್ಸು ಅರವತ್ತು.
ಅಲ್ಲಿಯೇ ರೇಖೆ ಒಮ್ಮೆ ಕಂಡು ,ಮತ್ತೊಮ್ಮೆ ಕಾಣದಿದ್ದರೆ ಆಯಸ್ಸು ಇಪತ್ತು.ರೇಖೆ ಇಲ್ಲದ ಹಣೆವಿದ್ದರಿಗೆ ಆಯಸ್ಸು ನಲವತ್ತು ಅಥವಾ ಅಕಾಲ ಮೃತ್ಯು. ಹಣೆಯಲ್ಲಿ ತ್ರಿಶೂಲ ಅಥವಾ ಕೊಡಲಿ ಚಿಹ್ನಾಂಕಿತನಿಗೆ ಆಯಸ್ಸು ನೂರು ವರ್ಷ.
*ಗರುಡ ಪುರಾಣ* - 180.
ಹಣೆಯಲ್ಲಿ ಸಮಾನ ಆಕಾರದ ಮೂರು ರೇಖೆಗಳು ಸ್ಪಷ್ಟವಾಗಿ ಕಂಡರೆ ಆತನಿಗೆ ಮಕ್ಕಳ ಭಾಗ್ಯ ಮತ್ತು60 ವರ್ಷ ಆಯಸ್ಸು.
ಅಲ್ಲಿಯೇ ಎರಡು ರೇಖೆವಿದ್ದರೆ ಆಗ 40 ವರ್ಷ ಆಯಸ್ಸು. ಒಂದು ರೇಖೆವಿದ್ದರೆ 20 ವರ್ಷ ಆಯಸ್ಸು. ಒಂದು ರೇಖೆವಿದ್ದು ಕಿವಿಯವರೆಗೆ ತಲುಪಿದರೆ ಆಯಸ್ಸು 100.
ರೋಮ ಕೂಪ ಎಂದರೆ ರೋಮದ ಬೇರು.ಅಲ್ಲಿಂದ ಒಂದು,ಎರಡು ಹೀಗೆ ಸಂಖ್ಯೆಯಲ್ಲಿ ಕವಲು ಒಡೆದು ಬೆಳೆಯುತ್ತದೆ. ತೊಡೆಯ ಭಾಗ ಮತ್ತು ಶರೀರದ ರೋಮ ಕೂಪದಲ್ಲಿ ಒಂದು ರೋಮವಿದ್ದು,ಗಂಟಲು ಆನೆಯ ಸೊಂಡಿಲಿನಂತೆ ಇದ್ದರೆ ಆತ ರಾಜ ಯಾ ಮಹಾತ್ಮ.
ಶರೀರದ ರೋಮ ಕೂಪದಲ್ಲಿ ಎರಡೆರಡು ರೋಮವಿದ್ದಲ್ಲಿ ಆತ ಪಂಡಿತ,ಶ್ರೋತಿಯ.ಶರೀರದ ರೋಮಕೂಪದಲ್ಲಿ ಮೂರು ರೋಮವಿದ್ದಲ್ಲಿ ಆತ ರೋಗಿ,ದರಿದ್ರ.
ಗರುಡ ಪುರಾಣ-181.
ಮನುಷ್ಯನ ಮೂಗಿನ ಲಕ್ಷಣಗಳು ಹೀಗಿದೆ.ಗಿಣಿಯ ಮೂಗು ಇದ್ದರೆ ಸುಖೀ,ಒರಟು &ಒಣಗಿದ ಮೂಗಿನವ ದೀರ್ಘ ಜೀವಿ.
ಮೂಗು ಛಿನ್ನವಾಗಿ,ಬಾವಿಯಂತೆ ಗುಂಡಿ ಇದ್ದರೆ ಸ್ತ್ರೀ ಸಹವಾಸ ಇದ್ದವನೆಂದು,ಉದ್ದ ಮೂಗಿನವ ಸೌಭಾಗ್ಯ ವಂತ,ಸೊಟ್ಟ ಮೂಗಿನವ ಚೌರ ಕಾರ್ಯ ಪ್ರವತ್ತನೆಂತಲೂ,ಮೂಗು ನುಣುಪಾಗಿದ್ದರೆ ಅಕಾಲ ಮೃತ್ಯುವಿದೆಯೆಂದು,ಮೂಗು ಚಿಕ್ಕದಿದ್ದರೆ ಭಾಗ್ಯವಂತವೆಂದು,ಮೂಗು ದಕ್ಷಿಣ ದಿಕ್ಕಿಗೆ ವಕ್ರವಾದರೆ ಕ್ರೂರಿ ಎಂದು,ಮೂಗಿನಲ್ಲಿ ಸಣ್ಣಪುಟ್ಟ ರಂಧ್ರವಿದ್ದು ನೇರವಿದ್ದರೆ ಚಕ್ರವರ್ತಿ ಎಂದು ಪರಿಗಣಿಸಬೇಕು.
ಗರುಡ ಪುರಾಣ-182.
ಭತ್ತದ ಹೊಟ್ಟಿನ ಬಣ್ಣದ ಉಗುರುವಿದ್ದರೆ ಆತ ನಪುಂಸಕ, ಉಗುರು ಹರಿದಿದ್ದರೆ ಧನಹೀನ,ವಿವರ್ಣ ಉಗುರಿನವ ತರ್ಕದ ಮಾತುಗಾರ,ರಕ್ತವರ್ಣ ಉಗುರಿನವ ರಾಜ,ಗೋಧಿಯ ಹಾಗೇ ಉಗುರಿದ್ದವ ಧನಿಕನಾಗಿರುತ್ತಾನೆ.
ಉದ್ದವಾದ ಬೆರಳುವಿದ್ದರೆ ದೀರ್ಘಾಯು,ಹೆಬ್ಬರಳಿನ ಮೂಲದಲ್ಲಿ ಗೋಧಿ ಆಕಾರ ಚಿಹ್ನೆವಿದ್ದರೆ ಪುತ್ರ ಭಾಗ್ಯ,ಕಡಿಮೆ ಬೆರಳಿದ್ದರೆ ನಿರ್ಧನ,ದಪ್ಪ ಬೆರಳಿದ್ದರೆ ಧನಿಕ,ಬೆರಳುಗಳು ಒಂದಕ್ಕೊಂದು ತಾಗದೇವಿದ್ದರೆ ಶುಭ. ಚಿಕ್ಕ ಬೆರಳಿದ್ದರೆ ಮೇಧಾವಿ,ಕೃಶ ಬೆರಳಿದ್ದವ ವಿನಯೀಯಾಗಿರುತ್ತಾನೆ.
ಗರುಡ ಪುರಾಣ-183.
ಅಂಗೈ - ಆಳವಾಗಿದ್ದರೆ ಹಿರಿಯರು ಕೂಡಿಟ್ಟ ಹಣ ನಷ್ಟಗೊಳಿಸುವವ, ಗೋಲಾಕಾರವಿದ್ದರೆ ಧನವಂತ,ಉನ್ನತವಾಗಿದ್ದರೆ ದಾನಿ,ವಿಷಮ ಸ್ವರೂಪದಲ್ಲಿದ್ದರೆ ಕಠೋರ ವ್ಯಕ್ತಿ,ಲಾಕ್ಷ ಯಾ ಅರಗಿನ ರಸದಂತೆವಿದ್ದರೆ ರಾಜನಾಗುವ ಭಾಗ್ಯ,ಹಳದಿ ಯಾ ಪೀತ ವರ್ಣವಿದ್ದರೆ ಪರಸ್ತ್ರೀ ಪ್ರೀಯ, ಒರಟಾಗಿದ್ದರೆ ನಿರ್ಧನಾಗಿರುತ್ತಾನೆ.
ಬೆರಳು-ತಾಗದೆ ದೂರ ದೂರ ಇದ್ದರೆ ಶುಭ,ಚಿಕ್ಕದಿದ್ದರೆ ಮೆಧಾವಿ,ಅಂಟಿಕೊಂಡು ಇದ್ದರೆ ಸೇವಕ ವೃತ್ತಿ, ಸ್ಥೂಲವಿದ್ದರೆ ನಿರ್ಧನಿ,ಕೃಶವಿದ್ದರೆ ವಿನ
ಯೀ,ಹುಲಿಯಂತೆ ಇದ್ದರೆ ಬಲವಂತವಾಗಿರುತ್ತಾನೆ.
ಕಂಠ-ನುಣುಪಾಗಿದ್ದರೆ ನಿರ್ಧನೀ,ಒಣಗಿದ ಮತ್ತು ಉನ್ನತ ಶಿರ ವ್ಯಾಪ್ತವಾಗಿದ್ದರೆ ಸುಖೀ,ಎಮ್ಮೆಯಂತೆ ಇದ್ದರೆ ವೀರ,ಮೃಗದಂತೆ ಇದ್ದರೆ ಶಾಸ್ತ್ರ ಪಾರಂಗತ,ಶಂಖದಂತೆ ಇದ್ದರೆ ರಾಜ,ಉದ್ದವಿದ್ದರೆ ಭೋಜನ ಪ್ರಿಯನು ಆಗಿರುತ್ತಾನೆ.
ತಪ್ಪಾಗಿ ಗ್ರಹಿಸಬಾರದು ಇದು ಸಂಗ್ರಹ ಮಾಹಿತಿ
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು