Tuesday, 30 June 2020

ಅನ್ನ__ದಾನದ___ಮಹತ್ವ___

#ಅನ್ನ__ದಾನದ___ಮಹತ್ವ___
ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು. 

ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು. ಮಗ ಹೀಗೇ ಬೆಳೆದು ದೊಡ್ಡವನಾದ. ವಯಸ್ಸಿಗೆ ಬಂದ. ತಾಯಿ ಬರೇ ಅನ್ನದಾನವೊಂದನ್ನು ಬಿಟ್ಟಿದ್ದರೆ ಅವರು ದೊಡ್ಡ ಶ್ರೀಮಂತರಾಗಬೇಕಿತ್ತು. ಆಗಲಿಲ್ಲ. 
ತಾಯಿ ಹೀಗೇಕೆ ಮಾಡುತ್ತಿರಬಹುದೆಂದು ಮಗನಿಗೆ ಯೋಚನೆಯಾಯಿತು.

ಒಂದು ದಿನ ಮಗ,ತಾಯಿ, ಇದೇಕೆ ಹೀಗೆ ಅನ್ನದಾನ ಮಾಡುತ್ತೀ? ಒಂದೊಂದು ದಿನ ನೀನೇ ಉಪವಾಸವಿದ್ದು ಬೇರೆಯವರಿಗೆ ಅನ್ನದಾನ ಮಾಡುತ್ತೀ, ಅನ್ನದಾನವೊಂದನ್ನು ಬಿಟ್ಟಿದ್ದರೆ, ನಾವು ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು. ಅದೇನು ಅನ್ನದಾನದ ಮಹತ್ವ? ಹೇಳು’ ಎಂದ. ಅದಕ್ಕೆ ತಾಯಿ,

‘ಮಗೂ, ದಾನಗಳಲ್ಲಿ ಅನ್ನದಾನವೇ ಹೆಚ್ಚಿನದು. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ. ಆದರೆ ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು’ ಎಂದಳು.

‘ಆ ಪುಣ್ಯ ಯಾವುದು?’ ಪ್ರಶ್ನಿಸಿದ ಮಗ.

‘ಅದನ್ನು ಹೇಳುವುದು ನಮ್ಮಂಥ ನರಮನುಷ್ಯರಿಂದ ಹೇಗಾದೀತು? ಅದು ಶಿವನಿಗೆ ಗೊತ್ತು. ಅವನನ್ನೇ ಹೋಗಿ ಕೇಳು’ ಎಂದು ತಾಯಿ ಹೇಳಿದಳು.

ಸರಿ, ಅದರಂತೆ ಮಗ ತಾಯಿಯ ಅಪ್ಪಣೆ ಪಡೆದುಕೊಂಡು ಶಿವನ ಬಳಿಗೆ ಹೊರಟ.

ಹೋಗುತ್ತ ಹೋಗುತ್ತ ದೊಡ್ಡದೊಂದು ಅಡವಿ ಬಂತು. ಅಲ್ಲಿ ಗಿಡಮರ ದಟ್ಟವಾಗಿ ಬೆಳೆದಿದ್ದವು. ಇವನು ಬೆಟ್ಟ ಹತ್ತಿ ಇಳಿಯುವಷ್ಟರಲ್ಲಿ, ಸಂಜೆಯಾಯಿತು. ಮುಂದೆ ಏನು ಮಾಡಬೇಕೆಂದು ಹೊಳೆಯದಾಯಿತು. ಆಗ ಅಲ್ಲಿಗೊಬ್ಬ ಬೇಡ ಬಂದ. ಈ ಹುಡುಗನನ್ನು ನೋಡಿ ಅವನಿಗೆ ಕರುಣೆ ಬಂತು. ಹೀಗೇ ಬಿಟ್ಟರೆ ಹುಡುಗ ಹುಲಿ ಸಿಂಹಗಳ ಬಾಯಿಗೆ ಬೀಳುತ್ತಾನೆಂದುಕೊಂಡು,

‘ಏ ಹುಡುಗಾ, ಸಂಜೆ ಸಮಯದಲ್ಲಿ ಹೀಗೆ ಕಾಡಿನಲ್ಲಿ, ಅಡ್ಡಾಡಿದರೆ ಏನು ಗತಿಯಾದೀತು? ಇದು ಹುಲಿ-ಸಿಂಹಗಳಿರುವ ಸ್ಥಳ. ಇಂದು ರಾತ್ರಿ ನಮ್ಮ ಗುಡಿಸಿನಲ್ಲಿದ್ದು ನಾಳೆ ಹೋದೀಯಂತೆ ಬಾ’ ಅಂದ. ಹುಡುಗನಿಗೂ ಅಷ್ಟೇ ಬೇಕಾಗಿತ್ತು. ಬೇಡನೊಂದಿಗೆ ಹೋದ.

ಗುಡಿಸಿಲಿಗೆ ಹೋಗಿ ಬೇಡ ಹೆಂಡತಿಗೆ ಹೇಳಿದ. ‘ಅಲೆದಾಡುತ್ತಿದ್ದ, ನಾನೇ ಕರೆದು ತಂದೆ. ಇಂದಿದ್ದು ನಾಳೆ ಹೋಗುತ್ತಾನೆ. ಹಸಿದಿದ್ದಾನು, ಇವನಿಗೆ ಹಣ್ಣು ಹಾಲು ಕೊಡು.’

ಅವಳು ‘ಅದೆಲ್ಲಾ ನನ್ನಿಂದ ಆಗದು. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು. ಇಲ್ಲದಿದ್ದರೆ ಬಿಡು’ ಎಂದಳು. ಬೇಡ ತನ್ನ ಪಾಲಿನ ಹಣ್ಣು, ಹಾಲು ಕೊಟ್ಟ. ‘ಹುಡುಗಾ, ದಣಿದಿದ್ದೀಯಪ್ಪ, ಮಲಗು’ ಅಂದು ಕರುಣೆಯಿಂದ ಹುಡುಗನ ಕಾಲು ತಿಕ್ಕಿದ. ಹಾಸಿಗೆ ಹಾಸಿ ಮಲಗಿಸಿದ.

 ತನಗೆ ಮಲಗಲು ಸ್ಥಳ ಇರದದ್ದರಿಂದ ಬಾಗಿಲ ಹೊರಗೆ ಕಾಲು ಚಾಚಿ ಒಳಗೆ ತಲೆಯಿಟ್ಟು ಬಾಗಿಲು ತೆರೆದೇ ಮಲಗಿದ. ಆದರೆ ರಾತ್ರಿ ಹುಲಿ ಬಂದು ಹೊರಗರ್ಧ ಒಳಗರ್ಧ ಮಲಗಿದ್ದ ಬೇಡನನ್ನು ಕೊಂದು ತಿಂದುಹಾಕಿತು. ರಕ್ತದ ರುಚಿ ಹತ್ತಿ ಒಳಗೆ ಹೋಗಿ ಅವನ ಹೆಂಡತಿಯನ್ನೂ ತಿಂದು ಹಾಕಿತು. ಹೊಟ್ಟೆ ತುಂಬಿದ ಹುಲಿ ಆ ಹುಡುಗನನ್ನು ನೋಡದೆ ಹಾಗೇ ಹೋಯಿತು. ಮುಂಜಾನೆ ಇವನೆದ್ದು ನೋಡಿದರೆ ಇಬ್ಬರ ಎಲುಬುಗಳನ್ನು ಬಿಟ್ಟು ಬೇರೇನೂ ಇರಲಿಲ್ಲ. ಪಾಪ ಬಹಳ ಅನ್ಯಾಯವಾಯಿತೆಂದು ಹಳಹಳಸಿ ಮತ್ತೆ ಪ್ರಯಾಣ ಮಾಡಿದ.

ದಾರಿಯಲ್ಲಿ ಒಬ್ಬ ರಾಜ ತಲೆಯ ಮೇಲೆ ಕೈ ಹೊತ್ತು ಕೂತಿದ್ದ. ಇವನನ್ನು ನೋಡಿ –

‘ಹುಡುಗಾ, ಎಲ್ಲಿ ಹೊರಟಿರುವೆ?’ ಅಂದ.

‘ಒಂದು ಪ್ರಶ್ನೆಯಿದೆ. ಅದನ್ನು ಕೇಳಲು ಶಿವನ ಬಳಿಗೆ ಹೋಗುತ್ತಿದ್ದೇನೆ’ ಎಂದ.

‘ಹಾಗಿದ್ದರೆ ನನ್ನದೂ ಒಂದು ಪ್ರಶ್ನೆ ಇದೆ. ಕೇಳಿಕೊಂಡು ಬರುತ್ತೀಯಾ?’ ಎಂದ ರಾಜ.

‘ಏನದು?’

‘ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ. ತಟ್ಟಂತ ಒಂದು ಹನಿ ನೀರಿಲ್ಲ. ಯಾಕೆಂದು ಕೇಳಿಕೊಂಡು ಬರುತ್ತೀಯಾ’.

ಆಗಲೆಂದು ಹುಡುಗ ಮುಂದೆ ಹೊರಟ.

ಮುಂದೆ ಹೋಗುವಷ್ಟರಲ್ಲಿ ಒಬ್ಬ ಕುಂಟ ಕುಳಿತಿದ್ದ. ಅವನೂ, ‘ತಮ್ಮಾ, ನನ್ನ ಕುಂಟುತನಕ್ಕೆ ಏನು ಕಾರಣವೆಂದು ಕೇಳಿಕೊಂಡು ಬಾ’ ಅಂದ. ಆಗಲೆಂದು ಹುಡುಗ ಮುಂದೆ ಹೊರಟ.

ಮುಂದೆ ದಾರಿಯಲ್ಲಿ ಒಂದು ಹುತ್ತ ಸಿಕ್ಕಿತು. ಅದರಲ್ಲಿ ಅರ್ಧ ಒಳಗೂ ಸಿಕ್ಕಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸಲಾರದ ಒಂದು ಸರ್ಪವಿತ್ತು. ಅದಕ್ಕೂ ತನ್ನ ಪ್ರಯಾಣದ ಉದ್ದೇಶ ಹೇಳಿದ. ಅದು ‘ನನ್ನ ಇಂಥ ಸ್ಥಿತಿಗೆ ಏನು ಕಾರಣ ಕೇಳಿಕೊಂಡು ಬಾ’ ಎಂದಿತು. ಹುಡುಗ ಆಗಲೆಂದು ಹೇಳಿ ಮುಂದಕ್ಕೆ ಹೊರಟ.

ಹೋದ, ಹೋದ. ಸೀದಾ ಕೈಲಾಸ ಪರ್ವತಕ್ಕೇ ಹೋದ. ಅಲ್ಲಿ ಶಿವ ಪಾರ್ವತಿ ಕುಳಿತಿದ್ದರು. ಹೋಗಿ ನಮಸ್ಕರಿಸಿದ. ‘ಶಂಭೋ, ಅನ್ನದಾನದ ಪುಣ್ಯ ಏನು? ಹೇಳಬೇಕು’ ಎಂದ. ಅದಕ್ಕೆ ಶಿವನು,

‘ನೋಡು ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಹಡೆಯುತ್ತಾಳೆ. ಹುಟ್ಟಿದ ಆ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯ ಏನೆನ್ನುವುದನ್ನು ಹೇಳುತ್ತದೆ’ ಎಂದ.

ಹಾಗೆಯೇ ರಾಜನ ಕೆರೆಯಲ್ಲಿ ನೀರು ಬೀಳದಿರುವ ಕಾರಣ ಕೇಳಿದ. ಅದಕ್ಕೆ ಶಿವನು ಹೇಳಿದ –

‘ರಾಜನಿಗೆ ಬೆಳೆದ ಒಬ್ಬ ಮಗಳಿದ್ದಾಳೆ. ಅವಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದೆ.’

‘ಹಾಗೆ ಕುಂಟನ ಕಾಲು ಯಾಕೆ ಹೋಗಿವೆ?’

‘ತನಗೆ ತಿಳಿದ ವಿದ್ಯೆಯನ್ನು ಆತ ಯಾರಿಗಾದರೂ ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬರುತ್ತವೆ.’

‘ಸರ್ಪವೊಂದು ಹುತ್ತದ ಒಳಗೂ ಹೋಗದೆ ಹೊರಗೂ ಬರಲಾರದೆ ಸಿಕ್ಕಿಕೊಂಡಿದೆಯಲ್ಲ. ಏನು ಕಾರಣ?’

‘ತನ್ನ ನೆತ್ತಿಯ ರತ್ನವನ್ನು ಯಾರಾದರೂ ಯೋಗ್ಯನಿಗೆ ದಾನ ಮಾಡದಲ್ಲಿ ಅದು ಸರಿದಾಡಬಹುದು.’

– ಹೀಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇಳಿಕೊಂಡು ಶಿವಪಾರ್ವತಿಯರಿಗೆ ನಮಸ್ಕರಿಸಿ, ಪ್ರಸಾದ ತೆಗೆದುಕೊಂಡು ತಿರುಗಿ ಬಂದ.

ಬರುವಾಗ ದಾರಿಯಲ್ಲಿ ಮೊದಲು ಸರ್ಪ ಸಿಕ್ಕಿತು. ‘ಹುಡುಗಾ, ಕೇಳಿದೆಯಾ ನನ್ನ ಪ್ರಶ್ನೆ?’ ಎಂದಿತು.

‘ಹೌದು ಕೇಳಿದೆ. ನಿನ್ನ ನೆತ್ತಿಯಲ್ಲೊಂದು ರತ್ನ ಇದೆಯಂತೆ. ಅದನ್ನು ಯೋಗ್ಯನಿಗೆ ದಾನ ಮಾಡಿದರೆ ನೀನು ಸರಿದಾಡಬಹುದಂತೆ’ ಎಂದ.

‘ಹಾಗಿದ್ದರೆ ಇಕೊ, ನಿನಗೇ ಅದನ್ನು ದಾನ ಮಾಡುತ್ತೇನೆ. ತಕೋ’ ಎಂದು ತನ್ನ ನೆತ್ತಿಯ ರತ್ನವನ್ನು ಹುಡುಗನಿಗೆ ಕೊಟ್ಟಿತು. ಆ ಕೂಡಲೇ ಅದಕ್ಕೆ ಸರಿದಾಡುವ ಶಕ್ತಿ ಬಂದು, ಆನಂದದಿಂದ ಹೆಡೆ ತೆಗೆದು ಆಡಲಾರಂಭಿಸಿತು. ಹುಡುಗ ಮತ್ತೆ ತನ್ನ ದಾರಿ ಹಿಡಿದ.

ಮುಂದೆ ಬರುವಷ್ಟರಲ್ಲಿ ಕುಂಟ ಸಿಕ್ಕಿದ. ‘ಹುಡುಗಾ, ನನ್ನ ಪ್ರಶ್ನೆ ಕೇಳಿದೆಯಾ?’ ಎಂದು ಕೇಳಿದ.

‘ಕೇಳಿದೆ. ನಿನ್ನ ಹತ್ತಿರ ಇರುವ ವಿದ್ಯೆಯನ್ನೆಲ್ಲ ಒಬ್ಬ ಯೋಗ್ಯನಿಗೆ ದಾನ ಮಾಡಿದರೆ ನಿನ್ನ ಕಾಲು ಬರುತ್ತವಂತೆ.’’ ಎಂದ ಹುಡುಗ.

‘ಹಾಗಿದ್ದರೆ ನಿನ್ನಂತ ಯೋಗ್ಯ ಯಾರಿದ್ದಾರು? ಇಕೊ, ನನಗೆ ಗೊತ್ತಿರುವ ವಿದ್ಯೆಯನ್ನು ನಿನಗೆ ದಾನ ಮಾಡುತ್ತೇನೆ.’

– ಎಂದು ಹೇಳಿ ಕುಂಟ ತನ್ನ ಅರವತ್ತ ನಾಲ್ಕು ವಿದ್ಯೆಗಳನ್ನೆಲ್ಲ ಇವನಿಗೆ ಧಾರೆಯೆರದ. ಅವನಿಗೆ ಕಾಲು ಬಂದವು. ಆನಂದದಿಂದ ಕುಣಿದಾಡಿದ. ಹುಡುಗ ಮತ್ತೆ ತನ್ನ ದಾರಿಯನ್ನು ಹಿಡಿದು ಹೊರಟ.

ಇನ್ನಷ್ಟು ಮುಂದೆ ಬಂದ. ತಲೆಯ ಮೇಲೆ ಕೈ ಹೊತ್ತಿದ್ದ ರಾಜ ಸಿಕ್ಕಿದ. ಇವನನ್ನು ಕಂಡೊಡನೆ ‘ಹುಡುಗಾ, ನನ್ನ ಮಾತನ್ನು ಕೇಳಿದೆಯಾ?’ ಎಂದ.

‘ಹೌದು, ಕೇಳಿದೆ. ನಿನ್ನ ಬೆಳೆದ ಮಗಳನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದಂತೆ’.

‘ನಿನಗಿಂತ ಯೋಗ್ಯ ವರ ಇನ್ನಾರಿದ್ದಾರು! ಬಾ’ ಎಂದು ಹೇಳಿ ರಾಜ ತನ್ನ ಮಗಳನ್ನು ಆ ಹುಡುಗನಿಗೆ ಮದುವೆ ಮಾಡಿಕೊಟ್ಟ. ಬೆಳಗಾಗುವಷ್ಟರಲ್ಲಿ ಕೆರೆ ನೀರಿನಿಂದ ತುಂಬಿ ತುಳುಕಲಾರಂಭಿಸಿತು.

ಹುಡುಗ ಹೆಂಡತಿಯನ್ನು ಕರೆದುಕೊಂಡು ನೇಪಾಳ ದೇಶಕ್ಕೆ ಬಂದ. ಆ ದೇಶದ ರಾಜನ ಹೆಂಡತಿ ದಿನ ತುಂಬಿದ್ದರೂ ಹಡೆಯಲಾರದೆ ಸಂಕಟ ಪಡುತ್ತಿದ್ದಳು. ಹುಡುಗ ಹೋಗಿ ಶಿವನ ಪ್ರಸಾದ ಕೊಟ್ಟ. ಅವಳು ಆ ಕ್ಷಣವೇ ಬಂಗಾರದಂಥ ಮಗನನ್ನು ಹಡೆದಳು. ‘ಆ ಕೂಸಿಗೊಂದು ಪ್ರಶ್ನೆ ಕೇಳಬೇಕಾಗಿದೆ. ದರ್ಬಾರಿಗೆ ತರಿಸಬೇಕು’ ಎಂದು ಹುಡುಗ ಹೇಳಿದ. ಎಲ್ಲರಿಗೂ ಆಶ್ಚರ್ಯವಾಯಿತು. ಆದರೂ ಕೂಸನ್ನು ದರ್ಬಾರಿಗೆ ತಂದು ಬಂಗಾರದ ತಟ್ಟೆಯಲ್ಲಿಟ್ಟರು. ಹುಡುಗ ಹೇಳಿದ –

‘ಮಗು, ಶಿವ ನನ್ನನ್ನು ನಿನ್ನ ಬಳಿ ಕಳಿಸಿದ್ದಾನೆ. ಅನ್ನದಾನದ ಪುಣ್ಯ ಯಾವುದು?’

ಈ ಮಾತನ್ನು ಕೇಳಿ ತಟ್ಟೆಯಲ್ಲಿದ್ದ ಮಗು ಪಕ ಪಕ ನಕ್ಕು ಮಾತಾಡಿತು.

‘ಅಯ್ಯ, ಶಿವನನ್ನು ಕಂಡು ಬಂದರೂ ನಿನಗೆ ಈ ವಿಚಾರ ತಿಳಿಯಲಿಲ್ಲವೆ? ನೀನು ಶಿವನನ್ನು ಕಾಣುವುದಕ್ಕೆ ಹೊರಟಿದ್ದಿ. ಅಡವಿಯಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದಿ. ಆಗ ಒಬ್ಬ ಬೇಡ ಬಂದು ನಿನ್ನನ್ನು ತನ್ನ ಗುಡಿಸಿಲಿಗೆ ಕರೆದೊಯ್ದು ಹಣ್ಣು ಹಾಲು ಕೊಟ್ಟದ್ದು ನೆನಪಿದೆಯೆ?’

‘ಹೌದು.’

‘ಹಾಗೆ ಮಾಡಿದ ಬೇಡ ನಾನೇ. ಅಂದೆ ನನ್ನನ್ನೂ ನನ್ನ ಹೆಂಡತಿಯನ್ನೂ ಹುಲಿ ತಿಂದಿತು; ಅನ್ನದಾನ ಮಾಡಿದ್ದಕ್ಕೆ ನಾನಿಂದು ರಾಜಕುಮಾರನಾಗಿ ಹುಟ್ಟಿದ್ದೇನೆ. ನನ್ನ ಹೆಂಡತಿ ಅಂದು ನಿನಗೆ ಅನ್ನ ಕೊಡಲು ಒಪ್ಪಲಿಲ್ಲ. ಈ ಕಿರಿಕ್ ಮಾಡಿದ ಅವಳು ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ. ಬೇಕಾದರೆ ಹೋಗಿ ನೋಡು’ ಎಂದು ಆ ಮಗು ಹೇಳಿತು.

ಆಗ ಈ ಹುಡುಗ ತಿರುಗಿ ತನ್ನ ತಾಯಿಯ ಬಳಿಗೆ ಬಂದು ತಾನೂ ಅನ್ನದಾನ ಮಾಡುತ್ತ ಸುಖದಿಂದ ಇದ್ದ.

ಸರ್ಪವನ್ನು ಕಂಡಾಗ ಹಿರಿಯರು ‘ಆಸ್ತಿಕ… ಆಸ್ತಿಕ…’ ಎಂದು ಪಠಿಸುತ್ತಾರೆ. ಅದೇಕೆ ಹಾಗೆ ಮಾಡುತ್ತಾರೆ? ಯಾರು ಈ ಆಸ್ತಿಕ?

ಹೀಗೊಂದು ಪುರಾಣ ಕಥೆ

ಸರ್ಪವನ್ನು ಕಂಡಾಗ ಹಿರಿಯರು ‘ಆಸ್ತಿಕ… ಆಸ್ತಿಕ…’ ಎಂದು ಪಠಿಸುತ್ತಾರೆ. ಅದೇಕೆ ಹಾಗೆ ಮಾಡುತ್ತಾರೆ? ಯಾರು ಈ ಆಸ್ತಿಕ? ಸರ್ಪಗಳಿಗೂ ಅವನಿಗೂ ಏನು ಸಂಬಂಧ?  ಜನಮೇಜಯ ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….!? ತಿಳಿಯಲು ಈ ಕಥೆ ಓದಿ!

ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು – ಉತ್ತರೆಯರ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ.

ಈ ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ತೆರಳಿದ್ದವನು ಬಾಯಾರಿ ಶಮೀಕಮುನಿಯ ಆಶ್ರಮವನ್ನು ಹೊಕ್ಕ. ಸಮಾಧಿಸ್ಥನಾಗಿದ್ದ ಮುನಿ ಈತನನ್ನು ಸತ್ಕರಿಸಲಿಲ್ಲವಾದ ಕಾರಣ ಕೋಪಗೊಂಡು ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋದ. 

ನಂತರ ಅಲ್ಲಿಗೆ ಬಂದ ಮುನಿಪುತ್ರ ಶೃಂಗಿ ಕ್ರೋಧವಶನಾಗಿ “ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇನ್ನು ಏಳು ದಿನಗಳೊಳಗೆ ಸರ್ಪದ ಕಡಿತದಿಂದ ಸಾಯಲಿ” ಎಂದು ಶಪಿಸಿದ. ಈ ಶಾಪವನ್ನು ಸ್ವೀಕರಿಸಿದ ಪರೀಕ್ಷಿತ, ತನ್ನ ಅಂತಿಮ ದಿನಗಳನ್ನು ಭಾಗವತ ಶ್ರವಣದಲ್ಲಿ ಕಳೆದು, ಸರ್ಪರಾಜ ತಕ್ಷಕನ ಕಡಿತಕ್ಕೆ ಒಳಗಾಗಿ ತೀರಿಹೋದ.

ಪರೀಕ್ಷಿತನ ನಂತರ ಅವನ ಮಗ ಜನಮೇಜಯ ಅಧಿಕಾರಕ್ಕೆ ಬಂದ. ತಂದೆಯನ್ನು ಉಳಿಸಿಕೊಳ್ಳಲು ರಹಸ್ಯ ಭವನ ನಿರ್ಮಿಸಿ ಎಷ್ಟೆಲ್ಲ ಕಷ್ಟಪಟ್ಟಿದ್ದರೂ ತಕ್ಷಕ ಅದನ್ನು ಪ್ರವೇಶಿಸಿ ಕಚ್ಚಿ ಸಾಯಿಸಿದ್ದು ಅವನಿಗೆ ಮರೆಯಲಾಗಿರಲಿಲ್ಲ. 

ಅದಕ್ಕೆ ಸರಿಯಾಗಿ, ಸರ್ಪಗಳ ಮೇಲೆ ದ್ವೇಷವಿದ್ದ ಉತ್ಥಂಕ ಜನಮೇಜಯನನ್ನು ಭೇಟಿಯಾಗಿ ಅವನನ್ನು ಸೇಡಿಗಾಗಿ ಪ್ರಚೋದಿಸಿದ. “ಸರ್ಪಯಾಗ ನಡೆಸಿ ನಿನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡು” ಎಂದು ಹುರಿದುಂಬಿಸಿದ.

ಅದರಂತೆ ಜನಮೇಜಯ ಆಸ್ಥಾನ ಪುರೋಹಿತರನ್ನು ಕರೆಸಿ ಸರ್ಪಯಾಗಕ್ಕೆ ದಿನ ನಿಶ್ಚಯಿಸಿದ. ಋತ್ವಿಜರನ್ನು ಕರೆಸಿ ಬೇಕಾದ ಏರ್ಪಾಡು ಮಾಡಿಕೊಳ್ಳಲು ಸೂಚಿಸಿದ.

ಸರ್ಪ ಯಾಗ ಶುರುವಾಯಿತು. ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡಿ, ಅದನ್ನು ಅಗ್ನಿಯ ಬಳಿಗೆ ಆಕರ್ಷಿಸಿ ‘ಸ್ವಾಹಾ’ ಅನ್ನುತ್ತಿದ್ದರು. ಕೂಡಲೇ ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು. 

ಎಲ್ಲ ಲೋಕಗಳ, ಎಲ್ಲ ಬಗೆಯ ಹಾವುಗಳೂ ಸರಸರನೆ ಬಂದು ಅಗ್ನಿಕುಂಡದೊಳಗೆ ಬೀಳುವುದನ್ನು ನೋಡಿದರೆ ಎಂಥವರೂ ತಲ್ಲಣಿಸಬೇಕು! ಆದರೆ ಜನಮೇಜಯ ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬದ್ಧನಾಗಿದ್ದ. ಅವನ ಮನಸ್ಸು ಬದಲಾಗಲಿಲ್ಲ. ಜೊತೆಗೆ ಸರ್ಪಗಳು ಹೀಗೆ ಕುಂಡದೊಳಗೆ ಸುಟ್ಟು ಸಾಯಬೇಕೆನ್ನುವುದು ನಿಯತಿಯ ಇಚ್ಛೆಯಾಗಿತ್ತು. 

ಜನಮೇಜಯ ನಿಮಿತ್ತ ಮಾತ್ರನಾಗಿದ್ದ. ಸರ್ಪಕುಲದ ತಾಯಿ ಕದ್ರು ನೀಡಿದ ಶಾಪವೇ ಸರ್ಪಯಾಗಕ್ಕೆ ವೇದಿಕೆ ಒದಗಿಸಿತ್ತು. (ಕದ್ರು ತನ್ನದೇ ಮಕ್ಕಳಿಗೆ ಶಾಪ ನೀಡಿದ್ದೇಕೆ? ~ ಇಲ್ಲಿ ಓದಿ : )

ಜನಮೇಜಯನ ಯಜ್ಞಕ್ಕೆ ತನ್ನ ಬಾಂಧವರು ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ತಲ್ಲಣಿಸಿಹೋದ. 

ಸಹಾಯಕ್ಕಾಗಿ ದೇವೇಂದ್ರನ ಬಳಿ ಧಾವಿಸಿದ. ತಕ್ಷಕನಿಗೆ ಅಭಯ ನೀಡಿದ ದೇವೇಂದ್ರ, “ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲು, ಯಾಗ ಮಂತ್ರ ನಿನ್ನನ್ನು ಸೆಳೆಯಲಾರದು” ಎಂದು ಸೂಚಿಸಿದ. ತಕ್ಷಕ ಹಾಗೇ ಮಾಡಿದ.

ಆದರೆ ಯಾಗ ಮಂತ್ರದ ಆಕರ್ಷಣೆಯ ಬಲದೆದುರು ತಕ್ಷಕನ ಆಟ ನಡೆಯಲಿಲ್ಲ. ಮಂತ್ರವು ದೇವೇಂದ್ರನನ್ನೂ ಸೇರಿಸಿಕೊಂಡೇ ತಕ್ಷಕನನ್ನು ಯಾಗಕುಂಡದೆಡೆ ಸೆಳೆಯಲಾರಂಭಿಸಿತು.

ಇದನ್ನು ಕಂಡು ಭೀತರಾದ ವಾಸುಕಿ ಮೊದಲಾದ ಅಳಿದುಳಿದ ಸರ್ಪಗಳು ತಮ್ಮ ಕುಲಕ್ಕೆ ಹೊರಗಿನವನಾದ, ಸೋದರಳಿಯ ಆಸ್ತಿಕ ಋಷಿಯ ಬಳಿ ಹೋದರು. “ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. 

ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು” ಎಂದು ಕೇಳಿಕೊಂಡರು. ಆಸ್ತಿಕ ಸಂತೋಷದಿಂದಲೇ ಸಮ್ಮತಿಸಿ, “ಹೇಳಿ, ನಾನೇನು ಮಾಡಿದರೆ ಸರ್ಪ ಸಂತತಿ ಉಳಿಯುತ್ತದೆ?” ಎಂದು ಪ್ರಶ್ನಿಸಿದ.  

ಆಗ ವಾಸುಕಿಯು “ಮಗೂ, ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ಬ್ರಹ್ಮಚಾರಿಯಾದ ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು” ಎಂದು ಸಲಹೆ ನೀಡಿದ. 

ಆಸ್ತಿಕ ತಡಮಾಡದೆ ಅಲ್ಲಿಂದ ಹೊರಟು ಯಾಗಶಾಲೆಯನ್ನು ತಲುಪಿದ. ಜನಮೇಜಯನ ಮುಂದೆ ಹೋಗಿ ನಿಂತ. ಇನ್ನೇನು ಮಂತ್ರಾಕರ್ಷಣೆಗೆ ಸಿಲುಕಿ ದೇವೇಂದ್ರ ಸಹಿತನಾಗಿ ತಕ್ಷಕ ಕುಂಡದಲ್ಲಿ ಬೀಳುವುದರಲ್ಲಿದ್ದ. 

ಆದರೆ ಅದಕ್ಕೆ ಅಡ್ಡಿಯಾಗಿ ನಿಂತ ಆಸ್ತಿಕ, “ಬ್ರಹ್ಮಚಾರಿಗೆ ದಕ್ಷಿಣೆ ಕೊಡದೆ ಯಾಗ ಹೇಗೆ ಮುನ್ನಡೆಸುತ್ತೀರಿ?” ಎಂದು ಜನಮೇಜಯನನ್ನು ಇಕ್ಕಟ್ಟಿಗೆ ಸಿಲುಕಿಸಿದ. ಜನಮೇಜಯ, “ಬ್ರಹ್ಮಚಾರಿ! ನಿನಗೇನು ಬೇಕು ಕೇಳು. ಕೊಡುತ್ತೇನೆ” ಎಂದು ವಾಗ್ದಾನ ನೀಡಿಬಿಟ್ಟ. ಇದಕ್ಕಾಗಿಯೇ ಕಾದಿದ್ದ ಆಸ್ತಿಕ “ಈಗಿಂದೀಗಲೇ ಸರ್ಪಯಾಗವನ್ನು ನಿಲ್ಲಿಸಿ. ಇದೇ ನೀವು ನನಗೆ ಕೊಡುವ ದಕ್ಷಿಣೆ!!” ಅಂದುಬಿಟ್ಟ.

ಮಾತಿಗೆ ಬದ್ಧನಾದ ಜನಮೇಜಯನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಏನೂ ಮಾಡುವಂತಿಲ್ಲ. ಆದರೂ ಆಸ್ತಿಕನಿಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. 

ದೇವೇಂದ್ರ ಅವನನ್ನು ಸಮಾಧಾನ ಪಡಿಸಿ, ಶೃಂಗಿಯ ಶಾಪವೇ ಕಾರಣವಾಗಿ ನಿನ್ನ ತಂದೆಯ ಮೃತ್ಯುವಾಯಿತು. ಇದರಲ್ಲಿ ತಕ್ಷಕನ ಪಾತ್ರವೇನೂ ಇಲ್ಲ. ಅವನು ನಿಮಿತ್ತ ಮಾತ್ರ ಎಂದು ಅನುನಯಿಸಿದ. ಇದರಿಂದ ಜನಮೇಜಯನೂ ದ್ವೇಷ ಕಳೆದು ಸಮಾಧಾನ ಹೊಂದಿದ.

ತಮ್ಮ ಸೋದರಳಿಯನ ಸಹಾಯಕ್ಕೆ ಕೃತಜ್ಞರಾದ ಸರ್ಪಗಳು “ನಿನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ನಾವು ಬಾಧಿಸುವುದಿಲ್ಲ” ಎಂದು ವಾಗ್ದಾನ ನೀಡಿದವು. 

ಇಂದಿಗೂ ಕೆಲವು ಕಡೆಗಳಲ್ಲಿ ಬಹುತೇಖ ವೃದ್ಧರು ಹಾವನ್ನು ಕಂಡಕೂಡಲೇ “ಆಸ್ತಿಕ… ಆಸ್ತಿಕ…” ಎಂದು ಪಠಿಸುವುದು ಇದೇ ಕಾರಣಕ್ಕೆ. ಆಸ್ತಿಕನನ್ನು ಸ್ಮರಿಸಿದರೆ ಸರ್ಪ ತೊಂದರೆ ಕೊಡದೆ ಹೊರಟು ಹೋಗುತ್ತದೆ ಅನ್ನುವ ನಂಬಿಕೆಗೆ ಈ ಕಥೆಯೇ ಹಿನ್ನೆಲೆ. 

ಪುರಾಣ ಕಥೆ ತಿಳಿದು ಶೇರ್ ಮಾಡಿ ಶುಭವಾಗಲಿ ಧನ್ಯವಾದಗಳು

ದುಃಶಲಾ

ಕೌರವರು 100 ಜನ ಅಣ್ಣತಮ್ಮಂದ್ರು ಅಂತ ನಮ್ಗೆಲ್ಲಾ ಗೊತ್ತೇ ಇದೆ.  ಆದ್ರೆ ಅವ್ರಿಗೆ ಒಬ್ಬಳು ತಂಗಿನೂ ಇದ್ದಳು.  ಅವಳ ಹೆಸರು #ದುಃಶಲಾ ಅಂತ

     ಧೃತರಾಷ್ಟ್ರ-ಗಾಂಧಾರಿಗೆ ಒಬ್ಬಳೇ ಮಗಳು. ಪಾಂಡವರೂ ಕೂಡ ಆಕೆಯನ್ನು ತಮ್ಮ ತಂಗಿ ಥರಾನೇ ಪ್ರೀತಿಯಿಂದ ನೋಡ್ಕೋತಿದ್ರು.  ಹಸ್ತಿನಾಪುರದಲ್ಲಿ ಭೀಷ್ಮನಿಂದ ಸಾಕಷ್ಟು ಜ್ಞಾನ, ವಿವೇಕ ಕಲಿತು ಚಿಕ್ಕ ವಯಸ್ಸಲೆಲ್ಲಾ ಚೆನ್ನಾಗಿ ಆಟ ಆಡ್ಕೊಂಡು ಬೆಳೆದಳು. ಅಣ್ಣಂದ್ರೆಲ್ಲಾ ಸೇರಿ ಮುದ್ದಾಗಿ ಬೆಳೆಸಿ ಮದ್ವೆಕೂಡ ಮಾಡಿದ್ರು.  ದುಃಶಲಾ ಗಂಡನು ಸಿಂಧುದೇಶದ ರಾಜ #ಜಯದ್ರಥ.  ಇಲ್ಲಿಂದಾನೇ ದುಃಶಲಾಗೆ ಯಮಯಾತನೆ ಶುರುವಾಯ್ತು.

     ದುಃಶಲಾ ಮುಂದಿನ ಜೀವನ ಹೇಗಿತ್ತು?  ಜಯದ್ರಥ ಯಾರು, ಹೇಗಿದ್ದ, ಏನ್ ಮಾಡಿದ ಅಂತ ತಿಳ್ಕೊಳಕ್ಕೆ ಮುಂದೆ ಓದಿ...

1. ಆಗಾಗ ಹೆಣ್ಮಕ್ಳು ಜೊತೆ ಒರಟು ಒರಟಾಗಿ ನಡ್ಕೋತಿದ್ದ.  ಇದು ಬೇರೆಯವರಿಗೆ ಗೊತ್ತಾಗ್ತಿರ್ಲಿಲ್ಲ. ದುಃಶಲಾಗೆ ಮಾತ್ರ ಗೊತ್ತಿತ್ತು.  ಹೆಣ್ಮಕ್ಳು ಜೊತೆ ತುಂಬಾ ಅಸಭ್ಯವಾಗಿ, ಒರಟಾಗಿ ನಡ್ಕೊತಿದ್ದ. 

ಎಲ್ಲಾ ಅವ್ನ ಮೂಗಿನ ನೇರಕ್ಕೇ ನಡೀತಿರುತ್ತೆ... ವನವಾಸದಲ್ಲಿ ದ್ರೌಪದಿ ಒಂಟಿಯಾಗಿರೋ ಸಮಯ ನೋಡಿ ಜಯದ್ರಥ ಅಪಹರಣ ಮಾಡೋದಕ್ಕೆ ಪ್ರಯತ್ನ ಪಡುತ್ತಾನೆ.  ಆಗ ಅವ್ನ ಗ್ರಹಚಾರ ಕೆಡತ್ತೆ.

2. ತನ್ನ ಅತ್ತಿಗೆಯಾದ ದ್ರೌಪದಿ ಜೊತೆನೇ ಜಯದ್ರಥ ಕ್ರೂರವಾಗಿ ನಡ್ಕೊಂಡಾಗ ದುಃಶಲಾಗೆ ಆದ ಅವಮಾನ ಅಷ್ಟಿಷ್ಟಲ್ಲ

     ಆ ಕಡೆ ಜಯದ್ರಥ ದ್ರೌಪದಿಯನ ಅಪಹರಣ ಮಾಡ್ಕೊಂಡು ಹೋಗ್ತಿದ್ದಂಗೇ ಈ ಕಡೆ ಯುಧಿಷ್ಟಿರಂಗೆ ಆಕೆ ಎಲ್ಲಿ ಹೊದ್ಲು?  ಏನಾಯ್ತು ಅಂತ ಗೊತ್ತಾಗುತ್ತದೆ. ಆಗ ಅವನು ಆಕೆಯನ್ನು ಕಾಪಾಡುವುದಕ್ಕೆ ಭೀಮ ಮತ್ತೆ ಅರ್ಜುನನ್ನ ಕಳಿಸ್ತಾನೆ.  ಕೊನೆಗೆ, ಜಯದ್ರಥ ಸೋಲುತ್ತಾನೆ.  ಅಷ್ಟೆಲ್ಲಾ ಅವಮಾನ ಆಗಿದ್ರೂ ದ್ರೌಪದಿ ಜಯದ್ರಥನನ್ನು ಕೊಲ್ಲುವುದು ಬೇಡ ಅಂತ ಭೀಮನನ್ನು ಕೇಳ್ಕೊತಾಳೆ.  ಹಾಗೇನಾದ್ರು ಆದ್ರೆ, ಅವ್ರ ಒಬ್ಬಳೇ ತಂಗಿ ದುಃಶಲಾ ವಿಧವೆ ಆಗುತ್ತಾಳೆ ಅಂತ.

     ಆದ್ರೆ ಹೆಂಡ್ತಿಗಾದ ಅಮಾನಕ್ಕೆ ಪಾಂಡವರು ಜಯದ್ರಥನನ್ನ ಸುಮ್ನೆ ಕಳಿಸುವುದಕ್ಕೆ ತಯಾರಿರಲಿಲ್ಲ. ಹಾಗಾಗಿ ಶಿಕ್ಷೆ ರೂಪದಲ್ಲಿ ಭೀಮನು ಜಯದ್ರಥನ ತಲೆಯನ್ನು ಬೋಳಿಸಿ, ಪಾಂಡವರು ಶಿಕ್ಷೆ ಕೊಟ್ಟೀರೋದು ಅಂತ ಎಲ್ರಿಗೂ ಗೊತ್ತಾಗ್ಲಿ ಅಂತ ಐದೇ ಐದು ಜುಟ್ಟು ಬಿಟ್ಟು ಕಳೀಸ್ತಾರೆ.  ಇದರಿಂದ ಜಯದ್ರಥನಿಗೆ ತುಂಬಾ ಅಮಾನ ಆಗುತ್ತೆ ನಿಜ.  ಆದರೆ ದುಃಶಲಾಳ ಸ್ಥಿತಿ?  ಅಮಾನಕ್ಕೂ ಮೀರಿದ್ದು.  ಗಂಡ ತನ್ನ ಅತ್ತಿಗೆಯ ಜೊತೆಗೇನೇ ಇಷ್ಟು ಕ್ರೂರವಾಗಿ ನಡ್ಕೊಂಡ್ರೆ, ಯಾವ್ ಹೆಣ್ಣು ತಾನೇ ಸಂಕಟ ಪಡಲ್ಲ.

    ದುಃಶಲಾ ಬೇಡಾ ಅಂತ ಎಷ್ಟೇ ಬೇಡ್ಕೊಂಡ್ರೂ ಪಾಂಡವರನ್ನ ಮಟ್ಟ ಹಾಕಕ್ಕೆ ಶಿವನಿಂದ ವರ ಪಡ್ಕೊಳ್ತಾನೆ.

     ಭೀಮನು ತಲೆ ಬೋಳಿಸಿದ ಮೇಲೆ ಜಯದ್ರಥನಿಗೆ ಪಾಂಡವರ ಬಗ್ಗೆ ಮೊದ್ಲೇ ಇದ್ದ ದ್ವೇಷ, ಇನ್ನೂ ಜಾಸ್ತಿಯಾಯ್ತು.  ಅವ್ರನ್ನು ಸೋಲಿಸುವುದಕ್ಕೆ ಸಾಕ್ಷಾತ್ ಶಿವನ ಮೊರೆಹೋಗುತ್ತಾನೆ.  ಜಯದ್ರಥನ ತಪಸ್ಸಿಗೆ ಮೆಚ್ಚಿ, ಶಿವನು ವರ ಏನೋ ಕೊಡುತ್ತಾನೆ.  ಅದೂ ಎಂಥಾ ವರ?  

#ಶಿವನ_ವರ
     ಯುದ್ಧದಲ್ಲಿ ಒಂದು ದಿನದ ಮಟ್ಟಿಗೆ, ಪಾಂಡವರು ಏನೇನೆಲ್ಲ ಯೋಚನೆ ಮಾಡುತ್ತಾರೆ?  ಅವ್ರ ಶಕ್ತಿ ಏನು? ಅಂತೆಲ್ಲಾ ರಹಸ್ಯವಾಗಿ ತಿಳ್ಕೊಳೊ ದಿವ್ಯದೃಷ್ಟಿ.  ಹಾಗೇ ಶಿವ ಒಂದು ಎಚ್ಚರಿಕೆ ಕೊಡ್ತಾನೆ... ಅದೇನೆಂದರೇ, "ಅರ್ಜುನನ ಮೇಲೆ ಇದು ಯಾವ ಪರಿಣಾಮನೂ ಬೀರುವುದಿಲ್ಲ" ಅಂತ.

     ಕಡೆಗೆ ಯುದ್ಧದಲ್ಲಿ ಅರ್ಜುನನು ಪಾಶುಪತಾಸ್ತ್ರ ಪ್ರಯೋಗ ಮಾಡಿ ಜಯದ್ರಥನನ್ನು ಕೊಲ್ಲುತ್ತಾನೆ.

    ಅರ್ಜುನನು ಜಯದ್ರಥನಿಗೆ ಪಾಶುಪತಾಸ್ತ್ರವನ್ನು ಬಿಟ್ಟು ಅವನ ತಲೆಯನ್ನು ಆಕಾಶಕ್ಕೆ ಹಾರಿಸಿ, ನೆಲಕ್ಕೆ ಬೀಳುವುದರೊಳಗೆ ಅದಕ್ಕೆ ಜೋರಾಗಿ ಇನ್ನೊಂದು ಬಾಣ ಬಿಟ್ಟು, ಎಲ್ಲೋ ದೂರದ ನದಿ ದಡದಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದ ಜಯದ್ರಥನ ತಂದೆಯ ತೊಡೆಯಮೇಲೆ ಬಿಳಿಸಿದ.  ತಂದೆಯು ತಕ್ಷಣ ಎದ್ದೊಡನೆ ಜಯದ್ರಥನ ರುಂಡವು ಕೆಳಗೆ ಬೀಳಲು, ಜಯದ್ರಥನ ತಂದೆಯ ತಲೆಯು ಸಾವಿರ ಓಳಾಗಿ ಹೋಯಿತು. 
(ಕೆಲವುಗಳಲ್ಲಿ ಕೈಯಿಂದ ರುಂಡವನ್ನು ಎತ್ತಿ ಬಿಸಾಡಿದ ಅಂತಾನೂ ಉಂಟು.)
ಇಲ್ಲಿ ಅರ್ಜುನನು ಪಾಶುಪತಾಸ್ತ್ರ ಉಪಸಂಹಾರದ ಮಂತ್ರ ಪಠಿಸಿದ ಕೂಡಲೇ ಸಾವಿರ ಕುಸುಮಗಳ ಸುಗಂಧವನ್ನು ಹೊತ್ತ ತಂಗಾಳಿ ತೀಡಿತು.  ಲೋಕದಲ್ಲಿ ಶಾಂತಿ ನೆಲೆಸಿತು.  ಕೃಷ್ಣನು ರಥದಿಂದಿಳಿದು ಅರ್ಜುನನ್ನು ಬಿಗಿದಪ್ಪಿ ಆನಂದಬಾಷ್ಪ ಸುರಿಸಿದ.  ಅರ್ಜುನನ ಅಗ್ನಿಪ್ರವೇಶ ತಪ್ಪಿತೆಂದು ಅವನಿಗೆ ಬಹು ಸಂತೋಷವಾಗಿತ್ತು.  ಅಪಮಾನ ತಡೆಯಲಾರದೇ ದುರ್ಯೋದನನು ಕಣ್ಣೀರು ಸುರಿಸಿದನು.

      ಭೀಮನು ದಿಗ್ತಟಗಳೊಡೆಯುವಂತಹ ಸಿಂಹನಾದ ಮಾಡಿದ ಕೂಡಲೇ ಯುದಿಷ್ಟಿರನಿಗೆ ಜಯದ್ರಥನು ಸತ್ತನೆಂದು ಗೊತ್ತಾಗಿ ಖುಷಿಯಾಯಿತು.  

ಕೃಷ್ಣನ ಪಾದಗಳಿಗೆ ನಮಸ್ಕರಿಸಿದ
ಅರ್ಜುನನು:- "ದೇವಾ, ಇದೆಲ್ಲ ಆದುದು ನಿನ್ನ ದಯೆಯಿಂದಲೇ, ಸತ್ಯ ಪಥದಲ್ಲಿ ನೀನೆ ನಮ್ಮ ಮಾರ್ಗದರ್ಶಿ" ಎನ್ನಲು, 

ಕೃಷ್ಣನು, ಎಂದಿನ ತನ್ನ ಸುಂದರ ಮಂದಹಾಸವನ್ನು ಬೀರಿದ.

ಅರ್ಜುನನಿಗೆ,
ಕೃಷ್ಣನು:- "ಇಂದು ನೀನು, ಸಾತ್ಯಕಿ ಇಬ್ಬರೂ ಸೇರಿ ಅವರ ಏಳು ಅಕ್ಷೋಹಿಣಿ ಸೈನ್ಯವನ್ನು ನಿರ್ನಾಮ ಮಾಡಿದ್ದೀರಿ.  ನಿಜವಾಗಿ ಹೇಳುವುದಾದರೇ ನಿನಗಿಂತ ಸಾತ್ಯಕಿ ಮಾಡಿರುವ ನಾಶವೇ ಹೆಚ್ಚು.  ನೋಡು ರಣರಂಗವನ್ನು" ಎಂದು ತೋರಿಸಿದ.

     ನಂತರ ಯುಧಿಷ್ಠಿರನನ್ನು ನೋಡಲು ವೇಗವಾಗಿ ಹೊರಟರು.  ದಾರಿಯಲ್ಲಿ ಕೃಷ್ಣನು, ಜಯದ್ರಥನ ಬಗ್ಗೆ ಹೇಳತೊಡಗಿದ. 

" ಬೃಹತ್ ಕ್ಷಾತ್ರನು ತೀವ್ರ ತಪಸ್ಸು ಮಾಡಿದ ನಂತರ, ಜಯದ್ರಥನನ್ನು ಪಡೆದ.  ಆದರೂ ಸಾಲದೇ "ಯಾರು ಜಯದ್ರಥನ ತಲೆಯನ್ನು ಭೂಮಿಗೆ ಬೀಳುಸುತ್ತಾರೆಯೋ, ಅವರ ತಲೆ ಸಹಸ್ರ ಹೋಳಾಗಿ ಒಡೆದು ಹೋಗಬೇಕೆಂದೂ" ವರವನ್ನು ಪಡೆದ. 

ಕೃಷ್ಣನು:- "ಅರ್ಜುನ, ಅದಕ್ಕೆ ನಾನು ನಿನ್ನ ಕೈಲಿ ಅವನ ತಲೆಯನ್ನು ಹಾರಿಸಿ, ಅವನ ತಂದೆಯ ತೊಡೆಯ ಮೇಲೆ ಹಾಕಿಸಿದೆ" ಎಂದು ಜಯದ್ರಥನ ಜನ್ಮವೃತ್ತಾಂತವನ್ನು ಹೇಳಿದ.

     ಅಷ್ಟರಲ್ಲಿ ಅವರು ಯುಧಿಷ್ಠಿರನಿದ್ದಲ್ಲಿಗೆ ಬಂದರು.  ಅರ್ಜುನನು ಅವನನ್ನು ನೋಡಿದಕೂಡಲೇ ರಥದಿಂದಿಳಿದು ಅವನನ್ನು ಆಲಿಂಗಿಸಿಕೊಂಡು, ಆನಂದಬಾಷ್ಪ ಸುರಿಸಿದ. 

 ಮತ್ತು 
ಕೃಷ್ಣನನ್ನು ಕಂಡು,
ಯುಧಿಷ್ಠಿರನು:- "ನಿನ್ನ ದೆಯೆಯಿಂದ ನಾವೆಲ್ಲ ಇವತ್ತು ಅರ್ಜುನನನ್ನು ನೋಡುವಂತಾಗಿದೆ" ಎಂದನು.

ಕೃಷ್ಣನು:- "ಇಲ್ಲ ಯುದಿಷ್ಟಿರ.  ಜಯದ್ರಥ ಸತ್ತಿದ್ದು ನೆನ್ನೆಯ ನಿನ್ನ‌ ಕೋಪಾಗ್ನಿಯಿಂದ.  ಸತ್ಪುರುಷನ ಕೋಪವೇ ಈ ಲೋಕದಲ್ಲಿ ಎಲ್ಲಾದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ.  ಅದೇ ಈ ಎಲ್ಲಕ್ಕೂ ಅತಿ ಮಾನುಷ ಕಾರ್ಯಕ್ಕೂ ಕಾರಣ" ಎಂದನು.

     ಅರ್ಜುನ ಅಜೇಯನೆಂಬ ಭೀಮನ ಮಾತು ನಿಜವೆಂದು ಮೊಟ್ಟ ಮೊದಲ ಬಾರಿಗೆ ದುರ್ಯೋದನನಿಗೆ ಅನ್ನಿಸಿತು.  ಅವನು ತನ್ನ ಡೇರೆಯಲ್ಲಿ ಇಂದಿನ‌ ಹಾಗೂ ಕಳೆದುಹೋದ  ದಿನಗಳ ಘಟನೆಗಳನ್ನು ದೇನಿಸುತ್ತಾ ಕುಳಿತಿದ್ದ.  ದ್ರೋಣ, ಕೃಪ, ಅಶ್ವತ್ಥಾಮ, ರಾಧೇಯ  ಯಾರೂ ಅರ್ಜುನನನ್ನು ಸರಿಗಟ್ಟಲಾರರೆಂದು ಅವನಿಗೆ ಮನವರಿಕೆಯಾಯಿತು.
ಅರ್ಜುನನೊಬ್ಬನೇ ಸಂಚರಿಸಿ ಅಷ್ಟೊಂದು ಸೈನ್ಯವನ್ನು ನಾಶಮಾಡಿದ್ದ.  ಎಲ್ಲರ ಕಣ್ಣೆದುರಿಗೆ ಜಯದ್ರಥನ್ನು ಕೊಂದಿದ್ದ.  ಯಾರೂ ಏನೂ ಮಾಡಲಾಗದೇ ಸಾಧ್ಯವಾಗಲಿಲ್ಲ.  ಈ ಜನರನ್ನ ನಂಬಿಕೊಂಡು ತಾನು ಕೃಷ್ಣನ ಮಾತನ್ನು ಮೂರ್ಖತನವೆಂದು ತಳ್ಳಿಹಾಕಿದ್ದೇನಲ್ಲ!  ಹಸ್ತಿನಾಪುರಕ್ಕೆ ರಾಯಭಾರಿಯಾಗಿ ಬಂದಾಗ ಇವೆಲ್ಲವನ್ನೂ ಹೇಳಿ ಎಚ್ಚರಿಕೆ ಕೊಟ್ಟಿದ್ದನಲ್ಲವೇ! "ಅರ್ಜುನನ್ನು ಸೋಲಿಸಲು ಸಾಧ್ಯವೇ ಇಲ್ಲವೆಂದು" ವಿದುರನು ಸಾರಿ ಸಾರಿ ಹೇಳಿದ್ದ.  ಆದರೇ ತಾನು ಅವರ ಯಾರ ಮಾತನ್ನೂ ಕೇಳಲಿಲ್ಲ".  

ದುಃಖದಿಂದ ಮೂಕನಾಗಿವ  ದ್ರೋಣನ ಬಳಿ ಹೋಗಿ ತನ್ನ ಸಂಕಟವನ್ನು ತೋಡಿಕೊಂಡ,
ದುರ್ಯೋಧನನು:- "ಆಚಾರ್ಯ, ಆ ಒಬ್ಬ ಅರ್ಜುನನಿಂದ ನಮ್ಮ ಸೈನ್ಯದಲ್ಲಿ ಆದ ನಾಶವನ್ನು ನೋಡು.  ನನಗಾಗಿ ಎಷ್ಟು ಜನ ರಾಜರು ಪ್ರಾಣ ಒಪ್ಪಿಸಬೇಕಾಯಿತು!  ಇಚ್ಛಾಮರಣಿ ಭೀಷ್ಮನನ್ನೇ ಅರ್ಜುನ ಶರಪಂಜರದ ಮೇಲೆ ಮಲಗುವಂತೆ ಮಾಡಿದ.  ಈ ಹೊತ್ತು ಅರ್ಜುನ‌-ಸಾತ್ಯಕಿ ಇಬ್ಬರೂ ಸೇರಿ ಏಳು ಅಕ್ಷೋಹಿಣಿ ಸೈನ್ಯವನ್ನು ನಾಶಮಾಡಿದರು.  ಯುದ್ಧ ಮಾಡಲಾರದ ಹೇಡಿ ನಾನು.  ಮಿತ್ರರ ಸಾವನ್ನೆಲ್ಲಾ ನೋಡುತ್ತಾ ಬದುಕಿರುವನು ನಾನು.  ಸಾವಿರ ಅಶ್ವಮೇಧಗಳನ್ನು ಮಾಡಿದರೂ ನನ್ನ ಪಾಪ ತೊಳೆದುಹೋಗದು.
ನಿನ್ನ ಕೂದಲು ಕೊಂಕಲೂ ಬಿಡುವುದಿಲ್ಲ ಎಂದು ಜಯದ್ರಥನಿಗೆ ವಚನ ಕೊಟ್ಟ ನಾನು, ಮಿತ್ರದ್ರೋಹವೆಸಗಿದಂತಾಯಿತು.  ವೀರನಾದ ಜಲಸಂಧನನ್ನು ನೆನೆಸಿಕೊಂಡರೂ ನನ್ನ ಎದೆಯೊಡೆಯುವಂತಾಗುತ್ತದೆ.  ನನ್ನ ಗೆಳೆಯರ ಸಾವಿನ ಸೇಡನ್ನು ನಾನು ತೀರಿಸಿಕೊಳ್ಳುವೆ‌
 ಇಲ್ಲದಿದ್ದರೇ ನಾನೂ ಸತ್ತು‌ ವೀರ ಸ್ವರ್ಗವನ್ನು ಸೇರುವೆ" ಎಂದನು.

ರಾಜನ ದುಃಖವನ್ನು ನೋಡಿ ದ್ರೋಣನಿಗೆ ಅಯ್ಯೋ ಎನ್ನಿಸಿತು‌.

ಆಗ
ದ್ರೋಣರು:- "ದುರ್ಯೋದನ, ಅರ್ಜುನ ಅಜೇಯನೆಂಬುದು ಗೊತ್ತಿರುವ ಸಂಗತಿ.  ಆ ಸತ್ಯವನ್ನು  ನಾವು ಒಪ್ಪಿಕೊಳ್ಳಲೇಬೇಕು.  ಹಿಂದಿನದು ಚಿಂತಿಸುವುದು ಬೇಡ‌.  ಆ ಬಗ್ಗೆ ಏನು ತಾನೆ ಮಾಡಬಲ್ಲೇವು?  ಈಗ ನಾನು ನಿನ್ನ ಶತ್ರಗಳನ್ನು ಕೊಲ್ಲುವವರೆಗೆ ಈ ನನ್ನ ಕವಚವನ್ನು ತೆಗೆಯುವಯದಿಲ್ಲ.  ನನ್ನ ದೇಹದಲ್ಲಿ ಉಸಿರಿರುವವರೆಗೆ ಹೋರಾಡುತ್ತೇನೆ.  ಇಲ್ಲವೇ ಸಾಯುತ್ತೇನೆ.  ಅಶ್ವತ್ಥಾಮನೂ ನನಗೆ ನೆರವಾಗುತ್ತಾನೆ.  ಈ ರಾತ್ರಿ ಅವರಿಗೆ ನಿದ್ರಿಸಲೂ ಬಿಡದೆ ಯುದ್ಧವನ್ನು ಮುಂದುವರೆಸುತ್ತೇನೆ"  ಎಂದು ದ್ರೋಣನು ರಣರಂಗದ ಕಡೆಗೆ ಹೊರಟನು.  

     ದುರ್ಯೋಧನ ರಾದೇಯನು ರಣರಂಗಕ್ಕೆ ಹೊರಟರು.  
ದಾರಿಯಲ್ಲಿ 
ದುರ್ಯೋಧನನು:- "ಹೇಗೆ ಅರ್ಜುನನು ವ್ಯೂಹವನ್ನು ಭೆದಿಸಿ ನಾವೆಲ್ಲ ರಕ್ಷಿಸುತ್ತಿದ್ದರೂ ಸಹ ಜಯದ್ರಥನನ್ನೂ ಕೊಂದಿರುವನು ನೋಡು!  ನನ್ನ ಅರ್ಧಕ್ಕಿಂತ ಹೆಚ್ಚುಸೈನ್ಯ ಅರ್ಜುನ ಸಾತ್ಯಕಿ ಇಬ್ಬರಿಂದಲೇ‌ ನಾಶವಾಗಿದೆ.  ಪ್ರೀತಿಯ ಶಿಷ್ಯನೆಂದು ಆಚಾರ್ಯನು ವ್ಯೂಹದೊಳಗೆ ಬಿಟ್ಟಿರಬೇಕು ಅನ್ನಿಸುತ್ತದೆ.  ಇಲ್ಲವಾದರೇ ರಾಧೇಯ, ಇದು ಹೇಗೆ ಹೀಗಾಗುವುದಕ್ಕೆ ಸಾಧ್ಯ?  ಅರ್ಜುನ‌ ದ್ರೋಣನನ್ನು ಮೀರಿ ಹೋಗುವುದೆಂದರೇನು?  ದ್ರೋಣನು ಜಯದ್ರಥನಿಗೆ ನಿನ್ನನ್ನು ರಕ್ಷಿಸುತ್ತೇನೆಂದು ಮಾತು ಕೊಟ್ಟು, ಅನಂತರ ಅರ್ಜುನನ್ನು ವ್ಯೂಹದೊಳಕ್ಕೆ ಬಿಡುವುದರ ಮೂಲಕ ದ್ರೋಹವೆಸಗಿದ್ದಾರೆ.  ನನಗಿದು ಗೊತ್ತಿದ್ದರೇ,  ಜಯದ್ರಥನನ್ನು ತನ್ನ ರಾಜ್ಯಕ್ಕೆ‌ ಕಳುಹಿಸಿಕೊಡುತ್ತಿದ್ದೆ.  ಈ ಸತ್ತಿರುವ ಸೈನಿಕರನ್ನು ನೋಡು.  ಒಬ್ಬೊಬ್ಬನ ಮೈ ಮೇಲೆ ಅರ್ಜುನನ ಹೇಸರಿರುವ ಬಾಣಗಳು.  ನನ್ನ ಸೋದರರೆಷ್ಟು ಜನ‌ಸತ್ತಿರುವರು!  ನನಗೆ ದ್ರೋಣರ ಮೇಲೆ ಬಂದಿರುವ ಸಿಟ್ಟು ಅಷ್ಟಿಷ್ಟಲ್ಲ" ಎಂದು ಅಲವತ್ತು ಕೊಂಡನು.

ಅದಕ್ಕೆ 
ರಾಧೇಯನು:- "ನೀನು ಅಚಾರ್ಯನ ಬಗ್ಗೆ ಹೀಗೆಲ್ಲ ಮಾತಾಡಬಾರದು.  ಅವನಿಂದಾದಷ್ಟು ಅವರು ಯುದ್ಧ ಮಾಡುತ್ತಿದ್ದಾರೆ.  ಈ ವೃದ್ಧಾಪ್ಯದಲ್ಲಿ ಅವರು ಎಷ್ಟೊಂದು ನೆರವಾಗುತ್ತಿರುವರಲ್ಲ!  ಅದಕ್ಕೆ ನೀನು ಕೃತಜ್ಞನಾಗಿರಬೇಕು.  ದ್ರೋಣರಿಗೆ ಅರ್ಜುನನನ್ನು ಸೋಲಿಸಲು ಆಗುವುದಿಲ್ಲ.  ಅರ್ಜುನನೇ ಉಪಾಯವಾಗಿ ದ್ರೋಣರನ್ನು ದಾಟಿಕೊಂಡು ಹೋಗಿದ್ದಾನೆ.  ಇದಕ್ಕಾಗಿ ದ್ರೋಣರನ್ನು ಆಕ್ಷೇಪಿಸುವುದು ಸರಿಯಲ್ಲ.  ನಾವೆಲ್ಲರೂ ಸಾಧ್ಯವಿದ್ದಷ್ಟು ಚೆನ್ನಾಗಿ ಹೋರಿದ್ದೇವೆ.  ಆದರೂ ಜಯದ್ರಥನನ್ನು ಕಾಪಡಲು ಆಗಲಿಲ್ಲವಲ್ಲ.  ಮಾನವನ ಪೌರುಷಕ್ಕಿಂತ ವಿಧಿಯ ಬಲವೇ ಮಿಗಿಲು ಎಂದಷ್ಟೆ ಹೇಳಬಲ್ಲೆ.  ದುರ್ಯೋದನ, ನಾವು ಏನನ್ನಾದರೂ ಮಾಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.  ವಿಧಿ, ಅದಕ್ಕೆ ವ್ಯತಿರಿಕ್ತವಾಗಿದ್ದರೆ, ಅದಕ್ಕಾಗಿ ನಾವು ಪರಸ್ಪರ  ಬೈದುಕೊಳ್ಳುವುದು ತಪ್ಪು‌.  ವಿಧಿ ನಾವು ಮಾಡುವುದನ್ನೇ ಕಾದುಕೊಂಡೇ ಇರುತ್ತದೆ.  ಕೊನೆಗೆ ಗೆಲ್ಲುವುದು ವಿಧಿಯೇ" ಎಂದನು. 

      ಅಷ್ಟೊತ್ತಿಗೆ ಅವರು ಸೈನ್ಯದ ಅಂಚಿಗೆ ಬಂದಿದ್ದರು.  ಪಾಂಡವ ಸೈನ್ಯವೂ ಯುದ್ದಕ್ಕೆ ಸಜ್ಜಾಗಿತ್ತು.
ಅದೊಂದು ಭೀಕರ ಯುದ್ಧ.  ಕಾಳರಾತ್ರಿಯ ಕಗ್ಗತ್ತಲ್ಲಿನಲ್ಲಿ ಎದುರಾಳಿ ಯಾರೆಂಬುದೇ ತಿಳಿಯದೇ  ಮಾಡುವ ಕೊಲೆಗಳ ಸರಮಾಲೆ!  ಎರಡೂ ಸೈನ್ಯಗಳು ಕಗ್ಗಕತ್ತಲಲ್ಲೇ  ಒಂದರಮೇಲೊಂದು ಬಿದ್ದವು.  ಧ್ವನಿಗಳ ಆಧಾರದ ಮೇಲೆಯೇ ಒಬ್ಬರನ್ನೊಬ್ಬರು ಗುರುತಿಸಬೇಕು.  ಕೌರವರ ಮುತ್ತಿಗೆಗೆ ತಪ್ಪಿಸಿಕೊಳ್ಳದಂತೇಯೇ ಆಗದಂತಹ ಅವರ ಮುತ್ತಿಗೆಯಿಂದ ಪಾಂಡವ ಸೇನೆಯನ್ನು ಕಾಪಾಡಲು ಭೀಮನು ಮುಂದಾದನು‌.  ದುರ್ಯೋದನ ಯುದಿಷ್ಠಿರರ ನಡುವೆ ಕೊನೆಯಿಲ್ಲವೇನೋ ಎಂದೆನಿಸುವಂತಿದ್ದ.  ದ್ರೋಣನು ಬಂದು ಸಂಕುಲವನ್ನಾಗಿಸಿದನು.  ಗುರಿಯಿಲ್ಲದ ಬಾಣಗಳು ಕತ್ತಲಲ್ಲಿ ಎಲ್ಲೆಂದರಲ್ಲಿ ಚೆಲ್ಲಾಡಿದವು.  ಶಕ್ತ್ಯಾಯುಧಗಳು ಮಿಂಚಿನಂತೆ ಹೊಳೆದು ಮಾಯವಾಗುತ್ತಿದ್ದವು.  ಸೈನ್ಯನಾಶದ ಕಾಲಪುರುಷನಾಗಲು ದ್ರೋಣನಿಗೂ ಭೀಮನಿಗೂ ಸ್ಪರ್ಧೆ ಏರ್ಪಟ್ಟಂತಿತ್ತು.  ಕತ್ತಲಲ್ಲೂ ಭೀಮನ ಕೈಗೆ ಕೆಲವು ಧಾರ್ತರಾಷ್ಟ್ರರು ಸಿಕ್ಕಿ ಹತರಾದರು.  ಸೋಮದತ್ತನು ಸಾತ್ಯಕಿಯನ್ನು ದ್ವಂದ್ವದಲ್ಲಿ ಸಿಲುಕಿಸಿಕೊಂಡನು.  ತನ್ನ ಮಕ್ಕಳು ಶಲ, ಭೂರಿಶ್ರವಸ್ಸು ಇಬ್ಬರನ್ನೂ ಒಂದೇ ದಿನ ಕಳೆದುಕೊಂಡು ದುಃಖಿತನಾಗಿದ್ದ ಅವನ ಕೋಪ ಅಸಾಧ್ಯವಾಗಿತ್ತು.
ಯುದ್ಧ ಭೀಕರವಾಗುತ್ತಿದ್ದಂತೆ ಸಾತ್ಯಕಿ ಮೇಲುಗೈ ಸಾಧಿಸುತ್ತಿದ್ದಂತೆ ದುರ್ಯೋದನನು ವೃದ್ಧನಿಗೆ ನೆರವಾಗಬೇಕಾಯಿತು. 

    ಇತ್ತ ದೃಷ್ಟದ್ಯುಮ್ನನು ಸಾತ್ಯಕಿಯ ಸಹಾಯಕ್ಕೆ ನಿಂತನು.  ಮೂರ್ಛಿತನಾದ ಸೋಮದತ್ತನನ್ನು ರಣರಂಗದಿಂದ ದೂರ ಸಾಗಿಸಲಾಗಿತ್ತು.  ಅಶ್ವತ್ಥಾಮನು ಈಗ ಸಾತ್ಯಕಿಯನ್ನು ಎದುರಿಸಿದನು.  ಘಟೋತ್ಕಚನು ಅಶ್ವತ್ಥಾಮನ ಎದುರಿಗೆ ಬಂದು ನಿಂತನು.   ಆ ಕತ್ತಲಿನ ಅವನ ಭೀಕರ ರೂಪ,  ವಿಕಾರವಾದ ಚೀತ್ಕಾರ, ಇಡೀ ಸೈನ್ಯವನ್ನೇ ನಡುಗಿಸುವಂತಿತ್ತು.  ಅವನ ಜೊತೆಯಲ್ಲಿ ರಾಕ್ಷಸರ ಹಿಂಡೆ ಬಂದಿತ್ತು.  ರಾತ್ರಿಯಾದ್ದರಿಂದ ರಾಕ್ಷಸರಿಗೆ ಸಹಜವಾಗಿಯೇ ಶಕ್ತಿ ಇತ್ತು.  ಘಟೋತ್ಕಚನು ಮಾಯಾಯುದ್ಧವನ್ನು ಪ್ರಾರಂಭಿಸಿದನು.  ಅಶ್ವತ್ಥಾಮನು ಇದಕ್ಕೆಲ್ಲ ಅಂಜುವ ಕುಳಿಯೇನಲ್ಲ.  ಅವನು ಮಾಯೇಯನ್ನು ಅಸ್ತ್ರಗಳಿಂದ ನಿವಾರಿಸಿತೊಡಗಿದನು.  ಇದರಿಂದ ಕೆರಳಿದ ಘಟೋತ್ಕಚನು ಇನ್ನೂ ಭೀಕರನಾದನು.  ಅವರಿಬ್ಬರ ದ್ವಂದ್ವಯುದ್ದವು ನೋಡುವಂತಿತ್ತು.  ಘಟೋತ್ಕಚನ ಧನುರ್ವಿದ್ಯಾ ನೈಪುಣ್ಯವನ್ನು ಅದುವರೆಗೆ ಯಾರೂ ನೋಡಿರಲಿಲ್ಲ.  ಅಶ್ವತ್ಥಾಮನೆಸೆದ ಚಕ್ರಾಯುಧವನ್ನು ಅಣುವಾಗಿ ತಪ್ಪಿಸಿಕೊಂಡ ಘಟೋತ್ಕಚನು, ಒಮ್ಮೆಲೆ  ಮುಗಿಲೆತ್ತರಕ್ಕೆ ಬೆಳೆದು, ಪುನಃ ಮಾಯಾಯುದ್ಧವನ್ನು ಆರಂಭಿಸಿದನು.  ಅಶ್ವತ್ಥಾಮನೆದುರಿಗೆ ಅದು ನಡೆಯದೇ, ಪುನಃ  ಸಾಮಾನ್ಯನಂತೆ ಯುದ್ಧ ಮಾಡಬೇಕಾಗಿ ಬಂದಿತು.  ರಾಕ್ಷಸ ಸಮೂಹವನ್ನು ಕಂಡು‌ ಹೆದರಿದ ರಾಜನನ್ನು, ಅಶ್ವತ್ಥಾಮನು ಸಮಾದಾನ ಮಾಡಿ, "ಅದರ ವಿಚಾರವನ್ನು ತನಗೆ ಬಿಡುವಂತೆ" ಹೇಳಿದನು.

   ದುರ್ಯೋದನನು ಶಕುನಿಯಿದ್ದಲ್ಲಿಗೆ ಹೋಗಿ, ಅವನನ್ನು ಪಾಂಡವರೊಡನೆ ಹೋರಾಡಲು ಕಳುಹಿಸಿದನು.  ಅಶ್ವತ್ಥಾಮನು ಭಯಂಕರವಾಗಿದ್ದುದನ್ನು ಪಾಂಡವರು ನೋಡಿದ್ದು ಇದೇ ಮೊದಲು.  ಶಂಕರನಂತೆ ನಿಂತ ಅವನ ಬಾಣಗಳನ್ನು, ಘಟೋತ್ಕಚನ ಹೊರತು ಇನ್ನಾರೂ ತಾಳಲಾರದೇ ಹೋದರು.  ಘಟೋತ್ಕಚನು ಪಾಂಚಾಲ‌ ರಾಜಕುಮಾರನೂ ಚೆನ್ನಾಗಿಯೇ ಯುದ್ಧ ಮಾಡಿದರೂ, ಅಶ್ವತ್ಥಾಮನು ಪಾಂಚಾಲ ರಾಜನನ್ನು ಕೊಂದದ್ದಲ್ಲದೇ, ಘಟೋತ್ಕಚನನ್ನೂ ಗಾಯಗೊಳಿಸಿ ನೋಯಿಸಿದನು.  ಮೂರ್ಛೆ ಹೋದ ಅವನನ್ನು ರಣರಂಗದಿಂದ ಕೆಲ ಕಾಲ ಹೊರಗೊಯ್ಯಲಾಯಿತು.  ರಾಕ್ಷಸಸೇನೆ ಅಶ್ವತ್ಥಾಮನಿಂದ ಬಹುವಾಗಿ ಘಾಸಿಗೊಳಾಯಿತು‌.  ಮಕ್ಕಳನ್ನು‌ ಕಳೆದುಕೊಂಡ ದ್ರುಪದ, ಘೋರ ಯುದ್ಧ ಮಾಡಿದನು.

   ಸೋಮದತ್ತನ ತಂದೆ ಬಾಹ್ಲೀಕ ಮತ್ತು ಭೀಮನ ನಡುವೆ ಘೋರ ದ್ವಂದ್ವ ಯುದ್ಧವು ನಡೆಯಿತು.  ರಣರಂಗದಲ್ಲಿ ಯಾವ ಯುವಕನಿಗೂ ಕಡಿಮೆಯಿಲ್ಲದಂತೆ ಬಾಹ್ಲೀಕ ಹೋರಾಡುತ್ತಿದ್ದನು‌.  ಭೀಮನು ಅವನನ್ನು ಬಲವಾದ ಒಂದು ಗದಾಪ್ರಹಾರದಿಂದ ಕೊಂದು ಹಾಕಿದನು.  ಕುರುವಂಶದ ಹಿರಿಯನೊಬ್ಬನು ಬಿದ್ದನು ಎಂದು ಹಾಹಾಕಾರವಾಯಿತು.  "#ಭೀಷ್ಮರೂ_ಸಹ_ಬಾಹ್ಲೀಕನಿಗಿಂತ‌_ಚಿಕ್ಕವನು.  ಇದನ್ನು ನೋಡಿದ ಧಾರ್ತರಾಷ್ಟ್ರರು ಅವನ ಮೇಲೇರಿ ಬಂದರು.  ಅವರಲ್ಲಿ ಹತ್ತು ಜನರನ್ನು ಕೊಂದದ್ದಲ್ಲದೇ, ತನ್ನ ಸೈನ್ಯದೊಂದಿಗೆ ಬಂದಿದ್ದ ಶಕುನಿಯ ಸೋದರರನ್ನೂ ಸಹ ಭೀಮನುಅವರನ್ನು ಕೊಂದು ಹಾಕಿದನು. 

     ದ್ರೋಣನು ಯುಧಿಷ್ಠಿರನ ಮೇಲೆ ‌ತನ್ನಲ್ಲಿದ್ದ ಎಲ್ಲ ಅಸ್ತ್ರಗಳನ್ನೆಲ್ಲ ಪ್ರಯೋಗಿಸಿದನು.  ಅವೆಲ್ಲವೂ ನಿಷ್ಫಲವಾಗಲೂ, ಬ್ರಹ್ಮಾಸ್ತ್ರವೇ ಅಭಿಮಂತ್ರಿಸಿದನು.  ಯುಧಿಷ್ಠಿರನು ಅದನ್ನು ಬ್ರಹ್ಮಾಸ್ತ್ರದಿಂದಲೇ ನಿವಾರಿಸಿದನು.  ದ್ರೋಣನು ಕೊನೆಗೆ ಹಿಂತೆಗೆದು ತನ್ನ ಗಮನವನ್ನು ಬೇರೆಡೆಕಡೆಗೆ ಹರಿಸಿದನು‌.

      ಭೀಮಾರ್ಜುನರಿಬ್ಬರೂ ಮುಂದೆ ಬಂದು ದ್ರೋಣನನ್ನೆದುರಿಸಿದರು.  ಕೌರವ ಸೇನೆಯು ಕರಗತೊಡಗಿತು.  ಸಹೋದರರಿಬ್ಬರೂ ಕೌರವರ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದರು.
ಮೃತ್ಯುವಿನ ಈ ರುದ್ರತಾಂಡವದಿಂದ ದುಃಖಿತನಾದ ರಾಜನನ್ನು ರಾಧೇಯನು ಸಮಾದಾನ ಪಡಿಸಿ, ತನ್ನ ಪ್ರತಾಪವನ್ನು ಹೇಳಿಕೊಂಡು, ತಾನೆ ಅರ್ಜುನನ್ನು ಎದುರಿಸಿ ಶಕ್ತ್ಯಾಯುಧದಿಂದ ಅವನನ್ನು ಕೊಲ್ಲುತ್ತೇನೆಂದು ಹೊರಟನು.  

ಈ ಮಾತನ್ನು‌ ಕೇಳುತ್ತಿದ್ದ 
ಕೃಪನು:- "ಆಹಾ, ಏನು ಶೌರ್ಯ ರಾಧೇಯನದು!  ಎಲ್ಲವೂ ಮಾತಿನಲ್ಲೇ!  ಕೇಲವೇ ತಿಂಗಳ ‌ಹಿಂದೆ ವಿರಾಟನ ಗೋವುಗಳನ್ನು ಹಿಡಿಯುವಾಗ  ನೋಡಲಿಲ್ಲವೇ!  ಇವನ ಶೌರ್ಯವನ್ನು!  ಮಾತು ಶೋಭಿಸಿವುದು ಬ್ರಾಹ್ಮಣನಿಗೆ ಮಾತ್ರ.‌  ಕ್ಷತ್ರಿಯನಾದವನು ಕಾರ್ಯಮಾಡಿ ತೋರಿಸಬೇಕು.  ಸುಮ್ಮನೆ ಮಾಗಿಯ ಮೇಘದಂತೆ ವ್ಯರ್ಥವಾಗಿ ಬಡಬಡಿಸಿದರೇ ಏನು ಪ್ರಯೋಜನ ?" ಎಂದು ಛೇಡಿಸಿದನು. 

ರಾಧೇಯನು:- "ಯುಧಿಷ್ಠಿರನು ಧರ್ಮವನ್ನು  ಬಿಟ್ಟುಹೋಗುವವನಲ್ಲ;  ಅರ್ಜುನ ವೀರರಲ್ಲಿ ವೀರ; ಅವರಿಗೆ ಕೃಷ್ಣನ ಸಹಾಯವಿದೆ;  ಇದೆಲ್ಲವೂ ಸರಿಯೇ. ಆದರೇ ಅರ್ಜುನನ್ನು ನಾನು ಅವರಪ್ಪನೇ ಕೊಟ್ಟಿರುವ ಶಕ್ತ್ಯಾಯುಧದಿಂದ ಗೆದ್ದು, ನನ್ನ ಏಕೈಕ ಮಿತ್ರನಾದ ದುರ್ಯೋಧನನನ್ನು ಸಂತೋಷಪಡಿಸುತ್ತೇನೆ. ವಿಜಯಶ್ರೀ ಕೊನೆಗೆ ಯಾರಿಗೆ ಮಾಲೆ ಹಾಕುವಳೋ ಯಾರಿಗೆ ಗೊತ್ತು?  ಈವರೆಗೆನೋ ಅವಳು ಪಾಂಡವರ ಪರವಾಗಿದ್ದಾಳೆ.  ಪಾಂಡವರು ಹೆಚ್ಚು ಬಲಶಾಲಿಗಳೆಂದು ನಾನೊಪ್ಪುವುದಿಲ್ಲ.  ನನ್ನಿಂದ ಸಾಧ್ಯವದಷ್ಟು ಹೋರಾಡುವೆನು‌;  ಫಲವು ವಿಧಿಯ ಕೈಯಲ್ಲಿರುವಂಥಾದ್ದು.  ವಿಧಿಯೇ ಹೆಚ್ಚಿನದು.  ಅರ್ಜುನನಲ್ಲ.  ಕೃಪ, ನೀನು ಪಾಂಡವರ ಪಕ್ಷಪಾತಿ. ನಿನ್ನ ಮಾತು ಯಾವಾಗಲೂ ಅವರ ಕಡೆಗೆ" ಎಂದೇ ಈಗ ನಿನ್ನ ನಾಲಿಗೆಯನ್ನು ಸೀಳುವೆನು" ಎನ್ನುತ್ತಾ ಕತ್ತಿಯನ್ನು ಎತ್ತಿದನು. 

 ಸಮಯಕ್ಕೆ ಸರಿಯಾಗಿ ಬಂದು ಅವನನ್ನು ತಡೆದ
ಅಶ್ವತ್ಥಾಮನು:- "ನನ್ನ ಸೋದರ ಮಾವನ ಮೇಲೆ ಏರಿ ಹೋಗುವೆಯಾ ನಿನ್ನನ್ನು ಕೊಲ್ಲುತ್ತೇನೆ" ಎಂದು ನುಗ್ಗಿದನು. 

 ಅದೇ ಸಮಯಕ್ಕೆ ಬಂದು ಅವನನ್ನು ತಡೆದ
ದುರ್ಯೋಧನನು:- "ಅಶ್ವತ್ಥಾಮ, ಸಾಕು ನಿಲ್ಲಿಸು. ವ್ಯಕ್ತಿಗಳ ಜಗಳಗಳಿಗೆ ಇದು ಸಮಯವಲ್ಲ. ಯುದ್ಧವನ್ನು ಗೆಲ್ಲಲು ನಾನು ನಿಮ್ಮೆಲ್ಲರನ್ನೂ ಅವಲಂಬೀಸಿರುವೆನು.  ಪಾಂಡವ ಸೇನೆಯು ಈಗಲೂ ನಮ್ಮ‌ಮೇಲೆ ನುಗ್ಗಿ ಬರುತ್ತಿರುವುದು.  ನೀನೀಗ ರಾಧೇಯನ ಮೇಲಿನ ಕೋಪವನ್ನು ಬಿಡು" ಎಂದನು.

ಅಶ್ವತ್ಥಾಮನು ದುರ್ಯೋಧನನ ಮಾತನ್ನು ತೆಗೆದು ಹಾಕಲಾರದೇ ಮನಸ್ಸನ್ನು ತಾನೇ ಸಮಾದಾನ ಮಾಡಿಕೊಂಡನು.   ರಾಧೇಯನು ಬಿಲ್ಲನ್ನು ತೆಗೆದುಕೊಂಡು ಪಾಂಡವರ ಸೈನ್ಯದ ಕಡೆಗೆ ಹೊರಟನು ಹೋದನು.

              -:ಶ್ರೀಕೃಷ್ಣಾರ್ಪಣಮಸ್ತು:-

ಬರಹ:- ಗಣೇಶ್ ಗೋಸಾವಿ

Friday, 26 June 2020

ಸರ್ಪವನ್ನು ಕಂಡಾಗ ಹಿರಿಯರು ‘ಆಸ್ತಿಕ… ಆಸ್ತಿಕ…’ ಎಂದು ಪಠಿಸುತ್ತಾರೆ. ಅದೇಕೆ ಹಾಗೆ ಮಾಡುತ್ತಾರೆ? ಯಾರು ಈ ಆಸ್ತಿಕ?

ಹೀಗೊಂದು ಪುರಾಣ ಕಥೆ

ಸರ್ಪವನ್ನು ಕಂಡಾಗ ಹಿರಿಯರು ‘ಆಸ್ತಿಕ… ಆಸ್ತಿಕ…’ ಎಂದು ಪಠಿಸುತ್ತಾರೆ. ಅದೇಕೆ ಹಾಗೆ ಮಾಡುತ್ತಾರೆ? ಯಾರು ಈ ಆಸ್ತಿಕ? ಸರ್ಪಗಳಿಗೂ ಅವನಿಗೂ ಏನು ಸಂಬಂಧ?  ಜನಮೇಜಯ ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….!? ತಿಳಿಯಲು ಈ ಕಥೆ ಓದಿ!

ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು – ಉತ್ತರೆಯರ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ.

ಈ ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ತೆರಳಿದ್ದವನು ಬಾಯಾರಿ ಶಮೀಕಮುನಿಯ ಆಶ್ರಮವನ್ನು ಹೊಕ್ಕ. ಸಮಾಧಿಸ್ಥನಾಗಿದ್ದ ಮುನಿ ಈತನನ್ನು ಸತ್ಕರಿಸಲಿಲ್ಲವಾದ ಕಾರಣ ಕೋಪಗೊಂಡು ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋದ. 

ನಂತರ ಅಲ್ಲಿಗೆ ಬಂದ ಮುನಿಪುತ್ರ ಶೃಂಗಿ ಕ್ರೋಧವಶನಾಗಿ “ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇನ್ನು ಏಳು ದಿನಗಳೊಳಗೆ ಸರ್ಪದ ಕಡಿತದಿಂದ ಸಾಯಲಿ” ಎಂದು ಶಪಿಸಿದ. ಈ ಶಾಪವನ್ನು ಸ್ವೀಕರಿಸಿದ ಪರೀಕ್ಷಿತ, ತನ್ನ ಅಂತಿಮ ದಿನಗಳನ್ನು ಭಾಗವತ ಶ್ರವಣದಲ್ಲಿ ಕಳೆದು, ಸರ್ಪರಾಜ ತಕ್ಷಕನ ಕಡಿತಕ್ಕೆ ಒಳಗಾಗಿ ತೀರಿಹೋದ.

ಪರೀಕ್ಷಿತನ ನಂತರ ಅವನ ಮಗ ಜನಮೇಜಯ ಅಧಿಕಾರಕ್ಕೆ ಬಂದ. ತಂದೆಯನ್ನು ಉಳಿಸಿಕೊಳ್ಳಲು ರಹಸ್ಯ ಭವನ ನಿರ್ಮಿಸಿ ಎಷ್ಟೆಲ್ಲ ಕಷ್ಟಪಟ್ಟಿದ್ದರೂ ತಕ್ಷಕ ಅದನ್ನು ಪ್ರವೇಶಿಸಿ ಕಚ್ಚಿ ಸಾಯಿಸಿದ್ದು ಅವನಿಗೆ ಮರೆಯಲಾಗಿರಲಿಲ್ಲ. 

ಅದಕ್ಕೆ ಸರಿಯಾಗಿ, ಸರ್ಪಗಳ ಮೇಲೆ ದ್ವೇಷವಿದ್ದ ಉತ್ಥಂಕ ಜನಮೇಜಯನನ್ನು ಭೇಟಿಯಾಗಿ ಅವನನ್ನು ಸೇಡಿಗಾಗಿ ಪ್ರಚೋದಿಸಿದ. “ಸರ್ಪಯಾಗ ನಡೆಸಿ ನಿನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡು” ಎಂದು ಹುರಿದುಂಬಿಸಿದ.

ಅದರಂತೆ ಜನಮೇಜಯ ಆಸ್ಥಾನ ಪುರೋಹಿತರನ್ನು ಕರೆಸಿ ಸರ್ಪಯಾಗಕ್ಕೆ ದಿನ ನಿಶ್ಚಯಿಸಿದ. ಋತ್ವಿಜರನ್ನು ಕರೆಸಿ ಬೇಕಾದ ಏರ್ಪಾಡು ಮಾಡಿಕೊಳ್ಳಲು ಸೂಚಿಸಿದ.

ಸರ್ಪ ಯಾಗ ಶುರುವಾಯಿತು. ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡಿ, ಅದನ್ನು ಅಗ್ನಿಯ ಬಳಿಗೆ ಆಕರ್ಷಿಸಿ ‘ಸ್ವಾಹಾ’ ಅನ್ನುತ್ತಿದ್ದರು. ಕೂಡಲೇ ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು. 

ಎಲ್ಲ ಲೋಕಗಳ, ಎಲ್ಲ ಬಗೆಯ ಹಾವುಗಳೂ ಸರಸರನೆ ಬಂದು ಅಗ್ನಿಕುಂಡದೊಳಗೆ ಬೀಳುವುದನ್ನು ನೋಡಿದರೆ ಎಂಥವರೂ ತಲ್ಲಣಿಸಬೇಕು! ಆದರೆ ಜನಮೇಜಯ ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬದ್ಧನಾಗಿದ್ದ. ಅವನ ಮನಸ್ಸು ಬದಲಾಗಲಿಲ್ಲ. ಜೊತೆಗೆ ಸರ್ಪಗಳು ಹೀಗೆ ಕುಂಡದೊಳಗೆ ಸುಟ್ಟು ಸಾಯಬೇಕೆನ್ನುವುದು ನಿಯತಿಯ ಇಚ್ಛೆಯಾಗಿತ್ತು. 

ಜನಮೇಜಯ ನಿಮಿತ್ತ ಮಾತ್ರನಾಗಿದ್ದ. ಸರ್ಪಕುಲದ ತಾಯಿ ಕದ್ರು ನೀಡಿದ ಶಾಪವೇ ಸರ್ಪಯಾಗಕ್ಕೆ ವೇದಿಕೆ ಒದಗಿಸಿತ್ತು. (ಕದ್ರು ತನ್ನದೇ ಮಕ್ಕಳಿಗೆ ಶಾಪ ನೀಡಿದ್ದೇಕೆ? ~ ಇಲ್ಲಿ ಓದಿ : )

ಜನಮೇಜಯನ ಯಜ್ಞಕ್ಕೆ ತನ್ನ ಬಾಂಧವರು ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ತಲ್ಲಣಿಸಿಹೋದ. 

ಸಹಾಯಕ್ಕಾಗಿ ದೇವೇಂದ್ರನ ಬಳಿ ಧಾವಿಸಿದ. ತಕ್ಷಕನಿಗೆ ಅಭಯ ನೀಡಿದ ದೇವೇಂದ್ರ, “ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲು, ಯಾಗ ಮಂತ್ರ ನಿನ್ನನ್ನು ಸೆಳೆಯಲಾರದು” ಎಂದು ಸೂಚಿಸಿದ. ತಕ್ಷಕ ಹಾಗೇ ಮಾಡಿದ.

ಆದರೆ ಯಾಗ ಮಂತ್ರದ ಆಕರ್ಷಣೆಯ ಬಲದೆದುರು ತಕ್ಷಕನ ಆಟ ನಡೆಯಲಿಲ್ಲ. ಮಂತ್ರವು ದೇವೇಂದ್ರನನ್ನೂ ಸೇರಿಸಿಕೊಂಡೇ ತಕ್ಷಕನನ್ನು ಯಾಗಕುಂಡದೆಡೆ ಸೆಳೆಯಲಾರಂಭಿಸಿತು.

ಇದನ್ನು ಕಂಡು ಭೀತರಾದ ವಾಸುಕಿ ಮೊದಲಾದ ಅಳಿದುಳಿದ ಸರ್ಪಗಳು ತಮ್ಮ ಕುಲಕ್ಕೆ ಹೊರಗಿನವನಾದ, ಸೋದರಳಿಯ ಆಸ್ತಿಕ ಋಷಿಯ ಬಳಿ ಹೋದರು. “ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. 

ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು” ಎಂದು ಕೇಳಿಕೊಂಡರು. ಆಸ್ತಿಕ ಸಂತೋಷದಿಂದಲೇ ಸಮ್ಮತಿಸಿ, “ಹೇಳಿ, ನಾನೇನು ಮಾಡಿದರೆ ಸರ್ಪ ಸಂತತಿ ಉಳಿಯುತ್ತದೆ?” ಎಂದು ಪ್ರಶ್ನಿಸಿದ.  

ಆಗ ವಾಸುಕಿಯು “ಮಗೂ, ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ಬ್ರಹ್ಮಚಾರಿಯಾದ ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು” ಎಂದು ಸಲಹೆ ನೀಡಿದ. 

ಆಸ್ತಿಕ ತಡಮಾಡದೆ ಅಲ್ಲಿಂದ ಹೊರಟು ಯಾಗಶಾಲೆಯನ್ನು ತಲುಪಿದ. ಜನಮೇಜಯನ ಮುಂದೆ ಹೋಗಿ ನಿಂತ. ಇನ್ನೇನು ಮಂತ್ರಾಕರ್ಷಣೆಗೆ ಸಿಲುಕಿ ದೇವೇಂದ್ರ ಸಹಿತನಾಗಿ ತಕ್ಷಕ ಕುಂಡದಲ್ಲಿ ಬೀಳುವುದರಲ್ಲಿದ್ದ. 

ಆದರೆ ಅದಕ್ಕೆ ಅಡ್ಡಿಯಾಗಿ ನಿಂತ ಆಸ್ತಿಕ, “ಬ್ರಹ್ಮಚಾರಿಗೆ ದಕ್ಷಿಣೆ ಕೊಡದೆ ಯಾಗ ಹೇಗೆ ಮುನ್ನಡೆಸುತ್ತೀರಿ?” ಎಂದು ಜನಮೇಜಯನನ್ನು ಇಕ್ಕಟ್ಟಿಗೆ ಸಿಲುಕಿಸಿದ. ಜನಮೇಜಯ, “ಬ್ರಹ್ಮಚಾರಿ! ನಿನಗೇನು ಬೇಕು ಕೇಳು. ಕೊಡುತ್ತೇನೆ” ಎಂದು ವಾಗ್ದಾನ ನೀಡಿಬಿಟ್ಟ. ಇದಕ್ಕಾಗಿಯೇ ಕಾದಿದ್ದ ಆಸ್ತಿಕ “ಈಗಿಂದೀಗಲೇ ಸರ್ಪಯಾಗವನ್ನು ನಿಲ್ಲಿಸಿ. ಇದೇ ನೀವು ನನಗೆ ಕೊಡುವ ದಕ್ಷಿಣೆ!!” ಅಂದುಬಿಟ್ಟ.

ಮಾತಿಗೆ ಬದ್ಧನಾದ ಜನಮೇಜಯನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಏನೂ ಮಾಡುವಂತಿಲ್ಲ. ಆದರೂ ಆಸ್ತಿಕನಿಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. 

ದೇವೇಂದ್ರ ಅವನನ್ನು ಸಮಾಧಾನ ಪಡಿಸಿ, ಶೃಂಗಿಯ ಶಾಪವೇ ಕಾರಣವಾಗಿ ನಿನ್ನ ತಂದೆಯ ಮೃತ್ಯುವಾಯಿತು. ಇದರಲ್ಲಿ ತಕ್ಷಕನ ಪಾತ್ರವೇನೂ ಇಲ್ಲ. ಅವನು ನಿಮಿತ್ತ ಮಾತ್ರ ಎಂದು ಅನುನಯಿಸಿದ. ಇದರಿಂದ ಜನಮೇಜಯನೂ ದ್ವೇಷ ಕಳೆದು ಸಮಾಧಾನ ಹೊಂದಿದ.

ತಮ್ಮ ಸೋದರಳಿಯನ ಸಹಾಯಕ್ಕೆ ಕೃತಜ್ಞರಾದ ಸರ್ಪಗಳು “ನಿನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ನಾವು ಬಾಧಿಸುವುದಿಲ್ಲ” ಎಂದು ವಾಗ್ದಾನ ನೀಡಿದವು. 

ಇಂದಿಗೂ ಕೆಲವು ಕಡೆಗಳಲ್ಲಿ ಬಹುತೇಖ ವೃದ್ಧರು ಹಾವನ್ನು ಕಂಡಕೂಡಲೇ “ಆಸ್ತಿಕ… ಆಸ್ತಿಕ…” ಎಂದು ಪಠಿಸುವುದು ಇದೇ ಕಾರಣಕ್ಕೆ. ಆಸ್ತಿಕನನ್ನು ಸ್ಮರಿಸಿದರೆ ಸರ್ಪ ತೊಂದರೆ ಕೊಡದೆ ಹೊರಟು ಹೋಗುತ್ತದೆ ಅನ್ನುವ ನಂಬಿಕೆಗೆ ಈ ಕಥೆಯೇ ಹಿನ್ನೆಲೆ. 

ಪುರಾಣ ಕಥೆ ತಿಳಿದು ಶೇರ್ ಮಾಡಿ ಶುಭವಾಗಲಿ ಧನ್ಯವಾದಗಳು

Wednesday, 24 June 2020

ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

ದ್ರೌಪದಿಯ ವ್ಯಕ್ತಿತ್ವವನ್ನು ತಿಳಿವಳಿಕೆಗೆ ತಂದುಕೊಳ್ಳುವುದೆಂದರೆ ಅದೊಂದು ಸವಾಲೇ ಸರಿ. ಸಣ್ಣಗೆ ಅಲುಗುತ್ತಿರುವ ನೀರಿನಲ್ಲಿ ಪ್ರತಿಬಿಂಬವನ್ನು ನೋಡುತ್ತ ಮೇಲಿರುವ ಬಿಂಬಕ್ಕೆ ಗುರಿಹಿಡಿದಂತೆ ಈ ಸವಾಲು.

ಸ್ವಯಂವರ ಸಭೆಯಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿದವರಿಗೆ – ಇದು ಪ್ರತಿಬಿಂಬದ ಮೂಲಕ ಬಿಂಬವನ್ನು ಗುರಿ ಹಿಡಿಯುವುದೇ – ದ್ರುಪದಕುಮಾರಿ ಕೃಷ್ಣೆ ಒಲಿಯುವಳೆನ್ನುವುದು ವಾಚ್ಯಾರ್ಥವನ್ನು ಮೀರಿದ ಗಹನತೆಯುಳ್ಳದ್ದಾಗಿ ಕೇಳಿಸುತ್ತದೆ.

 

ವ್ಯಾಸರು ತಮ್ಮ ಕಥನದಲ್ಲಿ ದ್ರೌಪದಿಯ ಕುರಿತು ಒದಗಿಸುವ ವಿವರಗಳು – ಪ್ರತಿಬಿಂಬಗಳಂತಿವೆ. ಅದರಲ್ಲೂ ಸಂಕೀರ್ಣ ಪ್ರತಿಬಿಂಬಗಳು, ಸರಳವಾಗಿಲ್ಲ.

ಅರ್ಜುನನಿಗೆ ಮಡದಿಯಾಗಬಲ್ಲ ಮಗಳನ್ನು ಪಡೆಯಬೇಕೆಂದು ಬಯಸಿದನಂತೆ ಪಾಂಚಾಲರ ದೊರೆ – ದ್ರುಪದ! ಅರ್ಜುನನೇ ದ್ರುಪದನನ್ನು ಕಾಳಗದಲ್ಲಿ ಸೋಲಿಸಿ ಹೆಡೆಮುರಿಗಟ್ಟಿ ತನ್ನ ಗುರು ದ್ರೋಣನ ಕಾಲ ಬಳಿ ಒಗೆದಿದ್ದ! ಈ ದ್ರುಪದ–ದ್ರೋಣರ ದ್ವೇಷ ಮಹಾಭಾರತಯುದ್ಧದ ಕಾರಣಬೀಜಗಳಲ್ಲಿ ಒಂದಾಗಿದೆ.

 

ಕುರುಗಳು ಮತ್ತು ಪಾಂಚಾಲರ ನಡುವಣ ಹಗೆ ಪುರಾತನದಿಂದ ಬಂದುದಾಗಿತ್ತು. ಪಾಂಚಾಲ ದ್ರುಪದ ತನ್ನನ್ನು ತಿರಸ್ಕರಿಸಿದ ಕಾರಣದಿಂದ ಅವನ ವಿರುದ್ಧ ಹಗೆ ಹೊತ್ತ ದ್ರೋಣ; ಕುರುಗಳ ಬಳಿ ಸೇರಿಕೊಂಡ.

ಭೀಷ್ಮನ ನೆರವಿನಿಂದ ಅಸ್ತ್ರವಿದ್ಯೆಯ ಗುರುಕುಲವನ್ನೇ ಕಟ್ಟಿದ. ಕ್ಷತ್ರಿಯರಿಂದಲೇ ಕ್ಷತ್ರಿಯರನ್ನು ಹಣಿಯಬೇಕೆಂದುಕೊಂಡು ಅರ್ಜುನನನ್ನು ಪ್ರಿಯಶಿಷ್ಯನನ್ನಾಗಿ ಸ್ವೀಕರಿಸಿ ಅದ್ಭುತವಾಗಿ ಬೆಳಸಿದ.

 

ಅರ್ಜುನನ ಮೂಲಕ ದ್ರುಪದನನ್ನು ಸೋಲಿನ ಆಳಕ್ಕೆ ತಳ್ಳಿದ. ತೀವ್ರವಾಗಿ ಅಪಮಾನಿತವಾದ ದ್ರುಪದನಿಗೆ ಪ್ರತೀಕಾರದ ಅರ್ಥ ಹೊಳೆಯಿತು! ಕ್ಷತ್ರವಿದ್ಯೆಯಿಂದಲೇ ಈ ಬ್ರಾಹ್ಮಣ ಕ್ಷತ್ರಿಯನಾದ ತನ್ನನ್ನು ಸೋಲಿಸಿದ.

 

ಬ್ರಾಹ್ಮಣರ ವಿದ್ಯೆಯಾದ ಯಜ್ಞಯಾಗಾದಿಗಳಿಂದಲೇ ಈ ಬ್ರಾಹ್ಮಣನನ್ನು ಕೆಡಹುವೆನೆಂದುಕೊಂಡು ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ಪಡೆಯುವ ಯಜ್ಞವನ್ನು ಸಂಕಲ್ಪಿಸಿದ. ಹಾಗೆಯೇ ಅರ್ಜುನನನ್ನು ದ್ರೋಣನಿಂದ ಬೇರ್ಪಡಿಸಿ ತನ್ನವನನ್ನಾಗಿಸುವ ಉಪಾಯಕ್ಕಾಗಿ ಮಗಳನ್ನೂ ಅದೇ ಯಜ್ಞದಿಂದ ಪಡೆಯಬೇಕು ಎಂದುಕೊಂಡ!

 

ಯಜ್ಞಸಂಸ್ಕೃತಿ ಯಾವ ಹಂತಕ್ಕೆ ಬಂದಿತ್ತು! ಬೇಕಾದುದೆಲ್ಲವನ್ನೂ ಪಡೆಯಬಲ್ಲ ಉಪಾಯವೊಂದಿದೆ ಎಂದು ತಿಳಿದರೆ(?), ಬದುಕಿನಲ್ಲಿ ನಿಜಕ್ಕೂ ಪಡೆಯಬೇಕಾದುದೇನು ಎಂಬುದನ್ನೇ ಮರೆಯುವ ಅಪಾಯ ಕೂಡ ಇದೆ.

 

ಇಂಥ ಯಜ್ಞಗಳೆಲ್ಲ ಒಂದು ವ್ಯುತ್ಕ್ರಮ ಎಂದು ಬಲ್ಲವರಿದ್ದರು. ಆದರೆ ಮರದಿಂದ ಬಿದ್ದ ಹಣ್ಣನ್ನು ಹಾಗೇ ಅಂದರೆ ಏನೂ ಶುಚಿಗೊಳಿಸದೆ ತಿಂದವನೊಬ್ಬನಿದ್ದ. ಅವನ ಹೆಸರು – ‘ಯಾಜಿ’. ಬಿದ್ದಹಣ್ಣನ್ನು ತಿನ್ನುವಲ್ಲಿ ತೋರಿದ ಇಷ್ಟು ಸಣ್ಣ ಆತುರ; ಇಷ್ಟು ಸಣ್ಣ ಆಸೆ; ಇಷ್ಟು ಸಣ್ಣ ಎಚ್ಚರಗೇಡಿತನ ಸಾಕು – ಈ ಆಸೆ ಎಷ್ಟು ದೊಡ್ಡದಾಗಿಯೂ ಬೆಳೆಯಬಹುದು! ಇಂಥ ಕೆಲವರು ಸೇರಿ ದ್ರುಪದನ ಯಜ್ಞವನ್ನು ಪೂರೈಸಿದರು.

 

ಹಾಗೆ ಹುಟ್ಟಿ ಬಂದವನು ಧೃಷ್ಟದ್ಯುಮ್ನ. ಅವನ ಒತ್ತಿನಲ್ಲಿ ದ್ರೌಪದೀ. ಕುರುವೃದ್ಧ ಭೀಷ್ಮನಿಗೆ ಮೃತ್ಯುವಾಗಬೇಕೆಂಬ ಆಸೆಹೊತ್ತ ಅಂಬೆಯೂ ದ್ರುಪದನ ಮನೆಯಲ್ಲೇ ಹುಟ್ಟಿದ್ದಳೆಂದು ನೆನೆದರೆ ಈ ಕುರು–ಪಾಂಚಾಲರ ಹಗೆತನ ಹೇಗೆ ಹೊತ್ತಿ ಉರಿಯುತ್ತಿತ್ತು ಎಂದು ತಿಳಿಯುತ್ತದೆ.

 

ಅಚ್ಚರಿ ಎಂದರೆ ಧೃಷ್ಟದ್ಯುಮ್ನ, ಕ್ಷತ್ರಿಯ ವಿದ್ಯೆಗಾಗಿ ದ್ರೋಣನನ್ನೇ ಆಶ್ರಯಿಸಿದ್ದ. ತನಗೆ ಮೃತ್ಯುವಾಗಬಲ್ಲನೆಂದು ತಿಳಿದಿದ್ದರೂ ದ್ರೋಣ, ಧೃಷ್ಟದ್ಯುಮ್ನನಿಗೆ – ದ್ರುಪದನ ಮಗನಿಗೆ – ವಿದ್ಯೆಯನ್ನು ನಿರಾಕರಿಸಲಿಲ್ಲ.  ಇದು ಧರ್ಮಸೂಕ್ಷ್ಮ! ಈ ಹಿನ್ನೆಲೆಯಲ್ಲಿ ನೋಡಿದರೆ ದ್ರೋಣ, ಒಂದರ್ಥದಲ್ಲಿ ತಾನು ಕಲಿಸಿದ ವಿದ್ಯೆಗೆ ತಾನೇ ಬಲಿಯಾದನೆನ್ನಬೇಕು. ಧೃಷ್ಟದ್ಯುಮ್ನನೊಂದು ನೆಪ.

 

ಯಜ್ಞವೆನ್ನುವುದು ಒಂದು ನೆಪ – ಅಷ್ಟೆ. ಆದರೆ, ಯಜ್ಞದಿಂದ ಮಕ್ಕಳನ್ನು ಪಡೆಯುವುದೆನ್ನುವ ಇಂಗಿತ, ಯಾವುದೋ–ಎಂಥದೋ ವಿಜ್ಞಾನ ಬೆಳೆಯುತ್ತಿದೆ, ಮಾನುಷಭಾವ ಅಳಿಸಿಹೋಗುತ್ತಿದೆ, ಇದು ಸ್ವ–ವಿನಾಶದ ಮುನ್ನುಡಿಯಾಗಬಹುದೆನ್ನುವ ಆತಂಕವನ್ನು, ಇದು ಭಾವ–ದಾರಿದ್ರ್ಯ ಎಂಬ ಅರಿವನ್ನು ಬಲ್ಲವರಲ್ಲಿ ಉಂಟುಮಾಡುತ್ತಿತ್ತು. ಪರಿತ್ಯಕ್ತ ಗರ್ಭದ ತುಣುಕುಗಳನ್ನು ತುಪ್ಪದ ಕೊಡಗಳಲ್ಲಿ ಅಕ್ಕರೆಯಿಂದ ಬೆಳೆಸುವುದೆಲ್ಲಿ! ಕೊಲ್ಲಬಲ್ಲ ಮಗನನ್ನು ಪಡೆಯಲೆಂದೇ ಯಜ್ಞ ಮಾಡುವುದೆಲ್ಲಿ!

 

ಕೃಷ್ಣೆ ಹುಟ್ಟಿಬಂದಳು. ದ್ರುಪದನ ಮಗಳಾಗಿ, ಧೃಷ್ಟದ್ಯುಮ್ನನ ತಂಗಿಯಾಗಿ. ಅರ್ಜುನನಿಗೆ ಮೀಸಲಾಗಿ, ಯಾಜ್ಞಸೇನಿಯಾಗಿ! ಕಪ್ಪು ಬಣ್ಣದ ಕಡು ಚೆಲುವೆ – ‘ಶ್ಯಾಮಾ’.

ತಾವರೆ ಎಸಳಿನಂಥ ಕಣ್ಣುಗಳು. ‘ಪದ್ಮಪಲಾಶಾಕ್ಷೀ’, ಕಪ್ಪು ಗುಂಗುರು ಕೂದಲ ರಾಶಿ ಹೊತ್ತವಳು. ‘ನೀಲಕುಂಚಿತ ಮೂರ್ಧಜಾ’. ದ್ರೌಪದಿಯ ಕೇಶರಾಶಿಯನ್ನು ಬಣ್ಣಿಸುವುದಕ್ಕೆ ಮರೆಯುವುದಿಲ್ಲ ವ್ಯಾಸರು! ಕೃಷ್ಣೆ ಹುಟ್ಟಿಬಂದಾಗ ಅಶರೀರವಾಣಿ ಆಗಿತ್ತಂತೆ.

 

‘ಸರ್ವಯೋಷಿದ್ವರಾ ಕೃಷ್ಣಾನಿನೀಷುಃ ಕ್ಷತ್ರಿಯಾನ್‌ ಕ್ಷಯಮ್‌’ – ‘ಸ್ತ್ರೀ ಜನರಲ್ಲೇ ಅತಿ ಶ್ರೇಷ್ಠಳಾದ ಪ್ರಾತಿನಿಧಿಕ ವ್ಯಕ್ತಿತ್ವದ ಈಕೆ ಕ್ಷತ್ರಿಯರನ್ನು ವಿನಾಶದತ್ತ ಒಯ್ಯುವಳು.’ ಇದು ಅಶರೀರವಾಣಿ! ಮಹಾಭಾರತದಲ್ಲೆಲ್ಲ ಮಾತಿನ ನೂರು ಬಗೆಗಳನ್ನು ವ್ಯಾಸರು ಬಳಸುವರು. ಅವೆಲ್ಲ ಸಾಲದೆಂಬಂತೆ ಈ ‘ಅಶರೀರವಾಣಿ’ ಎಂಬ ಭವಿಷ್ಯಸೂಚಕ ಮಾತಿನ ಬಗೆಯೂ ಬಂದಿದೆ. ಅಶರೀರವಾಣಿಗೆ ಹೇಗೆ ಸ್ಪಂದಿಸಬೇಕೆನ್ನುವುದೇ ಒಂದು ಕಲೆ.

 

ಕ್ಷತ್ರಿಯರು ತಮ್ಮ ಹುಟ್ಟಿನಿಂದಲೇ ಮಹಾಯುದ್ಧವೊಂದರಲ್ಲಿ ಪಾಲ್ಗೊಳ್ಳಲೆಂದೇ ಬದುಕುವವರು! ಆದುದರಿಂದ ಕ್ಷತ್ರವಿನಾಶವೆನ್ನುವುದು ಯುಗಧರ್ಮವೇ ಆದಂತಿದೆ. ಈ ಯುಗಧರ್ಮವು ಸಾಧಿತವಾಗುವುದರಲ್ಲಿ ಕೃಷ್ಣೆಯ ಪಾತ್ರವೂ ಮುಖ್ಯವಾದದ್ದೇ ಇರಬಹುದು.

 

ಇದು ದ್ವಾಪರದ ಇತಿಹಾಸದ ಗತಿ. ಆದರೆ ಈ ನಡೆಯ ಇರುಕಿನಲ್ಲಿ ಸಿಲುಕಿದ ದ್ರೌಪದಿ ಅನುಭವಿಸಿದ್ದೆಷ್ಟು! ಕೃಷ್ಣೆ ಅನುಭವಿಸಿದ್ದರಿಂದ ಇನ್ನಿಲ್ಲದಂತೆ ಗಾಸಿಪಟ್ಟುದರಿಂದ ಅದಕ್ಕೆ ಕಾರಣರಾದ ಕ್ಷತ್ರಿಯರು ನಾಶಯೋಗ್ಯರಾದರು. ಕೃಷ್ಣೆಗೆ ತಪ್ಪಿನಡೆಯದೆ ಇರುತ್ತಿದ್ದರೆ ಕ್ಷತ್ರಿಯನಾಶವಾಗುತ್ತಿರಲಿಲ್ಲ.

 

ಈ ಅರ್ಥದಲ್ಲಿ ದ್ರೌಪದಿ, ಎಲ್ಲ ಸ್ತ್ರೀಯರ ಪ್ರತಿನಿಧಿ, ‘ಸರ್ವಯೋಷಿದ್ವರಾ’. ಸ್ತ್ರೀಯರಲ್ಲೆಲ್ಲ ಶ್ರೇಷ್ಠವಾದವಳೆನ್ನುವ ಮಾತಿಗೆ ನಾನು ಹೀಗೆ ಅರ್ಥಮಾಡಬಯಸುವೆ. ವಿದ್ವಾಂಸರು ಮನ್ನಿಸಲಿ.

ಅಶರೀರವಾಣಿಯ ಅರ್ಥವೇನೆಂದರೆ – ವಿನಾಶದತ್ತ ನಡೆಯುತ್ತಿರುವ ಕ್ಷತ್ರಿಯ ಇತಿಹಾಸದ ದುರಂತ ಮಾಧ್ಯಮವಾಗಿ ಕೃಷ್ಣೆ ಬೆಳೆಯುವಳೆಂದು! ಈ ಇತಿಹಾಸ, ಕೃಷ್ಣೆಯನ್ನು ತನ್ನ ಪ್ರಯೋಗಕ್ಕೆ ಒಳಗು ಮಾಡುವುದೆಂದು. ಪ್ರಯೋಗಕ್ಕೆ ಒಳಗಾಗದೆ, ಒಡ್ಡಿಕೊಳ್ಳದೆ ವ್ಯಕ್ತಿತ್ತ್ವವೇ ಸಿದ್ಧಿಸುವುದಿಲ್ಲವೇನೋ.

ಈ ಅರ್ಥದಲ್ಲಿ, ದ್ರೌಪದಿ ಯಜ್ಞಕುಂಡದಲ್ಲಿ ಹುಟ್ಟಿಬಂದವಳೆನ್ನುವುದು, ಬೆಂಕಿಯ ಮಗಳೆನ್ನುವುದು ಬಹಳ ಧ್ವನಿಪೂರ್ಣವಾಗಿ ಕೇಳಿಸುವುದು. ಕೃಷ್ಣೆಗೆ ತಪ್ಪಿ ನಡೆಯದಿರಿ, ಕೆಂಡವನ್ನು ಉಡಿಯಲ್ಲಿ ಕಟ್ಟಿಕೊಳ್ಳದಿರಿ ಎನ್ನುವ ಸರಳವಾದ ಅರ್ಥ ಯಾರಿಗೂ ಕೇಳಿಸಿದಂತೆ ಇಲ್ಲ. ಗೀತೆಯಲ್ಲಿ ಕೃಷ್ಣನ ಮಾತೊಂದು ನೆನಪಾಗುವುದು.

 

‘ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್‌.’ ಅರ್ಜುನನಲ್ಲಿ ಕೃಷ್ಣ ಹೇಳಿದ್ದ – ನೀನು ನನಗೆ ಒಂದು ‘ನಿಮಿತ್ತ’ನಾಗು. ಕಾಲದ ಸಂಹಾರಕ ಶಕ್ತಿ ನನ್ನಲ್ಲಿ ಗರಿಗೆದರುತ್ತಿದೆ. ಅದಕ್ಕೊಂದು ‘ನಿಮಿತ್ತ’ ಬೇಕಾಗಿದೆ. ಆ ‘ನಿಮಿತ್ತ’ ನೀನಾಗು – ಎಂದು.

 

ದ್ರುಪದ, ಅರ್ಜುನನ ಮಡದಿಯಾಗುವ ಮಗಳನ್ನು ಪಡೆಯಬೇಕೆಂದು ಬಯಸಿದುದು, ಕೃಷ್ಣೆ ಹುಟ್ಟಿಬಂದುದು, ಆಗ ಅಶರೀರವಾಣಿಯಾದುದು ಕೃಷ್ಣನ ಮಾತಿಗೆ ಅನ್ಯೋನ್ಯವಾಗಿ ಹೊಂದಿಕೊಳ್ಳುತ್ತಿದೆ. ಅಶರೀರವಾಣಿಯ ಅರ್ಥವಾದುದು ಕೃಷ್ಣನೊಬ್ಬನಿಗೇ ಇರಬೇಕು! ಈ ನೆಲೆಯಲ್ಲಿ ದ್ರೌಪದಿಯ ಪಂಚ–ಪತಿತ್ತ್ವದ ಸಂದರ್ಭವನ್ನು ನೋಡಬೇಕು.

 

ಕೃಷ್ಣೆ ಬೆಳೆಯುತ್ತಿದ್ದಳು. ದ್ರುಪದ ಸ್ವಯಂವರದ ಸಿದ್ಧತೆ ಮಾಡಿದ. ಅವನಿಗೆ ವ್ಯಾಮಿಶ್ರಭಾವ ಕಾಡುತ್ತಿತ್ತು. ಅರಗಿನ ಮನೆಯಲ್ಲಿ ಪಾಂಡವರು ಸುಟ್ಟುರಿದು ಹೋದರೆಂದು ಕೇಳಿದ್ದ. ಆರು ಕರಕಲು ಶವಗಳು ಕೂಡ ನೋಡಸಿಕ್ಕಿವೆಯಂತೆ.

 

ಹಸ್ತಿನೆಯಲ್ಲಿ ಅಪರಕ್ರಿಯೆಗಳನ್ನು ಮಾಡಿದರಂತೆ. ಪಾಂಡುವಿನ ವಂಶವೇ ಮುಗಿದುಹೋಯಿತೆಂದು ಅಳಲಿದರಂತೆ. ಇರಬಹುದೇನೋ. ಆದರೆ ತನ್ನ ಮಗಳು ಕೃಷ್ಣೆ ಅರ್ಜುನನ ಮಡದಿಯಾಗಬೇಕಾದವಳು! ಈ ದ್ವಂದ್ವವನ್ನು ಹೊಂದಿಸುವುದು ಹೇಗೆ?

 

ಅದಕ್ಕಾಗಿ ಸ್ವಯಂವರದ ಜೊತೆಗೆ ಮತ್ಸ್ಯಯಂತ್ರದ ಭೇದನದ ಯೋಜನೆಯನ್ನು ಮಾಡಿದ. ಇದು ಅರ್ಜುನನಂಥ ಅಸಾಧಾರಣ ಬಿಲ್ಗಾರರಿಗೆ ಮಾತ್ರ ಸಾಧ್ಯವಾಗಬಹುದಾದ ಸಾಹಸವಾಗಿತ್ತು. ಮತ್ತು ಅರ್ಜುನ ಬದುಕಿದ್ದರೆ ಅವನನ್ನು ಹುಡುಕಿ ಹಿಡಿಯುವ ತಂತ್ರವೂ ಆಗಿತ್ತು.

 

ಕರ್ಣನಂಥವನು ಸ್ವಯಂವರ ಸಭೆಯಲ್ಲಿ ತನ್ನ ಕೌಶಲವನ್ನು ತೋರಿಸಲು ಎದ್ದುಬಂದಾಗ ತಾನು ಸೂತನನ್ನು ಮದುವೆಯಾಗಲೊಲ್ಲೆನೆಂದು ಹೇಳುವ ಸ್ವಾತಂತ್ರ್ಯವೂ ಕೃಷ್ಣೆಗೆ ಇತ್ತು.

 

ದ್ರುಪದನ ದೂರದ ನಿರೀಕ್ಷೆ ನಿಜವಾಯಿತು. ಬ್ರಾಹ್ಮಣ ವೇಷಾಂತರದಲ್ಲಿದ್ದ ಪಾಂಡವರು ಸ್ವಯಂವರ ಸಭೆಗೆ ಬಂದರು. ಕೃಷ್ಣ–ಬಲರಾಮರೂ ಇತರ ಯಾದವ ಪ್ರಮುಖರೊಡನೆ ಈ ಸಭೆಗೆ ಬಂದಿದ್ದರು. ಮಹಾಭಾರತದಲ್ಲಿ ಕೃಷ್ಣ ಮೊದಲು ಕಾಣಿಸಿಕೊಳ್ಳುವ ಸಂದರ್ಭವಿದು. ಪಾಂಡವರು, ದ್ರೌಪದಿ ಮತ್ತು ಕೃಷ್ಣ – ಈ ಮುಮ್ಮುಖದ ಸಂಬಂಧ ಇಲ್ಲಿಂದ ಬೆಳೆಯತೊಡಗುತ್ತದೆ. ಇದು ಅರ್ಥಪೂರ್ಣ.

 

ಅಶರೀರವಾಣಿಯೇ ದ್ರೌಪದೀ ಸ್ಚಯಂವರಕ್ಕೆ ಕೃಷ್ಣನಿಗೆ ಆಹ್ವಾನಕೊಟ್ಟಿರಬೇಕು! ತನ್ನ ಜೊತೆಗಿನ ಯಾದವ ವೀರರೊಡನೆ ಕೃಷ್ಣ ಹೇಳಿದ್ದ: ‘ಮತ್ಸ್ಯಯಂತ್ರದ ಗೊಡವೆಗೆ ಹೋಗದಿರಿ.

ಸಭೆಯಲ್ಲಿ ನಾವು ಬರಿಯ ಪ್ರೇಕ್ಷಕರಾಗಿ – ಅತಿಥಿಗಳಾಗಿ ಕೂರೋಣ.’ ಯಾವ ಕ್ಷತ್ರಿಯರಿಂದಲೂ ಮತ್ಸ್ಯಯಂತ್ರವನ್ನು ಭೇದಿಸಲಾಗದೆ ಇದ್ದಾಗ ಬ್ರಾಹ್ಮಣ ವೇಷಧಾರಿಯಾಗಿದ್ದ ಅರ್ಜುನ ಮೇಲೆದ್ದುದನ್ನು ಕಂಡು ಪುಲಕಿತನಾಗಿ ಕೃಷ್ಣ ತನ್ನ ಪಕ್ಕದಲ್ಲಿದ್ದ ಬಲಭದ್ರನೊಡನೆ ಹೇಳಿದ್ದ: ‘ಇವನಾರು ಬಲ್ಲೆಯಾ; ನಮ್ಮ ಅತ್ತೆ ಕುಂತಿಯ ಮಗ; ಪಾಂಡವ ಮಧ್ಯಮನಾದ ಅರ್ಜುನ.’

 

ಪಾಂಡವರ ಕಥೆ ಮುಗಿದಿತ್ತೆಂದೇ ಅದುವರೆಗೆ ತಿಳಿದಿದ್ದ ಬಲರಾಮ ಬೆರಗಾಗಿ ಕೃಷ್ಣನ ಮಾತನ್ನು ಸಂದೇಹಿಸಿದಾಗ, ತಾನು ವಸುದೇವನ ಮಗ ಕೃಷ್ಣ ಅಹುದಾದರೆ ಈತನರ್ಜುನ ಎಂದು ಒಳನೋಟದ ಮಾತನ್ನು, ತರ್ಕವನ್ನು ಮೀರಿದ ಮಾತನ್ನು ಕೃಷ್ಣ ಹೇಳಿದ್ದ. ತರ್ಕವನ್ನು ಮಿರಿದ ಮಾತುಗಳನ್ನಾಡುವುದು ಕೆಲವು ಸಂದರ್ಭಗಳಲ್ಲಿ ಕೃಷ್ಣನಿಗೆ ಇಷ್ಟ! ಅರ್ಜುನ ಮತ್ತು ದ್ರೌಪದಿ – ತನ್ನ ಈ ಎರಡು ನಿಮಿತ್ತಗಳು ಮದುವೆಯಾಗುವುದನ್ನು ನೋಡುವ ಸಂತಸಕ್ಕಾಗಿಯೇ ಕೃಷ್ಣ ಬಂದಿದ್ದ. ಮತ್ತು ಕೃಷ್ಣನು ಪ್ರಕಟವಾಗುವುದಕ್ಕೆ ಇದೇ ಸೂಕ್ತವಾದ ಸಂದರ್ಭವೆಂದು – ತನ್ನ ಇತಿಹಾಸ ಗ್ರಂಥದಲ್ಲಿ ಸರಿಯಾಗಿ ವ್ಯಾಸರು ಗ್ರಹಿಸಿದ್ದರು.

 

ಮತ್ಸ್ಯಯಂತ್ರವನ್ನು ಭೇದಿಸಿ ಕೃಷ್ಣೆಯನ್ನು ಗೆದ್ದವನು ಅರ್ಜುನನೆಂದು ತಿಳಿಯಲು ಸಭೆಗೆ ಸ್ವಲ್ಪ ಹೊತ್ತು ಹಿಡಿಯಿತು. ಸ್ವಯಂವರ ಸಭೆಯಲ್ಲಿ ಕಾಳಗವೇ ನಡೆದುಹೋಯಿತು. ಕ್ಷತ್ರಿಯರಲ್ಲಿ ಕಾಳಗ–ಕಲ್ಯಾಣ ಜೊತೆಗೇ ಇರುತ್ತವೆ. ಎದುರಿಸಿದವರನ್ನೆಲ್ಲ ಭೀಮಾರ್ಜುನರು ಸದೆದು, ಸದ್ಯೋವಧೂ ಕೃಷ್ಣೆಯೊಡನೆ ತಾವು ತಂಗಿದ್ದ ಕುಂಬಾರನ ಮನೆಗೆ ಪಾಂಡವರು ಬಂದರು. ದ್ರುಪದಾದಿಗಳಿಗೆ ಇವರು ಪಾಂಡವರೆಂದು ತಿಳಿದು ಎಲ್ಲ ಖಿನ್ನತೆ ಕಳೆದು ಉಲ್ಲಾಸದ ಕೋಡಿ ಹರಿಯಿತು.

 

ಎಲ್ಲ ನಿಜ. ಆದರೆ ಅನೂಹ್ಯವಾದುದೊಂದು ನಡೆಯಲಿತ್ತು. ದ್ರೌಪದಿಯನ್ನು ಗೆದ್ದವನು ಅರ್ಜುನ. ಅವನ ಮಡದಿಯಾಗಬೇಕು –ದ್ರೌಪದಿ. ಇದರಲ್ಲೇನು ವಿವಾದ? ಆದರೆ ಕುಂಬಾರನ ಮನೆಯಲ್ಲಿ ಸೇರಿದ್ದ ಎಲ್ಲರ ನಡುವೆ ಕುಳಿತಿದ್ದಾಗ ಪಾಂಡವರು ನಾಲ್ವರ ಕಣ್ಣೂ ದ್ರೌಪದಿಯ ಮೇಲೆ ತೀವ್ರವಾದ ಲಾಲಸೆಯಿಂದ ನೆಟ್ಟಿದ್ದವು ಎಂಬುದನ್ನು ಹಿರಿಯ ಧರ್ಮಜ ಗುರುತಿಸಿದ. ಸ್ವಯಂ ಧರ್ಮಜನೂ ನಿರ್ಲಿಪ್ತನಾಗಿರಲಿಲ್ಲ.

 

ತಾಯಿ ಕುಂತಿಯೂ ಇದನ್ನು ಗಮನಿಸಿದಳು. ಅನನ್ಯ ಸೂಕ್ಷ್ಮಜ್ಞೆಯಾದ ದ್ರೌಪದಿಗೂ ಈ ಅಂಶ ಮನವರಿಕೆಯಾಗುತ್ತಿತ್ತು; ಪ್ರಾಯಃ ಧರ್ಮಜನಿಗಿಂತಲೂ ಮೊದಲೇ. ಎಲ್ಲರ ಕಣ್ಣುಗಳೂ ದ್ರೌಪದಿಯ ಕಣ್ಣುಗಳನ್ನು ಸಂಧಿಸುತ್ತಿದ್ದುವು. ಎಲ್ಲವೂ ಎಲ್ಲರಿಗೂ ಒಳಗಿಂದಲೇ ತಿಳಿಯುತ್ತಿತ್ತು. ಒಳಗಿನ ಕೆಂಡದ ಬಿಸಿ ಎಲ್ಲೆಡೆ ನಿಧಾನ ಹರಡುತ್ತಿತ್ತು. ವ್ಯಾಸರು ಇದನ್ನು ಸ್ಪಷ್ಟಪಡಿಸುವರು. ಕುಂತಿಗೆ–ಧರ್ಮಜನಿಗೆ ಚಿಂತೆ ಕಾಡಿತು.

ಹೀಗಾದರೆ ತಮ್ಮ ಐಕಮತ್ಯದ ಗತಿ ಏನು? ಪಾಂಡವರ ಮುಂದಿನ ಬಾಳುವೆಗೇ ಅವರ ಐಕಮತ್ಯ ಅಗತ್ಯವಿತ್ತು. ಈಗ ತಾನೇ ಅರಗಿನಮನೆಯ ಬೆಂಕಿಯಿಂದ ಪಾರಾಗಿಬಂದಿದ್ದರು. ಹೆಜ್ಜೆಹೆಜ್ಜೆಗೆ ಅವರಿಗೆ ಅಪಾಯವಿತ್ತು. ಬಲವದ್ವಿರೋಧವಿತ್ತು. ಪಾಂಡವರ ಏಕತೆ ಒಡೆದುಹೋಗುವುದು ದೊಡ್ಡ ಅಪಾಯಕ್ಕೆ ಆಹ್ವಾನವಿತ್ತಂತೆ ಎನ್ನುವುದು ನಿಜವೂ ಆಗಿತ್ತು. ಈ ಎಲ್ಲವನ್ನೂ ಒಪ್ಪೋಣ.

 

ಆದರೆ ದ್ರೌಪದಿಯ ಕಾರಣದಿಂದ ಪಾಂಡವರ ಪ್ರವಾದದಂಥ ಒಗ್ಗಟ್ಟು ಒಡೆಯುವ ಸಂಭವವಿತ್ತೆನ್ನುವುದು, ಅದೂ ಇಂಥ ಅಪಾಯದ ಸೂಕ್ಷ್ಮ ಸನ್ನಿವೇಶದಲ್ಲಿಯೂ ಅದು ಒಡೆಯಬಹುದಿತ್ತೆನ್ನುವುದು ಪಾಂಡವರ ವ್ಯಕ್ತಿತ್ವಕ್ಕೆ ಯಾವ ರೀತಿಯಲ್ಲಿಯೂ ಶೋಭೆ ತರುವ ಮಾತಾಗಲಾರದು ನಿಜ. ಆದರೆ ಅದು ವಾಸ್ತವವಾಗಿತ್ತು. ಹಾಗಾದರೇನು ಮಾಡಬೇಕು? ದ್ರೌಪದಿ ಪಾಂಡವರೈವರ ಪತ್ನಿಯಾಗಬೇಕೇನು? ಸಹಜವಾಗಿ ದ್ರುಪದಾದಿಗಳಿಗೆ ಇದು ಸಮ್ಮತವಾಗಲಾರದು.

 

ಈ ಗಂಟನ್ನು ಬಿಡಿಸುವುದಕ್ಕೆ ಎಲ್ಲ ಜ್ಞಾನಿಗಳೂ ವಿಚಾರವಂತರೂ ಸೇರಿದರು. ಸ್ವಯಂ ವ್ಯಾಸ, ಕೃಷ್ಣ ಅಲ್ಲಿದ್ದರು. ಇವರೆಲ್ಲರೂ ಬಹು ಪತಿತ್ತ್ವದ ಸಂದರ್ಭವನ್ನು ಮಾನ್ಯ ಮಾಡಿದರು. ವ್ಯಾಸರು ಅನೇಕ ಉದಾಹರಣೆಗಳ ಮೂಲಕ ಹಿಂದಿನ ಬಹುಪತಿತ್ತ್ವದ ಸಂದರ್ಭಗಳನ್ನು ವಿವರಿಸಿದರು. ದ್ರೌಪದಿಯ ಗತಜನ್ಮದ ಸಂಗತಿಯನ್ನು ಉಲ್ಲೇಖಿಸಿದರು.

 

ಅಲ್ಲದೆ, ಪಾಂಡವರು ದೇವತೆಗಳ ಅಂಶದಿಂದ ಹುಟ್ಟಿಬಂದವರಾಗಿ, ಆಯಾ ದೇವತೆಗಳ ಸ್ತ್ರೀತತ್ತ್ವಗಳು ದ್ರೌಪದಿಯ ದೇಹದಲ್ಲಿ ಆವಿಷ್ಟವಾಗಿ ಒಂದೇ ಮೈಯಲ್ಲಿ ಐದು ದಾಂಪತ್ಯಗಳ ಸಂದರ್ಭ ಒದಗಿ ಬಂದಿರುವ ವಿಲಕ್ಷಣ ಆಧ್ಯಾತ್ಮಿಕ ಪ್ರಕರಣವಿದು ಎಂಬ ಉಲ್ಲೇಖವನ್ನೂ ಮಹಾಭಾರತ ಮಾಡುವುದು.

ಬಹಳ ವಿಚಾರಗಳನ್ನು ಮಾಡಿದ್ದಾರೆನ್ನುವುದು ನಿಜ. ನಾಗರಿಕತೆ ನಡೆದುಬಂದ ದಾರಿಯ ಚಿತ್ರವನ್ನು ನಿರುದ್ವಿಗ್ನವಾಗಿ ನೋಡಿದ್ದಾರೆನ್ನುವುದೂ ನಿಜ.

 

ಬಹುಪತ್ನೀತ್ವ ಸಮ್ಮತವಾಗುವುದಾದರೆ ಬಹುಪತಿತ್ತ್ವದ ನೆನಪೇಕೆ ಉದ್ವೇಗ ಕಾರಣವಾಗಬೇಕು ಎಂದು ಚಿಂತಿಸಿದ್ದಾರೆನ್ನುವುದೂ ನಿಜ. ಆದರೆ ದ್ರೌಪದಿಯೊಡನೆ ಅವಳ ಅಭಿಮತವನ್ನು ಯಾರೂ ಕೇಳಲಿಲ್ಲ ಎನ್ನುವುದೂ ಅಷ್ಟೇ ನಿಜ. ಅವಳ ಮುಂದೆಯೇ ಈ ಎಲ್ಲ ಮಾತುಕತೆಗಳೂ ನಡೆದುದು ಎನ್ನುವುದೂ ನಿಜ.

ಸೂತನನ್ನು ಮದುವೆಯಾಗಲಾರೆನೆಂದು ಸ್ವಯಂವರದ ಸಭೆಯಲ್ಲಿ ತಾನಾಗಿ ಹೇಳಿದವಳು – ಇಲ್ಲಿ ತನ್ನ ವಿರೋಧವನ್ನು ಸೂಚಿಸಲಿಲ್ಲ ಎನ್ನುವುದೂ ನಿಜ. ಆದರೂ ಅವಳ ಮನದಾಳದಲ್ಲಿ ಏನಿತ್ತು, ಅದು ಈ ಸಂದರ್ಭದಲ್ಲಿ ಯಾರಿಗೂ ತಿಳಿಯದೆಹೋಯಿತು! ಮತ್ಸ್ಯಯಂತ್ರವನ್ನು ಭೇದಿಸಬಹುದು. ಮನಸ್ಸನ್ನು ಭೇದಿಸುವುದು ಅಸಾಧ್ಯ. ಏಕೆಂದರೆ ಅದು ತಾನಾಗಿ ತೆರೆದುಕೊಳ್ಳಬೇಕು!

 

ಕೃಷ್ಣೆ ತನ್ನ ಬಗೆಗಿನ ಪಾಂಡವರ ಆಸಕ್ತಿಯನ್ನು ಅರ್ಥಮಾಡಿಕೊಂಡಳು. ಅವರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಂಡಳು. ಪಾಂಡವರನ್ನು ಒಟ್ಟಾಗಿ ಬಾಳಿಸುವ ಸಂಬಾಳಿಸುವ ಸಂಕಲ್ಪವನ್ನು ಕೃಷ್ಣೆ ಮಾಡಿದಳೆಂದು ಬೆರಗಿನಿಂದ, ಗೌರವದಿಂದ ನಾನು ಭಾವಿಸುವೆ.

 

ತನ್ನನ್ನು ಪಾಂಡವರಿಗಾಗಿ ಪಣ ಇಟ್ಟಳೆಂದು, ಪಾಂಡವರು ತನಗೆ ಸೋತರೆಂದು ಅರಿವಾಗಿ ತನಗೆ ಸೋತವರಿಗಾಗಿ ತನ್ನನ್ನು ಪಣ ಇಟ್ಟಳೆಂದು – ಮಹಾಭಾರತದ ಸಂದರ್ಭಗಳನ್ನು ನೆನೆಯುತ್ತ ನಾನು ಭಾವಿಸುವೆ.

 

ಸೂತನನ್ನು ಮದುವೆಯಾಗಲಾರೆನೆಂದು ದ್ರೌಪದಿ ದೃಢವಾಗಿ ನುಡಿದುದನ್ನು ಕೇಳಿ ಅವಳ ಕಂಠದಿಂದಲೇ ದ್ರೌಪದಿಯ ವ್ಯಕ್ತಿತ್ತ್ವ ಕರ್ಣನಿಗೆ ಅರ್ಥವಾಗಿತ್ತು. ದ್ರೌಪದಿ, ಪಾಂಡವರನ್ನು ಮದುವೆಯಾದಳೆಂದು ಕೇಳಿ, ಹಸ್ತಿನೆಯಲ್ಲಿ ದುರ್ಯೋಧನಾದಿಗಳು ಕಳವಳಗೊಂಡು, ಇದೇ ಕಾರಣವನ್ನು ಹಿಡಿದು ಪಾಂಡವರ ಒಗ್ಗಟ್ಟನ್ನು ಮುರಿಯಲಾದೀತೇ ಎಂದು ಯೋಚಿಸಿದ್ದರು.

 

ಕುಂತೀಪುತ್ರರಿಗೂ ಮಾದ್ರಿಯ ಮಕ್ಕಳಿಗೂ ವೈಮನಸ್ಸು ಉಂಟಾಗುವಂತೆ, ದ್ರುಪದನು ಪಾಂಡವರನ್ನು ಕೈಬಿಡುವಂತೆ, ಅಥವಾ ಪಾಂಚಾಲದಲ್ಲಿಯೇ ಪಾಂಡವರು ಇರುವಂತೆ, ಹಸ್ತಿನೆಗೆ ಬಾರದಂತೆ, ಪಾಂಚಾಲಿಯು ಪಾಂಡವರ ಕುರಿತು ವಿಮನಸ್ಕಳಾಗುವಂತೆ – ಪಂಚಪತಿತ್ತ್ವವನ್ನು ಕೆಡಿಸಬೇಕೆಂದುಕೊಂಡರು.

 

ಆಗ, ಈ ಆಲೋಚನೆಯೇ ಸರಿಯಲ್ಲ ಎಂದವನು ಕರ್ಣ! ‘ದುರ್ಯೋಧನ ತವ ಪ್ರಜ್ಞಾನ ಸಮ್ಸಗಿತಿ ಮೇ ಮತಿಃ’ – ಪಂಚ ಪತಿತ್ತ್ವದ ಕಾರಣವನ್ನಿಟ್ಟುಕೊಂಡು ಪಾಂಚಾಲಿಯ ಮನಸ್ಸನ್ನು ಕೆಡಿಸೋದು ಅಸಾಧ್ಯದ ಮಾತು ಎಂದ.

 

ಏಕೆಂದರೆ ಚಾಂಚಲ್ಯದ ನಡುವೆ ಸಮತೋಲನವನ್ನು ಸಾಧಿಸೋದು ಅವಳಿಗೆ ಗೊತ್ತು ಎಂದ. ಒಬ್ಬ ಗಂಡ – ಒಬ್ಬಳು ಹೆಂಡತಿಯಾದರೆ ಅಲ್ಲಿ ತಾದಾತ್ಮ್ಯದ ಸಾಧನೆ. ಪಂಚಪತಿತ್ತ್ವದಲ್ಲಿಯಾದರೋ ಸೂಕ್ಷ್ಮವಾದ ಸಮತೋಲನ! ದ್ರೌಪದಿ, ನೈಸರ್ಗಿಕ ಶಕ್ತಿಯಿಂದ ತುಂಬಿದವಳು.

 

ನಿಸರ್ಗದಲ್ಲಿ ಭೇದ ಎನ್ನುವುದು, ಚಂಚಲತೆ ಎನ್ನುವುದು, ವೈವಿಧ್ಯ ಎನ್ನುವುದು, ಬಹುತ್ತ್ವ ಎನ್ನುವುದು, ಒಂದು ಜೀವಂತವಾದ ಸಮತೋಲನವನ್ನು ಸಾಧಿಸುವ ಜೀವದ್ರವ್ಯವಾಗಿದೆ. ನಿಮಗಿದು ಅರ್ಥವೇ ಆಗಲಾರದು ಎಂದ.

 

ಕೃಷ್ಣೆ ಬೆಂಕಿಯ ಮಗಳು, ಬೆಂಕಿಯಂಥವಳು, ಆ ಬೆಂಕಿಯಲ್ಲಿ ಪಾಕವಾಗದ ಭಾವವೇ ಇಲ್ಲ. ಅನುಭವವೇ ಇಲ್ಲ ಎಂದ. ತನ್ನನ್ನು ನಿರಾಕರಿಸಿದ ಮಾತಿನಿಂದಲೂ ಮನುಷ್ಯಜೀವ enlighten ಆಗಬಹುದು! ಕರ್ಣ, ಈ ಭಾವವನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಬೇರೆ ಮಾತು.

 

ಪಾಂಡು–ಮಾದ್ರಿಯರ ದುರಂತದ ಸಂದರ್ಭದಲ್ಲಿ ‘ಪೃಥಿವೀ ಗತ ಯೌವನಾ’ ಎನ್ನುವ ಮಾತನ್ನು ವ್ಯಾಸ ಆಡಿದ್ದರು. ಈಗ ಕೃಷ್ಣೆಯ ಪಂಚಪತಿತ್ತ್ವದ ನೆಲೆಯಲ್ಲಿ ‘ಪೃಥಿವೀ ಸಂಪ್ರಾಪ್ತ ಯೌವನಾ’ ಎಂದು ತಮ್ಮಲ್ಲೇ ಹೇಳಿಕೊಂಡಿರಬೇಕು!

 

ದ್ರೌಪದಿ ಈ ಸಂದರ್ಭದಲ್ಲಿ ತನ್ನ ಮನಸ್ಸೇನಿತ್ತು ಎಂದು ಹೇಳಲಿಲ್ಲ ನಿಜ. ಆದರೆ ಅದನ್ನು ತಿಳಿಸದೆ ವ್ಯಾಸರಿಗೆ ನೆಮ್ಮದಿ ಇಲ್ಲ. ದ್ರೌಪದಿಯ ಮನಸ್ಸು ತಿಳಿದುಬರುವುದು ಮಹಾಭಾರತದ ಕೊಟ್ಟಕೊನೆಯಲ್ಲಿ. ಸ್ವರ್ಗಾರೋಹಣ ಪರ್ವದಲ್ಲಿ. ದ್ರೌಪದಿಯ ಕುರಿತು ಇನ್ನೂ ಒಂದು ಕಂತು ಬರೆಯುವೆನಾದರೂ, ಅವಳ ಮನದಾಳವೇನಿತ್ತೆನ್ನುವುದನ್ನು ಈಗಲೇ ತಿಳಿಸುವುದು ಉಚಿತವೆನಿಸುತ್ತದೆ.

 

ತಮ್ಮ ಜೀವಿತದ ಕೊನೆಯಲ್ಲಿ, ಸಂಬಂಧಿಗಳೆಲ್ಲ ಪ್ರೀತಿಪಾತ್ರರೆಲ್ಲ ಅಳಿದುಹೋದಮೇಲೆ, ಯಾದವರೂ ಕೃಷ್ಣನೂ ಈ ಲೋಕವನ್ನು ಬಿಟ್ಟಗಲಿದ ಮೇಲೆ, ಕೃಷ್ಣೆಯ ಸಮೇತ ಪಾಂಡವರು ಹಿಮಾಲಯದತ್ತಣಿಂದ ತಮ್ಮ ಕೊನೆಯ ಪಯಣವನ್ನು – ಮಹಾ ಪ್ರಸ್ಥಾನವನ್ನು – ತೊಡಗುವರು.

ಈ ಲೋಕದ ಬಾಳನ್ನು ಬಾಳಿದ ದೇಹವನ್ನು ಹಿಡಿದುಕೊಂಡೇ ಸ್ವರ್ಗಕ್ಕೆ ಹೆಜ್ಜೆ ಇಡುವರು. ಅದು ಆರೋಹಣ ಪರ್ವ. ಎಲ್ಲರೂ ಏರಬೇಕು. ಏರಲಾರದವರು ಕುಸಿಯುವರು. ಕುಸಿದವರ ಜೊತೆಗೆ ನಿಲ್ಲುವಂತಿಲ್ಲ. ತಮ್ಮ ಪಯಣವನ್ನು ತಾವೇ ಮುಂದುವರಿಸಬೇಕು. ಇದು ಒಬ್ಬರೇ ನಡೆಯುವ, ನಡೆಯಬೇಕಾದ ದಾರಿ. ಹೀಗೆ ಸಾಗುತ್ತಿರಲು – ಏರಲಾರದೆ ದ್ರೌಪದಿ, ಪಂಚವಲ್ಲಭೆ ಮೊದಲು ಕುಸಿಯುವಳು.

 

ಭೀಮ ತನ್ನ ಕೃಷ್ಣೆ ಕುಸಿದುದನ್ನು ನೋಡಿದ. ಇವಳೇಕೆ ಬಿದ್ದಳು ಎಂದು ತನ್ನ ಮುಂದೆ ಇದ್ದ ಧರ್ಮಜನನ್ನು ಕೇಳಿದ. ಇದನ್ನೆಲ್ಲ ನೋಡುತ್ತಿದ್ದ ಧರ್ಮಜ ಹೇಳಿದ: ‘ದ್ರೌಪದಿ ನಮ್ಮೆಲ್ಲರ ಮಡದಿ. ನಮ್ಮೈವರನ್ನೂ ಬಾಳಿಸಿದವಳು. ಎಲ್ಲ ನಿಜ. ಆದರೆ ಅವಳ ಮನದಾಳದಲ್ಲಿದ್ದುದು ಅರ್ಜುನ! ಮತ್ಸ್ಯಯಂತ್ರವನ್ನು ಭೇದಿಸಿ ಕೃಷ್ಣೆಯನ್ನು ಗೆದ್ದ ಅರ್ಜುನನಲ್ಲಿ ಅವಳಿಗೆ ಅಧಿಕವಾದ ಒಲವಿತ್ತು. ಈ ಕಾರಣದಿಂದ ಆ ಒಲವಿನ ಮನ ಒಲವಿನ ದೇಹವನ್ನು  ಹೊತ್ತು ಏರಲಾರದೆ ಹೋದಳು.’

 

ಆರೋಹಣದ ಸತ್ಯಕ್ಕಿಂತ, ಒಲವಿನ ಭಾರದಿಂದ ಕುಸಿದ ಈ ಸತ್ಯ ಕಡಿಮೆ ಬೆಳಕಿನದಲ್ಲ ಎಂದು ನನಗೆ ತೋರುವುದು. ಇರಾವತೀ ಕರ್ವೆಯವರು ತಮ್ಮ ‘ಯುಗಾಂತ್ಯ’ದಲ್ಲಿ ಈ ಸಂದರ್ಭವನ್ನು ವರ್ಣಿಸುತ್ತ, ದ್ರೌಪದಿಯ ಮನಸ್ಸಿನಲ್ಲಿದ್ದುದು ಅರ್ಜುನನಲ್ಲ – ಅದು ‘ಭೀಮಸೇನ’ ಎಂದು ಕೂಗಿ ಹೇಳುವರು!

ಅರ್ಜುನನ ಜಾಗದಲ್ಲಿ ಭೀಮನನ್ನು ಕಲ್ಪಿಸುವರು.

 

ದ್ರೌಪದಿ, ಪಂಚವಲ್ಲಭೆಯಾದುದರಿಂದ ಈ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಯಿತು. ಅರ್ಜುನನಲ್ಲ, ಭೀಮಸೇನ – ದ್ರೌಪದಿಯ ಪ್ರಿಯತಮನೆಂದು ಊಹಿಸುವ ಸ್ವಾತಂತ್ರ್ಯ! ಈ ಊಹೆ ಕಾಣಿಸುವ ಸತ್ಯವೊಂದು ಮಿಗಿಲಾದ ಸತ್ಯ.

( ಕೃಪೆ :- ಲಕ್ಷ್ಮೀಶ T 
 what's app ಅಲ್ಲಿ ಬಂದಿದ್ದು )

ಮುಂದಿನ  ಸಂಚಿಕೆ : ಮತ್ತೊಂದು ವಿಷಯದೊಂದಿಗೆ 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

ಬಾಲಾಕಿ – ಅಜಾತಶತೃ

ಉಪನಿಷತ್ತಿನ ಕಥೆಗಳು
ಬಾಲಾಕಿ – ಅಜಾತಶತೃ

ಉಶೀನಕ ಎಂಬ ದೇಶದಲ್ಲಿ ಬಲಾಕ ಎಂಬ ಬ್ರಾಹ್ಮಣ ಗರ್ಗಗೋತ್ರದವನು; ಅವನ ಮಗನೇ ಬಾಲಾಕಿ ವೇದೋಪನಿಷತ್ತುಗಳ ವಿಚಾರದಲ್ಲಿ ತಂದೆಯನ್ನೇ ಮೀರಿಸಿದ್ದ. ಗರ್ಗಗೋತ್ರದವನಾಗಿದ್ದುದರಿಂದ ಗರ್ಗ್ಯಾ ಬಾಲಾಕಿ ಎಂಬ ಹೆಸರಿನಿಂದಲೇ ಖ್ಯಾತನೆನಿಸಿದ್ದ. ಆತ್ಮತತ್ವದ ಬಗ್ಗೆ ತಾನೇ ಸಕಲ ಲೋಕಗಳಲ್ಲಿಯೂ ಶ್ರೇಷ್ಠನಾದವನು ಎಂಬ ಅಹಂಕಾರವೂ ಇವನಲ್ಲಿ ತುಂಬಿತ್ತು. ಉಶೀನಕ ಇವನ ಹುಟ್ಟೂರು ಆದರೂ ಬಾಲಾಕಿ ಹುಟ್ಟೂರಿನಲ್ಲಿಯೇ ದೀರ್ಘಕಾಲ ಇದ್ದವನಲ್ಲ. ತನ್ನ ವಿದ್ವತ್ ಪ್ರೌಢಿಮೆಯ ಬೆಳಕನ್ನು ಚೆಲ್ಲಾಡಲು ಸದಾ ಊರಿಂದೂರಿಗೆ ಪ್ರವಾಸ ನಡೆಸುತ್ತಲೇ ಇರುತ್ತಿದ್ದ. ಹೀಗೆಯೇ ಮತ್ಯ್ಯ, ಕುರು, ಪಾಂಚಾಲ ಮಿಥಿಲ ಮೊದಲಾದ ರಾಜ್ಯಗಳಲ್ಲಿ ಸುತ್ತಾಡುತ್ತಾ, ತಾನು ಗಳಿಸಿದ್ದ ಆತ್ಮತತ್ವದ ಬೆಳಕನ್ನು ಬೆಳಗುತ್ತಾ,ಕಾಶೀನಗರ ತಲುಪಿದ. ಕಾಶಿ ನಗರದಲ್ಲಿ ಅಜಾತಶತೃ ರಾಜನಾಗಿದ್ದ. ಕೇವಲ ರಾಜನೇ ಅಲ್ಲ ವಿಥಿಲೆಯ ಜನಕ ರಾಜರಂತೆ ಇವನೂ ಸಹ ವೇದೋಪನಿಷತ್ತುಗಳ ವಿಚಾರದಲ್ಲಿ ಪೂರ್ಣ ಪ್ರಜ್ಞತೆಯನ್ನು ಪಡೆದವನಾಗಿದ್ದ. ಇಷ್ಟಾದರೂ ಸರಳ ಸ್ವಭಾವಿ. ತನ್ನ ವಿದ್ವತ್ಪ್ರೌಡಿಮೆಯ ಬಗ್ಗೆ ಬಾಲಾಕ ಒಣಜಂಬದಿಂದಲೇ ಹೇಳಿದ: “ಮಹಾರಾಜಾ, ನಾನು ನಿನಗೆ ಬ್ರಹ್ಮತತ್ವದ ಬಗ್ಗೆ ಉಪದೇಶಿಸಲು ಬಂದಿದ್ದೇನೆ. ಸ್ವೀಕರಿಸಲು ಸಿದ್ಧನಾಗು.”
ರಾಜನಾದ ಅಜಾತಶತೃ ಸದ್ವಿನಯಭಾವದಿಂದಲೇ ಎರಡೂ ಕೈಗಳನ್ನು ಜೋಡಿಸುತ್ತಾ, ವಿನಂತಿಸಿಕೊಂಡ:
“ಬ್ರಾಹ್ಮಣೋತ್ತಮಾ, ನನ್ನನ್ನು ತಾವು ರಾಜರ್ಷಿಯಾದ ಜನಕ ಮಹಾರಾಜನಿಗೆ ನಮ್ಮವನೆಂದೇ ತಿಳಿದು, ಅನುಗ್ರಹಿಸಲು ಬಂದಿರುವುದನ್ನು ಕಂಡು, ಸಂತೃಪ್ತನಾಗಿದ್ದೇನೆ. ತಮ್ಮ ಆಶ್ವಾಸನೆಯ ಆಶೀರ್ವಾದಪೂರ್ವಕದ ಹಾರೈಕೆಯ ಮಾತುಗಳಿಗಾಗಿ ನಾನು ಒಂದು ಸಾವಿರ ಗೋವುಗಳನ್ನು ತಮಗೆ ನೀಡಿ ಪುರಸ್ಕರಿಸುತ್ತೇನೆ. ಕೃಪೆ ಮಾಡಿ ಸ್ವೀಕರಿಸಿ.” ಗರ್ಗ್ಯಾ ಬಾಲಾಕಿ ರಾಜನ ಸೌಜನ್ಯತೆಯನ್ನು ಕಂಡು, ಬೆರಗಾಗಿ ಉಪದೇಶಿಸುತ್ತಾ ಹೇಳಿದ:
“ಮಹಾರಾಜಾ, ಸೂರ್ಯಮಂಡಲದಲ್ಲಿರುವ ಅಂತರ್ಯಾಮಿ ಎನಿಸಿರುವ ಪುರುಷ ಶ್ರೇಷ್ಠನನ್ನು ನಾನು ಉಪಾಸನೆ ಮಾಡುತ್ತೇನೆ.”
ಎರಡೂ ಕಿವಿಕೊಟ್ಟು, ಶ್ರದ್ಧಾಸಕ್ತಿಯಿಂದ ಆಲಿಸುತ್ತಿದ್ದ ರಾಜನಾದ ಅಜಾತಶತೃ ಸವಿನಯದಿಂದಲೇ ತಿಳಿಸಿದ:
“ಮಹಾತ್ಮ ಬೇಡಿ, ಆ ಬಗ್ಗೆ ಏನೂ ಹೇಳಬೇಡಿ. ಆ ಪುರುಷಶ್ರೇಷ್ಠನು ಸರ್ವರಿಗಿಂತಲೂ ಸರ್ವೋತ್ತಮನಾಗಿದ್ದು, ಆತನೇ ಸದಾ ನನ್ನ ಉಪಾಸನೆಯ ಆರಾಧ್ಯದೇವ ಎನಿಸಿದ್ದಾನೆ.”
ಬಾಲಾಕಿ ಈಗ ಮತ್ತೆ ಉಪದೇಶ ರೀತಿಯಲ್ಲಿಯೇ ಹೇಳಿದ:
“ಚಂದ್ರಮಂಡಲದಲ್ಲಿ ಅಂತರ್ಯಾಮಿಯ ರೀತಿಯಲ್ಲಿ ಬ್ರಹ್ಮರೂಪದಲ್ಲಿರುವವನನ್ನು ನಾನು ಸದಾ ಉಪಾಸನೆ ಮಾಡುತ್ತೇನೆ.”
ಅಜಾತಶತೃ ಆಗಲೂ ವಿನಮ್ರತೆಯಿಂದಲೇ ಶಿಷ್ಯಮನೋಭಾವದಲ್ಲಿಯೇ ನುಡಿದ:
“ಆತನಲ್ಲಿಯೇ ಬ್ರಹ್ಮಸ್ವರೂಪಿಯ ರೂಪದಲ್ಲಿ ಆರಾಧಿಸುತ್ತಾ ಪುನೀತನಾಗಿರುವುದರಿಂದ ಈ ಉಪದೇಶಕ್ಕಿಂತಲೂ ಶ್ರೇಷ್ಠವಾದುದನ್ನು ಕೃಪೆ ಮಾಡಿ ತಿಳಿಸಿ.”
ಬಾಲಾಕಿ ಹೇಳಿದ:
“ಯಾವ ವಿದ್ಯುನ್ಮಂಡಲದಲ್ಲಿ ಅಂತರ್ಗತರೂಪದಲ್ಲಿ ಬ್ರಹ್ಮ ಸ್ವರೂಪಿ ಆಗಿರುವನೋ, ಅವನನ್ನು ನಾನು ಆರಾಧಿಸುತ್ತೇನೆ.”
“ಮಹಾತ್ಮಾ, ಆತನನ್ನೇ ನಾನೂ ತೇಜ:ಪುಂಜ ಆತ್ಮನೆಂದು ಭಾವಿಸಿ, ಆರಾಧಿಸುತ್ತಿದ್ದೇನೆ. ಆದ್ದರಿಂದ ಆ ಬಗ್ಗೆಯೂ ಉಪದೇಶದ ರೂಪದಲ್ಲಿ ದಯವಿಟ್ಟು ಏನನ್ನೂ ಪ್ರಸ್ತಾಪಿಸಬೇಡಿ. ಅಂತಹ ಉಪಾಸಕರೇ ಲೋಕದಲ್ಲಿ ತೇಜೋಪೂರಿತರೆನಿಸುವರು.”
ಗಾರ್ಗ್ಯ ಈಗ ರಾಜನಾದ ಆಜಾತ ಶತೃವಿನ ವಾದದ ಮುಂದೆ ಕಳೆಗುಂದತೊಡಗಿದ. ಆದರೂ ಧೃತಿಗೆಡದೆ ವಾಯು,ಅಗ್ನಿ,ಜಲ ಮೊದಲಾದ ನೇತ್ರಾಂತರ್ಗತಪುರುಷನನ್ನೇ ಬ್ರಹ್ಮನೆಂದು ಉಪದೇಶಿಸುತ್ತ ಹೋದ.
ಆದರೆ ರಾಜ ಅವೆಲ್ಲವೂ ಬ್ರಹ್ಮನ ಅಂಶ ಮಾತ್ರ ಎಂಬುದನ್ನು ಸರಳರೂಪವಾಗಿಯೇ ಸಮರ್ಥಿಸುತ್ತಾ ಹೋದ.
ಈಗ ತನ್ನ ಉಪದೇಶಾತ್ಮಕ ವಾದದಲ್ಲಿ ಗಾರ್ಗ್ಯ ಸೋತು, ಸುಣ್ಣ ಆಗತೊಡಗಿದ. ಕಡೆಗೆ ಈ ರಾಜರ್ಷಿಗೇ ಶರಣಾಗಿ, ಆತನನ್ನೇ ತನ್ನ ಗುರುವಿನ ರೂಪದಲ್ಲಿ ಸ್ವೀಕರಿಸಿದ. ತನ್ನನ್ನು ಶಿಷ್ಯನ ರೂಪದಲ್ಲಿ ಸ್ವೀಕರಿಸಲು ಕೇಳಿಕೊಂಡ. ಮೊದಲಿನ ಒಣಜಂಬ ಈಗ ಬಹುಮಟ್ಟಿಗೆ ಕಡಿಮೆ ಆಗಿತ್ತು. ರಾಜನಾದ ಆಜಾತಶತೃ ಆತ್ಮಜ್ಞಾನಿಯೂ, ವಿವೇಕ ಪೂರ್ಣನೂ ಎನಿಸಿದ್ದ. ಕ್ಷತ್ರಿಯನು ಬ್ರಾಹ್ಮಣನನ್ನು ಶಿಷ್ಯನನ್ನಾಗಿ ಸ್ವೀಕರಿಸುವುದು ಆ ಸಮಯದಲ್ಲಿ ಸತ್ ಸಂಪ್ರದಾಯ ಎನಿಸಿರಲಿಲ್ಲ. ಲೋಕಾರೂಢಿಯಲ್ಲಿ ಇಲ್ಲದ ಸಮಸ್ಯಾತ್ಮಕ ಗೊಂದಲಗಳಿಗೆ ವೃಥಾ ಅವಕಾಶ ನೀಡುವ ರೀತಿಯದಾಗಿತ್ತು. ಆದರೂ ವಿವೇಕಿಯಾದ ರಾಜ ಗಾರ್ಗ್ಯ ಬಾಲಾಕಿಯನ್ನು ದೂರದ ಒಂದು ಏಕಾಂತ ಸ್ಥಳಕ್ಕೆ ಕರೆದೊಯ್ದ.
ಅಲ್ಲೊಬ್ಬ ವ್ಯಕ್ತಿ ನಿದ್ರಾವಶತೆಯಲ್ಲಿ ಮಲಗಿದ್ದ ಅವನನ್ನು ಎಬ್ಬಿಸುತ್ತಾ ಅಜಾತಶತೃ ಕರೆದ:
“ಬ್ರಹ್ಮನ್, ಸೋಮರಾಜಾ, ಪಾಂಡರವಾಸಾ...”
ಇಲ್ಲ! ಅವನು ಎದ್ದೇಳಲಿಲ್ಲ. ನಿದ್ರಾವಸ್ಥೆಯಲ್ಲಿಯೇ ಇದ್ದ. ಅವನನ್ನು ಒಂದೆರಳು ಉರುಳು ಉರುಳಿಸುತ್ತಾ ಎಚ್ಚರಗೊಳಿಸಿದ. ಈಗ ಅವನು ನಿದ್ದೆಯಿಂದ ಎದ್ದು ಕುಳಿತ.
ರಾಜ ಅವನತ್ತ ಸಂಕೇತಿಸುತ್ತಾ ಬಾಲಾಕಿಯನ್ನು ಪ್ರಶ್ನಿಸಿದ.
“ಮಿತ್ರಾ, ಇದುವರೆಗೂ ಪ್ರಜ್ಞೆ ಇಲ್ಲದೆ ಮಲಗಿದ್ದ ಇವನಲ್ಲಿನ ವಿಜ್ಞಾನಮಯ ಪುರುಷನು ಇದುವರೆಗೂ ಎಲ್ಲಿಗೆ ಹೋಗಿದ್ದಾ?
ಇವನೆದ್ದ ಕೂಡಲೇ ಮತ್ತೆ ಅವನು ಇವನಲ್ಲಿ ಹೇಗೆ ಬಂದು ಸೇರಿಕೊಂಡ?”
ಈ ರಹಸ್ಯ ಗಾರ್ಗ್ಯನಿಗೆ ಇದುವರೆಗೂ ತಿಳಿದೇ ಇರಲಿಲ್ಲ. ಇದನ್ನು ಈಗ ರಾಜರ್ಷಿಯಾದ ಅಜಾತಶತೃವಿನಿಂದ ತಿಳಿಯುವ ಕುತೂಹಲ ಕೆರಳಿತು.
ಅಜಾತಶತೃ ಸಾವಧಾನವಾಗಿ ಶಿಷ್ಯನಿಗೆ ತಿಳಿಸತೊಡಗಿದ:
“ವ್ಯಕ್ತಿಯ ಹೃದಯದೊಂದಿಗೆ ಹಿತ ಎಂದೇ ಕರೆಯಲ್ಪಡುವ ಆನೇಕ ನಾಡಿಗಳು ಸೇರಿರುತ್ತವೆ. ಇವು ಸೇರಿರುವ ಜಾಗದಿಂದ ದೇಹಾದ್ಯಂತ ಪಸರಿಸಿರುತ್ತವೆ. ಹಾಗೆಯೇ ಪರಮಪುರುಷನಾದ ಪರಬ್ರಹ್ಮ ವ್ಯಕ್ತಿಯ ಶರೀರದಲ್ಲಿರುವ ಹೃದಯದಲ್ಲಿ ನೆಲೆಗೊಂಡಿರುತ್ತಾನೆ. ಪಂಚೇಂದ್ರಿಯಗಳಾದ ಕಣ್ಣು, ಕಿವಿ,ಮೂಗು,ನಾಲಿಗೆ ಮೊದಲಾದವೆಲ್ಲವೂ ಅವನ ಸೇವಕನಂತೆ ಕಾರ್ಯತತ್ಪರತೆಯಲ್ಲಿರುತ್ತದೆ. ಎದ್ದಾಗ ಅವೂ ಮತ್ತೆ ತಮ್ಮ ಕಾರ್ಯಗಳಲ್ಲಿ ತೊಡಗುತ್ತವೆ. ಅಂದರೆ ಪ್ರಾಣವೇ ಹೃದಯಾಂತರಂಗ ಆಗಿರುತ್ತದೆ. ಸಮಸ್ತ ಇಂದ್ರಿಯಗಳೂ ಪ್ರಾಣವನ್ನವಲಂಬಿಸಿದ್ದಾರೆ. ಪ್ರಾಣವು ಆತ್ಮನಲ್ಲಿ ಲೀನವಾಗಿರುತ್ತದೆ. ಇವೆರಡೂ ಆಗ ಏಕೀಭಾವದ ಅವಸ್ಥೆಯಲ್ಲಿರುತ್ತದೆ. ಇದನ್ನೇ ಆತ್ಮತತ್ವ ಎನ್ನುವರು. ಈ ಜ್ಞಾನ ಇಲ್ಲದುದರಿಂದಲೇ ದೇವೇಂದ್ರ ಅಂತಶ್ಯಕ್ತಿಯಿಂದ ವಂಚಿತನಾಗಿದ್ದ. ದಾನವರಿಂದ ಹಲವಾರು ಬಾರಿ ಪರಾಜಿತನೆನಿಸಿದ್ದ. ಇದನ್ನು ಗಳಿಸಿದ ನಂತರವೇ ಅವರನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಪಡೆದ. ಇದೇ ರೀತಿ ಆತ್ಮತತ್ವದ ಅರಿವು ಉಂಟಾದವನಲ್ಲಿ ಬ್ರಹ್ಮತತ್ವದ ರಹಸ್ಯವನ್ನು ತಿಳಿಯಲು ಸುಲಭ ಸಾಧ್ಯ ಆಗುವುದು.

ಮುಂದಿನ  ಸಂಚಿಕೆ : ಮತ್ತೊಂದು ವಿಷಯದೊಂದಿಗೆ 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

ಶ್ರೀ ಕೃಷ್ಣ ಸುಧಾಮನ (ಕುಚೇಲ) ಗಾಢವಾದ ಸ್ನೇಹ

ಭಾಗವತ ಕಥೆಗಳು
1) ಶ್ರೀ ಕೃಷ್ಣ ಸುಧಾಮನ (ಕುಚೇಲ) ಗಾಢವಾದ ಸ್ನೇಹ

ಶ್ರೀ ಕೃಷ್ಣ ಮತ್ತು ಕುಚೇಲ ಒಟ್ಟಿಗೆ ಸಾಂದೀಪ ಮುನಿಯ ಹತ್ತಿರ ಉಜ್ಜಯಿನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಡಿಗೆ ಮಾಡಲು ಸೌದೆ ತರಲು ಅರಣ್ಯಕ್ಕೆ ಹೋದರು. ಕೃಷ್ಣ ಮರ ಹತ್ತಿ ಸೌದೆ ಕಡಿಯುತ್ತಿರುವಾಗ ಆಶ್ರಮದಲ್ಲಿ ಅಮ್ಮ ಕೊಟ್ಟ ಅವಲಕ್ಕಿಯನ್ನು ಎಲ್ಲಾ ಕುಚೇಲ ಒಬ್ಬನೆ ತಿಂದ. ಗುರುಕುಲ ವಾಸದಲ್ಲಿ ಮಾಡಿದ ಮೋಸ. ಇಬ್ಬರು ಗೃಹಸ್ಥಾಶ್ರಮ ಸ್ವೀಕರಿಸಿದರು. ಆದರೆ ಕುಚೇಲನಿಗೆ ಬಹಳ ಬಡತನ. ದೊರೆತ ಅಲ್ಪ ವಸ್ತುವಿನಿಂದಲೇ ಜೀವನ ಸಾಗಿಸುತ್ತಿದ್ದರು. ಸಂತಾನ ಮಾತ್ರ ಸಮೃದ್ಧಿಯಾಗಿತ್ತು. ಶ್ರೀ ಕೃಷ್ಣ ಅವನ ರಾಜಧಾನಿಯಲ್ಲಿ ರಾಜಭೋಗ ಅನುಭವಿಸುತ್ತಿದ್ದ. ಆದರೆ ಅವನ ಸ್ನೇಹಿತ ಕುಚೇಲ ಬಹಳ ಬಡವ, ವಾಸಕ್ಕೆ ಮನೆಯಿಲ್ಲ. ತಿನ್ನಲು ಅನ್ನವಿಲ್ಲ. ಮನೆ ತುಂಬ ಮಕ್ಕಳು ಕುಚೇಲನ ಹೆಂಡತಿ ಶ್ರೀ ಕೃಷ್ಣನನ್ನು ಕಂಡು ಬರಲು ಒತ್ತಾಯ ಮಾಡುತ್ತಿದ್ದಳು. ಒಂದು ಸಾರಿ ಕುಚೇಲ ತನ್ನ ಸ್ನೇಹಿತ ಶ್ರೀ ಕೃಷ್ಣನನ್ನು ಕಾಣಲು ಹೊರಟ. ಶ್ರೀ ಕೃಷ್ಣನು ಕುಚೇಲನನ್ನು ನಗರದ ಹೆಬ್ಬಾಗಿಲಿನಿಂದ ಪಲ್ಲಕ್ಕಿಯಲ್ಲಿ ಕರೆ ತಂದ. ಅವನನ್ನು ದ್ವಾರಕಾವತಿಯಲ್ಲಿ ತಾನೇ ಪಲ್ಲಕ್ಕಿ ಹೊತ್ತಿಕೊಂಡು ಅರಮನೆಯಲ್ಲಿಳಿಸಿ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಅವನಿಗೆ ಉಪಹಾರ ಮಾಡಿಸಿದ. ನನಗೆ ಏನು ತಂದಿದ್ದೀಯ ಕೊಡು ಎಂದು ಕೃಷ್ಣ ಕೇಳುತ್ತಾನೆ. ಅರಮನೆಯ ವೈಭವದಲ್ಲಿ ಹೆಂಡತಿ ಕೊಟ್ಟ ಅವಲಕ್ಕಿ ಹಳೆಬಟ್ಟೆಯಲ್ಲಿ ಕಟ್ಟಿದ್ದನ್ನು ತೆಗೆಯಲು ಅಂಜಿಕೆ ಆಯಿತು. ಆಗ ಕೃಷ್ಣನೇ ಬಗಲಲ್ಲಿರುವ ಅವಲಕ್ಕಿ ಗಂಟನ್ನು ಎಳೆದ.

ಆ ಅವಲಕ್ಕಿ ಅರಮನೆಯ ತುಂಬಾ ಚೆಲ್ಲಿತು. ಶ್ರೀ ಕೃಷ್ಣನೆ ಆ ಅವಲಕ್ಕಿಯನ್ನು ಆರಿಸಿಕೊಂಡು ತಿಂದು ಬಹಳ ಚೆನ್ನಾಗಿದೆ ಎಂದು ತೇಗಿದ. ಕುಚೇಲ ತಾನು ಬಂದಿರುವ ಉದ್ದೇಶವನ್ನೇ ಮರೆತ. ದರಿದ್ರನಾದರೂ ಮತ್ತೊಬ್ಬರನ್ನು ಬೇಡುವುದು ಅವನಿಗೆ ಹಿಡಿಸುತ್ತಿರಲಿಲ್ಲ. ಕುಚೇಲ ತನ್ನ ಊರಿನ ಕಡೆ ಸಂತೋಷದಿಂದ ಹೊರಟ. ಶ್ರೀ ಕೃಷ್ಣನು ಏನೂ ಕೊಡಲಿಲ್ಲ. ಕುಚೇಲ ಏನನ್ನು ಕೇಳಲಿಲ್ಲ. ಕುಚೇಲ ತನ್ನ ಮನೆ ಹತ್ತಿರ ಹೋಗುತ್ತಾನೆ. ಅವನ ಗುಡಿಸಲು ಪತ್ತೆ ಇಲ್ಲ. ಆಶ್ಚರ್ಯವಾಯಿತು. ಆ ಸ್ಥಳದಲ್ಲಿ ಅರಮನೆಯಿದೆ. ಒಳಗಿನಿಂದ ಕುಚೇಲನ ಹೆಂಡತಿ ರೇಷ್ಮೆ ಸೀರೆ ಧರಿಸಿ ಪತಿಯ ಪಾದ ತೊಳೆಯಲು ಬಂದಳು. ಇವೆಲ್ಲಾ ಅವನಿಗೆ ಆಶ್ಚರ್ಯ.

ಹಿಂದೆ ವಿದ್ಯಾಭ್ಯಾಸದ ಕಾಲದಲ್ಲಿ ಸಾಂದೀಪ ಮುನಿ ಆಶ್ರಮದಲ್ಲಿ ಕಟ್ಟಿಗೆ ತರಲು ಹೋದಾಗ ಶ್ರೀ ಕೃಷ್ಣನಿಗೆ ಕೊಡದೆ ಅವಲಕ್ಕಿ ತಿಂದಿದ್ದರಿಂದ ಕುಚೇಲನಿಗೆ ದರಿದ್ರ ಬಂದಿತ್ತು. ಆ ಅವಲಕ್ಕಿಯನ್ನು ತನ್ನ ಹರಕು ಬಟ್ಟೆಯಲ್ಲಿ ಕಟ್ಟಿಕೊಂಡು ಶ್ರೀ ಕೃಷ್ಣನಿಗೆ ಕೊಟ್ಟಿದ್ದು ಅವನು ಹಿಂದೆ ತಿಂದ ಅವಲಕ್ಕಿಯ ಪಾಪ ನಿವಾರಣೆ ಆಯಿತು. ಆಗ ಕುಚೇಲನೂ ತೃಪ್ತಿ ಹೊಂದಿದ. ಯಾರ ವಸ್ತುವನ್ನು ಕದಿಯಬಾರದು. ಕದ್ದರೆ ಆ ಪಾಪವನ್ನು ಜೀವನದಲ್ಲಿ ಬಹುದಿವಸ ಅನುಭವಿಸಬೇಕಾಗುತ್ತದೆ. ನೀನು ಎಷ್ಟು ಕೊಡುತ್ತೀಯೋ ಅದರ ಹತ್ತರಷ್ಟು ನಿನಗೆ ಬರುತ್ತದೆ. ಕೊಡುವುದರಲ್ಲಿ ಶಾಂತಿ-ಸುಖ-ಆನಂದ ಇದೆ. ಮತ್ತೊಬ್ಬರ ವಸ್ತುವನ್ನು ಪಡೆಯುವುದರಲ್ಲಿ  ದುಃಖ ಅಶಾಂತಿ ಇರುತ್ತದೆ.
🌺🌺🌺🌺🌺🌺🌺🌺🌺🌺🌺🌺🌺

2) ಅಧ್ಯಯನವಿಲ್ಲದೆ ವಿದ್ಯೆಯಿಲ್ಲ
ಯುವಕ್ರೀಧನೆಂಬ ಋಷಿಪುತ್ರನು 

ಆಲಸ್ಯದಿಂದಾಗಿ ವೇದಶಾಸ್ತ್ರಗಳ ಅಧ್ಯಯನ ಮಾಡುತ್ತಿರಲಿಲ್ಲ. ಅದರಿಂದ ಅವನ ತಂದೆಗೆ ಬಹಳ ದುಃಖವಾಗುತ್ತಿತ್ತು, ಏಕೆಂದರೆ ಅವರ ಸ್ನೇಹಿತರ ಮಕ್ಕಳೆಲ್ಲ ಮಹಾನ ವಿದ್ವಾಂಸರಾಗಿ ರಾಜ ಮಹಾರಾಜರ ಗೌರವಾದರಗಳಿಗೆ ಪಾತ್ರರಾಗಿದ್ದರು. ತಂದೆಯು ಬುದ್ಧಿವಾದವನ್ನು ಹೇಳಿದಾಗ ಯುವಕ್ರೀಧನು ತನ್ನ ತಂದೆಯ ಸ್ನೇಹಿತರ ಮಕ್ಕಳನ್ನು ನೋಡಿ ಅಸೂಯೆ ಪಟ್ಟನು. ತಾನೂ ದೊಡ್ಡ ಪಂಡಿತನಾಗಿ ತೋರಿಸುತ್ತೇನೆ ಎಂದು ನಿರ್ಧರಿಸಿದನು. ಆದರೆ ಗುರುಗಳ ಬಳಿ ಹೋಗಿ ಗುರುಸೇವೆಯನ್ನು ಮಾಡಿ ಅಧ್ಯಯನ ನಡೆಸಲು ಅವನಿಗೆ ಇಷ್ಟವಿರಲಿಲ್ಲ. ದೀರ್ಘಾವಧಿಯ ಅಧ್ಯಯನ ಮಾಡದೆ ಸುಲಭ ರೀತಿಯಲ್ಲಿ ಮಹಾಪಂಡಿತನಾಗಬೇಕೆಂದು ಅವನ ಬಯಕೆಯಾಗಿತ್ತು. ಅದಕ್ಕಾಗಿ ಗಂಗಾತೀರದಲ್ಲಿ ಕುಳಿತು ಘೋರ ತಪಸ್ಸನ್ನು ಮಾಡತೊಡಗಿದನು. ದೇವಲೋಕದ ಒಡೆಯನಾದ ಇಂದ್ರನು ಇದನ್ನು ತಿಳಿದು ಯುವಕ್ರೀಧನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಮಾರುವೇಷಧರಿಸಿ ಒಬ್ಬ ಮುದಿ ಬ್ರಾಹ್ಮಣನಾಗಿ ಬಂದು ಗಂಗಾತೀರದಲ್ಲಿ ಯುವಕ್ರೀಧನ ಸಮೀಪ ಕುಳಿತುಕೊಂಡು ಒಂದೊಂದೇ ಹಿಡಿ ಉಸುಕನ್ನು ನದಿಯಲ್ಲಿ ಹಾಕಲು ಪ್ರಾರಂಭಿಸಿದನು.

ಬಹಳ ಹೊತ್ತಿನಿಂದ ಅವನು ಮಾಡುತ್ತಿದ್ದ ವ್ಯರ್ಥ ಚಟುವಟಿಕೆಯನ್ನು ಕಂಡು ಯುವಕ್ರೀಧನು ಕುತೂಹಲ ತಾಳಲಾಗದೆ ‘ನೀನೇನು ಮಾಡುತ್ತಿದ್ದೀಯಾ?’ ಎಂದು ಕೇಳಿದನು. ನ’ದಿಗೆ ಅಣೆಕಟ್ಟು ಕಟ್ಟ ಬೇಕಾಗಿದೆ, ಅದಕ್ಕಾಗಿ ಉಸುಕನ್ನು ಹಾಕಿ ನದಿಯ ಪ್ರವಾಹವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇನೆ’ ಎಂದು ವೇಷಧಾರಿ ಇಂದ್ರನು ಉತ್ತರಿಸಿದನು.

‘ಸಾವಿರಾರು ವರ್ಷಗಳ ಪ್ರಯತ್ನ ನಡೆಸಿದರೂ ಗಂಗಾಪ್ರವಾಹವನ್ನು ಈ ಹಿಡಿ ಉಸುಕಿನಿಂದ ತಡೆಯಲಾರೆ. ಹುಚ್ಚು ಸಾಹಸವನ್ನು ತೊರೆದು ಬಿಡು’ ಎಂದು ಯುವಕ್ರೀಧನು ಬುದ್ಧಿವಂತನಂತೆ ಮುದುಕನಲ್ಲಿ ಹೇಳಿದನು. ಆಗ ಮುದಿ ಬ್ರಾಹ್ಮಣನು, ‘ಏನೂ ಅಧ್ಯಯನ ಮಾಡದೇ, ಬರೀ ತಪಸ್ಸನ್ನು ಮಾಡಿ ನೀನು ಸ್ವಲ್ಪಕಾಲದಲ್ಲಿ ಮಹಾಪಂಡಿತನಾಗಬಹುದಾದರೆ, ಹಿಡಿ ಮಣ್ಣಿನಿಂದ ಅಣೆಕಟ್ಟನ್ನು ಕಟ್ಟುವುದು ನನಗೇಕೆ ಅಸಾಧ್ಯವಾಗಬೇಕು?’ ಎಂದು ಯುವಕ್ರೀಧನನ್ನೇ ಪ್ರಶ್ನಿಸಿದನು. ತನ್ನ ತಪಸ್ಸಿನ ಉದ್ದೇಶದ ಕುರಿತು ಹೇಳಿದ ಮಾತುಗಳನ್ನ ಕೇಳಿದಾಗ ಯುವಕ್ರೀಧನಿಗೆ ಜ್ಞಾನೋದಯವಾಯಿತು. ತನ್ನ ಕೃತಿಯೇ ನಿರರ್ಥಕವೆಂದೆನಿಸಿತು, ನಾಚಿಕೆಯಾಯಿತು. ಮುದಿ ಬ್ರಾಹ್ಮಣನಲ್ಲಿ ಶರಣಾದನು. ಬಳಿಕ ಯೋಗ್ಯ ಗುರುವನ್ನು ಹುಡುಕಿಕೊಂಡು ಹೋದನು.

ನಾಳೆ : ಮತ್ತೊಂದು ವಿಷಯದೊಂದಿಗೆ 

ಹಿಂದಿನ ಕಥೆಗಳಿಗಾಗಿ ಈ ಲಿಂಕ್ ಮೂಲಕ  page ಹೋಗಿ ನೋಡಿ, ಸುಮಾರು ಕಥೆಗಳು ಸಿಗುತ್ತವೆ 👇👇👇

https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸೋಣ  ]

