Saturday, 28 September 2019

ನೀವು ಯಾಕೆ ವಿಷ್ಣು ಸಹಸ್ರನಾಮ ಪಠಿಸಬೇಕು… ಇದನ್ನು ಓದಿ….

ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಮನುಷ್ಯನ ಆಯಸ್ಸು ನೂರು ವರ್ಷ… ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ..

ಪಿತೃ ಪಕ್ಷ ಏಕೆ ಮಾಡುವರು?? ಮಾಡಿದರೆ ನಮ್ಮ ಪೂರ್ವಜರು ಸಂತೃಪ್ತರಾಗುವರೇ??

ಪಿತೃ ಪಕ್ಷ ವೆಂಬುದು ನಮ್ಮ ಹಿರಿಯ ತಲೆಮಾರುಗಳಿಗೆ ಗೌರವ ಪ್ರದಾನ ಮಾಡುವುದಾಗಿದೆ.. ವಿಶೇಷವಾಗಿ ಆಹಾರ ಅರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸುವುದಾಗಿದೆ..

ಇದನ್ನು ಯಾರು ಮಾಡುವರು?? ಎಷ್ಟು ದಿನಗಳವರೆಗೆ ಪಿತೃ ಪಕ್ಷ ಮಾಡುತ್ತಾರೆ??

ಇದನ್ನು ಹಿಂದೂ ಧರ್ಮದವರು ಮಾಡುತ್ತಾರೆ.. ಇದನ್ನು 16 ಚಂದ್ರಮಾನ ದಿನಗಳಲ್ಲಿ ಮಾಡುವರು.. ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಬರುವ ಈ ಆಚರಣೆಯು ಬಾದ್ರಪದ ಹುಣ್ಣಿಮೆಯಲ್ಲಿ ಶುರುವಾದರೆ ಮಹಾಲಯ ಅಮವಾಸೆಯಲ್ಲಿ ಮುಗಿಯುತ್ತದೆ.. ದಕ್ಷಿಣ ಹಾಗು ಪಶ್ಚಿಮ ಭಾರತದಲ್ಲಿ ಇದನ್ನು ಗಣೇಶ ಹಬ್ಬ ಆದ ನಂತರ ಆಚರಣೆ ಮಾಡುವುದು ಪದ್ದತಿ..

ಪುರಾಣದ ಪ್ರಕಾರ ಮರಣ ಹೊಂದಿದ ನಮ್ಮ ಮೂರು ತಲೆಮಾರಿನ ಪೂರ್ವಜರು ಭೂಮಿ ಮತ್ತು ಸ್ವರ್ಗದ ನಡುವಿನ ಕ್ಷೇತ್ರದಲ್ಲಿ ವಾಸ ಮಾಡುತ್ತಿರುತ್ತಾರೆ..ಈ ಕ್ಷೇತ್ರಕ್ಕೆ ಪಿತೃ ಲೋಕ ಎನ್ನುವರು.. ಮುಂದಿನ ಪೀಳಿಗೆ ಸತ್ತ ನಂತರ ಅವರ ಆತ್ಮವನ್ನ ಯಮರಾಜ ತೆಗೆದುಕೊಂಡ ನಂತರ ಮೊದಲ ಪೀಳಿಗೆ ಸ್ವರ್ಗ ಸೇರುತ್ತದೆ..

ಹಿತಿಹಾಸದ ಕತೆಗಳ ಪ್ರಕಾರ ಪಿತೃ ಪಕ್ಷ ಶುರುವಾದಾಗ ಸೂರ್ಯ ತನ್ನ ರಾಶಿ ಬದಲಾವಣೆ ಮಾಡುವನು.. ಅಂದಿನಿಂದ 1 ತಿಂಗಳುಗಳ ಕಾಲ ನಮ್ಮ ಪೂರ್ವಜರ ಆತ್ಮ ಪಿತೃ ಲೋಕ ಬಿಟ್ಟು ತಮ್ಮ ವಂಶಸ್ತರ ಮನೆಯಲ್ಲಿ ನೆಲೆಸುತ್ತವೆ ಎಂಬ ನಂಬಿಕೆ ಇದೆ.. ಈ ಒಂದು ತಿಂಗಳಲ್ಲಿ ಮೊದಲ ಹದಿನೈದು ದಿನ ಪೂರ್ವಜರನ್ನು ಒಲಿಸಿಕೊಳ್ಳಲು ಅನ್ನ ಸೇವೆಯನ್ನು ಮಾಡುತ್ತೇವೆ..

