Tuesday, 8 December 2020

ಉಪ್ಪು

#ಸೂರ್ಯಾಸ್ತದ ನಂತರ ಯಾಕೆ ಉಪ್ಪು ಎರವಲು ಪಡೆಯುವುದಿಲ್ಲ ಗೊತ್ತಾ?

ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ್ನು ಲಕ್ಷ್ಮಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು.ಉಪ್ಪು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದರಿಂದ ದುಷ್ಟ ಶಕ್ತಿಗಳು ದೂರ ಸರಿಯುತ್ತವೆ.

ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ್ನು ಲಕ್ಷ್ಮಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಲಕ್ಷ್ಮಿ ದೇವಿಯು ಸಾಮಾನ್ಯವಾಗಿ ಸಂಜೆಯ ವೇಳೆ ಮನೆಯನ್ನು ಪ್ರವೇಶ ಮಾಡುತ್ತಾಳೆ. ಅವಳು ಬರುವ ಹಾಗೂ ಇರುವ ಸಮಯವು ಅತ್ಯಂತ ಪವಿತ್ರವಾದದ್ದು. ಹಾಗಾಗಿ ಲಕ್ಷ್ಮಿ ಆಗಮಿಸುವ ಸಮಯದಲ್ಲಿ ಧನಾತ್ಮಕ ಹಾಗೂ ಸಕಾರಾತ್ಮಕ ವಾತಾವರಣವು ಮನೆಯಲ್ಲಿ ನೆಲೆಸಿರಬೇಕು ಎಂದು ಆಶಿಸುವರು. ಆದ್ದರಿಂದ ಸಂಜೆಯ ಸಮಯದಲ್ಲಿ ಹಣವನ್ನು ಮತ್ತು ಉಪ್ಪನ್ನು ಇತರರಿಗೆ ನೀಡಬಾರದು.

 ಸಂಧ್ಯಾ ಸಮಯವು ಲಕ್ಷ್ಮಿಗೆ ಶ್ರೇಷ್ಠವಾದ ಸಮಯ. ಸಂಜೆಯ ವೇಳೆ ಸೂರ್ಯನ ಕಿರಣವು ಮಾಯವಾಗುವುದು. ಅಂತಹ ಸಮಯದಲ್ಲಿ ಸಾಕಷ್ಟು ಋಣಾತ್ಮಕ ಶಕ್ತಿ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಂಜೆಯ ವೇಳೆ ಆದಷ್ಟು ಧನಾತ್ಮಕ ಕೆಲಸಗಳನ್ನು ಮಾಡಬೇಕು ಎಂದು ಹೇಳಲಾಗುವುದು.

ಸಂಜೆಯ ಸಮಯದಲ್ಲಿ ಉಪ್ಪನ್ನು ಇತರರಿಗೆ ನೀಡಿದರೆ ಲಕ್ಷ್ಮಿಯನ್ನೇ ಮನೆಯಿಂದ ಆಚೆ ಕಳಿಸಿದ ಹಾಗೆ ಆಗುವುದು. ಇದು ಲಕ್ಷ್ಮಿಗೆ ಅವಮಾನ ಮಾಡಿದಂತಾಗುವುದು. ಜೀವನದಲ್ಲಿ ಧನ-ಧಾನ್ಯವನ್ನು ಹೊಂದಲು ಬಯಸುತ್ತೇವೆ ಎಂದಾದರೆ ಮೊದಲು ಲಕ್ಷ್ಮಿ ದೇವಿಯನ್ನು ಖುಷಿ ಪಡಿಸುವ ಮತ್ತು ಆರಾಧಿಸುವ ಕಾರ್ಯ ನೆರವೇರವೇರಬೇಕು. 

ದೇವಿಗೆ ವಿಶೇಷ ಗೌರವ ಹಾಗೂ ಪೂಜೆಯನ್ನು ಸಲ್ಲಿಸುವುದರ ಮೂಲಕ ತಾಯಿಯ ಕೃಪೆಗೆ ಒಳಗಾಗಬಹುದು. ಜೊತೆಗೆ ಬಯಸಿದ ಸಿರಿ-ಸಂಪತ್ತು ಮನೆಯಲ್ಲಿ ತುಂಬಿರುತ್ತವೆ ಎಂಬ ನಂಬಿಕೆಯಿದೆ.

ಈ ಹಿನ್ನೆಲೆಯಲ್ಲಿಯೇ ಪುರಾತನ ಕಾಲದಿಂದಲೂ ಸಂಜೆ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವುದನ್ನು ನಿಷೇದಿಸಲಾಗಿದೆ. ಸೂರ್ಯಾಸ್ತದ ನಂತರ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವ ಪ್ರಕ್ರಿಯೆಯಿಂದಾಗಿ ಕೆಲವು ಸಮಸ್ಯೆಗಳು ಹಾಗೂ ಜೀವನದಲ್ಲಿ ಬದಲಾವಣೆಯು ಸಂಭವಿಸುವುದು. 

ಅಲ್ಲದೆ ಉಪ್ಪಿನೊಂದಿಗೆ ಕೆಲವು ನಂಬಿಕೆಗಳು ಹಾಗೂ ಭವಿಷ್ಯಗಳು ಬೆಸೆದುಕೊಂಡಿವೆ ಎಂದು ಸಹ ಹೇಳಲಾಗುವುದು. ಹಾಗಾದರೆ ಉಪ್ಪಿನೊಂದಿಗೆ ಇರುವ ಧಾರ್ಮಿಕ ಹಾಗೂ ಮೂಢನಂಬಿಕೆಗಳು ಯಾವವು ಎನ್ನುವುದನ್ನು ಮುಂದಿನ ವಿವರಣೆಯೊಂದಿಗೆ ಪರಿಶೀಲಿಸಿ.

#ಉಪ್ಪು ಚೆಲ್ಲುವುದು

ಉಪ್ಪು ಅತ್ಯಂತ ಸೂಕ್ಷ್ಮ ಕಣಗಳೊಂದಿಗೆ ಕೂಡಿದೆ. ಅದನ್ನು ಲಕ್ಷ್ಮಿ ಎಂದು ಪರಿಗಣಿಸಲಾಗುವುದು. ಹಾಗಾಗಿ ಉಪ್ಪನ್ನು ಬಹಳ ಕಾಳಜಿಯಿಂದ ನಿರ್ವಹಿಸಬೇಕಾಗುವುದು. ಉಪ್ಪು ನೆಲಕ್ಕೆ ಚೆಲ್ಲುವುದು ಅಥವಾ ಅನಿರೀಕ್ಷಿತವಾಗಿ ಚಲ್ಲಿದರೂ ಅದೊಂದು ದುರಾದೃಷ್ಟ ಎಂದು ಪರಿಗಣಿಸಲಾಗುವುದು. ಉಪ್ಪನ್ನು ಚಲ್ಲಿದರೆ ಅದರಲ್ಲಿ ಇರುವ ಕಣಗಳಷ್ಟೇ ಕಣ್ಣೀರನ್ನು ಚೆಲ್ಲಬೇಕಾಗುವುದು ಎಂದು ಹೇಳಲಾಗುವುದು. ಹಾಗಾಗಿ ಅನಿರೀಕ್ಷಿತವಾಗಿ ಅಥವಾ ಅಚಾನಕ್ಕಾಗಿ ಉಪ್ಪು ನಿಮ್ಮಿಂದ ನೆಲಕ್ಕೆ ಬಿದ್ದರೆ, ಅದನ್ನು ತಕ್ಷಣ ಎತ್ತಿ ನಿಮ್ಮ ಎಡ ಭುಜದ ಮೇಲೆ ಹಾಕಿಕೊಳ್ಳಿ. ಹಾಗೆ ಮಾಡುವುದರಿಂದ ದುರಾದೃಷ್ಟ ಹಾಗೂ ಕೆಟ್ಟ ಶಕ್ತಿಯ ಪ್ರಭಾವವು ನಿಮ್ಮ ಮೇಲೆ ಉಂಟಾಗದು ಎನ್ನುವ ನಂಬಿಕೆಯಿದೆ.

#ಜೇಬಿನಲ್ಲಿ ಉಪ್ಪನ್ನು ಇಟ್ಟುಕೊಳ್ಳಿ

ಉಪ್ಪು ಕೆಡುವಂತಹ ವಸ್ತುಗಳನ್ನು ಹಾಗೂ ದುಷ್ಟ ಶಕ್ತಿ ವಿರುದ್ಧ ಹೋರಾಡುವಂತಹ ಶಕ್ತಿಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿಯೇ ದೆವ್ವ ಮತ್ತು ಭೂತಗಳು ಉಪ್ಪಿಗೆ ಹೆದರುತ್ತವೆ ಎಂದು ಹೇಳಲಾಗುವುದು. ಉಪ್ಪು ದೈವಿಕ ಶಕ್ತಿ ಹೊಂದಿರುವುದರಿಂದ ನಾಶವಾಗುವ ಪರಿಸ್ಥಿತಿ ಹಾಗೂ ವಸ್ತುಗಳನ್ನು ಕಾಪಾಡುವ ಶಕ್ತಿಯನ್ನು ಪಡೆದುಕೊಂಡಿದೆ.

 ದೂರದ ಪ್ರಯಾಣ ಮಾಡುವಾಗ ಅಥವಾ ನಿಮ್ಮ ಇಷ್ಟದ ಸ್ಥಳಗಳಿಗೆ ಹೋಗುವಾಗ ಜೇಬಿನಲ್ಲಿ ಸ್ವಲ್ಪ ಸಮುದ್ರದ ಉಪ್ಪನ್ನು ಕೊಂಡೊಯ್ಯಬೇಕು ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ಪ್ರಯಾಣದಲ್ಲಿ ಉಂಟಾಗುವ ತೊಂದರೆ ಹಾಗೂ ಅಪಘಾತಗಳನ್ನು ತಡೆಯುವುದು ಎಂದು ಹೇಳಲಾಗುವುದು.

#ಉಪ್ಪನ್ನು ಶುಕ್ರವಾರ ಖರೀದಿಸಬೇಕು

ಉಪ್ಪು ಲಕ್ಷ್ಮಿ ದೇವಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಹಾಗಾಗಿ ಮನೆಗೆ ಉಪ್ಪನ್ನು ತರಲು ಅಥವಾ ಖರೀದಿಸಲು ಶುಕ್ರವಾರ ಅತ್ಯಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗುವುದು. ಶುಕ್ರವಾರದಂದು ಉಪ್ಪನ್ನು ಖರೀದಿಸಿ ತಂದು, ಡಬ್ಬದಲ್ಲಿ ವರ್ಗಾಯಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಮನೆಗೆ ಆಗಮಿಸುವಳು. ಹಾಗೆಯೇ ಜೀವನದಲ್ಲಿ ಇರುವ ಆರ್ಥಿಕ ತೊಂದರೆಗಳು ಸುಧಾರಣೆ ಕಾಣುತ್ತವೆ. ಸಾಲ ಬಾಧೆ ಇದ್ದರೆ ನಿವಾರಣೆಯಾಗುವುದು ಎನ್ನುವ ನಂಬಿಕೆಯಿದೆ.

#ನೀರು ಮತ್ತು ಉಪ್ಪು

ನಿತ್ಯವೂ ಮನೆಯನ್ನು ಸ್ವಚ್ಛಗೊಳಿಸುವ ಹಾಗೂ ಒರೆಸುವ ಪ್ರಕ್ರಿಯೆ ಇರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ನಿತ್ಯವೂ ನಾವು ನೆಲ ಒರೆಸುವಾಗ, ನೀರಿಗೆ ಒಂದು ಟೀ ಚಮಚ ಅಥವಾ ಚಿಟಕೆ ಉಪ್ಪನ್ನು ಬೆರೆಸಿ. ನಂತರ ಆ ನೀರಿನ ಸಹಾಯದಿಂದ ಮನೆಯನ್ನು ಒರೆಸಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಹಾಗೂ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎನ್ನುವ ನಂಬಿಕೆಯಿದೆ. ಅಲ್ಲದೆ ಸಾಕಷ್ಟು ರೋಗ ಪೀಡಿತ ಸೂಕ್ಷ್ಮಾಣುಗಳು ನಾಶವಾಗುತ್ತವೆ ಎಂದು ಹೇಳಲಾಗುವುದು.

#ಗಾಜಿನ ಡಬ್ಬದಲ್ಲಿ ಉಪ್ಪು

ಸಾಮಾನ್ಯವಾಗಿ ಪ್ಲಾಸ್ಟಿಕ್ ಡಬ್ಬದಲ್ಲಿ ಉಪ್ಪನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಆದರೆ ಈ ಕ್ರಮವು ತಪ್ಪು. ಇದು ಋಣಾತ್ಮಕ ಶಕ್ತಿಯ ಆಗಮನಕ್ಕೆ ಆಹ್ವಾನ ನೀಡುವುದು. ಹಾಗಾಗಿ ಗಾಜಿನ ಡಬ್ಬದಲ್ಲಿ, ಮಣ್ಣಿನ ಪಾತ್ರೆಯಲ್ಲಿ ಅಥವಾ ಪಿಂಗಾಣಿ ಪಾತ್ರದಲ್ಲಿ ಉಪ್ಪನ್ನು ಸಂಗ್ರಹಿಸಿ ಇಡಬೇಕು. ಇದರಿಂದ ಉಪ್ಪು ಸಹ ಉತ್ತಮ ಗುಣಮಟ್ಟದೊಂದಿಗೆ ದೀರ್ಘ ಸಮಯ ಇರುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸುವುದು ಎನ್ನುವ ನಂಬಿಕೆಯಿದೆ.

#ಮನೆಯಲ್ಲಿ ಶಾಂತಿ

ಕುಟುಂಬದಲ್ಲಿ ಗಂಡ ಹೆಂಡತಿಯ ನಡುವೆ, ಸಹೋದರ-ಸಹೋದರಿಯರ ನಡುವೆ, ಅಪ್ಪ-ಮಗನ ನಡುವೆ, ತಾಯಿ- ಮಗ ಹೀಗೆ ಕುಟುಂಬದಲ್ಲಿ ಇರುವ ಸದಸ್ಯರೇ ಪರಸ್ಪರ ಜಗಳವಾಡುತ್ತಾರೆ, ಮನಃಶಾಂತಿ ನಾಶವಾಗಿದೆ ಅಥವಾ ಮನೆಯಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯ ನಡೆಯುತ್ತಿಲ್ಲ ಎಂದಾದರೆ, ಒಂದು ಪುಟ್ಟ ಗಾಜಿನ ಡಬ್ಬಿಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ, ಮುಚ್ಚಳವನ್ನು ಮುಚ್ಚಿ. ಆ ಡಬ್ಬವನ್ನು ಮಲಗುವ ಕೋಣೆಯಲ್ಲಿ ಅಥವಾ ದೇವ ಮೂಲೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸುವುದು.

#ಉಪ್ಪನ್ನು ವ್ಯರ್ಥ ಮಾಡಬಾರದು

ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಮನೆಗೆ ತರುವುದು ಅಥವಾ ತಂದು ಒಂದೆಡೆ ಸಂಗ್ರಹ ಇಡುವುದು ಮಾಡಬಾರದು. ಅಗತ್ಯಕ್ಕೆ ತಕ್ಕಷ್ಟು ಉಪ್ಪನ್ನು ಮನೆಗೆ ತಂದು ಅದನ್ನು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಆಗ ಲಕ್ಷ್ಮಿ ದೇವಿ ಮನೆಯಲ್ಲಿ ಅಗತ್ಯವಾದ ಸಮೃದ್ಧಿಯನ್ನು ಹೆಚ್ಚಿಸುವಳು ಹಾಗೂ ಮನಸ್ಸಿಗೆ ಸಂತೋಷ ನೀಡುವಳು.ಮನುಷ್ಯ ದಿನ ನಿತ್ಯ ಬಳಸುವ ಆಹಾರ ವಸ್ತುಗಳಲ್ಲಿ ಉಪ್ಪು ಸಹ ಒಂದು. ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಲವಣ ರೂಪಕ್ಕೆ ಉಪ್ಪು ಎಂದು ಕರೆಯುತ್ತೇವೆ. ಉಪ್ಪಿನ ಸಹಾಯದಿಂದ ಕೆಲವು ಆಹಾರ ಪದಾರ್ಥಗಳನ್ನು ವರ್ಷಗಳ ಕಾಲ ಸಂರಕ್ಷಿಸಿ ಇಡಬಹುದು. ಆರೋಗ್ಯಕರ ಗುಣವನ್ನು ಹೊಂದಿರುವ ಉಪ್ಪಿಗೆ ಧಾರ್ಮಿಕ ವಿಷಯಗಳೊಂದಿಗೂ ನಂಟಿದೆ.

ಕೃಪೆ - ಕೃಷ್ಣಾರ್ಪಣ ಮಸ್ತು

ಮಹಾಮೃತ್ಯುಂಜಯ_ಮಂತ್ರ

🌺🌺  #ಮಹಾಮೃತ್ಯುಂಜಯ_ಮಂತ್ರ 🌺🌺

#ಮಹಾಮೃತ್ಯುಂಜಯ ಮಹಾ ಮಂತ್ರವು ಅತ್ಯಂತ ಶಕ್ತಿಶಾಲಿಯಾದ ಮಹಾಮಂತ್ರ ವಾಗಿದೆ .
ಮಾರ್ಕಾಂಡೇಯ ಮಹಾಮುನಿಗಳು ಈ ಮೃತ್ಯುಂಜಯ ಮಂತ್ರವನ್ನು ಪಠಿಸಿ ಮೃತ್ಯುವನ್ನೇ ಗೆದ್ದರು .
ಪ್ರಾಣಕ್ಕೆ ಸಂಚಕಾರ ಬಂದಾಗ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವರು ಬಹಳಷ್ಟು ಜನ . 

🌺🌺🌺
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ ||
ಊರ್ವಾರುಕಮೀವ  ಬಂಧನಾತ್‌ ಮೃತ್ಯೋಮೃಕ್ಷೀಯ ಮಾಮೃತಾತ್‌ ||  🌺🌺🌺

#ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಭಂದ ಹೇಗೆ ಎಂಬುದನ್ನು ತಿಳಿಯೋಣ.||
ಓಂ = ಪ್ರಣವ 
ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ...
ಯಜಾಮಹೇ = ಪೂಜನೀಯನೇ....
ಸುಗಂಧಿಂ = ಸುಗಂಧದಿಂದ ಕೂಡಿದ,
ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ
ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್)  =  ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ಆ ರೀತಿಯಲ್ಲಿ..... 
ಮೃತ್ಯೋಮೃಕ್ಷೀ = ಅಂತಹ ಮೃತ್ಯುವಿನಿಂದ, ಮುಕ್ತಿ ದೊರೆಯಲಿ.
ಮಾಮೃತಾತ್ = ಅಮೃತತ್ವವನ್ನು ಪಡಯುವಂತಾಗಲಿ.

ಇಲ್ಲಿ "ಊರ್ವಾರು ಕಮಿಕ" ಬಂಧನದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ. ಆ ಅದ್ಭುತ ವಿವರಣೆಯನ್ನು ನೋಡೋಣ.

#ಪರಶಿವನೇ

ಈ ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟು ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ, ಅದೇ ರೀತಿಯಲ್ಲಿ ಈ ಲೌಕಿಕ ಜಗತ್ತಿನೊಂದಿಗಿನ ನಮ್ಮ ಬಂಧನವು ಸಾಕು ಎಂಬ ಅರ್ಥ ಅಧ್ಬುತ.

 🌺🌺 ಅದು ಹೇಗೆಂಬುದನ್ನು ನೋಡೋಣ 🌺🌺

ನಾವು ಇಲ್ಲಿ ಗಮನಿಸಬೇಕಾದದ್ದು, ಗಿಡದ ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳಿಗೂ ಮತ್ತು ಅದೇರೀತಿ ಬಳ್ಳಿಯಿಂದ ಬೆಳೆಯುವ  ಸೌತೆಕಾಯಿಗೂ  ಕಾಣುವ ವ್ಯತ್ಯಾಸ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಾಗ......!

1. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವಾಗ, ಕಾಯಿಯ ಜೊತೆ ಬಳ್ಳಿಯ ತೊಟ್ಟು ಅಂಟಿಕೊಂಡು ಬರುವುದಿಲ್ಲ, ಅದು ಗಿಡದ ಬಳ್ಳಿಯೊಂದಿಗೆ ಗಿಡದಲ್ಲೇ ಉಳಿಯುತ್ತದೆ. 

2. ಆದರೆ, ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳು ಬಳ್ಳಿಯ ತೊಟ್ಟು ಕಾಯಿಯೊಂದಿಗೆ ಗಟ್ಟಿಯಾಗಿ ಅಂಟಿಕೊಂಡಿವುದನ್ನು ನಾವು ಗಮನಿದ್ದೇವೆ. 

3. ಗಿಡದ ಬಳ್ಳಿಯಿಂದ ಉತ್ಪತ್ತಿಯಾದ
ತರಕಾರಿಗಳನ್ನು ಮಾರುಕಟ್ಟೆಯಿಂದ ತರುವಾಗ ಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ ಮುಂತಾದವುಗಳು ತೊಟ್ಟಿನ ಸಮೇತ ಕೊಳ್ಳುತ್ತೇವೆ. ಆದರೆ ತೊಟ್ಟಿನೊಂದಿಗೆ ಇರುವ ಸೌತೆಕಾಯಿ ಮಾರುಕಟ್ಟೆಯಲ್ಲಿ ದೊರೆಯುವುದು ಅತಿ ವಿರಳ..!

ಕಾರಣ....!  ಸೌತೆಕಾಯಿ ಮತ್ತು ಅದರ ಗಿಡದ ಬಳ್ಳಿಯ  ಸಂಭಂದ ಬಹಳ ಸೂಕ್ಷ್ಮ. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸು ಸಮಯದಲ್ಲಿ, ಕಾಯಿಯೊಂದಿಗೆ  ಅಂಟಿಕೊಂಡಿದ್ದ ಅದರ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ ಎನ್ನುವ ಅಧ್ಬುತವಾದ ವಿವರಣೆ. ಅದೇ ರೀತಿಯಲ್ಲಿ ಲೌಕಿಕ ಜಗತ್ತಿನ ನಮ್ಮ ಬಂಧನಗಳು ಇರಬೇಕು ಎಂಬ ಸಂದೇಶ.

