Tuesday, 11 August 2020

ಮಹಾವೀರನಾದ ಕರ್ಣನ ಮರಣ‌ ಶಾಸನ ಬರೆದ ಮೂರು ಭೀಕರ ಶಾಪಗಳು

ಮಹಾಭಾರತದ ಮಹಾವೀರ, ದಾನ ವೀರ ಶೂರ ಎನಿಸಿದ ಕರ್ಣನ ಪಾತ್ರ ಅದೆಷ್ಟೋ ಜನರಿಗೆ ಬಹಳ ಅಚ್ಚುಮೆಚ್ಚಿನ ಪಾತ್ರವೂ ಕೂಡಾ. ಅಸಾಮಾನ್ಯ ಶೂರನಾದ ಕರ್ಣನು ಧನುರ್ವಿದ್ಯೆಯಲ್ಲಿ ಅರ್ಜುನನಿಗೆ ಸಮವರ್ತಿ. ಆದರೂ ಸಹಾ ಕುರುಕ್ಷೇತ್ರ ರಣರಂಗದಲ್ಲಿ ಕರ್ಣನು ಕೂಡಾ ಹತನಾದನು. ಇದಕ್ಕೆ ಕಾರಣ ಆತನಿಗೆ ಅಂಟಿದ್ದ ಮೂರು ಮುಖ್ಯ ಶಾಪಗಳು. ಕರ್ಣನ ಅಂತ್ಯಕ್ಕೆ ಕಾರಣವಾದ ಆ ಮೂರು ಶಾಪಗಳ ಬಗ್ಗೆ ತಿಳಿಯೋಣ ಬನ್ನಿ.

ಭೂದೇವಿಯ ಶಾಪ: ಹಾಲನ್ನು (ಅಥವಾ ತುಪ್ಪ) ನೆಲದ ಮೇಲೆ ಬೀಳಿಸಿ ಚೆಲ್ಲಿದ ಬಾಲಕಿಯೊಬ್ಬಳು ತನ್ನ ತಾಯಿ ಬೈಯ್ಯುವಳೆಂಬ ಭಯದಿಂದ ಇದ್ದಾಗ, ಕರ್ಣನು ಆ ಪುಟ್ಟ ಹುಡುಗಿಗೆ ಸಹಾಯ ಮಾಡಲು, ನೆಲದ ಮೇಲಿನ ಮಣ್ಣನ್ನು ಎತ್ತಿ ಅದನ್ನು ಗಟ್ಟಿಯಾಗಿ ಹಿಂಡಿ, ತಿರುಚುವ ಮೂಲಕ ಹಾಲನ್ನು ಹಿಂಪಡೆಯಲು ಪ್ರಯತ್ನ ಮಾಡುವಾಗ, ಭೂದೇವಿಗೆ ಆ ನೋವು ತುಂಬಾ ಅಸಹನೀಯವಾಗಿತ್ತು. ಆಕೆ ನೋವಿನಿಂದ ಕರ್ಣನನ್ನು ಶಪಿಸಿಯೇ ಬಿಟ್ಟಳು. ಭೂದೇವಿಯು ಅವನಿಗೆ ಅಪಾಯದ ವೇಳೆಯಲ್ಲಿ ತಾನು ಯಾವುದೇ ಸಹಾಯ ಮಾಡುವುದಿಲ್ಲ ಎಂದು ಶಪಿಸಿದಳು.‌ ಅದರಂತೆ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ರಥ ಚಕ್ರ ಭೂಮಿಯಲ್ಲಿ ಕುಸಿದು ಹೋಗಿದ್ದು ಇದೇ ಕಾರಣದಿಂದ.

ಗುರು ಪರಶುರಾಮರ ಶಾಪ: ವಿದ್ಯೆಯನ್ನು ಕಲಿತಾದ ನಂತರ ಅಂತಿಮ ದಿನದಂದು, ಪರಶುರಾಮನು ಕರ್ಣನ ತೊಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವಾಗ, ಇಂದ್ರ ದೇವನು ಚೇಳಿನ ರೂಪ ಧರಿಸಿ ಬಂದು ಬಲವಾಗಿ ಕಚ್ಚುತ್ತಾನೆ, ರಕ್ತ ಬಂದರು ಕೂಡಾ ಮೇಲೆಳದೆ ಕರ್ಣ ಕುಳಿತಿರುವಾಗ, ಎಚ್ಚರ ಗೊಂಡ ಪರಶುರಾಮ ಗುರುಗಳಿಗೆ ಕರ್ಣನು ಕ್ಷತ್ರಿಯನಲ್ಲದೇ ಬೇರೆಯವನಲ್ಲ ಎಂದು ಅರಿವಾಗಿ, ಕ್ಷತ್ರಿಯ ದ್ವೇಷಿಯಾದ ಅವರು ಶಸ್ತ್ರಾಸ್ತ್ರಗಳ ಜ್ಞಾನವನ್ನು, ವಿಶೇಷವಾಗಿ ಬ್ರಹ್ಮಾಸ್ತ್ರವನ್ನು ಹೆಚ್ಚು ಅಗತ್ಯವಿದ್ದಾಗ ಮರೆತುಬಿಡು ಎಂದು ಕರ್ಣನಿಗೆ ಶಾಪ ನೀಡಿದರು. ಪರಿಣಾಮವಾಗಿ ಅರ್ಜುನನ ವಿರುದ್ಧ ಯುದ್ಧಭೂಮಿಯಲ್ಲಿ ಹೋರಾಡುವಾಗ ಕರ್ಣನು ಬ್ರಹ್ಮಾಸ್ತ್ರವನ್ನು ಆಹ್ವಾನಿಸುವ ಮಂತ್ರವನ್ನು ಮರೆತು ಹೋಗುತ್ತಾನೆ.

ಬ್ರಾಹ್ಮಣ ಶಾಪ: ಕರ್ಣನು ಒಮ್ಮೆ ಶಬ್ದವೇದಿ ಶಸ್ತ್ರ ವಿದ್ಯೆಯನ್ನು ಅಭ್ಯಾಸ ಮಾಡುವಾಗ, ಕಾಡು ಪ್ರಾಣಿಯೆಂದು ತಿಳಿದು, ಒಬ್ಬ ಬ್ರಾಹ್ಮಣನ ಜೀವನಾಧಾರ ಆಗಿದ್ದ ಹಸುವಿನ ಮೇಲೆ ಬಾಣ ಪ್ರಯೋಗ ಮಾಡಿ ಅದರ ಸಾವಿಗೆ ಕಾರಣನಾಗುತ್ತಾನೆ. ಆಗ ಬ್ರಾಹ್ಮಣನ ಸಂಕಟ ಕಾಲದಲ್ಲಿ ನಿನ್ನ ಗಮನ ಬೇರೆ ಕಡೆ ಇರುವಾಗ, ನಿನ್ನ ಶತ್ರುಗಳಿಂದ ನೀನು ಹತನಾಗು ಎಂದು ಶಪಿಸಿದನು.‌ ಯುದ್ಧರಂಗದಲ್ಲಿ ತನ್ನ ರಥದ ಚಕ್ರ ಮಣ್ಣಿನಲ್ಲಿ ಸಿಲುಕಿ ಅದನ್ನು ಹೊರಗೆ ತೆಗೆಯುವಾಗ, ಕೃಷ್ಣನ ಸಲಹೆಯಂತೆ ಅರ್ಜುನ ಬಿಟ್ಟ ಬಾಣಕ್ಕೆ ಕರ್ಣ ಬಲಿಯಾಗುತ್ತಾನೆ.

ದುರ್ಯೋಧನನ ತೊಡೆ ದುರ್ಬಲವಾಗಲು ಕೃಷ್ಣ ಕಾರಣ..‌ಅದು ಹೇಗೆ ಗೋತ್ತಾ?


ಮಹಾಭಾರತ ಎಂಬುದು ಒಂದು‌ ಮಹಾಕಾವ್ಯ ಮಾತ್ರವೇ ಅಲ್ಲ, ಅದೊಂದು ಜೀವನ ವಿಧಾನ. ಅಖಂಡ ಭಾರತೀಯರ ಪಾಲಿಗೆ ಇದು ಜೀವನ ಸೂತ್ರ. ಅನ್ಯಾಯ, ಅಧರ್ಮದ ಮಾರ್ಗದಲ್ಲಿ ನಡೆಯುವವನಿಗೆ ಭೀಕರವಾದ ಅಂತ್ಯ ಖಚಿತ ಎಂಬುದನ್ನು ಸಾರಿ ಹೇಳುವ ಮಹಾನ್ ಗ್ರಂಥ ಮಹಾಭಾರತ. ಮಹಾಭಾರತದಲ್ಲಿ ಅತಿಯಾಸ ಆಸೆ, ಅಹಂಕಾರದಿಂದ ಮೆರೆದು, ಸ್ತ್ರೀಯನ್ನು ಅಗೌರವದಿಂದ ಕಂಡವನು ಎಂದೊಡನೆ ನೆನಪಾಗುವುದು ಕೌರವನಾದ ದುರ್ಯೋಧ‌ನ. ಭೀಮನಿಗೆ ಸಮಬಲನಾದ ಈತನ ಇಡೀ ದೇಹ ವಜ್ರದಷ್ಟು ಗಟ್ಟಿಯಾದರೂ, ತೊಡೆಯ ಭಾಗ ಮಾತ್ರ ದುರ್ಬಲವಾಗಿ ಉಳಿದು ಆತನ ಸಾವಿಗೆ ಅದೇ ಕಾರಣವಾಗಿತ್ತು. ಆದರೆ ಆತನ ತೊಡೆಯ ಭಾಗ ದುರ್ಬಲವಾಗುವುದರ ಹಿಂದೆ ಕೂಡಾ ಆ ಲೀಲಾ ವಿಹಾರಿ ಶ್ರೀಕೃಷ್ಣನ ಮಾಯೆ ಇತ್ತು ಎಂಬುದು ವಾಸ್ತವ.

