Monday, 26 December 2022

*ದೇವರನ್ನು ಆಶ್ರಯಿಸುವ ವಿಧಾನ

# **ದೇವರನ್ನು ಆಶ್ರಯಿಸುವ ವಿಧಾನ:**
~~~~~~~~~~~~~~~~~~~

ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸ ಬಹುದು.

**1.ಮಾರ್ಜಾಲ ಕಿಶೋರ ನ್ಯಾಯ.
2.ಮರ್ಕಟ ಕಿಶೋರ ನ್ಯಾಯ.
3.ಮತ್ಸ್ಯ ಕಿಶೋರ ನ್ಯಾಯ.**

**ಮಾರ್ಜಾಲ ಕಿಶೋರ ನ್ಯಾಯ** ---- ಬೆಕ್ಕು ತನ್ನ ಮರಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಅದರ ಕತ್ತನ್ನು ಕಚ್ಚಿಕೊಂಡು ಉಪಾಯವಾಗಿ ಕೊಂಡೊಯ್ಯುತ್ತದೆ. ಆದರೆ ಮರಿಗೆ ಚೂರಾದರೂ ನೋವಾಗುವುದಿಲ್ಲ. ಹಾಗೆ ಭಗವಂತನನ್ನು ಆಶ್ರಯಿಸಿದವರಿಗೆ ಕರ್ಮಗಳನ್ನು ಕಳೆಯುತ್ತಾನೆ. ಆಗ ಮನುಷ್ಯ ಕಷ್ಟಗಳಲ್ಲಿ ತೊಳಲಾಡುತ್ತಾನೆ. ಅದರಿಂದ ಭಗವಂತ ಭಕ್ತನ ವಿಶ್ವಾಸಕ್ಕೆ ಚೂರೂ ಧಕ್ಕೆ ಬರದ ಹಾಗೆ ಕಾಪಾಡುತ್ತಾನೆ.

**ಮರ್ಕಟ ಕಿಶೋರ ನ್ಯಾಯ** --- ಕೋತಿ ತನ್ನ ಮರಿಯನ್ನು ಹಿಡಿದು ಕೊಳ್ಳುವುದೇ ಇಲ್ಲ. ಏಕೆಂದರೆ ಕೋತಿಯ ಮರಿ ಅಮ್ಮನನ್ನು ಎಷ್ಟು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆಂದರೆ ತಾಯಿಗೆ ತಲೆ ಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ಸಲೀಸಾಗಿ ಹಾರಾಡುತ್ತದೆ. ಹಾಗೇ ಇಲ್ಲಿ ಭಕ್ತ ಭಗವಂತನನ್ನು ಎಷ್ಟು ಗಟ್ಟಿಯಾಗಿ ಆಶ್ರಯಿಸುತ್ತಾನೆಂದರೆ ಯಾವುದೇ ಕಷ್ಟಗಳು ಯಾವುದೇ ಪರಿಸ್ಥಿತಿಯೂ ಅವನ ನಂಬಿಕೆಯನ್ನು ಕದಲಿಸಲಾರದು. ಇದು ಅತ್ಯಂತ ಕಠಿಣ, ಅಷ್ಟೇ ಶ್ರೇಷ್ಠವಾದುದು.

**ಮತ್ಸ್ಯ ಕಿಶೋರ ನ್ಯಾಯ** --- ಮೀನಿನ ಮರಿ ಕೋಟ್ಯಾಂತರ ಮೈಲಿ ದೂರದಲ್ಲಿದ್ದರೂ ಅದು ತಾಯಿಯನ್ನು ನೆನೆದರೆ ಸಾಕು ಮರುಕ್ಷಣ ತಾಯಿ ಕಣ್ಣಮುಂದೆ ಇರುತ್ತದೆ. ಹಾಗೆ ಭಗವಂತನನ್ನು ಸರಿಯಾಗಿ ನೆನೆಸಿ ಕೊಳ್ಳುವ ಕಲೆ ಗೊತ್ತಿದ್ದರೆ ನಮ್ಮ ಮನಸು ಸದಾ ಅವನಲ್ಲಿಲ್ಲದಿದ್ದರೂ ಕರೆದೊಡನೆ ಬರುತ್ತಾನೆ.

**ಸರ್ವೇ ಜನಾ ಸುಖಿನೋ ಭವಂತು|
ಸಮಸ್ತ ಸನ್ಮಂಗಳಾನಿ ಭವಂತು ||**

 

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

Monday, 19 December 2022

ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ?

ನಿತ್ಯಸತ್ಯ 

ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? 

ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨

ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ .

ಅವು 
೧) *ಮಲಿನ ಷೋಡಶ* 
೨) *ಮಧ್ಯಮ ಷೋಡಶ* 
೩) *ಉತ್ತಮ ಷೋಡಶ*
 ಎಂಬುದಾಗಿ ಮೂರು ವಿಭಾಗಗಳು .

*ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ|*
*ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ||*

ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ *ಮಲಿನ ಷೋಡಶ* ಎಂದು ಹೆಸರು .

*ಪ್ರಥಮಂ ವಿಷ್ಣವೇ ದದ್ಯಾದ್ವಿತೀಯಂ ಶ್ರೀಶಿವಾಯ ಚ|*
*ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್||*
*ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್|*
*ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ ||*
*ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ|*
*ಪ್ರೇತಾಯ ದಶಮಂ ಚೆವೈಕಾದಶಂ ವಿಷ್ಣವೇ ನಮಃ||*
*ದ್ವಾದಶಂ ಬ್ರಹ್ಮಣೇ ದದ್ಯಾದ್ವಿಷ್ಣವೇ ಚ ತ್ರಯೋದಶಮ್|*
*ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್||*
*ದದ್ಯಾತ್ಪುರುಷಾಯೈವ ಪಿಂಡಂ ಷೋಡಶಕಂ ಖಗ|*
*ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ||*
ಮೊದಲನೆಯ ಪಿಂಡವನ್ನು ವಿಷ್ಣುವಿಗೆ , ಎರಡನೆಯದನ್ನು ಶಿವನಿಗೆ , ಮೂರನೆಯದನ್ನು ಯಮನ ಕುಟುಂಬದವರಿಗೆ , ನಾಲ್ಕನೆಯದನ್ನು ಚಂದ್ರನಿಗೆ , ಐದನೆಯದನ್ನು ಅಗ್ನಿಗೆ , ಆರನೆಯದನ್ನು ಕವ್ಯವಾಹನಿಗೆ , ಏಳನೆಯದನ್ನು ಕಾಲನಿಗೆ , ಎಂಟನೆಯದನ್ನು ರುದ್ರನಿಗೆ , ಒಂಬತ್ತನೆಯದನ್ನು ಪರಮ ಪುರುಷನಿಗೆ , ಹತ್ತನೆಯದನ್ನು ಪ್ರೇತಕ್ಕೆ , ಹನ್ನೊಂದನೆಯದನ್ನು ವಿಷ್ಣುವಿಗೆ , ಹನ್ನೆರಡನೆಯದನ್ನು ಬ್ರಹ್ಮನಿಗೆ , ಹದಿಮೂರನೆಯದನ್ನು ವಿಷ್ಣುವಿಗೆ , ಹದಿನಾಲ್ಕನೆಯದನ್ನು ಶಿವನಿಗೆ , ಹದಿನೈದನೆಯದನ್ನು ಯಮನಿಗೆ , ಮತ್ತು ಹದಿನಾರನೆಯದನ್ನು ತತ್ಪುರುಷನಿಗೆ ಕೊಡಬೇಕು. ಹೀಗೆ ಹದಿನಾರು ಪಿಂಡದಾನಗಳು *ಮಧ್ಯಮ ಷೋಡಶ* ಎನಿಸಿಕೊಳ್ಳುವವು .

*ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |*
*ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||*
*ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|*
*ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||*

ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) 1 . ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು . 

ಇವುಗಳು *ಉತ್ತಮ ಷೋಡಶ* ಎಂದು ಕರೆಸಿಕೊಳ್ಳುವವು .

ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ *ಸೌಮ್ಯ* ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ *ಉತ್ತಮ ಷೋಡಶ* ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ . 

ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ .

 ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .

ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ *ಮಮ ಸಮಸ್ತ ಪಿತೃಣಾಂ ನಿರತಿಶಯ ಸಾನಂದ ಬ್ರಹ್ಮಲೋಕ ಅವಾಪ್ತ್ಯರ್ಥಂ .......* ಎಂಬಲ್ಲಿ ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ . 

ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ ,

 ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .

ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ  ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ .

✍️ ಬ್ರಾಹ್ಮಣ ಪ್ರೀಯ

ಶನಿ ದೇವರಿಗೆ ಹೆಂಡತಿಯಿಂದ ಶಾಪವಿದೆ

ವಾಟ್ಸಾಪ್ ನಲ್ಲಿ ಸಿಕ್ಕಿದ ಶ್ರೀ ಶನಿಮಹಾತ್ಮನ ಬಗ್ಗೆ ಹೀಗೊಂದು ಕಥೆ.

🌹ಓಂ ನಮಃ ಶಿವಾಯ 🌹

*ಶನಿ ದೇವರಿಗೆ  ಹೆಂಡತಿಯಿಂದ ಶಾಪವಿದೆ ಎಂದು ಎಷ್ಟು ಜನರಿಗೆ ಗೊತ್ತು*😅😅😅
 
*ಪುಣ್ಯಭೂಮಿ ರಾಷ್ಟ್ರ ವೇದಿಕೆ ಯಲ್ಲಿ ಇದು ನಿಮಗೆ ಗೊತ್ತೇ?  ಇದರ ಬಗ್ಗೆ ಪೂರ್ಣ ಮಾಹಿತಿ ಕೇವಲ ಈ ಗುಂಪಿನಲ್ಲಿ ಮಾತ್ರ ತಪ್ಪದೇ ಪೂರ್ಣ ಲೇಖನ ಓದಿ ಮತ್ತು ಇತರರಿಗೂ ತಲುಪಿಸಿ*🙏🙏🙏

*ಸ್ವತಃ ಪತ್ನಿಯಿಂದಲೇ ಶಾಪಗ್ರಸ್ಥನಾಗಿದ್ದ ಶನಿದೇವರು..! ಪತ್ನಿಯೇ ಶಾಪ ನೀಡಲು ಕಾರಣವೇನು..🙆‍♂️?*

*ಹೆಚ್ಚಿನ ಜನರು ಶನಿಯೆಂದರೆ ಭಯಪಡುತ್ತಾರೆ.* ಇದಕ್ಕೆ ಮುಖ್ಯ ಕಾರಣ ಅವರಿಗೆ ಹಿಂದೂ ಪುರಾಣಗಳ ಬಗೆಗಿನ ಅಲ್ಪ ಜ್ಞಾನವಿರಬಹುದು. 

*ಶನಿ ಕೇವಲ ಸಂಕಷ್ಟವನ್ನು ತರುವ ದೇವನಲ್ಲ. ಆತ ಒಲಿದರೆ ಎಂತವನನ್ನಾದರೂ ಶ್ರೀಮಂತನನ್ನಾಗಿಸುತ್ತಾನೆ. ನ್ಯಾಯಾಧೀಶನಾದ ಶನಿಯನ್ನೇ ಆತನ ಪತ್ನಿ ಶಪಿಸಲು ಕಾರಣವೇನು..?* ಇಂದಿಗೂ ಜನರು 

*ಶನಿಯೆಂದರೆ ಭಯಪಡಲು ಈಕೆಯೂ ಕಾರಣಳೇ..?*

*ಶನಿದೇವನು ಓರ್ವ ವ್ಯಕ್ತಿಯ ಕಾರ್ಯಕ್ಕೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ.* ಶನಿವಾರ ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಶನಿದೇವನನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಬೇಕು ಎನ್ನುವ ನಂಬಿಕೆಯಿದೆ. ಶನಿವಾರದಂದು ನಿಜವಾದ ಭಕ್ತಿ ಮತ್ತು ಶ್ರದ್ಧೆಯಿಂದ ಶನಿದೇವನನ್ನು ಪೂಜಿಸುವ ಸಾಧಕನ ಎಲ್ಲಾ ಆಸೆಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. *ಶನಿ ದೇವನು ಕೋಪದ ಸ್ವಭಾವದವನು*. 

*ಶನಿದೇವನು ಯಾರ ಮೇಲೆ ಪ್ರಸನ್ನನಾಗುತ್ತಾನೋ, ಆ ವ್ಯಕ್ತಿ ಎಷ್ಟೇ ಬಡವನಾಗಿದ್ದರೂ ಶೀಘೃದಲ್ಲೇ ಶ್ರೀಮಂತನಾಗುತ್ತಾನೆ*
*ಓರ್ವ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲವ್ನನು ನಿಡುವ ಶನಿಯೇ ತನ್ನ ಪತ್ನಿಯಿಂದ ಶಾಪಗ್ರಸ್ಥನಾಗಿರುವುದು ನಿಮಗೆ ತಿಳಿದಿದೆಯೇ..?*

*ಶನಿದೇವನ ಪತ್ನಿಯರು ಎಷ್ಟು ಮಂದಿ ಇದ್ದಾರೆ  :*

*ಶನಿ ದೇವನನ್ನು ಮೆಚ್ಚಿಸುವ ಒಂದು ಮಾರ್ಗವೆಂದರೆ ಅವನ ಹೆಂಡತಿಯರನ್ನು ಪೂಜಿಸುವುದು.* ಪತ್ನಿಯರಲ್ಲಿ ಮೊದಲ *ಪತ್ನಿ ಧ್ವಜಿನಿ, ಧಾಮಿನಿ, ಕಂಕಾಲಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಷಿ ಮತ್ತು ಅಜ* ಎಂಬ ಎಂಟು ಮಂದಿ ಪತ್ನಿಯರಿದ್ದರು ಎಂದು ಹೇಳಲಾಗುತ್ತದೆ. *ಶನಿದೇವನನ್ನು ಮೆಚ್ಚಿಸಬೇಕಾದರೆ* ಆತನ ಪತ್ನಿಯರಲ್ಲಿ ಯಾವುದೇ *ಒಬ್ಬ ಪತ್ನಿಯ ಹೆಸರನ್ನು ಜಪಿಸಬೇಕು.* ಶನಿವಾರದಂದು ಅವರ ಹೆಸರನ್ನು ಜಪಿಸಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. *ಶನಿದೇವನ ದೃಷ್ಟಿ ಶಾಪಗ್ರಸ್ಥವೆಂಬ ನಂಬಿಕೆಯಿದೆ. ಇದಕ್ಕೆ ಆತನ ಪತ್ನಿ ಧಾಮಿನಿಯೇ ಮುಖ್ಯ ಕಾರಣ.*......

*ಶನಿ ದೇವನು ಶ್ರೀಕೃಷ್ಣನ ಪರಮ ಭಕ್ತ  :*

ಶನಿದೇವನು ತನ್ನ ಬಾಲ್ಯದಿಂದಲೂ ಶ್ರೀಕೃಷ್ಣನ ಕಟ್ಟಾ ಭಕ್ತನಾಗಿದ್ದನು. ಆಗಾಗ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಬಹಳ ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿಕೊಳ್ಳುತ್ತಿದ್ದನು. ದೊಡ್ಡವನಾದ ಮೇಲೂ ಕೃಷ್ಣನ ಮೇಲಿನ ಪ್ರೀತಿ ಹಾಗೆಯೇ ಇತ್ತು. *ವಯಸ್ಕನಾದ ಮೇಲೆ ಚಿತ್ರರಥನ ಮಗಳಾದ ಧಾಮಿನಿಯನ್ನು ಶನಿಯು ವಿವಾಹವಾಗುತ್ತಾನೆ.* ಅವನ ಪತ್ನಿ *ಧಾಮಿನಿ ದೈವಿಕ ಶಕ್ತಿಯುಳ್ಳ* ಮಹಿಳೆ. ಅವಳು ಸುಂದರಿಯೊಂದಿಗೆ ಅತ್ಯಂತ ಬುದ್ಧಿವಂತಳಾಗಿದ್ದಳು.

*ಇದರಿಂದ ಶನಿದೇವನ ಮೇಲೆ ಪತ್ನಿ ಕೋಪಗೊಂಡಳು:*

ದಂತಕಥೆಯ ಪ್ರಕಾರ, ಶನಿದೇವನು ವಿವಾಹವಾದ ಚಿತ್ರರಥನ ಮಗಳು ಧಾಮಿನಿ ಪರಮ ತೇಜಸ್ವಿನಿಯಾಗಿದ್ದಳು. ಶನಿದೇವನ ಹೆಂಡತಿ ಧಾಮಿನಿ ಮಕ್ಕಳನ್ನು ಹೊಂದುವ ಆಸೆಯಿಂದ ತನ್ನ ಪತಿಯನ್ನು ತಲುಪಿದಳು. ಆದರೆ ಶನಿದೇವನು ಶ್ರೀ ಕೃಷ್ಣನ ಆರಾಧನೆಯಲ್ಲಿ ಮಗ್ನನಾಗಿದ್ದನು. ಪತ್ನಿಯ ಪ್ರಯತ್ನದ ನಂತರವೂ ಶನಿದೇವನ ಧ್ಯಾನಕ್ಕೆ ಯಾವುದೇ ಭಂಗ ಬರಲಿಲ್ಲ. ಹೆಂಡತಿ ಕಾದು ಸುಸ್ತಾಗಿದ್ದಳು. ಇದರಿಂದ ಕೋಪಗೊಂಡ ಶನಿದೇವನ ಪತ್ನಿ ಧಾಮಿನಿಯು ತನ್ನ ಸ್ವಂತ ಪತಿಯನ್ನು ಶಪಿಸುತ್ತಾಳೆ.

*ಅದಕ್ಕೇ ಶನಿದೇವ ತಲೆಬಾಗಿ ನಡೆಯುತ್ತಾನೆ:*

ಇಂದಿನಿಂದ ಯಾರು *ಶನಿಯನ್ನು ಕಣ್ಣೆತ್ತಿ ನೋಡುತ್ತಾರೋ ಅವರು ನಾಶವಾಗುತ್ತಾರೆ ಎಂದು ಶನಿಯನ್ನು ಆತನ ಪತ್ನಿ ಧಾಮಿನಿ ಶಪಿಸುತ್ತಾಳೆ.* ಶನಿದೇವನ ತಪಸ್ಸು ಮುಗಿದ ನಂತರ ಅವನು ನಾನು ತನ್ನ ಹೆಂಡತಿಯ ಮಾತನ್ನು ಏಕೆ ಕೇಳಲಿಲ್ಲ ಎಂದು ತನ್ನ ಹೆಂಡತಿಗೆ ವಿವರಿಸಿದನು. ಇಡೀ ಘಟನೆಯನ್ನು ತಿಳಿದ ಶನಿ ದೇವನ ಪತ್ನಿ ತನ್ನ ಬಗ್ಗೆ ಬೇಸರಗೊಳ್ಳುತ್ತಾಳೆ. ಅನಾವಶ್ಯಕವಾಗಿ ತನ್ನ ಸ್ವಂತ ಗಂಡನನ್ನು ಶಪಿಸಿದೆನಲ್ಲ ಎಂದು ಮರುಗುತ್ತಾಳೆ. ಶಾಪವನ್ನು ಹಿಂತೆಗೆದುಕೊಳ್ಳುವ ಶಕ್ತಿ ಹೆಂಡತಿಗೆ ಇರಲಿಲ್ಲವಾದ್ದರಿಂದ ಶನಿಯು ತನ್ನ ತಲೆಯನ್ನು ಬಗ್ಗಿಸಿ ನಡೆಯುತ್ತಾನೆ. ಹಾಗೂ ಅಂದಿನಿಂದ ಎಲ್ಲರೂ ಕೂಡ ಶನಿಯನ್ನು ತಲೆ ಎತ್ತಿ ನೋಡಲು ಭಯಪಡುತ್ತಾರೆ.

ಯಾವುದೇ ದೇವರನ್ನು ಪೂಜಿಸುವಾಗ ನಾವು ತಲೆ ಎತ್ತಿ ದೇವರನ್ನು ನೋಡುತ್ತಾ ಪೂಜೆಯನ್ನು ಮಾಡುತ್ತೇವೆ. *ಆದರೆ, ಶನಿ ದೇವನನ್ನು ಪೂಜಿಸುವಾಗ ನಾವು ಶನಿಯನ್ನು ತಲೆ ಎತ್ತಿ ನೋಡಿ ಪೂಜಿಸಬಾರದು*... ಆತನ *ಪಾದಗಳನ್ನು* ನೊಡುತ್ತಾ ಪೂಜೆಯನ್ನು ಮಾಡಬೇಕು. *ಇಲ್ಲದಿದ್ದರೆ ಶನಿ ನೀಡುವ ಕೆಟ್ಟ ಪರಿಣಾಮಗಳಿಗೆ ಬೆಲೆತೆರಬೇಕಾಗುತ್ತದೆ*
🙏🙏🙏🙏🙏🙏🙏🙏🙏

ಸಂಕಷ್ಟ ಹರ ಚತುರ್ಥಿ

ಸಂಕಷ್ಟ ಹರ ಚತುರ್ಥಿ ಮಹತ್ವ ಓದಿ ತಿಳಿಯಿರಿ .ತಿಳಿದು ಅಚರಿಸಿ .

ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ.

ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.

ಸಂಕಷ್ಟ ಹರ ಚತುರ್ಥಿಯ ಮಹತ್ವ:

ಸಂಕಷ್ಟಹರ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟಹರ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.

ಆಚರಣೆ ಹೇಗೆ?
ಸಾಧ್ಯವಾದಲ್ಲಿ ಉಪವಾಸ ಮಾಡಬಹುದು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು.
ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಸಂಕಷ್ಟ ಹರ ವ್ರತದ ಕಥೆ

ಧರ್ಮರಾಯನಿಗೆ ಸೂತ ಮಹರ್ಷಿಗಳು ತಿಳಿಸಿದ ವ್ರತ
ದುರ್ಯೋಧನನ ಕುತಂತ್ರಕ್ಕೆ ಬಲಿಯಾಗಿ ತನ್ನ ರಾಜ್ಯ, ಐಶ್ವರ್ಯ ಎಲ್ಲವನ್ನೂ ಕಳೆದುಕೊಂಡು ತನ್ನ ತಮ್ಮಂದಿರೊಂದಿಗೆ ಕಾಡಿನ ಪಾಲಾಗಿ ದುಃಖದಲ್ಲಿ ಇದ್ದ ಧರ್ಮರಾಯನನ್ನು ಸೂತ ಪುರಾಣಿಕ ಮಹರ್ಷಿಗಳು ಸಮಾಧಾನ ಮಾಡಿದರು. ಆಗ ಧರ್ಮರಾಯನು ಸೂತರ ಬಳಿ ತನ್ನ ಕಷ್ಟಗಳೆಲ್ಲಾಲ್ಲ ಪರಿಹಾರವಾಗಿ ರಾಜ್ಯ ತನಗೆ ಮರಳಿ ಸಿಗಲು ಉತ್ತಮ ವ್ರತ ಪೂಜೆ ಒಂದನ್ನು ತಿಳಿಸಲು ಪ್ರಾರ್ಥಿಸಿದ.