ಈ ಆಚರಣೆಯನ್ನು ಸಾಮನ್ಯವಾಗಿ ಗಂಡು ಮಕ್ಕಳು ನೆರೆವೇರಿಸಿಕೊಂಡು ಬರುತ್ತಾರೆ.. ಪಿತೃ ಪಕ್ಷ ಮಾಡದಿದ್ದರೆ ಆತ್ಮಗಳಿಗೆ ಮೋಕ್ಷ ವಿಲ್ಲವೆಂಬುದು ನಂಬಿಕೆ ಆದಾಗ್ಯೂ ಕೆಲವರ ಮನೆಯಲ್ಲಿ ಈ ಆಚರಣೆಯ ಸಂಪ್ರದಾಯವಿರುವುದಿಲ್ಲ..

ಅಮಾವಾಸ್ಯೆ ಪೂಜೆ ನಿಮ್ಮ ಮನೆಯ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸುತ್ತೆ…!!

ಅಮಾವಾಸ್ಯೆ ದಿನ ಏನೆಲ್ಲಾ ಪೂಜೆ ಮಾಡ್ತೀರಾ ಹಾಗೆಯೇ ಈ ಪೂಜೆ ಮಾಡುವುದರಿಂದ ನಿಮ್ಮ ಅದೃಷ್ಟ ಬದಲಾಗಬಹುದು. ನೀವು ಮಾಡುವ ಒಂದು ಪೂಜೆ ನಿಮ್ಮ ಮನೆಯ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸುತ್ತೆ. ಖಾಲಿ ಬೀರು, ನಗ- ನಾಣ್ಯಗಳಿಂದ ತುಂಬಿ ಹೋಗುತ್ತೆ. ಅದಕ್ಕೆ ನೀವು ಏನು ಮಾಡಬೇಕು ಗೊತ್ತಾ..?

ಅಮಾವಾಸ್ಯೆ ರಾತ್ರಿ ಲಕ್ಷ್ಮಿ ದೇವಿಯ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣಕ್ಕೆ ಕೊರತೆ ಇರುವುದಿಲ್ಲ. ಯಾರ ಮನೆಯಲ್ಲಿ ಅಮಾವಾಸ್ಯೆಯಂದು ಲಕ್ಷ್ಮಿ ದೇವಿಯ ಪೂಜೆ ಮಾಡ್ತಾರೋ ಆ ಮನೆಗೆ ಪ್ರವೇಶಿಸುವ ದೇವಿ ಅಲ್ಲಿ ವಿರಾಜಮಾನಳಾಗ್ತಾಳಂತೆ. ತನ್ನೆರಡು ಕೈಗಳಿಂದ ಮನಃಸ್ಪೂರ್ತಿಯಾಗಿ ಆಶೀರ್ವಾದ ಮಾಡ್ತಾಳಂತೆ.

ಅಮಾವಾಸ್ಯೆಯ ರಾತ್ರಿ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಚಂದನ ಅಥವಾ ಕುಂಕುಮದಿಂದ ಕಮಲ, ಸುದರ್ಶನ ಚಕ್ರ, ಓಂ, ದೇವಿ ಲಕ್ಷ್ಮಿಯ ಪಾದ, ತ್ರಿಶೂಲ, ಧನುಷ್, ಸ್ವಸ್ತಿಕ್ ಇವುಗಳಲ್ಲಿ ಯಾವುದಾದರೊಂದನ್ನು ಬಿಡಿಸಿ ನಂತರ ಮಂತ್ರ ಪಠಿಸಬೇಕು. ಆ ದಿನ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವಿಸಬಾರದು. ಕೋಪ, ದ್ವೇಷ, ಅಸೂಯೆ ಮಾಡಬಾರದು.

ಅಮಾವಾಸ್ಯೆ, ಹುಣ್ಣಿಮೆ ದಿನಗಳು ಏಕೆ ಭಿನ್ನ?

ಅಮಾವಾಸ್ಯೆ ಹಾಗೂ ಹುಣ್ಣಿಮೆಗಳೆಂದು ಬಹು ವಿಚಿತ್ರವಾಗಿ ವರ್ತಿಸುವವರು ಒಂದೆರಡಲ್ಲ. ಲಕ್ಷಗಟ್ಟಲೆ ಜನರಿದ್ದಾರೆ. ಆದರೆ ಗಮನಕ್ಕೆ ಬರುವವರು ಕಡಿಮೆ. ಗಮನಕ್ಕೆ ಬಂದರೂ ಏನೋ ವಿಚಿತ್ರವಾದ ವರ್ತನೆಯಲ್ಲಿ ತೊಡಗಿದ್ದಾನೆ ಎಂಬ ಭಾವನೆಯಿಂದ ಅಷ್ಟಾಗಿ ಗಂಭೀರತೆಯಿಂದ ವೀಕ್ಷಿಸುವುದಿಲ್ಲ. ಇಂಥ ವರ್ತನೆಗಳ ಕಾರಣದಿಂದಾಗಿನ ಅತಿರೇಕತೆಗಳು ಸಾದಾ ಇದ್ದು, ಕೂಗಾಟಗಳಿರದೆ ಶಾಂತವಾಗಿಯೇ ಇದ್ದು ಬೇರೆಯವರಿಗೆ ತೊಂದರೆ ಮಾಡಿಕೊಂಡು ನಗುತ್ತಾರೆ. ಈ ತೊಂದರೆಗಳಿಂದ ಅನ್ಯರನ್ನು ಕಳವಳಕ್ಕೆ ಗುರಿ ಮಾಡುವ ಉದ್ದೇಶ ಹೊಂದಿರುತ್ತಾರೆ. ಹುಚ್ಚಿನ ಅತಿರೇಕತೆ ಹುಣ್ಣಿಮೆಯ ದಿನಗಳಂದು ಇದ್ದರೆ ಕ್ರೂರಿಗಾಗುವ ಸ್ವಹಿಂಸೆ, ಪರಹಿಂಸೆಗೆ ಮುಂದಾಗುವ ಕದಿಯುವ ದೋಚುವ ದಯೆ ಇರದೆ ಕೊಲ್ಲುವ ಅತ್ಯಾಚಾರಕ್ಕೆ ಮುಂದಾಗುವ ಆತ್ಮಹತ್ಯೆಗೆ ಶರಣಾಗುವ ನಾನಾ ರೀತಿಗಳುಂಟು. ಕೆಲವರು ಮಾತನಾಡುತ್ತಾರೆ. ಕೇವಲ ಮಾತು. ಒಂದಕ್ಕೊಂದು ಸಂಬಂಧವಿರದ ಮಾತು. ಇನ್ನು ಕೆಲವರು ತಮ್ಮ ದುಷ್ಟತನಗಳನ್ನು ಪೂರೈಸಲು ಅಮಾವಾಸ್ಯೆಗೆ ಹೆಚ್ಚು ಶಕ್ತಿ ಪಡೆಯುತ್ತಾರೆ.

ಅಮಾವಾಸ್ಯೆ ಹುಣ್ಣಿಮೆಯ ದಿನಗಳು ಏಕೆ ಭಿನ್ನ? ನಮ್ಮ ವಿಶ್ವವು ಬ್ರಹ್ಮಾಂಡವಾದ ಭಾರಿ ಶಕ್ತಿಯನ್ನು ಪಡೆಯುವುದೇ ಗುರುತ್ವಾಕರ್ಷಣ ಶಕ್ತಿಯಿಂದ. ಇಂಥ ಆಕರ್ಷಣೆಯ ಮೂಲವನ್ನು ತಿಳಿಯಲು ನಮ್ಮ ಆಧುನಿಕ ವಿಜ್ಞಾನವು ಇತ್ತೀಚೆಗೆ ಹುಡುಕಲು ಹೊರತಟರೆ ನಮ್ಮ ಮಹರ್ಷಿಗಳು ವೇದಾಂತದ ತತ್ವಶಾಸ್ತ್ರದ ತರ್ಕದ ಮೀಮಾಂಸೆಗಳ ಹಿನ್ನಲೆಯಲ್ಲಿ ಹುಡುಕಹೊರಟು ಅನೇಕಾನೇಕ ಸಂಶೋಧನೆಗಳನ್ನು ನಡೆಸಿದ್ದಾರೆ, ನಮ್ಮ ಅಷ್ಟಾದಶ ಪುರಾಣಗಳಲ್ಲಿ ವೇದ ಉಪನಿಷತ್ತು. ಅರಣ್ಯಕ ಆಗಮ, ಬ್ರಹ್ಮ ಮೀಮಾಂಸೆ, ಬ್ರಹ್ಮ ಸೂತ್ರಗಳಲ್ಲಿ ಇವು ಲಭ್ಯ. ಈ ಎಲ್ಲವುಗಳ ಮೂಲಕವೇ ಲೌಕಿಕಕ್ಕೆ ಸದಾ ಯಾವಾಗಲೂ ಅಲೌಕಿಕದ ಜತೆ ಒಂದು ನಂಟು ಇದ್ದೇ ಇದೆ ಎಂಬುದನ್ನು ನಮ್ಮವರು ಹಿಂದಿನವರು ಮುನಿಗಳು ಪ್ರತಿಪಾದಿಸಿದರು. ಸೂರ್ಯ ಚಂದ್ರರ ಗುರುತ್ವಾಕರ್ಷಣ ಹಾಗೂ ಇತರ ಕಾವಿನ ಶಕ್ತಿಮೂಲಗಳು  ಲೋಕದ ಜೀವ ಜಂತುಗಳ ಮೇಲೆ ತಮ್ಮದೇ ಆದ ಪ್ರಭಾವ ಬೀರುತ್ತದೆ. ಚಲನಶೀಲವಾಗಿರುವ ವಿಷಯಗಳ ಮೇಲೆ ಒಂದು ರೀತಿಯ ಪ್ರಭಾವ ಬೀರುತ್ತದೆ. ಭೂಮಿಯನ್ನು ಒಡೆದು ಖಂಡಗಳನ್ನಾಗಿಸುತ್ತದೆ. ಒಡೆದು ಹೋದವುಗಳನ್ನು ಮತ್ತೆ ಕೂಡಿಸುತ್ತದೆ.

ಅಮಾವಸ್ಯೆಯಂದು ಸೂರ್ಯನ ಆಕರ್ಷಣೆ ದೈತ್ಯಗಾತ್ರದ್ದಾಗಿದ್ದರೆ ಹುಣ್ಣಿಮೆಗಳಂದು ಚಂದ್ರನೇ ದೈತ್ಯಬಲದಿಂದ ಭೂಮಿಯನ್ನು ತನ್ನತ್ತ ಬಾಚುವ ಕೆಲಸ ನಡೆಸುತ್ತಾನೆ. ಪ್ರತಿ ಜೀವವೂ ಭೂಮಿಯ ಪಂಚಭೂತ ತತ್ವಗಳ ಪುಟ್ಟ ಕೋಷ್ಟಕವೊಂದನ್ನು ತನ್ನ ಕೋಶಗಳಲ್ಲಿ ಸಂಯೋಜಿಸಿಕೊಂಡಿದೆ. ಜೀವದೊಳಗೆ ಪ್ರತಿ ಕೋಶಗಳನ್ನು ಪೃಥ್ವೀಕ್ಕರಿಸಿದರೆ ಸಾಕ್ಷಾತ್ ಅದೇ ಸ್ವರೂಪದಿಂದ ಎಂದಲ್ಲವಾದರೂ ಬಹುತೇಕವಾಗಿ ಹಳ್ಳ, ಕೊಳ್ಳ, ಇವೆ ಗುಡ್ಡ ಕಡಲು ನಿಕ್ಷೇಪ ಜೀವ ಕೋಶಗಳ ಸ್ಪಂದನ ಇದ್ದೇ ಇರುತ್ತದೆ. ಸಾಮಾನ್ಯ ಮನುಷ್ಯನ ಜೀವ ರಸಾಯನ ಪ್ರಕ್ರಿಯೆರಗಳು ಬಹುತೇಕವಾಗಿ ಸೂರ್ಯಚಂದ್ರರು ನಿರ್ಮಿಸುವ ಕ್ರಮವಾಗಿ ಅಮಾವಾಸ್ಯೆ, ಹುಣ್ಣಿಮೆಗಳ ಸ್ಪಂದನ ಗುತ್ವಾಕರ್ಷಣ ಅಲೆಯ ಭರ್ಜರಿ ತರಂಗಗಳನ್ನುತಡೆದುಕೊಳ್ಳುತ್ತದೆ. ಕೆಲವರ ಪಾಲಿಗೆ ಒದಗುವ ಪ್ರಕೃತಿ ದತ್ತವಾದ ಜೀವ ಕೋಶಗಳ ಏರುಪೇರುಗಳು ಸೂರ್ಯಚಂದ್ರರ ಪ್ರಭಾವ ತಡೆಯಲಾರದೆ ಉನ್ಮಾದಕ್ಕೊಳಗಾಗುತ್ತಾರೆ. ಜಾತಕದಲ್ಲಿ ಲಗ್ನಾಧಿಪತಿಗೆ ಅಶುಭತನ ಜಡತ್ವ ಕ್ಷೀಣಚಂದ್ರ ಘಾತ, ಬಲಯತವಾದ ಚಂದ್ರನ ಶಕ್ತಿ ದೊರಕಿದರೂ ಕ್ರೂರ ಗ್ರಹಗಳಾದ ಸೂರ್ಯ, ಶನಿ, ಮಂಗಳ, ರಾಹು ಮತ್ತು ಕೇತುಗಳ ಉಪದ್ಯಾಪದ ಸೇರಿಕೊಂಡರೆ ಮಾನಸಿಕ ಸ್ಥಂತ್ಯಂತರಗಳು ನಕಾರಾತ್ಮಕವಾಗಿ ವರ್ತಿಸಲು ಪ್ರಾರಂಭಿಸುತ್ತಾವೆ. ದಡ್ಡರಿಂದ ಹಿಡಿದು ವೀರಪ್ಪನ್, ಚಾರ್ಲ್ಸ್ ಶೋಭರಾಜ್ ರಂಥ ವಿಧ್ವಂಸಕ ಕೃತ್ಯ ಭಂಡಾರಗಳಿಗೆ ತಳಹದಿ ಸಿಗುವುದಕ್ಕೆ ಅವಕಾಶ ಒದಗುತ್ತದೆ. ವರನಟ ರಾಜ್’ಕುಮಾರ ನನ್ನು ಅಪಹರಿಸಿದ್ದರಿಂದ ಹಿಡಿದು ಎಷ್ಟೆಲ್ಲ ಘಾತಕ ವಿಚಾರಗಳನ್ನು ಪೂರೈಸಿದ್ದು ವೀರಪ್ಪನ್ ಅಮಾವಾಸ್ಯೆಯಂದು.

ಮಹಾಲಯ ಅಮಾವಾಸ್ಯೆಯ ಮಹತ್ವ ಏನೆಂದು ಗೊತ್ತಾ ..??

ಭಾದ್ರಪದ ಕೃಷ್ಣ ಅಮಾವಾಸ್ಯೆ-ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.

ಹಿಂದೂ ಪುರಾಣದ ಪ್ರಕಾರ, ಒಬ್ಬರ ಪೂರ್ವಜ ಮೂರು ಹಿಂದಿನ ಪೀಳಿಗೆಯ ಆತ್ಮಗಳು ಪಿತೃ-ಲೋಕ, ಭೂಮಿ ಮತ್ತು ಸ್ವರ್ಗದ ನಡುವೆ ಕ್ಷೇತ್ರದಲ್ಲಿ ವಾಸಿಸುತ್ತಾರೆ. ಈ ಕ್ಷೇತ್ರದಲ್ಲಿ ಭೂಮಿಯಿಂದ ಪಿತೃ-ಲೋಕ ಒಂದು ಸಾಯುವ ವ್ಯಕ್ತಿಯ ಆತ್ಮ ತೆಗೆದುಕೊಳ್ಳುತ್ತದೆ. ಇದನ್ನು ಯಮ, ಮರಣದ ದೇವರು, ನಿರ್ವಹಿಸುತ್ತದೆ. ಮುಂದಿನ ಪೀಳಿಗೆಯ ವ್ಯಕ್ತಿಯು ಮರಣಿಸಿದಾಗ, ಮೊದಲ ತಲೆಮಾರಿನ ಸ್ವರ್ಗಕ್ಕೆ ಬದಲಿಸುತ್ತದೆ ಮತ್ತು ದೇವರ ಜೊತೆ ಒಂದುಗೂಡಿಸುವ, ಆದ್ದರಿಂದ ಶ್ರದ್ಧಾ ಕಾಣಿಕೆಗಳನ್ನು ನೀಡಲಾಗುತ್ತದೆ ಎಂಬ ನಂಬಿಕೆ ಇದೆ.

ನಮ್ಮನ್ನಗಲಿದ ತಂದೆ-ತಾಯಿಯರನ್ನು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕರಿಸಿ ನಮ್ಮನ್ನಗಲಿದ ಎಲ್ಲ ಆಪ್ತರನ್ನು ನಮ್ಮ ಜೀವನದಜಂಜಾಟದಲ್ಲಿ ನಿತ್ಯವೂ ಸ್ಮರಿಸಲು ಸಾಧ್ಯವಾಗುವುದಿಲ್ಲ. ಕೊನೆಯ ಪಕ್ಷ ವರ್ಷಕ್ಕೊಮ್ಮೆ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಅವರನ್ನು ಸ್ಮರಿಸಿ ತಿಲ ತರ್ಪಣವನ್ನು, ಜಲ ತರ್ಪಣವನ್ನು ಹಾಗೂ ಬಲಿಯನ್ನೋ, ಪಿಂಡದಾನವನ್ನೋ, ನೀಡಿ ಸ್ಮರಿಸಬೇಕು. ಇದು ಈ ಮಹಾಲಯ ಅಮಾವಾಸ್ಯೆಯ ವಿಶೇಷವಾಗಿದೆ.

ಪೌರಾಣಿಕ ಹಿನ್ನೆಲೆ

ಮಹಾಭಾರತದ ಬಹು ದೊಡ್ಡ ನಾಯಕರಲ್ಲಿ ಒಬ್ಬನಾದ ಕರ್ಣನು, ಯುದ್ಧದಲ್ಲಿ ಅರ್ಜುನನಿಂದ ಹತನಾದ ಮೇಲೆ ದೇವದೂತರು ಅವನನ್ನು ಸ್ವರ್ಗಕ್ಕೆ ಕರೆದು ಕೊಂಡು ಹೋಗುತ್ತಾರೆ. ಮಾರ್ಗಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಒಡವೆಗಳು ಕಾಣುತ್ತವೆ. ಇದರಿಂದ ಅವನು ತೀವ್ರವಾಗಿ ಮನನೊಂದು, ಸಾವಿನ ದೇವತೆಯಾದ ಯಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ.

ಯಮನ ಆದೇಶದಂತೆ ಕರ್ಣನು ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ಯಥೇಚ್ಚವಾಗಿ ತನ್ನ ಹಿರಿಯರಿಗೆ, ಹಾಗು ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ.

ಅವರ ಆಶೀರ್ವಾದದಿಂದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ.

ಈ ಪಿತೃಪಕ್ಷದ ದಿನಗಳಂದು ಅಥವಾ ಮಹಾಲಯ ಅಮಾವಾಸ್ಯೆಯಂದು ನಮ್ಮಲ್ಲಿರುವುದರಲ್ಲಿ ಸ್ವಲ್ಪವನ್ನಾದರೂ ದಾನ ಮಾಡಿದರೆ ಪಿತೃಗಳು ಸಂತುಷ್ಟರಾಗಿ ನಮಗೆ ಇನ್ನೂ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ.

ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಧರ್ಮದ್ರೋಹಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮದಿಂದಾಗಿ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ ‘ಅಶಾಸ್ತ್ರೀಯ ಮತ್ತು ಅವಾಸ್ತವದ ಆಡಂಬರ’ ಎಂಬ ತಪ್ಪುಕಲ್ಪನೆಯು ಮೂಡುತ್ತಿದೆ.