ತೀರ್ಥಯಾತ್ರೆಯ ಫಲ

ತೀರ್ಥಯಾತ್ರೆಯ ಫಲ
 
 ಒಮ್ಮೆ ಗಂಗಾನದಿಗೆ ಪುಷ್ಕರವು ಬಂದಾಗ ಅದೆಷ್ಟೋ ಜನ ಭಕ್ತರು ನದಿಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನವನ್ನು ಪಡೆದುಕೊಂಡರು. ಹಲವರು ಪುಷ್ಕರಕಾಲವು ಮುಗಿಯುವವರೆಗೆ ವಾರಣಾಸಿಯಲ್ಲೇ ಇದ್ದು ನದಿಯಲ್ಲಿ ಸ್ನಾನ ಮಾಡುತ್ತಾ ಪ್ರತಿನಿತ್ಯ ವಿಶ್ವನಾಥನ ದರ್ಶನವನ್ನು ಪಡೆದು ಪಾವನರಾದರು. ಪುಷ್ಕರವು ಮುಗಿದ ನಂತರ ಒಂದು ದಿನ ರಾತ್ರಿ ಮಲಗಿಕೊಂಡಿದ್ದಾಗ ಒಬ್ಬ ಪೂಜಾರಿಗೆ ಒಂದು ಕನಸು ಬಿತ್ತು.  ಆ ಕನಸಿನಲ್ಲಿ ಇಬ್ಬರು ದೊಡ್ಡ ವ್ಯಕ್ತಿಗಳು ಮಾತನಾಡಿಕೊಳ್ಳುತ್ತಿರುವುದನ್ನು ಅವನು ಕಂಡ. ಮೊದಲನೆಯವನು, "ಪುಷ್ಕರಕ್ಕೆ ಎಷ್ಟು ಜನ ಕಾಶಿಗೆ ಬಂದಿರಬಹುದು" ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಎರಡನೆಯವನು, "ಆರು ಲಕ್ಷಕ್ಕೂ ಹೆಚ್ಚು ಜನ ಬಂದಿರಬಹುದು. ಆದರೆ ಯಾರ ಯಾತ್ರೆಯೂ ಕಂಚಿ ಪಟ್ಟಣದ ವೀರಯ್ಯ ಎನ್ನುವ ಚರ್ಮಕಾರನದಷ್ಟು ಶ್ರೇಷ್ಠದಾದುದಲ್ಲ" ಎಂದು ಹೇಳಿದನು.
 ಪೂಜಾರಿಗೆ ಥಟ್ಟನೇ ಎಚ್ಚರವಾಯಿತು. ಏನು ವೀರಯ್ಯ ಎನ್ನುವ ಚರ್ಮಕಾರನು ಕಾಶಿಗೆ ಬಂದಿದ್ದನೆ? ಚಪ್ಪಲಿಗಳನ್ನು ಹೊಲೆದು ಜೀವಿಸುವವರಾರೂ ಇಲ್ಲಿಗೆ ಬಂದಂತೆ ಕಾಣಲಿಲ್ಲವಲ್ಲ. ಅಂತಹ ಮಹಾನ್ ಭಕ್ತನಾಗಿದ್ದರೆ ಅವನ ಕುರಿತು ನನಗೆ ತಿಳಿಯದೇ ಇರುತ್ತದೆಯೇ? ಇಷ್ಟು ದಿನಗಳಲ್ಲಿ ಯಾವಾಗಲಾದರೂ ಬಂದು ಹೋಗಿರಬಹುದೇ? ಹೀಗೆ ಎಷ್ಟು ಆಲೋಚಿಸಿದರೂ ಆ ಪೂಜಾರಿಗೆ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅವನ ಮನಸ್ಸಿಗೆ ಸಮಾಧಾನವುಂಟಾಗಲಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಆ ವೀರಯ್ಯ ಎನ್ನುವ ಚರ್ಮಕಾರನನ್ನು ಭೇಟಿಯಾಗಲೇ ಬೇಕೆಂದು ಅವನು ನಿರ್ಧರಿಸಿದ. 
ಮನಸ್ಸಿನಲ್ಲಿ ಆ ಆಲೋಚನೆ ಬಂದದ್ದೇ ತಡ ಆ ಪೂಜಾರಿ ಕಾಶಿಯಿಂದ ಪಯಣವನ್ನಾನರಂಭಿಸಿ ಕೆಲವು ದಿನಗಳಲ್ಲಿಯೇ ಕಂಚಿ ಪಟ್ಟಣವನ್ನು ಸೇರಿದ. ಅದು ಹೇಗೋ ಕಷ್ಟಪಟ್ಟು ವೀರಯ್ಯನ ವಿವರಗಳನ್ನು ತಿಳಿದುಕೊಂಡ ಪೂಜಾರಿ ನೇರವಾಗಿ ಅವನ ಮನೆಯ ಬಾಗಿಲಿಗೇ ಹೋದ. ತನ್ನ ಕುತೂಹಲವನ್ನು ಹತ್ತಿಕ್ಕಿಕೊಳ್ಳಲಾಗದೇ ಕಾಶಿ ಯಾತ್ರೆಯ ವಿವರಗಳನ್ನು ತನಗೆ ತಿಳಿಸುವಂತೆ ಪೂಜಾರಿಯು ವೀರಯ್ಯನನ್ನು ಕೇಳಿದ. ಪೂಜಾರಿಯ ಮಾತುಗಳನ್ನು ಕೇಳಿ ವೀರಯ್ಯನಿಗೆ ಆಶ್ಚರ್ಯವಾಯಿತು, "ಸ್ವಾಮಿ ಅಸಲಿಗೆ ನಾನು ಕಾಶಿ ಯಾತ್ರೆಯನ್ನೇ ಕೈಗೊಳ್ಳಲಿಲ್ಲ, ಇನ್ನು ಅದರ ವಿವರಗಳನ್ನು ಹೇಗೆ ಹೇಳಲಿ?" ಎಂದನು. ಆಗ ಪೂಜಾರಿ ತನ್ನ ಸ್ವಪ್ನ ವೃತ್ತಾಂತವನ್ನು ಹೇಳಿದಾಗ ವೀರಯ್ಯನು ಆನಂದಪರವಶನಾಗಿ, "ಕಳೆದ ಇಪ್ಪತ್ತು ವರ್ಷಗಳಿಂದ ಚಪ್ಪಲಿಗಳನ್ನು ಹೊಲೆದು ಗಳಿಸಿದ ಹಣದಲ್ಲಿ  ಸ್ವಲ್ಪ ಹಣವನ್ನು ಉಳಿಸಿಟ್ಟುಕೊಂಡಿದ್ದೆ. ಹಾಗೆ ಕೂಡಿಟ್ಟ ಹಣದಿಂದ ಈ ವರ್ಷ ಗಂಗಾನದಿ ಪುಷ್ಕರ ಸಮಯದಲ್ಲಿ ಕಾಶಿ ವಿಶ್ವೇಶ್ವರನನ್ನು ದರ್ಶನ ಮಾಡಬೇಕೆಂದುಕೊಂಡಿದ್ದೆ. ಆದರೆ, ಒಂದು ದಿನ ಪಕ್ಕದ ಮನೆಯಿಂದ ಬಂದ ಅಡುಗೆಯ ಪರಿಮಳ ನನ್ನ ಚಿಕ್ಕ ಮಗಳನ್ನು ಆಕರ್ಷಿಸಿತು. ಆಕೆ ಅವರು ಮಾಡಿದ ತಿನಿಸು ತನಗೆ ಬೇಕೆಂದು ಹಠಹಿಡಿದಳು. ಅವಳನ್ನು ಸಮಾಧಾನ ಪಡಿಸಲು ಪಕ್ಕದ ಮನೆಗೆ ಹೋಗಿ ಅವರು ಮಾಡಿದ ಪದಾರ್ಥವನ್ನು ಸ್ವಲ್ಪ ಕೊಡುವಂತೆ ಬೇಡಿಕೊಂಡೆ. ಆ ಮನೆಯವರು ತಾವು ಒಂದು ವಾರದಿಂದ ಆಹಾರವಿಲ್ಲದೆ ಹಸಿವೆಯಿಂದ ಬಳಲುತ್ತಿದ್ದೇವೆಂದೂ, ಗತ್ಯಂತರವಿಲ್ಲದೆ ಆಹಾರಕ್ಕಾಗಿ ಒಂದು ಸತ್ತ ಕತ್ತೆಯ ಮಾಂಸವನ್ನು ಬೇಯಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಅದನ್ನು ಕೇಳಿ ನನಗೆ ಹೃದಯ ಹಿಂಡಿದಂತಾಯಿತು. ನಾನು ಕಾಶಿಯಾತ್ರೆಗಾಗಿ ಕೂಡಿಸಿಟ್ಟುಕೊಂಡಿದ್ದ ಹಣವನ್ನು ಅವರಿಗೆ ಅನ್ನ ಮತ್ತು ವಸ್ತ್ರಗಳಿಗಾಗಿ ಉಪಯೋಗಿಸಿಕೊಳ್ಳಲು ಕೊಟ್ಟುಬಿಟ್ಟೆ. ಹಾಗಾಗಿ ನನಗೆ ಕಾಶಿಯಾತ್ರೆ ಮಾಡಲಾಗಲಿಲ್ಲ. ಮತ್ತೊಮ್ಮೆ ಹಾಗೆ ಧನವನ್ನು ಕೂಡಿಟ್ಟುಕೊಂಡು ಯಾತ್ರೆ ಮಾಡಲಾಗದೆಂದು ಭಯಪಟ್ಟಿದ್ದೆ. ಆದರೆ  ಭಗವಂತನ ಕೃಪಾಕಟಾಕ್ಷವು ನನಗೆ ಲಭಿಸಿದೆ ಎಂದು ನೀವು ಹೇಳಿದ ಮೇಲೆ ಅದಕ್ಕಿಂತ ಬೇರೆ ಸೌಭಾಗ್ಯ ಬೇಕೆ?" ಎಂದು ಹೇಳಿ ಆ ಪೂಜಾರಿಯ ಕಾಲಿಗೆ ಸಾಷ್ಟಾಂಗವೆರಗಿದನು. ವಿಷಯವನ್ನು ತಿಳಿದುಕೊಂಡ ಪೂಜಾರಿ ಚರ್ಮಕಾರ ವೀರಯ್ಯನ ತ್ಯಾಗ ಗುಣಕ್ಕೆ ಮಾರುಹೋದನು. 
ಈ ಕತೆಯ ಸಾರವನ್ನು ತಿಳಿದುಕೊಂಡು ಎಲ್ಲರೂ ಇದನ್ನು ಆಚರಣೆಯಲ್ಲಿಡುವ ಪ್ರಯತ್ನ ಮಾಡಿದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ? ಈ ಕಥೆ ನಡೆದ ಕಾಲಮಾನಕ್ಕಿಂತ ಈಗ ತೀರ್ಥಯಾತ್ರೆ ಮಾಡುವುದು ಬಹಳ ಸುಲಭವಾಗಿದೆ. ಇತ್ತೀಚೆಗೆ ಕಾಲು ಕೆಳಗಿಡದೆ ಕಾರುಗಳಲ್ಲಿ, ರೈಲುಗಳಲ್ಲಿ, ವಿಮಾನಗಳಲ್ಲಿ ಆರಾಮವಾಗಿ ಕುಳಿತು ಹೋಗುವ ವ್ಯವಸ್ಥೆ ಇರುವುದರಿಂದ ಎಲ್ಲರೂ ಯಾತ್ರೆಗಳನ್ನು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ. ಆದರೆ ಒಂದು ಯಾತ್ರೆಗಾಗುವ ಖರ್ಚನ್ನಾದರೂ ಒಬ್ಬ ಬಡ ಕುಟುಂಬಕ್ಕೆ ಸಹಾಯ ಮಾಡುವುದಕ್ಕಾಗಲಿ ಅಥವಾ ಒಂದಿಬ್ಬರು ಅನಾಥ ಬಾಲಕರ ಓದಿಗಾಗಿ ದಾನವಾಗಿ ಕೊಟ್ಟರೆ ಎಷ್ಟೋ ಒಳಿತಾಗುತ್ತದೆ. ಏಕೆಂದರೆ, ಮಾನವ ಸೇವೆಯೇ ಮಾಧವ ಸೇವೆ ಎಂದು ನಂಬುವ ಸಂಸ್ಕೃತಿ ನಮ್ಮದು. 
ಇನ್ನೊಂದು ವಿಷಯವನ್ನೂ ಸಹ ನಾವು ಗಮನಿಸಬೇಕು. ಸಾಮಾನ್ಯವಾಗಿ ಯಾತ್ರೆಯ ಸಮಯದಲ್ಲಿ ನಿತ್ಯಕೃತ್ಯಗಳಾದ ಸ್ನಾನ, ಪೂಜೆ, ಸಂಧ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಅನುಕೂಲವಾಗುವುದಿಲ್ಲ. ಆದ್ದರಿಂದ ತೀರ್ಥಯಾತ್ರೆಗಳ ಸಂಖ್ಯೆಯನ್ನು ಪರಿಮಿತಗೊಳಿಸಿಕೊಳ್ಳುವುದೊಳಿತು. 
ತೀರ್ಥಯಾತ್ರೆಯಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದು ಶ್ರದ್ಧಾ ಭಕ್ತಿಗಳು. ದೊಡ್ಡಸ್ತಿಕೆಯನ್ನು ತೋರಿಸಲೋ, ಸುಮ್ಮನೆ ಕಾಲಕ್ಷೇಪಕ್ಕೋ ಅಥವಾ ಎಲ್ಲರೊಂದಿಗೆ ಸೇರಿ ತಿರುಗಬಹುದೆನ್ನುವ ಆಸೆಯಿಂದಲೋ ಕೈಗೊಳ್ಳುವ ಯಾತ್ರೆಗಳು ಫಲವನ್ನು ಕೊಡುವುದಿಲ್ಲ. " "ಭಕ್ತಿ ಶಿವನ ಮೇಲೆ ಚಿತ್ತ ಚಪ್ಪಲಿ ಮೇಲೆ" ಎನ್ನುವ ಗಾದೆ ಮಾತು ಸುಮ್ಮನೇ ಹುಟ್ಟಿಕೊಂಡಿಲ್ಲ. ಭಕ್ತಿಯಿಂದ ತೀರ್ಥಯಾತ್ರೆ ಮಾಡುವುದು, ಕರುಣೆಯಿಂದ ಇತರರಿಗೆ ಸಹಾಯ ಮಾಡುವುದು, ಭಗವಂತನು ಸರ್ವಾಂತರಯಾಮಿ ಎನ್ನುವ ನಂಬಿಕೆಗಳು ಮೋಕ್ಷದಾಯಕವಾಗಿವೆ. 

ಕೃಪೆ : what's app ಯಲ್ಲಿ ಬಂದಿದ್ದು 
ಇದನ್ನು ಬರೆದವರಿಗೆ 🙏🙏🙏🙏

ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

ಅರಣ್ಯಪರ್ವದ ನೇರಳೆ ಹಣ್ಣಿನ ಕಥೆ

ವ್ಯಾಸಭಾರತದಲ್ಲಿಲ್ಲದ ಅನೇಕ ಕಥೆಗಳು ಕುಮಾರವ್ಯಾಸನ ಭಾರತದಲ್ಲಿವೆ. ಅದರಲ್ಲಿ ಅರಣ್ಯಪರ್ವದ ನೇರಳೆ ಹಣ್ಣಿನ ಕಥೆಯೂ ಒಂದು.
🍇🍇🍇🍇🍇🍇🍇🍇🍇🍇🍇🍇🍇🍇🍇

ಪಾಂಡವರು ವನವಾಸದಲ್ಲಿದ್ದ ಕಾಲದಲ್ಲಿ ಜೇಷ್ಠಮಾಸ ಬಂದಿತು. ಆಗ ದ್ರೌಪದಿಗೆ ಏನಾದರೂ ದಾನ ಮಾಡಬೇಕೆನ್ನಿಸಿತು. 

ಆ ಮಾಸದಲ್ಲಿ ನೇರಳೆ ಹಣ್ಣಿನ ದಾನ ಶ್ರೇಷ್ಠ ಎಂದು ಋಷಿಗಳೊಬ್ಬರು ಹೇಳಿದರು. ಹಾಗಾದರೆ ಒಂದಷ್ಟು ನೇರಳೆ ಹಣ್ಣುಗಳನ್ನು ತಂದುಕೊಡಬೇಕೆಂದು ಭೀಮಸೇನನಿಗೆ ಕೇಳಿಕೊಂಡಳು. ಆಯ್ತು ಎಂದು ಆತ ನೇರಳೆ ಹಣ್ಣು ಹುಡುಕಲು ನಡೆದ.

ಹೀಗೆ ಹುಡುಕುತ್ತ ಕಣ್ವರ ಆಶ್ರಮದ ಹತ್ತಿರ ಒಂದು ನೇರಳೆ ಮರವನ್ನು ಕಂಡ. ಹಣ್ಣುಗಳು ಸುರಿಯಬೇಕಾಗಿದ್ದ ಕಾಲದಲ್ಲಿ ಆ ಮರದಲ್ಲಿ ಒಂದೇ ಹಣ್ಣು ಆಗಿದೆ! ಅದೂ ಹಲಸಿನ ಹಣ್ಣಿನಷ್ಟು ದೊಡ್ಡದು! ಭೀಮ ಅದುವರೆಗೂ ಅಂಥ ಹಣ್ಣನ್ನೇ ಕಂಡಿದ್ದಿಲ್ಲ. 

ದಾನಕ್ಕೆ ಇದೇ ಸರಿಯಾದ ಫಲವೆಂದು ಅದನ್ನು ಕಿತ್ತುಕೊಂಡು ಬಂದ. ಎಲ್ಲರೂ ಅದನ್ನು ಕಂಡು ಆಶ್ಚರ್ಯಪಟ್ಟರು. ಧರ್ಮರಾಜ ಈ ಹಣ್ಣಿನ ವಿಶೇಷವೇನು ಎಂದು ತ್ರಿಕಾಲಜ್ಞಾನಿಯಾದ ಸಹದೇವನನ್ನು ಕೇಳಿದ. 

ಆತ ಹೇಳಿದ,  ಅಣ್ಣಾ, ನೀನು ಈ ಹಣ್ಣನ್ನು ತಂದು ತಪ್ಪು ಮಾಡಿದ್ದೀಯಾ. ಇದು ಕೇವಲ ಮಹರ್ಷಿ ಕಣ್ವರಿಗಾಗಿ ಸೃಷ್ಟಿಯಾದ ಹಣ್ಣು. ಅವರು ಇಡೀ ವರ್ಷದಲ್ಲಿ ತಿನ್ನುವುದು ಇದನ್ನು ಮಾತ್ರ. ನಂತರ ಮತ್ತೆ ಒಂದು ವರ್ಷ ಧ್ಯಾನದಲ್ಲಿರುತ್ತಾರೆ. 

ಈಗ ಅವರು ಧ್ಯಾನವನ್ನು ಮುರಿದು ಹಣ್ಣು ತಿನ್ನಲು ಎಚ್ಚರಗೊಳ್ಳುವ ಸಮಯ. ಅವರಿಗೆ ತಿನ್ನಲು ಹಣ್ಣು ಸಿಗದಿದ್ದರೆ ಮತ್ತೊಂದು ವರ್ಷ ಉಪವಾಸ. ಹಣ್ಣು ಕಾಣದೇ ಅವರು ಶಾಪ ನೀಡಬಹುದು. ಅವರು ಎಚ್ಚರಗೊಳ್ಳುವ ಮೊದಲೇ ಇದನ್ನು ಮರಕ್ಕೆ ಅಂಟಿಸಿಬಿಡಬೇಕು. ಇಲ್ಲವಾದರೆ ಆಪತ್ತು ತಪ್ಪಿದ್ದಲ್ಲ .

ಕಿತ್ತಿದ್ದ ಹಣ್ಣನ್ನು ಮರಕ್ಕೆ ಜೋಡಿಸುವುದು ಹೇಗೆ? ಸಮಸ್ಯೆ ಬಂದಾಗಲೆಲ್ಲ ಪರಿಹಾರಕನಾದ ಶ್ರೀಕಷ್ಣನೇ ತಾನೇ ದಾರಿತೋರುವವನು? ಅವನೇ ಓಡಿಬಂದ. 

ಅವನ ಪರಿಹಾರ ಮಾರ್ಗಗಳು ತುಂಬ ಅಪರೂಪವಾದವು. ಆತ ಎಲ್ಲರನ್ನೂ ಕೂಡ್ರಿಸಿಕೊಂಡು ಹೇಳಿದ,  ನೀವೆಲ್ಲರೂ ಒಬ್ಬೊಬ್ಬರಾಗಿ ನಿಮ್ಮ ಮನದಾಳದ ಅತ್ಯಂತ ಪ್ರಮುಖ ಚಿಂತನೆಯನ್ನು ನನಗೆ ತಿಳಿಸಬೇಕು. 

ಅದು ಪ್ರಾಮಾಣಿಕವಾಗಿರಬೇಕು ಮತ್ತು ನಿಮಗೆ ಮಾತ್ರ ತಿಳಿದಿರಬೇಕು. ಹಾಗೆ ಹೇಳಿದಾಗ ಹಣ್ಣು ನೆಲದಿಂದ ಹಂತ ಹಂತವಾಗಿ ಮೇಲೆದ್ದು ಮರಕ್ಕೆ ಸೇರಿಕೊಳ್ಳುತ್ತದೆ .

ಮೊದಲು ಧರ್ಮರಾಜ ಬಂದ. ಧರ್ಮವೇ ನನ್ನ ಜೀವದುಸಿರು. ಅದು ಬಿಟ್ಟು ಬೇರೆ ಭಾವವಿಲ್ಲವೆಂದ. ಹಣ್ಣು ನೆಲಬಿಟ್ಟು ಒಂದಡಿ ಮೇಲೇರಿತು. 

ಭೀಮ,  ನನಗೆ ಅಭಿಮಾನವೇ ಮುಖ್ಯ. ವಂಶದ ಮೇಲೆ ಮತ್ತು ನಿನ್ನ ಮೇಲೆ ನನ್ನ ಅಭಿಮಾನ ಅಳತೆಗೆ ಮೀರಿದ್ದು  ಎಂದ. ಹಣ್ಣು ಮತ್ತೆ ಒಂದಡಿ ಮೇಲೆ ಸಾಗಿತು. 

ಅರ್ಜುನ,  ದೇವಾ, ನಿನ್ನ ಸಾಮೀಪ್ಯವೇ ನನಗೆ ಮೋಕ್ಷ  ಎಂದ. ಹಣ್ಣು ಮತ್ತಷ್ಟು ಮೇಲೇರಿತು. 

ನಕುಲ ತನ್ನ ಜೀವನದ ಉದ್ದೇಶವೇ ಸತ್ಯ ಮತ್ತು ಸತ್ಯಪಾಲನೆ ಎಂದ. ಹಣ್ಣು ಮತ್ತೆ ತೊಟ್ಟು ಸೇರಲು ಎರಡಡಿ ಮಾತ್ರ ಉಳಿಯಿತು. ಸಹದೇವ ತನ್ನ ಮೂಲ ಸ್ವಭಾವ ಕೇವಲ ಜ್ಞಾನ, ದಯೆ ಮತ್ತು ಶಾಂತಿ ಎಂದ. ತೊಟ್ಟಿಗೆ ಹಣ್ಣು ಅಂಟಲು ಕೇವಲ ಒಂದಡಿ ಉಳಿದಿತ್ತು. 

ಆಗ ಬಂದಳು ದ್ರೌಪದಿ. ಕಷ್ಣನ ಕಾಲಿಗೆರಗಿ ತನ್ನ ಕಣ್ಣೀರಿನಿಂದ ಅವನ ಪಾದ ತೊಳೆದಳು,  ಪ್ರಭೂ, ನಿನಗೆ ಗೊತ್ತಿಲ್ಲದ ವಿಷಯ ಯಾವುದಿದೆ? ಆದರೂ ಹೇಳಿಸಿ ನನ್ನ ಮನಸ್ಸನ್ನು ಶುಚಿಗೊಳಿಸಬಯಸಿದ್ದೀಯಾ? ಹೇಳುತ್ತೇನೆ ಕೇಳು. 

ನಾನು ಮನುಷ್ಯ ದೇಹದಿಂದ ಬಂದವಳಲ್ಲ, ಅಗ್ನಿಕುಂಡದಿಂದ ಎದ್ದು ಬಂದವಳು. ಆದ್ದರಿಂದ ಸಾಮಾನ್ಯ ಮಹಿಳೆಯರಿಗಿರುವ ದೈಹಿಕ ದೌರ್ಬಲ್ಯಗಳು ನನಗಿಲ್ಲ.

 ನನ್ನನ್ನು ಗೆದ್ದವನು ಅರ್ಜುನ ಆದರೂ ವಿಧಿಯ ಲೀಲೆಯಂತೆ ಐವರನ್ನು ಮದುವೆಯಾಗಬೇಕಾಯಿತು. 

ಬ್ರಹ್ಮನ ವರದಂತೆ ನಾನು ಒಬ್ಬೊಬ್ಬರೊಡನೆ ಸೇರಿದಾಗ ನನ್ನಲ್ಲಿದ್ದ ಒಬ್ಬ ದೇವತೆ ಜಾಗ್ರತಳಾಗುತ್ತಿದ್ದಳು. ನನ್ನೊಳಗಿದ್ದ ಶಚಿದೇವಿಗೆ ಅರ್ಜುನ ಪತಿಯಾದ, 

ಶ್ಯಾಮಲೆಗೆ ಧರ್ಮರಾಜ, 

ಭಾರತೀದೇವಿಗೆ ಭೀಮಸೇನ, 

ಉಷಾದೇವಿಗೆ ನಕುಲಸಹದೇವರು ಜೊತೆಯಾದರು. 

ಆದರೆ ನನ್ನಲ್ಲಿದ್ದ ಪಾರ್ವತಿಯ ಅಂಶಕ್ಕೆ ಪತಿ ಯಾರಾದರೂ ಇದ್ದರೆ ಚೆನ್ನಾಗಿತ್ತು ಎನ್ನಿಸಿದ್ದುಂಟು. 

ನನಗೆ ಐವರು ಪತಿಗಳಿದ್ದಾರೆ. ಆದರೆ ಮನಸ್ಸಿನಲ್ಲಿ ಆರು ಜನರಿದ್ದಾರೆ ಏನು ಮಾಡಲಿ?  ಎಂದಳು. ಥಟ್ಟನೇ ಹಣ್ಣು ತೊಟ್ಟು ಸೇರಿತು.

ಇದು ಒಂದು ಉಪಕಥೆ. ಆದರೆ ಅದರ ಹಿಂದಿನ ಚಿಂತನೆ ದೊಡ್ಡದು. ಜೀವನದ ಉತ್ಕಟ ಕ್ಷಣಗಳಲ್ಲಿ ನಮ್ಮ ಆಂತರ್ಯವನ್ನು ಬಗೆದು ನೋಡುವುದು ಒಳ್ಳೆಯದು. 

ನಮ್ಮ ಜೊತೆಗೇ ಇರುವವರಿಗೆ ತಿಳಿಯದಂತಹ, ನಮ್ಮ ಗಮನದಿಂದಲೇ ಮರೆಯಾಗಿ ಹೃದಯದ ಮೂಲೆಯಲ್ಲಿ ಅವುಚಿ ಕುಳಿತಿರುವ ಕೆಲವು ಅಗಮ್ಯ ವಿಷಯಗಳಿವೆ. 

ಅವನ್ನು ಆಗಾಗ ಬರಿದು ಮಾಡಿದಾಗ ಚೈತನ್ಯ ಶುದ್ಧಿಯಾಗಿ ನಡತೆ ಪುಟವಿಟ್ಟ ಚಿನ್ನದಂತಾಗುತ್ತದೆ.

ಕೃಪೆ : what's app ನಲ್ಲಿ ಬಂದಿದ್ದು 
ಬರೆದವರಿಗೆ 🙏🙏🙏

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

ಗೆಜ್ಜೆ ವಸ್ತ್ರಗಳ ಮಾಹಿತಿ

ಯಾರೋ ಕೆಳಿದ್ದರು ಗೆಜ್ಜೆ ವಸ್ತ್ರಗಳ ಮಾಹಿತಿ ಅವರಿಗಾಗಿ 

ಗೌರಿ- ಗಣೇಶನ ಹಬ್ಬಕ್ಕೆಂದೇ ಮಾರುಕಟ್ಟೆಯಲ್ಲಿತರಾವರಿ ಗೆಜ್ಜೆ ವಸ್ತ್ರಗಳು ಬಂದಿವೆ. ಗೆಜ್ಜೆವಸ್ತ್ರದ ಗಣಪತಿ, ಗೆಜ್ಜೆವಸ್ತ್ರ ಮಂಟಪ, ಗೆಜ್ಜೆವಸ್ತ್ರ ಮಂದಾಸನಗಳು ಮಾರುಕಟ್ಟೆಗೆ ಬಂದಿರುವುದು ಹಬ್ಬದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಾಮಾನ್ಯವಾಗಿ ಗೌರಿಗೆ ಹದಿನಾರು ಎಳೆ ಹಾಗೂ ಗಣಪನಿಗೆ ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರಗಳು ಇದುವರೆಗೆ ಕಳೆಕಟ್ಟುತ್ತಿದ್ದವು. ಆದರೆ ಈ ಬಾರಿ ಗೆಜ್ಜೆವಸ್ತ್ರವೇ ಅಲಂಕಾರದ ಕಾನ್ಸೆಪ್ಟ್‌ ಆಗಿ ರೂಪುಗೊಂಡಿರುವುದು ವಿಶೇಷ. 

16 ಎಳೆಯ ದಾರದ 16 ಗೆಜ್ಜೆ ಇರುವ ಗೆಜ್ಜೆವಸ್ತ್ರವನ್ನು ಗೌರಿ ಪೂಜೆಗೆ ಬಳಸಿಕೊಳ್ಳಲಾಗುತ್ತದೆ. ಹಾಗೆಯೇ 21ಗೆಜ್ಜೆ ಇರುವ 21 ಎಳೆಯ ಗೆಜ್ಜೆ ವಸ್ತ್ರವನ್ನು ಗಣೇಶನ ಪೂಜೆಗೆ ಬಳಸುತ್ತಾರೆ. ವಿಷ್ಣುವಿನ ಪೂಜೆಗೆ 24 ಎಳೆಯನ್ನು ಬಳಸುತ್ತಾರೆ. 

ದೇವಿಪೂಜೆಗೆ ಅರಿಶಿನ ಹಚ್ಚಿದ ಗೆಜ್ಜೆವಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ. ಗುಲಾಬಿ ಬಣ್ಣ ಅಥವಾ ಸಿಂಧೂರ (ಕೇಸರಿ) ಬಣ್ಣದವುಗಳೂ ಬಳಕೆಯಲ್ಲಿವೆ. ಮಿನುಗುವ ಕಾಗದಗಳನ್ನು ಬಳಸಿ ಗೆಜ್ಜೆ ವಸ್ತ್ರಗಳನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿರುತ್ತಾರೆ. ಅವುಗಳು ಅಲಂಕಾರಕ್ಕೆ ಮತ್ತಷ್ಟು ಮೆರಗು ನೀಡುತ್ತವೆ. ಅವುಗಳನ್ನು ಕೂಡಾ ಬಳಸಿಕೊಳ್ಳಬಹುದು. 

ಮಾಮೂಲಿ ಪೂಜೆಯಲ್ಲಿಸಾಮಾನ್ಯವಾಗಿ ಎರಡು ಎಳೆಯ ಗೆಜ್ಜೆ ವಸ್ತ್ರವನ್ನು ಬಳಸಿಕೊಳ್ಳುತ್ತೇವೆ. ಪುರುಷ ದೇವರಿಗೆ ಅರಿಶಿನ ಹಾಗೂ ದೇವಿಯರಿಗೆ ಕುಂಕುಮದ ಗೆಜ್ಜೆ ವಸ್ತ್ರವನ್ನು ಬಳಸಲಾಗುತ್ತದೆ. 

ನಿತ್ಯ ಪೂಜೆಗೆ 2 ಎಳೆಯ ಗೆಜ್ಜೆ ವಸ್ತ್ರ. 
*ಪುರುಷ ದೇವರಿಗೆ ಅರಸಿನ, ದೇವತೆಗಳಿಗೆ ಕುಂಕುಮ ಬಣ್ಣದ್ದು. 

*ಗೌರಿ ಪೂಜೆಗೆ ಬೇಕು 16 ಎಳೆಯ ಗೆಜ್ಜೆ ವಸ್ತ್ರ. 

ಕೃಪೆ :::ಮುಖಪುಟ ಸಂಗ್ರಹ ಲೇಖನ 

ಸರ್ವ ಜನ ಸುಖಿನೋಭವಂತು

ಮಕ್ಕಳಿಗೆ ಪರಿಚಯಿಸಿ

ಮಕ್ಕಳಿಗೆ ಪರಿಚಯಿಸಿ
🙏☘🙏💐

ಕರೋನಾ ರಜೆ ಕಳೆಯಲು ಕೆಲವು ಮಾಹಿತಿಗಳು.
ಟಿವಿ ಧಾರಾವಾಹಿ ನೋಡಿ ಪಾತ್ರಗಳ ಹೆಸರು ನೆನಪಿಡುವುದು ಕಷ್ಟ ಸಾಧ್ಯ. ಅದಕ್ಕೇ ನಮ್ಮ ಸ್ನೇಹಾತರು ಕಳುಹಿಸಿದ ರಾಮಾಯಣದ ಪಾತ್ರಗಳ ಪರಿಚಯ ಪ್ರಶ್ನೋತ್ತರ ಮಾಲಿಕೆಯಲ್ಲಿ. 

1. ರಾಮಚಂದ್ರನ ವಂಶ ಯಾವುದು ?

ಉತ್ತರ – ಸೂರ್ಯವಂಶ, ರಘುವಂಶ, ಇಷ್ವಾಕು ವಂಶ

2. ರಾಮಚಂದ್ರನ ತಾಯಿ ಯಾರು?

ಉತ್ತರ – ಕೌಸಲ್ಯೆ

3. ರಾಮಚಂದ್ರನಿಗೆ ಹೆಣ್ಣು ಕೊಟ್ಟ ಜನಕರಾಜನ ಹೆಸರೇನು?

ಉತ್ತರ – ಸೀರಧ್ವಜ

4. ಜನಕರಾಜನ ರಾಜ್ಯ ಯಾವುದು?

ಉತ್ತರ – ಮಿಥಿಲಾನಗರ / ವಿಧೇಹರಾಜ್ಯ

5. ರಾಮನ ರಾಜ್ಯ ಯಾವುದು?

ಉತ್ತರ – ಅಯೋಧ್ಯೆ

6. ಜನಕರಾಜನ ಸಹೋದರನ ಹೆಸರೇನು?

ಉತ್ತರ – ಕುಶಧ್ವಜ

7. ದಶರಥನ ಮಕ್ಕಳು ಮತ್ತು ಸೊಸೆಯರ ಹೆಸರೇನು?

ಉತ್ತರ – ರಾಮ – ಸೀತೆ, ಲಕ್ಷ್ಮಣ – ಊರ್ಮಿಳೆ

ಭರತ – ಮಾಂಡವಿ        ಶತ್ರುಜ್ಞ – ಶ್ರುತಕೀರ್ತಿ

8. ದಶರಥನ ಮೂರು ಮುಖ್ಯ ಪತ್ನಿಯರು ಯಾರು?

ಉತ್ತರ – ಕೌಸಲ್ಯೆ, ಸುಮಿತ್ರ, ಕೈಕೇಯಿ

9. ದಶರಥನು ಯಾವ ಯಾಗ ಮಾಡಿದನು?

ಉತ್ತರ – ಪುತ್ರಕಾಮೇಷ್ಠಿ ಯಾಗ

10. ಆ ಯಾಗ ಯಾರು ಮಾಡಿಸಿದರು?

ಉತ್ತರ – ಋಷ್ಯಶೃಂಗ ಋಷಿ.

11. ದಶರಥನ ಪುತ್ರಕಾಮೇಷ್ಟಿ ಯಾಗ ಮಾಡಿಸಿದವರು ಅವನಿಗೆ ಏನಾಗಬೇಕು?

ಉತ್ತರ : ದಶರಥನ ಮಗಳು ಶಾಂತಾಳ ಪತಿ

12. ಅಲ್ಲಿ ಅಗ್ನಿದೇವ ನೀಡಿದ ಪಾಯಸವನ್ನು ಯಾವ ಪ್ರಮಾಣದಲ್ಲಿ ಹಂಚಿದನು?

ಉತ್ತರ – ಕೌಸಲ್ಯೆಗೆ ಅರ್ಧಭಾಗ, ರಾಣಿ ಸುಮಿತ್ರಾ ಕಾಲುಭಾಗ ಸೇವಿಸಿ ಮತ್ತು ರಾಣಿ ಕೈಕೇಯಿ ಉಳಿದ ಕಾಲುಭಾಗದಲ್ಲಿ ಸ್ವಲ್ಪ ಸೇವಿಸಿ ಮತ್ತೊಮ್ಮೆ ಎರಡನೇ ಬಾರಿಗೆ ಪಾಯಸ ಸೇವಿಸಲು ಸುಮಿತ್ರಾಳಿಗೆ ಮಡಕೆಯನ್ನು ನೀಡಿದರು. ಈ ರೀತಿಯಲ್ಲಿ ಪಾಯಸವನ್ನು ಹಂಚಿಕೊಂಡಿದ್ದರಿಂದ, ಹೆಚ್ಚು ಭಾಗವನ್ನು ಸೇವಿಸಿದ ರಾಣಿ ಕೌಸಲ್ಯ ಶ್ರೀ  ರಾಮನಿಗೆ ಜನ್ಮ ನೀಡಿದರು. ರಾಣಿ ಕೈಕೇಯಿ ಭರತನಿಗೆ ಜನ್ಮ ನೀಡಿದರು ಮತ್ತು ಎರಡು ಬಾರಿ ಪಾಯಸ ಸೇವಿಸಿದ ರಾಣಿ ಸುಮಿತ್ರಾ ಲಕ್ಷ್ಮಣ ಮತ್ತು ಶತ್ರುಘ್ನರಿಗೆ ಜನ್ಮ ನೀಡಿದರು.

13. ದಶರಥನ ಮಂತ್ರಿ ಯಾರು?

ಉತ್ತರ – ಸುಮಂತ

14. ದಶರಥನ ಕುಲ ಪುರೋಹಿತರಾರು?

ಉತ್ತರ – ವಸಿಷ್ಠರು

15. ಕೈಕೇಯಿ ದಶರಥನಿಗೆ ಯಾವ ವರ ಕೇಳಿದಳು ?

ಉತ್ತರ – ರಾಮನನ್ನು 14 ವರ್ಷ ವನವಾಸ ಕಳಿಸಿ ಭರತನಿಗೆ ಪಟ್ಟಾಭಿಷೇಕ ಮಾಡಬೇಕು

16 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?

ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ;  ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂರಕ್ಷಣೆ, ಪ್ರದ್ಯುಮ್ನ ಅನಿರುದ್ಧ ರೂಪಗಳು.

17. ರಾಮಚಂದ್ರನ ಜನ್ಮದಿನ, ನಕ್ಷತ್ರ ಯಾವುದು?

ಉತ್ತರ – ಚೈತ್ರ ಶುಕ್ಲ ನವಮಿ, ಪುನರ್ವಸು ನಕ್ಷತ್ರ  , ಬುಧವಾರ

18. ಬಾಲಕ ರಾಮನನ್ನು ತನ್ನ ಜೊತೆ ಕಳಿಸೆಂದು ಕೇಳಿದ ಋಷಿಗಳು ಯಾರು?

ಉತ್ತರ – ವಿಶ್ವಾಮಿತ್ರ

19. ರಾಮಚಂದ್ರನು ಮೊದಲು ಕೊಂದಿದ್ದು ಯಾರನ್ನು?

ಉತ್ತರ – ತಾಟಕಿಯನ್ನು

20. ರಾಮನ ಬಾಣದ ಗುರಿಗೆ ನೂರಾರು ಮೈಲಿ ದಾಟಿ ಬಿದ್ದವನಾರು?

ಉತ್ತರ – ಮಾರೀಚ

21. ದಶರಥನು ಯಾರ ಅವತಾರ?

ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.

22. ಕೇಸರಿ ಮತ್ತು ಅಂಜನಿ ಯಾರ ಅವತಾರ?

ಉತ್ತರ : ಕೇಸರಿಯು ಮರುತ್ ದೇವತೆಯ ಅವತಾರ ಮತ್ತು ಅಂಜನಿಯು ಪುಂಜಕಸ್ಥಲೀ ಎಂಬ ಅಪ್ಸರೆಯ ಅವತಾರ.

23.  ಯಾವ ಯಾವ ದೇವತೆಗಳು ಯಾವ ಯಾವ ವಾನರಾದಿ ರೂಪದಿ ಅವತರಿಸಿದರು?

ಉತ್ತರ : ಬೃಹಸ್ಪತಿ – ತಾರ,   ಚಂದ್ರ – ಅಂಗದ; ಶಚೀದೇವಿ – ತಾರೆ
ಯಮ – ಜಾಂಬವಂತ ;   ವರುಣ – ಸುಷೇಣ;

ಅಶ್ವಿನಿ ದೇವತೆಗಳು – ಮೈಂದ ವಿವಿಧ. ;

ಅಗ್ನಿ – ನೀಲ ;  ವಾಲಿ – ಇಂದ್ರ; ಸುಗ್ರೀವ – ಸೂರ್ಯ

24. ಭರತ, ಲಕ್ಷ್ಮಣ, ಶತ್ರುಜ್ಞರ ಮೂಲ ರೂಪ ಯಾವುದು?

ಉತ್ತರ – 
ಭರತನು ಕಾಮನ ಅವತಾರ, ಲಕ್ಷ್ಮಣನು ಆದಿ ಶೇಷನ ಅವತಾರ, ಶತ್ರುಜ್ಞನು ಅನಿರುದ್ಧನ ಅವತಾರ.

25 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?

ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ;  ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂರಕ್ಷಣೆ, ಪ್ರದ್ಯುಮ್ನ ಅನಿರುದ್ಧ ರೂಪಗಳು

26. ರಾಮಚಂದ್ರಾದಿ ನಾಲ್ಕು ಪುತ್ರರಿಗೆ ನಾಮಕರಣ ಮಾಡಿಸಿದ ಪುರೋಹಿತರು ಯಾರು?

ಉತ್ತರ – ವಸಿಷ್ಠರು

27 ದಶರಥನ ಸಭೆಗೆ ಆಗಮಿಸಿ ಯಜ್ಞ ರಕ್ಷಣೆಗಾಗಿ ಮಕ್ಕಳನ್ನು ಕಳಿಸೆಂದವರಾರು?

ಉತ್ತರ : ವಿಶ್ವಾಮಿತ್ರರು

28. ದಶರಥನಿಗೆ ಎಷ್ಟು ವರ್ಷ ಕಾಲ ಗಂಡು ಮಕ್ಕಳಿರಲಿಲ್ಲ?

ಉತ್ತರ : 9000 ವರ್ಷಗಳ ಕಾಲ.

29.  ವಿಶ್ವಾಮಿತ್ರರ ಇನ್ನೊಂದು ಹೆಸರೇನು?

ಉತ್ತರ : ಕೌಶಿಕ

30.  ವಿಶ್ವಾಮಿತ್ರರು ರಾಮನಿಗೆ ಯಾವ ವಿದ್ಯೆಯನ್ನು ಹೇಳಿಕೊಟ್ಟರು?