ಆಗ ಪೂಜ್ಯರು ಧರ್ಮರಾಜನಿಗೆ ಸಾಕ್ಷಾತ್ ಪರಶಿವನೇ ಕುಮಾರಸ್ವಾಮಿಗೆ ತಿಳಿಸಿದ ವರಸಿದ್ಧಿ ವಿನಾಯಕ ವ್ರತವನ್ನು ಮಾಡಲು ತಿಳಿಸಿದರು. ಅಷ್ಟೇ ಅಲ್ಲ ನಳ ಮಹಾರಾಜನಿಗೆ ದಮಯಂತಿ ಸಿಕ್ಕಿದ್ದು ಹಾಗೂ ಕೃಷ್ಣ ಪರಮಾತ್ಮನಿಗೆ ಶಮಂತಕ ಮಣಿ ಸಹಿತ ಜಾಂಬವತಿ ಲಭಿಸಿದ್ದು ಇದೇ ವ್ರತವನ್ನು ಆಚರಣೆ ಮಾಡಿದ್ದರಿಂದ. ಶ್ರೀರಾಮ, ಭಗೀರಥ ಕೂಡ ಈ ವ್ರತದ ಆಚರಣೆ ಮಾಡಿದ್ದಾರೆ.

ಎಲ್ಲರೂ ಆಚರಿಸುವ ವ್ರತ
ಈ ವ್ರತವನ್ನು ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಹೀಗೆ ಎಲ್ಲ ವರ್ಣದವರೂ ಮಾಡಬಹುದು. ಯಾವುದೇ ಜಾತಿ- ಧರ್ಮ- ಮತ- ಭೇದಗಳಿಲ್ಲದೆ ಎಲ್ಲರೂ ಆಚರಣೆ ಮಾಡಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರು ಬೇಕಾದರೂ ಈ ವ್ರತ ಮಾಡಬಹುದು.

ಇನ್ನು ಈ ವ್ರತಾಚರಣೆಯಿಂದ ಧನಾಕಾಂಕ್ಷಿಗೆ ಧನ, ವಿದ್ಯೆ ಬೇಕಾದವರಿಗೆ ಉತ್ತಮ ವಿದ್ಯೆ, ಆರೋಗ್ಯ ಅವಶ್ಯಕತೆ ಇರುವವರಿಗೆ ಉತ್ತಮ ಆರೋಗ್ಯ... ಹೀಗೆ ಭಕ್ತರ ನಾನಾ ವಿಧ ಬೇಡಿಕೆಗಳನ್ನು ಈಡೇರಿಸುವ ಅತ್ಯುತ್ತಮ ವ್ರತ ಇದಾಗಿದೆ.

ಶ್ರೀ ಗಣೇಶ ಮಾನಸ ಪೂಜಾಸ್ತುತಿ

ನಾನಾರತ್ನ ವಿಚಿತ್ರಕಂ ರಮಣಕಂ ಸಿಂಹಾಸನಂ ಕಲ್ಪಿತಂ|
ಸ್ನಾನಂ ಜಾಹ್ನವಿವಾರಿಣಾ ಗಣಪತೇ ಪೀತಾಂಬರಂ ಗೃಹ್ಯತಾಂ||
ಕಂಠಂ ಮೌಕ್ತಿಕ ಮಾಲಿಕಾ ಶ್ರುತಿಯುಗೇ ದ್ವೇಧಾರಿತೆ ಕುಂಡಲೇ|
ನಾನಾರತ್ನ ವಿರಾಜಿತೊ ರವಿ ವಿಭಾಯುಕ್ತಃ ಕಿರೀಟಃ ಶಿರೇ||೧||

ಭಾಲೇ ಚರ್ಚಿತ ಕೇಶರಂ ಮೃಗಮದಾಮೋದಾಂಕಿತಂ ಚಂದನಂ|
ಕಸ್ತೂರೀ ತಿಲಕೋದ್ಭವಂ ಸುಕುಸುಮಂ ಮಂದಾರ ದೂರ್ವಾಶಮಿ||
ಗುಗ್ಗೂಲೋದ್ಭವ ಧೂಪಕಂ ವಿರಚಿತಂ ದೀಪಂ ಸವರ್ತ್ಯಾಯುತಂ|
ಭಕ್ಷ್ಯಂ ಮೋದಕ ಸಂಯುತಂ ಗಣಪತೇ ಕ್ಷೀರೋದನಂ ಗೃಹ್ಯತಾಮ್||೨||

ತಾಂಬೂಲಂ ಮನಸಾಮಯಾ ವಿರಚಿತಂ, ಜಂಬೂಫಲಂ ದಕ್ಷಿಣಾ|
ಸಾಷ್ಟಾಂಗ ಪ್ರಣತಿಂ ಸ್ತುತಿಂ ಬಹುವಿಧಾಂ ಪೂಜಾ ಗೃಹಾಣ ಪ್ರಭೋ||
ಮೇ ಕಾಮಃ ಸತತಂ ತವಾರ್ಚನವಿಧೌ ಬುದ್ಧಿಸ್ತವಾಲಿಂಗನೇ|
ಸ್ವೇಚ್ಛಾತೇ ಸುಖದರ್ಶನೆ ಗಣಪತೇ ಭಕ್ತಿಸ್ತು ಪಾದಾಂಬುಜೇ||೩||

ಅರ್ಥ:
ಎಲೈ ಗಣಪತೇ, ಹಲವು ಬಗೆಯ ರತ್ನಗಳಿಂದ ವಿಚಿತ್ರವೂ ರಮಣೀಯವೂ ಆದ ಸಿಂಹಾಸನ ಗಂಗಾಜಲದಿಂದ ಸ್ನಾನ ಮತ್ತು ಪೀತಾಂಬರಗಳನ್ನು ನೀನು ಸ್ವೀಕರಿಸು.
ಕೊರಳಲ್ಲಿ ಮುತ್ತಿನ ಮಾಲೆಯೂ ಕಿವಿಗಳಲ್ಲಿ ಸೂರ್ಯಕಾಂತಿಯಿಂದ ಮಿನುಗುವ ಕುಂಡಲಗಳೂ ತಮ್ಮ ತಲೆಯ ಮೇಲೆ ಹಲವಾರು ತರದ ರತ್ನಗಳಿಂದ ಶೋಭಿಸುವ ಮುಕುಟವೂ ಇವೆ.(೧)

ಕಸ್ತೂರಿಯಿಂದ ಸಂತೋಷವನ್ನು ಮಾಡುವ ಚಂದನವೂ ಮತ್ತು ಕೇಶರಲೇಪನವುಳ್ಳ ಹಣೆಯುಳ್ಳವನೂ ಒಳ್ಳೆ ಹೂವು,ಎಕ್ಕೆ ಹೂವು, ಗರಿಕೆ ಗಳಿಂದ ತಲೆಯನ್ನು. ಶೋಭಿತಗೊಳಿಸಿದವನೂ ಆದ ಗಣೇಶನೆ,ಗುಗ್ಗುಳದ ಧೂಪ ಮತ್ತು ಸುಂದರವಾದ ಬತ್ತಿಯುಳ್ಳ ದೀಪ, ಉಂಡೆಯ ಊಟ, ಮತ್ತು ಹಾಲು ಅನ್ನ ಇವನ್ನು ನೀನು ಸ್ವೀಕರಿಸು.(೨)

ನಾನು ಮನಸ್ಸಿನಿಂದ ತಯಾರಿಸಿದ ತಾಂಬೂಲ, ನೆರಳೆಹಣ್ಣು ದಕ್ಷಿಣೆ, ಸಾಷ್ಟಾಂಗ ನಮಸ್ಕಾರ, ಬಹುವಿಧ ಪೂಜೆ, ಸ್ತುತಿ ಇವೆಲ್ಲವನ್ನು ಪ್ರಭುವೆ ನೀನು ಸ್ವೀಕರಿಸು. ನನ್ನ ಬಯಕೆಯು ಯಾವಾಗಲೂ ನಿನ್ನ ಪೂಜೆಯಲ್ಲಿ, ಬುದ್ಧಿಯು ನಿನ್ನ ಧ್ಯಾನದಲ್ಲಿ, ನನ್ನ ಇಚ್ಛೆಯು ನಿನ್ನ ಮುಖದರ್ಶನದಲ್ಲಿ ಮತ್ತು ಭಕ್ತಿಯು ನಿಮ್ಮ ಚರಣಗಳಲ್ಲಿ ಎಲೈ ಗಣಪತಿಯೇ ನೆಲೆಗೊಳ್ಳಲಿ.

ಸಾಹಿತ್ಯ: ಪುರಂದರದಾಸರ ಸಾಹಿತ್ಯ

ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!

ಪಾಶಾಂಕುಶಧರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!

ಮೋದದಿ ನಿನ್ನಯ ಪಾದವ ತೋರೊ
ಸಾಧುವಂದಿತನೆ ಆದರದಿಂದಲಿ |೨|
ಸರಸಿಜನಾಭ ಶ್ರೀ ಪುರಂದರ ವಿಠ್ಠಲನ |೩|
ನಿರತ ನೆನೆಯುವಂತೆ ವರ ದಯ ಮಾಡೊ |೩|

ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ

ಎಲ್ಲಾ ಸಂಕಷ್ಟ ಹರ ಗಣಪತಿಯನ್ನು ಪೂಜಿಸಿ
ನಿಮ್ಮ ಇಷ್ಟಾರ್ಥ ಸಿದ್ಧಿಯಾಗುವಂತೆ ಅವನು ಅನುಗ್ರಹಿಸುತ್ತಾನೆ.

#ಕೃಪೆ_ನಿರ್ಮಲರಾಜೇಶ್

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

🙏🏻 *ಮಂಡೋದರಿ ಏಕೆ ಪ್ರಾತಃಸ್ಮರಣೀಯಳು?* 🙏🏻

🚩 *ಬ್ರಾಹ್ಮಣ ಪ್ರಿಯ* 🚩

🙏🏻 *ಮಂಡೋದರಿ ಏಕೆ ಪ್ರಾತಃಸ್ಮರಣೀಯಳು?* 🙏🏻

ಪ್ರಕೃತಿಮಾತೆಯ ಎಲ್ಲ ಲಕ್ಷಣಗಳನ್ನೂ ಹೊತ್ತು ಸ್ತ್ರೀ, ಸತಿ ಎಂದು ಕರೆಯಲ್ಪಡುವ ಪಂಚಕನ್ಯೆಯರ ಸ್ಮರಣಮಾತ್ರ ದಿಂದಲೇ, ಪಾಪ ನಾಶವಾಗುವುದು ಎಂಬ ನಂಬಿಕೆ ಇದೆ. ಪ್ರಾತಃಸ್ಮರಣೀಯ ಪಂಚಕನ್ಯೆ ಯರಲ್ಲಿ, ಮಂಡೋದರಿಯೂ  ಒಬ್ಬಳು. ಮಂಡೋದರಿ, ದೈತ್ಯಶಿಲ್ಪಿ ಮಯನ ಮಗಳು. ಆಕೆಯನ್ನು ಒತ್ತಾಯವಾಗಿ ಎಳೆದು ತಂದು, ರಾವಣ ಮದುವೆಯಾದ. ಅವನೋ, ಯಾರೂ ಇದಿರಿಲ್ಲದವನು. ತನ್ನ ಪಾಪಕರ್ಮ ಗಳಿಂದಲೇ ತನ್ನ  ನಾಶವನ್ನು ಬರ ಮಾಡಿಕೊಂಡವನು.

ಇಂಥವನ ಪತ್ನಿಯಾಗಿದ್ದ ಮಂಡೋದರಿ, ಸುಗುಣ ಸಂಪನ್ನೆ. ರಾವಣ, ಪರಮಪಾವನೆ, ಪತಿವ್ರತೆ, ಸದ್ಧರ್ಮಚಾರಿಣಿಯಾದ, ಸೀತೆಯನ್ನು ಹೇಡಿಯಂತೆ ಅಪಹರಿಸುವ ಯೋಜನೆ ಕೈಗೊಂಡ.  ಇದನ್ನರಿತ ಮಂಡೋದರಿ- “ಅದು ಅಧರ್ಮ. ಹಾಗೆ ಮಾಡಿದಲ್ಲಿ ನಿಮ್ಮ ಕುಲವೇ ನಾಶವಾಗುವುದು’ ಎಂದು ಗಂಡನಿಗೆ ಬುದ್ಧಿ ಹೇಳಿದಳು. ಆದರೆ, ಆತ ಆ ಮಾತನ್ನು ಪರಿಗಣಿಸದೆ ಸೀತಾಪಹರಣ ಮಾಡಿ, ತನ್ನ ಅಂತ್ಯವನ್ನು ತಾನೇ  ಸ್ವಾಗತಿಸಿದ.

ರಾಮ- ರಾವಣರ ಯುದ್ಧದಲ್ಲಿ, ಮಕ್ಕಳು ಸಾಯುತ್ತಾ ಬಂದ ಸನ್ನಿವೇಶವನ್ನು ಕೂಡಾ, ಮಂಡೋದರಿ ನಿರ್ವಿಕಾರ ಭಾವದಿಂದಲೇ ಸ್ವೀಕರಿಸುತ್ತಾಳೆ. ಗಂಡ ಕಡೆಯ ಬಾರಿಗೆ ಯುದ್ಧಕ್ಕೆ ಹೊರಟಾಗಲೂ, ಬುದ್ಧಿ ಮಾತುಗಳಿಂದ ಅವನ ಮನ ಪರಿವರ್ತನೆಗೆ ಯತ್ನಿಸುತ್ತಾಳೆ. ಅದಾವುದನ್ನೂ ಕೇಳದ ರಾವಣ ಯುದ್ಧದಲ್ಲಿ ಸತ್ತಾಗ,  ರಣರಂಗಕ್ಕೆ ಬಂದು ಗೋಳಾಡಿ, ರಾಮನಲ್ಲಿ ಶರಣಾಗಿ, ಯಾರ ಮಾತಿಗೂ ಬಗ್ಗದೇ ಚಿತೆಯನ್ನು ಏರುತ್ತಾಳೆ.

ವಿಭೀಷಣನನ್ನು ಅಭಿನಂದಿಸುತ್ತಾಳೆ, ಆಶೀರ್ವದಿಸುತ್ತಾಳೆ. ಸತೀ ಧರ್ಮವನ್ನು ಅರಿತಿದ್ದ ಮಂಡೋದರಿ, ಅದನ್ನು ಜೀವನವಿಡೀ ಪಾಲಿಸಿದಳು. ಅವಳದು ತ್ಯಾಗಮಯ ಜೀವನ. ಶ್ರೀರಂಗ ಮಹಾಗುರುಗಳ ಮಾತಿನಂತೆ- “ಸ್ತ್ರೀಯರು  ಸದ್ವಸ್ತುವನ್ನು, ಪುರುಷ ಸ್ವರೂಪವನ್ನು ಅರಿತ ಜ್ಞಾನಿಗಳಾಗಿದ್ದರೆ, ಅವರನ್ನು ಪುರುಷರೆಂದೇ, ಜ್ಞಾನಿಗಳು ಕರೆಯುತ್ತಾರೆ. ಪುರುಷ ಶರೀರವಿದ್ದರೂ, ಅದರ ಸ್ವರೂಪದ ಅರಿವಿಲ್ಲದ ಪ್ರಾಕೃತರನ್ನು, ಸ್ತ್ರೀಯರೆಂದೇ ಕರೆಯುತ್ತಾರೆ’.

ಮಂಡೋದರಿ ಈ ದೃಷ್ಟಿಯಲ್ಲಿ, ಸದ್ವಸ್ತುವನ್ನರಿತ   ಜ್ಞಾನಿಯೇ ಆಗಿದ್ದಾಳೆ. ಪತಿ ಅಧರ್ಮದ ಹಾದಿಯಲ್ಲಿ ಸಾಗುತ್ತಿದ್ದಾಗ, ಅದನ್ನು ಒಪ್ಪದೇ, ಆತನನ್ನು ಧರ್ಮದ ಹಾದಿ ಯಲ್ಲಿ ಕರೆದೊಯ್ಯಲು ಯತ್ನಿಸುವುದು; ಪತಿಯ ಪಾಪಕೃತ್ಯಕ್ಕೆ ಸಹಕರಿಸದೇ, ಧರ್ಮ ಪಾಲನೆಯೊಂದಿಗೆ  ಬದುಕುವುದು ಸತಿ ಧರ್ಮ. ಈ ಸೂಕ್ಷ್ಮವನ್ನು ಅರಿತು ಬದುಕಿ, ಜಗಕ್ಕೆ ಪ್ರಾತಃ ಸ್ಮರಣೀಯಳಾದಳು ಮಂಡೋದರಿ.

ಕೃಪೆ: *ಚಂಪಕಾ ನರಸಿಂಹಭಟ್, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

ದತ್ತಾತ್ರೇಯ ಜಯಂತಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌                  ‌                                               ‌
 *ದತ್ತಾತ್ರೇಯ ಜಯಂತಿ* 
      ‌                                                             
  ಇದೇ ಬುಧವಾರ ಡಿಸೆಂಬರ್ 7, 2022 ರಂದು *ಶ್ರೀ ದತ್ತ ಜಯಂತಿ*.             ‌‌    ‌            ‌     ‌    ‌     ‌                                                     ‌                                                                                                                                                      ಮಾರ್ಗಶಿರ ಮಾಸದ ಪೂರ್ಣಿಮೆಯಂದು ದತ್ತ ಜನ್ಮವಾದ ಕಾರಣ, ಈ ದಿನ ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ, ಈ ಮೂರೂ ದೇವರ ಶಕ್ತಿಯು ಕೇಂದ್ರಿತವಾಗಿ ದತ್ತಾತ್ರೇಯರಲ್ಲಿ ಸಮ್ಮಿಲಿತವಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಗುರುದೇವ ದತ್ತರ ಸ್ಮರಣೆ ಮಾತ್ರದಿಂದ  ಕಷ್ಟಗಳು ನಾಶವಾಗುತ್ತವೆ. ಈ ದಿನ ಶ್ರದ್ಧೆಯಿಂದ ಶ್ರೀ ಗುರು ದತ್ತಾತ್ರೇಯರನ್ನು ಪೂಜಿಸಿದಲ್ಲಿ ಶಿವ ಮತ್ತು ವಿಷ್ಣುವಿನ ಕೃಪೆ ಪ್ರಾಪ್ತವಾಗುವುದಲ್ಲದೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ.                        ‌    ‌    ‌                                                                                                                                                                              ‌                                                                                                                                                          ‌ ಭಗವಾನ್ ದತ್ತಾತ್ರೇಯನು ಬ್ರಹ್ಮ , ವಿಷ್ಣು ಮತ್ತು ಶಿವನ ದೈವಿಕ ರೂಪದಿಂದ ಜನಿಸಿದನು. ಭಗವಾನ್ ದತ್ತಾತ್ರೇಯ ಮತ್ತು ಈ ತ್ರಿಮೂರ್ತಿಗಳನ್ನು ದತ್ತಾತ್ರೇಯ ಜಯಂತಿಯ ದಿನದಂದು ಪೂಜಿಸಲಾಗುತ್ತದೆ. ದತ್ತಾತ್ರೇಯ ಭಗವಾನ್‌ನಲ್ಲಿ, ನೀವು ಎಲ್ಲಾ ಮೂರು ದೇವರುಗಳನ್ನು ನೋಡಬಹುದು. ದತ್ತ ಜಯಂತಿ ಒಂದು ಪ್ರಮುಖ ಹಿಂದೂ ಹಬ್ಬವಾಗಿದ್ದು, ಇದನ್ನು ಆಗ್ರಾಹ್ಯನ ಹುಣ್ಣಿಮೆಯ ರಾತ್ರಿ ಆಚರಿಸಲಾಗುತ್ತದೆ. ಭಗವಾನ್ ದತ್ತಾತ್ರೇಯನನ್ನು ಭಗವಾನ್ ವಿಷ್ಣುವಿನ 24 ಅವತಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವರು ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಪರಿಸರವನ್ನು ಗಮನಿಸುವುದರ ಮೂಲಕ ಜ್ಞಾನವನ್ನು ಪಡೆದರು ಎಂದು ನಂಬಲಾಗಿದೆ.

ಭಗವಾನ್ ದತ್ತಾತ್ರೇಯನನ್ನು ಸಾಮಾನ್ಯವಾಗಿ ಮೂರು ತಲೆಗಳು ಮತ್ತು ಆರು ಕೈಗಳಿಂದ ಚಿತ್ರಿಸಲಾಗಿದೆ. ಅವನ ಮೂರು ತಲೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವನ್ನು ಪ್ರತಿನಿಧಿಸುತ್ತವೆ. ಆರು ಕೈಗಳಲ್ಲಿ ಬ್ರಹ್ಮನ ಕಮಂಡಲ ಮತ್ತು ಜಪಮಾಲೆ, ವಿಷ್ಣುವಿನ ಶಂಖ ಮತ್ತು ಚಕ್ರ, ಶಿವನ ತ್ರಿಶೂಲ ಮತ್ತು ಡಮರು. ಭಾರತದಾದ್ಯಂತ ದತ್ತಾತ್ರೇಯನಿಗೆ ಸಮರ್ಪಿತವಾಗಿರುವ ದೇವಾಲಯಗಳಲ್ಲಿ ದತ್ತ ಜಯಂತಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಕೆಲವು ಪ್ರಮುಖ ದೇವಾಲಯಗಳು ಕರ್ನಾಟಕದ ಗುಲ್ಬರ್ಗಾ ಬಳಿಯ ಗಂಗಾಪುರ, ಮಹಾರಾಷ್ಟ್ರದ ಕೊಲ್ಲಾಪುರದ ನರಸಿಂಹ ವಾಡಿ, ಕಾಕಿನಾಡ ಬಳಿಯ ಆಂಧ್ರಪ್ರದೇಶದ ಪಿಠಾಪುರ, ಸಾಂಗ್ಲಿಯ ಔದುಂಬರ್ ಮತ್ತು ಸೌರಾಷ್ಟ್ರದ ಗಿರ್ನಾರ್‌ನಲ್ಲಿವೆ. ಈ ಬಾರಿಯ ದತ್ತಾತ್ರೇಯ ಜಯಂತಿ ಯಾವಾಗ ಎಂದು ತಿಳಿಯೋಣ:

*ದತ್ತಾತ್ರೇಯ ಜಯಂತಿ ಮುಹೂರ್ತ*          ‌       ‌     ‌     ‌      ‌                                                                                                                    ದಿನಾಂಕ ಮತ್ತು ತಿಥಿ ಸಮಯಗಳು
ದತ್ತಾತ್ರೇಯ ಜಯಂತಿ: ಬುಧವಾರ, ಡಿಸೆಂಬರ್ 7, 2022
ಪೂರ್ಣಿಮಾ ತಿಥಿ ಪ್ರಾರಂಭ : ಡಿಸೆಂಬರ್ 07, 2022 ಬೆಳಗ್ಗೆ ಬುಧವಾರ 08:01ಕ್ಕೆ
ಪೂರ್ಣಿಮಾ ತಿಥಿ ಮುಕ್ತಾಯ: ಡಿಸೆಂಬರ್ 08, 2022 ಬೆಳಗ್ಗೆ ಗುರುವಾರ 09:37ಕ್ಕೆ
 ‌                                                                                                                                                                                                                                 *ದತ್ತಾತ್ರೇಯ ದೇವರ ಕಥೆ*
                                                                                                         ಭಗವಾನ್ ದತ್ತಾತ್ರೇಯರು ಮಹರ್ಷಿ ಅತ್ರಿ ಮತ್ತು ಅವರ ಪತ್ನಿ ಅನುಸೂಯಾದೇವಿ ಅವರ ಮಗ. ಅನುಸೂಯಾ ಮಹಾ ಪತಿವ್ರತೆ, ಸದ್ಗುಣಿ, ಶ್ರದ್ಧೆಯುಳ್ಳ ಮತ್ತು ಅತ್ಯಂತ ಸದ್ಗುಣಶೀಲ ಮಹಿಳೆ. ಅವರು ಬ್ರಹ್ಮ, ವಿಷ್ಣು ಮತ್ತು ಶಿವನ ಶಕ್ತಿ ಮತ್ತು ಗುಣಗಳನ್ನು ಹೊಂದಿರುವ ಮಗನಿಗಾಗಿ ಪ್ರಾರ್ಥಿಸಿದರು. ಅದರ ಫಲವಾಗಿ ದತ್ತಾತ್ರೇಯ ಜನನವಾಯಿತು. ಅವರನ್ನು ಭಾರತದ ಪ್ರಾಚೀನ ದೇವತೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ದತ್ತಾತ್ರೇಯನನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಅಥರ್ವವೇದದ ಭಾಗವಾಗಿರುವ ದತ್ತಾತ್ರೇಯ ಉಪನಿಷತ್, ತನ್ನ ಅನುಯಾಯಿಗಳಿಗೆ ಜ್ಞಾನೋದಯವನ್ನು ಪಡೆಯಲು ಸಹಾಯ ಮಾಡಲು ಅವನು ವಿವಿಧ ರೂಪಗಳನ್ನು ತೆಗೆದುಕೊಂಡಿದ್ದಾನೆ ಎಂದು ದೃಢೀಕರಿಸುತ್ತದೆ.

ಒಮ್ಮೆ ಸ್ವರ್ಗದಲ್ಲಿ, ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿ, ಮೂರು ದೇವತೆಗಳು ಶುದ್ಧತೆ ಮತ್ತು ಪರಿಶುದ್ಧತೆಯ ಬಗ್ಗೆ ಚರ್ಚಿಸುತ್ತಿದ್ದರು. ಆಗ ನಾರದರು ಅಲ್ಲಿಗೆ ಬಂದು ಮೂರು ದೇವತೆಗಳಿಗೆ ಅನುಸೂಯಾಳ ಬಗ್ಗೆ ತಿಳಿಸಿದರು. ಯಾರ ಬಗ್ಗೆ ಕೇಳಿದ ಮೂರು ದೇವತೆಗಳು ತಮ್ಮ ತಮ್ಮ ದೇವತೆಗಳೊಂದಿಗೆ ತಮ್ಮ ಪರಿಶುದ್ಧತೆಯನ್ನು ಮುರಿಯಲು ಹಠ ಮಾಡಿದರು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವರಿಗೆ ಮನವರಿಕೆ ಮಾಡಲು ಸಾಧ್ಯವಾಗದಿದ್ದಾಗ, ಅವರು ಅನುಸೂಯೆಯಂತೆ ವೇಷ ಧರಿಸಿ ಆಶ್ರಮದಲ್ಲಿ ಅನುಸೂಯೆ ಮಾತ್ರ ಇದ್ದಾಗ ಅವರನ್ನು ಪರೀಕ್ಷಿಸಲು ಅವರ ಆಶ್ರಮಕ್ಕೆ ಹೋದರು.

ಅವರು ಋಷಿಗಳ ರೂಪದಲ್ಲಿ ಅಲ್ಲಿಗೆ ತಲುಪಿದರು. ಅವರನ್ನು ನೋಡಿದ ತಾಯಿ ಅನುಸೂಯಾ ಅವರನ್ನು ಸ್ವಾಗತಿಸಿ ಊಟಕ್ಕೆ ಕರೆದರು. ಆದರೆ ಋಷಿಮುನಿಗಳು  ನೀವು ನಮಗೆ ಬಟ್ಟೆಯಿಲ್ಲದ ನಿರ್ವಾಣ ರೂಪದಲ್ಲಿ ಆಹಾರವನ್ನು ನೀಡುತ್ತೀರಿ, ಆಗ ಮಾತ್ರ ನಾವು ತಿನ್ನುತ್ತೇವೆ ಎಂದು ಹೇಳಿದರು. ಇದನ್ನು ಕೇಳಿದ ಅನುಸೂಯಾ ತನ್ನ ದಿವ್ಯ ದೃಷ್ಟಿಯನ್ನು ನೋಡಿದಳು ಮತ್ತು ಅವನು ಯಾರೆಂದು ಗುರುತಿಸಿದಳು. ಇದಾದ ನಂತರ, ತ್ರಿದೇವ ಅವರನ್ನು ಪರೀಕ್ಷಿಸಲು ಬಂದಿದ್ದಾರೆ ಎಂದು ಅವರ ಪರೀಕ್ಷೆ ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ನಂತರ ಅವರು ಕಮಂಡಲದಿಂದ ನೀರನ್ನು ತೆಗೆದುಕೊಂಡು ಮಂತ್ರಗಳ ಶಕ್ತಿಯಿಂದ ಋಷಿಗಳ ಮೇಲೆ ನೀರನ್ನು ಪ್ರೋಕ್ಷಿಸಿದ ತಕ್ಷಣ ಮೂವರೂ ಋಷಿಗಳು ಮಕ್ಕಳಾದರು.

ಋಷಿಗಳು ಮಗುವಾದಾಗ ಅವರಲ್ಲಿ ತಾಯ್ತನ ಜಾಗೃತವಾಯಿತು. ಬಳಿಕ ಎದೆಹಾಲು ಕುಡಿಸಿ ಅವರ ಹಸಿವನ್ನು ನೀಗಿಸಿದರು. ಈ ರೀತಿಯಾಗಿ, ಅವರು ತಮ್ಮ ಆತಿಥ್ಯ ಉಳಿಸಿಕೊಂಡರು ಮತ್ತು ಅವರ ಪರಿಶುದ್ಧತೆಯನ್ನು ಸಹ ಉಳಿಸಿಕೊಂಡರು. ಮಕ್ಕಳೆಲ್ಲ ಹಸಿವು ಕಳೆದುಕೊಂಡಾಗ ಆಟವಾಡುತ್ತಾ ಮಲಗಿದರು. ಋಷಿ ಅತ್ರಿ ಅಲ್ಲಿಗೆ ತಲುಪಿದಾಗ, ಅವರು ಇಡೀ ಕಥೆಯನ್ನು ವಿವರಿಸಿದರು. ಇಬ್ಬರೂ ಸೇರಿ ಮಕ್ಕಳಿಗೆ ಆರೈಕೆ ಮಾಡತೊಡಗಿದರು.

ತ್ರಿಮೂರ್ತಿಗಳು ಹಿಂತಿರುಗದಿದ್ದಾಗ ಮೂವರೂ ದೇವಿಯರು ಗಲಿಬಿಲಿಗೊಂಡರು. ಆ ನಂತರ ಮಹರ್ಷಿ ನಾರದರು ಅವರನ್ನು ಮಾತಾ ಅನುಸೂಯರ ಆಶ್ರಮಕ್ಕೆ ಕರೆತಂದರು. ತ್ರಿಮೂರ್ತಿಗಳ ಇಲ್ಲದೇ ಲೋಕದ ಕಾರ್ಯಗಳು ತೊಂದರೆಗೀಡಾಗಿದೆ. ದಯವಿಟ್ಟು ಅವರನ್ನು ಮೂಲ ರೂಪಕ್ಕೆ ಹಿಂತಿರುಗಿಸಿ ಎಂದು ನಾರದ ಮುನಿ ಮಾತೆ ಅನುಸೂಯಾ ಅವರನ್ನು ಒತ್ತಾಯಿಸಿದರು. ತಾಯಿ ಅನುಸೂಯಾ, ಮಲಗಿದ್ದ ಮಕ್ಕಳನ್ನು ತೋರಿಸಿ, ಗಂಡನನ್ನು ಕರೆದುಕೊಂಡು ಹೋಗುವಂತೆ ಕೇಳಿದರು. ಆದರೆ ಮಾತೆಯರು ತನ್ನ ಗಂಡನನ್ನು ಮಗುವೆಂದು ಗುರುತಿಸಲು ಸಾಧ್ಯವಾಗದ ಕಾರಣ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಒಬ್ಬೊಬ್ಬರಾಗಿ ಮಕ್ಕಳನ್ನು ಎತ್ತಿ ಕೊಂಡರು, ಆದರೆ ಅವರು ಅವಳ ಗಂಡನಾಗಿರಲಿಲ್ಲ. ಇದರಿಂದ ಮೂವರು ಮಹಿಳೆಯರು ತೀವ್ರ ಮುಜುಗರಕ್ಕೊಳಗಾದರು.

ಸರಸ್ವತಿ ದೇವಿಯು ವಿಷ್ಣುವನ್ನು ಎತ್ತಿದಳು, ಪಾರ್ವತಿ ದೇವಿಯು ಬ್ರಹ್ಮನನ್ನು ಎತ್ತಿದಳು ಮತ್ತು ಲಕ್ಷ್ಮೀ ದೇವಿಯು ಶಿವನನ್ನು ಎತ್ತಿದಳು, ಇದನ್ನು ನೋಡಿದ ಮಾತೆ ಅನುಸೂಯಾ ಹೇಳಿದಳು - ನೀನು ನಿನ್ನ ಗಂಡಂದಿರನ್ನು ಗುರುತಿಸುವುದಿಲ್ಲವೇ. ಆಗ ಮೂವರು ಮಾತೆಯರು ತಮ್ಮ ಗಂಡಂದಿರನ್ನು ಅದೇ ರೂಪದಲ್ಲಿ ಹಿಂದಿರುಗಿಸುವಂತೆ ಬೇಡಿಕೊಂಡರು. ಇದರ ನಂತರ, ತಾಯಿ ಅವರನ್ನು ತನ್ನ ಮೂಲ ರೂಪದಲ್ಲಿ ಮಾಡಿದಳು. ಮೂರು ದೇವತೆಗಳು ಅನುಸೂಯಾ ಮಾತೆಯ ಬಗ್ಗೆ ಸಂತೋಷಪಟ್ಟರು ಮತ್ತು ಅವಳ ಆಶೀರ್ವಾದವನ್ನು ಕೋರಿದರು. ನಂತರ ಅವಳು ಮೂರು ದೇವತೆಗಳನ್ನು ತನ್ನ ಪುತ್ರರನ್ನಾಗಿ ಹೊಂದುವ ವರವನ್ನು ಕೇಳಿದನು. ತ್ರಿದೇವ ತಥಾಸ್ತು ಎಂದು ಹೇಳುತ್ತಾ ಅವರು ಆಕೆಯ ಮಾತೃವಾತ್ಸಲ್ಯದ  ಬಗ್ಗೆ ವ್ಯಾಮೋಹ ಗೊಂಡರು. ಹೀಗೆ ತ್ರಿಮೂರ್ತಿಗಳ ಆಶೀರ್ವಾದದಿಂದ ದತ್ತಾತ್ರೇಯ ಜನಿಸಿದರು ಮತ್ತು ಋಷಿ ಅತ್ರಿ ಮತ್ತು ಅನುಸೂಯಾ ತಾಯಿತಂದೆಯಾದರು.

*ದತ್ತಾತ್ರೇಯ ಜಯಂತಿ ಪೂಜಾ ವಿಧಿ*
                                                                                             ~ ದತ್ತಾತ್ರೇಯ ಜಯಂತಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕು.
~ ದಿನನಿತ್ಯದ ಚಟುವಟಿಕೆಗಳಿಂದ ನಿವೃತ್ತರಾದ ನಂತರ ಸ್ನಾನ ಮಾಡಿ.
~ ಈ ದಿನದಂದು ನದಿಗಳು ಮತ್ತು ಜಲಮೂಲಗಳಲ್ಲಿ ಸ್ನಾನವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
~ ಸಾಧ್ಯವಾದರೆ ನದಿಗೆ ಹೋಗಿ ಸ್ನಾನ ಮಾಡಿ.
~ ಸ್ನಾನ ಮಾಡಿದ ನಂತರ ಕೈಯಲ್ಲಿ ನೀರನ್ನು ತೆಗೆದುಕೊಂಡು ಉಪವಾಸ ಮಾಡುವ ಪ್ರತಿಜ್ಞೆ ಮಾಡಿ.
~ ಶುಭ್ರವಾದ ಬಟ್ಟೆಗಳನ್ನು ಧರಿಸಿ.
ದತ್ತಾತ್ರೇಯನ ಮೂರ್ತಿಗೆ ಅಭಿಷೇಕ, ಷೋಡಶೋಪಚಾರ ಸಹಿತವಾಗಿ ಆರಾಧನೆ ಮಾಡಿ.
~ ಅವಧೂತ ಗೀತೆ ಮತ್ತು ಜೀವನ್ಮುಕ್ತ ಗೀತೆಗಳ ಪವಿತ್ರ ಪುಸ್ತಕಗಳನ್ನು ಓದಿ.
ಅವುಗಳಲ್ಲಿ ಭಗವಾನ್ ದತ್ತಾತ್ರೇಯರ ಪ್ರವಚನಗಳಿವೆ.                                         ~ 'ಓಂ ದ್ರಾಂ ದತ್ತಾತ್ರೇಯ ಸ್ವಾಹಾ' ಮತ್ತು 'ಓಂ ಮಹಾನಾಥಾಯ ನಮಃ' ಮಂತ್ರಗಳೊಂದಿಗೆ
ಪ್ರಾರ್ಥಿಸಿ .
~ ಭಜನೆ ಕೀರ್ತನೆ ಮಾಡಿ ಎಲ್ಲರಿಗೂ ಪ್ರಸಾದ ವಿತರಿಸಿ.
~ ಮರುದಿನ ಸ್ನಾನ ಮಾಡಿ ಪೂಜಿಸಿ, ಅಗತ್ಯವಿರುವವರಿಗೆ ಆಹಾರ ನೀಡಿ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಕ್ಷಿಣೆಯನ್ನು ನೀಡಿ.
~ ಈಗ ಆಹಾರವನ್ನು ಸೇವಿಸುವ ಮೂಲಕ ಉಪವಾಸವನ್ನು ಮುರಿಯಿರಿ.

*ದತ್ತಾತ್ರೇಯ ಜಯಂತಿ ಮಹತ್ವ*
                                                                                                   ಭಗವಾನ್ ದತ್ತಾತ್ರೇಯನು ಅಪರಿಮಿತ ಶಕ್ತಿಯನ್ನು ಹೊಂದಿದ್ದಾನೆ ಎಂದು ನಂಬಲಾಗಿದೆ. ಭಗವಾನ್ ದತ್ತಾತ್ರೇಯನು ಭಕ್ತರಿಗೆ ಜೀವನದ ಪ್ರಮುಖ ಸವಾಲುಗಳಿಂದ ಪರಿಹಾರವನ್ನು ನೀಡುತ್ತಾನೆ ಮತ್ತು ಸಮೃದ್ಧಿಯ ಮಾರ್ಗದಿಂದ ಅಡೆತಡೆಗಳನ್ನು ತೆಗೆದುಹಾಕುತ್ತಾನೆ. ಭಕ್ತರನ್ನು ತ್ರಿಮೂರ್ತಿಗಳ ಶಕ್ತಿಯಿಂದ ಆಶೀರ್ವದಿಸುತ್ತಾರೆ ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಭಗವಾನ್ ದತ್ತಾತ್ರೇಯನ ಆರು ಕೈಗಳು ಶಂಖ, ಚಕ್ರ, ಗದಾ, ತ್ರಿಶೂಲ, ಕಮಂಡಲ ಮತ್ತು ಆಶೀರ್ವಾದ ಮುದ್ರೆ ಹಿಡಿದಿವೆ. ಶಂಖ ಸ್ವರ್ಗೀಯ ಧ್ವನಿಯನ್ನು ಪ್ರತಿನಿಧಿಸುತ್ತದೆ; ಚಕ್ರವು ಸಮಯವನ್ನು ಪ್ರತಿನಿಧಿಸುತ್ತದೆ; ಗದಾ ಹೆಮ್ಮೆಯ ಸಂಕೇತ; ತ್ರಿಶೂಲ ಮೂರು ಪಟ್ಟು ಶಕ್ತಿಗಳನ್ನು ಪ್ರತಿನಿಧಿಸುತ್ತದೆ; ಕಮಂಡಲವು ಭಗವಾನ್ ದತ್ತಾತ್ರೇಯನನ್ನು ಭೂಮಿಯ ಮೇಲಿನ ಜೀವಧಾರಕನಾಗಿ ಚಿತ್ರಿಸುತ್ತದೆ; ಕಮಂಡಲ ವ್ಯಕ್ತಿಯ ಘನತೆ, ನಕಾರಾತ್ಮಕತೆ,  ದುಷ್ಟ ಆಲೋಚನೆಗಳನ್ನು ಸೂಚಿಸುತ್ತದೆ.

Monday, 5 December 2022

ಇತಿಹಾಸದ_ಪವಾಡ_ಸಿದ್ದ_ಶಿವನ_ದೇವಾಲಯವಿದು

#8_ತಿಂಗಳು_ನೀರಿನಲ್ಲೇ_ಮುಳುಗಿದ್ದು 

#ಕೇವಲ_4_ತಿಂಗಳು_ಭಕ್ತರಿಂದ_ಪೂಜೆ_ಸ್ವೀಕರಿಸುವ 

#ಇತಿಹಾಸದ_ಪವಾಡ_ಸಿದ್ದ_ಶಿವನ_ದೇವಾಲಯವಿದು
 

ಅನೇಕ ಋಷಿಮುನಿಗಳಿಗೆ ಆಶ್ರಯ ನೀಡಿ 8 ತಿಂಗಳು ನೀರಿನಲ್ಲೇ ಇದ್ದು 4 ತಿಂಗಳು ಭಕ್ತರಿಂದ ಪೂಜೆ ಸ್ವೀಕರಿಸುವ ದೇವಾಲಯ ಇರುವುದಾದರೂ ಎಲ್ಲಿ ಮತ್ತು ಅಷ್ಟು ತಿಂಗಳು ಈ ದೇವಾಲಯ ನೀರಿನಲ್ಲಿ ಇರಲು ಕಾರಣವಾದರು ಏನು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ .

 

 

ಈ ದೇವಾಲಯ ಇರುವುದು ಆಂಧ್ರ ಪ್ರದೇಶ #ಕರ್ನೂರ್ ಜಿಲ್ಲೆಯ 56 ಕಿಲೋಮೀಟರು ದೂರದಲ್ಲಿ #ಸಂಗಮೇಶ್ವರ ಎಂಬ ಗ್ರಾಮದಲ್ಲಿ ಸಂಗಮೇಶ್ವರ ಸ್ವಾಮಿ ದೇವಾಲಯವಿದೇ ,ಈ ದೇವಾಲಯ ಅತಿ ಪುರಾತನವಾದ ದೇವಾಲಯ, #ಧರ್ಮರಾಯ ಈ ದೇವಾಲಯವನ್ನು ಪ್ರತಿಷ್ಠಾಪಿಸಿದ ಎಂದು ಪುರಾಣಗಳು ಹೇಳುತ್ತದೆ .

 

ಸಂಗಮೇಶ್ವರ ದೇವಾಲಯ 7 ನದಿಗಳು ಕೂಡುವ ಪ್ರದೇಶ ಅದಕ್ಕೆ ಈ ಸ್ಥಳಕ್ಕೆ #ಸಪ್ತನದಿಗಳ_ಸಂಗಮ ಎಂದು ಕರೆಯುತ್ತಾರೆ. ಈ ದೇವಾಲಯದ ಪುರಾಣಕ್ಕೆ ಬಂದರೆ ಪೂರ್ವದಲ್ಲಿ ಇಲ್ಲಿ ದಕ್ಷಯಜ್ಞ ನಡೆದಿತ್ತು ಆ ಸಮಯದಲ್ಲಿ ದಕ್ಷ ಸತಿಯನ್ನು ಅವಮಾನ ಮಾಡಿದರಿಂದ ಅವಳು ಈ ಯಜ್ಞಕುಂಡದಲ್ಲಿ ಬಿದ್ದು ಮರಣ ಹೊಂದಿದಳು ಎಂದು ಸ್ಥಳ ಪುರಾಣ ಹೇಳುತ್ತದೆ .

 
ಪಾಂಡವರ ವನವಾಸ ಸಮಯದಲ್ಲಿ ಧರ್ಮರಾಯ ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಬೇಕು ಎಂದು ನಿರ್ಧಾರ ಮಾಡುತ್ತಾನೆ ,ಧರ್ಮರಾಯನ ಆದೇಶದಂತೆ ಭೀಮ ಶಿವಲಿಂಗವನ್ನು ತರಲು ಕಾಶಿಗೆ ಹೋಗುತ್ತಾನೆ ,ಆದರೆ ಸರಿಯಾದ ಸಮಯಕ್ಕೆ ಭೀಮ ಬರುವುದಿಲ್ಲ ,

ಆ ಸಮಯದಲ್ಲಿ ಋಷಿಮುನಿಗಳ ಆದೇಶದಂತೆ ಒಂದು ಕಲ್ಲನ್ನು ಶಿವಲಿಂಗದಂತೆ ಪ್ರತಿಷ್ಠಾಪಿಸುತ್ತಾನೆ ,ಇದರಿಂದ ಕೋಪಗೊಂಡ ಭೀಮ ತನ್ನ ತಂದ ಶಿವಲಿಂಗವನ್ನು ನೀರಿಗೆ ಎಸೆಯುತ್ತಾನೆ ,ಭೀಮನನ್ನು ಸಮಾಧಾನ ಮಾಡುವುದಕ್ಕೆ ಧರ್ಮರಾಯ ಅವನ್ನು ತಂದ ಶಿವಲಿಂಗವನ್ನು ನದಿತೀರದಲ್ಲೇ ಪ್ರತಿಷ್ಠಾಪಿಸಿ ಅದಕ್ಕೆ #ಭೀಮಲಿಂಗ ಎಂದು ಹೆಸರು ಇಡುತ್ತಾನೆ.

 

ಭಕ್ತರು ಮೊದಲು ಭೀಮಲಿಂಗದ ದರ್ಶನ ಮಾಡಿದ ಮೇಲೆ ಸಂಗಮೇಶ್ವರ ಸ್ವಾಮಿಯ ದರ್ಶನ ಮಾಡುತ್ತಾರೆ. ಪ್ರಪಂಚದಲ್ಲಿ 7 ನದಿಗಳು ಸೇರುವ ಒಂದೇ ಒಂದು ಸ್ಥಳ ಸಂಗಮೇಶ್ವರ. 

ಈ ದೇವಾಲಯದಲ್ಲಿ ಎಲ್ಲ ದೇವಾಲಯಗಳ ತರಹ ಪೂಜೆಗಳು ದಿನ ನಡೆಯುದಿಲ್ಲ ,ತುಂಬಾ ತಿಂಗಳುಗಳು ನೀರಿನಲ್ಲಿ ಈ ದೇವಾಲಯ ಮುಳುಗಿರುತ್ತದೆ .

Thursday, 6 October 2022

ಗಾಯತ್ರಿ ಮಂತ್ರಗಳಾವುವು ..? ಇಲ್ಲಿದೆ ಎಲ್ಲಾ ದೇವರುಗಳ ಗಾಯತ್ರಿ ಮಂತ್ರಗಳು

ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಗಾಯತ್ರಿ ಮಂತ್ರಗಳು ಯಾವುವು ಗೊತ್ತಾ..? ಇಲ್ಲಿದೆ ನೋಡಿ ಪ್ರಮುಖ ಗಾಯತ್ರಿ ಮಂತ್ರಗಳು. ಇವುಗಳು ಅತ್ಯಂತ ಸರಳ ಗಾಯತ್ರಿ ಮಂತ್ರಗಳು.

ಹಿಂದೂ ಧರ್ಮದಲ್ಲಿ ಮಂತ್ರಗಳಿಲ್ಲದೇ ದೇವರ ಪೂಜೆ ನೆರವೇರದ. ಪ್ರತಿಯೊಂದು ದೇವರ ಪೂಜೆಯಲ್ಲಿ ಮಂತ್ರಗಳು ಇದ್ದೇ ಇರುತ್ತದೆ. ಹಿಂದೂ ಧರ್ಮದಲ್ಲಿನ ಪ್ರಮುಖ ಮಂತ್ರಗಳಲ್ಲಿ ಗಾಯತ್ರಿ ಮಂತ್ರ ಪ್ರಮುಖವಾದುದ್ದು. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದಾಗುವ ಲಾಭವೇನೆಂಬುದನ್ನು ನಾವೀಗಾಗಲೇ ನಿಮಗೆ ತಿಳಿಸಿದ್ದೆವು. ಎಲ್ಲಾ ದೇವರಿಗೂ ಕೂಡ ಪ್ರತ್ಯೇಕವಾದ ಗಾಯತ್ರಿ ಮಂತ್ರಗಳಿವೆ. ಆಯಾ ದೇವರ ಗಾಯತ್ರಿ ಮಂತ್ರವನ್ನು ಆಯಾ ದೇವರ ಪೂಜೆಯಲ್ಲಿ ಪಠಿಸುವುದರಿಂದ ಅದರ ಲಾಭವನ್ನು ನಾವು ಪಡೆಯಬಹುದು. ಹಾಗಾದರೆ ಆ ಗಾಯತ್ರಿ ಮಂತ್ರಗಳಾವುವು ನೋಡಿ:

1) ಗಾಯತ್ರಿ ದೇವಿಗೆ ಗಾಯತ್ರಿ ಮಂತ್ರ:

ಓಂ ಭೂರ್ಭುವಃ ಸ್ವಃ
ತತ್ಸರ್ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್ ||

2) ಗಣಪತಿ ಗಾಯತ್ರಿ ಮಂತ್ರ:

ಓಂ ಲಂಬೋದರಾಯ ವಿದ್ಮಹೇ
ಮಹೋದರಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್

ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್

ಓಂ ತತ್ಪುರುಷಾಯ ವಿದ್ಮಹೇ
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್ ||

3) ಕುಬೇರ ಗಾಯತ್ರಿ ಮಂತ್ರ

ಓಂ ಯಕ್ಷರಾಜಾಯ ವಿದ್ಮಹೇ
ವೈಶ್ರಾವನಾಯ ಧೀಮಹೀ
ತನ್ನೋ ಕುಬೇರ ಪ್ರಚೋದಯಾತ್ ||

4) ತುಳಸಿ ಗಾಯತ್ರಿ ಮಂತ್ರ

ಓಂ ತುಳಸಿಯಾಯ ವಿದ್ಮಹೇ
ತ್ರಿಪುರಾರ್ಯಾಯ ಧೀಮಹೀ
ತನ್ನೋ ತುಳಸಿ ಪ್ರಚೋದಯಾತ್ ||

5) ಯಮ ಗಾಯತ್ರಿ ಮಂತ್ರ

ಓಂ ಸೂರ್ಯಪುತ್ರಾಯ ವಿದ್ಮಹೇ
ಮಹಾಕಾಲಾಯ ಧೀಮಹೀ
ತನ್ನೋ ಯಮ ಪ್ರಚೋದಯಾತ್ ||

6) ವೆಂಕಟೇಶ್ವರ ಗಾಯತ್ರಿ ಮಂತ್ರ

ಓಂ ನಿರಂಜನಾಯ ವಿದ್ಮಹೇ
ನಿರಾಭಾಸಾಯ ಧೀಮಹೀ
ತನ್ನೋ ಶ್ರೀನಿವಾಸ ಪ್ರಚೋದಯಾತ್ ||

7) ಸುದರ್ಶನ ಗಾಯತ್ರಿ ಮಂತ್ರ

ಓಂ ಸುದರ್ಶನಾಯ ವಿದ್ಮಹೇ
ಮಹಾಜ್ವಾಲಾಯ ಧೀಮಹೀ
ತನ್ನೋ ಚಕ್ರ ಪ್ರಚೋದಯಾತ್ ||

8) ಶಿವ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹೀ
ತನ್ನೋ ರುದ್ರ ಪ್ರಚೋದಯಾತ್ ||

9) ಸರಸ್ವತಿ ಗಾಯತ್ರಿ ಮಂತ್ರ

ಓಂ ವಾಗ್ದೇವಿಯೈಚ ವಿದ್ಮಹೇ
ವಿರಿಂಜಿ ಪತ್ನಿಯೈಚ ಧೀಮಹೀ
ತನ್ನೋ ವಾಣಿ ಪ್ರಚೋದಯಾತ್ ||

10) ಇಂದ್ರ ಗಾಯತ್ರಿ ಮಂತ್ರ

ಓಂ ದೇವರಾಜಾಯ ವಿದ್ಮಹೇ
ವಜ್ರ ಹಸ್ತಾಯ ಧೀಮಹೀ
ತನ್ನೋ ಇಂದ್ರ ಪ್ರಚೋದಯಾತ್ ||

11) ಬ್ರಹ್ಮ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ
ಚತುರ್ಮುಖಾಯ ಧೀಮಹೀ
ತನ್ನೋ ಬ್ರಹ್ಮ ಪ್ರಚೋದಯಾತ್ ||

12) ನರಸಿಂಹ ಗಾಯತ್ರಿ ಮಂತ್ರ

ಓಂ ನರಸಿಂಹಾಯ ವಿದ್ಮಹೇ
ವಜ್ರನಖಾಯ ಧೀಮಹೀ
ತನ್ನೋ ನರಸಿಂಹ ಪ್ರಚೋದಯಾತ್ ||

13) ದುರ್ಗಾ ಗಾಯತ್ರಿ ಮಂತ್ರ

ಓಂ ಕಾತ್ಯಾಯನಾಯ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹೀ
ತನ್ನೋ ದುರ್ಗಾ ಪ್ರಚೋದಯಾತ್ ||

14) ಅಗ್ನಿ ಗಾಯತ್ರಿ ಮಂತ್ರಗಳು

ಓಂ ಮಹಾಜ್ವಾಲಾಯ ವಿದ್ಮಹೇ
ಅಗ್ನಿದೇವಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್ ||







































Sunday, 28 August 2022

ಸರ್ಪದೋಷ

ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ  ತೀಳಿಸುವೆ.

1) 3ನೆ  ಮನೆಯಲ್ಲಿ  ರಾಹು  9ನೆ  ಮನೆಯಲ್ಲಿ  ಕೇತು  ಇದ್ರೆ  ವಾಸುಕಿ  ಕಾಲ ಸರ್ಪ  ಯೋಗ ಬರುತ್ತದೆ.

2)  ರಾಹು  1ನೆ ಮನೆಯಲ್ಲಿದ್ದು  ಕೇತು  7ನೆ ಮನೆಯಲ್ಲಿದ್ರ್  ಅನಂತ  ಕಾಳ ಸರ್ಪ  ಯೋಗ ಬರುತ್ತದೆ.

3) ರಾಹು  2ನೆ  ಮನೆಯಲ್ಲಿದ್ದು ಕೇತು  8ನೆ  ಮನೆಯಲ್ಲಿದ್ರ್   ಕುಳಿಕ ಕಾ ಳ ಸರ್ಪ  ಯೋಗ ಬರುತ್ತದೆ.

4)4ನೆ  ಮನೆಯಲ್ಲಿ  ರಾಹು  10ನೆ  ಮನೆಯಲ್ಲಿ  kethu  ಇದ್ದಾಗ  ಶಂಖ ಫಲ  ಕಾಳ್  ಸರ್ಪ ಯೋಗ ಬರುತ್ತದೆ.

5) 5ನೆ  ಮನೆಯಲ್ಲಿ  ರಾಹು  11ನೆ  ಮನೆಯಲ್ಲಿ ಕೇತು  ಇದ್ದಾಗ  ಪದ್ಮಕಾಲ  ಸರ್ಪ  ಯೋಗ ಬರುತ್ತದೆ.

6) 6ನೆ  ಮನೆಯಲ್ಲಿ  ರಾಹು   12 ನೆ  ಮನೆಯಲ್ಲಿ  ಕೇತು  ಇದ್ದಾಗ   ಮಹಾ ಪದ್ಮ ಕಾಲ  ಸರ್ಪ  ಯೋಗ ಬರುತ್ತದೆ.

7)ರಾಹು  7ನೆ  ಮನೆಯಲ್ಲಿ  ಕೇತು  1ನೆ  ಮನೆಯಲ್ಲಿ  ಇದ್ರೆ    ತಕ್ಷಕ  ಕಾಲ ಸರ್ಪ  ಯೋಗ
ಬರುತ್ತದೆ.

8) 8ನೆ  ಮನೆಯಲ್ಲಿ  ರಾಹು  2ನೆ  ಮನೆಯಲ್ಲಿ  ಕೇತು  ಇದ್ರೆ  ಕಾರ್ಕೋಟಕ  ಕಾಲ ಸರ್ಪ  ಯೋಗ ಬರುತ್ತದೆ.

 9)9ನೆ  ಮನೆಯಲ್ಲಿ  ರಾಹು  3ನೆ  ಮನೆಯಲ್ಲಿ  ಕೇತು  ಇದ್ರೆ  ಶಕ್ಚೂಡ ಕಾಲ ಸರ್ಪ ದೋಷ ಬರುತ್ತದೆ.

 10)ಯೋಗರಾಹು  ಹತ್ತನೇ  ಮನೆಯಲ್ಲಿ  ಕೇತು  ನಾಲ್ಕನೇ  ಮನೆಯಲ್ಲಿ  ಇದ್ರೆ   ಘಾತಕ  ಅಥವಾ  ಪಾತಕ  ಕಾಲ  ಸರ್ಪ  ಯೋಗ ಬರುತ್ತದೆ.

ರಾಹು ಮತ್ತು ಕೇತು ಗ್ರಹಗಳ ಮಧ್ಯೆ ಮಿಕ್ಕ 7 ಗ್ರಹಗಳಿದ್ದರೆ❓

11) ರಾಹು  11ನೆ  ಮನೆ ಯಲ್ಲಿದ್ದು  ಕೇತು  5ನೆ  ಮನೆಯಲ್ಲಿ ಇದ್ರೆ   ವಿಷ  ಧರ  ಕಾಲ ಸರ್ಪ ಯೋಗ ಬರುತ್ತದೆ.

12) ರಾಹು  12ನೆ  ಮನೆಯಲ್ಲಿ ಇದ್ಧು  ಕೇತು  6ನೆ  ಮನೆಯಲ್ಲಿ ಇದ್ರೆ   ಶೇಷ ನಾಗ  ಕಾಲ ಸರ್ಪ  ಯೋಗ ಬರುತ್ತದೆ.

ಜೀವನಾವಧಿಯ  42ವರ್ಷ ಧ ವರೆಗೂ  ಕಾಲ ಸರ್ಪ  ಯೋಗ ವು  ತೊಂದರೆ ನೀಡುತ್ತದೆ.
 ನನಗೆ ತಿಳಿದಿರುವ ಪ್ರಕಾರ .....ಕೇತು (ಬಾಲ) ವಿನಿಂದ ರಾಹು ಮಧ್ಯೆ ಎಲ್ಲಾ ಗ್ರಹಗಳು ಸೇರಿದಾಗ..ಇದು ಕಾಲಸರ್ಪ ಯೋಗ...ಎನ್ನುತ್ತಾರೆ..

       
 ರಾಹು (ಬಾಯಿಂದ) ವಿನಿಂದ. ಕೇತು  (ಬಾಲ ) ....ವಿನೊಳಗೆ ಎಲ್ಲಾ ಗ್ರಹಗಳು  ಬಂದರೆ ಇದು ಕಾಲ ಸರ್ಪ ದೋಷ ಎನ್ನುತ್ತಾರೆ....🙏💐

ಶ್ರೀ ಹರಿ.

ಪುಷ್ಷಾ ಆಚಾರ್ಯರು. ಪಿ  (ಮುಂದುವರಿಯುವುದು)

*ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು*.


೧. *ಅರಿಸಿನ:* _ಗೌರಿದೇವೀ._
೨. *ಕುಂಕುಮ:*_ಮಹಾಲಕ್ಷ್ಮೀ_
೩. *ಸಿಂಧೂರ:* _ಸರಸ್ವತೀ_
೪. *ಕನ್ನಡಿ:* _ರೂಪಲಕ್ಷ್ಮೀ._
೫. *ಬಾಚಣಿಗೆ:*_ಶೃಂಗಾರಲಕ್ಷ್ಮೀ._

೬. *ಕಾಡಿಗೆ:*_ಲಜ್ಜಾಲಕ್ಷ್ಮೀ._
೭. *ಅಕ್ಕಿ:*_ಶ್ರೀ ಲಕ್ಷ್ಮೀ._
೮. *ತೊಗರಿಬೇಳೆ :*_ವರಲಕ್ಷ್ಮೀ_
೯. *ಉದ್ದಿನಬೇಳೆ:*_ಸಿದ್ದಲಕ್ಷ್ಮೀ_
೧೦ *ತೆಂಗಿನಕಾಯಿ:*_ಸಂತಾನಲಕ್ಷ್ಮೀ_

೧೧. *ವೀಳ್ಯದ ಎಲೆ:*_ಧನಲಕ್ಷ್ಮೀ_
೧೨. *ಅಡಿಕೆ಼:*_ಇಷ್ಟಲಕ್ಷ್ಮೀ_
೧೩. *ಫಲ (ಹಣ್ಣು):* _ಜ್ಞಾನಲಕ್ಷ್ಮೀ_
೧೪. *ಬೆಲ್ಲ:*_ರಸಲಕ್ಷ್ಮೀ_
೧೫. *ವಸ್ತ್ರ:*_ವಸ್ತ್ರಲಕ್ಷ್ಮೀ_
೧೬. *ಹೆಸರುಬೇಳೆ:* _ವಿದ್ಯಾಲಕ್ಷ್ಮೀ_

 *ಮುತೈದೆ ದೇವತೆಯರು *೧೬ ಜನರು*  
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..

*ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ,  ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..*

_ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..

ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ *ವೇಣುಪಾತ್ರ* ಎಂದು ಹೇಳುತ್ತಾರೆ..

ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ *೧೬* ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..

 *೧೬* ದೇವತೆಗಳು ನಿತ್ಯಸುಮಂಗಲಿಯರು.

ಈ *೧೬* ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..

ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..

೧೬ ಅರಿಸಿನ ದಾರ, 
೧೬ ಗಂಟುಗಳು, 
೧೬ ಬಾಗಿನ, 
೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..

 ದಾನಗಳು ಮತ್ತು ಫಲಗಳು

ನಾವು ಮಾಡುವ ಪೂಜೆ, ವ್ರತಗಳಲ್ಲಿ ಬಾಗಿನ ಕೊಡುವ ಪದ್ಧತಿ ಇದೆ. ದೇವಿಗೆ ಮಾಡುವ ಪೂಜೆಗಳಲ್ಲಿ ಇದು ಸಾಮಾನ್ಯ. ಬಾಗಿನವನ್ನು ಮರದ ಜೊತೆಯಲ್ಲಿ ಇಟ್ಟು ಕೊಡುತ್ತಾರೆ.

 ಬಾಗಿನದ ಸಾಮಾನುಗಳ ಪಟ್ಟಿ ಇಲ್ಲಿದೆ:

1 ಜೊತೆ ಮೊರ - ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಿ

ಧಾನ್ಯಗಳು - ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ

ಬೆಲ್ಲದ ಅಚ್ಚು,ಉಪ್ಪು,ತೆಂಗಿನಕಾಯಿ,ಹಣ್ಣು

ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ

ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ

*೧. ಅರಿಸಿನ ದಾನ 
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

*೨. ಕುಂಕುಮ ದಾನ 
 ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

*೩. ಸಿಂಧೂರ ದಾನ:*
 ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

*೪. ಕನ್ನಡೀ(ರೂಪಲಕ್ಷ್ಮೀ) 
 ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

*೫. ಬಾಚಣಿಗೆ :
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

*೬. ಕಾಡಿಗೆ 
  ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

*೭. ಅಕ್ಕಿ :
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

*೮. ತೊಗರಿಬೇಳೆ :
 ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) (normal) ನಾರಮಲ್ ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

*೯. ಉದ್ದಿನ ಬೇಳೆ  
 ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

*೧೦. ತೆಂಗಿನಕಾಯಿ :
 ಇಷ್ಟಾರ್ಥಸಿದ್ಧಿಯಾಗುತ್ತದೆ.. , 
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

*೧೧. ವೀಳ್ಯದೆಲೆ :
 ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

*೧೨. ಅಡಿಕೆ :
 ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

*೧೩. ಫಲದಾನ   
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ಼.‌.

ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

*೧೪. ಬೆಲ್ಲ (ರಸಲಕ್ಷ್ಮೀ) :
 ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..

ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

*೧೫. "ವಸ್ತ್ರಲಕ್ಷ್ಮೀ" :
 ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

*೧೬. "ಹೆಸರುಬೇಳೆ" 
 ವಿದ್ಯಾಲಕ್ಷ್ಮೀ -  
 ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ  ಎಲ್ಲರಿಗೂ ಸಂತೋಷವಾಗುತ್ತದೆ..
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..
ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ಼..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ಼.‌
ಗ್ಯಾಸ್, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..

*ಮೊರದ ಜೊತೆ ಬಾಗಿನ*

ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು - ಗೆಜ್ಜೆವಸ್ತ್ರ, ಶ್ರೀಗಂಧ, ಊದಿನ ಕಡ್ಡಿ, ಇತ್ಯಾದಿ ಇಡುತ್ತಾರೆ. ಸ್ವರ್ಣ ಗೌರಿ ವ್ರತ, ಮಂಗಳ ಗೌರಿ ವ್ರತ, ಮಾರ್ಗಶಿರಮಹಾಲಕ್ಷ್ಮಿ ವ್ರತ, ಸಿರಿಯಾಳ ಷಷ್ಠಿ ಮುಂತಾದ ಪೂಜೆಗಳಲ್ಲಿ ಬಾಗಿನ ಕೊಡುತ್ತಾರೆ. ಮೊರದ ಜೊತೆ ಬಾಗಿನವನ್ನು ಸುಮಂಗಲಿಯರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳುವ ಪದ್ಧತಿ ಇದೆ.

ಸಾಮಾನ್ಯವಾಗಿ ಎಲ್ಲ ಸಾಮಾನುಗಳನ್ನೂ ದೊಡ್ಡ ಮೊರದ ಒಳಗೆ  ಪೂಜಾ ಸಮಾನು ಮಾರುವ ಆಂಗಡಿಗಳಲ್ಲಿ ಸಿಗುತ್ತದೆ. ನಾನೂ ಇಂತಹದನ್ನೆ ಉಪಯೂಗಿಸಿದ್ದೀನಿ. ಚಿಕ್ಕಮೊರದಲ್ಲಿ ಎಲ್ಲ ಸಾಮಾನು ಹಿಡಿಸುವುದಿಲ್ಲ . ಹೀಗಾಗಿ ಒಂದು ದೊಡ್ಡ ಮರ ಅಥವ ಡಬ್ಬಿ ಯಲ್ಲಿ ಎಲ್ಲ ಸಾಮಾನು ಇಟ್ಟು ಬಾಗಿನ ಕೊಡಬಹುದು

ಈ ವಿಚಾರಗಳು ತುಂಬಾ ಇದೆ಼, ಎಲ್ಲರೂ ವಿಚಾರಗಳನ್ನು ತಿಳಿದುಕೊಂಡು ಆಚರಿಸಲಿ ಎಂಬ ಕಾರಣಕ್ಕೆ ತಿಳಿಸೋ ಒಂದು ಪ್ರಯತ್ನ ಅಷ್ಟೇ.

