Tuesday, 17 December 2019

ನದಿ ಕೆರೆಗಳ ನೀರಿನಲ್ಲಿ ನಾಣ್ಯವನ್ನು ಹಾಕುವುದು ಏಕೆ

ಸಾಮಾನ್ಯವಾಗಿ ಬಹಳಷ್ಟು ಜನರು ಇದನ್ನು ಕೇಳಿರುತ್ತಾರೆ ಅಥವಾ ನೋಡಿರುತ್ತಾರೆ. ಆದ್ರೆ ಇದರ ಹಿಂದಿರುವ ಅಸಲಿ ಕಾರಣವೇನು ಅನ್ನೋದನ್ನ ತಿಳಿದಿರುವುದು ತುಂಬಾನೇ ಕಡಿಮೆ ಅನಿಸುತ್ತದೆ. ಹಾಗಾಗಿ ಇದರ ಹಿಂದಿರುವ ಕಾರಣವೇನು ಇದರಿಂದ ನಮಗೆ ಸಿಗುವ ಲಾಭವಾದರೂ ಏನು ಅನ್ನೋದನ್ನ ನೋಡುವುದಾದರೆ. ಇದು ಇವತ್ತಿನ ಕಾಲದಿಂದದಲ್ಲ ಹಿಂದಿನ ಕಾಲದಿಂದಲೂ ಕೂಡ ಈ ರೀತಿಯಾಗಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ವಿಧಾನ ಕಡಿಮೆಯಾಗಿರಬಹುದು. ಇದನ್ನು ಹೆಚ್ಚಾಗಿ ಊರು ದೇವಸ್ಥಾನದ ಕಲ್ಯಾಣಿಗಳಲ್ಲಿ ಹಾಗೂ ದೇವಸ್ಥಾನ ಇರುವಂತ ನದಿ ಕೆರೆಗಳ ನೀರಿನಲ್ಲಿ ನಾಣ್ಯವನ್ನು ಹಾಕುತ್ತಾರೆ.

ನಮ್ಮಹಿರಿಯರು ಮಾಡಿಕೊಂಡು ಬಂದಿರುವಂತ ಕೆಲವು ಸಂಪ್ರದಾಯವನ್ನು ನಾವುಗಳು ಇಂದಿಗೂ ಸಹ ಮಾಡುತ್ತಲೇ ಇದೀವಿ. ಆದ್ರೆ ಇದು ಬರಿ ಸಂಪ್ರದಾಯವಲ್ಲದೆ ಇದರ ಹಿಂದಿದೆ ವಿಜ್ಞಾನಿಕ ಕಾರಣ. ಹೌದು ನಾಣ್ಯವನ್ನು ಹಾಕುವುದರಿಂದ ಆ ನೀರಿನಲ್ಲಿ ತಾಮ್ರದ ಅಂಶ ಪಸರಿಸುತ್ತಿತ್ತು ಹಾಗಾಗಿ ಆ ನೀರನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಆರೋಗ್ಯಕಾರಿ ಅಂಶಗಳು ದೊರೆಯುತ್ತಿತ್ತು ಅನ್ನೋದನ್ನ ಹೇಳಲಾಗುತ್ತದೆ. ಈ ಹಿಂದೆ ಮನೆಯಲ್ಲಿ ಬೋರ್ ವೆಲ್ ಇರಲಿಲ್ಲ ಹಾಗೂ ನೀರನ್ನು ಶುದ್ದೀಕರಿಸುವಂತ ಯಾವುದೇ ರೀತಿಯ ಯಂತ್ರಗಳು ಸಹ ಇರಲಿಲ್ಲ ಹಾಗಾಗಿ ನದಿ ಕೆರೆಗಳ ನೀರನ್ನು ಶುದ್ದಿಸುವ ಜೊತೆಗೆ ನೀರನ್ನು ಪಿಲ್ಟಾರ್ ಮಾಡುವ ಗುಣಗಳನ್ನು ನಾಣ್ಯಗಳು ಮಾಡುತ್ತಿದ್ದವು ಅನ್ನೋದನ್ನ ಹೇಳಲಾಗುತ್ತದೆ.


ಆ ದಿನಗಳಲ್ಲಿ ಜನರು ನದಿ ಕೆರೆ ಹಾಗೂ ಕಲ್ಯಾಣಿಗಳಿಂದ ತಂದು ಸೇವನೆ ಮಾಡುತ್ತಿದ್ದ ನೀರು ಶುದ್ಧವಾಗಿರುತ್ತಿದ್ದವು. ಅಷ್ಟೇ ಅಲ್ದೆ ನೀರಿನಲ್ಲಿ ನಮ್ಮ ಶರೀರಕ್ಕೆ ಅನುಕೂಲವಾಗುವಂತಹ ತಾಮ್ರ ಲೋಹದ ಅಣುಗಳು ಸೇರಿಕೊಂಡಿರುತ್ತಿತ್ತು ಹಾಗಾಗಿ ನಾಣ್ಯವನ್ನು ನೀರಿನಲ್ಲಿ ಎಷ್ಟು ಬೇಕು ಅಷ್ಟು ಹಾಕುತ್ತಿದ್ದರು. ಆದ್ರೆ ಇಂದಿನ ದಿನಗಳಲ್ಲಿ ನೂರಕ್ಕೆ 70 ರಷ್ಟು ಜನ ತಮ್ಮ ಮನೆಯಲ್ಲೇ ಪಿಲ್ಟಾರ್ ನೀರು ಕುಡಿಯುತ್ತಿದ್ದಾರೆ. ಹಾಗಾಗಿ ಇದರ ಬಳಕೆ ಕಡಿಮೆಯಾಗಿದೆ ಅನ್ನೋದನ್ನ ಹೇಳಲಾಗುತ್ತದೆ.










ಕಷ್ಟಗಳು ದೂರ ಮಾಡುವ ಜೊತೆಗೆ ನೆಮ್ಮದಿ ನೀಡುವ ತಾಮ್ರದ ತಂಬಿಗೆ

ಮನೆಯಲ್ಲಿ ನಾನಾ ಸಮಸ್ಯೆಗಳು ಹಾಗೂ ಮಾಡುವಂತ ಕೆಲಸದಲ್ಲಿ ಯಶಸ್ಸು ಸಿಗದೇ ಇರುವುದು ಮನಸ್ಸಿಗೆ ಶಾಂತಿ ನೆಮ್ಮದಿ ಅನ್ನೋದು ಇಲ್ಲವೇ ಇಲ್ಲ ಅನ್ನೋರಿಗೆ ಇದು ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನು ಹೊರ ಹಾಕಿ ಮನೆಯಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಕೆಲವೊಮ್ಮೆ ಮನೆಯ ಮೇಲೆ ಮಾಡುವಂತ ಕೆಲಸದ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ ಏಳಿಗೆಯಾಗೋದಿಲ್ಲ ಇನ್ನು ಎಷ್ಟೇ ದುಡಿದರು ಕೂಡ ಮನೆಯಲ್ಲಿ ನೆಮ್ಮದಿ ಶಾಂತಿ ಸಮಾಧಾನ ಅನ್ನೋದೇ ಇರೋದಿಲ್ಲ ಆರ್ಥಿಕ ಸಂಕಷ್ಟಕ್ಕೆ ಹಿಡಗುತ್ತೇವೆ ಅನ್ನೋದಾದರೆ ಮನೆಯಲ್ಲಿ ತಾಮ್ರದ ತಂಬಿಗೆಯನ್ನು ಬಳಸುವುದರಿಂದ ಪರಿಹಾರ ಸಿಗಬಹುದು.


ನಾವುಗಳು ದೇವರನ್ನು ನೋಡದೆ ಇದ್ದರು ಕೂಡ ದೇವರು ಇದ್ದಾನೆ ಎಂಬುದಾಗಿ ನಂಬುತ್ತೇವೆ ಅದೇ ರೀತಿಯಲ್ಲಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವು ಪೂಜಾ ವಿಡಿ ವಿಧಾನಗಳಿವೆ ಅವುಗಳ ಜೊತೆಗೆ ಮನೆಯಲ್ಲಿನ ವಸ್ತು ದೋಷ ಹಾಗೂ ಮನೆಯಲ್ಲಿನ ಕೆಟ್ಟ ಶಕ್ತಿಗಳ ಪ್ರಭಾವವನ್ನು ದೂರಮಾಡಲು ಪೂಜೆ ಹೋಮ ಯಜ್ಞ ಮಾಡುತ್ತೇವೆ. ಅದೇ ನಿಟ್ಟಿನಲ್ಲಿ ಮನೆಯಲ್ಲಿ ತಾಮ್ರದ ತಂಬಿಗೆಯನ್ನು ಹೀಗೆ ಬಳಸುವುದಾದರೆ ನಿಮ್ಮ ಮನೆಯ ನಾನಾ ತೊಂದರೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋದನ್ನ ಪಂಡಿತರು ತಿಳಿಸುತ್ತಾರೆ. ಅಷ್ಟಕ್ಕೂ ಮಾಡಬೇಕಾದದ್ದು ಏನು ಅನ್ನೋದಾದರೆ.



ಮನೆಯಲ್ಲಿ ಒಂದು ತಾಮ್ರದ ತಂಬಿಗೆಯನ್ನು ತಗೆದುಕೊಂಡು ಅದನ್ನು ಯಾವ ರೀತಿಯಲ್ಲಿ ಬಳಸಬೇಕು ಅಂದ್ರೆ ತಾಮ್ರದ ತಂಬಿಗೆಯ ಒಳಗೆ ಹಾಗೂ ಹೊರಗೆ ಚನ್ನಾಗಿ ತೊಳೆದು ಶುದ್ಧವಾದ ಗಂಗಾಜಲವನ್ನು ಅದರಲ್ಲಿ ಹಾಕಿ, ಆ ತಂಬಿಗೆಯನ್ನು ಒಂದು ವಿಳ್ಳೇದೆಲೆಯ ಮೇಲೆ ಇಟ್ಟು ಅದಕ್ಕೆ ಅರಿಸಿನ ಕುಂಕುಮ, ಹೂವು ಹಾಗೂ ಒಂದು ರೂಪಾಯಿಯ ನಾಣ್ಯವನ್ನು ಮತ್ತು ಪಚ್ಚ ಕರ್ಪುರವನ್ನು ಹಾಕಿ. ಇದಾದ ನಂತರ ಮನೆಯ ಆ ಮುಖ್ಯ ಸ್ಥಳದಲ್ಲಿ ಇಡಬೇಕಾಗುತ್ತದೆ.

ಹೌದು ನಿಮ್ಮ ಮನೆಯ ಮುಖ್ಯ ಬಾಗಿಲ ಹಿಂದೆ ಅಂದರೆ ಒಳಗಡೆ ಬಾಗಿಲ ಹಿಂದೆ ಇಡಬೇಕು. ಈ ರೀತಿ ಮಾಡಿದ ನಂತರ ಪ್ರತಿದಿನ ಇವು ಇಟ್ಟಿರುವಂತ ತಂಬಿಗೆಯಿಂದ ನೀರನ್ನು ತಗೆಯಬೇಕಾಗುತ್ತದೆ ತಂಬಿಗೆಯಿಂದ ತೆಗೆಯುವ ನೀರನ್ನು ಮನೆಯ ಮುಂದಿನ ಗಿಡಗಳಿಗೆ ಹಾಕಿದರೆ ಉತ್ತಮ. ಹೀಗೆ ಪ್ರತಿದಿನ ಮಾಡುವುದರಿಂದ ಅತಿ ಬೇಗನೆ ನಿಮ್ಮ ಕಷ್ಟಗಳನ್ನು ನಿವಾರಣೆಯಾಗಿ ಆರ್ಥಿಕವಾಗಿ ವೃದ್ಧಿಯಾಗುತ್ತಿರ, ಅಷ್ಟೇ ಅಲ್ಲದೆ ನಿಮ್ಮ ಮನೆಯ ವಾಸ್ತು ದೋಷ, ದೃಷ್ಟಿ ದೋಷ, ನಿವಾರಣೆಯಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣೆ ನೆಲೆಸುವುದು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಠಿಣ ಸಮಸ್ಯೆಗಳಿರಲಿ ಕರೆ ಮಾಡಿ ದೈವಜ್ಞ ಜ್ಯೋತಿಷರು ಎಂ.ಪಿ ಶರ್ಮ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 3 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ






ದೇವಸ್ಥಾನಕ್ಕೆ ಹೋದಾಗ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಸಿಗುವ ಫಲ

ಬಹಳಷ್ಟು ಜನ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಮರಳುತ್ತಾರೆ. ಆದ್ರೆ ಇನ್ನು ಕೆಲವರು ಶ್ರದ್ದಾ ಭಕ್ತಿಯಿಂದ ದೇವರ ಪೂಜೆಯನ್ನು ಮುಗಿಸಿ ದೇವಲಾಯ್ಡ ಸುತ್ತಲೂ ಪ್ರದಕ್ಷಿಣೆ ಹಾಕಿ ದೇವರ ಸನ್ನಿದಿಯಲ್ಲಿ ಸ್ವಲ್ಪ ಹೊತ್ತು ಕೂತು ಮತ್ತೆ ಮರಳಿ ಮನೆಗೆ ಬರುತ್ತಾರೆ. ಆದ್ರೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಏನು ಫಲವಿದೆ ಅನ್ನೋದನ್ನ ತಿಳಿಯೋಣ ಬಹುತೇಕ ಜನರಿಗೆ ಅದರಲ್ಲೂ ಇಂದಿನ ದಿನಗಳಲ್ಲಿ ಇದರ ಬಗ್ಗೆ ತಿಳಿಯುವುದು ಬಳಷ್ಟು ಕಡಿಮೆ ಆಗಾಗಿ ಪ್ರದಕ್ಷಿಣೆ ಏಕೆ ಹಾಕಬೇಕು ಇದರಿಂದ ಸಿಗುವ ಫಲವೇನು ತಿಳಿಯೋಣ.

ಪ್ರದಕ್ಷಿಣೆ ಹಿಂದಿನ ಕಾಲದಿಂದಲೂ ಕೂಡ ನಮ್ಮ ಹಿರಿಯರು ಮಾಡಿಕೊಂಡು ಬಂದಿರುವಂತ ಪದ್ಧತಿ ಹಾಗೂ ನಂಬಿಕೆ ಪ್ರದಶಿನೇ ಹಾಕುವುದರಿಂದ ಜನ್ಮ ಜನ್ಮಾಂತರದ ಪಾಪ ನಿವಾರಣೆಯಾಗುತ್ತದೆ. ಹಾಗೂ ಪ್ರದಕ್ಷಿಣೆ ಹಾಕುವುದರಿಂದ ಪಾಪವನ್ನು ಕಳೆದುಕೊಳ್ಳಬಹುದು ಜೊತೆಗೆ ಮನಸ್ಸನ್ನು ಏಕಾಗ್ರತೆ ಮಾಡುತ್ತದೆ ಚಂಚಲ ಮನಸ್ಥಿತಿ ಕಡಿಮೆಯಾಗುವುದು ಎಂಬುದಾಗಿ ಪಂಡಿತರು ಹೇಳುತ್ತಾರೆ. ಇನ್ನು ಹಿಂದೂ ಪೂಜಾ ಪ್ರಯೋಗ ವಿಧಿಗಳಲ್ಲಿ ಬರಿ ನಮಸ್ಕಾರಂ ಕುರ್ಯಾತ್‌ ಎಂದು ಎಲ್ಲೂ ಹೇಳುವುದಿಲ್ಲ ಬದಲಿಗೆ ‘ಪ್ರದಕ್ಷಿಣ ನಮಸ್ಕಾರಂ ಕುರ್ಯಾತ್‌’ ಎಂದೇ ಹೇಳಲಾಗಿದೆ. ಹಾಗಾಗಿ ಇದಕ್ಕೆ ಹಿಂದೂ ಧಾರ್ಮಿಕತೆಯಲ್ಲಿ ವಿಶೇಷವಾದ ಮಹತ್ವವಿದೆ.

ನಾವುಗಳು ಹಿಂದಿನಿಂದಲೂ ಕೂಡ ದೇವಸ್ಥಾನಕ್ಕೆ ಹೋದಾಗ 108 ಅಥವಾ ಯಥಾಶಕ್ತಿ ಪ್ರದಕ್ಷಿಣೆ ಹಾಕಬೇಕು ಎಂದು ನಾವೆಲ್ಲಾ ನಂಬಿ ದ್ದೇವೆ. ಪ್ರದಕ್ಷಿಣೆಯ ಹಿಂದಿರುವುದು ಜ್ಯೋತಿರ್ವಿಜ್ಞಾನ ಹೌದು ನಾವುಗಳು ಪ್ರಕೃತಿಯೇ ದೇವರು ಎಂದು ನಂಬಿರುವ ಹಿಂದೂಗಳು ಪೂಜಾವಿಧಿಯನ್ನೂ ಪ್ರಕೃತಿ ನಿಯಮಕ್ಕೆ ಅನುಗುಣವಾಗಿಯೇ ರೂಪಿಸಿ ಕೊಂಡಿದ್ದೇವೆ. ಹಾಗೆಯೆ ಸೂರ್ಯನಿಂದ ಭೂಮಿಗೆ ಶಕ್ತಿ ಸಿಗುತ್ತದೆಯೋ ಹಾಗೆ ದೇವರು ಎಂಬ ಪರಮೋಚ್ಚ ಶಕ್ತಿಯ ಸುತ್ತ ಪ್ರದಕ್ಷಿಣೆ ಮಾಡುವುದರಿಂದ ನಮಗೂ ಶಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಅಷ್ಟೇ ಅಲ್ದೆ ಪ್ರದಕ್ಷಿಣೆಯು ಏಕರೂಪದ ಪುನರಾವರ್ತಿ ಕ್ರಿಯೆಯಾಗಿರುವುದರಿಂದ ಅಲ್ಲಿ ಏಕಾಗ್ರತೆ ಸುಲಭವಾಗಿ ಸಿದ್ಧಿಸುತ್ತದೆ. ಯಾವುದಾದರೂ ಒಂದು ಶಕ್ತಿಗೆ ಸಂಪೂರ್ಣ ಶರಣಾಗಲು ಈ ಏಕಾಗ್ರತೆ ಅತ್ಯಗತ್ಯ. ಆದ್ದರಿಂದ ದೇವಾಲಯಕ್ಕೆ ಹೋಗುವಾಗ ಪ್ರದಕ್ಷಣೆ ಹಾಕಿ ಬಂದರೆ ಮನಸ್ಸಿಗೆ ಹಾಗೂ ದೇಹಕ್ಕೂ ನೆಮ್ಮದಿ ಸಿಗುವಂತಾಗುತ್ತದೆ. ನಿಮ್ಮ ಜೀವನದಲ್ಲಿ ಎಂತಹ ಕಠಿಣ ಸಮಸ್ಯೆಗಳು ಇರಲಿ ಒಂದೇ ಕರೆ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ದೈವಜ್ಞ ಜ್ಯೋತಿಷ್ಯರು ಎಂ.ಪಿ ಶರ್ಮ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 3 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ




ನೀರಿನಲ್ಲಿ ನಿಂಬೆಹಣ್ಣು ಹಾಕಿ ಇಡುವುದರಿಂದ ಆಗುವುದೇನು ಗೊತ್ತೇ.?

ಬಹಳಷ್ಟು ಜನರು ಈ ರೀತಿಯ ವಿಧಾನವನ್ನು ಕಣ್ಣಿಂದ ನೋಡಿರುತ್ತೀರ ಕೆಲವರು ಮನೆಯಲ್ಲಿ ಇನ್ನು ಕೆಲವರು ವ್ಯಾಪಾರ ವ್ಯಹಾರದ ಕಚೇರಿಗಳಲ್ಲಿ ಈ ರೀತಿಯಾಗಿ ಇಟ್ಟಿರುತ್ತಾರೆ. ಹೌದು ಒಂದು ಗಾಜಿನ ಗ್ಲಾಸ್ ನೀರಿನಲ್ಲಿ ಹಳದಿ ಬಣ್ಣವನ್ನು ಹೊಂದಿರುವಂತ ನಿಂಬೆಹಣ್ಣನು ಹಾಕಿ ಇಟ್ಟಿರುತ್ತಾರೆ ಇದಕ್ಕೆ ಕಾರಣವೇನು ಅನ್ನೋದನ್ನ ಹೇಳುವದಾದರೆ. ಮುಖ್ಯವಾಗಿ ಎರಡು ಕಾರಣಗಳಿವೆ ಒಂದು ಧಾರ್ಮಿಕ ಕರಣ ಇನ್ನೊಂದು ವೈಜ್ಞಾನಿಕ ಕಾರಣ ಈ ಎರಡರ ಬಗ್ಗೆಯೂ ಕೂಡ ನಿಮಗೆ ತಿಳಿಸಲು ಬಯಸುತ್ತವೆ ಮುಂದೆ ನೋಡಿ.


ವ್ಯಾಪಾರದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಕೆಟ್ಟ ದೃಷ್ಟಿ ಬಿದ್ದರೆ ನಾನಾ ರೀತಿಯ ತೊಂದರೆಗಳು ಆಗುತ್ತವೆ. ಹಾಗಾಗಿ ಕೆಟ್ಟ ದೃಷ್ಟಿ ನಿವಾರಣೆಗೆ ಹಾಗೂ ಆ ಸ್ಥಳಗಳಲ್ಲಿ ಪಾಸಿಟಿವ್ ಎನರ್ಜಿ ಅಂದರೆ ಸಕಾರಾತ್ಮಕ ಗುಣಗಳು ಪಸರಿಸಲಿ ಅನ್ನೋ ಕಾರಣಕ್ಕೆ ಇದನ್ನು ಬಳಹಷ್ಟು ಜನರು ಈ ವಿಧಾನವನ್ನು ಮಾಡುತ್ತಾರೆ. ಇನ್ನು ಈರೀತಿಯಾಗಿ ಮಾಡುವುದರಿಂದ ಅಂಗಡಿ ಮನೆ ಆಫೀಸ್ ಇವುಗಳ ಮೇಲೆ ಯಾವುದೇ ದೃಷ್ಟ ಶಕ್ತಿಯ ಪ್ರಭಾವ ಬಿರೋದಿಲ್ಲ ಅನ್ನೋದನ್ನ ಪಂಡಿತರು ಹೇಳುತ್ತಾರೆ.


ಅಷ್ಟೇ ಅಲ್ಲದೆ ಈ ನಿಂಬೆಹಣ್ಣು ಪೂಜೆಗಳಿಗೆ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತದೆ ಹಾಗಾಗಿ ಇದನ್ನು ಒಂದು ಗಾಜಿನ ಗ್ಲಾಸ್ ನೀರಿನಲ್ಲಿ ನಿಂಬೆಹಣ್ಣು ಹಾಕಿ ದೇವರ ಫೋಟೋ ಮುಂದೆ ಇಟ್ಟರೆ ಉತ್ತಮ ಅನ್ನೋದನ್ನ ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ತಟಸ್ಥ ಗೊಳಿಸುವುದಲ್ಲದೆ, ಹೆಣ್ಣು ಅಥವಾ ಗಂಡಸರ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ ಎಂಬುದಾಗಿ ಹೇಳಲಾಗುತ್ತದೆ. ನಿಮ್ಮ ಮನೆಯ ಮೇಲೆ ಅಥವಾ ನಿಮ್ಮ ಮೇಲೆ ಮಾಟ ಮಂತ್ರ ವ್ಯಾಮಾಚಾರ ಆಗಿದ್ರೆ ಈ ನಿಂಬೆಹಣ್ಣು ಕೊಳೆತು ಹೋಗುವ ಸೂಚನೆ ನೀಡುತ್ತದೆ.


ವೈಜ್ಞಾನಿಕವಾಗಿ ಹೇಳುವಾದರೆ ಇದರಿಂದ ಅರೋಗ್ಯ ವೃದ್ಧಿಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ ಅದು ಹೇಗೆ.? ನಾವುಗಳು ವಾಸಿಸುವಂತ ಸ್ಥಳದಲ್ಲಿನ ಆಮ್ಲಿಯತೆ ಹೆಚ್ಚಾಗಿದ್ದರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಆದ್ದರಿಂದ ಇದರಿಂದ ಪರಿಹಾರ ಹೊಂದಲು ಈ ರೀತಿಯ ವಿಧಾನವನ್ನು ಮಾಡುವುದರಿಂದ ಗುಣ ವಾತಾವರಣ ಆಮ್ಲಿಯತೆಯನ್ನು ಹೀರಿ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಲಗ್ನ ಭಾವದಲ್ಲಿ ಗ್ರಹಗಳ ಫಲ!!

ಜನ್ಮ ಕುಂಡಲಿಯಲ್ಲಿ ನಿಮಗೆ ತಿಳಿದಿರುವಾಗೆ ಮೇಷದಿಂದ ಮೀನ ರಾಶಿಯವರೆಗೆ 12 ಮನೆಗಳು ಇರುತ್ತದೆ.ಮನೆಯನ್ನೇ ಭಾವಗಳೆಂದು ಕರೆಯುತ್ತಾರೆ. ಕುಂಡಲಿಯಲ್ಲಿ ‘ ಲಗ್ನ ‘ ಎಂದು ಗುರುತಿಸಿರುತ್ತಾರೆ.


ಲಗ್ನವೇ ಜಾತುಕನ ಮೊದಲನೆಯ ಭಾವ ಅದನ್ನು ತನು ಭಾವವೆಂದು ಕರೆಯುತ್ತಾರೆ.
ಲಗ್ನದಿಂದ ಜಾತುಕನ ಸ್ವಭಾವ, ಶರೀರ, ಸುಖ, ಆರೋಗ್ಯ, ಗುಣಧರ್ಮಗಳನ್ನು ತಿಳಿಯ ಬಹುದು.ಲಗ್ನದಲ್ಲಿ ಯಾವ ಗ್ರಹಗಳು ಇದ್ದರೆ ಏನು ಫಲ ಎನ್ನುವುದು ತಿಳಿಯೋಣ.


ಲಗ್ನದಲ್ಲಿ ರವಿ ಇದ್ದರೆ ಶರೀರವು ಬಲಿಷ್ಠವಾಗಿರುತ್ತದೆ, ಧೈರ್ಯವಂತನು, ಬುದ್ದಿವಂತ, ಕಾರ್ಯದಲ್ಲಿ ನೈಪುಣ್ಯತೆ, ರಾಜನಂತೆ ವರ್ತನೆ, ತೀಕ್ಷ್ಣಸ್ವಭಾವ, ಅಧಿಕಾರನಾಗುವರು, ಸಹನೆ, ದಯೆ ಇಲ್ಲದಿರುವರು....


ಗ್ನದಲ್ಲಿ ಚಂದ್ರ ಇದ್ದರೆ ಸುಂದರ ಮುಖ, ಆಕರ್ಷಣ ಶಕ್ತಿ, ಒಳ್ಳೆಯ ಮನಸ್ಸು, ಎಲ್ಲರನ್ನು ತಾಯಿಯಂತೆ ನೋಡಿಕೊಳ್ಳುವರು, ಹೆಚ್ಚು ಯೋಚಿಸುವರು.

ಲಗ್ನದಲ್ಲಿ ಕುಜ ಇದ್ದರೆ ದಷ್ಟಪುಷ್ಟ ಶರೀರ, ರಕ್ತದಂತೆ ದೇಹಕಾಂತಿ, ಎಲ್ಲರನ್ನು ಗೌರವಿಸುವ ರಕ್ಷಿಸುವ ಸ್ವಭಾವ, ನಿತ್ಯ ಯೌವನ.

ಲಗ್ನದಲ್ಲಿ ಬುಧ ಇದ್ದರೆ ಬಹಳ ಸುಂದರ, ಬುದ್ಧಿವಂತರು, ಮೃದು ಶರೀರ, ಮಿತ ಭಾಷೆ, ವ್ಯಾಪರದಲ್ಲಿ ಆಸಕ್ತಿ, ಸಂಕೋಚ ಪ್ರವೃತ್ತಿ.

ಲಗ್ನದಲ್ಲಿ ಗುರು ಇದ್ದರೆ ಆರೋಗ್ಯ ವಂತರು, ಹೆಚ್ಚು ಜ್ಞಾನ, ಧಾರ್ಮಿಕತೆಯಲ್ಲಿ ಆಸಕ್ತಿ, ಅಗಲವಾದ ದೇಹ, ಎಲ್ಲರನ್ನು ಗೌರವ ಮರ್ಯಾದೆಯಿಂದ ಮಾತಾಡುವುದು, ಸಾತ್ವಿಕ ಗುಣದವರು.


ಲಗ್ನದಲ್ಲಿ ಶುಕ್ರ ಇದ್ದರೆ ಅತ್ಯಂತ ಸುಂದರವಾದ ಮುಖ ದೇಹ, ಸುಖಕರ ಜೀವನ, ಶ್ರೀಮಂತ, ಕಲೆಯಲ್ಲಿ ಆಸಕ್ತಿ, ಸ್ತ್ರೀಯರಿಗೆ ಗೌರವ ಕೊಡುವುದು, ಎಲ್ಲರನ್ನು ಪ್ರೀತಿಸುವುದು.


ಲಗ್ನದಲ್ಲಿ ಶುಕ್ರ ಇದ್ದರೆ ಅತ್ಯಂತ ಸುಂದರವಾದ ಮುಖ ದೇಹ, ಸುಖಕರ ಜೀವನ, ಶ್ರೀಮಂತ, ಕಲೆಯಲ್ಲಿ ಆಸಕ್ತಿ, ಸ್ತ್ರೀಯರಿಗೆ ಗೌರವ ಕೊಡುವುದು, ಎಲ್ಲರನ್ನು ಪ್ರೀತಿಸುವುದು....


ಲಗ್ನದಲ್ಲಿ ರಾಹು ಇದ್ದರೆ ತುಂಬಾ ಗಟ್ಟಿಯಾದ ದೇಹ, ಆಶೌಚ್ಯ, ಹೆಚ್ಚು ಯೋಚನೆ, ಸಾಹಸಗಳು ಮಾಡುವರು.
.

ಲಗ್ನದಲ್ಲಿ ಕೇತು ಇದ್ದರೆ ದೃಡವಾದ ದೇಹ, ಹೆಚ್ಚು ಭಯದಿಂದ ಕೂಡಿರುತ್ತಾರೆ, ಅನಾರೋಗ್ಯ ಸಮಸ್ಸೆ, ಭ್ರಮೆ, ಸನ್ಯಾಸತ್ವದಲ್ಲಿ ಆಸಕ್ತಿ.

ಹಬ್ಬ ಹರಿದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಯಾಕೆ ಬಳಸಬಾರದು ಎಂಬ ಸ್ವಾರಸ್ಯಕರ ವಿಷಯ ತಿಳಿದುಕೊಳ್ಳಿ!!

ಅನಾದಿಕಾಲದಿಂದಲೂ ದೈವ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡು ದೇವರನ್ನ ಪೂಜಿಸುತ್ತಾ ಬರಲಾಗುತ್ತಿದೆ. ಹೀಗೆ ದೇವತಾ ಕಾರ್ಯಗಳಲ್ಲಿ ಬಳಸಲಾಗುವ ಪವಿತ್ರ ಗ್ರಂಥಗಳು ಸೂಚಿಸಿದಂತೆ ಸರಿಯಾದ ಪೂಜಾ ಸಾಮಗ್ರಿಗಳೊಂದಿಗೆ ಕ್ರಮಬದ್ಧವಾದ, ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ಮಾಡಲು ಸೂಚಿಸಲಾಗಿದೆ. ಪ್ರತಿಯೊಂದು ಪೂಜಾ ಸಾಮಗ್ರಿಗೂ ತನ್ನದೇ ಆದ ಮಹತ್ವವಿದೆ. ಅದಕ್ಕೊಂದು ಪೌರಾಣಿಕ ಹಿನ್ನಲೆ ಕೂಡ ಇದೆ. ಅದೇ ರೀತಿ ಕೆಲವು ವಸ್ತುಗಳನ್ನ ದೇವಕಾರ್ಯಗಳಲ್ಲಿ ಬಳಸಲಾಗುವುದಿಲ್ಲ ಅದರಲ್ಲಿ ದೇವರಿಗೆ ಅರ್ಪಿಸುವ ಅಡಿಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಅದಕ್ಕೊಂದು ಪೌರಾಣಿಕ ಹಿನ್ನಲೆಯಿದೆ.

ಬನ್ನಿ ಹಾಗಾದರೆ ಹಬ್ಬ-ಹರಿದಿನ, ಪೂಜೆ-ಹವನ ಮುಂತಾದ ದೇವಕಾರ್ಯಗಳಿರುವಾಗ ಅಡಿಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಇದರ ಹಿನ್ನಲೆಯನ್ನು ತಿಳಿಯೋಣ


ನಮ್ಮ ಪುರಾಣಗಳಲ್ಲಿ ‘ ಸಮುದ್ರ ಮಂಥನ’ ಪ್ರಸಂಗ ಸಾಮಾನ್ಯವಾಗಿ ನಿಮಗೆಲ್ಲ ಗೊತ್ತಿರುವ ವಿಷಯ. ಸಮುದ್ರ ಮಂಥನ ಕಾಲದಲ್ಲಿ ಹಲವಾರು ವಸ್ತುಗಳು ಸಮುದ್ರದಿಂದ ಉದ್ಬವಿಸುತ್ತವೆ. ಅವುಗಳಲ್ಲಿ ಒಂದಾದ ಅಮೃತ ಕಳಶದೊಂದಿಗೆ ಉದ್ಬವಿಸುತ್ತದೆ. ಹೀಗೆ ಉದ್ಬವಿಸಿದ ಅಮೃತವನ್ನು ಹಂಚಿಕೊಳ್ಳುವುದಕ್ಕೆ ದೇವತೆಗಳು ಮತ್ತು ರಾಕ್ಷರ ನಡುವೆ ಘೋರ ಯುದ್ಧ ನಡೆಯುತ್ತದೆ. ಆಗ ಅಮೃತ ಕಳಶವನ್ನು ಗರುಡನು ತೆಗೆದು ಕೊಂಡು ಹೋಗುತ್ತಾನೆ. ಆಗ ದೇವತೆಗಳು ನಾರಾಯಣನನ್ನು ಪ್ರಾರ್ಥಿಸಲು ನಾರಾಯಣನು ಮೋಹಿನಿ ರೂಪದಲ್ಲಿ ಬಂದು ಅಸುರರ ಕಣ್ಣು ತಪ್ಪಿಸಿ ದೇವತೆಗಳಿಗೆ ಅಮೃತವನ್ನು ಹಂಚುತ್ತಾಳೆ.

ಇದನ್ನರಿತ ಅಸುರ ರಾಹುಕೇತು ವೇಷ ಮರಸಿಕೊಂಡು ದೇವತೆಗಳ ಸಾಲಿನಲ್ಲಿ ಕುಳಿತು ಅಮೃತವನ್ನು ಪಡೆಯುತ್ತಾರೆ. ಇದನ್ನು ನೋಡಿದ ಸೂರ್ಯ ಚಂದ್ರರು ನಾರಾಯಣನಿಗೆ ಈ ವಿಷಯ ತಿಳಿಸಲು ಅವನು ರಾಹುವಿನ ತಲೆಯನ್ನು ಕತ್ತರಿಸುತ್ತಾನೆ. ಆದರೆ ಕುಡಿದ ಅಮೃತವು ರಾಹುವಿನ ಗಂಟಲಿನಿಂದ ಇಳಿದಿದ್ದರಿಂದ ರಾಹುವು ಸಾಯುವುದಿಲ್ಲ. ತಲೆ ಮಾತ್ರ ಇರುವ ದೇಹವನ್ನು ರಾಹು ಎಂದು ತಲೆ ಇಲ್ಲದ ದೇಹವನ್ನು ಕೇತುವೆಂದು ಕರೆಯುತ್ತಾರೆ. ಹೀಗೆ ಅವರ ಶಿರ ಕತ್ತರಿಸುವಾಗ ಅವರ ಬಾಯಲ್ಲಿದ್ದ ಅಮೃತ ಬಿಂದುವಿನಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹುಟ್ಟಿಕೊಂಡವು.

ಹೀಗೆ ಅಮೃತ ಬಿಂದುವಿನಿಂದ ಹುಟ್ಟಿಕೊಂಡ ಈರುಳ್ಳಿ ಹಾಗೂ ಬೆಳ್ಳುಳ್ಳಿ ರಾಕ್ಷಸರ ಬಾಯಿಯ ಎಂಜಲೂ ಸೇರಿದ್ದರಿಂದ ದುರ್ಗಂಧ, ಹಾಗೂ ಅಪವಿತ್ರವೆಂದು ಇದನ್ನು ತಾಮಸಿಕ ಆಹಾರದ ಗುಂಪಿಗೆ ಸೇರಿಸಲಾಗಿದೆ. ಹಾಗಾಗಿ ದೇವಕಾರ್ಯಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸೇವನೆ ವರ್ಜ್ಯವಾಗಿದೆ. ನಾವು ತಿನ್ನುವ ಆಹಾರ ನಮ್ಮ ಸ್ವಭಾವವನ್ನು ನಿರ್ಧರಿಸುತ್ತದೆ. ಸಾತ್ವಿಕ ಆಹಾರಗಳನ್ನು ಸೇವಿಸಿದರೆ ಸಾತ್ವಿಕರಾಗುತ್ತೇವೆ. ತಾಮಸಿಕ ಆಹಾರವನ್ನು ಸೇವಿಸಿದರೆ ತಾಮಸೀಪ್ರವೃತ್ತಿ ಬೆಳೆಯುತ್ತದೆ. ತಾಮಸಿಕ ಆಹಾರವನ್ನು ಆದಷ್ಟು ವರ್ಜಿಸುವಂತೆ ಆಹಾರನಿಯಮಗಳು ತಿಳಿಸುತ್ತವೆ.


ಈ ಕುರಿತು ಇನ್ನೊಂದು ಕಥೆಯಿದೆ.


ಪುರಾಣದ ಕಾಲದಲ್ಲಿ ತ್ರಿಶಂಕು ಮಹರಾಜ ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಬಯಸುತ್ತಾನೆ. ಆಗ ರಾಜರ್ಶಿ ವಿಶ್ವಾಮಿತ್ರ ತನ್ನ ತಪೋಬಲದಿಂದ ಆತನನ್ನು ಸ್ವರ್ಗಕ್ಕೆ ಸಶರೀರವಾಗಿ ಕಳಿಸುತ್ತಾನೆ. ಅಲ್ಲಿ ಇಂದ್ರ ಮತ್ತು ಸ್ವರ್ಗ ದೂತರು ಇಲ್ಲಿಗೆ ಆತ್ಮಗಳು ಬರಲು ಅಷ್ಟೇ ಅವಕಾಶ ಯಾರೂ ಸಶರೀರವಾಗಿ ಬರುವಂತಿಲ್ಲ ಎಂದು ಕೆಳಕ್ಕೆ ತಳ್ಳಿಬಿಡುತ್ತಾರೆ. ಆಗ ವಿಶ್ವಾಮಿತ್ರ ಅವನನ್ನು ಮಧ್ಯದಲ್ಲಿಯೇ ತಡೆದು ಅವನಿಗಾಗಿ ಒಂದು ಸ್ವರ್ಗ ನಿರ್ಮಿಸುತ್ತಾನೆ. ಅಲ್ಲಿ ತ್ರಿಶಂಕುವಿಗಾಗಿ ಬೆಳೆದ ತರಕಾರಿಗಳು ಈರುಳ್ಳಿ, ಬೆಳ್ಳುಳ್ಳಿ, ಬದನೆಕಾಯಿ, ಟೊಮ್ಯಾಟೊ ಮೂಲಂಗಿ ಇತ್ಯಾದಿ . ಅವು ಮನುಷ್ಯ ನಿರ್ಮಿತ ದೈವನಿರ್ಮಿತವಲ್ಲ ಎಂಬ ಕಾರಣಕ್ಕಾಗಿ ದೇವತಾಕರ್ಯಗಳಲ್ಲಿ, ಈ ತರಕಾರಿಗಳನ್ನು ಬಳಸುವುದಿಲ್ಲ.


ಅಮೃತ ಬಿಂದುವಿನಿಂದ ಹುಟ್ಟಿಕೊಂಡ ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಅತಿಯಾದರೆ ಅಮೃತವೂ ವಿಷವೆಂಬಂತೇ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳ ಅತಿಯಾದ ಸೇವನೆ ಒಳ್ಳೆಯದಲ್ಲ.

Monday, 16 December 2019

ವೃಕ್ಷಗಳ ಆರಾಧನೆ

🕉 ಓಂ ಶ್ರೀ ಗುರುಭ್ಯೋ ನಮಃ 🕉     ‌                   ‌           ‌         ‌     ‌      ‌                                                                                                                                                       *ವೃಕ್ಷಗಳ ಆರಾಧನೆ*

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ ಅಗ್ರತೋ ರುದ್ರರೂಪಾಯ ವೃಕ್ಷ ದೇವಾಯತೇ ನಮಃ‌.
ಸರ್ವ ವೃಕ್ಷಂ ಸರ್ವ ದೇವತಾ ನಿವಾಸಿತಂ, ಸರ್ವ ಆಯುರ್ವೇದಂ ಮೂಲಂ, ಸರ್ವವೃಕ್ಷ ದೇವಂ ಸರ್ವಾರೋಗ್ಯ ನಿವಾರಕಂ, ಸರ್ವಸಂಕಷ್ಟನಿವಾರಕಂ ಇದಂ ವೃಕ್ಷದೇವ ಸಂಕುಲಂ. 
 ‌                                ‌    ‌     ‌      ‌     ‌                                                                                                                 ಭೂಮಿಯಲ್ಲಿರುವ ಸಕಲ ಸಸ್ಯಗಳಲ್ಲೂ ದೇವಾನು ದೇವತೆಗಳು ನೆಲೆಸಿದ್ದಾರೆ. ಇಂತಹ ವೃಕ್ಷಗಳ ಪೂಜೆ ಆರಾಧನೆಗಳಿಂದ ಧನ್ಯತೆಯುಂಟಾಗುವುದರಲ್ಲಿ ಸಂಶಯವೇ ಇಲ್ಲ.

*ಔದುಂಬರ (ಅತ್ತಿ ಮರ) ವೃಕ್ಷ* ಓಂ ಔದುಂಬರವೃಕ್ಷದೇವಾಯೈ ನಮಃ - ಶುಕ್ರಗ್ರಹ ವೃಕ್ಷ. ಮಹಾಲಕ್ಷ್ಮಿ ನೆಲೆಸಿರುವಳು. ದತ್ತದೇವರ ನಿವಾಸ. ಅರವತ್ನಾಲ್ಕು ಯೋಗಿನಿಯರು ನೆಲೆಸಿದ್ದಾರೆಂದು ಗುರುಚರಿತ್ರೆಯಲ್ಲಿ ಉಲ್ಲೇಖವಾಗಿದೆ. 

*ಅಶ್ವತ್ಥ (ಅರಳಿ ಮರ) ವೃಕ್ಷ*      ಓಂ ಅಶ್ವಥ್ಥವೃಕ್ಷದೇವೇಯೈ ನಮಃ - ಗುರುಗ್ರಹ ವೃಕ್ಷ. ತ್ರಿಮೂರ್ತಿಗಳು ನೆಲೆಸಿರುತ್ತಾರೆ. ಸಂತಾನಕ್ಕಾಗಿ, ಸರ್ವಸಂಕಷ್ಟ ನಿವಾರಣೆಗಾಗಿ ಈ ವೃಕ್ಷ ಪೂಜನೀಯ.

*ಅರ್ಕ (ಎಕ್ಕ ಗಿಡ) ವೃಕ್ಷ* ಎಕ್ಕವೃಕ್ಷದೇವ್ಯೈನಮಃ - ಸೂರ್ಯಗ್ರಹ ಹಾಗೂ ಗಣಪತಿ ವೃಕ್ಷ . ಸರ್ವಜಯ ಹಾಗೂ ವಿಘ್ನ ನಿವಾರಣೆಗಾಗಿ ಪೂಜನೀಯ. ಎಕ್ಕದ ಹೂವಿನಿಂದ ಶಿವ ಪೂಜೆ ಬಹಳ ಪವಿತ್ರ.

*ಫಲಾಶ (ಮುತ್ತುಗ ಮರ) ವೃಕ್ಷ* ಮುತ್ತುಗ ವೃಕ್ಷ - ಚಂದ್ರ ಗ್ರಹ ವೃಕ್ಷ. ಮನಃಶ್ಯಾಂತಿಗಾಗಿ, ಮದುವೆಗಾಗಿ, ಸಂಕಷ್ಟ ಪರಿಹಾರಕ್ಕಾಗಿ ಪೂಜನೀಯ.

*ತುಳಸೀವೃಕ್ಷ* - ಸರ್ವ ದಾರಿದ್ರ್ಯನಾಶಿನಿ ಲಕ್ಷ್ಮಿರೂಪಿಣಿ. ವಿಷ್ಣು ಪ್ರಿಯೆ . ತುಳಸಿಯಿಲ್ಲದ ಮನೆ ಸುಖವಿರದ ಜೀವನ ಎರಡೂ ಒಂದೇ.

*ಕಗ್ಗಲೀವೃಕ್ಷ*- ಮಂಗಳ ವೃಕ್ಷ . ಅಂಗಾರಕ ದೋಷ, ಸರ್ಪ ದೋಷ, ರಕ್ತ ದೋಷ ನಿವಾರಣೆಗಾಗಿ ಪೂಜನೀಯ. 

*ಉತ್ತರಾಣಿ ವೃಕ್ಷ* - ಬುಧದೇವ ವೃಕ್ಷ . ಸರ್ವಬುದ್ದಿಕಾರಕ, ಬುಧನ ಅನುಗ್ರಹಕ್ಕಾಗಿ, ನರದೋಷ ನಿವಾರಣೆಗೆ ಪೂಜನೀಯ.

*ಶಮೀವೃಕ್ಷ ಅಥವ ಬನ್ನಿ ಮರ* - ಶ್ರೀಶನೈಶ್ಚರ ವೃಕ್ಷ . ಸರ್ವಸಂಕಷ್ಟ ನಿವಾರಣೆ. ಏಳೂವರೆ ವರ್ಷಗಳ ಮಹಾತ್ಮನ ಅವಧಿಯಲ್ಲಿ ಈ ವೃಕ್ಷ ಪೂಜೆಯಿಂದ ಶುಭ. ಮೂಳೆಯ ಸಂಬಂಧಿಸಿದ ರೋಗಗಳ ನಿವಾರಣೆಗೆ ಪೂಜನೀಯ.

*ದೂರ್ವಾ (ಗರಿಕೆ)*  - ರಾಹು ಗ್ರಹ ಪ್ರತಿನಿಧಿ. ಸರ್ವ ಶುಭ ಕಾರ್ಯಗಳಲ್ಲೂ, ಸರ್ವ ವಿಘ್ನ ನಿವಾರಕ ಗಣಪತಿಯ ಪೂಜೆ ಸಲ್ಲಿಸಲು. 

*ಕುಶ (ದರ್ಭೆ)* - ಕೇತು ಗ್ರಹ ವೃಕ್ಷ . ಕೇತುವಿನ ಅನುಗ್ರಹಕ್ಕಾಗಿ ಪೂಜನೀಯ. ಸರ್ವ ವಿಧವಾದ ಶುಭ ಹಾಗೂ ಅಶುಭ ಕಾರ್ಯಗಳಗೂ ಅವಶ್ಯಕ.

*ಅಶೋಕ ವೃಕ್ಷ* - ವಾಮಾಚಾರ ಮಾಟ ಮಂತ್ರಗಳ‌ ವಿಮುಕ್ತಿಗಾಗಿ ಇದರ ಆರಾಧನೆಯಿಂದ ಮುಕ್ತಿ ಹೊಂದಬಹುದು.

*ಕದಂಬ ವೃಕ್ಷ*- ದೇವಿ ನಿವಾಸ ವೃಕ್ಷ. ಕದಂಬನಿವಾಸಿನಿ ದುರ್ಗಾದೇವಿ. ಇದರ ಪೂಜೆಯಿಂದ ಶತೃಬಾಧಾ ನಿವಾರಣೆ.

*ತೆಂಗಿನಮರ* - ಕಲ್ಪವೃಕ್ಷ . ಪ್ರತಿದಿನ ಮುಂಜಾನೆ ಈ‌ ವೃಕ್ಷ ದರ್ಶನ ಶುಭಕಾರಕ, ಎಲ್ಲಾ ಕಾರ್ಯಗಳಿಗೂ ಅತ್ಯವಶ್ಯಕ.

*ಬಿಲ್ವವೃಕ್ಷ* - ಶಿವನಿಗೆ ಪ್ರಿಯವಾದದ್ದು.  ಸಾಕ್ಷಾತ್ ಶಿವನೇ ಬಿಲ್ವ. ಶ್ರೀದೇವಿಯೂ ಬಿಲ್ವದಲ್ಲಿ ನೆಲೆಸಿರುವಳು. ಇದರ ಪೂಜೆಯಿಂದ ಏನನ್ನಾದರೂ ಸಾಧಿಸಬಹುದು.

*ಬಾಳೆಗಿಡ* - ಯಕ್ಷಿಣಿಯರು ನೆಲೆಸಿರುವರು. ಇದರ ಪೂಜೆಯಿಂದ ಸರ್ವ ದೋಷ ನಿವಾರಣೆ.

ಹೀಗೆ ಇನ್ನೂ ಹಲವಾರು ಪೂಜನೀಯ ವೃಕ್ಷಗಳಿವೆ. ಸಕಲ ವೃಕ್ಷದ ಆರಾಧನೆಯಿಂದ, ಪ್ರಕೃತಿಯಿಂದ ಸಕಲವನ್ನೂ ಸಾಧಿಸಬಹುದು. ವೃಕ್ಷಂ ಪ್ರತ್ಯಕ್ಷ ದೇವ ರೂಪಂ.

ಧುಂದುಕಾರಿ

ಮಾರ್ಗಶಿರ ಮಾಸ ಶುಕ್ಲಪಕ್ಷದ (ಐದನೇ ಏಕಾದಶಿ)ಯ #ಶ್ರೀಮದ್ಭಾಗವತದ_ಕಥೆ...

 ಹಿಂದಿನ ಕಥೆಯಲ್ಲಿ ಗೋವಿನ ಹೊಟ್ಟೆಯಿಂದ ಮನುಷ್ಯಾಕಾರದ ಜೀವಿ ಹುಟ್ಟಿದ ಗೋಕರ್ಣನ ಕಥೆಯನ್ನು ನೋಡಿದೆವು.  ಈಗ ಅದರ ಮುಂದಿನ ಕಥೆ ಪ್ರೇತಯೋನಿಯಿಂದ ಮುಕ್ತಿಯನ್ನು ಒದಗಿಸುವ ಕಥೆ ನೋಡೋಣ... 

     ಶೌನಕರೇ ತಂದೆಯು ಕಾಡಿಗೆ ಹೋದ ಮೇಲೆ ಧುಂಧುಕಾರಿಯು ಒಂದು ದಿನ ತನ್ನ ತಾಯಿಗೆ ತುಂಬಾ ಹೊಡೆದು ಕೇಳಿದನು. "ಧನವನ್ನು ಎಲ್ಲಿ ಇಟ್ಟಿರುವೆ ಹೇಳು.  ಇಲ್ಲದಿದ್ದರೇ ಉರಿಯುತ್ತಿರುವ ಕಟ್ಟಿಗೆಯಿಂದ ನಿನ್ನನ್ನು ಸಾಯಿಸಿಬಿಡುವೆನು" ಎಂದು.

ಅವನು ಹೀಗೆ ಗದರಿಸಲು ಹೆದರಿ, ಮಗನ ಉಪದ್ರವದಿಂದ ದುಃಖಿತಳಾಗಿ ಅವಳು ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. 
ಯೋಗ ನಿಷ್ಠ ಗೋಕರ್ಣನು ತೀರ್ಥಯಾತ್ರೆಗೆ ಹೊರಟು ಹೋದನು.   ಅವನಿಗೆ ಈ ಘಟನೆಯಿಂದ ದುಃಖವಾಗಲೀ, ಸುಖವಾಗಲೀ ಆಗಲಿಲ್ಲ.   ಎಕೆಂದರೆ ಅವನಿಗೆ ಯಾರೂ ಮಿತ್ರರು, ಶತ್ರುಗಳು ಇರಲಿಲ್ಲ. 

     ಧುಂದುಕಾರಿಯು ವೇಶ್ಯೆಯರೊಂದಿಗೆ ಮನೆಯಲ್ಲಿಯೇ ಇರತೊಡಗಿದನು.   ಅವರಿಗಾಗಿ ಭೋಗ-ಸಾಮಗ್ರಿಗಳನ್ನು ಒದಗಿಸುವ ಚಿಂತೆಯಿಂದ ಅವನ ಬುದ್ಧಿಯು ನಷ್ಟವಾಯಿತು. ‌ ಅವನು ಅನೇಕ ರೀತಿಯ ಕ್ರೂರಕರ್ಮಗಳನ್ನು ಮಾಡತೊಡಗಿದ.   ಇವನ ಬಳಿಯಲ್ಲಿ ಅನೇಕ ಒಡವೆಗಳನ್ನು ಬೇಡಿದರು. ಅವನಾದರೋ ಕಾಮದಿಂದ ಕುರುಡನಾಗಿ ಹೋಗಿದ್ದನು.   ಸಾವಿನ ನೆನಪೇ ಅವನಿಗಿರಲಿಲ್ಲ.  ಸರಿ, ಒಡವೆಗಳನ್ನು ಒದಗಿಸಲು ಅವನು ಮನೆಯಿಂದ ಹೊರಬಿದ್ದನು.   ಅವನು ಅಲ್ಲಿ‌-ಇಲ್ಲಿ ಹೇರಳ ಧನವನ್ನು ಕದ್ದು ಮನೆಗೆ ಬಂದು, ಅವರಿಗೆ ಸುಂದರ ವಸ್ತ್ರ-ಒಡವೆಗಳನ್ನು ತಂದು ಕೊಟ್ಟನು.   ಕಳ್ಳತನದ ಅನೇಕ ವಸ್ತುಗಳನ್ನು ನೋಡಿ, ಆ ಸ್ತ್ರೀಯರು ರಾತ್ರಿ ವಿಚಾರ ಮಾಡಿದರು.   "ಇವನು ಪ್ರತಿದಿನ ಕಳ್ಳತನ ಮಾಡುತ್ತಾನೆ.   ಒಂದಲ್ಲ ಒಂದು ದಿನ ಖಂಡಿತವಾಗಿ ರಾಜನು ಇವನನ್ನು ಹಿಡಿದುಕೊಂಡು ಹೋದರೇ?  ಆಗ ರಾಜನು ಇವೆಲ್ಲ ಸಂಪತ್ತನ್ನು ಕಸಿದುಕೊಂಡು ಇವನಿಗೆ ಪ್ರಾಣದಂಡನೆ ವಿಧಿಸುವುದು ನಿಶ್ಚಿತ.   ಒಂದಲ್ಲ ಒಂದುದಿನ ಇವನಿಗೆ ಸಾಯುವುದೇ ಇದೆಯಾದರೇ ಧನದ ರಕ್ಷಣೆಗಾಗಿ ಗುಪ್ತವಾಗಿ ಇವನನ್ನು ನಾವೆ ಯಾಕೇ ಕೊಲ್ಲಬಾರದು? ಇವನನ್ನು ಕೊಂದು ನಾವು ಇವನ ಸಂಪತ್ತನ್ನೆಲ್ಲ ಎತ್ತಿಕೊಂಡು ಎಲ್ಲಾದರೂ ದೂರ ಹೊರಟು ಹೋಗೋಣ". ಹೀಗೆ ನಿಶ್ಚಯಿಸಿ ಅವರು ಮಲಗಿರುವ ಧುಂದುಕಾರಿಯನ್ನು ಹಗ್ಗದಿಂದ ಕಟ್ಟಿ, ಕತ್ತಿಗೆ ಉರುಳನ್ನು ಬಿಗಿದು ಸಾಯಿಸಲು ಪ್ರಯತ್ನಿಸಿದರು.  ಇದರಿಂದ ಅವನು ಬೇಗನೇ ಸಾಯದಿದ್ದಾಗ ಅವರಿಗೆ ಭಾರಿ ಚಿಂತೆಯಾಯಿತು.   ಆಗ ಅವರು ಅವನ ಬಾಯಲ್ಲಿ ಉರಿಯುವ ಕೆಂಡವನ್ನು ಸುರಿದರು.   ಇದರಿಂದ ಅವನು ಬೆಂಕಿಯ ಜ್ವಾಲೆಯಿಂದ ತುಂಬಾ ನರಳುತ್ತಾ ಸತ್ತು ಹೋದನು.   ಅವರು ಇವನ ಶರೀರವನ್ನು ಒಂದು ಹೊಂಡದಲ್ಲಿ ಹೂತುಬಿಟ್ಟರು.   ಅವರ ಈ ಕೃತ್ಯವು ಯಾರಿಗೂ ತಿಳಿಯದೇ ಹೋಯಿತು.  

     ಜನರು ಕೇಳಿದಾಗ "ನಮ್ಮ ಪ್ರಿಯತಮನು ಹಣದ ಲೋಭದಿಂದ ಈ ಬಾರಿ ಎಲ್ಲೋ ಬಹುದೂರ ಹೋಗಿರಬೇಕು.  ಇದೇ ವರ್ಷಾಂತ್ಯದಲ್ಲಿ ಬರುವನು" ಎಂದು ಹೇಳುತ್ತಿದ್ದರು. 

     ಆ ಕುಲಟೇಯರು ಧುಂದುಕಾರಿಯ ಸಂಪತ್ತೆಲ್ಲವನ್ನು ದೋಚಿಕೊಂಡು ಪರಾರಿಯಾದರು.   ಅವರಿಗೆ ಇಂತಹ ವಿಟರು ಎಷ್ಟಿದ್ದರೋ ಏನೋ ಯಾರು ಬಲ್ಲರು? ಧುಂದುಕಾರಿಯು ತನ್ನ ಕುಕರ್ಮದಿಂದಾಗಿ ಭಯಂಕರ ಪ್ರೇತ ಅದನು.   ಅವನು ಬಿರುಗಾಳಿಯಾಗಿ ಯಾವಾಗಲೂ ಹತ್ತು ದಿಕ್ಕುಗಳಲ್ಲಿ ಅಲೆಯುತ್ತಿದ್ದನು.   ಬಿಸಿಲು, ಛಳಿಯಿಂದಾಗಿ ಭಾರೀ ಕಷ್ಟಪಡುತ್ತಾ ಹಸಿವು ಬಾಯಾರಿಕೆಗಳಿಂದ ದುಃಖಿತನಾಗಿ "ಅಯ್ಯೋ ದೇವರೇ" ಎಂದು ಕೂಗುತ್ತಿದ್ದನು.   ಆದರೆ ಅವನಿಗೆ ಎಲ್ಲಿಯೂ, ಯಾವುದೇ ಆಸರೇ ದೊರೆಯಲಿಲ್ಲ.   ಕೆಲಕಾಲ ಕಳೆದ ಬಳಿಕ ಗೋಕರ್ಣನು ಧುಂದುಕಾರಿಯ ಮರಣ ಸಮಾಚಾರವನ್ನು ಕೇಳಿದನು.   ಆಗ ಅವನು ಅವನನ್ನು ಅನಾಥನೆಂದು ಗಯೆಯಲ್ಲಿ ಅವನ ಶ್ರಾದ್ಧವನ್ನು ಮಾಡಿದನು.   ಅವನು ಹೋದ ಎಲ್ಲ ತೀರ್ಥಗಳಲ್ಲಿಯೂ ಅವನ ಶ್ರಾದ್ಧವನ್ನು ಮಾಡುತ್ತಿದ್ದನು. 

     ಹೀಗೆ ತಿರುಗುತ್ತಾ ತಿರುಗುತ್ತಾ ಗೋಕರ್ಣನು ತನ್ನ ಊರಿಗೆ ಬಂದನು.  ರಾತ್ರಿಯಲ್ಲಿ ಬೇರೆಯವರ ಕಣ್ಣು ತಪ್ಪಿಸಿ ನೇರವಾಗಿ ತನ್ನ ಮನೆಯ ಅಂಗಳದಲ್ಲಿ ಮಲಗಲು ಬಂದನು.  ಅಲ್ಲಿ ತನ್ನ ತಮ್ಮನು ಮಲಗಿರುವುದನ್ನು ಕಂಡು ನಡುರಾತ್ರಿಯಲ್ಲಿ ಧುಂಧುಕಾರಿಯು ತನ್ನ ಭಾರೀ ವಿಕರಾಳ ರೂಪವನ್ನು ತೋರಿದನು.  ಅವನು ಕೆಲವೊಮ್ಮೆ ಆಡು, ಕೆಲವೊಮ್ಮೆ ಆನೆ, ಕೆಲವೊಮ್ಮೆ ಕೋಣನಾಗಿ ತೋರುತ್ತಿದ್ದನು.   ಈ ವಿಪರೀತ ಅವಸ್ಥೆಯನ್ನು ನೋಡಿ ಗೋಕರ್ಣನು ಇವನು ಯಾರೋ ದುರ್ಗತಿಯನ್ನು ಪಡೆದ ಜೀವಿಯಾಗಿದ್ದಾನೆ ಎಂದು ನಿಶ್ಚಯಿಸಿ ಅವನು ಅವನಲ್ಲಿ ಧೈರ್ಯದಿಂದ ಕೇಳಿದನು.

ಗೋಕರ್ಣನು:- "'ನೀನು ಯಾರು, ರಾತ್ರಿಯಲ್ಲಿ ಇಂತಹ ಭಯಾನಕ ರೂಪವನ್ನು ಏಕೆ ತೋರುತ್ತಿರುವೆ? ಇಂತಹ ಸ್ತೀತಿಯು ನಿನಗೆ ಹೇಗೆ ಉಂಟಾಯಿತು? ನೀನು ಪ್ರೆತವೋ, ಪಿಶಾಚಿಯೋ ಅಥವಾ ಯಾವುದಾದರೂ ರಾಕ್ಷಸನೋ?" ಎಂದು ಕೇಳಿದನು.

ಗೋಕರ್ಣನು ಹೀಗೆ ಕೇಳಿದಾಗ ಅವನು ಪದೇ ಪದೇ ಜೋರಾಗಿ ಅಳತೊಡಗಿದನು.  ಅವನಲ್ಲಿ ಮಾತನಾಡಲೂ ಶಕ್ತಿ ಇರಲಿಲ್ಲ. ಅದಕ್ಕಾಗಿ ಅವನು ಕೇವಲ ಸಂಕೇತ ಮಾತ್ರ ಮಾಡಿದನು.  ಆಗ ಗೋಕರ್ಣನು ಬೊಗಸೆಯಲ್ಲಿ ನೀರು ತುಂಬಿ, ಅದನ್ನು ಅಭಿಮಂತ್ರಿಸಿ ಅವನ ಮೇಲೆ ಪ್ರೋಕ್ಷಿಸಿನು.  ಇದರಿಂದ ಅವನ ಪಾಪಗಳು ಸ್ಚಲ್ಪ ಶಮನವಾಗಿ ಅವನು ಈ ರೀತಿ ಹೇಳತೊಡಗಿದನು.

ಪ್ರೇತವು:- "ನಾನು ನಿನ್ನ ಸಹೋದರನಾಗಿರುವೆನು.   ಧುಂಧುಕಾರಿಯೆಂದು ನನ್ನ ಹೆಸರು.   ನಾನು ನನ್ನದೇ ದೋಷಗಳಿಂದ ನನ್ನ ಬ್ರಾಹ್ಮಣತ್ವನನ್ನು ನಾಶಮಾಡಿಕೊಂಡೆ.   ನನ್ನ‌ ಕುಕರ್ಮಗಳು ಎಣಿಸಲಾರದಷ್ಟಿವೆ.   ನಾನು ಅಜ್ಞಾನದಲ್ಲಿ ತೊಳಲಾಡುತ್ತಿದ್ದೆ.   ಇದರಿಂದ ನಾನು ಜನರನ್ನು ತುಂಬಾ ಹಿಂಸಿಸಿದೆ.   ಕೊನೆಗೆ ಕುಲಟಿಯರಾದ ಸ್ತ್ರೀಯರು ನನ್ನನ್ನು ನರಳಾಡಿಸಿ ಕೊಂದುಬಿಟ್ಟರು.   ಇದರಿಂದ ಈಗ ಪ್ರೇತಯೋನಿ ಪಡೆದು ಈ ದುರ್ದಶೆಯನ್ನು ಅನುಭವಿಸುತ್ತಿದ್ದೇನೆ.   ಈಗ ದೈವವಶಾತ್ ಕರ್ಮಫಲವು ಉದಯಿಸಿದ್ದರಿಂದ ನಾನು ಕೇವಲ ಗಾಳಿಯನ್ನು ಕುಡಿಯುತ್ತಾ ಬದುಕುತ್ತಿದ್ದೇನೆ.   ಈಗ ಹೇಗಾದರೂ ಬೇಗನೇ ನನ್ನನ್ನು ಈ ಪ್ರೇತಯೋನಿಯಿಂದ ಬಿಡಿಸು" ಎಂದನು.

 ಗೋಕರ್ಣನು ದುಂದುಕಾರಿಯ ಎಲ್ಲ ಮಾತುಗಳನ್ನು ಕೇಳಿ ಅವನಲ್ಲಿ ಹೇಳಿದನು.

ಗೋಕರ್ಣನು:- "ಸಹೋದರ, ನಾನು ನಿನಗಾಗಿ ವಿಧಿಪೂರ್ವಕ ಗಯೆಯಲ್ಲಿ ಪಿಂಡದಾನ ಮಾಡಿದೆ.   ಆದರೂ ನೀನು ಪ್ರೇತಯೋನಿಯಿಂದ ಮುಕ್ತನಾಗಲಿಲ್ಲ ಏಕೆ ಎಂಬುದು ನನಗೆ ಆಶ್ಚರ್ಯವಾಗುತ್ತಿದೆ.   ಗಯಾ ಶ್ರಾದ್ಧದಿಂದಲೂ ನಿನ್ನ ಮುಕ್ತಿಯಾಗದಿದ್ದಾಗ ಇದಕ್ಕೆ ಬೇರೆ ಯಾವ ಉಪಾಯವೂ ಇಲ್ಲ.   ಸರಿ, ನೀನು ಎಲ್ಲಾ ಮಾತನ್ನು ಬಿಚ್ಚಿಹೇಳು, ಈಗ ನಾನು ಏನು ಮಾಡಬೇಕು?"

ಪ್ರೇತ:- "ನೂರಾರು ಗಯಾಶ್ರಾದ್ಧಗಳನ್ನು ಮಾಡಿದರೂ ನನ್ನ ಮುಕ್ತಿಯು ಆಗಲಾರದು.   ಈಗಲಾದರೂ ನೀನು ಇದಕ್ಕಾಗಿ ಬೇರೆ ಯಾವುದಾದರೂ ಉಪಾಯವನ್ನು ಯೋಚಿಸು". ಎಂದಿತು

  ಪ್ರೇತದ ಈ ಮಾತಮ್ನು ಕೇಳಿ ಗೋಕರ್ಣನಿಗೆ ಆಶ್ಚರ್ಯವಾಯಿತು.  ನೂರಾರು ಗಯಾ ಶ್ರಾದ್ಧದಿಂದಲೂ ನಿನ್ನ ಮುಕ್ತಿಯು ಆಗದಿದ್ದರೆ, ನಿನ್ನ ಮುಕ್ತಿಯು ಅಸಂಭವವೇಂದೇ ತೋರುತ್ತದೆ.    ಇರಲಿ, ಈಗ ನೀನು ನಿರ್ಭಯನಾಗಿ ನಿನ್ನ ಸ್ಥಾನದಲ್ಲಿ ಇರು. ನಾನು ವಿಚಾರ ಮಾಡಿ ನಿನ್ನ ಮುಕ್ತಿಗಾಗಿ ಯಾವುದಾದರೂ ಬೇರೆ ಉಪಾಯವನ್ನು ಮಾಡುವೆನು".

     ಗೋಕರ್ಣನ ಅಪ್ಪಣೆ ಪಡೆದು ಧುಂಧುಕಾರಿಯು ಅಲ್ಲಿಂದ ಹೊರಟು ತನ್ನ ಸ್ಥಾನಕ್ಕೆ ಹೋದನು.  ಇತ್ತ ಗೋಕರ್ಣನು ರಾತ್ರಿಯಿಡೀ ವಿಚಾರ ಮಾಡಿದರೂ ಅವನಿಗೆ ಯಾವ ಉಪಾಯವೂ ಹೊಳೆಯಲಿಲ್ಲ.   ಬೆಳಿಗ್ಗೆ ಅವನು ಬಂದಿರುವುದನ್ನು ಕಂಡು ಜನರು ಪ್ರೇಮದಿಂದ ಅವನನ್ನು ಭೇಟಿಯಾಗಲು ಬಂದರು.   ಆಗ ಗೋಕರ್ಣನು ರಾತ್ರಿಯಲ್ಲಿ ನಡೆದುದೆಲ್ಲವನ್ನು ಅವರಿಗೆ ತಿಳಿಸಿದನು.   ಅವರಲ್ಲಿದ್ದ ವಿದ್ವಂಸರು, ಯೋಗನಿಷ್ಠರೂ, ಜ್ಞಾನಿಗಳೂ, ವೇದಜ್ಞರೂ ಹೀಗೆ ಎಲ್ಲರೂ ಅನೇಕ ಶಾಸ್ತ್ರಗಳನ್ನು ತಿರುವಿ ಹಾಕಿದರು.   ಆದರೂ ಅವನ ಮುಕ್ತಿಯ ಉಪಾಯವು ಸಿಗಲಿಲ್ಲ.   ಕೊನೆಗೆ ಈ ವಿಷಯದಲ್ಲಿ ಭಗವಾನ್ ಭಾಸ್ಕರನು ಏನು ಆಜ್ಞೆಯನ್ನು ಕೊಡುವನೋ ಅದನ್ನೇ ಮಾಡುವುದೆಂದು ಎಲ್ಲರೂ ನಿಶ್ಚಯಿಸಿದರು.   ಗೋಕರ್ಣನು ತನ್ನ ತಪೊಬಲದಿಂದ ಸೂರ್ಯನ ಗತಿಯನ್ನು ತಡೆದುಬಿಟ್ಟನು.   ಅವನು ಸ್ತುತಿಸಿದನು. "ಭಗವಂತಾ ನೀನು ಜಗತ್ಸಾಕ್ಷಿಯಾಗಿರುವೆ.  ನಾನು ನಿನಗೆ ನಮಸ್ಕರಿಸುತ್ತೇನೆ. ನೀನು ದಯಾಮಾಡಿ ಧುಂಧುಕಾರಿಯ ಮುಕ್ತಿಯ ಸಾಧನೆಯನ್ನು ನನಗೆ ತಿಳಿಸು" ಎಂದು ಪ್ರಾರ್ಥಿಸಿದನು.

     ಗೋಕರ್ಣನ ಈ ಪ್ರಾರ್ಥನೆಯನ್ನು ಕೇಳಿ ಸೂರ್ಯನಾರಾಯನು ಸ್ಪಷ್ಟವಾಗಿ ಹೀಗೆ ಹೇಳಿದನು.
"ಶ್ರೀಮದ್ಭಾಗವತದಿಂದ ಮುಕ್ತಿಯಾಗಬಲ್ಲದು. ಅದರಿಂದ ನೀನು ಅದನ್ನು ಸಪ್ತಾಹ ವಿಧಿಯಿಂದ ಪಾರಾಯಣೆ ಮಾಡು" ಎಂದನು ಭಗವಾನ್ ಸೂರ್ಯದೇವನು.

      ಸೂರ್ಯನ ಈ ಧರ್ಮಮಯ ವಚನವನ್ನು ಎಲ್ಲರೂ ಕೇಳಿದರು.   ಆಗ‌ ಎಲ್ಲರೂ "ಈ ಸಾಧನೆಯು ತುಂಬಾ ಸರಳವಾಗಿದೆ.  ಇದನ್ನು ಪ್ರಯತ್ನ ಪೂರ್ವಕ ಮಾಡು" ಎಂದು ಹೇಳಿದರು. ಆದ್ದರಿಂದ ಗೋಕರ್ಣನು ಹಾಗೆಯೇ ನಿಶ್ಚಯಿಸಿ ಕಥೆಯನ್ನು ಹೇಳಲು ಸಿದ್ಧನಾದನು. 

     ಅನೆಕ ಊರುಗಳಿಂದ ಗ್ರಾಮಗಳಿಂದ ಅನೇಕ ಜನರು ಕಥೆ ಕೇಳಲು ಬಂದರು.  ಬಹಳಷ್ಟು ಕುಂಟರೂ, ಕುರುಡರು, ಮುದುಕರೂ, ಮಂದಬುದ್ಧಿಯವರೂ ಹೀಗೆ ತಮ್ಮ ಪಾಪಗಳನ್ನು ಕಳೆದುಕೊಳ್ಳುವ ಉದ್ದೇಶದಿಂದ ಅಲ್ಲಿ ಬಂದು ಸೇರಿದರು.  ಹೀಗೆ ಅಲ್ಲಿ ನೆರೆದ ಜನಸಂದಣಿಯನ್ನು ನೋಡಿ ದೇವತೆಗಳಿಗೂ ಆಶ್ಚರ್ಯವಾಯಿತು.  ಗೋಕರ್ಣನು ವ್ಯಾಸಪೀಠದಲ್ಲಿ (ವೇದಿಕೆಯಲ್ಲಿ) ಕುಳಿತು ಕಥೆ ಹೇಳಲು ತೊಡಗಿದಾಗ ಧುಂಧುಕಾರಿಯ ಪ್ರೇತವು ಅಲ್ಲಿಗೆ ಬಂದು ಕುಳಿತುಕೊಳ್ಳಲು, ಅಲ್ಲಿ-ಇಲ್ಲಿ ಜಾಗ ಹುಡುಕತೊಡಗಿತು.  ಅಷ್ಟರಲ್ಲಿ ಏಳು ಗಂಟುಗಳಿದ್ದ ಒಂದು ನೇರವಾದ ಬಿದರಿನ ಮೇಲೆ ಅವನ ದೃಷ್ಟಿ ಬಿತ್ತು. ಅದರ ಕೆಳಗಿನ ರಂದ್ರದಲ್ಲಿ ಹೊಕ್ಕು, ಅದು ಕಥೆ ಕೇಳಲು ಕುಳಿತುಕೊಂಡಿತು.  ಗಾಳಿಯ ರೂಪದಿಂದ ಇದ್ದ ಕಾರಣ ಅದಕ್ಕೆ ಹೊರಗೆಲ್ಲೂ ಕುಳಿತುಕೊಳ್ಳಲಾರದೇ ಬಿದಿರಿನಲ್ಲಿ ಹೊಕ್ಕಿತು. 

     ಗೋಕರ್ಣನು ಒಬ್ಬ ಬ್ರಾಹ್ಮಣನನ್ನು ಮುಖ್ಯಶ್ರೋತೃವಾಗಿಸಿ, ಪ್ರಥಮಸ್ಕಂಧದಿಂದಲೇ ಸ್ಪಷ್ಟವಾಗಿ, ಮಧುರ ಸ್ವರದಿಂದ ಕಥೆ ಹೇಳಲು ಪ್ರಾರಂಭಿಸಿದನು.   ಸಾಯಂಕಾಲ ಅಂದಿನ ಕಥೆಯನ್ನು ಮುಗಿಸಿದಾಗ ಒಂದು ವಿಚಿತ್ರವಾದ ಸಂಗತಿ ನಡೆಯಿತು. ಅಲ್ಲಿ ಸಭೀಗರು ನೋಡು ನೋಡುತ್ತಿರುವಂತೆ ಆ ಬಿದಿರಿನ ಒಂದು ಗಂಟು ಫಟಾರ್ ಎಂದು ಶಬ್ದ ಮಾಡುತ್ತಾ ಒಡೆದುಹೋಯಿತು.  ಹೀಗೆ ಎರಡನೆಯ ಸಂಜೆ ಎರಡನೆಯ ಗಂಟು, ಮೂರನೆಯ ಸಂಜೆ ಮೂರನೆಯ ಗಂಟು ಒಡೆದುಹೋಯಿತು. 
ಈ ವಿಧವಾಗಿ ಏಳು ದಿನಗಳಲ್ಲಿ ಏಳೂ ಗಂಟುಗಳು ಒಡೆದು ಧುಂದುಕಾರಿಯು ಹನ್ನೆರಡೂ ಸ್ಕಂದಗಳನ್ನು ಕೇಳಿದ್ದರಿಂದ ಪವಿತ್ರನಾಗಿ, ಪ್ರೇತಯೋನಿಯಿಂದ ಮುಕ್ತನಾಗಿ, ದಿವ್ಯ ರೂಪವನ್ನು ಧರಿಸಿ ಎಲ್ಲರೆದುರಿಗೆ ಪ್ರಕಟನಾದನು.  ಅವನ ಶರೀರವು ಮೇಘದಂತೆ 
ಶ್ಯಾಮಲವಾಗಿದ್ದು, ಪೀತಾಂಬರ ತುಳಸೀಮಾಲೆಗಳಿಂದ ಸುಶೋಭಿತವಾಗಿತ್ತು.  ತಲೆಯ ಮೇಲೆ ಮನೋಹರವಾದ ಕಿರೀಟವಿದ್ದು, ಕಿವಿಗಳಲ್ಲಿ ಕಮನೀಯ ಕುಂಡಲಗಳು ಓಲಾಡುತ್ತಿದ್ದವು.  

      ಕೂಡಲೇ ಸಹೋದರನಾದ ಗೋಕರ್ಣನಿಗೆ ವಂದಿಸಿದ, 
ಧುಂಧುಕಾರಿಯು:- "ಸೋದರಾ, ನೀನು ಕೃಪೆಗೈದು ನನ್ನನ್ನು ಪ್ರೇತಯೊನಿಯ ದುಃಖದಿಂದ ಬಿಡಿಸಿದೆ.  ಈ ಪ್ರೇತಪೀಡೆಯನ್ನು ನಾಶಗೊಳಿಸುವಂತಹ ಶ್ರೀಮದ್ಭಾಗವತ ಕಥೆಯು ಧನ್ಯವಾಗಿದೆ.  ಇದರ ಸಪ್ತಾಹ ಪಾರಾಯಣವೂ ಧನ್ಯವಾಗಿದೆ.  ಸಪ್ತಾಹ ಶ್ರವಣದ ಯೋಗವು ಒದಗಿದಾಗ ಎಲ್ಲ ಪಾಪಗಳು ನಡುಗಿ ಈಗ ಈ ಭಾಗವತದ ಕಥೆಯು ಬೇಗನೇ ನಮ್ಮನ್ನು ಮುಗಿಸಿಬಿಟ್ಟಿತು ಎಂದು ಹೆದರಿ ಓಡಿ ಹೋಗುವವು.  ಈ ಸಪ್ತಾಹ ಶ್ರವಣವು ಮನ-ವಚನ ಕರ್ಮಗಳ ಮೂಲಕ ಮಾಡಿದ ಎಲ್ಲ ಪ್ರಕಾರದದ ಸಣ್ಣ-ದೊಡ್ಡ ಪಾಪಗಳನ್ನು ಭಸ್ಮವಾಗಿಸಿ ಬಿಡುತ್ತದೆ".
  
     ದುಂಧುಕಾರಿಯು ಇದೆಲ್ಲವನ್ನು ಹೇಳುತ್ತಿರುವಾಗ ಅವನಿಗಾಗಿ ವೈಕುಂಠವಾಸೀ ಪಾರ್ಷದರ ಸಹಿತ ಒಂದು ದಿವ್ಯವಾದ ವಿಮಾನವು ಇಳಿದು ಬಂತು.  ಎಲ್ಲೆಡೆ ಅದರ ಪ್ರಕಾಶ ಮಂಡಲಾಕಾರವಾಗಿ ಹರಡಿಕೊಂಡಿತು.  ಎಲ್ಲರೆದುರಿಗೆ ಧುಂಧುಕಾರಿಯು ಆ ವಿಮಾನವನ್ನು ಹತ್ತಿದನು.   ಆಗ ಆ ವಿಮಾನದಲ್ಲಿ ಬಂದಿರುವ ಪಾರ್ಷದರನ್ನು ನೋಡಿ ಗೋಕರ್ಣನು ಹೀಗೆಂದನು.

ಗೋಕರ್ಣನು:- "ಓ ಭಗವಂತನ ಪ್ರಿಯ ಪಾರ್ಷದರೇ, ಇಲ್ಲಿ ನಮ್ಮ ಅನೇಕ ಶುದ್ಧಹೃದಯ ಶ್ರೋತೃಗಳಿದ್ದಾರೆ.  ಅವರೆಲ್ಲರಿಗಾಗಿ ನೀವು ಒಟ್ಟಿಗೆ ಅನೇಕ ವಿಮಾಗಳನ್ನು ಏಕೆ ತರಲಿಲ್ಲ? ಇಲ್ಲಿ ಎಲ್ಲರೂ ಸಮಾನವಾಗಿ ಕಥೆ ಕೇಳಿದರು.  ಇದನ್ನು ನಾವು ನೋಡುತ್ತಿದ್ದೇವೆ. ಹಾಗಿರುವಾಗ ಫಲದಲ್ಲಿ ಈ ಪ್ರಕಾರದ ಭೆದ ಏಕಾಯಿತು?" ತಿಳಿಸಿರಿ.

