Sunday, 27 August 2023

ಯಜುರ್ವೇದದ ಉಪಾಕರ್ಮ ನಡೆಯುವ ಸಂಧರ್ಭದಲ್ಲಿಸಾಧಾರಣವಾಗಿ ಆಚರಣೆ ಮಾಡುವ ಮಾಹಿತಿ.

ಯಜುರ್ವೇದದ ಉಪಾಕರ್ಮ ನಡೆಯುವ ಸಂಧರ್ಭದಲ್ಲಿ
ಸಾಧಾರಣವಾಗಿ ಆಚರಣೆ ಮಾಡುವ ಮಾಹಿತಿ.

ಉಪಾಕರ್ಮ ( ಜನಿವಾರದ ಹಬ್ಬ ) ನೂಲು ಹುಣ್ಣಿಮೆ ಮತ್ತು ರಕ್ಷಾ ಬಂಧನ RAKSHA BANDHAN :  ಶ್ರಾವಣ ಮಾಸದ ಹುಣ್ಣಿಮೆ ದಿನ ಯಜುರ್ವೇದ ಉಪಾಕರ್ಮವನ್ನು, ಚತುರ್ದಶಿ ದಿನ ಋಗ್‌ವೇದ ಉಪಾಕರ್ಮವನ್ನು ಆಚರಿಸುತ್ತ ಬಂದಿರುವುದು ನಮ್ಮ ಭಾರತದ ದೇಶಾದ್ಯಂತ ಆಚರಿಸಲಾಗುತ್ತದೆ.  

 ಒಂದೊಂದು ಬಾರಿ ಎರೂಡ ಒಟ್ಟಿಗೆಯೂ ಬರಬಹುದು. ಈ ಹಬ್ಬವನ್ನು ಜನಿವಾರದ ಹಬ್ಬ ಎಂದೂ ಕರೆಯುತ್ತಾರೆ. ಉಪಾಕರ್ಮ ಒಂದು ವೈದಿಕ ಕ್ರಿಯಾವಿಧಿ , ಈ ಕ್ರಿಯಾವಿಧಿಯನ್ನು ದೈನಂದಿನ ಜೀವನದಲ್ಲಿ ಸಂಧ್ಯಾ ವಂದನೆ ಮಾಡುವ ಸಮುದಾಯದವರು ಆಚರಿಸುತ್ತಾರೆ . ಇದನ್ನು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿ,  ಭಜನೆಮನೆಗಳಲ್ಲಿ , ಯಜಮಾನರ ಪೇಟೆ ಮನೆಗಳಲ್ಲಿ, ಮತ್ತು ದೇವಾಲಯದಲ್ಲಿ ಸಾಮೂಹಿಕವಾಗಿ ಆಚರಿಸುವರು. 

 ಜಾತಕದಲ್ಲಿ 3ನೇ ಭಾವ ಸೋದರ ಸೋದರಿಯರ ವಿಷಯ ತಿಳಿಯಬಹುದು. ಈ ಭಾವದಲ್ಲಿ ಶುಭ ಗ್ರಹಗಳಿದ್ದರೆ ಪ್ರೀತಿ-ಪ್ರೇಮ ಇರುವ ಸಹೋದರ ಸಹೋದರಿಯರು ಸಿಗುತ್ತಾರೆ. ಪಾಪಗ್ರಹ ಇದ್ದರೆ ಬಾಂಧವ್ಯ ಕಡಿಮೆ ಇರುವುದು ಎನ್ನಲಾಗುತ್ತದೆ.

ಉಪಾಕರ್ಮದ  ದಿನ ಗಾಯಿತ್ರಿ ಜಪವನ್ನು ಲೋಕ ಕಲ್ಯಾಣದ ದೃಷ್ಟಿಯಲ್ಲಿ ಮಾಡುತ್ತಾರೆ ಹಾಗೂ ಹಳೆಯ ಜನಿವಾರವನ್ನು ವಿಸರ್ಜಿಸುತ್ತಾರೆ. 

ವರ್ಷದಲ್ಲಿ ಮಾಡಿದ ಪಾಪವನ್ನು ಕಳೆಯಲು ಗಾಯಿತ್ರಿ ಮಂತ್ರ ಜಪಿಸುವ ಸಂಪ್ರದಾಯ ವಾಗಿರುತ್ತದೆ . 

ಜಾತಕದಲ್ಲಿ 9ನೇ ಬಾವದಲ್ಲಿ ಶನಿಗ್ರಹವು ಇದ್ದು ಅದಕ್ಕೆ ಯಾವ ದೃಷ್ಟಿಯಿಲ್ಲದೆ ಇದ್ದರೆ ಆತನು ಜಪ ಧ್ಯಾನ ಹೆಚ್ಚು ಹೆಚ್ಚು ಮಾಡುತ್ತಾರೆ. ಧಾರ್ಮಿಕ ಕಾರ್ಯಗಳು ಸಹ ಹೆಚ್ಚು ಮಾಡುತ್ತಾರೆ.