ನೂರೊಂದು ಜನ ಕೌರವರ ಮಾತೆಯಾದ ಗಾಂಧಾರಿ ದೇವಿ ಆ ಪರಮಶಿವನ ಅನನ್ಯ ಭಕ್ತೆ. ಆ ಭಕ್ತಿಯಿಂದಲೇ ಆಕೆಗೆ ಸಿಕ್ಕಿತ್ತು ಒಂದು ಅಪೂರ್ವವಾದ ವರ. ಅದೇನೆಂದರೆ ಆಕೆ ತನ್ನ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ತೆರೆದು ಯಾರ ದೇಹವನ್ನು ನೋಡುವಳೋ, ಅವರ ದೇಹ ವಜ್ರದಷ್ಟೇ ಗಟ್ಟಿಯಾಗಿರುವುದು ಎಂದು. ಗಾಂಧಾರಿ ತನ್ನ ಪುತ್ರ ದುರ್ಯೋಧನನನ್ನು ಕರೆದು, ಗಂಗಾ ಸ್ನಾನ ಮಾಡಿ ಮೈಮೇಲೆ ವಸ್ತ್ರ ಧರಿಸದೇ ತನ್ನ ಮುಂದೆ ಬರಲು ಹೇಳಿದಳು‌. ತಾಯಿಯ ಆಜ್ಞೆ ಪಾಲಿಸಲು ಹೋದ ದುರ್ಯೋಧನ ಸ್ನಾನ ಮುಗಿಸಿ ಮೈಮೇಲೆ ಯಾವುದೇ ವಸ್ತ್ರ ಇಲ್ಲದೇ ನಿರ್ವಸ್ತ್ರನಾಗಿ ಬರುವಾಗ ಎದುರಾದ ಶ್ರೀಕೃಷ್ಣ ಪರಮಾತ್ಮ. (ಕೆಲವು ಕಡೆ ಕೃಷ್ಣ ಕೌರವರ ಸಹೋದರಿ ದುಃಶಳೆಯ ರೂಪದಲ್ಲಿ ಬಂದ ಎಂಬುದಾಗಿ ಹೇಳಲಾಗಿದೆ)

ಕೃಷ್ಣ ದುರ್ಯೋಧನನಿಗೆ ವಯಸ್ಕನಾದ ನೀನು ತಾಯಿಯ ಮುಂದೆ ಹೀಗೆ ನಿರ್ವಸ್ತ್ರನಾಗಿ ಹೋಗುವುದು ಭರತ ವಂಶದ ಸಂಪ್ರದಾಯವಲ್ಲ ಎಂದು ನುಡಿದನು. ಹೇಗೂ ನೀನು ಅದನ್ನೆಲ್ಲಾ ಪಾಲಿಸುವುದೂ ಇಲ್ಲ, ಹೋಗು ಹೋಗು ಎಂದ. ಹಾಗೆ ಹೇಳಿ ಶ್ರೀಕೃಷ್ಣ ಹೊರಟ ನಂತರ, ದುರ್ಯೋಧನನಿಗೆ ಕೂಡಾ ನಿರ್ವಸ್ತ್ರನಾಗಿ ಹೋಗುವುದಕ್ಕೆ ಲಜ್ಜೆ ಎನಿಸಿ, ಬಾಳೆ ಎಲೆಯನ್ನು ತೆಗೆದುಕೊಂಡು ತನ್ನ ಜನನಾಂಗವು ಮುಚ್ಚುವಂತೆ ತೊಡೆಯ ಭಾಗವನ್ನು ಆ ಬಾಳೆ ಎಲೆಯಿಂದ ಮುಚ್ಚಿ ತಾಯಿಯ ಮುಂದೆ ಹೋಗಿ ನಿಂತ‌.

ಗಾಂಧಾರಿ ಮಗನನ್ನು ವಜ್ರಕಾಯನನ್ನಾಗಿ ಮಾಡಲು ತಾನು ವಿವಾಹವಾದಾಗ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿದಾಗ, ಆಕೆಯ ಅದೆಷ್ಟೋ ವರ್ಷಗಳ ಪುಣ್ಯ ಫಲ ಶಕ್ತಿಯಾಗಿ ಹರಿದು ದುರ್ಯೋಧನನ ದೇಹವನ್ನು ಸೋಕಿ ಅವನು ವಜ್ರಕಾಯನಾದನು. ಆದರೆ ತೊಡೆಯ ಭಾಗವನ್ನು ಆತ ಬಾಳೆ ಎಲೆಯಿಂದ ಮುಚ್ಚಿದ್ದರಿಂದ ಆ ಭಾಗ ಮಾತ್ರ ದುರ್ಬಲವಾಗಿ ಉಳಿದುಹೋಯಿತು. ಗಾಂಧಾರಿ ಮಗನಿಗೆ ಹಿರಿಯರ ಮಾತು ಕೇಳದೆ ಹೋದುದರ ಫಲ ನಿನ್ನ ತೊಡೆಯ ಭಾಗ ಇನ್ನು ಮುಂದೆ ದೇಹ ದಷ್ಟು ಗಟ್ಟಿಯಲ್ಲ ಎನ್ನುತ್ತಾ ವೇದನೆಗೆ ಗುರಿಯಾದಳು. ಹೀಗೆ ಕೃಷ್ಣ ಮಾಡಿದ ಉಪಾಯವು ದುರ್ಯೋಧನನ ಪಾಲಿಗೆ ಸಾವಿನ ಕಾರಣವಾಗಿ ಹೋಯಿತು.

Sunday, 9 August 2020

ಈ ವಿವಾಹಗಳಲ್ಲಿ ಧರ್ಮಶಾಸ್ತ್ರಗಳ ಪ್ರಕಾರ ಎಂಟು ವಿಧಗಳಿವೆ

🚩 *ಬ್ರಾಹ್ಮಣ ಪ್ರಿಯ* 🚩

*“ವಿಶೇಷೇಣ ವಹತೀತಿ ವಿವಾಹಃ”* 💕

ಈ ವಿವಾಹಗಳಲ್ಲಿ ಧರ್ಮಶಾಸ್ತ್ರಗಳ ಪ್ರಕಾರ ಎಂಟು ವಿಧಗಳಿವೆ ಅವು 

💟1) ಬ್ರಾಹ್ಮವಿವಾಹ 
💟2) ದೈವ 
💟3) ಆರ್ಷ 
💟4) ಪ್ರಜಾಪತ್ಯ 
💟5) ಅಸುರ 
💟6) ಗಾಂಧರ್ವ 
💟7) ರಾಕ್ಷಸ 
💟8) ಪೈಶಾಚ 

ವಿವಾಹವೆಂಬುದಾಗಿ ವಿಂಗಡಿಸಲಾಗಿದೆ.

💟 1 *ಬ್ರಾಹ್ಮ ವಿವಾಹ* :-ಕನ್ಯೆಯ ತಂದೆಯು ತಾನಾಗಿ ವರನಿಗೆ ಕನ್ಯಾದಾನಮಾಡುವುದು.

💟2. *ದೈವ ವಿವಾಹ*  :-ಯಜ್ಞಯಾಗಾದಿಗಳನ್ನು ಮಾಡುವಾಗ, ದೈವಿಕಸಂಭಂದಿ ಕಾರ್ಯಗಳನ್ನು           ಮಾಡುವಾಗ ಕನ್ಯಾದಾನಮಾಡುವುದು.

💟3. *ಆರ್ಷವಿವಾಹ*  :-ವರನಿಂದ ಒಂದು ಅಥವಾ ಎರಡು ಗೋಮಿಥುನವನ್ನು(ಹಸು ಮತ್ತು ಎತ್ತು)           ಪಡೆದು ಕನ್ಯಾದಾನವನ್ನು ಮಾಡುವುದು.

💟4. *ಪ್ರಜಾಪತ್ಯ ವಿವಾಹ:*-ವಧು-ವರರನ್ನು ಜೊತೆಯಾಗಿ ಬಾಳಿರಿ ಎಂದು ಹೇಳುತ್ತಾ ವರನನ್ನು            ಪೂಜಿಸಿ ಆದರಿಸಿ ಕನ್ಯಾದಾನ ಮಾಡುವುದು. ಈಗ ನಾವು ಭಾರತೀಯ ಸಂವಿಧಾನದ ಹಿಂದೂ ವಿವಾಹ ಪದ್ದತಿಯೂ ಇದೆ ಯಾಗಿದೆ.

💟5. *ಅಸುರ ವಿವಾಹ* :-ಶಕ್ತ್ಯಾನುಸಾರ ಕನ್ಯೆಯ ಮಾತಪಿತೃಗಳಿಗೆ ಹಾಗೂ ಸಂಬಂಧಿಕರಿಗೆ ಮತ್ತು             ಕನ್ಯೆಗೂ ಸಹ ಧನವನ್ನು ಕೊಟ್ಟು ಸ್ವಚ್ಛಂದದಿಂದ ಮದುವೆಯಾಗುವುದು. 

💟6. *ಗಾಂಧರ್ವ ವಿವಾಹ:*- ಕನ್ಯೆಯು ಹಾಗೂ ವರನು ತಾವೇ ಪರಸ್ಪರವಾಗಿ                                      ಇಚ್ಛಾಪೂರ್ವಕವಾಗಿ, ಅನ್ಯೋನ್ಯವಾಗಿ ಸಂಗಮಿಸಿ ಮಾಡಿಕೊಳ್ಳುವ ವಿವಾಹ

💟7. *ರಾಕ್ಷಸ ವಿವಾಹ* :-ವಿವಾಹಕ್ಕೆ ವಿರೋಧಿಸುವ ಕನ್ಯೆಯ ಸಂಬಂಧಿಗಳನ್ನು ಹಿಂಸಿಸಿ ಅವರ ಮೇಲೆ         ದೌರ್ಜನ್ಯಮಾಡಿ  ಕನ್ಯೆಯನ್ನು ಅಪಹರಿಸಿ ವಿವಾಹವಾಗುವುದು.