ಪಾರ್ಷದರು;- "ಎಲೈ ಮಾನ್ಯವರ್ಯನೇ, ಈ ಫಲಭೇದದ ಕಾರಣ ಇದರ ಶ್ರವಣದ ಭೇದವೇ ಆಗಿದೆ. ಶ್ರವಣವಾದರೋ ಎಲ್ಲರೂ ಮಾಡಿದರು ಸರಿಯೇ.  ಆದರೆ ಇವನಂತೆ ಮನನ ಮಾಡಲಿಲ್ಲ.  ಇದರಿಂದ ಒಟ್ಟಿಗೆ ಭಜನೆ ಮಾಡಿದರೂ ಅದೆ ಫಲಕದಲ್ಲಿ ಭೇದ ಉಳಿಯಿತು.   ಈ ಪ್ರೇತವು ಏಳು ದಿನಗಳವರೆಗೆ ನಿರಾಹಾರವಿದ್ದು ಶ್ರವಣಿಸಿತು.  ಕೇಳಿದ ವಿಷಯವನ್ನು ಸ್ಥರಚಿತ್ತದಿಂದ ತುಂಬಾ ಮನನ-ನಿಧಿಧ್ಯಾಸನವನ್ನು ಮಾಡುತ್ತಿತ್ತು.   ಹೀಗೆಯೇ ಲಕ್ಷಕೊಡದೇ ಇರುವುದರಿಂದ ಶ್ರವಣವು, ಸಂದೇಹದಿಂದ ಮಂತ್ರವು, ಚಿತ್ತವು ಅತ್ತ-ಇತ್ತ ಹರಿದಾಡುವುದರಿಂದ ಜಪವು ಫಲಿಸುವುದಿಲ್ಲ. 
ಅಪಾತ್ರನಿಗೆ ನೀಡಿದ ಶ್ರಾದ್ಧಭೋಜನ, ಶ್ರೋತ್ರಿಯಲ್ಲದವನಿಗೆ ಕೊಟ್ಟ ದಾನ, ಆಚಾರಹಿನ ಕುಲ, ಇವೆಲ್ಲವೂ ನಾಶವಾಗಿ ಹೋಗುತ್ತದೆ.  ಮನದ ದೋಷಗಳ ಮೇಲೆ ವಿಜಯ, ಕಥೆಯಲ್ಲಿ ಏಕಾಗ್ರಚಿತ್ತ ಮುಂತಾದ ನಿಯನಗಳನ್ನು ಪಾಲಿಸಿದರೇ ಶ್ರವಣದ ನಿಜವಾದ ಫಲಸಿಗುತ್ತದೆ‌.  ಈ ಶ್ರೊತೃಗಳು ಪುನಃ ಈ ಶ್ರೀಮದ್ಭಾಗವತದ ಕಥೆಯನ್ನು ಕೇಳಿದರೇ ನಿಶ್ಚಯವಾಗಿಯೂ ಇವರಿಗೆಲ್ಲ ವೈಕುಂಠ ಪ್ರಾಪ್ತವಾದೀತು.  ಎಲೈ ಗೋಕರ್ಣನೇ ನಿನಗಾದರೋ ಭಗವಂತನು ಸ್ವತಃ ಬಂದು ಗೋಲೋದ್ಧಾಮಕ್ಕೆ ಕೊಂಡು ಹೋಗುವನು".

   ಹೀಗೆ ಹೇಳಿ ಆ ಪಾರ್ಷದರೆಲ್ಲರೂ ಹರಿ ಕೀರ್ತನೆ ಮಾಡುತ್ತಾ ವೈಕುಂಠ ಲೋಕಕ್ಕೆ ಹೊರಟು ಹೋದರು.

     ಶ್ರಾವಣ ಮಾಸದಲ್ಲಿ ಗೋಕರ್ಣನು ಪುನಃ ಹಾಗೆಯೇ ಸಪ್ತಾಹ ಕ್ರಮದಿಂದ ಕಥೆ ಹೇಳಿದನು.  ಅದೇ ಶ್ರೋತೃಗಳು ಅದನ್ನು ಮತ್ತೆ‌ ಕೇಳಿದರು.   ಆಗ ಕೊನೆಯಲ್ಲಿ ಅಲ್ಲಿ ಭಕ್ತರಿಂದ ತುಂಬಿದ ವಿಮಾನಗಳಿಂದೊಡಗೂಡಿ ಭಗವಂತನು ಪ್ರಕಟನಾದನು.   ಎಲ್ಲೆಡೆ ಜಯ-ಜಯಕಾರ ನಡೆದು, ನಮಸ್ಕಾರಗಳ ಧ್ವನಿಗಳು ತುಂಬಿ ಹೋದವು.  ಭಗವಂತನು ಹರ್ಷಿತನಾಗಿ ತನ್ನ ಪಾಂಚಜನ್ಯವನ್ನು ಊದತೊಡಗಿದನು.  ಅವನು ಗೋಕರ್ಣನನ್ನು ಆಲಿಂಗಿಸಿಕೊಂಡು ತನ್ನಂತೆಯೇ ಮಾಡಿದನು.  ಅವನು ಕ್ಷಣಾರ್ಧದಲ್ಲಿ ಬೇರೆ ಎಲ್ಲ ಶ್ರೋತೃಗಳನ್ನು ಮೇಘಶ್ಯಾಮವರ್ಣ, ರೇಶ್ಮೆ ಪೀತಾಂಬರ, ಕಿರೀಟ, ಕುಂಡಲಾದಿಗಳಿಂದ ವಿಭೂಷಿತಗೊಳಿಸಿದನು.  ಆ ಊರಿನಲಿದ್ದ ನಾಯಿಗಳಿಂದ, ಚಾಂಡಾಲರವರೆಗಿನ ಜೀವಿಗಳೆಲ್ಲರನ್ನೂ ಗೋಕರ್ಣನ ಕೃಪೆಯಿಂದ ವಿಮಾನಗಳಲ್ಲಿ ಹತ್ತಿಸಿಕೊಳ್ಳಲಾಯಿತು.  ಯೋಗಿಗಳು ತಲುಪುವ ಭಗವದ್ಧಾಮಕ್ಕೆ ಅವರೆಲ್ಲರನ್ನೂ ಕಳಿಸಿಕೊಡಲಾಯಿತು.  ಹೀಗೆ ಭಕ್ತವತ್ಸಲ ಭಗವಾನ್ ಶ್ರೀಕೃಷ್ಣನು ಕಥಾಶ್ರವಣದಿಂದ ಪ್ರಸನನ್ನನಾಗಿ, ಗೋಕರ್ಣನನ್ನು ಜೊತೆಗೆ ಕರೆದುಕೊಂಡು ಗ್ವಾಲಬಾಲಕರ ಪ್ರಿಯವಾದ ಗೋಲೋಕಕ್ಕೆ ಹೊರಟು ಹೋದನು.  ಯಾವ ಲೋಕದಲ್ಲಿ ಸೂರ್ಯ-ಚಂದ್ರ ಸಿದ್ಧರೂಕೂಡ ಎಂದೂ ತಲುಪಲಾರರೋ, ಅಲ್ಲಿಗೆ ಅವರೆಲ್ಲರೂ "ಶ್ರೀಮದ್ಭಾಗವತ" ಶ್ರವಣದಿಂದ ಹೊರಟು ಹೋದರು. 

ನಾರದರೇ, ಸಪ್ತಾಹ ಯಜ್ಞದ ಮೂಲಕ ಕಥಾಶ್ರವಣ ಮಾಡುವುದರಿಂದ ಉಂಟಾಗುವ ಉಜ್ವಲವಾದ ಫಲವು ಸಂಚಿತವಾಗುತ್ತದೆ.  ಯಾರು ತಮ್ಮ ಕರ್ಣಪುಟದಿಂದ ಗೋಕರ್ಣನ ಮೂಲಕ ಹೇಳಿದ ಭಾಗವತ ಕಥೆಯ ಒಂದು ಅಕ್ಷರವನ್ನಾದರೋ ಪಾನಮಾಡಿದ್ದರೋ ಅವರಿಗೆ ಮತ್ತೆ ಗರ್ಭವಾಸ ಉಂಟಾಗಲಿಲ್ಲ.   ಜನರು ಗಾಳಿ, ನೀರು, ಎಲೆ ತಿಂದುಕೊಂಡು ಶರೀರವನ್ನು ಸೊರಗಿಸಿ ಅನೇಕ ಕಾಲದವರೆಗೆ ಮಾಡಿದ ಘೋರತಪಸ್ಸಿನಿಂದ ಯೋಗಾಭ್ಯಾಸದಿಂದ ಪಡೆಯಲಾರದ ಗತಿಯನ್ನು ಅವರು ಸಪ್ತಾಹ ಶ್ರವಣದಿಂದಲೇ ಸಹಜವಾಗಿಯೇ ಪಡೆದುಕೊಳ್ಳುತ್ತಾರೆ.  ಈ ಪವಿತ್ರ ಇತಿಹಾಸದ ಪಾರಾಯಣೆಯನ್ನು ಚಿತ್ರಕೂಟದಲ್ಲಿ ವಿರಾಜಮಾನ ಮುನೀಶ್ವರ ಶಾಂಡಿಲ್ಯರೂ ಬ್ರಹ್ಮಾನಂದದಲ್ಲು ಮಗ್ನರಾಗಿ ಮಾಡುತ್ತಿರುತ್ತಾರೆ.  ಈ ಕಥೆಯು ತುಂಬಾ ಪವಿತ್ರವಾಗಿದೆ.  ಒಮ್ಮೆ ಶ್ರವಣದಿಂದಲೇ ಸಮಸ್ತ ಪಾಪರಾಶಿಯನ್ನ ಸುಟ್ಟು ಬಿಡುತ್ತದೆ.  ಇವನ್ನು ಶ್ರಾದ್ಧದಲ್ಲಿ ಪಾರಾಯಣ ಮಾಡಿದರೆ ಇದರಿಂದ ಪಿತೃಗಳಿಗೆ ತುಂಬಾ ತೃಪ್ತಿಯಾಗುತ್ತದೆ.  ಪ್ರತಿ ದಿನವೂ ಪಾರಾಯಣ ಮಾಡುವುದರಿಂದ ಮೋಕ್ಷವು ಪ್ರಾಪ್ತಿಯಾಗುತ್ತದೆ.

                      -:ಶ್ರೀಕೃಷ್ಣಾರ್ಪಣಮಸ್ತು:-

ಬರಹ:- ಗಣೇಶ್ ಗೋಸಾವಿ...

Shiva

ಶುಭ ಸೋಮವಾರ ಪ್ರದೋಷವಿಂದು ಶಿವನ‌ಕೃಪಾಕಟಾಕ್ಷ ನಿಮದಾಗಲಿ.

🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿

ಶಿವ ಎಂದರೆ 'ಮಂಗಳಕರ' ಎಂದರ್ಥ ಸ್ವರೂಪತಃ ಸ್ವಭಾವತಃ ಸದಾ ಆನಂದವಾಗಿರುವ ಆತ್ಮ ಸಂಸ್ಥಿತಿಯೇ ಶಿವ. ಶಿವ ಎಲ್ಲರಲ್ಲೂ ಎಲ್ಲೆಲ್ಲೂ ಅಡಗಿರುವ ಆತ್ಮ ಚೈತನ್ಯ. ಸೃಷ್ಟಿಯ ಲಯಕರ್ತನೂ ಶಿವನೇ ಆಗಿರುವುದರಿಂದ ಲಯಕಾರ ಎಂದೂ ಇವನನ್ನು ಕರೆಯುತ್ತಾರೆ.

ಶಿವಮಂತ್ರ ಪಠಣವೆಂದರೆ ಸರ್ವೇಶ್ವರನಾದ ಶಿವನಿಗೆ ಗೌರವವನ್ನು ಸಲ್ಲಿಸುವುದು.
ಶಿವಮಂತ್ರಗಳ ಇನ್ನೊಂದು ಅದ್ಭುತ ಪರಿಣಾಮವೆಂದರೆ ಇದರ ಪಠಣದಿಂದ ನಿಮ್ಮ ಜೀವನದ ದಿಕ್ಕು ಬದಲಾಗಬಹುದು. 

ಬ್ರಹ್ಮಾಂಡದ ಸೃಷ್ಟಿಕರ್ತನಾದ ಮಹಾದೇವ ಜಗತ್ತನ್ನೇ ಆಳುವವನು ಹಾಗೂ ಜಗತ್ತಿನ ಪ್ರತಿಯೊಂದು ಅಣು ಅಣುವನ್ನೂ ಬಲ್ಲವನು. ಹಾಗಾಗಿ ಶಿವನನ್ನು ಮಂತ್ರ ಪಠಣಗಳ ಮೂಲಕ ಪ್ರಾರ್ಥಿಸುವುದರಿಂದ ಯಶಸ್ಸನ್ನು ಗಳಿಸಬಹುದು. ಶಿವನನ್ನು ಮೆಚ್ಚಿಸಿಕೊಳ್ಳಲು ನೀವು ಹೇಳಬೇಕಾದ ಮಂತ್ರಗಳು ಇಲ್ಲಿದೆ 
ಶನಿವಾರ ಈ ಮಂತ್ರಗಳನ್ನು ಪಠಿಸಿ, ಸಂಕಷ್ಟಗಳಿಂದ ದೂರವಿರಿ

ಶ್ರೀ ಶಿವರಕ್ಷಾ ಸ್ತ್ರೋತ್ರ

ಒಮ್ಮೆ ಯಾಜ್ಞಾವಲ್ಕ್ಯ ಋಷಿಗಳ ಕನಸಿನಲ್ಲಿ ಬಂದ ನಾರಾಯಣನು ಶಿವ ರಕ್ಷಾ ಸ್ತ್ರೋತ್ರವನ್ನು ಹೇಳಿದರಂತೆ. ಮಹಾವಿಷ್ಣುವು ಹೇಳಿದ್ದನ್ನು ಬರೆದ ಯಜ್ಞಾವಲ್ಕ್ಯರ ಶಿವ ರಕ್ಷಾ ಸ್ತ್ರೋತ್ರದಲ್ಲಿ ಮೊದಲನೆಯ ಸಾಲಿನಲ್ಲಿ ಗಣೇಶನನ್ನು ನೆನೆಸಿಕೊಂಡು 'ಶ್ರೀ ಗಣೇಶಾಯ ನಮಃ' ಎಂದು ಬರೆದರಂತೆ. 

ನಂತರದ ಪ್ರತೀ ಶ್ಲೋಕದಲ್ಲಿಯೂ ಕೂಡಾ ಪ್ರತಿಯೊಂದು ಪದವೂ ಭಗವಂತನ ಶ್ರೇಷ್ಠತೆಯನ್ನು ಹಾಗೂ ನಮ್ಮನ್ನು ರಕ್ಷಿಸುವಂತೆ ಭಗವಂತನನ್ನು ಕೇಳಿಕೊಳ್ಳುವ ಪ್ರಾರ್ಥನೆಯು ಇದೆ.
ಶಿವನನ್ನು ಮಹಾದೇವ, ರುದ್ರನೆಂದೂ ಕರೆಯುವುದರಿಂದ ಶಿವ ರಕ್ಷಾ ಸ್ತ್ರೋತ್ರವನ್ನು ರುದ್ರ ಮಂತ್ರ ಹಾಗೂ ಮಹಾದೇವ ಮಂತ್ರವೆಂದೂ ಕರೆಯುತ್ತಾರೆ.

ಉಪಯೋಗ
ಶಿವರಕ್ಷಾ ಸ್ತ್ರೋತ್ರವನ್ನು ಪಠಿಸುವುದರಿಂದ ರಾಹು, ಕೇತುವಿನಿಂದಾಗುವ ಸಮಸ್ಯೆಗಳು ದೂರವಾಗುತ್ತದೆ
ನಿಮ್ಮ ಸುತ್ತಲೂ ರಕ್ಷಾ ಕವಚವನ್ನು ಸೃಷ್ಟಿಸಿ ದುಷ್ಟ ಶಕ್ತಿ, ಪಿಶಾಚಿಗಳು ಹತ್ತಿರ ಬರದಂತೆ ರಕ್ಷಿಸುತ್ತದೆ
ಪ್ರತಿನಿತ್ಯ ಪಠಿಸುವುದರಿಂದ ನಮ್ಮಲ್ಲಿರುವ ಭಯ ದೂರವಾಗುತ್ತದೆ

ಶಿವ ರಕ್ಷಾ ಸ್ತ್ರೋತ್ರವನ್ನು ಪ್ರತಿದಿನ 11 ಬಾರಿ ಅಥವಾ 108 ಬಾರಿ ಪಠಿಸುವುದರಿಂದ ನಿಮಗೆ ಮಂತ್ರ ಶಕ್ತಿಗಿರುವ ಪರಿಣಾಮದ ಅನುಭವವಾಗುತ್ತದೆ. ಯಶಸ್ಸು ಹಾಗೂ ಸಂಪತ್ತು ನಿಮ್ಮ ಮನೆಬಾಗಿಲಿಗೆ ಬಂದು ಸೇರುತ್ತದೆ.
ನಿಮ್ಮ ಎಲ್ಲಾ ಆಸೆಗಳೂ ನೆರವೇರುತ್ತದೆ
ಶ್ರೀಮಂತರಾಗಬೇಕೆಂಬ ಕನಸು ನಿಮ್ಮದೇ? ಗುರುವಾರದಂದು ತಪ್ಪದೇ ಈ ನಿಯಮ ಪಾಲಿಸಿ

ಶ್ರೀ ಶಿವಾಸ್ತವಃ: ಶಿವಾಸ್ತವಃ ಮಂತ್ರ ಕಂಡು ಬಂದಿದ್ದು ಜಾವಾ ದ್ವೀಪದಲ್ಲಿರುವ ಒಂದು ಶಿವ ದೇವಸ್ಥಾನದಲ್ಲಿ. ಶ್ಲೋಕದ ಆರಂಭದಲ್ಲಿ ' ಓಂ ನಮಃ ಶಿವಾಯ ಸರ್ವಾಯ ದೇವ ದೇವಾಯ ವಹಿ ನಮಃ' ಮಂತ್ರವಿದೆ. ಇದರ ಅರ್ಥವೆಂದರೆ ' ಸಂಪತ್ತಿಗೆ ದೇವನಾಗಿರುವವನಿಗೆ, ದೇವರಿಗೆ ದೇವನಾಗಿರುವವನಿಗೆ, ಎಲ್ಲಾ ಜ್ಞಾನವೂ ಉಳ್ಳಂತಹ ದೇವನಿಗೆ ನಾನು ನಮಸ್ಕರಿಸುತ್ತೇನೆ' ಎಂಬುದಾಗಿದೆ.
ಸಾವನ್ನೇ ಗೆದ್ದು ಬಂದವನು ಶಿವ. ಭೂಮಿ ಸೂರ್ಯ, ಗಾಳಿ, ಬಾನು ಹಾಗೂ ಪ್ರಕೃತಿಯನ್ನು ಆವರಿಸಿಕೊಂಡವನು ಈತನೇ. ಹಾಗಾಗಿ ಆಧ್ಯಾತ್ಮಿಕ ಅಲೌಕಿಕ ಶಕ್ತಿಗಾಗಿ ಇವೆಲ್ಲವನ್ನೂ ಪ್ರಾರ್ಥಿಸುತ್ತೇವೆ. ಶಿವನ ಆಶೀರ್ವಾದದಿಂದಲೇ ಎಲ್ಲಾ ಕೆಲಸಗಳು ಸುಸೂತ್ರವಾಗಿ ನೆರವೇರುವುದು.

ಉಪಯೋಗ:

ದೇವರು ನಮ್ಮ ಚಿಂತನೆಗೆ ಮೀರಿದ ಸಾಮರ್ಥ್ಯವನ್ನು ನೀಡುತ್ತಾನೆ.

ಶಿವಾಸ್ತವಃ ಪಠಿಸುವುದರಿಂದ ನಮ್ಮ ನಡತೆಯಲ್ಲಿ ಬದಲಾವಣೆ ಹಾಗೂ ಒಳ್ಳೆಯ ಗುಣಗಳು ಬೆಳೆಯುತ್ತವೆ.

ದೇವರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಪಠಿಸುವುದರಿಂದ ಯಶಸ್ಸನ್ನು ಪಡೆಯಬಹುದು.

ಇನ್ನೂ ಮಕ್ಕಳಾಗಿಲ್ಲವೇ? ಈ ಮಂತ್ರವನ್ನು ಪಠಿಸಿದರೆ ಶೀಘ್ರವೇ ಗರ್ಭಧಾರಣೆಯಾಗುವುದು

ಶ್ರೀ ಶಿವಾಷ್ಟಕಂ:

ಸರ್ವಶಕ್ತ ಭಗವಂತನ ಶ್ರೇಷ್ಠತೆ ಮತ್ತು ಶಕ್ತಿಯನ್ನು ಶಿವಾಷ್ಟಕಂ ವಿವರಿಸುತ್ತದೆ. ಶಿವಾಷ್ಟಕಂನ್ನು ಭಕ್ತಿಯಿಂದ ಪಠಿಸಿದರೆ ಶಿವನನ್ನು ಮೆಚ್ಚಿಸಬಹುದು. ದೇವರು ನಮ್ಮಿಂದ ಯಾವುದೇ ಭೌತಿಕ ವಸ್ತುವನ್ನು ಬಯಸಲಾರ ಹೊರತಾಗಿ ಭಕ್ತಿಯನ್ನಷ್ಟೇ ಬಯಸುತ್ತಾನೆ.

ಅಷ್ಟಕಂ ಎಂದರೆ ಎಂಟು. ಇದು ಸಮಯಕ್ಕಿಂತ ಮಿಗಿಲಾದ ಪರಮಾತ್ಮನಿಗೆ ಸಲ್ಲಿಸುವಂತಹ ಭಕ್ತಿ. ಅಷ್ಟಕಂ ಬ್ರಹ್ಮಾಂಡದ ದೇವನಾದ, ಎಲ್ಲರನ್ನೂ ರಕ್ಷಿಸುವ, ಸರ್ವವ್ಯಾಪಿಯಾದ ಶಿವನ ಮಹಿಮೆಯನ್ನು ಸಾರುತ್ತದೆ. ಅಷ್ಟಕಂನಲ್ಲಿ ಶಿವನನ್ನು ಗಿರೀಶ, ಶಂಕರ, ಗಣೇಶ, ಶಂಭು, ಮಹಾಕಾಲ ಮುಂತಾದ ಹೆಸರುಗಳಿಂದ ಕರೆಯಲಾಗಿದೆ.

ಉಪಯೋಗ

ಯಾರು ಶಿವಾಷ್ಟಕವನ್ನು ದಿನನಿತ್ಯ ಪಠಿಸುತ್ತಾರೋ ಅವರು ಭಗವಂತನಿಗೆ ಹತ್ತಿರವಾಗುತ್ತಾನೆ. ಭಗವಂತನು ಭಕ್ತನ ಜೊತೆಗೆ ಇದ್ದು ಭಕ್ತನ ಇಷ್ಟಾರ್ಥವನ್ನು ಪೂರೈಸುತ್ತಾನೆ.

ಶಿವಾಷ್ಟಕ ಪಠಣವು ದುಷ್ಟ ಶಕ್ತಿಗಳಿಂದ ಹಾಗೂ ಋಣಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ.
ಪ್ರತಿದಿನದ ಜಪದ ಪರಿಣಾಮವಾಗಿ ನೀವು ಯಶಸ್ಸು ಹಾಗೂ ಜೀವನದಲ್ಲಿ ಸಂತೋಷವನ್ನು ಪಡೆಯುತ್ತೇವೆ.

ಶಿವಶ್ಲೋಕವನ್ನು ಪಠಿಸುವುದರಿಂದ ನಿಮ್ಮ ಜೀವನ ಗುಣಮಟ್ಟವನ್ನು ವೃದ್ಧಿಸಬಹುದು. ನಿಮ್ಮ ಗುರಿಯನ್ನು ಸೇರಲು ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.

ಪ್ರತಿನಿತ್ಯ ಯಾರು ಶಿವಾಷ್ಟಕಂನ್ನು ಜಪಿಸಿ ಧ್ಯಾನ ಮಾಡುತ್ತಾರೋ ಅವರು ಜೀವನದಲ್ಲಿ ಎಂದಿಗೂ ವೈಫಲ್ಯವನ್ನು ಕಾಣುವುದಿಲ್ಲ

ಪರಿಣಾಮಕಾರಿ ಶ್ಲೋಕದ ಪಠಣದಿಂದ ನೀವು ಆಧ್ಯಾತ್ಮಿಕ ಶಕ್ತಿ ಹಾಗೂ ನಿಮ್ಮ ಜೀವನದಲ್ಲಿ ಆಗುವಂತಹ ಪವಾಡಗಳನ್ನು ಕಾಣಬಹುದು
ಶಿವಾಷ್ಟಕಂನ್ನು ಪ್ರತಿದಿನ ಒಂದು ಅಥವಾ ಎರಡು ಬಾರಿ ಪಠಿಸಿದರೆ ನಿಮ್ಮ ಸುಪ್ತ ಪ್ರಜ್ಞೆ ಬದಲಾಗುತ್ತದೆ
ವೇದಸಾರ ಶಿವ ಸ್ತೋತ್ರಂ
ವೇದ ಸಾರ ಶಿವ ಸ್ತೋತ್ರ ಹೇಳುವಂತೆ 'ಮಹಾದೇವ ಆದಿ ಮತ್ತು ಅಂತ್ಯ ಇಲ್ಲದವನು. ಹುಟ್ಟು ಹಾಗೂ ಸಾವು ಇರದವನು ಈಶ್ವರ. ಬ್ರಹ್ಮಾಂಡವೂ ಶಿವನ ಒಂದು ರೂಪವಾಗಿದ್ದು, ಜಗತ್ತಿನ ನಡೆಯುವ ಎಲ್ಲಾ ಘಟನೆಗಳಿಗೂ ಕಾರಣಕರ್ತನೂ ಶಿವನೇ ಆಗಿದ್ದಾನೆ''.

ಉಪಯೋಗ

ಮುಂಜಾನೆ ವೇದಸಾರ ಶಿವ ಸ್ತೋತ್ರವನ್ನು ಪಠಿಸಿದರೆ ಶಿವನ ಆಶೀರ್ವಾದವನ್ನು ಪಡೆಯುವಿರಿ.

ಪ್ರತಿದಿನ ಪಠಿಸಿದರೆ ನಾವು ಸಂಪೂರ್ಣ ಬದಲಾವಣೆಯನ್ನು ಕಾಣಬಹುದು.

 ನಮ್ಮ ಚಿಂತನೆ ಹಾಗೂ ನಡತೆಯಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು.ಸ್ತೋತ್ರದ ಪಠಣದಿಂದ ಅಲೌಕಿಕ ಸಾಮರ್ಥ್ಯ ಹಾಗೂ ದೈವೀಕ ಶಕ್ತಿಯನ್ನು ಪಡೆಯಬಹುದು
ಶಿವಸ್ತೋತ್ರ ಪಠಣದಿಂದ ಆರೋಗ್ಯ ವೃದ್ಧಿಯಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಬದಲಾವಣೆಯನ್ನು ಕಾಣಬಹುದು.

ನಿತ್ಯ ಪಠಣದಿಂದ ನಮ್ಮ ಜೀವನಕ್ಕೆ ಬೇಕಾದ ಅಗತ್ಯಗಳು ಹಾಗೂ ಹಣ ಹಾಗೂ ಇನ್ನಿತರ ಆಸೆಗಳು ಈಡೇರುತ್ತದೆ

ನಿಮ್ಮ ಯಶಸ್ವೀ ಜೀವನದ ನಂತರ ನೀವು ಮಹಾದೇವನನ್ನು ಕಾಣುವ ಅದೃಷ್ಟವಂತರಾಗುತ್ತೀರಿ
ಶಿವರಾತ್ರಿ ಮಹಾಕಾಳೇಶ್ವರನ ದಿನವಾಗಿರುವುದರಿಂದ, ಅಂದು ಪಠಿಸಿದರೆ ಪುಣ್ಯ ಪ್ರಾಪ್ತಿಯಾಗುವುದು.
ನೀವು ಧ್ಯಾನ ಮಾಡುವಾಗ ಯೋಗ ಮಾಡುವಾಗಲೂ ಇದನ್ನು ಪಠಿಸಬಹುದು

ಮಾನಸಿಕ ಒತ್ತಡದಿಂದ ಹೊರಬರಲು ಈ ಮಂತ್ರಗಳನ್ನು ಪಠಿಸಿದರೆ ಒಳ್ಳೆಯದು

ಲಿಂಗಾಷ್ಟಕಂ

ಲಿಂಗಾಷ್ಟಕಂ ಎಂದರೆ ದೇವರ ಸ್ವರೂಪವಾದ ಶಿವಲಿಂಗದ ಅರ್ಚನೆ. ಲಿಂಗಾಷ್ಟಕಂನ ಪ್ರತಿಯೊಂದು ಸಾಲುಗಳೂ ಶಿವಲಿಂಗದ ವೈಭವವನ್ನು ಪ್ರಸ್ತುಪಡಿಸುತ್ತವೆ. 

ಲಿಂಗ ಪುರಾಣದಲ್ಲೂ ಈ ಮಹಾದೇವ ಮಂತ್ರದ ಉಲ್ಲೇಖವನ್ನು ಮಾಡಲಾಗಿದೆ. ' ಬ್ರಹ್ಮ ಮುರಾರಿ ಸುರಾರರ್ಚಿತ ಲಿಂಗಂ'' ಎಂಬ ಆರಂಭದ ಶ್ಲೋಕದಲ್ಲಿ ಬ್ರಹ್ಮ, ಶ್ರೀ ವಿಷ್ಣು ಹಾಗೂ ದೇವತೆಗಳೆಲ್ಲರೂ ಶಿವಲಿಂಗವನ್ನು ಪೂಜಿಸಲ್ಪಡುತ್ತಾರೆ ಎನ್ನುವ ಅರ್ಥವನ್ನು ಕಾಣಬಹುದು

ಉಪಯೋಗ
ಲಿಂಗಾಷ್ಟಕವನ್ನು ಪಠಿಸುವುದರಿಂದ ನೀವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ ಪಡುತ್ತಿರುವ ಕಷ್ಟಗಳೆಲ್ಲವೂ ದೂರವಾಗುತ್ತದೆ
ಲಿಂಗಾಷ್ಟಕ ಪಠಣದಿಂದ ಮಾನಸಿಕ ಒತ್ತಡವೂ ದೂರವಾಗುವುದು
ಲಿಂಗಾಷ್ಟಕ ಪಾರಾಯಣದಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುವುದು ಹಾಗೂ ಆರೋಗ್ಯ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದು
ವಿದೇಶ ಪ್ರಯಾಣದಲ್ಲಿ ಆಸಕ್ತಿ ಇದ್ದಲ್ಲಿ ಲಿಂಗಾಷ್ಟಕವನ್ನು ಪಠಿಸಿದರೆ ನಿಜವಾಗಿಯೂ ವಿದೇಶ ಪ್ರಯಾಣ ಯೋಗ ಒದಗಿ ಬರುವುದು
ಯಾವುದು ಸಾಧ್ಯವಾಗುವುದಿಲ್ಲವೆಂದು ಅಂದುಕೊಂಡಿದ್ದೀರೋ ಅದು ಪವಾಡವೆಂಬಂತೆ ನಡೆಯುವುದು.
ಅಪಾರವಾದ ಸಂಪತ್ತು ಹಾಗೂ ಶ್ರೀಮಂತಿಕೆ ಮನೆಗೆ ಹರಿದು ಬರುವುದು
ಮಂತ್ರ ಪಠಣದಿಂದ ನಿಮಗೆ ಸಿಗುವಂತಹ ಯಶಸ್ಸು ಹಾಗೂ ಸಂತೋಷವನ್ನು ನೀವು ನಂಬಲು ಸಾಧ್ಯವಿಲ್ಲ
ಈ ಮಂತ್ರವನ್ನು ಬೆಳಗ್ಗೆ ಶಿವಲಿಂಗವಿರುವ ದೇವಸ್ಥಾನದಲ್ಲಿ ಪಠಿಸುವುದು ಒಳ್ಳೆಯದು. ಬೆಳಗ್ಗೆ ಹಾಗೂ ಸಂಜೆ ಪಠಿಸಿದರೂ ಒಳ್ಳೆಯದು

ಬಿಲ್ವಾಷ್ಟಕಂ

ನಿರಾಕಾರನಾದ ದೇವರನ್ನು ಪೂಜಿಸುವಾಗ ಬಿಲ್ವ ಪತ್ರೆ ಹಾಗೂ ನೀರು ಅವಶ್ಯಕ. ದೇವರನ್ನು ಹಲವಾರು ವಿಧದ ಹೂವು ಹಾಗೂ ಹಣ್ಣುಗಳಿಂದ ಅರ್ಚಿಸುತ್ತೇವೆ. ಇದೇ ರೀತಿಯಾಗಿ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವಾಗ ಬಿಲ್ವಾಷ್ಟಕಂನ್ನು ಪಠಿಸಿದರೆ ಒಳ್ಳೆಯದು.
ಬಿಲ್ವಾಷ್ಟಕಂ ಶಿವನನ್ನು ಮೆಚ್ಚಿಸಲು ಬಿಲ್ವ ಪತ್ರೆಯನ್ನು ಹೇಗೆ ಅರ್ಪಿಸುವುದು ಎನ್ನುವುದನ್ನು ವಿವರಿಸುತ್ತದೆ. ಶಿವ ಪುರಾಣದಲ್ಲಿ ಬಿಲ್ವದ ಉಪಯೋಗ ಕುರಿತು ಅನೇಕ ಉಲ್ಲೇಖಗಳಿವೆ.

ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಬಿಲ್ವಾಷ್ಟಕವನ್ನು ಶಿವ ಅಭಿಷೇಕ ಮಂತ್ರವಾಗಿ ಪಠಿಸಬಹುದು. ಹೀಗೆ ಮಂತ್ರ ಪಠಿಸುವಾಗ ಶಿವಲಿಂಗಕ್ಕೆ ಬಿಲ್ವ ಪತ್ರೆ ಹಾಗೂ ನೀರಿನಿಂದ ಅರ್ಚಿಸಬೇಕು. ಜೊತೆಗೆ 'ಓಂ ನಮಃ ಶಿವಾಯಃ'' ಶಿವ ಪಂಚಾಕ್ಷರಿಯನ್ನೂ ಪಠಿಸಬಹುದು.
ಬಿಲ್ವಪತ್ರೆಯನ್ನು ಅರ್ಚಿಸುವ ಮೊದಲು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬಿಲ್ವಪತ್ರೆಯಲ್ಲಿ ಯಾವುದೇ ತೂತು, ಅಥವಾ ಎಲೆಯು ಹಾಳಾಗಿರಬಾರದು, ಪೂರ್ಣವಾಗಿರಬೇಕು.ಶಿವಭಕ್ತ ನಂದಿಕೇಶ್ವರನೂ ಕೂಡಾ ಬಿಲ್ವಪತ್ರೆಯನ್ನು ಅರ್ಪಿಸಿಯೇ ರುದ್ರನಿಂದ ಆಶೀರ್ವಾದ ಪಡೆದುಕೊಂಡಿದ್ದಾನೆ.

ಉಪಯೋಗ
ಒಂದು ಬಾರಿ ಬಿಲ್ವಾಷ್ಟಕ ಪಠಣವನ್ನು ಆರಂಭಿಸಿದ ಮೇಲೆ ಶಕ್ತಿಯು ನಿಮ್ಮ ದೇಹದಲ್ಲಿ ಹರಿಯುವುದನ್ನು ಗಮನಿಸಬಹುದು. ನಮ್ಮ ಎದುರಿರುವಂತಹ ನಿಜವಾದ ಸಂಗತಿಗಳು ಹಾಗೂ ಗುರಿಯ ಅರಿವು ನಿಮಗಾಗುತ್ತದೆ. ಸಂಪತ್ತಿನ ವೃದ್ಧಿಯನ್ನು ನೀವು ಕಾಣುತ್ತೀರಿ.

ಚಂದ್ರಶೇಖರಾಷ್ಟಕಂ:

 ಎಲ್ಲಾ ರೋಗ ನಿವಾರಣೆಗಾಗಿ
ಪುರಾಣದ ಪ್ರಕಾರ ' ಚಂದ್ರನು ದಕ್ಷನಿಂದ ಶಾಪಕ್ಕೊಳಗಾದಾಗ ಚಂದ್ರ ದೇಹವೂ ದಿನೇ ದಿನೇ ಕ್ಷಯವಾಗುತ್ತಾ ಹೋಗುತ್ತದೆ. ಚಿಂತಾಕ್ರಾಂತನಾದ ಚಂದ್ರನು ಋಷಿಯಲ್ಲಿ ಪರಿಹಾರ ಕೇಳಿದಾಗ ಋಷಿಯು 10 ಕೋಟಿ ಬಾರಿ ಮೃತ್ಯುಂಜಯ ಮಂತ್ರವನ್ನು ಪಠಿಸು ಎಂದು ಹೇಳುತ್ತಾನೆ. ಋಷಿಯ ಆಣತಿಯಂತೆ ಚಂದ್ರನು ಸೋಮನಾಥಕ್ಕೆ ತೆರಳಿ ಮೃತ್ಯುಂಯ ಮಂತ್ರವನ್ನು ಪಠಿಸುತ್ತಾನೆ.

ಆರು ತಿಂಗಳ ತಪಸ್ಸಿನ ನಂತರ ಶಿವನು ಪ್ರತ್ಯಕ್ಷನಾಗಿ ಚಂದ್ರನಿಗೆ ದರ್ಶನ ನೀಡುತ್ತಾನೆ. 'ಸಂಪೂರ್ಣವಾಗಿ ಶಾಪವನ್ನು ತೊಡೆದು ಹಾಕಲು ಸಾಧ್ಯವಿಲ್ಲವಾದ್ದರಿಂದ ನನ್ನ ವರದಿಂದ ನೀನು ವೃದ್ಧಿಗೊಳ್ಳುವೆ. ನೀನು ತಿಂಗಳಲ್ಲಿ 15 ದಿನ ಅಂದರೆ ಅಮಾವಾಸ್ಯೆಯ ಮರುದಿನದಿಂದ ಹುಣ್ಣಿಮೆಯ ದಿನದವರೆಗೆ ವೃದ್ಧಿಗೊಳ್ಳುವೆ, ಹುಣ್ಣಿಮೆಯ ಮಾರನೆ ದಿನದಿಂದ ಅಮಾವಾಸ್ಯೆಯವರೆಗೆ ಕ್ಷಯಿಸುವೆ ಎಂದು ವರ ನೀಡುತ್ತಾನೆ.

ಶಿವನು ಚಂದ್ರನ ಮುಖದ ಮೇಲಿನ ನೋವನ್ನು ನಿವಾರಿಸಿ, ಚಂದ್ರನು ಶಿವನ ತಲೆಯ ಮೇಲೆ ಇರುವಂತಹ ವರವನ್ನು ನೀಡುತ್ತಾನೆ. ಹಾಗಾಗಿ ಚಂದ್ರನನ್ನು ಶಿರದ ಮೇಲೆ ಧರಿಸಿದ ಶಿವನನ್ನು ಚಂದ್ರಶೇಖರನೆಂದು ಕರೆಯುತ್ತಾರೆ.

ಚಂದ್ರಶೇಖರನ್ನು ಆರಾಧಿಸಲು ಹಾಗೂ ಪೂಜಿಸಲು ಚಂದ್ರಶೇಖರಾಷ್ಟಕವನ್ನು ಪಠಿಸಬಹುದು. ಚಂದ್ರಶೇಖರ ಎಂಬ ನಾಮದಿಂದ ಆರಂಭವಾಗುವ ಚಂದ್ರಶೇಖರಾಷ್ಟಕವು ಎಲ್ಲಾ ವಿಧದ ರೋಗಗಳಿಂದ ರಕ್ಷಿಸುತ್ತದೆ.

ಉಪಯೋಗ
ಈ ಮಹಾದೇವ ಮಂತ್ರವನ್ನು ಪಠಿಸಿದರೆ ಎಲ್ಲದರಲ್ಲೂ ಯಶಸ್ಸು ನಿಮ್ಮದಾಗುವುದು
ಚಂದ್ರಶೇಖರಾಷ್ಟಕವು ಶಿವನ ಎಲ್ಲಾ ಗುಣಗಳನ್ನು ಸಾರುವುದರಿಂದ ಚಂದ್ರನಂತೆಯೇ ರೋಗದಿಂದ ಗುಣಮುಕ್ತರಾಗಬಹುದು ಹಾಗೂ ಎಲ್ಲಾ ವಿಧದಲ್ಲೂ ಸಂತೋಷವು ನಿಮ್ಮದಾಗುವುದು
ಚಂದ್ರಶೇಖರಾಷ್ಟಕದ ಪಠಣವು ಭಕ್ತನ ಎಲ್ಲಾ ನೋವುಗಳನ್ನೂ ನಿವಾರಿಸುತ್ತದೆ ಹಾಗೂ ಮುಂದೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.
ಮಹಾದೇವನ ರಕ್ಷಣೆಯಿಂದ ಯಾವ ರೋಗವೂ ದೇಹವನ್ನು ಪ್ರವೇಶಿಸುವುದಿಲ್ಲ

ಶಿವ ಪಂಚಾಕ್ಷರಿ: 

ಯಶಸ್ಸನ್ನು ಪಡೆಯಲು ಪರಿಣಾಮಕಾರಿ ಮಂತ್ರ
ಓಂ ನಮಃ ಶಿವಾಯಃ ಮಂತ್ರವು ಎಲ್ಲಾ ಮಂತ್ರಗಳಿಗಿಂತಲೂ ಪರಿಣಾಮಕಾರಿದ ಶಿವ ಮಂತ್ರವಾಗಿದೆ. ಯಶಸ್ಸನ್ನು ಪಡೆಯಲು ಈ ಶಿವ ಮಂತ್ರವನ್ನು 108 ಅಥವಾ 1008 ಬಾರಿ ಪಠಿಸಬೇಕು ಎನ್ನುವುದನ್ನು ಶಿವ ಪುರಾಣ ಹಾಗೂ ಲಿಂಗ ಪುರಾಣದಲ್ಲೂ ಉಲ್ಲೇಖಿಸಲಾಗಿದೆ.

ನೀವು ಈ ಮಂತ್ರವನ್ನು ಯಾವ ಸಮಯದಲ್ಲಾದರೂ, ಯಾವ ಸ್ಥಳದಲ್ಲಾದರೂ ಪಠಿಸಬಹುದು, ಇಲ್ಲಿ ಬೇಕಾಗಿರುವುದು ಭಕ್ತಿ ಮಾತ್ರ. ಮನಸ್ಸೂ ಕೂಡಾ ಭಗವಂತನನ್ನು ಧ್ಯಾನಿಸುವುದರಿಂದ ಅಧ್ಬುತ ಪರಿಣಾಮವನ್ನು ನೀವು ಕಾಣಬಹುದು

ಉಪಯೋಗ
ಶಿವ ಪಂಚಾಕ್ಷರಿಯನ್ನು 1008 ಬಾರಿ ಪಠಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ
ಯಾರು 108 ಬಾರಿ ಶಿವ ಮಂತ್ರವನ್ನು ಪಠಿಸುತ್ತಾರೋ ಅವರಿಗೆ ಉದ್ಯೋಗ, ಸಂಪತ್ತು, ಉತ್ತಮ ಆರೋಗ್ಯ ಹಾಗೂ ಹಣ ಪ್ರಾಪ್ತಿಯಾಗುವುದು
ಶಿವ ಪಂಚಾಕ್ಷರಿಯನ್ನು ಪ್ರತಿನಿತ್ಯ ತಪ್ಪದೇ ಪಠಿಸುವುದರಿಂದ ಅದ್ಭುತ ಪರಿಣಾಮ ಹಾಗೂ ಅನುಭೂತಿಯನ್ನು ಪಡೆಯುತ್ತೀರಿ

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಬರ್ಬರಿಕ

|•| ಬರ್ಬರಿಕ |•|

"ಬರ್ಬರಿಕ" ಮಹಾಭಾರತದಲ್ಲಿ ಹೆಚ್ಚು ಪ್ರಚಲಿತವಲ್ಲದ ಪಾತ್ರಧಾರಿ ಎಂಬುದು ನಿಜ.

ಯಾರು ಈ ಬರ್ಬರಿಕ...?

ಇವನ ತಂದೆ ಘಟೋತ್ಕಚ, ತಾಯಿ ಅಹಿಲವತಿ (ಮೌರ್ವಿ) ಅಂದರೆ, ಬರ್ಬರಿಕನ ತಾತ ಭೀಮಸೇನ.

ಬರ್ಬರಿಕ ಪಾಂಡವರು ಮತ್ತು ಕೌರವರಲ್ಲಿ ಅತ್ಯಂತ ಬಲಶಾಲಿ. ಧನುರ್ವಿದ್ಯೆಯಲ್ಲಿ ಅರ್ಜುನ, ಕರ್ಣರನ್ನೂ ಮೀರಿಸುವಂತಹ ಬಿಲ್ಲುಗಾರ. ‌ಇವನ ಸರಿಸಮನಾದವರು ಯಾರೂ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ಇವನ ಪರಾಕ್ರಮ.

ಕುರುಕ್ಷೇತ್ರದ ಯುದ್ಧಕ್ಕೆ ಮೊದಲು ಶ್ರೀಕೃಷ್ಣ ಪಾಂಡವರು ಹಾಗೂ ಕೌರವರನ್ನು ಕುರಿತು ಕೇಳಿದ ಒಂದು ಪ್ರಶ್ನೆ....?
ಭೀಷ್ಮ, ದ್ರೋಣ, ದುರ್ಯೋಧನ, ಧರ್ಮರಾಯ ಭೀಮಸೇನ, ಅರ್ಜುನ ಮುಂತಾದವರಲ್ಲಿ ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು? ಎಂಬ ಪ್ರಶ್ನೆ ಕೇಳುತ್ತಾನೆ.

ಎಲ್ಲ ಮಹಾರಥಿಗಳಿಂದ ಬಂದ ಉತ್ತರ 20, 24, 26, 28 ದಿನಗಳು ಹೀಗೆ ವಿಧವಿಧವಾದ ಉತ್ತರಗಳು ಬಂದವು.
ಶ್ರೀಕೃಷ್ಣ ಅದೇ ಪ್ರಶ್ನೆಯನ್ನು 'ಬರ್ಬರಿಕ'ನಲ್ಲಿ ಕೇಳಿದಾಗ ಬಂದ ಉತ್ತರ.? ಕುರುಕ್ಷೇತ್ರ ಯುದ್ಧ ಮುಗಿಸಲು ಕೆಲವು ನಿಮಿಷಗಳು ಸಾಕು ಎಂದ. ಶ್ರೀಕೃಷ್ಣ ಕೆಲ ನಿಮಿಷ ಆಶ್ಚರ್ಯದಿಂದ ಅವಕ್ಕಾಗಿ, ಏನೂ ಅರ್ಥವಾಗದೆ, ಮಾತನಾಡದೆ ಮೌನಕ್ಕೆ ತೆರೆಳಿದ.

|ಬರ್ಬರಿಕ ಹಾಗೂ ಶ್ರೀಕೃಷ್ಣನ ನಡುವಿನ ಸಂಭಾಷಣೆ|

ಶ್ರೀಕೃಷ್ಣ:- ನಿನಗೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಹಾಗೂ ಪಾಂಡವರ ಜೊತೆಯಲ್ಲಿ ಎಷ್ಟು ಅಕ್ಷೋಹಿಣಿ ಸೈನ್ಯಗಳು ಪಾಲ್ಗೊಳ್ಳುತ್ತವೆ ಎಂಬ ಬಗ್ಗೆ ತಿಳಿದಿದೆಯೇ? ಅಷ್ಟೊಂದು ಸೈನ್ಯವನ್ನು ಕೆಲವು ನಿಮಿಷಗಳಲ್ಲಿ ಹೇಗೆ ಧ್ವಂಸ ಮಾಡಲು ಸಾಧ್ಯ ಎಂಬ ಅರಿವಿದಿದೆಯೇ.?

ಬರ್ಬರಿಕ:- ಎಲೈ ಶ್ರೀಕೃಷ್ಣ ಪರಮಾತ್ಮನೇ, ನನಗೆ ಪರಶಿವನ ಅನುಗ್ರಹದಿಂದ ಕೇವಲ ಮೂರು ಬಾಣಗಳು ಪ್ರಾಪ್ತಿಯಾಗಿದೆ. ಅವುಗಳ ಸಾಮರ್ಥ್ಯಗಳ ಬಗ್ಗೆ ವಿವರಿಸುತ್ತೇನೆ, ಕೇಳು.

ಪರಶಿವನಿಂದ ಪ್ರಾಪ್ತಿಯಾದ ಮೂರು ಬಾಣಗಳನ್ನು ಎಷ್ಟು ಬಾರಿಯಾದರೂ ಉಪಯೋಗಿಸಬಹುದು. 

ಒಮ್ಮೆ ಬಿಟ್ಟ ಬಾಣ, ತನ್ನ ಗುರಿಯನ್ನು ತಲುಪಿ, ಕರ್ತವ್ಯವನ್ನು ಮುಗಿಸಿ ಮತ್ತೆ ಅಗ್ನಿ ದೇವತೆಯಿಂದ ಪ್ರಾಪ್ತವಾದ ನನ್ನ ಬತ್ತಳಿಕೆಗೆ ಬಂದು ಸೇರುತ್ತವೆ. ಹಾಗಾಗಿ ಅವುಗಳ ಕಾರ್ಯಾಚರಣೆಗೆ ಅಂತ್ಯವಿಲ್ಲ.

೧. ಮೊದಲನೆಯ ಬಾಣವು, ನಾನು ನನ್ನ ಸಂಕಲ್ಪದಂತೆ, ಯಾವ ವಸ್ತು, ಯಾವ ಯಾವ ವ್ಯಕ್ತಿಗಳನ್ನು ಗುರಿಯಾಗಿಸಿ ಬಾಣ ಪ್ರಯೋಗ ಮಾಡಬೇಕೆಂಬುದನ್ನು ಗುರುತಿಸುತ್ತದೆ.

೨. ಎರಡನೆಯ ಬಾಣವು, ನಾನು ನನ್ನ ಇಚ್ಛೆಯಂತೆ ಗುಂಪಿನಲ್ಲಿ ಇರುವ ಯಾವ ವಸ್ತುವೇ ಆಗಲಿ, ಯಾವ ವ್ಯಕ್ತಿಯೇ ಆಗಲಿ ನಾಶ ಪಡಿಸಲು ಅಥವ ಧ್ವಂಸ ಮಾಡಲು ಇಚ್ಛಿಸುವುದಿಲ್ಲವೋ ಅವುಗಳನ್ನು ತಾನು ಗುರುತು ಮಾಡುತ್ತದೆ.

೩. ಇನ್ನು ಮೂರನೆಯ ಬಾಣವನ್ನು ಪ್ರಯೋಗಿಸಿದಾಗ, ಅದು ಮೊದಲನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳನ್ನು ಒಟ್ಟಾಗಿ ಕ್ಷಣಾರ್ಧದಲ್ಲಿ ನಾಶಮಾಡುತ್ತದೆ. ಜೊತೆಗೆ ಎರಡನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳಿಗೆ ಯಾವುದೇ ತೊಂದರೆ, ನೋವು ಅನುಭವಿಸು ಸಂಧರ್ಭ ಬರಲಾರದಂತೆ ಕಾಪಾಡುತ್ತದೆ.

ಈ ಎಲ್ಲ ಕ್ರಿಯೆಯಗಳು ಕೇವಲ ಹಲವು ನಿಮಿಷಗಳಲ್ಲಿ ನಡೆದುಹೋಗುವುದು. ಹಾಗಾಗಿ, ನಾನು ಕುರುಕ್ಷೇತ್ರ ಯುದ್ಧದಲ್ಲಿ ಯಾವ ಯಾವ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ಧ್ವಂಸ ಮಾಡಬೇಕು, ಯಾರೆಲ್ಲರನ್ನು ಉಳಿಸಬೇಕು ಎಂಬ ಸಂಕಲ್ಪ ಮಾಡಿ ಬಾಣಗಳನ್ನು ಪ್ರಯೋಗ ಮಾಡಿದಲ್ಲಿ, ಉಳಿದ ಕೆಲಸಗಳನ್ನು ಆಯಾ ಬಾಣಗಳು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತವೆ. ನಂತರ ಬಾಣಗಳು ನನ್ನ ಬತ್ತಳಿಕೆಗೆ ಬಂದು ಸೇರುತ್ತವೆ.

ಶ್ರೀಕೃಷ್ಣ :- ಹಾಗಾದಲ್ಲಿ ಇಲ್ಲಿರುವ ಆಲದ ಮರದಲ್ಲಿ ಲಕ್ಷಾಂತರ ಎಲೆಗಳಿವೆ, ಈ ಎಲ್ಲ ಎಲೆಗಳನ್ನು ನಿನ್ನ ಮೊದಲನೆಯ ಬಾಣ ಗುರುತಿಸಿ, ನಂತರದ ಬಾಣ ಅವುಗಳನ್ನು ಒಟ್ಟುಗೂಡಿಸಿ ನಾಶಪಡಿಸಲು ಸಾಧ್ಯವೇ..?

ಬರ್ಬರಿಕ:- ನಿನ್ನ ಇಚ್ಛೆಯಂತೆ ನಾನು ಕಣ್ಣು ಮುಚ್ಚಿ ಮಂತ್ರೋಪದೇಶ ಮಾಡಿ ಮೊದಲ ಬಾಣ ಪ್ರಯೋಗ ಮಾಡುತ್ತೇನೆ. 

ಆ ಬಾಣವು ಎಲ್ಲ ಎಲೆಗಳನ್ನೂ ಗುರುತು ಮಾಡುತ್ತದೆ. ನಂತರದ ಬಾಣ, ಎಲ್ಲ ಎಲೆಗಳನ್ನು ಒಟ್ಟುಮಾಡಿ ಭಸ್ಮ ಮಾಡುತ್ತದೆ ಎಂದು ಹೇಳಿ ಕಣ್ಣು ಮುಚ್ಚಿ ಮಂತ್ರ ಉಪದೇಶಕ್ಕೆ ಮೊದಲಾದ.

ಅಷ್ಟರಲ್ಲಿ, ಬರ್ಬರಿಕನಿಗೆ ತಿಳಿಯದಂತೆ ಶ್ರೀಕೃಷ್ಣ ಮರದಿಂದ ಒಂದು ಎಲೆಯನ್ನು ಕಿತ್ತು ತನ್ನ ಪಾದದ  ಅಡಿಯಲ್ಲಿ ಇಟ್ಟು ಮರೆಮಾಚುತ್ತಾನೆ.

ಬಾಣವು ಮರದಲ್ಲಿನ‌‌ ಎಲ್ಲ ಎಲೆಗಳನ್ನು ಕ್ಷಣಾರ್ಧದಲ್ಲಿ ಗುರುತು ಮಾಡಿ, ಶ್ರೀಕೃಷ್ಣನ ಪಾದದ ಅಡಿಯಲ್ಲಿ ಬಚ್ಚಿಟ್ಟಿದ್ದ ಎಲೆಯನ್ನು ಗುರುತು ಮಾಡಲು ಮುಂದಾದಾಗ ಶ್ರೀಕೃಷ್ಣ ದಂಗು ಬಡಿದವನಂತೆ ತನ್ನ ಪಾದವನ್ನು ಮೇಲೆ ಎತ್ತಿದ. 

ಬರ್ಬರಿಕ ಇದನ್ನು ನೋಡಿ ಮುಗುಳ್ನಕ್ಕು ಸುಮ್ಮನಾದ. ಶ್ರೀಕೃಷ್ಣನು ಬಾಣಗಳ ಶಕ್ತಿಯನ್ನು ನೋಡಿ ಬೆರಗಾದ.

ಎಲೈ ಬರ್ಬರಿಕನೇ ನಿನಗೆ ಪರಶಿವನ ಅನುಗ್ರಹ,  ತಪಸ್ಸಿನ ಶಕ್ತಿ, ಬಾಣಗಳ ತೀಕ್ಷಣತೆ ನನ್ನನ್ನು ಬೆರಗಾಗಿಸಿದೆ. 
ಹಾಗಿದ್ದಲ್ಲಿ ನೀನು ಕುರುಕ್ಷೇತ್ರ ಯುದ್ಧದಲ್ಲಿ ಯಾರ ಪರವಾಗಿ ಯುದ್ಧ ಮಾಡಲು ಸಂಕಲ್ಪ ಮಾಡಿದ್ದೀಯ? ಎಂದ.

ಬರ್ಬರಿಕ:- ನಾನು ನನ್ನ ತಾಯಿ, ಹಾಗೂ ನನ್ನ ಗುರುಗಳಿಗೆ ನೀಡಿದ ವಾಗ್ದಾನದಂತೆ, ಯುದ್ಧದಲ್ಲಿ ಯಾವ ಸೈನ್ಯವು ದುರ್ಬಲವೋ ಅವರೊಡನೆ ಜೊತೆಗೂಡಿ ಯುದ್ಧ ಮಾಡುತ್ತೇನೆ. ಬಲಿಷ್ಠವಾದ ಸೈನ್ಯದ ಜೋತೆ ಎಂದಿಗೂ ಹೋಗುವುದಿಲ್ಲ.! ಎಂದ.

ಶ್ರೀಕೃಷ್ಣ ವಿಚಲಿತನಾದ, ಇವನೇನಾದರೂ ದುರ್ಬಲರಾದ ಕೌರವರ ಜೊತೆಗೂಡಿದರೆ, ಅಲ್ಲಿಗೆ ಪಾಂಡವರ ಕಥೆ ಮುಗಿದಂತೆಯೇ, ಒಂದು ವೇಳೆ ಪಾಂಡವರು ಎಲ್ಲೇ ಅಡಗಿದ್ದರೂ ಅವರನ್ನು ಬಾಣವು ಹಿಂಬಾಲಿಸುವುದು ದಿಟ, ಹಾಗಾಗಿ ಅವರು ಬದುಕುಳಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ.

ನಂತರ......
ಶ್ರೀಕೃಷ್ಣ:- ಎಲೈ ಬರ್ಬರಿಕನೇ, ನಿನ್ನ ಮಾತೃ ಭಕ್ತಿ, ಗುರು ಭಕ್ತಿ, ಶೌರ್ಯ, ಪರಾಕ್ರಮಗಳನ್ನು ಮೆಚ್ಚಿದ್ದೇನೆ. ನೀನು ಸಮಾಜದ ಉದ್ಧಾರಕ್ಕಾಗಿ ಯಾವುದಾದರೂ ವರವನ್ನು ಕೇಳು, ಅನುಗ್ರಹಿಸುತ್ತೇನೆ.

ಬರ್ಬರಿಕ :- ಮಾಹಾ ಮೂರ್ತಿಯಾದ ಶ್ರೀಕೃಷ್ಣನೇ, ನನಗೆ ಯಾವುದೇ ಅಪೇಕ್ಷೆಗಳಿಲ್ಲ. ನನ್ನಿಂದ ಸಮಾಜಕ್ಕೆ ಉಪಕಾರ ಮತ್ತು ಧರ್ಮವನ್ನು ಕಾಪಾಡುವ  ಯಾವ ಕೆಲಸವಾದರೂ ನಿನ್ನ ಆಜ್ಞೆಬಯಂತೆ ನೆರವೇರಿಸುತ್ತೇನೆ.

ಶ್ರೀಕೃಷ್ಣ:- ನಾನು ಏನೇ ಹೇಳಿದರೂ, ಮಾಡಲು ಸಿದ್ದನಾದ ನೀನು ನಿನ್ನ ಶಿರಸ್ಸನ್ನು ಕತ್ತರಿಸಿ ಕೊಡಬಲ್ಲೆಯಾ?
 
ಬರ್ಬರಿಕ:- ನನ್ನ ಶಿರಚ್ಛೇದನದಿಂದ ಧರ್ಮಕ್ಕೆ ಜಯ ಸಿಗುವುದೇ ಆದಲ್ಲಿ ನಾನು ಸಿದ್ಧ.‌ ಆದರೆ ನನ್ನದೊಂದು ಕೊನೆಯ ಕೋರಿಕೆ. ನಾನು, ಕೌರವರು ಹಾಗೂ ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧವನ್ನು ಮೊದಲಿಂದ, ಅಂತ್ಯದವರೆಗೂ ನೋಡಲು ಅವಕಾಶ ಕಲ್ಪಿಸುವಂತೆ ನನ್ನ ಕೋರಿಕೆ.

ಶ್ರೀಕೃಷ್ಣ :- ತಥಾಸ್ತು, ನಿನ್ನ ಕೋರಿಕೆ ಈಡೇರುವಂತಾಗಲಿ.

ಮರು ಕ್ಷಣವೇ ಶ್ರೀಕೃಷ್ಣನ ಚಕ್ರವು ಬರ್ಬರಿಕನ ಶಿರವನ್ನು ಕತ್ತರಿಸಿ, ಕುರುಕ್ಷೇತ್ರ ಯುದ್ಧ ನಡೆಯುವ ಸ್ಥಳ ಹತ್ತಿರವಿದ್ದ ಎತ್ತರದ ಗುಡ್ಡುಮೇಲೆ ಬಂದು ಬೀಳುತ್ತದೆ.

|ಕುರುಕ್ಷೇತ್ರ ಯುದ್ಧ|

ಯುದ್ಧದ ಹದಿನೆಂಟು ದಿನವೂ ಬರ್ಬರಿಕ ಯುದ್ಧದ ಆಗುಹೋಗುಗಳನ್ನು ಕಣ್ಣಾರೆ ನೋಡಿದ.

ಶ್ರೀಕೃಷ್ಣ:- ಬರ್ಬರಿಕನೇ,  ಕುರುಕ್ಷೇತ್ರ ಯುದ್ಧದಲ್ಲಿ  ಕೌರವರು ಸರ್ವ ಪತನ ಕಂಡು ಮೃತ್ಯು ಹೊಂದಿದರು. ನಿನ್ನ ಪ್ರಕಾರ ಪಾಂಡವರು  ಯುದ್ಧದಲ್ಲಿ ಜಯಗಳಿಸಲು ಪ್ರಮುಖ ಕಾರಣ, ಹಾಗೂ ಜಯದ ಪ್ರಮುಖ ಪಾತ್ರ ವಹಿಸಿದವರು ಯಾರು.?

ಬರ್ಬರಿಕ:- ಪರಮಾತ್ಮನೇ, ಇಲ್ಲಿ ಯಾರ ಶಕ್ತಿ, ಪರಾಕ್ರಮ ಎಂಬುದು ಏನೂ ಇಲ್ಲ. ಪಾಂಡವರು ಜಯಗಳಿಸಲು ಕೇವಲ ನಿನ್ನ ಅನುಗ್ರಹ ಮಾತ್ರ. ಇನ್ನು ಕೌರವರ ದಾಯಾದಿ ಮತ್ಸರ, ಅಸೂಯೆ, ದ್ವೇಷಗಳೇ ಅವರ ಅವನತಿಗೆ ಕಾರಣವಾಯಿತು.

ಶ್ರೀಕೃಷ್ಣ :- ನಿನ್ನ ಜನ್ಮವು ಸಾರ್ಥಕವಾಯಿತು. ನಿನಗೆ ಮೋಕ್ಷವನ್ನು ನೀಡಿ, ಸದ್ಗತಿ ಪ್ರಾಪ್ತಿಯಾಗುವಂತೆ ಅನುಗ್ರಹಿಸುತ್ತೇನೆ ಎಂಬುದಾಗಿ ಅಭಯ ನೀಡಿ ಶ್ರೀಕೃಷ್ಣ ಅದೃಶ್ಯನಾದ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಇಷ್ಟ ದೈವ ಕಂಡುಕೊಳ್ಳುವುದು ಹೇಗೆ ಮತ್ತು ಯಾರು ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು.

ಇಷ್ಟ ದೈವ ಕಂಡುಕೊಳ್ಳುವುದು ಹೇಗೆ ಮತ್ತು ಯಾರು ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು.

ಪ್ರತಿಯೊಬ್ಬರೂ ತಮ್ಮ ಕರ್ಮಗಳಿಗೆ  ಆನುಸಾರವಾಗಿ ಇಷ್ಟ ದೈವ ಯಾವುದು ಎಂದು ಕಂಡುಕೊಳ್ಳಬಹುದು. ನಿಮ್ಮ ಜಾತಕದಲ್ಲಿ ಪಂಚಮ ಸ್ಥಾನ ನೋಡಿಕೊಂಡು ಅಂದರೆ 5 ನೆ ಮನೆಯಲ್ಲಿ ಯಾವ ಗ್ರಹ ಇದೆ ಎಂದು ತಿಳಿದುಕೊಂಡು ಅದರ ಪ್ರಕಾರ ನೀವು ನಿಮ್ಮ ಇಷ್ಟ ದೈವವನ್ನು ಕಂಡುಹಿಡಿಯಬಹುದು. 

ಪಂಚಮ ಸ್ಥಾನವನ್ನು ಪೂರ್ವಪುಣ್ಯ ಸ್ಥಾನ ಎಂದು ಕೂಡ ಕರೆಯುತ್ತಾರೆ. ಪಂಚಮ ಸ್ಥಾನವೇ ಇಷ್ಟ ದೈವದ ಸ್ಥಾನ.

ಕೆಲವರು ಕುಲ ದೇವರು,ಇಷ್ಟ ದೇವರು ಎಂದು ಹೇಳುತ್ತಾರೆ ಹಾಗೆ ಹೇಳುವುದು  ತಪ್ಪು. ಇಷ್ಟ ದೇವರನ್ನು ಆರಾಧಿಸಿದರೆ ನಿಮ್ಮ ಕಷ್ಟಗಳು ದೂರಾಗುತ್ತವೆ.

ದೇವರು ಒಂದೇ ಆದರೆ ನಾಮ ಹಲವು. “ಓಂ ನಿತ್ಯಕಾಕ್ಷರಂ ಬ್ರಹ್ಮ”   ಅಂದರೆ  ಇರುವುದು ಒಂದೇ ದೇವರು ಅದೇ “ಪರಬ್ರಹ್ಮ” ದೇವರಿಗೆ  ಆಕಾರ ಇರುವುದಿಲ್ಲ ಮನುಷ್ಯನಿಗೆ ಅನುಕೂಲ ಆಗಲಿ ಅಂತ ಒಬ್ಬೊಬ್ಬರು ಒಂದೊಂದು ದೇವರನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಭಗವಂತ ಎಂದರೆ ಅಪ್ರತಿಮ ಶಕ್ತಿ, ಚೈತನ್ಯ.

ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕು ಎಂದರೆ ಆಧ್ಯಾತ್ಮಿಕ ಚಿಂತನೆ ಮಾಡಬೇಕು. ಭೋಜನ ಸಮಯದಲ್ಲಿ ಧನ್ಯವಾದ ಹೇಳಬೇಕು ನಮಗೆ ತಿನ್ನುವುದಕ್ಕೆ ಊಟ, ತಿಂಡಿ ಕೊಟ್ಟಿದಕ್ಕಾಗಿ ಭಗವಂತನಿಗೆ ಕೃತಜ್ಞತೆಯನ್ನು ಅರ್ಪಿಸಬೇಕು. ಹೀಗೆ ಗ್ರಂಥಗಳಲ್ಲಿ ಮತ್ತು ಭಗವತ್ಗೀತೆಯಲ್ಲಿ ಹೇಳಲಾಗಿದೆ.

ಆಸೆಗಳನ್ನು ಮನುಷ್ಯರು ಕಡಿಮೆ ಮಾಡಿಕೊಳ್ಳಬೇಕು. ಮನುಷ್ಯನಿಗೆ ಬರುವ ತೊಂದರೆಗಳಿಂದ ಪಾರಾಗಲು ಇಷ್ಟ ದೈವವನ್ನು ಪ್ರಾರ್ಥಿಸಬೇಕು ಆಗ ಆಂತರಿಕ ಆರಿವು ಹೆಚ್ಚುತ್ತದೆ.

ನಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳಿಗನುಸಾರ ಜಾತಕದಲ್ಲಿ 5 ನೇ ಮನೆಯಲ್ಲಿ ಯಾವ ಗ್ರಹವಿದೆ ಎಂದು ನೋಡಿ ,ಮತ್ತು ಯಾವ ದೆಸೆ ನೆಡೆಯುತ್ತಿದೆ ಎಂದು ತಿಳಿದು ಅದರ ಅನುಸಾರ ಇಷ್ಟ ದೈವವನ್ನು ಕಂಡುಕೊಳ್ಳಬೇಕು.

 ಯಾವ ಗ್ರಹದ ಪ್ರಭಾವ ಹೆಚ್ಚಿದೆ  ಎಂದು ನೋಡಿಕೊಳ್ಳಬೇಕು.ಎಲ್ಲದಕ್ಕೂ ಒಂದಾಣಿಕೆ ಇರಬೇಕು.  ನಮ್ಮ ದೇಹಕ್ಕೆ ಒಗ್ಗುವ ಆಹಾರವನ್ನು ನಾವು ತಿನ್ನಬೇಕು ಅದೇ ರೀತಿಯಲ್ಲಿ ನಮಗೆ ಯಾವ ದೇವರು ಒಳ್ಳೆಯದನ್ನು ಮಾಡುತ್ತದೆ ಎಂದು ತಿಳಿದು ಪೂಜಿಸಬೇಕು.ಬನ್ನಿ ನೋಡೋಣ ಯಾವ ಗ್ರಹಕ್ಕೆ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಎಂದು..

ಸೂರ್ಯ- ಸೂರ್ಯ ಗ್ರಹದ ಪ್ರಭಾವ ಹೆಚ್ಚಿದ್ದರೆ  ಸೂರ್ಯಾರಾಧನೆ, ಆದಿತ್ಯ ಹೃದಯ ಪಾರಾಯಣ,  ಶ್ರೀ ರಾಮ ದೇವರ ಪೂಜೆ, ಸತ್ಯನಾರಾಯಣ ದೇವರಿಗೆ ಪೂಜೆಯನ್ನು ಮಾಡಬೇಕು.

ಚಂದ್ರ-ಈಶ್ವರನ ಆರಾಧನೆ, ರುದ್ರ ಪಾರಾಯಣ, ಪಂಚಾಕ್ಷರಿ ಮಂತ್ರ ಜಪ (ನಮಃ ಶಿವಾಯ),ಮಹಾ ಮೃತ್ಯುಂಜಯ ಮಂತ್ರವನ್ನು 54 ಅಥವಾ 108 ಭಾರಿ ಜಪಿಸಬೇಕು.ಸೋಮವಾರದ ದಿನ ಹಾಲಿನ ಅಭಿಷೇಕ ಮಾಡಬೇಕು.

ಕುಜ ಅಥವಾ ಮಂಗಳ ಗ್ರಹ- ಸುಬ್ರಹ್ಮಣ್ಯ ಪೂಜೆ, ಸ್ಕಂದ ಷಷ್ಠಿ ಕವಚ, “ಓಂ ಶರವಣ  ಭವಾಯ ನಮಃ”  ಈ ಮಂತ್ರವನ್ನು ಜಪಿಸುವವರಿಗೆ ಗುರುಗಳಿಂದ ಉಪದೇಶವಾಗಿರಬೇಕು.  ಈ ಮಂತ್ರವನ್ನು ಜಪಿಸುವವರು  ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಆಹಾರ ಪದತ್ತಿಯನ್ನು  ಸರಿಯಾಗಿ ಪಾಲಿಸಬೇಕು ಮತ್ತು ಬ್ರಹ್ಮಚರ್ಯವನ್ನು  ಪಾಲಿಸಬೇಕು.ದೇಹಕ್ಕೆ ಮತ್ತು ಮನಸ್ಸಿಗೆ ಶಕ್ತಿ,ಚೈತನ್ಯ ಬರುತ್ತದೆ.

ಕುಜ ಮತ್ತು ಬುಧ- ಕುಜ ಮತ್ತು ಬುಧ ಒಟ್ಟಿಗೆ ಇದ್ದರೆ ನರಸಿಂಹಸ್ವಾಮಿ ಆರಾಧನೆಯನ್ನು ಮಾಡಬೇಕು.ನರಸಿಂಹ ಮಂತ್ರವನ್ನು ಜಪಿಸಬೇಕು

“ಉಗ್ರಂ ವೀರಂ ಮಹಾವಿಷ್ಣುo ಜಾಲ್ವಂತಂ  ಸರ್ವೋತೋಮುಖಂ. ನಾರಸಿಂಹo ಬೀಷಣಂ ಭದ್ರಂ ಮೃತ್ಯುರ್ ಮೃತ್ಯುರ್ ನಮಾಮೃಹಂ”.

ಈ ಮಂತ್ರವನ್ನು 108  ಭಾರಿ  ಬೆಳ್ಳಗ್ಗೆ  ಮತ್ತು  ಸಂಜೆ  ಜಪಿಸಬೇಕು. ಇನ್ನು ಕುಜನ ಪ್ರಭಾವ ಹೆಚ್ಚಿದ್ದರೆ ಗರ್ಭಧಾರಣೆ  ಆಗುವುದಿಲ್ಲ ಅಂತವರು   ಈ ಮಂತ್ರವನ್ನು ಸತತವಾಗಿ  ಜಪಿಸಿದರೆ  7 ರಿಂದ 8 ತಿಂಗಳ ವಳಗೆ ಮಹಿಳೆಯರು ಗರ್ಭ ಧರಿಸುತ್ತಾರೆ .ಇದನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಚಾರಣೆ ಮಾಡಬೇಕು.

ಬುಧ-ಬುಧನ ಅಧಿಪತಿ ಮಹಾವಿಷ್ಣು ಆದ್ದರಿಂದ ಕೃಷ್ಣ, ನಾರಾಯಣನ ಆರಾಧನೆ ಮಾಡಬೇಕು.ಅಷ್ಟಾಕ್ಷರಿ ಮಂತ್ರವನ್ನು  108 ಭಾರಿ ಜಪಿಸಬೇಕು. “ಓಂ ನಮೋ ನಾರಾಯಣಾಯ ನಮಃ”.

ಗುರು-ಗುರು ಗ್ರಹದ ಪ್ರಭಾವ ಹೆಚ್ಚಿದ್ದರೆ ಶಿವನ ಆರಾಧನೆ ಮಾಡಬೇಕು ಶಿವ ಸಹಸ್ರನಾಮ ಪಾರಾಯಣ,ಪಂಚಮುಖಿ ಗಣಪತಿ ಆರಾಧನೆ, ದತ್ತಾತ್ರೇಯ ಪೂಜೆ ಮಾಡಬೇಕು.

ಜಾತಕದಲ್ಲಿ ಗುರು ಕೆಟ್ಟಿದ್ದರೆ  ಶಿವನನ್ನು ವೀರಭದ್ರ ಹಾಗೂ ಮುನೇಶ್ವರನ ರೂಪದಲ್ಲಿ ಆರಾಧಿಸಬೇಕು.

ಶುಕ್ರ-ಶುಕ್ರನ ಪ್ರಭಾವ ಹೆಚ್ಚಿದ್ದರೆ ಮಹಾಲಕ್ಷ್ಮೀ, ಪಾರ್ವತಿ, ದುರ್ಗಿ,ಲಲಿತಾ ತ್ರಿಪುರ ಸುಂದರಿ ಆರಾಧನೆ ಮಾಡಿದರೆ ಒಳ್ಳೆಯದು.

ಜಾತಕದಲ್ಲಿ ಶುಕ್ರ ಕೆಟ್ಟಿದ್ದರೆ ಕಾಳಿ, ಚಂಡಿ,ಅಥವಾ ಚಾಮುಂಡಿ ರೂಪದಲ್ಲಿ ಆರಾಧನೆ ಮಾಡಿದರೆ ಒಳ್ಳೆಯದು. ಲಲಿತಾ ಸಹಸ್ರನಾಮ ಪಾರಾಯಣದಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ಶನಿ-ಶನಿಗೆ ಶಿವ ಎಂದರೆ ಪ್ರಿಯ ಆದ್ದರಿಂದ  ಶಿವನ ಆರಾಧನೆ ಮಾಡಬೇಕು. ಶನಿ ಉಚ್ಛ ಸ್ಥಾನದಲ್ಲಿ ಇದ್ದರೆ ವೆಂಕಟೇಶ್ವರನ ಆರಾಧನೆ  ಮಾಡಬೇಕು.ಶನಿಯ ಪ್ರಭಾವ ಅತೀ ಹೆಚ್ಚಿದರೆ  ಆಂಜುನೇಯನ ಆರಾಧನೆ ಮಾಡ್ಬೇಕು.

ಕೇತು-ಗಣಪತಿಯ ಆರಾಧನೆ ಒಳ್ಳೆಯದು . “ಓಂ ಮಹಾ ಗಣಪತಯೇ ನಮಃ” ಈ ಮಂತ್ರವನ್ನು 108 ಭಾರಿ ಜಪಿಸಬೇಕು.

ಗಣಪತಿ ಬೀಜ ಮಂತ್ರ  “ಓಂ ಗಂ ಗಣಪತಯೇ ನಮಃ”   ಈ ಮಂತ್ರವೂ  ಗುರುಗಳಿಂದ ಉಪದೇಶವಾಗಿರಬೇಕು.

ಗಕಾರ ಗಣಪತಿ ಸಹಸ್ರ ನಾಮ ಪಾರಾಯಣ, ಗಣಪತಿ ಬೀಜ ಮಂತ್ರ ಪಠಿಸಬೇಕು. ಮನೆಯಲ್ಲಿ  ಗಣಪತಿ ಮೂರ್ತಿಯನ್ನು ಇಟ್ಟುಕೊಳ್ಳುವವರು ಎಡಮುರಿ ಗಣಪತಿಯನ್ನು ಇಟ್ಟು ಪೂಜಿಸಬೇಕು ಅಂದರೆ ಗಣಪತಿಯ ಸೊಂಡಿಲು ಎಡಬಾಗಕ್ಕೆ ಇರಬೇಕು.

ರಾಹು-ದುರ್ಗಾ ಆರಾಧನೆ, “ಓಂ ಶ್ರೀ ಮಹಾ ದುರ್ಗಾಯಯ್ಯೆ ನಮಃ” ಈ ಮಂತ್ರವನ್ನು ಕೆಂಪು ಬಣ್ಣದ ಅಕ್ಷರದಿಂದ  108 ಭಾರಿ ಪೂರ್ವಾಭಿಮುಖವಾಗಿ ಕುಳಿತು 9 ತಿಂಗಳು ಬರೆಯಬೇಕು.ಆಗ ಬೇಗ ಕಷ್ಟಗಳು ದೂರಾಗಿ ಇಷ್ಟಾರ್ಥ ಸಿದ್ಧಿಸುತ್ತವೆ.

ರಾಹು ಕೆಟ್ಟಿದ್ದರೆ  ಸರ್ಪ ಸೂಕ್ತ ಪಾರಾಯಣ ಮತ್ತು ಸುಬ್ರಮಣ್ಯ ಆರಾಧನೆ ಮಾಡ್ಬೇಕು.

ರಾಹು,ಕೇತು,ಹಾಗೂ ಶನಿ ಪ್ರಭಾವ ಹೆಚ್ಚಿರುವವರು  ಸಂಜೆ ಸೂರ್ಯಾಸ್ತದ  ಸಮಯದ ನಂತರ ಜಪಿಸುವುದು ಒಳ್ಳೆಯದು.

ಸೂರ್ಯ,ಚಂದ್ರ, ಕುಜ,ಗುರು,ಶುಕ್ರನ ಪ್ರಭಾವ ಇರುವಂತಹ ಜಾತಕದವರು ಬೆಳ್ಳಗ್ಗೆ 9 ಗಂಟೆಯ ಒಳಗೆ ಆರಾಧನೆ ಮಾಡಿದರೆ ಒಳ್ಳೆಯದು.

ಬುಧನ ಪ್ರಭಾವ ಇದ್ದರೆ ಸಂಜೆ ಗೋಧೂಳಿ ಮುಹೂರ್ತದಲ್ಲಿ ಅಂದರೆ  6 ರಿಂದ 7 ಗಂಟೆಯ ಒಳಗೆ  ಆರಾಧನೆ ಮಾಡಿದರೆ ಒಳ್ಳೆಯದು.

ಗಣೇಶ ,ಶಿವ,ಪಾರ್ವತಿಗೆ ಸಂಭಂದ ಪಟ್ಟ ಜಪಗಳನ್ನು ಉತ್ತಾರಾಭಿಮುಖವಾಗಿ ಕುಳಿತು ಜಪ 
 ಒಳ್ಳೆಯದು.

ಮಹಾಲಕ್ಷ್ಮೀ ಹಾಗೂ ವಿಷ್ಣುವಿಗೆ ಸಂಬಂಧಿಸಿದ ಮಂತ್ರಗಳನ್ನು ಪೂರ್ವಾಭಿಮುಖವಾಗಿ ಕುಳಿತು ಜಪ ಮಾಡಬೇಕು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ನರಸಿಂಹ

ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ವಿರಚಿತ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ - ಪೂರ್ವ ಪೀಠಿಕೆ - ೧

ಈ ಸ್ತೋತ್ರವನ್ನು ಮತ್ತು ಅದರ ಅರ್ಥವನ್ನು ಅರಿಯುವ ಮುನ್ನ ನಾವು ಈ ಸ್ತೋತ್ರದಲ್ಲಿ ಉಲ್ಲೇಖಗೊಂಡಿರುವ  ' ಶ್ರೀ ನರಸಿಂಹ ' ಅವತಾರದ ವೃತ್ತಾಂತವನ್ನು ಕ್ಲುಪ್ತವಾಗಿ ಅರಿಯುವ ಕಿಂಚಿತ್ ಅವಶ್ಯಕತೆಯಿದೆ. ಹಾಗಾಗಿ ಈ ಪೂರ್ವ ಪೀಠಿಕೆ. 

ಶ್ರೀ ವೈಕುಂಠ 'ಶ್ರೀಮನ್ನಾರಾಯಣ' ನ ಆವಾಸ ಸ್ಥಾನ. ಹಾಗೆ ನೋಡಿದರೆ ಇಡೀ ಬ್ರಹ್ಮಾಂಡವೇ ಶ್ರೀ ಹರಿಯ ಆವಾಸಸ್ಥಾನವಾದರೂ ಪುರಾಣಗಳು ವೈಕುಂಠವನ್ನು ಶ್ರೀ ಹರಿಯ ಆವಾಸ ಸ್ಥಾನವೆಂದೂ, ಕೈಲಾಸವನ್ನು ಭಗವಾನ್ ಶಂಕರನ ಆವಾಸ ಸ್ಥಾನವೆಂದೂ ಮತ್ತು ಬ್ರಹ್ಮ ಲೋಕವು ಬ್ರಹ್ಮನ ಸ್ಥಾನವೆಂದೂ ಹೇಳಲ್ಪಟ್ಟಿದೆ. ಅಂತಹ ವೈಕುಂಠಕ್ಕೆ ಏಳು ದ್ವಾರಗಳೆಂದೂ ಮತ್ತು ಅದರ ಪ್ರಧಾನ ದ್ವಾರಗಳಲ್ಲಿ ' ಜಯ ಮತ್ತು ವಿಜಯ' ಎಂಬ ಇಬ್ಬರು ದ್ವಾರಪಾಲಕರು ಎಂದೂ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅವರಿಗೆ ಶ್ರೀ ಹರಿಯ ಹೊರತು ಬೇರೇನೂ ಗೊತ್ತೇ ಇರುವುದಿಲ್ಲ. ತಾವು ಶ್ರೀ ಹರಿಯ ವೈಕುಂಠದ ದ್ವಾರಪಾಲಕರೆಂದು ಮತ್ತು ತಾವು ಶ್ರೀ ಹರಿಯ ಬಹು ಆಪ್ತರೆಂದು ಬಹಳ ಸ್ವಾಭಿಮಾನ. ಕಾಲಾನುಕಾಲಕ್ಕೆ ಅದು ದುರಭಿಮಾನವಾಗಿ ಅವರಲ್ಲಿ  ಅಹಂಕಾರದ ರೂಪವನ್ನು ತಳೆಯಿತು. 