ಗೌರಿ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳು ಕೊಟ್ಟರೆ ಆ ಗಂಡು ಮಕ್ಕಳಿಗೆ  ಹಾಗೂ ತೆಗೆದುಕೊಂಡ
ಹೆಣ್ಣು ಮಕ್ಕಳಿಗೆ ಶುಭವಾಗುವುದು.

ಹೆಣ್ಣು ಮಕ್ಕಳು ನಿಮ್ಮ ಒಡಹುಟ್ಟಿದವರೆ ಆಗಬೇಕು ಅಂತಿಲ್ಲ ಸಹೋದರ ಸಹೋದರಿಯರ ಮನೋಭಾವ ಇರಬೇಕು ಆಷ್ಟೆ.

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Saturday, 27 August 2022

ಪೂಜೆಯಲ್ಲಿ ನಿಷಿದ್ಧ ಕಾರ್ಯಗಳು



1 ಗಣೇಶನಿಗೆ ತುಳಸಿ ಏರಿಸಬಾರದು. 
2 ಅಮ್ಮನವರಿಗೆ ದೂರ್ವೆ ಏರಿಸಬಾರದು. 
3 ಶಿವಲಿಂಗಕ್ಕೆ ಕೇತಕೀಪುಷ್ಪ ಏರಿಸಬಾರದು.
4 ವಿಷ್ಣುವಿಗೆ ಅಕ್ಷತೆಯ ತಿಲಕ ಇಡಬಾರದು. 
5 ಒಂದೇ ಪೂಜಾಕೋಣೆಯಲ್ಲಿ ಎರಡು (ಸಾಲಿಗ್ರಾಮ) ಶಂಖಗಳಿರಬಾರದು.
6 ಒಂದು ದೇವಸ್ಥಾನದಲ್ಲಿ ಮೂರು ಗಣೇಶವಿಗ್ರಹಗಳನ್ನು ಇಡಬಾರದು. 
7 ತುಳಸೀ ದಳಗಳನ್ನು ಜಗಿದು ತಿನ್ನಬಾರದು. 
8 ದೇವಾಲಯದ ಮುಖ್ಯದವಾರದ ಎದುರು ಕೆಳಗೆ  ಚಪ್ಪಲಿ ಶೂಗಳನ್ನು ಬಿಡಬಾರದು. 
9 ದೇವರ ದರ್ಶನ ಮಾಡಿ  ಹಿಂತಿರುಗುವಾಗ ಗಂಟೆ ಬಾರಿಸಬಾರದು. 
10 ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬಾರದು. 
11 ಮನೆಯಲ್ಲಿ ಪೂಜಿಸುವ ಶಿವಲಿಂಗ ಹೆಬ್ಬೆರಳಿಗಿಂತ ದೊಡ್ಡದಿರಬಾರದು. 
12 ಶಿವಲಿಂಗವನ್ನು ತುಳಸೀಗಿಡದಲ್ಲಿ ಇಡಬಾರದು. 
13 ಗರ್ಭಿಣಿಯರು ಶಿವಲಿಂಗವನ್ನು ಮುಟ್ಟಬಾರದು. 
14 ದೇವಸ್ಥಾನದಲ್ಲಿ ಸ್ತ್ರೀಯರು ತೆಂಗಿನ ಕಾಯಿ ಒಡೆಯಬಾರದು. 
15 ಕುಟುಂಬದಲ್ಲಿ ಸೂತಕ ಇದ್ದಾಗ ಪೂಜಿಸುವ ವಿಗ್ರಹಗಳನ್ನು ಮುಟ್ಟಬಾರದು. 
16 ಶಿವನಿಗೆ ಪೂರ್ಣ ಪ್ರದಕ್ಷಿಣೆ ಬರಬಾರದು. 
17 ಶಿವನ ಅಭಿಷೇಕದ ತೀರ್ಥ ಹರಿಯುತ್ತಿದ್ದರೆ ಅದನ್ನು ದಾಟಬಾರದು. 
18 ಒಂದು ಕೈಯಿಂದ ನಮಸ್ಕರಿಸಬಾರದು. 
19 ನೀವು ಹಚ್ಚುವ ದೀಪವನ್ನು ಬೇರೆಯವರು ಹಚ್ಚಿದ ದೀಪದಿಂದ ಹಚ್ಚಬಾರದು. 
20 ತೀರ್ಥ ತೆಗೆದುಕೊಳ್ಳುವಾಗ ಬಲಗೈ ಕೆಳಗೆ ಒಂದು ಕರವಸ್ತ್ರವನ್ನೋ ನ್ಯಾಪ್ ಕಿನ್ ಆಗಲೀ ಇಟ್ಟುಕೊಳ್ಳಬೇಕು, ತೀರ್ಥದ ಒಂದು ಹನಿಯೂ ಕೆಳಕ್ಕೆ ಬೀಳಬಾರದು. 
21 ತೀರ್ಥ ಕುಡಿದು ಕೈಯನ್ನು ತಲೆಗೆ ಅಥವಾ ಶಿಖೆಗೆ ಒರೆಸಿಕೊಳ್ಳಬಾರದು. ಬದಲಿಗೆ ಕಣ್ಣುಗಳಿಗೆ ಹಚ್ಚಿಕೊಳ್ಳಬೇಕು, ಗಾಯತ್ರಿಯು ಶಿಖೆಯಲ್ಲಿ ನೆಲೆಸಿರುತ್ತಾಳೆ, ದೇವಿಗೆ ಅಪವಿತ್ರತೆ ಉಂಟಾಗುತ್ತದೆ. 
22 ದೇವರಿಗೆ ಹಣ ಇತ್ಯಾದಿ ದುರಾಸೆ ತೋರಿಸಬಾರದು, 
23 ಸ್ತ್ರೀಯರು ಹನುಂತ ದೇವರನ್ನು  ಶನಿದೇವರನ್ನು ಮುಟ್ಟಿ ನಮಿಸಬಾರದು. 
24 ಅವಿವಾಹಿತ ಸ್ತ್ರೀಯರು ಹನುಮಂತದೇವರ,  ಶನಿದೇವರ ಕಾಲಿಗೆ ಬೀಳದೇ ನಿಂತೇ ನಮಿಸಬೇಕು. 
25 ದೇವಸ್ಥಾನದ, ಅಥವಾ ಪೂಜಾಕೋಣೆಯ ಆವರಣವನ್ನು  ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು. 
26 ದೇವಾಲಯದಲ್ಲಿ ಜನಜಂಗುಳಿಯಿದ್ದಾಗ ಭಗವಂತನ ನಾಮ ಸ್ಮರಣೆಮಾಡುತ್ತ ನಿಮ್ಮ ಸರದಿಯಲ್ಲಿ ಮುಂದೆ ಹೋಗುತ್ತಿರಬೇಕು. 
27 ಭೈರವ ದೇವಾಲಯವನ್ನು ಬಿಟ್ಟು ಉಳಿದ ದೇವಾಲಯಗಳಲ್ಲಿ ಕುಡುಕರು  ಪ್ರವೇಶಿಸಬಾರದು. 
28 ದೇವಾಲಯವನ್ನು ಪ್ರವೇಶಿಸುವ ಮೊದಲು  ಬಲಗಾಲನನಿಟ್ಟು ಮತ್ತು ದೇವಾಲಯದಿಂದ ಹಿಂತಿರುಗುವಾಗ ಮೊದಲು ಎಡಗಾಲನ್ನು ಹೊರಗಿಟ್ಟು ಹೋಗಬೇಕು. 
29 ದೇವಸ್ಥಾನದಲ್ಲಿ ಗಂಟೆಯನ್ನು ಬಹಳ ಜೋರಾಗಿ ಕರ್ಕಶವಾಗಿ ಬಾರಿಸಬಾರದು. 
30 ಸಾಧ್ಯವಾದರೆ ದೇವಸ್ಥಾನಕ್ಕೆ ಹೋಗಿಬರಲು ಬೇರೆ ಜೊತೆ  ಬಟ್ಟೆಗಳನ್ನೇ ಇಟ್ಟುಕೊಂಡು, ಧರಿಸಿ ಹೋಗಬೇಕು.  
31 ದೇವಾಲಯ ಬಹಳ ದೂರ ಇಲ್ಲದಿದ್ದರೆ ಶೂ, ಚಪ್ಪಲಿ ಹಾಕದೇ ಹೋಗಬೇಕು. 
32 ದೇವರ ದರ್ಶನವನ್ನು ನಿಂತು ತೆರೆದ ಕಣ್ಣುಗಳಿಂದ ಪಡೆದು ಹಾಗೆಯೇ ಹಿಂತಿರುಗಬಾರದು, ಎರಡು ನಿಮಿಷ ಕುಳಿತು ದೇವರ ದರ್ಶನದ ಮಾಧುರ್ಯವನ್ನು ಅನುಭವಿಸಬೇಕು. 
33 ಆರತಿ ತೆಗೆದುಕೊಂಡ ಅನಂತರ ಅಥವಾ ದೀಪ ಮುಟ್ಟಿದ ಅನಂತರ ಕೈ ತೊಳೆದುಕೊಳ್ಳಬೇಕು.
ಇವುಗಳನ್ನು ಪ್ರಾಚೀನ ಋಷಿಗಳು  ತಿಳಿಸಿಕೊಟ್ಟಿದ್ದಾರೆ.

Wednesday, 24 August 2022

ವಿನಾಯಕನ ಲೋಕ - ಸ್ವಾನಂದ ಲೋಕ!

ವಿನಾಯಕನ ಲೋಕ - ಸ್ವಾನಂದ ಲೋಕ!
ಸತ್ಯಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ.. ಹೀಗೆ ಒಬ್ಬೊಬ್ಬ ದೇವನಿಗೂ ಒಂದೊಂದು ಲೋಕ. ಹಾಗಿದ್ದಲ್ಲಿ ವಿಶ್ವಮಾನ್ಯನಾದ ವಿನಾಯಕ ಇರುವ ಲೋಕ ಯಾವುದು? ಗಣೇಶ ತನ್ನ ಅಪ್ಪ- ಅಮ್ಮನ ಜೊತೆ ಕೈಲಾಸದಲ್ಲೇ ವಿರಾಜಮಾನನಾಗಿರುತ್ತಾನೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ'ಶ್ರೀ ಗಣೇಶ ಪುರಾಣ'ದ ಉಪಾಸನ ಖಂಡದ51ನೇ ಅಧ್ಯಾಯದಲ್ಲಿ ಹೇಳಿರುವಂತೆ ಗಣೇಶನಿಗೆ ಪ್ರತ್ಯೇಕ ಲೋಕವಿದೆ. 'ಸ್ವಾನಂದ ಲೋಕ' ಎಂದು ಅದರ ಹೆಸರು. ಇದನ್ನು ʼನಿಜಲೋಕʼ, ʼದಿವ್ಯಲೋಕʼವೆಂದೂ ಕರೆಯುತ್ತಾರೆ.
ಪುರಾಣಗಳಲ್ಲಿ ವರ್ಣಿಸಲ್ಪಟ್ಟಿರುವ ಇತರ ಲೋಕಗಳಿಗಿಂತ ಗಣೇಶನ ಲೋಕಕ್ಕೆ ಪ್ರತ್ಯೇಕ ಸ್ಥಾನವಿದೆ. ಈ ಲೋಕ ಐದು ಸಾವಿರ ಯೋಜನಗಳಷ್ಟು ವಿಸ್ತಾರವಾದುದು. ರತ್ನಖಚಿತವಾದ ಸುವರ್ಣಭೂಮಿಯಲ್ಲಿ ಹತ್ತು ದಿಕ್ಕುಗಳನ್ನು ಬೆಳಗುತ್ತ ಸಮಷ್ಟಿ ವೃಷ್ಟಿರೂಪ ಜಗದಾತ್ಮಕವಾಗಿ ವಿನಾಯಕನು ಇಲ್ಲಿ ನೆಲೆಸಿದ್ದಾನೆ.
ಲೋಕದ ತುಂಬೆಲ್ಲ ಇಕ್ಷು ಸಾಗರ (ಕಬ್ಬಿನ ರಸದ ಸಮುದ್ರ). ಅದರ ಮಧ್ಯೆ ಸಾವಿರ ದಳಗಳ ಶ್ವೇತ ಕಮಲದ ಕರ್ಣಿಕೆಯಲ್ಲಿ ರತ್ನಖಚಿತವಾದ ಸುವರ್ಣ ಮಂಚ ಶೋಭಿಸುತ್ತಿದೆ. ಆ ಮಂಚದ ಮೇಲೆ ಬಾಲ ಸ್ವರೂಪಿಯಾಗಿ, ರಕ್ತವರ್ಣದ ಪೀತಾಂಬರವನ್ನು ಧರಿಸಿದ, ಅರ್ಧಚಂದ್ರಕಿರೀಟ, ಮುತ್ತು ಮಣಿ ಮಾಣಿಕ್ಯಾದಿ ಹೊನ್ನಾಭರಣ ಧರಿಸಿದ, ತ್ರಿನೇತ್ರಧಾರಿಯಾದ, ಶಯನಭಂಗಿಯಲ್ಲಿ ಇರುವ(ಯೋಗ ನಿದ್ರಾರೂಢನಾದ) ವಿನಾಯಕ ವಿರಾಜಿಸುತ್ತಿದ್ದಾನೆ.
ಸರ್ವಸಿದ್ಧಿಗಳಿಗೂ ಕಾರಣರಾದ ಸಿದ್ಧಿ-ಬುದ್ಧಿ ದೇವಿಯರು ಗಣಪನ ಪಾದ ಪೂಜಿಸುತ್ತ, ಅಣಿಮಾ-ಗರಿಮಾದೇವಿಯರು ಶ್ವೇತ ಚಾಮರ ಸೇವೆಗೈಯುತ, ಜ್ವಾಲಿನಿ-ತೇಜಿನಿ ದೇವಿಯರಿಬ್ಬರೂ ದೇವದೇವನ ಎರಡೂ ಪಾರ್ಶ್ವಗಳಲ್ಲಿ ಪುಷ್ಪಾರ್ಚನೆಗೈಯುತ್ತ ಛತ್ರಿಯನ್ನು ಹಿಡಿದು ಶೋಭಿಸುತ್ತಿರುತ್ತಾರೆ. ಮಹಿಮಾ-ಪ್ರತಿಮೆಯರಿಗೆ ದೇವನ ದೃಷ್ಟಿ ಗೋಚರವಾಗಿ ಸಮೀಪದಲ್ಲೇ ರತ್ನಖಚಿತ ಸುವರ್ಣ ಜಲಪಾತ್ರೆ ಹಿಡಿದು ನಿಂತಿರುತ್ತಾರೆ.
ಸಾಮವೇದ ಪುರುಷನು ಗಣೇಶನ ಮಹಿಮೆಯನ್ನು ಗುಣಗಾನ ಮಾಡುತ್ತಿರುತ್ತಾನೆ. ಎಲ್ಲ ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೂರ್ತಿವತ್ತಾಗಿ ಬಂದು ಶ್ರೀ ಗಣೇಶನ ಮಹಿಮೆಯನ್ನು ಕೊಂಡಾಡುತ್ತಿರುತ್ತವೆ. ಈ ಎಲ್ಲ ರಸಮಯ ಸನ್ನೀವೇಶಗಳನ್ನು ಒಳಗೊಂಡ 'ಸ್ವಾನಂದ ಲೋಕ'ವನ್ನು ನೆನೆಯುವುದೇ ನೀಡುವುದು ಒಂದು ಅಲೌಕಿಕ ಆನಂದ!
ಸ್ವಾನಂದ ಲೋಕದ ಬಾಲಗಣಪನ ದೇಗುಲವನ್ನು ಕನಕಪುರ ರಸ್ತೆಗೆ ಮೂರು ಕಿ.ಮೀ ದೂರದಲ್ಲಿರುವ ತಾತಗುಣಿಯ ಅಗರ ಗ್ರಾಮದ ಸ್ವಾನಂದಾಶ್ರಮದಲ್ಲಿ ಕಾಣಬಹುದು. ಒಂಬತ್ತು ಎಕರೆ ವಿಸ್ತೀರ್ಣದ ದೇವಾಲಯದ ಸಂಕೀರ್ಣ ಪ್ರದೇಶವು ಹಚ್ಚ ಹಸಿರಿನ ಉದ್ಯಾನವನಗಳನ್ನು ಹೊಂದಿದೆ, ಇದು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತದೆ.   ಆಶ್ರಮವು ಮುಖ್ಯ ದೇವಾಲಯದ ಸುತ್ತಲೂ, ಸತ್ಯ ಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಹೀಗೆ ನಾಲ್ಕು ಯುಗದ ಗಣಪತಿಗಳಿಗೆ ನಾಲ್ಕು ದೇವಾಲಯಗಳು ಮತ್ತು ಗಣಪತಿಯ ವಿವಿಧ ಅಭಿವ್ಯಕ್ತಿಗಳ 32 ವಿಗ್ರಹಗಳನ್ನು ಹೊಂದಿದೆ.  ಸ್ವಾನಂದಾಶ್ರಮ ಸಂಕೀರ್ಣದಲ್ಲಿ ಸುಬ್ರಹ್ಮಣ್ಯ ದೇವರಿಗೆ ಮತ್ತು ಪಾರ್ವತಿ ದೇವಿಗೆ ಮತ್ತೊಂದು ದೇವಾಲಯವಿದೆ.  ಇಲ್ಲಿ ಪಾರ್ವತಿ ದೇವಿ ಹಾವಿನ ಮೇಲೆ ಕುಳಿತಿದ್ದಾಳೆ. ಇಲ್ಲಿನ ಗೋಶಾಲೆಯಲ್ಲಿ ಗೋವುಗಳನ್ನು ನೋಡಿಕೊಳ್ಳಲಾಗುತ್ತಿದೆ.  ಆಶ್ರಮವು ಸುತ್ತಲಿನ ಗ್ರಾಮೀಣ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ, ಇತರ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತೊಡಗಿಸಿಕೊಂಡಿದೆ.
ಜೀವನದಲ್ಲಿ ಕೆಲವೊಮ್ಮೆ ಕೆಲವೊಂದು ಅಲೌಕಿಕ ಅನುಭೂತಿಯ ಸಂದರ್ಭಗಳು ತಾನೇ ತಾನಾಗಿ ಸಹಜವಾಗಿ ಬಂದೊದಗುತ್ತವೆ. ಎಂದೋ ಘಟಿಸಬೇಕಾದ ಧನಾತ್ಮಕ ಘಟನೆಗಳು ಎಂದೋ ಒಂದು ದಿನದಿಂದ ಇದ್ದಕ್ಕಿದ್ದಂತೆಯೇ ಆರಂಭವಾಗಿ ಬಿಡುತ್ತದೆ. ಇತ್ತೀಚೆಗೆ ನನ್ನ ಗೆಳತಿಯರೊಂದಿಗೆ ಆಕಸ್ಮಿಕವಾಗಿ ಸ್ವಾನಂದ ಗಣಪತಿಯನ್ನು ದರ್ಶಿಸುವ ಸೌಭಾಗ್ಯ ನನಗೆ ದೊರೆಯಿತು. ಸ್ವಾನಂದ ಗಣಪತಿಯ ದೇವಾಲಯದ ದ್ವಾರವನ್ನು ದಾಟಿ ಒಳಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಾನಂದದ ಅನುಭವವಾಯಿತು. ಪರಿಸರ ಅತ್ಯಂತ ಪ್ರಶಾಂತವಾಗಿತ್ತು. ತಾನೇ ತಾನಾಗಿ ಸಹಜವಾಗಿ ನನ್ನೊಳಗೆ ಭಕ್ತಿಭಾವ ಮೂಡಿತು. ಹಲವಾರು ವರುಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರೂ, ಒಮ್ಮೆಯೂ ಸ್ವಾನಂದಾಶ್ರಮಕ್ಕೆ ಹೋಗಿರಲಿಲ್ಲ.  ಬಹುಶಃ ಇದು ದೇವರೇ ನನಗೆ ಒದಗಿಸಿದ ಒಂದು ಸುಯೋಗ!
ನಾವು ಒಂದು ಕ್ಷೇತ್ರದ ದೇವರನ್ನು ದರ್ಶನ ಮಾಡಲೆಂದೇ ಹೋಗುವುದು ಬೇರೆ.  ಒಂದು ಕ್ಷೇತ್ರದ ದೇವರೇ ನಮ್ಮನ್ನು ದರ್ಶಿಸಲು ಬಾ ಎಂದು ಕರೆಸಿಕೊಳ್ಳುವುದೇ ಬೇರೆ!  ಈ ಎರಡರಲ್ಲಿ ಎರಡನೆಯದು ಅತ್ಯಂತ ಶ್ರೇಷ್ಠವೆಂದು ನನ್ನ ಭಾವನೆ! ಒಂದನೆಯದು ನಮ್ಮಿಚ್ಛೆ, ಎರಡನೆಯದು ದೈವೇಚ್ಛೆ! ಒಂದನೆಯದು ನಮ್ಮಿಂದ ನಿರ್ಧಾರಿತ, ಎರಡನೆಯದು ದೈವ ನಿರ್ಧಾರಿತ.  ಎರಡನೆಯದಕ್ಕೆ ತಾನೇ ತಾನಾಗಿ ಕಾಲ ಕೂಡಿಬರಬೇಕು, ಯೋಗ ಕೂಡಿ ಬರಬೇಕು.  ಹಾಗೆ ಕೂಡಿ ಬಂದ ಯೋಗವೇ ನಮ್ಮ ಪಾಲಿಗೆ ಅದೃಷ್ಟವೆಂದು ಭಾವಿಸಿ ನಮ್ಮ ಕೈಲಾದ ಸೇವೆಯನ್ನು ಮಾಡಬೇಕು. ಆತ್ಮೀಯ ಬಂಧುಗಳೇ, ನಿಮಗೂ ಸಹ ಇಂತಹ ಸುಯೋಗ ಕೂಡಿ ಬರಬಹುದು, ಸ್ವಾನಂದ ಗಣಪತಿ ನಿಮ್ಮನ್ನೂ ಸ್ವಾಗತಿಸಬಹುದು!.. ಅಂತಹ ಸುಯೋಗ ನಿಮಗೂ ಕೂಡಿ ಬರಲಿ.