ನೂಲು ಹುಣ್ಣಿಮೆ ದಿನ ತಮ್ಮ ಮನೆಯಲ್ಲಿನ ನೂಲುಗಳನ್ನು ತಂದು ಕಳಸ ಪ್ರತಿಷ್ಠೆ ಮಾಡಿ ಎಲ್ಲಾ ರೀತಿಯ ನೇಕಾರಿಕೆಯ ವಸ್ತುಗಳನ್ನು ಮತ್ತು ಕತ್ತಿ ಗುಂಡು ಇತರೆ ಆಯುಧಗಳ ಪೂಜೆ ಮಾಡುವ ಪದ್ಧತಿ ಇರುತ್ತೆ. 

ಅದೇ ದಿನ ರಕ್ಷಾ ಬಂಧನ ಅಥವಾ ರಾಖಿ ಹಬ್ಬವನ್ನು ಸೋದರ ಸೋದರಿಯರು ಆಚರಿಸುತ್ತಾರೆ. ಇವರುಗಳ ಅಕ್ಕರೆ, ಅನುರಾಗಗಳು ಜೀವನ ಪರ್ಯಂತ ಇರಬೇಕೆಂದು ನೆನಪಿಸುವ ದಿನವಿದು.

ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತ ದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನನ್ನ ಮನದಲ್ಲಿ ಮೂಡಿಸುತ್ತದೆ.
ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ

ಆದರೆ ಈ ಬಾರಿ ಶ್ರವಣ ಮಾಸದ ಬದಲಾಗಿ ಈ ಬಾರಿ ಗ್ರಹಣ ದೋಷವಿದ ಕಾರಣ ಭಾದ್ರಪದ ಮಾಸದಲ್ಲಿ ಉಪಾಕರ್ಮ ವನ್ನು ಮಾತ್ರ ಆಚರಣೆ ನಡೆಯುತ್ತಿದೆ.

ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ

ಹಿಂದಿನ ಕಾಲದಲ್ಲಿ ಇಂದಿನ ರೀತಿಯಲ್ಲಿ ಜಾತಿ ಪದ್ದತಿಗಳು ಇಲ್ಲದೇ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ವರ್ಣಾಶ್ರಮ ಪದ್ದತಿ ಜಾರಿಯಲ್ಲಿತ್ತು. ಈ ವರ್ಣಾಶ್ರಮಗಳು ಹುಟ್ಟಿನಿಂದ ಬಾರದೇ ಅವರವರ ಪಾಲಿಸುವ ವೃತ್ತಿಯಿಂದ ನಿರ್ಧರಿಸಲ್ಪಡುತ್ತಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಕ್ಕೆ ಮಕ್ಕಳನ್ನು ಕಳುಹಿಸುವ ಮುಂಚೆ ಉತ್ತಮವಾದ ಸಂಸ್ಕಾರ ಮತ್ತು ಮನಸ್ಸಿನ ಕೊಳೆಗಳನ್ನು ಕಳೆದು ಪರಬ್ರಹ್ಮಪ್ರಾಪ್ತಿಗಾಗಿ, ಮತ್ತು ತನ್ಮೂಲಕ ಸತ್ಪುರುಷರಾಗುವುದಕ್ಕಾಗಿ ಉಪನಯನವನ್ನು ಮಾಡುತ್ತಿದ್ದರು.

ಸಾಮಾನ್ಯವಾಗಿ ಆರರಿಂದ ಎಂಟು ವಯಸ್ಸಿನ ಒಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವುದು ನಡೆದು ಬಂದಿರುವ ಸಂಪ್ರದಾಯ. ಹುಟ್ಟಿನಿಂದ ಅಲ್ಲಿಯವರೆಗೂ ತಾಯಿಯ ಮಡಿಲಲ್ಲೇ ಬೆಳೆದ ಗಂಡು ಮಕ್ಕಳು ಅಂದಿನ ಕಾಲದಲ್ಲಿ ಕೆಲವೊಂದು ಬಾರೀ ಇನ್ನೂ ತಾಯಿಯ ಹಾಲನ್ನೇ ಕುಡಿಯುತ್ತಿದ್ದ ಮಕ್ಕಳಿಗೆ ಕಡೆಯದಾಗಿ ಮಾತೃ ಭೋಜನ ಮಾಡಿಸಿ ಬ್ರಹ್ಮೋಪದೇಶ ಮಾಡಿಸುತ್ತಿದ್ದರು. ಈ ರೀತಿಯಾಗಿ ಬ್ರಹ್ಮೋಪದೇಶ ಮಾಡಿದ ನಂತರವೇ ಅವರಿಗೆ ಎರಡನೇ ಜನ್ಮ ಪ್ರಾಪ್ತಿಯಾದಂತೆ ಎಂದು ದ್ವಿಜ ಎಂದೂ ಕರೆಯುತ್ತಿದ್ದರು. ಮಕ್ಕಳಿಗೆ ಆಚಾರ್ಯ ಮುಖೇನ ಶಾಸ್ತ್ರೋಕ್ತವಾಗಿ ತಂದೆಯಿಂದ ಗಾಯತ್ರೀ ಮಂತ್ರದ ಉಪದೇಶವಾಗಿ ಸ್ವಸಾಮರ್ಥ್ಯ, ಪಾಂಡಿತ್ಯ ಮತ್ತು ಸಮೃದ್ಧಿಯ ಸಂಕೇತವಾದ ಮೂರು ಎಳೆಗಳ ಬ್ರಹ್ಮ ಗಂಟು ಉಳ್ಳ ಜನಿವಾರವನ್ನು ಧಾರಣೆ ಮಾಡಿಸುತ್ತಾರೆ. ಆ ಮೂರು ಎಳೆಗಳು, ಸ್ವಸಾಮರ್ಥ್ಯದ ದೇವಿ (ಪಾರ್ವತಿ), ಪಾಂಡಿತ್ಯದ ದೇವಿ (ಸರಸ್ವತಿ) ಮತ್ತು ಸಮೃದ್ದಿ ಅಥವಾ ಧನ ದೇವಿ (ಲಕ್ಷ್ಮಿ) ಈ ಮೂರೂ ದೇವಿಯರ ಆಶೀರ್ವಾದ ಸುಖಜೀವನ ನಡೆಸಲು ಇರಲೇ ಬೇಕಾದ ಕಾರಣ ಸದಾ ಕಾಲವೂ ಮೂರು ಎಳೆಗಳ ಜನಿವಾರವನ್ನು ಧರಿಸಿರುವುದು ಅವಶ್ಯಕವಾಗಿತ್ತು.