ಅಂತಹ ಸಂದರ್ಭದಲ್ಲಿ ಸನಕ ಮತ್ತು ಸನಂದ ಎಂಬ ಋಷಿಗಳ ನೇತೃತ್ವದಲ್ಲಿ ಹಲವಾರು ಋಷಿಮುನಿಗಳು ಶ್ರೀ ಹರಿಯ ದರ್ಶನಕ್ಕೆ ವೈಕುಂಠಕ್ಕೆ ಬರುತ್ತಾರೆ. ಮೊದಲೇ ಅಹಂಕಾರದಿಂದ ತುಂಬಿರುವ ಜಯ ವಿಜಯರು ' ಶ್ರೀ ಹರಿ ' ವಿಶ್ರಾಂತಿಯಲ್ಲಿದ್ದಾರೆ ಎಂದು ಹೇಳಿ, ಅವರನ್ನು ಶ್ರೀ ಹರಿಯ ದರ್ಶನಕ್ಕೆ ಒಳಬಿಡಲು ನಿರಾಕರಿಸುತ್ತಾರೆ. ಅಂಗಲಾಚಿ ಬೇಡಿದರೂ ಕನಿಕರಿಸದೆ ಆ ಋಷಿಮುನಿಗಳಿಗೆ ಹರಿದರ್ಶನವನ್ನು ನಿರಾಕರಿಸುತ್ತಾರೆ. ಇದರಿಂದ ಕುಪಿತಗೊಂಡು ಅವರು ಜಯವಿಜಯರಿಗೆ " ನೀವು ಹರಿಯ ಸನಿಹದಲ್ಲಿದ್ದೀರಿ ಮತ್ತು ಹರಿಗೆ ಬಹಳ ಆಪ್ತರೆಂದು ಗರ್ವಿತರಾಗಿ ಅಹಂಕಾರದಿಂದ ಹೀಗೆ ವರ್ತಿಸುತ್ತಿದ್ದೀರಿ. ನೀವು ಹರಿಯಿಂದ ದೂರವಾಗಿಹೋಗಿ ಎಂದು ಶಪಿಸುತ್ತಾರೆ. ಆ ಶಾಪವನ್ನು ಕೇಳಿ, ಹರಿ ಮತ್ತು ವೈಕುಂಠವನ್ನು ಬಿಟ್ಟು ಬೇರೇನನ್ನೂ ಅರಿಯದ ಜಯವಿಜಯರು ತತ್ತರಿಸಿಹೋಗುತ್ತಾರೆ. ಆ ಸಮಯಕ್ಕೆ ದರ್ಶನವಿತ್ತ ಶ್ರೀ ಲಕ್ಷ್ಮೀ ನಾರಾಯಣರ ಬಳಿ ಸಾರಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಪಮೆ ಬೇಡಿ ಶಾಪವಿಮೋಚನೆಯ ಮಾರ್ಗವನ್ನು ಬೇಡುತ್ತಾರೆ. ಆಗ ಶ್ರೀಮನ್ನಾರಾಯಣನು ಅವರಿಗೆ " ಮುನಿಶಾಪದಿಂದ ಬಿಡುಗಡೆಯಿಲ್ಲ. ನೀವು ನನ್ನಿಂದ ದೂರವಾಗಲೇ ಬೇಕು. ಆದರೆ ಇಲ್ಲಿ ನಿಮಗೆರಡು ಪರ್ಯಾಯಗಳನ್ನು ನೀಡುವೆ. ಒಂದು ನೀವು ನನ್ನ ಶತ್ರುಗಳಾಗಿ ಮೂರು ಜನ್ಮವೆತ್ತಿ, ನನ್ನಿಂದಲೇ ಹತರಾಗಿ ವೈಕುಂಠ ಸೇರುವಿರೋ ಅಥವಾ ನನ್ನ ಭಕ್ತ ಮತ್ತು ಮಿತ್ರರಾಗಿ ಏಳು ಜನ್ಮಗಳನ್ನು ಮುಗಿಸಿ ವೈಕುಂಠ ಸೇರುವಿರೋ" ಎಂದು ಕೇಳಲು ಅವರು " ಸ್ವಾಮೀ ನಿನ್ನಿಂದ ಆಗಲಿ ಬಹಳ ದಿನ ಇರಲಾರೆವು ಹಾಗಾಗಿ ನಿನ್ನ ಶತ್ರುಗಳಾದರೂ ಚಿಂತೆಯಿಲ್ಲ, ನಿನ್ನಿಂದಲೇ ಹತರಾಗಿ ಮೂರೇ ಜನ್ಮದಲ್ಲಿ ನಿನ್ನ ಸೇವೆಗೆ ಹಿಂತಿರುಗುವ ಕೃಪೆ ತೋರು" ಎಂದು ಬೇಡಲು ಆಗ ದಯಾಮಯನಾದ ಆ ಸ್ವಾಮಿ ' ತಥಾಸ್ತು ' ಎನ್ನಲು,  ಅವರುಗಳು ಶ್ರೀ ವೈಕುಂಠದಿಂದ ಪತಿತರಾಗಿ ಈ ಭೂಮಿಯಲ್ಲಿ ಜನ್ಮವೆತ್ತುತ್ತಾರೆ . ಮೊದಲ ಜನ್ಮದಲ್ಲಿ ಸತ್ಯ ಯುಗದಲ್ಲಿ ಕಶ್ಯಪ ಮುನಿಯ ಮಕ್ಕಳಾದ 'ಹಿರಣ್ಯಾಕ್ಷ  ಮತ್ತು ಹಿರಣ್ಯಕಶಿಪು' ಎಂದೂ ತ್ರೇತಾ ಯುಗದಲ್ಲಿ ' ರಾವಣ ಮತ್ತು ಕುಂಭಕರ್ಣ' ಎಂದೂ ಮತ್ತು ದ್ವಾಪರ ಯುಗದಲ್ಲಿ ' ಶಿಶುಪಾಲ ಮತ್ತು ದಂತವಕ್ತ್ರ ' ಎಂದೂ ಶ್ರೀ ಹರಿಯ ವೈರಿಗಳಾಗಿ ಜನಿಸಿ ಶ್ರೀ ಹರಿಯಿಂದಲೇ ಹತರಾಗಿ ವೈಕುಂಠವನ್ನು ಸೇರುತ್ತಾರೆ. 

ಮೊದಲ ಜನ್ಮದಲ್ಲಿ ಹಿರಣ್ಯಾಕ್ಷನನ್ನು ಶ್ರೀ ಹರಿ ' ವರಾಹ ಅವತಾರ' ದಿಂದ ಸಂಹರಿಸಿದರೆ ಹಿರಣ್ಯಕಶಿಪನನ್ನು ' ನರಸಿಂಹ ' ಅವತಾರದಲ್ಲಿ ಸಂಹರಿಸುತ್ತಾನೆ. ಇಲ್ಲಿ ನಾವು ಶ್ರೀ ಹರಿಯ ಈ ' ನರಸಿಂಹ ' ಅವತಾರದ ಪೂರ್ವ  ವೃತ್ತಾಂತವನ್ನು ನೋಡುವ.  

ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ವಿರಚಿತ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ - ಪೂರ್ವ ಪೀಠಿಕೆ - ೨

ಕಶ್ಯಪ ಮುನಿ ಚತುರ್ಮುಖ ಬ್ರಹ್ಮನ ಮಾನಸ ಪುತ್ರ. ಸೃಷ್ಟಿಕಾರ್ಯದಲ್ಲಿ ತನ್ನ ತಂದೆಯಾದ ಬ್ರಹ್ಮನಿಗೆ ಒದಗಲು ನಿಯಮಿಸಲ್ಪಟ್ಟವನು, ಮಹಾಜ್ಞಾನಿ.  ಸದಾ ಪರಮೇಶ್ವರಾಭಿಮುಖವಾದ ಮಾನಸಿಕ ಸ್ಥಿತಿಯಲ್ಲಿರುವವನು. ಅವನಿಗೆ ಇಬ್ಬರು ಪತ್ನಿಯರು. ಒಬ್ಬಾಕೆ ಅದಿತಿ ಮತ್ತು ಮತ್ತೊಬ್ಬಾಕೆ ದಿತಿ. ಒಂದು ದಿನ ಮುಸ್ಸಂಜೆಯ ಸಮಯ. ಕಶ್ಯಪ ಮುನಿ ಸಂಧ್ಯಾವಂದನೆಯನ್ನು ಮುಗಿಸಿ ತನ್ನ ಕುಟೀರದ ಮುಂದೆ ಒಂದು ಮರದ ಕೆಳಗೆ ಧ್ಯಾನದಲ್ಲಿ ಜಪಕ್ಕೆ ಕುಳಿತಿರುವಾಗ, ಅವನ ಪತ್ನಿಯಾದ ದಿತಿಯು ಅವನ ಬಳಿ ಸಾರಿ ತನ್ನ ಕಾಮಾಸಕ್ತಿಯನ್ನು ವ್ಯಕ್ತಪಡಿಸಿದಾಗ, ಆ ಸಾತ್ವಿಕ ಮುನಿಯು " ಇಂತಹ ಆಸೆ ಈ  ಅವೇಳೆಯಲ್ಲಿ ಸಲ್ಲ. ಅದು ಮಹಾಪಾಪ ಮತ್ತು ಅಪರಾಧ" ಎಂದು ಪರಿಪರಿಯಾಗಿ ಹೇಳಲು,  ಅವನ ಮಾತನ್ನು ಕೇಳದೆ ಮತ್ತೆ ಮತ್ತೆ ತನ್ನ ವಾಂಛೆಯನ್ನು ತೀರಿಸಲು ಒತ್ತಾಯಿಸಲು, ಒಂದು ಘಳಿಗೆ ಕಣ್ಮುಚ್ಚಿ ಕುಳಿತ ಆ ಮುನಿ ತನ್ನ ತಪಃಶಕ್ತಿಯಿಂದ ವಿಧಿಲಿಖಿತದ ದೃಶ್ಯ ಕಂಡು ಅವಳ ಹಿಂದೆ ನಡೆಯುತ್ತಾನೆ. 

ಅವೇಳೆಯಲ್ಲಿ ಕಾಮಾಸಕ್ತಿಯಿಂದ ಒಂದಾದ ಆ ದಿತಿಯ ಗರ್ಭದಲ್ಲಿ ಜನಿಸಿದವರೇ 'ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪ' ರೆಂಬ ದೈತ್ಯರು. ಅವೇಳೆಯ ಸಮಾಗಮದಿಂದ ಅವರಿಬ್ಬರೂ ರಾಕ್ಷಸ ಪ್ರವೃತ್ತಿಯುಳ್ಳವರಾಗಿ, ಕ್ಷುದ್ರ ಶಕ್ತಿಗಳನ್ನು ಕುರಿತು ತಪಸ್ಸನ್ನು ಮಾಡಿ ತಮ್ಮ ತಪಃಶಕ್ತಿಯಿಂದ ಉನ್ಮತ್ತರಾಗಿ ಲೋಕಕಂಟರಾದರು. ಹಾಗೆ ದುಷ್ಟನಾದ ಹಿರಣ್ಯಾಕ್ಷನನ್ನು ಸಂಹರಿಸಲು ಶ್ರೀ ಹರಿ ಎತ್ತಿದ ಅವತಾರವೇ ' ವರಾಹಾವತಾರ ' ತನ್ನ ಸಹೋದರನ  ವಧೆಯಿಂದ ಕುಪಿತನಾದ ತೀವ್ರವಾಗಿ ವಿಷ್ಣುದ್ವೇಷವನ್ನು ಬೆಳೆಸಿಕೊಂಡು, ಶ್ರೀಹರಿಯನ್ನು ಸಂಹರಿಸಲು ಬೇಕಾದ ಶಕ್ತಿಯನ್ನು ಪಡೆಯಲು ಘೋರತಮ ತಪಸ್ಸನ್ನು ಮಾಡಿ ಚತುರ್ಮುಖ ಬ್ರಹ್ಮನಿಂದ ತನಗೆ ಸಾವೇ ಬಾರದಂತೆ ವರ ಬೇಡುತ್ತಾನೆ. ಹುಟ್ಟಿದ ಪ್ರತಿಪ್ರಾಣಿಯೂ ಸಾಯಲೇಬೇಕಾಗಿರುವಾಗ ಅಂತಹ ವರವನ್ನು ನೀಡಲು ಸಾಧ್ಯವಿಲ್ಲವೆಂದು ಬ್ರಹ್ಮ ಅರುಹಲು,  ಹಾಗಾದರೆ ತನಗೆ, ನರರಿಂದಾಗಲೀ, ಪ್ರಾಣಿಗಳಿಂದಾಗಲೀ, ಹಗಲಿನಲ್ಲಾಗಲೀ ರಾತ್ರಿಯಲ್ಲಾಗಲೀ,  ಭೂಮಿಯ ಮೇಲಾಗಲೀ,  ಅಂತರಿಕ್ಷದಲ್ಲಾಗಲೀ, ಮನೆಯ ಒಳಗಾಗಲೀ,  ಹೊರಗಾಗಲೀ ಸಾವು ಬರಬಾರದೆಂದು ಕೇಳಿ ವರ ಪಡೆಯುತ್ತಾನೆ. 

ನಂತರದ ದಿನಗಳಲ್ಲಿ ಪರಮ ಭಕ್ತನಾದ ' ಪ್ರಹ್ಲಾದ ' ಅವನ ಮಗನಾಗಿ ಜನಿಸಿ, ಹರಿಭಕ್ತಿಯಲ್ಲಿ ಮುಳುಗಿ ತಂದೆಯ ಹರಿದ್ವೇಷವನ್ನು ವಿರೋಧಿಸುತ್ತಾನೆ.  ಮಗನ ಅಂತಹ ವಿರೋಧ ಹಿರಣ್ಯಕಶಿಪುವಿನಲ್ಲಿ ಹರಿದ್ವೇಷ ಉತ್ತುಂಗಕ್ಕೇರಿ ಚರಮ ಘಟ್ಟವನ್ನು ತಲುಪಿದಾಗ ' ನರಸಿಂಹ ' ಅವತಾರವಾಗಿ  ಹಿರಣ್ಯಕಶಿಪುವಿನ ವಧೆಯಾಗುವುದು 'ಪ್ರಹ್ಲಾದ ಚರಿತ್ರೆಯಲ್ಲಿ ಮತ್ತು ಭಾಗವತ ಪುರಾಣ' ದಲ್ಲಿ ವಿಸ್ತಾರವಾಗಿ ಉಲ್ಲೇಖವಾಗಿದೆ. ಅವನನ್ನು ಸಂಹಾರಮಾಡಲು ಅತಿಘೋರವಾದ ನರಸಿಂಹ ಅವತಾರವನ್ನು ಎತ್ತಿದ ಆ ಶ್ರೀಹರಿಯನ್ನು ಶಾಂತಗೊಳಿಸಲು ದೇವತೆಗಳೆಲ್ಲಾ ಸೇರಿ ಶ್ರೀ ಲಕ್ಷ್ಮಿಯನ್ನು ಕರೆತಂದು ಅವನ ಮಡಿಲಲ್ಲಿ ಕೂರಿಸಿದಾಗ ಶಾಂತನಾದ ಶ್ರೀ ಹರಿ,  ಶ್ರೀ ಲಕ್ಷ್ಮೀ ನರಸಿಂಹನಾಗಿ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನನ್ನು ಅನುಗ್ರಹಿಸಿ, ಅಲ್ಲಿ ನೆರೆದಿದ್ದ ಸಕಲ ದೇವತಾ ಸಮೂಹವನ್ನೂ ಅನುಗ್ರಹಿಸಿದ ಎಂದು ಪುರಾಣಗಳು ಸಾರುತ್ತವೆ. ಪರಮ ಸಾತ್ವಿಕರಿಗೆ ಅನ್ಯಾಯದ ವಿರುದ್ಧ ಕೋಪಬಂದಾಗ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಸಂಗ ಒಂದು ನಿದರ್ಶನವೂ ಹೌದು. 

ನರಸಿಂಹ ಅವತಾರದ ಈ ಘಟನೆಗಳು ನಡೆದದ್ದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ' ಅಹೋಬಲ' ವೆಂಬ ಪುಣ್ಯ ಕ್ಷೇತ್ರದಲ್ಲಿ. ಇಂದಿಗೂ ನರಸಿಂಹ ಅವತರಿಸಿದ ಉಗ್ರಸ್ತಂಭವು ಅಹೋಬಲದ ' ಜ್ಹ್ವಾಲಾ ನರಸಿಂಹ ' ದೇವಾಲಯದ ಬಳಿಯೇ ಇದೆ. ಅಂತಹ ಶ್ರೀ ಲಕ್ಷ್ಮೀ ನರಸಿಂಹನ ಕರಾವಲಂಬನದ ಕೃಪೆಗೆ ಪಾತ್ರರಾಗಿ ಈ ಸಂಸಾರದ ದುಃಖದಿಂದ ಮುಕ್ತರಾಗುವ ಒಂದು ಸೂಕ್ತ ಮಾರ್ಗವನ್ನು ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದ  ಮೂಲಕ ನಮಗೆ ನೀಡಿದ್ದಾರೆ ಜಗದ್ಗುರು ಶ್ರೀ ಆದಿಶಂಕರಾಚಾರ್ಯರು. ಈ ಸ್ತೋತ್ರ ರತ್ನವನ್ನು ಶ್ರೀ ಶಂಕರಾಚಾರ್ಯರು ಈ ಅಹೋಬಲಕ್ಷೇತ್ರದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ರಚನೆ ಮಾಡಿದರೆಂದು ಪ್ರತೀತಿ ಇದೆ. ಈ ಸ್ತೋತ್ರದ ಪ್ರತಿ ನಾಲ್ಕನೆಯ ಸಾಲಿನ ಅಂತ್ಯಕ್ಕೆ ' ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ' ಎಂದು ಬೇಡಿದ್ದಾರಾದ್ದರಿಂದ ಇದಕ್ಕೆ 'ಶ್ರೀ ಲಕ್ಷ್ಮೀನರಸಿಂಹ ಕರಾವಲಂಬನ'  ಸ್ತೋತ್ರವೆಂದೂ ಉಲ್ಲೇಖವಿದೆ.  ನಾಳೆಯಿಂದ  ಈ ಶ್ರೀ ಲಕ್ಷ್ಮೀನೃಸಿಂಹ  ಕರಾವಲಂಬನ ಸ್ತೋತ್ರ  ಮತ್ತು ಅದರ ಅರ್ಥವನ್ನು ಅರಿತು ಆನಂದಿಸೋಣ ಮತ್ತು ಪುನೀತರಾಗೋಣ. 

ರವಿ ತಿರುಮಲೈ ಅವರ ಲೇಖನ

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಬೃಹಸ್ಪತಿ

|ಯ ಯಾ ತಿ| 

ಮೊದಲಿಗೆ ಹಿನ್ನೆಲೆ....

'ಬೃಹಸ್ಪತಿ' ದೇವತೆಗಳಿಗೆ ಗುರುವಾದರೆ, ಇನ್ನು 'ಶುಕ್ಲಾಚಾರ್ಯರು' ರಾಜ ವೃಷಪರ್ವನ ರಾಕ್ಷಸರ ರಾಜ್ಯದ ಕುಲ ಪುರೋಹಿತರು, ಹಾಗು ರಾಜಗುರು.

ಶುಕ್ಲಾಚಾರ್ಯರು ತಪಸ್ಸು ಮಾಡಿ ಪರಮೇಶ್ವರನಿಂದ 'ಮೃತಸಂಜೀವಿನಿ' ವಿದ್ಯೆಯನ್ನು ವರವಾಗಿ ಪಡೆದರು. 
ರಾಕ್ಷಸರು ಮತ್ತು ದೇವತೆಗಳ ನಡುವೆ ಕಿತ್ತಾಟ, ಸಮರಗಳು ಸಾಮಾನ್ಯವಾಗಿತ್ತು.

ದೇವತೆಗಳು ರಾಕ್ಷಸರನ್ನು ಕೊಂದರೆ, ಶುಕ್ಲಾಚಾರ್ಯರು ತಮ್ಮಲ್ಲಿನ ಮೃತಸಂಜೀವಿನಿ ವಿದ್ಯೆಯಿಂದ ಮತ್ತೆ ರಾಕ್ಷಸರನ್ನು ಬದುಕಿಸುತ್ತಿದ್ದರು. ಇದರಿಂದ ದೇವತೆಗಳಿಗೆ ದೊಡ್ಡ ತಲೆನೋವು ಉಂಟಾಯಿತು. ಎಷ್ಟೇ ರಾಕ್ಷಸರನ್ನು ಕೊಂದರೂ, ಮರುಕ್ಷಣವೇ ಗುರುಗಳಾದ ಶುಕ್ಲಾಚಾರ್ಯರು ಮತ್ತೆ ರಾಕ್ಷಸರನ್ನು ಬದುಕಿಸುತ್ತಿದ್ದರು. 

ಇದಕ್ಕೆ ಪರಿಹಾರ ಹುಡುಕಲು ಯತ್ನಿಸಿದ, ದೇವತೆಗಳ ಗುರುವಾದ ಬೃಹಸ್ಪತಿಯು ತನ್ನ ಮಗನಾದ 'ಕಚ'ನನ್ನು ಶುಕ್ಲಾಚಾರ್ಯರರ ಬಳಿಗೆ ವೇದಾಧ್ಯಯನ ಮಾಡುವ ನೆಪದಲ್ಲಿ ಕಳುಹಿಸಿ, ಶುಕ್ಲಾಚಾರ್ಯರ ಮನಗೆದ್ದು ಹೇಗಾದರೂ ಮೃತಸಂಜೀವಿ ಮಂತ್ರವಿದ್ಯೆಯನ್ನು ಕಲಿತುಕೊಳ್ಳುವಂತೆ ತಿಳಿಸುತ್ತಾನೆ. 

ಶುಕ್ಲಾಚಾರ್ಯರು, 'ಕಚ'ನನ್ನು ಶಿಷ್ಯನಾಗಿ ಸ್ವೀಕರಿಸಿದರು. ಕಚನು ಶ್ರದ್ಧೆ ಭಕ್ತಿಗಳಿಂದ ಗುರುಗಳ ಪ್ರೀತಿ, ವಿಶ್ವಾಸ ಗಳಿಸಿದ. 
ಯೌವ್ವನದಲ್ಲಿದ್ದ ಕಚನ ರೂಪ, ವಿದ್ಯೆ, ವಿನಯಗಳಿಂದ ಶುಕ್ಲಾಚಾರ್ಯರ ಮಗಳು 'ದೇವಯಾನಿ' ಆಕರ್ಷಣೆಗೆ ಒಳಗಾಗುತ್ತಾಳೆ. ಇದನ್ನು ತಿಳಿದ ರಾಕ್ಷಸ ಕುಲದ ಶುಕ್ಲಾಚಾರ್ಯರ ಶಿಷ್ಯರು, ಕಚನನ್ನು ದ್ವೇಷಿಸಿ ನಂತರ ತುಂಡು ತುಂಡಾಗಿ ಕತ್ತರಿಸಿ ಕೊಲ್ಲುತ್ತಾರೆ. 
ತನ್ನ ಪ್ರೀತಿಯ ಕಚನನ್ನು ಕಾಣದ ದೇವಯಾನಿ ತಂದೆಯ ಬಳಿ ವಿಷಯ ತಿಳಿಸುತ್ತಾಳೆ. 

ಶುಕ್ಲಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ, ಕಚನ್ನು ತನ್ನ ರಾಕ್ಷಸ ಶಿಷ್ಯರು ಕೊಂದಿರುವುದಾಗಿ ಮಗಳಾದ ದೇವಯಾನಿಗೆ ತಿಳಿಸುತ್ತಾರೆ. ಕುಪಿತಳಾದ ದೇವಯಾನಿ, ತಂದೆಯಲ್ಲಿ ಮೃತಸಂಜೀವಿನಿ ವಿದ್ಯೆಯಿಂದ ಕಚನನ್ನು ಮತ್ತೆ ಬದುಕಿಸುವಂತೆ ವಿನಂತಿಸಿಕೊಳ್ಳುತ್ತಾಳೆ. ಕಚನು ಮತ್ತೆ ಬದುಕಿ ಬರುತ್ತಾನೆ. 

ಕಚನು ಮತ್ತೆ ಬದುಕಿಬಂದ ವಿಷಯ ತಿಳಿದ ಶುಕ್ಲಾಚಾರ್ಯರ ಶಿಷ್ಯರು ಕಸಿವಿಸಿಗೊಂಡು, ಏನಾದರೂ ಉಪಾಯ ಮಾಡಿ ಕಚನನ್ನು ಕೊಂದು ಮತ್ತೆ ಹುಟ್ಟಿಬರದಂತೆ ಮಾಡಲೇ ಬೇಕೆಂಬ ನಿರ್ಧಾರ ಮಾಡಿ, ಮತ್ತೊಮ್ಮ ಕಚನನ್ನು ಕೊಂದು ದೇಹವನ್ನು ಸುಟ್ಟುಹಾಕಿ, ಆ ಬೂದಿಯನ್ನು ಶುಕ್ಲಾಚಾರ್ಯರಿಗೆ ಮದ್ಯಪಾನದಲ್ಲಿ ಬೆರಸಿ ಕುಡಿಸುತ್ತಾರೆ. 

ಕಚನು ಮತ್ತೆ ಕಾಣೆಯಾಗಿರುವುದನ್ನು ತಿಳಿದ ದೇವಯಾನಿ ವಿಷಯವನ್ನು ತಂದೆಗೆ ತಿಳಿಸಿದಳು. ಶುಕ್ಲಾಚಾರ್ಯರು ದಿವ್ಯ ದೃಷ್ಟಿಯಿಂದ ಹುಡುಕಿದಾಗ, ಕಚನು ಸುಟ್ಟು ಬೂದಿಯಾಗಿ ನನ್ನ ಹೊಟ್ಟೆಯ ಒಳಗೇ ಇದ್ದಾನೆ ಎಂದು ತಿಳಿಸಿ, ಆ ಬೂದಿಯಿಂದ ಮತ್ತೆ ಕಚನನ್ನು ಬದುಕಿಸಬೇಕಿದ್ದಲ್ಲಿ, ನನ್ನ ಹೊಟ್ಟೆಯನ್ನೇ ಸೀಳಬೇಕು. ಹಾಗೆ ನನ್ನ ಹೊಟ್ಟೆಯನ್ನು  ಸೀಳಿದರೆ ನನಗೆ ಮರಣ ಬರುವುದು ಖಚಿತ, ಏನು ಮಾಡಲಿ? ಹೇಳು ಎಂದು ದೇವಯಾನಿಗೆ ತಿಳಿಸಿದರು. 

ಆಗ ದೇವಯಾನಿಗೆ ಹೊಳೆದ ಉಪಾಯ ತಿಳಿಸುತ್ತಾಳೆ.
ತಂದೆಯೇ.., ನಿನ್ನ ದೇಹದ ಒಳಗೆ ಬೂದಿಯಾಗಿ ಇರುವ ಕಚನಿಗೆ ಮೃತಸಂಜೀವಿನಿ ವಿದ್ಯೆಯ ಮಂತ್ರವನ್ನು ಉಪದೇಶ ಮಾಡು, ಆಗ ಕಚನು ಬದುಕಿ ನಿನ್ನ ಹೊಟ್ಟೆಯನ್ನು ಸೀಳಿ ಹೊರಬರುತ್ತಾನೆ. ನಂತರ ನೀನು ಉಪದೇಶಿದ ಮಂತ್ರ ವಿದ್ಯೆಯಿಂದ ನಿನ್ನ ಮೃತ ದೇಹಕ್ಕೆ ಕಚನು ಪ್ರಾಣ ನೀಡಿದಾಗ ನೀನು ಬದಕುಳಿಯಬಹುದಲ್ಲವೇ‌.? ಎಂಬ ಸಲಹೆ ನೀಡಿದಳು. ಅದರಂತೆ ಕಚನು ಮತ್ತೊಮ್ಮೆ ಬದುಕಿ ಶುಕ್ಲಾಚಾರ್ಯರ‌ ಉದರದಿಂದ ಹೊರಬಂದು, ಮರಣ ಹೊಂದಿದ್ದ ಗುರು ಶುಕ್ಲಾಚಾರ್ಯರನ್ನು ಬದುಕಿಸುತ್ತಾನೆ. 

ಯ ಯಾ ತಿ - ೨

ಶುಕ್ಲಾಚಾರ್ಯರ ಉದರದಲ್ಲಿ ಸುರಾಪಾನದ ಜೊತೆಯಲ್ಲಿ ಬೂದಿಯಾಗಿ ಒಳಸೇರಿದ್ದ ಕಚನಿಗೆ ಮೃತ್ಯುಸಂಜೀವಿನಿ ಮಂತ್ರದ ಉಪದೇಶ ಮಾಡಿದ ನಂತರ, ಮತ್ತೆ ಬದುಕಿ ಬಂದ ಕಚನನ್ನು ನೋಡಿದ ದೇವಯಾನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. 
ದೇವಯಾನಿ ತನ್ನನ್ನು ವಿವಾಹ ಮಾಡೊಕೊಳ್ಳುವಂತೆ, ಕಚನಿಗೆ ತಿಳಿಸುತ್ತಾಳೆ. ಆದರೆ ಕಚನು, ತಾನು ನಿನ್ನ ತಂದೆಯಾದ ಶುಕ್ಲಾಚಾರ್ಯರ  ಉದರದಿಂದ ಹೊರಬಂದು ಮರು ಜೀವ ಪಡೆದಿದ್ದೇನೆ, ಹಾಗಾಗಿ ನೀನು ನನ್ನ ಸೋದರಿಯ ಸಮಾನ, ವಿವಾಹ ಮಾಡಿಕೊಳ್ಳು ಸಾಧ್ಯವಿಲ್ಲ, ಎಂದು ನಯವಾಗಿ ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾನೆ.  

|ಯಯಾತಿ, ದೇವಯಾನಿ,ಶರ್ಮಿಷ್ಠೆ|

ರಾಕ್ಷಸರ ರಾಜ್ಯದ ರಾಜನಾದ ವೃಷಪರ್ವನ ಮಗಳು 'ಶರ್ಮಿಷ್ಠೆ' ಮತ್ತು ಗುರು ಶುಕ್ಲಾಚಾರ್ಯರ ಮಗಳಾದ 'ದೇವಯಾನಿ' ಇಬ್ಬರೂ ಬಾಲ್ಯದ ಗೆಳತಿಯರು. ಮುಂದೊಂದು ದಿನ‌ ಇವರಿಬ್ಬರ ನಡುವೆ ಒಂದು ಸಣ್ಣ ವಿಚಾರದಲ್ಲಿ ಜಗಳವಾಗಿ, ಶರ್ಮಿಷ್ಠೆಯು ದೇವಯಾನಿಯನ್ನು ಅರೆ ನಗ್ನ ಸ್ಥಿತಿಯಲ್ಲಿ ನಿರ್ಜನ ಪ್ರದೇಶದ ಬಾವಿಗೆ ದೂಡುತ್ತಾಳೆ. ಬಹಳ ಸಮಯದವರೆಗೂ ದೇವಯಾನಿಯನ್ನು ಕಾಪಾಡಲು ಯಾರೂ ಬರಲಿಲ್ಲ. 
['ನಹುಷ' ಚಂದ್ರ ವಂಶದ ಚಕ್ರವರ್ತಿ. ಪಾಂಡವರ,ಕೌರವರ, ಕುರು ವಂಶದ ಪೂರ್ವಜರಲ್ಲಿ ಪ್ರಮುಖನು. ಇವನ ಮಗನೇ ಯುವರಾಜನಾದ ''ಯಯಾತಿ'']

ಅದೇ ಸಮಯದಲ್ಲಿ ಕಾಡಿನಲ್ಲಿ ಬೇಟೆಯಾಡಲು ಬಂದ ಯುವರಾಜ ಯಯಾತಿಗೆ, "ಕಾಪಾಡೀ, ಕಾಪಾಡೀ" ಎಂಬ ಹೆಣ್ಣಿನ ಧ್ವನಿ ಕೇಳಿಸಿದಾಗ, ಆ ಬಾವಿಯಿಲ್ಲಿ ಅರೆ ನಗ್ನ ಸ್ಥಿತಿಯಲ್ಲಿದ್ದ ದೇವಯಾನಿಯನ್ನು ನೋಡಿ ಕೈಹಿಡಿದು ಮೇಲೆತ್ತುತ್ತಾನೆ.

 ಬಾವಿಯಿಂದ ಹೊರಬಂದ ದೇವಯಾನಿ ಮತ್ತು ಯಯಾತಿಯ ನಡುವೆ ಅನುರಾಗ ಉಂಟಾಗಿ, ಅವರಿಬ್ಬರ ವಿವಾಹವೂ ನಡೆಯಿತು.
ಆದರೆ, ತನ್ನನ್ನು ಬಾವಿಗೆ ತಳ್ಳಿದ ಶರ್ಮಿಷ್ಠೆಯ ಮೇಲಿನ‌ ಕೊಪ ಮಾತ್ರ ಕಡಿಮೆ ಆಗಲಿಲ್ಲ. ತನ್ನ ತಂದೆಯ ಬಳಿ ನಡೆದ ವಿಷಯವನ್ನು ತಿಳಿಸುತ್ತಾಳೆ. ಇದನ್ನು ತಿಳಿದ ಶುಕ್ಲಾಚಾರ್ಯರು, ಶರ್ಮಿಷ್ಠೆಯ ತಂದೆ ವೃಷಪರ್ವನಿಗೆ ವಿಷಯ ತಿಳಿಸಿ, ಇನ್ನು ಮುಂದೆ ನಿನ್ನ ರಾಜ್ಯದಲ್ಲಿ ಇರಲಾರೆ ಎಂದು ತಿಳಿಸಿದರು.

 ತನ್ನ ಮಗಳಾದ ಶರ್ಮಿಷ್ಠೆ ಮಾಡಿದ ತಪ್ಪಿಗಾಗಿ, ನಾನು ಕ್ಷಮೆ ಕೇಳುತ್ತೇನೆ, ಆದರೆ ರಾಜ್ಯ ಬಿಟ್ಟು ಹೋಗಬೇಡಿ ಎಂದು ವಿನಂತಿಸಿಕೊಳ್ಳುತ್ತಾನೆ. ಮಹಾ ಹಠಮಾರಿಯಾದ ದೇವಯಾನಿ ಇದಕ್ಕೆ ಒಪ್ಪಲಿಲ್ಲ. ತಂದೆಯಾದ ಶುಕ್ಲಾಚಾರ್ಯರನ್ನು ಈ ರಾಜ್ಯದಲ್ಲಿ ಇರಲು ಬಿಡುವುದಿಲ್ಲ, ಒಂದು ವೇಳೆ ಈ ರಾಜ್ಯದಲ್ಲಿ ಇರಬೇಕೆನ್ನುವುದಾದರೆ, ಬಾವಿಗೆ ತಳ್ಳಿ, ನನಗೆ ಅಪಮಾನ ಮಾಡಿದ ಶರ್ಮಿಷ್ಠೆಯು ನನ್ನ ಅರಮನೆಯ ಸೇವಕಿಯಾಗಿ ಇರಬೇಕು ಎಂಬ ನಿಭಂದನೆ ವಿಧಿಸುತ್ತಾಳೆ. ಅನ್ಯ ಮಾರ್ಗವಿಲ್ಲದೆ, ರಾಜ ವೃಷಪರ್ವನ ಮಗಳಾದ ಶರ್ಮಿಷ್ಠೆಯು ದೇವಯಾನಿಗೆ ಸೇವಕಳಾಗಿ ಕೆಲಸ ಮಾಡಲು ಒಪ್ಪಿಕೊಳ್ಳುತ್ತಾಳೆ. 

ತಾನು, ಯುವರಾಜನಾದ ಯಯಾತಿಯ ರಾಣಿ ಮತ್ತು ಶರ್ಮಿಷ್ಠೆಯು ನನ್ನ ಸೇವಕಿ ಎಂಬ ಅಹಂಕಾರವು ದೇವಯಾನಿಯ ತಲೆಗೆಹತ್ತಿ ಎಲ್ಲರನ್ನೂ ಅಸಡ್ಡೆಯಾಗಿ ಕಾಣಲು ಪ್ರಾರಂಭ ಮಾಡುತ್ತಾಳೆ. ಕೆಲವೊಮ್ಮೆ ಇದರ ಅನುಭವ ಗಂಡನಾದ ಯಯಾತಿಗೂ ಆಯಿತು.
ಯಯಾತಿಯು ನಿಧಾನವಾಗಿ ದೇವಯಾನಿಯಲ್ಲಿ ಆಸಕ್ತಿ ಕಳೆದುಕೊಂಡು ಶರ್ಮಿಷ್ಠೆಗೆ ಹೆಚ್ಚು ಹತ್ತಿರವಾಗುತ್ತಾನೆ. ಶರ್ಮಿಷ್ಠೆಗೂ ಇದು ಒಂದು ರೀತಿಯಲ್ಲಿ ದೇವಯಾನಿಯ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ದೊರಕಿದಂತಾಯಿತು.
ಯ ಯಾ ತಿ - ೩

ಚಕ್ರವರ್ತಿಯಾದ ಯಯಾತಿ, ದೇವಯಾನಿಗೆ ತಿಳಿಯದಂತೆ ಶರ್ಮಿಷ್ಠೆಯನ್ನು ವಿವಾಹವಾಗುತ್ತಾನೆ.
ದೇವಯಾನಿ ಮತ್ತು ಶರ್ಮಿಷ್ಠೆ ಇಬ್ಬರಿಗೂ ಮಕ್ಕಾಳಾಗುತ್ತದೆ.

ಆದರೂ ಯಯಾತಿಯು ರಾಜ್ಯಭಾರದತ್ತ ಗಮನ ಹರಿಸದೆ, ಅನೇಕ ಸ್ತ್ರೀಯರೊಂದಿಗೆ ತನ್ನ ದೈಹಿಕ ದಾಹಗಳನ್ನು ತೀರಿಸಿಕೊಳ್ಳುದರಲ್ಲೇ ಕಾಲ ಕಳೆಯುತ್ತಾನೆ.

ಯಯಾತಿಯ ಈ ವರ್ತನೆಯಿಂದ ಕೊಪಗೊಂಡ ದೇವಯಾನಿ, ತಂದೆಗೆ ಈ ವಿಚಾರ ತಿಳಿಸಿ, ತನ್ನ ಗಂಡನಿಗೆ ಬುದ್ದಿ ಹೇಳುವಂತೆ ವಿನಂತಿಸುತ್ತಾಳೆ.
ವಿಷಯ ತಿಳಿದ ಶುಕ್ಲಾಚಾರ್ಯರು ಯಯಾತಿಯನ್ನು ಕಂಡು ಕೋಪದಿಂದ, ನಿನಗೆ ಯಾವುದೇ ಸ್ತ್ರೀಯೊಂದಿಗೆ ಸುಖಪಡಲಾಗದ ಮುದಿತನ, ಮುಪ್ಪು ಪ್ರಾಪ್ತಿಯಾಗಲಿ ಎಂಬ ಶಾಪ ನೀಡುತ್ತಾರೆ. 

ಮನನೊಂದ ಯಯಾತಿಯು ಈ ರೀತಿಯ ಕಠೋರ ಶಾಪದಿಂದ ಮುಕ್ತಿ ಪಡೆವ ಮಾರ್ಗವನ್ನು ತಿಳಿಸಬೇಕೆಂದು ಕೊರುತ್ತಾನೆ. ಅದಕ್ಕೆ ಶುಕ್ಲಾಚಾರ್ಯರು, ಯಾವುದೇ ಯೌವ್ವನದ ಪುರುಷ ನಿನ್ನ ಮುಪ್ಪನ್ನು ಸ್ವೀಕರಿಸಿದಾಗ, ಅವನ ಯೌವನ ನಿನಗೆ ಪ್ರಾಪ್ತಿ ಆಗುವುದಾಗಿ ತಿಳಿಸುತ್ತಾರೆ.

ಮುಪ್ಪು ಆವರಿಸಿದ ಯಯಾತಿಯು ಹಲ್ಲು ಕಿತ್ತ ಹಾವಿನಂತಾಗಿ, ಹಲವರಲ್ಲಿ ತನ್ನ ಮುಪ್ಪನ್ನು ಸ್ವೀಕರಿಸಿ, ಯೌವನವನ್ನು ನೀಡುವಂತೆ ಬೇಡುತ್ತಾನೆ. ಯಾರೂ ಒಪ್ಪದಿದ್ದಾಗ, ಕೊನೆಗೆ ತನ್ನ ಮಕ್ಕಳನ್ನೇ ಬೇಡುತ್ತಾನೆ. 

ತನ್ನಿಂದ ದೇವಯಾನಿಗೆ ಜನಿಸಿದ ಮಕ್ಕಳು ಇದಕ್ಕೆ ಒಪ್ಪುವುದಿಲ್ಲ. ಕೊನೆಗ ಶರ್ಮಿಷ್ಠೆಯ ಕೊನೆಯ ಮಗನಾದ "ಪುರು" ತಂದೆಯ ಮುದಿತನವನ್ನು ಸ್ವೀಕರಿಸಿ ತನ್ನ ಯೌವನವನ್ನು ತಂದೆ, ಯಯಾತಿಗೆ ಧಾರೆ ಎರೆಯುತ್ತಾನೆ.

