Thursday, 31 October 2019

ಅಗೊಗಿರಗಳ ಬಗ್ಗೆ ನಿಮಗೆ ಗೊತಿಲ್ಲದ ವಿಷಯ

ಸ್ನೇಹಿತರೆ ಅಗೋರಿಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಆಸಕ್ತಿಕರ ವಿಷಯಗಳನ್ನು ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ನಮ್ಮ ಹಿಂದೂ ಪರಂಪರೆಯಲ್ಲಿ ಅದೆಷ್ಟೋ ರೀತಿಯಾದ ಸಾಧು ಸಂತರು ಸಿದ್ಧಿ ಪುರುಷ ಇದ್ದಾರೆ ಹಾಗೂ ಅವರಲೆಲ್ಲರಲ್ಲಿ ವಿಭಿನ್ನವಾದ ವಿಶಿಷ್ಟವಾದ ಕಲೆ ಮತ್ತು ಆಚಾರ ಗಳು ಇವೆ ಆದರೆ ರೀತಿ ಅಗೋರಿ ಪಂಕ್ತವು ಸಹಾ ತನ್ನದೇ ಆದ ಛಾಪನ್ನು ಮೂಡಿಸಿದೆ ಹಾಗಾಗಿ ಈ ಆಗೊರಿ ಅಂದರೆ ಯಾರು ಅವರು ಹೇಗಿರುತ್ತಾರೆ ಮತ್ತು ಅವರ ಜೀವನ ಶೈಲಿ ಹೇಗಿರುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಅಗೋರಿಗಳು ಶಿವನ ಅಪ್ರತಿಮ ಭಕ್ತರಾಗಿದ್ದು ಆತ್ಮವನ್ನು ಗೆದ್ದು ಪರಮಾತ್ಮನನ್ನು ಕಾಣುತ್ತಾರೆ ಎಂದು ನಂಬುವರು ಅದರಂತೆ ಇವರು ಮನುಷ್ಯನ ದೇಹಕ್ಕೆ ಯಾವುದೇ ರೀತಿಯಾದ ಮಾನ್ಯತೆ ಕೊಡುವುದಿಲ್ಲ ಆತ್ಮದ ಸರ್ವ ಶ್ರೇಷ್ಟ ಹೀಗಾಗಿ ಆತ್ಮವನ್ನು ಅರಿತವನು ಪರಮಾತ್ಮನನ್ನು ಸೇರುತ್ತಾರೆ ಎಂದು ಹೇಳುತ್ತಾರೆ.

ಇವರು ಸೆಣಬಿನ ತುಂಡನ್ನು ಬಟ್ಟೆಯನ್ನಾಗಿ ಹಾಕಿಕೊಳ್ಳುತ್ತಾರೆ ಇಲ್ಲವೇ ಬೆತ್ತ ಲೆಯಾಗಿ ಇರುತ್ತಾರೆ ಅಲೌಕಿಕ ಸುಖವನ್ನು ತ್ಯಜಿಸಿ ಪಂಚೇಂದ್ರಿಯಗಳ ಹಿಡಿತವನ್ನು ಸಾಧಿಸಲು ಈ ರೀತಿ ಬೆತ್ತ ಲೆಯಾಗಿ ಇರುತ್ತಾರೆ ಮತ್ತು ಇವರು ಹೆಚ್ಚಾಗಿ ಜನ ಸಮೂಹ ಇರುವ ಜಾಗದಲ್ಲಿ ಇರಲು ಇಷ್ಟ ಪಡುವುದಿಲ್ಲ ಅದರ ಬದಲಾಗಿ ಸ್ಮಶಾ ನದಲ್ಲಿ ಇರಲು ಹೆಚ್ಚು ಇಷ್ಟ ಪಡುತ್ತಾರೆ ಇನ್ನು ಇವರ ಆಹಾರ ಪದ್ಧತಿಯ ಬಗ್ಗೆ ಹೇಳುವುದಾದರೆ ಇವರು ಯಾವುದಕ್ಕೂ ಕೂಡ ಅಸಹ್ಯ ಪಡುವುದಿಲ್ಲ ಸ್ಮಶಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಇರುವ ಹೆಣ ಗಳನ್ನು ಬಗೆದು ತಿನ್ನುತ್ತಾರೆ ಮತ್ತು ಕಸ ಕಡ್ಡಿ ಕೊಳೆತ ಹಣ್ಣು ಹಂಪಲು ಪ್ರಾಣಿಗಳ ಮಲ ಮೂ ತ್ರ ಸೇವನೆ ಮಾಡುತ್ತಾರೆ. ಇವರು ಮನುಷ್ಯನಿಂದ ದುಡ್ಡು ಬಯಸುವುದಿಲ್ಲ ಹೆಚ್ಚು ಅಂದರೆ ಅವರಿಗೆ ಪ್ರಿಯವಾದ ಗಾಂ ಜಾ ಬಯಸುತ್ತಾರೆ.

ಇವರು ಶಿವ ಮತ್ತು ಶಕ್ತಿಯ ಆರಾಧಕ ಆಗಿದ್ದು ಸ್ಮಶಾನದಲ್ಲಿ ಹೆಣ ಗಳನ್ನು ಸುಟ್ಟಾಗ ಸಿಗುವ ಬೂದಿಯನ್ನು ಮೈ ತುಂಬಾ ಬಳೆದು ಕೊಳ್ಳುತ್ತಾರೆ ಹಾಗೂ ಇದನ್ನು ಚಿತಾ ಭಸ್ಮ ಎಂದು ಸಹಾ ಕರೆಯುತ್ತಾರೆ ಹಾಗೂ ಇದನ್ನು ಪ್ರತಿಯೊಬ್ಬ ಆಗೊರಿಯು ಸಹಾ ತನ್ನ ಮೈಗೇ ಹಚ್ಚಿಕೊಂಡು ಇರುತ್ತಾನೆ ಹಾಗೂ ಆಗೊರಿಗಳಲ್ಲಿ ಸಹಾ ಗುರುಗಳು ಇರುತ್ತಾರೆ ಮತ್ತು ಈ ಗುರುಗಳು ತನ್ನ ಶಿಷ್ಯರಿಗೆ ಅನೇಕ ರೀತಿಯಾದ ಪರೀಕ್ಷೆ ಮಾಡುತ್ತಾರೆ ಆನಂತರ ಆಗೋರಿ ದೀಕ್ಷೆಯನ್ನು ಕೊಡಲಾಗುತ್ತದೆ ಈ ಅಗೊರಿಗಳು ಹೆಚ್ಚಾಗಿ ಕಾಶಿ ಕೇದಾರನಾಥ್ ಪಶುಪತಿನಾಥ ಹೀಗೆ ಶಿವನ ದೇವಸ್ಥಾನದ ಸುತ್ತ ಹೆಚ್ಚಾಗಿ ಕಾಣಿಸುತ್ತಾರೆ. ಹಾಗಾಗಿ ವಾಮಾ ಚಾರ ಮಾಟ ಮಂತ್ರಗಳನ್ನು ಮಾಡುತ್ತಾರೆ ಎಂದು ಕೆಲವರು ತಪ್ಪಾಗಿ ತಿಳಿಯುತ್ತಾರೆ ಆದರೆ ಇವರು ಹಠ ಯೋಗದ ಪರಿಣತರು ಯೋಗಾಸನ ದಿಂದ ಕೆಲವು ವಿಶೇಷ ಶಕ್ತಿ ಪಡೆದಿರುತ್ತಾರೆ ಹಾಗೂ ಇವರಿಗೆ ಅನೇಕ ರೋಗಗಳನ್ನು ಗುಣ ಪಡಿಸುವ ಶಕ್ತಿಯು ಸಹಾ ಈ ಯೋಗಾಸನ ದಿಂದ ಬಂದಿರುತ್ತದೆ ಮತ್ತು ಇವರು ಪ್ರಚಾರ ಹಾಗೂ ಪ್ರಚೋದನೆ ಮಾಡುವುದಿಲ್ಲ.

ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಅದು ಖಂಡಿತ ಕುಜ ದೋಷ ಆಗಿರುತ್ತದೆ

ಕುಜ ದೋಷ ಬಂದಾಗ ನಾವು ಏನು ಮಾಡಬೇಕು ಅದನ್ನ ಪರಿಹಾರ ಮಾಡಿಕೊಳ್ಳಲು ಏನೆಲ್ಲಾ ಪರಿಹಾರ ಇದೆ ಮತ್ತು ನಮಗೆ ಕುಜ ದೋಷ ಇದೆ ಎಂಬುದು ತಿಳಿದುಕೊಳ್ಳುವುದು ಹೇಗೆ ಎಲ್ಲವನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇವೆ ಎರಡು ನಿಮಿಷ ಈ ಲೇಖನ ಓದಿ. ಒಬ್ಬ ಮನುಷ್ಯ ಎಂದಮೇಲೆ ಆತನ ಹುಟ್ಟಿನಿಂದ ಅಥವ ತನ್ನ ಒಂದು ನಿರ್ದಿಷ್ಟ ವಯಸ್ಸಿನಿಂದ ಒಂದಲ್ಲ ಒಂದು ದೋಷ ಎಂಬುದು ಇದ್ದೇ ಇರುತ್ತದೆ ಅದ್ರಲ್ಲಿ ಕುಜ ದೋಷ, ಶನಿ ದೋಷ, ಗುರು ದೋಷ, ಹೀಗೆ ಮತ್ತಷ್ಟು ಹತ್ತು ಹಲವುಗಳು ಇರುತ್ತದೆ. ನಾವು ಕುಜ ದೋಷವನ್ನು ಸಹ ಸಾಮಾನ್ಯ ರೀತಿಯಲ್ಲಿ ಬಿಟ್ಟು ಬಿಡಲು ಸಾಧ್ಯ ಇಲ್ಲವೇ ಇಲ್ಲ ಕುಜ ಎಂದರೆ ನಮ್ಮ ಸಾಮಾನ್ಯ ಜೀವನ ಮತ್ತು ವೈವಾಹಿಕ ಜೀವನಕ್ಕೆ ಸಂಭಂಧ ಪಟ್ಟಂತೆ ಸಾಕಷ್ಟು ರೀತಿಯ ತೊಂದ್ರೆ ಮಾಡುತ್ತಾನೆ. ನಾವು ಕುಜನ ಗ್ರಹದ ಆಗ್ರಾ ದೇವರಾದ ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡುವುದು ಸೂಕ್ತ.

ಕುಜ ದೋಷವನ್ನು ನಮ್ಮ ಜಾತದದ ಜನ್ಮ ಕುಂಡಲಿ ಪ್ರಕಾರ 1,2, 4,7, ಮತ್ತು 8 ಮತ್ತು 12 ಮನೆಯಲ್ಲಿ ಇದ್ದರೆ ಒಬ್ಬ ವ್ಯಕ್ತಿಗೆ ಕುಜ ದೋಷ ಇದೆ ಎಂಬ ಸೂಚನೆ ನೀಡುತ್ತದೆ. ಕುಜ ದೋಷದಿಂದ ಸಮಸ್ಯೆಗಳು ಅನುಭವಿಸುತ್ತಾ ಇರೋ ಜನಕ್ಕೆ ಮಂಗಳ ಗ್ರಹವು ನಕಾರಾತ್ಮಕ ಸೂಚನೆ ನೀಡುತ್ತಾ ಇರುತ್ತಾನೆ. ಸಾಕಷ್ಟು ತೊಂದ್ರೆಗಳು ಎದುರಿಸುವ ಸ್ತಿತಿ ಬರುತ್ತದೆ ಅದು ನೀವು ಮಾಡಿದ ಪಾಪ ಪುಣ್ಯ ಲೆಕ್ಕದ ಮೇಲೆ ಎಲ್ಲವು ಅವಲಂಬಿತ ಆಗಲಿದೆ. ಜೀವನದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತೀರಿ. ಮನೆಯಲ್ಲಿ ಯಾವಾಗ ಜಗಳ ಎಂಬುದು ಇದ್ದೆ ಇರುತ್ತದೆ. ಸ್ನೇಹಿತರು ನಿಮಗೆ ದ್ರೋಹ ಮಾಡುತ್ತಾರೆ, ಮತ್ತು ಆರೋಗ್ಯದಲ್ಲಿ ಸಹ ಬದಲಾವಣೆ ಇದರ ಜೊತೆಗೆ ನಿಮ್ಮ ಇಷ್ಟದ ಜೀವನ ಸಹ ನಿಮಗೆ ಸಿಗುವುದಿಲ್ಲ ಈ ರೀತಿಯ ಲಕ್ಷಣಗಳು ಕುಜ ದೋಷದಿಂದ ಬರುತ್ತದೆ.

ಇದಕ್ಕೆ ಪರಿಹಾರ ಮಾರ್ಗಗಳು ಅಂದ್ರೆ ಕುಂಭ ವಿವಾಹ ಮಾಡಿದ್ರೆ ಈ ಸಮಸ್ಯೆಗಳು ಶಾಶ್ವತ ನಿವಾರಣೆ ಆಗುತ್ತದೆ. ಜಾತದಲ್ಲಿ ಮಂಗಳ ದೋಷ ಇರುವ ಹುಡುಗ ಅಥವ ಹುಡುಗಿ ವಿವಾಹ ಆದರು ಸಹ ಇದಕ್ಕೆ ಪರಿಹಾರ ದೊರೆಯಲಿದೆ. ಹಾಗೆಯೇ ಮಂಗಳವಾರ ದಿನ ಬಡ ಜನಕ್ಕೆ ತೊಗರಿ ಬೆಳೆ ದಾನ ಮಾಡಬೇಕು ಹಾಗೆಯೇ ಫೋಟೋ ಮೇಲೆ ನೀಡಿರುವ ವಾಸುದೇವನ್ ಗುರುಗಳಿಗೆ ಈ ಕೂಡಲೇ ಕರೆ ಮಾಡಿರಿ ಅವರು ಒಂದಿಷ್ಟು ಉಪಯುಕ್ತ ಮಂತ್ರಗಳನ್ನು ನೀಡುತ್ತಾರೆ ಅವುಗಳನ್ನು ಸಹ ನೀವು ಪಾರಾಯಣ ಮಾಡಿದ್ರೆ ಕುಜ ದೋಷದಿಂದ ಸಂಪೂರ್ಣವಾಗಿ ದೂರ ಆಗಬಹುದು. ಈ ಲೇಖನ ಇಷ್ಟ ಆದ್ರೆ ಮರೆಯದೇ ಶೇರ್ ಮಾಡಿರಿ ನಿಮ್ಮ ಎಲ್ಲ ಸ್ನೇಹಿತರಿಗೂ ತಿಳಿಸಿ. ಮತ್ತಷ್ಟು ಇದೆ ರೀತೀಯ ಮಾಹಿತಿ ಪಡೆಯಲು ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಮರೆಯಬೇಡಿ.

ಹೆಣ್ಣುಮಕ್ಕಳು ತೆಂಗಿನಕಾಯಿಯನ್ನು ಒಡೆದರೆ ಅದು ಅಶುಭ

ನಮ್ಮ ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿಗೆ ಬಹಳ ಒಳ್ಳೆಯ ಮಹತ್ವವನ್ನು ಕೊಡಲಾಗಿದೆ. ಪ್ರತಿಯೊಂದು ಪೂಜಾ ಹೋಮ ಹವನಗಳಲ್ಲಿ ಮತ್ತು ಮಂಗಳ ಕಾರ್ಯಗಳಲ್ಲಿ ತೆಂಗಿನಕಾಯಿಗೆ ಬಹಳ ಮಹತ್ವದ ಸ್ಥಾನವಿದೆ. ಪ್ರತಿಯೊಂದು ಮಂಗಳ ಕಾರ್ಯಗಳಲ್ಲೂ ಕೂಡ ತೆಂಗಿನ ಕಾಯಿ ಇರಲೇಬೇಕು ಮತ್ತು ತೆಂಗಿನಕಾಯಿಯನ್ನು ಸ್ತ್ರೀ ಸ್ವರೂಪಿಣಿ ಎಂದು ಕರೆಯುತ್ತಾರೆ. ಹಾಗಾದರೆ ಈ ತೆಂಗಿನಕಾಯಿಯನ್ನು ಪೂಜೆಯ ಸಮಯದಲ್ಲಿ ಏಕೆ ಒಡೆಯುತ್ತಾರೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ವಿಷ್ಣು ಭೂಲೋಕಕ್ಕೆ ಬರುವಾಗ ಲಕ್ಷ್ಮೀದೇವಿ ಕಲ್ಪವೃಕ್ಷ ಮತ್ತು ಕಾಮದೇನುಗಳನ್ನು ತನ್ನ ಜೊತೆಗೆ ಕರೆದುಕೊಂಡು ಬರುತ್ತಾನೆ. ಆದ್ದರಿಂದ ಕಲ್ಪವೃಕ್ಷ ಮರದಿಂದ ಬೆಳೆಯುವ ತೆಂಗಿನ ಕಾಯಿಗೆ ತನ್ನದೇ ಆದ ವಿಶೇಷವಾದ ಸ್ಥಾನವಿದೆ. ಇನ್ನು ತೆಂಗಿನಕಾಯಿಯನ್ನು ಲಕ್ಷ್ಮೀಯ ಸ್ವರೂಪ ಎಂದು ಕೂಡ ಕರೆಯುತ್ತಾರೆ.

ಮತ್ತು ಇದೆ ಕಾರಣಕ್ಕೆ ತೆಂಗಿನಕಾಯಿಯನ್ನು ಎಲ್ಲ ಮಂಗಳಕಾರ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಮತ್ತು ಹೋಮ ಹವನಗಳಲ್ಲಿ ತೆಂಗಿನಕಾಯಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಕಳಸದ ಸ್ಥಾಪನೆಗೆ ತೆಂಗಿನಕಾಯಿ ಬೇಕೇಬೇಕು ಮತ್ತು ನವರಾತ್ರಿಯಲ್ಲಿ ತೆಂಗಿನಕಾಯಿಗೆ ಬಹಳಷ್ಟು ಮಹತ್ವದ ಸ್ಥಾನವಿದೆ. ಇನ್ನು ಈ ತೆಂಗಿನಕಾಯಿ ವಿಷ್ಣು ದೇವರಿಗೆ ಬಹಳಷ್ಟು ಪ್ರಿಯವಾದದ್ದು ಆದ್ದರಿಂದ ತೆಂಗಿನಕಾಯಿಯನ್ನು ಪ್ರಸಾದ ರೂಪದಲ್ಲಿ ಇಟ್ಟು ಪೂಜೆಯನ್ನು ಮಾಡಲಾಗುತ್ತದೆ. ಇನ್ನು ಪೂಜೆಯ ಸಮಯದಲ್ಲಿ ಕಳಸದಲ್ಲಿ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡಲಾಗುತ್ತದೆ ನಂತರ ಕಳಸದ ತೆಂಗಿನ ಕಾಯಿಯನ್ನು ಕಳಸದಲ್ಲಿಯೇ ಇಟ್ಟು ಪೂಜೆಗೆ ಉಪಯೋಗಿಸಿದ ಉಳಿದ ತೆಂಗಿನಕಾಯಿಯನ್ನು ಒಡೆದು ನಂತರ ಅದರಲ್ಲಿ ಪ್ರಸಾದವನ್ನು ಮಾಡಿ ಎಲ್ಲರಿಗೂ ಹಂಚಲಾಗುತ್ತದೆ. ಇನ್ನು ಮುಖ್ಯವಾದ ವಿಷ್ಯಯವೆಂದರೆ ಪೂಜೆ ಮಾಡಿದ ತೆಂಗಿನಕಾಯಿಯನ್ನು ಯಾವುದೇ ಕಾರಣಕ್ಕೂ ಮಹಿಳೆಯರು ಒಡೆಯಬಾರದು.

ಒಂದು ವೇಳೆ ಸ್ತ್ರೀಯರು ತೆಂಗಿನಕಾಯಿಯನ್ನು ಒಡೆದರೆ ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ ಹಾಗೂ ಅಂದುಕೊಂಡ ಕೆಲಸಗಳು ನೆರವೇರುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು. ಇನ್ನು ತೆಂಗಿನಕಾಯಿಯನ್ನು ಪೂಜೆಗೆ ಬಳಕೆ ಮಾಡುವಾಗ ಯಾವುದೇ ಕಾರಣಕ್ಕೂ ತೆಂಗಿನಕಾಯಿಯ ಜುಟ್ಟನ್ನು ತೆಗೆಯಬಾರದು ಹೀಗೆ ಏನಾದರೂ ತೆಂಗಿನ ಕಾಯಿಯ ಜುಟ್ಟನ್ನು ತೆಗೆದು ಪೂಜೆ ಮಾಡಿದರೆ ಪೂಜೆ ಫಲನೀಡುವುದಿಲ್ಲ. ಪೂಜೆ ಮಾಡಿ ತೆಂಗಿನಕಾಯಿಯನ್ನು ಒಡೆಯುವಾಗ ಆ ತೆಂಗಿನಕಾಯಿ ಹಾಳಾಗಿದ್ದರೆ ಅದು ಅಶುಭ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅದು ಅಶುಭ ಅಲ್ಲ ಹೌದು ಸ್ನೇಹಿತರೆ ತೆಂಗಿನಕಾಯಿ ಹಾಳಾಗಿದ್ದರೆ ನೀವು ಮಾಡಿದಂತಹ ಪೂಜೆಯಲ್ಲಿ ಏನೋ ತೊಂದರೆ ಆಗಿದೆ ಎಂದು ಅರ್ಥ ಮತ್ತು ನೀವು ಆ ತೊಂದರೆಯನ್ನು ಸರಿ ಮಾಡಿಕೊಂಡು ಇನ್ನೊಮ್ಮೆ ಪೂಜೆ ಮಾಡಿ ಅನ್ನುವುದರ ಸೂಚನೆಯಾಗಿದೆ.

ಆದರೆ ಇನ್ನೂ ಕೆಲವರ ಪ್ರಕಾರ ಪೂಜೆಯ ಸಮಯದಲ್ಲಿ ತೆಂಗಿನ ಕಾಯಿ ಹಾಳಾದರೆ ಅದು ಅಶುಭ ಅಲ್ಲ ಅದೊಂದು ಶುಭ ಸೂಚನೆ ಎಂದು ಸಹ ಹೇಳುತ್ತಾರೆ ಒಟ್ಟಿನಲ್ಲಿ ಯಾರೇ ಏನೇ ಹೇಳಿದರೂ ಸಹ ಅವರವರ ನಂಬಿಕೆ ಅವರಿಗೆ ಒಳ್ಳೆಯದು ಹಾಗಾಗಿ ಇದು ಪರಿಪೂರ್ಣವಾಗಿ ಕೆಟ್ಟದ್ದು ಎಂದು ಹೇಳಲಾಗುವುದಿಲ್ಲ ಹಾಗೇನೇ ಒಳ್ಳೆಯದು ಅಂತಾನೂ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ದೈವಶಕ್ತಿಯಲ್ಲಿ ನಂಬಿಕೆ ಇಟ್ಟು ಮಾಡಿದ ಎಲ್ಲ ಕೇಲಸಗಳು ಸಹ ಒಳ್ಳೆಯವೇ ಆಗಿರುತ್ತವೆ. ಈ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮ ಎಲ್ಲಾ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Wednesday, 30 October 2019

ಕಟಿಂಗ್ ಮಾಡಿಸಿದ ಮೇಲೆ ಹಾಗೂ ಸಾವಿನ ಸುದ್ದಿ ಕೇಳಿದರೆ ಸ್ನಾನ ಏಕೆ ಮಾಡುತ್ತಾರೆ ಗೊತ್ತೇ?ಓದಿ ಇದನ್ನು

ಕಟಿಂಗ್ ಮಾಡಿಸಿದ ಮೇಲೆ ಹಾಗೂ ಸಾವಿನ ಸುದ್ದಿ ಕೇಳಿದರೆ ಸ್ನಾನ ಏಕೆ ಮಾಡುತ್ತಾರೆ ಗೊತ್ತೇ?ಓದಿ ಇದನ್ನು

ಎಷ್ಟೇ ಕೆಲಸಗಳಿದ್ದರೂ, ಯಾವಾಗಲೇ ಆಗಲಿ,ಎಲ್ಲೇ ಇರಲಿ ….ನಾವು ಪ್ರತಿ ನಿತ್ಯ ಸ್ನಾನ ಮಾಡಲೇಬೇಕು. ಇದರಿಂದ ಶರೀರ ಶುದ್ಧವಾಗುವುದರ ಜೊತೆಗೆ ಅನೇಕ ರೀತಿಯ ರೋಗಗಳು ಹತ್ತಿರ ಸುಳಿಯದೆ ಇರುತ್ತವೆ. ಶರೀರದ ಆರೋಗ್ಯದ ಜೊತೆಗೆ ಮನಸ್ಸು ಸಹ ಉಲ್ಲಾಸದಿಂದಿದ್ದು ನೆಮ್ಮದಿ ದೊರೆಯುತ್ತದೆ.  ನಾವು ದಿನವೂ ಸ್ನಾನ ಮಾಡುತ್ತೇವಾದರೂ ಕೆಲವು ಸಂದರ್ಭಗಳಲ್ಲಿ ತಪ್ಪದೆ ಸ್ನಾನ ಮಾಡಬೇಕೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆ ಸಂದರ್ಭಗಳು ಯಾವುವೆಂದು ತಿಳಿದುಕೊಳ್ಳೋಣ,

ಕಟ್ಟಿಂಗ್ ಮಾಡಿಸಿಕೊಂಡ ನಂತರ..
ಕೂದಲು ಕತ್ತರಿಸಿಕೊಂಡನಂತರ ಶರೀರದ ಮೇಲೆ ಅಂಟಿಕೊಂಡಿರುವ ಸಣ್ಣ ಕೂದಲುಗಳಿಂದ ಅನಾರೋಗ್ಯ ಉಂಟಾಗುತ್ತದೆ. ಆದುದರಿಂದ ಕಟ್ಟಿಂಗ್ ಮಾಡಿಸಿಕೊಂಡ ಒಡನೆಯೇ ಸ್ನಾನ ಮಾಡಬೇಕು.

ಶ್ಮಶಾನದಿಂದ ಬಂದ ನಂತರ..

ಯಾರಾದರು ಮರಣ ಹೊಂದಿದಾಗ ಅವರ ಮತದ ಸಂಪ್ರದಾಯದಂತೆ ದಹನ ಅಥವ ಖನನ ಮಾಡುತ್ತಾರೆ. ನಾವು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲೇ ಬೇಕು. ಯಾಕೆಂದರೆ, ಸತ್ತ ವ್ಯಕ್ತಿ ನಮಗೆ ಎಷ್ಟೇ ಹತ್ತಿರದವರಾದರೂ ಅದು ಮೃತ ದೇಹವೇ. ಅದರಲ್ಲಿ ಕೆಲವು ಕ್ರಿಮಿ ಕೀಟಗಳು ಇದ್ದೇ ಇರುತ್ತವೆ. ಅವು ನಮ್ಮ ಶರೀರಕ್ಕೂ ಅಂಟಿಕೊಂಡಿರಬಹುದು. ಆದುದರಿಂದ ಸ್ನಾನ ಮಾಡಲೇಬೇಕು.

ರತಿಕ್ರಿಯೆ ಆದ ನಂತರ 
ದಂಪತಿಗಳು ರತಿಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಮರೆಯದೆ ಸ್ನಾನ ಮಾಡಬೇಕೆಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಯಾಕೆಂದರೆ ಅದು ಒಂದು ಪವಿತ್ರ ದೈವ ಕಾರ್ಯವಾದುದರಿಂದ,ತಪ್ಪದೆ ಸ್ನಾನ ಮಾಡಲೇಬೇಕು. ಸ್ನಾನ ಮಾಡದೆ ಮನೆಯಿಂದ ಹೊರಗೆ ಹೋಗಬಾರದಂತೆ.
ಅಭ್ಯಂಜನ
ಪ್ರತಿಯೊಬ್ಬರೂ ವಾರಕ್ಕೆ ಒಮ್ಮೆಯಾದರೂ ಶರೀರಕ್ಕೆ ಎಣ್ಣೆ ಬಳಿದುಕೊಂಡು, ಮಸಾಜ್ ಮಾಡಿಕೊಂಡ ನಂತರ ತಪ್ಪದೆ ಸ್ನಾನ ಮಾಡಬೇಕು. ಮಸಾಜ್ ಮಾಡಿಕೊಂಡ ನಂತರ ತಡಮಾಡದೆ ಸ್ನಾನ ಮಾಡಬೇಕು . ಯಾಕೆಂದರೆ ಎಣ್ಣೆ ಮಸಾಜ್ ಮಾಡಿದರೆ ಚರ್ಮದ ಸೂಕ್ಷ್ಮ ರಂದ್ರಗಳು ತೆರೆದುಕೊಂಡು ವಿಷಪದಾರ್ಥಗಳು ಹೊರಗೆ ಬಂದಿರುತ್ತವೆ. ಆದುದರಿಂದ ತಡಮಾಡದೆ ಸ್ನಾನ ಮಾಡಬೇಕು.

ತುಳಸಿ ವಿವಾಹ ಮಹತ್ವ

ತುಳಸಿ ವಿವಾಹ ಮಹತ್ವ

ಇoದು ತುಳಸಿ ಮದುವೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು  ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು.

ತುಳಸಿ ಕಲ್ಯಾಣ ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೇ ಕಾರ್ತಿಕ ಮಾಸದ ವೈಭವ. ಇದನ್ನು ಮಾಡುವ ಹಿಂದಿನ ದಿವಸ ತುಳಸಿ ವೃಂದಾವನವನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಶೃಂಗರಿಸುತ್ತಾರೆ. ವೃಂದಾವನದಲ್ಲಿ ಕಬ್ಬು, ಚೆಂಡು ಹೂವು, ಹುಣಸೆ ಹಣ್ಣು, ನೆಲ್ಲಿಕಾಯಿ ಇವುಗಳನ್ನು ಇಡುತ್ತಾರೆ. ಈ ವಿವಾಹ ಸಮಾರಂಭವನ್ನು ಸಂಜೆಯ ಸಮಯದಲ್ಲಿ ನೆರವೇರಿಸುತ್ತಾರೆ.

ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಹುಟ್ಟುಹಾಕಿರುವುದೂ ಇದಕ್ಕಾಗಿಯೇ. ಉತ್ಥಾನ ದ್ವಾದಶಿಯಂದು ತುಳಸಿ ವೃಂದಾವನಕ್ಕೆ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತಾರೆ.  ವಿಶೇಷವಾಗಿ ಶಂಖದಿಂದ ಹಾಲಿನ ಅಭಿಷೇಕ ಮಾಡಬೇಕು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು.  ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು.

ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ತ್ರಿಮೂರ್ತಿಗಳೂ ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರೆ ದೇವತೆಗಳೂ ಉತ್ಥಾನ ದ್ವಾದಶಿಯಂದು ಒಟ್ಟಾಗಿ ಸೇರುತ್ತಾರೆಂದೂ, ಇಷ್ಟಾರ್ಥಗಳನ್ನು ಪೂರೈಸುತ್ತಾರೆಂದು, ಭಕ್ತಿಯಿಂದ ತುಳಸಿಗೆ ನಮಿಸಿ ಕೃತಾರ್ಥರಾಗುತ್ತಾರೆ. ತುಳಸಿಯ ಪೌರಾಣಿಕ ಹಿನ್ನೆಲೆಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು  ಪಡದುಕೊಳ್ಳುತ್ತಾನೆ.

ಆ ಸಂದರ್ಭದಲ್ಲಿ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.

ತುಳಸಿ ವಿವಾಹದ ಹಬ್ಬಕ್ಕೂ ಹಿನ್ನೆಲೆಯಿದೆ. ಆತನೊಬ್ಬ ಭಯಂಕರ ರಾಕ್ಷಸ. ಹೆಸರು ಜಲಂಧರ. ಆತನ ಪತ್ನಿ ವೃಂದಾ, ಪತಿವ್ರತೆ. ಅದಕ್ಕಾಗಿಯೇ ಜಲಂಧರನಿಗೆ ಸೋಲು ಎಂಬುದೇ ಇರಲಿಲ್ಲ. ಇದರಿಂದ ಅಹಂಕಾರದ ಮುದ್ದೆಯಾದ ಜಲಂಧರ ದೇವತೆಗಳ ಮೇಲೆ ಯುದ್ಧ ಮಾಡಿ ಸೋಲಿಸುತ್ತಾನೆ. ಈತನ ಉಪಟಳ ತಾಳಲಾಗದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಇದರಿಂದ ಜಲಂಧರನ ವೇಷಧರಿಸಿದ ವಿಷ್ಣು ವೃಂದಾಳ ಪಾತಿವ್ರತ್ಯವನ್ನು ಭಂಗ ಮಾಡುತ್ತಾನೆ. ಜಲಂಧರ ಯುದ್ಧದಲ್ಲಿ ಸಾಯುತ್ತಾನೆ. ಇದರಿಂದ ಕೋಪಗೊಂಡ ವೃಂದಾ, ವಿಷ್ಣುವಿಗೆ ಶಾಪನೀಡಿ ತನ್ನ ಪತಿಯ ಶವದೊಂದಿಗೆ ಅಗ್ನಿಗೆ ಹಾರುತ್ತಾಳೆ. ಆನಂತರ ವೃಂದಾ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಜನಿಸುತ್ತಾಳೆ. ಇವಳೇ ರುಕ್ಮಿಣಿಯಾಗಿ ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ವಿವಾಹವಾಗುತ್ತಾಳೆ ಎಂಬ ಪ್ರತೀತಿಯಿದೆ.

ತುಳಸಿ ಇಲ್ಲದೇ ಮಾಡಿದ ಪೂಜೆ ನಿಷ್ಫಲವಾಗುವುದು. ತುಳಸಿದಳಗಳು ದೊರೆಯದಿದ್ದರೆ, ತುಳಸಿ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸಿ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು. ಪೂಜೆ ಹೀಗೆ ಪುರಾಣ ಕಥೆ ಏನೇ ಇದ್ದರೂ, ಅದಕ್ಕೆ ಇಂಬುಕೊಡಲು ಎಂಬಂತೆ ತುಳಸಿ ಜೊತೆ ಅಂದು ಶ್ರೀಕೃಷ್ಣನ ವಿವಾಹ ನೆರವೇರಿಸಲಾಗುತ್ತದೆ.

ತುಳಸಿಯೆಂದರೆ ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ. ತುಳಸಿ ಮತ್ತು ಶ್ರೀಕೃಷ್ಣನ ವಿವಾಹವಾಗುವುದು ಎಂದರೆ ಈಶ್ವರನಿಗೆ ಜೀವದಲ್ಲಿರುವ ‘ಪಾವಿತ್ರ್ಯ’ ಎಂಬ ಗುಣವು ಅತಿಯಾಗಿ ಪ್ರಿಯವಾಗಿರುವುದು. ಇದರ ಪ್ರತೀಕವೆಂದು ಶ್ರೀಕೃಷ್ಣನು ‘ವೈಜಯಂತಿ ಮಾಲೆಯನ್ನು’ ಧರಿಸಿರುತ್ತಾನೆ. ಈ ದಿನದಿಂದ ಶುಭ ದಿನಗಳು ಅಂದರೆ ಮುಹೂರ್ತಗಳು ಉಳ್ಳ ದಿನಗಳ ಪ್ರಾರಂಭವಾಗುತ್ತದೆ. ‘ಈ ವಿವಾಹವು ಭಾರತೀಯ ಸಂಸ್ಕೃತಿಯ ಆದರ್ಶತ್ವವನ್ನು ದರ್ಶಿಸುವ ವಿವಾಹವಾಗಿದೆ’ ಎಂದು ನಂಬಿಕೆಯಿದೆ.