ಮೃತ್ಯುಂಜಯ ಮಂತ್ರವನ್ನು ಪ್ರತಿದಿನವೂ ಹೇಳುವುದು ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಅರ್ಥ.

ಇದನ್ನೇ ಗುರು ದ್ರೋಣಾಚಾರ್ಯರೂ ಸಹಾ....
"ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ, ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಲಂ "  ಎಂದು ತಿಳಿಸಿದ್ದು.
ಮಾನವರಾಗಿ ಜನಿಸಿದ ನಾವು ಈ ಲೌಕಿಕ ಜಗತ್ತಿನೊಂದಿಗೆ ಅತಿ ಸೂಕ್ಷ್ಮವಾದ, ಕನಿಷ್ಠ ಮೋಹದ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ಅತಿಯಾದ ಗಟ್ಟಿ ಬಂಧನಗಳಿಗೆ ಅಂಟಿಕೊಂಡಾಗ, ಅನಭವಿಸುವ ನೋವೇ ಹೆಚ್ಚು .

ಪ್ರಾಣಕ್ಕೆ  ಆಪತ್ತು ಬಂದಾಗ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ . 

ಸರ್ವಂ ಶಿವಾರ್ಪಣ ಮಸ್ತು .

#ಹಿಂದೂ_ಧರ್ಮ_ಶಾಸ್ತ್ರ_ಪುರಾಣಗಳ ಪ್ರಕಾರ ಮಹಿಳೆಯರು ಮತ್ತು ಪುರುಷರು ಮಾಡಬಹುದಾದ ಮತ್ತು ಮಾಡಬಾರದ ಕೆಲಸಗಳು

#ಹಿಂದೂ_ಧರ್ಮ_ಶಾಸ್ತ್ರ_ಪುರಾಣಗಳ ಪ್ರಕಾರ ಮಹಿಳೆಯರು ಮತ್ತು ಪುರುಷರು  ಮಾಡಬಹುದಾದ ಮತ್ತು  ಮಾಡಬಾರದ ಕೆಲಸಗಳು ಯಾವುವು ಎಂದು ಈ ಕೆಳಗೆ ತಿಳಿಸ ಲಾಗಿದೆ .

ನಮಗೆ ಗೊತ್ತೋ ಇಲ್ಲ ಗೊತ್ತಿಲ್ಲದೆಯೋ ಹಲವಾರು ತಪ್ಪು ಕೆಲಸಗಳನ್ನು ಮಾಡಿ ಬಿಡುತ್ತೇವೆ . ಆಗಲೇ ನಮಗೆ ದಾರಿದ್ರ್ಯಾ ಮತ್ತು ಸಂಕಷ್ಟಗಳು ಬರುವುದು .

ಅದಕ್ಕಾಗಿ ಈ ಕೆಳಗಿನ ಅಂಶಗಳನ್ನು ಸದಾ ಪಾಲಿಸಿ ಕಷ್ಟಗಳಿಂದ ಪಾರಾಗಿ . 

#ನಮ್ಮ_ಪುರಾಣಗಳಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಅದೇ ರೀತಿ ಆಚಾರ ವಿಚಾರ ಸಂಪ್ರದಾಯಗಳನ್ನು ಹೇಗೆ ಪಾಲಿಸಬೇಕು, ಏನು ಮಾಡಿದರೆ ಏನು ಪ್ರಯೋಜನವಾಗುತ್ತದೆ ಎಂಬಂತಹ ಸಂಗತಿಗಳನ್ನು ಹೇಳಲಾಗಿದೆ. ಅದೇ ರೀತಿ ಮಹಿಳೆಯರಿಗೂ ಸಾಕಷ್ಟು ಸೂಚನೆಗಳು ಪುರಾಣಗಳಲ್ಲಿ ಸಿಗುತ್ತವೆ. ಮುಖ್ಯವಾಗಿ ಮಹಿಳೆಯರು ಮಾಡಬಹುದಾದ ಹಾಗೂ ಮಾಡಬಾರದ ಕೆಲಸಗಳು ಯಾವುದು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಿದ್ದರೆ ಅವು ಏನು ಎಂದು ನೋಡೋಣ ಬನ್ನಿ…...

#ಮಹಿಳೆಯರು ಯಾವುದೇ ಕಾರಣಕ್ಕೂ ಕುಂಬಳಕಾಯಿ ಒಡೆಯಬಾರದು. ಯಾಕೆಂದರೆ ಗರ್ಭಚೀಲ ಕೆಳಕ್ಕೆ ಜಾರುವ ಅವಕಾಶಗಳು ಹೆಚ್ಚಾಗಿರುತ್ತವೆ .

#ಗ್ರಹಣ ಸಂದರ್ಭದಲ್ಲಿ ಭೂಮಿಯ ಆಕರ್ಷಣೆ ಶಕ್ತಿಯಲ್ಲಿ ಬದಲಾವಣೆ ಆಗುತ್ತದೆ. ಅದರ ಪ್ರಭಾವ ನಮ್ಮ ಮೇಲೂ ಇರುತ್ತದೆ. ಮುಖ್ಯವಾಗಿ ನಮ್ಮ ಹೊಟ್ಟೆಯಲ್ಲಿನ ಆಹಾರ ಪದಾರ್ಥಗಳು ಜೀರ್ಣವಾಗಲು ಬೇಕಾದ ಆಮ್ಲಗಳು ಬಿಡುಗಡೆಯಾಗಲ್ಲ. ಹಾಗಾಗಿ ಜೀರ್ಣವಾಸುಖಿನೋಭವಂತು
ಕಾರಣದಿಂದಲೇ ಗ್ರಹಣಕ್ಕೂ ಮುನ್ನ ಮೊದಲ ಮೂರು ಗಂಟೆಗಳ ಮೊದಲೇ ನಮ್ಮ ಹೊಟ್ಟೆಯಲ್ಲಿ ಏನೂ ಇರಬಾರದು ಎನ್ನುತ್ತಾರೆ. 

#ನಿಮ್ಮ ಗಂಡ ಮತ್ತು ಮಕ್ಕಳು ಮಂಗಳವಾರದ ದಿನ ಕ್ಷೌರ ಗಡ್ಡವನ್ನು ಕೆರೆದುಕೊಳ್ಳುವಂತಹ ಕೆಲಸ ಮಾಡಲು ಬಿಡಬೇಡಿ. ಈ ಪ್ರಕ್ರಿಯೆ ದರಿದ್ರವನ್ನು ಉಂಟು ಮಾಡುತ್ತದೆ.

#ಒಳ್ಳೆಯ ಕೆಲಸಗಳನ್ನು ಶುಕ್ಲಪಕ್ಷದಿಂದ ಅಂದರೆ ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಮಾಡಬೇಕು.

#ದಿಂಬಿನ ಮೇಲೆ ಕೂರಬಾರದು. ಆದರೆ ಈ ಕಾಲದಲ್ಲಿ ಎಲ್ಲರೂ ಇದನ್ನು ಮಾಡುತ್ತಿದ್ದಾರೆ.

#ದುಃಖ ವಿಚಾರಿಸಲು ಬಂದವರನ್ನು ಆಹ್ವಾನಿಸಬಾರದು ಅದೇ ರೀತಿ ಅವರು ಹೋಗುವಾಗ ಹೋಗಿಬರುತ್ತೇನೆ ಎಂದು ಹೇಳಬಾರದು. ಈ ನಡುವೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬನ್ನಿ ಎಂದು ಆಹ್ವಾನಿಸಿ ಸ್ಥಳ ಕೊಟ್ಟು ಕೂರಿಸಿ ಕಾಫಿ ಕೊಟ್ಟು ತುಂಬಾ ಅತಿಥಿ ಮರ್ಯಾದೆಗಳನ್ನು ಮಾಡುತ್ತಿದ್ದಾರೆ. ಪರೋಕ್ಷವಾಗಿ ನಾವು ಅಶುಭವನ್ನು ಕೋರಿಕೊಳ್ಳಲು ಇದು ನಾಂದಿ ಆಗುತ್ತದೆ.

#ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಅದಕ್ಕೆ ಸ್ವಲ್ಪ ಅರಿಶಿಣವನ್ನು ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚಬೇಕು. ಅರಿಶಿಣ ಕ್ರಿಮಿನಾಶಕ.

#ಒಬ್ಬರು ಧರಿಸಿದ ಹೂವನ್ನು ಇನ್ನೊಬ್ಬರು ಧರಿಸಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೆಲಸ ಬಹಳಷ್ಟು ಕಡೆ ಸಹಜವಾಗಿದೆ.

#ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬೇಡಿ. ಇತ್ತೀಚೆಗೆ ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸುವವರ ಸಂಖ್ಯೆ ಅಧಿಕವಾಗುತ್ತಿದೆ.

#ಉಪ್ಪು, ಹುಣಸೆಹಣ್ಣು ಇವುಗಳನ್ನು ಯಾರಿಗೆ ಕೊಟ್ಟರೂ ಕೈಗೆ ಕೊಡಬಾರದು. ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಉಪ್ಪನ್ನು ಕೈಯಾರೆ ಬಡಿಸುವುದನ್ನು ಗಮನಿಸುತ್ತಿದ್ದೇವೆ.

#ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನ ಇಡಿ. ಇದು ಪಿತೃದೇವತೆಗಳಿಗೆ ಪ್ರೀತಿ. ಕಾಗೆಗೆ ನಾವು ಊಟ ಮಾಡುವ ಮುನ್ನ,  ನಾಯಿಗೆ ಊಟ ಮಾಡಿದ ಬಳಿಕ ಇಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ನಾಯಿಗಳನ್ನು ಮುದ್ದಾಗಿ ಬೆಳೆಸಿ ಅದಕ್ಕೆ ಎಲೆಯಲ್ಲಿ ಊಟ ಇಡುವುದು ಹೆಚ್ಚಾಗಿದೆ.

#ತೆಂಗಿನ ಚಿಪ್ಪು ತಾಂಬೂಲ ನೀಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಇತರರಿಗೆ ಕೊಡಬೇಕು.

#ಮಹಿಳೆಯರು ಯಾವಾಗಲೂ ಕೂದಲು ಬಿಟ್ಟುಕೊಂಡು ಇರಬಾರದು. ಇದು ಜ್ಯೇಷ್ಠಾದೇವಿ ಸ್ವರೂಪ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲು ವಿಘ್ನವಾಗುತ್ತದೆ.

#ಶುಕ್ರವಾರದ ದಿನ ಸಂಬಳ ಬಂದ ಕೂಡಲೆ ಆ ಹಣದಿಂದ ಮೊದಲು ಉಪ್ಪನ್ನು ಕೊಳ್ಳಬೇಕು. ಈ ಕ್ರಿಯೆಯಿಂದ ಮುಂದೆಮುಂದೆ ಹಣ ಹೆಚ್ಚಾಗಿ ಬರುವ ಸಾಧ್ಯತೆಗಳಿರುತ್ತದೆ.

#ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು, ಕಾಲು ಅಲುಗಾಡಿಸುತ್ತಾ ಕೂರುವುದು, ಒಂಟಿಕಾಲಿನಲ್ಲಿ ನಿಲ್ಲುವುದು, ಸ್ಥಿರವಾಗಿ ನಿಲ್ಲದೆ ಅಲ್ಲಾಡುತ್ತಿರುವಂತಹ ಕೆಲಸಗಳನ್ನು ಮಾಡಬಾರದು. ಇದರಿಂದ ದರಿದ್ರ ಉಂಟಾಗುತ್ತದೆ. ಅದೇ ರೀತಿ ಆ ಭಾಗ ಬಲಹೀನವಾಗುವ ಸಾಧ್ಯತೆಗಳೂ ಇವೆ.

#ಯಾವಾಗಲೂ ಕೊಟ್ಟು ತಗೊಳ್ಳಲು ಬಲಗೈಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಎಡಗೈಯನ್ನು ಬಳಸಬಾರದು.

#ಸುಮಂಗಲಿ ಸ್ತ್ರೀಯರು ಮುನಿಸಿಕೊಂಡು ರಾತ್ರಿ ಹೊತ್ತು ಊಟ ಮಾಡದೆ ಮಲಗಬಾರದು.
ಮಹಿಳೆಯರು ಮುಟ್ಟಾದಾಗ ಹೂವನ್ನು ಇಟ್ಟುಕೊಳ್ಳಬಾರದು.

#ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದು. ಅದಕ್ಕೆ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು.

#ಯಾವಾಗಲೂ ನಮ್ಮ ಬಾಯಲ್ಲಿ ಪೀಡೆ, ದರಿದ್ರ, ಶನಿ, ಕಷ್ಟ ಎಂಬ ಪದಗಳನ್ನು ಜಾಸ್ತಿ ಉಪಯೋಗಿಸಬಾರದು.
ಮನೆಯಲ್ಲಿ ಧೂಳು, ಕಸ, ಜೇಡರ ಬಲೆ ಕಟ್ಟುವುದು ದರಿದ್ರ. ಹತ್ತು ದಿನಗಳಿಗೆ ಒಮ್ಮೆ , ಮಂಗಳ ಶುಕ್ರವಾರ ಅಲ್ಲದೆ ಬೇರೆ ದಿನಗಳಲ್ಲಿ ಧೂಳು, ಗೂಡುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

#ಶ್ರಾದ್ಧ ದಿನದಂದು ಮನೆಯ ಮುಂದೆ ರಂಗೋಲಿ ಹಾಕಬಾರದು. ಶ್ರಾದ್ಧದ ಬಳಿಕ ರಂಗೋಲಿ ಹಾಕಿ ಬಳಿಕ ಮನೆಯವರು ಊಟ ಮಾಡಬೇಕು.

#ದಿಂಬಿನ ಕವರ್, ಬೆಡ್ ಶೀಟ್‌ಗಳನ್ನು ಆಗಾಗ ಒಗೆಯುತ್ತಿರಬೇಕು. ಇವುಗಳಲ್ಲಿ ನಮಗೆ ಗೊತ್ತಿಲ್ಲದ ಸೂಕ್ಷ್ಮ ಕ್ರಿಮಿಗಳು ಸಾಕಷ್ಟು ಇರುತ್ತವೆ. ಇದರಿಂದ ನಮಗೆ ಹಾನಿಯುಂಟಾಗುತ್ತದೆ . 
  
               

#ಸರ್ವಂ_ಶ್ರೀ_ಕೃಷ್ಣಾರ್ಪಣ_ಮಸ್ತು 

🌺🌺🌺🌺🌺🌺🌺🌺🌺🌺🌺🌺🌺🌺🌺🌺

ನೂರ ಎಂಟು ಸಂಖ್ಯೆಯ ಜಪದ ವಿಶೇಷ

🌺 #ನೂರ ಎಂಟು ಸಂಖ್ಯೆಯ ಜಪದ ವಿಶೇಷ 🌺

ನಾವು ಜಪ ಮಾಡಬೇಕಾದರೆ ಪಂಚಾಕ್ಷರಿ ಮಂತ್ರವಾಗಲಿ ಗಾಯತ್ರಿ ಮಂತ್ರ ವಾಗಲಿ ಯಾವುದೇ ಮಂತ್ರವಾಗಲಿ ಜಪ ಸಂಖ್ಯೆ 108 ಇಲ್ಲವೆ 1008 ಸಂಖ್ಯೆಯಲ್ಲಿ ಜಪ ಮಾಡುತ್ತೇವೆ ಯಾಕೆ ಎಂದು ತಿಳಿಯೋಣ .

ಮೂಲಾಧಾರ ಚಕ್ರದಲ್ಲಿ 4 ದಳ

ಸ್ವಾಧಿಷ್ಟಾನ ಚಕ್ರದಲ್ಲಿ 6 ದಳ

ಮಣಿಪೂರ ಚಕ್ರದಲ್ಲಿ 10 ದಳ

ಅನಾಹತ ಚಕ್ರದಲ್ಲಿ 12 ದಳ

ವಿಶುದ್ಧ ಚಕ್ರದಲ್ಲಿ 16 ದಳ

ಆಜ್ಞಾ ಚಕ್ರದಲ್ಲಿ 2 ದಳ

ಸಹಸ್ರಾರ ಚಕ್ರದಲ್ಲಿ ಪ್ರಮುಖವಾಗಿ 8 ದಳ (ಪ್ರತಿ ಒಂದೊಂದು ದಳದಲ್ಲಿ ಸೂಕ್ತವಾಗಿ 125 ದಳ ಹೀಗೆ 8×125 = 1000 ಆಗುತ್ತದೆ.)

ಮೂಲಾಧಾರದಿಂದ 4+6+ 10+12+16+2+8ಸಹಸ್ರಾರದವರೆಗೆ ಹಾಗೇ ಮತ್ತೆ ಕೆಳಮುಖವಾಗಿ 2+16+12+10+6+4 = 108 ಆಗುತ್ತದೆ! ಹೀಗೆ ಜಪದ ಮೂಲಕ ನಮ್ಮ ಪ್ರಜ್ಞೆಯನ್ನು ಮೂಲಾಧಾರದಿಂದ ಸಹಸ್ರಾರದವರೆಗೆ ಒಮ್ಮೆ ಏರಿಳಿಸಿದರೆ ಒಂದು ಸುತ್ತು ಜಪ ಆಗುತ್ತದೆ. ಇದು ನರಮಂಡಲಕ್ಕೆ ಮನಸ್ಸಿಗೆ ತುಂಬಾ ಪರಿಣಾಮಕಾರಿ ವಿಧಾನ.

ನಿಮಗೆ ಇಷ್ಟವಾದ ಯಾವುದಾದರೂ ದೇವರನಾಮವನ್ನು ಪ್ರತಿದಿನ ಒಂದು ಸುತ್ತು ಅಥವಾ ಅದಕ್ಕಿಂತ ಹೆಚ್ಚು (ನಿಮ್ಮ ಶಕ್ತ್ಯಾನುಸಾರವಾಗಿ) ಜಪಮಾಲೆಯನ್ನು ಹಿಡಿದು ಜಪಮಾಡಿ ನೋಡಿ.

ಶ್ರೀ ಕೃಷ್ಣಾರ್ಪಣ ಮಸ್ತು 🌺🌺🌺

ಒಣ ಹುಲ್ಲಿಗೆ ದರ್ಬೆ ಎಂಬ ಪವಿತ್ರ ಸ್ಥಾನ ಬಂದಿದ್ದು ಹೇಗೆ ಗೊತ್ತೆ 🌺🌺

🌺🌺 ಒಣ ಹುಲ್ಲಿಗೆ ದರ್ಬೆ ಎಂಬ ಪವಿತ್ರ ಸ್ಥಾನ ಬಂದಿದ್ದು ಹೇಗೆ ಗೊತ್ತೆ 🌺🌺

ಭಾರತೀಯ ಸಂಪ್ರದಾಯಗಳಲ್ಲಿ ಜರುಗುವ ಶುಭ ಸಮಾರಂಭಗಳಲ್ಲಿ ದರ್ಭೆಗೆ ಅತಿ ಹೆಚ್ಚು ಶ್ರೇಷ್ಟತೆ ಇದೆ. ಶುಭ ಕಾರ್ಯಕ್ರಮಗಳಲ್ಲಷ್ಟೇ ಅಲ್ಲದೇ ಗ್ರಹಣದ ಸಂದರ್ಭಗಳಲ್ಲೂ ದರ್ಬೆ ಅತ್ಯಂತ ಮುಖ್ಯವಾದ ವಸ್ತು. ಆದ್ದರಿಂದಲೇ ದರ್ಭೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಹಿರಿಯರು ಕೊಟ್ಟಿದ್ದಾರೆ.

ದರ್ಬೆಗೆ " ಪವಿತ್ರ " ಎಂಬ ಹೆಸರೂ ಇದೆ. ಈ ಹೆಸರು ಬರಲು ಸಮುದ್ರ ಮಂಥನದ ಭಾಗವಾದ ಪೌರಾಣಿಕ ಕಥೆಯೊಂದು ಕಾರಣವಾಗಿದೆ. ಯಾವುದು ಗೊತ್ತೆ…?

🐍 ಕದ್ರು ಮತ್ತು ವಿನುತೆ ಯ ಕಥೆ 🐍

ಕದ್ರು ಮತ್ತು ವಿನುತೆ ಕಶ್ಯಪನ ಪತ್ನಿಯರು. ಕದ್ರುವಿಗೆ ಸಾವಿರಾರು ಸರ್ಪಪುತ್ರರು. ವಿನತೆಗೆ ಅರುಣ( ಸೂರ್ಯನ ಸಾರಥಿ) ಹಾಗೂ ಗರುಡ( ವಿಷ್ಣುವಿನ ವಾಹನ, ವೈನತೇಯ) ನೆಂಬ ಇಬ್ಬರು ಪುತ್ರರು. ಕದ್ರುವಿಗೆ ವಿನತೆಯನ್ನು ತನ್ನ ದಾಸಿ ಮಾಡಿಕೊಳ್ಳಬೇಕೆಂದು ತೀರ್ಮಾನಿಸುತ್ತಾಳೆ. ಹಾಗಾಗಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಕದ್ರುವಿಗೆ ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿದ ಬಿಳಿ ಕುದುರೆ ಉಚ್ಚೈಶ್ರವಸ್ ಇಂದ್ರ ಲೋಕಕ್ಕೆ ಹಾದು ಹೋಗುವಾಗ ತಾವು ವಾಸಿಸುತ್ತಿರುವ ಪ್ರದೇಶಕ್ಕೆ ಹತ್ತಿರದಲ್ಲೇ ಸ್ಪಷ್ಟವಾಗಿ ಗೋಚರಿಸಲಿದೆ ಎಂಬುದು ತಿಳಿಯುತ್ತದೆ. ಇದನ್ನೇ ಸರಿಯಾದ ಸಮಯ ಎಂದು ತಿಳಿದ ಕದ್ರು ವಿನತೆಯೊಂದಿಗೆ ಉಚ್ಚೈಶ್ರವಸ್ ಬಾಲದ ಬಣ್ಣದ ಕುರಿತಾಗಿ ವಾಗ್ವಾದ ನಡೆಸಿ ಬಿಳಿ ಕುದುರೆಯ ಬಾಲ ಸಂಪೂರ್ಣ ಕಪ್ಪು ಬಣ್ಣದಲ್ಲಿದೆ ಎಂದು ಹೇಳುತ್ತಾಳೆ. ಇಬ್ಬರ ನಡುವೆ ವಾದ ನಡೆಯುತ್ತದೆ. ಇಬ್ಬರೂ ಸೋತವರು ಗೆದ್ದವರ ದಾಸಿಯಾಗಬೇಕೆಂದು ಒಪ್ಪಂದಕ್ಕೆ ಬರುತ್ತಾರೆ.

