Wednesday, 31 December 2025

ಶ್ರಾದ್ಧ ಕರ್ಮದ ಉದ್ದೇಶವೇನು?

ಶ್ರಾದ್ಧ ಕರ್ಮದ ಉದ್ದೇಶವೇನು?

ಕರ್ಮಭೂಮಿ  ಎನಿಸಿದ  ಈ  ಭರತ  ಖಂಡದ  ಸನಾತನ  ಧರ್ಮಗಳಲ್ಲಿ  " ಶ್ರಾದ್ಧ "  ಕರ್ಮವು  ಮುಖ್ಯವಾಗಿದೆ.  ಇದು  ಅತ್ಯಂತ  ಶ್ರೇಯಸ್ಕರವಾದ  ಕರ್ಮವಾಗಿದೆ.  ಇದಕ್ಕೆ        "  ಪಿತೃಯಜ್ಞ  "  ವೆಂದು  ಕರೆಯುವುದುಂಟು.

ಶ್ರಾದ್ಧ  ಎಂದರೇನು ?

ನಮ್ಮ  ಜನ್ಮಕ್ಕೆ ಕಾರಣರಾಗಿ,  ನಮ್ಮನ್ನು  ಹೆತ್ತು  ಹೊತ್ತು  ಸಾಕಿ,  ಸಲಹಿ  ನಮ್ಮ  ಉದ್ದಾರಕ್ಕೇ  ಶ್ರಮಿಸಿ,  ನಮ್ಮನ್ನಗಲಿ  ಹೋದ  ತಂದೆ -ತಾಯಿ  ಹಿರಿಯರು  ಮುಂತಾದವರನ್ನು  ಸ್ಮರಿಸಿ,  ಅವರನ್ನು  ಕುರಿತು  ಶ್ರದ್ಧೆಯಿಂದ  ಅನ್ನಜಲಾದಿಗಳನ್ನು  ಕೊಡುವ  ಪಿತೃಕಾರ್ಯಕ್ಕೆ  "  ಶ್ರಾದ್ಧ  "  ವೆಂದು  ಹೆಸರು.
ಪಿತೃಗಳನ್ನುದ್ದೇಶಿಸಿ  ಶ್ರದ್ದೆಯಿಂದ  ಕೊಡಲ್ಪಟ್ಟ  ದ್ರವ್ಯವನ್ನು    ಮಾನಸಿಕವಾಗಿ ಭಾವನೆಯಿಂದ ಮಾಡುವ ಆಚರಣೆ  ಶ್ರಾದ್ಧವೆಂದು  ಹೆಸರು.

ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗ ಅಥವಾ ನರಕವೋ ಪ್ರಾಪ್ತಿ. 
ಸ್ವರ್ಗ ಅಥವಾ ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ.
 ಅಥವಾ ಸತ್ತ ಮರು ಘಳಿಗೆ ಜೀವಿಯು ಬೇರೊಂದು ದೇಹವನ್ನು ಪಡೆಯುತ್ತದೆ.
ಮೋಕ್ಷ ವಾದರೆ ಪುನರ್ಜನ್ಮವಿಲ್ಲವೆಂದು ನಂಬಿಕೆ. 
ಜೀವಿಯು ತನ್ನ ಯೋಗ್ಯತಾನುಸಾರವಾಗಿ ಕರ್ಮವನ್ನು ಅನುಸರಿಸಿ ತನ್ನ ಗತಿಯನ್ನು ಅಥವಾ ಮಾರ್ಗವನ್ನು ಪಡೆಯುತ್ತದೆ .....

ಈ ಎಲ್ಲಾ ಕಾರಣದಿಂದ.....

ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು?

ಅವರಿಗೆ ಶ್ರಾದ್ಧಕರ್ಮಗಳು,ಭೋಜನ,ತರ್ಪಣಗಳು ಏಕೆ ಬೇಕು?  ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು?
 
ಸಾಮಾನ್ಯವಾಗಿ ಆಸ್ತಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. 
ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? 
ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ.... 
ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ. 

ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?
ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ.
ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು  ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕೇವಲ ಕಲಿಕೆಯಿಂದ ಮಾತ್ರ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಶ್ರಾದ್ಧ ಕ್ರಿಯೆಯು ದೈವಿಕವಾಗಿದ್ದರೂ ವೈಜ್ಞಾನಿಕತೆಗೆ ಎಟುಕಲಾರದ ವಿಷಯವಲ್ಲ. ಪಂಚಭೂತಗಳಿಂದ
ಭೌತಿಕ ಶರೀರ ಉಂಟಾಗಿದೆ. ಮರಣಾನಂತರ ಇದು ನಾಶವಾದರೂ, ತೇಜಸ್ಸು, ಪಂಚವಾಯು ಮತ್ತು
ಆಕಾಶ ತತ್ವಗಳು ಮನೋಮಯ ಕೋಶದೊಡನೆ ಕರ್ಮಾನುಸಾರ ಶರೀರಾಂತರವನ್ನು ಸೇರುವುದು.
ತಂದೆಯ ಸೂಕ್ಷ್ಮ ಶರೀರಕ್ಕೂ ಪುತ್ರನ ಸೂಕ್ಷ್ಮ ಶರೀರಕ್ಕೂ ಪರಸ್ಪರ ಆಕರ್ಷಣೆಯ ಋಣಾನುಬಂಧವಿದೆ.
ಪಿತೃವಿನ ಮರಣಾನಂತರವೂ ಈ ಸಂಬಂಧವು ತೊಲಗಲಾರದು. ಆದಕಾರಣ ಪುತ್ರಕೃತ ಸಂಸ್ಕಾರಗಳು ಪಿತೃಗಳ ಸದ್ಗತಿಗೆ ಸಾಧಕಗಳಾಗುವುದು. ಇದು ಶಾಸ್ತ್ರಸಿದ್ಧ
 ಮೃತ ವ್ಯಕ್ತಿಯ ಸೂಕ್ಷ್ಮ ಶರೀರವು ಯಾವ ಅಜ್ಞಾತ ಯೋನಿಯಲ್ಲಿದ್ದರೂ (ಆಕಾಶದ ಶಬ್ದ, ವಾಯುವಿನ ಸ್ಪರ್ಶ, ತೇಜಸ್ಸಿನ ತರಂಗಗಳು ಇಲ್ಲಿಂದಲ್ಲಿಗೆ ಸದಾ ಪ್ರವಹಿಸುತ್ತಿರುವ ಕಾರಣ) ಮಾಡುವ ಶ್ರಾದ್ಧದಲ್ಲಿ ಕ್ರಿಯಾಶಕ್ತಿ, ಮಂತ್ರಶಕ್ತಿ, ದ್ರವ್ಯಶಕ್ತಿಗಳು ಸಮ್ಮಿಳಿತವಾಗಿ ಲೋಕಾಂತರದಲ್ಲಿರುವ ಪಿತೃಗಳಿಗೆ (ಪಿಂಡ ತಿಲತರ್ಪಣಗಳು) ರೂಪಾಂತರ ಹೊಂದಿ ಆಹಾರವಾಗಿ ಪರಿಣಮಿಸುತ್ತದೆ. ಮಾನವನ ಸೀಮಿತ ದೃಷ್ಟಿಗೆ ಇದು ಗೋಚರಿಸದಿದ್ದರೂ "ಶ್ರಾದ್ಧೇ ಯೋಗಃ ಪ್ರವರ್ತತೇ' ಎಂದು ಋಷಿಗಳು ಈ ಸೂಕ್ಮ ರಹಸ್ಯವನ್ನು ಮನಗಂಡಿದ್ದಾರೆ.