ಸಾಧಾರವಾಗಿ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯ ವರ್ಣಾಶ್ರಮ ಪಾಲಿಸುವುವರು ತಮ್ಮ ಗಂಡು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಈ ರೀತಿಯಲ್ಲಿ ಬ್ರಹ್ಮೋಪದೇಶ ಮಾಡಿಸಿ ಗುರು ಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿ ಕೊಡುತ್ತಿದ್ದರು. ಗುರುಕುಲದಲ್ಲಿ ಆ ವಿಧ್ಯಾರ್ಥಿಗಳು ಗಾಯತ್ರಿಯ ಔಪಾಸನೆಯೊಂದಿಗೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾ ತಮ್ಮ ಸ್ವಸಾಮಥ್ಯದ ಅನುಗುಣವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಸಾಧಾರಣವಾಗಿ ಎಲ್ಲಾ ವಸ್ತುಗಳಿಗೆ ಒಂದು ನಿರ್ಧಿಷ್ಟ ಅವಧಿಯಿರುತ್ತದೆ. ಆ ಅವಧಿ ಮುಗಿದಂತೆಲ್ಲಾ ಅದನ್ನು ಬದಲಿಸುವುದು ಜಗದ ನಿಯಮ. ಹಾಗಾಗಿ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮ ಬಟ್ಟೆ, ಗೃಹೋಪಯೋಗಿ ವಸ್ತುಗಳು, ವಾಹನ ಇತ್ಯಾದಿಗಳನ್ನು ಹೊಸದರೊಂದಿಗೆ ಬದಲಾಯಿಸುತ್ತಿರುತ್ತೇವೆ. ಅಂತಯೇ ಈ ಜನಿವಾರವನ್ನೂ ಮೈಲಿಗೆ, ಪುರುಡು ಮತ್ತು ಸೂತಕಗಳ ಹೊರತಾಗಿ ವರ್ಷಕ್ಕೊಮ್ಮೆ ಬದಲಿಸುವ ಸಂಪ್ರದಾಯವಿದೆ. ಹಾಗೆ ಜನಿವಾರವನ್ನು ಬದಲಾಯಿಸುವ ದಿನವನ್ನು ಉಪಾಕರ್ಮ ಎನ್ನುತ್ತಾರೆ. ಉಪಾಕರ್ಮ ಪದದ ಅರ್ಥ “ಹೊಸ ಆರಂಭ”. ಸಮಯದೊಂದಿಗೆ ಹಳೆಯದಾದ ಯಾವುದನ್ನಾದರೂ ಬದಲಾಯಿಸಬೇಕು
ಅಥವಾ ನವೀಕರಿಸಬೇಕು ಇಲ್ಲವೇ ಪುನಃ ಶಕ್ತಿಯುತಗೊಳಿಸಬೇಕು ಎಂದರ್ಥ. ಉಪಾಕರ್ಮವನ್ನು ವರ್ಷಕ್ಕೆ ಒಂದು ಬಾರಿ ಶ್ರಾವಣ ಮಾಸದ ಶುಕ್ಲ ಪಕ್ಷದ ಶ್ರವಣ ನಕ್ಷತ್ರದ ದಿನದಂದು ಋಗ್ವೇದಿಗಳು ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳು ಆಚರಿಸುತ್ತಾರೆ. ಹಾಗಾಗಿ ಈ ದಿನವನ್ನು ನೂಲು ಹುಣ್ಣಿಮೆ ಎಂದೂ ಕರಾವಳಿಯ ಕಡೆ ಕರೆಯುವುದುಂಟು. ಅಂದು ಉಪನಯನವಾದವರು ಶಾಸ್ತ್ರೋಕ್ತವಾಗಿ ತಮ್ಮ ಜನಿವಾರವನ್ನು ಗೌತಮಾದಿ ಸಪ್ತ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ನೀಡುವುದರ ಮೂಲಕ ಬದಲಾಯಿಸುತ್ತಾರೆ.

ಹಿಂದೆಲ್ಲಾ ಕುಲಪುರೋಹಿತರೇ ಮನೆಗಳಿಗೇ ಆಗಮಿಸಿ ನಡೆಸುತ್ತಿದ್ದ ಉಪಾಕರ್ಮ ಇಂದು ಸಮಯಾ ಭಾವದಿಂದ ದೇವಸ್ಥಾನಗಳಲ್ಲಿಯೋ ಇಲ್ಲವೇ ಕೆಲವು ಸಂಘ ಸಂಸ್ಥೆಗಳ ಮುಖಾಂತರವೋ ಇಲ್ಲವೇ ಹಿರಿಯ ಪುರೋಹಿತರ ಮನೆಗಳಲ್ಲಿ ಸಾಮೂಹಿಕವಾಗಿ ಆಚರಿಸಲ್ಕಡುತ್ತಿದೆ. ಹಾಗೆ ಸಾಮೂಹಿಕವಾಗಿ ಆಚರಿಸಲ್ಪಡುವ ಕಡೆ , ಮೊದಲು ವಿಘ್ನವಿನಾಶಕ ಗಣೇಶನ ಪೂಜೆ ಮಾಡಿ ನಂತರ ಸಪ್ತ ಋಷಿಗಳ ಮಂಡಲಗಳನ್ನು ಮಾಡಿ ಅಲ್ಲಿ ಸಪ್ತ ಋಷಿಗಳ ಆಹ್ವಾನೆ ಮಾಡಿ ಅವರಿಗೆ ಶ್ರಧ್ಧಾ ಭಕ್ತಿಯಿಂದ ಶೋಡಶೋಪಚಾರ ಪೂಜೆ ಮಾಡಿದ ನಂತರ ತಂದಿದ್ದ ಜನಿವಾರಗಳಿಗೆ ಪೂಜೆ ಮಾಡಿ ಆಚಾರ್ಯರಿಗೂ ಮತ್ತು ಅಲ್ಲಿರುವ ಹಿರಿಯರಿಗೂ ಯಥಾ ಶಕ್ತಿ ದಕ್ಷಿಣೆಯೊಂದಿಗೆ ಜನಿವಾರವನ್ನು ದಾನ ಮಾಡಿ, ಅಕ್ಕಿಯ ಹಿಟ್ಟಿನ ಗುಳಿಗೆಯನ್ನು ಹಲ್ಲಿಗೆ ತಾಕದಂತೆ ಸ್ವೀಕರಿಸಿ ಶ್ರೌತ ಸ್ಮಾರ್ತಾದಿ ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನ ಯೋಗ್ಯತಾ ಸಿದ್ಯರ್ಥಂ ಎಂದು ಸಂಕಲ್ಪ ಮಾಡಿ ಮೂರು ವೇದಗಳ ಛಂದಸ್ಸನ್ನು ಮತ್ತು ಬ್ರಹ್ಮ , ವಿಷ್ಣು , ರುದ್ರ ಈ ಮೂವರು ದೇವತೆಗಳ ಹೆಸರಿನಲ್ಲಿ (ಜನಿವಾರದ 3 ದಾರಗಳು ಪ್ರತಿನಿಧಿಸುತ್ತವೆ ಎಂದೂ ನಂಬಿಕೆ ಇದೆ ) ಯಜ್ಞೋಪವೀತ ಧಾರಣ ಮಂತ್ರವನ್ನು ಕರ ಷಡಂಗ-ವಿನ್ಯಾಸ ಪೂರ್ವಕ, ದೇಹಕ್ಕೆ ಆವಾಹನೆ ಮಾಡಿಕೊಂಡು ಸೂರ್ಯನ ಮತ್ತು ಪೃಥಿವೀ ಸ್ತುತಿಯ ವೇದ ಮಂತ್ರಗಳೊಂದಿಗೆ – ದಾರಣಮಂತ್ರ ಹೇಳಿ ಧರಿಸಲಾಗುವುದು.

ಯಜ್ಞೋಪವೀತ ಧಾರಣ ಮಂತ್ರ

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. “ತತ್ಸವಿತುರ್ವರೇಣ್ಯಮ್” ಮೊದಲ ಚರಣ. “ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ”. “ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

ಯಜ್ಞೋಪವೀತಂ ಪರಮಂಪವಿತ್ರಂ | ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |ಯಜ್ಞೋಪವೀತಂ ಬಲಮಸ್ತು ತೇಜಃ||

ಈ ಶ್ಲೋಕದ ಅರ್ಥ ಹೀಗಿದೆ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು.

ಈ ಮಂತ್ರೋಚ್ಛಾರ ಮಾಡಿದ ನಂತರ ಜನಿವಾರವನ್ನು ಧಾರಣೆ ಮಾಡಿ ಯಥಾ ಶಕ್ತಿ 32, 64, 108 ಅಥವಾ 1000 ಗಾಯತ್ರಿ ಜಪ ಮಾಡಬೇಕು.