ಕದ್ರು ತನ್ನ ಉದ್ದೇಶ ಸಾಧಿಸಿಕೊಳ್ಳಲು ಕುದುರೆಯ ಬಾಲವನ್ನು ಕಪ್ಪು ಬಣ್ಣದಲ್ಲಿರುವಂತೆ ತೋರಿಸಲು ತನ್ನ ಸಾವಿರಾರು ಸರ್ಪಪುತ್ರರನ್ನು ಕರೆದು ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಹೇಳುತ್ತಾಳೆ. ಆದರೆ ಮೊದಲ ಪುತ್ರ ವಾಸುಕಿ ಸೇರಿದಂತೆ ಪ್ರಾರಂಭದಲ್ಲಿ ಯಾರೂ ಸಹ ಕದ್ರುವಿನ ಮಾತನ್ನು ಕೇಳಲಿಲ್ಲ. ಕುಪಿತಗೊಂಡ ಕದ್ರು ಜನಮೇಜಯ ರಾಜ ನಡೆಸುವ ಸರ್ಪ ಯಜ್ಞದಲ್ಲಿ ಬಿದ್ದು ಸಾಯಿರಿ ಎಂದು ಶಾಪ ಕೊಟ್ಟಳು. ಶಾಪದಿಂದ ಹೆದರಿದ ಸರ್ಪಗಳು ಕದ್ರು ಹೇಳಿದಂತೆಯೇ ಮಾಡಲು ಮುಂದಾಗುತ್ತವೆ. ಅಂತೆಯೇ ಉಚ್ಚೈಶ್ರವಸ್ ತಮ್ಮ ವಾಸ ಪ್ರದೇಶದ ಹತ್ತಿರಕ್ಕೆ ಬರುವ ಮುನ್ನವೇ ತಾಯಿ ಹೇಳಿದಂತೆ ಕುದುರೆಯ ಬಾಲಕ್ಕೆ ಗಂಟು ಹಾಕಿಕೊಳ್ಳುತ್ತವೆ.

 ಉಚ್ಚೈಶ್ರವಸ್ ಬರುವ ವೇಳೆಗೆ ಸರ್ಪಗಳು ಸುತ್ತಿಕೊಂಡ ಅದರ ಬಾಲ ಕಪ್ಪು ಬಣ್ಣದಲ್ಲಿ ಕಾಣಿಸುತ್ತಿರುತ್ತದೆ. ಒಪ್ಪಂದದ ಪ್ರಕಾರ ವಿನತೆ ಕದ್ರುವಿನ ದಾಸಿಯಾಗುತ್ತಾಳೆ. ಇದೇ ಸಂದರ್ಭದಲ್ಲಿ ವಿನತೆಯ ಎರಡನೇ ಪುತ್ರ ಗರುಡ, ವೈನತೇಯ ಜನಿಸುತ್ತಾನೆ. ಆತ ಮಹಾಶಕ್ತಿ ಶಾಲಿ, ಇಂದ್ರನಿಗಿಂತಲೂ ಶಕ್ತಿಶಾಲಿಯಾದವನನ್ನು ತಯಾರಿಸುತ್ತೇವೆ ಎಂಬ ವಾಲಖಿಲ್ಯ ಮಹರ್ಷಿಗಳ ಸಂಕಲ್ಪದ, ತಪಸ್ಸಿನ ಅನುಗ್ರಹದಿಂದ ಹುಟ್ಟಿದಾತ. ಆದ್ದರಿಂದಲೇ ಆತನಿಗೆ ಖಗೇಂದ್ರ (ಪಕ್ಷಿಗಳ ರಾಜ ಎಂಬ ಹೆಸರು) ತಾಯಿ ಹಾಗೂ ತನ್ನ ದಾಸ್ಯವನ್ನು ಕಂಡು ಬೇಸರಗೊಂಡ ವೈನತೇಯ ಸರ್ಪಗಳೊಂದಿಗೆ ಸಮಾಲೋಚನೆ ನಡೆಸಿ ದಾಸ್ಯದಿಂದ ಮುಕ್ತಿ ಪಡೆಯಲು ಏನು ಮಾಡಬೇಕೆಂದು ಕೇಳುತ್ತಾನೆ.

ಸಮುದ್ರ ಮಂಥನದಿಂದ ಅಮೃತವನ್ನು ತಂದು ಕೊಟ್ಟರೆ ದಾಸ್ಯದಿಂದ ಮುಕ್ತಗೊಳಿಸುವುದಾಗಿ ತಿಳಿಸುತ್ತಾರೆ. ದಾಸ್ಯದಿಂದ ಮುಕ್ತಿ ಪಡೆಯಲು ವೈನತೇಯ ಅಮೃತವನ್ನು ರಕ್ಷಿಸಲು ಇಂದ್ರ ನಿಯೋಜಿಸಿದ್ದ ಸರ್ಪಗಳನ್ನು ವಧಿಸಿ, ಅಮೃತ ಕುಂಭವನ್ನು ಹೊತ್ತುಕೊಂಡು ಹೊರಡುತ್ತಾನೆ. ಮಾರ್ಗ ಮಧ್ಯದಲ್ಲಿ ಇಂದ್ರ ಪ್ರತ್ಯಕ್ಷನಾಗಿ ವಜ್ರಾಯುಧ ಪ್ರಯೋಗಿಸುತ್ತಾನೆ. ಆದರೂ ವಜ್ರಾಯುಧವೂ ಸಹ ವೈನತೇಯನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಮೃತವನ್ನು ತೆಗೆದುಕೊಂಡು ಹೋಗಿ ಯಾರು ಯಾರಿಗೋ ಕೊಡದಂತೆ ಇಂದ್ರ ವೈನತೇಯನಲ್ಲಿ ಮನವಿ ಮಾಡುತ್ತಾನೆ. 

ತನಗೆ ಅಮೃತ ಬೇಕಿರುವುದು ಸ್ವಾರ್ಥಕ್ಕಾಗಿ ಅಲ್ಲ ತಾಯಿಯನ್ನು ದಾಸ್ಯದಿಂದ ಮುಕ್ತಗೊಳಿಸಲು. ನಾನು ಸರ್ಪಗಳ ಮುಂದಿಟ್ಟ ಮೇಲೆ ಅಮೃತವನ್ನು ನೀನೇ ತೆಗೆದುಕೊಂಡು ಹೋಗು ಎಂದು ವೈನತೇಯ ಇಂದ್ರನಿಗೆ ಹೇಳುತ್ತಾನೆ. ಇತ್ತ ವೈನತೇಯ ಅಮೃತಕಲಶವನ್ನು ನಾಗಗಳಿಗೆ ಕೊಟ್ಟು ತನ್ನ ತಾಯಿಯನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದನು.

 ಸರ್ಪಗಳು ಸ್ನಾನ ಮಾಡಿಕೊಂಡು ಅಮೃತವನ್ನು ಸ್ವೀಕರಿಸಲು ಬರುವ ಹೊತ್ತಿಗೆ ಇಂದ್ರ ದರ್ಭೆಯ ಮೇಲೆ ಇಟ್ಟಿದ್ದ ಅಮೃತ ಕುಂಭವನ್ನು ತೆಗೆದುಕೊಂಡು ಹೋಗಿದ್ದ. ಹತಾಷಗೊಂಡ ನಾಗಗಳು ಅಮೃತವು ಸೋರಿ ದರ್ಭೆಯ ಮೇಲೆ ಬಿದ್ದಿರಬಹುದೆಂದು ಆ ದರ್ಭೆಯನ್ನು ನೆಕ್ಕಿದವು. ಹಾಗೆ ಮಾಡಿದ್ದರಿಂದ ನಾಗಗಳ ನಾಲಿಗೆ ಸೀಳಿತು. ಅಮೃತದ ಕುಂಭದ ಸ್ಪರ್ಷವಾಗಿದ್ದರಿಂದ ದರ್ಭೆಗೆ ಅಂದಿನಿಂದ ಪವಿತ್ರ ಎಂಬ ಹೆಸರು ಬಂತೆಂಬ ಉಲ್ಲೇಖವಿದೆ...

🌺🌺🌺🌺🌺🌺🌺🌺🌺🌺🌺🌺
🌺🌺  #ಶ್ರೀ #ಮಹಾಲಕ್ಷ್ಮೀ #ಅಷ್ಟಕಮ್ 🌺🌺

🌺  ನಮಸ್ತೇಸ್ಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ||
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺 ಭಾವಾರ್ಥ :- ಹೇ ಮಹಾಮಯಾರೂಪಿಣಿಯೇ! ಸೌಭಾಗ್ಯದ ಗದ್ದುಗೆಯ  ಮೇಲೆ ವಿರಾಜಿಸುವವಳೇ, ದೇವಾನುದೇವತೆಗಳಿಂದ ಪೂಜಿಸಿಕೊಂಬವಳೇ;  ನಿನಗೆ ನಮಸ್ಕರಿಸುವೆ. ಹೇ! ಶಂಖ, ಚಕ್ರ, ಗಧೆಗಳನ್ನು  ಧರಿಸಿರುವಾಕೆಯೇ, ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌺 ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ ||
ಸರ್ವಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺ಭಾವಾರ್ಥ:- ಹೇ ದೇವಿ ಗರುಢ ವಾಹನೆಯೇ! ಕೋಲನೆಂಬ ರಕ್ಕಸನನ್ನು  ನಾಶಗೊಳಿಸಿದವಳೇ, ನಿನಗಿದೋ ನಮಸ್ಕಾರಗಳು. ಎಲ್ಲಾ ಪಾಪಗಳನ್ನು  ನಾಶ ಮಾಡುವ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌺 ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ ||
ಸರ್ವ ದು:ಖಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺 ಭಾವಾರ್ಥ:- ಹೇ! ದೇವಿ; ಸಮಸ್ತವನ್ನೂ ಬಲ್ಲಾಕೆಯೇ, ಎಲ್ಲವನ್ನೂ ಅನುಗ್ರಹಿಸುವಾಕೆಯೇ, ದುಷ್ಟರಿಗೆ ಭಯಂಕರ  ರೂಪಿಣಿಯೂದವಳೇ, ಸಮಸ್ತ ದು:ಖವನ್ನು ಪರಿಹರಿಸುವವಳೇ, ದೇವಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌺ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ||
ಮಂತ್ರಮೂರ್ತೇ ಸದಾ ದೇವೀ ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺 ಭಾವಾರ್ಥ:- ಹೇ ದೇವಿ; ಸಿದ್ಧಿ ಹಾಗೂ ಬುದ್ಧಿಗಳನ್ನು  ಕರುಣಿಸುವವಳೇ, ಭೋಗ ಮತ್ತು ಮುಕ್ತಿಯನ್ನು  ದಯಪಾಲಿಸುವಾಕೆಯೇ, ಮಂತ್ರಗಳಲ್ಲಿ ಅನುದಿನವೂ ನೆಲೆಸಿರುವವಳೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌺 ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ ||
ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺 ಭಾವಾರ್ಥ:- ಆದಿಯೂ ಅಂತ್ಯವೂ ಇಲ್ಲದಿರುವ ದೇವಿಯೇ, ಆದಿಶಕ್ತಿಯೇ, ಮಹೇಶ್ವರಿಯೇ, ಯೋಗವನ್ನು ಕರುಣಿಸುವಾಕೆಯೇ,  ಯೋಗಮಾಯೆಯಿಂದ ಜನಿಸಿದಾಕೆಯೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌺 ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ || 
ಮಹಾಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺 ಭಾವಾರ್ಥ:- ಅಸಾಮಾನ್ಯಳೂ, ಸಾಮಾನ್ಯಳೂ, ಮಹಾರುದ್ರ ಸ್ವರೂಪಳೂ, ಮಹಾಶಕ್ತಿರೂಪಿಣಿಯೂ ಆಗಿರುವ ದೇವಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌺 ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ ||
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺 ಭಾವಾರ್ಥ:- ಹೇ ದೇವಿ; ಕಮಲದ ಮೇಲೆ ಆರೂಢಳಾಗಿರುವಾಕೆಯೇ,  ಪರಬ್ರಹ್ಮ ರೂಪಿಣಿಯೇ, ಪರಮೇಶ್ವರಿಯೇ, ಜಗತ್ತಿನ  ತಾಯಿಯೇ, ದೇವಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌺 ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ || 
ಜಗತ್ ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ ||

🌺 ಭಾವಾರ್ಥ:- ಶುಭ್ರವಾಗಿರುವ ಬಿಳಿಯ ವಸ್ತ್ರವನ್ನು  ಧರಿಸಿರುವಾಕೆಯೇ, ವಿವಿಧಾಲಂಕಾರಗಳಿಂದ ಶೋಭಿಸುತ್ತಿರುವಾಕೆಯೇ,  ಜಗತ್ತಿಗೆ ಆಧಾರಶಕ್ತಿಯಾಗಿರುವಾಕೆಯೇ, ಜಗತ್ತಿನ ತಾಯಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌹🌹   ಶ್ರೀ ಮಹಾಲಕ್ಷ್ಮೀ ನಮೋಸ್ತುತೆ 🌹🌹

🌷🌿ಶುಭವಂದನೆಗಳು, ಶುಭೋದಯ, ಶುಭದಿನ, ಸರ್ವೇ ಜನಾಃ ಸುಖೀನೋ ಭವಂತು🌿🌷

ಭಾರತದಲ್ಲಿ_ಗೋತ್ರ_ಪದ್ಧತಿ

🌺  #ಭಾರತದಲ್ಲಿ_ಗೋತ್ರ_ಪದ್ಧತಿ 🌺

      ಭಾರತದಲ್ಲಿ ಅನೇಕ ಸಮುದಾಯಗಳಲ್ಲಿ ಗೋತ್ರ ಪದ್ಧತಿ ಇದೆ. ಗೋತ್ರ ಪದ್ಧತಿ ಅನುಸರಿಸುವ ಈ ಸಮುದಾಯಗಳ ಜನರ ಹತ್ತಿರ ಗೋತ್ರ ಅಂದರೇನು ಎಂದು ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಬಹಳಷ್ಟು ಹಿರಿಯರಿಗೇ ಗೊತ್ತಿಲ್ಲ ಎಂದ ಮೇಲೆ ಇನ್ನು ಕಿರಿಯರಿಗೆ ಹೇಗೆ ಗೊತ್ತಿರಬೇಕು?
  
  ಈ ಕುರಿತು ಅಧ್ಯಯನ ಮಾಡಿದ ಮಹಾವ್ಯಕ್ತಿಯೊಬ್ಬರು (ಅವರ ಹೆಸರು ಉಲ್ಲೇಖಿಸಲು ನಾನು ಅವರ ಅನುಮತಿ ಪಡೆದಿಲ್ಲ. ಆದ್ದರಿಂದ ಅವರ ಹೆಸರನ್ನು ಇಲ್ಲಿ ನಮೂದಿಸುತ್ತಿಲ್ಲ) ಹೇಳಿದ್ದರ ತಾತ್ಪರ್ಯವನ್ನು ಇಲ್ಲಿ ಬರೆಯುತ್ತಿದ್ದೇನೆ.

ಒಬ್ಬ ವ್ಯಕ್ತಿ ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡವಳಿಕೆ ಮುಂತಾದವುಗಳ ಮೂಲಕ ದೀರ್ಘ ಕಾಲ ತಪಸ್ಸು (ದೇಹ-ಮನಸ್ಸು-ಬುದ್ಧಿಗಳ ಶುದ್ಧೀಕರಣ) ಮಾಡಿದರೆ ಆತ ಋಷಿ ಎನಿಸಿಕೊಳ್ಳುತ್ತಾನೆ. ತಪಸ್ಸು ಕಠಿಣವಾಗುತ್ತ, ದೀರ್ಘವಾಗುತ್ತ ಹೋದಹಾಗೆ ಆತ ಔನ್ನತ್ಯದ ವಿವಿಧ ಮಜಲುಗಳನ್ನು ತಲುಪುತ್ತಹೋಗುತ್ತಾನೆ. ಋಷಿ, ರಾಜರ್ಷಿ, ಮಹರ್ಷಿ ಇತ್ಯಾದಿ ಹಂತಗಳನ್ನು ದಾಟುತ್ತಾನೆ. ಈ ರೀತಿ ಕಠೋರ ತಪಸ್ಸಿನ ಕೊಟ್ಟಕೊನೆಯ ಹಂತ ಎಂದರೆ ಬ್ರಹ್ಮರ್ಷಿತ್ವ. ಯಾರು ಬ್ರಹ್ಮರ್ಷಿ ಪದವಿಯನ್ನು ಗಳಿಸಿಕೊಳ್ಳುತ್ತಾನೋ, ಆತ ಶುದ್ಧೀಕರಣ ಪ್ರಕ್ರಿಯೆಯ ಕೊನೆಯ ಸ್ಥಿತಿ ತಲುಪಿದ್ದಾನೆ, ಇನ್ನು ಶುದ್ಧಗೊಳ್ಳಲು ಏನೂ ಉಳಿದಿಲ್ಲ ಎಂದರ್ಥ.

ಋಷಿಗಳೆಂದರೆ ಸಂನ್ಯಾಸಿಗಳಲ್ಲ. ಅವರು ಸಾಮಾನ್ಯವಾಗಿ ಗೃಹಸ್ಥರೇ ಆಗಿರುತ್ತಾರೆ. ಇಂಥ ಬ್ರಹ್ಮರ್ಷಿಯ ಮಗನೂ ಬ್ರಹ್ಮರ್ಷಿಯಾದರೆ, ಆ ಮಗನ ಮಗನೂ ಬ್ರಹ್ಮರ್ಷಿಯಾದರೆ, ಈ ರೀತಿ ಒಬ್ಬರ ಬಳಿಕ ಒಬ್ಬರಂತೆ ಆ ಕುಟುಂಬದಲ್ಲಿ ಏಳು ತಲೆಮಾರುಗಳ ತನಕ ಬ್ರಹ್ಮರ್ಷಿಗಳಾದರೆ ಮೊದಲನೆಯ ಬ್ರಹ್ಮರ್ಷಿಯ ಹೆಸರಿನಲ್ಲಿ ಗೋತ್ರ ನಿರ್ಮಾಣವಾಗುತ್ತದೆ. ವಸಿಸ್ಠ, ವಿಶ್ವಾಮಿತ್ರ, ಜಮದಗ್ನಿ, ಆಂಗೀರಸ, ಕಶ್ಯಪ, ಗೌತಮ, ಭಾರದ್ವಾಜ ಮುಂತಾದವರು ಗೋತ್ರ ಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.

ಇಲ್ಲಿ ಇನ್ನೊಂದು ಸೂಕ್ಶ್ಮವೂ ಕುತೂಹಲಕಾರಿಯೂ ಆಗಿರುವ ಸಂಗತಿಯೊಂದಿದೆ. ಒಬ್ಬರ ಬಳಿಕ ಒಬ್ಬರಂತೆ ಏಳು ಜನ ಬ್ರಹ್ಮರ್ಷಿಗಳಾದುದರಿಂದ ಆ ವಂಶವೇ ಶುದ್ದತೆಯ ಪರಿಪೂರ್ಣತೆಯನ್ನು ತಲುಪಿದೆ ಎಂದರ್ಥ. ಆ ಗೋತ್ರದಲ್ಲಿ ಹುಟ್ಟಿದವರೆಲ್ಲ ತಮ್ಮ ವಂಶವಾಹಿನಿಗಳಲ್ಲಿ ತಮ್ಮ ಪೂರ್ವಜರ ಶುದ್ಧತೆಯನ್ನು ಪಡೆದುಕೊಂಡು ಬಂದಿದ್ದಾರೆಂದು ನಮ್ಮ ಪರಂಪರೆ ಭಾವಿಸುತ್ತದೆ. ಆಧುನಿಕ ವೈದ್ಯವಿಜ್ನಾನ ಕೂಡ ಡಿ.ಎನ್.ಎ. ಹೆಸರಿನ ವರ್ಣತಂತುಗಳು ವ್ಯಕ್ತಿಯ ಪೂರ್ವಜರ ಗುಣವಿಶೇಷಗಳನ್ನು ಹೊತ್ತುತಂದಿರುತ್ತವೆ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತದೆ. ಅಲ್ಲಿಗೆ ಅದು ಗೋತ್ರತತ್ವ ಏನು ಹೇಳುತ್ತದೆಯೋ ಅದನ್ನೇ ಹೇಳಿದಂತಾಯಿತು.

*ಗೋತ್ರ ಅಂದರೇನು?*

ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ:
* ಗೋತ್ರ ಎಂದರೇನು? 
* ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ? 
* ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ? 
* ಏಕೆ ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ಮಗಳಲ್ಲ?
* ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ?

ಪ್ರಥಮತವಾಗಿ "ಗೋತ್ರ" ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು 'ಗೋ' ಅಂದರೆ ಹಸು, 'ತ್ರಾಹಿ' ಅಂದರೆ ಕೊಟ್ಟಿಗೆ ಎಂದರ್ಥ. ಗೋತ್ರವು 'ಹಸುವಿನ ಕೊಟ್ಟಿಗೆ' ಎಂದಾಗಿದ್ದು, ಪುರುಷ ತಳಿಯ ವಾಹಕವಾಗಿದೆ. ಹಾಗಾದರೆ ನಾವೆಲ್ಲರೂ ನಮ್ಮ ಮೂಲ ಪುರುಷ ಯಾವುದೋ ಋಷಿ ಅಥವಾ ಅಷ್ಟ ಋಷಿಗಳಲೊಬ್ಬರ ಅನುಯಾಯಿ ಆಗಿದ್ದು, ನಮ್ಮ ಗೋತ್ರವು ಆ ಮೂಲ ಪುರುಷ ಋಷಿಯ ಹೆಸರಿನಿಂದ ಗುರುತಿಸಿ ಕೊಳ್ಳುವೆವು. {ಸಪ್ತ ಋಷಿಗಳು: ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಆಂಗೀರಸ, ಜಮದಗ್ನಿ, ಕಶ್ಯಪ, ಗೌತಮ, +ಭಾರಧ್ವಾಜ}

ಸಪ್ತಧಾತು ಸಮಪಿಂಡಂl ಸಮಯೋನಿ ಸಮುದ್ಭವಂl ಆತ್ಮಜೀವ ಸಮಾಯುಕ್ತಂl ಸೃಷ್ಟಿಕಾರ್ಯ ನಿರಂತರಂll

ತಂದೆ ಹಾಗೂ ತಾಯಿಯಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ, ತಾಯಿ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದ ಬಂದ ಪ್ರಾಣ, ಪ್ರಜ್ಞೆ, ಆತ್ಮಾಂಶಗಳು ಸಂಯುಕ್ತವಾಗಿ 
ತಂದೆಯ ಇಪ್ಪತ್ತ ಮೂರು, ತಾಯಿಯ ಇಪ್ಪತ್ತ ಮೂರು ವರ್ಣತಂತುಗಳ ಕೂಡುವಿಕೆಯಿಂದ ಒಂದೇ ಒಂದು ಮೂಲ ಜೀವಕೋಶ ರಚನೆಯಾಗಿ ಅದೇ ಕೋಶ ವಿಭಜನೆಗೊಂಡು ಪ್ರತಿ ಶಿಶುವು ಜನ್ಮ ತಾಳುವುದು. 