ಇನ್ನು ಮೃತಾನಂತರ ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು –

 ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆ ಎಂಬ ಸ್ಥಾನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ. 

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತಿಯೊಬ್ಬರ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. 

ಇಲ್ಲಿ  ಕೆಲವರು  ಪ್ರಶ್ನೆ  ಕೇಳುವುದುಂಟು -  ನಮ್ಮನ್ನಗಲಿ  ಹೋದ  ಪಿತೃಗಳಿಗೆ  ನಾವು  ಕೊಡುವ  ಜಲಾಂಜಲಿ,  ಪಿಂಡಪ್ರದಾನದಿಂದ  ಅವರು  ಹೇಗೆ  ತೃಪ್ತರಾಗುತ್ತಾರೆ ?  ನಾವು  ಇಲ್ಲಿ  ಬ್ರಾಹ್ಮಣನಿಗೆ  ದಾನವಾಗಿ  ಕೊಟ್ಟದ್ದು  ಪಿತೃಗಳಿಗೆ  ಹೇಗೆ  ತಲುಪುತ್ತದೆ ?

                           ಉತ್ತರ.

ನಾವು  ಕೊಟ್ಟ  ಅನ್ನವನ್ನು  ಅಂದರೆ  ಅದರ  ಸಾರ  ಭಾಗವನ್ನು ನಮ್ಮ ಭಾವನೆಯನ್ನು ಶ್ರದ್ಧೆಯನ್ನು  ಭಗವಂತನು  ಸ್ವೀಕರಿಸಿ  ಅದನ್ನು  ನಮ್ಮ  ಪಿತೃಗಳು  ಯಾವ  ಯೋನಿಯಲ್ಲಿ  ಹುಟ್ಟಿ,  ಎಲ್ಲಿ  ಇರುವರೋ,  ಅಲ್ಲಿ  ಅವರಿಗೆ  ಆಹಾರರೂಪವಾಗಿ  ಸೂಕ್ತರೀತಿಯಲ್ಲಿ  ಕೊಟ್ಟು  ಸಂತೋಷ  ಪಡಿಸುತ್ತಾನೆ  ಭಗವಂತ.

ಯಥಾ  ಧೇನುಸಹಸ್ರೇಷು  
ವತ್ಸೋ  ವಿಂದತಿ  ಮಾತರಃ।
ತಥಾ  ಪೂರ್ವಕೃತಂ
ಕರ್ಮ  ಕರ್ತಾರಮನುವಿಂದತಿ॥". 
  
ಸಾವಿರಾರು  ಹಸುಗಳ  ಹಿಂಡಿನಲ್ಲಿದ್ದರೂ  ಕರು,
  ತನ್ನ  ತಾಯಿ  ಧೇನುವನ್ನು  ಹುಡುಕಿಕೊಂಡು  ಅದರ  ಬಳಿಗೆ  ಹೋಗುವಂತೆ,

ಪುತ್ರ " ಅಂದರೆ...

ಜೀವತೋ ವಾಕ್ಯ ಕರಣಾತ್ 
ಪ್ರತ್ಯಬ್ಧಂ ಭೂರಿ ಭೋಜನಾತ್ 
ಗಯಾಯಾಂ ಪಿಂಡ ದಾನಾಶ್ಚ
 ತ್ರಿಭಿಃ ಪುತ್ರಸ್ಯ ಪುತ್ರತಾ

" ಪುತ್ " ಎಂಬ ನರಕದಿಂದ ಪಾರು ಮಾಡುವವನೇ ಪುತ್ರನು. 

ತಂದೆ ತಾಯಿಗಳು ಜೀವಿಸುರುವಾಗ ಅವರಿಗೆ ಅಧೀನನಾಗಿದ್ದು ಅವರ ಮಾತನ್ನು ನಡೆಸಿ ಕೊಡುವುದು. 

ಮೃತರಾದ ಮೇಲೆ ಪ್ರತಿ ವರ್ಷವೂ ಕಾಲ ಪ್ರಾಪ್ತ ಶ್ರಾದ್ಧ ಮಾಡುವುದು.

ಒಂದು ಬಾರಿಯಾದರೂ ಗಯಾಕ್ಕೆ ಹೋಗಿ ಮೃತ ತಂದೆ ತಾಯಿಯನ್ನು ಉದ್ಧೇಶಿಸಿ ವಿಷ್ಣು ಪಾದದಲ್ಲಿ ಪಿಂಡ ಪ್ರದಾನ ಮಾಡುವುದು. 

ಈ ಮೂರರಿಂದ " ಪುತ್ರ " ನೆನಿಸುವನು! 
" ಪುರು ತ್ರಾಯತೇ ಇತಿ ಪುತ್ರಃ " ಎಂಬಂತೆ ಇತರ ಬಂಧುಗಳಕ್ಕಿಂತ ತಂದೆ ತಾಯಿಯನ್ನು ಚೆನ್ನಾಗಿ ರಕ್ಷಿಸುವನು. 