ಬ್ರಹ್ಮಚಾರಿಗಳು ಮೂರೆಳೆಯ ಒಂದು ಜನಿವಾರವನ್ನು ಮಾತ್ರಾ ಧರಿಸಿದರೆ,
ಗೃಹಸ್ಥರು / ವಿವಾಹಿತರು ಮೂರೆಳೆಯ ಎರಡು ಜನಿವಾರ ಧಾರಣೆ ಮಾಡುತ್ತಾರೆ. ಮೊದಲನೇ ಜನಿವಾರ ತನ್ನದಾದರೆ ಮತ್ತೊಂದು ತನ್ನ ಪತ್ನಿಯ ಪರವಾಗಿ ಧರಿಸುತ್ತಾರೆ. ಅಕಸ್ಮಾತ್ ಎರಡನೇ ಮದುವೆ ಯಾದವರು ಮೂರನೇ ಜನಿವಾರವನ್ನೂ ಧರಿಸುತ್ತಾರೆ.
ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ, ದೇವರಿಗೆ ಅಥವಾ ಹಿರಿಯರಿಗೆ ನಮಸ್ಕರಿಸುವಾಗ ಹೆಗಲ ಮೇಲೆ ಉತ್ತರೀಯ(ಶಾಲು) ಇರಲೇ ಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ. ಹಾಗಾಗಿ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬಾರದಂತೆ ಉತ್ತರೀಯದ ಬದಲಾಗಿ ಮತ್ತೊಂದು ಹೆವ್ವಿನ ಜನಿವಾರನ್ನೂ ಧರಿಸುವುದು ರೂಢಿಯಲ್ಲಿದೆ.
ಇನ್ನೂ ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಅಕಸ್ಮಾತ್ ಕಾರಾಣಾಂತರಗಳಿಂದ ಜನಿವಾರ ಕಿತ್ತು ಹೋದಲ್ಲಿ, ಅದನ್ನು ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಕಿತ್ತು ಹೋದರೂ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ಹಾಗಾಗಿ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವರು
ಹಾಗೆ ಜನಿವಾರ ಬದಲಾಯಿಸಿದ ನಂತರ ತಂದೆ ಇಲ್ಲದವರು ತಮ್ಮ ಪಿತೃಗಳಿಗೆ ತರ್ಪಣ ನೀಡಿದ ನಂತರ ಸಪ್ತ ಋಷಿ ಮಂಡಲಗಳಿಗೆ
ಸತ್ವದ ಹಿಟ್ಟಿನ ನೈವೇದ್ಯ ಮಾಡಿ, ಮಹಾ ಮಂಗಳಾರತಿ ಮಾಡುವ ಮೂಲಕ ಉಪಾಕರ್ಮ ವಿಧಿ ವಿಧಾನಗಳು ಸಂಪೂರ್ಣಗೊಳ್ಳುತ್ತದೆ.

ಹಳೆಯ ಜನಿವಾರವನ್ನು ಮಾರನೇಯ ದಿನ ಸಂಧ್ಯಾವಂದನೆ ಮಾಡಿದ ನಂತರ ಸೊಂಟದ ಕೆಳಗಿನ ಮೂಲಕ ತೆಗೆದು ಅದನ್ನು ಛಿನ್ನ ಮಾಡಿ (ಒಂದೆಳೆಯನ್ನು ಕತ್ತರಿಸಿ) ಕೆರೆ/ನದಿಯ ನೀರಿಗೋ ಇಲ್ಲವೇ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸುತ್ತಾರೆ.

ಉಪಾಕರ್ಮದ ಸತ್ವದ ಹಿಟ್ಟು

ಉಪಾಕರ್ಮದ ದಿನ ಮಾತ್ರವೇ ಸಿದ್ಧ ಪಡಿಸುವ ವಿಶೇಷವಾದ ಪ್ರಸಾದವೇ ಸತ್ವದ ಹಿಟ್ಟು. ಪೂಜೆಗೆ ಬಂದವರೆಲ್ಲರೂ ತಂದಿದ್ದ ಬಗೆ ಬಗೆಯ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಅಕ್ಕಿ ಹಿಟ್ಟು, ಬೆಲ್ಲ, ಜೇನುತುಪ್ಪಾ, ಹಾಲು, ಮೊಸರು, ತುಪ್ಪಾ ಮತ್ತು ಎಳ್ಳನ್ನು ಜೊತೆಗೆ ಕಾಯಿ ತುರಿ ಸೇರಿಸಿ ಹದವಾಗಿ ಬೆರೆಸಿದರೆ ಸತ್ವದ ಹಿಟ್ಟು ಸಿದ್ಧವಾಗುತ್ತದೆ. ಎಲ್ಲಾ ಪರಿಕರಗಳು ಹಸಿ ಪದಾರ್ಥಗಳಾಗಿದ್ದರೂ ತಿನ್ನಲು ಬಹಳ ರುಚಿಯಾಗಿತ್ತದೆ. ಸಾಧಾರಣವಾಗಿ ಬಂದವರೆಲ್ಲರೂ ಯಥಾ ಶಕ್ತಿ ತಾವು ತಂದ ಡಬ್ಬಿಗಳಲ್ಲಿ ಈ ಪ್ರಸಾದವನ್ನು ತುಂಬಿ ಕೊಂಡು ಮನೆಗೆ ಹೋಗಿ ತಮ್ಮ ಕುಟುಂಬದೊಡನೆ ಉಪಾಕರ್ಮದ ಪ್ರದಾದವಾಗಿ ಸ್ವೀಕರಿಸುವ ಪದ್ದತಿ ಇದೆ.