ತಂದೆಯ ಇಪ್ಪತ್ತ ಮೂರು 'XY' ತಾಯಿಯ ಇಪ್ಪತ್ತ ಮೂರು 'XX' ವರ್ಣತಂತುಗಳ ಗುಣಾಂಶ ಹಾಗೂ ವಂಶವಾಹಿನಿಯಾಗಿ ಬರುತ್ತದೆ. ಮಗುವಿಗೆ ತಾಯಿಯ ಗುಣಾಂಶ 'X' ಸಾಮಾನ್ಯವಾಗಿದ್ದು, ತಂದೆಯ 'Y' ಗುಣಾಂಶವು ತಾಯಿಯ 'XX' ಗುಣಾಂಶವನ್ನು ಮೀರಿ ತಂದೆಯಿಂದ 'Y' ಬರುವುದರಿಂದ ಮಗಳಿಗೆ ತಂದೆಯ 'Y' ಬರಲು ಅಸಾಧ್ಯವಾಗಿದ್ದು, ತಂದೆಯಿಂದ ಗೋತ್ರವು ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಮಾತ್ರ ಮುಂದುವರಿಯುವುದು.

ಮೇಲೆ ಹೆಸರಿಸಿದ ಎಂಟು ಋಷಿಗಳಲ್ಲಿ ಎಂಟು ವಿಭಿನ್ನ 'Y' ಗುಣಾಂಶದ ವರ್ಣತಂತುಗಳಿದ್ದು, ಆ ತಳಿಮೂಲಾಂಶದ ವಂಶವಾಹಿನಿ ನಾವಾಗಿದ್ದೇವೆ ಹಾಗೂ ನಾವು ಯಾವ ಮೂಲ ಪುರುಷನ ಸಂತತಿ ಎಂಬುದು ತಿಳಿಯುತ್ತದೆ. 

ವಿವಾಹ ವಿಚಾರದಲ್ಲಿ ನಾವು ಸ್ವಗೋತ್ರರಲ್ಲಿ ನೆಂಟಸ್ತಿಕೆ ಮಾಡಿದಲ್ಲಿ Y' ಗುಣಾಂಶದ ವರ್ಣತಂತುಗಳು ಭವಿಷ್ಯದಲ್ಲಿ ಮುಂದುವರೆಯಲಾಗದೆ ನಿಃಶಕ್ತ, ನಿತ್ರಾಣ, ಬೆಳವಣಿಗೆ ಕುಂಠಿತ, ರಕ್ತ ಸಂಬಂಧಿ ಕಾಯಿಲೆ, ಪುತ್ರವಿಹೀನ, ಸಂತಾನ ಹೀನ- ಇತ್ಯಾದಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ.

 ಹಾಗಾಗಿ ಗೋತ್ರವು 'Y' ಗುಣಾಂಶದ ವರ್ಣತಂತುಗಳ ರಕ್ಷಕನಾಗಿದೆ. 

ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು.

     ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲ ಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.

     ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲವಾದ್ದರಿಂದ, ಪ್ರಸಿದ್ಧರಾದ ಮೂರು ಜನ, ಅಥವಾ ಐದು ಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು. ತ್ರಯಾ ಋಷಿಯ, ಪಂಚಾಋಷಿಯ ಶಬ್ದದಿಂದ ಕರೆಯುತ್ತೇವೆ. ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.

     ಸೂತ್ರ ಎಂದರೆ- ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ ಸೂತ್ರಗಳಿವೆ. ಇವುಗಳು ಇಂತಿವೆ: ೧. ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು. ೨. ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು. ೩. ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.

     ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ - ಗೃಹ್ಯ ಸೂತ್ರದ ಪ್ರಕಾರ ಷೋಡಷ ಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು

ತ್ರಯಾಋಷಯ ಅಥವಾ ಪಂಚಾಋಷಯ ಪ್ರವರಾನ್ವಿತ . .  ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶ ಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು - ಎಂದು ಹೇಳುವುದು.
     ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರು ಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ ಸೂತ್ರ ಎನ್ನುವುದು.

     ಈ ಗೋತ್ರ ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. ಗೋತ್ರ ಪ್ರವರ ನಿರ್ಣಯ ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶನವಾಗಿ ಬರೆಯಬೇಕು.

     ಗೋತ್ರ ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು. ೧.ಭೃಗು, ೨. ಆಂಗೀರಸ, ೩. ಮರೀಚಿ, ೪. ಅತ್ರಿ, ೫.ಪುಲಹ, ೬. ಪೌಲಸ್ತ್ಯ, ೭. ವಸಿಷ್ಠ ಎಂಬುದಾಗಿ ಏಳು ಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹ ಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲ ಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದ ೧. ಭೃಗು, ೨. ಆಂಗೀರಸ, ೩. ಮರೀಚಿ, ೪. ಅತ್ರಿ ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.

     ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:
೧. ಜಮದಗ್ನಿ   - ಭೃಗು ವಂಶಸ್ಥರು (೧)
೨. ಭರದ್ವಾಜ   - ಆಂಗೀರಸ ವಂಶಸ್ಥರು (೨)
೩. ಗೌತಮ    - ಮೇಲಿನಂತೆ
೪. ಕಾಶ್ಯಪ     - ಮರೀಚಿ ವಂಶಸ್ಥರು (೩)
೫. ವಸಿಷ್ಠ     -  ಮೇಲಿನಂತೆ
೬. ಅಗಸ್ತ್ಯ     -  ಮೇಲಿನಂತೆ
೭. ಅತ್ರಿ      -  ಅತ್ರಿಯೇ ಮೂಲಪುರುಷರು ಅಥವಾ ಅವರ ವಂಶಸ್ಥರು (೪)
೮. ವಿಶ್ವಾಮಿತ್ರ  - ಅತ್ರಿ ಋಷಿಯ ವಂಶಸ್ಥರು

     ಈ ರೀತಿ ನಾಲ್ಕು ಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.

     ಮೇಲೆ ತಿಳಿಸಿದ ಎಂಟು ಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತು ಋಷಿ ವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯ ಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣ ಕುಲಕ್ಕೆ ಸೇರಿದವರಾದರು. ಎಂದರೆ ಭೃಗು ವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-
೧. ವೀತಹವ್ಯ   - ಭೃಗು ವಂಶವನ್ನವಲಂಬಿಸಿದವರು
೨. ಮೈತ್ರೇಯ  - ಮೇಲಿನಂತೆ
೩, ಶುನಕ     - ಮೇಲಿನಂತೆ
೪, ವೇನ      - ಮೇಲಿನಂತೆ
೫. ರಥೀತರ    - ಆಂಗೀರಸ ಗೋತ್ರವನ್ನವಲಂಬಿಸಿದವರು
೬. ಮುದ್ಗಲ    - ಮೇಲಿನಂತೆ
೭. ವಿಷ್ಣವೃದ್ಧ    - ಮೇಲಿನಂತೆ
೮. ಹಾರಿತ     - ಮೇಲಿನಂತೆ
೯. ಕಣ್ವ       - ಮೇಲಿನಂತೆ
೧೦.ಸಂಕೃತಿ     - ಮೇಲಿನಂತೆ

     ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ ೧೮ ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು.

ಭಾರತದಲ್ಲಿ ಗೋತ್ರ ಪದ್ಧತಿ

      ಭಾರತದಲ್ಲಿ ಅನೇಕ ಸಮುದಾಯಗಳಲ್ಲಿ ಗೋತ್ರ ಪದ್ಧತಿ ಇದೆ. ಗೋತ್ರ ಪದ್ಧತಿ ಅನುಸರಿಸುವ ಈ ಸಮುದಾಯಗಳ ಜನರ ಹತ್ತಿರ ಗೋತ್ರ ಅಂದರೇನು ಎಂದು ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಬಹಳಷ್ಟು ಹಿರಿಯರಿಗೇ ಗೊತ್ತಿಲ್ಲ ಎಂದ ಮೇಲೆ ಇನ್ನು ಕಿರಿಯರಿಗೆ ಹೇಗೆ ಗೊತ್ತಿರಬೇಕು?
  
  ಈ ಕುರಿತು ಅಧ್ಯಯನ ಮಾಡಿದ ಮಹಾವ್ಯಕ್ತಿಯೊಬ್ಬರು (ಅವರ ಹೆಸರು ಉಲ್ಲೇಖಿಸಲು ನಾನು ಅವರ ಅನುಮತಿ ಪಡೆದಿಲ್ಲ. ಆದ್ದರಿಂದ ಅವರ ಹೆಸರನ್ನು ಇಲ್ಲಿ ನಮೂದಿಸುತ್ತಿಲ್ಲ) ಹೇಳಿದ್ದರ ತಾತ್ಪರ್ಯವನ್ನು ಇಲ್ಲಿ ಬರೆಯುತ್ತಿದ್ದೇನೆ.

ಒಬ್ಬ ವ್ಯಕ್ತಿ ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡವಳಿಕೆ ಮುಂತಾದವುಗಳ ಮೂಲಕ ದೀರ್ಘ ಕಾಲ ತಪಸ್ಸು (ದೇಹ-ಮನಸ್ಸು-ಬುದ್ಧಿಗಳ ಶುದ್ಧೀಕರಣ) ಮಾಡಿದರೆ ಆತ ಋಷಿ ಎನಿಸಿಕೊಳ್ಳುತ್ತಾನೆ. ತಪಸ್ಸು ಕಠಿಣವಾಗುತ್ತ, ದೀರ್ಘವಾಗುತ್ತ ಹೋದಹಾಗೆ ಆತ ಔನ್ನತ್ಯದ ವಿವಿಧ ಮಜಲುಗಳನ್ನು ತಲುಪುತ್ತಹೋಗುತ್ತಾನೆ. ಋಷಿ, ರಾಜರ್ಷಿ, ಮಹರ್ಷಿ ಇತ್ಯಾದಿ ಹಂತಗಳನ್ನು ದಾಟುತ್ತಾನೆ. ಈ ರೀತಿ ಕಠೋರ ತಪಸ್ಸಿನ ಕೊಟ್ಟಕೊನೆಯ ಹಂತ ಎಂದರೆ ಬ್ರಹ್ಮರ್ಷಿತ್ವ. ಯಾರು ಬ್ರಹ್ಮರ್ಷಿ ಪದವಿಯನ್ನು ಗಳಿಸಿಕೊಳ್ಳುತ್ತಾನೋ, ಆತ ಶುದ್ಧೀಕರಣ ಪ್ರಕ್ರಿಯೆಯ ಕೊನೆಯ ಸ್ಥಿತಿ ತಲುಪಿದ್ದಾನೆ, ಇನ್ನು ಶುದ್ಧಗೊಳ್ಳಲು ಏನೂ ಉಳಿದಿಲ್ಲ ಎಂದರ್ಥ.

ಋಷಿಗಳೆಂದರೆ ಸಂನ್ಯಾಸಿಗಳಲ್ಲ. ಅವರು ಸಾಮಾನ್ಯವಾಗಿ ಗೃಹಸ್ಥರೇ ಆಗಿರುತ್ತಾರೆ. ಇಂಥ ಬ್ರಹ್ಮರ್ಷಿಯ ಮಗನೂ ಬ್ರಹ್ಮರ್ಷಿಯಾದರೆ, ಆ ಮಗನ ಮಗನೂ ಬ್ರಹ್ಮರ್ಷಿಯಾದರೆ, ಈ ರೀತಿ ಒಬ್ಬರ ಬಳಿಕ ಒಬ್ಬರಂತೆ ಆ ಕುಟುಂಬದಲ್ಲಿ ಏಳು ತಲೆಮಾರುಗಳ ತನಕ ಬ್ರಹ್ಮರ್ಷಿಗಳಾದರೆ ಮೊದಲನೆಯ ಬ್ರಹ್ಮರ್ಷಿಯ ಹೆಸರಿನಲ್ಲಿ ಗೋತ್ರ ನಿರ್ಮಾಣವಾಗುತ್ತದೆ. ವಸಿಸ್ಠ, ವಿಶ್ವಾಮಿತ್ರ, ಜಮದಗ್ನಿ, ಆಂಗೀರಸ, ಕಶ್ಯಪ, ಗೌತಮ, ಭಾರದ್ವಾಜ ಮುಂತಾದವರು ಗೋತ್ರ ಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.

ಇಲ್ಲಿ ಇನ್ನೊಂದು ಸೂಕ್ಶ್ಮವೂ ಕುತೂಹಲಕಾರಿಯೂ ಆಗಿರುವ ಸಂಗತಿಯೊಂದಿದೆ. ಒಬ್ಬರ ಬಳಿಕ ಒಬ್ಬರಂತೆ ಏಳು ಜನ ಬ್ರಹ್ಮರ್ಷಿಗಳಾದುದರಿಂದ ಆ ವಂಶವೇ ಶುದ್ದತೆಯ ಪರಿಪೂರ್ಣತೆಯನ್ನು ತಲುಪಿದೆ ಎಂದರ್ಥ. ಆ ಗೋತ್ರದಲ್ಲಿ ಹುಟ್ಟಿದವರೆಲ್ಲ ತಮ್ಮ ವಂಶವಾಹಿನಿಗಳಲ್ಲಿ ತಮ್ಮ ಪೂರ್ವಜರ ಶುದ್ಧತೆಯನ್ನು ಪಡೆದುಕೊಂಡು ಬಂದಿದ್ದಾರೆಂದು ನಮ್ಮ ಪರಂಪರೆ ಭಾವಿಸುತ್ತದೆ. ಆಧುನಿಕ ವೈದ್ಯವಿಜ್ನಾನ ಕೂಡ ಡಿ.ಎನ್.ಎ. ಹೆಸರಿನ ವರ್ಣತಂತುಗಳು ವ್ಯಕ್ತಿಯ ಪೂರ್ವಜರ ಗುಣವಿಶೇಷಗಳನ್ನು ಹೊತ್ತುತಂದಿರುತ್ತವೆ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತದೆ. ಅಲ್ಲಿಗೆ ಅದು ಗೋತ್ರತತ್ವ ಏನು ಹೇಳುತ್ತದೆಯೋ ಅದನ್ನೇ ಹೇಳಿದಂತಾಯಿತು.

ಗಾಯತ್ರೀ ದೇವಿ

ಗಾಯತ್ರೀ ದೇವಿ (ಸಾವಿತ್ರಿ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದ ಮಾತೆ ಎಂದು ಕರೆಯಲ್ಪಡುವ ಗಾಯತ್ರಿ ದೇವಿಯನ್ನು ಐದು ಮುಖ ಮತ್ತು ಹತ್ತು ಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ  ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀ ದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀ ದೇವಿಯಯನ್ನು ಎಲ್ಲರು ಸ್ವೀಕರಿಸಿದ್ದಾರೆ

||  ಓಂ ಭೂರ್ಭುವಃ ಸ್ವ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೊ ಯೊ ನಃ ಪ್ರಚೋದಯಾತ್ ||

ಪದಗಳ ಆರ್ಥ

    ಓಂ - ಓಂ
    ಭೂಃ - ಭೂಮಿ
    ಭುವಃ - ಅಂತರಿಕ್ಷ
    ಸ್ವಃ - ಆಕಾಶ
    ತತ್ - ಆ
    ಸವಿತುಃ - ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
    ವರೇಣ್ಯಂ - ಪೂಜಾರ್ಹವಾದ
    ಭರ್ಗೋ - ತೇಜಸ್ಸನ್ನು
    ದೇವಸ್ಯ - ದೇವನ
    ಧೀಮಹಿ - ಧ್ಯಾನಿಸುತ್ತೇವೆ
    ಧಿಯೋ - ಬುದ್ಧಿ, ವಿವೇಕಗಳನ್ನು
    ಯೋ - ಅವನು
    ನಃ - ನಮ್ಮೆಲ್ಲರ
    ಪ್ರಚೋದಯಾತ್ - ಪ್ರಚೋದಿಸಲಿ

ಭಗವದ್ಗೀತೆ ಭಗವಂತನ ವಚನ.

ಗಾಯತ್ರಿಯ ಮೊದಲ ಅಕ್ಷರ 'ಓಂ' ಅದು ಬ್ರಹ್ಮ ದೇವರಿಗೆ ಭಗವಂತ ಕೊಟ್ಟ ಮೊದಲ ಉಪದೇಶ. ಹಾಗಾಗಿ ಇದರಲ್ಲಿ ಸಮನ್ವಯ ಮಾಡಬಹುದಾಗಿದೆ. 

ತತ್ - ವ್ಯಾಪ್ತಿತ್ವ - ಎಲ್ಲ ಕಡೆ ವ್ಯಾಪಿಸಿದ್ದಾನೆ.

ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ ಪರಮಾತ್ಮ ತನ್ನ ವಿಶ್ವರೂಪ ತೋರಿಸುವ ಮೂಲಕ ತನ್ನ ಗುಣಗಳ, ಕ್ರಿಯಗಳ ಹಾಗು ರೂಪಗಳ ವ್ಯಾಪ್ತಿಯನ್ನು ಅರ್ಜುನನಿಗೆ ತೋರಿಸಿದ್ದಾನೆ. 

ಸವಿತು : ಅವನು ಸೃಷ್ಟಿ ಕರ್ತಾ

ಭಗವಂತ ತಾನು ಪ್ರಕೃತಿಯ ಮೂಲಕ ಸೃಷ್ಟಿಯನ್ನು ಮಾಡುತ್ತಾನೆ ಎನ್ನುವುದಾಗಿ 'ಮಯಾಧ್ಯಕ್ಷೆಣ ಪ್ರಕೃತಿ:' ಎನ್ನುವ ಕಡೆ ಹೇಳುತ್ತಾನೆ. 

ವರೇಣ್ಯಂ - ಅವನು ಶ್ರೆಷ್ಟನು

ಗೀತೆಯಲ್ಲಿ 'ಮತ್ತ: ಪರತರಂ ನಾಸ್ತಿ' ಎಂದು ನನಗಿಂತ ಉತ್ತಮನು ಯಾರು ಇಲ್ಲ ಎಂದು ಸ್ವಯಂ ಭಗವಂತ ಹೇಳುತ್ತಾನೆ. ಹದನೈದನೇ ಅಧ್ಯಾಯದಲ್ಲಿ ತಾನು ಕ್ಷರ ಮತ್ತು ಅಕ್ಷರವನ್ನು ಮೀರಿದವನು ಮತ್ತು ತನ್ನನ್ನು ವೇದಗಳು ಪುರುಷೋತ್ತಮ ಎಂದು ಕರೆಯುತ್ತವೆ . ಹೀಗೆ ತಿಳಿಸಿಲಾಗಿದೆ.

ಭರ್ಗ: ಪ್ರಕಾಶಮಾನನಾಗಿದ್ದಾನೆ

ಸಾವಿರ ಸೂರ್ಯಗಳು ಒಮ್ಮೆಲೇ ಉದಯಿಸಿದಾಗ ಆಗುವ ಬೆಳಕು ವಿಶ್ವರೂಪ ಕಾಲದಲ್ಲಿ ಆಯಿತು. ಅರ್ಜುನನಿಗೆ ದಿವ್ಯ ಚಕ್ಷಸ್ಸು ಕೊಟ್ಟು ವಿಶ್ವರೂಪ ತೋರಿಸಿದ. ಮತ್ತೆ ವಿಶ್ವರೂಪದಲ್ಲಿ ಸಂಹಾರ ಚಿತ್ರಣೆ ಅಂದರೆ ಎಲ್ಲ ಭಾಂದವರು ಪರಮಾತ್ಮನ ಬಾಯಿಯಲ್ಲಿ ಹೋಗಿ ಸಾಯುವಂತದ್ದು ಅರ್ಜುನನಿಗೆ ತೋರಿಸಿದ.

ದೇವಸ್ಯ :  ಅವನು ಎಲ್ಲರಿಂದ ಸ್ತುತಿಸಲ್ಪಟ್ಟವನು, ಪ್ರೇರಣೆ ಮಾಡುವವನು

ಅರ್ಜುನನಿಗೆ ತನ್ನ ಕರ್ತವ್ಯದಲ್ಲಿ ಪ್ರೇರಣೆ ಮಾಡಿ ಕೌರವಸೇನೆಯನ್ನು ಗೆಲ್ಲುವಂತೆ ಮಾಡಿದನು. ವಿಶ್ವರೂಪದಲ್ಲಿ ಮಹರ್ಷಿಗಳೇ ಮೊದಲಾದವರು ಪರಮಾತ್ಮನನ್ನು ಸ್ತುತಿಸಿದರು.

ಧೀಮಹಿ : ಅವನು ಧ್ಯಾನಿಸಲ್ಪಡಬೇಕಾದವನು

ಎಂಟನೆ ಅಧ್ಯಾಯದಲ್ಲಿ ತಾನು ಎಲ್ಲರಿಂದ ಅಂತ್ಯಕಾಲದಲ್ಲಿ ಧ್ಯಾನಿಸಲ್ಪಡಬೇಕಾದವನು ಎಂದು ತಿಳಿಸುತ್ತಾನೆ.

ಧಿಯೋ ಯೋ ನ: ಪ್ರಚೋದಯಾತ್  : ಅವನು ನಮ್ಮನ್ನು ಸತ್ಕರ್ಮಗಳಲ್ಲಿ ಪ್ರಚೋದನೆ ಮಾಡಲಿ

#ಸರ್ವಜನ_ಸುಖಿನೋಭವಂತು

ತೀರ್ಥ_ಹೇಗೆ_ಸ್ವೀಕರಿಸಬೇಕು

#ತೀರ್ಥ_ಹೇಗೆ_ಸ್ವೀಕರಿಸಬೇಕು?

#ಮೂರು_ಬಾರಿ_ಯಾಕೆ_ಸ್ವೀಕರಿಸಬೇಕು
🌸🌸🌸🌸🌸

#ಸುಜ್ಞಾನದ_ಬೆಳಕು

ಮನೆಯಲ್ಲಿ ಪೂಜೆಗಳನ್ನು ಮಾಡಿದಾಗ, ದೇವಸ್ಥಾನದಲ್ಲೋ ಅಥವಾ ಇನ್ನೆಲ್ಲಾದರೂ ದೇವರ ದರ್ಶನ ಪಡೆದ ಬಳಿಕ ತೀರ್ಥ ಸ್ವೀಕರಿಸುತ್ತೇವೆ. ತೀರ್ಥದ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೀರ್ಥ ಸ್ವೀಕರುಸುವಾಗ ಮೂರು ಬಾರಿ ಕೊಡಲಾಗುತ್ತದೆ. ಆದರೆ ತೀರ್ಥವನ್ನು ಮೂರು ಬಾರಿ ಯಾಕೆ ಸ್ವೀಕರಿಸಬೇಕು ಎಂದು ಎಂದಾದದ್ರೂ ಯೋಚಿಸಿದ್ದೀರಾ?

#ಮೂರು_ಬಾರಿ_ಯಾಕೆ_ಸ್ವೀಕರಿಸಬೇಕು_ಅಂತ_ಗೊತ್ತಾ?

ನಮ್ಮ ಪುರಾಣಗಳ ಪ್ರಕಾರ ತೀರ್ಥ ಎಂದರೆ ಮೋಕ್ಷ ಕೊಡುವುದು ಎಂದರ್ಥ. ಇದನ್ನು ಮೂರು ಬಾರಿ ಸ್ವೀಕರಿಸಿದರೆ…ಭೋಜನ ಮಾಡಿದಷ್ಟು ಶಕ್ತಿ ಬರುತ್ತದೆ ಎನ್ನುತ್ತಾರೆ. ತೀರ್ಥ ಸ್ವೀಕರಿಸುವಾಗ ಆರೋಗ್ಯಕರವಾದ ಭಾವದೊಂದಿಗೆ ಸ್ವೀಕರಿಸಬೇಕು. ಈ ತೀರ್ಥ ನನಗೆ ಒಳ್ಳೆಯದು ಮಾಡುತ್ತದೆ, ನನ್ನ ಆರೋಗ್ಯಕ್ಕೆ ಮತ್ತು ನನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಶಕ್ತಿ ಕೊಡುತ್ತದೆ ಎಂಬ ಸದ್ಭಾವನೆಯಿಂದ ತೆಗೆದುಕೊಳ್ಳಬೇಕು. ದೇವರಿಗೆ ಪೂಜೆ ಮಾಡಿದ ಬಳಿಕ ಸ್ವೀಕರಿಸುವ ತೀರ್ಥದಲ್ಲಿ ಪಂಚಾಮೃತ, ತುಳಸಿ ದಳ, ಸುಗಂಧ ದ್ರವ್ಯಗಳು, ಮಂತ್ರಶಕ್ತಿಗಳಿಂದ ತುಂಬಿರುತ್ತವೆ. ಇದರಿಂದ ಆ ತೀರ್ಥ ಅತ್ಯಂತ ಪವಿತ್ರವಾಗಿ ಬದಲಾಗುತ್ತದೆ. ತೀರ್ಥ ಸ್ವೀಕರಿಸುವುದರಿಂದ ನಮ್ಮ ಆರೋಗ್ಯ, ಆಧ್ಯಾತ್ಮಿಕತೆ ಉತ್ತಮಗೊಳ್ಳುತ್ತದೆ.

*ಮೊದಲ ಬಾರಿ ತೀರ್ಥ ಸ್ವೀಕರಿಸಿದರೆ ಶಾರೀರಿಕ, ಮಾನಸಿಕ ಶುದ್ಧಿ ನಡೆಯುತ್ತದೆ*
*ಎರಡನೇ ಸಲ ತೀರ್ಥ ಸ್ವೀಕರಿಸಿದರೆ ನ್ಯಾಯ, ಧರ್ಮದ ನಡವಳಿಕೆ ಉತ್ತಮಗೊಳ್ಳುತ್ತದೆ.*
*ಇನ್ನು ಮೂರನೆಯದು ಪರಮೇಶ್ವರನ ಪರಮ ಪದ ಎಂದು ಸ್ವೀಕರಿಸಬೇಕು.*

*ತೀರ್ಥ ಹೇಗೆ ಸ್ವೀಕರಿಸಬೇಕು??*
ಮೂರು ಬಾರಿ ಸಹ ಬಲಗೈ ಕೆಳಗೆ ಎಡಗೈ ಇಟ್ಟು ತೀರ್ಥ ಸ್ವೀಕರಿಸಬೇಕು. ಬಲಗೈನ ತೋರು ಬೆರಳು ಮಧ್ಯಕ್ಕೆ ಹೆಬ್ಬೆರಳನ್ನು ಮಡಚಿದರೆ ಗೋಮುಖ ಎಂಬ ಮುದ್ರ ಬರುತ್ತದೆ. ಈ ಮುದ್ರೆಯಲ್ಲಿ ತೀರ್ಥವನ್ನು ಸ್ವೀಕರಿಸಬೇಕು. ತೀರ್ಥವನ್ನು ಸ್ವೀಕರಿಸಿದ ಬಳಿಕ ತಲೆಗೆ ಒರೆಸಿಕೊಳ್ಳುತ್ತಾರೆ. ಆದರೆ ಆ ರೀತಿ ಮಾಡಬಾರದು. ತಲೆಯ ಮೇಲೆ ಬ್ರಹ್ಮ ದೇವರು ಇರುತ್ತಾರೆ. ನಮ್ಮ ಎಂಜಲನ್ನು ಬ್ರಹ್ಮನಿಗೆ ಅರ್ಪಣೆ ಮಾಡಿದವರಾಗುತ್ತೇವೆ. ಆದ್ದರಿಂದ ಕಣ್ಣಿಗೆ ಒತ್ತಿಕೊಳ್ಳುವುದು ಉತ್ತಮ. ಮನೆಯಲ್ಲಿ ತೀರ್ಥ ಸ್ವೀಕರಿಸುವಾಗ ಕೆಳಗೆ ಕೂತು ಸ್ವೀಕರಿಸಬೇಕು. ದೇವಸ್ಥಾನದಲ್ಲಾದರೆ ನಿಂತುಕೊಂಡು ಸ್ವೀಕರಿಸಬೇಕು.

ಕೃಷ್ಣಾರ್ಪಣ ಮಸ್ತು 🌺🌺🌺🌺🌺🌺🌺

ಎಲ್ಲರೂ ನಾಗರ ಪಂಚಮಿಯದಿನ #ಆಸ್ತಿಕ ಆಸ್ತಿಕ ಎಂದು ಕರೆಯಿರಿ ಯಾಕೆಂದರೆ

ಎಲ್ಲರೂ ನಾಗರ ಪಂಚಮಿಯದಿನ  #ಆಸ್ತಿಕ ಆಸ್ತಿಕ ಎಂದು ಕರೆಯಿರಿ  ಯಾಕೆಂದರೆ 
 ನಾಗರ ಪಂಚಮಿಯ ದಿನ  ಎಲ್ಲರೂ ಆಸ್ತಿಕ ಆಸ್ತಿಕ ಎನ್ನುವ ಹೆಸರನ್ನು ಹೇಳಿದರೆ ನಿಮಗೆ ನಿಮ್ಮ ಕುಟುಂಭಕ್ಕೆ ಯಾವ ಸರ್ಪ ದೋಷಗಳೂ ಬರುವುದಿಲ್ಲ ಮತ್ತು ನಾಗ ದೋಷ ಇದ್ದರೂ ಪರಿಹಾರವಾಗುತ್ತದೆ .

ಏನಿದು #ಆಸ್ತಿಕ .....?

ಆಸ್ತಿಕ ಅಂದರೆ ಆಸ್ತಿಕ ಋಷಿಯ ಹೆಸರು . ಯಾಕೆ ಕರೆಯ ಬೇಕು ಮತ್ತು ಯಾರಿವರು ಆಸ್ತಿಕ ಋಷಿ ಎನ್ನುವ ಪ್ರಶ್ನೆ ಮೂಡುತ್ತಿದೆಯೇ ಅದರ ಪೂರ್ತಿ ಪೌರಾಣಿಕ ಕಥೆಯನ್ನು ನಿಮಗೆ ಕಥಾ ರೂಪದಲ್ಲಿ ಸವಿಸ್ತಾರ ವಾಗಿ ಹೇಳುತ್ತೇನೆ .

ಜನಮೇಜಯನ ಸರ್ಪಯಾಗದಲ್ಲಿ ಬರುತ್ತದೆ .

ಅರ್ಜುನನ ಮಗನಾದ ಅಭಿಮನ್ಯು ಮತ್ತು ಉತ್ತರೆಯ ಮಗ #ಪರೀಕ್ಷಿತ . ಈತನು ರಾಜ್ಯ ವಹಿಸಿಕೊಂಡು ರಾಜ್ಯಭಾರ ಮಾಡುತ್ತಿರುವಾಗ ಒಂದು ದಿನ ಬೇಟೆ ಗೆಂದು ಅರಣ್ಯಕ್ಕೆ ಹೋಗುತ್ತಾನೆ ಅಲ್ಲಿ ಬಹುಕಾಲ ಭೇಟೆಯಾಡಿದ ಕಾರಣ ಬಹಳ ಬಳಲಿಕೆ ಗೊಂಡ ರಾಜ ಒಂದು ಗುಹೆಯನ್ನು ಪ್ರವೇಶಿಸುತ್ತಾನೆ .

ಅಲ್ಲಿ ಶಮೀಕ ಮುನಿಯು ಸಮಾಧಿ ಸ್ಥಿತಿಯಲ್ಲಿ ತಪಸ್ಸು ಮಾಡುತ್ತಿರುತ್ತಾರೆ . ಆಗ ಪರೀಕ್ಷಿತ ಶಮೀಕ ಋಷಿಯಲ್ಲಿ ನೀರನ್ನು ಕೇಳುತ್ತಾನೆ ಎಷ್ಟು ಕೇಳಿದರೂ ಮೌನ ವಾಗಿದ್ದ ಋಷಿಯ ಕಂಡು ಕೋಪ ಗೊಂಡ ರಾಜ ಅಲ್ಲೇ ಸತ್ತು ಬಿದ್ದ ಹಾವನ್ನು ಕತ್ತಿಯಿಂದ ತೆಗೆದು ಋಷಿಯ ಕೊರಳಿಗೆ ಹಾಕಿ ಹೋಗುತ್ತಾನೆ .

ಗುಹೆಗೆ ಬಂದ ಶಮೀಕ ಋಷಿಯ ಮಗ ಶೃಂಗಿಯು ತನ್ನ ತಂದೆಯ ಕೊರಳಲ್ಲಿರುವ ಹಾವನ್ನು ಕಂಡು ಕೋಪಾವೇಶ ಗೊಂಡು ಯಾರು ಹೀಗೆ ಅಪಚಾರ ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ಸರ್ಪದಿಂದ ಸಾಯಲಿ ಎಂದು ಶಾಪ ಕೊಡುತ್ತಾನೆ .

ಪರೀಕ್ಷಿತನಿಗೆ ಶೃಂಗ ಋಷಿಯ ಶಾಪ ತಿಳಿದು ಬಹಳ ಪಶ್ಚಾತ್ತಾಪ ಪಡುತ್ತಾನೆ ಆದರೇನಂತೆ ಶಾಪ ಶಾಪವೇ 

ಶಾಪದ ಫಲವಾಗಿ ಏಳನೆಯ ದಿನ ದಂದು ಋಷಿಯ ಶಾಪವನ್ನು ಈಡೇರಿಸುವ ಸಲುವಾಗಿ ಕದ್ರುವಿನ ಮಗ #ತಕ್ಷಕ ಪರೀಕ್ಷಿತ ರಾಜನಿದ್ದಲ್ಲಿಗೆ ಬರುತ್ತದೆ . ಆದರೆ ಬಹಳಷ್ಟು ಕಾವಲುಗಾರರಿರುತ್ತಾರೆ ಒಳಗೆ ಹೋಗುವ ದಾರಿಯೇ ಇರುವುದಿಲ್ಲ .

ಆಗ ತಕ್ಷಕ ಸಣ್ಣ ಹುಳುವಿನ ರೂಪ ಧರಿಸಿ ಹಣ್ಣಿನ ಬುಟ್ಟಿಯಲ್ಲಿ ಸೇರಿ ಹಣ್ಣಲ್ಲಿ ವಿಷ ಬಿಡುತ್ತದೆ , ಆ ವಿಷ ಪೂರಿತವಾದ ಹಣ್ಣನ್ನು ಸೇವಿಸಿದ ಪರೀಕ್ಷಿತ ಸಾವನ್ನು ಅಪ್ಪುತ್ತಾನೆ .

ಪರೀಕ್ಷಿತ ಮಹಾರಾಜನಿಗೆ ಜನಮೇಜಯ ಎಂಬ ಮಗ ಇರುತ್ತಾನೆ ಆಗ ಅವನು ಇನ್ನೂ ಚಿಕ್ಕವನು , ಬೆಳೆದು ದೊಡ್ಡವನಾದಾಗ ತನ್ನ ತಂದೆ ಹೇಗೆ ಸತ್ತರು ಎಂದು ತಿಳಿದು ಕೋಪ ಗೊಂಡು ಒಂದು ಹಾವು ಸಾಯಿಸಿತಾ ಇಡೀ ನಾಗ ಕುಲವನ್ನೇ ಸಂಹರಿಸುತ್ತೇನೆ ಎಂದು 

ಮಹಾ ಸರ್ಪಯಾಗವನ್ನು ಮಾಡುತ್ತಾನೆ . ಆ ಯಾಗದ ಪ್ರಕಾರ ಜಗತ್ತಿನಲ್ಲಿರುವ ಎಲ್ಲಾ ಹಾವುಗಳೂ ಬಂದು ಅಗ್ನಿ ಕುಂಡದಲ್ಲಿ ಬೀಳುತ್ತಿದ್ದವು . ಹಿಗಿರುವಾಗ ನಾಗ ಕುಲವು ಭಯದಿಂದ ಇದ್ದಾಗ ನಾಗ ಕುಲದ ದೂರದ ಸಂಬಂದಿ ಯಾದ   #ಆಸ್ತಿಕ ಋಷಿಯು ಜನಮೇಜಯನಿದ್ದಲ್ಲಿಗೆ ಬಂದು ಪ್ರಾರ್ಥಿಸಿದಾಗ 

ಪ್ರಾರ್ಥನೆ ಯನ್ನು ಕೇಳಿ ಸಂಪನ್ನನಾದ ಜನಮೇಜಯ ಏನು ವರ ಬೇಕು ಎಂದಾಗ ಈ ಕೂಡಲೇ ಸರ್ಪಯಾಗ ನಿಲ್ಲಿಸಿ ಇದು ಮಹಾ ಪಾಪ , ಪಾಪದ ಕೆಲಸ ಮಾಡಿದ್ದೀರಿ ನಾಗ ಕುಲ ನಿರ್ನಾಮ ಮಾಡುವುದು ಉತ್ತಮ ಕೆಲಸವಲ್ಲ ಅಂದಾಗ ಜನಮೇಜಯ ತಾನು ಮಾಡುತ್ತಿದ್ದ ಯಾಗ ವನ್ನು ನಿಲ್ಲಿಸಿದನು . ಅದು ಪಂಚಮಿಯ ದಿನ ವಾಗಿತ್ತು . 

ಯಾಗ ನಿಂತು ತಮ್ಮ ಸರ್ಪ ಕುಲ ನಾಶ ವಾಗುವುದನ್ನು ತಡೆದ ಆಸ್ತಿಕ ಋಷಿಗೆ ನಮಿಸಿದ ನಾಗರಾಜ ,ಆಸ್ತಿಕ ಋಷಿಯೇ ನಮ್ಮ ಸಂಕುಲವನ್ನು ಉಳಿಸಿದ ನಿಮಗೆ ವರ ಕೊಡುತ್ತಿದ್ದೇವೆ . ಈ ಪಂಚಮಿಯ ದಿನದಂದು ಯಾಗ ನಿಲ್ಲಿಸಿದ್ದೀರಿ ಈ ದಿನದಂದು ಯಾರು ಆಸ್ತಿಕ ಎಂದು ಹೆಸರನ್ನು ಹೇಳುವರೋ ಅವರಿಗೆ ನಮ್ಮ ನಾಗ ಕುಲ ತೊಂದರೆ ಕೊಡುವುದಿಲ್ಲ .

ಆಸ್ತಿಕ ಅನ್ನುವ ಹೆಸರನ್ನು ಜಪಿಸುವರ ಮೇಲೆ ನಮ್ಮ ಕೃಪೆ ಇರುತ್ತದೆ . ಯಾವ ನಾಗ ದೋಷಗಳು ಅವರಿಗೆ ಬರುವುದಿಲ್ಲ . ಅವರ ಮೇಲೆ ನಮ್ಮ ಕೃಪೆ ಇರುತ್ತದೆ ಎಂದು ವರವನ್ನು ಕೊಡುತ್ತಾನೆ ನಾಗರಾಜ . 

ಈ ಪಂಚಮಿಯ ದಿನದಂದು ಯಾರು ಆಸ್ತಿಕ ಋಷಿಯ ಹೆಸರನ್ನು ಜಪಿಸುವರೋ ಅವರಿಗೆ ಯಾವ ನಾಗ ದೋಷಗಳೂ ಬರುವುದಿಲ್ಲ . 

ಈಗಲಾದರು ಆಸ್ತಿಕ ಆಸ್ತಿಕ ಎಂದು ಜಪಿಸಿರಿ .

ಲೋಕೋ ಸಮಸ್ತೋ ಸುಖಿನೋ ಭವತುಃ ಸನ್ಮಂಗಳಾಮಿ ಭವತುಃ . 

ನಾಗ ರಾಜನ ಕೃಪೆ ಎಲ್ಲರ ಮೇಲೆ ಇರಲಿ .

ಓಂ ನಮಃ ಶಿವಾಯ ಹರ ಹರ ಮಹಾದೇವ .

ಧನ್ಯವಾದಗಳು 

ಮಮತಾ ಎಸ್ ಗೌಡ

ಗಣಪತಿಯ_ಅವತಾರಗಳು

🌺🌺 ಗೌರಿ ಗಣೇಶ ಹಬ್ಬದ ಶುಭಾಶಯಗಳು 🌺🌺

#ಗಣಪತಿಯ_ಅವತಾರಗಳು 

*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*

 *🕉ಬಾಲ ಗಣಪತಿ🕉*

    ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
    
    *🕉ತರುಣ ಗಣಪತಿ🕉*

    ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
    
    *🕉ಭಕ್ತಿ ಗಣಪತಿ🕉*

    ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.
    
    *🕉ವೀರ ಗಣಪತಿ🕉*

    ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
    
    *🕉ಶಕ್ತಿ ಗಣಪತಿ🕉*

    ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
    
    *🕉ದ್ವಿಜ ಗಣಪತಿ🕉*

    "ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
   
    *🕉ಸಿದ್ಧಿ ಗಣಪತಿ🕉*

    ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
  
   *🕉 ಉಚ್ಚಿಷ್ಟ ಗಣಪತಿ🕉*

    ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
    
    *🕉ವಿಘ್ನ ಗಣಪತಿ🕉*

    ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.
    
    *🕉ಕ್ಷಿಪ್ರ ಗಣಪತಿ🕉*

    ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
   
    *🕉ಹೇರಂಬ ಗಣಪತಿ🕉*

    ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.
    
    *🕉ಲಕ್ಷ್ಮೀ ಗಣಪತಿ🕉*

    ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
   
    *🕉ಮಹಾಗಣಪತಿ🕉*

    "ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
    
    *🕉ವಿಜಯ ಗಣಪತಿ🕉*

    ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.
    
    *🕉ನೃತ್ಯ ಗಣಪತಿ🕉*

    ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?
    
    *🕉ಊರ್ಧ್ವ ಗಣಪತಿ🕉*

    ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
    
    *🕉ಏಕಾಕ್ಷರ ಗಣಪತಿ🕉*

    "ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
    
    *🕉ವರದ ಗಣಪತಿ🕉*

    ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
    
    *🕉ತ್ರಯಾಕ್ಷರ ಗಣಪತಿ🕉*

    ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
    
    *🕉ಕ್ಷಿಪ್ರ ಪ್ರಸಾದ ಗಣಪತಿ🕉*

    ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
    
    *🕉ಹರಿದ್ರ ಗಣಪತಿ🕉*

    ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
    
    *🕉ಏಕದಂತ ಗಣಪತಿ🕉*

    ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
    
    *🕉ಸೃಷ್ಟಿ ಗಣಪತಿ🕉*

    ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.
    
    *🕉ಉದ್ಧಂಡ ಗಣಪತಿ🕉*

    ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
    
    *🕉ಋಣಮೋಚನ ಗಣಪತಿ🕉*

    ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
    
    *🕉ದುಂಧಿ ಗಣಪತಿ🕉*

    ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
    
    *🕉ದ್ವಿಮುಖ ಗಣಪತಿ🕉*

    ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
    
    *🕉ತ್ರಿಮುಖ ಗಣಪತಿ🕉*

    ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
    
    *🕉ಸಿಂಹ ಗಣಪತಿ🕉*

    ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
    
    *🕉ಯೋಗ ಗಣಪತಿ🕉*

    ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
   
    *🕉ದುರ್ಗಾ ಗಣಪತಿ🕉*

    ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.

*ಜಪ ವಿಧಗಳು ಪರಿಣಾಮ*

*ಜಪ ವಿಧಗಳು ಪರಿಣಾಮ* 

*ಜಪ ಮತ್ತು ಜಪ ಮಾಲೆಯ ವಿಧಗಳು ಅನುಸರಿಸಿ ಜಪ ಮಾಡುವುದರಿಂದ ಆಗುವ ಪರಿಣಾಮಗಳು*

*"ಜಪ"*
ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ನಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ.

★ಈ ಕಾರಣದಿಂದಲೇ ಇವರು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ.

★ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ.

★ "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ.

“ "ಜ" ಕಾರೋ ಜನ್ಮ ವಿಚ್ಚೇಧನ

"ಪ" ಕಾರೋ ಪಾಪನಾಶಕ

ತಸ್ಮಾಜ್ಯಪ ಇತಿಪ್ರೊಕ್ತೋ

ಜನ್ಮ ಪಾಪ ವಿನಾಶಕ “

"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ

"ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,

ಜನ್ಮ ಪವಿತ್ರವಾಗಬೇಕಾದರೆ "ಜಪ" ಅವ್ಶಕವೆಂದಾಗುತ್ತದೆ.

★"ಜಪ" ಅಂದರೇನು?

ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸನಲ್ಲಾಗಲಿ ಧ್ಯಾನಿಸುವುದೇ "ಜಪ",

ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೆ ಕೇಳಿಸುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೋರಕುತ್ತದೆ.

★ಜಪಿಸುವ ಮಂತ್ರ ಬೀಜಮಂತ್ರವಾಗಲೀ, ತಾರಕ ಮಂತ್ರವಾಗಲೀ ಅಥವಾ ಇಷ್ಟ ದೇವತಾ ಮಂತ್ರವಾಗಲೀ ಗುರುಗಳಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.

★ಜಪದಲ್ಲಿ ಮೂರು ವಿಧಾನಗಳಿವೆ.

"ವಾಚಿಕ" - ಬೇರೆಯವರ ಕಿವಿಗೆ ಕೇಳಿಸುವಂತೆ ಪಠಿಸುವುದು.

"ಉಪಾಂಶು" - ತುಟಿಗಳು ಅಲುಗಾಡುತ್ತಿದ್ದರೂ ಶಬ್ದವು ಹೊರಗೆ ಕೇಳಿಸದಂತೆ ಜಪ ಮಾಡುವುದು

"ಮಾನಸಿಕ - ಮನಸ್ಸಿನಲ್ಲಿ ಧ್ಯಾನಿಸುವುದು.

★ "ವಾಚಿಕ" ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾಂಶು", ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.

★★★ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ★★★

*★★★ಗುರು ಎಂಬ ಶಬ್ದಕ್ಕೆ ಅರ್ಥ ★★★

"ಗು" ಎಂದರೆ ಕತ್ತಲು ಅಥವ ಅಜ್ನಾನ
"ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ.ಗುರುಉಪದೇಶ ಮಾಡುವುದರ ಜೊತೆಗೆಆಶಿರ್ವಾದವನ್ನೂ ಮಾಡುತ್ತಾನೆ.

ಜಪಸರದಲ್ಲಿ ೧೦೮ ಮಣಿಗಳಿರಬೇಕೆಂಬ ನಿಯಮವಿದೆ.

ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ.

ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ.

ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು.

ಜಪದಲ್ಲಿ ವಿಧಗಳಿವೆ★★★

ನಿತ್ಯಜಪ

ವೈಯಕ್ತಿಕ ಜಪ

ಪ್ರಾಯಶ್ಚಿತ ಜಪ

ಅಚಲ ಜಪ

ಜಲ ಜಪ

ಅಖಂಡ ಜಪ

ಪ್ರದಕ್ಷಿಣ ಜಪ

ಲಿಖಿತ ಜಪ

ಕಾಮ್ಯ ಜಪ

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂರ್ಧಭಗಳಲ್ಲಿ ಪಠಿಸಲಾಗುತ್ತದೆ.

ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ.★★★

ಅವುಗಳೆಂದರೆ,

★ಜಪ ಮಾಡುವ ಸ್ಥಳವು ಪರಿಶುದ್ದವಾಗಿರಯೂ, ಶಾಂತ ವಾತಾವರಣದಿಂದ ಕೂಡಿರಬೇಕು.

★ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು.

ಮರದ ಮಣೆ, ಅಥವ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋದ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸಬೇಕು.

★ ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು.

★ ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ.

★ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. "ಅಸಂಖ್ಯಾ ಮಸುರಂ ಯಸ್ಮಾತ್, ತಸ್ಮಾದತೆ ಗಣೀಯತೆ ದೈವಂ" ಎಂಬುದಾಗಿ ತಿಳಿಸಲಾಗಿದೆ.

★ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರಬೆಕು.★

★★ಪ್ರತಿನಿತ್ಯವೂ ಜಪ ಮಡುವುದರಿಂದ ★★

★ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ.

★ಮನಸ್ಸನ್ನು ಭಗವಂತನ ಕಡೆಗೆ ಒಲೆಯುವಂತೆ ಮಾಡು ತ್ತದೆ.

★ ದುಷ್ಕಾರ‍್ಯಗಳನ್ನು ಮಾಡದಂತೆ ತಡೆಹಿಡಿಯುತ್ತದೆ.

★ ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿಯೊಂದು ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ.

★ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ.

★ ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ.

★ ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.

★ ಆದರೆ ತೋರಾಣಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯಾವಾಗಲೀ, ಪುರುಷಾರ್ಥವಾಗಲೀ ದೊರಕುವುದಿಲ್ಲ.

★ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.★

★ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೆ ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.

*ಜಪ*
ಹೆಚ್ಚು ಹೆಚ್ಚು ನಾಮಜಪವನ್ನು ಮಾಡುವುದರಿಂದ ಆಗುವ ಪ್ರಯೋಜನಗಳು
ಒಂದು ಸಂಸ್ಕ್ರತ ಶ್ಲೋಕ ದಿಂದ ಇದನ್ನು ಸಂಪೂರ್ಣ ಅನ್ವಯ ಮಾಡುವ ಪ್ರಯತ್ನ. ಸತ್ಯ.ಪಿ.ಎ......

"ಜ" ಕಾರೋ ಜನ್ಮ ವಿಚ್ಛೇದಃ "ಪ" ಕಾರೋ ಪಾಪನಾಶಕಃ|
 ತಸ್ಮಾಜ್ಜಪ ಇತಿಪ್ರೋಕ್ತೋ ಜನ್ಮ ಪಾಪವಿನಾಶಕಃ||

"ಜ" ಎನ್ನುವ ಅಕ್ಷರವು ಜನ್ಮಗಳನ್ನು ನಾಶಮಾಡುತ್ತದೆ ಎಂದು ತಿಳಿಸುತ್ತದೆ.
"ಪ" ಎನ್ನುವ ಅಕ್ಷರವು ಪಾಪಗಳನ್ನು ನಾಶ ಮಾಡುತ್ತದೆ ಎಂದು ಹೇಳುತ್ತದೆ.

ಜನ್ಮಗಳು ಇಲ್ಲದೆ ಮಾಡಿ ಇರುವ ಪಾಪಗಳನ್ನು ನಾಶ ಮಾಡಿ ಮೋಕ್ಷ ಜ್ಞಾನವನ್ನು ನೀಡುವ ದಾರಿ ಜಪ ಎಂದು ತಿಳಿಯಬಹುದು

ಯಾರು ನಿತ್ಯ ಭಗವಂತನ ನಾಮವನ್ನು ಜಪಿಸುತ್ತಾರೋ ಅವನ ಜವಾಬ್ದಾರಿ ಭಗವಂತನದ್ದು ಆಗಿರುತ್ತದೆ.

ಅಂದರೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಬುದ್ಧಿಯನ್ನು ಪ್ರಚೋದನೆ ಮಾಡಿತ್ತಾನೆ.

ಎಲ್ಲರೂ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಭಗವಂತನ ನಾಮವನ್ನು ಜಪ ಮಾಡಿ

ಕೃಷ್ಣಾರ್ಪಣ ಮಸ್ತು

ಕುಂಕುಮದ_ಮಹತ್ವ

#ಕುಂಕುಮದ_ಮಹತ್ವ - ಹಣೆಗೆ ಕುಂಕುಮವೇ ಭೂಷಣ , ಅದರಲ್ಲೂ ಹೆಣ್ಣಿನ ಹಣೆಯ ಮೇಲೆ ಕುಂಕುಮ ವಿದ್ದರೇನೇಭೂಷಣ , ಕುಂಕುಮ ವಿಲ್ಲದ ಹಣೆ ಸ್ಮಶಾನಕ್ಕೆ ಸಮಾನ ಅನ್ನುವ ಮಾತಿದೆ . ಹೆಣ್ಣು ಹಣೆಯಲ್ಲಿ ಕುಂಕುಮ ವಿಟ್ಟರೆ ಪತಿಗೆ ಅದೇ ರಕ್ಷಾ ಕವಚ . ಆದ್ದರಿಂದ ಪ್ರತಿ ಯೊಬ್ಬ ಹೆಣ್ಣು ಮಕ್ಕಳು ಅದರಲ್ಲೂ ವಿವಾಹಸ್ಥ ಸ್ತ್ರೀಯರು ಹಣೆಯಲ್ಲಿ ಕುಂಕುಮ ವಿಡಲೇ ಬೇಕು .
ಹಣೆಯ ಮದ್ಯೆ ಮಂಗಳನ ಸ್ಥಾನ ವಾದ್ದರಿಂದ ಅಂಗಾರಕನಿಗೆ ಕೆಂಪು ಬಣ್ಣ ಶ್ರೇಷ್ಠವಾದ್ದರಿಂದ ಪ್ರತಿ ಯೊಬ್ಬ ಹೆಣ್ಣೂ ಕೆಂಪು ಕುಂಕುಮ ವಿಟ್ಟರೆ ಶ್ರೇಷ್ಠ . 

ಕಪ್ಪು ಬಣ್ಣದ ಐಲೈನರ್ ಇಡುವುದು ಅಷ್ಟು ಶ್ರೇಷ್ಠ ವಲ್ಲ .‌

ಬನ್ನಿ ಯಾವ ಬೆರಳುಗಳಿಂದ ಕುಂಕುಮ ವಿಡಬೇಕು ಎಂದು ಇಲ್ಲಿ ಸೂಚಿಸಲಾಗಿದೆ . 

#ಕುಂಕುಮ

ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ?

ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?

#ಶಾಸ್ತ್ರ :

ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ.

 ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.

ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.

ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?

ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. 

ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

#ಕುಂಕುಮಾರ್ಚನೆ

    ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ 'ಕುಂಕುಮಾರ್ಚನೆ' ಎನ್ನುತ್ತಾರೆ.

    ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ.

    ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.

    ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ.

    ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

#ಹಣೆಗೆ_ಕುಂಕುಮಧಾರಣೆ_ಮಾಡಿಕೊಳ್ಳುವಾಗ

ಕುಂಕುಮಂ  ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ | ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ 

ಎಂದು ಹೇಳಿಕೊಂಡು ಕುಂಕುಮಧಾರಣೆ ಮಾಡಿಕೊಳ್ಳಬೇಕು.

ಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್‌ ದೇವಿ ಗೌರಿಯಂತೆ ಎನ್ನುವುದುಂಟು!

 ಮಹಿಳೆಯರು ಮಾತ್ರವಲ್ಲ, ಪುರುಷರೂ ವಿವಿಧ ರೀತಿಯಲ್ಲಿ ಕುಂಕುಮ ಧಾರಣೆ ಮಾಡುತ್ತಾರೆ.

 ಭಾರತೀಯ ಪರಂಪರೆ, ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆಯುಂಟು. ಉಂಗುರದ ಬೆರಳಿನಿಂದ ಭ್ರೂಮಧ್ಯೆ ಪುರುಷರೂ, ಸ್ತ್ರೀಯರೂ ಮಕ್ಕಳೂ ಕುಂಕುಮಧಾರಣೆ ಮಾಡುತ್ತಾರೆ. 

ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಇದಕ್ಕೆ "ಮಾಂಗ್‌ ಮೇ ಸಿಂಧೂರ್‌ ಲಗಾನಾ' ಎನ್ನಲಾಗುತ್ತದೆ.

 ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ. 

ಆದರೆ ದಕ್ಷಿಣ ಭಾರತದಲ್ಲಿ ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ , ಹೆಣ್ಣು ಮಕ್ಕಳಲ್ಲಿಯೂ ಸಂಪ್ರದಾಯ.

 ವಿವಿಧ ರೀತಿಯಲ್ಲಿ ಕುಂಕುಮ ಬಳಸುವ ಸಂಪ್ರದಾಯವಿದೆ. 

ಅದಕ್ಕೆ ವಿವಿಧ ಅರ್ಥವೂ ಇದೆ. ವೈಷ್ಣವರಲ್ಲಿ ಧರಿಸುವ ಬಿಳಿಯ ಗೆರೆಗಳ ನಡುವಿನ ಕುಂಕುಮ ಲಕ್ಷ್ಮೀದೇವಿಯ ಪಾದಕಮಲವನ್ನು ಸಾಂಕೇತಿಕವಾಗಿ ಸಂಬೋಧಿಸಿದರೆ, ಬಿಳಿ ಗೆರೆಗಳು ಶ್ರೀಮನ್ನಾರಾಯಣನ ಪಾದಗಳ ಚಿಹ್ನೆಯಾಗಿವೆ.

 ಅಂತೆಯೇ ಭ್ರೂಮಧ್ಯೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.

 ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥಿಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. 

ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆ ಧರಿಸಿದ ಕುಂಕುಮ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಸ್ರಾವ (ಹಾರ್ಮೋನ್‌) ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ. 

ಮಾತ್ರವಲ್ಲ ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಇತರ ನಿರ್ನಾಳ ಗ್ರಂಥಿಯಿಂದ ಹಾರ್ಮೋನ್‌ಗಳೂ ಕ್ರಮಬದ್ದವಾಗಿ ಸ್ರವಿಸಲು ಸಾಧ್ಯವಾಗುವಂತೆ ಮಾಡುತ್ತದೆ.

 ಕುಂಕುಮವನ್ನು ಅರಸಿನ ಅಥವಾ ಕೇಸರಿಯಿಂದ ತಯಾರಿಸಲಾಗುತ್ತದೆ. ಅರಸಿನ ಪುಡಿಯೊಂದಿಗೆ ಸುಣ್ಣವನ್ನು ಸೇರಿಸಿದರೆ ಅದು ಅದ್ಭುತ ಕೆಂಪು ಬಣ್ಣದ ಕುಂಕುಮವಾಗಿ ಮಾರ್ಪಡುತ್ತದೆ. 

ಹಾಂ! ಕುಂಕುಮ ಕಲಬೆರಕೆಯದೋ ಎಂದು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಸುಣ್ಣ ಸೇರಿಸಿದರೆ ಹಳದಿ ಬಣ್ಣ ಪಡೆಯದಿದ್ದರೆ, ಕಲಬೆರಕೆಯ ಕುಂಕುಮ ಎಂದರ್ಥ.

 ಕಲಬೆರಕೆಯ ಕುಂಕುಮ, ರಾಸಾಯನಿಕಗಳಿರುವ ಕುಂಕುಮ ಲೇಪಿಸಿದಾಗ ತುರಿಕೆ ಕಜ್ಜಿಗಳೂ ಉಂಟಾಗುವುದಿದೆ. ಆದ್ದರಿಂದ ಮುತುವರ್ಜಿ ಅವಶ್ಯ. 

ಅಲ್ಲದೆ ಕೃತಕ ಬಿಂದಿಗಳನ್ನು , ಕುಂಕುಮ ಬಣ್ಣದ ಸ್ಟಿಕರ್‌ಗಳನ್ನು ಬಳಸಿದರೂ, ಅದರ ನಿಜವಾದ ಪರಿಣಾಮ ಪ್ರಭಾವ ಉಂಟಾಗುವುದಿಲ್ಲ. 

ಆದರೂ ನಾವು ಅನುಕೂಲಕ್ಕೆಂದೋ, ಫ್ಯಾಷನ್‌ ಎಂದೋ ಕುಂಕುಮದ ಬಿಂದಿ, ಸ್ಟಿಕರ್‌ಗಳನ್ನು , ಬಣ್ಣ ಬಣ್ಣದ ಸ್ಟಿಕರ್‌ಗಳನ್ನೋ ಬಿಂದಿಗಳನ್ನೋ ಬಳಸುವುದು ಸರ್ವೇಸಾಮಾನ್ಯವಾಗಿದೆ.

 ಹಾಂ, ನಮ್ಮ ದೇಹದಲ್ಲಿರುವ 7 ಚಕ್ರಗಳಲ್ಲಿ 6ನೆಯ ಚಕ್ರ ಸ್ಥಿತವಾಗಿರುವುದು ಭ್ರೂಮಧ್ಯೆ - ಅದೇ ಆಜ್ಞಾಚಕ್ರ. ಅದನ್ನು "ಮರ್ಮಪ್ರದೇಶ'ವೆಂದೂ ಕರೆಯಲಾಗುತ್ತದೆ. 

ದೇಹದ ಒಳಗಿರುವ 3ನೆಯ ಕಣ್ಣು ಕೂಡ ಇದೇ ಭಾಗದಲ್ಲಿ ಸ್ಥಿತವಾಗಿದೆ. 3ನೆಯ ಕಣ್ಣು ಇಂದ್ರಿಯವಲ್ಲ, ಬದಲಾಗಿ ಇಂದ್ರಿಯಾತೀತ. ಈ ಭಾಗದಿಂದಲೇ ಜೀವಾತ್ಮದ ರಹದಾರಿ ಪರಮಾತ್ಮನತ್ತ ಸಾಗುವ ಪ್ರಕ್ರಿಯೆ ಆರಂಭ. 

ಆದ್ದರಿಂದಲೇ ಅಲ್ಲಿರಿಸುವ ಕುಂಕುಮ ಕ್ಕೆ ಅಷ್ಟೊಂದು ಪಾವಿತ್ರ್ಯ. ಕುಂಕುಮ ಮಂಗಲಕರವೂ ಹೌದು. 

ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಜಾನಪದೀಯ ಮಾತೊಂದಿದೆ. "ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ'. 

 ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. 

ಅದು ಮಂಗಲಪ್ರದವೆಂದು ನಂಬಿಕೆ. ದೇವಿದೇವತೆಯರ ಪೂಜೆಗೆ ಕುಂಕುಮ ಪವಿತ್ರವಾದ್ದರಿಂದ, ಅದನ್ನೇ ಬಳಸಲಾಗುತ್ತದೆ. ಅದನ್ನೇ ಕುಂಕುಮಾರ್ಚನೆ ಎನ್ನಲಾಗುತ್ತದೆ. 

ಶಕ್ತಿ ಮತ್ತು ಲಕ್ಷ್ಮೀದೇವಿಯರ ಪೂಜೆಯಲ್ಲಿ ಕುಂಕುಮಾರ್ಚನೆಗೆ ಹೆಚ್ಚು ಮಹತ್ವವಿದೆ. ಹಾಂ! ಕುಂಕುಮ ಔಷಧೀಯವೂ ಹೌದು ಕುಂಕುಮವನ್ನು ಎಣ್ಣೆಯೊಂದಿಗೆ ಬೆರೆಸಿ ಮೊಡವೆಗಳಿಗೆ ಲೇಪಿಸಿದರೆ ಮೊಡವೆ ಮಾಯುತ್ತದೆ. 

ಕುಂಕುಮದೊಂದಿಗೆ ಇತರ ಅಂಶಗಳನ್ನು ಹೊಂದಿರುವ ತೈಲವನ್ನು (ಕುಂಕುಮಾದಿ ತೈಲ)ನಿತ್ಯ ಲೇಪಿಸಿದರೆ ಮೊಡವೆ ಕಲೆ ನಿವಾರಣೆಯಾಗುವುದು ಮಾತ್ರವಲ್ಲ ಮೊಗದ ಚರ್ಮವೂ ಸ್ನಿಗ್ಧ ಮತ್ತು ಕೋಮಲವಾಗಿ
ಹೊಳೆಯುತ್ತದೆ.

 ಉತ್ತರ ಭಾರತದ ದೇವಾಲಯಗಳಲ್ಲಿ "ಟೀಕಾಲಗಾನ' ಎಂದು ಹೆಬ್ಬೆಟ್ಟಿನಿಂದ ದೇವರಿಗೆ ಅರ್ಚಿಸಿದ ಕುಂಕುಮದಿಂದ ಹಣೆಯ ಮೇಲೆ ತಿಲಕ ಲೇಪನ ಮಾಡುತ್ತಾರೆ. 

ವಿವಿಧ ಸಾಧುಸಂತರೂ ಕುಂಕುಮವನ್ನು ತಿಲಕವಾಗಿ ವಿವಿಧ ರೂಪದಲ್ಲಿ ಬಳಸುತ್ತಾರೆ. ಬ್ರಹ್ಮಾನಂದ ಪುರಾಣದಲ್ಲಿ ಕೆಂಪು ತಿಲಕವು ಸಂಯಮ ಮತ್ತು ವಿನಯವನ್ನು ಉಂಟುಮಾಡುತ್ತದೆ ಎನ್ನಲಾಗಿದೆ. 

ನಿತ್ಯ ಕುಂಕುಮದ ತಿಲಕಧಾರಣೆ ಸೌಭಾಗ್ಯ, ದೇವದೇವತೆಗಳ ಆಶೀರ್ವಾದ ಉಂಟುಮಾಡುತ್ತದೆ. ದೀರ್ಘ‌ ಜೀವನಕ್ಕೆ ಸಹಕಾರಿ. 

ಯೌವ್ವನಕಾರಕವೂ ಹೌದು ಎನ್ನಲಾಗಿದೆ. ಅನಾಮಿಕಾ (ಉಂಗುರದ) ಬೆರಳಿನಿಂದ ಸರಿಯಾದ ರೀತಿಯಲ್ಲಿ ಧಾರಣೆ ಮಾಡಿದ ಕುಂಕುಮಾದಿಗಳ ತಿಲಕವು ಮೋಕ್ಷಕಾರಕವೆಂದು ಅದರ ಮಹತ್ವವನ್ನು ಶಾಸ್ತ್ರಗಳಲ್ಲಿ ಸಾರಲಾಗಿದೆ. 

ಶಿಕ್ಷಪತ್ರಿ ಶ್ಲೋಕಗಳಲ್ಲಿ ಇವುಗಳನ್ನು ವಿವರಿಸಲಾಗಿದೆ. ಉಪನಿಷದ್‌, ಬ್ರಹ್ಮಾನಂದ ಪುರಾಣ, ಪದ್ಮ ಪುರಾಣಗಳಲ್ಲೂ ತಿಲಕದ ಉಲ್ಲೇಖವಿದೆ.

 ಹೋಳಿ ಹಬ್ಬದ ಸಮಯದಲ್ಲೂ ಕುಂಕುಮದ ಜೊತೆಗೆ ವಿವಿಧ ರಂಗುಗಳನ್ನು ಎರಚಿ ಸಂತಸ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಹೀಗೆ ಕುಂಕುಮಧಾರಣೆಗೆ ವಿವಿಧ ಬಗೆಯ ಮಹತ್ವ, ಅರ್ಥಗಳಿವೆ.

ಸರ್ವರಿಗೂ ಶುಭವಾಗಲಿ ಸುಮಂಗಲಿಯರಿಗೆ
ಸುರಕ್ಷಾ ಕವಚ ಈ ಕುಂಕುಮ
ನಿಮ್ಮ ಸುರಕ್ಷೆ ನಿಮ್ಮ ಬೆರಳಿನಲ್ಲಿದೆ.
ಅನುಸರಿಸುವುದು ನಿಮಗೆ ಕಷ್ಟಕರ ಅನ್ನಿಸಬಹುದು
ಅದನ್ನು ರೂಢಿಸಿಕೊಂಡು ಬಂದಾಗ ಕಷ್ಟ ಅನ್ನೊದೆ ಇರೊದಿಲ್ಲ ಅಲ್ವ.

ಕೃಷ್ಣಾರ್ಪಣ ಮಸ್ತು 🌺🌺🌺🌺🌺🌺🌺

ಪಂಚಪ್ರಾಣ

ನಿಮಗಿದು ತಿಳಿದಿರಲಿ 

#ಪಂಚಪ್ರಾಣ - ಬಹುಷಃ ನೀವು ಆಗಾಗ ನಿಮ್ಮ ಆತ್ಮೀಯರಿಗೆ ಹೇಳಿರಬಹುದು ನೀವೆಂದರೆ ನನಗೆ ಪಂಚ ಪ್ರಾಣ ವೆಂದು .‌ ಪಂಚಪ್ರಾಣ ಅಂದರೆ ಐದು ಪ್ರಾಣ ಅಂತಲಾ ? ಪ್ರಾಣ ಅಂದರೆ ವಾಯು , ವಾಯು ಇದ್ದರೇನೇ ಈ ಭೌತಿಕ ದೇಹ ಉಸಿರಾಡುವುದು ಅಲ್ವಾ .  ಪಂಚಪ್ರಾಣವೆಂದರೆ ಪಂಚ ವಾಯುಗಳು . 

#ಪಂಚ‌ಪ್ರಾಣಗಳು ಎಂದರೇನು ಮತ್ತು ಅದರ ಮಹತ್ವ 

ಮೊದಲು ಪ್ರಾಣಾಅಂದರೆ ಏನು ಅನ್ನುವುದನ್ನು ತಿಳಿಯೋಣ  . 
#ಪ್ರಾಣ ಎಂದರೆ ವಾಯು (ಗಾಳಿ , ಉಸಿರು ), ವಾಯುವೇ ಪ್ರಾಣ ಎಂದು . 

ಈ ವಾಯುವು ಮಾನವನ ದೇಹದಲ್ಲಿ ಐದು ಮುಖ್ಯ ವಾಯುಗಳಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆ ಐದು ಮುಖ್ಯ ಕಾರ್ಯಗಳನ್ನು ಪಂಚ ಪ್ರಾಣಗಳು ಎಂದು ಕರೆಯುತ್ತೇವೆ.

ಪಂಚ ಅಂದರೆ ಐದು
ಪ್ರಾಣ ಎಂದರೆ ವಾಯು
ಜೀವಿಗಳ ದೇಹದಲ್ಲಿ ಇರುವ ಐದು ವಾಯುಗಳೇ ಪಂಚ ಪ್ರಾಣಗಳು . 

1. ಪ್ರಾಣ, 2. ಅಪಾನ, 3. ವ್ಯಾನ, 4. ಉದಾನ, 5. ಸಮಾನ 

1. #ಪ್ರಾಣ ವಾಯುವು  - ಮೂಗಿನ ಮುಖಾಂತರ ಹೃದಯವನ್ನು ಪ್ರವೇಶಮಾಡಿ ನಂತರ ದೇಹದ ಎಲ್ಲಾ ಭಾಗಗಳಿಗೂ ಇದು ರವಾನೆಯಾಗುತ್ತದೆ. ಅದಕ್ಕೆ ಇದನ್ನು ಪ್ರಾಣ ವಾಯು ಎಂದು ಮತ್ತು ಪಂಚ ಪ್ರಾಣಗಳಲ್ಲಿ ಇದು ಮೊದಲಿನದು.

2. #ಅಪಾನ ವಾಯುವು  - ಇದು ಪಂಚ ಪ್ರಾಣಗಳಲ್ಲಿ ಎರಡೆನೆಯದು. ಶ್ವಾಸಕೋಶ ಮತ್ತು ಇತರೆ ಕೆಲವು ಭಾಗಗಳಲ್ಲಿ ಇರುತ್ತದೆ ಮಲ ಮೂತ್ರಗಳ ವಿಸರ್ಜನೆಗೆ, ಈ ವಾಯುವು ಸಹಾಯವಾಗುತ್ತದೆ. ಇದು ಒಂದು ರೀತಿಯ ತಳ್ಳುವಿಕೆಯ (pushing) ರೀತಿಯಲ್ಲಿ ಸಹಾಯ ಆಗುತ್ತದೆ.ಅಪಾನ ವಾಯುವು  ಕರುಳುಗಳ ಮೂಲಕ ವ್ಯರ್ಜ್ಯವಾದ ಮಲವನ್ನು ಹೊರಕ್ಕೆ ತಳ್ಳುತ್ತದೆ ಅದಕ್ಕೆ ವಾಯು ಆಗಾಗ ಹೊರಬರುವುದು ಮಲ ವಿಸರ್ಜನೆ ಮಾಡುವಾಗ . 

3.#ವ್ಯಾನ ವಾಯುವು - ಇದು ಮೂರನೇ ವಾಯು. ಇದು ಕೈಕಾಲುಗಳ, ದೇಹದ ಭಾಗಗಳು ಅಂದರೆ ದೇಹದ ಭಾಗಗಳ ಸಂಕೋಚನೆ ವ್ಯಾಕೋಚನಗಳಿಗೆ ಸಹಾಯ ಆಗುತ್ತದೆ. 

4. #ಉದಾನ ವಾಯುವು  - ಇದು ನಾಲ್ಕನೇ ವಾಯು. ಇದು ವಾಕ್ಕಿಗೆ ಸಹಕಾರಿಯಾದ ವಾಯುವು. ಹಾಡು ಹಾಡುವಾಗ ಮಾತನಾಡುವುದು ಉದಾನವಾಯುವಿನ ಸಹಾಯದಿಂದ .‌

5. #ಸಮಾನ ವಾಯು - ಇದು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಯಾಗುತ್ತದೆ. ತಿಂದ ಆಹಾರ ಜೀರ್ಣವಾಗಲು ಸಹಾಯಕಾರಿ.

ಇವು ಐದು ರೀತಿಯ ಪ್ರಾಣಗಳು ಅಥವಾ ಪ್ರಾಣಯಾವುಗಳು...
ಇವುಗಳನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡವನು ಮಹಾನ್ ಯೋಗಿಯಾಗುತ್ತಾನೆ... ಮತ್ತು ಅತ್ಯಂತ ಆರೋಗ್ಯವಂತ ಮನುಷ್ಯನಾಗಿ ಇರುತ್ತಾನೆ .‌

ಧನ್ಯವಾದಗಳು 

ಮಮತಾ ಎಸ್ ಗೌಡ

ಅಭಿಷೇಕ ಪ್ರಿಯ ಶಿವನಿಗೆ ಯಾವ ಅಭಿಷೇಕ ಮಾಡಿದರೆ ಯಾವ ಫಲ ದೊರೆಯುತ್ತದೆ ಅಂತ ಗೊತ್ತಾ

🌺 ಅಭಿಷೇಕ ಪ್ರಿಯ  ಶಿವನಿಗೆ ಯಾವ ಅಭಿಷೇಕ ಮಾಡಿದರೆ ಯಾವ ಫಲ ದೊರೆಯುತ್ತದೆ ಅಂತ ಗೊತ್ತಾ  🌺🌺

🌺 ಪಂಚಗವ್ಯ, ಪಂಚಾಮೃತ 

ಪಂಚಗವ್ಯ(ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದ ಮಿಶ್ರಣ) ದಿಂದ ಅಭಿಷೇಕ ಮಾಡಿದರೆ ಎಲ್ಲ ರೀತಿಯ ಮಾನವ ಪಾಪಗಳು ನಿವರಣೆಯಾಗುತ್ತವೆ. ಪಂಚಾಮೃತ (ಬಾಳೆಹಣ್ಣು, ಬೆಲ್ಲ, ಸಕ್ಕರೆ, ಖರ್ಜೂರ, ಜೇನು ಹಾಗೂ ಒಣಹಣ್ಣುಗಳು) ಅಭಿಷೇಕದಿಂದ ಶ್ರೀಮಂತಿಕೆ ಪ್ರಾಪ್ತಿಯಾಗುತ್ತದೆ. ತುಪ್ಪದ ಅಭಿಷೇಕದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.

🌺. *ಹಾಲು-ಜೇನುತುಪ್ಪ* ಹಾಲಿನ ಅಭಿಷೇಕದಿಂದ ದೀರ್ಘಾಯುಷ್ಯ, 

🌺. *ಜೇನುತುಪ್ಪದಿಂದ* ಉತ್ತಮ ಧ್ವನಿ-ಸಂಗೀತ ಸಿದ್ಧಿ 

🌺. *ಅಕ್ಕಿ ಹಿಟ್ಟಿನಿಂದ* ಋಣ ವಿಮೋಚನೆ, 

🌺. *ಕಬ್ಬಿನ ಹಾಲಿನಿಂದ* ಆರೋಗ್ಯ ಹಾಗೂ ಶತ್ರುನಾಶ, 

🌺 *ನಿಂಬೆಹಣ್ಣಿನ ಪಾನಕದಿಂದ* ಜೀವ ಭಯ ನಿವಾರಣೆ-ಆರೋಗ್ಯ ಚೇತರಿಕೆ, 

🌺. *ಎಳನೀರಿನಿಂದ*  ಸಂತೃಪ್ತಿ  

🌺. *ಅನ್ನದಿಂದ*  ರಾಜ್ಯಪ್ರಾಪ್ತಿ

🌺. *ಗಂಧದಿಂದ* ಲಕ್ಷ್ಮಿ ಅನುಗ್ರಹ, 

🌺 *ನೀರಿನಿಂದ* ನೆಮ್ಮದಿ,

🌺. *ಎಳ್ಳೆಣ್ಣೆಯಿಂದ* ಅಭಿಷೇಕ ಮಾಡಿದರೆ ಅಪಮೃತ್ಯು ಪರಿಹಾರ, 

🌺 *ಹಸುವಿನ ಹಾಲಿನಿಂದ* ನಾಗಭಯ ನಿವಾರಣೆ, 

🌺. *ಮೊಸರನ್ನದಿಂದ* ಅಲ್ಸರ್ ನಂಥ ಕಾಯಿಲೆ ನಿವಾರಣೆ, 

🌺. *ತುಪ್ಪದಿಂದ* ಆರ್ಥಿಕ ಅನುಗ್ರಹ, 

🌺. *ಭಸ್ಮದಿಂದ* ಮಹಾಪಾಪ ವಿನಾಶ, 

🌺. *ಗಂಧದ* ನೀರಿನಿಂದ ಮಕ್ಕಳ ಏಳಿಗೆ ಯಾಗುತ್ತದೆ.

ಮಾನವರ ದೇಹದಲ್ಲಿ ನವಗ್ರಹಗಳ ಪಾತ್ರ

🌺  ಮಾನವರ ದೇಹದಲ್ಲಿ ನವಗ್ರಹಗಳ ಪಾತ್ರ 🌺

ಮಾನವನ ಆಯುಸ್ಸು 120 ವರ್ಷ.ಇದನ್ನು

ಕೇತು 7 ವರ್ಷ,
ಶುಕ್ರ 20 ವರ್ಷ,.
ರವಿ  6 ವರ್ಷ,
ಚಂದ್ರ 10 ವರ್ಷ,
ಕುಜ 7 ವರ್ಷ,
ರಾಹು 18 ವರ್ಷ,
ಗುರು 16 ವರ್ಷ,
ಶನಿ 19 ವರ್ಷ,
ಬುಧ 17ವರ್ಷ, ಅಂದರೆ-
7+20+6+10+7+18+16+19+17
= 120 ವರ್ಷಗಳಾಗಿ ವಿಂಗಡನೆ ಮಾಡಲಾಗಿದೆ. 

ಇಲ್ಲಿ ತೋರಿಸಿದ ಗ್ರಹಗಳ ಬದಲಾವಣೆಯ ಆಧಾರದಲ್ಲಿ ಮಾನವನ ಬೆಳವಣಿಗೆಗಳು ವೆತ್ಯಾಸವಾಗುತ್ತದೆ. ಆದಿತ್ಯಾದಿ ನವಗ್ರಹರ ರಷ್ಮಿ ಶಕ್ತಿಗಳೇ ಮಾನವಾದಿ ಜೀವರಾಶಿಗಳ ಒಳಗಿರುವುದು. 
ರವಿಯು ಶರೀರವನ್ನು ಸೂಚಿಸುತ್ತಾನೆ. 
ಪರಾಕ್ರಮಾದಿ ಗುಣಗಳನ್ನು ರವಿ ಕುಜರು ಶರೀರದೊಳಗೆ ಸೃಷ್ಟಿಸುತ್ತಾರೆ. 
ತಾಳ್ಮೆ,ಸೌಂದರ್ಯಗಳಿಗೆ ಚಂದ್ರ ಶುಕ್ರರು ಕಾರಣರು. 
ಮನೋಬಲಕ್ಕೆ ಚಂದ್ರನೇ ಕಾರಣ. ಜ್ಞಾನವನ್ನು ನೀಡುವವನು ಗುರುವಾದರೆ, ಬುದ್ಧಿ ಚತುರತೆಗಳಿಗೆ ಕಾರಣನು ಬುಧ.ಶನಿಯು ದೇಹದ ಎಲುಬು (ಕಾಂಕ್ರಿಟ್ ಕಂಬದೊಳಗಿನ ಕಬ್ಬಿಣದ ಸರಳುಗಳಂತೆ) ಕಾರಕನು.ಯಾವಾಗ ಎಲುಬುಗಳು ಕಳಚುತ್ತದೋ ಆಗ ಮೃತ್ಯುವಾಗುತ್ತದೆ. 
ಅಂದರೆ ಶನಿಯು ಮರಣ ಕಾರಕನೂ ಆಗುತ್ತಾನೆ. 
ಅಲ್ಲದೆ ಪೂರ್ವಾಪರಗಳ ಮುತ್ಸದಿತನವನ್ನೂ ನೀಡುವವನು ಶನಿ. ಇನ್ನು ರಾಹು ಕೇತುಗಳು ಸಂಕರ್ಷಣಾ ಶಕ್ತಿಗಳು. ಅಂದರೆ ಉತ್ಸಾಹ ಮತ್ತು ನಿರುತ್ಸಾಹಗಳನ್ನು ನೀಡುವವರು. ಉದಾ: ಜಾತಕದಲ್ಲಿ ರವಿ ಕುಜರು ನಿರ್ಬಲರಾಗಿದ್ದು ರಾಹು ಪರಾಕ್ರಮ ಭಾಗದಲ್ಲಿ ಬಲಿಷ್ಟನಾಗಿದ್ದರೆ ಅತಿಯಾದ ಪರಾಕ್ರಮದ ಉತ್ಸಾಹ ಉಂಟಾಗುತ್ತದೆ. ಆದರೆ ಸಾಧಿಸಲು ಅಸಾಧ್ಯವಾದಾಗ ತಕ್ಷಣ ಸಂಪೂರ್ಣ ನಿರುತ್ಸಾಹಿಯಾಗುತ್ತಾನೆ. 
ಇಲ್ಲಿ ಮುತ್ಸದಿ ಶನಿಯೂ ದುರ್ಬಲನಾಗಿದ್ದರೆ ಪರಾಕ್ರಮ ಮಾಡಲು ಹೋಗಿ ಕೈಕಾಲು ಮುರಿದುಕೊಳ್ಳುವುದೋ ಅಥವಾ ಇನ್ನಾವುದೋ ಅನಾಹುತ ವಾಗಬಹುದು.

ಅದಕ್ಕಾಗಿ ಜ್ಯೋತಿಷ್ಯರಿಂದ ಸಲಹೆ ಪಡೆಯಬೇಕು ಎನ್ನುವುದು. ಜ್ಯೋತಿಷ್ಯರಾದವರಿಗೆ ಈ ಪರಿಜ್ಞಾನ ಇರಲೇ ಬೇಕು. 
ಹೀಗೇ ಒಂದೊಂದು ಗ್ರಹಗಳು ಒಂದೊಂದು ಬಲವನ್ನು ನೀಡುತ್ತಾರೆ. ಈ ಗ್ರಹರ ಸಂಧಿಕಾಲದಲ್ಲಿ ಆಸಕ್ತಿಗಳ ಬದಲಾವಣೆಯೂ ಆಗುತ್ತದೆ. ಇಲ್ಲಿ ಶುಕ್ರಾದಿತ್ಯ, ಕುಜ ರಾಹು, ರಾಹು ಬೃಹಸ್ಪತಿ ಸಂಧಿಗಳ ಕಾಲ ಅಪಾಯಕಾರಿ.ಇದು ಮನುಷ್ಯನ mentality ಬದಲಾಗುವ ಕಾಲವಿದು. ಬೇರೆ ಗ್ರಹರಲ್ಲೂ ಇದೇರೀತಿ ಇದ್ದರೂ ಅದು ಅಪಾಯ ಕಾರಿಯಾಗುವುದಿಲ್ಲ. ಹಾಗಾಗಿ ಇದಕ್ಕೆ ಪುರಾತನರು ಸಂಧಿ ಶಾಂತಿ ಹೋಮ ಪರಿಹಾರಗಳನ್ನು ತಿಳಿಸಿದ್ದಾರೆ. ಇನ್ನು ಆಹಾರ ನಿಯಮಗಳಿಂದಲೂ ಸಾಧ್ಯವಿದ್ದರೆ  ನಿಯಂತ್ರಿಸಬಹುದು. ಯಾಕೆಂದರೆ ಗ್ರಹರ ರಷ್ಮಿಗಳು vitamin, protein ಗಳಿಗೂ ಕಾರಕವಾಗುತ್ತದೆ. ಯಾವಾಗ ಈ ಪೋಷಕಾಂಶಗಳ ಕೊರತೆಗಳುಂಟಾಗುತ್ತದೋ ಆಗ ರೋಗೋತ್ಪತ್ತಿ, ಮರಣಾದಿಗಳು ಸಂಭವಿಸುತ್ತದೆ. ಜಗತ್ತಿನ ಪ್ರತಿಯೊಂದು ನಾವು ತಿನ್ನುವ ಆಹಾರಗಳಿಗೆ ಗ್ರಹರ ಕಾರಕತ್ವ ಇರುತ್ತದೆ. ಉದಾ: ಕೆಲವರು ಹೇಳುವ ಮಾತುಗಳನ್ನು ನೀವು ಕೇಳಿರಬಹುದು. ' ಮೊದಲು ನನಗೆ ಸಿಹಿ ಎಂದರೆ ಪಂಚಪ್ರಾಣ.ಈಗ ಸಿಹಿಯೇ ಇಷ್ಟವಿಲ್ಲ. ಈಗ ಖಾರವೇ ಇಷ್ಟ, ಆ ತರಕಾರಿ ನನಗೆ ತುಂಬಾ ಇಷ್ಟವಿತ್ತು ಈಗ ಅದರ ವಾಸನೆ ಬಂದರೂ ಇಷ್ಟವಾಗದು ಎಂಬಿತ್ಯಾದಿ ವಿಚಾರಗಳನ್ನು ಹೇಳುತ್ತಾರೆ.ಇದೆಲ್ಲಾ ದೇಹದ ಬೆಳವಣಿಗೆಯ ಫಲಗಳು.ಅಂದರೆ ದಶಾ ಕಾಲಗಳ ಫಲ. ಹಾಗಾಗಿ ದೇಹದ ಆಯುಸ್ಸು 120 ವರ್ಷಗಳನ್ನು ನವಗ್ರಹರು ಸೂಚಿಸುತ್ತಾರೆ.ಇದನ್ನು ಈ ರೀತಿ ವಿಂಗಡಿಸಲಾಗಿದೆ. ಒಟ್ಟಿನಲ್ಲಿ 'ಶರೀರ ಮಾಧ್ಯಂ ಖಲು ಧರ್ಮ ಸಾಧನಂ' ಎಂಬಂತೆ ಸಕಲ ಕರ್ಮಗಳಿಗೂ ಶರೀರದ ಸೌಖ್ಯವೇ ಅಗತ್ಯ.ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ.

ದೇಹದ ರಕ್ಷಣೆಯಿಂದ ದೇಶವನ್ನು ಕಟ್ಟಬಹುದು.
ದೇಶದ ಸ್ವಾಸ್ಥ್ಯವು ದೇಹದ ಸ್ವಾಸ್ಥ್ಯದ ಆಧಾರದಲ್ಲಿದೆ.

ಕೃಪೆ ಶ್ರೀವಿದ್ಯಾ 🙏 ಕೃಷ್ಣಾರ್ಪಣ ಮಸ್ತು 🌺🌺🌺

ಏಕಾದಶಿಗಳ_ಹೆಸರುಗಳು ಮತ್ತು ಅವುಗಳ ಫಲ

🌺 #ಏಕಾದಶಿಗಳ_ಹೆಸರುಗಳು ಮತ್ತು ಅವುಗಳ ಫಲ 🌺

1. ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.

2. ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.

3 . ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.

4.   ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ

5 .  ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ

6 . ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)

7 .  ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ

8 . ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.

9 .  ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ

10 .  ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ

11 .  ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ

12 .  ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.

13.  ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು

14 .  ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ

15 .  ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ

16 .  ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)

17 .  ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)

18 .  ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ

19 .  ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)

*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.