💟8. *ಪೈಶಾಚ ವಿವಾಹ:*-ಕನ್ಯೆಯ ಶೀಲಭಂಗಮಾಡಿ ಮದುವೆಯಾಗುವುದು ಇದು ಪಾಪಕಾರವು                ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.
 
🛑ಈ ವಿವಾಹಗಳಲ್ಲಿ ನಾವು ಈಗ ಆಚರಿಸುವ ಪ್ರಜಾಪತ್ಯ ವಿವಾಹದಲ್ಲಿರುವ ಆಚರಣೆಗಳು ಮತ್ತು ಅದರ ಹಿನ್ನಲೆಯ ಬಗ್ಗೆ ಗಮನ ಹರಿಸೋಣ. 

🛑ಹದಿನಾರು ಬಗೆಯ ವಿಧಿಗಳಿಂದ ವಿವಾಹವನ್ನು ಮಾಡಲಾಗುತ್ತದೆ. ಅವುಗಳೆಂದರೆ

🕉️1)   ಸಂಕಲ್ಪ - ಗಣಪತಿ ಪೂಜೆ, ಪುಣ್ಯಾಃ, ನಾಂದಿ
🕉️2)   ವರಪೂಜೆ
🕉️3)   ನಿಶ್ಚಿತಾರ್ಥ/ವಾಜ್ಞಿಶ್ಚಯ
🕉️4)   ಮಧುಪರ್ಕ
🕉️5)   ಗೌರೀಪೂಜೆ
🕉️6)   ನಿರೀಕ್ಷಣೆ/ಮುಹೂರ್ತ
🕉️7)   ಕನ್ಯಾದಾನ
🕉️8)   ಮಾಂಗಲ್ಯ
🕉️9)   ಅಕ್ಷತಾರೋಪಣ
🕉️10) ಲಾಜಾಹೋಮ
🕉️11)  ಸಪ್ತಪದಿ
🕉️12) ಐರಣೀ ದಾನ
🕉️13) ಅರುಂದತಿ ದರ್ಶನ
🕉️14) ಗೃಹಪ್ರವೇಶ
🕉️15) ದೇವತೋತ್ಥಾಪನ
🕉️16) ಔಪಾಸನ ಉಪಕ್ರಮ

🛑ಸಂಕಲ್ಪ - ಗಣಪತಿ ಪೂಜೆ, ಪುಣ್ಯಾಃ, ನಾಂದಿ
       ಇಲ್ಲಿ ವರನ ತಂದೆ-ತಾಯಿ ಮತ್ತು ಮನೆಯವರು ತಮ್ಮ ಗುರುಹಿರಿಯರಲ್ಲಿ ಹಾಗೂ ದೇವ ವರ್ಗ ಮತ್ತು ಪಿತೃವರ್ಗಗಳಲ್ಲಿ ಸರ್ವವೂ ಮಂಗಳವಾಗಲಿ ಎಂದು ಪ್ರಾರ್ಥಿಸಿ ಎಲ್ಲವೂ ನಿರ್ವಿಘ್ನವಾಗಿ ನೆಡೆಯಲಿ ಎಂದು ಮಹಾಗಣಪತಿಯನ್ನು ಪ್ರಾರ್ಥಿಸುತ್ತಾ ಕರ್ಮ ದೀಕ್ಷೆಯನ್ನು ಸ್ವೀಕರಿಸುವುದೇ ಸಂಕಲ್ಪ.
     
🛑ಪುಣ್ಯಾಃವೆಂದರೆ ಅಲ್ಲಿ ನೆರೆದಿರುವ ಪುರೋಹಿತವರ್ಗ ಮೂರು ವೇದಗಳ ಮಂಗಳ ಸಂಜ್ಞಕಗಳನ್ನು ಹೇಳಿ ಪುಣ್ಯಾ:, ಸ್ವಸ್ತಿ, ವೃಧ್ಧಿ, ಶ್ರೀಗಳು ಬಂದು ಒದಗಲಿ ಎಂದು ಆಶೀರ್ವದಿಸುವ ಕ್ರಮ.
     
🛑ನಾಂದಿ ಎಂದರೆ ನಮ್ಮ ಪೂರ್ವಿಕರ ಸ್ಮರಣಾರ್ಥ ಆಶೀರ್ವಾದ ಅಪೇಕ್ಷೆ ಅದಕ್ಕಾಗಿ ಮಾಡುವ ಪೂಜೆ ಇದರಲ್ಲಿ ಲೌಕಿಕ ಮತ್ತು ಅಲೌಕಿಕ  ಪಿತೃಸಂಭಂದಗಳನ್ನು ಆರಾಧಿಸುವುದು.

🛑ವರಪೂಜೆ
     ಕನ್ಯಾರ್ಥಿಯಾಗಿ ಬರುವ ವರನನ್ನು ಮತ್ತು ಅವರ ಬಂಧು ಬಳಗವನ್ನು ಆಹ್ವಾನಿಸಿ ವರನಿಗೆ ಉಪಚರಿಸುವ ವಿಧಾನವೇ ವರಪೂಜೆ.

🛑ನಿಶ್ಚಿತಾರ್ಥ/ವಾಜ್ಞಿಶ್ಚಯ
     ತ್ರಿಪುರುಷ ನಾಮಗಳನ್ನು(ತಂದೆ,ತಾತ ಮತ್ತು ಮುತ್ತಾತರ ಹೆಸರುಗಳು) ಹೇಳಿ ಇಂತಹ ಹೆಸರಿನ ವಧುವನ್ನು ಇಂತಹ ಹೆಸರಿನ ವರನಿಗೆ ದೇವ-ದ್ವಿಜ ಸನ್ನಿದಾನದಲ್ಲಿ ವಿವಾಹಮಾಡಿಕೊಡುತ್ತೇನೆ ಎಂದು ಕನ್ಯೆಯ ಪಿತೃವು ಹೇಳುವುದೇ ವಾಜ್ಞಿಶ್ಚಯ/ನಿಶ್ಚಿತಾರ್ಥ

🛑ಮಧುಪರ್ಕ
     ಮಧುವೆಂದರೆ ಜೇನುತುಪ್ಪ, ವರನನ್ನು ಆಸನದಲ್ಲಿ ಕೂರಿಸಿ ಅವನ ಕೈಕಾಲು ತೊಳೆದು ಆಚಮನಮಾಡಿಸಿ ಜೇನುತುಪ್ಪವನ್ನು ಕುಡಿಸುವುದೇ ಮಧುಪರ್ಕ

🛑ಗೌರೀಪೂಜೆ
     ಕನ್ಯೆಯು ತನಗೆ ಉತ್ತಮವಾದ ವರಸಿಗಲಿ ಮತ್ತು ದೀರ್ಘಸುಮಂಗಲಿತನವು ಲಭಿಸಲಿ ಎಂದು ಶಚಿದೇವಿಯನ್ನು ಪೂಜೆಸಿ ಸುಮಂಗಲಿಯರಿಗೆ ಬಾಗೀನವನ್ನು ನೀಡುವುದೇ ಗೌರೀಪೂಜೆ.

🛑ನಿರೀಕ್ಷಣೆ/ಮುಹೂರ್ತ
     ಶುಭ ಮುಹೂರ್ತದಲ್ಲಿ ಧಾನ್ಯರಾಶಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ವರ ಮತ್ತು ಪಶ್ಚಿಮಾಭಿಮುಖವಾಗಿ ನಿಂತಿರುವ ವಧು ಅಂತರ್ಪಟದಿಂದಾಚೆಗೆ ಮೊದಲ ಬಾರಿ ಪರಸ್ಪರ ಮುಖನೋಡುವುದೇ ನಿರೀಕ್ಷಣೆ. ಈ ಸಂದರ್ಭದಲ್ಲಿ ಜೀರ್ಗೆ,ಮಾಲೆಗಳನ್ನು ಪರಸ್ಪರ ಹಾಕುವುದು ಸಂಪ್ರದಾಯವಾಗಿದೆ.

🛑ಕನ್ಯಾದಾನ
     ವರನ ಗೋತ್ರ ಪ್ರವರ ತ್ರಿಪುರುಷರ ನಾಮವನ್ನು ಹೇಳಿ ಚತುಥ್ರ್ಯಂತ್ಯವಾಗಿ ವರನ ಹೆಸರು ಹೇಳಿ ಹಾಗೆಯೆ ಕನ್ಯೆಯ ಹೆಸರನ್ನು ದ್ವಿತಿಯಾಂತ್ಯವಾಗಿ ಹೇಳಿ ನಾರಾಯಣ ಸ್ವರೂಪಿಯಾದ ವರನಿಗೆ ಲಕ್ಷ್ಮಿಸ್ವರೂಪಿಯಾದ ವಧುವನ್ನು ಪ್ರಜೋತ್ಪಾದನೆಗಾಗಿ ಸಮರ್ಪಿಸುತ್ತಿದ್ದೇನೆ ಎಂದು ವಧುವಿನ ತಂದೆ ದಾರೆಯೇರೆಯುವುದೇ ಕನ್ಯಾದಾನ.

🛑ಮಾಂಗಲ್ಯ
     ಹರಿದ್ರಾ ಕುಂಕುಮ ಸೌಭಾಗ್ಯಾವತಿಯಾಗಿ ಶೋಭಿತವಾಗಿರುವ ವಧುವಿಗೆ  *“ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ| ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾಂಶತಂ||”* ಎಂದು ಮೂರು ಬಾರಿ ಉಚ್ಛರಿಸಿ ಕರಿಮಣಿ ಮಂಗಲ ಸೂತ್ರವನ್ನು ವಧುವಿನ ಕಂಠದಲ್ಲಿ ಧಾರಣೆ ಮಾಡುವುದೇ ಮಾಂಗಲ್ಯ.