ಮತ್ತಷ್ಟು ದಿನಗಳ ಕಾಲ ಕಾಮದ ಸುಖ ಅನುಭವಿಸಿದ ಯಯಾತಿ, ಕೊನೆಗೆ ಮಗನಾದ 'ಪುರು' ನನ್ನ ಸುಖಕ್ಕಾಗಿ ತಾನು ಮುಪ್ಪಿನಿಂದ ಬಳಲುತ್ತಿರುವುದನ್ನು ನೋಡಿ   ಜೀವನದಲ್ಲಿ ಜಿಗುಪ್ಸೆ ಉಂಟಾಯಿತು. ಕೊನೆಗೆ‌ ಶರ್ಮಿಷ್ಠೆಯ ಮಗ ಪುರು, ತನಗೆ ನೀಡಿದ ಯೌವನವನ್ನು ಹಿಂತಿರುಗಿಸಿ, ತಾನು ಅವನ ಮುಪ್ಪನ್ನು ಸ್ವೀಕರಿಸುತ್ತಾನೆ. 

ಜೀವನದಲ್ಲಿ ಮಾಡಿದ ತನ್ನ ತಪ್ಪುಗಳ ಪ್ರಾಯಶ್ಚಿತ್ತಕ್ಕಾಗಿ ಮಗ 'ಪುರು'ವಿಗೆ ರಾಜ್ಯಭಾರ ನೀಡಿ ಶರ್ಮಿಷ್ಠೆಯೊಂದಿಗೆ, ಯಯಾತಿ ವಾನಪ್ರಸ್ತಕ್ಕೆ ತೆರಳುತ್ತಾನೆ.
----------------------------------------------
ಯಯಾತಿಯ ಬದುಕು, ಜೀವನ ಶೈಲಿಯು ಸಮಾಜಕ್ಕೆ ತಿಳಿಹೇಳಿದ ಸಂದೇಶವೇನು?

ಯಯಾತಿಯ ಜೀವನ ಶೈಲಿ, ನಡೆದ ಘಟನೆಗಳಿಂದ ನಾವು ಅರಿತಿದ್ದಾದರೂ, ಗಳಿಸಿದ್ದಾದರೂ ಏನು‌? ಎಂಬ ಕಾಡುವ ಪ್ರಶ್ನೆ? ಮತ್ತು ಉತ್ತರ ಹುಡುಕುವ ಪ್ರಯತ್ನ.

ಇಲ್ಲಿ 'ಸುಖ' ಮತ್ತು 'ಸಂತೋಷ'ಗಳ ನಡುವೆ ಇರುವ ವ್ಯತ್ಯಾಸಗಳನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ.

ಸುಖ:- ಸುಖ ಎಂಬುದು ವೈಯುಕ್ತಿಕವಾದದ್ದು. ಸುಖವಾದ ನಿದ್ರೆ, ಸುಖವಾದ ಪ್ರಯಾಣ, ಮುಂತಾವುಗಳು ಅವರರು ವೈಯುಕ್ತಿಕವಾಗಿ ಅನುಭವಿಸುವಂತಹ ಪ್ರಕ್ರಿಯೆಗಳು. ಯಾರಿಗೋಸ್ಕರವೋ ಮತ್ತೊಬ್ಬರು ನಿದ್ದೆ ಮಾಡುಲು ಬರುವುದಿಲ್ಲ. ಪ್ರಯಾಣವೂ ಹಾಗೆಯೇ.!
ಸಂತೋಷ:- ಇದು ತಾವೂ ಅನುಭವಿಸಿ ಇತರರೊಂದಿಗೆ ಹಂಚಿಕೊಳ್ಳಬಹುದು. ಹಾಗಾಗಿ, ಸುಖಕ್ಕಿಂತಲೂ ಸಂತೋಷ ಎಂಬುದು ಸಮಾಜಕ್ಕೆ ಅತ್ಯವಶ್ಯಕ ಎಂಬ ಸಂದೇಶ ಇರಬಹುದು.

ಇನ್ನು ಯಯಾತಿ ಜೀವನದಲ್ಲಿ 'ಸುಖ' ಮತ್ತು 'ಸಂತೋಷ'ಗಳನ್ನು ತಾಳೇ ಹಾಕಿ ವಿಮರ್ಶಿಸುವುದಾದರೆ, ಯಯಾತಿ ತನ್ನ ಜೀವನವನ್ನು ಸುಖಕ್ಕೆ ಮಾತ್ರ ಮುಡುಪಾಗಿಟ್ಟ. ಸಂತೋಷ ಹಂಚಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. 
ಸ್ವಾರ್ಥದ ಸುಖಕ್ಕಾಗಿ ತನ್ನ ಹೆಂಡತಿ ದೇವಯಾನಿಗೆ ತಿಳಿಯದಂತೆ ಶರ್ಮಿಷ್ಠೆಯನ್ನು ವಿವಾಹವಾದದ್ದು, ತನ್ನ ಮುಪ್ಪನ್ನು ಮಗನಿಗೆ ನೀಡಿ, ಮಾಗನಿಂದ ಯೌವನವನ್ನು ಕಿತ್ತುಕೊಂಡನಲ್ಲವೇ.! 

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು ಧನ್ಯವಾದಗಳು

shakuntha

ರಾಮಾಯಣದಲ್ಲಿ ವಿಶ್ವಾಮಿತ್ರರ ಪಾತ್ರ ಕೂಡ ಮಹತ್ವ ಪೂರ್ಣವಾದುದು. ತನ್ನ ಸ್ವಾಯತ್ತ ಕಲ್ಪನೆಯಿಂದ ಕ್ಷತ್ರಿಯನಾದ ಕೌಶಿಕ ಮಹಾರಾಜ ಕೇವಲ ತನ್ನ ದೀರ್ಘಕಾಲದ ಉದ್ದಂಡ, ನಿಕಟ, ನಿಷ್ಕಲ್ಮಷ, ಜ್ವಲಂತ ತಪಸ್ಸಿನಿಂದ ಮಹರ್ಷಿಯಾಗಿ ತ್ರಿಶಂಕುವಿಗೆ ಬೇರೊಂದು ಸ್ವರ್ಗವನ್ನೇ ಸೃಷ್ಟಿಸಿ ಹಲವು ಆಖ್ಯಾನಗಳಿಗೆ ಕಾರಣೀಭೂತರಾಗಿ ಬ್ರಹ್ಮರ್ಷಿ ಎಂಬ ಪದವನ್ನು ಪಡೆದ ಹಠಸಾಧಕ ಮಹಾಮುನಿ ವಿಶ್ವಾಮಿತ್ರ. ಇಂತಹ ವಿಶ್ವಾಮಿತ್ರರಿಗೆ ಒಮ್ಮೆ ಏನೋ ಮನಸ್ಸಲ್ಲಿ ಸಂಕಲ್ಪವಾಗಿ ಅವರು ರಾಮನನ್ನು ಕರೆದರು. 

ಶಕುಂತ ಎಂಬ ಸೂರ್ಯವಂಶಜ ವ್ಯಕ್ತಿ ಕ್ರೌಂಚಪಕ್ಷಿಜೋಡಿಯನ್ನು ಬಾಣದಿಂದ ಹೊಡೆದುರುಳಿಸುವಾಗ ಒಂದು ತನ್ನ ಯಜ್ಞಕುಂಡಕ್ಕೆ ಬಿದ್ದು ತನ್ನ ವೃತಭಂಗವಾಯಿತು,ಮಾಡಿದ ತಪ್ಪಿಗೆ ಕ್ಷಮೆಯಾಚಿಸದೇ ತಪ್ಪು ಮಾಡಿದ್ದಾನೆ ಆ ಶಕುಂತ ಆತನನ್ನು ೮ ದಿನಗಳಲ್ಲಿ ವಧಿಸು ಎಂಬುದಾಗಿ ಅಜ್ಞಾಪಿಸಿದರು. ಗುರು ವಿಶ್ವಾಮಿತ್ರರ ಆದೇಶಕ್ಕೆ ರಾಮ ಅಸ್ತು ಎಂದ. ಆ ಕ್ಷಣದಿಂದಲೇ ಪ್ರಾರಂಭವಾಯಿತು ಶಕುಂತನ ಬೇಟೆ!

ಇತ್ತ ತನ್ನ ವಧೆಗಾಗಿ ರಾಮನನ್ನು ನಿಯೋಜಿಸಿದ್ದನ್ನು ಜನರಿಂದ ಕೇಳಿ ತಿಳಿದ ಶಕುಂತ ದಿಕ್ಕಾಪಾಲಾಗಿ ಓಡುತ್ತ ಹನುಮನ ಅಮ್ಮ ಅಂಜನಾದೇವಿಯಿದ್ದಲ್ಲಿಗೆ ಬಂದು ಪಾದಕ್ಕೆ ಬಿದ್ದು ಪ್ರಾಣಭಿಕ್ಷೆ ಬೇಡಿದ. ಯಾರು ಯಾವ ಕಾರಣಕ್ಕೆ ಆತನನ್ನು ಕೊಲ್ಲಲು ಮುಂದಾಗಿದ್ದಾರೆ ಎಂಬುದನ್ನು ಕೇಳಲಾಗಿ ತನಗೆ ಪ್ರಾಣಭಿಕ್ಷೆ ಕೊಡುತ್ತೇನೆಂಬ ವಾಗ್ದಾನ ಕೊಟ್ಟರೆ ಮಾತ್ರ ಆಮೇಲೆ ಅದನ್ನು ತಿಳಿಸುವುದಾಗಿ ಹೇಳಿದ! ಜೀವಭಯದಿಂದ ಹೆದರಿ ಕಂಗಾಲಾಗಿದ್ದ ಆತನಿಗೆ ಅಂಜನಾದೇವಿ ಪ್ರಾಣಭಿಕ್ಷೆಯನ್ನು ಕೊಡುವುದಾಗಿ ವಾಗ್ದಾನ ಮಾಡಿಬಿಟ್ಟಳು! ನಂತರ ತಿಳಿದದ್ದು ಆತನನ್ನು ಕೊಲ್ಲಲು ಬರುತ್ತಿರುವುದು ಸ್ವತಃ ಶ್ರೀರಾಮ ಎಂಬುದು. ಆಗ ಆಕೆ ಕಕ್ಕಾವಿಕ್ಕಿಯಾದಳು. ಕಂದ ಹನುಮನನ್ನು ಕರೆದು ಅಮ್ಮನಾದ ತನಗೆ ಈ ಒಂದು ಆಸೆಯನ್ನು ಪೂರೈಸಿಕೊಡುವಂತೆ ಮಗನಲ್ಲಿ ಮೊರೆಯಿತ್ತಳು.

ಅಯೋಧ್ಯೆಯಲ್ಲಿ ರಾಮ ನಡೆಯುವ ಎಲ್ಲಾ ವರ್ತಮಾನಗಳನ್ನು ತಿಳಿದುಕೊಳ್ಳುತ್ತಲೇ ಇದ್ದ. ಶಕುಂತ ಹನುಮನಿದ್ದಲ್ಲಿಗೆ ಓಡಿರುವುದೂ ಮತ್ತು ಹನುಮನಿಂದ ರಕ್ಷಿತನಾಗಿರುವುದೂ ರಾಮನಿಗೆ ತಿಳಿದುಬಂತು. ರಾಮ ಬಹಳ ಜಂಜಡದಲ್ಲಿ ಸಿಲುಕಿದ್ದ. ಇತ್ತ ಗುರುವಿನ ಅದೇಶವನ್ನು ಪರಿಪಾಲಿಸಬರದು ಅಥವಾ ಅತ್ತ ಸದ್ಭಕ್ತನ ಜೊತೆ ವೈರುಧ್ಯ ಮಾಡಿಕೊಂಡು ಶಕುಂತನಿಗಿಂತಲೂ ಮೊದಲು ಹನುಮಂತನನ್ನು ಮುಗಿಸಬೇಕು-ಎಂತಹ ಪೇಚಾಟ ನೋಡಿ. ಕ್ರುದ್ಧನಾದ ರಾಮ ಅರಮನೆಯ ಉಪ್ಪರಿಗೆಯಲ್ಲಿ ಶತಾಯ ಗತಾಯ ತಿರುಗುತ್ತಿದ್ದ. ಏನುಮಾಡೋಣ ಏನುಮಾಡೋಣ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದ. ಹಾಗೂ ಹೀಗೂ ಮನದಲ್ಲೇ ಒದ್ದಾಡುತ್ತ ದಿನವೊಂದನ್ನು ಕಳೆದ ರಾಮ. ಹಾಗಂತ ಶಕುಂತನನ್ನು ಮುಗಿಸುವ ಕಾರ್ಯವನ್ನು ಬಹಳ ಮುಂದೂಡುವಂತಿರಲಿಲ್ಲ.

ಇತ್ತ ರಾಮ ಹೊರಗಡೆಗೆ ಹೋದ ಸಮಯದಲ್ಲಿ ಅಂಜನಾದೇವಿ ಅಯೋಧ್ಯೆಗೆ ಹಣ್ಣು-ಹೂವಿನೊಂದಿಗೆ ಬಂದು ದೇವೀ ಎಂದು ಕರೆದು ತನ್ನ ಅಳಲನ್ನು ಸೀತಾಮಾತೆಗೆ ತೋಡಿಕೊಂಡಳು. ಸೀತೆಯ ಮನಸ್ಸು ಅವಳ ಅಹವಾಲನ್ನು ಅವಲೋಕಿಸಿ, ಅನಸೂಯಾ ದೇವಿಯಿಂದ ಪ್ರೇರಿತವಾದ ಪತಿವೃತಾಧರ್ಮದ ಫಲಾಫಲದ ಪರಿಶೀಲನೆಗಾಗಿಯೂ ಮತ್ತು ಹಿಂದೆ ಹನುಮನಿಂದ ಪಡೆದ ಸೇವೆಯ ಕೃತಜ್ಞತಾರ್ಥವಾಗಿಯೂ ಎರಡು ವರಗಳನ್ನು ಅನುಗ್ರಹಿಸಿತು. 

ಮೊದಲನೆಯದಾಗಿ ರಾಮ ಹನುಮನ ಮೇಲೆ ಬಿಡುವ ಎಲ್ಲಾ ಬಾಣಗಳೂ ಶಾಂಡಿಲ್ಯಪತ್ರೆಗಳಾಗಿ, ಬಿಲ್ವಪತ್ರೆಗಳಾಗಿ,ತುಳಸೀದಳಗಳಾಗಿ ಆತನಮೇಲೆ ಬೀಳಲಿ, ಎರಡನೆಯದು ರಾಮ ಬ್ರಹ್ಮಾಸ್ತ್ರವನ್ನು ಹನುಮನ ಮೇಲೆ ಪ್ರಯೋಗಿಸಿದರೆ ಅದು ವೈಜಯಂತೀ ಹಾರವಾಗಿ ಆತನ ಕೊರಳಲ್ಲಿ ವಿಜೃಂಭಿಸಲಿ-ಎಂಬೀ ವರಗಳನ್ನು ಪಡೆದು ಹೊರಟುಹೋದಳು. ಈ ವಿಷಯವನ್ನು ರಾಮನಲ್ಲಿ ಸೀತೆ ಭಿನ್ನವಿಸಲಿಲ್ಲ, ಆ ಕಾರಣ ರಾಮನಿಗೆ ಇದು ತಿಳಿಯಲೇ ಇಲ್ಲ. ಹಾಗಂತ ಸೀತೆಯ ಕಪಟತನವಲ್ಲ ಇದು! ತನಗೋಸ್ಕರ ಲಂಕೆಯವರೆಗೆ ಜೀವವನ್ನೇ ಪಣವಾಗಿಟ್ಟು ಹಾರಿಬಂದು ತನ್ನನ್ನು ಪರೋಕ್ಷವಾಗಿ ರಕ್ಷಿಸಿದ, ತನ್ನ ಮಗನ ಸಮಾನನೆಂದು ಸೀತೆ ತಿಳಿದುಕೊಂಡ ಹನುಮನ ರಕ್ಷಣೆಯ ಕಾರ್ಯದಲ್ಲಿ ಅವಳಿಗೆ ಆಸಕ್ತಿ ಇತ್ತು, ತಾಯಿಯ ಮಮತೆ-ವಾತ್ಸಲ್ಯ ಇತ್ತು, ಮಗುವಿನ ಮೇಲಿರುವಂತಹ ಪ್ರೇಮವಿತ್ತು. ರಾಮನ ಮನಸ್ಸನ್ನು ಬದಲಾಯಿಸಿ ಹೇಗಾದರೂ ಮಾಡಿ ಯುದ್ಧವನ್ನು ತಪ್ಪಿಸಿಬೇಕೆಂಬ ಇರಾದೆ ಅವಳದಾಗಿತ್ತು. ಅದಕ್ಕಾಗಿ ಅವಳು ರಾಮನ ಬರವನ್ನೇ[ಬರುವಿಕೆಯನ್ನೆ]ಕಾದಳು.

ರಾಮ ಬಂದ, ತಿಂಡಿ ಬೇಡ-ಊಟಬೇಡ, ಕನಸಲ್ಲೂ ಅದೇ ಕನವರಿಕೆ, ರಾಮನ ಮುಖ ತುಂಬಾ ಕೆಂಪಡರಿ ಹೋಗಿತ್ತು. ಸೈರಣೆಯನ್ನೇ ಕಳೆದುಕೊಂಡಿದ್ದ ರಾಮ ತನ್ನೋಳಗೇ ಹೊಯ್ದಾಡುತ್ತಿದ್ದ. ಏನುಮಾಡಲಿ ಏನುಮಾಡಲಿ--ಅಂದುಕೊಳ್ಳುತ್ತ ಅದೇ ಕೈ ಕೈ ಹಿಸುಕಿಕೊಳ್ಳುವ ಕೆಲಸ. ಇದನ್ನು ಪರಾಂಬರಿಸಿದ ಸೀತೆ ರಾಮನ ಸಮಸ್ಯೆ ಏನೆಂಬುದನ್ನು ಕೇಳಿದಳು.[ತನಗೆ ಅದರ ಅರಿವಿದೆಯೆಂಬುದನ್ನು ಅವನ ಗಮನಕ್ಕೆ ತರಲಿಲ್ಲ, ತಂದರೆ ರಾಮಾಯಣದ ಕಥೆ ಇನ್ನೇನೋ ಆಗುತ್ತಿತ್ತೇನೋ!] ರಾಮ ವಿವರಿಸಿದ. 

ತಾನು ಕೊಲ್ಲಬೇಕಾದ ಶಕುಂತನನ್ನು ಹನುಮ ಬಚ್ಚಿಟ್ಟು ಪರೋಕ್ಷ ಸ್ವಾಮಿದ್ರೋಹಮಾಡಿದ್ದಾನೆ, ಹನುಮನನ್ನು ಕೊಲ್ಲದೇ ವಿಧಿಯಿಲ್ಲ, ಆ ಕಪಿಗೆ ಕಪಿ ಬುದ್ಧಿಯನ್ನು ಬಿಟ್ಟು ಬೇರೆ ಬುದ್ಧಿ ಬರಲು ಆತ ಹುಟ್ಟಿದ್ದು ಕಪಿಯಜಾತಿಯಲ್ಲಲ್ಲವೇ ? ಎಂದೆಲ್ಲ ಬಡಬಡಾಯಿಸಿದ. ಮನದಲ್ಲಿ ಒಮ್ಮೆ ಕನಿಕರವೂ ಇನ್ನೊಮ್ಮೆ ಕೋಪವೂ ಉಕ್ಕಿಹರಿಯುತ್ತಿತ್ತು. ತನಗಾಗಿ ಹನುಮ ಮಾಡಿದ ಸೇವೆಯನ್ನು ನೆನೆದು ರಾಮ ಬಹಳ ದಯಾರ್ದ್ರ ಹೃದಯವನ್ನು ತಳೆಯುತ್ತಾನೆ -ಮರುಕ್ಷಣ ತನ್ನ ಗುರುವಿನ ವೈರಿಯನ್ನು ತನ್ನಿಂದ ಅಡಗಿಸಿಟ್ಟು ಹನುಮ ಆತನನ್ನು ರಕ್ಷಿಸಿ ಸ್ವಾಮಿದ್ರೋಹಿಯಾದ ಎಂಬುದನ್ನು ನೆನೆದು ರಾಮ ವಜ್ರದಷ್ಟು ಕಠೋರನಾಗುತ್ತಾನೆ! ಈ ಎರಡೂ ಆಚೆ-ಈಚೆ ಆಚೆ-ಈಚೆ ಮನದ ಮಗ್ಗಲುಬದಲಿಸುತ್ತ ರಾಮನಿಗೆ ಕೊನೆಗೊಮ್ಮೆ ಕಿವಿಯಲ್ಲಿ ಕಾದ ಸೀಸವನ್ನು ಸುರುವಿದ ಅನುಭವವಾಗಿದೆ! ನಿಂತ ಮೆಟ್ಟಲ್ಲೇ ಹೊರಡುವ ನಿರ್ಧಾರಕ್ಕೆ ಬಂದ ರಾಮನನ್ನು ಮಡದಿ ಸೀತೆ ಏನೇ ಹೇಳಿದರೂ ಕೇಳದೇ ಹಿಂಬಾಲಿಸಿದ್ದಾಳೆ.

ಅಡವಿಗೆ ನಡೆತಂದ ಶ್ರೀರಾಮ ಅಂಗದ ಮುಂತಾದ ಕೆಳದರ್ಜೆಯ ವಾನರ ನಾಯಕರನ್ನು ಕರೆದು ಹನುಮನಿಗೆ ಸುದ್ದಿ ತಲ್ಪಿಸಿ ಯುದ್ಧಕ್ಕೆ ದುರವೀಳ್ಯವನ್ನು ಕಳುಹಿಸಿದ್ದಾನೆ. ದೂರದಿಂದ ಓಡೋಡಿ ಬಂದ ಅವರು ಮಾರುತಿಗೆ ನಡೆದ ವಿಷಯವನ್ನೆಲ್ಲ ಅರುಹಿದ್ದಾರೆ, ಶಕುಂತನನ್ನು ಬಿಟ್ಟುಕೊಡುವಂತೆ ಬೇಡಿದ್ದಾರೆ. ಆದರೆ ಹನುಮ ಬಿಡಬೇಕಲ್ಲ! ಆತ ಅಮ್ಮನಿಗೆ ಮಾತುಕೊಟ್ಟಿದ್ದ! ತನ್ನ ಪ್ರಾಣವನ್ನಾದರೂ ಕೊಟ್ಟಾನೆಯೇ ಹೊರತು ಜೀವ ಇರುವವರೆಗೆ ಶಕುಂತನ ಕೂದಲೂ ಕೊಂಕದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದನ್ನು ಆತ ಯಾವುದೇ ಕಾರಣಕ್ಕೂ ಅಲ್ಲಗಳೆಯಲಿಲ್ಲ, ಅದನ್ನು ಕಾರ್ಯಗತಗೊಳಿಸದೇ ಬಿಡಲೂ ಸಿದ್ಧನಿರಲಿಲ್ಲ. ಆದರೂ ನಿತ್ಯ ನೈಮಿತ್ತಿಕ ಆಚರಣೆಯಂತೇ ರಾಮಭಜನೆಯಲ್ಲೇ ತಲ್ಲೀನನಾಗಿದ್ದ ಹನುಮ.

ರಾಮನ ಪುರಪ್ರವೇಶವಾಯಿತು. ರಾಮ ಹನುಮನಿದ್ದಲ್ಲಿಗೆ ಧಾವಿಸಿಬಿಟ್ಟ. ಇನ್ನೇನು ಬಾಣಪ್ರಯೋಗವಷ್ಟೇ ಬಾಕಿ! ಆದರೂ ಮಗುವಿನ ಥರದ ಮಾರುತಿಯನ್ನು ನೋಡಿ ಶಕುಂತನನ್ನು ಬಿಟ್ಟುಬಿಡುವಂತೆ ಸ್ವತಃ ಬುದ್ಧಿವಾದ ಹೇಳಿದ. ಎಷ್ಟೇ ಹೆಳಿದರೂ ಕೇಳದ ಹನುಮಂತ ರಾಮನೊಡನೆ ಯುದ್ಧವನ್ನೇ ಬೇಕಾದರೂ ಮಾಡಿಯೇನು ಆದರೆ ಶಕುಂತನನ್ನು ಬಿಡಲೊಲ್ಲೆ ಎಂದು ಪಟ್ಟುಹಿಡಿದ. ಯುದ್ಧ ನಡೆಯಿತು. ರಾಮ ನಾಮವನ್ನು ಜಪಿಸುತ್ತ ಕುಳಿತ ಹನುಮ, ಆಅತನ ಮೇಲೆ ಬಾಣಗಳ ಪ್ರಯೋಗಕ್ಕೆ ಮುಂದಾದ ರಾಮ. ನಡುವೆ ಬಾನಂಗಳದಿಂದ ಭಾಸ್ಕರ ವಾಲುತ್ತ ಮುಳುಗತೊಡಗಿದ. 

ಇದನ್ನು ದೂರಗ್ರಾಹಿಯಾಗಿ ನೋಡುತ್ತ ನಿಂತ ವಿಶ್ವಾಮಿತ್ರರು ಅಲ್ಲಿಗೆ ಬಂದು ರಾಮಾ ನೀನು ಇಷ್ಟುಹೊತ್ತು ಅಡೆನು ಮಾಡಿದೆ? ಸಂಜೆ ಸಮೀಪಿಸಿದರೂ ನಿನ್ನಿಂದ ಶಕುಂತನನ್ನು ವಧಿಸಲಾಗಲಿಲ್ಲವಲ್ಲಾ...ಅದೋ ನೋಡು ಸೂರ್ಯನಿಗೆ ತಡೆಹಿಡಿಯುತ್ತಿದ್ದೇನೆ ಬೇಗನೇ ಯುದ್ಧ ಪೂರೈಸಿ ಮುಗಿಸು ಎಂದರು. ವಿಶ್ವಾಮಿತ್ರರು ಅಷ್ಟುಮಾಡಿದ್ದೇ ತಡ ರಾಮ ಎಲ್ಲಿಲ್ಲದ ಅಸ್ತ್ರಗಳನ್ನು ಮಾರುತಿಯ ಮೇಲೆ ಪ್ರಯೋಗಿಸತೊಡಗಿದ.

ಉಹುಂ..ಏನೂ ಪ್ರಯೋಜನವಾಗಲಿಲ್ಲ. ಎಲ್ಲವೂ ಶಾಂಡಿಲ್ಯ, ಭಿಲ್ವ ಮುಂತಾದ ಪತ್ರೆಗಳಾಗಿ ಹನುಮನ ತಲೆಯಮೇಲೆ ಬೀಳುತ್ತಿದ್ದವು. ಕೊನೆಗೊಮ್ಮೆ ಬ್ರಹ್ಮಾಸ್ತ್ರ ಪ್ರಯೋಗಿಸಿದ. ಅದು ವೈಜಯಂತೀ ಹಾರವಾಗಿ ಹನುಮನ ಕೊರಳಿಗೆ ಬಂದು ಬಿತ್ತು. ಬಹಳ ಆಶ್ಚರ್ಯಚಕಿತನಾದ ರಾಮ ಜೊತೆಗೇ ಇದ್ದ ಸೀತೆಯನ್ನು ಕೇಳಿದ. ಆಗ ಆಕೆ ಹಿಂದೆ ನೀಡಿದ ವರಗಳನ್ನು ಹೇಳಿದಳು. 

ಪುನಃ ಕೋಪಗೊಂಡ ರಾಮ ನಾರಾಯಣಾಸ್ತ್ರವನ್ನು ಹೊಅರತೆಗೆದ..ಇನ್ನೇನು ಬಿಡಬೇಕು..ಅಷ್ಟರಲ್ಲಿ ಪುನಃ ವಿಶ್ವಾಮಿತ್ರರು ಪ್ರತ್ಯಕ್ಷರಾಗಿ ರಾಮನನ್ನು ತಡೆದರು. ಹಿಡಿದಿರುವ ನಾರಾಯಣಾಸ್ತ್ರದಿಂದ ಪ್ರಳಯಸದೃಶ ವಾತಾವರಾಣ ಉಂಟಾಗಿ ಹಲವು ಸಾವು-ನೋವು ಸಂಭವಿಸುವುದರಿಂದ ಅದು ಬೇಡವೆಂತಲೂ ಯಾವ ಶಕುಂತನಿಗಾಗಿ ರಾಮ ಹುಡುಕುತ್ತಿದ್ದಾನೋ ಅವನ ರುಂಡ ಅಲ್ಲಿ ಬಿದ್ದಿದೆ ನೋಡು ಎಂತಲೂ ರಾಮನಿಗೆ ಅಪ್ಪಣೆಕೊಡಿಸಿದರು. 

ಒಪ್ಪಿದ ಮಾತನ್ನು ತಾನು ಪೂರೈಸಿಕೊಟ್ಟದ್ದಕ್ಕೆ ರಾಮನಿಗೆ ಸಮಧಾನವಾಯಿತು, ಆದರೆ ಅದನ್ನು ಹನುಮನಿಗೂ ಹೇಳಿಬಿಡು ಎಂದು ಹೇಳಿದರು ವಿಶ್ವಾಮಿತ್ರರು. ಸತ್ತ ಶಕುಂತನನ್ನು ಕಂಡು ಹನುಮ ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂದು ಕ್ರುದ್ಧಗೊಂಡ ಹನುಮ ಇದೆಲ್ಲಾ ಆ ಮುನಿಯ ಆಟವೆಂದು ವಿಶ್ವಾಮಿತ್ರರ ಮೇಲೆ ಹರಿಹಾಯತೊಡಗಿದಾಗ ಮಧ್ಯೆ ನಾರದರ ಪ್ರವೇಶವಾಯಿತು. ನಾರದರು ಬರುಬರುತ್ತಿದ್ದಂತೆ ಹನುಮನಿಗೆ ಸಶರೀರಿಯಾಗಿ ಜೀವಂತವಿರುವ ಶಕುಂತನನ್ನು ತೋರಿಸಿದರು. 

ತನ್ಮೂಲಕ ಅಲ್ಲಿ ಏನು ನಡೆಯಿತು ಎಂಬುದನ್ನು ವಿಸ್ತರಿಸಿ ಹೇಳಿದರು. ರಾಮ-ರಾಮನಾಮ ಈ ಎರಡರ ಮಹಾತ್ಮೆಯನ್ನು ಜಗತ್ತಿಗೆ ತೋರುವ ಸಲುವಾಗಿ ಅದರಲ್ಲೂ ರಾಮನಾಮಕ್ಕೆ ಸರಿಸಾಟಿಯಾದ ನಾಮವಿಲ್ಲ ಎಂಬುದನ್ನು ಸಾರುವುದಕ್ಕಾಗಿ ಅದನ್ನು ಪ್ರಚುರಪಡಿಸಲು ಹನುಮನೇ ಸರಿಯಾದ ಭಕ್ತ ಎಂಬುದನ್ನು ಮನಗಂಡು ಇಷ್ಟೆಲ್ಲ ನಾಟಕವನ್ನು ಮುನಿ ವಿಶ್ವಾಮಿತ್ರರು ಹೆಣೆದಿದ್ದರು ಎಂಬುದನ್ನು ತಿಳಿಸಿದರು.

ವಿಷಯ ತಿಳಿದ ಹನುಮ ಬಹಳ ಸಂತೊಷಗೊಂಡ. ಲೋಕದಲ್ಲಿ ಯಾರೂ ಕೃತಘ್ನರಾಗಿರಬಾರದು, ಬದುಕಿನಲ್ಲಿ ಕೃತಜ್ಞತಾಭಾವ ಬಹಳ ದೊಡ್ಡದು--ಇದನ್ನೂ ಕೂಡ ಈ ಕಥೆಯಿಂದ ಲೋಕಾರ್ಪಣೆಮಾಡಿದ ಮುನಿಗಳಿಗೆ ಎಲ್ಲರೂ ಅಭಿವಂದಿಸೋಣ ಎಂಬಲ್ಲಿಗೆ ರಾಮ-ಸೀತೆಯರನ್ನು ಮತ್ತೆ ಹನುಮ ಸುತ್ತುತ್ತ ತನ್ನ ಭಕ್ತಿಯನ್ನು ಪುನಃ ಅಭಿವ್ಯಕ್ತಗೊಳಿಸಿದ.

 ರಾ ಎನ್ನುವಾಗ ಸಕಲ ಪಾಪಗಳೂ ನಮ್ಮ ಬಾಯಿಂದ ಹಒಅರಗೆ ಹೋಗಿ ಮ ಎಂದಾಗ ಹೊರಗಿನ ಪಾಪಗಳು ಒಳಗೆ ಬಾರದಂತೆ ತುಟಿ ಮುಚ್ಚಿಕೊಳ್ಳುವುದರಿಂದ ಈ ರಾಮ ಶಬ್ಧ ಅತಿ ವಿಶಿಷ್ಟವಾಗಿದೆಯೆಂತಲೂ, ಮಹಾವಿಷ್ಣುವಿನ ಕುರಿತ ಅಷ್ಟಾಕ್ಷರೀ ಮಹಾಮಂತ್ರದಿಂದ ’ರಾ’ ಎನ್ನುವ ಅಕ್ಷರವನ್ನೂ ಶಿವಪಂಚಾಕ್ಷರಿ ಮಹಾಮಂತ್ರದಿಂದ ’ಮ’ ಎಂಬ ಅಕ್ಷರವನ್ನೂ ತೆಗೆದು ಪೋಣಿಸಿ ’ರಾಮ’ಎಂದು ಹೆಸರಿಡಲಾಗಿದ್ದನ್ನು ಮಹರ್ಷಿ ವಿಶ್ವಾಮಿತ್ರರೂ ಮತ್ತು ನಾರದರೂ ನೆನಪಿಸಿಕೊಂಡರು, ರಾಮನಾಮ ಜಪದ ಫಲವಾಗಿ ಹನುಮ ಸೋಲಲಿಲ್ಲ ಮಾತ್ರವಲ್ಲ ಶಕುಂತನೂ ಬದುಕುಳಿದ ಎಂಬುದನ್ನು ಜಗತ್ತು ನೋಡಿ ನಲಿಯಿತು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಮಾನವನ ದೇಹ ಮತ್ತು ಆತ್ಮ

ಇಂದು ಸಂಕಷ್ಟ ಹರ ಚತುರ್ಥಿ ವಿಶೇಷ ಆಲಂಕಾರಿಕ ಗಣೇಶ ದರ್ಶನ

|| ಮಾನವನ ದೇಹ ಮತ್ತು ಆತ್ಮ ||

ಒಬ್ಬ ಶಿಷ್ಯ ತನ್ನ ಗುರುವನ್ನು ಕೇಳಿದ ಪ್ರಶ್ನೆ ಹೀಗಿತ್ತು.
 
ಶಿಷ್ಯ :-  ಗುರುಗಳೇ, ನಮ್ಮ ದೇಹ ನಶ್ವರ ಎಂಬುದು ತಿಳಿದಿದೆ, ಹಾಗಿದ್ದಲ್ಲಿ ದೇಹದೊಡನೆ ಇರುವ ಆತ್ಮಕ್ಕೆ ಮರಣವಿಲ್ಲ ಎಂಬುದು ಸರಿಯೇ, ಮತ್ತು ಆತ್ಮವೂ ಸಹಾ ದೇಹದೊಂದಿಗೆ ಮರಣ ಹೊಂದ ಬೇಕಲ್ಲವೇ...?

ಗುರುಗಳು :-  ದೇಹ ಮತ್ತು ಆತ್ಮ ಎಂಬುದು ಒಟ್ಟಿಗೆ ಇದ್ದರೂ ಅವುಗಳು ಬೇರೆ, ಬೇರೆಯೇ. ಅದು ಹೇಗೆಂಬುದನ್ನು ನೋಡೋಣ.

1. ಗೋವು ನೀಡುವ ಹಾಲನ್ನು ನಾವು ಕೇವಲ ಒಂದು ದಿನ ಮಾತ್ರ ಕೆಡದೆ, ಹಾಳಾಗದಂತೆ ಕಾಪಾಡಬಹುದು.

2. ಅದಕ್ಕೆ ಸ್ವಲ್ಪ ಹುಳಿ ಮೊಸರು ಸೇರಿಸಿದಾಗ ಅದು ಮೊಸರಾಗಿ ಮತ್ತೊಂದು ದಿನ ಕಾಪಾಡ ಬಹುದು.

3. ಅದೇ ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆದಾಗ, ಬೆಣ್ಣೆಯು ಹಾಳಾಗದಂತೆ ಮತ್ತಷ್ಟು ದಿನ ಕಾಪಾಡ ಬಹುದು. 

4. ಕೆಲವು ದಿನಗಳ ನಂತರ ಆ ಬೆಣ್ಣೆ ಸಹಾ ಕೆಟ್ಟು ಹಾಳಾಗುವುದು ಸಹಜ. ಆದರೆ, ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿದಾಗ ಬಹಳಷ್ಟು ದಿನ ಕೆಡದಂತೆ ಕಾಪಾಡ ಬಹುದು.

ಅಂದರೆ ಹಾಲಿನಲ್ಲಿ ಇರುವ ತುಪ್ಪವು ಅಗೋಚರ ಪದಾರ್ಥ. 

ತುಪ್ಪವು ಹಾಲಿನಲ್ಲಿನ ಒಂದು ಅಂಶವಾದರೂ, ಹಾಲಿನೊಂದಿಗೆ ಇದ್ದಾಗ ಹೆಚ್ಚು ದಿನ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. 

ಅದೇ ಹಾಲನ್ನು ಮೊಸರಾಗಿಸಿ,ಬೆಣ್ಣೆಯನ್ನು ತೆಗೆದು ತುಪ್ಪ ಮಾಡಿದಾಗ ಮಾತ್ರ ದೀರ್ಘಕಾಲ ಕಾಪಾಡಿ ಉಪಯೋಗಿಸಲು ಯೋಗ್ಯ.

ಹಾಗಾಗಿ ಹಾಲಿನಲ್ಲಿ ಅಡಗಿರುವ ತುಪ್ಪವು ನಮ್ಮ ಕಣ್ಣಿಗೆ ಕಾಣದ ವಸ್ತು ಅದು ಆತ್ಮವಿದ್ದಂತೆ, ಹಾಲು ದೇಹವಿದ್ದಂತೆ. ಹಾಲು ತಾನು ಹಾಲಿನ ಸ್ವರೂಪದಲ್ಲೇ ಇದ್ದಾಗ ಅದರಲ್ಲಿನ ತುಪ್ಪದ ಅಂಶ ಸಹಾ ಬೇಗನೆ ಹಾಳಾಗುವುದು ಸಹಜ. ಅದಕ್ಕೆ ಮತ್ತೊಂದು ತುಪ್ಪದ ರೂಪ ಕೊಟ್ಟಲ್ಲಿ ಅದರ ಬಾಳಿಕೆ ಅಧಿಕ.

ನಾವು ಭಗವಂತನ್ನು ಕುರಿತು  ಪಠಿಸುವುದು, ಪ್ರಾರ್ಥಿಸುವುದು, ಆಚರಿಸುವುದು ನಮ್ಮ 'ದೇಹದ' ಭಾಗಗಳಾದ "ಬಾಯಿ" ಹಾಗೂ "ಕೈ"ಗಳ ಮುಖೇನವಾದರೂ ಸ್ಮರಣೆ ಮಾತ್ರ ಅಂತರಂಗದ ಆತ್ಮದಿಂದ ಮಾತ್ರ. 

ಹೇಗೆ ಹಾಲಿನಲ್ಲಿ ಅಡಗಿರುವ ಅಗೋಚರ ತುಪ್ಪ ಹಾಲಿನಿಂದ ಬೇರ್ಪಡಿಸಿಕೊಂಡು, ಹೊಸ ರೂಪ ತಾಳಿ ಹೆಚ್ಚು ಸಮಯ ಉಳಿಯತ್ತದೆ. ಅದೇರೀತಿಯಲ್ಲಿ, ಆತ್ಮವೂ ಈ ನಶ್ವರ ದೇಹ ಮರಣಹೊಂದಿದಾಗ ಆತ್ಮವು ಹಾಲಿನಿಂದ ಬೇರ್ಪಟ್ಟ ತುಪ್ಪದಂತೆ ಬೇರ್ಪಟ್ಟು ಹೊಸರೂಪ ತಾಳಿ ದೀರ್ಘ ಸಮಯ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತದೆ.

ಇದೆಲ್ಲವನ್ನೂ ಮೀರಿ ಆತ್ಮವು ಭಗವಂತನಲ್ಲಿ ಐಕ್ಯವಾದಾಗ, ಅದುವೇ ಆತ್ಮಕ್ಕೆ ದೊರಕುವ ಮುಕ್ತಿ, ಆತ್ಮದ ಅಂತ್ಯ. ಅಲ್ಲಿಗೆ ದೇಹ ಮತ್ತು ಆತ್ಮ ಎರಡಕ್ಕೂ ಅಂತ್ಯ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಧನುರ್ ಮಾಸ ವ್ರತ ಪ್ರಾರಂಭವಾದುದು ಹೇಗೆ?