20 .  ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ ಬಾಧೆಗಳಿಂದ ಮುಕ್ತಿ (ತೆಲುಗಿನಲ್ಲಿ ಈತಿ ಬಾಧಾ ನಿವಾರಣಂ ಎಂದು ಹೇಳಲಾಗಿದೆ)

21 .  ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ

22.  ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)

23 .  ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ

24 .  ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ...... 🌺🌺🌺🌺🌺🌺

ಕೃಷ್ಣಾರ್ಪಣ ಮಸ್ತು

ಕೃಷ್ಣಾರ್ಪಣಮಸ್ತು

🌺🌺  #ಕೃಷ್ಣಾರ್ಪಣಮಸ್ತು ಅದರ  ಮಹತ್ತ್ವ 🌺🌺

ನಮ್ಮಲ್ಲೊಂದು ಕ್ರಮವಿದೆ, ಯಾವುದೇ ಪೂಜೆಯ ಕೊನೆಗೆ ಅಥವಾ ಯಾವುದೇ ಸೇವೆ ಯಾ ವಸ್ತು ದೇವರಿಗೆ ಅರ್ಪಿಸುವಾಗ "ಕೃಷ್ಣಾರ್ಪಣಮಸ್ತು" ಎಂದು ಹೇಳಿ ತುಳಸಿ ನೀರು ಬಿಟ್ಟು ಸೇವೆ ಯಾ ವಸ್ತುವನ್ನು ದೇವರಿಗೆ ಅರ್ಪಿಸಿ ತುಳಸಿಯನ್ನು ಮಾತ್ರ ಸ್ವೀಕರಿಸುತ್ತೇವೆ. ಯಾಕೆ ಶ್ರೀಕೃಷ್ಣಾರ್ಪಣಮಸ್ತು" ಯಾಕಿಲ್ಲ ರಾಮಾರ್ಪಣಮಸ್ತು, ವೆಂಕಟರಮಣಾರ್ಪಣಮಸ್ತು, ಮತ್ಸ್ಯಾರ್ಪಣಮಸ್ತು, ಕೂರ್ಮಾ ರ್ಪಣಮಸ್ತು, ವರಾಹಾರ್ಪಣಮಸ್ತು, ನರಸಿಂಹಾರ್ಪಣಮಸ್ತು, ವಾಮನಾರ್ಪಣಮಸ್ತು, ಭಾರ್ಗವಾರ್ಪಣಮಸ್ತು, ಬುದ್ಧಾ ರ್ಪಣಮಸ್ತು, ಕಲ್ಕ್ಯರ್ಪಣಮಸ್ತು ಅಥವಾ ಯಾವುದೇ ದೇವರ ಹೆಸರಿನಲ್ಲಿ ಅರ್ಪಣಮಸ್ತು?

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹತ್ತ್ವವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ  ದೇವರು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಶ್ರೀ ಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಶ್ರೀ ಕೃಷ್ಣನನ್ನು " ಗೋವಿಂದ" ಎಂದು ಕರೆಯುವುದು. 

ಗೋವಿಂದ ಎಂದರೆ ಗೋಪಾಲಕನಲ್ಲ. "ಗೋ" ಎಂದರೆ ಇಂದ್ರಿಯ , (ಮಾತು)"ವಿಂದ" ಎಂದರೆ ನಿಲುಕು ಅಥವಾ ಸಿಗು ಎಂಬರ್ಥ. ಯಃ ಗಾಃ( ಇಂದ್ರಿಯಾಣಾಂ) ವಿಂದತಿ ಸಃ ಗೋವಿಂದಃ, ಅವನೇ ಶ್ರೀ ಕೃಷ್ಣ.

ಶ್ರೀ ಕೃಷ್ಣಾವತಾರವು ಒಂದು ಸಂಪೂರ್ಣ ಅವತಾರ. (ಆದಿ ಹಾಗೂ ಅಂತ್ಯವನ್ನು ತೋರಿದ ಎಂಬಥ೯ದೊಳು ಮಾತ್ರ)ಈ ಅವತಾರದಲ್ಲಿ ದಶಾವತಾರದ ಒಂಬತ್ತು ಅವತಾರಗಳಲ್ಲಿ ಭಗವಂತನು ತೋರಿಸಿದ ಲೀಲೇಗಳೆಲ್ಲವೂ ಇವೆ. ಹಾಗಾಗಿ ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದರೆ ಉಳಿದೆಲ್ಲಾ ದೇವರಿಗೂ(ಅವತಾರಗಳಿಗೂ) ಅರ್ಪಿಸಿದಂತೆ. ಹಾಗಾಗಿಯೇ "ಶ್ರೀ ಕೃಷ್ಣಾರ್ಪಣಮಸ್ತು".

ನಮ್ಮಲ್ಲಿ ಕೆಲವರಿಗೊಂದು ಅಭ್ಯಾಸವಿದೆ, ಮನುಷ್ಯ ಸಹಜವಾದ ಅಭ್ಯಾಸ -ಇದು ನಾನು :-ದೇವರಿಗೆ ಅರ್ಪಿಸಿದ್ದು, ಇದು ನನ್ನದು, ನಾನು ಅತೀ ದೊಡ್ಡ ಕಾಣಿಕೆ ಯಾ ಸೇವೆ ಮಾಡಿದ್ದೇನೆ. ನನಗೆ ಅಗ್ರ ಪ್ರಸಾದ ಸಿಗಬೇಕು, ಹೆಸರನ್ನು ಬೋರ್ಡ್ ಮೇಲೆ ಬರೆಯದಿದ್ದರೆ ಕೋಪ ....ಇತ್ಯಾದಿ.

ಇದೆಲ್ಲವೂ ನಮ್ಮ ಅಹಂ ತೋರಿಸುತ್ತದೆ. ಒಮ್ಮೆ ದೇವರಿಗೆ ಕೃಷ್ಣಾರ್ಪಣ ಆಯಿತೋ ಆ ವಸ್ತು ಯಾ ಸೇವೆ ಯಾ ಪೂಜೆ ದೇವರಿಗೆ ಸೇರಿದ್ದು. ನಮಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ. ಕೃಷ್ಣಾರ್ಪಣೆಯ ತುಳಸಿಯೊಂದೇ ನಮ್ಮ ಭಾಗಕ್ಕೆ. ಅಹಂಕಾರವನ್ನು ತ್ಯಜಿಸಿ ಕೃಷ್ಣಾರ್ಪಣ ಮಾಡಿದರಂತೂ ಅಮಿತ ಪುಣ್ಯ ಫಲ.

 ಗೋವಿಂದನ ಮುಂದೆ ಅಹಂಭಾವದಿಂದ ವರ್ತಿಸಿದರೆ "for every action there is an equal and opposite reaction". ನಿರಂಹಂಕಾರದಿಂದ ಗೋವಿಂದನ ಮುಂದೆ ವರ್ತಿಸಿದರೆ ಜೀವನದಲ್ಲಿ "only ಭಗವಂತನ ACTION - ಅದುವೇ ದೇವರ ಕೃಪೆ, ಶ್ರೀ ಕೃಷ್ಣಾನುಗ್ರಹ".

ಕೃಷ್ಣಾರ್ಪಣವೇ ಯಾಕೆ ?

ಎಲ್ಲರೂ ಸಂಧ್ಯಾವಂದನಾದಿ ಕರ್ಮಗಳನ್ನು ಮಾಡಿ ಕೃಷ್ಣಾರ್ಪಣವೆನ್ನುತ್ತಾರೆ 

ಕೃಷ್ಣಾರ್ಪಣವೇ ಯಾಕೆ ಎಂದರೆ ಕೆಲವರು ಕೃಷ್ಣ ರೂಪ ಕಲಿಯುಗಕ್ಕೆ ಅತ್ಯಂತ ಹತ್ತಿರ ರೂಪವಾದ್ದರಿಂದ ಕೃಷ್ಣಾರ್ಪಣವೆನ್ನಬೇಕು ಎಂದು ಹೇಳುತ್ತಾರೆ. ಅದು ಸರಿ. ಆದರೆ ಅದರ ಜೊತೆಗೆ ಬ್ರಹ್ಮಾಂಡಪುರಾಣದ ವೆಂಕಟೇಶ ಮಹಾತ್ಮೆಯಲ್ಲಿ ಈ ರೀತಿ ತಿಳಿಸುತ್ತಾರೆ 

ಕೃತೇ ಶ್ವೇತಂ ಹರಿಂ ವಿಂದ್ಯಾತ್ ತ್ರೇತಾಯಾಂ ರಕ್ತವರ್ಣಕಂ ದ್ವಾಪರೇ ಪೀತವರ್ಣಂ ತು ಕೃಷ್ಣವರ್ಣಂ ಕಲೌ ಯುಗೇ 

ಎಲ್ಲಾ ಜೀವರ ಹೃದ್ಗುಹಾವಾಸಿಯಾದ ಭಗವಂತ ಒಬ್ಬನೇ ಆದರೂ, ಯುಗಾನುಸಾರ ತನ್ನ ಬಣ್ಣವನ್ನು ಬದಲಿಸುತ್ತಾನೆ.

ಕೃತಯುಗದಲ್ಲಿ ಬಿಳಿ, ತ್ರೇತೆಯಲ್ಲಿ ಕೆಂಪು, ದ್ವಾಪರದಲ್ಲಿ ಹಳದಿ ಹಾಗು ಕಲಿಯುದಲ್ಲಿ ಕೃಷ್ಣ ಬಣ್ಣದಿಂದ ಕೂಡಿ ಎಲ್ಲರ ಬಿಂಬನಾಗಿದ್ದಾನೆ."ಕೃಷ್ಣ ವಣ೯೦ಕಲೌ ಕೃಷ್ಣಂ" ಎಂದಿದ್ದಾರೆ. ಆದ್ದರಿಂದಲೇ ಕೃಷ್ಣಾರ್ಪಣವೆನ್ನುವುದು ಅತ್ಯಂತ ಸಮಂಜಸವಾದದ್ದು 

ಅದಕ್ಕೆ ಏನೋ ವ್ಯಾಸರಾಯರು ಮೂರು ಬಾರಿ ಕೃಷ್ಣನನ್ನು ಕರೆದದ್ದು. ಒಂದು ಬಿಂಬನನ್ನು, ಮತ್ತೊಂದು ಅವತಾರ ರೂಪವನ್ನು ಮಗದೊಂದು ಮೂಲರೂಪವನ್ನು 

ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ ಸಂತುಷ್ಟನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನು. ಸ್ವತಃ ಶ್ರೀಕೃಷ್ಣನೇ ಗೀತೆಯಲ್ಲಿ ತಿಳಿಸಿದ್ದಾನೆ ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್। ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದಪ೯ಣಮ್।। ಏನೇ ಮಾಡು ಅದನ್ನು ನನಗಪಿ೯ಸು ಎಂದು ನೇರವಾಗಿ ತನಗಪಿ೯ಸುವಂತೆ ತಿಳಿಸಿಲ್ಲವೇ? 
ಅಂದ ಹಾಗೆ *ಶ್ರೀ ಕೃಷ್ಣಾಪ೯ಣಮಸ್ತು*

#ಯಮದೀಪಾರಾಧನೆ

ನಾಳೆ ಸಂಜೆ ದಕ್ಷಿಣ ದಿಕ್ಕಿನಲ್ಲಿ ದಕ್ಷಿಣದ ಕಡೆ ಮುಖ ಮಾಡಿ ದೀಪವನ್ನು ಹಚ್ಚಿ  . ಇದಕ್ಕೆ ಯಮ ದೀಪಾರಾಧನೆ ಅನ್ನುವರು  ಯಾಕೆ ಹೀಗೆ ಏನಿದರ ಕಾರಣ ಇದಕ್ಕೊಂದು ಪೌರಾಣಿಕ ಹಿನ್ನಲೆ ಇದೆ .‌

ಒಂದು ದಿನ ಯಮಧರ್ಮರಾಜನು ತಂಗಿಯನ್ನು ನೋಡಲು ತಂಗಿಯ ಮನೆಗೆ ಹೋದನು ತಂಗಿ ಯಮಿ ಅಣ್ಣನನ್ನು ನೋಡಿ ಸಂತೋಷ ಕೊಂಡು ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸಿ ಅಣ್ಣನ ಅರೈಕೆ ಮಾಡಿದಳು ತಂಗಿ ಇಟ್ಟಿರುವ ಅಣ್ಣನ
ಮೇಲೆ ಪ್ರೀತಿಯನ್ನೂ ನೋಡಿ ಅಣ್ಣ ತುಂಬಾ ಸಂತೋಷಪಟ್ಟನು.

 ಇವರಿಬ್ಬರೂ ಸೂರ್ಯ ದೇವನ ಮಕ್ಕಳು ಯಮಧರ್ಮರಾಜನು ನ್ಯಾಯಕ್ಕೆ ಆದರೆ ತಂಗಿ ಯಮಿನಿ ಕಾಲಕ್ಕೆ ಅಧಿಪತಿಯಾದವಳು ಈಕೆಗೆ ಮುಂದೆ ಹೋಗುವುದು ಗೊತ್ತು ಆದರೆ ಹಿಂದೆ ಬರುವುದು ಗೊತ್ತಿಲ್ಲ ಆದೆ ಕಾಲ ಈ ಮಾಸದಲ್ಲಿ ಈ ದಿನ ಬಿಟ್ಟರೆ ಈ ಕಾರ್ತಿಕ ಮಾಸ ಮುಗಿಯುವದರೊಳಗೆ ಬೆಳಿಗ್ಗೆ ಅಥವಾ ಸಂಜೆ ಈ ದೀಪದ ಪೂಜೆ ಮಾಡಬಹುದು .

ತಂಗಿಯ ಈ ಪ್ರೀತಿಯನ್ನು ಕಂಡು ಅಣ್ಣ ಹೋಗುವಾಗ ಏನಾದರೂ ಕೇಳುತಂಗಿ ಕೊಡುವೆ ಎಂದು ಕೇಳಿದ ಅದಕ್ಕೆ ಯಮಿ ಅಣ್ಣ ಯಾರು ಈ ಮಾಸದಲ್ಲಿ ಈ ತಿಥಿಯಂದು ತಂಗಿಯ ಕೈ ಊಟ ಮಾಡುವರೊ ಅವರಿಗೆ ಅಕಾಲಮೃತ್ಯು ನಿವಾರಣೆ ಮಾಡು ಪ್ರತಿಯೊಂದು ಹೆಣ್ಣು ಮಕ್ಕಳು ಪ್ರತಿವರ್ಷವೂ ಅಣ್ಣ ಈ ಮಾಸದಲ್ಲಿ ಬರುವನು ಎಂದು ಎದುರು ನೋಡಲಿ ಎಂದು ವರವನ್ನು ಬೇಡಿಕೊಂಡಳು ಆಗ ಯಮಧರ್ಮರಾಜನು ತಂಗಿಗೆ ಸುಪ್ರಸನ್ನನಾಗಿ ವರವನ್ನು ಕೊಟ್ಟನು.

ಅಂದರಿಂದ ಈ ಮಾಸದಲ್ಲಿ ತಂಗಿ ಮನೆಗೆ ಹೋಗಿ ಊಟ ಮಾಡಿ ಬರುವುದು ಸಾಧ್ಯವಿಲ್ಲದೆ ಇರುವವರು ಪ್ರತಿಯೊಬ್ಬರು ಈ ಯಮ ದೀಪಾರಾಧನೆ ಮಾಡಿದರೆ ಅಕಾಲಮೃತ್ಯು ಹಾಗೂ ದಾರಿದ್ರ್ಯ ನಿವಾರಣೆಯಾಗುತ್ತದೆ.

ಆದ್ದರಿಂದ ಇವತ್ತು ಸಂಜೆ ಮನೆಯ ದಕ್ಷಿಣ ದಿಕ್ಕು ನೋಡುವಂತೆ ದೀಪವಿಟ್ಟು ದೀಪ ಬೆಳಗಬೇಕು ಆಗ ಈ ಕೆಳಗಿನ ಮಂತ್ರ ಹೇಳಬೇಕು ದೀಪ ಹಚ್ಚುವಾಗ .‌ನಂತರ ಶ್ಲೋಕ ಹೇಳಬೇಕು .‌

ದೀಪವನ್ನು ಇಡುವ ಮೊದಲು ನೆಲ ಒರಸಿ ರಂಗವಲ್ಲಿ ಹಾಕಿ ದೀಪವಿಟ್ಟು ಹೂ ಇಟ್ಟು ಅರಿಶಿನ ಕುಂಕುಮವಚ್ಚಿ ಹಚ್ಚಬೇಕು . 

#ಯಮದೀಪ_ ಹಚ್ಚುವಾಗ ಈ ಮಂತ್ರ ಹೇಳಿ 

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ ||  ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ll

ಅಂತ ಹೇಳುತ್ತಾ ದೀಪ ಹಚ್ಚಿ ನಂತರ ಈ ಸ್ತೋತ್ರ ಹೇಳಿ 

#ಸ್ತೋತ್ರ

ಯಮಾಯ ಧರ್ಮರಾಜಾಯ ಮೃತ್ಯವೇ ಚಾಂತಕಾಯ ಚ | ವೈವಸ್ವತಾಯ ಕಾಲಾಯ ಸರ್ವಭೂತ-ಕ್ಷಯಾಯ ಚ ||

 ಔದುಂಬರಾಯ ದಧ್ಯಾಯ ನೀಲಾಯ ಪರಮೇಷ್ಟಿನೇ || ವೃಕೋದರಾಯ ಚಿತ್ತಾಯ ಚಿತ್ರಗುಪ್ತಾಯ ವೈ ನಮಃ ||

ಹೀಗೆ ಮಾಡಿದರೆ ಯಮನ ಅನುಗ್ರಹ ಸಿಗುತ್ತದೆ .

33 ಕೋಟಿ ದೇವತೆಗಳು ಯಾವುವು ?


ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು ಮತ್ತು ಅವರ ಹೆಸರು
 ಹಿಂದೂ ಧಾರ್ಮಿಕ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿರುವ 33 ಕೋಟಿ ದೇವತೆಗಳು ಯಾರು, ಅವರ ಹೆಸರುಗಳೇನು ಗೊತ್ತೇ!?

ಹಿಂದೂ ಧರ್ಮ – ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ. ಬಹುತೇಕ ಜನರು ಇಲ್ಲಿ ‘ಕೋಟಿ’ ಅಂದರೆ ಸಂಖ್ಯೆ ಅಂದುಕೊಂಡಿದ್ದಾರೆ. ಮತ್ತು 33 ಕೋಟಿ ಹೆಸರುಗಳನ್ನು ಹೇಳಿರೆಂದು ತಾಕೀತು ಮಾಡುತ್ತಾರೆ. ವಾಸ್ತವದಲ್ಲಿ, ಈ ‘ಕೋಟಿ’ ಸಂಖ್ಯೆಯನ್ನು ಸೂಚಿಸುವ ಕೋಟಿಯಲ್ಲ. ಸಂಸ್ಕೃತದಲ್ಲಿ ‘ಕೋಟಿ’ ಅಂದರೆ ‘ವಿಧ’, ‘ವರ್ಗ’ (type) ಎಂಬ ಅರ್ಥವೂ ಇದೆ.

ಉದಾ: ಉಚ್ಚಕೋಟಿ. ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು. ಹಾಗೆಯೇ ಮತ್ತೊಂದು ಉದಾಹರಣೆ : ಸಪ್ತಕೋಟಿ ಬುದ್ಧರು. ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು. 

ಯಜುರ್ವೇದ, ಅಥರ್ವ ವೇದ, ಶತಪಥ ಬ್ರಾಹ್ಮಣ ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧದ ದೇವತೆಗಳನ್ನು ಉಲ್ಲೇಖಿಸಲಾಗಿದೆ. ಇವರೇ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು. ಹಿಂದೂ ಗ್ರಂಥಗಳು ಮಾತ್ರವಲ್ಲ, ಬೌದ್ಧ, ಪಾರಸಿ ಮೊದಲಾದವು ಕೂಡಾ 33 ದೇವವರ್ಗಗಳ ಕುರಿತು ಹೇಳುತ್ತವೆ. ಬೌದ್ಧರ ದಿವ್ಯ ವಾದನ ಮತ್ತು ಸುವರ್ಣ ಪ್ರಭಾಸ ಸೂತ್ರಗಳಲ್ಲಿ ಇದರ ಉಲ್ಲೇಖವಿದೆ.

ಈಗ ದೇವತೆಗಳ ಈ 33 ವರ್ಗಗಳನ್ನೂ, ಅವುಗಳಲ್ಲಿ ಬರುವ ದೇವತೆಗಳ ಹೆಸರನ್ನೂ ನೋಡೋಣ :

12 ಆದಿತ್ಯರು (ದ್ವಾದಶಾದಿತ್ಯರು) : 1. ತ್ವಷ್ಟ  2. ಪೂಷ  3. ವಿವಸ್ವಾನ್  4. ಮಿತ್ರ  5. ಧಾತಾ  6. ವಿಷ್ಣು  7. ಭಗ  8. ವರುಣ  9. ಸವಿತೃ 10. ಶಕ್ರ  11. ಅಂಶ  12. ಅರ್ಯಮ

11 ರುದ್ರರು (ಏಕಾದಶರುದ್ರಾಃ) : 1. ಮನ್ಯು  2. ಮನು  3. ಮಹಿನಸ  4. ಮಹಾನ್  5. ಶಿವ  6. ಋತಧ್ವಜ  7. ಉಗ್ರರೇತಾ  8. ಭವ  9. ಕಾಲ  10. ವಾಮದೇವ  11. ಧೃತವೃತ

8 ವಸುಗಳು (ಆಷ್ಟವಸವಃ) : 1. ದ್ರೋಣ 2. ಪ್ರಾಣ 3. ಧ್ರುವ 4. ಅಕ  5. ಅಗ್ನಿ 6. ದೋಷ 7. ವಸು 8. ವಿಭಾವಸು.

ಮತ್ತಿಬ್ಬರು : 1. ಇಂದ್ರ 2.ಪ್ರಜಾಪತಿ

ತ್ರಯತ್ರಿಂಶತಿ (33) ಕೋಟಿ ದೇವತೆಗಳು ಯಾರೆಲ್ಲ ಎಂದು ತಿಳಿಯಿತಲ್ಲ? ಈ ಹೆಸರುಗಳನ್ನು ಬಾಯಿಪಾಠ ಮಾಡುವುದು ಬಹಳ ಸುಲಭ. ಯಾರಾದರೂ ಇನ್ನು 33 ಕೋಟಿ ದೇವತೆಗಳ ಹೆಸರು ಹೇಳಿ ಎಂದರೆ ಹಿಂದೆ ಮುಂದೆ ನೋಡುವ ಅಗತ್ಯವೇ ಇಲ್ಲ! ಅಲ್ಲವೆ?

 
ಕೃಷ್ಣರ್ಪಣ ಮಸ್ತು