ಶ್ರೀಕೃಷ್ಣರ್ಪಣಮಸ್ತು

Wednesday, 3 August 2022

Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ?

ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು, ಬದುಕು, ಸಾವು ಇವೆಲ್ಲವೂ ನಂಬಿಕೆಗಳಿಂದಲೇ ಹೆಣೆಯಲ್ಪಟ್ಟಿವೆ. ಹುಟ್ಟು ಪೂರ್ವಜನ್ಮದ ಫಲ ಎಂದು ನಂಬಲಾಗುವಂತೆಯೇ, ಈ ಜನ್ಮದ ಫಲಗಳನ್ನು ಸಾವಿನ ನಂತರ ಅನುಭವಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ಕುರಿತು ಗರುಡ ಪುರಾಣದಲ್ಲೂ ಕೆಲ ಅಂಶಗಳಿದ್ದು, ಯಾರು ಪಾಪಕರ್ಮಗಳನ್ನೆಸಗಿ ಸಾಯುತ್ತಾರೋ ಅವರು ಮರಣಾನಂತರ ಅಷ್ಟೇ ಕಠಿಣ ಶಿಕ್ಷೆಯನ್ನು ಎದುರಿಸುತ್ತಾರೆ ಎಂದೆನ್ನಲಾಗಿದೆ. ಬದುಕಿರುವಾಗ ಇನ್ನೊಬ್ಬರಿಗೆ ಉದ್ದೇಶಪೂರ್ವಕವಾಗಿಯೇ ಮೋಸ ಮಾಡಿದವರಿಗೆ, ವಂಚಿಸಿದವರಿಗೆ, ಹಿಂಸಿಸಿದವರಿಗೆ ಸತ್ತ ಮೇಲೆ ಸಿಗುವ ಘನಘೋರ ಶಿಕ್ಷೆಗಳು ಎಂಥವು ಎಂದು ತಿಳಿಯುತ್ತಾ ಹೋದರೆ ಎಂತಹ ಗಟ್ಟಿಗರೂ ಒಮ್ಮೆ ನಡುಗಬೇಕು.

ಗರುಡ ಪುರಾಣದಲ್ಲಿ ಹೇಳುವಂತೆ ಮರಣಾನಂತರ ಆ ವ್ಯಕ್ತಿಯನ್ನು ಒಂದು ದಿನದ ಸಲುವಾಗಿ ಯಮಲೋಕಕ್ಕೆ ಕರೆದುಕೊಂಡು ಹೋಗಲಾಗುತ್ತದೆಯಂತೆ. ಅಲ್ಲಿ ಅವರ ಜೀವನದ ಪುಣ್ಯ, ಪಾಪಗಳ ಪಟ್ಟಿಯನ್ನು ಲೆಕ್ಕ ಹಾಕಲಾಗುತ್ತದೆ. ನಂತರ ಅದೆಲ್ಲವನ್ನೂ ಪರಿಶೀಲಿಸಿ ಕರ್ಮಗಳ ಆಧಾರದ ಮೇಲೆ ಆ ವ್ಯಕ್ತಿಯನ್ನು ಸ್ವರ್ಗಕ್ಕೆ ಕಳುಹಿಸಬೇಕೋ ಅಥವಾ ನರಕಕ್ಕೆ ನೂಕಬೇಕೋ ಎನ್ನುವ ತೀರ್ಮಾನವಾಗುತ್ತದೆ.

ಒಂದುವೇಳೆ ಬದುಕಿನಲ್ಲಿ ಜಾಸ್ತಿ ಪುಣ್ಯಕಾರ್ಯಗಳನ್ನು ಮಾಡಿದ್ದರೆ ಅವರಿಗೆ ಕುಟುಂಬಸ್ಥರು ಪಿಂಡಪ್ರದಾನ ಮಾಡುತ್ತಿದ್ದಂತೆಯೇ ಸ್ವರ್ಗದ ಬಾಗಿಲು ತೆರೆದುಕೊಳ್ಳುತ್ತದೆ. ಅಪ್ಪಿತಪ್ಪಿ ಪಾಪಕೃತ್ಯಗಳನ್ನೇ ಹೆಚ್ಚು ಎಸಗಿದ್ದರೆ ಅವರಿಗೆ ನರಕ ಕಟ್ಟಿಟ್ಟಬುತ್ತಿ. ಅದು ಕೂಡಾ ನರಕದತ್ತ ಬೆಳೆಸುವ ಪಯಣ ತೀರಾ ಕಷ್ಟಕರವಾಗಿರಲಿದ್ದು ಅಲ್ಲಿಗೆ ತಲುಪಲು 99 ಸಾವಿರ ಯೋಜನಗಳ ದೂರ ಕ್ರಮಿಸಬೇಕು. ಅಂದರೆ, ಮೃತರ ಪಾಪಾತ್ಮವು 11 ಲಕ್ಷದ 99 ಸಾವಿರದ 988 ಕಿಲೋ ಮೀಟರ್​ ದೂರವನ್ನು ನರಕದ ಪ್ರಯಾಣಕ್ಕಾಗಿ ಕ್ರಮಿಸಬೇಕಾಗುತ್ತದೆ.


ಈ ಸುದೀರ್ಘ ಪ್ರಯಾಣದಲ್ಲೂ ಅನೇಕ ಹಂತಗಳನ್ನು ದಾಟಬೇಕಾಗಿದ್ದು, ಹಲವು ಪರೀಕ್ಷೆಗಳು ಎದುರಾಗಲಿವೆ. ಶಿಕ್ಷೆಯ ಕಠಿಣತೆ ಹೇಗಿರುತ್ತದೆ ಎಂದರೆ ಲಕ್ಷಾಂತರ ಕಿಲೋ ಮೀಟರ್​ ಪ್ರಯಾಣದಲ್ಲೆಲ್ಲೂ ವಿಶ್ರಾಂತಿ ಪಡೆಯಲು ಕುಳಿತುಕೊಳ್ಳಲು ಜಾಗವಾಗಲೀ, ದಾಹ ತೀರಿಸಿಕೊಳ್ಳಲು ನೀರಾಗಲೀ ಸಿಗುವುದಿಲ್ಲ. ನಡೆಯುತ್ತಾ ಹೋದಂತೆ ಬಿಸಿಲಿನ ಝಳ ಹೆಚ್ಚುತ್ತಾ ಹೋಗಿ ಮೈ ಸುಡಲಾರಂಭಿಸಿದರೂ ಒಂದು ಅಡಿ ಜಾಗದಲ್ಲೂ ನೆರಳು ಸಿಗಲಾರದು. ಆ ಮಟ್ಟಿಗೆ ಕಠಿಣ ಸವಾಲುಗಳು ಎದುರಾಗುತ್ತಾ ಹೋಗುತ್ತವೆ.


ಈ ಸಂಕಷ್ಟದಿಂದ ನರಳುತ್ತಾ ಸಾಗುವ ಆತ್ಮ ಇನ್ನೇನು ನರಕದ ಬಾಗಿಲಿಗೆ ಬರಬೇಕು ಎನ್ನುವಷ್ಟರಲ್ಲಿ ದಟ್ಟ ಕಾಡೊಂದನ್ನು ದಾಟುವ ಸವಾಲು ಬರುತ್ತದೆ. ಕಾಡಲ್ಲಾದರೂ ಆಯಾಸ ಪರಿಹರಿಸಿಕೊಳ್ಳಬಹುದು ಎಂದುಕೊಂಡರೆ ಅಲ್ಲಿ ಸುತ್ತಲೂ ಧಗಧಗಿಸುವ ಬೆಂಕಿ, ಅದರ ನಡುವೆಯೂ ಕಾಡುವ ಕ್ರೂರ ಪ್ರಾಣಿಗಳು, ಸೊಳ್ಳೆ, ದುಂಬಿ, ಕಾಗೆ, ರಣಹದ್ದು, ಗೂಬೆ ಮುಂತಾದವುಗಳು ಆತ್ಮವನ್ನು ಮತ್ತಷ್ಟು ಪರದಾಡಿಸಿಬಿಡುತ್ತವೆ. ಆ ಸಂದರ್ಭದಲ್ಲಿ ಆತ್ಮ ಅವುಗಳಿಂದ ಬಚಾವಾಗಲಿಕ್ಕಾಗಿ ಕೊಳಚೆ, ಮೂತ್ರಾದಿಗಳಿಂದ ತುಂಬಿಕೊಂಡ ಗುಂಡಿಯಲ್ಲೆಲ್ಲಾ ಮುಳುಗಿ ಏಳಬೇಕಾಗುತ್ತದೆ. ಅಷ್ಟಾದ ನಂತರವೂ ಗಾಢ ಅಂಧಕಾರದಲ್ಲೇ ಸಾಗುವ ಆತ್ಮ ನರಕದಲ್ಲೂ ಪ್ರತಿಕ್ಷಣ ಪರಿತಪಿಸುವಷ್ಟು ಹೀನಾಯ ಮಟ್ಟದ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಹೀಗಾಗಿ, ಮರಣಾನಂತರ ಆತ್ಮ ಘನಘೋರ ಶಿಕ್ಷೆ ಅನುಭವಿಸಬಾರದೆಂದರೆ ಜೀವನದುದ್ದಕ್ಕೂ ಸತ್ಯದ ಹಾದಿಯನ್ನೇ ಅನುಸರಿಸಬೇಕು. ಎಷ್ಟೇ ಕಷ್ಟ, ಸವಾಲು ಎದುರಾದರೂ ಯಾವುದೇ ಕಾರಣಕ್ಕೂ ಎದೆಗುಂದದೆ ನ್ಯಾಯಪಥದಲ್ಲೇ ಸಾಗಬೇಕು. ಆಗ ಮಾತ್ರ ಬದುಕು ಪರಿಪೂರ್ಣಗೊಂಡು ಮುಕ್ತಿ ಲಭಿಸುವುದು ಸಾಧ್ಯ.













Saturday, 4 June 2022

ಸ್ವತಃ ಪತ್ನಿಯಿಂದಲೇ ಶಾಪಗ್ರಸ್ಥನಾಗಿದ್ದ ಶನಿ..! ಪತ್ನಿಯೇ ಶಾಪ ನೀಡಲು ಕಾರಣವೇನು..?

ಹೆಚ್ಚಿನ ಜನರು ಶನಿಯೆಂದರೆ ಭಯಪಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರಿಗೆ ಹಿಂದೂ ಪುರಾಣಗಳ ಬಗೆಗಿನ ಅಲ್ಪ ಜ್ಞಾನವಿರಬಹುದು. ಯಾಕೆಂದರೆ ಶನಿ ಕೇವಲ ಸಂಕಷ್ಟವನ್ನು ತರುವ ದೇವನಲ್ಲ. ಆತ ಒಲಿದರೆ ಎಂತವನನ್ನಾದರೂ ಶ್ರೀಮಂತನನ್ನಾಗಿಸುತ್ತಾನೆ. ನ್ಯಾಯಾಧೀಶನಾದ ಶನಿಯನ್ನೇ ಆತನ ಪತ್ನಿ ಶಪಿಸಲು ಕಾರಣವೇನು..? ಇಂದಿಗೂ ಜನರು ಶನಿಯೆಂದರೆ ಭಯಪಡಲು ಈಕೆಯೂ ಕಾರಣಳೇ..?

ಶನಿದೇವನು ಓರ್ವ ವ್ಯಕ್ತಿಯ ಕಾರ್ಯಕ್ಕೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಶನಿವಾರ ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಶನಿದೇವನನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಬೇಕು ಎನ್ನುವ ನಂಬಿಕೆಯಿದೆ. ಶನಿವಾರದಂದು ನಿಜವಾದ ಭಕ್ತಿ ಮತ್ತು ಶ್ರದ್ಧೆಯಿಂದ ಶನಿದೇವನನ್ನು ಪೂಜಿಸುವ ಸಾಧಕನ ಎಲ್ಲಾ ಆಸೆಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಶನಿ ದೇವನು ಕೋಪದ ಸ್ವಭಾವದವನು. ಶನಿದೇವನು ಯಾರ ಮೇಲೆ ಪ್ರಸನ್ನನಾಗುತ್ತಾನೋ, ಆ ವ್ಯಕ್ತಿ ಎಷ್ಟೇ ಬಡವನಾಗಿದ್ದರೂ ಶೀಘೃದಲ್ಲೇ ಶ್ರೀಮಂತನಾಗುತ್ತಾನೆ. ಓರ್ವ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲವ್ನನು ನಿಡುವ ಶನಿಯೇ ತನ್ನ ಪತ್ನಿಯಿಂದ ಶಾಪಗ್ರಸ್ಥನಾಗಿರುವುದು ನಿಮಗೆ ತಿಳಿದಿದೆಯೇ..?

ಶನಿ ದೇವನನ್ನು ಮೆಚ್ಚಿಸುವ ಒಂದು ಮಾರ್ಗವೆಂದರೆ ಅವನ ಹೆಂಡತಿಯರನ್ನು ಪೂಜಿಸುವುದು. ಅವನಿಗೆ ಧ್ವಜಿನಿ, ಧಾಮಿನಿ, ಕಂಕಾಲಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಷಿ ಮತ್ತು ಅಜ ಎಂಬ ಎಂಟು ಮಂದಿ ಪತ್ನಿಯರಿದ್ದರು ಎಂದು ಹೇಳಲಾಗುತ್ತದೆ. ಶನಿದೇವನನ್ನು ಮೆಚ್ಚಿಸಬೇಕಾದರೆ ಓರ್ವ ವ್ಯಕ್ತಿಯು ಆತನ ಪತ್ನಿಯರಲ್ಲಿ ಯಾವುದೇ ಒಂದು ಪತ್ನಿಯ ಹೆಸರನ್ನು ಜಪಿಸಬೇಕು. ಶನಿವಾರದಂದು ಅವರ ಹೆಸರನ್ನು ಜಪಿಸಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಶನಿದೇವನ ದೃಷ್ಟಿ ಶಾಪಗ್ರಸ್ಥವೆಂಬ ನಂಬಿಕೆಯಿದೆ. ಇದಕ್ಕೆ ಆತನ ಪತ್ನಿ ಧಾಮಿನಿಯೇ ಮುಖ್ಯ ಕಾರಣ.

ಶನಿದೇವನು ತನ್ನ ಬಾಲ್ಯದಿಂದಲೂ ಶ್ರೀಕೃಷ್ಣನ ಕಟ್ಟಾ ಭಕ್ತನಾಗಿದ್ದನು. ಆಗಾಗ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಬಹಳ ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿಕೊಳ್ಳುತ್ತಿದ್ದನು. ದೊಡ್ಡವನಾದ ಮೇಲೂ ಕೃಷ್ಣನ ಮೇಲಿನ ಪ್ರೀತಿ ಹಾಗೆಯೇ ಇತ್ತು. ವಯಸ್ಕನಾದ ಮೇಲೆ ಚಿತ್ರರಥನ ಮಗಳಾದ ಧಾಮಿನಿಯನ್ನು ಶನಿಯು ವಿವಾಹವಾಗುತ್ತಾನೆ. ಅವನ ಪತ್ನಿ ಧಾಮಿನಿ ದೈವಿಕ ಶಕ್ತಿಯುಳ್ಳ ಮಹಿಳೆ. ಅವಳು ಸುಂದರಿಯೊಂದಿಗೆ ಅತ್ಯಂತ ಬುದ್ಧಿವಂತಳಾಗಿದ್ದಳು.

ದಂತಕಥೆಯ ಪ್ರಕಾರ, ಶನಿದೇವನು ವಿವಾಹವಾದ ಚಿತ್ರರಥನ ಮಗಳು ಧಾಮಿನಿ ಪರಮ ತೇಜಸ್ವಿನಿಯಾಗಿದ್ದಳು. ಶನಿದೇವನ ಹೆಂಡತಿ ಧಾಮಿನಿ ಮಕ್ಕಳನ್ನು ಹೊಂದುವ ಆಸೆಯಿಂದ ತನ್ನ ಪತಿಯನ್ನು ತಲುಪಿದಳು. ಆದರೆ ಶನಿದೇವನು ಶ್ರೀ ಕೃಷ್ಣನ ಆರಾಧನೆಯಲ್ಲಿ ಮಗ್ನನಾಗಿದ್ದನು. ಪತ್ನಿಯ ಪ್ರಯತ್ನದ ನಂತರವೂ ಶನಿದೇವನ ಧ್ಯಾನಕ್ಕೆ ಯಾವುದೇ ಭಂಗ ಬರಲಿಲ್ಲ. ಹೆಂಡತಿ ಕಾದು ಸುಸ್ತಾಗಿದ್ದಳು. ಇದರಿಂದ ಕೋಪಗೊಂಡ ಶನಿದೇವನ ಪತ್ನಿ ಧಾಮಿನಿಯು ತನ್ನ ಸ್ವಂತ ಪತಿಯನ್ನು ಶಪಿಸುತ್ತಾಳೆ.

ಇಂದಿನಿಂದ ಯಾರು ಶನಿಯನ್ನು ಕಣ್ಣೆತ್ತಿ ನೋಡುತ್ತಾರೋ ಅವರು ನಾಶವಾಗುತ್ತಾರೆ ಎಂದು ಶನಿಯನ್ನು ಆತನ ಪತ್ನಿ ಧಾಮಿನಿ ಶಪಿಸುತ್ತಾಳೆ.ಶನಿದೇವನ ತಪಸ್ಸು ಮುಗಿದ ನಂತರ ಅವನು ನಾನು ತನ್ನ ಹೆಂಡತಿಯ ಮಾತನ್ನು ಏಕೆ ಕೇಳಲಿಲ್ಲ ಎಂದು ತನ್ನ ಹೆಂಡತಿಗೆ ವಿವರಿಸಿದನು. ಇಡೀ ಘಟನೆಯನ್ನು ತಿಳಿದ ಶನಿ ದೇವನ ಪತ್ನಿ ತನ್ನ ಬಗ್ಗೆ ಬೇಸರಗೊಳ್ಳುತ್ತಾಳೆ. ಅನಾವಶ್ಯಕವಾಗಿ ತನ್ನ ಸ್ವಂತ ಗಂಡನನ್ನು ಶಪಿಸಿದೆನಲ್ಲ ಎಂದು ಮರುಗುತ್ತಾಳೆ. ಶಾಪವನ್ನು ಹಿಂತೆಗೆದುಕೊಳ್ಳುವ ಶಕ್ತಿ ಹೆಂಡತಿಗೆ ಇರಲಿಲ್ಲವಾದ್ದರಿಂದ ಶನಿಯು ತನ್ನ ತಲೆಯನ್ನು ಬಗ್ಗಿಸಿ ನಡೆಯುತ್ತಾನೆ. ಹಾಗೂ ಅಂದಿನಿಂದ ಎಲ್ಲರೂ ಕೂಡ ಶನಿಯನ್ನು ತಲೆ ಎತ್ತಿ ನೋಡಲು ಭಯಪಡುತ್ತಾರೆ.

ಯಾವುದೇ ದೇವರನ್ನು ಪೂಜಿಸುವಾಗ ನಾವು ತಲೆ ಎತ್ತಿ ದೇವರನ್ನು ನೋಡುತ್ತಾ ಪೂಜೆಯನ್ನು ಮಾಡುತ್ತೇವೆ. ಆದರೆ, ಶನಿ ದೇವನನ್ನು ಪೂಜಿಸುವಾಗ ನಾವು ಶನಿಯನ್ನು ತಲೆ ಎತ್ತಿ ನೋಡಿ ಪೂಜಿಸಬಾರದು. ಆತನ ಪಾದಗಳನ್ನು ನೊಡುತ್ತಾ ಪೂಜೆಯನ್ನು ಮಾಡಬೇಕು. ಇಲ್ಲದಿದ್ದರೆ ಶನಿ ನೀಡುವ ಕೆಟ್ಟ ಪರಿಣಾಮಗಳಿಗೆ ಬೆಲೆತೆರಬೇಕಾಗುತ್ತದೆ.

Friday, 7 January 2022

#ಕರ್ಮ ಭಾಗ-೧ ಮತ್ತು ಭಾಗ-೨

#ಕರ್ಮ ಭಾಗ-೧ ಮತ್ತು ಭಾಗ-೨
ಕರ್ಮ ಎನ್ನುವುದು ಆಡುಭಾಷೆಯ ಪದವಾದರೂ ಅದರ ಸರಿಯಾದ ಅರ್ಥವನ್ನು ತಿಳಿದವರು ಬಹಳ ವಿರಳ.  ಹಲವರು ಏನಾದರೂ ಕೆಡಕು ಉಂಟಾದಾಗ ‘ಎಲ್ಲಾ ನನ್ನ ಕರ್ಮ’ ಎಂದು ಇದನ್ನು ತಪ್ಪಿಸಲಾಗದ ಹಣೆಯ ಬರಹ ಅಥಾವಾ ಅನುಭವಿಸಲೇ ಬೇಕಾದ ಮತ್ತು ಕೇವಲ ಕಹಿಯ ಅನುಭವಗಳನ್ನು ತಂದೊಡ್ಡುವ ವಿಧಿ ಎನ್ನುವ ಅರ್ಥದಲ್ಲಿ ಬಳಸುತ್ತಾರೆ. ಈ ರೀತಿಯ ಬಳಕೆ ಸರಿಯಲ್ಲ. ಏಕೆಂದರೆ ಕರ್ಮ ತಪ್ಪಿಸಲಾಗದ ವಿಧಿಯಲ್ಲ! ಕರ್ಮ ಎನ್ನುವ ಪದಕ್ಕೆ ಇನ್ನೂ ಆಳವಾದ ಅರ್ಥವಿದೆ. ಇದರ ಒಳಹೊಕ್ಕು ಸರಿಯಾದ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನ ಮಾಡೋಣ.

ಕರ್ಮ ಎಂದರೇನು?

ಕರ್ಮ ಅಥವಾ ಕರ್ಮಫಲ ಎಂದರೆ ನಾವು ಮಾಡುವ ಪ್ರತಿಯೊಂದು ಕೃತ್ಯದ ಫಲಸ್ವರೂಪ. ಅಂದರೆ ಅದು ನಮ್ಮ ಕಾರ್ಯಗಳ ಮೂಲಕ ನಾವೇ ನಮ್ಮ ಕೈಯ್ಯಾರೆ ನಮಗಾಗಿಯೇ ಕಟ್ಟಿಟ್ಟುಕೊಂಡ ಬುತ್ತಿ ಎಂದರೆ ತಪ್ಪಾಗಲಾರದು. ಈ ಬುತ್ತಿಯು ಹಬ್ಬದೂಟವಾಗಿರಬಹುದು ಅಥವಾ ಕಹಿಯ ಮೂಟೆ ಕೂಡಾ ಆಗಿರಬಹುದು. ಇದನ್ನೇ ನಮ್ಮ ಹಿರಿಯರು ಗಾದೆಯ ರೂಪದಲ್ಲಿ ‘ಮಾಡಿದ್ದುಣ್ಣೋ ಮಹರಾಯ’ ಎಂದು ಹೇಳುವುದನ್ನು ಕೇಳಿದ್ದೇವೆ. ಈ ಸಿದ್ಧಾಂತಕ್ಕೆ ಹತ್ತಿರವಾದ ಭೌತಶಾಸ್ತ್ರದ ನಿಯಮವಾದ Newton’s Third Law ರೂಪದಲ್ಲಿ ‘Action and Reaction are Equal and Opposite’ ಎಂದು ಹೇಳಬಹುದು. ಈ ನಿಯಮದ ಅರ್ಥ ಏನೆಂದರೆ – ಉದಾಹರಣೆಗೆ ನಾವು ಒಂದು ಚೆಂಡನ್ನು ಎದುರುಗಿರುವ ಗೋಡೆಯ ಕಡೆ ಜೋರಾಗಿ ಎಸೆದರೆ, ಆ ಚೆಂಡು ಗೋಡೆಯನ್ನು ತಾಕಿದ ಮೇಲೆ ಅಷ್ಟೇ ವೇಗವಾಗಿ ನಮ್ಮ ಕಡೆ ಹಿಂತಿರುಗಿ ಬರುತ್ತದೆ. ಅಂದರೆ ನಾವು ಇತರರಿಗೆ ಕೊಡುವ ನೋವು, ನಲಿವು ಮುಂದೆ ಹಿಂತಿರುಗಿ ನಮ್ಮನ್ನು ಕೂಡ ಅದೇ ರೀತಿಯ ಅನುಭವಕ್ಕೆ ಗುರಿಪಡಿಸುತ್ತವೆ ಎಂದರ್ಥ. ಆದರೆ ಇದನ್ನು ಓದಿದ ತಕ್ಷಣ ನಿಮ್ಮ ಮನದಲ್ಲಿ ಮೂಡುವ ಪ್ರಶ್ನೆ ಏನೆಂದು ಬಲ್ಲೆ. ಇಲ್ಲಿ ಹೇಳುತ್ತಿರುವುದು ನಿಜವಿದ್ದರೆ, ನಮ್ಮ ಸಮಾಜದಲ್ಲಿ ಅನೇಕ ಸಮಾಜ ಘಾತಕರು ಅನೇಕ ಪಾತಕಗಳನ್ನು ಮಾಡುತ್ತಿದ್ದರೂ ಅದರ ಫಲವು ಅವರನ್ನು ತಾಕದಿರುವ ಅನೇಕ ಉದಾಹರಣೆಗಳನ್ನು ಕೊಡಬಹುದು. ಆದ್ದರಿಂದ ಇಲ್ಲಿ ಹೇಳಿರುವ ಮಾತುಗಳ ಬುನಾದಿ ಸರಿಯೇ? ಇದೇ ಅಲ್ಲವೇ ನಿಮ್ಮ ಪ್ರಶ್ನೆ? ಖಂಡಿತ ಸರಿಯಾದ ಪ್ರಶ್ನೆ. ಆದರೆ ನಾವು ಯಾವುದೇ ಕೃತ್ಯದ ಫಲವು ಒಬ್ಬ ಮನುಷ್ಯನನ್ನು ಆ ಕೃತ್ಯದ ನಂತರ ಕೂಡಲೇ ತಾಕುವುದೆಂದು ಭಾವಿಸುತ್ತೇವೆ. ಅದು ವಾಸ್ತವದಲ್ಲಿ ಹಾಗಿಲ್ಲ. ಒಂದು ಕೃತ್ಯದ ಫಲವು ಆ ಕರ್ತೃವನ್ನು ತಾಕಲು ಸಮಯದ ಅಂತರವಿರುತ್ತದೆ. ಆ ಸಮಯದ ಅಂತರ ಕೆಲವರಿಗೆ ಈ ಜನ್ಮದಲ್ಲೇ ಕೂಡಿಬರಬಹುದು ಅಥವಾ ಇನ್ನು ಕೆಲವರಿಗೆ ಮುಂದಿನ ಜನ್ಮದಲ್ಲಿ ಕೂಡಿಬರಬಹುದು. ಇದು ನಿರ್ದಿಷ್ಟವಾಗಿ ಯಾರಿಗೂ ತಿಳಿಯದ ಸಂಗತಿ. ಏಕೆಂದರೆ ಪ್ರತಿಯೊಬ್ಬರೂ ಈ ಜನ್ಮದಲ್ಲಿ ಈಗಾಗಲೇ ತಾವು ಹಿಂದೆ ಮಾಡಿದ ಕೃತ್ಯಗಳ ಫಲಸ್ವರೂಪವಾದ ಕರ್ಮಫಲವನ್ನು ಅನುಭವಿಸುತ್ತಿರುತ್ತಾರೆ. ಇದು ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಇಬ್ಬರು ಈ ಜನ್ಮದಲ್ಲಿ ಒಂದೇ ರೀತಿಯ ಕೃತ್ಯವನ್ನು ಒಂದೇ ಸಮಯದಲ್ಲಿ ಎಸಗಿದರೂ ಅದರ ಫಲವು ಅವರಿಬ್ಬರನ್ನೂ ಒಂದೇ ಸಮಯದಲ್ಲಿ ತಾಕದೆ ಇರುವ ಸಾಧ್ಯತೆ ಇದೆ. ಏಕೆಂದರೆ ಈ ಹೊಸ ಕರ್ಮಫಲಗಳು ನಮ್ಮ ಹಿಂದಿನ ಕರ್ಮಫಲಗಳ ಹಿಂದೆ ಕ್ಯೂ ನಲ್ಲಿ ನಿಲ್ಲಬೇಕಾಗುತ್ತದೆ. ಒಬ್ಬರ ಕ್ಯೂ ಇನ್ನೊಬ್ಬರದ್ದಿಕ್ಕಿಂತ ಚಿಕ್ಕದಿರಬಹ್ದು ಅಥವಾ ದೊಡ್ಡದಿರಬಹುದು. ಮತ್ತು ಒಬ್ಬರ ಕ್ಯೂ ನಲ್ಲಿ ಹಿಂದೆ ಮಾಡಿದ ಸುಕೃತಗಳ ಫಲವಾಗಿ ಒಳ್ಳೆಯ ಫಲಗಳನ್ನು ಈಗ ಅನುಭವಿಸುತ್ತಿರಬಹುದು. ಒಂದು ಕ್ಷಮಿಸಲಾರದಂತಹ ಕೃತ್ಯವನ್ನು ಎಸಗಿದವನು ಆನಂತರವೂ ಸುಖಸಂತೋಷಗಳನ್ನು ಅನುಭವಿಸುತ್ತಿರುವುದು ನಮಗೆ ಒಂದು ಆಭಾಸದಂತೆ ಕಾಣುತ್ತದೆ. ಮತ್ತು ಕರ್ಮ ಸಿದ್ಧಾಂತದ ಬಗ್ಗೆ ಇರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಒಬ್ಬರ ಕರ್ಮಫಲದ ಕ್ಯೂ ನಲ್ಲಿ ಏನಿದೆ ಎನ್ನುವುದು ನಮಗೆ ಅಗೋಚರವಾದ ವಿಷಯ. ಆದ್ದರಿಂದಲೇ ಈ ಕರ್ಮ ಸಿದ್ಧಾಂತವನ್ನು ಭೌತಶಾಸ್ತ್ರದ ನಿಯಮಗಳನ್ನು ಪ್ರಯೋಗಕ್ಕೆ ಒಳಪಡಿಸುವಂತೆ ಪ್ರಯೋಗಕ್ಕೆ ಒಳಪಡಿಸಿ ಪರೀಕ್ಷಿಸಲಾಗುವುದಿಲ್ಲ. ಆದ ಕಾರಣ ಪ್ರಯೋಗದ ಪರೀಕ್ಷೆಯ ಬದಲು ಸಿದ್ಧರ ಮಾತುಗಳನ್ನು ನಂಬಿ ನಡೆಯಬೇಕಿದೆ, ಬೇರೆ ದಾರಿಯಿಲ್ಲ. ಈ ನಂಬಿಕೆಯ ದಾರಿಯಲ್ಲಿ ನಡೆಯುವಂತಿದ್ದರೆ ಮುಂದೆ ಓದಿ.

‘ಕರ್ಮ’ ಪದದ ಸವಿಸ್ತಾರವಾದ ಅರ್ಥವೇನು?

ಕರ್ಮದ ಸೂತ್ರವು (Law of Karma) ಪ್ರಪಂಚದ ಪ್ರತಿಯೊಂದು ಜೀವಿಗೂ ಅನ್ವಯವಾಗುತ್ತದೆ. ಅದು ಯಾವ ಪೂರ್ವಾಗ್ರಹವೂ ಇಲ್ಲದೆ ಎಲ್ಲರ ಕಾರ್ಯಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ಪಾಪ ಅಥವಾ ಪುಣ್ಯ ಎಂದು ನಿರ್ಧರಿಸುತ್ತದೆ. ಮತ್ತು ಅದರ ಪ್ರಕಾರ ಫಲದ ನಿರ್ಧಾರವಾಗುತ್ತದೆ. ಈ ಫಲಗಳನ್ನೆಲ್ಲ ನಾವು ಅನುಭವಿಸುವವಎವಿಗೂ ನಾವು ಜನನ ಮರಣಗಳೆಂಬ ಚಕ್ರವ್ಯೂಹದಲ್ಲಿ ಬಂಧಿತರಾಗುತ್ತೇವೆ.

ನಮ್ಮ ಸನಾತನ ಧರ್ಮದ ಪ್ರಕಾರ ನಾವು ಮಾಡುವ ಕರ್ಮ ನಮ್ಮ ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ನಮ್ಮ ಕರ್ಮ ಫಲಗಳನ್ನು ಪೂರ್ಣವಾಗಿ ಈ ಜನ್ಮದಲ್ಲೇ ಅನುಭವಿಸುವ ಕಾಲಾವಕಾಶ ಇಲ್ಲದ ಪಕ್ಷದಲ್ಲಿ ನಮ್ಮ DNA ದಲ್ಲಿ ಮುದ್ರಿತವಾದ ಉಳಿದ ಕರ್ಮಗಳು ನಮ್ಮ ಸಾವಿನ ಸಮಯದಲ್ಲಿ ಕಾರಣಶರೀರದ (Causal Body) ಮೂಲಕ ದೇಹತ್ಯಾಗ ಮಾಡುತ್ತವೆ. ಈ ಕಾರಣಶರೀರದಲ್ಲಿ ಶೇಖರವಾದ ಕರ್ಮಗಳೇ ನಾವು ಮತ್ತೊಂದು ಜನ್ಮವನ್ನು ಪಡೆಯಲು ಕಾರಣವಾಗುತ್ತವೆ ಮತ್ತು ನಾವು ಹಿಂದಿನ ಜನ್ಮದಲ್ಲಿ ಅನುಭವಿಸಲಾಗದ ಕರ್ಮಫಲಗಳನ್ನು ನುಭವಿಸುವ ಅವಕಾಶವನ್ನು ಮಾಡಿಕೊಡುತ್ತದೆ. ಈ ಚಕ್ರ ನಿರಂತರವಾಗಿ ಸಾಗುತ್ತ ಆದಿ ಶಂಕರಾಚಾರ್ಯರು ಹೇಳಿದ ಹಾಗೆ “ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ...” ಎನ್ನುವಂತೆ ಕಾಲಚಕ್ರದಲ್ಲಿ ಬಂಧಿತರಾಗುತ್ತೇವೆ. ಪ್ರತಿಯೊಂದು ಜನ್ಮದಲ್ಲಿಯೂ ನಾವು ನಮ್ಮ ಬಂಧುಬಳಗ, ಸ್ನೇಹಿತರ ಜತೆ ಋಣಾತ್ಮಕ ಸಂಬಂಧಗಳನ್ನು ಹೊಂದಿರುತ್ತೇವೆ. ಈ ಋಣಗಳು ಕರ್ಮಫಲಗಳನ್ನು ನೀಡುತ್ತವೆ. ಹೀಗೆ ಉಂಟಾದ ಕರ್ಮಫಲಗಳು ಮತ್ತೆ ನಮ್ಮ ಮುಂದಿನ ಜನ್ಮದಲ್ಲಿ ನಾವು ಎಂತಹ ಕುಟುಂಬದಲ್ಲಿ ಜನಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ – “ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯ” ಎನ್ನುವ ಮಾತು ಎಷ್ಟು ಸತ್ಯವಾದುದು!

ಕರ್ಮಫಲವು ಕೇವಲ ನಾವು ಎಸಗುವ ಕಾರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ನಾವು ಏನೇ ಮಾಡಿದರೂ ಕಾಯಾ, ವಾಚಾ, ಮನಸಾ ತ್ರಿಕರಣ ಶುದ್ಧಿಯಿಂದ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ, ನಾವು ಎಸಗುವ ಕಾರ್ಯಗಳ ಜತೆಗೆ ನಾವು ಮಾಡುವ ಅಲೋಚನೆಗಳು, ಮತ್ತು ನಾವು ಆಡುವ ಮಾತುಗಳು ಕೂಡ ಸೂಕ್ತವಾದ ಕರ್ಮಫಲವನ್ನು ನೀಡುವವು. ನಾವು ಮಾಡುವ ಆಲೋಚನೆಗಳು ಇತರರಿಗೆ ತಿಳಿಯುವುದಿಲ್ಲ ಎಂಬ ಹುಂಬ ಧೈರ್ಯ ಬೇಡ. ಇತರರಿಗೆ ತಿಳಿಯದಿದ್ದರೂ, ನಮ್ಮಲ್ಲೇ ಅಡಗಿ ಕುಳಿತಿರುವ ನಮ್ಮ ಖಾಸಾ ಚಿತ್ರಗುಪ್ತನಿಂದ ನಮ್ಮ ಆಲೋಚನೆಗಳನ್ನು ಮುಚ್ಚಿಡಲಾಗುವುದೇ!?

ನಮ್ಮ ವೇದಾಂತದಲ್ಲಿ ಒಟ್ಟು ನಾಲ್ಕು ರೀತಿಯ ಕರ್ಮಗಳನ್ನು ಗುರುತಿಸಲಾಗಿದೆ. ಅವುಗಳು ಯಾವುವೆಂದರೆ:

1. ಸಂಚಿತ ಕರ್ಮ

2. ಪ್ರಾರಬ್ಧ ಕರ್ಮ

3. ಕ್ರಿಯಮಾಣ ಕರ್ಮ

4. ಆಗಾಮಿ ಕರ್ಮ

ಇವುಗಳ ವಿವರವನ್ನು ಮುಂದಿನ ಭಾಗದಲ್ಲಿ ನೋಡೋಣ...
(ಮುಂದುವರೆಯುವುದು...)

#ಕರ್ಮ_ಮತ್ತು_ಕರ್ಮಫಲ: ಭಾಗ - ೨
ನಮ್ಮ ವೇದಾಂತದಲ್ಲಿ ಒಟ್ಟು ನಾಲ್ಕು ರೀತಿಯ ಕರ್ಮಗಳನ್ನು ಗುರುತಿಸಲಾಗಿದೆ. ಅವುಗಳು ಯಾವುವೆಂದರೆ:
1. ಸಂಚಿತ ಕರ್ಮ
2. ಪ್ರಾರಬ್ಧ ಕರ್ಮ
3. ಕ್ರಿಯಮಾಣ ಕರ್ಮ
4. ಆಗಾಮಿ ಕರ್ಮ

1. ಸಂಚಿತ ಕರ್ಮ: ನಾವು ಜನ್ಮ ಜನ್ಮಾಂತರಗಳಿಂದ ಕೂಡಿ ಹಾಕಿದ, ಮುಂದಿನ ಜನ್ಮಗಳಲ್ಲಿ ಅನುಭವಿಸಲೇಬೇಕಿರುವ ಒಟ್ಟು ಕರ್ಮಫಲದ ಗಂಟು. ನಮ್ಮ ಸಂಸ್ಕಾರ ಇದರ ಪ್ರತಿಬಿಂಬವಾಗಿರುತ್ತದೆ. ಇದರ ಮೇರೆಗೆ ನಮ್ಮ ಗುಣಸ್ವಭಾವಗಳು, ಆಸಕ್ತಿಗಳು ನಮ್ಮ ಹುಟ್ಟಿನಿಂದಲೇ ಪ್ರಕಾಶಗೊಳ್ಳುತ್ತ ಹೋಗುತ್ತವೆ. ಇದನ್ನೇ ನಾವು ಪೂರ್ವಜನ್ಮದ ವಾಸನೆ ಎನ್ನುತ್ತೇವೆ.

ಸಂಚಿತ ಕರ್ಮದ ಉದಾಹರಣೆಯೆಂದರೆ - ನಾವು ಖರ್ಚುಮಾಡದೆ ಕೂಡಿಹಾಕಿ ಬ್ಯಾಂಕಿನಲ್ಲಿಟ್ಟ ನಮ್ಮ ಒಟ್ಟು ಹಣದ ಮೊತ್ತ ಎಂದು ತಿಳಿಯಬಹುದು. ಅಥವಾ ಅದು ನಾವು ಹಿಂದೆ ಮಾಡಿದ ಸಾಲದ ಇನ್ನೂ ತೀರದ ಮೊತ್ತ ಎಂದು ಕೂಡ ಅರ್ಥೈಸಬಹುದು.

2. ಪ್ರಾರಬ್ಧ ಕರ್ಮ: ಇದು ಸಂಚಿತಕರ್ಮದ ಒಂದು ಭಾಗ. ಈ ಜನ್ಮದಲ್ಲಿ ನಾವು ಅನುಭವಿಸಲು ನಿರ್ದಿಷ್ಟಪಡಿಸಿದ ನಮ್ಮ ಸಂಚಿತಕರ್ಮದ ಭಾಗ.

ಉದಾ: ಯಾವುದಾದರೂ ನಿರ್ದಿಷ್ಟ ಕಾರ್ಯಕ್ಕೆ ಖರ್ಚುಮಾಡಲು ನಮ್ಮ ಬ್ಯಾಂಕ್ ಖಾತೆಯಿಂದ ತಗೆದ ನಮ್ಮದೇ ಒಟ್ಟು ಹಣದ ಒಂದು ಭಾಗ.

3. ಕ್ರಿಯಾಮಾಣ ಕರ್ಮ: ನಾವು ಈ ಜನ್ಮದಲ್ಲಿ ಮಾಡಿದ ಕಾರ್ಯಕ್ಕೆ ಈ ಜನ್ಮದಲ್ಲೇ ಪಡೆಯುವ ಕರ್ಮಫಲ. ಮತ್ತು ಇಲ್ಲಿ ಮಾನವನಿಗೆ ತನ್ನ ಈಗಿನ ಕೃತ್ಯಗಳ ಮೂಲಕ ಹಿಂದೆ ಮಾಡಿದ ಕರ್ಮಗಳನ್ನು ಅಳಿಸುವ ಅವಕಾಶ ಕೂಡ ದೊರೆಯುತ್ತದೆ. ಮಾನವನಿಗೆ ತನ್ನ ಸಂಕಲ್ಪಶಕ್ತಿಯನ್ನು ಉಪಯೋಗಿಸಿ ತನ್ನ ಜೀವನವನ್ನು ಉತ್ತಮಗೊಳಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಮಾಡಿದ ಕರ್ಮದ ಫಲವು ಅನುಭವಕ್ಕೆ ಬರಲು ಪ್ರಾರಂಭವಾದಾಗ ಅದನ್ನು ಆರಬ್ಧ ಕರ್ಮ ಎನ್ನುತ್ತಾರೆ. ಇನ್ನೂ ಮೊಳಕೆಯೊಡೆಯದ ಕರ್ಮಫಲವನ್ನು ಅನಾರಬ್ಧ ಕರ್ಮ ಎನ್ನುತ್ತಾರೆ.

ಉದಾ: ಒಬ್ಬ ಕಳ್ಳ ತನ್ನ ಕಳುವಿನ ಕ್ರಿಯೆಯಿಂದ ಸಿಕ್ಕಿಬಿದ್ದು ಜೈಲನ್ನು ಸೇರಿ ಶಿಕ್ಷೆ ಅನುಭವಿಸುವುದು, ಅಥವಾ ಹಿಂದೆ ಪಡೆದ ಸಾಲವನ್ನು ಈಗ ದುಡಿದ ಹಣ ಪಾವತಿ ಮಾಡಿ ತೀರಿಸುವುದು.

4. ಆಗಾಮಿ ಕರ್ಮ: ನಾವು ಈ ಜನ್ಮದಲ್ಲಿ ಮಾಡಿದ ಕಾರ್ಯದ ಕರ್ಮ ಫಲದ ಭಾಗ, ಈ ಜನ್ಮದಲ್ಲೇ ಸವೆಯದೆ ಮುಂದಿನ ಜನ್ಮಕ್ಕಾಗಿ ಸಂಚಿತ ಕರ್ಮಕ್ಕೆ ಸೇರ್ಪಡೆಯಾಗುವುದು. ಇದು ನಮ್ಮ ಕೃತ್ಯಗಳಿಗನುಗುಣವಾಗಿ ಸಂಚಿತಕರ್ಮವನ್ನು ಕರಗಿಸಬಲ್ಲದು ಅಥವಾ ಹೆಚ್ಚಿಸಬಲ್ಲದು.

ಉದಾ: ಕಳ್ಳತನ ಮಾಡಿದರೂ ಸಿಕ್ಕದೆ ತಪ್ಪಿಸಿಕೊಂಡು ಮುಂದಿನ ಜನ್ಮದಲ್ಲಿ ಅದರ ಫಲವನ್ನು ಅನುಭವಿಸುವುದು, ಅಥವಾ ಸಂಪಾದಿಸಿದ ಹಣವನ್ನು ಮುಂದಿನ ದಿನಗಳ ಖರ್ಚಿಗಾಗಿ ಬ್ಯಾಂಕಿನಲ್ಲಿ ಜಮೆ ಮಾಡುವುದು. ಅಥವಾ ಯಾವುದಾದರೂ ಅಗತ್ಯ ಪೂರೈಸಲು ಸಾಲ ಮಾಡುವುದು. ಇದನ್ನು ಮುಂದೆ ತೀರಿಸಬೇಕಾಗುವುದು.