ಉತ್ತರ : ಬಲಾ, ಅತಿಬಲಾ ಎಂಬ ವಿದ್ಯೆಯನ್ನು ಸಮರ್ಪಿಸಿದರು.

31   ವಿಶ್ವಾಮಿತ್ರರ ಜೊತೆ ಬಂದ ರಾಮಲಕ್ಷ್ಮಣರು ಎಲ್ಲಿ ಸಂಧ್ಯೋಪಾಸನೆ ಮಾಡಿದರು?

ಉತ್ತರ : ಅನಂಗಾಶ್ರಮದಲ್ಲಿ.

32. ಶಿವನು ಕಾಮನನ್ನು ದಹಿಸಿದ ಸ್ಥಳವಾವುದು?

ಉತ್ತರ ; ಅನಂಗಾಶ್ರಮ

33 ತಾಟಕೆಯ ಪತಿ ಯಾರು? ತಾಟಕಿಯ ಮಕ್ಕಳಾರು?

ಉತ್ತರ : ತಾಟಕೆಯ ಪತಿ ಸುಂದ. ಅವಳ ಮಕ್ಕಳು ಮಾರೀಚ ಮತ್ತು ಸುಬಾಹು.

34. ಮಾರೀಚನ ಸಂಹರಿಸಲು ರಾಮನು ಉಪಯೋಗಿಸಿದ ಬಾಣ ಯಾವುದು?

ಉತ್ತರ : ವಾಯುವ್ಯಾಸ್ತ್ರ.

35. ವಿಶ್ವಾಮಿತ್ರರ ತಂದೆ ಯಾರು?

ಉತ್ತರ : ಗಾಧಿ ಮಹಾರಾಜ (ಇಂದ್ರನೇ ಗಾಂಧಿ ರಾಜನಾಗಿ ಅವತರಿಸಿದ್ದು)

36. ಶಿಲಾಸ್ಪರ್ಶದಿಂದ ರಾಮ ಯಾರನ್ನು ಉದ್ಧರಿಸಿದ?

ಉತ್ತರ : ಅಹಲ್ಯಾ

37. ಶಿಲೆಯಾಗೆಂದು ಶಪಿಸಿದವರಾರು?

ಉತ್ತರ : ಶಪಿಸಿದವರು ಅಹಲ್ಯಾ ಪತಿಯಾದ ಗೌತಮರು.

38. ಜನಕರಾಜನ ಯಜ್ಞಶಾಲೆ ಯಾವ ನಗರಕ್ಕೆ ಬಂದನು?

ಉತ್ತರ : ಮಿಥಿಲಾನಗರಕ್ಕೆ ಬಂದನು.

39. ಜನಕರಾಜನಿಗೆ ಸೀತಾ ಪ್ರಕಟವಾಗಿದ್ದು ಹೇಗೆ?

ಉತ್ತರ : ಯಜ್ಞ ಮಾಡಲು ಭೂಮಿ ಅಗೆಯುತ್ತಿದ್ದಾಗ  ಭೂಮಿಯಲ್ಲಿ ಪ್ರಾಪ್ತಳಾದಳು.

40. ಜನಕರಾಜನಿಗೆ ಶಿವಧನಸ್ಸು ನೀಡಿದವರಾರು?

ಉತ್ತರ : ಪಿನಾಕಪಾಣಿ ಶಿವ

41.  ಸೀತಾ ಸ್ವಯಂವರಕ್ಕೆ ಜನಕರಾಜನ ಷರತ್ತು ಏನು?

ಉತ್ತರ : ಯಾರು ಶಿವಧನಸ್ಸು ಎತ್ತುವರೋ ಅವರಿಗೆ ಸೀತಾ ವಿವಾಹ ಎಂಬ ಶರತ್ತು.

42. ಸೀತಾ ಸ್ವಯಂವರ ನಂತರ ರಾಮನು ಕೊಂದಿದ್ದು ಯಾರನ್ನು?

ಉತ್ತರ : ಅತುಲ ಎಂಬ ದೈತ್ಯನನ್ನು.

43. ಕ್ಷತ್ರಿಯ ಕುಲ ಧ್ವಂಸಕ ಯಾರು ?

ಉತ್ತರ : ಪರಶುರಾಮ

44. ಅತುಲನು ಎಲ್ಲಿ ಅಡಗಿದ್ದ?

ಉತ್ತರ : ಪರಶುರಾಮನ ಉದರದಲ್ಲಿದ್ದ.

45. ಹರಿ ಮತ್ತು ಹರರ ಧನಸ್ಸು ಯಾವುದು?

ಉತ್ತರ : ಹರಿಯ ಧನಸ್ಸು ಶಾಂಙ್ಗ  ಮತ್ತು ಹರನ ಧನಸ್ಸು ಪಿನಾಕ.

46. ಪರಮಾತ್ಮನ ಎರಡು ರೂಪಗಳು ಸೀತಾ ಸ್ವಯಂವರದಲ್ಲಿ ಕಂಡುಬಂದವು.  ಅವು ಯಾವುದು?

ಉತ್ತರ : ರಾಮ ಮತ್ತು ಪರಶುರಾಮ.

47.  ದಶರಥನ ಇಚ್ಛೆಯಂತೆ ರಾಮನ ಪಟ್ಟಾಭಿಷೇಕದ ಸಿದ್ಧತೆ ಮೊದಲು ಅಪ್ರಿಯವೆನಿಸಿದ್ದು ಯಾರಿಗೆ?

ಉತ್ತರ : ಮೊದಲು ಕ್ಷೋಭೆಗೊಳಗಾದವಳು ಮಂಥರೆ.

48. ರಾಮನ ಪಟ್ಟಾಭಿಷೇಕದ ವಾರ್ತೆಯಿಂದ ಖಿನ್ನಳಾದ ಮಂಥರೆ ಯಾರಿಗೆ ದುಷ್ಟ ಬುದ್ಧಿ ಪ್ರೇರೇಪಿಸಿದರು?

ಉತ್ತರ : ಮಂಥರೆ ಕೈಕೇಯಿಗೆ ದುಷ್ಟ ಬುದ್ಧಿ ಪ್ರಚೋದಿಸಿದಳು.

49. ಹಿಂದೆ ಕೈಕೇಯಿ ದಶರಥನಿಗೆ ಮಾಡಿದ್ದು ಸಹಾಯವೇನು?

ಉತ್ತರ : ಹಿಂದೆ ಶಂಬರಾಸುರನೊಂದಿಗೆ ಯುದ್ಧ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿದ್ದ ದಶರಥನ ರಥವನ್ನು ತಾನೇ ಓಡಿಸಿ, ರಥದ ಕೀಲು ಕಳಚಿದ್ದನ್ನು ಗಮನಿಸಿ, ತನ್ನ ಬೆರಳನ್ನೇ ಕೀಲಿನಂತಿರಿಸಿ, ರಥವನ್ನು ರಕ್ಷಿಸಿದ್ದಳು.

50. ರಾಮನಿಗೆ ವನವಾಸ ಹೋಗಬೇಕೆಂದು ವಿಷಯ ತಿಳಿಸಿದವರಾರು?

ಉತ್ತರ : ಸ್ವತಃ: ಕೈಕೇಯಿ

51.  ರಾಮನೊಂದಿಗೆ ವನವಾಸಕ್ಕೆ ಹೊರಟವರಾರು?

ಉತ್ತರ : ಲಕ್ಷ್ಮಣ ಮತ್ತು ಸೀತಾ

52. ವನವಾಸ ಪೂರ್ವದಲ್ಲಿ ರಾಮನು ಯಾರಿಗೆ ಸಾವಿರ ಗೋವುಗಳ ದಾನ ನೀಡಿದ?

ಉತ್ತರ : ತ್ರಿಜಟನೆಂಬ ಬಡ ಬ್ರಾಹ್ಮಣನಿಗೆ.

53. ದಶರಥನು ಯಾರ ಅವತಾರ?

ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.

54. ಕೈಕೇಯಲ್ಲಿ ಯಾರ ಆವೇಶವಿತ್ತು?

ಉತ್ತರ : ಕೈಕೇಯಿಯಲ್ಲಿ ನಿಕೃತಿ ಎಂಬ ರಾಕ್ಷಸಿಯ ಆವೇಶವಿತ್ತು.

55. ವನವಾಸಕ್ಕೆ ಹೊರಟ ರಾಮನನ್ನು ಗಂಗಾತೀರದಲ್ಲಿ ಯಾರು ಪೂಜಿಸಿದರು?

ಉತ್ತರ : ಗಂಗಾತೀರದಲ್ಲಿ ನಿಷಾದರಾಜ ಗುಹ ಪೂಜಿಸಿದನು..

56. ಭಾರದ್ವಾಜ ಮುನಿಗಳ ಆಶ್ರಮ ಎಲ್ಲಿತ್ತು?

ಉತ್ತರ : ಪ್ರಯಾಗ ಕ್ಷೇತ್ರದಲ್ಲಿತ್ತು.

57. ದಶರಥನು ಸತ್ತಾಗ ರಾಮ ವನವಾಸಕ್ಕೆ ಹೋಗಿ ಎಷ್ಟು ದಿನವಾಗಿತ್ತು?

ಉತ್ತರ : ಆರು ದಿನವಾಗಿತ್ತು.

58. ಭರತನು ರಾಮನನ್ನು ಎಲ್ಲಿ ಭೇಟಿಯಾದರು?

ಉತ್ತರ : ಚಿತ್ರಕೂಟದಲ್ಲಿ ಭೇಟಿಯಾದನು

59. ರಾಮನು ತಿರುಗಿ ಬರಲು ಒಪ್ಪದುದರಿಂದ ಭರತನು ರಾಮನಲ್ಲಿ ಏನನ್ನು ಕೇಳಿ ಪಡೆದನು?

ಉತ್ತರ – ರಾಮನ ಪಾದುಕೆಗಳನ್ನು ಪಡೆದನು.

60.  ಭರತನು ಎಲ್ಲಿ ವಾಸಿಸತೊಡಗಿದನು ?

ಉತ್ತರ : ಅಯೋಧ್ಯೆಯ ಹೊರಗಿರುವ ನಂದಿ ಗ್ರಾಮದಲ್ಲಿ.

61. ಸೀತಾದೇವಿಯ ಕುಕ್ಕಿದ ಪ್ರಾಣಿ ಯಾವುದು?

ಉತ್ತರ : ಕಾಗೆ

62. ಕಾಗೆ ರೂಪದಿ ಬಂದವನಾರು? ಅವನಲ್ಲಿದ್ದ ಅಸುರನಾರು?

ಉತ್ತರ : ಕಾಗೆ ರೂಪದಿ ಬಂದವನು ಇಂದ್ರಪುತ್ರ ಜಯಂತ.

ಅವನಲ್ಲಿದ್ದ ಅಸುರ – ಕುರಂಗ.

63. ರಾಮ ಜಯಂತನಿಗೆ ನೀಡಿದ ಶಿಕ್ಷೆ ಏನು?

ಉತ್ತರ : ರಾಮನು ಪ್ರಯೋಗಿಸಿದ ಹುಲ್ಲು ಕಡ್ಡಿಯಿಂದ ಜಯಂತ ವಾಯಸದ ಕಣ್ಣಿನಲ್ಲಿದ್ದ ಕುರಂಗ ಸಂಹಾರ.  ಆ ಅಸುರ ಶಿವವರದಿಂದ ಎಲ್ಲಾ ಕಾಗೆಗಳ ಕಣ್ಣಿನಲ್ಲಿ ಸೇರಿದ್ದ.    ಶಿವನ ವಿಚಾರವೇನೆಂದರೆ ಎಲ್ಲಿಯವರೆಗೂ ಕಾಗೆಗಳಿಗೆ ಎರಡೂ ಕಣ್ಣು ಇರುವುದೋ ಅಲ್ಲಿಯವರೆಗೂ ಕುರಂಗನಿಗೆ ಸಾವಿಲ್ಲ.  ರಾಮ ಕಾಗೆಗಳ ಒಂದು ಕಣ್ಣು ತೆಗೆದು ಕುರಂಗ ಸಂಹರಿಸಿದ.

64. ದಂಡಕಾರಣ್ಯದಲ್ಲಿ ರಾಮ ಯಾರನ್ನು ಕೊಂದನು?

ಉತ್ತರ : ರಾಮನು ಖರ ದೂಷಣರನ್ನು ಕೊಂದನು.  ಅವರು ರಾವಣನ ಮಲ  ಸಹೋದರರು.

65. ರಾವಣನು ಯಾರ ಮಗ?

ರಾವಣನು ವಿಶ್ರವಸ್ ಮುನಿ ಮತ್ತು ರಾಕ್ಷಸೀ ಕೈಕಸೀ ಮಗ. ಪುಲಸ್ತ್ಯನ ಮೊಮ್ಮಗ.

66. ದಶರಥನ ಮರಣವನ್ನಪ್ಪಿದಾಗ ಜೊತೆಗೆ ಯಾವ ಮಕ್ಕಳಿದ್ದರು?

ಉತ್ತರ : ಯಾವ ಮಕ್ಕಳೂ ಹತ್ತಿರವಿರಲಿಲ್ಲ.  ರಾಮಲಕ್ಷ್ಮಣರು ಕಾಡಿಗೂ, ಭರತ ಶತ್ರುಘ್ನರು ತಮ್ಮ ಮಾವನ ಮನೆಗೂ ಹೋಗಿದ್ದರು.

67. ಮರಣವನ್ನಪ್ಪಿದ ದಶರಥನನ್ನು ಹೇಗೆ ಸಂರಕ್ಷಿಸಿದ್ದರು?

ಉತ್ತರ : ಎಣ್ಣೆಯ ಕೊಪ್ಪರಿಗೆ ನಲ್ಲಿಟ್ಟು ದೇಹವನ್ನು ರಕ್ಷಿಸಿದ್ದರು.

68. ದಶರಥನಿಗೆ ಶಾಪವನಿತ್ತವರಾರು?

ಉತ್ತರ : ವೃದ್ಧ ಕುರುಡ ದಂಪತಿಗಳು

69. ದಶರಥನ ಔರ್ಧ್ವ ದೈಹಿಕ ಕಾರ್ಯ ಯಾರು ಮಾಡಿದರು?

ಉತ್ತರ : ವಸಿಷ್ಠ ಮತ್ತು ಜಾಬಾಲಿ ಋಷಿಗಳ ಅಪ್ಪಣೆಯಂತೆ ಭಾರತ ಶತ್ರುಜ್ಞರು ಮಾಡಿದರು.

70. ರಾಮನಿಗೆ “ಧರ್ಮ ಅವಶ್ಯಕತೆ ಇಲ್ಲ.  ಜಗತ್ತಿಗೇ ದೇವನಾದ ನೀನು ತಂದೆಯಾಜ್ಞೆ ಪಾಲಿಸಬೇಕಿಲ್ಲ” ಎಂದವರಾರು?

ಉತ್ತರ : ಜಾಬಾಲಿ ಋಷಿಗಳು

71. ವಿಶ್ರವಸ್ ಮುನಿಗಳ ಮಕ್ಕಳು ಯಾರ್ಯಾರು?

ಉತ್ತರ : ಮೊದಲ ಪತ್ನಿ ಇಲಾವಿದಳಲ್ಲಿ (ಇಲಾವಿದಳು ಭಾರದ್ವಾಜರ ಪುತ್ರಿ) ಕುಬೇರ ಜನಿಸಿದನು.

ಕೈಕಸಿಯಿಂದ ರಾವಣ, ಕುಂಭಕರ್ಣ, ವಿಭೀಷಣ ಮತ್ತು ಶೂರ್ಪಣಖಿ

ಇನ್ನೊಬ್ಬ ಪತ್ನಿಯಲ್ಲಿ ಖರ ದೂಷಣರು ಜನಿಸಿದರು

72. ಶರೀರ ತ್ಯಾಗ ಮಾಡಲು ಇಚ್ಛಿಸಿದವನಿಗೆ ರಾಮ ಯಾರಿಗೆ ಅಪ್ಪಣೆ ನೀಡಿದ?

ಉತ್ತರ : ಶರಭಂಗನಿಗೆ ಅಪ್ಪಣೆಯಿತ್ತ.

73. ತನ್ನ ವಿಶಾಲ ಬಾಹುಗಳಿಂದ ರಾಮ ಲಕ್ಷ್ಮಣರನ್ನು ಹೊತ್ತೊಯ್ದು ಯಾರನ್ನು ರಾಮ ಎರಡೂ ತೋಳುಗಳ ಕತ್ತರಿಸಿದನು.

ಉತ್ತರ : ವಿರಾಧನನ್ನು.

74.  ಇಂದ್ರನು ರಾಮನಿಗೆ ಯಾರ ಮೂಲಕ ಶಾಂಘ ಧನಸ್ಸು ಕಳಿಸಿದನು.?

ಉತ್ತರ : ಕುಂಭಸಂಭವ ಅಗಸ್ತ್ಯರಿಂದ

75. ಶೂರ್ಪಣಖಿಯ ಪತಿಯನ್ನು ಕೊಂದವರಾರು?

ಉತ್ತರ : ಶೂರ್ಪನಖಿಯ ಪತಿ ವಿದ್ವಜ್ಜಿಹ್ವನನ್ನು  ರಾವಣನೇ  ಯುದ್ಧದಲ್ಲಿ ಶತ್ರುವೆಂದು ಭಾವಿಸಿ ಕೊಂದನು.

ಮಕ್ಕಳಿಗೆ ಪರಿಚಯಿಸಿ
ಧನ್ಯವಾದಗಳು

ಮಾಹಿತಿ ಒದಗಿಸಿದ ಮಿತ್ರರಿಗೆ ಅನಂತಾನಂತ ವಂದನೆಗಳು

ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮಿಸಿ ಸರಿ ಎನಿಸಿದರೆ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳವುದನ್ನು ಮರೆಯಬೇಡಿ

ಕುಬೇರ

ಕುಬೇರ ಸಂಪತ್ತಿನ ದೇವತೆ. ತನ್ನ ಸಂಪತ್ತಿನ ಬಗ್ಗೆ ಕುಬೇರನಿಗೆ ಭಾರಿ ಹೆಮ್ಮೆಯಿತ್ತು. ಒಂದು ದಿನ ಭಾರಿ ಔತಣ ಕೂಟವನ್ನು ಏರ್ಪಡಿಸಿದನು. ಶಿವ, ಪಾರ್ವತಿ ಮತ್ತು ಗಣೇಶ ಸೇರಿದಂತೆ ದೇವಾನುದೇವತೆಗಳು ಉಪಸ್ಥಿತರಿದ್ದರು.

ಮಗು ಗಣೇಶ ಉಟ ಮಾಡಲು ಆರಂಭಿಸಿದನು . ಅಲ್ಲಿದ್ದ ಊಟವನ್ನು ಖಾಲಿ ಮಾಡಿದರೂ ಗಣೇಶನಿಗೆ ತೃಪ್ತಿಯಾಗಲಿಲ್ಲ. ನಂತರ ಕೆಲ ಅತಿಥಿಗಳು ಉಟಕ್ಕೆಂದು ಬಂದು ನೋಡಿದಲ್ಲಿ ಎಲ್ಲ ತಟ್ಟೆಗಳು ಹಾಗೂ ವಿವಿಧ ಭಕ್ಷ್ಯಗಳು ಖಾಲಿಯಾಗಿದ್ದವು ಅರೇ ಅದೇನು ಅಚ್ಚರಿ..‍‍! ಅಲ್ಲಿದ್ದ ಭಕ್ಷ್ಯಗಳನ್ನು ಖಾಲಿ ಮಾಡಿದ ಗಣೇಶ ಅಲ್ಲಿದ್ದ ಪಾತ್ರೆಪಡಗ, ಪೀಠೋಪಕರಣಗಳು ಮತ್ತು ಕುಬೇರನ ಮುಖ್ಯ ನಗರವಾದ ಅಲಕಾಪುರಿಯನ್ನು ಕಬಳಿಸಲು ಪ್ರಾರಂಭಿಸಿದನು.

ಎಲ್ಲವನ್ನು ತಿಂದು ಮುಗಿಸಿದ ಗಣೇಶ ಕುಬೇರನನ್ನು ತಿನ್ನುವುದಾಗಿ ಬೆದರಿಕೆ ಒಡ್ಡಿದನು. ಹೆದರಿದ ಕುಬೇರ ಆತುರಾತುರವಾಗಿ ಶಿವನ ಪಾದವನ್ನು ಹಿಡಿದು ಗಣೇಶನ ಹಸಿವು ನಿಯಂತ್ರಿಸುವಂತೆ ನನಗೆ ಸಹಾಯ ಮಾಡು ಎಂದು ಕಳಕಳಿಯಿಂದ ಪ್ರಾರ್ಥಿಸಿಕೊಂಡನು.

ಪರಿಹಾರ ಬಹಳ ಸರಳ ಎಂದ ಶಿವ ಕೈತುಂಬಾ ದ್ವಿದಳಧಾನ್ಯವನ್ನು ಪುತ್ರ ಗಣೇಶನಿಗೆ ನೀಡಿದನು. ತಂದೆ ನೀಡಿದ ಧಾನ್ಯವನ್ನು ತಿಂದ ಗಣೇಶನಿಗೆ ಆಶ್ಚರ್ಯಕರವೆಂಬಂತೆ ಕೂಡಲೇ ಹಸಿವು ನೀಗಿತು.

ಈ ದಂತಕಥೆಯಿಂದ ತಿಳಿದು ಬರುವುದೇನೆಂದರೇ ಪ್ರೀತಿಯಿಂದ ಕೊಟ್ಟರೆ ಅಲ್ಪ ಅಹಾರವೂ ತೃಪ್ತಿ ನೀಡಬಲ್ಲದು. ಆದರೆ ಕುಬೇರನು ಶ್ರೀಮಂತಿಕೆಯ ಮದದಲ್ಲಿ ಆಡಂಬರದಿಂದ ವಿವಿಧ ಭಕ್ಷ್ಯಗಳಿಂದ ದೇವಾನುದೇವತೆಗಳನ್ನು ಸಂತೃಪ್ತಿಪಡಿಸಲು ಮಾಡಿದ ಭಕ್ಷ್ಯವನ್ನು ತಿಂದು ತೇಗಿದ ಗಣಪ ಕುಬೇರನಿಗೊಂದು ಪಾಠ ಕಲಿಸಿದ. ಅಹಂಕಾರವನ್ನು ಸುಡಲು ಸ್ವ ಜ್ಞಾನೋದಯ ಅಗತ್ಯ ಎಂಬುದನ್ನು ಈ ಕಥೆ ಎತ್ತಿ ತೋರಿಸುತ್ತದೆ.

ಕೃಪೆ:::ಮುಖಪುಟ ಸಂಗ್ರಹ ಲೇಖನ 
ಸರ್ವ ಜನ ಸುಖಿನೋಭವಂತು

"ಹಿತ್ತಾಳೆ" ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ..?

"ಹಿತ್ತಾಳೆ" ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ..?

೧. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪವನ್ನು ಹಚ್ವುತ್ತಾರೆಯೋ ಆ ಮನೆಯಲ್ಲಿ ದೇವರಿಗೆ ತೇಜಸ್ಸು ಜಾಸ್ತಿಯಾಗುತ್ತದೆ, ಮನೆಗೆ ದೈವಬಲ ಬರುವುದು..

೨. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪ ಹಚ್ಚಿ ದೇವರನ್ನು ಪೂಜಿಸುತ್ತಾರೋ ಆ ಮನೆಯಲ್ಲಿ ರೋಗಭಾದೆಗಳು, ಅಪಮೃತ್ಯುಗಳು ಬರುವುದಿಲ್ಲ..!

೪. ಯಾರ ಮನೆಯಲ್ಲಿ ಸಂಕಲ್ಪ ಸಮೇತ ಹಿತ್ತಾಳೆ ದೀಪವನ್ನು ಹಚ್ಚಿ, ದೀಪಕ್ಕೆ ಪೂಜಿಸಿ, ದೇವರ ಪೂಜೆ ಮಾಡುತ್ತಾರೋ, ಆ ಮನೆಯಲ್ಲಿ ನ ಸರ್ವ ವಿವಾಹ ದೋಷ ನಿವಾರಣೆಯಾಗಿ, ವಿಘ್ನಗಳು ನಿವಾರಣೆಯಾಗಿ ವಿವಾಹ ಯೋಗವು ಬರುತ್ತದೆ..!

೬. ಮಂತ್ರಸಿದ್ಧಿ ಬೇಕೆನ್ನುವರು ಹಿತ್ತಾಳೆ ದೀಪ ಹಚ್ಚಿ ಪೂಜಿಸಿದರೆ ಮಂತ್ರವು ಬೇಗ ಸಿದ್ಧಿಯಾಗುವುದು..!
(ದೇವರ ದೀಪಗಳು ಪುಸ್ತಕದಿಂದ ಸಂಗ್ರಹ)
ಶುಭವಾಗಲಿ..
ಸರ್ವೆ ಜನ ಸುಖಿನೋಭವಂತು ಸಮಸ್ತ ಸನ್ಮಂಗಳಾಧಿ ಭವಂತು ಲೊಕಾ ಸಮಸ್ತ ಸುಖಿನೋಭವಂತು

@GIRISH SHARMA TUMKUR@
girish1989sharma@gmail.com

ಕಾಂತಾವರ

#ಕಾಂತಾವರ #ಕಾಂತೇಶ್ವರ ಕ್ಷೇತ್ರ ಪರಿಚಯ 

ಬಣ್ಣ ಬದಲಾಯಿಸುವ ಶಿವನ ಬಗ್ಗೆ ಕೇಳಿದ್ದೀರಾ? ಹೌದು ದಿನಕ್ಕೆ ಮೂರು ಬಾರಿ ಈ ಪುಣ್ಯಕ್ಷೇತ್ರದ ಶಿವಲಿಂಗ ಬಣ್ಣ ಬದಲಾಯಿಸುತ್ತಂತೆ. ಆ ಪುಣ್ಯ ಕ್ಷೇತ್ರ ಯಾವುದು, ಅದು ಎಲ್ಲಿದೆ ಎನ್ನುವುದನ್ನು ಇಂದು ತಿಳಿಯೋಣ.

ಶಿವಲಿಂಗ ಬಣ್ಣ ಬದಲಾಯಿಸುವ ಕ್ಷೇತ್ರವೇ ಕಾಂತೇಶ್ವರ ದೇವಾಲಯ. ಇದು ಉಡುಪಿಯಿಂದ 40 ಕಿ.ಮೀ ದೂರದಲ್ಲಿದೆ ಇದು ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿ ಬೆಳವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ ಕಾಂತಾವರ.

ಈ ಕ್ಷೇತ್ರವು ಹಿಂದೆ ಅರಣ್ಯದಿಂದ ಕೂಡಿತ್ತು. ಕಾಂತಾರ ಎಂದರೆ ಅರಣ್ಯ ಅಲ್ಲಿನ ಪ್ರಕೃತಿಯಿಂದಾಗಿ ಕಾಂತಾವರ ಎಂಬ ಹೆಸರು ಬಂದಿದ್ದು ಎನ್ನಲಾಗುತ್ತದೆ. ಹಾಗೆಯೇ ಇಲ್ಲಿ ಶಿವನು ಪಾರ್ವತಿ ಸಮೇತನಾಗಿ ನೆಲೆಸಿರುವುದರಿಂದ ಇಲ್ಲಿಗೆ ಕಾಂತೇಶ್ವರ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.

ಇದನ್ನು 7ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ. ಇಲ್ಲಿನ ಮೂಲದೈವ ಕಾಂತೇಶ್ವರ. ಇಲ್ಲಿ ಗಣೇಶ, ಅಣ್ಣಪ್ಪ ಹಾಗೂ ಅರ್ಧನಾರೀಶ್ವರ ಗುಡಿಯೂ ಇದೆ.

ಜಂಜವಾತ ಎನ್ನುವ ಅಸುರನ ಕುಟುಂಬ ಇಲ್ಲಿ ನೆಲೆಸಿದ್ದರಂತೆ. ಅವರ ಕುಟುಂಬ ಇಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಕಾಟ ನೀಡುತ್ತಿದ್ದರಂತೆ. ಅವುಗಳಲ್ಲಿ ಅಂಬರೀಶ ಮುನಿ ಆ ರಾಕ್ಷಸರ ಸಂಹಾರಕ್ಕಾಗಿ ಶಿವನನ್ನು ತಪಸ್ಸು ಮಾಡುತ್ತಾನಂತೆ . ಹಾಗಾಗಿ ಶಿವನು ಇಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತದೆ.

ಇಲ್ಲಿನ ವಿಶೇಷವೆಂದರೆ ಶಿವನು ದಿನದಲ್ಲಿ ಮೂರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬೆಳಗ್ಗೆ ಬೆಳ್ಳಿ ಬಣ್ಣದಲ್ಲಿ, ಮಧ್ಯಾಹ್ನ ತಾಮ್ರದ ಬಣ್ಣ ಸಂಜೆ ಬಂಗಾರದ ಬಣ್ಣದಲ್ಲಿ ಶಿವನು ಕಂಗೊಳಿಸುತ್ತಾನೆ. ಇದಕ್ಕೆ ಯಾವುದೇ ಕವಚಗಳನ್ನು ಹಾಕಲಾಗಿಲ್ಲ. ಬರೀ ಶಿಲೆಯ ಲಿಂಗವಿದು. ಇದನ್ನು ವಜ್ರಶಿಲೆ ಎನ್ನಲಾಗುತ್ತದೆ.

ವ್ಯಾಪಾರ ದೋಷ ನಿವಾರಣೆ, ಸಂತಾನ ಪ್ರಾಪ್ತಿ, ಕುಟುಂಬ ಕಲಹ ನಿವಾರಣೆಗೆಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಇಲ್ಲಿಗೆ ಬಂದ ಭಕ್ತರು ಯಾವತ್ತೂ ಬರೀ ಕೈಯಲ್ಲಿ ಹೋಗೋದಿಲ್ಲ ಎನ್ನುತ್ತಾರೆ.

ಅಂಬರೀಶ ಮುನಿಗೆ ಪಾರ್ವತಿ ದೇವಿಯು ಕಡಗವನ್ನು ನೀಡಿದ್ದಳಂತೆ. ಶಿವಲಿಂಗಕ್ಕೆ ಕಡಗ ತೊಡಿಸಿ ಪೂಜಿಸುವಂತೆ ಹೇಳಿದ್ದಳಂತೆ. ಆ ಕಡಗವನ್ನು ಇಂದಿಗೂ ಇಲ್ಲಿ ಕಾಣಬಹುದು. ಇಲ್ಲಿನ ನಂದಿಯೂ ಬಹಳ ದೊಡ್ಡದಾಗಿದೆ.

ಕಾಂತೇಶ್ವರನ ಸನ್ನಿಧಾನದಿಂದ ಮೂರು ಕಿ.ಮೀ ದೂರ ಸಾಗಿದರೆ ಅಂಬರೀಶ ಮುನಿ ತಪಸ್ಸು ಮಾಡಿದ ಗುಹೆ ಇದೆ. ಅಲ್ಲೇ ಶಿವನು ದರ್ಶನ ನೀಡಿದನು ಎನ್ನಲಾಗುತ್ತದೆ.

ಬೆಂಗಳೂರಿನಿಂದ, ಮಂಗಳೂರಿನಿಂದ ಉಡುಪಿಗೆ ಸಾಕಷ್ಟು ಬಸ್‌ಗಳಿವೆ. ಉಡುಪಿಯಿಂದ ೪೦ ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ.

ಇನ್ನು ರೈಲು ಮೂಲಕ ಹೋಗುವುದಾದರೆ ಸಮೀಪದ ರೈಲು ನಿಲ್ದಾಣವೆಂದರೆ ಉಡುಪಿ ರೈಲುನಿಲ್ದಾಣ.

ವಿಮಾನದ ಮೂಲಕ ಹೊಗುವುದಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಸರ್ವ ಜನ ಸುಖಿನೋಭವಂತು 
ಲೊಕಾ ಸಮಸ್ತ ಸುಖಿನೋಭವಂತು 

ಕೃಪೆ:::ಮುಖಪುಟ ಸಂಗ್ರಹ ಲೇಖನ

ದೈವ ಶಕ್ತಿಯನ್ನು ಹೊಂದಿರುವ ಗಿಡ-ಮರಗಳನ್ನು ಪೂಜಿಸಿ.

ದೈವ ಶಕ್ತಿಯನ್ನು ಹೊಂದಿರುವ ಗಿಡ-ಮರಗಳನ್ನು ಪೂಜಿಸಿ.
ಹಿಂದೂ ಧರ್ಮವು ವಿಶಾಲವಾದ ಹಾಗೂ ಪವಿತ್ರವಾದ ವ್ಯಾಪ್ತಿಯನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಕೃತಿಯು ಒಂದು ದೇವತೆ. ಅದರಲ್ಲಿ ಇರುವ ಕೆಲವು ಗಿಡ-ಮರಗಳು, ಪ್ರಾಣಿ ಪಕ್ಷಿಗಳು ಸಹ ದೈವ ಶಕ್ತಿಯೊಂದಿಗೆ ಸಂಯೋಜನೆಯನ್ನು ಪಡೆದುಕೊಂಡಿವೆ. ಕೆಲವು ವಿಶೇಷ ಗಿಡ-ಮರಗಳು ದೇವರ ಪ್ರತಿ ರೂಪ ಎಂದು ಪರಿಗಣಿಸಲಾಗುತ್ತದೆ. ದೇವರು ಮನುಜನಿಗೆ ಆಶೀರ್ವದಿಸಲು ಇವುಗಳ ಮೂಲಕ ಭೂಮಿಗೆ ಬರುತ್ತಾನೆ ಎನ್ನುವ ನಂಬಿಕೆಯಿದೆ. ಹಾಗಾಗಿ ದೇವರನ್ನು ಪ್ರತಿ ಬಿಂಬಿಸುವ ಗಿಡ ಮರಗಳಿಗೆ ವಿಶೇಷ ಪೂಜಾ ವಿಧಿಯನ್ನು ಕೈಗೊಳ್ಳಲಾಗುವುದು.
ದೇವತೆಗಳು ಇಷ್ಟಪಡುವ ಹಾಗೂ ಅವರ ರೂಪವನ್ನು ಪ್ರತಿ ಬಿಂಬಿಸುವ ಗಿಡ-ಮರಗಳಿಗೆ ಪೂಜೆ ಹಾಗೂ ವ್ರತ ವಿಧಾನವನ್ನು ಕೈಗೊಂಡರೆ ಜೀವನದಲ್ಲಿ ಅದೃಷ್ಟ ದೊರೆಯುವುದು. ಅಂತಹ ದೈವ ಶಕ್ತಿ ಹೊಂದಿರುವ ಗಿಡ-ಮರಗಳನ್ನು ಅನುಚಿತ ಕೆಲಸಗಳಿಗೆ ಬಳಸಿಕೊಳ್ಳುವುದು ಅಥವಾ ನಾಶ ಮಾಡುವ ಕೃತ್ಯವನ್ನು ಕೈಗೊಂಡರೆ ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಜೊತೆಗೆ ಕೆಲವು ದೋಷಗಳು ಜೀವನ ಪೂರ್ತಿ ನಮ್ಮ ಬೆನ್ನತ್ತಿ ಬರುವುದು ಎಂದು ಸಹ ಹೇಳಲಾಗುವುದು.
ಧಾರ್ಮಿಕ ನಂಬಿಕೆಗಳು ಹಾಗೂ ಪ್ರಾಚೀನ ಪುರಾಣಗಳು ಹೇಳುವ ಪ್ರಕಾರ ಐದು ಗಿಡ-ಮರಗಳು ದೇವರೊಂದಿಗೆ ಉತ್ತಮ ಸಂಯೋಜನೆಯನ್ನು ಪಡೆದುಕೊಂಡಿವೆ. ಈ ಸಸ್ಯಗಳು ವಿಶೇಷ ಹಿನ್ನೆಲೆ ಹಾಗೂ ಕಥೆಗಳನ್ನು ಒಳಗೊಂಡಿವೆ. ಈ ಪವಿತ್ರ ಗಿಡ-ಮರಗಳ ರೂಪದಲ್ಲಿ ದೇವನು ಭೂಮಿಗೆ ಬರುತ್ತಾನೆ. ಮನುಜರಿಗೆ ಸಹಾಯ ಮಾಡುತ್ತಾನೆ ಎಂದು ಹೇಳಲಾಗುವುದು. ಈ ಗಿಡ ಮರಗಳು ಮನುಷ್ಯನ ಜೀವನವನ್ನು ಫಲವತ್ತತೆಯಿಂದ ಕೂಡಿರುವಂತೆ ಮಾಡುತ್ತವೆ. ಜೊತೆಗೆ ಅವರು ಸಾಕಷ್ಟು ಸಮೃದ್ಧಿ ಹಾಗೂ ಸುಖ-ಶಾಂತಿಯನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು. ಹಾಗಾದರೆ ಆ ಐದು ಪವಿತ್ರ ಗಿಡ-ಮರಗಳು ಯಾವವು ಎನ್ನುವುದನ್ನು ಲೇಖನದ ಮುಂದಿನ ಭಾಗದಲ್ಲಿ ಇರುವ ವಿವರಣೆಯನ್ನು ನೋಡಿ ತಿಳಿಯಿರಿ.