ಹೀಗೆ ಉಪಾಕರ್ಮ ಮುಗಿಸಿಕೊಂಡು ಮನೆಯೊಳಗೆ ನೇರವಾಗಿ ನುಗ್ಗುವಂತಿಲ್ಲ. ಉಪಾಕರ್ಮದ ನಂತರ ಮನೆಗ ಮುಂಬಾಗಿಲಿನ ಹೊಸಿಲಿನಲ್ಲಿ ನಿಂತರೆ ಒಳಗಿನಿಂದ ಹಿರಿಯ ಮುತ್ತೈದೆಯರು ಇಲ್ಲವೇ ಚಿಕ್ಕ ಹೆಣ್ಣು ಮಕ್ಕಳು ನೂತನ ಜನಿವಾರಧಾರಿಗಳಿಗೆ ಆರತಿ ಬೆಳಗಿ ಒಳಗೆ ಬರಮಾಡಿಕೊಳ್ಳುತ್ತಾರೆ. ನಂತರ ಜನಿವಾರ ಧಾರಿಗಳೆಲ್ಲರೂ ಆರತಿ ಬೆಳಗಿದವರಿಗೆ ಯಥಾ ಶಕ್ತಿ ಕಾಣಿಕೆಯನ್ನು ನೀಡುವ ಸಂಪ್ರದಾಯ ಕೆಲವರ ಮನೆಯಲ್ಲಿ ರೂಢಿಯಲ್ಲಿದೆ. ಅಂದಿನ ಉಪಹಾರಕ್ಕೆ ಜನಿವಾರದ ಸಂಕೇತವಾಗಿ ಉದ್ದುದ್ದನೆಯ ಒತ್ತು ಶ್ಯಾವಿಗೆಯನ್ನು ಮಾಡುವ ರೂಢಿ ಹಲವರ ಮನೆಯಲ್ಲಿದೆ.

ಸಮಯಾಭಾವದಿಂದಲೋ ಇಲ್ಲವೇ ನಾನಾ ಕಾರಣಗಳಿಂದ ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ಉಪಾಕರ್ಮದ ನಿಯಮಿತ ವಿಧಿ ವಿಧಾನಗಳ ಮುಖಾಂತರ ಜನಿವಾರ ಬದಲಿಸಿಕೊಳ್ಳಲು ಆಗದಿದ್ದವರು ಮನೆಯಲ್ಲಿಯೇ ಬೆಳಿಗ್ಗೆ ಸಂಧ್ಯಾವಂಧನೆ ಮಾಡಿ ಜನಿವಾರಗಳಿಗೆ ಅರಿಶಿನ ಹಚ್ಚಿ ಕುಂಕುಮದ ಮೂಲಕ ಪೂಜೆ ಮಾಡಿ ಯಜ್ಞೋಪವೀತ ಧಾರಣೆಯ ಮಂತ್ರ ಪಠಿಸುತ್ತಾ ನೂತನ ಜನಿವಾರ ಧರಿಸಿ ಯಥಾ ಶಕ್ತಿ ಗಾಯತ್ರೀ ಮಂತ್ರ ಜಪಿಸಿ ಮಾರನೆಯ ದಿನ ಸಂಧ್ಯಾವಂದನೆ ಮಾಡಿದ ನಂತರ ಹಳೆಯ ಜನಿವಾರವನ್ನು ವಿಸರ್ಜಿಸ ಬೇಕು.

ಜನಿವಾರ ಕೇವಲ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯರಿಗೇ ಮಾತ್ರವೇ ಮೀಸಲಾಗಿಲ್ಲದೇ, ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದಾಗಿದೆ . ಅದಕ್ಕೆ ನಮ್ಮ ಶಾಸ್ತ್ರ ಸಂಪ್ರದಾಯಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ಹಾಗೆ ಸರಿಯಾಗಿ ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿ ಹೋಗಿ ಯಜ್ಞೋಪವೀತ ಫಲ ಆತನಿಗೆ ಲಭಿಸುವುದಿಲ್ಲ.
*ಯಜ್ಞೋಪವೀತ(ಜನಿವಾರ)*
🌺🌺🌺🌺🌺🌺🌺
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ *ಯಜ್ಞೋಪವೀತ ಧಾರಣೆ* ಜನಿವಾರದ ಧರಿಸಿದರೇ ಏನು ಪ್ರಯೋಜನ ವಿದೆ...! ಬಲ ಕಿವಿಯಲ್ಲಿ ಹಾಕಿದರೆ.. ಏನು ಆಗುವುದು.!  ನಿಯಮಗಳನ್ನು ಪಾಲಿಸಬೇಕು.. ಬೇಡ ವೇ.. ಬ್ರಹ್ಮಾ ಗಂಟು.. ಗಾಯತ್ರಿ ಮಂತ್ರ ಕ್ಕೆ.. ಸೂರ್ಯ ದೇವನು ಕೊಟ್ಟ ವೇದ ಮಾತೇ ಯಾ ಕೊಡುಗೆಯನ್ನು ಏನು.... 