ಉಪನಿಷದ್ವಾಕ್ಯದಂತೆ ಪುತ್ರ ಎಂದರೆ?
ಪಾಪ ಫಲ ರೂಪವಾಗಿ ಬರುವ ದುಃಖ ರೂಪವಾದ " ಪುತ್ " ಎಂಬ ನರಕದಿಂದ ಬಿಡಿಸುವ ಅಥವಾ ರಕ್ಷಿಸುವ ಮಗನನ್ನು ಮಾತ್ರವೇ " ಪುತ್ರ " ಎನ್ನುತ್ತಾರೆ. ಈ ರೀತಿಯಾದ ಪುತ್ರನನ್ನು ಮಾತ್ರವೇ ಪಡೆಯಬೇಕೆಂದು ಇಹ ಮತ್ತು ಪರ ಲೋಕದಲ್ಲಿಯೂ ಅಪೇಕ್ಷಿಸುತ್ತಾರೆ!

ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು.  

 ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ( ಸ್ಥಾನ) ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ 
ಅಂದರೆ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಭಾವನಾಶಕ್ತಿ ಗಳು  ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ  ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯ. 

ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕೂಡ ತನ್ನ ತಂದೆ ದಶರಥನ ಮರಣ ವಾರ್ತೆಯನ್ನು ಕೇಳಿ ತಕ್ಷಣವೇ ಸಮೀಪದ ನದಿಯಲ್ಲಿ ಹೋಗಿ ದಕ್ಷಿಣಾ ಭಿಮುಖವಾಗಿ ತನ್ನ ಕೈಯ ಬೊಗಸೆಯಲ್ಲಿ ನೀರನ್ನು ಹಿಡಿದುಕೊಂಡು ಗತಿಸಿಹೋದ ತನ್ನ ತಂದೆಗೆ ಉತ್ತಮ ಲೋಕ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾನೆ. ಇದರ ಪರಿಪೂರ್ಣ ಅರ್ಥ ಭಾವನಾತ್ಮಕವಾಗಿ ಪಿತೃಗಳನ್ನು ತೃಪ್ತಿಪಡಿಸಲು ನಮ್ಮ ಭಾವನೆಯನ್ನು ಅದರಲ್ಲಿ ಸೇರಿಸುವಂತಹ ಒಂದು ಪ್ರಕ್ರಿಯೆ

ಕಚ್ಚಾಡುವ ಮನೆ, ಕಾದಾಡುವ ಮಕ್ಕಳು, ಅಶಾಂತಿ-ಅತೃಪ್ತಿಯ ಗೃಹವಾಸ, ಇವೆಲ್ಲವುಗಳಿಗೆ ಕಾರಣ "ಪಿತೃಶಾಪ" ಎನ್ನುತ್ತದೆ ಜ್ಯೋತಿಃಶಾಸ್ತ್ರ. 
ಮುಂದುವರೆಯುತ್ತದೆ......

ಈ ವಿಷಯದಲ್ಲಿ ಹೆಚ್ಚಿನ ಜಿಜ್ಞಾಸೆಯ ಪ್ರಶ್ನೆಗಳಿದ್ದರೆ ವಾಟ್ಸಪ್ ಅಥವಾ ಕಾಲ್ ಮಾಡಬಹುದು

ಗರುಡ ಪುರಾಣ ಪಾರಾಯಣ ಮತ್ತು ಪ್ರವಚನ ಬೇಕಾದಲ್ಲಿ

ಮನೆಯಲ್ಲಿ ಶ್ರಾದ್ಧಾದಿಗಳನ್ನು ಮಾಡಲು ಅನಾನುಕೂಲ ಇದ್ದಲ್ಲಿ
ನಮ್ಮಲ್ಲಿ ಯೋಗ್ಯತಾನುಸಾರ ಶಾಸ್ತ್ರೋಕ್ತವಾಗಿ ಶ್ರಾದ್ಧಾದಿಗಳನ್ನು ತರ್ಪಣವನ್ನು ಪಿತೃ ಕಾರ್ಯಗಳನ್ನು ಮಾಡಿಕೊಡಲಾಗುತ್ತದೆ.

ಪ್ರಶಾಂತ ಭಟ್ 
ಜ್ಯೋತಿಷ್ಯರು ಮತ್ತು ಪುರೋಹಿತರು
098866 00332

ekadashi niyamagalu

ವೈಕುಂಠ ಏಕಾದಶಿ

***ವೈಕುಂಠ ಏಕಾದಶಿ.......***
 *ಏಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ.* 

 *ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುವರು. ಈ ದಿನ ದೇವಾಲಯದ ಉತ್ತರ ದ್ವಾರದಲ್ಲಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸುತ್ತಾರೆ.*

 *ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಧನುರ್ಮಾಸದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ. ಸೂರ್ಯನು ಧನಸ್ಸು ರಾಶಿ ಪ್ರವೇಶ ಮಾಡಿ ಮಕರ ಸಂಕ್ರಮಣದವರೆಗೂ ಈ ರಾಶಿಯಲ್ಲಿ ಇರುತ್ತಾನೆ.*

*ಗರುಡವಾಹನನಾದ ವಿಷ್ಣು ವೈಕುಂಠದಿಂದ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕದಲ್ಲಿ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದುದರಿಂದ ಈ ದಿನವನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಈ ದಿನ ಉಪವಾಸವಿದ್ದು ವಿಷ್ಣುವಿನ ದರ್ಶನ ಮಾಡಬೇಕು. ಮಾಸದ ಏಕಾದಶಿಯ ದಿನ ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಏಳುವನು. ಈ ದಿನ ವಿಷ್ಣು ದರ್ಶನ ಮಾತ್ರದಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನಕ್ಕೆ ಅಷ್ಟು ಮಹತ್ವವಿದೆ.* 