ಧನುರ್ ಮಾಸ ವ್ರತ ಪ್ರಾರಂಭವಾದುದು ಹೇಗೆ?

ಒಮ್ಮೆ ಬ್ರಹ್ಮ ದೇವನು ಹಂಸ ಪಕ್ಷಿಯ ಅವತಾರ ಮಾಡಿಕೊಂಡು ಲೋಕ ಸಂಚಾರ ಮಾಡುತ್ತಿದ್ದನು.

 ಆ ಸಮಯದಲ್ಲಿ ಸೂರ್ಯ ದೇವನು ಹೆಚ್ಚಿನ ಬೆಳಕು ಮತ್ತು ಶಾಖವನ್ನು ಬ್ರಹ್ಮನ (ಹಂಸ) ಮೇಲೆ ಪ್ರಯೋಗಿಸಿದನು. 

ಇದರಿಂದ ಕೋಪಗೊಂಡ ಬ್ರಹ್ಮ ದೇವನು ನಿನ್ನ ತೇಜೋಬಲ ಕ್ಷೀಣಿಸಲಿ ಎಂದು ಸೂರ್ಯನಿಗೆ ಶಾಪ ಕೊಟ್ಟ. 

ತಕ್ಷಣ ಸೂರ್ಯನು ಕಾಂತಿಹೀನನಾಗಿ ತನ್ನ ಪ್ರಕಾಶಮಾನವನ್ನು ಕಳೆದುಕೊಂಡನು. ಇದರಿಂದ ಭೂಲೋಕದಲ್ಲಿ ಅಲ್ಲೋಲಕಲ್ಲೋಲವಾಯಿತು. 

ಸೂರ್ಯನಿಲ್ಲದೆ ಜಪ -ತಪ, ಹೋಮ-ಹವನಗಳು ನಿಂತುಹೋಯಿತು. ದೇವತೆಗಳ ಮತ್ತು ಋಷಿಗಳ ನಿತ್ಯ ಕಾರ್ಯಗಳಿಗೆ ತೊಂದರೆ ಆಯಿತು. 

ಹಲವು ವರ್ಷಗಳ ಕಾಲ ದೇವತೆಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು. 

ಬ್ರಹ್ಮ ಪ್ರತ್ಯಕ್ಷನಾದ, ಸೂರ್ಯನಿಗೆ ಕೊಟ್ಟ ಶಾಪ ವಿಮೋಚನೆ ಮಾಡು ಎಂದು ಕೇಳಿದ. 

ಸೂರ್ಯನು ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನನ್ನು ಪೂಜೆ ಮಾಡಿದರೆ ನನ್ನ ಶಾಪ ವಿಮೋಚನೆ ಆಗುವುದು ಎಂದು ನುಡಿದನು. 

ಅದರಂತೆ ಸೂರ್ಯನು 16 ವರ್ಷಗಳ ಕಾಲ ಮಹಾವಿಷ್ಣುವಿನ ಪೂಜೆ ಮಾಡಿ ತನ್ನ ತೇಜಸ್ಸು ಮತ್ತು ಶಕ್ತಿಯನ್ನು ಪಡೆದುಕೊಂಡನು. ಸೂರ್ಯ ದೇವನಿಂದಲೇ ಆರಂಭವಾದ ಈ ಪೂಜೆ ನಂತರ ಲೋಕದಲ್ಲೆಲ್ಲ ಪ್ರಚಾರವಾಯಿತು.

ಧನುರ್ಮಾಸವನ್ನು ಶೂನ್ಯ ಮಾಸ ಎಂದೂ ಕರೆಯುತ್ತಾರೆ. ಈ ಮಾಸದಲ್ಲಿ ಶುಭ ಕಾರ್ಯಗಳಾದ ಮದುವೆ, ಗೃಹ ಪ್ರವೇಶ, ಉಪನಯನ ಮುಂತಾದ ಕಾರ್ಯಗಳನ್ನು ಮಾಡುವುದಿಲ್ಲ.

ಧನುರ್ಮಾಸ ವ್ರತವನ್ನು ಅಗಸ್ತ್ಯ ಮಹರ್ಷಿ, ವಿಶ್ವಾಮಿತ್ರ, ಗೌತಮ ಮಹರ್ಷಿ, ಭೃಗು ಮಹರ್ಷಿ ಇನ್ನೂ ಅನೇಕ ದೇವಾನು ದೇವತೆಗಳು ಮಾಡಿರುವವರು.ಅಲ್ಲದೆ ಪಾರ್ವತಿಯೇ ಈ ವ್ರತವನ್ನು ಮಾಡಿ ಶಿವನನ್ನು ಮತ್ತೆ ಪತಿಯಾಗಿ ಪಡೆದಳು.

ಈ ವ್ರತವನ್ನು ಯಾರು ಮಾಡಿದರೆ ಹೆಚ್ಚಿನ ಫಲ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ

* ಧನುರ್ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಜಾತಕದಲ್ಲಿ ರವಿ ಗ್ರಹವು ಧನುಸ್ಸು ರಾಶಿಯಲ್ಲಿ ಇರುತ್ತಾನೆ. ಇವರು ಈ ವ್ರತವನ್ನು ಮಾಡಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ.

* ಜಾತಕದಲ್ಲಿ ರವಿ ಮ್ತು ಗುರು ಗ್ರಹವು ಒಂದೇ ರಾಶಿಯಲ್ಲಿದ್ದರೆ ಅಂಥವರು ಈ ಧನುರ್ಮಾಸದ ಪೂಜೆಯನ್ನು ಮಾಡಿದರೆ ಬುದ್ಧಿಶಕ್ತಿ ಹೆಚ್ಚುತ್ತದೆ.

* ಗರ್ಭಿಣಿಯರು ಈ ವ್ರತವನ್ನು ಮಾಡಿದರೆ ಒಳ್ಳೆಯ ಸಂತಾನ ಪಡೆಯಬಹುದು.

* ಸಂತಾನ ಇಲ್ಲದವರು ಸಂತಾನ ಭಾಗ್ಯ ಪಡೆಯಬಹುದು.

* ವಿವಾಹ ಆಗದೆ ಇರುವ ಕನ್ಯೆಯರಿಗೆ ಶೀಘ್ರ ವಿವಾಹ ಆಗುವುದು.

* ವಿದ್ಯಾರ್ಥಿಗಳು ಒಳ್ಳೆಯ ವಿದ್ಯೆ ಪಡೆಯಬಹುದು

* ಉತ್ತಮ ಆರೋಗ್ಯವನ್ನು ಪಡೆಯಲು ವೃದ್ಧರು ಕೂಡ ಈ ವ್ರತವನ್ನು ಮಾಡಬಹುದು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಧನುರ್ಮಾಸ..

~^~
࿗ ಧನುರ್ಮಾಸ ࿗

*ದಶಂಬರ ೧೭' ಮಂಗಳವಾರ ೨೦೧೯ - ಜನವರಿ ೧೪' ಮಂಗಳವಾರ ೨೦೨೦*

ಮಾರ್ಗಶಿರಕ್ಕೆ ಆಗ್ರ-ಹಾಯಣ ಎನ್ನುತ್ತಾರೆ. ಹಾಯಣ ಎಂದರೆ ಮಾಸ. ಆಗ್ರ ಎಂದರೆ ಮೊದಲನೆಯದು. ಸಮೃದ್ಧಿ ಸಂತೃಪ್ತಿ ಸೌಂದರ್ಯ, ಸುಭಗತೆಗಳೇ ಪರಮಾತ್ಮಸೃಷ್ಠಿಯ ವಿಶಿಷ್ಟ ಲಕ್ಷಣವೆಂಬತೆ
"ಮಾಸಾನಾಂ ಮಾರ್ಗಶೀರ್ಷೋಸ್ಮಿ"ಎಂದು ಋತ-ಸತ್ಯಗಳ ಸಾಕಾರರೂಪಿಯಾದ ಶ್ರೀಕೃಷ್ಣ ಮಾರ್ಗಶಿರ ಮಾಸವೆಂದರೆ ತಾನು ಎಂದು ಸಾರಿ ಹೇಳಿದ್ದಾನೆ.

ಇದೇ ಮಾರ್ಗಶಿರದಲ್ಲಿ ಧನುರ್ಮಾಸವು ಹರ್ಷೋಲ್ಲಾಸವನ್ನು ತರುವುದರ ಜೊತೆ ತಾಯಿಯ ಧನುರ್ಮಾಸ ಪೂಜಾ ವೈಭವತೆಗೆ ಸಾಕ್ಷಿಯಾಗಲಿದೆ. 'ದಕ್ಷಿಣಾಯನ' ಎಂಬ ಕತ್ತಲೆಯನ್ನು ಹೊರದೂಡಿ 'ಉತ್ತರಾಯಣ'ಎಂಬ ಬೆಳಕನ್ನು ಸಂಧಿಸುವ ಈ ಉತ್ತಮ ಕಲ್ಪದಲ್ಲಿ ಸರ್ವಮಂಗಳೆಯನ್ನು ಶೃದ್ಧಾ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದರೆ ಸರ್ವಾಭೀಷ್ಟಗಳೂ ಪುಣ್ಯಪ್ರದವಾಗಿ ಲಭಿಸುತ್ತದೆ. 
ಎಷ್ಟೇ ಕಠಿಣವಾದರೂ ಮೈ ಕೊರೆಯುವ ಚಳಿಯ ತೀವ್ರತೆಯನ್ನು ಜಡತ್ವವನ್ನು ಮಂಜಿನ ತಂಬೆಲರನ್ನು ಲೆಕ್ಕಿಸದೆ ಪ್ರದೋಷಕಾಲದ ನಿದ್ರಿಸಿದ ಪ್ರಕೃತಿಯ ನೀರವ ಸೌಂದರ್ಯವನ್ನು ಆಸ್ವಾದಿಸುತ್ತಾ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಿಗೆ ನಡೆಯುವ ಉಷಾ ಕಾಲದ ಧನುರ್ಮಾಸದ ಮಹಾಪೂಜೆಯನ್ನು ಕಂಡು ಕೃತಾರ್ಥರಾಗಲು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಾಳಿನ ಮಂಗಳವಾರದಿಂದ ಪ್ರಾತಃಕಾಲ ತಾಯಿಯ ಧನುಪೂಜೆಗೆ ಭಕ್ತ ಸಾಗರವೇ ಹರಿದು ಬರಲಿದೆ.

ಅನನ್ಯ ಭಕ್ತಿಯಿಂದ ಪರಮೇಶ್ವರಿಯ ಶರಣು ಹೋಗಿ,
ಏಕಾಗ್ರಚಿತ್ತರಾಗಿ ಧನುರ್ಮಾಸ ಪೂಜೆಯಲ್ಲಿ ಪಾಲ್ಗೊಂಡು ಅವಳ ಕೃಪೆಯಿಂದ ನಮ್ಮ ಸಕಲ ತಾಪತ್ರಯ ಮುಕ್ತವಾಗಿ ಇಷ್ಟಾರ್ಥಸಿದ್ಧಿಯಾಗಿ  ಧನಧಾನ್ಯ ಪುತ್ರಾದಿ ಸೌಖ್ಯಭಾಗ್ಯಗಳನ್ನು ಹೊಂದುವುದರಲ್ಲಿ ಸಂಶಯವಿಲ್ಲ.

"ಧನುರ್ಮಾಸವು (ಕೋದಂಡ ಮಾಸ, ಚಾಪ ಮಾಸ)
ಇಪ್ಪತ್ತೊಂಭತ್ತು ದಿನಗಳ ಸುಧೀರ್ಘ ಅವಧಿಯಾಗಿದ್ದು ಸೂರ್ಯನು ತನ್ನ ಚಲನೆಯನುಸಾರವಾಗಿ ಧನುರ್ರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ಹಿಂದೂ ಪಂಚಾಂಗದ ಒಂಭತ್ತನೇಯ ತಿಂಗಳಾಗಿರುತ್ತದೆ. 
ಈ ವರ್ಷದಲ್ಲಿ ಮಾರ್ಗಶಿರ ಮಾಸವು ಕಳೆದ ನವಂಬರ ೨೭'ರಿಂದ ದಶಂಬರ ೨೬'ರ ವರೆಗೆ ಹಾಗು ೨೭'ರಿಂದ ಪುಷ್ಯ ಮಾಸವು ಆವೃತ್ತಿಯಲ್ಲಿದ್ದು ಪ್ರಸ್ತುತ ೨೦೧೯-೨೦೨೦'ನೇ ವರ್ಷದ ಅನ್ವಯ ನಾಳಿನ ದಶಂಬರ ೧೭'ನೇ ಮಂಗಳವಾರ ದಿಂದ ಮೊದಲ್ಗೊಂಡು ಬರುವ ಜನವರಿ ೧೪'೨೦೨೦ ನೇ ಮಂಗಳವಾರದ ವರೆಗೆ ಚಾಲ್ತಿಯಲ್ಲಿದ್ದು,'ಮಾರ್ಗಶಿರ' ಹಾಗೂ 'ಪುಷ್ಯ' ಮಾಸದ ಮಧ್ಯಭಾಗದಲ್ಲಿ ಧನುರ್ಮಾಸವು ಕೂಡಿರುತ್ತದೆ.

'ಧನುರ್ಮಾಸ' ಎಂದರೆ ಸೂರ್ಯನು ಮೂಲಾ ನಕ್ಷತ್ರದಿಂದ ಹಿಡಿದು ಉತ್ತರಾಷಢ ನಕ್ಷತ್ರವು ೧'ನೇ ಪಾದದವರೆಗಿನ ಧನುರಾಶಿಯಲ್ಲಿ ಸಂಚರಿಸುವ ಸಮಯವನ್ನು ಧನುರ್ಮಾಸ ಎಂದು ಕರೆಯುತ್ತಾರೆ. 

ಧನುರ್ಮಾಸದ ಆರಂಭವು ಸೂರ್ಯನ ಪರಿಚಲನೆಯ ಆಧಾರದ ಮೇಲೆ ನಿರ್ಧಾರಿತವಾಗಿದ್ದು , 
ಸೂರ್ಯನ ಧನುರ್ರಾಶಿಯ ಪ್ರವೇಶವನ್ನು 
'ಧನುರ್ ಸಂಕ್ರಮಣವೆಂದು(ಇಂದಿನ ದಿನ) ಹಾಗು ಧನುರ್ರಾಶಿಯಿಂದ ಮಕರ ರಾಶಿಗೆ ಸೂರ್ಯನ ಪ್ರವೇಶವನ್ನು ಮಕರ ಸಂಕ್ರಮಣವೆಂದೂ ,ಈ ಎರಡೂ ಸಂಕೀರ್ಣಅವಧಿಗಳ ನಡುವಿನ ಇಪ್ಪತ್ತೊಂಭತ್ತು ದಿನಗಳೇ ಧನುರ್ಮಾಸ.

(೧) ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ಆರು ತಿಂಗಳು ಉತ್ತರಾಯಣ 
(೨) ಕರ್ಕಾಟಕ ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ಆರು ತಿಂಗಳು ದಕ್ಷಿಣಾಯನ.
'ಆಯನ' ಎಂದರೆ ಪಥ, ಸಂಚಲನ ಎಂದರ್ಥ.
ಪರಿಸಮಾಪ್ತಿಗೊಳ್ಳುವ ಒಂದು ತಿಂಗಳ ಅವಧಿ.

ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ೬'ತಿಂಗಳು *ಉತ್ತರಾಯಣ*  ಕರ್ಕಾಟಕ ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ೬' ತಿಂಗಳು *ದಕ್ಷಿಣಾಯನ* ದೇವಾನು-ದೇವತೆಗಳಿಗೆ ವರ್ಷದ ಆರು ಪಂಚಾಂಗದ ತಿಂಗಳುಗಳು ಒಂದು ದಿನಕ್ಕೆ ಸರಿಸಮಾನ ವಾಗಿರುತ್ತದೆ. ಇದನ್ನು 'ಉತ್ತರಾಯಣ' ಎಂದು ಕರೆಯುತ್ತಾರೆ. ಇದು ಹಗಲು.
ಹಾಗು ಉಳಿದ ಮತ್ತೊಂದು ಆರು ತಿಂಗಳುಗಳು ಒಂದು ರಾತ್ರಿಗೆ ಸರಿಸಮಾನ ವಾಗಿರುತ್ತದೆ. ಇದನ್ನು 'ದಕ್ಷಿಣಾಯನ' ಎಂದು ಕರೆಯುವರು. ಇದು ರಾತ್ರಿ.

ಆದ್ದರಿಂದ ಧನುರ್ಮಾಸವು ದಕ್ಷಿಣಾಯಣದ ಕಟ್ಟಕಡೆಯ ತಿಂಗಳಾಗಿರುತ್ತದೆ. ದಕ್ಷಿಣಾಯನದ ಆರು ತಿoಗಳುಗಳಲ್ಲಿ ಎರಡೆರಡು ತಿಂಗಳಿಗೆ ಒಂದು ಯಾಮದಂತೆ ಯಾಮತ್ರಯ ಪರಮಾತ್ಮನಿಗೆ ಅತ್ಯoತ ಪ್ರಿಯವಾಗಿದ್ದು  ಮೊದಲಿನ ಎರಡು ಯಾಮಗಳು ಚಾತುರ್ಮಾಸ್ಯ ಕಾಲವಾಗಿದೆ. ಮೂರು ಯಾಮಗಳಲ್ಲಿ  ಆಷಾಢ ಏಕಾದಶಿಯಿಂದ ಪ್ರಾರಂಭವಾದ ಚಾತುರ್ಮಾಸ್ಯದಲ್ಲಿ ಮಲಗಿದ ದೇವತೆಗಳು ಕಾರ್ತೀಕ ಮಾಸದ ಶುಕ್ಲ ಉತ್ಥಾನದ್ವಾದಶಿಯಂದು ಜಾಗೃತರಾಗುತ್ತಾರೆ. ಮಾರ್ಗಶಿರ ಮಾಸವಾದರು ಮೂರನೇ ಯಾಮದ ಕಡೆ ಪ್ರಹರವಾಗಿದ್ದು ಬಳಿಕ ಬರುವ ಧನುರ್ಮಾಸ ದೇವತೆಗಳ ಅರುಣೋದಯದ ಕಾಲವಾಗಿದೆ.

ದಕ್ಷಿಣಾಯನವು ಮುಗಿದು ಉತ್ತರಾಯಣವು ಅಂತೆಯೇ ಉತ್ತರಾಯಣವು ಮುಗಿದು ದಕ್ಷಿಣಾಯನವು ಆರಂಭವಾಗುವ ಕಾಲಕ್ಕೆ ಸಂಧಿಕಾಲವೆಂದು ಹೇಳುತ್ತಾರೆ. ರಾತ್ರಿಯು ಮುಗಿದು ಸೂರ್ಯೋದಯವಾಗುವ ತನಕದ ಬ್ರಾಹ್ಮೀ ಮುಹೂರ್ತವೂ ಒಂದು ಸಂಧಿಕಾಲ. ಪೂರ್ವಾಹ್ನ ಮತ್ತು ಅಪರಾಹ್ನ ಇವುಗಳ ನಡುವಿನ ಮಧ್ಯಾಹ್ನವೂ ಹಗಲು-ರಾತ್ರಿಗಳ ನಡುವಿನ ಸಾಯಂಕಾಲವೂ ಸಂವತ್ಸರಗಳ, ಋತುಗಳ, ತಿಂಗಳುಗಳ ಅಂತ್ಯ- ಆದಿಗಳ ನಡುವಿನ ಸಮಯವೂ ಸಂಧಿಕಾಲಗಳಾಗಿವೆ. ಸಂಧಿಕಾಲವೆಂದರೆ ಪ್ರಕೃತಿಯಲ್ಲಿ ಬಹುಮುಖ್ಯ ಮಾರ್ಪಾಟುಗಳಾಗುವ ಕಾಲವಾಗಿದ್ದು ಸಂಧಿಕಾಲದಲ್ಲಿ ಉತ್ಪನ್ನವಾಗುವ ಈಶ್ವರೀ ಚೈತನ್ಯವು ಸಂಧ್ಯಾ ಎನಿಸುವುದು. ಈ ಶಕ್ತಿಗೆ ಮಾಡುವ ವಂದನೆಯು ಸಂಧ್ಯಾವಂದನೆ ಎನಿಸಿ ಧನುರ್ಮಾಸವೆಂದು ಪರಿಗಣಿಸಲ್ಪಟ್ಟಿದೆ.

ಧನುರ್ಮಾಸದ ಪ್ರಾರಂಭದ ಘಳಿಗೆಯು ದೇವಾನು'ದೇವತೆಗಳಿಗೆ ಇರುಳು ಸಮಾಪ್ತಿಯಾಗಿ ಹಗಲು ಪ್ರಾರಂಭಗೊಂಡು ಸಕಲ ಬ್ರಹ್ಮಾಂಡಕ್ಕೂ ಬ್ರಾಹ್ಮೀ ಮುಹೂರ್ತದ ಆರಂಭವೆಂಬ  ಪ್ರತೀತಿ. ಆದರಿಂದ ದೇವತಾರಾಧನೆಗೆ ಉತ್ತರಾಯಣವು ಯೋಗ್ಯವಾದ ಕಾಲ. ಇದರ ಪ್ರಕಾರ ಸರ್ವದೈವಿಕ ಶಕ್ತಿಗಳು ಧನುರ್ಮಾಸದ ಈ ಸನ್ನಿವೇಶದಲ್ಲಿ ಮುಂಜಾನೆಯ ಬ್ರಾಹ್ಮೀ ಮುಹೂರ್ತ (ಸೂರ್ಯೋದಯದ ಮೊದಲಿನ ೯೦'ನಿಮಿಷಗಳ ಅವಧಿ)ದಲ್ಲಿ ಎಚ್ಚರಗೊಳ್ಳುತ್ತಾರೆ ಎಂಬ ದೃಢವಾದ ನಂಬಿಕೆಯಿದೆ.

ಬೆಳಗ್ಗಿನ ಜಾವ ರಾತ್ರಿಮುಗಿದು ಅರುಣೋದಯದ ತನಕದ ಬ್ರಾಹ್ಮೀ ಮುಹೂರ್ತವು ಶಾಂತವೂ, ರಮಣೀಯವೂ ಆಗಿದ್ದು ಆಧ್ಯಾತ್ಮಿಕ ಸಾಧನೆಗೆ ಸಂಧ್ಯಾವಂದನೆಗೆ, ಧ್ಯಾನಕ್ಕೆ,ದೇವತಾರಾಧನೆಗೆ ಶ್ರೀ ದೇವಿಯ ಸಾಕ್ಷಾತ್ಕಾರಕ್ಕೆ ಅತ್ಯಂತ ಪ್ರಶಸ್ತವಾಗಿರುತ್ತದೆ.
ಅದೇ ತೆರನಾಗಿ ತಾಯಿ ಮಂಗಳಾದೇವಿಗೆ ನಾಳೆಯಿಂದ  ವಿಶೇಷ ಧನುರ್ಮಾಸ ಪೂಜೆಯು ಮುಂಜಾನೆಯ ಸೂರ್ಯೋದಯದ ಮುಂಚಿತವಾಗಿ ೫.೪೫'ಕ್ಕೆ ಸರಿಯಾಗಿ ನಡೆಯಲಿದೆ.

ಪ್ರಾತಃಕಾಲದ  ಸವಿನಿದ್ದೆಯಿಂದೆದ್ದ ಜಗನ್ಮಾತೆಯು ಜಲಾಭಿಷೇಕದೊಂದಿಗೆ ಶುಚಿರ್ಭೂತಳಾಗಿ ಧನುರ್ಮಾಸದ ಮಹಾಪೂಜೆಯನ್ನು ಸ್ವೀಕರಿಸಲು ಹಾಗೂ ತನ್ನನ್ನು ಕಾಣಲು ತವಕದಿಂದ ಆಗಮಿಸಿದ ಸರ್ವರಿಗೂ ತನ್ನ ಮೂಲ ಬಿಂಬ ಸ್ವರೂಪದಲ್ಲಿ ದರ್ಶನವನ್ನೀಯ್ದು ಜಿನುಗುವ ಧಾರಪಾತ್ರೆಯೊಂದಿಗೆ ಸ್ವರ್ಣದೃಷ್ಟಿ ನೇತ್ರಳಾಗಿ..ಮಾಂಗಲ್ಯ, ಪುರಾತನ ವಜ್ರ ಕಂಠೀ ಹಾರವನ್ನು ಧರಿಸಿ ಪುಷ್ಪ ಹಾರಗಳನ್ನು ತೊಟ್ಟು ನಮ್ಮೆಲ್ಲರಿಗೂ ಧನ್ಯತೆಯ ಭಾವವನ್ನು ಕರಣಿಸುವಳು.

ಮಂಗಳೆ ಅರ್ಚನಾ ಪ್ರಿಯೆ. ದೇವಿಯ ಚರಣಾರವಿಂದದ ಬಳಿಯ ಶ್ರೀ ಚಕ್ರ ಪೀಠಕ್ಕೆ ಕುಂಕುಮದಿಂದ ಅರ್ಚನೆಯು ನಡೆದ ನಂತರ ಮಂಗಳಮ್ಮನಿಗೆ ಧನುರ್ಮಾಸದ ಮಹಾಪೂಜೆಯು ನಡೆಯುತ್ತದೆ. ಬಳಿಕ ನಿತ್ಯಪೂಜೆಯಂತೆ ಆರತಿಯು ನಡೆಯುತ್ತದೆ.
ಧನುರ್ಮಾಸದಲ್ಲಿ ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ  ಧನುಪೂಜೆಯಿಂದ ಬಿಂಬದಲ್ಲಿ ಪೂರ್ಣಕಳಾ ಸಾನಿಧ್ಯಳಾಗಿ ಮೆರೆದು ಪ್ರಸನ್ನಳಾಗುವ ದೇವಿಯಲ್ಲಿ ಪ್ರೀತಿಯಿಂದ ಏನನ್ನೇ ಪ್ರಾರ್ಥಿಸಿಕೊಂಡರೂ ಅಪೇಕ್ಷಿತ ವಾಂಛಿತ ಫಲವನ್ನು ಕರುಣಿಸಿ ನಮ್ಮೆಲ್ಲರನ್ನು ಉದ್ಧರಿಸುತ್ತಾಳೆ.

ಅಲ್ಲದೆ ದೇವಳದಲ್ಲಿ *೧೯೯೪*'ರಿಂದ ಧನುರ್ಮಾಸ ಪೂಜೆಯನ್ನು *ಸೇವಾರೂಪ*ದಲ್ಲಿ 
ನಡೆಸಲು ಆರಂಭವಾಯಿತು.

*ನೀವೇದಯನ್ ಮೇ ಮುದ್ಗಾನ್ನo ಸ ವೈ ಭಾಗವತೋತ್ತಮಃ ಕೊದಂಡಸ್ಥೆ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿಧ್ಯತ*

ಧನುರ್ಮಾಸದಲ್ಲಿ ಯಾರು ಒಂದು ತಿಂಗಳ ಪರ್ಯಂತ ಅರಣೋದಯ ಪೂರ್ವದಲ್ಲಿ ಎದ್ದು ಭಕ್ತಿಯಿಂದ ಹುಗ್ಗಿಯ ನೈವೇದ್ಯವನ್ನು ಮಾಡಿ ಅರ್ಪಿಸಿದಲ್ಲಿ ಸಹಸ್ರವರ್ಷದ ಪೂಜಾಫಲವು ಲಭಿಸುತ್ತದೆ.
ಅಂತೆಯೇ ಧನುರ್ಮಾಸದಲ್ಲಿ ವಿಶೇಷತಃ ಶ್ರೀದೇವಿಯ ಪ್ರೀತ್ಯರ್ಥವಾಗಿ 'ಬೆಳ್ತಿಗೆ ಅನ್ನ, ಹೆಸರು ಬೇಳೆ, ಕೊಬ್ಬರಿ ಹೆಚ್ಚಿನ ಪ್ರಮಾಣದ ತುಪ್ಪವನ್ನು ಸೇರಿಸಿ ಸವಿಯಾದ ಘೃತಾನ್ನವನ್ನು (ಮುದ್ಗಾನ್ನ) ದೇವಿಗೆ ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. 
ಅಲ್ಲದೆ ಮಕರ ಸಂಕ್ರಾಂತಿಯ ದಿನದಂದು ಇದೇ ತೆರನಾಗಿ ನೈವೇದ್ಯವನ್ನು ಲಘು ಉಪಹಾರದಂತೆ ಪ್ರಸಾದರೂಪದಲ್ಲಿ ಭಕ್ತಾದಿಗಳಿಗೆ ನೀಡಲಾಗುತ್ತದೆ.

ತಾಯಿಯ ಮೇಲೆ ಪೂರ್ಣ ವಿಶ್ವಾಸದಿಂದ ಮನಃಬಿಚ್ಚಿ ಕಷ್ಟ ಸುಖಗಳನ್ನು ಹೇಳಿಕೊಳ್ಳುವ ನಮಗೆ ರಕ್ಷಿಸಲು ಆಕೆಯೊಬ್ಬಳೇ ಸಮರ್ಥಳು ಎನ್ನುವುದಕ್ಕೆ ನಾಳಿನಿಂದ ಆಗಮಿಸತಕ್ಕ ಭಜಕ ವೃಂದವೇ ಸಾಕ್ಷಿಯಾಗಲಿದೆ.
ಮಂಗಳೆಯನ್ನು ನಂಬಿ ಬದುಕುವವರಿಗೆ ಕಷ್ಟವೆಂಬುವುದು ಇಲ್ಲ. ತನ್ನ ದಯೆಯಿಂದ ನಮ್ಮೆಲ್ಲರನ್ನು ಆಕೆ ಸುಖದಲ್ಲಿರಿಸಿದ್ದಾಳೆ. ಮಹಾಪುಣ್ಯಕರವಾದ ಧನುರ್ಮಾಸದ ಪ್ರಾತಃಕಾಲದಲ್ಲಿ ದೇವಿಯ ಸನ್ನಿಧಿಗೆ ಪೊಡಮಟ್ಟು ಮಂಗಳಾಂಭೆಗೆ ನಡೆಯುವ ಧನುಪೂಜೆಯನ್ನು ಕಣ್ತುಂಬಿಕೊಂಡು ಬಾಳಿನಲ್ಲಿ ಸಾರ್ಥಕತೆಯನ್ನು ಪಡೆಯೋಣ. ಸರ್ವರ ಮನೋ ಸಂಕಲ್ಪಗಳೂ ಸಿದ್ಧಿಸಿ ಭವಿಷ್ಯದಲ್ಲಿ 

ಶ್ರೀ ಮಂತ್ರಾಲಯಾಂಬಿಕೆ ಸ್ತೋತ್ರ "

ರಚನೆ : ಆಚಾರ್ಯ ನಾಗರಾಜು ಹಾವೇರಿ 

ಮುದ್ರಿಕೆ : ವೇಂಕಟನಾಥ 

ಮಂಗಳ ತರಂಗಿಣಿ ನಿಲಯೇ ।

ಮಂಗಳಗಾತ್ರೇ ಮಂಗಳದೇವಿಯೇ ।

ಮಂಗಳಾಂಗ ನರಸಿಂಹನ ರಾಣಿಯೇ ।। ಪಲ್ಲವಿ ।।

ಮಂಚಾಲಿ ಪುರ ವಾಸೇ ।

ವಾಂಛಿತಾರ್ಥ ಪೂರೈಸೆ -

ಮಂತ್ರಾಲಯಾಂಬಿಕೆ ।। ಚರಣ ।।

ಮಂತ್ರಬೀಜ ಮಂತ್ರಮೇಯನ -

ವಲ್ಲಭೆ ದುರ್ಗೆಯೇ ।

ಮಂತ್ರವಿದ ಮಂತ್ರಾಲಯ -

ಪುರಾಧೀಶನ ತಾಯೇ ।। ಚರಣ ।।

ಯೋಗಿ ಕುಲ ತಿಲಕ ಗುರುರಾಜರ-

ಪೊರೆಯುತ ।

ಮಗು ಪರಿಪಾಲ ವೇಂಕಟನಾಥ-

ನರ್ಧಾ೦ಗಿ ಕಾಯೇ ।। ಚರಣ ।।

" ವಿವರಣೆ "

ಮಂಗಳ ತರಂಗಿಣಿ = ನದಿ / ತುಂಗಭದ್ರಾ ನದೀ 

ಮಂಗಳ ಗಾತ್ರೇ = ಶುಭ ಶರೀರವುಳ್ಳ / ಸುಂದರಿ ( ಶ್ರೀ ಮಹಾಲಕ್ಷ್ಮೀದೇವಿಯರು )

ಮಂಗಳದೇವಿ = ಶ್ರೀ ಮಹಾಲಕ್ಷ್ಮೀದೇವಿಯರು 

ಮಂಗಳಾಂಗ = ಮನೋಹರವಾದ ಶರೀರವುಳ್ಳವ ( ಶ್ರೀ ಹರಿ )

ವಾಂಛಿತ = ಇಷ್ಟಾರ್ಥ / ಅಭೀಷ್ಟ 

" ಮಂತ್ರಬೀಜ "

ಬೀಜ ಮಂತ್ರಗಳಿಗೆ ಕಾರಣನಾದವ / ಪ್ರತಿಪಾದ್ಯ ( ಶ್ರೀಮನ್ನಾರಾಯಣ )

ಮಂತ್ರಮೆಯ = ಮಂತ್ರಗಳಿಂದ ತಿಳಿಯಲ್ಪಡುವವನು ( ಶ್ರೀ ಹರಿ )

" ದುರ್ಗೆಯೇ "

ಎಲ್ಲ ಜೀವರ ಹೃದಯ ಗುಹೆಯಲ್ಲಿ ಪತಿಯಾದ ಶ್ರೀ ಹರಿಯೊಡನೆ ಸದಾ ಕಾಲದಲ್ಲಿ ನಿಯಾಮಕಳಾಗಿರುವಳು 

 " ಪರಮ ಮುಖ್ಯವಾಗಿ ಶ್ರೀ ಹರಿಯೇ " ದುರ್ಗ " ನಾಮಕ " 

ದುರ್ಲಭೋ ದುರ್ಗಮೋ ದುರ್ಗಾ-

ದೂರಾವಾಸೋ ದುರಾರಿಹಾ ।। ವಿ ಸ ನಾ - 96 ।। 

" ದುರ್ಗಮ "

- ಅಗಮ್ಯೋ ದುರ್ಗಮ:

- ಭಕ್ತ್ಯಾಪುನರ್ದುಃಖೇನಗಮ್ಯತೇ ಅವಗಮ್ಯತೇ ಚ ಭಗವಾನ್

- ದುರ್ಗಾ ಇತಿ ಮೀಯತೇ

- ದುರ್ಗೇಷು ಶಾಸ್ತ್ರೇಷು ಮೀಯತೇ " ದುರ್ಗ "

- ದುರ್ಗೇಷು ಗತಸ್ತನ್ನಾಮಾ

- ದುಃಖಿಷು ದುಃಖಿಭಿರವಗಮ್ಯತೇ

- ದುಃಖೇನ ಚಾವಗತಃ

- ಅನವಗತಶ್ಚ ದುಷ್ಟಾನಾಮ್

- ಶಿಷ್ಟ ಪಾಲನಾಯ ದುಷ್ಟಾನನಭಿಗಚ್ಛಟಿ ಚ

- ಅಪಗಮಯತಿ ದುಃಖಂ ದುರಿತಂ ಚ ।। 

" ಭಕ್ತರು ಮಾಡುವ ಶ್ರೀ ದುರ್ಗಾ ಸ್ಮರಣೆಯ ಫಲ " 

" ಮಾರ್ಕಂಡೇಯ ಪುರಾಣ " ದಲ್ಲಿ.... 

ದುರ್ಗೇ ಸ್ಮೃತಾಹರಸಿ -

ಭೀತಿಮಶೇಷಜಂತೋ: ।

ಸ್ವಸ್ಥ್ಯ: ಸ್ಮೃತಾಮತಿ -

ಮತೀವ ಶುಭಾಂ ದದಾಸಿ ।। 

ದಾರಿದ್ರ್ಯ ದುಃಖ ಭಯ -

ಹಾರಿಣಿ ಕಾ ತ್ವದನ್ಯಾ ।

ಸರ್ವೋಪಕಾರ ಕರುಣಾಯ-

ಸದಾರ್ದ್ರಚಿತ್ತಾ ।। 

ಹೇ ಶ್ರೀ ದುರ್ಗಾದೇವೀ! ನಿನ್ನ ಭಕ್ತರು ಭಯಕ್ಕೆ ಒಳಗಾಗಿ ನಿನ್ನನ್ನು ನಮಸ್ಕರಿಸಿದರೆ ಅವರ ಎಲ್ಲಾ ಭಯಗಳನ್ನೂ ಪರಿಹರಿಸುವೆ! 

ನಿರ್ಭೀತರಾಗಿರುವವರಾಗಿ ಸ್ವಸ್ಥ ಚಿತ್ತದಿಂದ ನಿನ್ನನ್ನು ಅವರೇ ಸ್ಮರಿಸಿದರೆ - ಅತ್ಯಂತ ಮಂಗಳಕರವಾದ ಜ್ಞಾನವನ್ನು ಕೊಡುವಿ!! 

ಹೀಗೆ ಸರ್ವರಿಗೂ ಸರ್ವ ವಿಧವಾದ ಉಪಕಾರವನ್ನು ನಿನ್ನ ಸ್ಮರಣೆ ಮಾತ್ರದಿಂದ ದಯಪಾಲಿಸಲು ನಿನ್ನಂತೆ ಕರುಣಾರ್ದ ಚಿತ್ತರು ಯಾರಿದ್ದಾರೆ!!! 

ಹೃಷ್ಮನಾಗುವ ಸ್ಮರಣೆ ಮಾತ್ರದಿ " ಹೃದ್ಗುಹಾವಾಸಿ " ಎಂಬ ಬಿರುದಾಂಕಿತನಾದ " ಶ್ರೀ ಹರಿಯ ನಿಜ ಪತ್ನಿ " ಯಾದ ನಿನಗೆ ಇದೇ ಭೂಷಣ!!!!

ಮಂತ್ರವಿದ = ಮಂತ್ರ ತಿಳಿದವರು / ಮಂತ್ರಜ್ಞ ( ಶ್ರೀ ರಾಯರು )

ಮಗು ಪರಿಪಾಲ = ಶ್ರೀ ಪ್ರಹ್ಲಾದ ರಕ್ಷಕನಾದ ಶ್ರೀ ನರಸಿಂಹದೇವರು!!

ಗುರು ವಿಜಯ ಪ್ರತಿಷ್ಠಾನ

*ಮಂಗಳದೇವಿ ದೇವಸ್ಥಾನ, ಬೋಲಾರ* 

 ಮುಖ್ಯದೇವರು: ಮಂಗಳಾದೇವಿ (ಪಾರ್ವತಿದೇವಿ)

ಈ ಕ್ಷೇತ್ರಕ್ಕೆ ಮಂಗಳೂರು ಎಂದು ಹೆಸರು ಬರಲು ಮುಖ್ಯಕಾರಣವೆಂದರೆ ಇಲ್ಲಿಯ ಗ್ರಾಮದೇವತೆಯಾದ ಮಂಗಳಾದೇವಿ ಎಂದು ತಿಳಿದು ಬರುತ್ತದೆ. ದೇವಸ್ಥಾನದ ಮಧ್ಯಭಾಗದಲ್ಲಿ ದೇವಿಯು ಪದ್ಮಾಸನ ಸ್ಥಿತಿಯಾಗಿದ್ದಾಳೆ. ಈ ದೇವಾಲಯವು ಕೇರಳ ಶೈಲಿಯಲ್ಲಿದ್ದು ಮರದಕೆತ್ತನೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಮದುವೆಯಾಗದ ಕನ್ಯೆಯರು ದೇವಿಯನ್ನು ಪೂಜಿಸಿದರೆ ಅವರಿಗೆ ತಕ್ಕ ವರಗಳು ದೊರಕುತ್ತವೆ ಎಂಬ ನಂಬಕೆ ಇದೆ.

ಕಥೆ:
ಕ್ರಿ.ಶ. 10ನೇ ಶತಮಾನದಲ್ಲಿ ತುಳುನಾಡಿನ ರಾಜನು ಗೊರಕದಂಡಿ ಎಂಬ ಸ್ಥಳದಲ್ಲಿ ನೆಲೆಸಿದ್ದ ನೇಪಾಲದ ಇಬ್ಬರು ಸನ್ಯಾಸಿಗಳನ್ನು ನೋಡಲು ಹೊರಟನು. 

ತುಳು ದೊರೆಯನ್ನುಕಂಡ ಸನ್ಯಾಸಿಗಳು, ದೊರೆಗೆ ಜ್ಞಾನದ ಬಗ್ಗೆ ಉಪದೇಶವನ್ನು ಮಾಡಿ, ನಿನ್ನರಾಜ್ಯವು ಪವಿತ್ರ ಸ್ಥಳವಾಗಿದ್ದು, ಋಷಿ ಮುನಿಗಳ ತಪೋಭೂಮಿಯಾಗಿ, ಅವರ ಒಳ್ಳೆಯ ಕಾರ್ಯದ ವರಭೂಮಿಯಾಗಿದೆ ಎಂದು ರಾಜನಿಗೆ ತಿಳಿಸಿದರು.