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.

" *ಉಪನಯನ* " ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.

 ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು.  ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.

ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.

ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು  ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು,  ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ,  ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

*ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ*:-

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ

*ಯಜ್ಞೋಪವೀತದ ನಿಯಮಗಳು*:-

* ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು  ಬಲಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು.            ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.
* ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸ ಬೇಕು.
* ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.

* ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.

  *ಯಜ್ಞೋಪವೀತದ ವೈಜ್ಞಾನಿಕ ಮಹತ್ವ*:-

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು   ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ   ವಿಷಾಣುಗಳು ನಾಶಗೊಳ್ಳುತ್ತವೆ.

* ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.

* ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.

* ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.

* ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.

* ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.

* ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು
ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ
ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ
ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.

ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.

▬▬▬▬▬ஜ۩۞۩ஜ▬▬▬۩۞۩ஜ▬▬▬▬▬*॥ಸರ್ವೆಜನಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು||
         ▬▬▬▬▬ஜ۩۞۩ஜ▬▬▬▬▬

.

ಉಪಾಕರ್ಮ

ಮಂಗಳವಾರದಂದು ಋಗ್ವೇದ ಉಪಾಕರ್ಮ

ಮಂಗಳವಾರದಂದು ಋಗ್ವೇದ ಉಪಾಕರ್ಮ

ಉಪಾಕರ್ಮ 
ಉಪಾಕರ್ಮವನ್ನು ಶ್ರಾವಣಮಾಸದಲ್ಲಿ ಬರುವ ದಿನದಂದು ಋಗ್ವೇದಿಗಳು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು.  ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.

ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ.

ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರಬೇಕೆಂದು ತಿಳಿ ಹೇಳುತ್ತದೆ.

ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ

ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವುದರ ಸಂಕೇತ.

ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
**********

ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:
ಲೇಖನ- ಶ್ರೀ ನಾಗರಾಜಶಾಸ್ತ್ರಿ
ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ "ಅಹಂ ಬ್ರಹ್ಮಾಸ್ಮಿ" " ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು" ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.

೧.ಪ್ರ: ಉಪಾಕರ್ಮ ಎಂದರೇನು ?

ಉ: "ಉಪಾಕರ್ಮ" ಅಥವಾ ಉಪಕ್ರಮ ಎಂದರೆ ಪ್ರಾರಂಭ.

೨.ಪ್ರ: - ಯವುದರ ಪ್ರಾರಂಭ ?

ಉ: ವೇದಾಧ್ಯಯನದ ಪ್ರಾರಂಭ.

೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?

ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
"ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ "

ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.

೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?

ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.

೬. ವೇದವ್ರತಗಳಾದ ಈ ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?

ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು ಮಾಡಲೇಬೇಕೆಂಬ ನಿಯಮವಿಲ್ಲ.

೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?

ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.

೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?

ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.

ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ) ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.

ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ ಉತ್ಸರ್ಜಿಸುವ ಕ್ರಮ.

೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?

ಉ: ಇವುಗಳು ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.

೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?

ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.

೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?

ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?

ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?

ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.

೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?

ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.

ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.
ಹರಿಃ ಓಂ ತತ್ ಸತ್ ||

ಯಜ್ಞೋಪವೀತ(ಜನಿವಾರ)
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:

Rigveda Upakarma
ಋಗ್ವೇದ  ಉಪಾಕರ್ಮ   ಹಿನ್ನಲೆ  ಮತ್ತು ವಿಧಿ ವಿಧಾನಗಳು 

                                       ಉಪಾಕರ್ಮ  ಅಂದರೆ  " ಆರಂಭ"  (ಸಂಸ್ಕೃತ :उपाकर्म), ಅಂದರೆ ಅಂದಿನಿಂದ  ಶುರು ಎಂದು ಅರ್ಥ.  ಕನ್ನಡ  ಜನಾಂಗದವರು  ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು  ಆಚರಿಸುವುರು .ಈ  ಹಬ್ಬದ ಉಗಮ   ವೇದ ಕಾಲದಿಂದಲೂ  ನಮ್ಮ  ದೇವಾನು ದೇವತೆಗಳು ,ಋಷಿ , ಮುನಿಗಳಿಂದ  ಆಚರಿಸಲ್ಪಟ್ಟಿದೆ .