*ಮಹಾವಿಷ್ಣುವು ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೇ ಇದು. ಬಹಳ ದಿನಗಳವರೆಗೆ ಮುರ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು. ಏಕಾದಶಿ ದೇವಿಯನ್ನು ಉಪವಾಸದಿಂದ, ದರ್ಶಿಸಿ, ಪೂಜಿಸಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಒಟ್ಟು 11, ಹನ್ನೊಂದು ಇಂದ್ರಿಯಗಳನ್ನೂ ನಿಗ್ರಹ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.*
*ಅಮೃತ ಮತ್ತು ಹಾಲಾಹಲ ಉದ್ಭವಿಸಿದ ದಿನವಿದು. ಶಿವ ನೀಲಕಂಠನಾದ ದಿನ. ಈ ದಿನ ದೇವರ ದರ್ಶನ ಮಾಡಿ ಹರಿ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ತುಳಸಿ ಎಲೆ ಅರ್ಪಿಸಬೇಕು. ಇದರಿಂದ ಮೋಕ್ಷ ಪ್ರಾಪ್ತಿ ಖಂಡಿತವಾಗಿ ಲಭಿಸುವುದು. ಪುಷ್ಯ ಮಾಸವನ್ನು ಶೂನ್ಯಮಾಸವೆಂತಲೂ ಕರೆಯುವರು. ಈ ಸಮಯದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಕಾರಣ ಇಲ್ಲಿ ಪ್ರತಿಫಲ ಶೂನ್ಯ. ಆದ್ದರಿಂದ ಈ ಪೂರ್ತಿ ಮಾಸವನ್ನು ವಿಷ್ಣುವನ್ನು ಆರಾಧಿಸುವುದರ ಮೂಲಕ ವಿಷ್ಣುವಿಗೆ ಅರ್ಪಣೆ ಮಾಡಬೇಕು.*🌺🙏🕉️

ನಮ್ಮದು ಇದೇ ಕೊನೆಯ*** ಜನ್ಮವಾ? ಮೋಕ್ಷ..ಅಥವಾ ಮುಕ್ತಿಯ ಬಗ್ಗೆ..ನಮ್ಮ ಜನ್ಮ ಜಾತಕದಲ್ಲಿ ಸ್ಪಷ್ಟವಾಗಿ ಗೊತ್ತಾಗತ್ತಾ..??ಹೇಗೆ??