ಪ್ರಾರಬ್ಧಕರ್ಮವನ್ನು ವಿಧಿ ಎಂದು ತಿಳಿದವರಿಗೆ ಈಗ ಸ್ವಲ್ಪ ಆಶಾಕಿರಣ ಕಾಣಿಸುತ್ತಿರಬಹುದಲ್ಲವೇ? ನಾವು ಪ್ರಾರಬ್ಧ ಕರ್ಮವನ್ನು ಅನುಭವಿಸಲೇಬೇಕಿದ್ದರೆ, ಮತ್ತು ನಾವು ಅನುಭವಿಸಬೇಕಿರುವುದೆಲ್ಲವೂ ಪೂರ್ವನಿರ್ಧರಿತವಾಗಿದ್ದರೆ ನಮ್ಮ ಸ್ವಪ್ರಯತ್ನಕ್ಕೆ ಏನೂ ಬೆಲೆಯೇ ಇಲ್ಲವೇ? ಎನ್ನುವ ಪ್ರಶ್ನೆಗೆ ಇಲ್ಲಿ ಖಂಡಿತ ಉತ್ತರ ಸಿಕ್ಕಿದೆಯೆಂದು ಭಾವಿಸಿದ್ದೇನೆ. ಇಂತಹ ಪ್ರಶ್ನೆಗಳಿಗೆ ಉತ್ತರವೇನೋ ಎಂಬಂತೆ ಪರಮಹಂಸ ಯೋಗಾನಂದರ ಗುರುಗಳಾದ ಶ್ರೀ ಯುಕ್ತೇಶ್ವರ ಗಿರಿಯವರು ಈ ರೀತಿ ಹೇಳಿದ್ದಾರೆ:

ಮಾನವನು ತನ್ನ ಪ್ರಾರಬ್ಧ ಕರ್ಮಕ್ಕನುಗುಣವಾಗುವಂತಹ ದಿನ ಮತ್ತು ಸಮಯಕ್ಕೆ ಕರಾರುವಾಕ್ಕಾಗಿ ಜನಿಸುತ್ತಾನೆ. ಅವನ ಜಾತಕ ಆತನ ಪೂರ್ವವನ್ನು ಕರಾರುವಾಕ್ಕಾಗಿ ತೋರಿಸಿದರೂ ಅದು ಮುಂದೆ ಆಗುವುದನ್ನು ಅಷ್ಟೇ ಕರಾರುವಾಕ್ಕಾಗಿ ತೋರಿಸುವುದಿಲ್ಲ. ಏಕೆಂದರೆ ಮಾನವ ಪ್ರಾರಬ್ಧವನ್ನು ಎದುರಿಸಿ ಹೋರಾಡುವ ಸಂಕಲ್ಪವನ್ನು ಹೊಂದಿದ್ದಾನೆ. ಮಾನವ ತನ್ನ ಪ್ರಾರಬ್ಧ ಕರ್ಮಫಲವನ್ನು ತಾನೇ ಅಳಿಸುವ ಶಕ್ತಿ ಕೂಡ ಹೊಂದಿದ್ದಾನೆ. ಏಕೆಂದರೆ ಅವನ ಬಳಿ ಗ್ರಹಗಳ ಪ್ರಭಾವಕ್ಕೆ ಸಿಲುಕದ ಹಿಂದಿನ ಕರ್ಮಫಲವನ್ನು ಅಳಿಸಬಲ್ಲ ಶಕ್ತಿಯುತ ಆಧ್ಯಾತ್ಮಿಕ ಸಾಧನೋಪಾಯಗಳಿವೆ.

ಆಧ್ಯಾತ್ಮಿಕ ಮಾರ್ಗದಲ್ಲಿ ನಡೆದರೆ ಹಿಂದಿನ ಕರ್ಮಫಲಗಳನ್ನು ಅಳಿಸಬಹುದು ನಿಜ. ಹಾಗಿದ್ದರೆ ಪೂರ್ಣವಾಗಿ ಎಲ್ಲ ರೀತಿಯ ಕರ್ಮಗಳನ್ನೂ ಅಳಿಸಬಹುದೇ? ಇದು ಸಾಧ್ಯವೇ? ಎನ್ನುವ ಪ್ರಶ್ನೆ ಮೂಡುತ್ತದೆ. ಅದನ್ನು ಅರಿಯಲು ನಾವು ಕರ್ಮಸಿದ್ಧಾಂತದ ಇನ್ನೊಂದು ಆಯಾಮದ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ.

ಹಿಂದೆ ಹೇಳಿದಂತೆ ನಾವು ಈ ಜನ್ಮದಲ್ಲಿ ನಿರ್ದಿಷ್ಟವಾದ ಪ್ರಾರಬ್ಧಕರ್ಮಕ್ಕೆ ಒಳಪಟ್ಟಿರುತ್ತೇವೆ. ಈ ಪ್ರಾರಬ್ಧ ಕರ್ಮವು ಈ ಕೆಳಗಿನ ಮೂರು ವಿಭಾಗಳಲ್ಲಿ ಹಂಚಿಹೋಗಿರುತ್ತದೆ:

ಅದೃಢ ಕರ್ಮ:
ಇದು ಅತ್ಯಂತ ಹಗುರವಾದ ಕರ್ಮ. ಇದನ್ನು ಮಾನವ ತನ್ನ ಒಳ್ಳೆಯ ಕಾರ್ಯಗಳಿಂದ, ಇತರರಿಗೆ ಸಹಾಯ ಮಾಡುವುದರಿಂದ, ಸಣ್ಣ ಪುಟ್ಟ ಪರಿಹಾರಗಳಿಂದ ಸುಲಭವಾಗಿ ಅಳಿಸಿ ಹಾಕಬಹುದು.

ದೃಢಾದೃಢ ಕರ್ಮ:
ಇದನ್ನು ಅಳಿಸಲು ಮಾನವನಿಗೆ ಸಾಧ್ಯವಿದೆ. ಆದರೆ ಅದು ಸುಲಭದ ಕೆಲಸವಲ್ಲ. ಮಾನವ ತನ್ನ ದೃಢಸಂಕಲ್ಪ ಶಕ್ತಿ, ಅವಿರತ ಕಠಿಣ ಪರಿಶ್ರಮ ಮತ್ತು ಧೀರ್ಘಕಾಲಿಕ ಆಧ್ಯಾತ್ಮಿಕ ವಿಧಾನಗಳ ಒಮ್ಮನಿಸ್ಸಿನ ಪಾಲನೆಯಿಂದ ಇವುಗಳನ್ನು ಅಳಿಸಿ ಹಾಕಬಲ್ಲ. ಉದಾಹರಣೆಗೆ, ಒಬ್ಬನಿಗೆ ನೆನಪಿನ ಶಕ್ತಿ ಕಡಿಮೆಯಿದ್ದು ವಿದ್ಯಾಭ್ಯಾಸದಲ್ಲಿ ತೊಂದರೆಯಾಗುತ್ತಿರಬಹುದು. ಆದರೆ ಸತತ ಪರಿಶ್ರಮದಿಂದ ಆತ ಓದಿ ಒಳ್ಳೆಯ ಅಂಕಗಳನ್ನು ಪಡೆಯಲು ಶಕ್ತ. ಪ್ರಯತ್ನಪಡದಿದ್ದರೆ ಇಲ್ಲಿ ಎಡುವುದು ಖಂಡಿತ. ಪ್ರಯತ್ನ ಪಡದೆ ಎಡವಿ ಇದು ನನ್ನ ದುರ್ದೈವ ಅಥವಾ ವಿಧಿ ಎಂದುಕೊಳ್ಳುವುದು ಮೂರ್ಖತನ.

ದೃಢ ಕರ್ಮ:
ಇದು ಮಾನವನ ಪ್ರಯತ್ನಕ್ಕೆ ಮೀರಿದ, ಮತ್ತು ಆತನು ಅನುಭವಿಸಲೇ ಬೇಕಾದ ಭಾಗ. ಉದಾಹರಣೆಗೆ, ನಾವು ಎಂತಹ ಕುಟುಂಬದಲ್ಲಿ ಜನ್ಮ ತಾಳಬೇಕು ಮತ್ತು ನಮ್ಮ ಆಯಸ್ಸಿನ ಪ್ರಮಾಣವೇನು ಎನ್ನುವ ವಿಷಯಗಳು ಈ ದೃಢಕರ್ಮದಿಂದ ನಿರ್ಧಾರಿತವಾದವುಗಳು.

ನಮಗೆ ನಮ್ಮ ಕರ್ಮದ ಭಾಗಾಭಾಗಗಳ ಪರಿಚಯವಿಲ್ಲದಿರುವುದರಿಂದ, ನಾವು ನಮ್ಮ ಪ್ರತಿಯೊಂದು ಕೆಲಸದಲ್ಲೂ ನಮ್ಮ ಶಕ್ತಿ ಮೀರಿ ಪ್ರಯತ್ನಿಸುವುದು, ಆದಷ್ಟು ಸನ್ಮಾರ್ಗದಲ್ಲಿ ನಡೆಯುವುದು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ಮುಂತಾದ ಕೃತ್ಯಗಳಿಂದ ನಮ್ಮ ಹಿಂದಿನ ಕೆಟ್ಟ ಕರ್ಮಗಳನ್ನು ಕರಗಿಸಿಕೊಳ್ಳುವುದಲ್ಲದೆ ನಮ್ಮ ಮುಂದಿನ ಜೀವನಕ್ಕೆ ಒಳ್ಳೆಯ ಫಲಗಳ ಬುನಾದಿಯನ್ನೂ ಹಾಕಿಕೊಳ್ಳಬಹುದು. “ಎಲ್ಲಾ ನನ್ನ ವಿಧಿ” ಎನ್ನುವ ಮಾತನ್ನು ಮರೆತು ನಾವು ನಮ್ಮ ಪಾಲಿಗೆ ಬಂದದ್ದನ್ನು ನಗುನಗುತ್ತ ಸ್ವೀಕರಿಸುವ ಪ್ರಯತ್ನ ಮಾಡಬೇಕಿದೆ. ಏಕೆಂದರೆ ಅದು ನಮಗಾಗಿ ನಾವೇ ನಮ್ಮದೇ ಕೃತ್ಯಗಳ ಮೂಲಕ ನಮ್ಮ ಕೈಯ್ಯಾರೆ ಕಟ್ಟಿಕೊಂಡ ಬುತ್ತಿ ಅಲ್ಲವೇ? ದೈವವನ್ನೋ ಅಥವಾ ಬೇರೆ ಯಾರನ್ನೋ ಅದಕ್ಕಾಗಿ ಹೊಣೆಗಾರರನ್ನಾಗಿ ಮಾಡುವುದು ಸರಿಯೇ? ಎಂದು ಆಲೋಚಿಸಬೇಕಿದೆ ಆಲೋಚಿಸಬೇಕಿದೆ.

ಶಿವಾರ್ಪಣಮಸ್ತು
(ಸದ್ವಿಚಾರ ಸಂಗ್ರಹ)

ಧನುರ್ಮಾಸ ದಲ್ಲಿ ಕಿಚ್ಚಡಿ / ಹುಗ್ಗಿ ನೈವೇದ್ಯ ವಿಶೇಷ

Kapu Sri Venkataramana Temple # 7/1/22 Friday* panchami #Dhanurvyatipaatha - Kicchadi polo Naivedya☝🏼ಧನುರ್ಮಾಸ ದಲ್ಲಿ ಕಿಚ್ಚಡಿ / ಹುಗ್ಗಿ ನೈವೇದ್ಯ ವಿಶೇಷ . ಸೂರ್ಯನು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶಿಸಿ ಒಂದು ತಿಂಗಳು ಕಾಲ ಸಂಚರಿಸುತ್ತಾನೆ. ಹಾಗಾಗಿ ಈ ತಿಂಗಳನ್ನು ಧನುರ್ಮಾಸ ಎನ್ನಲಾಗುತ್ತದೆ. ಇದರ ಜತೆ ಗಡಗುಟ್ಟಿಸುವ ಚಳಿಯು ‌ಮನುಷ್ಯನನ್ನು ಬಾಧಿಸುತ್ತದೆ. ಚಳಿಗೆ ಮನುಷ್ಯನು ಬಿಲ್ಲಿನಂತೆ (ಧನಸ್ಸು) ಬಾಗಿ ಮುದುಡಿ ಮಲಗುತ್ತಾನೆ. ಧನುರ್ಮಾಸದ ಅರ್ಥವನ್ನು ಹೀಗೆಯೂ ವ್ಯಾಖ್ಯಾನಿಸಬಹುದು.

ಸೂರ್ಯನು ಗುರುವಾರ (ಡಿ 16) ಧನಸ್ಸು ರಾಶಿಯನ್ನು ಪ್ರವೇಶಿಸಿದ್ದು, ಶುಕ್ರವಾರದಿಂದ (ಡಿ 17) ಧನುರ್ಮಾಸ ಪೂಜೆ ಆರಂಭವಾಗುತ್ತದೆ. ದೇವತೆಗಳಿಗೆ ಉತ್ತರಾಯಣ ಹಗಲಾಗಿದ್ದು, ದಕ್ಷಿಣಾಯನ ರಾತ್ರಿಯಾಗಿದೆ. ದಕ್ಷಿಣಾಯನ ಪುಣ್ಯಕಾಲದಲ್ಲಿ (ಕಟಕ ಸಂಕ್ರಮಣದ) ಬರುವ ಆಷಾಢ ಮಾಸದ ಪ್ರಥಮ ಏಕಾದಶಿಯಂದು ಯೋಗನಿದ್ರೆಗೆ ಜಾರುವ ಶ್ರೀಹರಿ, ಉತ್ಥಾನ ದ್ವಾದಶಿಯಂದು ಮೇಲೇಳುತ್ತಾನೆ. ಧನುರ್ಮಾಸದ ನಂತರ ಮಕರ‌ಸಂಕ್ರಮಣ ನಡೆಯಲಿದ್ದು, ಅಂದಿನಿಂದ ಉತ್ತರಾಯಣ. ಇದು ದೇವತೆಗಳಿಗೆ ಹಗಲಾದ ಕಾರಣ, ಧನುರ್ಮಾಸ ಅರುಣೋದಯ ಕಾಲ. ಈ ಸಮಯದಲ್ಲಿ ಶ್ರೀಹರಿಯನ್ನು ಪೂಜಿಸಲು ಪ್ರಶಸ್ತ ಕಾಲ ಎನಿಸಿದೆ.
ಈ ಒಂದು ತಿಂಗಳ ಕಾಲ ಮುಂಜಾನೆ ಎದ್ದು, ಸ್ನಾನ‌ ಮಾಡಿ ಶುಚಿರ್ಭೂತರಾಗಿ ದೇವರ ಪೂಜೆ ಮಾಡಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ ಎನಿಸುತ್ತದೆ. ಶಾಸ್ತ್ರಕಾರರ ಪ್ರಕಾರ ಸೂರ್ಯೋದಯದ ನಂತರದ ಪೂಜೆಗೆ ಫಲ ಕಡಿಮೆ. ಹಾಗಾಗಿ ಈ ತಿಂಗಳಲ್ಲಿ ಭೂಮಿಪೂಜೆ, ಗೃಹಪ್ರವೇಶ, ಮದುವೆ ಮತ್ತಿತರ ಶುಭಕಾರ್ಯ ನಡೆಸುವಂತಿಲ್ಲ.

ಈ ತಿಂಗಳಲ್ಲಿ ಪ್ರತಿನಿತ್ಯ ದೇವರಿಗೆ ಮುದ್ಗಾನ್ನದ (ಹೆಸರು ಬೇಳೆ ಹುಗ್ಗಿ) ನೈವೇದ್ಯ ಸಮರ್ಪಿಸಬೇಕು. ಅಕ್ಕಿ ಮತ್ತು ಹೆಸರುಬೇಳೆಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ಬೇಯಿಸಿ, ಇದರ ಜತೆ ಸ್ವಲ್ಪ ಬೆಲ್ಲ, ಶುಂಠಿ, ತುಪ್ಪ, ಮೆಣಸು ಸೇರಿಸಿ ಹುಗ್ಗಿ ತಯಾರಿಸಬೇಕು. ಕೆಲವರು ಜೀರಿಗೆ, ತುಪ್ಪ ಅಥವಾ ಬೆಣ್ಣೆಯಲ್ಲಿ ಹುರಿದ ಗೇರುಬೀಜ (ಗೋಡಂಬಿ) ಮಿಶ್ರಣ ಮಾಡುತ್ತಾರೆ. ಬೆಣ್ಣೆ ಸೇರಿಸಿ ಮಾಡುವ ಹುಗ್ಗಿಯನ್ನು ತಮಿಳುನಾಡಿನಲ್ಲಿ ವೆಣ್ ಪೊಂಗಲ್ ಎನ್ನುತ್ತಾರೆ. ಈ ಹುಗ್ಗಿಯ ಜೊತೆಗೆ ಹುಣಿಸೆ ಗೊಜ್ಜು ಸೇರಿಸಿ ಸವಿದರೆ ಆಹ್ಹಾ, ರುಚಿಯೋ ರುಚಿ.
ಹುಗ್ಗಿ ಸೇವಿಸಲು ಕೆಲ ವೈಜ್ಞಾನಿಕ ಕಾರಣಗಳೂ ಇವೆ. ಧನುರ್ಮಾಸ ಹೇಮಂತ ಋತುವಿನ ತಿಂಗಳು, ಅತಿ ತೀಕ್ಷ್ಣವಾದ ಚಳಿಗಾಲ. ಈ ವೇಳೆ ಬೀಳುವ ಇಬ್ಬನಿ ನಮ್ಮ ದೇಹದ ಸ್ವೇದಬಿಂದುಗಳ ಮೂಲಕ ಒಳ ಸೇರುವಷ್ಟು ಪ್ರಭಾವಶಾಲಿ. ಈ ತಿಂಗಳಲ್ಲಿ ಸುರಿವ ಹಿಮದಿಂದ ಮುಂಜಾನೆ ಎದ್ದು ಧಾರ್ಮಿಕ ಕಾರ್ಯದಲ್ಲಿ ತೊಡಗುವ ಜನರ ಜತೆ ಉಳಿದವರ ಕೈ, ಕಾಲು ಮುಖ ಒಡೆಯುವ ಸಾಧ್ಯತೆ ಹೆಚ್ಚು. ಅದರಲ್ಲೂ ನಮ್ಮ ದಕ್ಷಿಣ ಭಾರತದ ಸಾಕಷ್ಟು ಮಂದಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು‌ ಉಷಃಕಾಲದಲ್ಲಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಅಶ್ವತ್ಥಕಟ್ಟೆಯನ್ನು ಪ್ರದಕ್ಷಿಣೆ ಮಾಡುವುದು ವಾಡಿಕೆ. ಇವರ ಚರ್ಮ ಸುಕ್ಕಾಗುವುದು ಸಾಮಾನ್ಯ. ಇದಲ್ಲದೇ ಚಳಿ ಈ ಮಾಸದಲ್ಲಿ ಎಲ್ಲರ ದೇಹವನ್ನು ಬಿಲ್ಲಿನಂತೆ ಮುದುಡಿಸುತ್ತದೆ. ಹಾಗಾಗಿ ಈ ಎರಡೂ ಸಮಸ್ಯೆಗಳಿಂದ ಮುಕ್ತಿ ಕಾಣಲು ದೇಹಕ್ಕೆ ಹದವಾದ ಬಿಸಿ ಅಗತ್ಯವಿದೆ.

ಕೆಲ ಪದಾರ್ಥಗಳಲ್ಲಿ ಬಿಸಿಲು ಕಾಲದಲ್ಲಿ ತಂಪು ನೀಡುವ ಹಾಗೇಯೇ ಶೀತದಲ್ಲಿ ಉಷ್ಣತೆ ಒದಗಿಸುವ ಗುಣವಿದೆ. ಹೆಸರುಬೇಳೆಯಲ್ಲಿ‌ ಇಂತಹ ಗುಣವಿದೆ. ಇದರ ಜತೆ ದೇಹ ಮತ್ತಷ್ಟು ಬಿಸಿ ಹಾಗೂ ಹುರುಪು ಬರಲು, ಮುಖದಲ್ಲಿ ಕಾಂತಿ ಹೆಚ್ಚಿಸುವುದರೊಂದಿಗೆ ಅಜೀರ್ಣ ತಡೆಯಲು ಉಳಿದ ಪದಾರ್ಥಗಳು ನೆರವಾಗುತ್ತವೆ. ಹಾಗಾಗಿ ಹುಗ್ಗಿ ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ.

ಒಟ್ಟಿನಲ್ಲಿ ಬೇಸಿಗೆಕಾಲದ ಬಿಸಿಲಲ್ಲಿ ಬೆಂಗಾಡಿನ ಅನುಭವ, ಮಳೆಗಾಲದ ಮಳೆಯಲ್ಲಿ ವನಸಿರಿಯ ಸಂಪತ್ತಿನ ಸೊಬಗು ಹಾಗೂ ಚಳಿಗಾಲದ ಚಳಿಯಲ್ಲಿ ಮುಂಜಾನೆ ಸುರಿವ ಮಂಜಿನ ಸಿಂಚನ. ಈ ಮೂರುಕಾಲಗಳಲ್ಲಿ ಕಾಣುವ ಪ್ರಕೃತಿ ಸೌಂದರ್ಯವನ್ನು ಮಾನವ ಅನುಭವಿಸಬೇಕು ಎಂಬುದು ಹಿರಿಯರ ಅಭಿಮತ. ಈ ಮೂರು ಕಾಲಗಳಲ್ಲಿ ಸೊಬಗು ಸವಿಯುವುದರ ಜತೆ ಸಕಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು ಹಾಗೂ ಆಹಾರ ಪದ್ಧತಿಯನ್ನು ಸೂಚಿಸಿದ್ದಾರೆ.

ಹಾಗಾಗಿ, ಒಂದು ತಿಂಗಳು ಧನುರ್ಮಾಸ ವ್ರತವನ್ನು ಮಾಡಿ, ದೇಹದ ಜಾಡ್ಯವನ್ನು ತೊಲಗಿಸಿ. ಹುಗ್ಗಿ ಆಹಾರ ಸೇವಿಸಿ, ಸದೃಢ ಆರೋಗ್ಯ ಪಡೆಯಿರಿ.