🛑ಅಕ್ಷತಾರೋಪಣ
     ವಧು ವರರು ಆಯುವೃದ್ಧಿಕರವಾದ ಹರಿದ್ರಾಶ್ವೇತಾಕ್ಷತೆಯನ್ನು ಪರಸ್ಪರ ತಲೆಯ ಮೇಲೆ ಹಾಕಿ ಕೊಳ್ಳುವುದೇ ಅಕ್ಷತಾರೋಪಣ.

🛑ಲಾಜಾಹೋಮ
     ವರನು ವಧುವಿನ ತಮ್ಮನಿಂದ ಎರಡು ಮುಷ್ಠಿ ಲಾಜವನ್ನು ಪಡೆದು ಅದಕ್ಕೆ ಆಜ್ಯವನ್ನು ಬೆರೆಸಿ ವಧುವಿನ ಅಂಜಲಿಯನ್ನು ಹಿಡಿದು ಯಜ್ಞಕ್ಕೆ ಸಮರ್ಪಿಸಿ ನಂತರ ವಧು-ವರರು ಪಾಣಿಗ್ರಹಿತರಾಗಿ ಹೋಮದ ಪ್ರದಕ್ಷಿಣೆ ಮಾಡುವುದು ಲಾಜಾಹೋಮ.

🛑ಸಪ್ತಪದಿ
    ಅಗ್ನಿಯ ಈಶಾನ್ಯದಿಕ್ಕಿನಲ್ಲಿ ಸ್ಥಾಪಿಸಲ್ಪಟ್ಟ ಧಾನ್ಯದ ರಾಶಿಯ ಮೇಲೆ ವಧುವಿನ ಹೆಜ್ಜೆಯನ್ನು ವರನು ಇರಿಸುತ್ತಾ ಅನ್ನಕ್ಕಾಗಿ, ಬಲಕ್ಕಾಗಿ, ಧನಸಮೃಧ್ಧಿಗಾಗಿ, ಸುಖಕ್ಕಾಗಿ, ಪ್ರಜೆಗಳಿಗಾಗಿ, ಋತುಗಳಿಗಾಗಿ, ಅನುಗಾಲ ಮೈತ್ರಿಗಾಗಿ ಕ್ರಮವಾಗಿ ಧಾನ್ಯದ ಮೇಲೆ ಇಡುವ ಹೆಜ್ಜೆಯೆ ಸಪ್ತಪದಿ. ಭಾರತೀಯ ಸಂವಿಧಾನದಲ್ಲಿ ಹಿಂದೂ ವಿವಾಹ ಪದ್ದತಿಯಲ್ಲಿ ಈ ಸಪ್ತಪದಿ ಪ್ರಮುಖ ಸ್ತಾನ ಪಡೆದಿದೆ.

🛑ಐರಣೀ ದಾನ
     ವಧುವಿನ ತಂದೆ-ತಾಯಿ ವರನ ತಂದೆ ತಾಯಿಗೆ ದೀಪಗಳನ್ನು ದಾನಮಾಡಿ, ವಧುವಿನ ತಾಯಿಯು ಬಾಗೀನ ನೀಡಿ ವರನಿಗೆ ಒಪ್ಪಿಸುವುದೇ ಐರಣೀ ದಾನ.

🛑ಅರುಂದತಿ ದರ್ಶನ
           ವಿವಾಹ ವ್ರತದಲ್ಲಿರುವ ವಧು-ವರರು ಸಪ್ತಋಷಿ ನಕ್ಷತ್ರ ಪುಂಜ ಮತ್ತು ಅರುಂದತಿ ನಕ್ಷತ್ರ ದರ್ಶನನಂತರ ವಿವಾಹ ವ್ರತದಿಂದ ವಿಮುಕ್ತರಾಗುತ್ತಾರೆ.

🛑ಗೃಹಪ್ರವೇಶ
     ವಿವಾಹ ನಂತರ ವರನು ವಧುವಿನ ಬೈತಲೆಗೆ ಸಿಂಧೂರವನ್ನು ಹಚ್ಚಿಬೇಕು, ನಂತರ ಆಕೆ ಸುಮಂಗಲಿ, ಹೀಗೆ ಸುಮಂಗಲಿಯಾದ ವಧುವು ವರನ ಗೃಹವನ್ನು ಧಾನ್ಯತುಂಬಿದ ಸೇರನ್ನು ಒದ್ದು ಈ ಮನೆಯು ಲಕ್ಷ್ಮೀ ನಿವಾಸವಾಗಲಿ ಎಂದು ಪ್ರಾರ್ಥೀಸಿ ಪ್ರವೇಶಿಸುವುದೇ ಗೃಹಪ್ರವೇಶ.

🛑ದೇವತೋತ್ಥಾಪನ
     ಗೃಹಪ್ರವೇಶವಾದೊಡನೆ ವಿವಾಹ ಸಂಪನ್ನವಾಗುತ್ತದೆ, ಇದಾದ ನಂತರ ಆಹ್ವಾನಿಸಿದ ದೇವಗಣ ಮತ್ತು ಪಿತೃಗಣವನ್ನು ವಿಸರ್ಜಿಸಿ ಯತಾಸ್ಥಾನಕ್ಕೆ ಮರಳಿಸುವುದೇ ದೇವತೋತ್ಥಾಪನ.

🛑ಔಪಾಸನ ಉಪಕ್ರಮ
     ಬ್ರಹ್ಮಚಾರಿಯಾಗಿದ್ದ ವರನು ವಿವಾಹನಂತರ ಗೃಹಸ್ಥನಾಗುತ್ತಾನೆ ತದನಂತರ ಪತಿ ಪತ್ನಿಯರು ಒಟ್ಟಿಗೆ ಮಾಡುವ ಹೋಮವೇ ಔಪಾಸನ.

ಕಾಗೆ ಶಕುನ

" ಕಾಗೆ ಶಕುನ "
 ಹಿಂದೂ ಸಂಪ್ರದಾಯದ ಪ್ರಕಾರ, ಕಾಗೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಶನಿ ಪುರಾಣದ ಪ್ರಕಾರ, ಕಾಗೆ ದಂಡಕಾರಕ ಶನಿಮಹಾತ್ಮನ ವಾಹನ. ಪಕ್ಷಿ ಜಾತಿಗೆ ಸೇರಿದ ಕಾಗೆಯನ್ನು ಹಿಂದಿನ ಕಾಲದಲ್ಲಿ ಸಂಪರ್ಕ ಸಾಧನವಾಗಿ ಬಳಸಲಾಗಿತ್ತು ಎನ್ನಲಾಗುತ್ತೆ.

ಯಾಕಂದ್ರೆ ಯಾವುದೇ ರೀತಿಯ ತಂತ್ರಜ್ಞಾನ, ದೂರವಾಣಿ ಇಲ್ಲದಂತಹ ಕಾಲದಲ್ಲಿ ಕಾಗೆಯನ್ನೇ ಸಂದೇಶ ರವಾನಿಸಲು ಬಳಸಲಾಗ್ತಿತ್ತು. ನಮ್ಮ ಹಿರಿಯರ ಪ್ರಕಾರ, ಕಾಗೆಗೂ ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ ಎನ್ನಲಾಗುತ್ತೆ. ಎಲ್ಲರಿಗೂ ತಿಳಿದಿರುವ ಹಾಗೆ, ಒಂದೊಂದು ಪಕ್ಷಿಯೂ ಒಂದೊಂದು ತರಹದ ವಿಶಿಷ್ಟ ಧ್ವನಿಯನ್ನು ಹೊಂದಿರುತ್ತೆ.

ಆ ಧ್ವನಿಗಳಲ್ಲಿ ಕೆಲವು ಇಂಪಾಗಿದ್ದರೆ ಮತ್ತೆ ಕೆಲವು ಕರ್ಕಶವಾಗಿರುತ್ತೆ. ಹೀಗೆ ಕಾಗೆಯೂ ಸಹ ಒಂದು ವಿಶೇಷ ಧ್ವನಿಯನ್ನು ಹೊಂದಿದೆ. ಮರದ ಮೇಲೆ ಕುಳಿತಾಗ, ಆಕಾಶದಲ್ಲಿ ಹಾರುತ್ತಿರುವಾಗ, ಕಟ್ಟಡಗಳ ಮೇಲೆ ಕುಳಿತಾಗ ಕಾಗೆ ಕೂಗುವುದನ್ನು ನೋಡಿರ್ತೀವಿ. ಕೇಳಿರ್ತೀವಿ. ಹೀಗೆ ಕಾಗೆ ಪದೇಪದೆ ಕೂಗುತ್ತಿದ್ದರೆ ಅದನ್ನು ಮುಂದಾಗುವ ಘಟನೆಗಳ ಸೂಚನೆ ಅಂತಾ ಕೆಲವರು ಭಾವಿಸ್ತಾರೆ. ಹೀಗೆ ಕಾಗೆಯ ಚಟುವಟಿಕೆ ಹಾಗೂ ಕಾಗೆ ಕೂಗುವುದರ ಬಗ್ಗೆ ಕೆಲ ಪುರಾಣಗಳು ಏನು ಹೇಳುತ್ತವೆ? ಬನ್ನಿ ಆ ಬಗ್ಗೆ ಈಗ ತಿಳಿಯೋಣ.