***ನಮ್ಮದು ಇದೇ ಕೊನೆಯ*** ಜನ್ಮವಾ? ಮೋಕ್ಷ..ಅಥವಾ ಮುಕ್ತಿಯ ಬಗ್ಗೆ..ನಮ್ಮ ಜನ್ಮ ಜಾತಕದಲ್ಲಿ ಸ್ಪಷ್ಟವಾಗಿ ಗೊತ್ತಾಗತ್ತಾ..??ಹೇಗೆ?? ಯಾವ ರೀತಿ.. 👇
        ದಾಸರ ಪದದಲ್ಲಿ ಒಂದು ಸಾಲು ಹೀಗಿದೆ.. " 84 ಲಕ್ಷ ಜೀವ ರಾಶಿ ದಾಟಿ ಬಂದ ಈ ಶರೀರ " ಅಂತ.. ಹಾಗೆ ಶಂಕರಾಚಾರ್ಯರು.. ಭಜ.. ಗೋವಿಂದಂ ನ.. ಒಂದು ಸಾಲು ಹೀಗಿವೆ.. " ಪುನರಪಿ ಜನನಂ ಪುನರಪಿ ಮರಣಮ್.. ಪುನರಪಿ ಜನನಿ ಜಟರೆ ಶಯನಮ್.. " ಎಂದು... ದಾಸರು.. ಮತ್ತು ಶಂಕರರು.. ಹೇಳಿದ.. ಈ ಸಾಲುಗಳ ಒಳ ಮರ್ಮ ಅರ್ಥ ಏನೆಂದು ಆಳವಾಗಿ ಗಮನಿಸಿ.. ಅರಿತರೆ.. ದಾಸರು ಹೇಳಿದಂತೆ.. ಈ ಮನುಷ್ಯ ಶರೀರ ಹೊಸದಾಗಿರಬಹುದು.. ಆದ್ರೆ ಶರೀರದೊಳಗಿನ ಆತ್ಮ ಹಳೆಯದು.. ಆ ಆತ್ಮ..84 ಲಕ್ಷ ಜೀವ ರಾಶಿಯ ಯೋನಿಯಲ್ಲಿ ಜನಿಸಿ.. ಕೊನೆಗೆ.. ಮನುಷ್ಯ ಜನ್ಮಕ್ಕೆ.. ಬಂದು ಬೀಳತ್ತೆ.. ಮತ್ತೆ ಅದೇ ಪುರಂದರ ದಾಸರು.. ಹೇಳ್ತಾರೆ.. "ಮನುಷ್ಯ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ " ಅಂತ..ಆ ಆತ್ಮ 84 ಜನ್ಮ ರಾಶಿ ದಾಟಿದ ಮೇಲೆಯೇ.. ಕೊನೆಯ ಘಟ್ಟದಲ್ಲಿ ಆ ಆತ್ಮಕ್ಕೆ ಮನುಷ್ಯ ಜನ್ಮ ಪ್ರಾಪ್ತಿಯಾಗತ್ತೆ... ಆ ಮನುಷ್ಯ ಜನ್ಮದಲ್ಲಿ.. ಒಂದೇ ಜನ್ಮವೀರತ್ತಾ?? ಇಲ್ಲ.. ಸಾಕಷ್ಟು.. ಮನುಷ್ಯ ಜನ್ಮವನ್ನ ಆ ಆತ್ಮ ಪಡೆಯಲೇಬೇಕು.... ಆದಿ ಶಂಕರಾಚಾರ್ಯರು ಅದನ್ನೇ ಹೇಳಿದ್ದು.. "ಪುನರಪಿ ಜನನಂ ಪುನರಪಿ ಮರಣಮ್ ಪುನರಪಿ ಜನನಿ ಜಟರೆ ಶಯನಮ್" ಎಂದು..ಆತ್ಮಕ್ಕೆ ಎಲ್ಲಾ 84 ಲಕ್ಷ ಜೀವ ರಾಶಿ ದಾಟಿ ಬಂದ ನಂತರ ಒಂದಿಷ್ಟು ಮನುಷ್ಯ ಜನ್ಮಗಳು ಇರತ್ತೆ.. ಮತ್ತೆ ಜನನವಾಗ್ತಾನೆ.. ಮತ್ತೆ ಮರಣ ಹೊಂದುತ್ತಾನೆ.. ಹೀಗೆ recycling ತರ ಆಗ್ತಾನೆ.. ಇರತ್ತೆ..
      ಹಾಗಾದ್ರೆ..ಆ ಆತ್ಮ ಮನುಷ್ಯ ಜನ್ಮ ಪಡೆದಮೇಲೆ.. ಮುಕ್ತಿ ಅಥವಾ ಮೋಕ್ಷ ಯಾವಾಗಾ..?? ಅದು ಹೇಗೆ ಗೊತ್ತಾಗತ್ತೇ.. ನಮ್ಮ ಜನ್ಮ ಜಾತಕದಲ್ಲಿ ಹೇಗೆ ಗೊತ್ತಾಗತ್ತೇ..??ಎಂಬ ಪ್ರಶ್ನೆಗಳಿಗೆ.. ಹೌದು ನೂರಕ್ಕೆ ನೂರರಷ್ಟು..ಗೊತ್ತಾಗತ್ತೆ..
ಯಾವ ರೀತಿ..??👇
      ಒಬ್ಬ ಮನುಷ್ಯನ ಜನ್ಮವಾದಗ.. ಒಂದು ನಿರ್ದಿಷ್ಟ ದಿನ ನಿರ್ದಿಷ್ಟ ವೇಳೆ.. ಕಾಲ.. ತಿಥಿ ನಕ್ಷತ್ರ ಮಾಸ ಅಂತ ಇದ್ದೆ ಇರತ್ತೆ.... ಒಂದು ಆತ್ಮ ಬೇರೆ ಬೇರೆ.. ಜೀವರಾಶಿಗಲ್ಲಿ.. ಜನನ ಮರಣವಾಗಿ... ಮನುಷ್ಯ ಜನ್ಮಕ್ಕೆ ಬಂದಾಗ ಆ ಆತ್ಮ ರಾಶಿ ನಕ್ಷತ್ರ ಚಕ್ರಕ್ಕೆ ಬೀಳತ್ತೆ... ಸ್ಪಷ್ಟವಾಗಿ ವಿವರಿಸಬೇಕಂದ್ರೆ.. Total ಆಗಿ..27 ನಕ್ಷತ್ರ.. ಆ 27 ನಕ್ಷತೆಕ್ಕೆ.. ಭಾಗವಾಗಿ..12 ರಾಶಿಗಳು.. ಒಂದು ಶಿಶು ಮೊದಲನೆಯ ನಕ್ಷತ್ರ..ಮೊದಲನೇ ಪಾದದಲ್ಲಿ ಜನವಾಗಿದ್ರೆ.. ಆ ಶಿಶುವಿನದ್ದು.. ಮೊದಲನೇ ಮನುಷ್ಯ ಜನ್ಮವೆಂದು ಅರ್ಥ.. ಮೊದಲನೇ ನಕ್ಷತ್ರ ಯಾವುದು?? ಅಶ್ವಿನಿ.. ನಕ್ಷತ್ರ ಮೊದಲನೇ ಪಾದ.. ಮತ್ತು ನಾಲ್ಕು ಪಾದ... ಬಂದು.. ಮೇಷ ರಾಶಿ.... ಈ ನಕ್ಷತ್ರದ.. ನಾಲ್ಕು ಪಾದಗಳಲ್ಲಿ.. ನಾಲ್ಕು ಬಾರಿ ಮನುಷ್ಯ ಜನ್ಮ ಬಂದ್ರೆ.. Next.. ನಕ್ಷತ್ರಕ್ಕೆ.. ಬೀಳತ್ತೆ.. ಅದು ಬಂದು ಭರಣಿ.. ನಕ್ಷತ್ರ.. ರಾಶಿ ಮೇಷ.. ಆ ನಾಲ್ಕು.. ಪಾದ ಪೂರ್ಣಗೊಂಡಾಗ.. ಮತ್ತೆ.. ಆ ಆತ್ಮ ಮುಂದಿನ.. ನಕ್ಷತ್ರವಾದ.. ಕೃತಿಕ ನಕ್ಷತ್ರದಲ್ಲಿ ಪೂರ್ಣ 4 ಪಾದಗಳನ್ನ ಪೂರ್ಣಗೊಳಿಸಬೇಕು.. ಮತ್ತೆ... ಮುಂದಿನದ್ದು... ಹೀಗೆ.. ಆ ಆತ್ಮ.. ಹುಟ್ಟು ಸಾವಿನ ಮಧ್ಯ.. ರಾಶಿ ನಕ್ಷತ್ರದ ಸಾಲಿನಲ್ಲಿ ಜನನವಾಗುತಿರತ್ತೆ... ಮತ್ತೆ ಅಲ್ಲಿಂದ ಪ್ರಾರಂಭ ಅಂತ್ಯ...ಮತ್ತೆ ಅಂತ್ಯದಿಂದ ಪ್ರಾರಂಭ..🙏ಒಂದು ರೀತಿ ಸರತಿ ಸಾಲಿನಲ್ಲಿ ನಿಂತಂತೆ..
       ರಾಶಿ ನಕ್ಷತ್ರದ ಕೊನೆಯ ಘಟ್ಟ ಯಾವುದು...?? ಮೀನ ರಾಶಿಯವರು.. ಮೀನ ರಾಶಿಯನ್ನ ಮೋಕ್ಷ ರಾಶಿ ಎಂದು.. ಜ್ಯೋತಿಷ್ಯದಲ್ಲಿ ಹೇಳಲಾಗತ್ತೆ...ಈ ಮೀನರಾಶಿ ಭಗವಂತನ ಪಾದವನ್ನ ಸೂಚಿಸುತ್ತೆ.. ಮತ್ತು.. ಈ ಮೀನ ರಾಶಿಯವರನ್ನ..." Old souls " ಎಂದು ಕರೀತಾರೆ.. ಅಂದ್ರೆ ಹಳೆಯ ಆತ್ಮಗಳು ಎಂದರ್ಥ.... ಕಾರಣ ಇಷ್ಟೇ.. ಅವರು.. ಎಲ್ಲಾ.. ಜೀವರಾಶಿಗಳಲ್ಲಿ ಜನನವಾಗಿ.. ಮನುಷ್ಯರಾಗಿ ರಾಶಿ ನಕ್ಷತ್ರ.. ಚಕ್ರಕ್ಕೆ ಬಿದ್ದು..ಮೋಕ್ಷದ ಸರತಿ ಸಾಲಿನ ಕೊನ್ ಕೊನೆಯ ಘಟ್ಟದಲ್ಲಿ ಇದ್ದಾರೆ..ಎಂದರ್ಥ.. ಈ ಮೀನ ರಾಶಿಯಲ್ಲಿ.. ಪೂರ್ವಭಾದ್ರ ಪದ ನಕ್ಷತ್ರದ ಕೊನೆಯ ಪಾದ.. ಉತ್ತರಾಭಾದ್ರಾ ನಕ್ಷತ್ರದ ನಾಲ್ಕು ಪಾದಗಳು.. ಮತ್ತು.. ರೇವತಿ ನಕ್ಷತ್ರದ..4 ಪಾದಗಳಲ್ಲಿ ಬೀಳತ್ತೆ...🙏🙏
 ಸಹಜವಾಗಿ ಈ ಮೀನದವ್ರು ಯಾರ ತಂಟೆಗೆ ಹೋಗುವವರಲ್ಲ.. ಆಧ್ಯಾತ್ಮ ಪರಮಾತ್ಮನಲ್ಲಿ ಲೀನವಾಗಿರ್ತಾರೆ..6 th sence.. ತುಂಬಾ Active ಆಗಿರತ್ತೆ.. ನೀವು ಆ ರಾಶಿಯವರ ಬಗ್ಗೆ ಗಮನಿಸಿರಬಹುದು.. ಅವರದ್ದೇ ಲೋಕದಲ್ಲಿ ಮುಳುಗಿ ಹೋಗಿರ್ತಾರೆ.. Phylospy ಮಾತಾಡ್ತಿತಾರೆ ಯಾವಾಗ್ಲು.. ಶಾOತಿ ಪ್ರಿಯರು.. ಇನ್ನೂ ಅನೇಕ ಸಾತ್ವಿಕ ಲಕ್ಷಣಗಳು..
       ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಮೋಕ್ಷದ ಬಗ್ಗೆ.. ಈ ಒಂದು ರೀತಿ ಗೋಚಾರವಿದೆ ಎಂದು ಹೇಳಲಾಗತ್ತೆ..🙏🙏
     ಕೊನೆಯದಾಗಿ...ಇದೇ ರಾಶಿ ನಕ್ಷತ್ರದಲ್ಲಿ ಜನಿಸಬೇಕೆಂದು ಯಾರು ಸಹ ಕೇಳಿಕೊಂಡು ಬಂದಿರ್ವದಿಲ್ಲ.. ಅದೆಲ್ಲ ನಮ್ಮ ಪೂರ್ವರ್ಜಿತ ಪಾಪ ಪುಣ್ಯ ಕರ್ಮಗಳ ಲೆಕ್ಕಾಚಾರಕ್ಕೆ ಅನುಗುಣವಾಗಿ..ಅನುಗ್ರಹ.. 🙏
ll ಸತ್ಕರ್ಮಬಿಷ್ಷ್ಠ ಸತ್ಫಲಮ್.. ದುಷ್ಕರ್ಮ ಯೇವ ದುಷ್ಮಫಲಮ್.. ಅತ್ಯುತ್ಕಟ ಪುಣ್ಯ ಪಾಪಾನಾಮ್ ಭವಮಿಹO ll ಮನುಷ್ಯನಾಗಿ ಹುಟ್ಟಿದ ಮೇಲೆ.. ಎಲ್ಲವನ್ನು ಅನುಭವಿಸಲೇ ಬೇಕು....
ll ಧರ್ಮಾಥ ಕಾಮ ಮೋಕ್ಷ...ll ಮೂಕ್ಷ ಮಾರ್ಗವೇ ಮನುಷ್ಯನ ನಿಜವಾದ ಸಾಧನೆ.. ಅದು.. ಭವಂತವನ ಅನುಷ್ಠಾನದಲ್ಲಿ.. ಒಳ್ಳೆಯ ಕರ್ಮಗಳಲ್ಲಿ ದೀನ ದುರ್ಬಲರ ಸೇವಾ ದಾನ ಧರ್ಮಗಳಲ್ಲಿ ಮಾತ್ರ ಸಾಧ್ಯ🙏🙏 
       ✍️$@M🔱

ಹೋಮದಲ್ಲಿ ಅಷ್ಟದ್ರವ್ಯವನ್ನು ಬಳಸುವ ಪರಿಕಲ್ಪನೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು.

🙏✨🕉️   ಹೋಮದಲ್ಲಿ ಅಷ್ಟದ್ರವ್ಯವನ್ನು ಬಳಸುವ ಪರಿಕಲ್ಪನೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು...!!🌺🌺
                                     
                                     🍁"ಅಷ್ಟ ದ್ರವ್ಯ ಗಣಪತಿ"🍁

🔯ಅಷ್ಟ ದ್ರವ್ಯ ಗಣಪತಿ ಹೋಮವನ್ನು ಮಾಡುವುದರಿಂದ ಗಣೇಶನು ಆ ವ್ಯಕ್ತಿಯ ವ್ಯಾಪಾರ, ಹಣಕಾಸು, ವೃತ್ತಿ ಹಾಗೂ ಇನ್ನಿತರ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಮತ್ತು ವಿವಾಹದಲ್ಲಿನ ಅಡೆತಡೆಗಳನ್ನು ದೂರಾಗಿಸುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾದರೆ, ಅಷ್ಟ ದ್ರವ್ಯ ಗಣಪತಿ ಹೋಮವನ್ನು ಮಾಡುವುದು ಹೇಗೆ..? ಈ ಹೋಮದ ಪ್ರಯೋಜನವೇನು..? ಮತ್ತು ಈ ಹೋಮಕ್ಕೆ ಬೇಕಾಗುವ ಸಾಮಾಗ್ರಿಗಳಾವುವು ?

🔥ಗಣಪತಿ ಅಷ್ಟ ದ್ರವ್ಯ ಹೋಮ ಏಕೆ..?

🌽ಭಗವಾನ್ ಗಣೇಶ ಹಿಂದೂ ಧರ್ಮದ 5 ಪ್ರಾಥಮಿಕ ದೇವರುಗಳಲ್ಲಿ ಒಬ್ಬನು. ಉಳಿದ 4 ದೇವರೆಂದರೆ ಬ್ರಹ್ಮ, ವಿಷ್ಣು, ಶಿವ ಮತ್ತು ದುರ್ಗಾ ದೇವಿ. ಜನರು ಈ 5 ದೇವತೆಗಳನ್ನು ಪೂಜಿಸುತ್ತಾರೆ ಏಕೆಂದರೆ ಅವರು ತಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆಯಿದೆ.

🌽‘ಅಷ್ಟ’ ಎಂದರೆ ‘ಎಂಟು’ ಮತ್ತು ‘ದ್ರವ್ಯ’ ಎಂದರೆ ‘ವಸ್ತುಗಳು’. ಈ ಹೋಮಕ್ಕೆ ಪ್ರಮುಖವಾಗಿ 8 ವಸ್ತುಗಳು ಅತ್ಯಗತ್ಯ. ಗಣಪತಿ ಹೋಮದ ಅಷ್ಟ ದ್ರವ್ಯವು ಎಳ್ಳೆಣ್ಣೆ, ಜೋನಿ ಬೆಲ್ಲ, ಕಬ್ಬು, ಜೇನುತುಪ್ಪ, ತೆಂಗಿನಕಾಯಿ, ತುಂಡಾದ ಅಕ್ಕಿ, ಬಾಳೆಹಣ್ಣು, ಅಕ್ಷತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ 8 ವಸ್ತುಗಳೊಂದಿಗೆ ಗಣಪತಿ ಹೋಮವನ್ನು ಮಾಡಿದಾಗ, ಹೋಮದಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು. ಜನರು ಈ ಹೋಮವನ್ನು ಪ್ರಮುಖ ಘಟನೆಗಳು ಮತ್ತು ಉದ್ಯಮಗಳಲ್ಲಿ ಯಶಸ್ಸು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲು ಮಾಡುತ್ತಾರೆ.

🔥ಗಣಪತಿ ಅಷ್ಟ ದ್ರವ್ಯ ಹೋಮದ ಫಲ:

🌷ತಮ್ಮ ಜೀವನ ಮತ್ತು ವ್ಯವಹಾರದಲ್ಲಿ ಸಮೃದ್ಧಿಯನ್ನು ಸಾಧಿಸಲು ಬಯಸುವವರಿಗೆ ಗಣಪತಿ ಅಷ್ಟದ್ರವ್ಯ ಹೋಮವು ಸೂಕ್ತವಾಗಿದೆ.

🌷ಈ ಹೋಮವು ನಿಮ್ಮ ಅಗತ್ಯತೆಗಳನ್ನು ನಿವಾರಿಸಿ, ಜೀವನದಲ್ಲಿ ಸಂಕೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

🌷ಇದು ಎಲ್ಲಾ ಅಂಶಗಳಲ್ಲಿ ಯಶಸ್ಸನ್ನು ತರುತ್ತದೆ ಇದರಿಂದ ನೀವು ಸಂತೋಷದ ಜೀವನವನ್ನು ನಡೆಸಬಹುದು.

🌷ನೀವು ಮದುವೆಯಲ್ಲಿ ಅಥವಾ ವಿವಾಹದಲ್ಲಿ ವಿಳಂಬವನ್ನು ಎದುರಿಸುತ್ತಿದ್ದರೆ ಇದು ಮದುವೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.

🔥ಇವುಗಳನ್ನು ಕೂಡ ಹೋಮದಲ್ಲಿ ಬಳಸಲಾಗುತ್ತದೆ:

🎊ಕೆಲವೆಡೆ ಒಣಕೊಬ್ಬರಿ, ಬೆಲ್ಲ, ಹುರಿದ ಅಕ್ಕಿ, ಬಾಳೆಹಣ್ಣು (ಕದಳಿ ಬಾಳೆಹಣ್ಣು), ಜೇನು, ಎಳ್ಳು, ಕಬ್ಬು, ಹುರಿದ ಅಕ್ಕಿಯನ್ನು ಅಷ್ಟ ದ್ರವ್ಯವಾಗಿ ಅರ್ಪಿಸುತ್ತಾರೆ.

🎊ಕೆಲವು ಸಮುದಾಯಗಳಲ್ಲಿ, ಅಷ್ಟ ದ್ರವ್ಯಗಳೆಂದರೆ ಬಾಳೆಹಣ್ಣು, ತೆಂಗಿನಕಾಯಿ, ಜೇನುತುಪ್ಪ, ಕಬ್ಬು, ತುಪ್ಪ, ಮೋದಕ, ಬೆಲ್ಲ ಮತ್ತು ಅಕ್ಕಿ ಅರಳು.

🎊ಹೋಮದಲ್ಲಿ ಅಷ್ಟದ್ರವ್ಯವನ್ನು ಬಳಸುವ ಪರಿಕಲ್ಪನೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು. ದಕ್ಷಿಣ ಭಾರತದ ಹಿಂದೂಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ.

🎉ಗಣೇಶನ ಜನ್ಮದಿನವನ್ನು ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಯಂದು ಸಾಮಾನ್ಯವಾಗಿ ಭಕ್ತರು ಅಷ್ಟ ದ್ರವ್ಯ ಗಣಪತಿ ಹೋಮವನ್ನು ಮಾಡುತ್ತಾರೆ. ಅಥವಾ ನೀವು ನಿಮ್ಮ ಪಂಡಿತರ ಸಲಹೆಯ ಮೇರೆಗೆ ಈ ಹೋಮವನ್ನು ಯಾವಾಗ ಬೇಕಾದರೂ ಮಾಡಬಹುದು. ಭಕ್ತರು ಗಣೇಶನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದವನ್ನು ಕೋರಲು ಇದನ್ನು ಮಾಡುತ್ತಾರೆ.

Thursday, 4 December 2025

ಶ್ರೀಕೃಷ್ಣ ಮತ್ತು ಬಲರಾಮರು ::

ಶ್ರೀಕೃಷ್ಣ ಮತ್ತು ಬಲರಾಮರು ::

ಯಾದವ ಕುಲದ ಮಹಾರಾಜ ವಸುದೇವನಿಗೆ ರೋಹಿಣಿ ಮೊದಲ ಪತ್ನಿ. ದೇವಕಿ 2 ನೇ ಪತ್ನಿ. ದೇವಕಿ,ವಸುದೇವನ ಮದುವೆಯನ್ನು ತುಂಬಾ ಸಂತೋಷದಿಂದ ಮಾಡಿಕೊಟ್ಟ ದೇವಕಿಯ ಅಣ್ಣ ಕಂಸನಿಗೆ "ನಿನ್ನ ತಂಗಿ ದೇವಕಿಗೆ ಹುಟ್ಟಿದ 8ನೇ ಮಗುವಿನಿಂದ ನಿನಗೆ ಮರಣವಾಗುತ್ತದೆ" ಅಂತ ಒಂದು ಅಶರೀರವಾಣಿ ಕೇಳುತ್ತದೆ. ಆದ್ದರಿಂದ ಸಿಟ್ಟಿನಿಂದ ಕಂಸನು ತಂಗಿ ದೇವಕಿ ಮತ್ತು ವಸುದೇವನನ್ನು ಸೆರೆಮನೆಗೆ ತಳ್ಳಿದ.

ಆದ್ದರಿಂದ ವಸುದೇವ " ತನ್ನ ಮೊದಲ ಪತ್ನಿಯನ್ನು ತನ್ನ ಗೆಳೆಯ ನಂದಗೋಪ ಮತ್ತು :: ಯಶೋದೆಯ ಮನೆಯಲ್ಲಿರಲು" ಹೇಳಿದನು. ಹೀಗಾಗಿ ರೋಹಿಣಿಯು ಇವರ ಮನೆಯಲ್ಲಿ ಇದ್ದಳು.

ಇತ್ತ ದೇವಕಿ ವಸುದೇವನಿಗೆ ಹುಟ್ಟಿದ ಮೊದಲನೆಯ ಮಗುವಿನಿಂದ ಹಿಡಿದು ಮಕ್ಕಳನ್ನು ಕಂಸನು ಕೊಲ್ಲುತಿದ್ದ. 7 ನೇ ಮಗುವೇ ಬಲರಾಮ. ಇವನ ಭ್ರೂಣವನ್ನು ರೋಹಿಣಿಯ ಗರ್ಭಕ್ಕೆ ಟ್ರಾನ್ಸ್ಫರ್ ಮಾಡಿದರು. ಆದ್ದರಿಂದ ವಸುದೇವ ತಂದೆ, ರೋಹಿಣಿ ಬಾಡಿಗೆ ತಾಯಿಯಾಗಿ ಬಲರಾಮನು ವಸುದೇವನ ಮೊದಲ ಮಗನಾಗಿ ಹುಟ್ಟಿದ. ಇವನಿಗೆ ಕೃಷಿಯಲ್ಲಿ ಆಸಕ್ತಿ. ಆದ್ದರಿಂದ ನೇಗಿಲು ಬಲರಾಮನ ಗುರುತು ಮತ್ತು ಅಸ್ತ್ರ.

ದೇವಕಿ ವಸುದೇವನಿಗೆ ನಂತರದ ಮಗು ಹೆಣ್ಣು ಮಗು ಹುಟ್ಟಿತು. ಆದರೂ ಕೂಡ ಕಂಸ ಕೊಲ್ಲಲು ಹೋದ. ಆದರೆ "ಕೂಡಲೇ ಅವನ ಕೈತಪ್ಪಿಸಿಕೊಂಡು ಮಹಾಶಕ್ತಿ ದೇವಿಯಾಗಿ ಬದಲಾಗಿ, ಮುಂದಿನ ಮಗುವೇ ನಿನ್ನ ಮರಣಕ್ಕೆ ಕಾರಣ. ನೀನು ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ" ಎಂದು ಹೇಳಿ ಮಾಯವಾಯಿತು.

ಕೊನೆಯಲ್ಲಿ 8ನೇ ಗಂಡುಮಗುವಾಗಿ ಶ್ರೀಕೃಷ್ಣ ಹುಟ್ಟಿದ. ಇತ್ತ ನಂದಗೋಪನಿಗೆ ಹೆಣ್ಣುಮಗು ಹುಟ್ಟಿತ್ತು. ತಂದೆತಾಯಿ ಶ್ರೀಕೃಷ್ಣನನ್ನು ಕಾಪಾಡುವ ಸಲುವಾಗಿ ಶ್ರೀಕೃಷ್ಣನನ್ನು ಯಶೋದೆಯ ಪಕ್ಕದಲ್ಲಿ ಮಲಗಿಸಿ, ಅವರಿಗೆ ಹುಟ್ಟಿದ ಹೆಣ್ಣುಮಗುವನ್ನು ವಸುದೇವ ಸೆರೆಮನೆಗೆ ತಂದನು. ಹೀಗಾಗಿ ಶ್ರೀಕೃಷ್ಣ ದೇವಕಿ ವಸುದೇವನ ಎರಡನೇ ಮಗನಾಗುತ್ತಾನೆ. ಬಲರಾಮ ಮತ್ತು ಕೃಷ್ಣರಿಬ್ಬರೂ ವಸುದೇವ ಮತ್ತು ದೇವಕಿ ದಂಪತಿಗಳ ಪುತ್ರರು.

ಬಲರಾಮ ಮತ್ತು ಕೃಷ್ಣರಿಬ್ಬರೂ ಒಟ್ಟಿಗೆ ಬೆಳೆಯುತ್ತಾರೆ. ಕಂಸನ ವಧೆಯನ್ನು ಮಾಡಿದ ಮೇಲೆ ದೇವಕಿ ವಸುದೇವನ ಸೆರೆಮನೆವಾಸ ಮುಗಿಯುತ್ತದೆ. ನಂತರ ರೋಹಿಣಿ ಮತ್ತು ವಸುದೇವರಿಗೆ ಒಂದು ಹೆಣ್ಣುಮಗು ಹುಟ್ಟುತ್ತದೆ. ಅವಳೇ ಸುಭದ್ರ ಅಥವಾ ಸುಭದ್ರೆ.ಬಲರಾಮ ಮತ್ತು ಶ್ರೀಕೃಷ್ಣರ ಪ್ರೀತಿಯ ತಂಗಿ.

ಪುರಿ ಜಗನ್ನಾಥದಲ್ಲಿ ಬಲರಾಮ ಮತ್ತು ಶ್ರೀಕೃಷ್ಣರ ಜೊತೆಗೆ ತಂಗಿ ಸುಭದ್ರೆಗೂ ನಿತ್ಯ ಪೂಜೆ ನಡೆಯುತ್ತದೆ.

ಅಷ್ಟೇ ಅಲ್ಲ, ಶ್ರೀ ಮಹಾವಿಷ್ಣುವಿನ ಅವತಾರವೇ ಶ್ರೀಕೃಷ್ಣ. ಆದಿಶೇಷನೇ ಬಲರಾಮ.