ಬಿಲ್ವ ಪತ್ರೆಯ ಮರ

ಬಿಲ್ವ ಪತ್ರೆಯ ಮರವು ಶಿವನೊಂದಿಗೆ ಸಂಯೋಜನೆಯನ್ನು ಪಡೆದುಕೊಂಡಿದೆ. ಬಿಲ್ವ ಪತ್ರೆಯು ಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠವಾದದ್ದು. ಅಲ್ಲದೆ ವೈಜ್ಞಾನಿಕವಾಗಿಯೂ ಅದ್ಭುತ ಔಷಧೀಯ ಗುಣವನ್ನು ಪಡೆದುಕೊಂಡಿದೆ. ಸೃಷ್ಟಿಯ ದೇವತೆಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಬಿಲ್ವ ಪತ್ರೆಯು ಸಂಕೇತಿಸುವುದು. ಬಿಲ್ವ ಪತ್ರೆ ಅಥವಾ ಬಿಲ್ವ ಎಲೆಯು ಮೂರು ಎಲೆಗಳ ಕುಡಿಯನ್ನು ಹೊಂದಿರುತ್ತದೆ. ಅವು ಶಿವನ ಮೂರು ಕಣ್ಣುಗಳನ್ನು ಹಾಗೂ ತ್ರಿಶೂಲದ ಮೂರು ತುದಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದು. ಈ ಮರದ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಒಳಗೊಂಡಿವೆ. ಧಾರ್ಮಿಕವಾಗಿ ಈ ಮರದ ಒಂದೊಂದು ಭಾಗವು ಪಾರ್ವತಿ ದೇವಿಯ ಅವತಾರಗಳನ್ನು ಪ್ರತಿನಿಧಿಸುತ್ತವೆ.

ಬಾಳೆ ಮರ

ಬಾಳೆ ಮರವಲ್ಲದಿದ್ದರೂ ಅದನ್ನು ಬಾಳೆ ಮರ ಎಂದು ಕರೆಯುತ್ತಾರೆ. ಈ ಬಾಳೆ ಗಿಡ-ಅಥವಾ ಬಾಳೆ ಮರವು ವಿಷ್ಣು ಮತ್ತು ಲಕ್ಷ್ಮಿ ದೇವಿಯೊಂದಿಗೆ ಸಂಯೋಗ ಪಡೆದುಕೊಂಡಿದೆ ಎನ್ನಲಾಗುತ್ತದೆ. ಬಾಳೆ ಗಿಡವು ಎಲ್ಲಾ ಶುಭ ಕಾರ್ಯಗಳಿಗೂ ಪವಿತ್ರವಾದದ್ದು ಹಾಗೂ ಅಗತ್ಯವಾದ ಗಿಡವೂ ಹೌದು. ಬಾಳೆ ಗಿಡ, ಬಾಳೆ ಎಲೆ, ಬಾಳೆ ಹಣ್ಣು, ಬಾಳೆ ಹೂವು, ಬಾಳೆ ದಾರ, ಬಾಳೆ ದಿಂಡು ಎಲ್ಲವೂ ದೇವರ ಪೂಜೆಗೆ ಅತ್ಯಗತ್ಯವಾದ ವಸ್ತುಗಳು. ಇವುಗಳ ಬಳಕೆ ಇಲ್ಲದೆ ಪೂಜಾ ವಿಧಾನವು ಅಪೂರ್ಣವಾಗುತ್ತದೆ ಎನ್ನಲಾಗುವುದು. ಗುರುವಾರ ಯಾರು ಬಾಳೆ ಮರ ಅಥವಾ ಗಿಡಕ್ಕೆ ಪೂಜೆಯನ್ನು ಸಲ್ಲಿಸುತ್ತಾರೆ ಅವರ ಕುಟುಂಬದಲ್ಲಿ ಸಮೃದ್ಧಿಯು ನೆಲೆಸುವುದು ಎಂದು ಹೇಳಲಾಗುವುದು.

ತುಳಸಿ ಗಿಡ

ಮನೆಯ ಮುಂದೆ ಇಟ್ಟು ಪೂಜಿಸುವ ಗಿಡವೇ ತುಳಸಿ ಗಿಡ. ತುಳಸಿ ಎಲೆ ಇಲ್ಲದೆ ಯಾವ ಪೂಜೆಯೂ ಸಂಪನ್ನಗೊಳ್ಳದು. ಯಾರು ತಮ್ಮ ಮನೆಯ ಮುಂದೆ ಇಟ್ಟು ಅದನ್ನು ಪೋಷಿಸುತ್ತಾರೆ ಅವರ ಮನೆಯಲ್ಲಿ ಸಮೃದ್ಧಿ ನೆಲೆಸುವುದು ಎನ್ನುವ ನಂಬಿಕೆಯಿದೆ. ಪ್ರಾಚೀನ ವೇದಗಳು ಹೇಳುವ ಪ್ರಕಾರ ಯಾರು ತುಳಸಿ ಗಿಡವನ್ನು ಸ್ಪರ್ಶಿಸುತ್ತಾರೋ ಅವರು ಆಂತರಿಕವಾಗಿ ಶುದ್ಧಿಯನ್ನು ಪಡೆದುಕೊಳ್ಳುವನು. ತುಳಸಿ ಗಿಡದಿಂದ ತಯಾರಿಸಿದ ಜಪದ ಸರಗಳನ್ನು ಋಷಿ ಮುನಿಗಳು, ಸಂತರು ಹಾಗೂ ಪುರೋಹಿತರು ಧರಿಸುತ್ತಾರೆ. ಇದು ಅತೀಂದ್ರೀಯ ಶಕ್ತಿಯನ್ನು ನೀಡುವುದು ಎನ್ನುವ ನಂಬಿಕೆಯಿದೆ. ಇದರಿಂದಾಗಿ ವಯಸ್ಸು, ಮನಸ್ಸು, ದೇಹ ಹಾಗೂ ಭಾವನೆಗಳೆಲ್ಲವೂ ಶುದ್ಧಿಯಾಗುತ್ತವೆ. ಆಯುರ್ವೇದದ ಔಷಧಿಯಲ್ಲಿ ತುಳಸಿಯನ್ನು ಅತ್ಯಂತ ಅಗತ್ಯ ವಸ್ತುವನ್ನಾಗಿ ಉಪಯೋಗಿಸಲಾಗುವುದು. ವಿಷ್ಣುವಿಗೆ ಪ್ರಿಯವಾದ ತುಳಸಿ ಗಿಡಕ್ಕೆ ನಿತ್ಯವೂ ಪೂಜೆಯನ್ನು ಸಲ್ಲಿಸಬೇಕು. ಮನೆಯಲ್ಲಿ ಧನಾತ್ಮಕ ಶಕ್ತಿಯ ಆಗಮನ ಆಗುವುದು.

ಆಲದ ಮರ

ಆಲದ ಮರುವು ಬ್ರಹ್ಮ ದೇವನನ್ನು ಪ್ರತಿನಿಧಿಸುತ್ತದೆ. ಈ ಮರವು ಅತ್ಯಂತ ವಿಶಾಲತೆಯನ್ನು ಪಡೆದುಕೊಳ್ಳುವುದು. ಇದು ದೀರ್ಘಾಯುಷ್ಯವನ್ನು ಸಂಕೇತಿಸುತ್ತದೆ ಎಂದು ಹೇಳಲಾಗುವುದು. ಈ ಮರವು ಫಲವತ್ತತೆಯ ಸಂಕೇತವೂ ಹೌದು. ಧಾರ್ಮಿಕ ನಂಬಿಕೆಗಳ ಪ್ರಕಾರ ಮಕ್ಕಳನ್ನು ಹೊಂದಿರದ ವ್ಯಕ್ತಿಗಳು ಆಲದ ಮರಕ್ಕೆ ಪೂಜೆಯನ್ನು ಸಲ್ಲಿಸಿದರೆ ಸಂತಾನ ಫಲವನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು. ಈ ಮರವನ್ನು ಕತ್ತರಿಸುವುದು ಅತ್ಯಂತ ಪಾಪ ಕೃತ್ಯ ಎಂದು ಪರಿಗಣಿಸಲಾಗಿದೆ. ವಟ ವೃಕ್ಷ ಎಂದು ಕರೆಯುವ ಈ ಮರಕ್ಕೆ ವಿವಾಹಿತ ಮಹಿಳೆಯರು ಪತಿಯ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ಪೂಜೆಯನ್ನು ಸಲ್ಲಿಸುತ್ತಾರೆ.

ಅಶ್ವತ್ಥ ಮರ

ಅಶ್ವತ್ಥ ಮರದಲ್ಲಿ ಎಲ್ಲಾ ದೇವಾನು ದೇವತೆಗಳ ವಾಸವಿರುತ್ತದೆ ಎನ್ನುವ ನಂಬಿಕೆಯಿದೆ. ಇದು ಪ್ರತಿಯೊಂದು ಗ್ರಾಮ ಹಾಗೂ ಊರಿನಲ್ಲಿ ಕನಿಷ್ಠ ಒಂದು ಮರವಾದರೂ ಇರುವುದನ್ನು ಕಾಣಬಹುದು. ಶನಿ ಮತ್ತು ಹನುಮಂತನ ದೇವಸ್ಥಾನದ ಎದುರು ಅಥವಾ ಆವರಣದಲ್ಲಿ ಅಶ್ವತ್ಥ ಮರವು ಕಡ್ಡಾಯವಾಗಿ ಇರುತ್ತದೆ. ಈ ಮರದಲ್ಲಿ ಲಕಕ್ಷಿ ದೇವಿಯು ಸದಾ ಕುಳಿತಿರುತ್ತಾಳೆ ಎನ್ನುವ ನಂಬಿಕೆಯೂ ಇದೆ. ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಮರವು ಸಾಕಷ್ಟು ಸಾಂಕ್ರಾಮಿಕ ರೋಗಗಳನ್ನು ಸಹ ದೂರ ಮಾಡುತ್ತದೆ. ಯಾರು ಈ ಮರಕ್ಕೆ ನಿತ್ಯ ದೀಪವನ್ನು ಬೆಳಗುವರು? ಯಾರು ನೀರನ್ನು ಎರೆಯುವರು? ಅವರ ಜೀವನದಲ್ಲಿ ಸದಾ ಸಂತೋಷ ಹಾಗೂ ಮನದಿಂಗಿತಗಳು ನೆರವೇರುತ್ತವೆ ಎಂದು ಹೇಳಲಾಗುವುದು.
ಈ ಐದು ವಿಶೇಷ ಗಿಡ-ಮರಗಳಿಗೆ ನಿತ್ಯವೂ ನೀರೆರೆಯುವುದು ಹಾಗೂ ದೀಪ ಬೆಳಗುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಜೀವನದಲ್ಲಿ ಸಾಕಷ್ಟು ಲಾಭಗಳು ದೊರೆಯುವುದು. ಅಲ್ಲದೆ ಸದಾ ಕಾಡುತ್ತಿರುವ ಸಮಸ್ಯೆಗಳು ನಮ್ಮಿಂದ ದೂರವಾಗುವುದು ಎಂದು ಹೇಳಲಾಗುವುದು.

 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

ಗೋವಿನ ಉತ್ಪತ್ತಿ

ಗೋವಿನ ಉತ್ಪತ್ತಿಯ ಬಗ್ಗೆ ಇರುವಕಥೆಯನ್ನು 'ಶತಪಥ ಬ್ರಾಹ್ಮಣ' ಗ್ರಂಥದಲ್ಲಿ ನೀಡಲಾಗಿದೆ. ದಕ್ಷ ಪ್ರಜಾಪತಿಯು ಪ್ರಾಣಿಗಳ ಸೃಷ್ಟಿಯನ್ನುಮಾಡಿದನಂತರ ತುಸು ಅಮೃತವನ್ನು ಸೇವಿಸಿದನು. ಆ ಅಮೃತದಿಂದ ಅವನು ಸಂತುಷ್ಟನಾದನು. ಆಗ ಅವನ ಮೂಗಿನೊಳಗಿಂದ ಹೂರಗೆ ಬಿದ್ದಶ್ವಾಸದಿಂದಎಲ್ಲೆಡೆ ಸುಗಂಧ ಹರಡಿತು. ಆ ಶ್ವಾಸದೊಳಗಿಂದ ಒಂದು ಗೋವು ಜನ್ಮತಾಳಿತು. ಸುಗಂಧದೊಳಗಿಂದ ಜನ್ಮ ತಾಳಿದ್ದರಿಂದ ದಕ್ಷ ಪ್ರಜಾಪತಿಯು ಅದಕ್ಕೆ 'ಸುರಭಿ' ಎಂದು ಹೆಸರಿಟ್ಟನು. ಸುರಭಿಯಿಂದ ಅನೇಕ ಗೋವುಗಳು ಜನ್ಮತಾಳಿದವು. ಆದ್ದರಿಂದ ಸುರಭಿ ಇದು ಸಂಪೂರ್ಣ ಗೋವಂಶದ ಮಾತೆ, ಜನನಿ ಎಂದು ಪರಿಗಣಿಸಲ್ಪಡುತ್ತದೆ. ಸುರಭಿಯು ಒಮ್ಮೆ ತಪಸ್ಸನ್ನು ಆರಂಭಿಸಿತು. ಬ್ರಹ್ಮದೇವನು ಆ ತಪಸ್ಸಿಗೆ ಮೆಚ್ಚಿ ಪ್ರಸನ್ನನಾದನು ಮತ್ತುಸುರಭಿಗೆ ಅಮರತ್ವವನ್ನುನೀಡಿದನು. ಅಲ್ಲದೇ, ತ್ರಿಲೋಕಗಳ ಮೇಲಿರುವ ಒಂದು ಸ್ವರ್ಗವನ್ನೂ ಅದಕ್ಕೆ ಒಪ್ಪಿಸಿದನು; ಆ ಲೋಕವು ಗೋಲೋಕವೆಂದು ಕರೆಯಲ್ಪಡುತ್ತದೆ. ಸುರಭಿಯು ಈ ಗೋಲೋಕದಲ್ಲಿ ನಿತ್ಯ ನಿವಾಸ ಮಾಡುತ್ತದೆ ಹಾಗೂ ಅದರ ಮಗಳು, 'ಸುಕನ್ಯಾ' ಭೂಲೋಕದಲ್ಲಿ ಪೃಥ್ವಿಯ ಮೇಲೆ ಇರುತ್ತದೆ. ಈ ಗೋಲೋಕದ ಅಧಿಪತಿ 'ಗೋವಿಂದ' ಅಂದರೆ'ಶ್ರೀಕೃಷ್ಣ'ನಾಗಿದ್ದಾನೆ. ಸುರಭಿಯು ಒಮ್ಮೆ ಇಂದ್ರ ದೇವನ ಬಾಗಿಲಲ್ಲಿ ಭಗವಾನ ಶ್ರೀಕೃಷ್ಣನ ಭೇಟಿಮಾಡಲು ಹೋಯಿತು ಹಾಗೂ ಪಷು ರಾಜ್ಯದ ಕುರಿತು ಶ್ರೀಕೃಷ್ಣನ ಸದಿಚ್ಛೆಯ ಮೇರೆಗೆ ಅದು ಅವನಿಗೆ ತಮ್ಮ ಗೋಲೋಕದ ಇಂದ್ರನನ್ನಾಗಿ ಆರಿಸಿತು. ಭಗವಾನ ಶ್ರೀಕೃಷ್ಣನ ಗೋಪ್ರೇಮವು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ!.

ಸರ್ವ ಜನ ಸುಖಿನೋಭವಂತು ಸಮಸ್ತ ಸನ್ಮಂಗಳಾಧಿ ಭವಂತು ಲೊಕಾ ಸಮಸ್ತ ಸುಖಿನೋಭವಂತು 🙏🏻🙏🏻🙏🏻

"ಅತಿಥಿ ಬರದೇ ಭೋಜನ ಮಾಡಲಾರೆ

"ಅತಿಥಿ ಬರದೇ ಭೋಜನ ಮಾಡಲಾರೆ"
************************

ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣ ಮತ್ತು ಅರ್ಜುನ ದ್ವಾರಕಾ ನಗರಿಗೆ ಹೋದರು. ಈ ಬಾರಿ ಅರ್ಜುನನೇ ರಥವನ್ನು ನಡೆಸಿದನು. ದ್ವಾರಕೆ ತಲುಪಿದಾಗ ಅರ್ಜುನನು ತುಂಬಾ ಬಳಲಿದ್ದನು. ಆದುದರಿಂದ ವಿಶ್ರಾಂತಿ ಪಡೆಯಲು ಅತಿಥಿ ಭವನಕ್ಕೆ ತೆರಳಿದನು.

ಸಂಜೆಯ ವೇಳೆ ರುಕ್ಮಿಣಿಯು ಶ್ರೀಕೃಷ್ಣನಿಗೆ ಊಟವನ್ನು ಬಡಿಸಿದಳು. ಆಗ ಶ್ರೀಕೃಷ್ಣನು, "ಮನೆಗೆ ಅತಿಥಿ ಬಂದಿದ್ದಾರೆ, ಅವರನ್ನು ಬಿಟ್ಟು ಹೇಗೆ ಊಟ ಮಾಡಲಿ?". 

ರುಕ್ಮಿಣೀ,"ಭಗವಾನ್ ನೀವು ಊಟವನ್ನು ಆರಂಭಿಸಿರಿ, ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ, ಅತಿಥಿ ಭವನಕ್ಕೆ ಹೋದಾಗ ಅರ್ಜುನನು ನಿದ್ರಿಸುತ್ತಿದ್ದನು ಹಾಗೂ ಅವನ ರೋಮ-
ರೋಮದಲ್ಲಿ ಕೃಷ್ಣನಾಮದ ಕೀರ್ತನೆ ಹೊರಹೊಮ್ಮುತ್ತಿತ್ತು. ಹೀಗಾಗಿ ರುಕ್ಮೀಣಿಯು ಕೃಷ್ಣನನ್ನು ಮರೆತು, ಮೆಲ್ಲನೆ ಚಪ್ಪಾಳೆ ತಟ್ಟುತ್ತಾ ಕೃಷ್ಣನಾಮದಲ್ಲಿ ತಲ್ಲೀನಲಾದಳು. 

ಇತ್ತ ನಾರದರು ಶ್ರೀಕೃಷ್ಣನ ಬಳಿ ಬಂದು, "ಭಗವಾನ್ ಭೋಜನ ತಣ್ಣಗಾಗುತ್ತಿದೆ" ಎಂದಾಗ, ಕೃಷ್ಣನು,"ಅತಿಥಿ ಬರದೇ ಭೋಜನ ಮಾಡಲಾರೆ" ಎಂದನು.

ನಾರದರು, "ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ ಅತ್ತ ಹೋದಾಗ ಅಲ್ಲಿನ ದೃಶ್ಯ ನೋಡಿ, ಅರ್ಜುನನ್ನು ಎಬ್ಬಿಸುವ ಬದಲು ತಮ್ಮ ವೀಣೆಯನ್ನು ನುಡಿಸಲು ಪ್ರಾರಂಭಿಸಿದರು.

ಸತ್ಯಭಾಮೆಯು ಕೃಷ್ಣನಿಗೆ, 'ಭಗವಾನ್, ಭೋಜನ ತಣ್ಣಗಾಗುತ್ತಿದೆ, ನೀವು ಆರಂಭವಾದರೂ ಮಾಡಿ. ಕೃಷ್ಣನು, "ಅತಿಥಿ ಬರದೇ ಭೋಜನ ಮಾಡಲಾರೆ" ಎಂದನು.

ಸತ್ಯಭಾಮೆಯು, "ನಾನು ಹೋಗಿ ಕರೆತರುತ್ತೇನೆ" ಎಂದು ಹೇಳಿ ಅರ್ಜುನನಿರುವ ಕಡೆಗೆ ಹೋದಾಗ, ನಿದ್ರಿಸುತ್ತಲೇ ಇದ್ದ ಅರ್ಜುನನ ರೋಮ-ರೋಮದಿಂದ ಹೊರಹೊಮ್ಮುತ್ತಿದ್ದ 'ಕೃಷ್ಣನಾಮ ಕೀರ್ತನೆಯಿಂದಾಗಿ' ರುಕ್ಮಿಣಿಯು ಚಪ್ಪಾಳೆ ತಟ್ಟುತ್ತಿದ್ದಳು, ನಾರದರು ವೀಣೆಯನ್ನು ನುಡಿಸುತ್ತಿದ್ದರು. ಸತ್ಯಭಾಮೆಯೂ ನರ್ತಿಸಲು ಪ್ರಾರಂಭಿಸಿದಳು.

ಇಲ್ಲಿ ಕೃಷ್ಣ, "ಎಲ್ಲರೂ ನನ್ನ ಭೋಜನ ತಣ್ಣಗಾಗುತ್ತಿದೆಯೆಂದೂ, ಅರ್ಜುನನ್ನು ಕರೆತರುವುದಾಗಿ ಹೇಳಿ ಹೊರಟವರು ಎಲ್ಲಿ? ನನ್ನ ಚಿಂತೆ ಯಾರಿಗೂ ಇಲ್ಲ. ನಾನೇ ಹೋಗಿ ಅಲ್ಲೇನಾಗುತ್ತಿದೆ ಎಂದು ನೋಡುವೆ" ಎಂದು ಅರ್ಜುನ ನಿದ್ರಿಸುತ್ತಿದ್ದ ಅತಿಥಿ ಭವನಕ್ಕೆ  ಹೋಗಿ ನೋಡಿದಾಗ, ಅಲ್ಲಿ ಸ್ವರ ಲಹರಿ ನಡೆಯುತ್ತಿತ್ತು.
ಅರ್ಜುನ ಮಲಗಿಕೊಂಡೇ ಕೀರ್ತನೆ ಮಾಡುತ್ತಿದ್ದಾನೆ.
ರುಕ್ಮೀಣಿಯು ಚಪ್ಪಾಳೆ ತಟ್ತುತ್ತಿದ್ದಾಳೆ.ನಾರದರು ವೀಣೆಯನ್ನು ನುಡಿಸುತ್ತಿದ್ದಾರೆ.ಮತ್ತು ಸತ್ಯಭಾಮೆಯು ನೃತ್ಯ ಮಾಡುತ್ತಿದ್ದಾಳೆ.

ಈ ದೃಶ್ಯವನ್ನು ನೋಡಿ ಕೃಷ್ಣನ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯತೊಡಗಿತು ಹಾಗೂ ಸ್ವಯಂ ಅರ್ಜುನನ ಕಾಲುಗಳನ್ನು ಒತ್ತತೊಡಗಿದನು. ಕೃಷ್ಣನ ಕಣ್ಣೀರು ಅರ್ಜುನನ ಕಾಲುಗಳ ಮೇಲೆ ಬಿದ್ದಾಗ ಎಚ್ಚರಗೊಂಡು ಗಲಿಬಿಲಿಯಾದ ಅರ್ಜುನನು, "ಪ್ರಭು ಇದೇನಾಗುತ್ತಿದೆ...? ಎಂದಾಗ, ಕೃಷ್ಣನೆಂದನು, "ಅರ್ಜುನಾ, ನಿನ್ನ ರೋಮ-ರೋಮದಲ್ಲಿ ನನ್ನನ್ನು ಆವರಿಸಿಕೊಂಡಿದ್ದೀಯಾ. ಆದುದರಿಂದ ನೀನು ನನಗೆ ತುಂಬಾ ಪ್ರಿಯನಾಗಿದ್ದೀಯಾ ಎಂದು ಹೇಳಿ ಅರ್ಜುನನ್ನು ಪ್ರೇಮದಿಂದ ಆಲಂಗಿಸಿಕೊಂಡನು.

ಲೀಲಾಧಾರಿಯಾದ ಕೃಷ್ಣನೇ, ಭಕ್ತನೂ ನೀನೇ..ದೇವನೂ ನೀನೇ...ಮಾಡುವವನೂ ನೀನೇ....ಮಾಡಿಸುವವನೂ ನೀನೇ.....ಭಕ್ತ ಮತ್ತು ದೇವರಿಗೆ ಜಯವಾಗಲಿ......
ಯಾರ ಆಚರಣೆಗಳು ಪೂಜಿಸಲು ಯೋಗ್ಯವಾಗಿದೆಯೋ ಅಂತಹವರ ಚರಣಗಳನ್ನೇ ಪೂಜಿಸಲಾಗುತ್ತದೆ.
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

ಬಿಲ್ವಾಷ್ಟಕಮ್

🌺🙏ಶುಭೋದಯ🙏🌺 
ಬಿಲ್ವಾಷ್ಟಕಮ್ :
ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ

ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಚಿದ್ರೈಃ ಕೋಮಲೈಃ ಶುಭೈಃ
ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ

ಕೋಟಿ ಕನ್ಯಾ ಮಹಾದಾನಂ ತಿಲಪರ್ವತ ಕೋಟಯಃ
ಕಾಂಚನಂ ಕ್ಷೀಲದಾನೇನ ಏಕಬಿಲ್ವಂ ಶಿವಾರ್ಪಣಂ

ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ

ಇಂದುವಾರೇ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಾಃ
ನಕ್ತಂ ಹೌಷ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ

ರಾಮಲಿಂಗ ಪ್ರತಿಷ್ಠಾ ಚ ವೈವಾಹಿಕ ಕೃತಂ ತಧಾ
ತಟಾಕಾನಿಚ ಸಂಧಾನಮ್ ಏಕಬಿಲ್ವಂ ಶಿವಾರ್ಪಣಂ

ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಂ
ಕೃತಂ ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ

ಉಮಯಾ ಸಹದೇವೇಶ ನಂದಿ ವಾಹನಮೇವ ಚ
ಭಸ್ಮಲೇಪನ ಸರ್ವಾಂಗಮ್ ಏಕಬಿಲ್ವಂ ಶಿವಾರ್ಪಣಂ

ಸಾಲಗ್ರಾಮೇಷು ವಿಪ್ರಾಣಾಂ ತಟಾಕಂ ದಶಕೂಪಯೋಃ
ಯಜ್ನಕೋಟಿ ಸಹಸ್ರಸ್ಚ ಏಕಬಿಲ್ವಂ ಶಿವಾರ್ಪಣಂ

ದಂತಿ ಕೋಟಿ ಸಹಸ್ರೇಷು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನಮ್ ಏಕಬಿಲ್ವಂ ಶಿವಾರ್ಪಣಂ

ಬಿಲ್ವಾಣಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
ಅಘೋರ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ

ಸಹಸ್ರವೇದ ಪಾಟೇಷು ಬ್ರಹ್ಮಸ್ತಾಪನ ಮುಚ್ಯತೇ
ಅನೇಕವ್ರತ ಕೋಟೀನಾಮ್ ಏಕಬಿಲ್ವಂ ಶಿವಾರ್ಪಣಂ

ಅನ್ನದಾನ ಸಹಸ್ರೇಷು ಸಹಸ್ರೋಪ ನಯನಂ ತಧಾ
ಅನೇಕ ಜನ್ಮಪಾಪಾನಿ ಏಕಬಿಲ್ವಂ ಶಿವಾರ್ಪಣಂ

ಬಿಲ್ವಸ್ತೋತ್ರಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ
 💐💐🙏🙏🙏💐💐🙏🙏🙏💐💐

ನಿಜವಾದ ಪುಷ್ಪಾರ್ಚನೆ

🚩 *🍁 ಸಚ್ಚಿಂತನೆ.🍁*

🌸 *ನಿಜವಾದ ಪುಷ್ಪಾರ್ಚನೆ.*🌸

🌼 ಭಗವಂತನನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲೂ ಸಹ ಸಾಮಾನ್ಯವಾಗಿ ಹೂವಿನಿಂದ ಪೂಜಿಸುತ್ತೇವೆ. ಎಷ್ಟು ತುಟ್ಟಿಯಾದ (ಹೆಚ್ಚು ಬೆಲೆಯುಳ್ಳ) ಹೂವಿನಿಂದ ಪೂಜಿಸುತ್ತೇವೆಯೋ ಅಷ್ಟು ಪುಣ್ಯ ಬರುತ್ತದೆ ಎಂದು ನಮ್ಮಲ್ಲನೇಕರು ಭಾವಿಸುತ್ತೇವೆ.

🌸 ಎಷ್ಟು ದುಡ್ಡು ಖರ್ಚು ಮಾಡಿ ಪೂಜೆ ಮಾಡಿದೆವು ಎಂದು ಹಲವರು ಸಂಭ್ರಮದಿಂದ ಹೇಳಿಕೊಳ್ಳುವುದನ್ನೂ ಸಹ ಸಾಮಾನ್ಯವಾಗಿ ನೋಡುತ್ತಿರುತ್ತೇವೆ.

🌼 ಗಿಡಗಳಲ್ಲಿ ಬಿಡುವ ಹೂವು ಸಾಲದೆಂದು ಕೆಲವು ಧನವಂತರು ಬಂಗಾರದ ಹೂವುಗಳನ್ನು ಮಾಡಿಸುತ್ತಾರೆ. 

🌸 ಶಿವನಿಗೆ ಬಂಗಾರದ ಬಿಲ್ವಪತ್ರೆಗಳನ್ನೂ, ವಿಷ್ಣುವಿಗೆ ಬಂಗಾರದ ತುಳಸೀ ದಳಗಳನ್ನೂ, ಅಮ್ಮನವರಿಗೆ ಬಂಗಾರದ ಹೂವುಗಳಿಂದ ಅರ್ಚಿಸಿ ಅದು ತಮ್ಮ ಉನ್ನತವಾದ ಭಕ್ತಿಗೆ ನಿದರ್ಶನವೆಂದು ಭಾವಿಸುತ್ತಾರೆ. 

🌼 ಭೋಗಗಳಿಗೆ ನಿಲಯವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ನಿವಾಸವಿರುವ ಭಾರತೀಯರಲ್ಲಿ ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗಿಯೇ ಕಂಡುಬರುತ್ತವೆ. 

🌸 ಆದರೆ, 
ಭಗವಂತನು, ಹೂವುಗಳ ಬೆಲೆಯನ್ನಾಧರಿಸಿ ವರ್ತಕನಂತೆ ಪುಣ್ಯವನ್ನು ಕರುಣಿಸುವುದಿಲ್ಲ. 

🌼 ಪುಷ್ಪಾರ್ಚನೆಯ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದುದು ಭಕ್ತಿಯಾಗಿದೆ. 

🌸 ಇದೇ ವಿಷಯವನ್ನು ಗೀತೆಯಲ್ಲಿ *ಪತ್ರಂ, ಪುಷ್ಪಂ, ಫಲಂ, ತೋಯಂ* (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ ಯಾವುದನ್ನಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಅಪ್ಪಣೆ ಕೊಡಿಸಿದ್ದಾನೆ. 

🌼 ದೇವರಿಗೆ ಸಮರ್ಪಿಸ ಬೇಕಾಗಿರುವುದು ಮನಸ್ಸು ಎನ್ನುವ ಪುಷ್ಪ ಎಂದು ಆದಿ ಶಂಕರರು ತಮ್ಮ ಶಿವಾನಂದ ಲಹರಿಯಲ್ಲಿ ವಿವರಿಸಿದ್ದಾರೆ.

🌸 ಹಾಗಾದರೆ, 
ಭಗವಂತನಿಗೆ ಇಷ್ಟವಾದ ಪುಷ್ಪವಾವುದು.? 
ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ. ಆದರೆ, ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.

*ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ*
*ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l*
*ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ*
*ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll*

🌼 ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ *ಅಹಿಂಸೆ.*

🌸 ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು. 

🌼 ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು. 

🌸 ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡೆಣಿಸ ಬಾರದು.

🌼 ಎರಡನೆಯ ಪುಷ್ಟವೆ *ಇಂದ್ರಿಯ ನಿಗ್ರಹ.*

🌸 ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾ ನ್ಯಾಯಗಳನ್ನು, ಧರ್ಮಾ ಧರ್ಮಾಗಳನ್ನು ನೋಡದೆ. 

🌼 ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗ ಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು.

🌸 ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನುವುದರ ಲಕ್ಷಣಗಳು. 

🌼 *ಇಂದ್ರಿಯ ನಿಗ್ರಹವು* ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.

🌸 *ಸರ್ವಭೂತ ದಯೆ* ಮೂರನೆಯ ಪುಷ್ಪ. 

🌼 ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ - ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರ ಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.

🌸 ನಾಲ್ಕನೇ ಪುಷ್ಪವೇ *ಕ್ಷಮಾಗುಣ.* ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.

🌼 *ಶಾಂತಿ* ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗ ಬಾರದು. 

🌸 ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿ ಕೊಳ್ಳಬೇಕು.

🌼 ಆರನೆಯ ಪುಷ್ಪವೆ *ತಪಸ್ಸು.* ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. 
ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.

🌸 ಏಳನೆಯ ಪುಷ್ಪವೆ *ಧ್ಯಾನ.* ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.

🌼 ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರ ಬೇಕಾಗಿರುವುದು ಎಂಟನೆಯ ಪುಷ್ಪವಾದ *ಸತ್ಯ.*

🌸 ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.

🌼 ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು. 
ಆದರೆ, 
ಪೂಜಾ ಸಮಯದಲ್ಲಿ ತಪ್ಪದೇ ಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. 

*ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು.*
*- ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಎನ್ನುವುದನ್ನು ಮರೆಯಬಾರದು.*.

*ಶ್ರೀ ಕೃಷ್ಣಾರ್ಪಣಮಸ್ತು. 🙏

ಅಣಿಮಾ_ಮುಂತಾದ_ಎಂಟು_ಗುಣಗಳು

🌹 *[[ #*ಓಂ_ಶ್ರೀ_ಭಗವಾನ್_ಮಹಾವೀರ_ಸ್ವಾಮಿಯೇ_ನಮಃ ]]* 🌹

*#ಸಂಚಿಕೆ_791*

*#ಕರಣಾನುಯೋಗ*

*#ಊರ್ಧ್ವಲೋಕ*

*#ವೈಮಾನಿಕ_ದೇವತೆಗಳು*

*#ಏಕಭವತಾರಿ_ದೇವತೆಗಳು*

ತನ್ನ ಅಗ್ರ ಮಹಿಷೀ ಮತ್ತು ಲೋಕಪಾಲರ ಸಹಿತವಾಗಿ ಸೌಧರ್ಮ ಇಂದ್ರ , ಎಲ್ಲಾ ದಕ್ಷಿಣೇಂದ್ರರು , ಸರ್ವಾರ್ಥಸಿದ್ಧಿಯ ದೇವರು ಹಾಗೂ ಲೌಕಾಂತಿಕ ದೇವರು ನಿಯಮದಿಂದ ಏಕ ಭವತಾರಿಗಳಾಗಿರುತ್ತಾರೆ. ಎಂದರೆ ಅವರು ಸ್ವರ್ಗದಿಂದ ಚ್ಯುತರಾಗಿ ಮನುಷ್ಯರಾಗುತ್ತಾರೆ. ಮತ್ತು ಅದೇ ಭವದಲ್ಲಿ ಮುನಿಗಳಾಗಿ ಮೋಕ್ಷವನ್ನು ಹೊಂದುತ್ತಾರೆ.

*#ಅಣಿಮಾ_ಮುಂತಾದ_ಎಂಟು_ಗುಣಗಳು*

ಎಲ್ಲಾ ದೇವತೆಗಳಿಗೂ ವೈಕ್ರಿಯಿಕ ಶರೀರದ ನಿಮಿತ್ತದಿಂದ ಎಂಟು ಪ್ರಕಾರವಾದ ವಿಶೇಷ ಗುಣಗಳು ಇರುತ್ತವೆ. ಅವುಗಳೆಂದರೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಈಶತ್ವ, ವಶಿತ್ವ, ಪ್ರಾಪ್ತಿ ಮತ್ತು ಪ್ರಕಾಮ್ಯ.

*#ಅಣಿಮಾ*

ತನ್ನ ಶರೀರವನ್ನು ಅಣುವಿನಂತೆ ಚಿಕ್ಕದನ್ನಾಗಿ ಮಾಡಿಕೊಳ್ಳುವ ಸಾಮಾರ್ಥ್ಯಕ್ಕೆ ಅಣಿಮಾ ಎನ್ನುವರು.

*#ಮಹಿಮಾ*

ಶರೀರವನ್ನು ಮೇರುವಿನಂತೆ ವಿಶಾಲವನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಮಹಿಮಾ ಎನ್ನುವರು.

*#ಗರಿಮಾ*

ಶರೀರವನ್ನು ವಜ್ರದಂತೆ ಭಾರವನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಗರಿಮಾ ಎನ್ನುವರು.

*#ಲಘಿಮಾ*

ಶರೀರವನ್ನು ಭಾರ ರಹಿತವನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಲಘಿಮಾ ಎನ್ನುವರು.

*#ಈಶತ್ವ*

ಜಗತ್ತಿನಲ್ಲೆಲ್ಲಾ ಪ್ರಭುತ್ವ ಹೊಂದುವ ಸಾಮರ್ಥ್ಯಕ್ಕೆ ಈಶತ್ವ ಎನ್ನುವರು.

*#ವಶಿತ್ವ*

ಸಮಸ್ತ ಜೀವರನ್ನೂ ವಶಪಡಿಸಿಕೊಳ್ಳುವ ಸಾಮರ್ಥ್ಯಕ್ಕೆ ವಶಿತ್ವ ಎನ್ನುವರು.

*#ಪ್ರಾಪ್ತಿ*

ಭೂಮಿಯಲ್ಲಿದ್ದುಕೊಂಡು ಬೆರಳಿನ ತುದಿಯಿಂದ ಸೂರ್ಯ ಚಂದ್ರ ಮುಂತಾದವರನ್ನು ಸ್ಪರ್ಶಿಸುವ ಸಾಮರ್ಥ್ಯಕ್ಕೆ ಪ್ರಾಪ್ತಿ ಎನ್ನುವರು.

*#ಪ್ರಾಕಾಮ್ಯ*

ಜಲದಂತೆ ಭೂಮಿಯಲ್ಲಿ ಮತ್ತು ಭೂಮಿಯಂತೆ ನೀರಿನಲ್ಲಿ ಗಮನ ( ಸಂಚರಿಸುವ ) ಮಾಡುವ ಸಾಮರ್ಥ್ಯಕ್ಕೆ ಪ್ರಾಪ್ತಿ ಎನ್ನುವರು.

ಎಲ್ಲ ದೇವತೆಗಳು ಮೇಲಿನ ಎಂಟು ಪ್ರಕಾರದ ಶಕ್ತಿಗಳನ್ನು ಉಪಯೋಗಿಸಿಕೊಂಡು ಜೀವನ ಪರ್ಯಂತ ಇಂದ್ರಿಯ ಸುಖವನ್ನು ಅನುಭವಿಸುತ್ತಿರುತ್ತಾರೆ.

*#ಮುಂದುವರೆಯುತ್ತದೆ...*