ಪದ್ಧತಿ: ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸ್ವಚ್ಛಗೊಳಿಸಬೇಕು. ತುಳಸಿ ಗಿಡವನ್ನು ನೆಟ್ಟಿದ ಮಡಕೆ ಅಥವಾ ವೃಂದಾವನಕ್ಕೆ ಬಿಳಿ ಬಣ್ಣವನ್ನು ಹಚ್ಚಬೇಕು. ಈಶ್ವರನ ಕಡೆಯಿಂದ ಪ್ರಕ್ಷೇಪಿಸುವ ಶಕ್ತಿಯನ್ನು ಬಿಳಿ ಬಣ್ಣವು ತನ್ನತ್ತ ಆಕರ್ಷಿಸುತ್ತದೆ. ತುಳಸಿಯ ಸುತ್ತ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ನಂತರ ಭಾವಪೂರ್ಣವಾಗಿ ತುಳಸಿಯ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.

ಪ್ರಾರ್ಥನೆ : ಹೇ ಶ್ರೀ ಕೃಷ್ಣಾ, ಹೇ ತುಳಸಿ ದೇವೀ, ಇಂದಿನ ದಿವಸ ನಿಮ್ಮಿಂದ ನಮಗೆ ದೊರಕುವ ಶಕ್ತಿಯು ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಉಪಯುಕ್ತವಾಗಲಿ. ಆಪತ್ತು ಬಂದಾಗ ನಿರಾಶರಾಗದೆ, ಈಶ್ವರನ ಮೇಲೆ ನಮಗೆ ಅಖಂಡ ಶ್ರದ್ಧೆ ಮತ್ತು ಭಕ್ತಿಯಿರಲಿ. ಈ ದಿನದಂದು ಕೃಷ್ಣ ತತ್ವವು ಪೃಥ್ವಿಯ ಮೇಲೆ ಹೆಚ್ಚು ಕಾರ್ಯರತವಾಗಿರುತ್ತದೆ. ತುಳಸಿಯ ಗಿಡದಿಂದಲೂ ಹೆಚ್ಚು ಪ್ರಮಾಣದಲ್ಲಿ ಕೃಷ್ಣ ತತ್ವವು ಕಾರ್ಯರತವಾಗಿರುತ್ತದೆ. ಆದುದರಿಂದ ಈ ದಿನ ಶ್ರೀ ಕೃಷ್ಣನ ನಾಮವನ್ನು ಜಪಿಸಬೇಕು. ಪೂಜೆಯಾದ ನಂತರ ವಾತಾವರಣ ತುಂಬಾ ಸಾತ್ವಿಕವಾಗುತ್ತದೆ. ಈ ಸಮಯದಲ್ಲಿ ಶ್ರೀಕೃಷ್ಣನ ನಾಮಜಪ ಮಾಡಬೇಕು.

ತುಳಸಿಯ ವೈಶಿಷ್ಟ್ಯಗಳು: ತುಳಸಿಯು ಸಾತ್ವಿಕವಾಗಿರುವುದರಿಂದ ತುಳಸಿ ಗಿಡದತ್ತ ಈಶ್ವರನ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ. ತುಳಸಿಯ ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ಆ ನೀರು ಶುದ್ಧ ಮತ್ತು ಸಾತ್ವಿಕ ಮಾತ್ರವಲ್ಲದೆ ಅದರಲ್ಲಿ ಶಕ್ತಿಯೂ ಸಮ್ಮಿಲಿತವಾಗುತ್ತದೆ.

ಸಂಜೀವಿನಿ: ವಿವಿಧ ಕಾಯಿಲೆ ವಾಸಿಮಾಡಿ ಜೀವ ನೀಡಬಲ್ಲ ಸಂಜೀವಿನಿಯೂ ಹೌದು. ಇದಕ್ಕಾಗಿಯೇ ಆಯುರ್ವೇದದಲ್ಲಿ ತುಳಸಿಗೆ ಪ್ರಥಮ ಸ್ಥಾನ. ಎಲೆ, ಬೇರು, ಬೀಜ ಸೇರಿದಂತೆ ಸಂಪೂರ್ಣ ಗಿಡವೇ ಔಷಧಯುಕ್ತ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ ಕೀಟ, ರೋಗಾಣುಗಳನ್ನು ದೂರವಿಡುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗ ನಿವಾರಣೆಯಾಗುತ್ತದೆ. ಇದರ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು. ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಿಗೆ ಇದು ರಾಮಬಾಣ.

ತುಳಸಿ ಗಿಡದ ಹತ್ತಿರ ಓದುವುದು, ಸಚ್ಚಿಂತನೆ ಮಾಡುವುದರಿಂದ, ದೀಪವನ್ನು ಹಚ್ಚುವುದರಿಂದ ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರಿಯಗಳ ವಿಕಾರಗಳು ದೂರವಾಗುತ್ತವೆ. ಇನ್ನೂ ಹಲವು ಅದ್ಭುತ ಔಷಧೀಯ ಗುಣ ಇದರಲ್ಲಿವೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?

ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ?

ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು ಹುಡುಕಿ ಇಂದಿನ ವ್ಯಾವಹಾರಿಕತೆಗೆ ಹೊಂದುವಂತೆ ಬರೆಯ ಬಹುದಷ್ಟೆ. 

ಮನುಷ್ಯನು ತನ್ನ ಕೊನೆಯುಸಿರಿನ ಕಾಲದಲ್ಲಿ ಏನು ಯೋಚಿಸಿರುವನು? ಇದನ್ನು ಹೇಳಲಿಕ್ಕೆ ಆ ಮನುಷ್ಯನು ಇರುವುದಿಲ್ಲ. 

ಮರಣಕ್ಕೆ ಕೆಲ ಗಳಿಗೆಗೆ ಮುಂಚೆ ಕೆಲವರು ಅವರ ಮನದ ಇಂಗಿತಗಳನ್ನು ಹೇಳಿದ್ದಿದೆ.
ಆದರೆ ಕೊನೆಯ ಉಸಿರಿನಲ್ಲಿ ಇರುವಾಗ ಮನದ ಯೋಚನೆಗಳು ಏನಿರ ಬಹುದು ಎಂದು ಯೋಚಿಸಿದವರಿಲ್ಲ. ಇಲ್ಲಿ ನಾಲ್ಕು ವಿಧಗಳ ಚಿಂತನೆಗಳಿವೆ.

 ಆರ್ತ, ರೌದ್ರ, ಧನ್ಯ ಮತ್ತು ಶುಕ್ಲ. ಇವುಗಳಲ್ಲಿ ಯಾವುದಾದರೂ ಒಂದು ಚಿಂತನೆ ಬರಲೇ ಬೇಕು ಎಂಬುದು ಮರಣ ಕಾಲದ ಸಿದ್ಧಾಂತ.

ಆರ್ತ-ಹೆಸರೇ ಹೇಳುತ್ತದೆ ಆರ್ತ ನಾದ ಎಂದು. ಅಯ್ಯೋ ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಆಸ್ತಿ ಎಲ್ಲಾ ಬಿಟ್ಟು ಹೋಗ ಬೇಕಲ್ಲಾ ಎಂಬ ದುಃಖ ಬರುತ್ತದೆ. 

ನೀವು ನೋಡಿರ ಬಹುದು ಕೆಲ ಮನುಷ್ಯರು ಮರಣ ಕಾಲಕ್ಕೆ ಸದಾ ಅಳುವವರನ್ನು. ಅಂದರೆ ಇವರಿಗೆ ಈ ಲೋಕದ ವ್ಯಾಮೋಹವನ್ನು ತುಂಡು ಮಾಡಿ ಹೋಗಲು ಆಗುತ್ತಿಲ್ಲ. 

ಆ ಕಡೆಯಿಂದ ಯಮ ಪಾಶ ಎಳೆಯುತ್ತದೆ. ಹಾಗಾಗಿ ದುಃಖಿಸುತ್ತಾರೆ. ಆಗ ಅವರ ಮಕ್ಕಳು ‘ಅಪ್ಪಾ, ಅಜ್ಜಾ, ಅಮ್ಮಾ. ನಿನಗೆ ಏನು ಆಸೆ ಇದೆ ಹೇಳು ‘ ಎಂದು ಸಾಂತ್ವನ ಹೇಳುತ್ತಾರೆ. 

ಅಂತೂ ಕೊನೆಗೆ ಕ್ಷೀಣವಾಗಿ ಆತ ಇಹಲೋಕವನ್ನು ಒತ್ತಾಯ ಪೂರ್ವಕ ತ್ಯಜಿಸ ಬೇಕಾಗುತ್ತದೆ. ಇದನ್ನು ಆರ್ತ ಮರಣ ಎಂದಿದ್ದಾರೆ.

 ‘ಯಥಾ ಮರಣ ಸ್ವರೂಪಂ ತಥಾ ಪುನರ್ಜಃನ್ಮಃ’ ಅಂದರೆ ಯಾವ ಚಿಂತೆಯಲ್ಲಿ ಸಾಯುತ್ತಾನೋ ಅದೇ ಸ್ವರೂಪದ ಪುನರ್ಜನ್ಮ ಲಭಿಸುತ್ತದೆ. 

ಈ ರೀತಿಯಲ್ಲಿ ಹುಟ್ಟಿದವರು ಮುಂದಿನ ಜನ್ಮದಲ್ಲಿ ಹೇಗಿರುತ್ತಾನೆ ಎಂಬುದು ನವಜಾತ ಶಿಶುವಿನ ಅಳುವು ಸೂಚಿಸುತ್ತದೆ. 

ನವಜಾತ ಶಿಶುವು ವಿಪರೀತ ಅಳುವುದು ಈ ಸಂಬಂಧದಿಂದ. ಇದೊಂದು ರೀತಿಯ ಮಾನವನ ಮನಶಾಸ್ತ್ರದ. ಕಲಿಕೆಯಂತೆ. ಈ ವ್ಯಕ್ತಿ ಜೀವನದಲ್ಲಿ ಜಿಪುಣ, ದುಃಖಿತನಾಗಿ ಬಾಳುತ್ತಾನೆ. 

ಅದರೆ ಉತ್ತಮ ಸಂಯೋಜಕರಿದ್ದರೆ ಇದನ್ನು ಸರಿ ಮಾಡಲು ಸಾಧ್ಯವಿದೆ. ಅದಕ್ಕಾಗಿ ವಿದ್ವಜ್ಜನರ ಸಂಪರ್ಕ ಬೇಕು ಎನ್ನುವುದು. 

ರೌದ್ರ: ನೀವು ಕೆಲ ಮನುಷ್ಯರು ಆಡುವ ಮಾತುಗಳನ್ನು ಕೇಳಿರ ಬಹುದು. 'ನಾನು ಸತ್ತರೂ ನನ್ನ ಹೆಣ ಮುಟ್ಟ ಬೇಡ, ನಾನು ಸತ್ತರೂ ದೆವ್ವವಾಗಿ ನಿನ್ನನ್ನು ಬಿಡುವುದಿಲ್ಲ, ನನ್ನ ಚಿತೆಗೆ ಹಿರಿ ಮಗ ಕೊಳ್ಳಿ ಇಡುವುದು ಬೇಡ, ನಾನು ಸತ್ತರೆ ನೀನು ನನ್ನ ಅಂತ್ಯ ವಿಧಿ ಮಾಡ ಬೇಡ', 

ಇತ್ಯಾದಿ
ಮಾತಾಡುವವರಿಗೆ ರೌದ್ರ ಚಿಂತನೆ ಮರಣವಿರುತ್ತದೆ. ಇವರ ಮುಂದಿನ ಜನ್ಮ ಕಲಹ ಸ್ವರೂಪದಲ್ಲಿ ಇರುತ್ತದೆ. 

ಇಂತವರ ಪುನರ್ಜನ್ಮದಲ್ಲಿ ಶಿಶುವಿನಿಂದಲೇ ಈ ಗುಣ ತಿಳಿಯ ಬಹುದು. ವಿಪರೀತ ಹಟ ಮಾಡುವಿಕೆ, ಕೋಪದಿಂದ ಮಗುವಿನ ಮುಖದ ವರ್ಣವೇ ಬದಲಾಗುವುದು, ಹಾಲಿನ ಬಾಟಲಿಯನ್ನು ಎಳೆದು ಬಿಸಾಡುವಿಕೆ, ಕೆಲ ಜನರನ್ನು ಕಂಡರೆ ಅಳುವುದು ಇತ್ಯಾದಿ ಗುಣಗಳಿರುತ್ತದೆ. 

ಇಂತಹ ಗುಣವುಳ್ಳ ಮಗುವನ್ನು ಅದರ ಮಾತಾ ಪಿತೃಗಳು ಒಳ್ಳೆಯ ಪೋಲೀಸ್ ಅಧಿಕಾರಿಯೋ, IAS ಅಧಿಕಾರಿಯನ್ನೋ ಮಾಡಿದಾಗ ಈ ಮನ ಪರಿವರ್ತನೆಯಾಗಿ ಆತ ಒಬ್ಬ ನಿಷ್ಟಾವಂತ ಮನುಷ್ಯನಾಗ ಬಹುದು. ಇಲ್ಲವಾದಲ್ಲಿ ಮತ್ತೆ ಪಾಪಿಯೇ ಆಗ ಬಹುದು.

ಧನ್ಯ: ಈ ವ್ಯಕ್ತಿಯು ಜೀವನದಲ್ಲಿ ಸದಾ ಸಜ್ಜನಿಕೆಯುಳ್ಳವನೆ. 

ಇವನು ತನ್ನ ಕೊನೆಯ ಕಾಲದಲ್ಲಿ, 'ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಅನೇಕ ಜನರಿಗೆ, ಸಂಘ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ, ಯಾರನ್ನೂ ದೂಷಿಸಿಲ್ಲ, ಒಟ್ಟಿನಲ್ಲಿ ಸತ್ಯದಲ್ಲೇ ನಡೆದಿದ್ದೇನೆ ಎಂದು ಯೋಚಿಸುತ್ತಾ ಜೀವ ಬಿಡುತ್ತಾನೆ. 

ಇದು ಧನ್ಯ ಚಿಂತನಾ ಮರಣ. ಮುಂದಿನ ಜನ್ಮದಲ್ಲಿ ಸಾತ್ವಿಕನೂ ಶ್ರೀಮಂತನೂ, ದಾನಿಯೂ ಆಗಿ ಹುಟ್ಟುತ್ತಾನೆ. ಇವನು ಮಗುವಿದ್ದಾಗಲೂ ಯಾರಿಗೂ ಹಿಂಸೆ ನೀಡುವುದಿಲ್ಲ. 

ನೀವು ಕೆಲ ತಾಯಂದಿರ ಮಾತು ಕೇಳಿರ ಬಹುದು. ನನ್ನ ದೊಡ್ಡ ಮಗ ಶಿಶುವಾಗಿದ್ದಾಗ ರಗಳೆಯೇ ಇಲ್ಲ. ಹಾಲು ಕೊಟ್ಟು ಮಲಗಿಸಿದರೆ ಅವನಷ್ಟಕ್ಕೇ ಆಟವಾಡಿ ಕೊಂಡು ಇರುತ್ತಾನೆ.

 ಅಳುವುದು ಬಾರೀ ಕಡಿಮೆ. ಅಂತೂ ಇವನ ಬಾಲ್ಯದಲ್ಲಿ ನನಗೇನೂ ರಗಳೆಯಾಗಲಿಲ್ಲಪ್ಪ’ ಎಂದು ಮಗುವಿನ ಬಗ್ಗೆ ಗುಣಗಾನ ಮಾಡುತ್ತಾಳೆ. ಇದು ಧನ್ಯ ಚಿಂತನೆಯಲ್ಲಿ ಮರಣಿಸಿದವನ ಪುನರ್ಜನ್ಮದ ರೂಪ.

ಶುಕ್ಲ : ಈ ಮರಣ ಬರುವುದು ಅಪರೂಪ. ಕಲಿಯುಗದಲ್ಲಂತೂ ಲಕ್ಷಕ್ಕೆ ಒಬ್ಬ ಮಾತ್ರ ಎನ್ನ ಬಹುದು.

 ಇದು ಹೇಗೆಂದರೆ ಇವರ ಮರಣ ಕಾಲದಲ್ಲಿ ಅವರ ಕ್ರಿಯಾ ಉದ್ದೇಶ ಚಿಂತನೆ, ತಾನು ಏನು ಮಾಡಿದ್ದೇನೆ ಎಂಬುದರ ಮೆಲುಕು ಇವರಲ್ಲಿ ಇಲ್ಲ.

 ಉದಾ: ಮಾಜಿ ರಾಷ್ಟ್ರಪತಿ ಕಲಾಂ ಮೇಷ್ಟ್ರು, ಯಕ್ಷಗಾನ ವೇಷಧಾರಿಯಾದ ಕೆರೆಮನೆ ಶಂಬು ಹೆಗ್ಗಡೆ, ಯಕ್ಷಗಾನ ಭಾಗವತರಾದ ದಾಮೋದರ ಮಂಡೆಚ್ಚರು, ಮಹಾತ್ಮಾ ಗಾಂಧೀಜಿ, ಹೋರಾಟದಲ್ಲೇ ಮಡಿಯುವ ಯೋಧರು ಇತ್ಯಾದಿ ತನ್ನ ಉದ್ದೇಶಿತ ಕೆಲಸದ ಮಧ್ಯದಲ್ಲೇ ಅಸು ನೀಗುವವರು.

 ಅವರಿಗೆ ಗತ ಕಾಲದ ಚಿಂತನೆಗಳಿಲ್ಲ. ಆ ಕಾಲದ ವಿಚಾರ ಮಾತ್ರವೇ ಇರುತ್ತದೆ.ಇನ್ನು ಕೆಲ ಜ್ಞಾನಿಗಳೂ ಶುಕ್ಲ ಚಿಂತನೆಯಲ್ಲಿ ಕೊನೆಗೊಳ್ಳುತ್ತಾರೆ. 

ಇವರು, ನಾನು ಏನೂ ಮಾಡಲಿಲ್ಲವಪ್ಪಾ, ಎಲ್ಲಾ ದೈವ ಪ್ರೇರಣೆಯಂತೆ ನನ್ನ ಮೂಲಕ ನಡೆದಿರ ಬಹುದು ನಾನು ಕೇವಲ ನಿಮಿತ್ತ ಮಾತ್ರ ಎಂದು ಯೋಚಿಸುವವರು.

 ಇವರು ತಪ್ಪಿಯೂ ನನಗೆ ಮೋಕ್ಷ ಸಿಗಲಿ ಎಂದು ಬಯಸುವವರಲ್ಲ.
ಇಂತವರಿಗೆ ಮೋಕ್ಷ ಯೋಗವಿರುತ್ತದೆ.

 ಆತ್ಮಕಾರಕ ಶುಭಗ್ರಹ ಮೀನಾಂಶದಲ್ಲಿ ಬಂದವರಿಗೆ ನಿಶ್ಚಿತವಾಗಿಯೂ ಮೋಕ್ಷ ಯೋಗವಿದೆ. ಇಂತವರಿಗೆ ಮರು ಹುಟ್ಟಿಲ್ಲ. ಆದರೆ ಇವರು ಆರ್ತ, ರೌದ್ರ, ಧನ್ಯ ಮರಣಗಳನ್ನು ದಾಟಿಯೇ ಬರ ಬೇಕು.

 ಇದು ಒಂದು ರೀತಿಯ ವಿಕಾಸ. 'ಅಯೋಗ್ಯ ಪುರುಷಂ ನಾಸ್ತಿ’ ಎಂದು ವೇದಗಳು ಹೇಳಿವೆ. ಆದರೆ ಸಂಯೋಜಕರು ಸರಿ ಇರ ಬೇಕು. 

ಅದು ಸರಿ ಇಲ್ಲದಿದ್ದಾಗ ಅಯೋಗ್ಯರಾಗ ಬಹುದು. ಅದಕ್ಕಾಗಿಯೇ ಪೂರ್ವ ಶೋಡಶ ಸಂಸ್ಕಾರಗಳಿರುವುದು.ಅದರ ಉದ್ದೇಶ ತಿಳಿಯದೆ ಸಂಸ್ಕಾರ ಪಡೆದರೂ ಪ್ರಯೋಜನವಿಲ್ಲ. 

ಅರ್ಥ ತಿಳಿದರೆ ಅವನಿಗೆ ಹಂತ ಹಂತಗಳಲ್ಲಿ ಜ್ಞಾನವೃದ್ಧಿ ಆಗುತ್ತದೆ. ಜ್ಞಾನಿಗೆ ದುಃಖ ಸುಳಿಯದು. ದುಃಖ ರಹಿತನಿಗೆ ಶುಕ್ಲ ರೂಪದ ಮರಣವೂ ಮೋಕ್ಷವೂ ಲಭ್ಯವಾಗುತ್ತದೆ.

ಎಲ್ಲರಿಗೂ ಶುಭವಾಗಲಿ.

ಇದು ಎರಡು ವರ್ಷದ ಹಳೆಯ ಮೇಮೋರಿ ಎಲ್ಲಿ ಓದಿದ್ದು ಗೊತ್ತಿಲ್ಲ.

ಶಿಬಿಚಕ್ರವರ್ತಿ

🔯🌹🌳🌹ಶಿಬಿಚಕ್ರವರ್ತಿ🌹🌳🌹🔯

👉ಹಿಂದೆ ಶಿಬಿಚಕ್ರವರ್ತಿ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು. 

👉ಒಂದು ದಿನ ಗಿಡುಗವೊಂದು ಪಾರಿವಾಳವನ್ನು ತಿನ್ನುವ ಸಲುವಾಗಿ ಹರಿಸಿಯಾಡುತ್ತಾ ಬಂತು. ಪಾರಿವಾಳ ಪ್ರಾಣಭಯದಿಂದ  ಶಿಬಿಚಕ್ರವರ್ತಿಯ ಬಳಿಗೆ ಬಂದು ತನ್ನನ್ನು ರಕ್ಷಿಸುವಂತೆ ಬೇಡಿಕೊಂಡಿತು. ಅರಸನು ಅದರ ಪ್ರಾಣವನ್ನು ರಕ್ಷಿಸುವೆನೆಂದು ಮಾತು ಕೊಟ್ಟನು. . 

👉ಅಷ್ಟರಲ್ಲಿ ಗಿಡುಗ ಬಂದು ರಾಜನ ಮುಂದೆನಿಂತು ಅಯ್ಯಾ ರಾಜನೇ ನೀನು  ಮಹಾಧರ್ಮಿಷ್ಠ, ನನಗೆ ಆಹಾರ ಸಿಕ್ಕದೆ ಈ ಪಾರಿವಾಳವನ್ನು ಹಾರಿಸಿಕೊಂಡು ಬರುತ್ತಿದ್ದೆನು. ಅಷ್ಟರಲ್ಲಿ ಇದು ನಿನ್ನ ಮೊರೆಹೊಕ್ಕಿತು. ಅದನ್ನು ಈಚೆಗೆ ಕಳುಹಿಸಿಕೊಡೆಂದು ಕೇಳಿಕೊಂಡಿತು. 

👉ಆಗ ಶಿಬಿಯು ಅಯ್ಯಾ ಪಕ್ಷಿರಾಜನೇ ನನ್ನ ರಕ್ಷಣೆ ಬೇಡಿಬಂದ ಪಾರಿವಾಳವನ್ನು ರಕ್ಷಿಸುವುದು ನನ್ನ ಧರ್ಮವೆಂದು ಹೇಳಿದನು. ಗಿಡುಗವು ದೊರೆಯೇ ಆಹಾರವೇನೂ ಸಿಕ್ಕದೆ ಹಸಿವಿನಿಂದ ಈ ಪಕ್ಷಿಯನ್ನಾದರು ತಿನ್ನೋಣವೆಂದು ಬಂದ ನನ್ನನ್ನು ಹಸಿವಿನಿಂದ ಕಳುಹಿಸುವುದು ಮಾತ್ರ ಯಾವ ಧರ್ಮವೆಂದು ಪ್ರಶ್ನಿಸಿತು. 

👉ಅದಕ್ಕೆ ರಾಜನು ಹಾಗಾದರೆ ನಿನಗೆ ಬೇರೆ ಮಾಂಸವನ್ನು ತರಿಸಿಕೊಡುತ್ತೇನೆ ತಿಂದು ತೃಪ್ತನಾಗು ಎಂದನು.  ಇದ್ಯಾವುದಕ್ಕೂ ಒಪ್ಪದ ಗಿಡುಗ ಪಾರಿವಾಳವನ್ನು ಕಳುಹಿಸಿಕೊಡು, ಇಲ್ಲದಿದ್ದರೆ ನಿನ್ನ ಅಂಗದಿಂದ ಪಾರಿವಾಳದ ತೂಕಕ್ಕೆ ಸರಿಯಾಗಿ ಮಾಂಸವನ್ನು ಕುಯ್ದುಕೊಡು ಎಂದಿತು. 

👉ಈ ಮಾತಿಗೆ  ಚಕ್ರವರ್ತಿಯು ಸಂತೋಷಗೊಂಡು, ನೀನು ಹೇಳಿದಂತಾಗಲೆಂದು ತಕ್ಕಡಿಯನ್ನು ತರಿಸಿದನು. ಕೂಡಲೇ ಒಂದು ತಟ್ಟೆಯಲ್ಲಿ ಪಾರಿವಾಳವನ್ನು ಕೂರಿಸಿ ಕತ್ತಿಯನ್ನು ತೆಗೆದು ತನ್ನ ದೇಹದಿಂದ ಸ್ವಲ್ಪ ಮಾಂಸವನ್ನು ತೆಗೆದು ತಕ್ಕಡಿಯ ಇನ್ನೊಂದು ತಟ್ಟೆಯಲ್ಲಿ ಹಾಕಿದನು. 

👉ಪಾರಿವಾಳದ ತೂಕ ಹೆಚ್ಚಾಯಿತು. ಆಗ ರಾಜನು  ಮಾಂಸವನ್ನು ಇನ್ನಷ್ಟು ಮತ್ತಷ್ಟು ತೆಗೆದು ಹಾಕಿದರೂ ಪಾರಿವಾಳದ ತೂಕ ಹೆಚ್ಚುತ್ತಾ ಹೋಯಿತು.

 👉ಆಗ ದೊರೆಯು ಸತ್ಯಕ್ಕೆ ಕಟ್ಟುಬಿದ್ದು ಸಂತೋಷದಿಂದ ತನ್ನ ತಲೆಯನ್ನು ಕಡಿದು ಹಾಕಲು ಮುಂದಾದನು. ಆಗ ಇವನ ಸತ್ಯಕ್ಕೆ ಮೆಚ್ಚಿ ಗಿಡುಗನ ರೂಪದಲ್ಲಿದ್ದ ಇಂದ್ರ ಹಾಗೂ ಪಾರಿವಾಳದ ರೂಪದಲ್ಲಿದ್ದ ಅಗ್ನಿಯು ತಮ್ಮ ನಿಜರೂಪಕ್ಕೆ ಬಂದರು. 

👉 ನಾವು ಇಂದ್ರಾಗ್ನಿಗಳು, ನಿನ್ನ ಧರ್ಮ ನಿಷ್ಟೆಯನ್ನು ಪರೀಕ್ಷಿಸುವ ಸಲುವಾಗಿ ಈ ರೂಪ ಧರಿಸಿ ಬಂದಿದ್ದೆವೆಂದು ಹೇಳಿ ಅವನನ್ನು ಹರಸಿ ಹಿಂತಿರುಗಿದರು.

ಶ್ರೀರಾಮಚಂದ್ರನ ಹಿರಿಯಕ್ಕ

ರಾಮಾಯಣದ ಶ್ರೀರಾಮಚಂದ್ರನ ಹಿರಿಯಕ್ಕನ ಬಗ್ಗೆ ನಿಮಗೆ ಗೊತ್ತಾ ? ಈ ಮಾಹಿತಿ‌ ನೋಡಿ.
🍀🍀🍀🍀🍀🍀🍀🍀🍀🍀🍀🍀🍀🍀🍀🍀

ರಾಮಾಯಣ ಎಂದರೆ ನಮಗೆ ತಕ್ಷಣ ನೆನಪಾಗುವುದು ಶ್ರೀ ರಾಮಚಂದ್ರ ಹಾಗೂ ಸೀತೆ. ಅನಂತರ ಹನುಮಂತ. ಇನ್ನು ಪ್ರಮುಖ ಪಾತ್ರಗಳೆಂದರೆ ಲಕ್ಷ್ಮಣ , ಭರತ , ಶತ್ರುಘ್ನ, ಲಂಕೇಶ್ವರ ರಾವಣ, ವಾನರ ಸೇನೆ‌ ಹಾಗೂ ಶ್ರೀ ರಾಮಚಂದ್ರನ ತಂದೆ ತಾಯಿ. ಆದರೆ ನಾವಿಂದು ನಿಮಗೆ ತಿಳಿಯದ, ಬಹಳಷ್ಟು ಜನಕ್ಕೆ ಗೊತ್ತಿಲ್ಲದ ಒಂದು ಅತಿ ಪ್ರಮುಖ ಪಾತ್ರವನ್ನು ನಿಮಗೆ ಪರಿಚಯ ಮಾಡಲು ಹೊರಟಿದ್ದೇವೆ. ಈ ಪಾತ್ರದ ಬಗ್ಗೆ ನಾವು ಹೇಳಿದರೆ ಒಂದು ಕ್ಷಣ ನಿಮಗೂ ಆಶ್ಚರ್ಯ ಆಗುವುದರಲ್ಲಿ ಸಂದೇಹವೇ ಇಲ್ಲ. ನಾವು ಇಂದು ಹೇಳಲು ಹೊರಟಿರುವುದು ಶ್ರೀ ರಾಮಚಂದ್ರನ ಹಿರಿಯ ಅಕ್ಕನ ಬಗ್ಗೆ‌ . ಹೌದು ನೀವು ಓದಿದ್ದು, ನಿಜ. ನಾವು ಹೇಳುತ್ತಿರುವುದು ಶ್ರೀ ರಾಮಚಂದ್ರನ ಹಿರಿಯಕ್ಕನ ಬಗ್ಗೆಯೇ?

ರಾಮಾಯಣದ ಸುಮಾರು 300 ಆವೃತ್ತಿಗಳು ಜಗತ್ತಿನಾದ್ಯಂತ ಪ್ರಸಿದ್ಧವಾಗಿದ್ದು, ಬಹುತೇಕ ರಾಮಾಯಣಗಳಲ್ಲಿ ರಾಮನ ಸಹೋದರಿಯ ಬಗ್ಗೆ ಎಲ್ಲೂ ಅಷ್ಟಾಗಿ ಪ್ರಸ್ತಾಪಿಸಲಾಗಿಲ್ಲ. ಪುರಾಣಗಳಲ್ಲಿ ಕೆಲವು ವಿಷಯಗಳು ರಜಸ್ಯವಾಗಿ ಉಳಿಯುವಂತೆ ಶ್ರೀ ರಾಮನ ಹಿರಿಯಕ್ಕನ ಪಾತ್ರವೂ ಹಲವರಿಗೆ ಒಂದು ರಹಸ್ಯವೇ ಸರಿ. ಇನ್ನು ಶ್ರೀ ರಾಮನ ಹಿರಿಯ ಸಹೋದರಿಯ ಹೆಸರು ಶಾಂತಾ. ಈಕೆ ದಶರಥನ ನಾಲ್ಕು ಜನ ಗಂಡು ಮಕ್ಕಳಿಗಿಂತ ಹಿರಿಯಳು. ಇನ್ನು ಈಕೆಗೆ ಸಂಬಂಧಿಸಿದ ಮೂರು ಕಥೆಗಳು ಪ್ರಚಲಿತದಲ್ಲಿದೆ. ಆದರೆ ಮೂರು ಕಥೆಗಳಲ್ಲಿ ರಾಮನಿಗೆ ಹಿರಿಯಕ್ಕ ಇದ್ದಳೆಂಬ ವಿಷಯ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ.

ದಶರಥ ಹಾಗೂ ಕೌಸಲ್ಯಾ ಸಂಜಾತೆ ಈ ಶಾಂತಾ. ಮೊದಲನೇ ಕಥೆಯ ಪ್ರಕಾರ ರಾಮನ ತಾಯಿ ಕೌಸಲ್ಯಾ ಸಹೋದರಿ ವರ್ಷಿಣಿಗೆ ಮಕ್ಕಳಿಲ್ಲದ ಕಾರಣ, ದಶರಥ ಆಕೆಗೆ ಹಾಗೂ ಆಕೆಯ ಪತಿ ರೋಮಪದನಿಗೆ ಶಾಂತಳನ್ನು ದತ್ತು ಪುತ್ರಿಯಾಗಿ ನೀಡುತ್ತಾನೆ. ಶಾಂತ ಅಪರೂಪ ಗುಣವತಿ, ಕುಶಲಮತಿ ಹಾಗೂ ಧೈರ್ಯವಂತೆ ಕೂಡಾ ಆಗಿದ್ದಳೆಂದು ಹೇಳುತ್ತವೆ ಪುರಾಣಗಳು. ಎರಡನೇ ಕಥೆಯ ಅನುಸಾರ ಶಾಂತ ಹೆಣ್ಣು ಮಗಳೆಂಬ ಕಾರಣದಿಂದ ಹಾಗೂ ಅಯೋಧ್ಯೆಯಲ್ಲಿ ಆಕೆಯ ಜನನದ ನಂತರ ಬರಗಾಲ ಆಯಿತೆಂದು ಆಕೆಯನ್ನು ದಶರಥ ವರ್ಷಿಣಿಗೆ ದತ್ತು ನೀಡಿದನೆಂದೂ ಸಹಾ ಹೇಳಲಾಗುತ್ತದೆ. ಕಾರಣ ಏನೇ ಆದರೂ ಆಕೆ ದಶರಥನ ಹಿರಿಮಗಳು ಹಾಗೂ ಶ್ರೀ ರಾಮಚಂದ್ರನ ಅಕ್ಕ.

ರಾಜ ರೋಮಪದ ಅಂದರೆ ಶಾಂತಾಳ ಸಾಕು ತಂದೆ ತನ್ನ ರಾಜ್ಯದಲ್ಲಿ ಮಳೆ ಬಾರದಾಗ ಮಳೆ ತರಿಸುವ ಋಷಿಯೆಂದೇ ಖ್ಯಾತನಾದ ಶೃಂಗ ಋಷಿಯನ್ನು ಕರೆಸಿ ಯಜ್ಞ ಮಾಡಿಸಲು, ಧೋ ಎಂದು ಮಳೆ ಸುರಿದು ಸುಭಿಕ್ಷವಾಯಿತು. ನಂತರ ರೋಮಪದ ತನ್ನ ಮಗಳನ್ನು ಶೃಂಗ ಋಷಿಗೆ ಕೊಟ್ಟು ವಿವಾಹ ಮಾಡಿದ. ಅನಂತರದಲ್ಲಿ ರಾಜ ದಶರಥನಿಗೆ ಸಂತಾನವಾಗದೇ ಇರಲು, ರಾಜ ದಶರಥ ತನ್ನ ಮಗಳು ಹಾಗೂ ಅಳಿಯನನ್ನು ರಾಜ್ಯಕ್ಕೆ ಆಹ್ವಾನಿಸಿದನು. ಆಗ ಶೃಂಗ ಋಷಿ ನಡೆಸಿದ ಪುತ್ರಕಾಮೇಷ್ಟಿ ಯಾಗದ ಫಲವಾಗಿ ದಶರಥನಿಗೆ ಪುತ್ರ ಸಂತಾನವಾಗಿ ಅಯೋಧ್ಯೆಯ ಉದ್ದಾರವಾಯಿತೆನ್ನಲಾಗಿತ್ತದೆ. ಹೀಗೆ ದಶರಥ ದತ್ತು ನೀಡಿದ ಆತನ ಮಗಳೇ ಅವರ ವಂಶೋದ್ಧಾರಕ್ಕೆ ಕಾರಣಳಾದಳು.

ಲೇಖನ :- ಇ.ಸೋಮಶೇಖರ್. ಖ್ಯಾತ ಬರಹಗಾರರು ಮತ್ತು ಉಪನ್ಯಾಸಕರು.

#ನಮ್ಮ #ಮನಸ್ಸೇ #ಎಲ್ಲಾ #ಬಂಧ #ಮೋಕ್ಷಗಳಿಗೆ #ಕಾರಣ

🌺🙏🌺 #ನಮ್ಮ #ಮನಸ್ಸೇ #ಎಲ್ಲಾ #ಬಂಧ #ಮೋಕ್ಷಗಳಿಗೆ #ಕಾರಣ 🌺🙏🌺

🔹ಒಂದೂರಿನಲ್ಲಿ ಒಬ್ಬಳು ವೇಶ್ಯೆ. ಅವಳಲ್ಲಿಗೆ ಆ ವ್ಯಸನಕ್ಕೆ ಸಿಲುಕಿದವರೆಲ್ಲ ಹೋಗಿಬರುತ್ತಿದ್ದರು. ಆ ವೇಶ್ಯೆ ಮನೆ ಎದುರು ಒಬ್ಬ ಸಂತರು. ಅವರ ಹತ್ತಿರ ಧರ್ಮಜಿಜ್ಞಾಸೆ ಮಾಡಲು, ಒಳ್ಳೆಯ ಉಪನ್ಯಾಸಗಳನ್ನು ಕೇಳಲು ಸಜ್ಜನರೆಲ್ಲ ಬರುತ್ತಿದ್ದರು. ಅದನ್ನು ವೇಶ್ಯೆ ನಿತ್ಯವೂ ನೋಡುತ್ತಿದ್ದಳು. 

🔹ಅವಳ ಮನಸ್ಸಿನಲ್ಲಿ- ‘ಇವರು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾ ಭಗವಂತನ ಸ್ಮರಣೆಯಲ್ಲಿ ಕಳೆಯುತ್ತಾರೆ. ಬಂದವರಿಗೆಲ್ಲ ದೇವರ ವಿಷಯಗಳನ್ನು ಹೇಳುತ್ತಾರೆ, ಜೀವನಕ್ಕೆ ಸನ್ಮಾರ್ಗವನ್ನು ತೋರುತ್ತಿದ್ದಾರೆ, ಜೀವಿತದ ಎಲ್ಲ ಅವಧಿಯೂ ಎಷ್ಟು ಪಾವನ! ನಾನಾದರೋ ಧರ್ಮಬಾಹಿರವಾದ ಕೆಲಸವನ್ನು ಮಾಡುತ್ತಿದ್ದೇನೆ. 

🔹ನನ್ನ ಜೀವನದಲ್ಲಿ ಅವರಂತೆ ಸದಾ ಭಗವಂತನನ್ನು ಆರಾಧಿಸುವ, ಸನ್ನಿವೇಶ ಒದಗಲೇ ಇಲ್ಲವಲ್ಲ. ಎಷ್ಟು ಪಾಪಿ ನಾನು. ಮುಂದಿನ ಜನ್ಮದಲ್ಲಾದರೂ ನನಗೆ ಸದಾ ನಿನ್ನನ್ನು ಸ್ಮರಿಸುವ, ಪೂಜಿಸುವ ಅವಕಾಶ ಕರುಣಿಸಪ್ಪಾ ದೇವ’ ಎಂದು ನಿತ್ಯವೂ ಪ್ರಾರ್ಥಿಸುತ್ತಿದ್ದಳು.

🔹ಇತ್ತ ಈ ಸಂತರು ಆ ವೇಶ್ಯೆ ಮನೆಗೆ ಹೋಗಿ ಬರುವವರನ್ನೆಲ್ಲ ನಿತ್ಯವೂ ನೋಡುತ್ತಿದ್ದರು. ಆ ವೇಶ್ಯೆಯನ್ನು ನಿಂದಿಸುತ್ತಿದ್ದರಾದರೂ, ಹೀಗೆ ಯೋಚಿಸುತ್ತಿದ್ದರು-‘ನಿತ್ಯವೂ ಇವಳಲ್ಲಿಗೆ ಬಂದು ಈ ಜನರೆಲ್ಲ ಎಲ್ಲ ಬಗೆಯ ಸುಖ ಪಡೆಯುತ್ತಿದ್ದಾರೆ. ಯಾವುದೋ ಕಾರಣಕ್ಕೆ ನಾನು ಜೀವನದ ಸುಖವನ್ನೆಲ್ಲ ಕಳೆದುಕೊಂಡೆ. ನೀರಸವಾದ ಬದುಕಾಯಿತು ನನ್ನದು. ಇವರೆಲ್ಲರಂತೆ ಸಾಮಾನ್ಯ ಮನುಷ್ಯನಾಗಿದ್ದಿದ್ದರೆ ನಾನೂ ಆ ಸುಖವನ್ನೆಲ್ಲ ಅನುಭವಿಸಬಹುದಿತ್ತು’ ಎಂದು ಪಶ್ಚಾತ್ತಾಪ ಪಡುತ್ತಿದ್ದರು. 

🔹ಮೃತ್ಯು ಯಾರನ್ನು ಬಿಡುತ್ತದೆ? ಯಾರನ್ನು ಬಿಡುವುದಿಲ್ಲ ಅದು ವಿಧಿಲಿಖಿತ, ಆಶ್ಚರ್ಯವೆಂಬಂತೆ ಇಬ್ಬರೂ ಒಂದೇ ದಿನ ಮರಣ ಹೊಂದಿದರು. ವೇಶ್ಯೆಯ ಶವವನ್ನು ನಾಯಿ, ನರಿಗಳಿಗೆ ಆಹಾರವಾಗುವಂತೆ ಊರ ಹೊರಗೆ ಎಸೆಯಲಾಯಿತು. ಸಂತರ ದೇಹಕ್ಕೆ ಪೂರ್ಣಕುಂಭದ ಮರ್ಯಾದೆ. ಅಂತಿಮಯಾತ್ರೆಯಲ್ಲಿ ಸಾವಿರಾರು ಜನರ ಮೆರವಣಿಗೆ. 

🔹ಆದರೆ ಆಶ್ಚರ್ಯವೊಂದು ನಡೆಯಿತು. ದೇವಲೋಕದಿಂದ ವೇಶ್ಯೆಯ ಜೀವವನ್ನು ಕೊಂಡೊಯ್ಯಲು ವಿಷ್ಣುದೂತರೂ, ಸಂತರ ಜೀವವನ್ನು ಕೊಂಡೊಯ್ಯಲು ಯಮದೂತರೂ ಬಂದರು. ಆತಂಕದಿಂದ ಸಂತರ ಆತ್ಮವು ಕೇಳಿತು-‘ಏನಿದು ಅನ್ಯಾಯ? ಜೀವನವಿಡೀ ಧರ್ಮಕಾರ್ಯದಲ್ಲೇ ಕಳೆದ ನನ್ನನ್ನು ನೀವೇಕೆ ಕೊಂಡೊಯ್ಯುತ್ತಿದ್ದೀರಿ? ಜೀವನಪೂರ್ತಿ ಅಸಹ್ಯವಾದ ಕೆಲಸವನ್ನು ಮಾಡುತ್ತಿದ್ದ ಆ ವೇಶ್ಯೆಯ ಆತ್ಮವನ್ನು ವೈಕುಂಠಕ್ಕೆ ಹೇಗೆ ಕರೆದೊಯ್ಯಲಾಗುತ್ತಿದೆ?’

🔹ಅಶರೀರವಾಣಿಯೊಂದು ಉತ್ತರಿಸಿತು- ‘ನೀನು ದೇಹದಿಂದ ಧರ್ಮಕಾರ್ಯವನ್ನೇ ಮಾಡಿದ್ದರಿಂದ ನಿನ್ನ ದೇಹಕ್ಕೆ ನೋಡು-ಪೂರ್ಣಕುಂಭದ ಮರ್ಯಾದೆ. ಆದರೆ ಮನಸ್ಸಿನಲ್ಲಿ ಸದಾ ವಿಷಯ ಸುಖಗಳನ್ನೇ ಚಿಂತಿಸಿದೆ, ಎಲ್ಲಾ ಸುಖಗಳನ್ನು ಕಳೆದುಕೊಂಡೇ ಎಂದು ಕೊರಗುತ್ತಿದ್ದೆ.

🔹ಅದಕ್ಕಾಗಿ ನರಕವೇ ಗತಿ. ಹಾಗೆ ಅವಳು ದೇಹದಿಂದ ಅಸಹ್ಯವಾದ ಕೆಲಸ ಮಾಡಿದಳು. ಅವಳ ದೇಹ ಅನಾಥವಾಗಿ ಬಿದ್ದಿದೆ. ಆದರೆ ಮನಸ್ಸು ಸದಾ ಭಗವಂತನನ್ನೇ ಸ್ಮರಿಸುತ್ತಿತ್ತು ಎಂದೇ ಅವಳಿಗೆ ವೈಕುಂಠ’.

🔹‘ಮಾನವ ತನ್ನ ಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋನಿಧಿ ತನ್ನ ಮಡಿಲಿನಲ್ಲಿ ಅವನಿಗೆ ಜಾಗ ಕೊಡುತ್ತಾನೆ’ ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. 

👉ಸದ್ಗತಿ, ದುರ್ಗತಿಗಳಿಗೆ, ಎಲ್ಲಾ ಬಂಧ ಮೋಕ್ಷಗಳಿಗೆ ನಮ್ಮ ಮನಸ್ಸೇ ಕಾರಣ ಅಲ್ಲವೇ. ‘ನಮ್ಮ ಮನಸ್ಸುಗಳನ್ನು ನಿನ್ನ ಸ್ಮರಣೆಯಲ್ಲಿರಿಸು’ ಎಂದು ಆ ಸರ್ವೆಶ್ವರನನ್ನು ಪ್ರಾರ್ಥಿಸೋಣ.
(ಲೇಖನ ಕೃಪೆ: ಸಂಗ್ರಹ ಕೆ ಆರ್ ರಮೇಶ್)

🌷🙏🌷ಶ್ರೀ ಕೃಷ್ಣಾರ್ಪಣಾಮಸ್ತು🌷🙏🌷

🌹ಸರ್ವರಿಗೂ ಶುಭನಮನಗಳು, ಶುಭಸಂಜೆ,🌹

ದೀಪಾವಳಿ

💐 #ದೀಪಾವಳಿ #ಯಾವಾಗ #ಆರಂಭವಾಯ್ತು, #ಐದು #ದಿನಗಳ #ಹಬ್ಬದ #ವಿಶೇಷತೆ #ಏನು? 💐

👉“ಹಣತೆ ಹಚ್ಚುತ್ತೇನೆ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ…” “ದೀಪದಿಂದ ದೀಪವಾ ಹಚ್ಚಬೇಕು ಮಾನವಾ, ಪ್ರೀತಿಯಿಂದ ಪ್ರೀತಿ ಹಂಚುವಾ..” ಸಾಲು ಸಾಲು ಹಬ್ಬಗಳ ಆಶ್ವೀಜ ಮಾಸದಲ್ಲಿ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ, ಅದರ ವಿಜೃಂಭಣೆ ಮುಗಿಯುತ್ತಿದ್ದ ಹೊಸ್ತಿಲಲ್ಲೆ ದೀಪಾವಳಿಯ ವಾತಾವರಣ ಮನೆಮಾಡಿದೆ.

👉ಯಾವುದೋ ಮೂಲೆಯಲ್ಲಿ ಗಂಟುಸೇರಿದ್ದ ಹಣತೆಗಳು ಹೊರಬರಲಾರಂಭಿಸಿವೆ, ಮನೆಮುಂದೆ ಆಕಾಶದೀಪಗಳು  ಮಿನುಗಲಾರಂಭಿಸಿವೆ..ದೇಶದಲ್ಲೆಡೆ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಬೆಳಕಿನ ಹಬ್ಬ ದೀಪಾವಳಿ ಭಾರತದ ಅತಿದೊಡ್ಡ ಹಬ್ಬವಾಗಿದ್ದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

👉ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ, ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಹೆಸರೇ ಹೇಳುವಂತೆ ದೀಪಗಳ ಸಮೂಹ, ದೀಪಗಳ ಸಾಲು ಎಂಬರ್ಥವನ್ನು ನೀಡುತ್ತದೆ.

👉ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ…ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ. ಒಟ್ಟಿನಲ್ಲಿ ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿತ್ತು.

🌻ದೀಪಾವಳಿಯ  ಪ್ರತಿದಿನದ  ವಿಶೇಷತೆ:
ಎಣ್ಣೆ ಸ್ನಾನ :🌻
🔹ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. 

🔹ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.

🌷ನರಕ ಚತುರ್ದಶಿ🌷
🔹ಹಬ್ಬದ ಮೊದಲ ದಿನ ನರಕಚತುದರ್ಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. 

🔹ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆಹೋಗುತ್ತಾನೆ.

🔹ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ. 

🔹ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಈ ದಿನ ಕಾಣಬಹುದಾಗಿದೆ.

🌹ಅಮಾವಾಸ್ಯೆಯ ಲಕ್ಷ್ಮಿ ಪೂಜೆ :🌹
🔹ನರಕ ಚತುರ್ದಶಿಯ ಮಾರನೆಯ ದಿನ ಅಂದರೆ ದೀಪಾವಳಿಯ ಎರಡನೇ ದಿನ, ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. 

🔹ಅದರಲ್ಲೂ ವ್ಯಾಪಾರಿಗಳಿಗೆ ದೀಪ ಲಕ್ಷ್ಮೀ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.

🌻ಬಲಿಪಾಡ್ಯಮಿ :🌻
🔹ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಆವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. 

🔹ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. 

🔹ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಯುತ್ತದೆ.

☘️ಗೋವರ್ಧನಗಿರಿ ಎತ್ತಿದ ದಿನ :☘️
🔹ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ.

🍁ಇನ್ನು ಪುರಾಣಾವಲೋಕನ.🍁
🔹ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ 14 ವರ್ಷ ವನವಾಸಕ್ಕೆ ತೆರಳಿದ್ದ  ಶ್ರೀರಾಮಚಂದ್ರ  ವಿಜಯದಶಮಿಯಂದು ರಾವಣನನ್ನು ಕೊಂದು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಜನರು ಸಾಲುದೀಪಗಳನ್ನು ಹಚ್ಚಿ ಸ್ವಾಗತಿಸಿ ದೀಪಾವಳಿಯನ್ನು ಆಚರಿಸಿದರಂತೆ. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು ಎನ್ನಲಾಗುತ್ತದೆ.

🔹ಜೈನ ಪುರಾಣದ ಪ್ರಕಾರ ಭಗವಾನ್ ಮಹಾವೀರ ನಿರ್ವಾಣ ಹೊಂದಿದ್ದು ದೀಪಾವಳಿಯ ದಿನದಂದೇ ಎನ್ನಲಾಗುತ್ತದೆ, ಇನ್ನು. ಸಿಖ್ ಸಂಪ್ರದಾಯದಂತೆ ಗುರುಹರಗೋವಿಂದ್ ಜೀ ಮತ್ತು ಇತರ 25 ಹಿಂದೂ ಮಹಾರಾಜರುಗಳು ಮೊಘಲರಿಂದ ಬಂಧಮುಕ್ತಿ ಹೊಂದಿದ ದಿನ ಕೂಡ ದೀಪಾವಳಿಯಂತೆ..

🙏ಕೃಷ್ಣಾರ್ಪಣಾಮಸ್ತು🙏

🌷🥀🌷 ನಿಮಗೆ ನಿಮ್ಮ ಕುಟುಂಬ ಪರಿವಾರಕ್ಕೆ, ಹಣತೆಗಳ ಹಬ್ಬ ದೀಪಾವಳಿಯ ಮತ್ತು ಬಲಿಪಾಡ್ಯಮಿ ಹಬ್ಬದ ಹಾರ್ದಿಕ ಶುಭಾಶಯಗಳು, ನಿಮಗೆ ಸುಖ, ಶಾಂತಿ, ಸಕಲ ಸಂಪತ್ತು ಮತ್ತು ಶ್ರೇಯಸ್ಸು ತರಲಿ, ಈ ಬೆಳಕಿನ ಹಬ್ಬವು ನಿಮ್ಮ ಮನ ಮನೆಗಳಿಗೆ ಮತ್ತಷ್ಟು ಹೊಸ ಬೆಳಕು ತರಲಿ ಎಂದು ಆಶಿಸುತ್ತೇನೆ🌷🥀🌷

🥀🌿ಶುಭನಮನಗಳು, ಶುಭಪ್ರದವಾಗಲಿ🌿🥀

ವರಾಹ ಅವತಾರ

ಭಗವಂತನಾದ ಶ್ರೀಮನ್ನಾರಾಯಣನ ಮೂರನೆಯ ಅವತಾರವೇ ವರಾಹ ಅವತಾರ. ಭಗವಂತನ ಲೀಲಾ ಅವತಾರಗಳ ವರ್ಣಿಸುತ್ತಾ ಹೋದಷ್ಟು ನಮಗೆ ಎಲ್ಲಿಲ್ಲದ ಆನಂದ ದೊರೆಯುತ್ತದೆ. 
 
ಹಿರಣ್ಯಾಕ್ಷ ವಧೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಶ್ವೇತವರಾಹ ಕಲ್ಪದಲ್ಲಿ ನಡೆದಿದೆ.
 
ಹಿರಣ್ಯಾಕ್ಷ ಒಬ್ಬ ರಾಕ್ಷಸ. ಕಶ್ಯಪ ಮುನಿಯಿಂದ ಸ್ಥಿತಿಯಲ್ಲಿ ಜನಿಸಿದವ ಇವನ ಸಹೋದರನೇ ಹಿರಣ್ಯಕಶಿಪು. ಹಿರಣ್ಯಾಕ್ಷ ಋಷಭಾನು ಅಥವಾ ಋಷಭದ್ಭಾನು ವೆಂಬ ತರುಣಿಯನ್ನು ಮದುವೆಯಾಗಿ ಶಕುನಿ, ಶಂಬರ, ದೃಷ್ಟಿ ಭೂತ ಸಂತಾಪನ,  ವೃಕ ಕಾಲ ನಾಭ, ಮಹಾನಾಥ ಹರಿಸ್ಮ್ಯಾಶ್ರು   ಉತ್ಕಟ ಮುಂತಾದ ಅನೇಕ ಮಂದಿ ಪುತ್ರರನ್ನು ಪಡೆಯುತ್ತಾನೆ.

 ಇವ ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ಅನೇಕ ವರಗಳನ್ನು ಪಡೆದು ದೇವತೆಗಳನ್ನು ಪೀಡಿಸಿ ಲೋಕಕಂಟಕನಾಗಿ ಎಲ್ಲರಿಗೂ ಹಿಂಸೆಯನ್ನು ನೀಡುತ್ತಿರುತ್ತಾನೆ. ಭೂಮಿಯನ್ನು ಸಮುದ್ರದೊಳಗೆ ಅಡಗಿಸಿರುತ್ತಾನೆ. 
 
ಹಿರಣ್ಯಾಕ್ಷನನ್ನು ಸಂಹರಿಸುವುದಕ್ಕಾಗಿ ವಿಷ್ಣು ಈ ಅವತಾರವನ್ನು ಕೈಗೊಳ್ಳುತ್ತಾನೆ.
 
ಪ್ರಳಯ ಜಲದಲ್ಲಿ ಮುಳುಗಿಹೋಗಿದ್ದ ಭೂಮಿಯನ್ನು ಉದ್ಧರಿಸುವುದು ಕ್ಕೋಸ್ಕರ ಅನಂತನಾದ ಶ್ರೀ ಭಗವಂತನು ಸಮಸ್ತ ಯಜ್ಞಮಯವಾದವರಾಹ ದೇಹ ದಲ್ಲಿ ಅವತರಿಸುತ್ತಾನೆ.
 
ವರಾಹ ಅವತಾರದಲ್ಲಿ ಆತನು ಸಮುದ್ರದೊಳಗಣ ತನ್ನನ್ನು ಎದುರಿಸಲು ಬಂದ ದೈತ್ಯನಾದ  ಹಿರಣ್ಯಾಕ್ಷನನ್ನು ಇಂದ್ರನು  ವಜ್ರಾಯುಧದಿಂದ  ಪರ್ವತವನ್ನು ಸೀಳಿದಂತೆ ತನ್ನ ಕೊರೆದಾಡಿನಿಂದ  ಸೀಳಿ ಹಾಕಿ ಬಿಟ್ಟನು.
✍️yashu✍️

ಸಾಗರದಾಚೆ “ಬಲಿ’ಯ ಹೆಜ್ಜೆಗಳು

💐🍂 #ಸಾಗರದಾಚೆ #ಬಲಿಯ #ಹೆಜ್ಜೆಗಳು 🍂💐

👉ಸಾಗರದಾಚೆ “ಬಲಿ’ಯ ಹೆಜ್ಜೆಗಳು
ಪುರಾಣ ಸಂಶೋಧಕರ ಒಂದು ಅಭಿಪ್ರಾಯ.

🔹ತ್ರಿವಿಕ್ರಮನಾಗಿ ಬೆಳೆಯುವ ವಿಷ್ಣು, ತನ್ನ ಮೊದಲ ಹೆಜ್ಜೆಯಲ್ಲಿ ಭೂಲೋಕವನ್ನು ವ್ಯಾಪಿಸಿ, ಎರಡನೆಯದರಲ್ಲಿ ಸ್ವರ್ಗವನ್ನು ವ್ಯಾಪಿಸಿ, ಮೂರನೆಯದನ್ನು ಬಲಿಯ ತಲೆಯ ಮೇಲೆಯೇ ಇಟ್ಟು ಅವನನ್ನು “ಸುತಲ’ ಲೋಕಕ್ಕೆ ಕಳುಹಿಸುವ ಕಥೆ ಗೊತ್ತೇ ಇದೆ. ಆತನ ಸಾಮ್ರಾಜ್ಯದ ಕುರುಹುಗಳನ್ನು ಈಗಿನ ದಕ್ಷಿಣ ಅಮೆರಿಕದ ಪೆರುವಿನ ಸುತ್ತಮುತ್ತ ಕಾಣಬಹುದು ಎನ್ನುವುದು, ಪೌರಾಣಿಕ ಸಂಶೋಧಕರ ಒಂದು ವಾದ. ಇದಕ್ಕೆ ಪುಷ್ಟಿ ನೀಡುವ ಸಂಗತಿಗಳ ಮೇಲೆ, ಈ ಬರಹ “ಬೆಳಕು’ ಚೆಲ್ಲಿದೆ…

🔹ರಾಮಾಯಣ, ಮಹಾಭಾರತ, ಭಾಗವತ ಹಾಗೂ ಪುರಾಣ ಗ್ರಂಥಗಳಲ್ಲಿ ಕಾಣುವ ಘಟನೆಗಳು ನಡೆದು ಸಾವಿರಾರು ವರುಷಗಳೇ ಕಳೆದಿವೆ. ಆದರೂ, ಅಂದಿನ ಪ್ರಮುಖ ಸಂಗತಿಗಳು ನಾವಿಂದು ವರ್ಷಂಪ್ರತಿ ಆಚರಿಸುವ ಹಬ್ಬಗಳಲ್ಲಿ ಕಣ್ಣಮುಂದೆ ಬಂದು ನಿಲ್ಲುತ್ತವೆ. ಸಾಲುದೀಪಗಳನ್ನು ಬೆಳಗಿ, ಬಾಣ-ಬಿರುಸುಗಳೊಂದಿಗೆ ಸಂಭ್ರಮದಿಂದ ಆಚರಿಸುವ ದೀಪಾವಳಿಯಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಡೆದಿರುವ ಹಲವು ಸಂಗತಿಗಳು ಸೇರಿರುವುದು ಕಂಡುಬರುತ್ತವೆ. 

🔹ಇದರಲ್ಲಿ, ಶ್ರೀ ಕೃಷ್ಣನಿಂದ ದುಷ್ಟ ನರಕಾಸುರನ ಸಂಹಾರವಾದ ದಿನ ಅಂದರೆ, ಅವನಿಂದ ತುಂಬಿದ್ದ ತಮಸ್ಸು ಹೋಗಿ, ಬೆಳಕು ಹರಡಿದ ದಿನದ ಸಂಭ್ರಮವಿದೆ. ಅದರೊಂದಿಗೇ “ಸುತಲ’ ಲೋಕದಿಂದ ವರ್ಷಕ್ಕೊಮ್ಮೆ ಇಲ್ಲಿಗೆ ಬರುವ, ಹಲವು ನೂರು ವರ್ಷಗಳ ಹಿಂದೆ ಇದ್ದ ನಮ್ಮ ಬಲಿ ಚಕ್ರವರ್ತಿಯ ಪೌರಾಣಿಕ ಸಂಗತಿಯೊಂದಿಗೆ ಈಗ ಆ ಪ್ರದೇಶದಲ್ಲಿ ಕಾಣುವ ರಚನೆಗಳ ಅವಲೋಕನ ರೋಚಕವೆನಿಸುತ್ತದೆ.

🍁ಬಲಿಚಕ್ರವರ್ತಿ ಕಟ್ಟಿದ ಸುತಲ ಲೋಕ:🍁
🔹ದುರುಳ ದಾನವ ಹಿರಣ್ಯಕಶಿಪುನ ಕುಲದಲ್ಲಿ ಜನಿಸಿದ್ದರೂ, ತನ್ನ ತಾತ ಪ್ರಹ್ಲಾದನಂತೆ ದೈವಭಕ್ತನಾಗಿದ್ದ ಬಲಿಚಕ್ರವರ್ತಿ, ಅಮಿತ ಪರಾಕ್ರಮಿ. ಇಡೀ ಭೂಮಂಡಲದೊಂದಿಗೆ ಸ್ವರ್ಗಲೋಕವನ್ನೂ ಜಯಿಸಿದ್ದವನು. ಅಶ್ವಮೇಧ ಯಾಗವನ್ನು ಮಾಡಿ, ದಾನಗಳನ್ನು ಕೊಡುತ್ತಿದ್ದ ಬಲಿಚಕ್ರವರ್ತಿಯ ಬಳಿಗೆ ವಾಮನನ ರೂಪದಲ್ಲಿ ಬಂದ ಮಹಾವಿಷ್ಣು, ಮೂರು ಹೆಜ್ಜೆ ಇಡಲು ತಾಣವನ್ನು ದಾನವಾಗಿ ಕೇಳುತ್ತಾನೆ. 

🔹ಆನಂತರ ತ್ರಿವಿಕ್ರಮನಾಗಿ ಬೆಳೆಯುವ ವಾಮನ, ತನ್ನ ಮೊದಲ ಹೆಜ್ಜೆಯಲ್ಲಿ ಭೂಲೋಕವನ್ನು ವ್ಯಾಪಿಸಿ, ಎರಡನೆಯದರಲ್ಲಿ ಸ್ವರ್ಗವನ್ನು ವ್ಯಾಪಿಸಿ, ಮೂರನೆಯದನ್ನು ಬಲಿಯ ತಲೆಯ ಮೇಲೆಯೇ ಇಟ್ಟು ಅವನನ್ನು “ಸುತಲ’ ಲೋಕಕ್ಕೆ ಕಳುಹಿಸಿ ಆ ರಾಜ್ಯದ ಅಧಿಪತಿಯನ್ನಾಗಿ ಮಾಡುತ್ತಾನೆ. ಪ್ರತಿವರುಷವೂ ದೀಪಾವಳಿಯ ಸಮಯದಲ್ಲಿ ತಾನು ಬಿಟ್ಟುಹೋದ ರಾಜ್ಯವನ್ನು ನೋಡಲು ಭೂಮಿಗೆ ಬರುವ ನಮ್ಮ ಲೋಕದ ಹಿಂದಣ ಚಕ್ರವರ್ತಿ, ಬಲಿಯನ್ನು ನಾವು ಸಾಲು ದೀಪಗಳನ್ನು ಬೆಳಗಿಸಿ ಸ್ವಾಗತಿಸುತ್ತೇವೆ.

🌷ಎಲ್ಲಿದೆ ಆ ‘ಸುತಲ ಲೋಕ’?:🌷
🔹“ಸುತಲ’ ಲೋಕವೆನ್ನುವುದು ನಮಗಿಂತ ಕೆಳಗಿರುವ “ಪಾತಾಳ’ವೇ?  ಅದು ಏಳು ಲೋಕಗಳಲ್ಲಿ ಒಂದು ಎನ್ನುವುದು ಪಾರಂಪರಿಕವಾದ ನಂಬಿಕೆ. ಆದರೆ, ಅದು ಕೇವಲ ಪೌರಾಣಿಕ ನಂಬಿಕೆ ಮಾತ್ರವೇ ಅಥವಾ ನೈಜವಾಗಿಯೂ ಎಲ್ಲೋ ಇರುವ ಪ್ರದೇಶವೇ ಎನ್ನುವ ಪ್ರಶ್ನೆಯ ಜಾಡು ಹಿಡಿದು ಹೊರಟಾಗ, ಅದು ಇಂದಿನ “ದಕ್ಷಿಣ ಅಮೆರಿಕ ಭೂಖಂಡ’ ಎಂದು ಕರೆಯುವ ಪ್ರದೇಶ ಎಂದು ಸಂಶೋಧಕರು ಗುರುತಿಸುತ್ತಾರೆ. 

🔹ಭಾರತದ ಗ್ಲೋಬ್‌ ಹಿಡಿದು, ಒಂದು ಉದ್ದ ಸೂಜಿಯಿಂದ ಚುಚ್ಚಿದರೆ, ಅದರ ಇನ್ನೊಂದು ತುದಿ ಕಾಣುವುದು ದಕ್ಷಿಣ ಅಮೆರಿಕ ಖಂಡದಲ್ಲಿ! ಅಂದರೆ, ಸಮುದ್ರದಾಚೆಯ ಕೆಳಗಿನ ಭೂಭಾಗವೇ ನಾವು ಅಧೋಲೋಕಗಳು ಎಂದು ಹೇಳುವ ಪ್ರದೇಶ ಎನ್ನಬಹುದು. “ಪಾತಾಲ’, “ಸುತಲ’, “ಅತಲ’, “ತಲಾತಲ’, “ಮಹಾತಲ’, “ರಸಾತಲ’ ಹಾಗೂ “ತಲ’ ಎನ್ನುವ ಏಳು ಪ್ರದೇಶಗಳನ್ನೂ ಸೇರಿಸಿ “ಪಾತಾಲ ಲೋಕ’ ಎಂದೂ, ಅಲ್ಲಿಂದ ಮೇಲಿರುವ ನಮ್ಮ ಪ್ರದೇಶವನ್ನು “ಮಹೀತಲ’ ಎಂದೂ ಕರೆಯುವ ಸಂಪ್ರದಾಯ ಬಂದದ್ದು ಕಾಣುತ್ತದೆ.

🔹ಹೀಗೆ ಹೊಸದಾಗಿ ಸ್ಥಾಪಿತವಾದ ಸಪ್ತಪಾತಾಳಗಳನ್ನು “ನವತಲ’ (ಹೊಸಸ್ಥಳ) ಎಂದು ಕರೆಯುತ್ತಾ, ಕಾಲಕ್ರಮೇಣ ಅವರೆಲ್ಲರೂ ಆಡುತ್ತಿದ್ದ ಭಾಷೆಯನ್ನೂ “ನವ್ಹತಲ’ (NHUATLE) ಎಂದು ಕರೆದದ್ದು, ಈಗಲೂ ಅಲ್ಲಿ ಅದೇ ಹೆಸರಿನಲ್ಲಿ ಪ್ರಚಲಿತವಿದೆ. ಮಹೀತಲದಿಂದ ಹೊರಹೊರಟ ತಮ್ಮ ರಾಜ ಬಲಿಯೊಂದಿಗೆ “ಸುತಲ’ಕ್ಕೆ ಹೋದ ದಾನವರು ಹಾಗೂ ಆನಂತರ ಹೋದ ದೈತ್ಯ ಮತ್ತು ನಾಗಕುಲದವರು, ಅಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿದರು. 

🔹ಈಗ ಪೆರುವಿನಲ್ಲಿರುವ “ಪಂಪಾ’ ಪ್ರದೇಶ, ಇಂದಿನ ಗ್ವಾಟೆಮಾಲಾ ಆಗಿರುವ “ಗೌತಮಾಲಯ’, ಈಗಲೂ ತಮ್ಮನ್ನು “ಮಯಾ’ ಎಂದೇ ಕರೆದುಕೊಳ್ಳುವ ಮೆಕ್ಸಿಕೋದಲ್ಲಿರುವ ಜನರು ಮುಂತಾದ ಅನೇಕ ಕುರುಹುಗಳನ್ನು ದಕ್ಷಿಣ ಅಮೆರಿಕದಲ್ಲಿ ಕಾಣಬಹುದು. ಬಲಿಯಂತೆಯೇ ಧಾರ್ಮಿಕರಾಗಿ ಆಸ್ತಿಕರೆಂದು ಗುರುತಿಸಲ್ಪಡುತ್ತಿದ್ದ “ಆಸ್ತಿಕ್‌ ಜನಾಂಗ’ವೊಂದು ಈಗಲೂ ಅಲ್ಲಿ (AZTEC) ಕಾಣಸಿಗುತ್ತದೆ.

🍀ರಾಮಾಯಣದ ಕಾಲಘಟ್ಟದಲ್ಲಿ ಭಾರತದ ಸುತ್ತಮುತ್ತಲ ನಾಡುಗಳ ನೋಟ:🍀
🔹ನಮ್ಮ ಹಲವಾರು ಪುರಾಣ ಗ್ರಂಥಗಳಲ್ಲಿ ಹಾಗೂ ಆರ್ಯಭಟ ಮುಂತಾದ ಖಗೋಳ ಶಾಸ್ತ್ರಜ್ಞರ ಗ್ರಂಥಗಳಲ್ಲಿ ಭಾರತದ ಹೊರಗಿರುವ ಅನೇಕ ನಾಡುಗಳ ವರ್ಣನೆ ಕಂಡುಬರುತ್ತದೆ. ರಾಮಾಯಣದ ಕಾಲಘಟ್ಟದಲ್ಲಿ ಸಾಗರೋತ್ತರ ನಾಡುಗಳೊಂದಿಗೆ ಸಂಪರ್ಕವಿದ್ದ ಸಂಗತಿಯನ್ನು ಮಹರ್ಷಿ ವಾಲ್ಮೀಕಿಗಳು ಹೇಳುತ್ತಾರೆ. 

🔹ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕಲು ತನ್ನ ಸೈನ್ಯವನ್ನು ಕಳುಹಿಸುವ ಸಮಯದಲ್ಲಿ, ಸುಗ್ರೀವನು ಸಾಗರದಾಚೆಯ ಅನೇಕ ನಾಡುಗಳ ವಿವರ ಕೊಡುತ್ತಾನೆ. ಯವ (ಜಾವಾ) ದ್ವೀಪ ಏಳು ಖಂಡಗಳಾಗಿ ವಿಭಾಗಿಸಲ್ಪಟ್ಟಿದೆ. ಕೆಲವು ಕಡೆ ಪರ್ವತಗಳನ್ನು ದಾಟಿ, ಕೆಲವು ಕಡೆ ತೆಪ್ಪಗಳ ಮೂಲಕ ಹೋಗಬೇಕಾಗುತ್ತದೆ. 

🔹ಆ ಯವದ್ವೀಪದ ಸಮೀಪದಲ್ಲಿ ಸುವರ್ಣಕ್ಕೆ ಆಕರವಾದ ಸುವರ್ಣ ದ್ವೀಪವಿದೆ (ಸುಮಾತ್ರಾ). ಯವದ್ವೀಪ ದಾಟಿದ ಮೇಲೆ ಶಿಶಿರವೆಂಬ ಪರ್ವತ ಸಿಗುತ್ತದೆ. ಅದರ ಶೃಂಗ, ಸ್ವರ್ಗವನ್ನು ಮುಟ್ಟುವಷ್ಟು ಉನ್ನತವಾಗಿದೆ ಎನ್ನುವ ವಿವರ ಅಲ್ಲಿ ಕಾಣುತ್ತದೆ (ರಾಮಾಯಣ: ಕಿಷ್ಕಿಂಧಾಕಾಂಡ 4.40.29- 31).

🌻ಪೆರುನಲ್ಲಿ (ಸುತಲ) ತ್ರಿಶೂಲ ಚಿಹ್ನೆ: 🌻
🔹ಮತ್ತಷ್ಟು ತಾಣಗಳ ವಿವರ ಕೊಡುವ ಸುಗ್ರೀವ, ಪೂರ್ವದಿಕ್ಕಿನಲ್ಲಿ ಪರ್ವತಾಗ್ರದಲ್ಲಿರುವ, ತ್ರಿಮೂರ್ತಿಗಳು ನಿರ್ಮಿಸಿರುವ ಮೂರು ಶಿಖರಗಳುಳ್ಳ ಕನಕಮಯ ತಾಳಧ್ವಜವನ್ನು (ಸ.40.53-54) ಕುರಿತು ಹೇಳುತ್ತಾನೆ. ಇದು ಕೇವಲ ಕಾವ್ಯಮಯ ಸಂಗತಿಯಾಗಿ ಮಾತ್ರವಲ್ಲದೆ, ಈಗಲೂ ಕಾಣುವ ಅದ್ಭುತ ದೃಶ್ಯ. 

🔹ಇಂದು ವಿಮಾನದಲ್ಲಿ ಪಯಣಿಸುವಾಗ ಪಿಸ್ಕೋ ಉಪಸಾಗರದ ತೀರದ ಮೇಲೆ ಕಂಡುಬರುವ, ಶಿಲೆಯಲ್ಲಿ ಕೊರೆದಿರುವ ತ್ರಿಶೂಲಾಕಾರದಂತೆ ಕಾಣುವ (TRIDENT) ಒಂದು ಶಿಲಾ ಸ್ತಂಭದ ಎತ್ತರ 820 ಅಡಿಗಳು ಹಾಗೂ ಹೊಳೆಯುತ್ತಿರುವ ಅದರ ಮೂರು ಶೂಲಗಳ ಉದ್ದ 121/2 ಅಡಿಗಳು. ಇದನ್ನು ಯಾರು, ಎಂದು ಹಾಗೂ ಯಾವ ಉದ್ದೇಶದಿಂದ ಅಲ್ಲಿ ನಿರ್ಮಿಸಿದರು ಎನ್ನುವುದು ಇಂದಿನ ವಿದ್ವಾಂಸರಿಗೆ ಸವಾಲಾಗಿರುವ ವಿಚಾರವಾದರೂ, ಇದು ರಾಮಾಯಣದಲ್ಲಿ ಕಾಣುವ ಶೃಂಗ ಎನ್ನುವುದು ನಿಚ್ಚಳವಾಗಿ ಕಾಣುವಂಥದ್ದು.

🥀ಅದು ವಿಮಾನ ನಿಲ್ದಾಣವೇ?: 🥀
🔹ಪೆರು ನಾಡಿನಲ್ಲಿ ತ್ರಿಶೂಲ ಚಿಹ್ನೆ ಕಾಣುವ ತಾಣದಿಂದ ನೂರು ಮೈಲುಗಳಷ್ಟು ದೂರದಲ್ಲಿರುವ ನಾಝಾದ ಕಣಿವೆ ಪ್ರದೇಶದಲ್ಲಿ ವಿವಿಧ ಪ್ರಾಣಿಗಳ ಚಿತ್ರಗಳೊಂದಿಗೆ ಉದ್ದನೆಯ ರೇಖಾಚಿತ್ರರಚನೆ ಕಂಡುಬರುತ್ತದೆ. ವಿಮಾನಯಾನದ ವೇಳೆ, ಎತ್ತರದಿಂದ ಮಾತ್ರ ಕಾಣುವಂಥ 30 ಮೈಲುಗಳಷ್ಟು ಉದ್ದವಿರುವ ಈ ರೇಖಾಚಿತ್ರಗಳು ಪ್ರಾಚೀನ ಕಾಲದಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣವಿರಬೇಕು ಎನ್ನುವುದು ಸಂಶೋಧಕರ ಅಭಿಮತ. 

🔹ಆ ಪ್ರದೇಶದಲ್ಲಿ ಕಾಣುವ 2 ಮೈಲು ಉದ್ದ ಹಾಗೂ 500 ಮೈಲು ಅಗಲದ ಸಭಾಗೃಹದಂತೆ ಕಾಣುವ ಒಂದು ರಚನೆ ಇದೆ. ಅದರ ಮಧ್ಯದಲ್ಲಿ ಮಹಾಕಾಯನಾಗಿದ್ದ ವ್ಯಕ್ತಿಯೊಬ್ಬ ಕೂರಬಹುದಾಗಿದ್ದ ಸುಮಾರು 16 ಅಡಿಗಳಷ್ಟು ಉದ್ದದ ಪೀಠವೊಂದು ಕಾಣುತ್ತದೆ. ಇಂಥ ರಚನೆಯನ್ನು ಮಯಾಸುರನು, ಬಲಿ ಚಕ್ರವರ್ತಿಗಾಗಿ ನಿರ್ಮಾಣ ಮಾಡಿದ ಎನ್ನುವ ಉಲ್ಲೇಖ ಪುರಾಣದಲ್ಲಿ ಕಾಣುತ್ತದೆ. ಹೀಗೆ, ದಕ್ಷಿಣ ಅಮೆರಿಕದಲ್ಲಿ ಕಾಣುವ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿರುವ ಅನೇಕ ರಚನೆಗಳು, ಭಾರತದಿಂದ ಪಾತಾಳ ಪ್ರದೇಶಗಳಿಗೆ ಹೋಗಿ, ಅಲ್ಲಿಯೇ ನೆಲೆಸಿದವರು ನಿರ್ಮಾಣ ಮಾಡಿರುವುದನ್ನು ಪುಷ್ಟೀಕರಿಸುತ್ತವೆ.

☘️ರಾವಣನ ತಾತ ಸುಮಾಲಿಯ “ಪಾತಾಲ ಲೋಕ’☘️ 
🔹ಭಾರತೀಯ ಪರಂಪರೆಯಲ್ಲಿ ಕಾಲವನ್ನು ಕೃತ, ತ್ರೇತಾ, ದ್ವಾಪರ ಹಾಗೂ ಕಲಿಯುಗಗಳೆಂಬ 4 ಭಾಗಗಳಲ್ಲಿ ಕಾಣಬಹುದು. ಮಹಾವಿಷ್ಣು ತ್ರಿವಿಕ್ರಮ ಮತ್ತು ವಾಮನ ಅವತಾರ ತಾಳುವುದು ಹಾಗೂ ಬಲಿ ಚಕ್ರವರ್ತಿಯ ಸಂಗತಿ ಕಾಣುವುದು ಕೃತಯುಗದಲ್ಲಿ. 

🔹ಮುಂದಿನ ಕಾಲಘಟ್ಟದಲ್ಲಿ ತ್ರಿಕೂಟ ಪರ್ವತದಲ್ಲಿರುವ ಲಂಕೆಯಲ್ಲಿ ಸುಮಾಲಿ, ಮಾಲಿ ಹಾಗೂ ಮಾಲ್ಯವಂತ ಎಂಬ ದಾನವ ವಂಶದವರು ಆಳುತ್ತಿದ್ದ ಸಂಗತಿಯನ್ನು ವಾಲ್ಮೀಕಿ ರಾಮಾಯಣ ಹೇಳುತ್ತದೆ. ಅತಿಬಲರಾಗಿದ್ದ ಈ ಸೋದರರು ಯಜ್ಞಾದಿ ಧಾರ್ಮಿಕ ಕಾರ್ಯಗಳನ್ನು ಧ್ವಂಸ ಮಾಡುತ್ತಾ ಪ್ರಜಾಪೀಡಕರಾಗಿದ್ದರು. 

🔹ಅವರನ್ನು ನಿಗ್ರಹಿಸಲು ನಡೆದ ಮಹಾಯುದ್ಧದಲ್ಲಿ ವಿಷ್ಣುವಿನಿಂದ ಮಾಲಿಸಹಿತವಾಗಿ ಅನೇಕ ದುರುಳ ರಾಕ್ಷಸರು ಮಡಿದರು. ಬದುಕುಳಿದ ಸುಮಾಲಿ ಹಾಗೂ ಮಾಲ್ಯವಂತರು ಲಂಕೆಯನ್ನು ತೊರೆದು “ಪಾತಾಳ’ಕ್ಕೆ ಓಡಿಹೋದರು. ಸುಮಾಲಿಯ ಮಗಳಾದ ಕೈಕಸಿಯೇ ರಾವಣಾಸುರನ ತಾಯಿ. ಆ ದಾನವರು ತೊರೆದು ಹೋದ ಲಂಕೆಯಲ್ಲಿ ನೆಲೆಸಿದ್ದ ತನ್ನ ಅಣ್ಣ ಕುಬೇರನನ್ನು ಅಲ್ಲಿಂದ ಓಡಿಸಿ ರಾವಣ ಅಲ್ಲಿ ಅಧಿಪತಿಯಾಗುತ್ತಾನೆ.
(ಲೇಖನ ಕೃಪೆ: ಡಾ. ಜಯಂತಿ ಮನೋಹರ್‌)

🙏🙏ಕೃಷ್ಣಾರ್ಪಣಾಮಸ್ತು🙏🙏

🌷🌷ಸರ್ವರಿಗೂ, ದೀಪಾವಳಿ ಹಾಗೂ ಬಲಿಪಾಡ್ಯಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಸರ್ವೇ ಜನಾ ಸುಖೀನೋ ಭವಂತು🌷🌷

🌾🌱ಶುಭವಂದನೆಗಳು, ಶುಭದಿನ🌱🌾

ಶಕುಂತಲೋಪಾಖ್ಯಾನ

🌺💐🌺 #ಶಕುಂತಲೋಪಾಖ್ಯಾನ 🌺💐🌺

🍂🍂 #ಭಾಗ-1🍂🍂

👉ದುಃಷಂತ-ಶಕುಂತಲೆಯರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಸಂಭವ ಪರ್ವ (ಅಧ್ಯಾಯ ೬೨-೬೯) ದಲ್ಲಿ ಬರುತ್ತದೆ. ಈ ಕಥೆಯನ್ನು ಮುನಿ ವೈಶಂಪಾಯನನು ಜನಮೇಜಯನಿಗೆ ಹಸ್ತಿನಾಪುರದಲ್ಲಿ ಸರ್ಪಸತ್ರದಲ್ಲಿ ಹೇಳಿದನು.

🔹ನಾಲ್ಕೂ ಕಡೆಗಳಲ್ಲಿ ಸಮುದ್ರವು ಆವರಿಸಿರುವ ಈ ಪೃಥ್ವಿಯನ್ನು ದುಃಷಂತ ಎಂಬ ಹೆಸರಿನ ವೀರ ಪೌರವ ವಂಶಕರನು ಆಳುತ್ತಿದ್ದನು. ಆ ಮನುಜೇಶ್ವರನು ಭೋಗಿಸಿದ ದೇಶವು ಸಮುದ್ರದಿಂದ ಆವರಿಸಲ್ಪಟ್ಟ ಭೂಮಿಯ ನಾಲ್ಕೂ ಭಾಗಗಳನ್ನು ಒಳಗೊಂಡಿದ್ದಿತು. ಆ ರಿಪುಮರ್ದನನ ರಾಜ್ಯವು ಮ್ಲೇಚ್ಛರ ರಾಜ್ಯಗಳೆಲ್ಲವನ್ನೂ ಸೇರಿ ರತ್ನಾಕರ ಸಮುದ್ರದ ಅಂತ್ಯದವರೆಗೂ ಕೂಡಿದ್ದು ಚಾತುರ್ವಣ್ಯದವರನ್ನೂ ಒಳಗೊಂಡಿತ್ತು. ಆ ರಾಜನ ಶಾಸನದಲ್ಲಿ ವರ್ಣಸಂಕರವಿರಲಿಲ್ಲ, ಬೇಸಾಯ ಮಾಡಬೇಕಾಗಿರಲಿಲ್ಲ, ಗಣಿಗಳನ್ನು ತೋಡಬೇಕಾಗಿರಲಿಲ್ಲ, ಪಾಪಕೃತ್ಯಗಳನ್ನು ಮಾಡುವವರು ಯಾರೂ ಇರಲಿಲ್ಲ. 

🔹ಅವನ ರಾಜ್ಯಭಾರದಲ್ಲಿ ಎಲ್ಲರೂ ಧರ್ಮನಿರತರಾಗಿದ್ದು ಅವರು ಮಾಡುವ ಎಲ್ಲ ಕಾರ್ಯಗಳೂ ಧರ್ಮದ ಸೇವೆಯಲ್ಲಿಯೇ ನಡೆಯುತ್ತಿತ್ತು. ಅವನ ರಾಜ್ಯಭಾರದಲ್ಲಿ ಯಾವುದೇ ರೀತಿಯ ಚೋರ ಭಯವಾಗಲೀ, ಬರಗಾಲದ ಭಯವಾಗಲೀ, ಅಥವಾ ವ್ಯಾಧಿ ಭಯವಾಗಲೀ ಇರಲಿಲ್ಲ. ಎಲ್ಲ ವರ್ಣದವರೂ ಅವರವರ ಧರ್ಮಗಳಲ್ಲಿ ನಿರತರಾಗಿದ್ದು ಯಾವುದೇ ಫಲವನ್ನೂ ಬಯಸದೇ ದೇವಕಾರ್ಯಗಳಲ್ಲಿ ತೊಡಗಿದ್ದರು. ಅವನಲ್ಲಿ ಆಶ್ರಯ ಹೊಂದಿದ ಪ್ರಜೆಗಳ್ಯಾರಿಗೂ ಯಾವುದೇ ರೀತಿಯ ಭಯವಿರಲಿಲ್ಲ. ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆ ಸುರಿಸುತ್ತಿದ್ದನು ಮತ್ತು ಸಸ್ಯಗಳು ಫಲಭರಿತವಾಗಿರುತ್ತಿದ್ದವು. 

🔹ಆ ಕಾಲದಲ್ಲಿ ವಸುಮತಿ ಭೂಮಿಯು ಸರ್ವರತ್ನ ಸಮೃದ್ಧಳಾಗಿದ್ದಳು. ಆ ಯುವಕನಾದರೋ ಅದ್ಭುತಮಹಾವೀರ್ಯನೂ, ವಜ್ರಕಾಯನೂ ಆಗಿದ್ದು ವನಕಾನನಗಳ ಸಮೇತ ಮಂದರ ಪರ್ವತವನ್ನು ಎತ್ತಿಹಿಡಿಯಬಲ್ಲಂಥ ಭುಜಯುಕ್ತನಾಗಿದ್ದನು. ಅವನು ಧನುರ್ಯುದ್ಧ, ಗದಾಯುದ್ಧ, ಖಡ್ಗ ಪ್ರಹಾರ, ಆನೆ ಸವಾರಿ ಮತ್ತು ಕುದುರೆ ಸವಾರಿ ಎಲ್ಲದರಲ್ಲಿಯೂ ಪರಿಣಿತನಾಗಿದ್ದನು. ಅವನು ಬಲದಲ್ಲಿ ವಿಷ್ಣುಸಮಾನನೂ, ತೇಜಸ್ಸಿನಲ್ಲಿ ಭಾಸ್ಕರನಂತೆಯೂ, ಶಾಂತತೆಯಲ್ಲಿ ಸಾಗರ ಸಮನೂ, ಮತ್ತು ಸಹಿಷ್ಣುತೆಯಲ್ಲಿ ಭೂಮಿಯ ಸಮನೂ ಆಗಿದ್ದನು. ಆ ಸಮ್ಮತ ಮಹೀಪಾಲನು ಪ್ರಸನ್ನತೆಯಿಂದ ತನ್ನ ಪುರರಾಷ್ಟ್ರಗಳನ್ನು ಆಳುತ್ತಿರಲು ಅಲ್ಲಿಯ ಜನರೆಲ್ಲರೂ ಧರ್ಮ ನಿರತರಾಗಿದ್ದರು.

🔹ಒಮ್ಮೆ ಆ ಮಹಾಬಾಹುವು ನೂರಾರು ಆನೆ ಕುದುರೆಗಳನ್ನೊಡಗೂಡಿದ ಮಹಾಸೇನೆಯೊಂದಿಗೆ ಗಹನ ವನವೊಂದಕ್ಕೆ ಹೋದನು. ಖಡ್ಗ ಮತ್ತು ಶಕ್ತಿಗಳನ್ನು ಧರಿಸಿದ, ಗದೆ ಮುಸಲಗಳನ್ನು ಹಿಡಿದ ನೂರಾರು ವೀರ ಯೋಧರಿಂದ ಆವೃತ ರಾಜನು ಮುಂದೆ ಸಾಗಿದನು. ರಾಜನು ಹೊರಟಾಗ ಯೋಧರ ಸಿಂಹನಾದ, ಶಂಖದುಂಧುಭಿಗಳ ಸ್ವರ, ರಥಗಾಲಿಗಳ ಶಬ್ಧ, ದೊಡ್ಡ ದೊಡ್ಡ ಆನೆಗಳ ಕೂಗಾಟ, ಕುದುರೆಗಳ ಕೂಗು, ನಡೆಯುತ್ತಿರುವ ಸೈನಿಕರ ಆಯುಧಗಳ ಸದ್ದು ಇವುಗಳೆಲ್ಲವುಗಳ ಒಟ್ಟು ಆರ್ಭಟವು ಕಿವಿಗಳನ್ನು ಕಿವುಡುಮಾಡುವಷ್ಟು ಜೋರಿನಲ್ಲಿ ಕೇಳಿಬರುತ್ತಿತ್ತು. 

🔹ಶೂರನೂ ಆತ್ಮಯಶಸ್ಕರನೂ ಆದ ಆ ಸುಂದರ ನೃಪನನ್ನು ಸ್ತ್ರೀಯರು ಮನೆಗಳ ಮಹಡಿಗಳ ಮೇಲೆ ನಿಂತು ನೋಡುತ್ತಿದ್ದರು. ಶಕ್ರನಂತೆ ಶತ್ರುಗಳನ್ನು ನಾಶಗೊಳಿಸಬಲ್ಲ, ಪರರ ಆನೆಗಳನ್ನು ಹೊಡೆದೋಡಿಸಬಲ್ಲ ಆ ಶಸ್ತ್ರಪಾಣಿಯನ್ನು ನೋಡಿದ ಸ್ತ್ರೀಗಣಗಳು ಈ ರೀತಿ ಯೋಚಿಸಿಸುತ್ತಿದ್ದವು: “ರಣದಲ್ಲಿ ಅದ್ಭುತಪರಾಕ್ರಮಿಯಾದ ಇವನು ಪುರುಷವ್ಯಾಘ್ರ. ಇವನ ಬಾಹುಬಲಕ್ಕೆ ಸಿಲುಕಿದ ಯಾವ ಶತ್ರುವೂ ಉಳಿಯಲಿಕ್ಕಿಲ್ಲ.”

🔹ನರಾಧಿಪನ ಕುರಿತು ಪ್ರೇಮದಿಂದ ಸ್ತ್ರೀಯರು ಈ ರೀತಿ ಆಡಿಕೊಂಡರು, ಮತ್ತು ಸಂತಸದಿಂದ ಅವನ ನೆತ್ತಿಯ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ಅವನು ಹೋದಲ್ಲೆಲ್ಲಾ ವಿಪ್ರೇಂದ್ರರು ಸ್ತುತಿಸುತ್ತಿರಲು ಅವನು ಅತಿ ಸಂತಸದಿಂದ ಮೃಗ ಬೇಟೆಗೆಂದು ವನವನ್ನು ಪ್ರವೇಶಿಸಿದನು. ಅವನನ್ನು ಸ್ವಲ್ಪದೂರದವರೆಗೆ ಅನುಸರಿಸಿದ ನಗರ ಮತ್ತು ಗ್ರಾಮೀಣ ಜನರು ಸ್ವಲ್ಪ ಸಮಯದ ನಂತರ ರಾಜನ ಅನುಜ್ಞೆಯಂತೆ ಹಿಂದಿರುಗಿದರು. ಗರುಡನಂತೆ ಅತಿ ವೇಗದಲ್ಲಿ ಪ್ರಯಾಣಿಸುತ್ತಿರುವ ಆ ವಸುಧಾಧಿಪನ ರಥ ಘೋಷವು ಇಡೀ ಭೂಮಿಯನ್ನೂ ಸೇರಿ ಮೂರೂ ಲೋಕಗಳನ್ನೂ ತುಂಬಿತು. 

🔹ಹೀಗೆ ಹೋಗುತ್ತಿರುವಾಗ ಆ ಧೀಮಂತನು ಬಿಲ್ವಾಕ, ಅರ್ಕ, ಖದಿರ, ಕೀರ್ಣ, ಕಪಿತ್ಥ ಮತ್ತು ಧವ ಸಂಕುಲಗಳಿಂದ ಕೂಡಿದ ನಂದನವನವನ್ನೇ ಹೋಲುವ ವನವೊಂದನ್ನು ಕಂಡನು. ಅದು ಪರ್ವತ, ಕಣಿವೆ, ಬಂಡೆಗಲ್ಲುಗಳನ್ನುಹೊಂದಿದ್ದು ವಿಷಮವಾಗಿತ್ತು; ನಿರ್ಜಲ ನಿರ್ಮನುಷ್ಯವಾಗಿ ಬಹಳಷ್ಟು ಯೋಜನ ವಿಸ್ತೀರ್ಣಗೊಂಡಿತ್ತು; ಜಿಂಕೆ, ಸಿಂಹ ಮತ್ತು ಇನ್ನೂ ಇತರ ಘೋರ ವನಪ್ರಾಣಿಗಳಿಂದ ತುಂಬಿಕೊಂಡಿತ್ತು. ತನ್ನ ಸೇವಕರು ಮತ್ತು ಸೈನಿಕರೊಡಗೂಡಿದ ಆ ಮನುಜವ್ಯಾಘ್ರ ದುಃಷಂತನು ಆ ವನದಲ್ಲಿ ವಿವಿಧ ಮೃಗಗಳನ್ನು ಬೇಟೆಯಾಡಿದನು. ತನ್ನ ಬಾಣಗಳ ಪರಿಧಿಯಲ್ಲಿ ಸಿಕ್ಕಿದ ಹಲವಾರು ವ್ಯಾಘ್ರಗಳನ್ನು ದುಃಷಂತನು ತನ್ನ ಬಾಣಗಳಿಂದ ಹೊಡೆದು ಉರುಳಿಸಿದನು. 

🔹ಆ ನರರ್ಷಭನು ದೂರದಲ್ಲಿರುವವನ್ನು ಬಾಣಗಳಿಂದ ಹೊಡೆದನು; ಹತ್ತಿರದಲ್ಲಿರುವವನ್ನು ಖಡ್ಗದಿಂದ ಕತ್ತರಿಸಿದನು. ಆ ಶಕ್ತಿವಂತರಲ್ಲಿ ಶ್ರೇಷ್ಠನು ಕೆಲವು ಪ್ರಾಣಿಗಳನ್ನು ಈಟಿಯಿಂದ ಹೊಡೆದನು; ಆ ಅಮಿತವಿಕ್ರಮಿಯು ಕೆಲವನ್ನು ಗದೆಯಿಂದ ಹೊಡೆದು ಉರುಳಿಸಿದನು. ಈ ರೀತಿ ತೋಮರ, ಖಡ್ಗ, ಗದೆ, ಮುಸಲ ಮುಂತಾದ ಆಯುಧಗಳನ್ನು ಹಿಡಿದು ಬೇಟೆಯಾಡುವಾಗ ಆ ವನದಲ್ಲಿರುವ ಮೃಗಗಳೆಲ್ಲವೂ ಅಲ್ಲಿಂದ ಪಲಾಯನಗೈಯ ತೊಡಗಿದವು. ರಾಜನ ಆ ಸಮರಪ್ರಿಯ ಅದ್ಭುತವೀರ್ಯ ಯೋಧರ ಧಾಳಿಗೊಳಗಾದ ಆ ಮಹಾರಣ್ಯದ ಮಹಾಮೃಗಗಳೆಲ್ಲವೂ ಅಲ್ಲಿಂದ ಓಡತೊಡಗಿದವು. ತಮ್ಮ ಪಡೆಯ ನಾಯಕನನ್ನು ಕಳೆದುಕೊಂಡು ಗಲಿಬಿಲಿಗೊಂಡ ಜಿಂಕೆಗಳ ಪಡೆಯು ಭಯ ಉದ್ವೇಗಗಳ ಆಕ್ರಂದವನ್ನೀಯುತ್ತಾ ಎಲ್ಲ ದಿಕ್ಕುಗಳಲ್ಲಿಯೂ ಓಡತೊಡಗಿದವು. 

🔹ಬತ್ತಿಹೋದ ನದಿಗಳಿಂದ ತಮ್ಮ ಬಾಯಾರಿಕೆಯನ್ನು ನೀಗಿಕೊಳ್ಳಲಾಗದೇ ಕೃಷರಾಗಿ, ಆಯಾಸದಿಂದ ಬಳಲಿದವರಾಗಿ ಅಲ್ಲಿಯೇ ವಿಚೇತಸರಾಗಿ ಬಿದ್ದವು. ಹಸಿವು ಬಾಯಾರಿಕೆಗಳಿಂದ ಬಳಲಿದವುಗಳು ಭೂಮಿಯ ಮೇಲೆ ಬಿದ್ದವು. ಕೆಲವನ್ನು ಅಲ್ಲಿದ್ದ ನರವ್ಯಾಘ್ರರು ಹಸಿದಾಗಿಯೇ ಭಕ್ಷಿಸಿದರು. ಕೆಲವೊಂದನ್ನು ಆ ವನಚರರು ಬೆಂಕಿಯನ್ನು ಹಾಕಿ ಅದರಲ್ಲಿ ಮಾಂಸವನ್ನು ವಿಧಿವತ್ತಾಗಿ ಸುಟ್ಟು ತಿಂದರು. ಶಸ್ತ್ರಗಳಿಂದ ಗಾಯಗೊಂಡು ಭಯಭೀತರಾದ ಬಲಶಾಲೀ ಮತ್ತ ಗಜಗಳು ತಮ್ಮ ಸೊಂಡಿಲುಗಳನ್ನು ಮೇಲೇರಿಸಿ ಘೀಳಿಡುತ್ತಾ ಓಡತೊಡಗಿದವು. ಭಯಭೀತರಾಗಿ ಮಲ ಮೂತ್ರಗಳನ್ನು ವಿಸರ್ಜಿಸುತ್ತಾ ರಕ್ತವನ್ನು ಕಾರುತ್ತಾ ಓಡುತ್ತಿದ್ದ ಆ ಆನೆಗಳು ಹಲವಾರು ಸೈನಿಕರನ್ನು ತುಳಿದು ಕೊಂದುಹಾಕಿದವು. ಹಲವಾರು ಪ್ರಾಣಿಗಳಿಂದ ತುಂಬಿದ್ದ ಆ ವನವನ್ನು ರಾಜನ ಅಸಂಖ್ಯ ಸೇನೆಯು ಸಿಂಹ, ಹುಲಿ ಮತ್ತು ಇತರ ಪ್ರಾಣಿಗಳಿಂದ ಮುಕ್ತಮಾಡಿತು.

🔹ಸಹಸ್ರಾರು ಮೃಗಗಳನ್ನು ಬೇಟೆಯಾಡಿದ ಆ ವಿಪುಲವಾಹನ ರಾಜನು ಬೇಟೆಯಾಡುತ್ತಾ ಇನ್ನೊಂದು ವನವನ್ನು ಪ್ರವೇಶಿಸಿದನು. ಹಸಿವು ಬಾಯಾರಿಕೆಗಳಿಂದ ಬಳಲಿದ ಆ ಉತ್ತಮ ಬಲಶಾಲಿಯು ಒಬ್ಬನೇ ವನದ ಅಂಚಿನಲ್ಲಿದ್ದ ಒಂದು ಮೈದಾನ ಪ್ರದೇಶವನ್ನು ಸೇರಿದನು. ಅದನ್ನು ದಾಟಿದ ನೃಪತಿಯು ಉತ್ತಮ ಆಶ್ರಮಗಳಿಂದ ಕೂಡಿದ, ಅತೀವ ಸುಂದರವಾಗಿದ್ದು ಮನಸ್ಸಿಗೆ ಸಂತೋಷವನ್ನುಂಟುಮಾಡುವ, ತಂಗಾಳಿ ಬೀಸುತ್ತಿದ್ದ ಇನ್ನೊಂದು ಮಹಾ ವನವನ್ನು ಪ್ರವೇಶಿಸಿದನು. ಹೂತುಂಬಿದ ಮರಗಳು ಮತ್ತು ವಿಶಾಲ ಸಮೃದ್ಧ ಹುಲ್ಲಿನ ಹಾಸಿಗೆಯನ್ನು ಹೊಂದಿದ್ದ ಅಲ್ಲಿ ಪಕ್ಷಿಗಳ ಮಧುರ ಕಲರವಗಳು ಪ್ರತಿಧ್ವನಿಸುತ್ತಿತ್ತು. ಅಲ್ಲಿ ಸುಖಛಾಯೆಯನ್ನು ನೀಡುವ ವಿಶಾಲ ರೆಂಬೆಗಳನ್ನು ಹೊಂದಿ ಪ್ರವೃದ್ಧವಾಗಿ ಬೆಳೆದಿದ್ದ ವೃಕ್ಷಗಳಿದ್ದವು. ಸುಂದರ ಪೊದೆಗಳು ಮತ್ತು ಹೂವಿನ ಬಳ್ಳಿಗಳನ್ನು ದುಂಬಿಗಳು ಸುತ್ತುವರೆದಿದ್ದವು. 

🔹ಆ ಕಾನನದಲ್ಲಿ ಹೂ-ಫಲಗಳಿಲ್ಲದ ಮರವೇ ಇರಲಿಲ್ಲ, ಮುಳ್ಳುಗಳಿಂದ ಕೂಡಿದ ಪೊದೆಯೇ ಇರಲಿಲ್ಲ, ಮತ್ತು ದುಂಬಿಗಳು ಮುತ್ತಿಕೊಂಡಿರದ ಯಾವ ಗಿಡವೂ ಇರಲಿಲ್ಲ. ಪಕ್ಷಿಗಳ ನಾದದಿಂದ ತುಂಬಿದ್ದ, ಬಹಳಷ್ಟು ಪುಷ್ಪಗಳಿಂದ ಅಲಂಕೃತವಾಗಿದ್ದ, ಸರ್ವಋತುಗಳಲ್ಲಿ ಕಂಡುಬರುವ ಸುಮವೃಕ್ಷಗಳ ಸುಖ ನೆರಳಿನಿಂದ ಮನೋರಮ ಆ ಉತ್ತಮ ವನವನ್ನು ಮಹೇಷ್ವಾಸನು ಪ್ರವೇಶಿಸಿದನು. ಗಾಳಿಯಿಂದ ಅಲುಗಾಡುತ್ತಿದ್ದ ಕುಸುಮದ್ರುಮಗಳಿಂದ ಪುನಃ ಪುನಃ ಪುಷ್ಪವೃಷ್ಟಿಯಾಗುತ್ತಿತ್ತು. ಸ್ವರ್ಗವನ್ನು ಮುಟ್ಟುತ್ತಿವೆಯೋ ಎನ್ನುವಷ್ಟು ಎತ್ತರ ಬೆಳೆದಿದ್ದ ಪಕ್ಷಿಗಳ ಮಧುರ ಸ್ವರಗಳಿಂದ ವಿರಾಜಿಸುತ್ತಿದ್ದ ಅಲ್ಲಿಯ ಮರಗಳ ರೆಂಬೆಗಳು ವಿಚಿತ್ರ ಕುಸುಮಗಳನ್ನು ಹೊತ್ತು ಆ ಪುಷ್ಪಗಳ ಭಾರದಿಂದಲೋ ಎಂಬಂತೆ ಕೆಳಗೆ ಚಾಚಿ ಸುತ್ತುವರೆದ ಪಕ್ಷಿ-ದುಂಬಿಗಳ ನಾದಸಮೂಹದಲ್ಲಿ ಮುದಿತವಾಗಿದ್ದವು. 

🔹ಆ ಪ್ರದೇಶದಲ್ಲಿ ಹೂವಿನ ಗೊಂಚಲುಗಳನ್ನು ಹೊಂದಿದ್ದ ಹಲವಾರು ಬಳ್ಳಿಗಳಿದ್ದವು. ಮನಸ್ಸಿನ ಸಂತೋಷವನ್ನು ಹೆಚ್ಚಿಸುವ ಲತಾಗೃಹಗಳಿದ್ದವು. ಇದನ್ನೆಲ್ಲಾ ನೋಡಿದ ಮಹಾತೇಜಸ್ವಿಯು ಆನಂದಿತನಾದನು. ತಮ್ಮ ತಮ್ಮ ಕುಸುಮಾಚ್ಛಾದಿತ ರೆಂಬೆಗಳಿಂದ ಪರಸ್ಪರ ಅಪ್ಪಿಕೊಂಡಂತಿದ್ದ ವೃಕ್ಷಗಳಿಂದ ಕೂಡಿದ ಆ ವನವು ಅನೇಕ ಸುಂದರ ಕಾಮನಬಿಲ್ಲುಗಳಂತೆ ಶೋಭಿಸುತ್ತಿತ್ತು. ಹೂವುಗಳ ಪರಾಗವನ್ನು ಹೊತ್ತ ಸುಗಂಧಿತ ಸುಖಶೀತಲ ಗಾಳಿಯು ಅಲ್ಲಿಯ ಮರಗಳೊಂದಿಗೆ ಆಟವಾಡುತ್ತಿದೆಯೋ ಎನ್ನುವಂತೆ ವನದ ಸುತ್ತಲೂ ಬೀಸುತ್ತಿತ್ತು.

🔹ಈ ರೀತಿ ಗುಣಸಮಾಯುಕ್ತ ಆ ವನವು ನದಿಯೊಂದರ ತೀರದಲ್ಲಿ ಇಂದ್ರನ ಗೌರವಾರ್ಥ ನೆಟ್ಟಿದ್ದ ಧ್ವಜದಂತಿದೆ ಎನ್ನುವುದನ್ನು ನೃಪನು ಗಮನಿಸಿದನು. ಆ ವನದಲ್ಲಿ ಸದಾ ಸಂತಸದಿಂದ ಚಿಲಿಪಿಲಿಗುಡುತ್ತಿದ್ದ ಪಕ್ಷಿಗಳನ್ನು ಮತ್ತು ಮನೋರಮ ರಮ್ಯ ಆಶ್ರಮಸಂಕುಲವನ್ನು ಕಂಡನು. ಅದು ನಾನಾ ವೃಕ್ಷಗಳಿಂದ ಸುತ್ತುವರೆದಿತ್ತು ಮತ್ತು ಮಧ್ಯದಲ್ಲಿ ಪುಣ್ಯ ಪಾವಕವು ಉರಿಯುತ್ತಿತ್ತು. ವಾಲಖಿಲ್ಯಧಾರಿ ಯತಿ ಮತ್ತು ಮುನಿಗಣಗಳಿಂದ ಕೂಡಿತ್ತು. ಬಹಳ ಅಗ್ನ್ಯಾಗಾರಗಳಿದ್ದವು, ನೆಲದ ಮೇಲೆ ಮರಗಳಿಂದ ಕೆಳಗೆ ಬಿದ್ದ ಪುಷ್ಪಗಳ ದರಿಯೇ ಹಾಸಿತ್ತು. 

🔹ಮಹಾ ರೆಂಬೆಗಳನ್ನು ಹೊಂದಿದ್ದ ಸುಂದರ ಮರಗಳಿಂದ ಅತೀವ ಸುಂದರವಾಗಿ ಕಾಣುತ್ತಿತ್ತು. ಸುಖೋದಕವನ್ನು ಹೊಂದಿದ್ದ ಪುಣ್ಯಕರ ಮಾಲಿನೀ ನದಿಯು ಅಲ್ಲಿ ಹರಿಯುತ್ತಿತ್ತು. ಹೀಗೆಯೇ ಆ ಶ್ರೀಮಾನ್ ಅತಿರಥನು ಸರ್ವತವೂ ಸುಮನೋಹರವಾಗಿದ್ದ ದೇವಲೋಕದಂತಿದ್ದ ಅಶ್ರಮವನ್ನು ಪ್ರವೇಶಿಸಿದನು. ಅಲ್ಲಿರುವ ಸರ್ವ ಪ್ರಾಣಿಗಳಿಗೂ ಜನನಿಯಂತೆ ಹರಿಯುತ್ತಿರುವ ಪುಣ್ಯ ನದಿಯ ದಂಡೆಯ ಮೇಲೆ ನಿಂತಿದ್ದ ಆ ಆಶ್ರಮವನ್ನು ನೋಡಿದನು.

🔹ಪುಷ್ಪ-ನೊರೆಗಳೊಡನೆ ಪ್ರವಾಹಿಸುತ್ತಿದ್ದ ಅದರ ದಂಡೆಯ ಮೇಲೆ ಚಕ್ರವಾಕಗಳು ಆಟವಾಡುತ್ತಿದ್ದವು, ತಮ್ಮ ಗಣಗಳೊಂದಿಗೆ ಕಿನ್ನರರು ವಾಸಿಸುತ್ತಿದ್ದರು ಮತ್ತು ವಾನರ-ಕರಡಿಗಳು ಅಲ್ಲಿಗೆ ಬರುತ್ತಿದ್ದವು. ಸ್ವಾಧ್ಯಾಯ ನಿರತ ಪುಣ್ಯಪುರುಷರು ಆ ಸುಂದರ ದಂಡೆಯ ಮೇಲೆ ವಾಸಿಸುತ್ತಿದ್ದರು. ಮದಿಸಿದ ಆನೆಗಳೂ, ಹುಲಿಗಳೂ, ಸರ್ಪಗಳೂ ಅಲ್ಲಿಗೆ ಬರುತ್ತಿದ್ದವು. ನದಿಯ ದಂಡೆಗೇ ಹೊಂದಿಕೊಂಡಿದ್ದ ಆಶ್ರಮಪದವನ್ನು ನೋಡಿದ ನೃಪತಿಯು ಅದನ್ನು ಪ್ರವೇಶಿಸುವ ಮನಸ್ಸುಮಾಡಿದನು. 

🔹ಮಾಲಿನೀ ನದಿಯು ದ್ವೀಪಗಳಿಂದ ಮತ್ತು ರಮ್ಯ ತೀರಗಳಿಂದ ಅಲಂಕೃತವಾಗಿದ್ದು, ಗಂಗಾ ತೀರದಲ್ಲಿದ್ದ ನರನಾರಾಯಣರ ಆಶ್ರಮದಂತೆ ಶೋಭಿಸುತ್ತಿತ್ತು. ಚೈತ್ರರಥನ ವನದಂತಿರುವ, ಮತ್ತು ನವಿಲು ಸಂಕುಲಗಳಿಂದ ಕೂಡಿದ ಆ ಮಹಾವನವನ್ನು ನರೇಶ್ವರನು ಪ್ರವೇಶಿಸಿದನು. ಅತೀವ ಗುಣಸಂಪನ್ನ ಅನಿರ್ದೇಶ್ಯ ವರ್ಚಸ ಮಹರ್ಷಿ ತಪೋಧನ ಕಾಶ್ಯಪ ಕಣ್ವನನ್ನು ನೋಡಲು ಬಯಸಿದನು. ರಥಿಗಳನ್ನು, ಅಶ್ವಸವಾರಿಗಳನ್ನು ಮತ್ತು ಪದಾತಿಗಣಸಂಕುಲಗಳ ಸೇನೆಯನ್ನು ವನದ ದಾರಿಯಲ್ಲಿಯೇ ನಿಲ್ಲಿಸಿ ಈ ಮಾತುಗಳನ್ನಾಡಿದನು: “ನಾನು ಮುನಿ ವಿರಜಸ ತಪೋಧನ ಕಾಶ್ಯಪನನ್ನು ಕಾಣಲು ಹೋಗುತ್ತಿದ್ದೇನೆ. ನಾನು ಬರುವವರೆಗೆ ಇಲ್ಲಿಯೇ ನಿಂತಿರಿ.”

ನಾಳೆಗೆ ಮುಂದುವರೆಯುವುದು.......,

🙏ಕೃಷ್ಣಾರ್ಪಣಾಮಸ್ತು🙏

🍂🍁ಶುಭನಮನಗಳು, ಶುಭರಾತ್ರಿ🍁🍂

ಗಂಗಾದೇವಿಯ ವಿವಾಹ

*ಪುರಾಣ ; ನಾಲ್ಕರ ಪ್ರಕಾರ ಗಂಗಾದೇವಿಯ ವಿವಾಹದ ವಿವರ *...  

ಒಬ್ಬನಿಗಿಂತ ಹೆಚ್ಚ್ಚುಜನರಿಗೆ ಪತ್ನಿಯಾವಳು ದ್ರೌಪದಿ ಮಾತ್ರ ಎಂದು ಸಾಮಾನ್ಯ ತಿಳಿವಳಿಕೆ. ಆದರೆ ಪುರಾಣವನ್ನು ಕೆದಕಿದರೆ ಇನ್ನೂ ಕೆಲವು ಸ್ತ್ರೀಯರ ಹೆಸರುಗಳು ದೊರೆಯುತ್ತವೆ. ಅವರಲ್ಲಿ ಗಂಗೆಯೂ ಒಬ್ಬಳು. ಗಂಗೆ ಪರ್ವತ ರಾಜ ಹಿಮವಂತ ಹಾಗು ಮೇನೆಯರ ಹಿರಿಯ ಮಗಳು. ಹಿಮವಂತ ಒಮ್ಮೆ ದೊಡ್ದ ಯಾಗ ಮಾಡಿ ಸಮಾರಂಭಕ್ಕೆ ದೇವತೆಗಳನ್ನು ಆಹ್ವಾನಿಸಿದನು. ಆಗ ಅಲ್ಲಿಗೆ ಬಂದಿದ್ದ ದೇವತಾ ಸ್ತ್ರೀಯರು ಗಂಗೆಯ ಅಪ್ರತಿಮ ಚೆಲುವನ್ನು ನೋಡಿ ದಂಗಾದರು. ಆಗ ವರುಣನ ಹೆಂಡತಿ ಗೌರಿ(ಪಾರ್ವತಿಯಲ್ಲ) ಏನು ಚೆಲುವಿದ್ದರೇನು ಮನುಷ್ಯ ಜಾತಿಯಲ್ಲಿ ಹುಟ್ಟಿದ ಮೇಲೆ ಮುದುಕಿಯಾಗಲೇ ಬೇಕು ಎಂದು ಕೊಂಕು ನುಡಿದಳು. ಅವಮಾನದಿಂದ ಕೆರಳಿ ಗಂಗೆ ದೈವತ್ವ ಪಡೆಯಲು ನಿರ್ಧರಿಸಿದಳು. ಕುತ್ತಿಗೆಯವರೆಗೂ ಹಿಮದಲ್ಲಿ ಕುಳಿತು ಘೋರವಾದ ತಪವನ್ನಾಚರಿಸಿದಳು . ಅವಳ ಕಷ್ಟ ನೋಡಲಾಗದೆ ಬ್ರಹ್ಮ ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ. ಗಂಗೆ ತನಗೂ ತನ್ನ ತಂದೆ-ತಾಯಿ ಕುಲ ಬಳಗದ ಎಲ್ಲರಿಗೂ ದೈವತ್ವ ಬೇಕೆಂದು ಬೇಡಿದಳು. ಬ್ರಹ್ಮ ಸರಿ ಮತ್ತೊಂದು ವರ ಕೇಳೆಂದ. ಗಂಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಳು ಸಾಗರದ ಒಂದೊಂದು ಹನಿಯೂ ತನ್ನಿಂದಲೇ ತುಂಬುವಂತಾಗಬೇಕು ಎಂದಳು. ಬ್ರಹ್ಮ ಅದಕ್ಕೂ ಸರಿಯೆಂದು ಇನ್ನೂ ಒಂದು ವರ ಕೇಳು ಎಂದ. ಗಂಗೆ ಅತಿ ಆಸೆ ಒಳ್ಳೆಯದಲ್ಲ ತನ್ನ ಉಳಿದ ತಪಸ್ಸಿನ ಫಲವನ್ನು ಎಲ್ಲರಿಗೂ ಹಂಚುತ್ತೇನೆ ಎಂದು ಹೇಳಿದಳು. ಬ್ರಹ್ಮ ಸಂತುಷ್ಟನಾಗಿ ತಾನೇ ಯಾರಿಗೂ ತಲೆ ಬಾಗದೆ ಬದುಕುವ ಹಿರಿಮೆಯ ಮೂರನೆಯವರವನ್ನು ನೀಡಿ ಮಾಯವಾದ. 
ಗಂಗೆ ಜಲದೇವತೆಯಾಗುತ್ತಿದ್ದಂತೇ ವರುಣನ ಸಾಗರ ಬತ್ತಿ ಹೋಯ್ತು. ಗಡಬಡಿಸಿದ ವರುಣ ಹಿಮವಂತನ ಕಾಲು ಹಿಡಿದು ಗಂಗೆಯನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಬೇಡಿದ. ತಂದೆಯ ಮಾತಿಗೆ ಬೆಲೆಕೊಟ್ಟು ಗಂಗೆ ತನ್ನನ್ನು ಪಟ್ಟ ಮಹಿಷಿಯನ್ನಾಗಿಸಿದರೆ ಮಾತ್ರ ವರುಣನ ಮದುವೆಯಾಗುವುದಾಗಿ ಹೇಳಿದಳು. ವರುಣ ವಿಧಿಯಿಲ್ಲದೆ ತಲೆಯಾಡಿಸಿ ಆಕೆಯನ್ನು ಮದುವೆಯಾಗಿ ಪಟ್ಟದರಾಣಿಯನ್ನಾಗಿಸಿದ. ವರುಣನ ಸಾಗರ ಮತ್ತೆ ತುಂಬಿತು. ವರುಣನ ಹೆಂಡತಿ ಗೌರಿಯ ಕೈಗಳಿಂದ ಚಾಮರ ಬೀಸಿಸಿ ಕೊಂಡು ಗಂಗೆ ಹೆಮ್ಮೆಯಿಂದ ಬೀಗಿದಳು. 
ದೇವಿ ಭಾಗವತದ ಪ್ರಕಾರ ಲಕ್ಷ್ಮಿಯೇ ಗಂಗೆಯಾಗಿ ಮತ್ಸ್ಯ, ಕೂರ್ಮಾವತಾರದಲ್ಲಿ ವಿಷ್ಣುವಿನ ಜೊತೆಯಾದಳು. ದೇವಿ ಭಾಗವತದ ಇನ್ನೊಂದು ಕಥೆಯ ಪ್ರಕಾರ ಲಕ್ಷ್ಮಿ , ಗಂಗೆ , ಸರಸ್ವತಿಯರು ವಿಷ್ಣುವಿನ ಪತ್ನಿಯರಾಗಿದ್ದರು ಗಂಗೆ ಸರಸ್ವತಿಯರು ಸದಾ ಜಗಳ ಕಾಯುತ್ತಿದ್ದರು. ಅದನ್ನು ಸಹಿಸಲಾಗದೆ ವಿಷ್ಣುವು ಗಂಗೆಯನ್ನು ಶಿವನಿಗೂ , ಸರಸ್ವತಿಯನ್ನು ಬ್ರಹ್ಮನಿಗೂ ಕೊಟ್ಟು ಸದಾ ಹಸನ್ಮುಖಿಯೂ ಸೌಮ್ಯಳೂ ಆಗಿರುತ್ತಿದ್ದ ಲಕ್ಷ್ಮಿಯನ್ನು ತನ್ನ ಬಳಿಯೇ ಇರಿಸಿಕೊಂಡನಂತೆ. 
ಪಿತೃಗಳಿಗೆ ಸದ್ಗತಿಯನ್ನು ನೀಡಲು ತನ್ನನ್ನು ತಪಸ್ಸಿನಿಂದ ಮೆಚ್ಚಿಸಿದ ಭಗೀರಥನ ಸಲುವಾಗಿ ಗಂಗೆ ಭೂಮಿಗೆ ಬಂದಳು. ಅವಳ ವೇಗವನ್ನು ನಿಯಂತ್ರಿಸಲು ಶಿವನೇ ಹಿಮಾಲಯದಲ್ಲಿ ತನ್ನ ಜಟೆಯನ್ನು ಹರಡಿ ನಿಂತನು. ಅವಳ ಸೊಕ್ಕು ಮುರಿಯಲು ಅವಳನ್ನು ಜಟೆಯಲ್ಲಿ ಬಿಗಿದು ಹೊತ್ತು ಕೈಲಾಸಕ್ಕೆ ಹೋದನು. ಭಗೀರಥನು ಗಂಗೆಯನ್ನು ಬಿಡಲು ಶಿವನನ್ನು ಬೇಡಿದಾಗ ಶಿವನು ಗಂಗೆಯನ್ನು ಬಿಡುಗಡೆಗೊಳಿಸಿದರೂ ಗಂಗೆ ಕೆಳಗಿಳಿಯಲು ಒಪ್ಪಲಿಲ್ಲ. ತನಗೂ ಶಿವನ ಪತ್ನಿಯ ಸ್ಥಾನಮಾನ ಕೊಡುವುದಾಗಿ ಮಾತುಕೊಟ್ಟರೆ ಮಾತ್ರ ಕೆಳಗಿಳಿಯುವುದಾಗಿ ಹೇಳಿದಳು. ಶಿವ ವಿಧಿಯಿಲ್ಲದೆ ಗಂಗೆಯನ್ನು ಪತ್ನಿಯೆಂದು ಒಪ್ಪ ಬೇಕಾಯ್ತು. ಪಾರ್ವತಿ ಸವತಿ ಮಾತ್ಸರ್ಯದಿಂದ ದುರುಗುಟ್ಟಿ ನೋಡಿದ್ದೇ ಬಂದು(ಗಂಗಾಸಾಪತ್ನ್ಯಜನಿತೇರ್ಷ್ಯಾಯತೇಕ್ಷಣ ಶೋಣಿಮಾ..) ಅಷ್ಟೆ ಅಲ್ಲ ಪಾರ್ವತಿಯ ಸವತಿಯಾಗಿದ್ದರೂ ಅವಳ ಇಬ್ಬರು ಮಕ್ಕಳಿಗೆ ತಾನೂ ನೆಚ್ಚಿನ ತಾಯಿಯಾದಳು. ಗಣೇಶ ದ್ವೈಮಾತುರ(ಇಬ್ಬರು ತಾಯಂದಿರ ಮಗ) ಎನಿಸಿಕೊಂಡರೆ , ಕುಮಾರ ಗಾಂಗೇಯನೆನಿಸಿಕೊಂದನು.
ಒಮ್ಮೆ ಪ್ರತೀಪನೆಂಬ ಕುರುವಂಶದ ಸ್ಪುರದ್ರೂಪಿ ಅರಸನು ಕೆರೆಯ ದಂಡೆಯಲ್ಲಿ ಕುಳಿತಿರಲು ಅವನಿಗೆ ಮರುಳಾದ ಗಂಗೆ ನೀರಿನಿಂದೆದ್ದು ಬಂದು ಅವನ ಬಲತೊಡೆಯ ಮೆಲೆ ಕುಳಿತು ತನ್ನನು ಮದುವೆಯಾಗ ಬೇಕೆಂದು ಕೇಳಿದಳು. ಆಗ ಪ್ರತೀಪನು ಎಡತೊಡೆಯ ಮೇಲೆ ಕೂರುವವಳು ಪತ್ನಿಯ ಸಮಾನ, ಬಲತೊಡೆಯ ಮೇಲೆ ಕುಳಿತವಳು ಮಗಳ ಸಮಾನ ಎಂದು ಗಂಗೆಯನ್ನು ನಿರಾಕರಿಸಿ. ದೇವಕನ್ಯೆಯಾದ ನಿನಗೆ ಕನ್ಯತ್ವ, ಹಾಗು ವಯಸ್ಸಿನ ಕಟ್ಟಳೆ ಇಲ್ಲ. ನನಗೆ ಗಂಡು ಮಗುವಾದ ಮೇಲೆ ಅವನನ್ನೇ ಮದುವೆಯಾಗು ಎಂದು ಹೇಳಿದನು
ಒಮ್ಮೆ ಬ್ರಹ್ಮಲೋಕದ ಸಭೆಯಲ್ಲಿ ಸ್ವರ್ಗವಾಸಿಯಾಗಿದ್ದ ಮಹಾಭಿಷನೆಂಬ ರಾಜನು ನಿರ್ಲಜ್ಜೆಯಿಂದ ಗಂಗೆಯನ್ನು ದಿಟ್ಟಿಸಿ ನೋಡುತ್ತ್ತಾ ಇರಲು ಗಂಗೆಯೂ ಸಭೆಯ ಮರ್ಯಾದೆಯನ್ನು ಕಡೆಗಣಿಸಿ ಅವನನ್ನೇ ಮೋಹದಿಂದ ನೋಡ ತೊಡಗಿದಳು. ಕೋಪಗೊಂಡ ಬ್ರಹ್ಮ ನು ಮಹಾಭಿಷನಿಗೆ ಮತ್ತೆ ಭೂಮಿಯ ಮೇಲೆ ಜನ್ಮ ತಾಳುವಂತೆಯೂ ಗಂಗೆ ಅಲ್ಲಿಯೇ ಹೋಗಿ ಅವನನ್ನು ಸೇರುವಂತೆಯೂ ಶಾಪವಿತ್ತನು. ಅದರಂತೆ ಮಹಾಭಿಷನು ಪ್ರತೀಪನ ಮಗ ಶಂತನುವಾಗಿ ಹುಟ್ಟಿದನು. ಗಂಗೆ ಅವನನ್ನು ಮದುವೆಯಾಗಿ ಭೀಷ್ಮನನ್ನು ಪಡೆದಳು.
ಗಂಗೆಯು ತ್ರಿಪಥಗಾ ಅಂದರೆ ಸ್ವರ್ಗದಲ್ಲಿ ಮಂದಾಕಿನಿಯಾಗಿ , ಭೂಮಿಯಲ್ಲಿ ಭಾಗೀರಥಿಯಾಗಿ , ಪಾತಾಳದಲ್ಲಿ ವೈತರಣಿಯಾಗಿ ಹರಿಯುವಳು.

ಋಷಿಕೆ

ಋಷಿಕೆಯರು ರಚಿಸಿದ ಮಂತ್ರಗೀತೆಗಳು

ಈ ಋಷಿಕೆಯರಲ್ಲಿ ಬಹುತೇಕರು ಸಾಂಸಾರಿಕ ಬಯಕೆಗಳನ್ನು ಉನ್ನತ ವೇದಿಕೆಯಲ್ಲಿ ಅಭಿವ್ಯಕ್ತಗೊಳಿಸುವ ಮೂಲಕ ಲೌಕಿಕ – ಅಧ್ಯಾತ್ಮಗಳ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಋಷಿಕೆಯರ ಹಾಡುಗಳು ಸಾರ್ವಕಾಲಿಕ ಸ್ತ್ರೀಯರ ಹಾಡಾಗಿಯೂ ಕಂಡುಬರುತ್ತವೆ.

ಋಗ್ವೇದದ ಮಂತ್ರಗಳನ್ನು ಸಾಕ್ಷಾತ್ಕಾರಿಸಿಕೊಂಡ ಮಂತ್ರ ದ್ರಷ್ಟಾರರಲ್ಲಿ ಮೂವತ್ತಕ್ಕೂ ಹೆಚ್ಚು ಋಷಿಕೆಯರು ಸೇರಿದ್ದಾರೆ. ರೋಮಷಾ, ಲೋಪಾಮುದ್ರಾ, ಅಪಾಲಾ, ಕದ್ರು, ವಿಶ್ವಾವರಾ, ಘೋಷಾ, ಜುಹು, ವಾಗಂಭೃಣಿ, ಪೌಲೊಮಿ, ಜರಿತಾ, ಶ್ರದ್ಧಾ ಕಾಮಾಯಾನಿ, ಊರ್ವಶೀ, ಶಾರಂಗ, ಯಮಿ, ಇಂದ್ರಾಣಿ, ಸಾವಿತ್ರಿ ಮತ್ತು ದೇವಯಾನಿ – ಇವರು ಋಗ್ವೇದದ ಮುಖ್ಯ ಋಷಿಕೆಯರಾದರೆ; ನೋಧಾ (ಅಥವಾ ಪೂರ್ವಾರ್ಚಿಕಾ), ಅಕೃಷ್ಟಭಾಷಾ, ಶಿಕತಾ ನಿವಾವರೀ (ಅಥವಾ ಉತ್ತರಾರ್ಚಿಕಾ) ಮತ್ತು ಗಣಪಾಯಣಾ – ಇವರು ಸಾಮವೇದದ ಋಷಿಕೆಯರು. ಇಷ್ಟೇ ಅಲ್ಲದೆ, ನಾಲ್ಕೂ ವೇದಗಳಲ್ಲಿ ಇನ್ನೂ ಹಲವು ಋಷಿಕೆಯರು ಹಾಗೂ ಬ್ರಹ್ಮವಾದಿನಿಯರ ಹೆಸರುಗಳು ಉಲ್ಲೇಖಗೊಂಡಿವೆ. ಗಾರ್ಗಿ ವಾಚಕ್ನವಿ, ಮೈತ್ರೇಯಿ ಮೊದಲಾದ ಬ್ರಹ್ಮವಾದಿನಿಯರು, ಅನಸೂಯಾ ದೇವಿ, ಅರುಂಧತೀ ದೇವಿ, ತಾರಾ ಮೊದಲಾದ ಋಷಿ ಪತ್ನಿಯರು ನಮ್ಮ ಪುರಾಣೇತಿಹಾಸಗಳ ಪುಟಗಳಲ್ಲಿ ಸಾಕಷ್ಟು ಮನ್ನಣೆ ಪಡೆದಿದ್ದಾರೆ. ವಿಶ್ವಾವರಾ, ರೋಮಷಾ ಹಾಗೂ ವಾಗಂಭೃಣೀ ಋಷಿಕೆಯರು ಸಾಧನೆಯ ದೃಷ್ಟಿಯಿಂದ ಈ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಈ ಋಷಿಕೆಯರಲ್ಲಿ ಬಹುತೇಕರು ಸಾಂಸಾರಿಕ ಬಯಕೆಗಳನ್ನು ಉನ್ನತ ವೇದಿಕೆಯಲ್ಲಿ ಅಭಿವ್ಯಕ್ತಗೊಳಿಸುವ ಮೂಲಕ ಲೌಕಿಕ – ಅಧ್ಯಾತ್ಮಗಳ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಋಷಿಕೆಯರ ಹಾಡುಗಳು ಸಾರ್ವಕಾಲಿಕ ಸ್ತ್ರೀಯರ ಹಾಡಾಗಿಯೂ ಕಂಡುಬರುತ್ತವೆ. ಅಂತಹಾ ಕೆಲವು ಋಷಿಕೆಯ ಕಿರು ಪರಿಚಯ ಇಲ್ಲಿದೆ. 

ಘೋಷಾ ಕಕ್ಷೀವತೀ

ಮಂತ್ರ ದ್ರಷ್ಟಾರ ಋಷಿಗಳಾದ ದೀರ್ಘತಮಸನ ಮೊಮ್ಮಗಳೂ ಕಕ್ಷೀವಂತನ ಮಗಳೂ ಆದ ಘೋಷಾ ಕಕ್ಷೀವತೀ, ಋಗ್ವೆದದ ಹತ್ತನೇ ಮಂಡಲದ 39 ಹಾಗೂ 40ನೇ ಸೂಕ್ತಿಗಳ ಕರ್ತೃವಾಗಿದ್ದಾಳೆ. ಈ ಎರಡೂ ಸೂಕ್ತಿಗಳು 14 ಶ್ಲೋಕಗಳನ್ನು ಒಳಗೊಂಡಿವೆ. ಇವುಗಳಲ್ಲಿ ಮೊದಲನೆಯದು ಅಶ್ವಿನೀ ದೇವತೆಗಳನ್ನು ಸ್ತುತಿಸಲು ಮೀಸಲಾಗಿದ್ದರೆ, ಎರಡನೆಯ ಸೂಕ್ತಿಯು ವೈವಾಹಿಕ ಜೀವನದ ಉತ್ಕಟ ಆಕಾಂಕ್ಷೆಯನ್ನು ಬಿಂಬಿಸುತ್ತದೆ.

ಇತಿಹಾಸ ಹೇಳುವಂತೆ ಘೋಷಾ ಕುಷ್ಟ ರೋಗ ಪೀಡಿತೆಯಾಗಿದ್ದಳು. ತಂದೆ ಹಾಗೂ ಅಜ್ಜನ ಸಲಹೆಯ ಮೇರೆಗೆ ಅಶ್ವಿನೀ ದೇವತೆಗಳ ಉಪಾಸನೆ ನಡೆಸಿ, ರೋಗಮುಕ್ತಳಾಗುವ ಈಕೆ ಮುಂದೆ ಮದುವೆಯಾಗಿ ಸಂತೃಪ್ತ ಜೀವನ ನಡೆಸಿದಳು. ಈ ಎರಡು ಸೂಕ್ತಗಳು ಘೋಷಾಳ ವಿವಾಹಪೂರ್ವದಲ್ಲಿ ಆಕೆಯಿಂದ ರಚಿಸಲ್ಪಟ್ಟವು ಎಂದು ಹೇಳಲಾಗುತ್ತದೆ.

ಲೋಪಾಮುದ್ರಾ

ಲೋಪಾಮುದ್ರಾ ಅಗಸ್ತ್ಯನಿಂದ ಸೃಷ್ಟಿಯಾದವಳು. ಅಗಸ್ತ್ಯರು ತಮ್ಮ ತಪಶ್ಶಕ್ತಿಯನ್ನು ಧಾರೆ ಎರೆದು ಒಂದು ಪುತ್ಥಳಿಯನ್ನು ನಿರ್ಮಿಸಿ, ಮಕ್ಕಳಿಲ್ಲದೆ ಕೊರಗುತ್ತಿದ್ದ ಕವೇರ ರಾಜ ದಂಪತಿಗೆ ಆ ಮಗುವನ್ನು ನೀಡುತ್ತಾರೆ. ರಾಜ ದಂಪತಿ ಆ ಮಗುವನ್ನು ಪೆÇೀಷಿಸಿ, ಸಕಲ ವಿದ್ಯೆಗಳನ್ನೂ ಕೊಡಿಸುತ್ತಾರೆ. ಅಗಸ್ತ್ಯರು ತಮ್ಮ ಪಿತೃಗಳ ಮುಕ್ತಿಗಾಗಿ ಸಂತಾನಾಪೇಕ್ಷೆಯಿಂದ ಮದುವೆಯಾಗಲು ಬಯಸಿದಾಗ ರಾಜನ ಬಳಿ ಸಾಗಿ ಲೋಪಾಮುದ್ರೆಯನ್ನು ಕನ್ಯಾದಾನವಾಗಿ ನೀಡಲು ಕೋರುತ್ತಾರೆ. ಲೋಪಾಮುದ್ರೆ ಅಗಸ್ತ್ಯರನ್ನು ಮದುವೆಯಾಗಿ ಪರ್ಣಕುಟಿಯಲ್ಲಿ ನೆಲೆಸುತ್ತಾಳೆ. ಪತಿಯ ತಪಶ್ಚರಣೆಗೆ ಅನುಕೂಲ ಮಾಡಿಕೊಡುತ್ತಾ ಕರ್ತವ್ಯ ನೆರವೇರಿಸುತ್ತಾ ವರ್ಷಗಳು ಉರುಳುತ್ತವೆ. ಎಷ್ಟಾದರೂ ಪತಿ ತನ್ನತ್ತ ದಾಂಪತ್ಯ ಪ್ರೇಮದಿಂದ ವರ್ತಿಸದೆ ಇರುವುದನ್ನು ಕಂಡು ಬೇಸತ್ತ ಲೋಪಾಮುದ್ರಾ ತಾನೂ ತಪವನ್ನಾಚರಿಸಿ ಎರಡು ಚರಣಗಳ ರುಕ್ಕೊಂದನ್ನು ರಚಿಸುತ್ತಾಳೆ. ಇದರಿಂದ ಅಗಸ್ತ್ಯರು ಎಚ್ಚೆತ್ತು, ಪತ್ನಿಯ ಬಯಕೆಯನ್ನು ಈಡೇರಿಸುತ್ತಾರೆ ಮತ್ತು ದೃಢಸ್ಯು ಎಂಬ ಪುತ್ರನನ್ನು ಪಡೆಯುತ್ತಾರೆ. ಲೋಪಾಮುದ್ರಾ ತನ್ನ ಬೇಸರ, ಆಕಾಂಕ್ಷೆಗಳನ್ನು ಅಭಿವ್ಯಕ್ತಿಸಲು ರಚಿಸಿದ ಶ್ಲೋಕಗಳು ಋಗ್ವೇದದಲ್ಲಿ ಅಡಕಗೊಂಡಿವೆ.

ಮೈತ್ರೇಯೀ

ಋಗ್ವೇದದ ಸರಿಸುಮಾರು ಒಂದು ಸಾವಿರ ಮಂತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಮಂತ್ರಗಳು ಮೈತ್ರೇಯಿಯ ಹೆಸರಿನಲ್ಲಿವೆ. ಮೈತ್ರೇಯಿ ಅಸಾಧಾರಣ ಜ್ಞಾನದಿಂದ ಕೂಡಿದ ಬ್ರಹ್ಮವಾದಿನಿಯಾಗಿದ್ದಳೆಂದು ಇತಿಹಾಸ ಹೇಳುತ್ತದೆ. ಯಾಜ್ಞವಲ್ಕ್ಯರ ಪತ್ನಿಯಾದ ಈಕೆ, ಪತಿಯೊಂದಿಗೆ ನಡೆಸಿದ ಸಂವಾದವು ಅಪಾರ ಜ್ಞಾನದಿಂದ ಕೂಡಿದೆ. ಯಾಜ್ಞವಲ್ಕ್ಯರು ಗೃಹಸ್ಥಾಶ್ರಮದ ಕರ್ತವ್ಯಗಳನ್ನು ಪೂರೈಸಿ ತಪಶ್ಚರಣೆಗೆಂದು ಹೊರಟು ನಿಂತಾಗ ತಮ್ಮ ಸಂಪತ್ತಿನಲ್ಲಿ ತಮಗೇನು ಬೇಕೋ ಅದನ್ನು ಆಯ್ದುಕೊಳ್ಳುವಂತೆ ಪತ್ನಿಯರಿಗೆ ಹೇಳುತ್ತಾರೆ. ಮೊದಲನೆಯ ಪತ್ನಿ ಕಾತ್ಯಾಯನಿಯು ಗುರುಕುಲದ ಜವಾಬ್ದಾರಿಯನ್ನು ಹೊರುತ್ತಾಲೆ. ಸಹಜವಾಗಿಯೇ ಆಶ್ರಮಕ್ಕೆ ಸಂಬಂಧಪಟ್ಟ ಎಲ್ಲ ಸಂಪತ್ತಿನ ಉಸ್ತುವಾರಿ ಅವಳದಾಗುತ್ತದೆ. ಮೈತ್ರೇಯಿಯು ಈ ಯಾವ ಲೌಕಿಕ ಜವಾಬ್ದಾರಿಯನ್ನಾಗಲೀ ಸಂಪತ್ತನ್ನಾಗಲೀ ಕೇಳದೆ, ಯಾವುದನ್ನು ಹೊಂದುವುದರಿಂದ ತನ್ನ ತಿಳಿವು ಹೆಚ್ಚುವುದೋ ಕ್ಲೇಷ ಕಳೆಯುವುದೋ ಬ್ರಹ್ಮಜ್ಞಾನ ಪ್ರಾಪ್ತವಾಗುವುದೋ ಅಂತಹದನ್ನು ನಿಡುವಂತೆ ಕೇಳಿಕೊ್ಳ್ಳುತ್ತಾಳೆ. ಯಾಜ್ಞವಲ್ಕ್ಯರು ಪತ್ನಿಯ ಬುದ್ಧಿವಂತಿಕೆಯನ್ನು ಮೆಚ್ಚಿ ಸೂಕ್ತ ಬೋಧನೆ ನೀಡುತ್ತಾರೆ. 

ಗಾರ್ಗಿ ವಾಚಕ್ನವಿ

ವಚಕ್ನು ಋಷಿಯ ಮಗಳಾದ ಗಾರ್ಗಿ ಬ್ರಹ್ಮವಾದಿನಿಯಾಗಿದ್ದವಳು. ಅಪಾರ ಜ್ಞಾನ ಹೊಂದಿದ್ದ ಈಕೆ ಅಷ್ಟೇ ತೀಕ್ಷ್ಣವಾದ ಪ್ರಾಶ್ನಿಕ ಬುದ್ಧಿಯನ್ನೂ ಹೊಂದಿದ್ದಳು. ಸಕಲ ಚರಾಚರಗಳ ಅಸ್ತಿತ್ವ ಮೂಲದ ಕುರಿತು ಈಕೆ ಎತ್ತಿದ ಅನೇಕ ಪ್ರಶ್ನೆಗಳು ಋಗ್ವೇದದಲ್ಲಿ ಅಡಕಗೊಂಡಿವೆ. ಈ ಮಂತ್ರಗಳಲ್ಲಿ ಸ್ತ್ರೀಯರ ವೈವಚಾರಿಕ ಮನೋಭಾವದ ಪ್ರತಿನಿಧಿಯಂತೆ ಗಾರ್ಗಿ ಕಂಡುಬರುತ್ತಾಳೆ. ಜನಕ ಮಹಾರಾಜನು ಏರ್ಪಡಿಸಿದ್ದ ಬ್ರಹ್ಮ ಯಜ್ಞದಲ್ಲಿ ಪಾಲ್ಗೊಂಡಿದ್ದ ಈಕೆ ತನ್ನ ಪ್ರಶ್ನೆಗಳ ತರ್ಕದಿಂದ ಅನೇಕಾನೇಕ ಋಷಿಗಳನ್ನು ದಂಗುಬಡಿಸಿದ್ದಳೆಂದು ಹೇಳಲಾಗುತ್ತದೆ. ಬ್ರಹ್ಮಜ್ಞನಾಗಿದ್ದ ಯಾಜ್ಞವಲ್ಕ್ಯ ಕೂಡ ಈಕೆ ಕೇಳಿದ ಪ್ರಶ್ನೆಗೆ ಉತ್ತರಿಸಲು ದೀರ್ಘಕಾಲ ತೆಗೆದುಕೊಂಡನೆಂದು ಐತಿಹ್ಯವಿದೆ.

ರೋಮಷಾ

ಈಕೆ ಒಬ್ಬ ಬ್ರಹ್ಮವಾದಿನಿ. ಋಗ್ವೇದದ ಒಂದು ಋಚೆ ಈಕೆಯ ಹೆಸರಲ್ಲಿದೆ. ಇವಳು ಬೃಹಸ್ಪತಿಯ ಮಗಳು. ಸಾಮವೇದದ ಹಲವು ಮಂತ್ರಗಳ ದ್ರಷ್ಟಾರಳೀಕೆ. ಈಕೆಯ ಪತಿ ಭಾವಯಭ್ಯ ರಾಜನೂ ಋಷಿಯಾಗಿದ್ದು, ಒಂದು ಋಚೆಯನ್ನು ರಚಿಸಿದ್ದಾನೆ. ರೋಮಷಾ ರಚಿಸಿರುವ ರುಚೆಯು ತನ್ನ ಪತಿಯ ಸ್ಪರ್ಶಕ್ಕೆ ಕಾದಿರುವ ಪತ್ನಿಯ ಭಾವತೀವ್ರತೆಯನ್ನು ಅಭಿವ್ಯಕ್ತಿಸುತ್ತದೆ.

ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನ ಏಕಿರಬೇಕು?

ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನ ಏಕಿರಬೇಕು?

ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕ ಪ್ರಕಾರವಾಗಿ ಅಲಂಕರಿಸುತ್ತದೆ. 

ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರ ಪದ್ಮವ ನಾನಿಚ|
ವಸಂತಿ ವೈಷ್ಣ ವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದುಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

ತುಳಸಿಯ ಸೃಷ್ಟಿ :--

ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದುದು. 

ಆ ಸ್ಥಳಗಳಲ್ಲಿ ತುಳಸಿ ಸಸ್ಯಗಳಾಗಿ ಅವು ಬೆಳೆದವು. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರುಗಳು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. 

ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯ ವಾಯಿತು. ತಾನು ಬೇರೆ ಯಾವುದರ ತುಲನೆಗೂ ಸರಿ ಸಾಟಿಯಾಗದಿದ್ದುದರಿಂದ ಅದಕ್ಕೆ ತುಳಸಿ ಎಂಬ ಹೆಸರು ಅರ್ಥಪೂರ್ಣವಾಯಿತು.

ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಲಾಭಗಳು :---

ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. 

ಕೃಷ್ಣ ತುಳಸಿಯಿಂದ ಅನಿಷ್ಟ ಶಕ್ತಿಗಳ ನಾಶಕ್ಕೆ ಪೂರಕ ವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆ ಯಾಗುತ್ತದೆ. 

ಅಶ್ವತ್ಥವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಪ್ರಾಣಶಕ್ತಿಯು (ಆಮ್ಲಜನಕವು) ಹೇರಳವಾಗಿ ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆಗಳನ್ನು ಹಾಕುವುದು ಲಾಭದಾಯಕವಾಗಿದೆ. 

ತುಳಸಿಯ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ವೃಂದಾವನದಲ್ಲಿ ಉದುರಿದ ಎಲೆಗಳಿಂದ ಮಣ್ಣುಗೂಡಿದ ಅದರ ಮೃತ್ತಿಕೆಯನ್ನು ಶರೀರದಲ್ಲಿ ಕುಷ್ಠಾದಿ ಚರ್ಮರೋಗ ಗಳಿದ್ದಲ್ಲಿಗೆ ಹಚ್ಚಿಕೊಂಡರೆ ರೋಗನಿವಾರಣೆ ಯಾಗುವುದೆಂದು ಹೇಳಲಾಗಿದೆ.

ತುಳಸಿಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಉರಿಸಿಡಬೇಕು? ಏಕೆ?

ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀ ಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗ ತೊಡಗುತ್ತದೆ. 

ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. 

ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾ ಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, 

ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. 

ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿ ಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. 

ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮ ರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು.

ದೀಪ ಜ್ಯೋತಿಯ ಸ್ತೋತ್ರ :---

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ|

ದೀಪಜ್ಯೋತಿಃ ಪರಬ್ರಹ್ಮಾ ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ||

ಶ್ರೀ ತುಲಸಿ ಸ್ತೋತ್ರದ ಒಂದು ಶ್ಲೋಕವು ಇಂತಿದೆ:--

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್||

ಮೇಲಿನ ಈ ಎರಡು ಶ್ಲೋಕಗಳನ್ನು ಅರ್ಥೈಸಿಕೊಂಡರೆ ಮನೆಯ ಅಂಗಳದಲ್ಲಿ ತುಳಸಿ ವೃಂದಾವನ ಹಾಗೂ ಸಂಧ್ಯಾಕಾಲದಲ್ಲಿ ಅದಕ್ಕೆ ದೀಪವನ್ನಿರಿಸುವುದರಿಂದ ಅವುಗಳು ಮನೆ ಮಂದಿಗೂ ಮನೆಗೂ ಸಂರಕ್ಷಕ ದೇವತೆಗಳಂತೆ ಕೆಲಸ ಮಾಡುವುದರ ಮಹತ್ವವು ತಿಳಿಯುತ್ತದೆ. 

ಮನೆಯಂಗಳದಲ್ಲಿ ತುಳಸಿ ವೃಂದಾವನವಿರುವುದರ ಅವಶ್ಯಕತೆಯು ಎಷ್ಟಿದೆ ಎಂಬುದರ ಅರಿವಾಗುತ್ತದೆ.

ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸುವುದು ಹೇಗೆ?

ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆ ಯೆಂದಾದರೆ  ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖಮಾಡಿ ನಿಲ್ಲಬೇಕು. 

ಮುಖ್ಯದ್ವಾರದಿಂದ ಬಲಗಡೆಗೆ ಅರ್ಧಕೋಲು (ಇನ್ನು ಮುಂದೆ ಒಂದು ಕೋಲು ಅಂದರೆ ೨೮ ಇಂಚು ಎಂದು ತಿಳಿಯಬೇಕು) ದೂರದಲ್ಲಿ ಗೋಡೆಯ ಅಥವಾ ಸಿಟೌಟ್‌ನ ಗೋಡೆಗೆ ಒಂದು ಗುರುತು ಮಾಡಿರಿ. 

ಅಲ್ಲಿಂದ ಪೂರ್ವದಿಕ್ಕಿನೆಡೆಗೆ ಲಂಬವಾಗಿ ನಿಮ್ಮ ಮನೆಯ ಹಾಗೂ ಅಂಗಳದ ಅಗಲವನ್ನು ಅನುಲಕ್ಷ್ಯಿಸಿ ಅದಕ್ಕೆ ಅನುರೂಪವಾಗುವಂತೆ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. 

ಆಗ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿಕಟ್ಟೆ ಯಿರುವುದು. ಮನೆಯು ಪಶ್ಚಿಮಾಭಿಮುಖವಾಗಿ ಇದ್ದರೆ ಯಾ ಉತ್ತರಾಭಿ ಮುಖವಾಗಿದ್ದರೆ ಮನೆಯ ಮುಖ್ಯ ದ್ವಾರದೆದುರು ನಿಂತು ಎಡಗಡೆಗೆ ಅರ್ಧ ಕೋಲು ದೂರದ ಬಿಂದುವಿನಿಂದ ಅನುಕ್ರಮವಾಗಿ (ಪಶ್ಚಿಮಾಭಿಮುಖವಾಗಿ ಯಾ ಉತ್ತರಾಭಿಮುಖವಾಗಿ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. 

ಅಂದರೆ ಅನುಕ್ರಮವಾಗಿ ಮನೆಯ ಮುಖ್ಯದ್ವಾರದಿಂದ ವಾಯುವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿಕಟ್ಟೆ ಯನ್ನು ನಿರ್ಮಿಸಬಹುದು. 

ನಿಮ್ಮ ಮನೆಯ ದಿಕ್ಕು ಸ್ವಲ್ಪ ತಿರುಗಿ ಇದ್ದರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಇದು ಜನ ಸಾಮಾನ್ಯರು ತುಳಸಿಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸ ಬಹುದಾದ ಸುಲಭ ವಿಧಾನವಾಗಿದೆ.

ತುಳಸಿಕಟ್ಟೆಯ ಉದ್ದಗಲ ಅಳತೆಗಳು :--

ಸಾಮಾನ್ಯವಾಗಿ ತುಳಸಿಕಟ್ಟೆಯ ಉದ್ದ, ಅಗಲ, ಎತ್ತರಗಳು ತಲಾ ೧೯ ಅಂಗುಲ (೧೯) ಆಗಿದ್ದರೆ ಉತ್ತಮ. 

ತುಳಸಿಕಟ್ಟೆಯ ಎತ್ತರವು ಮನೆಯ ಪಂಚಾಂಗದ ಮಟ್ಟದಿಂದ ಒಂದು ಅಂಗುಲವಾದರೂ ಕಡಿಮೆಯಿರಬೇಕು. ಕೊನೆಯ ಪಕ್ಷ ಪಂಚಾಂಗದ ಮಟ್ಟಕ್ಕೆ ಸಮಾನಾಂತರವಾಗಿರಬಹುದು. 

ಅದಕ್ಕಿಂತ ಹೆಚ್ಚು ಎತ್ತರವು ಸೂಕ್ತವಲ್ಲ. ಹಾಗೆಂದು ಈಗಾಗಲೇ ಇರುವ ತುಳಸಿಕಟ್ಟೆಯನ್ನು ಹಾಗೆಯೇ ಇರಗೊಡಿಸುವುದು ಒಳ್ಳೆಯದು.

ಯಾವ ದಿನಗಳಂದು ತುಳಸಿ ಗಿಡವನ್ನು ನೆಡಬಹುದು?

ಸಾಮಾನ್ಯವಾಗಿ ಶನಿವಾರ, ಬುಧವಾರ ಯಾ ಗುರುವಾರ ದಿನಗಳಂದು ಬೆಳಗ್ಗಿನ ಹೊತ್ತು ಶ್ರೀ ಮಹಾ ವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು.

ತುಳಸಿಕಟ್ಟೆಯಲ್ಲಿ ಯಾವ ಜಾತಿಯ ಗಿಡವನ್ನು ನೆಡಬಹುದು?

ತುಳಸಿಕಟ್ಟೆಯಲ್ಲಿ ತಾರಕತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀರಾಮ ತುಳಸಿ (ಬಿಳಿ ತುಳಸಿ)ಯನ್ನು ಸುತ್ತಮುತ್ತ ಮಾರಕ ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀಕೃಷ್ಣ ತುಳಸಿ (ನಸುಗಪ್ಪು ಬಣ್ಣದ ತುಳಸಿ)ಯನ್ನೂ ನೆಟ್ಟು ಪೋಷಿಸಿದರೆ ಮನೆಯವರಿಗೆ ಈ ಎರಡೂ ತತ್ತ್ವಗಳ ಲಾಭವಾಗುವುದು.

ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳವಿದೆ. 

ಮುಂಬರುವ ಉತ್ಥಾನ ದ್ವಾದಶಿಯಂದು ಹಾಗೂ ಮುಂದಿನ ವರ್ಷಗಳಲ್ಲಿ ಶ್ರೀ ತುಳಸಿಪೂಜೆಯನ್ನು ಶ್ರೀಕೃಷ್ಣ ದಾಮೋದರನೊಂದಿಗೆ ವಿವಾಹ ಮಾಡುವ ಮೂಲಕ ಅತ್ಯಂತ ಶ್ರದ್ದಾ ಭಕ್ತಿಭಾವಗಳಿಂದ ಆಚರಿಸಿ ದೈವಾನುಗ್ರಹ ಪಡೆಯೋಣ. 

ಆದಿನ ಅನಿವಾರ್ಯವಾಗಿ ಪೂಜೆಮಾಡಲಾಗದಿದ್ದರೆ ಅನಂತರದ ಹುಣ್ಣಿಮೆಯ ತನಕ ಯಾವುದಾದರೊಂದು ದಿನ ಪೂಜೆ ಮಾಡಬಹುದು. 

ತುಳಸಿಪೂಜೆಯ ಸಂದರ್ಭದಲ್ಲಿ ತಮೋ ಗುಣಿಯಾದ ಮೇಣದ ಬತ್ತಿಗಳನ್ನು ಉರಿಸಿಡದೆ ಸತ್ತ್ವಗುಣೀ ಎಳ್ಳೆಣ್ಣೆಯ ಹಣತೆಗಳನ್ನು ದೇದೀಪ್ಯ ವಾತಾವರಣ ವನ್ನು ನಿರ್ಮಿಸಿ ಸತ್ತ್ವಗುಣದ ಸಂವರ್ಧನೆ ಮಾಡುವುದು ತೀರಾ ಅವಶ್ಯವಾಗಿದೆ ಎಂಬುದರ ಅರಿವು ನಮಗೆಲ್ಲರಿಗೂ ಇರಲಿ.ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನ ಏಕಿರಬೇಕು?

ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕ ಪ್ರಕಾರವಾಗಿ ಅಲಂಕರಿಸುತ್ತದೆ. 

ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರ ಪದ್ಮವ ನಾನಿಚ|
ವಸಂತಿ ವೈಷ್ಣ ವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದುಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

ತುಳಸಿಯ ಸೃಷ್ಟಿ :--

ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದುದು. 

ಆ ಸ್ಥಳಗಳಲ್ಲಿ ತುಳಸಿ ಸಸ್ಯಗಳಾಗಿ ಅವು ಬೆಳೆದವು. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರುಗಳು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. 

ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯ ವಾಯಿತು. ತಾನು ಬೇರೆ ಯಾವುದರ ತುಲನೆಗೂ ಸರಿ ಸಾಟಿಯಾಗದಿದ್ದುದರಿಂದ ಅದಕ್ಕೆ ತುಳಸಿ ಎಂಬ ಹೆಸರು ಅರ್ಥಪೂರ್ಣವಾಯಿತು.

ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಲಾಭಗಳು :---

ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. 

ಕೃಷ್ಣ ತುಳಸಿಯಿಂದ ಅನಿಷ್ಟ ಶಕ್ತಿಗಳ ನಾಶಕ್ಕೆ ಪೂರಕ ವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆ ಯಾಗುತ್ತದೆ. 

ಅಶ್ವತ್ಥವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಪ್ರಾಣಶಕ್ತಿಯು (ಆಮ್ಲಜನಕವು) ಹೇರಳವಾಗಿ ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆಗಳನ್ನು ಹಾಕುವುದು ಲಾಭದಾಯಕವಾಗಿದೆ. 

ತುಳಸಿಯ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ವೃಂದಾವನದಲ್ಲಿ ಉದುರಿದ ಎಲೆಗಳಿಂದ ಮಣ್ಣುಗೂಡಿದ ಅದರ ಮೃತ್ತಿಕೆಯನ್ನು ಶರೀರದಲ್ಲಿ ಕುಷ್ಠಾದಿ ಚರ್ಮರೋಗ ಗಳಿದ್ದಲ್ಲಿಗೆ ಹಚ್ಚಿಕೊಂಡರೆ ರೋಗನಿವಾರಣೆ ಯಾಗುವುದೆಂದು ಹೇಳಲಾಗಿದೆ.

ತುಳಸಿಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಉರಿಸಿಡಬೇಕು? ಏಕೆ?

ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀ ಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗ ತೊಡಗುತ್ತದೆ. 

ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. 

ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾ ಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, 

ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. 

ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿ ಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. 

ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮ ರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು.

ದೀಪ ಜ್ಯೋತಿಯ ಸ್ತೋತ್ರ :---

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ|

ದೀಪಜ್ಯೋತಿಃ ಪರಬ್ರಹ್ಮಾ ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ||

ಶ್ರೀ ತುಲಸಿ ಸ್ತೋತ್ರದ ಒಂದು ಶ್ಲೋಕವು ಇಂತಿದೆ:--

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್||

ಮೇಲಿನ ಈ ಎರಡು ಶ್ಲೋಕಗಳನ್ನು ಅರ್ಥೈಸಿಕೊಂಡರೆ ಮನೆಯ ಅಂಗಳದಲ್ಲಿ ತುಳಸಿ ವೃಂದಾವನ ಹಾಗೂ ಸಂಧ್ಯಾಕಾಲದಲ್ಲಿ ಅದಕ್ಕೆ ದೀಪವನ್ನಿರಿಸುವುದರಿಂದ ಅವುಗಳು ಮನೆ ಮಂದಿಗೂ ಮನೆಗೂ ಸಂರಕ್ಷಕ ದೇವತೆಗಳಂತೆ ಕೆಲಸ ಮಾಡುವುದರ ಮಹತ್ವವು ತಿಳಿಯುತ್ತದೆ. 

ಮನೆಯಂಗಳದಲ್ಲಿ ತುಳಸಿ ವೃಂದಾವನವಿರುವುದರ ಅವಶ್ಯಕತೆಯು ಎಷ್ಟಿದೆ ಎಂಬುದರ ಅರಿವಾಗುತ್ತದೆ.

ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸುವುದು ಹೇಗೆ?

ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆ ಯೆಂದಾದರೆ  ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖಮಾಡಿ ನಿಲ್ಲಬೇಕು. 

ಮುಖ್ಯದ್ವಾರದಿಂದ ಬಲಗಡೆಗೆ ಅರ್ಧಕೋಲು (ಇನ್ನು ಮುಂದೆ ಒಂದು ಕೋಲು ಅಂದರೆ ೨೮ ಇಂಚು ಎಂದು ತಿಳಿಯಬೇಕು) ದೂರದಲ್ಲಿ ಗೋಡೆಯ ಅಥವಾ ಸಿಟೌಟ್‌ನ ಗೋಡೆಗೆ ಒಂದು ಗುರುತು ಮಾಡಿರಿ. 

ಅಲ್ಲಿಂದ ಪೂರ್ವದಿಕ್ಕಿನೆಡೆಗೆ ಲಂಬವಾಗಿ ನಿಮ್ಮ ಮನೆಯ ಹಾಗೂ ಅಂಗಳದ ಅಗಲವನ್ನು ಅನುಲಕ್ಷ್ಯಿಸಿ ಅದಕ್ಕೆ ಅನುರೂಪವಾಗುವಂತೆ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. 

ಆಗ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿಕಟ್ಟೆ ಯಿರುವುದು. ಮನೆಯು ಪಶ್ಚಿಮಾಭಿಮುಖವಾಗಿ ಇದ್ದರೆ ಯಾ ಉತ್ತರಾಭಿ ಮುಖವಾಗಿದ್ದರೆ ಮನೆಯ ಮುಖ್ಯ ದ್ವಾರದೆದುರು ನಿಂತು ಎಡಗಡೆಗೆ ಅರ್ಧ ಕೋಲು ದೂರದ ಬಿಂದುವಿನಿಂದ ಅನುಕ್ರಮವಾಗಿ (ಪಶ್ಚಿಮಾಭಿಮುಖವಾಗಿ ಯಾ ಉತ್ತರಾಭಿಮುಖವಾಗಿ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. 

ಅಂದರೆ ಅನುಕ್ರಮವಾಗಿ ಮನೆಯ ಮುಖ್ಯದ್ವಾರದಿಂದ ವಾಯುವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿಕಟ್ಟೆ ಯನ್ನು ನಿರ್ಮಿಸಬಹುದು. 

ನಿಮ್ಮ ಮನೆಯ ದಿಕ್ಕು ಸ್ವಲ್ಪ ತಿರುಗಿ ಇದ್ದರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಇದು ಜನ ಸಾಮಾನ್ಯರು ತುಳಸಿಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸ ಬಹುದಾದ ಸುಲಭ ವಿಧಾನವಾಗಿದೆ.

ತುಳಸಿಕಟ್ಟೆಯ ಉದ್ದಗಲ ಅಳತೆಗಳು :--

ಸಾಮಾನ್ಯವಾಗಿ ತುಳಸಿಕಟ್ಟೆಯ ಉದ್ದ, ಅಗಲ, ಎತ್ತರಗಳು ತಲಾ ೧೯ ಅಂಗುಲ (೧೯) ಆಗಿದ್ದರೆ ಉತ್ತಮ. 

ತುಳಸಿಕಟ್ಟೆಯ ಎತ್ತರವು ಮನೆಯ ಪಂಚಾಂಗದ ಮಟ್ಟದಿಂದ ಒಂದು ಅಂಗುಲವಾದರೂ ಕಡಿಮೆಯಿರಬೇಕು. ಕೊನೆಯ ಪಕ್ಷ ಪಂಚಾಂಗದ ಮಟ್ಟಕ್ಕೆ ಸಮಾನಾಂತರವಾಗಿರಬಹುದು. 

ಅದಕ್ಕಿಂತ ಹೆಚ್ಚು ಎತ್ತರವು ಸೂಕ್ತವಲ್ಲ. ಹಾಗೆಂದು ಈಗಾಗಲೇ ಇರುವ ತುಳಸಿಕಟ್ಟೆಯನ್ನು ಹಾಗೆಯೇ ಇರಗೊಡಿಸುವುದು ಒಳ್ಳೆಯದು.

ಯಾವ ದಿನಗಳಂದು ತುಳಸಿ ಗಿಡವನ್ನು ನೆಡಬಹುದು?

ಸಾಮಾನ್ಯವಾಗಿ ಶನಿವಾರ, ಬುಧವಾರ ಯಾ ಗುರುವಾರ ದಿನಗಳಂದು ಬೆಳಗ್ಗಿನ ಹೊತ್ತು ಶ್ರೀ ಮಹಾ ವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು.

ತುಳಸಿಕಟ್ಟೆಯಲ್ಲಿ ಯಾವ ಜಾತಿಯ ಗಿಡವನ್ನು ನೆಡಬಹುದು?

ತುಳಸಿಕಟ್ಟೆಯಲ್ಲಿ ತಾರಕತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀರಾಮ ತುಳಸಿ (ಬಿಳಿ ತುಳಸಿ)ಯನ್ನು ಸುತ್ತಮುತ್ತ ಮಾರಕ ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀಕೃಷ್ಣ ತುಳಸಿ (ನಸುಗಪ್ಪು ಬಣ್ಣದ ತುಳಸಿ)ಯನ್ನೂ ನೆಟ್ಟು ಪೋಷಿಸಿದರೆ ಮನೆಯವರಿಗೆ ಈ ಎರಡೂ ತತ್ತ್ವಗಳ ಲಾಭವಾಗುವುದು.

ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳವಿದೆ. 

ಮುಂಬರುವ ಉತ್ಥಾನ ದ್ವಾದಶಿಯಂದು ಹಾಗೂ ಮುಂದಿನ ವರ್ಷಗಳಲ್ಲಿ ಶ್ರೀ ತುಳಸಿಪೂಜೆಯನ್ನು ಶ್ರೀಕೃಷ್ಣ ದಾಮೋದರನೊಂದಿಗೆ ವಿವಾಹ ಮಾಡುವ ಮೂಲಕ ಅತ್ಯಂತ ಶ್ರದ್ದಾ ಭಕ್ತಿಭಾವಗಳಿಂದ ಆಚರಿಸಿ ದೈವಾನುಗ್ರಹ ಪಡೆಯೋಣ. 

ಆದಿನ ಅನಿವಾರ್ಯವಾಗಿ ಪೂಜೆಮಾಡಲಾಗದಿದ್ದರೆ ಅನಂತರದ ಹುಣ್ಣಿಮೆಯ ತನಕ ಯಾವುದಾದರೊಂದು ದಿನ ಪೂಜೆ ಮಾಡಬಹುದು. 

ತುಳಸಿಪೂಜೆಯ ಸಂದರ್ಭದಲ್ಲಿ ತಮೋ ಗುಣಿಯಾದ ಮೇಣದ ಬತ್ತಿಗಳನ್ನು ಉರಿಸಿಡದೆ ಸತ್ತ್ವಗುಣೀ ಎಳ್ಳೆಣ್ಣೆಯ ಹಣತೆಗಳನ್ನು ದೇದೀಪ್ಯ ವಾತಾವರಣ ವನ್ನು ನಿರ್ಮಿಸಿ ಸತ್ತ್ವಗುಣದ ಸಂವರ್ಧನೆ ಮಾಡುವುದು ತೀರಾ ಅವಶ್ಯವಾಗಿದೆ ಎಂಬುದರ ಅರಿವು ನಮಗೆಲ್ಲರಿಗೂ ಇರಲಿ.
ತುಳಸಿ ಗಿಡದಲ್ಲಾಗುವ ಬದಲಾವಣೆಗಳಿಂದ ಮುಂದೆ ಮನೆಯಲ್ಲಿ ನಡೆಯುವ ಪರಿಣಾಮಗಳ ಬಗ್ಗೆ ಹೇಳ ಬಹುದಂತೆ.!

ತುಳಸಿ ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಈ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣ ಪಡಿಸ ಬಹುದು. ಆಧ್ಯಾತ್ಮಿಕವಾಗಿಯೂ ತುಳಸಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದೆಂದು ಅದರಿಂದ ನಮೆಗೆಲ್ಲವೂ ಒಳ್ಳೆಯದಾಗುತ್ತದಂತೆ. ಆದರೆ,ಒಮ್ಮೊಮ್ಮೆ ಮನೆಯಲ್ಲಿರುವ ತುಳಸಿ ಗಿಡದ ಸಹಜ ಬಣ್ಣದಲ್ಲಿ ಬದಲಾಣೆ ಆಗುವುದು, ಇಲ್ಲವೆ ಎಲೆಗಳು ಒಣಗಿ ಉದುರಿ ಹೋಗುವುದು ಮೊದಲಾದುವುಗಳನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಹೀಗೆ ಭೌತಿಕವಾಗಿ ನಡೆಯುವ ಪ್ರಕ್ರಿಯೆಗಳಿಂದಾಗಿ ಆ ಮನೆಯಲ್ಲಿ ನಡೆಯ ಬಹುದಾದ ಆಗು ಹೋಗುಗಳ ಬಗ್ಗೆ ತಿಳಿದು ಕೊಳ್ಳ ಬಹುದಂತೆ. ಈ ನಿಟ್ಟಿನಲ್ಲಿ ತುಳಸಿ ಗಿಡದಲ್ಲಾಗುವ ಬದಲಾವಣೆಗಳನ್ನು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಿಳಿದು ಕೊಳ್ಳೋಣ.

1. ತುಳಸಿ ಗಿಡದ ಎಲೆಗಳ ಬಣ್ಣ ಒಮ್ಮೆಲೇ ಬದಲಾದರೆ… ಆ ಮನೆಯ ಪೈಕಿ ಯಾರೋ ಒಬ್ಬರು ಮಾಯ ಮಾಟದಂತಹ ಪ್ರಯೋಗಕ್ಕೆ ಈಡಾಗುತ್ತಾರೆಂಬುದನ್ನು ಸೂಚಿಸುತ್ತದೆ. ಹೀಗೆ ಪ್ರಯೋಗ ನಡೆಸಿ ಅವರನ್ನು ಹಾಳು ಮಾಡ ಬೇಕೆಂದು ಕೊಂಡರೆ ಮಾತ್ರ ಈ ರೀತಿ ಎಲೆಗಳ ಬಣ್ಣ ಬದಲಾಗುತ್ತದಂತೆ.

2. ದಿನಾಲೂ ನೀರು ಹಾಕಿ ಚೆನ್ನಾಗಿ ಪೋಷಿಸುತ್ತಿದ್ದರೂ, ತುಳಸಿ ಗಿಡದ ಎಲೆಗಳು ಒಣಗಿ ಹೋಗುತ್ತಿದ್ದರೆ; ಆ ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗುತ್ತರಂತೆ. ಯಾವುದಾದರೂ ಒಂದು ಗಂಭೀರ ಕಾಯಿಲೆಗೆ ತುತ್ತಾಗುವ ಅವಕಾಶವಿರುತ್ತದಂತೆ.

3. ಒಂದು ವೇಳೆ ತುಳಸಿ ಗಿಡಕ್ಕೆ ನೀರೆರೆಯದಿದ್ದರೂ, ಎಲೆಗಳು ಹಸಿರಾಗಿ, ಚೆನ್ನಾಗಿ ಬೆಳೆಯುತ್ತಿದ್ದರೆ, ಆ ಮನೆಯವರಿಗೆಲ್ಲರಿಗೂ ಅದೃಷ್ಟ ಕೂಡಿ ಬರುತ್ತದಂತೆ. ಭವಿಷ್ಯದಲ್ಲಿ ಅಂತಹವರಿಗೆ ಹೇರಳವಾಗಿ ಸಂಪತ್ತು ಬರುತ್ತದಂತೆ.

4. ತುಳಸಿ ಗಿಡವನ್ನು ಬೆಳೆಸುತ್ತಿರುವ ಕುಂಡದಲ್ಲಿ, ಮತ್ತೊಂದು ಸಸಿ ತನ್ನಷ್ಟಕ್ಕೆ ತಾನೇ ಹುಟ್ಟಿದರೆ, ತಾವು ಅಂದು ಕೊಂಡದ್ದನ್ನು ಸಾಧಿಸುತ್ತಾರಂತೆ.

5. ಇತರೆ ಕಾರಣಗಳಿಂದಾಗಿ ತುಳಸಿ ಗಿಡ ಒಣಗುತ್ತಿದ್ದರೆ, ಒಡನೆಯೇ ನೀರು ಹಾಕಿ ಚೆನ್ನಾಗಿ ಬೆಳೆಯುವಂತೆ ನೋಡಿ ಕೊಳ್ಳ ಬೇಕಂತೆ. ಹಾಗೆ ಮಾಡದಿದ್ದರೆ ಕೇಡು ಸಂಭವಿಸುತ್ತದಂತೆ.

6. ತುಳಸಿ ಗಿಡ ಹಚ್ಚ ಹಸಿರಾಗಿರುವ ಮನೆಯಲ್ಲಿ ಯಾವಾಗಲೂ ಸುಖ ಸಂತೋಷಗಳು ತುಂಬಿ ತುಳುಕಾಡುತ್ತಿರುತ್ತವಂತೆ. ಅಂತಹ ಮನೆಯವರಿಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲವಂತೆ.

*🕉ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು🕉*

ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು

ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ.

 ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. 

ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ.

ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. 

ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು 

ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು
ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪನದಃ
ಶತ್ರುಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋಸ್ತುತೆ|
ದೀಪಜ್ಯೋತಿಃ ಪರಬ್ರಹ್ಮಾ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ||

ಶ್ರೀಕೃಷ್ಣ

ಶ್ರೀಮನ್ನಾರಾಯಣನ ಹತ್ತು ಅವತಾರಗಳಲ್ಲಿ ಎಂಟನೆಯ ದೆ ಶ್ರೀಕೃಷ್ಣ ಅವತಾರ. 
 ಚಂದ್ರವಂಶದ ಯದು ಕುಲದಲ್ಲಿ ಜನಿಸಿದ ಸಾತ್ವತ  ರಾಜನ ಸಂತತಿಯಲ್ಲಿ ಶೂರ ರಾಜನ ಮಗನಾದ ವಸುದೇವನ ಹೆಂಡತಿಯಾದ ದೇವಕಿಯಲ್ಲಿ ಜನಿಸಿದ ಎಂಟು ಮಕ್ಕಳಲ್ಲಿ ಕಡೆಯವ.

 ವೈಕುಂಠದ ದ್ವಾರಪಾಲಕರಾದ ಜಯವಿಜಯರು ಸನಕಾದಿ ಮುನಿಗಳ ಶಾಪ ವನ್ನು ಹೊಂದಿ ಭೂಲೋಕದಲ್ಲಿ ಮೂರನೆಯ ಬಾರಿ ಶಿಶುಪಾಲ ದಂತವಕ್ತ್ರ ಎಂಬ ಹೆಸರಿನಿಂದ ಜನಿಸಲಾಗಿ ಅವರನ್ನು ಸಂಹರಿಸುವ ಸಲುವಾಗಿ ನಾರಾಯಣ ತನ್ನ ಪೂರ್ಣ ಅಂಶದಿಂದ ಭೂಲೋಕದಲ್ಲಿ ಅವತರಿಸುತ್ತಾನೆ. 

 ಈ ಅವತಾರ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ 28ನೆಯ ದ್ವಾಪರಯುಗದ ಅಂತ್ಯಭಾಗದಲ್ಲಿ ನಡೆಯಿತು. 
 
ದೇವಕಿಯ ಮೊದಲ ಆರು ಗರ್ಭ ಗಳನ್ನು ಕಂಸ ನಾಶಗೊಳಿಸಲು ಏಳನೆಯ ಬಾರಿ ದೇವಕಿ ಗರ್ಭವನ್ನು ಧರಿಸಿದಾಗ ವಿಷ್ಣು ಅವನನ್ನು ವಸುದೇವನ ಮತ್ತೊಬ್ಬ ಪತ್ನಿಯಾದ ರೋಹಿಣಿಯ ಗರ್ಭದಲ್ಲಿ
ಜನಿಸಿದವನೇ ಬಲರಾಮ. 
ಮತ್ತೊಮ್ಮೆ ದೇವಕಿಯು ಗರ್ಭಿಣಿಯಾಗಿ ನವಮಾಸಗಳು ತುಂಬುವ ಬಳಿಕ ಶ್ರಾವಣಮಾಸದ ಕೃಷ್ಣಾಷ್ಟಮಿ ರೋಹಿಣಿ ನಕ್ಷತ್ರ ಬುಧವಾರ ಮಧ್ಯರಾತ್ರಿಯಲ್ಲಿ ಶ್ರೀವಿಷ್ಣು ಭೂಲೋಕದಲ್ಲಿ ಕೃಷ್ಣನಾಗಿ ಅವತರಿಸುತ್ತಾನೆ. 
 ಶ್ರೀಕೃಷ್ಣ ಪರಮಾತ್ಮನ ಲೀಲೆಗಳನ್ನು ನಾವೆಲ್ಲ ಕೇಳಿಯೇ ಇದ್ದೇವೆ. ಅದನ್ನು ಸಂಪೂರ್ಣವಾಗಿ ಮತ್ತೊಂದು ಲೇಖನದಲ್ಲಿ ನಿಮ್ಮ ಮುಂದೆ ತರುತ್ತೇನೆ. ಶ್ರೀಕೃಷ್ಣ ಪರಮಾತ್ಮನ ವಿಚಾರವಾಗಿ ತಿಳಿಯಲುನಾವು ಮಹಾಭಾರತವನ್ನು ಓದಲೇಬೇಕು. 
 ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ. ದೇವಕೀ  ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ. 🙏🙏yashuprasad 🙏

ದೀಪ ಪ್ರಜ್ವಲನೆಯಿಂದ ಉದ್ಘಾಟನೆ

☀ ಧರ್ಮಶಿಕ್ಷಣ☀

🔯 ದೀಪ ಪ್ರಜ್ವಲನೆಯಿಂದ ಉದ್ಘಾಟನೆ

ಹಿಂದೂ ಧರ್ಮದಲ್ಲಿ ದೀಪಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ.

ದೀಪಪ್ರಜ್ವಲನ (ದೀಪ ಬೆಳಗಿಸುವುದು) ಮಾಡುವುದು ಎಂದರೆ ನಮ್ಮಲ್ಲಿನ ಆತ್ಮಶಕ್ತಿಯನ್ನು ಜಾಗೃತ ಮಾಡುವುದು.

🔸 ದೀಪ ಪ್ರಜ್ವಲನೆಯ ಮಹತ್ವ

ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುವುದು: ಯಾವಾಗ ನಾವು ದೀಪ ಪ್ರಜ್ವಲಿಸಿ ಕಾರ್ಯವನ್ನು ಪ್ರಾರಂಭಿಸುತ್ತೇವೆಯೋ, ಆಗ ಆತ್ಮಜ್ಯೋತಿಯ ಬಲದಿಂದ ಮಾಡಿದ ಪೂಜೆಯಿಂದ ನಾವು ಬ್ರಹ್ಮಾಂಡದಲ್ಲಿನ ಆಯಾ ದೇವತೆಗಳ ತತ್ತ್ವಗಳನ್ನು ಆವಾಹನೆ ಮಾಡುತ್ತೇವೆ ಮತ್ತು ದೇವತೆಗಳ ಲಹರಿಗಳಿಗೆ ಕಾರ್ಯಸ್ಥಳದಲ್ಲಿ ಆಸೀನರಾಗಲು ಪ್ರಾರ್ಥನೆಯನ್ನು ಮಾಡುತ್ತೇವೆ. ಇದರಿಂದ ನಾವು ಮಾಡುತ್ತಿರುವ ಕಾರ್ಯದ ಹಿಂದೆ ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುತ್ತದೆ ಮತ್ತು ನಾವು ಇಚ್ಛಿಸಿದ ಕಾರ್ಯವು ಪೂರ್ಣಗೊಳ್ಳುತ್ತದೆ.

ದೀಪಪ್ರಜ್ವಲನೆ ಮಾಡುವುದರ ಮಹತ್ವವೇನು? ದೀಪಪ್ರಜ್ವಲನೆ ಮಾಡುವುದರಿಂದ ಆಗುವ ಆಧ್ಯಾತ್ಮಿಕ ಲಾಭವೇನು? ಎಂಬುವುದನ್ನು ತಿಳಿದುಕೊಳ್ಳಲು ಕ್ಲಿಕ್‌ ಮಾಡಿ👇 https://www.sanatan.org/kannada/38.html

👍 ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ ದಕ್ಷಿಣ ಕನ್ನಡ:
fb.com/HjsDkn

ಗೋಪೂಜೆ

💐🌺💐 #ದೀಪಾವಳಿ #ಹಬ್ಬದ #ಗೋಪೂಜೆ #ಎಂದರೆ #ಮನೆಮಂದಿಗೆಲ್ಲ #ಸಂಭ್ರಮ 💐🌺💐

🔹ದೀಪಾವಳಿ ಹಬ್ಬಕ್ಕೂ ಪ್ರಕೃತಿಗೂ ಅವಿನಾಭಾವವಾದ ಸಂಬಂಧವಿದೆ. ಪ್ರಕೃತಿಗೂ ಗೋವಿಗೂ ನಿಕಟ ಸಮಪರ್ಕವಿದೆ. ಈ ಕಾರಣದಿಂದಾಗಿ ದೀಪಾವಳಿಯ ಪಾಡ್ಯದಂದು ನಡೆಸುವ ಗೋಪೂಜೆ ಅತ್ಯಂತ ವಿಶೇಷ ಮಹತ್ವವನ್ನು ಪಡೆಯುತ್ತದೆ.

🔹“ಸರ್ವೆ ದೇವಾಃ ಸ್ಥಿತಾ ದೇಹೇ’ ಎಂಬಂತೆ ಗೋವಿನ ದೇಹದಲ್ಲಿ ಸರ್ವ ದೇವಾನು ದೇವತೆಗಳು ಸನ್ನಿಹಿತರಾಗಿದ್ದಾರೆ ಎಂದು ಭಾವಿಸುತ್ತದೆ ನಮ್ಮ ದೇಶದ ಸಂಸ್ಕೃತಿ. ದೀಪಾವಳಿಯ ಪಾಡ್ಯದಂದು ಬೆಳಗ್ಗೆ ಗೋಪೂಜೆ ಎಂದೇ ವಿಶೇಷ ಪೂಜೆ ಮಾಡುವುದು ಸಂಪ್ರದಾಯ. 

🔹ಮನೆ ದೇವರ ಪೂಜೆ ಮುಗಿಸಿದ ಬಳಿಕ ಸ್ನಾನ ಮಾಡಿಸಿ ಹೂಮಾಲೆ ಹಾಕಿ, ಮೈಮೇಲೆ ಜೇಡಿಮಣ್ಣಿನ ಮುದ್ರೆಗಳನ್ನು ಇರಿಸಿ ಶೃಂಗರಿಸಿ ತಿನ್ನಲು ಗೋಗ್ರಾಸವಿಟ್ಟು ಪೂಜೆ ಮಾಡುವುದು ರೂಢಿಯಲ್ಲಿದೆ. ಇದು ಒಂದು ವಿಧಾನದ ಗೋಪೂಜೆ. ಈಗ ಇದೇ ಕ್ರಮದ ಪೂಜೆಯನ್ನು ನಾವು ಸರ್ವತ್ರ ಕಾಣುತ್ತಿದ್ದೇವೆ.

🔸ದೀಪಾವಳಿ ಹಬ್ಬದ ಸಮಯದಲ್ಲಿ ಗೋಪೂಜೆ ಎಂದರೆ ಅದರ ಸಂಭ್ರಮವೇ ಬೇರೆ. ಮುಂಜಾನೆಯಿಂದಲೇ ಮನೆಯಲ್ಲಿ ಸಾಕಿದ ದನಕರುಗಳಿಗೆ ಸ್ನಾನವನ್ನು ಮಾಡಿಸಿ, ಅವುಗಳಿಗೆ ವಿಶೇಷ ಸಿಂಗಾರ ಮಾಡಲಾಗುತ್ತದೆ. ಹೂವಿನ ಮಾಲೆ, ಹಿಂಗಾರ, ಶ್ರೀಗಂಧ ಸೇರಿದಂತೆ ವಿಧವಿಧವಾಗಿ ಗೋವುಗಳನ್ನು ಸಿಂಗರಿಸಲಾಗುತ್ತದೆ.

🔸ಮಕ್ಕಳೆಲ್ಲ ಕರುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಸಿಂಗರಿಸಿದರೆ, ಹಿರಿಯರು ಗದ್ದೆಗಳಲ್ಲಿ ಉಳುವ ಎತ್ತುಗಳಿಗೆ, ಹಸುಗಳಿಗೆ ಸಿಂಗಾರ ಮಾಡಿಸಿ ಬಳಿಕ ಮನೆಯ ಸ್ತ್ರೀಯರು ಸೇರಿ ಹಟ್ಟಿಯಲ್ಲಿನ ದನಗಳಿಗೆ ಆರತಿ ಬೆಳಗಿ ಶೋಬಾನೆ ಹಾಡುತ್ತಿದ್ದರು.

🔸ವಿಶೇಷ ತಿನಿಸುಗಳನ್ನು ನೀಡುತ್ತಿದ್ದರು. ಹಟ್ಟಿ ತುಂಬಾ ದನಗಳಿದ್ದು, ಅವುಗಳ ಪೂಜೆಗೆ ತುಂಬಾ ಸಮಯ ಹಿಡಿಯುತ್ತಿತ್ತು. ಆದರೂ ಸಂಭ್ರಮಕ್ಕೆ ಕೊರತೆ ಎನ್ನುವುದು ಇರಲಿಲ್ಲ. ಆದರೆ ಇಂದು ದನ, ಕರುಗಳು ಮನೆಗಳಲ್ಲಿ ಕ್ಷೀಣಿಸುತ್ತಾ ಹೋಗುತ್ತಿದೆ. ಹಾಗಾಗಿ ಗೋಪೂಜೆ ಅಪರೂಪವಾಗಿ ಕಾಣಿಸುತ್ತಿರುವುದು ಬೇಸರದ ಸಂಗತಿ. (ಮಾಹಿತಿ ಕೃಪೆ: ಸಂಗ್ರಹ)

🌹🙏🌹ವಂದೇ ಗೋ ಮಾತರಂ🌹🙏🌹

💐🌾🌱ಶುಭವಂದನೆಗಳು, ಶುಭದಿನ, ಶುಭಮಸ್ತು, ಸರ್ವೇ ಜನಾ ಸುಖೀನೋ ಭವಂತು🌱🌾💐

ಮತ್ಸ್ಯಾವತಾರ

ಶ್ರೀಮನ್ನಾರಾಯಣ ರಾಕ್ಷಸ ಸಂಹಾರಕ್ಕಾಗಿ ಈ ಭೂಲೋಕದಲ್ಲಿ ಹಲವಾರು ಅವತಾರಗಳನ್ನು ಎತ್ತಿದ್ದಾನೆ. ಭಗವಂತನ ಲೀಲೆಗೆ ಪಾತ್ರ ರಾಗದಿ ರುವವರು ಯಾರು. ಅಂತಹ ಭಗವಂತನ ಹತ್ತು ಅವತಾರಗಳಲ್ಲಿ ಮೊದಲನೆಯ ಅವತಾರವೇ ಮತ್ಸ್ಯಾವತಾರ. 

 ಸೋಮಕ ಎಂಬ ರಾಕ್ಷಸ ವೇದ ಗಳನ್ನೆಲ್ಲ ಅಪಹರಿಸಿ ಕೊಂಡೊಯ್ದಾಗ ಶ್ರೀಮನ್ನಾರಾಯಣ ಮತ್ಸ್ಯಾವತಾರವನ್ನು ತಳೆದು ವೇದಗಳನ್ನೆಲ್ಲಾ  ತಿರುಗಿಸಿ ತಂದುಕೊಡುತ್ತಾನೆ.
 
ಬಹಳ ಹಿಂದೆ ಸೂರ್ಯಪುತ್ರ   ವೈವಸ್ವತಮನು ವಿಷ್ಣುವನ್ನು ಕುರಿತು ತಪಸ್ಸು ಮಾಡುತ್ತಿರುತ್ತಾನೆ. ಪ್ರಳಯಕಾಲದಲ್ಲಿ ಚರಾಚರರೂಪವಾದ ಜಗತ್ತನ್ನು ಒಬ್ಬನೇ ಸ್ವತಂತ್ರವಾಗಿ ಅನಾಯಾಸದಿಂದ ಕಾಪಾಡುವ ಸಾಮರ್ಥ್ಯವನ್ನು ಅನು ಗ್ರಹಿಸುವಂತೆ ವರವನ್ನು ಪಡೆಯುತ್ತಾನೆ. 
 ಒಮ್ಮೆ ಮನು ತರ್ಪಣ ಮಾಡುತ್ತಿದ್ದಾಗ ಆತನ ಮೇಲೆ ಒಂದು ಮೀನು ಬಿದ್ದು ಬಿಡುತ್ತದೆ. ಕರುಣಾ ಶಾಲಿ ಯಾದ ಮನು ಅದನ್ನು ಕಾಪಾಡಲು ತನ್ನ ಅರ್ಗ್ಯ ಪಾತ್ರೆಯೊಳಗೆ ಹಾಕುತ್ತಾನೆ. ಒಂದೇ ರಾತ್ರಿಯಲ್ಲಿ ಆ ಮೀನು 16 ಅಂಗುಲ ಬೆಳೆಯುತ್ತದೆ. ಅದನ್ನು ನೋಡಿ ಆ ಮೀನನ್ನು ಜಲಾಶಯಕ್ಕೆ ಬಿಡಲಾಗುತ್ತದೆ. ಆ ಮೀನು ಒಂದೇ ರಾತ್ರಿಯಲ್ಲಿ ಆರು ಮೊಳದುದ್ದ ದೊಡ್ಡ ಮೀನಾಗಿ ಬೆಳೆದು ಅಯ್ಯೋ ನನ್ನನ್ನು ಕಾಪಾಡು ಕಾಪಾಡು ಎಂದು ಜೋರಾಗಿ ಮೊರೆ ಇಡುತ್ತದೆ. 
 ಕ್ರಮವಾಗಿ ಮಡುವಿನಿಂದ, ನದಿಯಿಂದ, ಕೊನೆಗೆ ಸಮುದ್ರಕ್ಕೆ ಸೇರುತ್ತದೆ. 
 ಸಮುದ್ರದ ನೀರನ್ನೆಲ್ಲ ಆವರಿಸಿಕೊಂಡಅದರ  ಸಾಮರ್ಥ್ಯವನ್ನು ನೋಡಿ ಭಯಬೀತ ನಾಗುತ್ತಾನೆ. 
 ನಂತರ ಅವನು ಭಯದಲ್ಲಿ ನೀನ್ಯಾರು ರಾಕ್ಷಸನೋ  ಅಥವಾ ಈ ವಿಶ್ವವನ್ನು ವ್ಯಾಪಿಸಿರುವ ವಿಷ್ಣುವೋ ಎಂದು ಕೇಳುತ್ತಾನೆ. 
 ಆಗ ಮತ್ಸ್ಯ ರೂಪಿಯಾದ ಶ್ರೀಮನ್ನಾರಾಯಣನು ಅರಸನೇ !ಇನ್ನು ಕೆಲಕಾಲದಲ್ಲಿ ಈ ಭೂಮಿಯಲ್ಲ ಮುಳುಗಿ ಹೋಗುತ್ತದೆ. ಇಲ್ಲಿರುವ ದೇವ ನಿರ್ಮಿತವಾದ ಹಡಗಿನಲ್ಲಿ ಸಕಲ ವಿಧವಾದ ಸ್ವೇದಜ,  ಅಂಡಜ, ಉದ್ಬೀಜ ಜರಾಯುಜ ಗಳೆಂಬ ಪ್ರಾಣಿ ವರ್ಗಗಳನ್ನು ಇದರಲ್ಲಿ ಇಟ್ಟು ಕಾಪಾಡು 

 ಪ್ರಳಯ ಮಾರುತದಿಂದ ತಲೆಕೆಳಗಾಗುವ ಸಂದರ್ಭದಲ್ಲಿ ನೀನು ಈ ಹಡಗನ್ನು ನನ್ನ ಕೊಂಬಿನ ಮೇಲೆ ಇಟ್ಟು ಜೋಪಾನ ಮಾಡು. ಪ್ರಳಯ ಮುಗಿದ ಬಳಿಕ ಕೃತಯುಗ ಪ್ರಾರಂಭವಾದಾಗ ನೀನು ಜಗತ್ತಿಗೆ ದೈವತ್ವ ಪರಾಕ್ರಮಗಳು ನಿನಗೆ ಲಭಿಸುತ್ತದೆ. ಆಗ ನೀನು ಮನ್ವಂತರಾಧಿಪತ್ಯ  ಪಡೆದು ದೇವತೆಗಳಿಗೂ ಪೂಜಾನೀಯಾನಾಗುವೆ ಎಂದು ಹೇಳುತ್ತಿದ್ದಂತೆ ಪೂರ್ವ ಕಲ್ಪದ ಅವಸಾನದಲ್ಲಿ ಪ್ರಳಯ ಉಂಟಾಗುತ್ತದೆ. ಪ್ರಪಂಚವೇ ಸಮುದ್ರದಲ್ಲಿ ಮುಳುಗಿ ಹೋಗಿತ್ತು. ಚತುರ್ಮುಖಬ್ರಹ್ಮ ನಿದ್ದೆಯಲ್ಲಿದ್ದಾಗ ಆತನ ನಾಲ್ಕು ಬಾಯಿಗಳಿಂದ ಹೊರಬರುತ್ತಿದ್ದ ವೇದ ರಾಶಿಯನ್ನು ಹಯಗ್ರೀವಎಂಬ ಅಸುರ ಅಪಹರಿಸುತ್ತಾನೆ. ಆ ಕಾಲದಲ್ಲಿ ಭಗವದ್ಭಕ್ತಾಗ್ರೆಸನಾ  ಗಿದ್ದ ಸತ್ಯವ್ರತನೆಂಬ ರಾಜರ್ಷಿ  ಕೃತಮಾಲಾ ಎಂಬ ನದಿ ಮಧ್ಯದಲ್ಲಿ ನಿಂತು ತಪಸ್ಸು ಮಾಡುತ್ತಿದ್ದಾಗ ಒಂದು ಚಿಕ್ಕ ಮೀನು ನೀರಿನಲ್ಲಿ ಬಂದು ಅವನ ಕೈಯ್ಯಲ್ಲಿ ಸೇರುತ್ತದೆ. ಸತ್ಯವ್ರತ ಅದನ್ನು ನದಿಯೊಳಗೆ ಬಿಟ್ಟ. ಆಗ ಆ ಮೀನು ಸತ್ಯವ್ರತ ನನ್ನು ಕುರಿತು ನನ್ನನ್ನು ಈ ಜಲಚರಗಳು  ತಿಂದು ಹಾಕಿಬಿಡುತ್ತವೆ ನನ್ನನ್ನು ಕಾಪಾಡು ಎಂದು ಬೇಡುತ್ತದೆ.    ಅದನ್ನು ಕಾಪಾಡಲು ತಯಾರಾದ ಸತ್ಯವ್ರತ ಅದನ್ನು ಎತ್ತಿಕೊಂಡು ತನ್ನ ಆಶ್ರಮಕ್ಕೆ ತಂದು ಕಾಪಾಡು ತೊಡಗಿದ. ಕ್ರಮವಾಗಿ ಅದು ಮಡಕೆ ಕುಡಿಕೆ ಗುಡಾಣ ಸರೋವರ ನದಿ ಎಂದು ಸರೋವರಗಳ ಮೂಲಕ ಸಮುದ್ರವನ್ನು ಸೇರುತ್ತದೆ. ಸತ್ಯವ್ರತ ಮತ್ಸ್ಯ ರೂಪಿಯಾದ ಪರಮಾತ್ಮನ ಅನುಗ್ರಹದಿಂದ ಅಂದಿಗೆ ಏಳನೆಯ ದಿನದಲ್ಲಿ ನಡೆದ ಪ್ರಳಯದಲ್ಲಿ ದಿವ್ಯ ಹಡಗಿನ ಮೂಲಕ ಜಗತ್ತನ್ನು ಕಾಪಾಡಿ ವೈವಸ್ವತ ಮನು ವಾದ.

"ಷೋಡಷೋಪಚಾರ ಪೂಜಾ ವಿಧಾನ

ತುಳಸಿ ಪೂಜೆ ಮಂತ್ರ

"ಷೋಡಷೋಪಚಾರ ಪೂಜಾ ವಿಧಾನ.....

ದೇವತಾರ್ಚನೆಯಿಂದ ಮಾನವನು ಸಂಸಾರ ಪಾಶಗಳಿಂದ ಮುಕ್ತಿ ಹೊಂದಿ, ದೇವರಸಾನಿಧ್ಯವನ್ನು ಸೇರುತ್ತಾರೆ.

ದೇವರ ಆರಾಧನೆಯಲ್ಲಿ ಅನೇಕ ಪದ್ಧತಿಗಳಿವೆ, ಅವುಗಳಲ್ಲಿ ಮುಖ್ಯವಾದ 16 ರೀತಿಯಲ್ಲಿನ ಉಪಚಾರಗಳ ಪೂಜೆ "ಷೋಡಶೋಪಚಾರ" ಪೂಜೆ ಬಹಳ ಮುಖ್ಯವಾಗಿದೆ..

ಷೋಡಶೋಪಚಾರ ಮತ್ತು ವಿಶೇಷತೆಗಳು..!

೧. ಆಸನ
೨. ಪಾದ್ಯ
೩. ಅರ್ಘ್ಯ
೪. ಆಚಮನ
೫. ಸ್ನಾನ
೬. ವಸ್ತ್ರ
೭. ಯಜ್ಞೋಪವೀತ
೮. ಗಂಧ
೯. ಅಕ್ಷತೆ
೧೦. ಆಭರಣ
೧೧. ಪುಷ್ಪಮಾಲಿಕೆ
೧೨. ಧೂಪ
೧೩. ದೀಪ
೧೪. ಮಧುಪರ್ಕ
೧೫. ನೈವೇದ್ಯ
೧೬. ವಿಸರ್ಜನೆ ಅಥವಾ ಪುಷ್ಪಾಂಜಲಿ

ಷೋಡಶೋಪಚಾರ ಎಂದರೆ ಹದಿನಾರು ಉಪಚಾರಗಳು..
"ಉಪ" ಎಂದರೆ ಹತ್ತಿರ ಎಂದು ಚಾರ ಎಂದರೆ ಸಂಚರಿಸು ಎಂದರ್ಥ..
"ದೇವರಿಗೆ ಹತ್ತಿರವಾಗುವುದು ಎಂದರ್ಥ..!

೧. ಆಸನ : ದೇವರೆಂಬ ಅತಿಥಿಯನ್ನು ಮನೆಗೆ ಆಮಂತ್ರಿಸಿ ಕುಳಿತುಕೊಳ್ಳಲು ಆಸನಗಳನ್ನು ಏರ್ಪಡಿಸುವುದು..

೨. ಪಾದ್ಯ : ಕಾಲುಗಳನ್ನು ತೊಳೆಯಲು ನೀರು ಕೊಡುವುದು..

೩. ಅರ್ಘ್ಯ : ಕೈಗಳನ್ನು ಶುಧ್ದಿಪಡಿಸಿಕೊಳ್ಳಲು ನೀರನ್ನು ಕೊಡುವುದು..

೪. ಆಚಮನ : ಬಾಯಾರಿಕೆ ತೀರಲು ನೀರನ್ನು ಕೊಡುವುದು..

೫. ಸ್ನಾನ : ಪ್ರಯಾಣದ ಆಯಾಸ ಪರಿಹರಿಸಲು ಸ್ನಾನಕ್ಕೆ ನೀರನ್ನು ಕೊಡುವುದು..! ದೇವರ ತಲೆಮೇಲೆ ಅಭಿಷೇಕ ವನ್ನು ಹಾಕುವದು ಅದಕ್ಕೆ ಮಲಾಪಕರ್ಷ ‍ಸ್ನಾನ ಅಂತೇವೆ  ನಂತರ   ವಿಶೇಷ ಪೂಜೆ ಇದ್ದರೆ ಪಂಚಾಮೃತ ಅಭಿಷೇಕ ಮಾಡಿ  ನಂತರ   ರುದ್ರಾಭಿಷೇಕ  , ಶ್ರೀಸೂಕ್ತ , ಪುರುಷ ಸೂಕ್ತ  , ನಾರಾಯಣ ಸೂಕ್ತ , ದುರ್ಗಾ ಸೂಕ್ತ  ಅದು ನಿಮ್ಮ ಕುಲಧರ್ಮ ಅನುಗುಣವಾಗಿ ಅಭಿಷೇಕ  ಮಾಡಿ 

೬. ವಸ್ತ್ರ : ಸ್ನಾನಾನಂತರ ಧರಿಸಲು ಮಡಿಬಟ್ಟೆಗಳನ್ನು ಕೊಡುವುದು.. ಇಲ್ಲಿ ಗೆಜ್ಜೆವಸ್ತ್ರ ವನ್ನು ಏರಿಸುವದು...

೭. ಯಜ್ಞೋಪವೀತ : ಮಾರ್ಗಮಧ್ಯದಲ್ಲಿ ಮೈಲಿಗೆಯಾದ ಯಜ್ಞೋಪವೀತ ಬದಲಾವಣೆ.. ಅಕ್ಷತೆ ಹಾಕಿದರೂ ನಡೆಯುತ್ತೆ...
(ಪ್ರತಿದಿನ ಷೋಡಶೋಪಚಾರ ಮಾಡುವವರಿಗೆ ಬದಲಾಯಿಸೋ ಅವಶ್ಯಕತೆ ಇರುವುದಿಲ್ಲ)

೮. ಗಂಧ : ಶರೀರವು ಸುವಾಸನೆಯಿಂದ ಕೂಡಿರಲು ಶ್ರೀ ಗಂಧವನ್ನು ತೇಯ್ದು ಕೊಡಯವುದು..

೯. ಅಕ್ಷತೆ : ಶುಭವನ್ನುಂಟು ಮಾಡುವುದಕ್ಕೆ ಅಲಂಕಾರಾರ್ಥವಾಗಿ ಧರಿಸುವುದು..

೧೦. ಆಭರಣ : ದೇವರಿಗೆ ಧರಿಸಲಿಕ್ಕೆ ಆಭರಣ ಕೊಡುವುದು..
ಇಲ್ಲಿ ಆಭರಣವೆಂದರೆ ಅರಿಸಿನ, ಕುಂಕುಮ, ಗಂಧ, ಅಕ್ಷತೆ, .. ದೇವರ ಆಭರಣಗಳು ಎಲ್ಲವೂ ಸೇರುತ್ತವೆ..

೧೧. ಪುಷ್ಪಮಾಲಿಕೆ... ದೇವರಿಗೆ ನಾನಾ ಪುಷ್ಪಗಳಿಂದ ಅಲಂಕಾರ  ಜೊತೆಗೆ  ಯಾವ ದೇವರ ಆರಾಧನೆ ಇರುತ್ತೊ ಆ ದೇವರಿಗೆ ಸಹಸ್ರ ನಾಮ ಅಥವಾ ಅಷ್ಟೋತ್ತರ ಹೇಳುತ್ತಾ ಹೂ ತುಳಸಿ ಏರಿಸಬೇಕು

೧೨. ಧೂಪ : ಸುಗಂಧ ಪರಿಮಳಯುಕ್ತ ವಾತಾವರಣ ನಿರ್ಮಾಣ ಮಾಡುವುದು..

೧೩. ದೀಪ : ಪರಸ್ಪರ ವೀಕ್ಷಣೆಗಾಗಿ (ದೇವರು - ಭಕ್ತ) ಅನುಕೂಲ ಮಾಡಿಕೊಡುವುದು..
ಇಲ್ಲಿ ಅಷ್ಟೋತ್ತರ , _ಅರ್ಚನೆ ಅಷ್ಟಾವಧಾನ ಸೇವೆ, ಮಾಡಿ ದೇವರು ಮಾಡಿದ ಸಾಹಸಗಳನ್ನು ಹಾಡಿ ಹೊಗಳುವುದು..

೧೪. ಮಧುಪರ್ಕ : (ಹಾಲು ಮೊಸರು ತುಪ್ಪ ಜೇನುತುಪ್ಪ ಸಕ್ಕರೆ) ಯನ್ನು ಅರ್ಪಿಸುವುದು..

೧೫. ನೈವೇದ್ಯ : ನಿಮ್ಮ ಶಕ್ತಿಗೆ ತಕ್ಕಂತೆ ದೇವರಿಗೆ ಊಟ ಮಾಡಿಸುವುದು ( ನೀವು ಕಷ್ಟಪಟ್ಟು ದುಡಿದ ಹಣದಿಂದ ಮಾಡಿದ ನೈವೇದ್ಯವಾಗಿರಬೇಕು)
ಇಲ್ಲಿ ಆಡಂಬರದ ಅವಶ್ಯಕತೆ ಇರುವುದಿಲ್ಲ, ಭಕ್ತಿಯಿಂದ ಅರ್ಪಿಸಬೇಕಷ್ಟೆ..!

ದೇವರಿಗೆ ತುಪ್ಪದನ್ನ, ಮೊಸರನ್ನ, ಚಿತ್ರಾನ್ನ, ಶಾಲ್ತಾಹ್ನ, ಬೆಲ್ಲದನ್ನ , ಸಿಹಿಪೊಂಗಲ್, ಹುಳಿ ಅವಲಕ್ಕಿ, ಪುಳಿಯೊಗರೆ, ಸಜ್ಜಿಗೆ .. ಇತ್ಯಾದಿ ನೈವೇದ್ಯ ಮಾಡಬಹುದು..
"ಮಡಿಯಿಂದ ಮಾಡಿದರೆ ತುಂಬಾ ಶುಭವಾಗುವುದು..

ಇಲ್ಲಿ ತಾಂಬೂಲ ಇಡುವುದು ಅತ್ಯಂತ ಮುಖ್ಯವಾಗಿರುತ್ತದೆ, ದೇವರ ನೈವೇದ್ಯ ದ ನಂತರ ಫಲ ಪುಷ್ಪ  ತಾಂಬೂಲ ಹಾಕಿಕೊಂಡು, ಅಡಿಗೆಯಲ್ಲಿನ ಗುಣಾವಗುಣಗಳನ್ನು ತೊಲಗಿಸುವರು..!
ನಂತರ
" ನೈವೇದ್ಯ ಮಾಡಿದ ತಕ್ಷಣ ಮಂಗಳಾರತಿ ಮಾಡಬಾರದು..!
(ಊಟ ಹಾಕಿ ತಕ್ಷಣ ಕೈ ತೊಳೆದುಕೊಳ್ಳಲು ನೀರು ಕೊಟ್ಟರೆ ಹೇಗಾಗುತ್ತೆ ಅಲ್ವಾ..? ಯೋಚಿಸಿ )
ನೈವೇದ್ಯ ಮಾಡಿ "ಸಾವಿತ್ರೀ ದೇವಿ ಸ್ತೋತ್ರ, ಅಥವಾ ಅನ್ನಪೂರ್ಣೇಶ್ವರಿ ಸ್ತೋತ್ರ ಅಥವಾ ದೇವರ ಸ್ತೋತ್ರ ಪಠಿಸಿ, ನಂತರ ಮಂಗಳಾರತಿ ಮಾಡಬೇಕು..!
ತುಪ್ಪದ ಬತ್ತಿಗಳಿಂದ ಆರತಿ ಬೆಳಗಬೇಕು..
ನಂತರ ನಮಸ್ಕಾರ ಮಾಡಬೇಕು..

16  ಮಂತ್ರ ಪುಷ್ಪ   ಇಲ್ಲಿ ದೇವರಿಗೆ ಮಂತ್ರ ಪುಷ್ಪ ಹೇಳಿ ಅಕ್ಷತೆಯನ್ನು  ಹಾಕಿ ಪ್ರದಕ್ಷಣೆ ನಮಸ್ಕಾರ ಹಾಕಿ  ಪ್ರಾರ್ಥನೆ ರೂಪವಾಗಿ ದೇವರಿಗೆ ಶ್ಲೋಕ  ,ಹಾಡು   ನಂತರ ಪೂಜಾ ಸಮರ್ಪಣೆ.....  ನಂತರ ಎರಡು ಸಲ ಆಚಮನೆ ಮಾಡಿದರೆ   ಷೋಡಷೋಪಚಾರ ಪೂಜೆ ಮುಗಿತು 

🕉 ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು.

ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

*|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||*

*|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||*

ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.

ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.

*|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ*

  *ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||*

*|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||*

*|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||*

ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.

ಶ್ರೀ ತುಳಸಿ ಪ್ರಾರ್ಥನೆ

*ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |*

*ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||*

ಶ್ರೀ ತುಳಸಿ ಧ್ಯಾನ

*ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |*

*ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||*

ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |

*ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||*

ಶ್ರೀ ತುಳಸಿ ಪ್ರಣಾಮ

*ವೃಂದಾಯೈ ತುಳಸಿ ದೇವ್ಯೈ*

*ಪ್ರಿಯಾಯೈ ಕೇಶವಸ್ಯ ಚ*

*ಕೃಷ್ಣ ಭಕ್ತಿ ಪರದೆ ದೇವಿ*

*ಸತ್ಯವತ್ಯೈ ನಮೋ ನಮಃ*

ಶ್ರೀ ತುಳಸಿ ಪ್ರದಕ್ಷಿಣ ಮಂತ್ರ

*ಯಾನಿ ಕಾನಿ ಚಪಾಪಾನಿ*

*ಬ್ರಹ್ಮ ಹತ್ಯಾದಿಕಾನಿ ಚ*

*ತಾನಿ ತಾನಿ ಪ್ರನಶ್ಯಂತಿ*

*ಪ್ರದಕ್ಷಿಣಃ ಪದೇ ಪದೇ*

ಶ್ರೀ ತುಳಸಿ ನಮಸ್ಕಾರ  

*ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |*
*ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||*

*ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |*
*ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||*

ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)

*|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||*

ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.

ಸಮಯಾವಕಾಶ ಇರುವವರು ಶ್ರೀ ತುಳಸಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿದರೆ ಉತ್ತಮ.

ಸರ್ವಜನ ಸುಖಿನೋಭವಂತು
ಶ್ರೀ ಕೃಷ್ಣಾರ್ಪಣಮಸ್ತು.

ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು

ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ?

ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?

ಶಾಸ್ತ್ರ :

ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.

ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.

ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?

ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

ಕುಂಕುಮಾರ್ಚನೆ

    ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ 'ಕುಂಕುಮಾರ್ಚನೆ' ಎನ್ನುತ್ತಾರೆ.

    ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ.

    ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.

    ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ.
    ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಬಲಿ ಪಾಡ್ಯಮಿ

ಬಲಿ ಪಾಡ್ಯಮಿ:ಚಕ್ರವರ್ತಿ ಬಲೀಂದ್ರ ಭೂಲೋಕಕ್ಕೆ ಬರುವ ದಿನ

ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ. ಕರ್ನಾಟಕದಲ್ಲಿ ದೀಪಾವಳಿಯನ್ನು ಸಾಮಾನ್ಯವಾಗಿ ಮೂರು ದಿನ ಆಚರಿಸುತ್ತಾರೆ, ನರಕಚತುರ್ದಶಿ, ಅಮಾವಾಸ್ಯೆ ಹಾಗೂ ಮೂರನೇ ದಿನವೇ

ಬಲಿಪಾಡ್ಯಮಿ, ಈ ಬಲಿಪಾಡ್ಯಮಿಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವಾಗಿದೆ.
ಈ ದೇವಾಲಯದಲ್ಲಿ ಚಿನ್ನ ಬೆಳ್ಳಿಯೇ ಪ್ರಸಾದ; ದೀಪಾವಳಿಯಂದು ಮಾತ್ರ..!
ಮೂರನೆಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ, ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

ಪುರಾಣ ಕಥೆ

ನರಸಿಂಹನ ಅವತಾರದಲ್ಲಿ ಶ್ರೀವಿಷ್ಣುವಿನಿಂದ ಹತನಾದ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಮಹಾಬಲಿ, ಅಸುರ ಕುಲದಲ್ಲಿ ಹುಟ್ಟಿದ ವಿಷ್ಣುಭಕ್ತ ಪ್ರಹ್ಲಾದನಂತೆಯೇ ಮಹಾಬಲಿಯೂ ಕೂಡಾ ವಿಷ್ಣುಭಕ್ತನೇ. ದೇವಾನುದೇವತೆಗಳನ್ನು ಸೋಲಿಸಿ ಮೂರೂ ಲೋಕಗಳನ್ನು ಆಳತೊಡಗುತ್ತಾನೆ. 

ಆ ಸಂದರ್ಭದಲ್ಲಿ ದೇವತೆಗಳು ಮಹಾವಿಷ್ಣುವಿನ ಮೊರೆಹೋಗುತ್ತಾರೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾಬಲಿ ಚಕ್ರವರ್ತಿಯು ತನ್ನ ಪ್ರಜೆಗಳಿಗೆಲ್ಲರಿಗೂ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾನೆ, ಆತನು ಸುರನಾಗಲು ಎಲ್ಲಾ ಅರ್ಹತೆಗಳನ್ನು ಪಡೆಯುತ್ತಾನೆ ಎಂದು ತಿಳಿಸುತ್ತಾನೆ.

ಮೂರೂ ಲೋಕಗಳನ್ನು ಜಯಿಸಿದ ಮಹಾಬಲಿಯು ಮಹಾಯಾಗವೊಂದನ್ನು ಮಾಡುತ್ತಾನೆ, ಯಾಗದಲ್ಲಿ ಕೇಳಿದ ವಸ್ತುಗಳೆಲ್ಲವನ್ನೂ ಬಂದವರಿಗೆ ದಾನ ಮಾಡುತ್ತಾನೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾಬಲಿಯ ಭಕ್ತಿಯನ್ನು ಪರೀಕ್ಷಿಸಲು ಪುಟ್ಟ ಬಾಲಕ ವಾಮನನ ಅವತಾರದಲ್ಲಿ ಬಲಿ ಚಕ್ರವರ್ತಿಯ ಯಾಗಕ್ಕೆ ಬರುತ್ತಾನೆ. 