ಕಾಗೆಯ ಬಗ್ಗೆ ಇರುವ ಶಕುನಗಳು:
1)ಕಾಗೆ ಮನೆಯ ಮುಂದೆ ಪದೇಪದೆ ಕೂಗುತ್ತಿದ್ದರೆ ಯಾರಾದರೂ ಅಥಿತಿಗಳು ಬರುತ್ತಾರೆ ಅನ್ನೋ ನಂಬಿಕೆ ಇದೆ.
2)ಮನೆಯಿಂದ ಹೊರಗೆ ಹೋಗುವಾಗ ಕಾಗೆ ಕೂಗುತ್ತಾ ಎದುರಿಗೆ ಬಂದರೆ ಅದನ್ನು ಅಪಶಕುನ ಅಂತಾ ಕೆಲವೊಮ್ಮೆ ಹೇಳಲಾಗುತ್ತೆ.
3)ಮನೆಯಿಂದ ಹೊರಗೆ ಹೋಗುವಾಗ ಕಾಗೆ ಕೂಗಿದರೆ ನಾವು ಹೋಗುತ್ತಿರುವ ಕೆಲಸದಲ್ಲಿ ಯಶಸ್ಸು ಉಂಟಾಗುತ್ತೆ ಎನ್ನಲಾಗುತ್ತೆ.
4)ಮನೆಯಿಂದಲೇ ಕಾಗೆ ಕೂಗುತ್ತಿರುವುದನ್ನು ನೋಡಿದರೆ ಅವರು ಸಿರಿವಂತರಾಗ್ತಾರೆ, ಶುಭಶಕುನಗಳು ನಡೆಯುತ್ತವೆ ಎನ್ನಲಾಗುತ್ತೆ.
5)ಕಾಗೆ ತನ್ನ ಬಾಯಿಯಲ್ಲಿ ಏನಾದರೂ ಕಚ್ಚಿಕೊಂಡು ಬಂದು ನಿಮ್ಮ ಮೈ ಮೇಲೆ ಹಾಕಿದರೆ ಅದು ಅಶುಭ ಎನ್ನಲಾಗುತ್ತೆ.
6)ಕಾಗೆ ಬಾಯಲ್ಲಿರೋ ಮಾಂಸವೇನಾದ್ರೂ ಮೈ ಮೇಲೆ ಬಿದ್ದರೆ ಅವರಿಗೆ ಅನಾರೋಗ್ಯ ಉಂಟಾಗುತ್ತೆ ಎನ್ನಲಾಗುತ್ತೆ.
7)ಕಾಗೆ, ಕುಳಿತ ಸ್ಥಳದಿಂದಲೇ ಒಂದೇ ಸಮನೆ ಕಿರುಚುತ್ತಿದ್ದರೆ ಹತ್ತಿರದ ಮನೆಯ ಯಜಮಾನ ಅಥವಾ ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗುತ್ತೆ ಎನ್ನಲಾಗುತ್ತೆ.
8)ಕಾಗೆ ಒಂದೇ ಸಮನೆ ಜೋರಾಗಿ ರೆಕ್ಕೆ ಬಡಿಯುತ್ತಾ ಯಾವುದಾದರೂ ವ್ಯಕ್ತಿಯ ಸುತ್ತ ಸುತ್ತುತ್ತಿದ್ರೆ ಆತನಿಗೆ ಅಪಾಯವಾಗಲಿದೆ ಎನ್ನಲಾಗುತ್ತೆ.
9)ಕಾಗೆಯು ತಲೆಯನ್ನು ಮುಟ್ಟಿದರೆ ಅದನ್ನ ದೋಷ ಎಂದು ಪರಿಗಣಿಸಲಾಗುತ್ತೆ.
10)ಹೆಣ್ಣುಮಕ್ಕಳ ತಲೆಯನ್ನು ಕಾಗೆ ಬಂದು ಮುಟ್ಟಿದರೆ ಅವರಿಗೆ ಪತಿಯಿಂದ ವಿಯೋಗ ಉಂಟಾಗುತ್ತೆ ಎನ್ನಲಾಗುತ್ತೆ.
11)ಆಗ್ನೇಯ ದಿಕ್ಕಿನಿಂದ ಕಾಗೆ ಬರುವುದನ್ನು ಯಾರಾದರೂ ನೋಡಿದರೆ ಅವರಿಗೆ ಧನಲಾಭವಾಗುತ್ತೆ ಅನ್ನೋ ನಂಬಿಕೆ ಇದೆ.

ಹೀಗೆ ಕಾಗೆಯ ಒಂದೊಂದು ಚಟುವಟಿಕೆಯ ಬಗ್ಗೆಯೂ ಒಂದೊಂದು ಶಕುನಗಳನ್ನು ಕೆಲ ಪುರಾಣಗಳು ಹೇಳುತ್ತವೆ. ಇದಿಷ್ಟೇ ಅಲ್ಲದೇ, ಕಾಗೆಗೆ ಗತಿಸಿ ಹೋದ ನಮ್ಮ ಪೂರ್ವಿಕರ ಸ್ಥಾನವನ್ನು ನೀಡಲಾಗಿದೆ. ಇದೇ ಕಾರಣಕ್ಕೆ ಪಕ್ಷದ ಸಮಯದಲ್ಲಿ ಕಾಗೆಗಳಿಗೆ ಮನೆಯಲ್ಲಿ ತಯಾರಿಸಿದ ಭಕ್ಷ್ಯ ಭೋಜನಗಳನ್ನು ನೀಡಲಾಗುತ್ತೆ.

ನ್ನು ಹಿರಿಯರು ಕಾಗೆಗಳು ನಮ್ಮ ಜೀವನದ ಭವಿಷ್ಯವನ್ನು ಕೆಲ ಚಟುವಟಿಕೆಗಳಿಂದ ತಿಳಿಸುತ್ತವೆ ಎನ್ನುತ್ತಾರೆ. ಅದೇನೇ ಇರಲಿ, ಕಾಗೆಯೂ ಒಂದು ಜೀವಿ. ಕಾಗೆಗೆ ಊಟ ನೀಡೋದು, ಬೇಸಿಗೆಯ ಸಂದರ್ಭದಲ್ಲಿ ನೀರು ಇಡುವುದರಿಂದ ಅವುಗಳ ಸಂತತಿ ಬೆಳೆಯುತ್ತೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಗೆಗಳು ಸಹ ಅಳಿವಿನಂಚನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಷಾಢ ಏಕಾದಶಿ:

ಆಷಾಢ ಏಕಾದಶಿ: 
ಇಲ್ಲಿದೆ ಶುಭ ಮುಹೂರ್ತ, ಮಹತ್ವ ಹಾಗೂ ಉಪಯೋಗ

ಆಷಾಢ ಹುಣ್ಣಿಮೆಯ ತ್ರೈಮಾಸಿಕದ ಹನ್ನೊಂದನೇ ದಿನವನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ ಆರಾಧನೆಯ ನಂತರ ವಿಷ್ಣು 4 ತಿಂಗಳುಗಳ ಕಾಲ ವಿಶ್ರಾಂತಿಗೆ ಹೋಗುತ್ತಾನೆ. ವಿಷ್ಣು ಈ ದಿನ ಕ್ಷೀರ ಸಾಗರಕ್ಕೆ ಹೋಗಿ ಬರೋಬ್ಬರಿ 4 ತಿಂಗಳುಗಳ ಕಾಲ ಮಲಗಿ ವಿಶ್ರಮಿಸುತ್ತಾನೆ. ಈ ಕಾರಣದಿಂದ ಏಕಾದಶಿಯನ್ನು ಹರಿ ಶಯನಿ ಏಕಾದಶಿಯೆಂದು ಕರೆಯಲಾಗುತ್ತದೆ. ನಾಲ್ಕು ತಿಂಗಳುಗಳ ಕಾಲ ನಿದ್ರೆಗೆ ಜಾರಿದ ವಿಷ್ಣು ಪ್ರಭೋದಿನಿ ಏಕಾದಶಿಯಂದು ಎಚ್ಚೆತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸವೆಂದು ಕರೆಯಲಾಗುತ್ತದೆ.

ಆಷಾಢ ಏಕಾದಶಿಯ ವ್ರತಾಚರಣೆ:

ಈ ದಿನದಂದು ವಿಷ್ಣುವಿನ ಭಕ್ತರು ಭಗವಾನ್‌ ವಿಷ್ಣುವನ್ನು ಮತ್ತು ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಆಷಾಢ ಏಕಾದಶಿಯಂದು ಪ್ರಮುಖವಾಗಿ ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಆಷಾಢ ಏಕಾದಶಿ ವ್ರತಾಚರಣೆಯನ್ನು ಹೀಗೆ ಮಾಡಬೇಕು:

1) ದೇವಶಯನಿ ಏಕಾದಶಿ ವ್ರತವನ್ನು ಆಚರಿಸುವ ಭಕ್ತರು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ ಶುದ್ಧರಾಗಬೇಕು.

2) ಮಧ್ಯಾಹ್ನದ ಸಮಯದಲ್ಲಿ ಸತ್ತ ಪೂರ್ವಜರನ್ನು ನೆನೆಯಲಾಗುತ್ತದೆ. ಅವರಿಗೆ ಮೋಕ್ಷ ಸಿಗಲೆಂದು ಭಕ್ತಿಯಿಂದ ಪ್ರಾರ್ಥಿಸಲಾಗುತ್ತದೆ.

3) ವಿಷ್ಣುವನ್ನು ಪೂಜಿಸಲು ಈ ದಿನದಂದು ಪೂಜಾ ಕೋಣೆಯಲ್ಲಿ ವಿಷ್ಣುವಿನ ವಿಗ್ರಹವನ್ನಿಟ್ಟು, ಆ ವಿಗ್ರಹವನ್ನು ಶುದ್ಧೀಕರಿಸಿ ಅಲಂಕರಿಸಲಾಗುತ್ತದೆ.