                                  ಉಪಾಕರ್ಮ ಹಬ್ಬವನ್ನು  ಶ್ರಾವಣ ಮಾಸದ ಶುಕ್ಲಪಕ್ಷದ  ಹುಣ್ಣಿಮೆಯೆಂದು  ( ನೂಲು ಹುಣ್ಣಿಮೆ) ,ಧನಿಷ್ಠ  ನಕ್ಷತ್ರದಂದು   ಹೋಮವನ್ನು  ಮಾಡಿ  ಮತ್ತು  ಹೊಸ  ಜನಿವಾರದ ಧಾರಣೆ ಮಾಡುತ್ತಾರೆ .ಅಂದಿನ ದಿನ ನಮ್ಮ ಉತ್ತರ ಭಾರತದವರು  ರಕ್ಷಾ ಬಂಧನ  ಹಬ್ಬವನ್ನು ಆಚರಿಸುತ್ತರೆ. ಅಣ್ಣ-ತಂಗಿ ,ಅಕ್ಕ-ತಮ್ಮ ,ಅಣ್ಣ-ಅತ್ತಿಗೆಯರ  ರಕ್ಷೆಗಾಗಿ  ರಕ್ಷಾಬಂಧನ ( ಬಣ್ಣ ಬಣ್ಣದ ದಾರಗಳಲ್ಲಿ  ಪುಷ್ಪಗಳು,ಮಣಿಗಳು ,ಎಲೆಗಳು  ಹೀಗೆ  ಅತ್ಯಾಕರ್ಶವಾಗಿ ಕಾಣಿಸಲು  ಬೊಂಬೆಗಳು,ನವರತ್ನಗಳನ್ನು  ಅಳವಡಿಸುತ್ತಾರೆ )ಉಡುಗೊರೆಯನ್ನು ದೊಡ್ಡವರು ಚಿಕ್ಕವರಿಗೆ ಕೊಡುತ್ತಾ  ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ . 

ದಂತಕಥೆ :
               ಒಮ್ಮೆ ಬ್ರಹ್ಮದೇವನಿಗೆ ತನ್ನ ಜ್ಞಾನ ಮತ್ತು ತಾನೇ ಸೃಷ್ಟಿಕರ್ತ ನಾಗಿರುವ  ಬಗ್ಗೆ ಜಂಭವಾಗಿ  ತಾನೇ ಶ್ರೇಷ್ಠನೆಂದು ತ್ರಿಮೂರ್ತಿಗಳಲ್ಲಿ  ಎಂದು  ವಾದವನ್ನು ಮಂಡಿಸಿದ ಆಗ ಮಹಾವಿಷ್ಣು  ಬ್ರಹ್ಮದೇವನು ಆಸೀನರಾಗಿದ್ದ ಕಮಲದ ೨ ನೀರಿನ ಹನಿಯಿಂದ ಮಧು ಮತ್ತು ಕೈಠಭ ಎಂಬ ರಾಕ್ಷಸರನ್ನು ಸೃಷ್ಟಿಸಿ ಅವರಿಗೆ ಬ್ರಹ್ಮನು ರಚಿಸಿದ ೪ ವೇದಗಳನ್ನು ಅಪಹರಿಸಬೇಕಂದು ಆಜ್ಞಾಪಿಸುತ್ತಾನೆ . ಮಹಾವಿಷ್ಣುವಿನ ಆಣತಿಯಂತೆ ಮಧು ಮತ್ತು ಕೈಠಭರು ಬ್ರಹ್ಮನಿಂದ ವೇದಗಳನ್ನು ಅಪಹರಿಸುತ್ತಾರೆ. ಆಗ ಬ್ರಹ್ಮದೇವನು ಮಹಾವಿಷ್ಣುವನ್ನು ಪ್ರಾರ್ಥಿಸಿ ತಾನು ಮಾಡಿದ ತಪ್ಪು ಅರಿವಾಯಿತು ನಿನ್ನ ಆಜ್ಞೆಯಿಲ್ಲದೆ ಎಲ್ಲೂ  ಏನು ನಡೆಯುವುದಿಲ್ಲ ಎಂದು ಅರಿವಾಯಿತು ನನ್ನ ಮಹಾಪರಾಧವನ್ನು  ಮನ್ನಿಸಿ ಆ ವೇದಗಳನ್ನು ಸಂರಕ್ಷಿಸಬೇಕಂದು ಕೋರುತ್ತಾನೆ .   

                                      ಆಗ   ಮಹಾವಿಷ್ಣು   ಹಯಗ್ರೀವನಾಗಿ ( ಕುದುರೆಯಾಗಿ)  ಅವತಾರ ತಾಳಿ ಮಧು  ಮತ್ತು ಕೈಠಭರಿಂದ  ವೇದಗಳನ್ನು ಸಂರಕ್ಷಿಸಿದ ಎಂದು ಪುರಾಣದಲ್ಲಿ  ಉಲ್ಲೇಖವಿದೆ . ಈ ದಿನವನ್ನು "ಹಯಗ್ರೀವ ಉತ್ಪತ್ತಿ " ಎಂದು ಆಚರಿಸುತ್ತಾರೆ . ಎಲ್ಲಾ  ವೇದಗಳನ್ನು ಸಂರಕ್ಷಿಸಿದ ದಿನವಾದ್ದರಿಂದ ಅಂದಿನ ದಿನದಿಂದ "ಉಪಾಕರ್ಮ" ಹಬ್ಬವನ್ನು ಆಚರಿಸುವರು . 
**********

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬ 