Sunday, 20 July 2025

ನಾಗ ಎಂದರೆ ಯಾರು?

***ನಾಗ ಎಂದರೆ ಯಾರು?***              ಕುಟುಂಬದ ಮನೆಗಳಲ್ಲಿ ಪೂಜಿಸುವ ನಾಗ ಯಾರು? ಸರ್ಪ ಮೊಟ್ಟೆ ಕಪ್ಪೆಗಳನ್ನು ತಿನ್ನುವುದಾದರೆ ನಾಗಾರಾಧನೆಯಲ್ಲಿ ಅಷ್ಟೊಂದು ಶುದ್ಧಾಚಾರ ಏಕೆ ಪಾಲಿಸುತ್ತಾರೆ?

ನಾಗ ಎಂದಾಗ ನಮಗೆ ನೆನಪಿಗೆ ಬರುವುದು ನಾಗರಹಾವು..‌ನಾಗರ ಪಂಚಮಿ.. ನಾಗಬನಗಳು..ಕುಟುಂಬದ ನಾಗದೇವರು ಇನ್ನೂ ಮುಂದುವರಿದರೆ ನವನಾಗಗಳಾದ ಆದಿಶೇಷ,ವಾಸುಕಿ, ಕಾರ್ಕೋಟಕ, ತಕ್ಷಕ, ಅನಂತ, ಕಂಬಲ, ಕಾಲೀಯ, ಧಾರ್ತರಾಷ್ಟ್ರ ಇತ್ಯಾದಿ.

ನಾಗರಪಂಚಮಿಯಂದು ನಾವು ಪೂಜಿಸುವುದು ಅಥವಾ ಕುಟುಂಬದಲ್ಲಿ ಪೂಜಿಸಲ್ಪಡಬೇಕಾಗಿರುವುದು ನಾಗವೇ ಹೊರತು ಹಾವಲ್ಲ.
ಸರ್ಪದೋಷ ಹಾಗೂ ನಾಗದೋಷ ಎರಡೂ ಒಂದೇ ಅಲ್ಲ..
ನಮ್ಮ ಕೈಯಿಂದ ಸರ್ಪದ ಸಾವಾದರೆ ಸರ್ಪದೋಷ ತಗಲುತ್ತದೆಯೇ ಹೊರತು ನಾಗದೋಷವಲ್ಲ..ನಾಗಗಳು ಪಾತಾಳದಲ್ಲಿ ವಾಸವಿದ್ದವೇ ಹೊರತು ಸರ್ಪಗಳಲ್ಲ..
ನಾಗ ಮತ್ತು ಸರ್ಪ ಎರಡೂ ಒಂದೇ ಅಲ್ಲ. ಹಾಗಿದ್ದರೆ ಎರಡರ ನಡುವೆ ವ್ಯತ್ಯಾಸ ಏನು?

ಹಾಗಿದ್ದರೆ ಈ ನಾಗ ಎಂದರೆ ಯಾರು? ಕುಟುಂಬದ ಮನೆಗಳಲ್ಲಿ ಪೂಜಿಸುವ ನಾಗ ಯಾರು? ಸರ್ಪ ಮೊಟ್ಟೆ ಕಪ್ಪೆಗಳನ್ನು ತಿನ್ನುವುದಾದರೆ ನಾಗಾರಾಧನೆಯಲ್ಲಿ ಅಷ್ಟೊಂದು ಶುದ್ಧಾಚಾರ ಏಕೆ ಪಾಲಿಸುತ್ತಾರೆ?

ನಾವೆಲ್ಲರೂ ನಾಗವಂಶಿಗಳೇ? ಮನುಷ್ಯ ನಾಗ ಯೋನಿಯಲ್ಲಿ ಜನಿಸುತ್ತಾನೆಯೇ? ಈ ಎಲ್ಲಾ ಗೊಂದಲ, ಪ್ರಶ್ನೆಗಳು ನಮ್ಮಲ್ಲಿ ಬಂದಿರಬಹುದಲ್ಲವೇ?

ಸ್ಪಷ್ಟವಾದ ವಿವರಣೆ ನಿಮಗಾಗಿ ಇಲ್ಲಿದೆ.

ನಾಗ ಎಂದರೆ ಅರ್ಧ ಮನುಷ್ಯ ಹಾಗೂ ಅರ್ಧ ಹಾವಿನ ರೂಪವಿರುವ ಪ್ರಜಾತಿ ಮತ್ಸ್ಯ ಪ್ರಜಾತಿಯಂತೆ.

ನಮ್ಮ ಹಿಂದಿನ ತಲೆಮಾರುಗಳಲ್ಲಿ ಯಾವುದೋ ಒಬ್ಬ ತುಂಬಾ ಸಾತ್ವಿಕವಾದ ವ್ಯಕ್ತಿ ತನ್ನ ಮರಣಾನಂತರ ಮತ್ತೆ ಯಾವುದೇ ಯೋನಿಯಲ್ಲಿ ಮರುಜನ್ಮ ತಾಳದೆ ಇದ್ದು ಒಂದು ವೇಳೆ 16 ವರ್ಷಗಳವರೆಗೆ ಆತನಿಗೆ
ಆತನ ವಂಶಸ್ಥರು ಅಥವಾ ಮುಂದಿನ ತಲೆಮಾರಿನವರಿಂದ ಪಿತೃಕಾರ್ಯಗಳು ಸರಿಯಾಗಿ ನಡೆಯದೇ ಇದ್ದು ಅಥವಾ ಸರಿಯಾಗಿ ನಡೆದ ನಂತರವೂ ಆತನ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗದೇ ಉಳಿದರೆ ಹಾಗೂ ಅವರ ಆತ್ಮ ತನ್ನ ಪರಿವಾರದ ಅಥವಾ ಪರಿಸರಕ್ಕೆ ಒಳ್ಳೆಯದು ಮಾಡಬೇಕೆಂದು ಬಯಸಿದ್ದಲ್ಲಿ ಅಂಥವ ಸಂದರ್ಭದಲ್ಲಿ ನಾಗಯೋನಿಯಲ್ಲಿ 
ಜನ್ಮತಾಳುತ್ತದೆ..

ಇಂತಹ ದಿವ್ಯ ಆತ್ಮಗಳು ಅವರ ಪರಿವಾರದವರಿಗೆ ಕನಸಲ್ಲಿ ಕಾಣಿಸಿಕೊಂಡು ತನ್ನನ್ನು ನಂಬಿ ಪೂಜಿಸುವಂತೆ ಸೂಚಿಸುವುದು ನಡೆಯುತ್ತದೆ. 

ಈ ಆಯಾಮಗಳು ನಾವೀಗ ಕಾಣುವಂತಹ ಸಹಜ ಸರ್ಪವಲ್ಲದೆ ನಾಗವಾಗಿರುತ್ತದೆ.  

ನಂತರ ಆ ಪರಿವಾರದವರು ಆ ಗತಿಸಿಹೋದ ಪೂರ್ವಜರ ಹೆಸರು ತಿಳಿದಿದ್ದರೆ ಅವರ ಹೆಸರಿನ‌ ನಾಗನನ್ನು ನಂಬುತ್ತಾ ಬರುತ್ತಾರೆ.

ದಕ್ಷಿಣಭಾರತದಲ್ಲಿ ಇದು ಹೆಚ್ಚಾಗಿ ಪ್ರಚಲಿತದಲ್ಲಿದೆ. 

ಗುಜಾರಾತಿನಲ್ಲಿ ಈ ರೀತಿ ಮನುಷ್ಯರ ಹೆಸರಿನೊಂದಿಗೆ ಪೂಜಿಸುವ ಪದ್ಧತಿ ಇದೆ.. ಇವರನ್ನು ನಾಗ ಗಳನ್ನು 'ಮಹಾರಾಜ್' ಎಂದು ಕರೆಯುತ್ತಾರೆ.‌ ಪ್ರತ್ಯೇಕವಾದ ನಿಜ ಹೆಸರಿನೊಂದಿಗೆ ಕೊನೆಯಲ್ಲಿ 'ಮಹಾರಾಜ್' ಎಂದು ಸೇರಿಸಿ ಪೂಜಿಸುತ್ತಾರೆ.

ಇನ್ನು ನಮ್ಮಲ್ಲಿ ಅದನ್ನು ನಾಗಬ್ರಹ್ಮ (ನಾಗಬೆಮ್ಮೆರ್) ವೆಂದು ಸಾಮಾನ್ಯವಾಗಿ ಒಂದೇ ವರ್ಗಕ್ಕೆ ಸೇರಿಸಲಾಗಿದೆ ಅನಿಸುವುದು ಸಹಜ. ನಾಗರಾಜ ಎಂದು ಕರೆಯುವುದೂ ರೂಢಿಯಲ್ಲಿದೆ.

ಸೂರ್ಯನನ್ನು ಪೂಜಿಸುವವರು ಸೂರ್ಯವಂಶಿ, ಚಂದ್ರನ ಆರಾಧಕರು ಚಂದ್ರವಂಶಿಯಂತೆ ನಾಗನ ಆರಾಧಕರು ನಾಗವಂಶಿ ಎಂದು‌ ಕರೆಯಲ್ಪಡುತ್ತಾರೆ.

ಪ್ರತಿ ಕುಟುಂಬದವರಿಗೂ ಬೇರೆ ಬೇರೆ ಕಡೆ ನಾಗಬನಗಳಿರುವುದರ ಹಿಂದಿನ ರಹಸ್ಯವೂ ಆ ಪರಿವಾರದಲ್ಲಿ ಈ ಹಿಂದೇ ಎಷ್ಟೋ ತಲೆಮಾರುಗಳ ಹಿಂದೆ ಈ ರೀತಿ ಗತಿಸಿ ಮೋಕ್ಷದೊರೆಯದೆ ನಾಗ ಯೋನಿಯಲ್ಲಿ ಇನ್ನೊಂದು (ಜನ ಸಾಮಾನ್ಯರಿಗೆ ತಲುಪಲು ಅಸಾಧ್ಯವಾದ) ಆಯಾಮದಲ್ಲಿ ಜನಿಸಿರುವ ಪೂರ್ವಜರೇ ಆಗಿರುತ್ತಾರೇ ಹೊರತು ಸಾಮಾನ್ಯ ಸರ್ಪಗಳಲ್ಲ..

'ಪತಂಜಲಿ ಸೂತ್ರ' ಬರೆದ ಪತಂಜಲಿ ಇದೇ ನಾಗ ಪ್ರಜಾತಿಗೆ ಸೇರಿದವರು. 

ನಮಗೆಲ್ಲ ಗೊತ್ತಿರುವ ಹಾಗೆ ನಾಗನಿಗೆ ಯಾವತ್ತಿಗೂ ಸಾತ್ವಿಕವಾದ ಆಹಾರವನ್ನು ನೀಡಲಾಗುತ್ತದೆ. ಅದೇ ಸರ್ಪ ಮೊಟ್ಟೆ, ಕಪ್ಪೆ ತಿನ್ನುವುದನ್ನೂ ನೋಡಿರುತ್ತೇವೆ.
ಸರ್ಪಗಳಿಗೆ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ.. ಆದರೆ ಅದೇ ನಾಗ ಪ್ರಜಾತಿಗೆ ಇದೆ.
ಹಾಗಾಗಿ ಸರ್ಪಗಳಿಗೆ ಕೆಲವು ಕಡೆ ನೋಡಿರುವಂತೆ ಯಾವುದೇ ಕಾರಣಕ್ಕೆ ನೇರವಾಗಿ ಹಾಲು ಹಾಕುವುದು ತುಂಬಾ ದೊಡ್ಡ ತಪ್ಪು. ಇದರಿಂದ ಸರ್ಪಗಳಿಗೆ ತೊಂದರೆಯಾಗುತ್ತದೆ.

ಇವೆರಡೂ ಸರಿಯಾದ ಜ್ಞಾನವಿಲ್ಲದೆ ಭಕ್ರಿಮಾರ್ಗದಲ್ಲಿ ಕಲಬೆರಕೆಯಾಗಿರುವ ಕಾರಣ ನಮ್ಮ ಧರ್ಮವನ್ನು ಕೀಳಾಗಿ‌ ಕಾಣುವವರಿಗೂ  ನಾವು ಕಲ್ಲಿಗೆ ಹಾಲೆರೆಯುತ್ತೇವೆ ಆದರೆ ಅದೇ ನಿಜವಾದ ಹಾವು ಬಂದರೆ ಹಾಲು ನೀಡುವುದಿಲ್ಲ ಎಂದೆಲ್ಲ ಹೇಳುತ್ತಾರೆ. ಅವರಿಗೂ ಸರಿಯಾಗಿ ತಿಳಿದಿಲ್ಲ..‌ನಮ್ಮವರಿಗೂ ಸರಿಯಾಗಿ ತಿಳಿದಿರುವುದಿಲ್ಲ. 

ಈಗ ನಾಗ ಮತ್ತು ಸರ್ಪಗಳ ನಡುವಿನ ಅಂತರ ತಿಳಿಯದೇ ಭಕ್ತಿಯ ಹೆಸರಲ್ಲಿ, ಭಕ್ತಿಮಾರ್ಗದಲ್ಲಿ ಎಲ್ಲವೂ ಕಲಬೆರಕೆಯಾಗಿದೆ‌‌‌‌.

ಇದೇ ರೀತಿ ಆ ಪೂರ್ವಜರೇನಾದರೂ ತಾಮಸಿಕ (ಮಾಂಸಾಹಾರ ಭಕ್ಷಣೆ ಇತ್ಯಾದಿ) ರೀತಿಯಲ್ಲಿ ಬದುಕು ಸಾಗಿಸಿ ಮೋಕ್ಷ ಸಿಗದೇ ಇದ್ದಾಗ ಆ ಆತ್ಮಗಳು ತಮ್ಮ ಪರಿವಾರಕ್ಕೆ ಸಹಾಯ ಮಾಡಬೇಕು ಎಂಬ ಆಸೆಯಿಂದ ಇದ್ದರೆ ಅವರು ವೀರ ಯೋನಿಯಲ್ಲಿ ಜನಿಸುತ್ತಾರೆ..

ಈ ವೀರ ಯೋನಿ‌ ಹಾಗೂ ಅದರ ಪರಂಪರೆಯ ಹಾಗೂ ವೀರರು ಬಗ್ಗೆ ಹೆಚ್ಚಾಗಿ ಜನಸಾಮಾನ್ಯರಿಗೆ ಹೊರಗಡೆ ಯಾರಿಗೂ ತಿಳಿದಿರುವುದಿಲ್ಲ. ಸ್ವಲ್ಪ ಗೂಢವಾಗಿಯೇ ಇದನ್ನು ಇಟ್ಟಿರುತ್ತಾರೆ.

ನಾಗ ಎನ್ನುವುದು ದೈವಗಳಂತೆ ಆದರೆ ಸಾತ್ವಿಕ ಶಕ್ತಿ. ಹಾಗಿದ್ದರೂ ನಾಗ ಪ್ರಸಾದವನ್ನು ಯಾವುದೇ ಕಾರಣಕ್ಕೂ ನಮ್ಮ ಹುಬ್ಬಿನ ನಡುವೆ ಧರಿಸಬಾರದು. ದೈವದ ಪ್ರಸಾದಕ್ಕೂ ಇದು ಅನ್ವಯವಾಗುತ್ತದೆ.

ಈ ಹಿಂದೆ ತಿಳಿಸಿದಂತೆ ಕೇವಲ ದೇವಿ,ಶಿವ, ವಿಷ್ಣು,ಗಣಪತಿ, ಸುಬ್ರಹ್ಮಣ್ಯ ಈ ಮೂಲ ಪರಬ್ರಹ್ಮ ತತ್ವಗಳ‌ ಪ್ರಸಾದವನ್ನು ಮಾತ್ರ ಹುಬ್ಬುಗಳ ನಡುವೆ ಧರಿಸಬಹುದು.

ಮತ್ತೆ ಉಳಿದ ಯಾವುದೇದೇವರ, ದೈವದ ಪ್ರಸಾದ ನಮ್ಮ ಕಂಠಕ್ಕೆ ಹಾಕಿಕೊಳ್ಳಬೇಕು. ಇಲ್ಲವಾದರೆ ನಾವೇ ನಮ್ಮ ಆತ್ಮಶಕ್ತಿಯನ್ನು ನಮ್ಮ ಮರಣಾನಂತರ ಪರಮಾತ್ಮನಲ್ಲಿ ಒಂದಾಗಿಸುವುದಕ್ಕೆ ನಾವೇ ಅಡ್ಡಗಾಲು ಹಾಕಿದಂತೆ. ಅಷ್ಟೊಂದು ಮಹತ್ತರವಾದ ಗೂಢ ವಿಷಯವಿದು. 
ಈ ಮೊದಲು ತಿಳಿಯದೇ ಹಾಕಿದ್ದರೆ ಪರವಾಗಿಲ್ಲ.. 

ನಂಬಿಕೊಂಡು ಬಂದಿರುವ ಎಲ್ಲ ದೇವರ, ದೈವದ ಆರಾಧನೆ, ಅವರ ಮೇಲಿನ ಗೌರವ ಎಲ್ಲವೂ ಹಾಗೇ ಇರಲಿ. ಆದರೆ ಈ ಒಂದು ವಿಷಯ ನೆನಪಿನಲ್ಲಿಟ್ಟರೆ ಸಾಕು.

ದೈವಗಳನ್ನೂ ಇತ್ತೀಚೆಗೆ ಸಾತ್ವಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆ ಆರಂಭವಾಗಿದೆ. ಮಾಂಸಾಹಾರ ಅಥವಾ ಬಲಿ ಪದ್ಧತಿ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ. 

ನಮ್ಮಲ್ಲಿನ ಅನೇಕ ಮಾರಿಯಮ್ಮ ಹಾಗೂ ಉಗ್ರ ಶಕ್ತಿಯರ ದೇವಸ್ಥಾನಗಳನ್ನು ವೈದೀಕರಣ ಮಾಡುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಮಂಗಳಾದೇವಿ,  ಬಪ್ಪನಾಡು, ಸಸಿಹಿತ್ಲು ಭಗವತಿ, ಉರ್ವ, ಬೋಳಾರ ಇತ್ಯಾದಿ ದೇವಸ್ಥಾನಗಳನ್ನು ಕ್ರಮೇಣ ದೇವಿ ಶಕ್ತಿಯ ಸಾತ್ವಿಕ ಅಂಶಗಳೊಂದಿಗೆ ಸೇರಿಸುವ ಕಾರ್ಯ ನಡೆದಿದೆ. ಈ ಹಿಂದೆ ಕಟೀಲನ್ನು ಕೂಡ ವೈದೀಕರಣ ಮಾಡಿರುವುದರ ಬಗ್ಗೆ ಅನೇಕರ ಅಸಮಾಧಾನ ವ್ಯಕ್ತ ಪಡಿಸಿದ್ದರು..
ಮೊದಲಿನಿಂದಲೂ ಉಳ್ಳಾಲ್ತಿ ಎಂದು ಕರೆಯಲ್ಪಡುವ ಶಕ್ತಿಯನ್ನು ವೈದೀಕರಣದ‌ನಂತರ ದುರ್ಗಾಪರಮೇಶ್ವರಿ
ಎಂದು ಕರೆಯುವುದು ವಾಡಿಕೆಗೆ ಬಂತು. ಬಪ್ಪನಾಡಿನ ದುರ್ಗಾಪರಮೇಶ್ವರಿ ಯ ಹೆಸರೂ ವೈದೀಕರಣವಾದ ನಂತರ ಬಂದ ಹೆಸರು ಎನ್ನುತ್ತದೆ ಮೂಲ ಇತಿಹಾಸ.

ಸಾತ್ವಿಕ ಶಕ್ತಿಗಳು ಯಾವುದೇ ರೀತಿಯಲ್ಲಿ ಯಾರಿಗೇ ಆಗಲಿ ತೊಂದರೆ ಉಂಟುಮಾಡುವುದಿಲ್ಲ. ನಂಬಿದವರನ್ನು ಕೈಬಿಡುವುದಿಲ್ಲ. ರಾಜಸಿಕ ಶಕ್ತಿಗಳು ತಮ್ಮನ್ನು ನಂಬಿದವರ ರಕ್ಷಣೆ‌ಮಾಡುತ್ತದೆ. ತಾಮಸಿಕ ಶಕ್ತಿಗಳು ತಮಗೆ ಬೇಕಾದನ್ನು ನೀಡದೇ ಹೋದರೆ ಕೆಲವೊಂದು ಬಾರಿ ನಂಬಿದವರೆಂದೂ ನೋಡದೆ ತಮ್ಮ ಉಗ್ರ ಸ್ವರೂಪವನ್ನೂ ತೋರುತ್ತದೆ. ಇದೇ ಕಾರಣಕ್ಕೆ ಕಾಲಾಂತರದಲ್ಲಿ ಅನೇಕ ಕಡೆ ವೈದೀಕರಣ, ಜೀರ್ಣೋದ್ಧಾರ, ಬ್ರಹ್ಮಕಲಶಗಳಂತಹ ಕೆಲಸಗಳು ಆರಂಭವಾಯಿತು. (ಸಂಗ್ರಹಿಸಿದ್ದು)

Thursday, 17 July 2025

ಯಾರು ಶ್ರೇಷ್ಠರು

***ಯಾರು ಶ್ರೇಷ್ಠರು👇👇***
ದೇವಲೋಕದಲ್ಲಿ ನಾರದ ಮಹರ್ಷಿಗಳು ಹಾಗೂ ತುಂಬುರು ಮಹರ್ಷಿಗಳು ಮಹಾನ್ ಸಂಗೀತ ವಿದ್ವಾಂಸರಾಗಿದ್ದರು ಇಬ್ಬರಿಗೂ ತಮ್ಮ ಜ್ಞಾನದ ಬಗ್ಗೆ ಅಪಾರವಾದ ಹೆಮ್ಮೆಯಿತ್ತು. ಒಮ್ಮೆ ಇಬ್ಬರು ಪರಸ್ಪರ ಮಾತನಾಡುತ್ತಾ ನನ್ನ ಸಂಗೀತ ಜ್ಞಾನವೇ ಅಧಿಕ ನನ್ನ ಸಂಗೀತ ಜ್ಞಾನವೇ ಅಧಿಕ ಇಂದು ಪರಸ್ಪರ ವಾಗ್ವದಕ್ಕೆ ಒಳಗಾದರು ಏನೇ ಮಾಡಿದರಖ ಇಬ್ಬರು ತಮ್ಮ ತಮ್ಮ ಪಟ್ಟುಗಳನ್ನು ಬಿಡಲ್ಲ. ತಮ್ಮ ಜಗಳವನ್ನು ತೀರ್ಮಾನಿಸಲು ವಿಷ್ಣುವಿನ ಬಳಿಗೆ ಹೋದರು. ಆದರೆ ವಿಷ್ಣು ಅವರ ವಾದಗಳನ್ನು ಆಲಿಸುತ್ತಾ ಯಾವ ತೀರ್ಮಾನವನ್ನು ಕೊಡಲಿಲ್ಲ ಏಕೆಂದರೆ ಒಬ್ಬರ ಬಗ್ಗೆ ತೀರ್ಮಾನ ಕೊಟ್ಟರೆ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ ಅನ್ಯಾಯವಾಗಿ ಅವರಿಬ್ಬರ ನಡುವೆ ಕಲಹ ಏರ್ಪಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದೆನಣಿಸಿದ ಮಹಾವಿಷ್ಣು ಅವರಿಬ್ಬರನ್ನು ಕೂರಿಸಿಕೊಂಡು,
    "ನೀವಿಬ್ಬರು ಮಹಾನ್ ಸಂಗೀತಗಾರರು ಅದರಲ್ಲಿ ಅನುಮಾನವೇ ಇಲ್ಲ ಆದರೆ ನನಗೆ ಸಂಗೀತದ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ ಏಕೆಂದರೆ ನಾನೇನು ಸಂಗೀತವನ್ನು ನುಡಿಸುವುದಿಲ್ಲ.ನಿಮ್ಮ ಸಂಗೀತ ಜ್ಞಾನವನ್ನು ಅಳೆಯಲು ನಾನು ಶಕ್ತನಲ್ಲ. ನಿಮ್ಮ ಸಂಗೀತಜ್ಞಾನವನ್ನು ಅಳೆದು ಅದಕ್ಕೆ ಸೂಕ್ತವಾದ ತೀರ್ಮಾನವನ್ನು ಕೊಡಲು ನನ್ನ ಭಕ್ತನಾದ ಹನುಮಂತನಿಂದ ಮಾತ್ರ ಸಾಧ್ಯ ಅವನು ಈಗ ಹಿಮಾಲಯದ ತಪ್ಪಲಲ್ಲಿ ನನ್ನ ಧ್ಯಾನವನ್ನು ಮಾಡುತ್ತಾ ಕುಳಿತಿದ್ದಾನೆ. ನೀವು ಅಲ್ಲಿಗೆ ಹೋಗಿ ಅವನಿಂದ ನ್ಯಾಯವನ್ನು ಪಡೆಯಿರಿ. ಅವನ ತೀರ್ಮಾನದಿಂದ ನಿಮ್ಮಿಬ್ಬರಲ್ಲಿ ಯಾರು ಖ್ಯಾತ ಸಂಗೀತಗಾರರು ಎಂಬುದು ಬೆಳಕಿಗೆ ಬರುತ್ತದೆ ನೀವು ಹನುಮಂತ ಸಂಪರ್ಕಿಸಿ" ಎಂದು ಹೇಳಿದನು.
    ಅಂತೆಯೇ ನಾರದ ಮಹರ್ಷಿಗಳು ಹಾಗೂ ತುಂಬು ಮಹರ್ಷಿಗಳು ಹನುಮಂತನನ್ನು ಹುಡುಕುತ್ತಾ ಹಿಮಾಲಯದ ತಪ್ಪಲಿಗೆ ಧಾವಿಸಿದರು. ಆದರೆ ಎಷ್ಟೇ ಹುಡುಕಿದರು ಅವರಿಗೆ ಹನುಮಂತನು ಗೋಚರವಾಗಲಿಲ್ಲ. ಆದರೆ ಬೆಟ್ಟದ ಯಾವುದೋ ಒಂದು ಭಾಗದಿಂದ ಸುಶ್ರಾವ್ಯವಾಗಿ ಪಟಿಸುತ್ತಿರುವ ರಾಮಧ್ಯಾನ ಮಾತ್ರ ಕೇಳಿಬರುತ್ತಿತ್ತು.ಆಗ ಅವರು ಹನುಮಂತನನ್ನು ಹುಡುಕುತ್ತಾ ಹುಡುಕುತ್ತಾ ಹೋದಾಗ, ಹಿಮಾಲಯದಲ್ಲಿರುವ ದಟ್ಟವಾದ ಹಿಮದ ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿ ಹನುಮಂತನು ರಾಮಧ್ಯಾನದಲ್ಲಿ ತಲ್ಲೀನರಾಗಿರುವುದು ನೋಡಿದರು.
    ಹನುಮಂತನನ್ನು ಎಷ್ಟು ಬಾರಿ ಕರೆದರೂ ಅವನಿಗೆ ತನ್ನ ಭಕ್ತಿ ಪರಾಕಾಷ್ಠೆಯಲ್ಲಿರುವಾಗ ನಾರದ ಮಹರ್ಷಿಗಳ ಹಾಗೂ ತುಂಬುರರ ಕರೆಗಳು ಕೇಳಿಸಲೇ ಇಲ್ಲ. ಕೊನೆಗೆ ಹನುಮಂತ ನೊಂದಿಗೆ ಇವರೂ ರಾಮಧ್ಯಾನ ವನ್ನು ಪಟಿಸಲು ಪ್ರಾರಂಭಿಸಿದರು ಸಾಕಷ್ಟು ಕಾಲ ರಾಮನನ್ನು ಪ್ರಾರ್ಥಿಸಿದ ಮೇಲೆ ಹನುಮಂತನು ಎತ್ತಲಿಂದಲೋ ರಾಮಧ್ಯಾನ ಕೇಳುತ್ತಿದೆಯಲ್ಲ ಎನ್ನುತ್ತಾ ಕಣ್ಣು ಬಿಟ್ಟನು. ಆಗ ದೂರದಲ್ಲಿ ನಿಂತು ರಾಮನಾಮವನ್ನು ಜಪಿಸುತ್ತಿದ್ದ ನಾರದ ಮಹರ್ಷಿಗಳು ಹಾಗೂ ತುಕಬುಲರನ್ನು ಕಂಡು,
    "ಸ್ವಾಮಿ, ತಮ್ಮಿಬ್ಬರಿಗೂಗೂ ಸಾಷ್ಟಾಂಗ ನಮಸ್ಕಾರಗಳು ಇದೇನು ತಾವು ಇಲ್ಲಿವರೆಗೂ ಪಾದಗಳನ್ನು ಬೆಳೆಸಿದ್ದೀರಿ? ನನ್ನಿಂದ ಏನಾದರೂ ಕಾರ್ಯವಾಗಬೇಕಾಗಿದೆಯೇ? ದಯಮಾಡಿ ತಿಳಿಸಿರಿ ಖಂಡಿತ ಮಾಡಿಕೊಡುವೆ" ಎಂದನು. ಆಗ ನಾರದ ಮಹರ್ಷಿಗಳು,
    ಹನುಮಂತ ನಿನಗೆ ಗೊತ್ತಿರುವಂತೆ ನಾವಿಬ್ಬರೂ ಅಸಾಮಾನ್ಯ ಸಂಗೀತ ವಿದ್ವಾಂಸರು ಈಗ ನಮ್ಮಿಬ್ಬರಲ್ಲೂ ಒಂದು ಸಣ್ಣ ಕಲಹ ಏರ್ಪಟ್ಟಿದೆ. ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬುದು ಗೊತ್ತಾಗಬೇಕಾಗಿದೆ ನಾವಿಬ್ಬರು ವಿಷ್ಣುವಿನ ಮುಂದೆ ನಮ್ಮ ಕಚೇರಿಯನ್ನು ಏರ್ಪಡಿಸಿ ಅವನನ್ನು ತಿಳಿಸಿದ್ದೇವೆ. ವಿಷ್ಣುವಿನ ಬಳಿ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂದು ಕೇಳಿದರೆ ಅದಕ್ಕೆ 
"ನಾನೇನು ದೊಡ್ಡ ಸಂಗೀತ ವಿದ್ವಾಂಸನಲ್ಲ ಇದರ ಬಗ್ಗೆ ನಿಮಗೆ ಸರಿಯಾದ ತೀರ್ಪು ಬೇಕಿದ್ದರೆ ಹೋಗಿ ನನ್ನ ಭಕ್ತನಾದ ಹನುಮಂತನನ್ನು ವಿಚಾರಿಸಿ ಅವನು ನ್ಯಾಯವಾದ ತೀರ್ಪನ್ನು ಕೊಡುತ್ತಾನೆ" ಎಂದು ಹೇಳಿದ. ಅದಕ್ಕೋಸ್ಕರವಾಗಿ ನಾವಿಬ್ಬರೂ ನಿನ್ನ ಬಳಿ ಬಂದಿದ್ದೇವೆ ನಮ್ಮ ಸಂಗೀತಗಳನ್ನು ನಿನಗೆ ಒಪ್ಪಿಸುತ್ತೇವೆ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ತೀರ್ಪನ್ನು ಕೊಡಬೇಕು ಎಂದು ಕೇಳಿಕೊಂಡರು.
    ಅದಕ್ಕೆ ಹನುಮಂತನು ಸಮ್ಮತಿ ನೀಡಿದಾಗ ಒಬ್ಬರಾದ ಮೇಲೆ ಒಬ್ಬರಂತೆ ಒಬ್ಬರು ಮಹರ್ಷಿಗಳು ತಮ್ಮ ವಿದ್ವತ್ತಿನ ಮಹತ್ವವನ್ನು ಸಂಗೀತದ ಮೂಲಕ ಉಣಬಡಿಸಿದರು ತಾಳ್ಮೆಯಿಂದ ಇಬ್ಬರ ಸಂಗೀತಗಳನ್ನು ಕೇಳಿದ ಹನುಮಂತನು,
    "ನೀವಿಬ್ಬರೂ ತುಂಬಾ ಚೆನ್ನಾಗಿ ಸಂಗೀತವನ್ನು ನುಡಿ ಸುತ್ತೀರಿ ಹಾಗಾಗಿ ನಿಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂದು ಹೇಳುವುದೇ ಕಷ್ಟ ಒಬ್ಬರಿಗೆ ಇನ್ನೊಬ್ಬರು ಪೂರಕವಾಗಿ ಹಾಡುತ್ತೀರಿ. ನಮ್ಮ ಎರಡು ಕಣ್ಣುಗಳಲ್ಲಿ ಯಾವ ಕಣ್ಣು ಶ್ರೇಷ್ಠ ಎಂದು ಕೇಳಿದರೆ ಹೇಳುವುದು ಕಷ್ಟ ಎರಡು ಕಣ್ಣುಗಳಂತೆ ನೀವಿಬ್ಬರೂ ಅದ್ಭುತವಾಗಿ ಹಾಡುತ್ತೀರಿ. ಅದರಲ್ಲಿ ಅನುಮಾನವೇ ಇಲ್ಲ.ಆದರೆ ನಾನು ಅಂತಿಮ ತೀರ್ಮಾನ ಕೊಡುವುದಕ್ಕೆ ಮುಂಚೆ ನನ್ನ ಸಂಗೀತ ನಾದವನ್ನು ಕೇಳಿ" ಎಂದು ಹೇಳಿದನು. ಅದಕ್ಕೆ ನಾರದ ಮತ್ತು ತುಂಬುರು ಮಹರ್ಷಿಗಳು ಒಪ್ಪಿಕೊಂಡು ಹನುಮಂತನ ನಾದವನ್ನು ಕೇಳಲು ತಯಾರಾದರು.
    ಹನುಮಂತನ ರಾಮಧ್ಯಾನ ಸಂಗೀತ ಕಚೇರಿಯನ್ನು ಪ್ರಾರಂಭಿಸಿದ. ಅದೆಂತಹ ಭಕ್ತಿ, ಆದೆಂತಹ ಆನಂದ, ಅದೆಂತಹ ತನ್ಮಯತೆ, ಆ ಮಧುರವಾದ ಕಂಠಸಿರಿಗೆ ಹೋಲಿಕೆಯೇ ಇಲ್ಲ, ಆತನು ತನ್ನ ನಾದವನ್ನು ಅರ್ಥಾತ್ ರಾಮನಾಮವನ್ನು ಪಟಿಸುತ್ತಾ ಹೋದಂತೆ ಹಿಮಾಲಯ ಪರ್ವತಗಳಲ್ಲಿ ಇರುವ ಬಂಡೆಗಳೆಲ್ಲ ಕರಗತೊಡಗಿದವು. ಹರಿದುಬಂದ ಆ ನೀರಿನಲ್ಲಿ ಹನುಮಂತ ಮತ್ತು ದುಂಬುರು ಮಹರ್ಷಿಗಳು ಮುಳುಗಿ ಹೋದರು. ಆ ಪ್ರವಾಹವನ್ನು ತಾಳಲಾಗದೆ ಇಬ್ಬರು
    "ಸಾಕು ನಿಲ್ಲಿಸು ಹನುಮಂತ, ನಿನ್ನ ನಾದ ಪ್ರವಾಹವನ್ನು ನಿಲ್ಲಿಸು" ಎಂದು ಹೇಳತೊಡಗಿದರು. ಅವರ ಪ್ರಾರ್ಥನೆಗೆ ಕಿವಿಗೊಟ್ಟ ಹನುಮಂತನು ತನ್ನ ಸಂಗೀತದ ನಾದವನ್ನು ನಿಲ್ಲಿಸಿದನು. ಹನುಮಂತನು ತನ್ನ ಸಂಗೀತ ಪ್ರವಾಹವನ್ನು ನಿಲ್ಲಿಸಿದ ತಕ್ಷಣ ಪ್ರವಾಹದೋಪಾದಿಯಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವು ಹಾಗೆ ನಿಂತುಹೋಯಿತು. ಔ ಮತ್ತೊಮ್ಮೆ ಹಿಮದ ಬಂಡೆಗಳಾಗಿ ಪರಿವರ್ತನೆಗೊಂಡವು. ಇಬ್ಬರು ಮಹರ್ಷಿಗಳು ಬಂಡೆಗಳ ಮಧ್ಯೆ ಸಿಲುಕಿ ಹಾಕಿಕೊಂಡು ಹೊರಬರಲಾಗದೆ ವಿಲವಿಲ ಒದ್ದಾಡ ತೊಡಗಿದರು. ಆಗ ಹನುಮಂತನೇ ಮತ್ತೊಮ್ಮೆ ತನ್ನ ಸಂಗೀತವನ್ನು ಪ್ರಾರಂಭಿಸಿ ಬಂಡೆಗಳು ಕರಗುವಂತೆ ಮಾಡಬೇಕಾಯಿತು. ಹನುಮಂತನ ಸಂಗೀತ ಸಾಗರದ ಅಸಾಮಾನ್ಯ ಪ್ರತಿಭೆಯನ್ನು ಕಂಡು ಇಬ್ಬರು ಮಹರ್ಷಿಗಳು ಮೂಕಸ್ಮಿತರಾದರು. 
       "ಹನುಮಂತ, ನೀನು ಒಬ್ಬ ಅಸಾಮಾನ್ಯ ಸಂಗೀತಗಾರ, ಏಕೆಂದರೆ ನಿನ್ನ ಸಂಗೀತದಲ್ಲಿ ನಾದದ ಜೊತೆಗೆ ರಾಮನ ಅನನ್ಯವಾದ ಭಕ್ತಿ ಮಿಳಿತವಾಗಿದೆ. ಯಾರಿಂದಲೂ ನಿನ್ನನ್ನು ಮೀರಿಸಲು ಸಾಧ್ಯವಿಲ್ಲ"
 ಎಂದು ಅವನನ್ನು ಹಾಡಿ ಹೊಗಳುತ್ತಾ ಸ್ವರ್ಗದತ್ತ ಪ್ರಯಾಣ ಬೆಳೆಸಿದರು.

Tuesday, 8 July 2025

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಹಿಂದೆ ನಿಮಗೆ ಗಜಕೇಸರಿ ಯೋಗದ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ದಿನ ದೋಷವೊಂದರ ಬಗ್ಗೆ ತಿಳಿದುಕೊಳ್ಳೋಣ. ಪದೇ ಪದೇ ಕೇಳಿರಬಹುದಾದ, ಪರಿಚಿತವಾದ ಪದ ಇದು. ವಿಶೇಷವಾಗಿ ವಿವಾಹ ಸಂದರ್ಭದಲ್ಲಿ ವಧುವಿನ ಕಡೆಯವರು ಚಿಂತೆಗೆ ಈಡಾಗುತ್ತಾರೆ. ಅದಕ್ಕೆ ಕಾರಣ ಜನ್ಮ ಜಾತಕದಲ್ಲಿನ ಕುಜ ದೋಷ. ಹೆಣ್ಣುಮಕ್ಕಳ ಪೋಷಕರನ್ನು ಬಹಳ ಚಿಂತೆಗೆ ಗುರಿ ಮಾಡುವ ಈ 'ಕುಜ ದೋಷ'ದ ಬಗ್ಗೆ ಮಾಹಿತಿ ಇಲ್ಲಿದೆ.

ಈ ಹಿಂದೆ ನಿಮಗೆ ಗಜಕೇಸರಿ ಯೋಗದ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ದಿನ ದೋಷವೊಂದರ ಬಗ್ಗೆ ತಿಳಿದುಕೊಳ್ಳೋಣ. ಪದೇ ಪದೇ ಕೇಳಿರಬಹುದಾದ, ಪರಿಚಿತವಾದ ಪದ ಇದು. ವಿಶೇಷವಾಗಿ ವಿವಾಹ ಸಂದರ್ಭದಲ್ಲಿ ವಧುವಿನ ಕಡೆಯವರು ಚಿಂತೆಗೆ ಈಡಾಗುತ್ತಾರೆ. ಅದಕ್ಕೆ ಕಾರಣ ಜನ್ಮ ಜಾತಕದಲ್ಲಿನ ಕುಜ ದೋಷ. ಹೆಣ್ಣುಮಕ್ಕಳ ಪೋಷಕರನ್ನು ಬಹಳ ಚಿಂತೆಗೆ ಗುರಿ ಮಾಡುವ ಈ 'ಕುಜ ದೋಷ'ದ ಬಗ್ಗೆ ಮಾಹಿತಿ ಇಲ್ಲಿದೆ.


ಕುಜ ಅಂದರೆ ಅಗ್ನಿ ತತ್ವದ ಗ್ರಹ. ಜನ್ಮ ಜಾತಕದಲ್ಲಿ ಯಾವ ಸ್ಥಾನಗಳಲ್ಲಿ ಕುಜ ಗ್ರಹ ಇದ್ದರೆ ದೋಷಪೂರಿತ ಆಗುತ್ತದೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಮುನ್ನ ಕುಜ ದೋಷ ಇದೆ ಎಂದಾಕ್ಷಣ ಭಯ ಪಡುವ ಅಗತ್ಯ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಧೈರ್ಯಗೆಡಬೇಡಿ.


ಭಾರತದಲ್ಲಿ ಜನಿಸುವವರ ಪೈಕಿ ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು ಮಂದಿಗೆ ಕುಜ ದೋಷಕಾರಿಯಾಗಿ ಇದ್ದೇ ಇರುತ್ತದೆ. ಅದೇ ರೀತಿಯಾಗಿ ದೋಷವು ಪರಿಹಾರ ಕೂಡ ಆಗಿರುತ್ತದೆ. ಆದರೆ ಆ ದೋಷ ಪರಿಹಾರ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಂಡರೆ ಆಯಿತು. ದೋಷಕಾರಿ ಹೌದು ಎಂದಾದರೆ ಅದನ್ನು ಪರಿಹರಿಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.

1, 4, 7, 8, 12ನೇ ಸ್ಥಾನಗಳು

ಕುಜ ದೋಷ ಎಂದರೇನು?

ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು. ಲಗ್ನದಿಂದ ಎರಡು, ನಾಲ್ಕು, ಏಳು, ಎಂಟು ಅಥವಾ ಹನ್ನೆರಡನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಸಂತಾನದಲ್ಲಿ ಸಮಸ್ಯೆಗಳಾಗುವುದಿಲ್ಲ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವ..


ಸ್ವಾಭಾವಿಕ ಪರಿಹಾರಗಳೇನು?

ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.


ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ?

ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಇನ್ನು ಕುಜನನ್ನು ಭೂಮಿ ಪುತ್ರ ಎನ್ನುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ. ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಆದ್ದರಿಂದ ಕುಜ ದೋಷವುಳ್ಳವರ ಹೆಸರಲ್ಲಿ ಭೂಮಿ ನೋಂದಣಿ ಮಾಡಿಕೊಂಡರೆ ಅದು ಉಳಿಯದೆ, ಮಾರಾಟ ಆಗಿಬಿಡುತ್ತದೆ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ.


ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲ?

ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವರು ವಿವಾಹ ಜೀವನದಲ್ಲಿ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ನಲವತ್ತು-ಐವತ್ತನೇ ವರ್ಷದಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಹಾಗಂತ ಕುಜ ದೋಷದ ಪರಿಣಾಮ ಕುಜ ದಶೆ, ಕುಜ ಭುಕ್ತಿ, ಗೋಚಾರದಲ್ಲಿ ನಿಮ್ಮ ನಕ್ಷತ್ರಕ್ಕೆ ಕುಜ ಪರಿಣಾಮ ಬೀರುವ ಸ್ಥಿತಿಯಲ್ಲಿ ಬಂದಾಗ ತೊಂದರೆ ಆಗುತ್ತದೆ.



ಕುಜ ದೋಷದ ಪರಿಹಾರ ಮಾರ್ಗಗಳೇನು?

ಕುಜನ ಗಾಯತ್ರಿ ಮಂತ್ರವಾದ ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಅನ್ನು ನಿತ್ಯವೂ ಹೇಳಿಕೊಂಡರೆ ಕುಜ ದೋಷದ ಪ್ರಭಾವ ಕಡಿಮೆ ಆಗುತ್ತದೆ. ಕೆಂಪು ವಸ್ತ್ರ ದಾನ ಮಾಡುವುದರಿಂದ, ಯಥಾ ಶಕ್ತಿ ತೊಗರಿಬೇಳೆ ಧಾನ್ಯ ಮಾಡುವುದರಿಂದ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದರ್ಶನ ಹಾಗೂ ಅಲ್ಲಿ ಸೇವೆ ಮಾಡುವುದರಿಂದ, ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ಹಾಗೂ ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದ ಕೂಡ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಸ್ವಯಂ ವೈದ್ಯ ಹೇಗೆ ಅಪಾಯಕಾರಿ ಹಾಗೂ ನಿರುಪಯೋಗಿಯೋ ಸ್ವಯಂ ಜ್ಯೋತಿಷ್ಯವೂ ಹಾಗೆಯೇ. ಆದ್ದರಿಂದ ನಿಮ್ಮ ಜಾತಕವನ್ನು ಒಮ್ಮೆ ತಜ್ಞ ಜ್ಯೋತಿಷಿಗಳಲ್ಲಿ ತೋರಿಸಿ. ಯೋಗ-ದೋಷಗಳ ಬಗ್ಗೆ ತಿಳಿದುಕೊಳ್ಳಿ. ಯೋಗವನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಿ. ದೋಷ ಪರಿಹಾರ ಮಾಡಿಸಿಕೊಳ್ಳಿ.

ಜಾತಕದಲ್ಲಿ ಕಂಡುಬರುವ ಕುಜದೋಷಕ್ಕೆ ಏನು ಪರಿಹಾರ ಗೊತ್ತಾ?

ವ್ಯಕ್ತಿಯ ಮದುವೆಯಲ್ಲಿ ತಡವಾದರೆ ಅಥವಾ ಮದುವೆಯಲ್ಲಿ ಇನ್ನಿತರ ಸಮಸ್ಯೆಗಳು ಕಂಡುಬಂದರೆ ಅದಕ್ಕೆಲ್ಲಾ ಕುಜದೋಷವೇ ಕಾರಣ ಎನ್ನುವುದಾಗಿ ಹೇಳಲಾಗುತ್ತದೆ. ಹಾಗದರೆ ಕುಜದೋಷ ಎಂದರೇನು, ಇದರಿಂದಾಗುವ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳೇನು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.


ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಒಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ದೋಷಗಳು ಇದ್ದೇ ಇರುತ್ತದೆ. ಶನಿದೋಷ, ಕುಜ ದೋಷ, ಗುರುದೋಷ ಹೀಗೆ ವ್ಯಕ್ತಿಯ ಜೀವನವನ್ನು ಈ ಗ್ರಹಗಳು ಆಧರಿಸುತ್ತವೆ. ಇದರಲ್ಲಿ ಮುಖ್ಯವಾಗಿ ಕಂಡುಬರುವ ದೋಷವೆಂದರೆ ಕುಜ ದೋಷ ಅಥವಾ ಮಂಗಲ ದೋಷ ಅಥವಾ ಮಾಂಗಲಿಕ ದೋಷವೆಂದೂ ಕರೆಯುತ್ತಾರೆ.

ಹಿಂದೂ ಧರ್ಮದಲ್ಲೂ ಕುಜ ದೋಷವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕುಜದೋಷವು ವ್ಯಕ್ತಿಯ ಜೀವನ, ಮದುವೆ ಮೇಲೆ ಪರಿಣಾಮ ಬೀರುತ್ತದೆ, ಆತನಿಗೆ ದುರಾದೃಷ್ಟವನ್ನು ತರುವುದು ಎನ್ನಲಾಗುತ್ತದೆ. ಕುಜದೋಷವಿರುವವರಿಗೆ ಮದುವೆಯಾಗುವುದಿಲ್ಲ ಅಥವಾ ಕುಜದೋಷವಿರುವವರನ್ನು ಮದುವೆಯಾದರೆ ಸಂಗಾತಿಯು ಕೆಲವೇ ದಿನಗಳಲ್ಲಿ ಮರಣವನ್ನಪ್ಪುತ್ತಾರೆ ಹೀಗೆ ಹಲವು ನಂಬಿಕೆಗಳಿವೆ.

ಕುಜ ಎಂದರೆ
ಬ್ರಹ್ಮ ವೈವರ್ತ ಪುರಾಣದಲ್ಲಿ ಹೇಳುವಂತೆ, ಕುಜ ಭೂಮಿಯ ಪುತ್ರ. 'ಕು' ಎಂದರೆ ಭೂಮಿ, 'ಜ' ಎಂದರೆ ಹುಟ್ಟು. ಭಗವಾನ್‌ ವಿಷ್ಣು ಹಾಗೂ ಭೂದೇವಿಯ ಒಗ್ಗಟ್ಟಿನ ಸಂಕೇತವಾದ ಸಾಗರದಾಳದ ಹವಳದಿಂದ ಹುಟ್ಟಿದವನೇ 'ಕುಜ' ಎನ್ನಲಾಗುತ್ತದೆ. ಹಾಗಾಗಿ ಕುಜನನ್ನು ಭೌಮ ಎಂದೂ ಕರೆಯಲಾಗುತ್ತದೆ. ಕೆಂಪು ಬಣ್ಣದಲ್ಲಿರುವ ಕುಜ ಗ್ರಹದ ಪ್ರಧಾನ ದೇವತೆ ಸುಬ್ರಹ್ಮಣ್ಯ.

ಮಂಗಲ ದೋಷ

ಏನಿದು ಕುಜ ದೋಷ?
ಕುಜ ಎಂದರೆ ಅಗಗ್ನಿ ತತ್ವದ ಗ್ರಹ. ಕುಜ ದೋಷವನ್ನು ಜನ್ಮಕುಂಡಲಿಯಲ್ಲಿ ಲಗ್ನದಿಂದ ನೋಡಲಾಗುತ್ತದೆ. ಲಗ್ನದಲ್ಲಿ ಕುಜನು 1,2,4,7,8 ಹಾಗೂ 12ನೇ ಮನೆಯಲ್ಲಿದ್ದರೆ ಕುಜದೋಷವಿದೆ ಎಂದು ಹೇಳಲಾಗುತ್ತದೆ. ಪುರುಷರ ಜಾತಕದಲ್ಲಿ ಲಗ್ನದಲ್ಲಿ ಎರಡು, ಏಳು ಅಥವಾ ಎಂಟರಲ್ಲಿ ಕುಜನು ಇದ್ದರೆ ಉಗ್ರಸ್ವರೂಒದ ದೋಷ ಕಂಡುಬರುತ್ತದೆ. ಮಹಿಳೆಯರಲ್ಲಿ ಏಳು, ಎಂಟು ಹಾಗೂ ಹನ್ನೆರಡನೇ ಮನೆಯಲ್ಲಿದ್ದರೆ ಕುಜ ದೋಷದ ಸ್ವರೂಪ ಹೆಚ್ಚಾಗಿರುತ್ತದೆ. ಮಾಂಗಲಿಕ ದೋಷವಿರುವವರಿಗೆ ಮಂಗಳಗ್ರಹವು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಂಗಳಕಾರ್ಯದಲ್ಲಿ ತೊಡಕುಗಳು ಎದುರಾಗುತ್ತದೆ.

ಕುಜದೋಷದದ ಲಕ್ಷಣಗಳು
ಜನ್ಮಕುಂಡಲಿಯ ಮೊದಲ ಮನೆಯಲ್ಲಿ ಕುಜನಿದ್ದರೆ ವೈವಾಹಿಕ ಜೀವನದಲ್ಲಿ ಕಲಹ ಹಾಗೂ ಹಿಂಸೆ ಕಂಡುಬರುತ್ತದೆ. ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ಆಕ್ರಣಕಾರಿಗಳು ಮತ್ತು ಅಸಭ್ಯರಾಗಿರುವವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ . 7ನೇ ಅಂಶವೆಂದರೆ ಚಿಂತೆ ಹಾಗೂ ಪತಿ ಹಾಗೂ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ತಂದಿಡುವುದು. ಎಂಟನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯವನ್ನು ತಂದಿಡಬಹುದು

ಎರಡನೆಯ ಮನೆಯಲ್ಲಿ ಕುಜನಿದ್ದರೆ ವ್ಯಕ್ತಿಯ ಮದುವೆ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು, ಮಂಗಳ ಗ್ರಹವು ಎರಡನೇ ಮನೆಯಲ್ಲಿದ್ದರೆ ವ್ಯಕ್ತಿಯ ಕುಟುಂಬದೊಂದಿಗಿನ ಸಂಬಂಧದೊಂದಿಗೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳವನ್ನುಂಟು ಮಾಡಬಹುದ

ನಾಲ್ಕನೇ ಮನೆಯಲ್ಲಿ ಕುಜನಿದ್ದರೆ ವೃತ್ತಿಯಲ್ಲಿ ಯಶಸ್ಸು ಸಿಗದು ಹಾಗೂ ಪದೇ ಪದೇ ಉದ್ಯೋಗ ಬದಲಿಸಬೇಕಾಗಬಹುದು. ಮಂಗಳನು ನಾಲ್ಕನೇ ಮನೆಯಲ್ಲಿದ್ದರೆ ಸ್ಥಿರ ಸಂಪತ್ತು ಹಾಗೂ ಸಮೃದ್ಧಿ ಕಂಡುಬರುವುದು, ಆದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವವು

ಕುಜನು ಏಳನೇ ಮನೆಯಲ್ಲಿದ್ದರೆ ವ್ಯಕ್ತಿಯ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು, ತನ್ನಲ್ಲಿರುವ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಮನೆಯಲ್ಲಿ ಹೊಂದಾಣಿಕೆ ಕಂಡುಬರದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ದೋಷವಿದ್ದರೆ ಬಹಳ ಕೋಪಿಷ್ಠ ಪತಿ ಸಿಗಬಹುದು
ಕುಜದೋಷ

ಕುಜನು ಎಂಟನೇ ಮನೆಯಲ್ಲಿದ್ದರೆ ಆಗ ವ್ಯಕ್ತಿಯು ಪೋಷಕರಿಂದ ದೂರವಾಗುವನು. ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳಬೇಕಾಗುವುದು. ಮಂಗಳನು ವೈವಾಹಿಕ ಜೀವನದಲ್ಲಿ ಖಿನ್ನತೆ ಉಂಟುಮಾಡಬಹುದು. ಆರ್ಥಿಕ ಪರಿಸ್ಥಿತಿ, ಸಂಗಾತಿಯ ಅನಾರೋಗ್ಯ ಮತ್ತು ಇನ್ನಿತರ ಕಾರಣಗಳಿಂದ ಖಿನ್ನತೆ ಉಂಟಾಗಬಹುದು. ಹನ್ನೆರಡನೆ ಮನೆಯಲ್ಲಿ ಕುಜನಿದ್ದರೆ ಮಾನಸಿಕ ಸಮಸ್ಯೆ, ಆರ್ಥಿಕ ನಷ್ಟ ಹಾಗೂ ಶತ್ರುಗಳು ಹೆಚ್ಚಾಗುವರು

ಕುಜ ದೋಷ ಪರಿಹಾರ ಕ್ರಮಗಳು
  • ಮಂಗಲ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ನಿವಾರಣೆಯಾಗುವುದು
  • ಕುಜದೋಷವಿರುವವರಿಗೆ ಕುಂಭ ವಿವಾಹ ಮಾಡಿದರೆ ದೋಷ ದೂರವಾಗುವುದು
ಕುಂಭ ವಿವಾಹ: ಮದುವೆಯಾಗುವ ಹುಡುಗ ಅಥವಾ ಹುಡುಗಿಗೆ ಜಾತಕದಲ್ಲಿ ಮಂಗಲ ದೋಷ ಕಂಡು ಬಂದರೆ, ದೋಷದ ಋಣಾತ್ಮಕ ಪರಿಣಾಮಗಳನ್ನು ನಿವಾರಿಸಲು ಕುಂಭ ವಿವಾಹ ಎನ್ನುವ ವಿಧಿಯನ್ನು ಮಾಡಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ದೋಷವಿರುವ ವ್ಯಕ್ತಿಯು ಬಾಳೆಗಿಡ, ಅಶ್ವತ್ಥ ಮರ ಅಥವಾ ವಿಷ್ಣುವಿನ ಬೆಳ್ಳಿ ಅಥವಾ ಚಿನ್ನದ ಮೂರ್ತಿಯನ್ನು ವಿವಾಹವಾಗಬೇಕು
ಕುಜದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರವೆಂದರೆ ಮಂಗಳವಾರದ ಉಪವಾಸ. ದೋಷವಿರುವವರು ಈ ದಿನ ಉಪವಾಸ ಮಾಡಿ ಬರಿ ತೊಗರಿ ಬೇಳೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು

ಇದನ್ನೂ ಓದಿ ಶನಿ ನಿಮ್ಮ ಹೆಗಲೇರಿದೆಯೇ? ಇಲ್ಲಿದೆ ನೋಡಿ ಪರಿಹಾರ ಕ್ರಮಗಳು

ಮಂತ್ರ ಪಠಣ

  • ಕುಜದೋಷ ನಿವಾರಿಸಲು ಮಂಗಳವಾರ ಮಂಗಲ ಮಂತ್ರವನ್ನು ಪಠಿಸಬೇಕು. " ಓಂ ಆಂ ಅಂಗಾರಕಾಯ ನಮಃ| ಓಂ ಭೌಂ ಭೌಮಾಯ ನಮಃ'' ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು
  • ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಕುಜ ದೋಷದ ಪ್ರಭಾವ ಕಡಿಮೆಯಾಗುವುದು
    'ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ, ತನ್ನೋ ಕುಜಃ ಪ್ರಚೋದಯಾತ್‌'
  • ಮಂಗಲಿಕ ದೋಷವಿರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್‌ ಚಾಲೀಸವನ್ನು ಪಠಿಸಬೇಕು
    ನಮಃ ಸುರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ
    ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ
  • ಮಂಗಳವಾರದಂದು ಪೂಜೆ ಮಾಡುವುದು ಹಾಗೂ ದೇವಸ್ಥಾನಗಳಿಗೆ ಹೋಗುವುದರಿಂದ ಮಂಗಲದೋಷವನ್ನು ಕಡಿಮೆ ಮಾಡಿಕೊಳ್ಳಬಹುದು
  • ಜ್ಯೋತಿಷ್ಯದ ಪ್ರಕಾರ ಮಂಗಲ ದೋಷ ಅಥವಾ ಕುಜ ದೋಷವಿರುವವರು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು
  • ಕುಜದೋಷವಿರುವವರು 28ರ ಹರೆಯದ ನಂತರ ಮದುವೆಯಾಗಬೇಕು, ವಯಸ್ಸಾದಂತೆ ದೋಷದ ಪ್ರಭಾವವೂ ತಗ್ಗುವುದು
  • ಕುಜ ದೋಷವಿರುವವರು ಮಂಗಳವಾರದ ದಿನ ದಾನ ಮಾಡಿದರೆ ದೋಷದ ಪ್ರಭಾವ ತಗ್ಗುವುದು. ಕೆಂಪು ವಸ್ತ್ರ, ಆಹಾರ ಮುಖ್ಯವಾಗಿ ತೊಗರಿ ಬೇಳೆಯಿಂದ ಮಾಡಿದ ಆಹಾರ ಅಥವಾ ತೊಗರಿ ಬೇಳೆ ದಾನ ಮಾಡಬೇಕು.
  • ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದಲೂ ದೋಷದ ಪ್ರಭಾವ ತಗ್ಗುವುದು
  • ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದಲೂ ಕುಜ ದೋಷ ನಿವಾರಣೆಯಾಗುವುದು.
ಕುಜ ದೋಷವಿರದ ನಕ್ಷತ್ರಗಳು
ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯಾ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಭಾದ್ರಾ ನಕ್ಷತ್ರದವರಿಗೆ ಕುಜದೋಷವಿದ್ದರೂ ಶಾಂತಿ ಮಾಡಿಸಿಕೊಳ್ಳುವ ಅಗತ್ಯವಿಲ್ 

ಅಂಗಾರಕನೇ ಸುಬ್ರಹ್ಮಣ್ಯ

ಅಂಗಾರಕನೇ ಸುಬ್ರಹ್ಮಣ್ಯ

ಸುಬ್ರಹ್ಮಣ್ಯನಿಂದ ಪಂಚಪಾತಕ ದೋಷ ನಿವಾರಣೆಯಾಗುತ್ತದೆ ಎನ್ನುವುದು ಶಾಸ್ತ್ರದ ಅಭಿಮತ. ಜನ್ಮ ಕುಂಡಲಿಯಲ್ಲಿ ಕುಜ ಅಥವಾ ಸುಬ್ರಹ್ಮಣ್ಯನ ಪ್ರಭಾವ ಹೇಗಿದೆ ಎಂದು ನೋಡೋಣ.

ಷಷ್ಠಿ ಏನಿದರ ಸೃಷ್ಟಿ

ಸುಬ್ರಹ್ಮಣ್ಯನಿಂದ ಪಂಚಪಾತಕ ದೋಷ ನಿವಾರಣೆಯಾಗುತ್ತದೆ ಎನ್ನುವುದು ಶಾಸ್ತ್ರದ ಅಭಿಮತ. ಜನ್ಮ ಕುಂಡಲಿಯಲ್ಲಿ ಕುಜ ಅಥವಾ ಸುಬ್ರಹ್ಮಣ್ಯನ ಪ್ರಭಾವ ಹೇಗಿದೆ ಎಂದು ನೋಡೋಣ.

* ಮಂಡಗದ್ದೆ ಪ್ರಕಾಶ್‌ಬಾಬು

ಪಾಡ್ಯದಿಂದ ಬರುವ ಆರನೆಯ ದಿನವೇ ಷಷ್ಠಿ. ಮಾರ್ಗಶಿರ ಮಾಸ ಶುಕ್ಲಪಕ್ಷದ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ. ಸುಬ್ರಹ್ಮಣ್ಯ ಆರಾಧನೆಗೆ ಪ್ರಶಸ್ತವಾದ ದಿನ. ಸುಬ್ರಹ್ಮಣ್ಯ ಜನನ ದಿನವೆಂದೂ ಹೇಳುತ್ತಾರೆ. ಪರಾಶರ ಮುನಿಗಳು ಸುಬ್ರಹ್ಮಣ್ಯನ ಎಲ್ಲಾ ಗುಣಗಳನ್ನು ಕುಜ (ಅಂಗಾರಕ)ನಲ್ಲಿ ತುಂಬುತ್ತಾರೆ. ಸುಬ್ರಹ್ಮಣ್ಯನ ಉಪಾಸನೆಗೆ ಕುಜನೇ ಕಾರಕನೆಂದು ಕಶ್ಯಪ, ಅತ್ರಿ ಮತ್ತು ಕಣ್ವ ಮುನಿಗಳು ತಿಳಿಸಿದ್ದಾರೆ. ಸುಬ್ರಹ್ಮಣ್ಯನ ಜನನ ಪಂಚಾಗ್ನಿಗಳಿಂದ ಆದ ಕಾರಣ ಅವನಲ್ಲಿ ಅಗ್ನಿ ತತ್ವ, ಜಲ ತತ್ವ, ವಾಯು ತತ್ವ, ಆಕಾಶ ತತ್ವ, ಭೂ ತತ್ವ ಕಾರಕನಾಗಿದ್ದಾನೆ. ಆ ಕಾರಣ ಸುಬ್ರಹ್ಮಣ್ಯನ ಉಪಾಸನೆಯಿಂದ ಪಂಚ ಪಾತಕ ದೋಷಗಳು ನಿವಾರಣೆಯಾಗುತ್ತವೆ.

ಕುಂಡಲಿಯಲ್ಲಿ ಕುಜ :

ಮೇಷ ಮತ್ತು ವೃಶ್ಚಿಕ ರಾಶಿ ಕುಜನ ಸ್ವಂತ ಮನೆಯಾಗಿದೆ. ಈತ ಸ್ವಭಾವದಲ್ಲಿ ಕ್ರೂರ. ಒಂದು ರಾಶಿಯಲ್ಲಿ ಸುಮಾರು 45 ದಿನ ಇರುವನು. ಕುಜನಿಗೆ ಗುರು, ಚಂದ್ರ, ರವಿ ಮಿತ್ರರು. ಬುಧ ಶತ್ರು ಗ್ರಹ. ಶುಕ್ರ ಮತ್ತು ಶನಿ ಸಮನಾಗಿದ್ದಾನೆ. ಈತನ ದೆಶೆ 7 ವರ್ಷ. ಧಾನ್ಯ ತೊಗರಿ ಬೇಳೆ. ಲಗ್ನ ಭಾವದಿಂದ ಐದನೇ ಮನೆಯಲ್ಲಿ ಕುಜನಿದ್ದರೆ ಸಂತಾನಕ್ಕೆ ತೊಂದರೆ ಆಗಬಹುದು. ಲಗ್ನದಿಂದ ಚಂದ್ರನಿಂದ ಮತ್ತು ಶುಕ್ರನಿಂದ 1,2,4,5,7, 12ರಲ್ಲಿ ಕುಜನಿದ್ದರೆ ಕುಜ ದೋಷ. ಪುರುಷನಿಗೆ 2, 7, 8 ರಲ್ಲಿ ಇದ್ದರೆ ಹಾಗೂ ಮಹಿಳೆಗೆ 4,8, 12ರಲ್ಲಿ ಇದ್ದರೆ ಕುಜ ದೋಷ ಹೆಚ್ಚಿರುತ್ತದೆ. ಕುಜ ಮತ್ತು ಚಂದ್ರ ಒಂದೇ ಮನೆಯಲ್ಲಿದ್ದರೆ ಲಕ್ಷ್ಮೇನಾರಾಯಣ ಯೋಗ ಉಂಟಾಗುತ್ತದೆ. ಕುಜನು ಚಂದ್ರನ ನಕ್ಷತ್ರದಲ್ಲಿದ್ದು ಆ ಚಂದ್ರನನ್ನು ಗುರು ನೋಡಿದರೆ ಗುರುವನ್ನು ಶುಕ್ರನು ನೋಡಿದರೆ ಆತ ಸುಬ್ರಹ್ಮಣ್ಯನ ಆರಾಧನೆಯಿಂದ ಸಿದ್ಧಿ ಮಾಡಿಕೊಂಡು ನೂರಾರು ಜನರಿಗೆ ಅದನ್ನು ಸದ್ವಿನಿಯೋಗ ಮಾಡಿ ಖ್ಯಾತಿ ಹೊಂದುತ್ತಾನೆ.

ಪುನರ್ವಸು ನಕ್ಷತ್ರದ 4ನೇ ಪಾದದಲ್ಲಿ ಕುಜನಿದ್ದರೆ, ಗುರು ಬಲಿಷ್ಟನಾದರೆ ಜಪವನ್ನು ಮಾಡಿ ಸುಬ್ರಹ್ಮಣ್ಯನನ್ನು ಒಲಿಸಿಕೊಳ್ಳಬಹುದು. ವಿಶಾಖ ನಕ್ಷತ್ರದ 4ನೇ ಪಾದದಲ್ಲಿ ಕುಜನಿದ್ದರೆ, ನದಿ ತೀರ, ಸಮುದ್ರ ತೀರದ ಹತ್ತಿರ ಜಪ ಮಾಡಿ ಸುಬ್ರಹ್ಮಣ್ಯನನ್ನು ಒಲಿಸಿಕೊಳ್ಳಬಹುದು.

ಪೂರ್ವಾಭಾದ್ರ ನಕ್ಷತ್ರದ 4ನೇ ಪಾದದಲ್ಲಿ ಕುಜನಿದ್ದರೆ, ಆತ್ಮೋದ್ಧಾರಕ್ಕಾಗಿ, ಮೋಕ್ಷಕ್ಕಾಗಿ ಕಠಿಣ ಸಾಧನೆ ಮಾಡುತ್ತಾನೆ. ಲಗ್ನದಿಂದ ಕುಜ ಮತ್ತು ಗುರು 5ನೇ ಮನೆಯಲ್ಲಿದ್ದರೆ ಸುಬ್ರಹ್ಮಣ್ಯನ ಆರಾಧನೆಯಿಮದ ಆತ್ಮಜ್ಞಾನ ಪಡೆಯುತ್ತಾನೆ.

ಕಥೆಯೊಂದರ ಪ್ರಕಾರ ಸುಬ್ರಹ್ಮಣ್ಯ ನವಿಲು ಮತ್ತು ಕೋಳಿಯನ್ನು ಇಟ್ಟುಕೊಂಡು ಆಟವಾಡುತ್ತಿದ್ದನಂತೆ. ಇದನ್ನು ನೋಡಿದ ಪರಾಶರ ಮುನಿಗಳು ಕೋಳಿಯ ಕಾರಕತ್ವವನ್ನು ಕುಜನಿಗೆ ಕೊಡುತ್ತಾರೆ. ಆದ್ದರಿಂದ ಜಾತಕದಲ್ಲಿ ಕುಜನು ಬಲಿಷ್ಠನಾಗಿದ್ದರೆ ಆ ಜಾತಕದವರು ಕೋಳಿ ವ್ಯಾಪಾರ, ಕೋಳಿ ಫಾರಂ ಅಥವಾ ಮೊಟ್ಟೆ ವ್ಯಾಪಾರವನ್ನು ಮಾಡುತ್ತಾರೆ ಎಂದು ಗ್ರಹಿಸಬಹುದು. ಆದರೆ ಶನಿ ದೃಷ್ಟಿ ಇದ್ದರೆ ವ್ಯಾಪಾರ ನಷ್ಟವಾಗುತ್ತದೆ. ರಾಹು ಸಂಪರ್ಕವಿದ್ದರೆ ಕೋಳಿಗಳ ಸಂತಾನ ನಾಶವಾಗುವ ಸಾಧ್ಯತೆ ಹೆಚ್ಚು.

ಪರಿಹಾರ

ಸಂತಾನಕ್ಕೆ ಮತ್ತು ವಿವಾಹಕ್ಕೆ ಅಡೆತಡೆ ಇದ್ದರೆ ಸುಬ್ರಹ್ಮಣ್ಯನ ಆರಾಧನೆ ಅಂದರೆ ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಮಾಡಿ ದೋಷ ಪರಿಹಾರ ಮಾಡಿಕೊಳ್ಳಬಹುದು.

ಸುಬ್ರಹ್ಮಣ್ಯ ಷಷ್ಠಿಯ ದಿನ ಹುತ್ತ ಇದ್ದಲ್ಲಿಗೆ ಹೋಗಿ ಪೂಜಿಸಿದರೆ ಸರ್ಪದೋಷ, ಕುಜದೋಷ, ನೇತ್ರ ಭಾದೆ, ಚರ್ಮವ್ಯಾಧಿಗಳು ಪರಿಹಾರವಾಗುತ್ತವೆ.