ಚಕ್ರವರ್ತಿಯು ಬಾಲಕ ವಾಮನನಿಗೆ ನೀನು ಕೇಳಿದ್ದೆಲ್ಲವನ್ನೂ ಕೊಡುತ್ತೇನೆ, ನಿನಗೇನು ಬೇಕು ಎಂದು ಕೇಳಿದಾಗ, ಬಾಲಕ ವಾಮನನು ನನಗೆ ಮೂರು ಹೆಜ್ಜೆ ಜಾಗವನ್ನು ನೀಡು ಎಂದು ಕೇಳುತ್ತಾನೆ.

ಬಲಿ ಚಕ್ರವರ್ತಿಯು ಬಾಲಕನ ಆಸೆಯಂತೆ ಮೂರು ಹೆಜ್ಜೆಗಳನ್ನಿಡಲು ಒಪ್ಪುತ್ತಾನೆ.ಆಗ ಬಂದಿರುವುದು ಮಹಾವಿಷ್ಣುವೆಂದು ತಿಳಿದ ಶುಕ್ರಾಚಾರ್ಯರು ದಾನವನ್ನು ಜಲಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ, ನೀರು ಹೊರಬರದಂತೆ ಅಡ್ಡವಾದರು. ಆಗ ಬಾಲಕ ವಾಮನನು ದರ್ಭೆಯಿಂದ ಕಮಂಡಲದಿಂದ ನೀರು ಬರುವ ಕಡೆ ತಿವಿದಾಗ, ಶುಕ್ರಾಚಾರ್ಯರ ಕಣ್ಣಿಗೆ ಚುಚ್ಚಿ, ಅವರು ಒಂದು ಕಣ್ಣನ್ನು ಕಳೆದುಕೊಂಡರು.

ವಾಮನನ ರೂಪದಲ್ಲಿರುವ ಮಹಾವಿಷ್ಣುವು ಸ್ವರ್ಗಲೋಕಗಳನ್ನು ಮೀರಿ ಎತ್ತರಕ್ಕೆ ಬೆಳೆಯುತ್ತಾನೆ. ಮೊದಲ ಹೆಜ್ಜೆಯಿಂದ ಭೂಮಿಯನ್ನು ಅಳೆದು ತೆಗೆದುಕೊಳ್ಳುತ್ತಾನೆ. ಎರಡನೇ ಹೆಜ್ಜೆಯಿಂದ ಸ್ವರ್ಗವನ್ನು ಅಳೆದು ಪಡೆಯುತ್ತಾನೆ, ಮೂರನೇ ಹೆಜ್ಜೆ ಇಡಲು ಮಹಾಬಲಿಯು ಜಾಗವನ್ನು ಕೊಡಬೇಕಾದಾಗ ಚಕ್ರವರ್ತಿಯು, ಉಳಿದೊಂದು ಹೆಜ್ಜೆಯನ್ನು ತನ್ನ ಶಿರದ ಮೇಲಿಡುವಂತೆ ವಾಮನನನ್ನು ಬೇಡಿಕೊಳ್ಳುತ್ತಾನೆ. 

ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿಡುತ್ತಿದ್ದಂತೆ, ಬಲಿ ಚಕ್ರವರ್ತಿಯು ಪಾತಾಳಕ್ಕೆ ತಳ್ಳಲ್ಪಡುತ್ತಾನೆ. ಬಲಿಚಕ್ರವರ್ತಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ ಮಹಾವಿಷ್ಣುವು ಪಾತಾಳವನ್ನು ಆಳುವಂತೆ ಆಶೀರ್ವದಿಸುತ್ತಾನೆ. 

ವಿಷ್ಣುಭಕ್ತನಾದ ಬಲೀಂದ್ರನಿಗೆ ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಿದ. ಹಾಗಾಗಿ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೇ ದಿನ ಬಲೀಂದ್ರನಿಗೆ ಪೂಜೆಯನ್ನು ನಡೆಸಲಾಗುತ್ತದೆ.

ಬಲೀಂದ್ರ ಪೂಜಾ ವಿಧಾನ

ದೀಪಾವಳಿಯ ಮೂರನೇ ದಿನ ಪಾಡ್ಯದಂದು ಗೋಮಯದಿಂದ ಬಲಿಚಕ್ರವರ್ತಿಯ ಬಲಿಯಕೋಟೆಯನ್ನು ಕಟ್ಟಲಾಗುತ್ತದೆ. ತುಳಸಿಕಟ್ಟೆಯ ಸಮೀಪ ಗೋಮಯದಿಂದ ಏಳುಸುತ್ತಿನ ಕೋಟೆಯನ್ನು ಕಟ್ಟಿ , ಈ ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. 

ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ. 

ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡುತ್ತಾರೆ.

ತುಳುನಾಡಿನ ವಿಶಿಷ್ಟ ಆಚರಣೆ 'ಬಲೀಂದ್ರ ಲೆಪ್ಪು'

ಬಲಿಚಕ್ರವರ್ತಿಯು ತುಳುನಾಡನ್ನು ಆಳಿದ್ದ ಚಕ್ರವರ್ತಿ, ವರ್ಷಕ್ಕೊಮ್ಮೆ ಬರುವ ಬಲಿಯನ್ನು ಕರೆಯುವ ಆಚರಣೆಯೇ 'ಬಲೀಂದ್ರ ಲೆಪ್ಪು'. ಕತ್ತಲಾಗುತ್ತಿದ್ದಂತೆ ಅಂಗಳದ ಸುತ್ತಲೂ ತೆಂಗಿನ ಗರಟೆಗೆ ಎಣ್ಣೆ ಹಾಕಿ ದೀಪವನ್ನು ಬೆಳಗಲಾಗುತ್ತದೆ. 

ಮನೆಯ ಗಂಡಸರು ಗದ್ದೆಯ ಬದಿ ಬಿದಿರಿನ ಕೋಲಿಗೆ ಬಟ್ಟೆಯನ್ನು ಸುತ್ತಿ, ಎಣ್ಣೆಯನ್ನು ಹಚ್ಚಿದ ದೊಂದಿಯನ್ನು ಉರಿಸುತ್ತಾರೆ. ನಂತರ ಬಲೆಕಿ ಮರದ ಅಡಿಯಲ್ಲಿ ಗೆರಸೆಯಲ್ಲಿ ತೆಂಗಿನಕಾಯಿ, ಅವಲಕ್ಕಿ, ಗಟ್ಟಿ ಹಾಕಿ ಬಲೀಂದ್ರ ಕೂ.. ಕೂ..ಕೂ ಎಂದು ಮೂರು ಬಾರಿ ಬಲೀಂದ್ರನನ್ನು ಕರೆಯುತ್ತಾರೆ. ನಂತರ ಗೋವಿನ ಹಟ್ಟಿಗೆ ತೆರಳಿ ಗೋವಿಗೆ, ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡುತ್ತಾರೆ. ಗೋವಿಗೆ ಅಕ್ಕಿಯಲ್ಲಿ ತಯಾರಿಸಿದ ದೋಸೆ ಅಥವಾ ಗಟ್ಟಿಯನ್ನು ನೀಡಲಾಗುತ್ತದೆ.

ಮಲೆನಾಡಿನ ಹಟ್ಟಿಹಬ್ಬ

ಮಲೆನಾಡಿನ ಭಾಗದಲ್ಲಿ ದೀಪಾವಳಿಯನ್ನು ನಾಲ್ಕು ದಿನ ಆಚರಿಸಲಾಗುತ್ತದೆ. ಮೊದಲನೆಯ ದಿನ ನೀರು ತುಂಬುವ ಹಬ್ಬ, ಎರಡನೆ ದಿನ ನರಕ ಚತುರ್ದಶಿ, ಮೂರನೇ ದಿನ ಲಕ್ಷ್ಮೀ ಪೂಜೆ, ನಾಲ್ಕನೇ ದಿನ ಬಲಿಪಾಡ್ಯಮಿ. ಬಲಿಪಾಡ್ಯಮಿಯಂದು ಬೆಳಗ್ಗೆಯೇ ಹಟ್ಟಿಯನ್ನು ತೊಳೆದು, ಸೆಗಣಿಯಿಂದ ಗಣಪತಿಯನ್ನು ಮಾಡಿ, ಹೂವಿನಿಂದ ಸಿಂಗರಿಸುತ್ತಾರೆ. 

ಕಂಚಿಕಡ್ಡಿ, ಬ್ರಹ್ಮದಂಡೆ ಗಿಡಗಳನ್ನು ತಂದು ಜಡೆಯಂತೆ ಹಣೆದು ಕೊಟ್ಟಿಗೆಯಲ್ಲಿ ಸೆಗಣಿ ಬೆನಕನ ಪಕ್ಕದಲ್ಲಿ ಇಡುತ್ತಾರೆ. ಎಲ್ಲಾ ರಾಸುಗಳ ಮೈತೊಳೆದು ಹೂಹಾರ ಹಾಕಿ ಪೂಜಿಸುತ್ತಾರೆ. ಹಣ್ಣು ತುಂಬಿದ ಎಡೆಯನ್ನು ನೈವೇದ್ಯ ಮಾಡುತ್ತಾರೆ. ಬಳಿಕ ಹೋರಿಗಳನ್ನು ಮೆರವಣಿಗೆಯ ರೀತಿ ಊರ ಅಗಸಿಬಾಗಿಲವರೆಗೆ ಕೊಂಡೊಯ್ದು, ಬೆದರಿಸಿ ಓಡಿಸುವ ಆಚರಣೆ ನಡೆಯುತ್ತದೆ.

ಹೀಗೆ ಪ್ರಾದೇಶಿಕತೆಗೆ ತಕ್ಕಂತೆ ದೀಪಾವಳಿಯ ಆಚರಣೆಗಳು ವಿಭಿನ್ನವಾಗಿ ನಡೆದರೂ, ದೀಪವಾಳಿಯ ಉದ್ದೇಶ ಮಾತ್ರ ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವ ತತ್ವ ಮಾತ್ರ. ಮನಸ್ಸಿನಲ್ಲಿರುವ ಅಜ್ಞಾನವೆಂಬ ಕತ್ತಲನ್ನು ದೂರ ಸರಿಸಿ ಜ್ಞಾನವೆಂಬ ಬೆಳಕನ್ನು ಎಲ್ಲೆಡೆ ಚೆಲ್ಲುವ ಹಬ್ಬ, ಮನದ ಅಂಧಕಾರವನ್ನು ಕಳೆಯುವ ಹಬ್ಬವಾಗಿ ದೀಪಾವಳಿಯು ಎಲ್ಲರಿಗೂ ಸುಖ, ಶಾಂತಿ ಸಮೃದ್ಧಿಯನ್ನು ತರಲಿ

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಶಿವ ಪೂಜೆ ಮಾಡಿ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಿ

ಶುಭ ಬುಧವಾರ ತ್ರಿಲೋಚನಗೌರಿ ಗಣೇಶ್ ನ ಅನುಗ್ರಹ ಜ್ಞಾನ ದೀವಿಗೆಯ ಸದಸ್ಯರಿಗೆ ಅನುಗ್ರಹ ಸಿದ್ದಿಸಲಿ ಶುಭೋದಯ ಸುದಿನಮಸ್ತು.

🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼
ಕಾರ್ತೀಕ ಮಾಸದ ಶುಕ್ಲ ತೃತೀಯ ತಿಥಿಯು ಈ ಬಾರಿ ಸಂಭವಿಸುತ್ತಿದೆ. ತ್ರಿಲೋಚನನೆಂದರೆ, ಮೂರು ಕಣ್ಣುಗಳುಳ್ಳ ಮಹಾಶಿವ. ಗೌರಿಯು ಪರಶಿವನ ಪ್ರಿಯಪತ್ನಿ ಪಾರ್ವತೀ ದೇವಿಯ ಸೌಮ್ಯ ರೂಪಗಳಲ್ಲೊಂದಾಗಿದೆ. ಇಂದು ಕೆಲವರು ವಿಷ್ಣು ತೃತೀಯವೆಂಬುದಾಗಿ ವ್ರತವನ್ನಾಚರಿಸಿದರೆ, ಮತ್ತೆ ಕೆಲವರು ತ್ರಿಲೋಚನ ಗೌರಿ ವ್ರತವನ್ನು ಆಚರಿಸುತ್ತಾರೆ. ಇಂದು, ವಿವಾಹಿತ ಮಹಿಳೆಯರು ಉಪವಾಸವನ್ನು ಕೈಗೊಂಡು, ಗೌರಿಯನ್ನು ಶ್ರದ್ಢಾಭಕ್ತಿಗಳಿಂದ ಪೂಜಿಸುತ್ತಾರೆ. ಈ ವ್ರತಾಚರಣೆಯಿಂದ ದೀರ್ಘಸೌಮಾಂಗಲ್ಯ, ಸಂಪದಭಿವೃದ್ಢಿ, ಆಯುರಾರೋಗ್ಯಾದಿ ಅನೇಕ ಶುಭಕಾಮನೆಗಳು ಈಡೇರುತ್ತವೆ. 

*ಶಿವ ಪೂಜೆ ಮಾಡಿ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಿ* 

*ಸೂರ್ಯನಿಗೆ ಸಂಬಂಧಿಸಿದ ದೋಷ* 
ಸೂರ್ಯನಿಗೆ ಸಂಬಂಧಿಸಿದ ದೋಷ ಇದ್ದಲ್ಲಿ ಶಿವನಿಗೆ ಕೆಂಪು ಹೂವು ಮತ್ತು ಅದರ ಎಲೆಯನ್ನು ಅರ್ಪಿಸಬೇಕು. ಪಂಚಪೊಹಾರ್ ಪೂಜೆಯನ್ನು ಮಾಡಬೇಕು. ಕೆಂಪು ಹೂವು ಸೂರ್ಯನಿಗೆ ಅತಿ ಪ್ರಿಯವಾದುದು

*ಚಂದ್ರನಿಗೆ ಸಂಬಂಧಿಸಿದ ದೋಷ* 
ಚಂದ್ರನಿಗೆ ಸಂಬಂಧಿಸಿದ ದೋಷವಿದ್ದರೆ ಶಿವನಿಗೆ ಹಸುವಿನ ಹಾಲನ್ನು ನೀಡಬೇಕು. ಚಂದ್ರ ದೇವರು ಇದರಿಂದ ಪ್ರಸನ್ನಗೊಳ್ಳುತ್ತಾರೆ ಎಂದು ಹೇಳಲಾಗಿದೆ. ಅಂತೆಯೇ ಸೋಮವಾರ ಉಪವಾಸವಿರುವುದು ಕೂಡ ಶಿವನ ಅನುಗ್ರಹ ಪಡೆಯಲು ಒಳ್ಳೆಯದು.

*ಮಂಗಳನಿಗೆ ಸಂಬಂಧಿಸಿದ ದೋಷ* 
ಮಂಗಳನಿಂದ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಶಿವನಿಗೆ ಅಮೃತ ಬಳ್ಳಿಯ ರಸವನ್ನು ನೀಡಬೇಕು. ಲಿಂಗಕ್ಕೆ ಇದನ್ನು ಅಭಿಷೇಕ ರೂಪದಲ್ಲಿ ಅರ್ಪಿಸಬೇಕು.

*ಬುಧಕ್ಕೆ ಸಂಬಂಧಿಸಿದ ದೋಷ* 
ವಿದರ್ಭ ಸಸ್ಯದ ರಸವನ್ನು ದೇವರಿಗೆ ನೀಡಿ ಈ ದೋಷದಿಂದ ಪರಿಹಾರ ಕಂಡುಕೊಳ್ಳಬಹುದು

*ಗುರುವಿಗೆ ಸಂಬಂಧಿಸಿದ ದೋಷ*
 ಗುರುಗ್ರಹಕ್ಕೆ ಸಂಬಂಧಿಸಿದ ದೋಷ ನಿವಾರಣೆಗಾಗಿ ಶಿವ ಅಭಿಷೇಕದ ಸಮಯದಲ್ಲಿ ಹಾಲಿಗೆ ಅರಶಿನ ಸೇರಿಸಿ ಕೊಡಬೇಕು. ಗುರುಗ್ರಹವನ್ನು ಬೃಹಸ್ಪತಿ ದೇವ ಮತ್ತು ಹಳದಿ ಬಣ್ಣ ಆಳುತ್ತದೆ, ಆದ್ದರಿಂದ ಹಾಲಿಗೆ ಅರಶಿನ ಮಿಶ್ರ ಮಾಡಿ ನೀಡುವುದರಿಂದ ಗುರು ಗ್ರಹ ದೋಷ ನಿವಾರಣೆಯಾಗುತ್ತದೆ.

*ಶುಕ್ರ ಗ್ರಹಕ್ಕೆ ಸಂಬಂಧಿಸಿದ ದೋಷ* 
ಶುಕ್ರ ಗ್ರಹದ ದೋಷ ಪರಿಹಾರಕ್ಕಾಗಿ ನೀವು ಪಂಚಾಮೃತ ಮತ್ತು ತುಪ್ಪವನ್ನು ದೇವರಿಗೆ ನೀಡಬೇಕು. ತುಪ್ಪ, ಮೊಸರು, ಜೇನು, ಹಾಲು, ಸಕ್ಕರೆಯಿಂದ ಮಾಡಿರುವುದೇ ಪಂಚಾಮೃತವಾಗಿದೆ. ಐದು ಭಕ್ಷ್ಯಗಳನ್ನು ಪಂಚಾಮೃತ ವಿವರಿಸುತ್ತದೆ.

*ಶನಿಗೆ ಸಂಬಂಧಿಸಿದ ದೋಷ* 
ಜನ್ಮಕುಂಡಲಿಯಲ್ಲಿ ಶನಿಯ ಕಾರಣದಿಂದ ದೋಷಗಳು ಉದ್ಭವಿಸಿದ್ದರೆ, ಕಬ್ಬಿನ ಹಾಲಿನ ಅಭಿಷೇಕವನ್ನು ಶಿವನಿಗೆ ಮಾಡಬೇಕು.

*ರಾಹು ಕೇತುವಿನಿಂದ ದೋಷ* 
ನೀರಿನಲ್ಲಿ ಕುಶ್ ಸಸ್ಯವನ್ನು ಮಿಶ್ರ ಮಾಡಿ ರಾಹು ಕೇತುವಿಗೆ ದೋಷ ಪರಿಹಾರಕ್ಕಾಗಿ ಶಿವನಿಗೆ ಅರ್ಪಿಸಬೇಕು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ರುದ್ರಾಕ್ಷಿ ಧಾರಣೆ

🍑      ರುದ್ರಾಕ್ಷಿ ಧಾರಣೆ  🍑
          🌰🌰🌰🌰🌰🌰🌰

ಶಿವಪುರಾಣದಲ್ಲಿ ತಿಳಿಸಿರುವಂತೆ ಶಿವನು ತನ್ನ ಮನಸ್ಸನ್ನು ನಿಯಮಿಸಿಕೊಂಡು ದೇವಮಾನ ರೀತಿಯಿಂದ ಸಾವಿರ ವರ್ಷ ತಪಸ್ಸು ಮಾಡಿ, ಲೋಕೋಪಕಾರಕ್ಕಾಗಿ, ಲೀಲಾರ್ಥವಾಗಿ ಕಣ್ಣು ತೆರೆದನು. ಆಗ ಕಣ್ಣೀರ ಹನಿಗಳು ಕೆಳಗೆ ಬಿದ್ದು ಅಲ್ಲಿ ರುದ್ರಾಕ್ಷವೆಂಬ ಮರಗಳು ಜನಿಸಿದವು.
- ಡಾ.ಅನಸೂಯಾ ಎಸ್.ರಾಜೀವ್ 

ಶಿವಪುರಾಣದಲ್ಲಿ ತಿಳಿಸಿರುವಂತೆ ಶಿವನು ತನ್ನ ಮನಸ್ಸನ್ನು ನಿಯಮಿಸಿಕೊಂಡು ದೇವಮಾನ ರೀತಿಯಿಂದ ಸಾವಿರ ವರ್ಷ ತಪಸ್ಸು ಮಾಡಿ, ಲೋಕೋಪಕಾರಕ್ಕಾಗಿ, ಲೀಲಾರ್ಥವಾಗಿ ಕಣ್ಣು ತೆರೆದನು. ಆಗ ಕಣ್ಣೀರ ಹನಿಗಳು ಕೆಳಗೆ ಬಿದ್ದು ಅಲ್ಲಿ ರುದ್ರಾಕ್ಷವೆಂಬ ಮರಗಳು ಜನಿಸಿದವು. ಆ ಮರಗಳ ಕಾಯಿಗಳೇ ರುದ್ರಾಕ್ಷಿಗಳು. ಭಕ್ತರ ಅನುಗ್ರಹಕ್ಕಾಗಿ ಅವುಗಳನ್ನು ಶಿವನು ನಾಲ್ಕೂವರ್ಣದ ಭಕ್ತರಿಗೆ ಕೊಟ್ಟನು. ಗೌಡದೇಶ, ಮಥುರ, ಅಯೋಧ್ಯ, ಲಂಕೆ, ಮಲಯದ್ವೀಪ, ಸಹ್ಯಾದ್ರಿ, ಕಾಶಿ ಮುಂತಾದ ಸ್ಥಳಗಳಲ್ಲಿ ರುದ್ರಾಕ್ಷ ಮರಗಳನ್ನು ಬೆಳೆಯುವಂತೆ ಮಾಡಿದನು. ಅವನ ಆಜ್ಞೆಯಿಂದ ರುದ್ರಾಕ್ಷಿಗಳು ಬಿಳಿ, ಕೆಂಪು, ಹಳದಿ, ಹಾಗೂ ಕಪ್ಪು ಬಣ್ಣಗಳಲ್ಲಿ  ಬೆಳೆಯುತ್ತದೆ. ಇವುಗಳ ಧಾರಣೆಯಿಂದ ಭಕ್ತಿ ಮುಕ್ತಿಗಳೆರಡೂ ದೊರಕುವುವು ಎಂಬ ನಂಬಿಕೆ ಇದೆ. 

ವೈಜ್ಞಾನಿಕವಾಗಿ ರುದ್ರಾಕ್ಷಿಗಳ ಬಗ್ಗೆ ಸಂಶೋಧನೆ ಮಾಡಿದ ವಿಜ್ಞಾನಿಗಳ ಪ್ರಕಾರ ರುದ್ರಾಕ್ಷಿಯಲ್ಲಿನ ಗುಣಗಳ ಪ್ರಕಾರ ಅದನ್ನು ಕತ್ತಲ್ಲಿ ಧರಿಸುವುದರಿಂದ ಹೃದಯದಲ್ಲಿ ರಕ್ತ ಸಂಚಾರ, ಹೃದಯದ ಬಡಿತ, ಎಲ್ಲವೂ ಸಮತೋಲನದಲ್ಲಿರುತ್ತವೆ. ನರಮಂಡಲದ ಸುವ್ಯವಸ್ಥಿತ ಕಾರ್ಯ ನಿರ್ವಹಣೆಗೂ ರುದ್ರಾಕ್ಷಿ ಧಾರಣೆ ಸಹಾಯ ಮಾಡುತ್ತದೆಂದು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. 
ಏಕಮುಖದಿಂದ ಚತುರ್ದಶ ಮುಖದ ರುದ್ರಾಕ್ಷಿಗಳು ಕಂಡುಬರುತ್ತವೆ. ಈ ರುದ್ರಾಕ್ಷಿಗಳಿಗೂ ನವಗ್ರಹಗಳಿಗೂ ಇರುವ ಸಂಬಂಧವನ್ನು ತಿಳಿಯೋಣ: 

ಏಕಮುಖಿ ರುದ್ರಾಕ್ಷಿ: 

ಇದರ ಅಧಿಪತಿ ರವಿ. ಇದರ ಧಾರಣೆಯಿಂದ ಎಲ್ಲ ರೀತಿಯ ಮನೋಭಿಲಾಷೆ ಈಡೇರುವುದು. ಸಕಲ ಕಾರ್ಯಗಳು ಸಿದ್ಧಿಯಾಗುವುವು. ಇದರ ಧಾರಣೆಯಿಂದ ಅಸ್ತಮಾ, ಕ್ಷಯ, ಪಾರ್ಶ್ವವಾಯು, ಹೃದಯದ ತೊಂದರೆ, ಮಾನಸಿಕ ಒತ್ತಡ, ದೃಷ್ಟಿದೋಷ, ಮೂಳೆ ನೋವು, ತಲೆನೋವು ವಾಸಿಯಾಗುತ್ತದೆ. ಉನ್ನತ ಅಧಿಕಾರಿಗಳು ಇದನ್ನು ಧರಿಸಿದಲ್ಲಿ ಮತ್ತೂ ಅನುಕೂಲಗಳಾಗುವುವು. 

ದ್ವಿಮುಖಿ ರುದ್ರಾಕ್ಷಿ: 

ಇದರ ಅಧಿಪತಿ ಶುಕ್ರ. ಇದರ ಧಾರಣೆಯಿಂದ ಸಂತಾನಫಲ, ಸ್ತ್ರೀ ಹಾಗೂ ಗೋಹತ್ಯೆ ಪಾಪ, ಪರಿಹಾರವಾಗುವುದು. ಜ್ಞಾಪಕ ಶಕ್ತಿ ವರ್ಧಿಸುವುದು. ಕಣ್ಣಿನ ತೊಂದರೆ, ಕರುಳಿನ ತೊಂದರೆ ಕಡಿಮೆಯಾಗುವುವು. ಪತಿ ಪತ್ನಿಗಳ ಅನ್ಯೋನ್ಯತೆಗೆ ಈ ರುದ್ರಾಕ್ಷಿ ಧರಿಸುವುದು ಉತ್ತಮ. 

ತ್ರಿಮುಖಿ ರುದ್ರಾಕ್ಷಿ: 

ಇದರ ಅಧಿಪತಿ ಕುಜ. ಇದರಿಂದ ವ್ಯಾಪಾರದಲ್ಲಿ ಲಾಭ, ಮಾಟಮಂತ್ರದಿಂದ ಮುಕ್ತಿ, ಋತುಚಕ್ರ ಸರಿಯಾಗಿ ಆಗುವುದು. 

ಚತುರ್ಮುಖಿ ರುದ್ರಾಕ್ಷಿ: ಇದರ ಅಧಿಪತಿ ಬುಧ. ಇದರಿಂದ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುತ್ತಾರೆ. ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ. ವಿದ್ಯಾಭ್ಯಾಸದಲ್ಲಿ ತೊಂದರೆಗಳು ನಿವಾರಣೆಯಾಗುತ್ತದೆ. 

ಪಂಚಮುಖಿ ರುದ್ರಾಕ್ಷಿ: 

ಇದರ ಅಧಿಪತಿ ಗುರು. ಇದನ್ನು ಜಪಮಾಲೆಯಾಗಿ ಉಪಯೋಗಿಸಬಹುದು. ಇದರಿಂದ ರಕ್ತದೊತ್ತಡ, ಬೊಜ್ಜು, ಸಕ್ಕರೆ ಕಾಯಿಲೆ ಮುಂತಾದ ಸಮಸ್ಯೆಗಳು ಪರಿಹಾರವಾಗುವುವು. 

ಷಟ್ಮುಖಿ ರುದ್ರಾಕ್ಷಿ: 

ಇದರ ಅಧಿಪತಿ ಶುಕ್ರ. ಸಂಪತ್ತು ವೃದ್ಧಿಯಾಗುವುದು. ಗರ್ಭಕೋಶದ ತೊಂದರೆ ನಿವಾರಣೆಯಾಗುವುದು. 

ಸಪ್ತಮುಖಿ ರುದ್ರಾಕ್ಷಿ: 

ಇದರ ಅಧಿಪತಿ ಶನಿ. ಆರೋಗ್ಯ ಸುಧಾರಿಸುವುದು. 

ಅಷ್ಟಮುಖಿ ರುದ್ರಾಕ್ಷಿ: 

ರಾಹು ಅಧಿಪತಿ. ಚರ್ಮರೋಗಗಳು, ಹೊಟ್ಟೆನೋವು ನಿವಾರಣೆಯಾಗುತ್ತದೆ. 

ನವಮುಖಿ ರುದ್ರಾಕ್ಷಿ: 

ಕೇತು ಇದರ ಅಧಿಪತಿ. ಇದರ ಧಾರಣೆಯಿಂದ ಗೊತ್ತಿಲ್ಲದ ಕಾಯಿಲೆಗಳು ಆಕಸ್ಮಿಕವೆಂಬಂತೆ ಗುಣವಾಗುತ್ತವೆ. 

ದಶಮುಖಿ ರುದ್ರಾಕ್ಷಿ: 

ವೃತ್ತಿಜೀವನದಲ್ಲಿ ಮುಂದೆ ಬರಲು ಈ ರುದ್ರಾಕ್ಷಿಯನ್ನು ಧರಿಸಬೇಕು. 

ಏಕಾದಶಮುಖಿ ರುದ್ರಾಕ್ಷಿ: 

ಅತಿ ಕುಡಿತದಿಂದ ಆಗುವ ತೊಂದರೆಗಳನ್ನು ನಿವಾರಿಸಬಹುದು. 

ದ್ವಾದಶಮುಖಿ ರುದ್ರಾಕ್ಷಿ: 

ಹೊರ ದೇಶ ಪ್ರಯಾಣ ಮಾಡಲು ಅಡೆತಡೆಯಿದ್ದರೆ ಈ ರುದ್ರಾಕ್ಷಿಯಿಂದ ಅನುಕೂಲವಾಗುವುದು. 

ತ್ರಯೋದಶ ಮುಖಿ ರುದ್ರಾಕ್ಷಿ: 

ಇಚ್ಛಾಪೂರ್ತಿಗಾಗಿ ಈ ರುದ್ರಾಕ್ಷಿಯನ್ನು ಬಳಸುತ್ತಾರೆ. 

ಚತುರ್ದಶಮುಖಿ ರುದ್ರಾಕ್ಷಿ: 

ಇದರ ಅಧಿಪತಿ ಶನಿ. ರಾಜಕೀಯದಲ್ಲಿ ಜಯ ಹೊಂದಲು, ಕ್ಯಾನ್ಸರ್ ವಾಸಿ ಮಾಡಲು ಈ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ. 

ಜನ್ಮ ನಕ್ಷತ್ರಕ್ಕನುಗುಣವಾಗಿ ರುದ್ರಾಕ್ಷ ಧಾರಣೆ: 

*ಕೃತ್ತಿಕಾ, ಉತ್ತರಾ, ಉತ್ತರಾಷಾಢ ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಏಕಮುಖ, ದ್ವಾದಶಮುಖ, ಏಕಾದಶಮುಖ ರುದ್ರಾಕ್ಷಿ ಧಾರಣೆ. 

*ರೋಹಿಣಿ, ಹಸ್ತ, ಶ್ರವಣ ನಕ್ಷತ್ರದವರಿಗೆ ದ್ವಿಮುಖ ರುದ್ರಾಕ್ಷಿ ಧಾರಣೆ. 

*ಮೃಗಶಿರ, ಚಿತ್ತ, ಧನಿಷ್ಟ ನಕ್ಷತ್ರದವರಿಗೆ ತ್ರಿಮುಖಿ ಹಾಗೂ ಷಣ್ಮುಖಿ ರುದ್ರಾಕ್ಷಿ ಧಾರಣೆ. 

*ಆಶ್ಲೇಷ, ಜ್ಯೇಷ್ಟ, ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೆ ಚತುರ್ಮುಖ ರುದ್ರಾಕ್ಷಿ ಧಾರಣೆ. 

*ಪುನರ್ವಸು, ವಿಶಾಖ, ಪೂರ್ವಾಭಾದ್ರಾದವರಿಗೆ ಪಂಚಮುಖಿ ರುದ್ರಾಕ್ಷಿ ಧಾರಣೆ. 

*ಪುಷ್ಯ, ಅನುರಾಧಾ, ಉತ್ತರಾಭಾದ್ರ ನಕ್ಷತ್ರದವರಿಗೆ ಸಪ್ತಮುಖಿ, ಚತುರ್ದಶಮುಖಿ ರುದ್ರಾಕ್ಷಿ ಧಾರಣೆ. 

*ಆರಿದ್ರ, ಸ್ವಾತಿ, ಶತಃಭಿಷ ನಕ್ಷತ್ರದವರಿಗೆ ಅಷ್ಟಮುಖಿ ರುದ್ರಾಕ್ಷಿ ಧಾರಣೆ. 

*ಅಶ್ವಿನಿ, ಮಖ, ಮೂಲಾದವರಿಗೆ ನವಮುಖಿ ರುದ್ರಾಕ್ಷಿ ಧಾರಣೆ, 

*ಭರಣಿ, ಪುಬ್ಬ, ಪೂರ್ವಾಷಾಢದವರಿಗೆ ದ್ವಿಮುಖಿ ಹಾಗೂ ಷಟ್ಮುಖಿ ರುದ್ರಾಕ್ಷಿ ಧಾರಣೆ ಮಾಡಬೇಕು. 

ಜನ್ಮರಾಶಿಗನುಗುಣವಾಗಿ ರುದ್ರಾಕ್ಷಿ ಧಾರಣೆ: 

*ಮೇಷ ರಾಶಿಯವರು 2/4/5 ಮುಖದ ರುದ್ರಾಕ್ಷಿ, 

*ವೃಷಭ ರಾಶಿಯವರು 6/2/13 ಮುಖದ ರುದ್ರಾಕ್ಷಿ, 

*ಮಿಥುನ ರಾಶಿಯವರು 4/8 ಮುಖದ ರುದ್ರಾಕ್ಷಿ,
*ಕಟಕ ರಾಶಿಯವರು 5/1/2/14 ಮುಖದ ರುದ್ರಾಕ್ಷಿ, 

*ಸಿಂಹ ರಾಶಿಯವರು 7/1/9ಮುಖದ ರುದ್ರಾಕ್ಷಿ, 

*ಕನ್ಯಾ ರಾಶಿಯವರು 3/6ಮುಖದ ರುದ್ರಾಕ್ಷಿ, 

*ತುಲಾರಾಶಿಯವರು 9/7 ಮುಖದ ರುದ್ರಾಕ್ಷಿ, 

*ವೃಶ್ಚಿಕ ರಾಶಿಯವರು 10/1/4/14ಮುಖದ ರುದ್ರಾಕ್ಷಿ, 

*ಧನು ರಾಶಿಯವರು 11/15/9/12ಮುಖದ ರುದ್ರಾಕ್ಷಿ, 

*ಮಕರ ರಾಶಿಯವರು 1/10/6ಮುಖದ ರುದ್ರಾಕ್ಷಿ, 

*ಕುಂಭ ರಾಶಿಯವರು 14/7/11ಮುಖದ ರುದ್ರಾಕ್ಷಿ, 

*ಮೀನ ರಾಶಿಯವರು 12 ಮುಖದ ರುದ್ರಾಕ್ಷಿಯನ್ನು ಧರಿಸಬೇಕು. 

ಅಧ್ಯಾತ್ಮಿಕವಾಗಿ ರುದ್ರಾಕ್ಷ ಧಾರಣೆಯಿಂದ ದೇಹದಲ್ಲಿರುವ ಚಕ್ರಗಳು ನಿಯಂತ್ರಣದಲ್ಲಿರುತ್ತವೆ. ಷಟ್ಚಕ್ರವನ್ನು ಎಬ್ಬಿಸಬಹುದು. ಹೀಗೆ ರುದ್ರಾಕ್ಷವು ಪರಿಹಾರ ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.