 ಅವನೊಂದಿಗೆ ಅವನ ಅರಮನೆಗೆ ಬಂದು, ಅವರು ತಿಳಿಸಿದ ಜಾಗದಲ್ಲಿ ಅಗೆಯಲು, ಲಿಂಗ ಮತ್ತು ಧಾರಪತ್ರ (ಮಂಗಳಾದೇವಿಯ ಪ್ರತಿರೂಪ) ಎಂಬ ಮೂರ್ತಿಗಳನ್ನು ತೆಗೆದು, 

ಆ ಮೂರ್ತಿಗಳಿಗೆ ದೇವಾಲಯವನ್ನು ಕಟ್ಟಿಸಿ ನಾಗ ದೇವತೆಯನ್ನುಕಾಯಲು ಇಟ್ಟು, ತುಳುರಾಜನು ನೇಪಾಲದ ಸನ್ಯಾಸಿಗಳ ನೇತೃತ್ವದಲ್ಲಿ ಈ ಗುಡಿಯನ್ನು ನಿರ್ಮಿಸಿದರೆಂದು ತಿಳಿದು ಬರುತ್ತದೆ.

ನವರಾತ್ರಿ: 9 ದಿನಗಳವರೆಗೆ ವಿಶೇಷ ಪೂಜೆಗಳು ನಡೆಯುತ್ತವೆ. ಈ 9 ದಿನಗಳ ಪೂಜೆಯಲ್ಲಿ 7ನೇ, 8ನೇ ಮತ್ತು 9ನೇ ದಿನಗಳಲ್ಲಿ ದೇವಿಯನ್ನು ಚಂಡಿಕಾ, ಮಹಾಸರಸ್ವತಿ ಮತ್ತು ವಾಗ್ದೇವಿ ಎಂದು ಪೂಜಿಸಲಾಗುತ್ತದೆ.

 9ನೇ ದಿನ ಆಯುಧಪೂಜೆಯನ್ನು ಹಾಗೂ 10ನೇ ದಿನ ರಥೋತ್ಸವವನ್ನು ನೆರವೇರಿಸಲಾಗುತ್ತದೆ.

ಲಕ್ಷ ದೀಪೋತ್ಸವ: ಕಾರ್ತಿಕದ ಬಹುಳ ನವಮಿಯಂದು ಸಾವಿರಾರು ದೀಪಗಳನ್ನು ಹಚ್ಚಿ, ಕತ್ತಲೆಯನ್ನು ದೂಡಿ, ಬೆಳಕನ್ನು ಆಹ್ವಾನಿಸುವುದು ಹಬ್ಬದ ಸಂಕೇತವಾಗಿದೆ.

ವಾರ್ಷಿಕ ಹಬ್ಬ: ಮಾರ್ಚ್, ಈ ದಿನದಂದು ಸಾವಿರಾರು ಭಕ್ತರು ಸೇರಿ ಧ್ವಜಾರೋಹಣದೊಂದಿಗೆ ಹಬ್ಬವನ್ನುಆರಂಭಿಸಲಾಗುತ್ತದೆ.

ವಿಶೇಷ ಪೂಜೆಗಳು: ಪಂಚಾಮೃತಾಭಿಷೇಕ, ದುರ್ಗಾಹೋಮ, ಮಂಗಳಾರತಿ, ಶ್ರೀ ಕನ್ನಿಕೆ ಪೂಜಾ, ಅಷ್ಟೋತ್ತರ ಅರ್ಚನಾ, ಕುಂಕುಮಾರ್ಚನೆ, ಚಂಡಿಕಾಯಾಗ.

ವಿಳಾಸ: ಮಂಗಳಾದೇವಿ ದೇವಸ್ಥಾನ, ಮಂಗಳಾದೇವಿ ರಸ್ತೆ, ಮಂಗಳ ನಗರ, ಬೋಲಾರ, ಮಂಗಳೂರು, ಕರ್ನಾಟಕ, ಪಿನ್ಕೋಡ್ 575001

ಎಲ್ಲಾ ದಿನಗಳಲ್ಲಿಯೂ ತೆರೆದಿರುತ್ತದೆ. ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆಯವರೆಗೆ

ಪುನಃ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ

ನಂತರ: ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8.30 ರವರೆಗೆ ಪ್ರತಿ ಶುಕ್ರವಾರದಂದು ರಾತ್ರಿ 9 ರವರೆಗೆ ತೆರೆದಿರುತ್ತದೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಮಂಗಳಾರತಿ

ಮಂಗಳಾರತಿ ಬಗ್ಗೆ ತಿಳಿದುಕೊಳ್ಳುವ ವಿಚಾರಧಾರೆ

ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಗಳಿಂದ ತೆಗೆದುಕೊಳ್ಳಬಾರದು ಒಂದೇ ಕೈಯಿಂದ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ .ಏಕೆ? ಇದಕ್ಕೆ ಯಾವುದಾದರೂ ಪ್ರಮಾಣ ಉಂಟಾ?

ಉತ್ತರ ||

ನೀರಾಜನ ಕಾಲದಲ್ಲಿ ದೇವರ ಮುಖದರ್ಶನ ಕೋಟಿ ಬ್ರಹ್ಮ ಹತ್ಯೆಗಳನ್ನು ಕೋಟಿ ಅಗಮ್ಯಾಗಮನ ದೋಷಗಳನ್ನು ನಾಶಮಾಡುತ್ತದೆ.

ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ನ ಸಂಶಯ: ||

ಮಂಗಳಾರತಿಯನ್ನು ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು. ಈ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ.

ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು, ಆಮೇಲೆ ಹೃದಯ, ಆಮೇಲೆ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು.

ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು.
ಅಲ್ಲಿಗೆ ನಮ್ಮ ದೇಹ ಶುದ್ಧ.
ಈ ಅನುಸಂಧಾನ ಮುಖ್ಯ.
|| ಕೃಷ್ಣಾರ್ಪಣಮಸ್ತು ||

ಸುಲಭವಾಗಿ ಪೂಜಾ ವಿಧಾನ

ಯಾರೊ ಸುಲಭವಾಗಿ ಪೂಜಾ ವಿಧಾನ ತಿಳಿಸಿ ಅಂದ್ರಿ ಅಲ್ವ ಅದಕ್ಕಾಗಿ ಈ ಪೋಸ್ಟ್.

ಈ ಕೆಳಗಿನ ೧೬ ಸಾಲುಗಳನ್ನು ಬಾಯಿಗೆ ಕಲಿತರೆ , ಅದೇ ಕ್ರಮದಲ್ಲಿ ಪೂಜೆ ಮಾಡಲು ಸುಲಭ ; ಕ್ರಮ ತಪ್ಪುವುದಿಲ್ಲ .

ಆರಂಭ
ಶ್ರೀ ಗಣೇಶಾಯ ನಮಃ || ಓಂ ಶ್ರೀ ಗುರುಬ್ಯೋ ನಮಃ
ದೇವ ದೇವತಾ ಆಗಮನಾರ್ಥೇ ಘಂಟಾವಾದನಂ ಕೃತ್ವಾ , |

ಚತುರ‍್ದಶ ದ್ವಾರ ಪಾಲ ಪೂಜಾಂ ಕುರ್ಯಾತು ||೧||
ಸಂಕಲ್ಪಂ ಕೃತ್ವಾ ಗಾಯತ್ರಿ ಮಂತ್ರೇಣ ಕಲಶಂ ಪೂಜಯೇತ್ |

ದೇವತಾ ಧ್ಯಾನಂಕೃತ್ವಾ , ಆವಾಹನಂ ಕುರ್ಯಾತು || ೨||
ಆಸನಂ ದದ್ಯಾತು , ನಂತರಂ ಪಾದ್ಯಂ ಅರ್ಘ್ಯಂ ಆಚಮನಂ|

ಸ್ನಾನಂ ಪುನಃ ಶುದ್ಧೋದಕ ಸ್ನಾನಂ ಚ ವಸ್ತ್ರಂ ಆಭರಣ ಸಮರ್ಪಣಂ ||೩||
ನಂತರಂ ಉಪವೀತಂ ಚ ಗಂಧಂ ಚ ಅಕ್ಷತಾಂ ಪುಷ್ಪಂ ಸಮರ್ಪಣಂ |

ನಾಮ ಪೂಜಾಂ ಪುಷ್ಪ ಸಹಿತಂ ನಂತರಂ ಧೂಪ ದೀಪಂ ಸಮರ್ಪಯೇತ್ ||೪||
ಭೋಜನಾರ್ಥಂ ಫಲಂ ತಾಂಬೂಲಂ ನೇವೇದ್ಯಂ ಕುರ್ಯಾತ್ |

ಕುರ್ಯಾತ್ ಮಂಗಲ ನೀರಾಜನಂ ; ತದನಂತರಂ ಪ್ರದಕ್ಷಿಣ ನಮಸ್ಕಾರಂ ||೫||
ಗಂಧಾಕ್ಷತ ದೂರ್ವಸಹಿತಂ ಪ್ರಸನ್ನಾರ್ಘ್ಯಂ ದದ್ಯಾತು |
ದೇವತಾ ಪ್ರಾರ್ಥನಂ ಪುನಃ ದೇವ ವಂದನಂ ||೬||
ಲೋಪದೋಷ ನಿವಾರಣಾರ್ಥಂ ವಿಷ್ಣು ಸ್ಮರಣಂ ಕುರ್ಯಾತ್ |

ಪೂಜಾಫಲಂ ಕೃಷ್ಣಾರ್ಪಣಂ ಕೃತ್ವಾ |ತೀರ್ಥ ಪ್ರಸಾದಂ ಸ್ವೀಕರೇತ್,
ಘಂಟಾ ನಾದೇನ ವಿಸರ್ಜಯೇತ್||೭||

ವಿವರಣೆ ಸಂಪಾದಿಸಿ

ಪ್ರಾರ್ಥನೆ :ಓಂ, ಶ್ರೀ ಗಣೇಶಾಯ ನಮಃ || ಶ್ರೀ ಗುರುಭ್ಯೋ ನಮಃ ||

೧) ದೇವತಾ ಆಗಮನಕ್ಕಾಗಿ ಘಂಟಾನಾದ; (ಮಂಟಪವನ್ನು ಶುಚಿಗೊಳಿಸಿಮಂಟಪದ ಒಳಗೆ ಎಲ್ಲಾ ದಿಕ್ಕಿಗೆ ಹೂವು ಇಡುವುದು)

೨) ಚತುರ್ದಿಶ ದ್ವಾರ ಪಾಲ ಪೂಜೆ (ನಾಲ್ಕು ದಿಕ್ಕುಗಳಲ್ಲಿರುವ ದೇವತೆಗಳ ಪೂಜೆ-
(ಮಂಟಪದೊಳಗೆ ನಾಲ್ಕು ದಿಕ್ಕಿಗೆ ಹೂವು ಇಡುವುದು/ ಹಾಕುವುದು)

೩) ಸಂಕಲ್ಪ (ಅಸ್ಮಿನ್ ಶುಭದಿನೇ ಶ್ರೀಪರಮೇಶ್ವರ ಪ್ರೀತ್ಯರ್ಥಂ ಯಥಾಶಕ್ತಿ ಯಥಾಜ್ಞಾನ ದೇವ ಪೂಜಾಂಕರಿಷ್ಯೇ -ನೀರು ಬಿಡು)

೪) ಕಲಶಪೂಜೆ - ಕಲಶಕ್ಕೆ (ನೀರು ತುಂಬಿದ ಚಂಬಿಗೆ) ಹೂ ದೂರ್ವೆ ಹಾಕಿ ಗಾಯತ್ರಿ ಮಂತ್ರ ಹೇಳುವುದು.

೫) ಧ್ಯಾನ- (ಸೂರ್ಯಗಣಪತಿ ಅಂಬಿಕಾ ಶಿವ ವಿಷ್ಣು ದೇವತಾಭ್ಯೋ ನಮಃ) (ಇಷ್ಟವಾದ ದೇವತೆಯ ಹೆಸರು ಹೇಳಿ- ನಮಃ ಎಂದು ಕೈಮುಗಿದು ನಮಸ್ಕರಿಸುವುದು)

೬)ಆವಾಹನ -((ಸೂರ್ಯಗಣಪತಿ ಅಂಬಿಕಾ ಶಿವ ವಿಷ್ಣುಂ - ಲಕ್ಕ್ಮೀ ನಾರಾಯಣಂ ಆವಾಹಯಾಮಿ ಅಥವಾ ಇಷ್ಟ ದೇವರ ಹೆಸರು ಹೇಳುವುದು.)

೭) ಆಸನಂ ಸಮರ್ಪಯಾಮಿ || (ಪೀಠವನ್ನು ಮುಟ್ಟುವುದು )

೮) ಪಾದ್ಯ - ಸಮರ್ಪಯಾಮಿ (ದೇವರ ಮೂರ್ತಿ ಪಾದಕ್ಕೆ ನೀರು ಹಾಕುವುದು-ಚಮಚದಲ್ಲಿ ತಟ್ಟೆಗೆ ನೀರುಬಿಡುವುದು ' ಪ್ರೋಕ್ಷಣೆ ಮಾಡಿದರೂ ಸರಿ)

೯)ಅರ್ಘ್ಯಂ ಸಮರ್ಪಯಾಮಿ - (ದೇವರ ಮೂರ್ತಿ ಹಸ್ತಕ್ಕೆ ನೀರು ಹಾಕುವುದು -ಮೇಲಿನಂತೆ - ಚಿಮುಕಿಸಿದರೂ ತಟ್ಟೆಗೆ ನೀರು ಬಿಟ್ಟರೂ, ದೇವರಿಗೆ ತಲುಪುವುದು.)

೧೦)ಆಚಮನಂ ಸಮರ್ಪಯಾಮಿ - ಸಮರ್ಪಯಾಮಿ (ಆಚಮನ- ಕುಡಿಯಲು ನೀರು; ದೇವರ ಮೂರ್ತಿ ಹಸ್ತಕ್ಕೆ ನೀರು ಹಾಕುವುದು -ಮೇಲಿನಂತೆ-)

೧೧) ದೇವರಿಗೆ ಅಭಿಷೇಕ ಮಾಡುವುದು ತೊಳೆದು ಪುನಃ ಅಭಿಷೇಕ; (ಫೋಟೋ ಆದರೆ ನೀರು ಚಿಮುಕಿಸಬಹುದು

೧೨)ವಸ್ತ್ರಂ ; ಆಭರಣಂ ; ಉಪವೀತಂ (ಸಮರ್ಪಯಾಮಿ )- ಎಲ್ಲದಕ್ಕೂ ಒಂದೊಂದು ಹೂವು ಹಾಕುವುದು

೧೩)ಗಂಧ ಅಕ್ಷತೆ ಹೂವು (ಗಂಧವನ್ನು ಹೂವಿಗೆ ಹಚ್ಚಿ ಹಾಕಬಹುದು- ಅರಿಶಿನ- ಕುಂಕುಮವನ್ನು ಹೂವಿಗೆ ಮುಟ್ಟಿಸಿ ಹಾಕಬಹುದು)
(ಹಾಕುವಾಗ ದೇವರ ಹೆಸರು ಹೇಳಿ ಹಾಕಬೇಕು ಉದಾ: ಓಂ ಶಿವಾಯ ನಮಃ, ವಿಷ್ಣವೇನಮಃ)

೧೪) ಧೂಪ ದೀಪಂ ಸಮರ್ಪಯಾಮಿ (ತೋರಿಸುವುದು).

೧೫) ಭೋಜನಾರ್ಥಂ ಫಲಂ ಸಮರ್ಪಯಾಮಿ ತಾಂಬೂಲ ಸಮರ್ಪಯಾಮಿ- ನೇವೇದ್ಯ ಮಾಡುವುದು.

೧೬) ಮಂಗಲ ನೀರಾಜನಂ ಸಮರ್ಪಯಾಮಿ- ಆರತಿ.

೧೭) ಗಂಧಾಕ್ಷತ ದೂರ್ವಸಹಿತಂ ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಕೊಡುವುದು-) ಅಂಗೈಯಿಂದ ತಟ್ಟೆಗೆ ನೀರು ಬಿಡುವುದು.

೧೮) ದೇವತಾ ಪ್ರಾರ್ಥನಂ -ಪ್ರಾರ್ಥನೆ ಮಾಡುವುದು (ಸಮರ್ಪಯಾಮಿ);ದೇವರನ್ನು ಕೊಡು ಎಂದು ಕೇಳುವುದು. ಪ್ರಾರ್ಥನೆಯ ಯಾವುದೇ ಶ್ಲೋಕವನ್ನು- ಪದ್ಯವನ್ನು-ಕೀರ್ತನೆಯನ್ನು ಹೇಳಬಹುದು. ಉದಾ: "ಸದ್‍ಬುದ್ಧಿಯನ್ನೂ, ವಿದ್ಯೆಯನ್ನೂ, ಸಂಪತ್ತನ್ನೂ ಕೊಡು"

೧೯) ದೇವ ವಂದನಂ ಪ್ರದಕ್ಷಿಣ ನಮಸ್ಕಾರ (ಸಮರ್ಪಯಾಮಿ)ಎಡದಿಂದ ಬಲಕ್ಕೆ ತಿರುಗಿ ಪ್ರದಕ್ಷಿಣೆ.

೨೦) ಲೋಪದೋಷ ನಿವಾರಣಾರ್ಥಂ ವಿಷ್ಣು ಸ್ಮರಣೆ ಮಾಡುವುದು| (ಪೂಜಾ ಫಲಂ -) ಕೃಷ್ಣಾರ್ಪಣ ಎಂದು ತುಳಸಿ ನೀರು ಬಿಡುವುದು

೨೧)ತೀರ್ಥ ಪ್ರಸಾದ ಸ್ವೀಕಾರ (ಅಕಾಲ ಮರಣ-ವ್ಯಾಧಿ -ಕಷ್ಟ ನಿವಾರಣೆ ಗಾಗಿ ತೀರ್ಥ ಸ್ವೀಕಾರ)

೨೨) ಘಂಟಾ ನಾದ ಮಾಡುವುದು ( ಘಂಟಾ ನಾದದಿಂದ ದೇವರ ವಿಸರ್ಜನೆ.)
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಅವಳಿ ಬಾಳೆಹಣ್ಣು

ಉಪಯುಕ್ತ ಮಾಹಿತಿ

ಬಹಳಷ್ಟು ಸಲ ನಮಗೆ ಗೊತ್ತಿಲ್ಲದೇ ಈ ಅವಳಿ ಬಾಳೆಹಣ್ಣು ಬರುತ್ತಿರುತ್ತವೆ. ಅವುಗಳನ್ನು ಮಕ್ಕಳಿಗೂ ಕೊಡದೆ ದೇವರಿಗೂ ಇಡದೆ ದೊಡ್ಡವರೇ ತಿನ್ನುತ್ತಿರುತ್ತಾರೆ. ಇಷ್ಟಕ್ಕೂ ಜಂಟಿ ಬಾಳೆಹಣ್ಣನ್ನು ಮಕ್ಕಳಿಗೆ ಕೊಡುವ ಸಂಗತಿ ಪಕ್ಕಕ್ಕಿಟ್ಟರೆ. ಈ ರೀತಿಯ ಅವಳಿ ಬಾಳೆ ಹಣ್ಣನ್ನು ದೇವರಿಗೂ ಸಹ ಇಡಬಾರದು.

ಇದಕ್ಕೆ ಪಂಡಿತರು ಈ ರೀತಿ ಉತ್ತರ ಕೊಡುತ್ತಾರೆ. 

ಬಾಳೆ ಗಿಡ ಎಂದರೆ ಬೇರೆ ಯಾರೂ ಅಲ್ಲ. ಸಾಕ್ಷಾತ್ ದೇವ ನರ್ತಕಿ ರಂಭೆಯ ಅವತಾರ. ಶ್ರೀ ಮಹಾವಿಷ್ಣುವಿನ ಬಳಿ ರಂಬೆ ತಾನೇ ಸೌಂದರ್ಯವತಿ ಎಂದು ಅಹಂಕಾರದಿಂದ ಮೆರೆಯುತ್ತಿದ್ದಳು. ಈ ರೀತಿ ನಡೆದುಕೊಂಡ ಕಾರಣ ಆಕೆಗೆ ಭೂಲೋಕದಲ್ಲಿ ನೀನು ಬಾಳೆ ಗಿಡವಾಗಿರು ಎಂದು ಮಹಾವಿಷ್ಣು ಶಾಪ ಕೊಟ್ಟನು.

ಆದರೆ ಆಕೆ ತನ್ನ ತಪ್ಪು ತಿಳಿದುಕೊಂಡು ಬೇಡಿಕೊಂಡ ಕಾರಣ ದೇವರಿಗೆ ನೈವೇದ್ಯವಾಗಿ ಬಾಳೆಹಣ್ಣನ್ನು ಇಡುವ ಅರ್ಹತೆಯನ್ನು ವಿಷ್ಣು ವರ ಪ್ರಸಾದಿಸಿದ. ಅಷ್ಟು ಪವಿತ್ರವಾದ ಹಣ್ಣಿನಲ್ಲಿ ನಾವು ಯಾವುದೇ ದೋಷಗಳನ್ನು ಹುಡುಕಬಾರದು. ಹುಡುಕಬೇಕಾದ ಅಗತ್ಯವೂ ಇಲ್ಲ . ಅವಳಿ ಬಾಳೆಹಣ್ಣನ್ನು ಯಾವುದೇ ಅಭ್ಯಂತರವಿಲ್ಲದೆ ದೇವರಿಗೆ ಅರ್ಪಿಸಬಹುದು.

ಆದರೆ ತಾಂಬೂಲದಲ್ಲಿ ಮಾತ್ರ ಜಂಟಿ ಬಾಳೆಹಣ್ಣನ್ನು ಇಡಬಾರದು. 

ಯಾಕೆಂದರೆ ಅವಳಿ ಬಾಳೆ ಹಣ್ಣಿನಲ್ಲಿ ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕಾಚಾರದಲ್ಲೇ ಬರುತ್ತದೆ ತಾಂಬೂಲದಲ್ಲಿ ಒಂದೇ ಒಂದು ಹಣ್ಣು ಇಡುವುದಿಲ್ಲ. ಹಾಗಾಗಿ ತಾಂಬೂಲದಲ್ಲಿ ಈ ರೀತಿಯ ಜಂಟಿ ಬಾಳೆಹಣ್ಣು ಇಟ್ಟರೆ ನೋಡುವುದಕ್ಕೆ ಚೆನ್ನಾಗಿರಲ್ಲ. ಹಾಗಾಗಿ ತಾಂಬೂಲದಲ್ಲಿ ಅವಳಿ ಬಾಳೆ ಹಣ್ಣನ್ನು ಇಟ್ಟು ಯಾರಿಗೂ ಸಹ ಕೊಡಬಾರದು.

ಸರ್ವೇಜನಾಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ರಂಗವಲ್ಲಿ ಮತ್ತು ಹೊಸಿಲಿನ ಪೂಜಾ ಬಗ್ಗೆ ವಿಚಾರಧಾರೆ

ರಂಗವಲ್ಲಿ ಮತ್ತು ಹೊಸಿಲಿನ ಪೂಜಾ ಬಗ್ಗೆ ವಿಚಾರಧಾರೆ

1.     #ನಿಮ್ಮ_ಮನೆಯಲ್ಲಿ_ಹೊಸಿಲ ಪೂಜೆ.

         ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ಹೊಸಿಲು ಅಥವಾ ಹೊಸ್ತಿಲು ಕಡ್ಡಾಯವಾಗಿ ಇರುತ್ತದೆ.

 ಹಿಂದಿನ ಕಾಲದ ಮನೆಯಲ್ಲಿ ಎಲ್ಲ ಬಾಗಿಲುಗಳಿಗೂ ಹೊಸಿಲು ಇರುತ್ತಿತ್ತು. ಇದು ಗೋಡೆಗಳಿಗೂ ಮನೆಯ ಭದ್ರತೆಗೂ ಅನಿವಾರ್ಯವಾಗಿತ್ತು. 

ಅಲ್ಲದೆ ಹೊಸಿಲು ಮನೆಯ ಲಕ್ಷ್ಮೀ ಸ್ವರೂಪ ಎಂಬ ಭಾವನೆಯೂ ಇದ್ದಿತು. ಆದ್ದರಿಂದ ಈಗಲೂ ಎಷ್ಟೇ ಆಧುನಿಕವಾಗಿ ಮನೆಯನ್ನು ಕಟ್ಟಿಸಿದ್ದರೂ ಮನೆಯ ಮುಂಭಾಗದ ಬಾಗಿಲು ಮತ್ತು ಹಿಂಬಾಗಿಲು ಎರಡಕ್ಕೂ ಸಹ ಹೊಸಿಲು ಇದ್ದೇ ಇರುತ್ತದೆ.

 (ಹೊಸಿಲು ಹೊಸ ವಧುವಿನ ಸ್ವಾಗತಕ್ಕಾಗಿಯೂ ಸಿಂಗಾರವಾಗುತ್ತದೆ.) ಎಲ್ಲ ಶುಭ ಸಮಾರಂಭದಲ್ಲಿಯೂ ಹೊಸಿಲನ್ನು ಸಿಂಗರಿಸುವುದು ಒಂದು ವಾಡಿಕೆ.

2.     #ಹೊಸಿಲನ್ನು_ನಿತ್ಯವೂ_ತೊಳೆದು_ಅಲಂಕರಿಸುವಿರಾ?
          ಮನೆಯಿಂದ ಹೊರಗೆ ಹೊರಡುವಾಗ ಮತ್ತು ಮನೆಗೆ ಬರುವಾಗ ಹೊಸಿಲನ್ನು ದಾಟಿ ಬರುತ್ತೇವೆ.

 ಮನೆಯಿಂದ ಹೊರಗೆ ಹೋಗುವಾಗ ದೈವರಕ್ಷೆ ನಮ್ಮ ಬೆನ್ನ ಹಿಂದಿರುತ್ತದೆ ಎಂದೂ ಮನೆಯ ಒಳಗೆ ಬರುವಾಗ ಯಾವುದಾದರೂ ದುಷ್ಟ ಶಕ್ತಿ ಅಕಸ್ಮಾತ್ ಬಂದಿದ್ದರೆ ಅದು ಹೊಸಿಲಿನಲ್ಲಿರುವ ವಾಸ್ತುದೇವತೆಗಳ ಕಾರಣದಿಂದ ನಿವಾರಣೆಗಳ್ಳುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. 

ಆದ್ದರಿಂದ ಈ ರೀತಿ ನಮಗೆ ಶ್ರೇಯಸ್ಕರವಾದ ಹೊಸಿಲನ್ನು ನಿತ್ಯವೂ ಶುಭ್ರವಾಗಿ ತೊಳೆದು ಅರಿಶಿನ, ಕುಂಕುಮ, ಹೂವು ಇತ್ಯಾದಿಗಳಿಂದ ಅಲಂಕರಿಸಿ ಪೂಜಿಸಬೇಕು. ಇದರಿಂದ ಮನೆಯ ಶೋಭೆಯೂ ಹೆಚ್ಚುತ್ತದೆ.

3.     #ಹೊಸಿಲನ್ನು_ಪೂಜೆ_ಮಾಡುವ_ದಿನಗಳಿವೆಯೇ?
          ಹೊಸಿಲನ್ನು ದಿನವೂ ಪೂಜಿಸಿ ನಂತರವೇ ಮನೆಯಿಂದ ಹೊರಗೆ ಕಾಲಿಡಬೇಕು. ಹಾಗೆ ಪೂಜಿಸುವಾಗ ಸ್ತ್ರೀಯರು ಮನೆಗೆ ಸಮೃದ್ಧಿ ಬರಲೆಂದು ಪ್ರಾರ್ಥಿಸಿ
     #ವಾಸ್ತುದೇವ_ನಮಸ್ತುಭ್ಯಂ_ಭೂಶಯ್ಯಾನಿರತಪ್ರಭೋ |
     #ಮದ್ಗೃಹೇ_ಧನಧಾನ್ಯಾದಿಸಮೃದ್ಧಿಂ_ಕುರು_ಸರ್ವದಾ ||
          (ಭೂಮಿಯಲ್ಲಿ ಮಲಗಿರುವ ವಾಸ್ತು ಪುರುಷನೇ, ನಿನಗೆ ನಮಸ್ಕಾರ ಗಳು. ನನ್ನ ಮನೆಯಲ್ಲಿ ಧನಧಾನ್ಯಾದಿ ಸಮೃದ್ಧಿಯು ಸದಾ ಇರುವಂತೆ ಅನುಗ್ರಹಿಸು.)
ಎಂಬ ಈ ಶ್ಲೋಕವನ್ನು ಹೇಳುತ್ತಾರೆ.

 ಅನಿವಾರ್ಯ ಸಂದರ್ಭಗಳಲ್ಲಿ ಅಥವಾ ಅಶೌಚದ ದಿನಗಳಲ್ಲಿ ಮಾತ್ರ ಪೂಜೆ ಮಾಡಲಾಗುವುದಿಲ್ಲ. 

ಹಬ್ಬ ಹರಿದಿನಗಳಲ್ಲಿ, ಮನೆಗಳಲ್ಲಿ ಮಂಗಳ ಕಾರ್ಯ ಮುಂತಾದ ವಿಶೇಷ ದಿನಗಳಲ್ಲಿ ಹೊಸಿಲನ್ನು ವಿಶೇಷವಾಗಿ ಮಾವಿನ ಎಲೆಯ ತೋರಣ, ಹೂವಿನ ಮಾಲೆ, ಇತ್ಯಾದಿಗಳಿಂದ ಅಲಂಕರಿಸಿ ಪೂಜಿಸಬೇಕು.

4.     #ಹುಟ್ಟಿದ_ಮಕ್ಕಳು_ಮೊದಲ_ಬಾರಿ_ಹೊಸಿಲು_ದಾಟಿದಾಗ_ಹಬ್ಬ_ಮಾಡುವಿರಾ?
          ಸಾಮಾನ್ಯವಾಗಿ ಹೊಸಿಲು ನೆಲದಿಂದ ಸ್ವಲ್ಪ ಎತ್ತರದಲ್ಲಿರುತ್ತದೆ. ಈ ಹೊಸಿಲನ್ನು ದಾಟುವುದು ಒಂದು ಸಾಹಸವೇ ಸರಿ. ಇದನ್ನು ನೋಡುವುದು ಹಿರಿಯರಿಗೆ ಒಂದು ಅದ್ಭುತ ಪ್ರಸಂಗ.

 ಇದನ್ನು ಷೋಡಶ ಸಂಸ್ಕಾರಗಳಲ್ಲಿ ಒಂದಾಗಿ ಪರಿಗಣಿಸಿ ನಿಷ್ಕ್ರಮಣ ಎನ್ನುತ್ತಾರೆ. ಮಕ್ಕಳು ಹೀಗೆ ಹೊಸಿಲು ದಾಟಿದಾಗ ಆ ಮಕ್ಕಳನ್ನು ಹೊಸಿಲ ಮುಂದೆ ಕೂರಿಸಿ ದೀಪ ಹಚ್ಚಿಟ್ಟು ಹೊಸಿಲಿಗೆ ಪೂಜೆ ಮಾಡಿ ತಂಬಿಟ್ಟು  ಮಾಡಿ ಮಕ್ಕಳಿಗೆ ಆರತಿ ಮಾಡಬೇಕು.

 ಇದರಿಂದ ಮಕ್ಕಳಿಗೆ ತಮ್ಮ ಸಾಹಸದಿಂದ ಸಂತೋಷವಾಗುತ್ತದೆ. ಮುತ್ತೈದೆಯರಿಗೆ ಕುಂಕುಮ, ವೀಳ್ಯಗಳನ್ನು ಕೊಟ್ಟು ವಿಶೇಷ ಅಡಿಗೆ ಮಾಡಿ ಹಬ್ಬವನ್ನು ಆಚರಿಸಬೇಕು.

5.     #ಹೊಸಿಲನ್ನು_ಕಾಲಿನಿಂದ_ತುಳಿಯಬಾರದು_ಎಂದು_ಎಲ್ಲರಿಗೂ_ಗೊತ್ತಿದೆಯೇ?
          ಹೊಸ್ತಿಲಿನಲ್ಲಿ ಮನೆಯ ವಾಸ್ತು ಪುರುಷನು ನೆಲೆಸಿರುತ್ತಾನೆ ಎಂಬುದು ನಮ್ಮ ಧರ್ಮದ ನಂಬಿಕೆ. ಅಲ್ಲದೆ ಹೊಸ್ತಿಲು ಲಕ್ಷ್ಮೀ ಸ್ವರೂಪ. 

ಮನೆಯ ಎಲ್ಲ ಸೌಭಾಗ್ಯಗಳ ಮೂಲವೂ ಮನೆಯ ಹೊಸ್ತಿಲೇ. ಆದ್ದರಿಂದ ನಾವು ದೈವ ಸ್ವರೂಪವಾಗಿ ಭಾವಿಸುವ ಹೊಸ್ತಿಲನ್ನು ತುಳಿಯುವುದು, ಹೊಸ್ತಿಲ ಮೇಲೆ ಕೂರುವುದು, ಅದರ ಮೇಲೆ ಕುಳಿತು ಆಹಾರ ಸ್ವೀಕರಿಸುವುದು ಸರ್ವಥಾ ನಿಷಿದ್ಧ. 

ಮಕ್ಕಳಿಗೂ ಸಹ ಈ ವಿಷಯಗಳನ್ನು ವಿವರಿಸಿ ಅವರೂ ಕೂಡಾ ಹೊಸ್ತಿಲನ್ನು ತುಳಿಯದೆ ಗೌರವಿಸುವಂತೆ ತಿಳಿಸಿಕೊಡಬೇಕು...

ರಂಗೋಲಿ ಯಾಕೆ ಹಾಕಬೇಕು?

ನಾವು ದಿನ ನಿತ್ಯವೂ ಬಾಗಿಲಿಗೆ ನೀರು ಚುಮುಕಿಸಿ ಥಳಿ ಹಾಕಿ ರಂಗೋಲಿ ಇಡೋದು ನಮ್ಮ ಸಂಪ್ರದಾಯ...

ಯಾಕೇ ಹಾಕೋದು ?

ದಿನಾಲೂ ನಸುಕಿನ ಜಾವದಲ್ಲೇ ಎದ್ದು ಬಾಗಿಲ ಮುಂದೆ ನೀರು ಹಾಕಿ ಹೊಸಿಲು ತೊಳೆದು ರಂಗೋಲಿ ಹಾಕಿದ ಮೇಲೆ ಉಳಿದ ಕೆಲಸ ಮಾಡ್ತಿದ್ರು ನಮ್ಮ ಹಿರಿಯರು..

ಬೆಳಗಿನ ಪ್ರಹರದಲ್ಲಿ ಶ್ರೀ ನಾರಾಯಣನು ಲಕ್ಷ್ಮಿಯೊಡನೆ ವಾಯುವಾಹನನಾಗಿ ಜಗವನ್ನೇ ಪ್ರದಕ್ಷಿಣೆ ಮಾಡ್ತಾನೆ..ಯಾರ ಮನೆ ಮುಂದೆ ರಂಗೋಲಿ ಇಟ್ಟು ದೇವರ ಮುಂದೆ ದೀಪ ಹಚ್ಚಿ ನಾರಾಯಣನನ್ನು ಸಂಪ್ರೀತಿಗೊಳಿಸ್ತಾರೋ ಅವರ ಮನೆಗೆ ಭೇಟಿ ನೀಡಿ ಅವರಿಗೆ ಶುಭವಾಗಲೆಂದು ಹಾರೈಸಿ ಮುಂದೆ ಹೋಗ್ತಾನೆ...

ವೈಜ್ಞಾನಿಕ ಕಾರಣ..

ಮನೆ ಮುಂದೆ ಇರುವ ಕಸಕಡ್ಡಿಯೆಲ್ಲಾ ಸಚ್ಛಮಾಡಿ ಥಳಿ ಹಾಕಿದರೆ, ಕ್ರಿಮಿ ಕೀಟಗಳು ದೂರವಾಗಿ ನಮ್ಮ ಆರೋಗ್ಯವೂ ಚೆನ್ನಾಗಿರುತ್ತೆ..ಬಾಗಿಲ ಮುಂದಿನ ರಂಗೋಲಿ ನೋಡಿದಾಗ ಮನ ಪ್ರಫುಲ್ಲವಾಗುತ್ತದೆ..ಮನೆ ಸುಂದರವಾಗಿ ಕಂಗೊಳಿಸುತ್ತದೆ...ಶುಭಶಕುನಗಳು ಒಳ ಬರುತ್ತೆ..

#ಹೊಸ್ತಿಲು_ಪೂಜೆ

# ಹೊಸಿಲ-ಪೂಜೆ

ನಿತ್ಯದ ಹೊಸ್ತಿಲ ನಮಸ್ಕಾರಕ್ಕಿಂತ ಸ್ವಲ್ಪ ಹೆಚ್ಚಿನ ಕ್ರಮ ಹಾಗೂ ಮಹತ್ವ ಸಿಂಹ ಮಾಸದ ಆರಂಭದ ದಿನದ ಹಾಗೂ ಶ್ರಾವಣ ಶನಿವಾರ ಅಥವಾ ಸೋಣೆ ಶುಕ್ರವಾರದ ಹೊಸ್ತಿಲ ಪೂಜೆಗೆ. ಯಥಾಶಕ್ತ್ಯನುಸಾರ ಮಾಡುವ ಕ್ರಮಗಳಲ್ಲಿ ಪ್ರಾಂತೀಯ ವ್ಯತ್ಯಾಸವಿದ್ದರೂ ಉದ್ದೇಶ ಒಂದೇ. 

 ಬೆಳಗ್ಗೆ ಅಲಂಕಾರಾದಿ ನೈವೇದ್ಯ ಮಾಡಿ ನಮಸ್ಕಾರ ಮಾಡಿದರೆ, ಮುಸ್ಸಂಜೆ ಆರತಿಯ ಬೆಳಗಿ , ಹೊಸ್ತಿಲ ಮಹಾಲಕ್ಷ್ಮಿಗೆ ಹೆಂಗಳೆಯರು ಬೇಡುವ ವರವೇನೆಂದರೆ,

 “ಪ್ರಹ್ಲಾದನಿಗೆ ನರಸಿಂಹ ದೇವರು ಕೊಟ್ಟ ವರವ ನೀಡೆಮಗೆ” ಎಂದು. ಅದೇನೆಂದರೆ

 ಮುಸ್ಸಂಜೆ ಹೊಸಿಲಲಿ ಹಿರಣ್ಯಕಶಿಪುವ ಸಂಹರಿಸಿದ ನರಸಿಂಹ ದೇವರು ಪ್ರಹ್ಲಾದನಿಗೆ “ನಿನ್ನ ವಂಶದವರು ಅರಿಯದೇ ಯಾವುದೇ ತಪ್ಪು ಮಾಡಿದರೂ ನಾನು ಕ್ಷಮಿಸುವೆ” ಎಂದು. 

ಮನೆತನ, ಕುಲ ವೃದ್ಧಿಯ ಬಗ್ಗೆ ಸದಾ ಯೋಚಿಸುವ ಗೃಹಿಣಿ ಬೇಡುವ ವರ ಇದೇ ತಾನೇ. 

ಹಾಗೆಯೇ ವಧೂ ಗೃಹ ಪ್ರವೇಶದ ಸಮಯದಲ್ಲಿ ಹೊಸ್ತಿಲ ಪೂಜೆಯ ಮಹತ್ವವೂ ಮನೆತನದ ಸಮೃದ್ಧಿಯೇ ಆಗಿದೆ. 

ಹವ್ಯಕರ ಹೊಸ್ತಿಲ ಪೂಜೆಯ ಹಾಡೊಂದು ಹೀಗಿದೆ.  

ಹೊಸ್ತಿಲೇ! ಹೊಸ್ತಿಲೇ! ಹೊನ್ ಹೊಸ್ತಿಲೇ!
ಮುತ್ತಿನ ಗಿಂಡಿಲೆ ನೀರ್ತಪ್ಪೆ ||
ಬಂಗಾರದ ತಟ್ಟೆಲಿ ಹೂ ಕೊಯಿವೆ |
ಗಂಗಾ ದೇವಿಗೆ ಮಗಳಪ್ಪೆ ||
ಗೌರೀ ದೇವಿಯ ಸೊಸೆ ಅಪ್ಪೆ |
ಒಲೆ ಹೊತ್ತುಸುವ ಸೌಭಾಗ್ಯ ಕೊಡು ಹೊಸ್ತಿಲೆ ||

ಅರ್ಥಾತ್ 
ಮನೆಯಲ್ಲಿ ಸುಖ-ಸಮೃದ್ಧಿಯು ತುಂಬಿ ,ಗಂಗೆಯಂತಹ ಪವಿತ್ರವಾದ ಜೀವನವ ಮಾಡಿ, ಸದಾ ಮುತ್ತೈದೆಯಾಗಿ , ಜವಾಬ್ದಾರಿಗೆ ಹೆಗಲು ಕೊಡುವ ಶಕ್ತಿಯ ನೀಡೆಂದು ಹೊಸ್ತಿಲ ಮಹಾಲಕ್ಷ್ಮಿಯಲ್ಲಿ ಪ್ರಾರ್ಥನೆ. 
ನಿತ್ಯ ಹರಿದ್ವರ್ಣದ ಪೂಜಾ ಪುರಸ್ಕಾರ ನಿರ್ಮಲ ಮನಸಿಂದ ಮಾಡಿದಾಗ ಶುಭಫಲಗಳು
ನಮ್ಮದಾಗುವುದು.

ಸರ್ವಜನ ಸುಖಿನೋಭವಂತು
ಕೃಷ್ಣಾರ್ಪಣಮಸ್ತು