4) ವಿಷ್ಣುವಿನ ವಿಗ್ರಹವನ್ನು ಹಳದಿ ಬಣ್ಣದಿಂದ ಅಲಂಕರಿಸಬೇಕು.

5) ವಿಷ್ಣುವಿಗೆ ಪೂಜೆಯಲ್ಲಿ ಎಲೆ, ಅಡಿಕೆ, ಹಳದಿ ಬಣ್ಣದ ಹೂವುಗಳನ್ನು, ಶ್ರೀಗಂಧದ ಮರದ ತುಂಡುಗಳನ್ನು ಅರ್ಪಿಸಲಾಗುತ್ತದೆ.

6) ಆಷಾಢ ಏಕಾದಶಿ ವ್ರತವನ್ನು ಕೈಗೊಂಡವರು ದಿನಕ್ಕೆ ಒಂದು ಬಾರಿ ಮಾತ್ರ ಆಹಾರವನ್ನು ಸ್ವೀಕರಿಸಬೇಕು.

7) ಏಕಾದಶಿಯ ಮರುದಿನ ವಿಷ್ಣುವಿನ ಪಾರಾಯಣ ಅವಧಿಯಲ್ಲಿ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಉಪವಾಸ ವ್ರತವನ್ನು ಕೈಬಿಡಬಹುದು.

ಆಷಾಢ ಏಕಾದಶಿ ವ್ರತದ ಕುರಿತಿರುವ ದಂತಕಥೆ:

ಒಂದು ಕಾಲದಲ್ಲಿ ಮಾಂಧಾತ ಎನ್ನುವ ರಾಜ ಆಳ್ವಿಕೆಯನ್ನು ನಡೆಸುತ್ತಿದ್ದನು. ಅವನ ಉತ್ತಮ ಆಳ್ವಿಕೆಯಿಂದ ರಾಜ್ಯವವು ಸಂಪನ್ನವಾಗಿತ್ತು ಹಾಗೂ ಪ್ರಜೆಗಳು ಸಂತೋಷದಿಂದ ದಿನವನ್ನು ಕಳೆಯುತ್ತಿದ್ದರು. ಆದರೆ ಅವನ ಆಡಳಿತದ ಅವಧಿಯಲ್ಲಿ ರಾಜ್ಯವು ಬರಗಾಲಕ್ಕೆ ತುತ್ತಾಯಿತು. ರಾಜ ಮಾಂಧಾತನು ಉತ್ತಮ ಆಡಳಿತಗಾರನಾಗಿದ್ದ ಕಾರಣ, ಪ್ರಜೆಯನ್ನು ಹಿಂಸಿಸಲು ಅವನು ಒಪ್ಪುತ್ತಿರಲಿಲ್ಲ. ಹಾಗಾಗಿ ಹೇಗಾದರೂ ತನ್ನ ಪ್ರಜೆಯನ್ನು ಇದರಿಂದ ಹೊರತರಲು, ರಾಜ್ಯವನ್ನು ಸಂತೋಷದಿಂದಿಡಲು ಪ್ರಯಾಣವನ್ನು ಕೈಗೊಳ್ಳುತ್ತಾನೆ. ದಾರಿಯಲ್ಲಿ ರಾಜ ಮಾಂಧಾತನಿಗೆ ಋಷಿ ಅಂಗೀರರು ಸಿಗುತ್ತಾರೆ.
ಮಾಂಧಾತ ರಾಜನು ಋಷಿ ಅಂಗೀರನ ಆಶೀರ್ವಾದವನ್ನು ಪಡೆದುಕೊಂಡು ತನ್ನ ರಾಜ್ಯದಲ್ಲಾಗುತ್ತಿರುವ ಸಂಕಷ್ಟವನ್ನು ಹೇಳಿಕೊಳ್ಳುತ್ತಾನೆ. ಆಗ ಋಷಿ ಅಂಗೀರನು ಈ ಸಮಸ್ಯೆಯಿಂದ ಹೊರಬರಲು ಆಷಾಢ ಏಕಾದಶಿಯಂದು ಉಪವಾಸವನ್ನು ಕೈಗೊಳ್ಳಲು ಸಲಹೆ ನೀಡುತ್ತಾನೆ. ಋಷಿ ಅಂಗೀರನ ಸಲಹೆಯ ಮೇರೆಗೆ ರಾಜ ಸೇರಿದಂತೆ ರಾಜ್ಯದ ಎಲ್ಲಾ ಪ್ರಜೆಗಳು ಆಷಾಢ ಏಕಾದಶಿಯಂದು ಉಪವಾಸವನ್ನು ಕೈಗೊಂಡು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ತಕ್ಕಣವೇ ಬರಗಾಲದಿಂದ ತುಂಬಿದ್ದ ರಾಜ್ಯದಲ್ಲಿ ಮಳೆಯ ಅಬ್ಬರ ಆರಂಭವಾಗುತ್ತದೆ. ರಾಜ್ಯವು ಮೊದಲಿದ್ದ ಸ್ಥಿತಿಗೆ ಪುನಃ ಬರುತ್ತದೆ. ಅಂದಿನಿಂದ ಆಷಾಢ ಏಕಾದಶಿಯನ್ನು ಆಚರಿಸಿಕೊಂಡು ಬರಲಾಗುತ್ತದೆ.

#jnanaprachar

ಭಗವಂತನ ವರ್ಣನೆ

ಭಗವಂತನ ವರ್ಣನೆ

ಕಠೋಪನಿಷತ್, ಯಮನ ವಿವರಣೆ
ದೇವರಿಗೆ ಶರೀರವಿಲ್ಲ, ಆಕಾರವಿಲ್ಲ. ಆದರೆ ಆತ ಎಲ್ಲರ ಶರೀರದೊಳಗೂ ಇದ್ದಾನೆ. ನಮಗೆ ಒಂದು ಶರೀರವಾದರೆ –ಎಲ್ಲಾ ಶರೀರವೂ ಅವನ ಶರೀರ! ಈ ರೀತಿ ಎಲ್ಲಾ ಶರೀರದಲ್ಲೂ ಇರುವ
ಭಗವಂತನಿಗೆ ಆ ಶರೀರದ ಲೋಪವಾಗಲಿ, ದುಃಖಾನುಭವವಾಗಲಿ, ಅಭಿಮಾನವಾಗಲೀ ಇಲ್ಲ. ಆದ್ದರಿಂದ ಭಗವಂತ ಅಶರೀರ. ನಮ್ಮ
ಶರೀರಕ್ಕೆ ನೆಲೆ ಇಲ್ಲ. ಒಂದು ದಿನ ಬಿದ್ದು ಹೋಗುವ ಈ ಶರೀರ ಗಟ್ಟಿಯಾಗಿ ನಿಲ್ಲುವಂತಹುದಲ್ಲ. ಇಂತಹ ನೆಲೆ ಇಲ್ಲದ ಶರೀರದಲ್ಲಿ ನೆಲೆಸಿ, ಅದಕ್ಕೊಂದು ನೆಲೆ ಕೊಟ್ಟು, ನಿಲ್ಲಲಾಗದ ದೇಹವನ್ನು ನಿಲ್ಲುವಂತೆ ಮಾಡಿ, ಚಲಿಸಲಾಗದ ದೇಹವನ್ನು ಚಲಿಸುವಂತೆ
ಮಾಡುವವ ಆ ಭಗವಂತ. ಇಂತಹ ಭಗವಂತ ದೇಹದಿಂದ ಹೊರಟು ಹೋದಾಗ ಈ ಶರೀರ ಬಿದ್ದು ಹೋಗುತ್ತದೆ. ಭಗವಂತ ನಮ್ಮ ಹೃದಯ ಗುಹೆಯಲ್ಲಿ ‘ಆತ್ಮ’ ಮತ್ತು ‘ಅಂತರಾತ್ಮ’
ನಾಮಕನಾಗಿ ಎರಡು ರೂಪದಲ್ಲಿ ನೆಲೆಸಿದ್ದಾನೆ.
ಇಲ್ಲಿ ಗುಹೆ ಎಂದರೆ ನಮ್ಮ ಹೃದಯ ಗುಹೆ. ಅದು ಹೃತ್ಕಮಲ ಮಧ್ಯದಲ್ಲಿನ ಅನಾಹತ ಚಕ್ರ(thymus gland)ವೆಂಬ ಶಕ್ತಿ ಕೇಂದ್ರ.
ಅಲ್ಲಿ ಜೀವಸ್ವರೂಪವನ್ನು ಧಾರಣೆ ಮಾಡಿಕೊಂಡು ಜೀವಸ್ವರೂಪದ
ಹೊರಗೆ ಆತ್ಮ ನಾಮಕನಾಗಿ, ಮತ್ತು ಜೀವ ಸ್ವರೂಪದ ಒಳಗೆ ಅಂತರಾತ್ಮ ನಾಮಕನಾಗಿ ಭಗವಂತ ನೆಲೆಸಿದ್ದಾನೆ. ಆತ ಎಲ್ಲಾ
ಯಥಾರ್ಥ ಕ್ರಿಯೆಗಳಿಂದ ಬರುವ ಪುಣ್ಯಫಲ ಮತ್ತು ಆನಂದವನ್ನು ಪಾನ ಮಾಡಿಕೊಂಡು, ಇಂದ್ರಿಯಗಳ ಅನುಭವವನ್ನು
ಸುಖಮಯನಾಗಿ ಆಸ್ವಾಧಿಸಿಕೊಂಡು, ಆ ಆನಂದದ ಭಾಗವನ್ನು ನಮಗೂ ಪಾನ ಮಾಡಿಸುತ್ತಾ ನೆಲೆಸಿದ್ದಾನೆ. ಪುಣ್ಯ ಫಲವಾಗಿ
ಬಂದಿರುವ ಮನುಷ್ಯ ಶರೀರ ಭಗವಂತನ ಮನೆ. ಅಲ್ಲಿ ದೇಹದ ಮಧ್ಯ ಭಾಗವಾದ ಹೃತ್ಕಮಲ ಭಗವಂತನ ಅಂತಃಪುರ. ಅದು ಆತನ
ವಾಸಸ್ಥಾನ. ಭಗವಂತನನ್ನು ಸೂರ್ಯನಾಗಲಿ, ಚಂದ್ರನಾಗಲೀ, ಮಿಂಚು- ನಕ್ಷತ್ರವಾಗಲೀ, ಅಗ್ನಿಯಾಗಲೀ ಬೆಳಗಿಸಿ ತೋರಿಸಲಾರವು. ಏಕೆಂದರೆ ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನೀಯುವ ಮೂಲ ಬೆಳಕು ಆ
ಭಗವಂತ. ಭಗವಂತನ ಬೆಳಕಿಗೆ ಅನುಗುಣವಾಗಿ ಕಣ್ಣಿಗೆ ಕಾಣುವ ಈ ಬೆಳಕುಗಳಿವೆ. ಎಲ್ಲಾ ಬೆಳಕುಗಳ ಒಳಗೆ ಬೆಳಕಾಗಿ ಭಗವಂತ
ತುಂಬಿದ್ದಾನೆ. ಎಲ್ಲಾ ಬೆಳಕುಗಳೂ ಭಗವಂತನ ಬೆಳಕಿನ ಪ್ರತಿಫಲನ. ಭಗವಂತನಲ್ಲದ, ಸ್ವತಂತ್ರವಾದ ಬೆಳಕು ಈ ಪ್ರಪಂಚದಲ್ಲಿಲ್ಲ. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:

ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ॥೧೫-೬॥

ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ.
ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.
ಭಗವಂತ ಎಲ್ಲರೂ ಮಲಗಿದ್ದಾಗಲೂ ತಾನು ಎಚ್ಚರವಾಗಿದ್ದು, ಪ್ರಪಂಚದ ಎಲ್ಲಾ ಕಡೆ ಇರುವ ಎಲ್ಲಾ ಜೀವರನ್ನು ನಿಯಂತ್ರಿಸುತ್ತಿರುತ್ತಾನೆ.
“ಈ ವಿಶ್ವದ ಚಲನೆಗೆ ಯಾರು ಕಾರಣನೋ, ಎಲ್ಲಾ ದೇವತೆಗಳು ಯಾರನ್ನು ಆಶ್ರಯಿಸಿಕೊಂಡಿದ್ದಾರೋ, ಅವನೇ ನೀನು ತಿಳಿಯಲು ಬಯಸಿರುವ ಪರತತ್ವ” ಎನ್ನುತ್ತಾನೆ ಯಮ.

ಭಗವಂತ ಅಳೆಯಲಾಗದ ಅನಂತವಾದ ಸುಖದ ಕಡಲು. “ಇದು ನನ್ನದೇ ಆದ ಮಾನಸಿಕೆ ಭ್ರಮೆ ಅಲ್ಲ. ಪ್ರಪಂಚದಲ್ಲಿ ಭಗವಂತನನ್ನು
ಸಾಕ್ಷಾತ್ಕರಿಸಿಕೊಂಡ ಪ್ರತಿಯೊಬ್ಬ ಜ್ಞಾನಿಯ ಅನುಭವವೂ ಇದೇ” ಎನ್ನುತ್ತಾನೆ ಯಮ. ಆದ್ದರಿಂದ ಭಗವಂತನೆಂದರೆ ಅಪರಂಪಾರವಾದ,
ಜ್ಞಾನಾನಂದಸ್ವರೂಪವಾದ, ಯಾರಿಂದಲೂ ಪೂರ್ಣ ಗ್ರಹಿಸಲು ಸಾಧ್ಯವಾಗದ ಸರ್ವಜ್ಞತತ್ವ ಎಂದು ಉಪಾಸನೆ ಮಾಡುವುದು ಶಾಸ್ತ್ರ
ಸಮ್ಮತ. ಭಗವಂತನ ಬೇರೆ ಬೇರೆ ರೂಪಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ನಾವು ಭಗವಂತನನ್ನು ರಾಮನಾಗಿ,ಶಿವ,  ಕೃಷ್ಣನಾಗಿ, ನರಸಿಂಹನಾಗಿ ಅಥವಾ ನಮಗೆ ಇಷ್ಟವಾಗುವ ಮತ್ತು ಹಿಡಿಸುವ ಇತರ ಯಾವುದೇ
ರೂಪದಲ್ಲಿ ಉಪಾಸನೆ ಮಾಡಬಹುದು. ಸರ್ವಸಮರ್ಥನೂ, ಸರ್ವಜ್ಞನೂ ಆದ ಭಗವಂತ ಏಕ. ಆದ್ದರಿಂದ ಭಿನ್ನ ಮತ್ತು ಭೇದ
ಚಿಂತನೆ ಸರಿಯಲ್ಲ. ಭಗವಂತ ಜ್ಞಾನಾನಂದಗಳ ಮೊತ್ತ. ಅವನನ್ನು ನಮ್ಮ ಹೊರಗಣ್ಣಿನಿಂದ
ಕಾಣಲು ಅಸಾಧ್ಯ. ಆತ ಸಮಸ್ತ ಜೀವಗಳ ಹೃದಯ ಗುಹೆಯಲ್ಲಿ ಗೂಢವಾಗಿ ನೆಲೆಸಿದ್ದಾನೆ. ಇಂತಹ ಭಗವಂತ ಅತ್ಯಂತ ಪುರಾತನ(ಪುರಾಣ). ಅಂದರೆ ಎಲ್ಲಕ್ಕಿಂತ ಪ್ರಾಚೀನ. ಎಲ್ಲವೂ
ಇಲ್ಲದಿದ್ದಾಗ ಅವನಿದ್ದ ಹಾಗೂ ಈ ಸೃಷ್ಟಿಯಾದ ಮೇಲೆ ಬ್ರಹ್ಮಾಂಡ-ಪಿಂಡಾಂಡದೊಳಗೆ ಅಂತರ್ಯಾಮಿಯಾಗಿ ಆತ ತುಂಬಿದ.
ಇಂತಹ ಅಂತರ್ಯಾಮಿ ಭಗವಂತನನ್ನು ತಿಳಿಯಲು ಇರುವ ಒಂದೇ ಒಂದು ಉಪಾಯವೆಂದರೆ ಅಧ್ಯಾತ್ಮದ ಅರಿವು. ಒಮ್ಮೆ ಭಗವಂತನ ಅರಿವು ಬಂತೆಂದರೆ ಆಗ ನಾವು ಲೌಕಿಕ ಹರ್ಷ-ಶೋಕವನ್ನು ಮೀರಿ
ನಿಲ್ಲಬಹುದು. ಇಂತಹ ಸ್ಥಿತಿಯಲ್ಲಿ ಸ್ವರೂಪಾನಂದದ ಸುಖ ಸಿಗುತ್ತದೆ.
ಭಗವಂತನನ್ನು ಜ್ಞಾನದ ಕಣ್ಣಿನಿಂದ ಕಂಡ ಅಪರೋಕ್ಷ ಜ್ಞಾನಿ ಹುಟ್ಟು ಸಾವಿನಿಂದ ಮುಕ್ತನಾಗುತ್ತಾನೆ. ಮೋಕ್ಷವನ್ನು ಪಡೆದ ಜೀವ
ಮುಂದೆಂದೂ ದೈಹಿಕವಾಗಿ ಹುಟ್ಟು-ಸಾವಿಗೊಳಗಾಗುವುದಿಲ್ಲ. ನಮ್ಮ
ಹೃತ್ಕಮಲದಲ್ಲಿ ನೆಲೆಸಿರುವ ಭಗವಂತನಿಗೆ ಹುಟ್ಟು-ಸಾವುಗಳಿಲ್ಲ. ಆದ್ದರಿಂದ ಭಗವಂತನನ್ನು ಸಾಕ್ಷಾತ್ಕರಿಸಿ ಕೊಂಡವನೂ ಕೂಡಾ,
ದೇಹದಿಂದಲೂ ಹುಟ್ಟು-ಸಾವು ಹೊಂದುವುದಿಲ್ಲ. ಅಸಾಧಾರಣವಾದ ಈ ಸ್ಥಿತಿ ಸಿಗುವುದು ಭೌತಿಕ ದೇಹ ತ್ಯಾಗ ಮಾಡಿ ಮೋಕ್ಷವನ್ನು
ಸೇರಿದಾಗ ಮಾತ್ರ. ಬೇರೆ ಬೇರೆ ರೂಪನಾಗಿ ಅಭಿವ್ಯಕ್ತನಾಗುತ್ತಾನೆ. ಹೀಗೆ ಏಕರೂಪನಾದ ಆತ, ಅನಂತ ರೂಪದಲ್ಲಿ ಪ್ರಪಂಚದಲ್ಲಿ ತುಂಬಿ
ಪ್ರೇರಣೆ ಮಾಡುತ್ತಿದ್ದಾನೆ. ಇದು ಅವನ ಲೀಲೆ.
ಭಗವಂತನಿಗೆ ಇಡೀ ವಿಶ್ವ ಪ್ರಳಯ ಕಾಲದಲ್ಲಿ ಒಂದು ತುತ್ತು ಅನ್ನವಿದ್ದಂತೆ. ಬ್ರಾಹ್ಮಣ ವರ್ಣದ ಅಭಿಮಾನಿ ದೇವತೆ ಚತುರ್ಮುಖ
ಬ್ರಹ್ಮ, ಕ್ಷತ್ರೀಯ ವರ್ಣದ ಅಭಿಮಾನಿ ದೇವತೆಯಾದ ವಾಯುದೇವರು ಭಗವಂತನಿಗೆ ಪ್ರಳಯಕಾಲದಲ್ಲಿ ಒಂದು ತುತ್ತು ಅನ್ನ. ಮೃತ್ಯು(ಗರುಡ-ಶೇಷ-ರುದ್ರರು), ಭೂಲೋಕದಲ್ಲಿರುವ ಎಲ್ಲಾ ಜೀವರಿಗೂ
ಮೃತ್ಯುವಾಗಿರುವ ಯಮ- ಪ್ರಳಯಕಾಲದಲ್ಲಿ ಭಗವಂತನಿಗೆ ಊಟಕ್ಕೆ ಕಲಸಿಕೊಳ್ಳುವ ವ್ಯಂಜನವಿದ್ದಂತೆ. “ಇಂತಹ ಭಗವಂತನ ಎತ್ತರವನ್ನು ಅರಿತವರು ಯಾರಿದ್ದಾರೆ ಎನ್ನುತ್ತಾನೆ ಯಮ.
ವಸ್ತುತಃ ಜೀವಸ್ವರೂಪಕ್ಕೆ ಎಂದೂ ಹುಟ್ಟು-ಸಾವುಗಳಿಲ್ಲ. ನಾವು
ಕಾಣುವ ಹುಟ್ಟು-ಸಾವು ಕೇವಲ ಭೌತಿಕ ಶರೀರಕ್ಕೆ ಸಂಬಂಧ ಪಟ್ಟಿದ್ದು.
ಹುಟ್ಟುವುದು ಒಂದು ವಿಕಾರ, ಸಾಯುವುದು ಇನ್ನೊಂದು ಬದಲಾವಣೆ
ಅಷ್ಟೇ. ಒಬ್ಬ ವ್ಯಕ್ತಿ ಸತ್ತಾಗ ಅವನ ದೇಹ ನಾಶವಾಗುವುದೇ ಹೊರತು
ಆತನ ಜೀವ ನಾಶವಾಗುವುದಿಲ್ಲ. ಅನಾದಿ-ಅನಂತವಾಗಿರುವ ಜೀವ
ತನ್ನ ಪುರವನ್ನು(ದೇಹವನ್ನು) ಬದಲಿಸುವುದೇ ನಾವು ಕಾಣುವ
ಹುಟ್ಟು-ಸಾವು. ಮೋಕ್ಷದಲ್ಲಿ ಇಂತಹ ನಾಶವಾಗುವ ದೇಹವಿಲ್ಲ.
ಆದ್ದರಿಂದ ದೇಹ ನಾಶವೂ ಇಲ್ಲದ ಸ್ಥಿತಿ ಮೋಕ್ಷ.
ಶರೀರದಲ್ಲಿ ವಾಸಿಸುವ ಭಗವಂತ ಶರೀರದ ಪರಿಮಿತಿಯಲ್ಲಿಲ್ಲ. ಅವನು
‘ಮಹಾಂತ’. ದೇಹದೊಳಗಿರುವ ಭಗವಂತ ದೇಹ ಬಿದ್ದು ಹೋದಾಗ
ಬಿದ್ದು ಹೋಗುವುದಿಲ್ಲ. ಏಕೆಂದರೆ ದೇಹ ಬಿದ್ದು ಹೋದಾಗ ದೇಹದ
ಒಳಗಿರುವ ಭಗವಂತ ಮತ್ತು ಹೊರಗಿರುವ ಭಗವಂತ ಏಕರೂಪನಾಗುತ್ತಾನೆ ಅಷ್ಟೇ. “ಇಂತಹ ಭಗವಂತ ವಿಭುಃ” ಎನ್ನುತ್ತಾನೆ ಯಮ. 
ಅಂದರೆ ಆತ ಸರ್ವಗತ, ಸರ್ವಸಮರ್ಥ ಮತ್ತು ಅನೇಕ ರೂಪ(ವಿವಿದೋ ಭವತಿ). ಆತ ಎಲ್ಲಾ ಜೀವ ಜಂತುಗಳಲ್ಲೂ ನಿಂತು
ನಡೆಸುತ್ತಿದ್ದಾನೆ. ನಮ್ಮೊಳಗೆ ಅಂತರ್ಯಾಮಿಯಾಗಿದ್ದು, ನಮ್ಮನ್ನು
ನಿಯಮಿಸುವ ನಮ್ಮ ಸ್ವಾಮಿ ಆ ಭಗವಂತನ ಅರಿವು ಯಾರಿಗಿದೆಯೋ, ಅವನಿಗೆ ಎಂದೂ ಭಯ-ಶೋಕವಿರುವುದಿಲ್ಲ.
ಭಗವಂತ ಜ್ಞಾನಾನಂದ ಸ್ವರೂಪ. ಆದ್ದರಿಂದ ಅವನಲ್ಲಿ ಯಾವ ರೀತಿಯ ತಾರತಮ್ಯ ಚಿಂತನೆ ಮಾಡಬಾರದು. ನಾವು ಒಂದು ಕ್ರಿಯೆ
ಮಾಡಬೇಕಿದ್ದರೆ ಮೊದಲು ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ. ನಂತರ
ತಿಳಿದುಕೊಂಡು ಮಾಡುತ್ತೇವೆ. ನಮ್ಮ ಇಚ್ಛೆ-ಜ್ಞಾನ-ಕ್ರಿಯೆ ಇವು
ಮೂರನ್ನು ತ್ರಿನೇತ್ರ ಎನ್ನುತ್ತಾರೆ. ಆದರೆ ಭಗವಂತನಲ್ಲಿ ಇವು ಮೂರು
ಬೇರೆ ಬೇರೆ ಅಲ್ಲ. ಆತನಲ್ಲಿ ಜ್ಞಾನ-ಇಚ್ಛೆ-ಕ್ರಿಯೆ ಎಲ್ಲವೂ ಅಖಂಡ. ಇಷ್ಟೇ ಅಲ್ಲದೇ ಭಗವಂತನ ಅವಯವಗಳೂ ಕೂಡ ಸ್ವರೂಪ
ಭೂತವಾಗಿ ಅಖಂಡವಾದುದು. ಅವನ ಕೈ-ಕಾಲು-ಕಣ್ಣು ಎಲ್ಲವೂ ಬೇರೆ
ಬೇರೆ ಅಲ್ಲ. ಅದೊಂದು ಅಖಂಡವಾದ ವಿಲಕ್ಷಣವಾದ ಶಕ್ತಿ. ಆತ
ಕಾಲದಿಂದ ಅಂತವಿಲ್ಲದವನು; ದೇಶದಿಂದ ಅಂತವಿಲ್ಲದವನು;
ಗುಣಗಳಿಂದ ಅಂತವಿಲ್ಲದವನು ಹಾಗೂ ಶಕ್ತಿಯಲ್ಲಿ ಅಂತವಿಲ್ಲದವನು.
ಇದು ನಾವು ಯೋಚಿಸಲೂ ಸಾಧ್ಯವಾಗದ ಭಗವಂತನ ಗುಣಧರ್ಮ.
ಭಗವಂತ ದುಃಖದ ಸ್ಪರ್ಶವೇ ಇಲ್ಲದವನು. ಜೀವಸ್ವರೂಪ ಆನಂದ
ಸ್ವರೂಪವಾದರೂ ಕೂಡ ದೇಹ ಮತ್ತು ಮನಸ್ಸಿನ ಮೂಲಕ ಅದು
ದುಃಖ ಮತ್ತು ಕೊಳೆಯನ್ನು ಅಂಟಿಸಿಕೊಳ್ಳುತ್ತದೆ. ಆದರೆ ಭಗವಂತ
ದುಃಖರಹಿತ, ಸ್ವಚ್ಛ, ನಿರ್ಮಲ ಮತ್ತು ಆನಂದಮಯ.
ಭಗವಂತನ ವರ್ಣನೆ
ಭಗವಂತನ ನಾಲ್ಕು ತೋಳುಗಳು ಧರ್ಮ,ಅರ್ಥ,ಕಾಮ ಮತ್ತು
ಮೋಕ್ಷದ ಸಂಕೇತ. ಇದಕ್ಕಣುಗುಣವಾಗಿ ನಾಲ್ಕು ಆಯುಧಗಳು
ಅಥವಾ ಅಭಯ ಹಾಗೂ ಧ್ಯಾನ ಮುದ್ರೆ .ಧ್ಯಾನ ಮುದ್ರೆ ಮತ್ತು
ಅಭಯ ಮುದ್ರೆ ಎಂದರೆ ತೋರು ಬೆರಳು. ಉಳಿದ ಮೂರು
ಬೆರಳುಗಳಿಂದ ಮುಂದೆ ಬಾಗಿ ಹೆಬ್ಬೆರಳನ್ನು ಸ್ಪರ್ಶಿವುದು ಧ್ಯಾನ ಮುದ್ರೆ.
ಇಲ್ಲಿ ತೋರು ಬೆರಳುಗಳು ಜೀವರನ್ನು, ಹೆಬ್ಬೆರಳು ಭಗವಂತನನ್ನು
ಸೂಚಿಸುತ್ತದೆ.ಉಳಿದ ಮೂರು ಬೆರಳುಗಳು ಅವಿಧ್ಯ, ಕಾಮ,
ಕರ್ಮವನ್ನು  ಸೂಚಿಸುತ್ತದೆ. ಜ್ಞಾನ,ಭಕ್ತಿ,ಮೋಕ್ಷವಾದ ಭಗವಂತನನ್ನು
ಸೇರುವುದನ್ನು ಧ್ಯಾನ ಮುದ್ರೆ ಪ್ರತಿಪಾದಿಸುತ್ತದೆ.ಅಭಯ ಭಗವಂತನ
ಪಾದವನ್ನು ತೋರಿಸುತ್ತದೆ.

#jnanaprachar
👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]