Saturday, 30 September 2023

Story of Ananthapadmanabha Vrata:-

#ರಮ್ಯಪುರಾಣಪುಣ್ಯಕಥೆಗಳು 

Story of Ananthapadmanabha Vrata:-

This year, Anantha Chaturdashi will be celebrated on September 28. This auspicious day is dedicated to worship Vishnu. Lord Vishnu is called Anantha, which means there is no end.

Sri Gurubhyo Namaha

Soota Maharishi will tell this story toilets in Nimasaranya. Dharmarajan who is living in the forest by being a devotee on the banks of Bhagirathi river in the east
He used to work the hardest. Yudhishthira who bowed down to Sri Krishna who came there as a great man at that time, Shri Krishna, the idol of mercy, with my brothers, we are suffering deeply from exile. When asked to tell me if there is any vratha to overcome these difficulties, there is a vratha called 'Anantha Vratha' which gives all the sex to men and women. Dharmarayan tells Krishna to tell the story of that vratha to be performed on Shukla Paksha Chaturdashi in Bhadrapada month.

There was a Brahmin named Sumantha in the era of artificial age. He belongs to Vasista clan. He had completed his studies. He married a virgin named 'Deeksha', daughter of Bhrugu Maharshi. 'Deeksha' Devi became pregnant and gave birth to a baby girl with all qualities. The child was named 'Sheela'. Deeksha Devi died of extreme fever. Then Sumantha married a virgin named 'Karkasha' so that he would not be troubled by the activities of Yajna. She was also a quarrel bell with a very cruel nature.

When daughter 'Sheela' got married, Sumantha gave her daughter to the great Majesty 'Koundinya' sages and married. Sending her husband's house, when asked the wife to give her son-in-law some clothes, she said there is nothing to give. Without finding any other way, Sumantha gave the remaining flour that he brought for the wedding and sent his son-in-law's daughter. Koundinya went to his asylum in a cart with a rich manner wife.

Park a cart on a river bank in the middle of the way,
The county’s headed to the river to make an afternoon since it’s noon. On that day, 'Anantha Chaturdashi', so many women wore red sarees and worshiped Anantha Padmanabha Swamy with great devotion. Koundinya's sheela saw it, went to him and asked, "Mothers, what is the worship you are worshiping, what is the name of it, tell me a little too."

The women, "we are worshipping the infinity. Today is Bhadrapada Shukla Chaturdashi. If Mahavishnu is worshipped with Anantha and Yamuna today, all your wishes will be fulfilled.
Sheela, who was happy to know this, made a vrata with her help, tied Anantha's thread in hand, gave the flour to Brahmins and gave some food to her husband
She ate the leftover and came to the asylum with her husband. Immediately after visiting the Ashram, by the grace of Anantha Swamy, the infinite supreme world-like wealth was found with the glory of Vratha Swami. Koundinya Mahamuni's Ashram shined with guest treats from all the wealth and grains. Sheela wore all the jewels and became equal to Savithri. The relatives who saw this were talking that she is happy by the grace of Ananthapadmanabha.

So once a county saw the red thread in his wife's hand, to ask what it was, she informed about infinity vrata and as a result of fasting, she has received wealth and wealth by the grace of the Lord. Angry countinas over hearing this, claim all the grain they have received, as a result of their penance, removing the thread from their wife's hand and set it into a nearby fire. Sheela immediately ran out of fear and removed the thread and put it in milk and saved it. (Normally, when women make any vrata stories, tie a thread and dissolve it, we put it on the plants where milk comes in milk. Plant where milk comes is, poisonous, flowering plant. ) Because of this act of Koundinya, his wealth was destroyed day by day. Counties who realize this know that this happened because of their ego, they wander in the woods search for the very infinity. After suffering a lot of difficulty, Ananthanu appreciates his loyalty and devotion and blesses him. Then the countinas celebrate the Anantha's vratha, gained wishes from its influence, experience all wealth, salvation in thisparagus and still shining as a 'rehabilitation star' amongst the tribes.

From this story in Bhaishyottarapurana, it is a vratha to imagine the Mahatma of Ananthapadmanabha Swamy in Anantha, who gives infinite boons, 'Anantha Padmanabha Mahavishnuvu, Anantha Milana Vratha in Padmanaba. This is called 'Moksha Vrata'. It is said that this vratha was told by Sri Krishna to the Pandavas in exile and made Dharmaraja to do vratha and led to their victory. Celebrated by Agastya Maharshi
Janaka, Sagar, Dilipa, Harishchandra, Bharatadis celebrate this vratha
Because of its influence, he happily followed the state and became famous.

"Akashhat Patitam Toyam Yatha Gachhati Sagaram,
Salutations to all: Keshava Pratigachhati.
Everyone is happy Santhu Survey Santhu Niramaya
Survey Bhadrani Pashyantu Maa Kashchith sad Bhagbhaveth"

As the water falling from the sky reaches the ocean, the salutation done to all the gods will reach Keshava. May all be happy, may all be healthy, may all see good, may no one see sorrow.

With greetings,
Written by:- Asha Nagabhushan. 

ಕಲ್ಕಿ ಅವತಾರ

ಕಲ್ಕಿ ಅವತಾರ  :-

ಧರ್ಮ ನಾಶವಾಗಿ ಅಧರ್ಮ ತಲೆ ಎತ್ತಿ ದುಷ್ಟರ ಕೃತ್ಯ ಹೆಚ್ಚಾದಾಗ ಪಾಪದ ಕೊಡ ತುಂಬಿದಾಗ ಭಗವಂತ ಅವತಾರ ಎತ್ತಿ ಬರುತ್ತಾನೆ ಎನ್ನುವುದು ನಮಗೆ ಭಗವಂತ ವಿಷ್ಣುವಿನ ದಶಾವತಾರ ಗಳಿಂದ ತಿಳಿಯುತ್ತದೆ. ತ್ರೇತಾಯುಗದಲ್ಲಿ ರಾವಣನ ಸಂಹಾರ ಮಾಡಲು ರಾಮ ಅವತಾರ ಎತ್ತಿದ ಹಾಗೆ ದ್ವಾಪರದಲ್ಲಿ ಕಂಸನ ಸಂಹಾರ ಮಾಡಲು 'ಕೃಷ್ಣ' ಅವತಾರವೆತ್ತಿ ಬರುತ್ತಾನೆ. ಅದೇ ರೀತಿ ಕಲಿಕಾಲದಲ್ಲಿ ಕಲಿಯ ಆರ್ಭಟ ಜಾಸ್ತಿಯಾದಾಗ ಧರ್ಮ ರಕ್ಷಣೆ ಮಾಡಲು ಭಗವಂತ ಅವತಾರ ಎತ್ತಿ ಬರುತ್ತಾನೆ ಎಂದು ಭಾಗವತದಲ್ಲೂ ತಿಳಿಸಿದ್ದಾರೆ. ಹಿಮಾಲಯದ ತಪ್ಪಲಲ್ಲಿರುವ 'ಶಂಭಲಾ' ಎಂಬ ಗ್ರಾಮದಲ್ಲಿ' ವಿಷ್ಣುವೀಷ' ಎಂಬ ಬ್ರಾಹ್ಮಣ ನಿದ್ದನು. ಇವನ ಪತ್ನಿ ಸುಮತಿ. ಇವನು ದಾನ ಧರ್ಮದಂಥ ಪುಣ್ಯಕಾರ್ಯ ಗಳನ್ನು ಮಾಡಿ ಭಗವಂತನನ್ನು ಧ್ಯಾನಿಸುತ್ತಾ ಪೂಜಿಸುತ್ತಾ ನೇಮ ನಿಷ್ಠ ನಾಗಿದ್ದನು. ಇವರಿಗೆ ನಾಲ್ಕು ಜನ ಮಕ್ಕಳು ಕವಿ -ಪ್ರಾಜ್ಯ ಸುಮಂತ, ಎಂಬ ಮೂರು ಮಕ್ಕಳನ್ನು ಪಡೆದು ನೆಮ್ಮದಿಯ ಸಂಸಾರ ಸಾಗಿಸುತ್ತಿದ್ದ. ಈ ಬ್ರಾಹ್ಮಣನ ಸಂಸಾರ ಮತ್ತು ಮನೆ ಆ ಗ್ರಾಮಕ್ಕೆ ಮಂಗಳಕರವಾಗಿ ಶೋಭಾಯಮಾನವಾಗಿತ್ತು.

ಸುಮತಿ ನಾಲ್ಕನೇ ಗರ್ಭ ಧರಿಸಿ ದಿನ ತುಂಬಿದಾಗ ಮುದ್ದಾದ ಗಂಡು ಮಗು ವಿಗೆ ಜನ್ಮ ನೀಡಿದಳು. ಆಗ ಬಂದ ಜ್ಯೋತಿಷ್ಯರು- ಋಷಿಮುನಿಗಳು ಮಗು ವನ್ನು ನೋಡಿ ಈ ಮಗು ಸಾಧಾರಣವಾದ ಮಗುವಲ್ಲ ಸಾಕ್ಷಾತ್ ವಿಷ್ಣು  ಅವ ತರಿಸಿ ಬಂದಂತಿದೆ.  ಈ ಮಗು ವಿಷ್ಣುವಿನ ಅಂಶವಾಗಿದೆ ಎಂದು ಹರಸಿ ಹೊರ ಟರು.  ಮತ್ತೆ ಕೆಲ ದಿನಗಳಲ್ಲಿ ಚಿರಂಜೀವಿಗಳಾದ ಪರಶುರಾಮ, ವ್ಯಾಸರು, ಹನುಮಂತ, ಬಲಿಚಕ್ರವರ್ತಿ,ವಿಭೀಷಣ ಮುಂತಾದ ವರೆಲ್ಲ  ದಾನ ಕೇಳುವ ಬ್ರಾಹ್ಮಣರ ವೇಶದಲ್ಲಿ ಬಂದರು. ವಿಷ್ಣುವೀಶ ಅವರನ್ನು ಆದರಿಸಿ ಒಳಗೆ ಕರೆದು ಆದರೋಪಚಾರ ಮಾಡಿ ಅವರಿಗೆ ಯಥೋಚಿತ ಸತ್ಕಾರ ನೀಡಿದನು. ವಿಷ್ಣುವೀಶ ನ ಸತ್ಕಾರ ಸ್ವೀಕರಿಸಿ ಅವರೆಲ್ಲರೂ ಮಗುವಿನ ಬಳಿ ಬಂದು ಮಗು ವಿಗೆ 'ಕಲ್ಕಿ'ಎಂದು ನಾಮಕರಣ ಮಾಡಿ  ಬ್ರಾಹ್ಮಣನಿಗೆ ಧನ್ಯವಾದ ಹೇಳಿ ಅವರವರ ಆಶ್ರಮಕ್ಕೆ ತೆರಳಿದರು.

ಕಲ್ಕಿ  ಹುಣ್ಣಿಮೆಯ ಚಂದ್ರನಂತೆ ಶೋಭಿಸುತ್ತಿದ್ದ. ಮಗು ಬೆಳೆದು ಬಾಲಕನಾದ ತಂದೆ ಅವನಿಗೆ ಆಚಾರ್ಯರ ಮೂಲಕ ವಿದ್ಯೆ ಕಲಿಸುವ ವ್ಯವಸ್ಥೆ ಮಾಡಿದನು ಕಲ್ಕಿ ಬಹಳ ಶ್ರದ್ಧೆಯಿಂದ ವಿದ್ಯೆ ಕಲಿತು ಎಲ್ಲಾ ವಿದ್ಯೆಯನ್ನು ಕರಗತ ಮಾಡಿ ಕೊಂಡನು. ಒಂದು ದಿನ ಒಬ್ಬ ಕಡ್ಡಿ ಗಾತ್ರದಂತ  ಕೃಶ  ಶರೀರದ ವೃದ್ಧ  ಬ್ರಾಹ್ಮ ಣನೊಬ್ಬ ಬಂದನು. ಕಲ್ಕಿ ಅವನನ್ನು ನೋಡಿ ವಿಚಾರಿಸಿ ಕರೆದು ಸತ್ಕರಿಸಿದ. ಆ ಬ್ರಾಹ್ಮಣ ಕಲ್ಕಿಗೆ ಹೇಳಿದ ನೋಡು ಮಗು ನಾನು 'ಕೃತ' ಚತುರ್ಯುಗಗಳಿಗೂ  ನಾನೇ ಮೊದಲನೆಯವನು. ಈಗ ಕಲಿಯುಗ ನಡೆಯುತ್ತಿದೆ ಅನ್ಯಾಯ ಅಧರ್ಮ ತಾಂಡವವಾಡಿ  ತಲೆಯೆತ್ತಿ ಮೆರೆಯುತ್ತಿದೆ. ಜನರು ಮೋಸ ವಂಚನೆ ಯಲ್ಲಿ ತೊಡಗಿದ್ದಾರೆ. ಧರ್ಮದ ವಿಚಾರ ಧರ್ಮಾಚರಣೆಗಳಿಗೆ  ಬಾಯಿ ಕಟ್ಟಿ ದ್ದಾರೆ.  ಇಂಥ ಅಧರ್ಮ ಅನೀತಿಯಿಂದಾಗಿ ನಾನು ವೃದ್ಧನಾಗಿ ಕೃಶನಾಗಿದ್ದೇನೆ ಎಂದಾಗ  ಬಾಲಕ ಆಶ್ಚರ್ಯದಿಂದ ನೀವು ಹೇಳುತ್ತಿರುವುದು ನಿಜವೇ ಹಾಗಾ ದರೆ ಆ 'ಕಲಿ' ಯಾರು? ಅವನು ಯಾಕೆ ಜನರನ್ನು ಅಧರ್ಮ ಮಾರ್ಗಕ್ಕೆ ಎಳೆ ದೊಯ್ಯುತ್ತಾನೆ ಎಂದು ಕೇಳಿದ.

ಮಗು ಕಲಿಯ ಕಥೆ ಬಹಳ ವಿಸ್ತಾರವಾಗಿದೆ. ಬ್ರಹ್ಮನಿಂದಲೇ ಮೊದಲು ಪಾಪ ಹುಟ್ಟಿತು. ಪಾಪದ ಇನ್ನೊಂದು ರೂಪ ಅಧರ್ಮ. ಅಧರ್ಮನು ಮಿಥ್ಯೆಯನ್ನು ಮದುವೆಯಾದನು. ಇವರಿಬ್ಬರ ಸಂತಾನ  'ಧಂಬ' ಎಂಬವನು ಹುಟ್ಟಿದನು. ಮುಂದೆ ಇವನು ಬೆಳೆದು ಮಾಯೆಯನ್ನು ಮದುವೆಯಾದ, ಧಂಬ ಮತ್ತು ಮಾಯೆ ಯಿಂದ ಲೋಭ ಮತ್ತು ವಿಕೃತಿ ಎಂಬುವರನ್ನು ಪಡೆದರು. ಇವರಿ ಬ್ಬರು ಮುಂದೆ 'ಕ್ರೋದ' ಗಳನ್ನು ಪಡೆದರು.‌  ಮುಂದೆ ಕ್ರೋಧ ಮತ್ತು ಹಿಂಸೆ ಯಿಂದ  'ಕಲಿ' ಹುಟ್ಟಿದ. ಕಲಿಯ ಪೀಳಿಗೆಯಿಂದ ನರಕ- ಮೃತ್ಯು- ಭಯ -ದುರುಕ್ತಿ. ಇವರೆಲ್ಲ ಉತ್ಪತ್ತಿ ಆದರು. ಇವರೆಲ್ಲರ  ರಾಜ ಕಲಿಯಾದ್ದರಿಂದ  ಎಲ್ಲಾ ಕಡೆ ವ್ಯಸನ -ಭಯ -ಚಿಂತೆ - ಪಾಪ ಕೃತ್ಯಗಳೇ ತುಂಬಿದವು. ಇವುಗ ಳಿಂದಾಗಿ 'ಧರ್ಮ'  ಮಂಕಾಗಿ  ಯಾರಿಗೂ ಕಾಣದೆ ಸಂಕಟ ಪಡುತ್ತಿದ್ದಾನೆ . ಹೀಗೆ ಎಲ್ಲೆಡೆಯೂ ಅಧರ್ಮವೇ  ಮೆರೆದಾಡುತ್ತಿದೆ.  ಎಂದು ಬ್ರಾಹ್ಮಣ ಹೇಳಿ ದ್ದನ್ನು ಕೇಳಿ ಕಲ್ಕಿ ಕೇಳಿದ ಹಾಗಾದರೆ ಇದಕ್ಕೆ ಪರಿಹಾರ ಏನು ಇದೆ ಎಂದು.
ವೃದ್ಧನಾಗಿದ್ದ 'ಕೃತ'ನು ಹೇಳಿದ ನೀನು ಈಗ ಮಹೇಂದ್ರ ಪರ್ವತಕ್ಕೆ ಹೋಗಿ ಪರಶುರಾಮರಲ್ಲಿ  ಎಲ್ಲಾ ಶಸ್ತ್ರ ಶಾಸ್ತ್ರ ವಿದ್ಯೆಗಳನ್ನು ಕಲಿತು ಮುಂದೆ ಧರ್ಮ ವನ್ನು ನೀನು ರಕ್ಷಣೆ ಮಾಡಬೇಕು ಎಂದನು. ಕೃತನಿಗೆ ಕಲ್ಕಿ ಯು ನಮಸ್ಕರಿಸಿ ಬೀಳ್ಕೊಟ್ಟನು. ನಂತರ ತಂದೆಯ ಅನುಮತಿ ಪಡೆದು ಪರಶುರಾಮರನ್ನು ಕಾಣಲು ಮಹೇಂದ್ರ ಪರ್ವತಕ್ಕೆ ಹೊರಟನು.

ಪರಶುರಾಮರನ್ನು ಹುಡುಕಿ ಅವರಲ್ಲಿ ಶಿಷ್ಯನನ್ನಾಗಿ ಪಡೆಯುವಂತೆ ಪ್ರಾರ್ಥಿಸಿ ಅವರಿಂದ  ಸಕಲ ವಿದ್ಯಾಭ್ಯಾಸವನ್ನು ಮುಗಿಸಿದನು. ಹೊರಡುವಾಗ ಗುರುಗಳಲ್ಲಿ ಗುರುದಕ್ಷಿಣೆ ಏನು ಕೊಡಲಿ ಎಂದು ಕೇಳಿದನು ಆಗ ಪರಶುರಾಮರು ನನಗೆ ಗುರುದಕ್ಷಿಣೆ ಏನೂ ಬೇಡ ಮಗು ಈ ಜಗತ್ತಿನಲ್ಲಿ ನಡೆಯುತ್ತಿರುವ ಅನ್ಯಾಯ ಅಧರ್ಮಗಳನ್ನು ನಿಲ್ಲಿಸಿ ಧರ್ಮಸ್ಥಾಪನೆ ಮಾಡು
ಇದೇನೇ ನೀನು ನನಗೆ ಕೊಡುವ ಗುರುದಕ್ಷಿಣೆ ಎಂದು ಹರಸಿ ಬೀಳ್ಕೊಟ್ಟರು.
ಕಲ್ಕಿಗೆ ಇಬ್ಬರು ಪತ್ನಿಯರು ಮೊದಲನೇ ಪತ್ನಿ ಲಕ್ಷ್ಮಿ ರೂಪವಾದ ಪದ್ಮಾವತಿ, ಎರಡನೇ ಪತ್ನಿ ವೈಷ್ಣವ ಶಕ್ತಿ ರೂಪ ಹೊಂದಿದವಳು. ತ್ರೇತಾಯುಗದಿಂದಲೂ ವಿಷ್ಣುವನ್ನು ವಿವಾಹವಾಗುವ ಕನಸನ್ನು ಕಂಡವಳು, ರಾಮನನ್ನೇ ಪಡೆಯಲು ಕಾತರಿಸಿ ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭದ ನಡುವಿನ ಸಮಯದಲ್ಲಿ ವೈಷ್ಣವಿ ದೇವಿಯಾಗಿ ಕಲ್ಕಿಯನ್ನು ವಿವಾಹವಾದಳು. ಕಲ್ಕಿ 
ತಂದೆ ಇಬ್ಬರು ಪತ್ನಿಯರಿಂದ ನಾಲ್ಕು ಜನ ಮಕ್ಕಳನ್ನು ಪಡೆದನು. ಅವರು ಜಯ- ವಿಜಯ- ಮೇಘವಾಹ- ಬಲಾಹಕ. ಕಲ್ಕಿಯ ಬರುವಿಕೆಗಾಗಿ ಚಿರಂಜೀವಿಗಳು ಮುಕ್ತಿ ಮತ್ತು ಮೋಕ್ಷಕ್ಕಾಗಿ ಕಾಯುತ್ತಿದ್ದರು.  ಪರಶುರಾಮರ ಶಿಷ್ಯನಾಗಿ ದಿವ್ಯ ಅಸ್ತ್ರ ಶಸ್ತ್ರ ಶಾಸ್ತ್ರಗಳ ವಿದ್ಯೆಯನ್ನು ಕಲಿತನು. ಮುಂದೆ ಕಲಿಯನ್ನು ನಿಗ್ರಹಿಸಲು ಜೊತೆಗೆ ತನ್ನ ನಾಲ್ಕು ಜನ ಸಹೋದರರು ಮತ್ತು ಏಳು ಜನ ಚಿರಂಜೀವಿಗಳು ಪರಶುರಾಮ- ಹನುಮಂತ  -ವ್ಯಾಸರು- ಕೃಪಾ ಚಾರ್ಯರು- ಅಶ್ವತ್ಥಾಮ -ವಿಭೀಷಣ- ಬಲಿ ಚಕ್ರವರ್ತಿ ಇವರುಗಳ ಸಹಾಯ ಪಡೆದು  ಕಲಿಯನ್ನು  ನಿಗ್ರಹಿಸಿದನು.

ಕಲಿಯನ್ನು  ನಿಗ್ರಹಿಸುವುದು ಒಬ್ಬರಿಂದ ಸಾಧ್ಯವಿಲ್ಲ ರಾಮಾವತಾರದಲ್ಲಿ ರಾಮನ ಬಂಟನಾಗಿದ್ದ ಹನುಮಂತನ ಒಬ್ಬನೇ ಎಲ್ಲವನ್ನು ಮಾಡುತ್ತಿದ್ದ ಹಾಗೆ ಕೃಷ್ಣಾವತಾರದಲ್ಲಿ ಕೌರವರನ್ನು ನಿಗ್ರಹಿಸಲು ಐದು ಜನ ಪಾಂಡವರನ್ನು ಜೊತೆಯಲ್ಲಿಟ್ಟುಕೊಂಡನು ಹಾಗೆ ನಿಮಿತ್ತ ಮಾತ್ರಕ್ಕೆ ದ್ರೌಪದಿ ಇದ್ದಳು. ಕಲ್ಕಿಯ
ಉದ್ದೇಶಿತ  ಕಾರ್ಯ ಮುಗಿಯುವ ತನಕ ಚಿರಂಜೀವಿಗಳು ಕಲ್ಕಿಯ ನಾಲ್ಕು ಜನ ಸಹೋದರರು  ಕಲ್ಕಿಯ ಜೊತೆ ಇರುತ್ತಾರೆ. 

ಪರಶುರಾಮಲಿಂದ ನಾನಾರ್ಜನೆ ಪಡೆದು ಮಹೇಂದ್ರ ಪರ್ವತದಿಂದ ಬಂದ ಕಲ್ಕಿ ಶಿವನನ್ನು ಕುರಿತು ಘೋರ ತಪಸ್ಸು ಮಾಡಿದನು. ಶಿವನು ತಪಸ್ಸಿಗೆ ಮೆಚ್ಚಿ
ದಿನಾಂಕ. ಕಲ್ಕಿಯು ಶಿವನಿಂದ  ದೇವದತ್ತ ಎಂಬ ಒಂದು ಶ್ವೇತಾಶ್ವ, ಮತ್ತು ಶಕ್ತಿಯುತ ವಾದ ಖಡ್ಗ, ಹಾಗೂ ಲೋಕದ ವಿಷಯಗಳನ್ನೆಲ್ಲ ಬಲ್ಲಂತ ಒಂದು ಗಿಳಿಯನ್ನು ಪಡೆದುಕೊಂಡನು. ಅದಾಗಲೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದ
'ಧರ್ಮ'ದೇವತೆ ಸದ್ಗುಣಗಳ ಪರಿವಾರ ಸಮೇತ ವಾಗಿ ಕಲ್ಕಿಯ ಎದುರಿಗೆ ಬಂದು ನಮ್ಮನ್ನೆಲ್ಲ ಕಾಪಾಡಿ ಧರ್ಮ ವನ್ನು ರಕ್ಷಿಸಬೇಕು ಎಂದು ಪ್ರಾರ್ಥಿಸಿ ದಾಗ ಅವರಿಗೆಲ್ಲ ರಕ್ಷಿಸುವೆನೆಂದು ಮಾತುಕೊಟ್ಟು ಕಳಿಸಿ ನಂತರ ಶ್ವೇತಾಶ್ವ ಏರಿ, ಕೈಯಲ್ಲಿ ಖಡ್ಗ ಹಿಡಿದು ಚಂಡಮಾರುತದಂತೆ  ಕುದುರೆಯನ್ನು ಹಾರಿಸಿ 'ಕಲಿ' ನೆಲೆಯಾದ 'ವಿಷಸನ' ಪಟ್ಟಣಕ್ಕೆ  ಬಂದನು.  ಎಲ್ಲೆಂದರಲ್ಲಿ ಗೋ ಮಾಂಸದ ರಾಶಿ ರಾಶಿಗಳು ಕಣ್ಣಿಗೆ ರಾಚುತಿದ್ದು, ಹಾದಿ ಬೀದಿಗಳಲ್ಲಿ ಜೂಜಾಟ ಮಧ್ಯ ಸೇವನೆ ಮಾಡುತ್ತಿದ್ದ ವ್ಯಸನಿಗಳ  ಮೇಲೆ ದಾಳಿ ನಡೆಸಿ ಎಲ್ಲವನ್ನು  ನಾಶ ಮಾಡಿದನು.  ವಿಷಯ ತಿಳಿದ 'ಕಲಿ' ತನ್ನ ವಾಹನವಾದ ಗೂಬೆ ಮೇಲೆ  ಬಂದು 'ಕಲ್ಕಿ' ಮೇಲೆ ಯುದ್ಧ ನಡೆಸಿದನು. 'ಕಲ್ಕಿ'ವೀರಾವೇಶದಿಂದ ಹೋರಾಡಿ 'ಕಲಿ' ಯನ್ನು ಹೊಡೆದು ಓಡಿಸಿದನು. ಅಡಗಿದ್ದ 'ಧರ್ಮದೇವತೆ'  ಹೊರಗೆ ಬಂದೆ ನೆಮ್ಮದಿಯಾಗಿ ನೆಲೆಸುವಂತೆ ಮಾಡಿದನು.

( ಕಲ್ಕಿ ಹುಟ್ಟೇ ಇಲ್ಲ  ಕಲಿಯುಗದ ಅಂತ್ಯ ಬಂದೇ ಇಲ್ಲ ಅದು ಹೇಗೆ ಎಂದು 
ಅನ್ನಿಸಬಹುದು. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಭಾಗವಹಿಸಿ ದಾಗ 90 ವರ್ಷವಾಗಿತ್ತು. ಹಾಗೆ ಭೂಲೋಕದ ಒಂದು ವರ್ಷ ಬ್ರಹ್ಮನಿಗೆ ಒಂದು ದಿನ,  ಹೀಗಿರುವಾಗ ' ಕಲ್ಕಿ' ಈಗಾಗಲೇ  ಜನ್ಮ ತಾಳಿದ್ದು ಗೋಚರ ವಾಗದಂತೆ ಇರಬಹುದು. ಅಧರ್ಮ ಪೂರ್ತಿ ತುಂಬಿದಾಗ  ಹಾರುವ ಬಿಳಿ ಕುದುರೆ ಏರಿ ಖಡ್ಗ  ಝಳಪಿಸುತ್ತಾ ಬರುತ್ತಾನೆ ಕಾಯಬೇಕು ಅಷ್ಟೇ, ಇದು ನನ್ನ ಅನಿಸಿಕೆ)

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ!
ಅಭ್ಯುಥ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ !!

ಪರಿತ್ರಾಣಾಯ ಸಾಧೂನಾಂ  ವಿನಾಶಯ ಚ ದುಷ್ಕೃತಾಂ!
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ!! 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಚಂಡಿಕೇಶ್ವರ


ಚಂಡಿಕೇಶ್ವರ:- 

ಸಾಮಾನ್ಯವಾಗಿ  ಶಿವನ ದೊಡ್ಡ  ದೇಗುಲಗಳಿಗೆ  ಹೋದಾಗ ಪ್ರದಕ್ಷಿಣೆ ಯನ್ನು ಅರ್ಧ ಚಂದ್ರಾಕಾರ  ಮಾಡುತ್ತೇವೆ.  ಇದನ್ನು 'ಸೋಮಸೂತ್ರ' ಎನ್ನುತ್ತಾರೆ. ಶಿವನ ಪಾಣಿಪೀಠದಿಂದ  ಗೋಮಕಿ ಬಾಯಿಂದ ತೀರ್ಥ ಬೀಳುವ  ಜಾಗದ ತನಕ  ಹೋಗುತ್ತೇವೆ. ಅದನ್ನು ದಾಟಿ ಹೋಗುವುದಿಲ್ಲ. ಏಕೆಂದರೆ ಶಿವನ ಶಿರದಿಂದ ಇಳಿದು ಬಂದ ಅಭಿಷೇಕದ ತೀರ್ಥದಲ್ಲಿ ಗಂಗೆ ಹಾಗೂ ಗಣಗಳು ಇರುತ್ತಾರೆ  ಅಂಥ   ಪವಿತ್ರ ತೀರ್ಥವನ್ನು ದಾಟಬಾರದು ಹಾಗೂ ತೀರ್ಥದಲ್ಲಿ ಶಿವನ ಸಕಾರಾತ್ಮಕ ಅಪಾರ  ಶಕ್ತಿ ಇದ್ದು, ಅದರ ಪ್ರಭಾವ ಮನುಷ್ಯನ ದೇಹದ ಮುಖ್ಯವಾದ ಶಕ್ತಿ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಸುತ್ತು ಪ್ರದಕ್ಷಿಣೆ ಹಾಕಬಾರದು ಎನ್ನುತ್ತಾರೆ. 

ಶಿವನ ದೇವಸ್ಥಾನದಲ್ಲಿ  ಕೆಲವು  ಆಚರಣೆಗಳನ್ನು ಕಾಣುತ್ತೇವೆ. ಆಲಯದ ಒಳಗೆ ಹೋದಾಗ ಶಿವ ದರ್ಶನ ಮಾಡಿ ಬರುವಾಗ ನಂದಿಯ ಕಿವಿಯ ಮೇಲ್ಭಾಗವನ್ನು ಹೆಬ್ಬೆರಳಿನಿಂದ ತೋರುಬೆರಳೆತನಕ ಹಿಡಿದು ಶಿವನನ್ನು ನೋಡುತ್ತಾ  ಇಷ್ಟಾರ್ಥಗಳನ್ನು ಹೇಳುತ್ತೇವೆ. ಧ್ಯಾನಾಸಕ್ತನಾದ ಶಿವನು ನಂದಿಯ ಮೂಲಕ ತಿಳಿಯುತ್ತಾನೆಎಂಬ ನಂಬಿಕೆ ಇದೆ. ಶಿವನ ದೇವಸ್ಥಾನ ದಿಂದ ವಿಭೂತಿ - ಪತ್ರೆ -ಫಲ -ಪುಷ್ಪ- ಪ್ರಸಾದ ಏನನ್ನೇ ತರುವುದಾದರೂ ಶಿವನ ಕುಟುಂಬದವನೇ ಆಗಿರುವ  'ಚಂಡಿಕೇಶ್ವರನ  ಕಿವಿ ಬಳಿ ಜೋರಾಗಿ ಚಪ್ಪಾಳೆ ಹೊಡೆಯುವುದರ ಮೂಲಕ ತಿಳಿಸಿ ತರಬೇಕು. ಶಿವ ಮಂದಿರಗಳಲ್ಲಿ ಶಿವನ ಕುಟುಂಬವಾದ  ಗಣಪತಿ, ಶಿವ-  ಪಕ್ಕದ ಗುಡಿಗಳಲ್ಲಿ ಪಾರ್ವತಿ, ಹಾಗೆ  ಸುಬ್ರಹ್ಮಣ್ಯ, ಈಶ್ವರನ ಎದುರಿಗೆ ನಂದಿ- ಹಾಗೆ ಬೃಂಗಿ ಮತ್ತು ಚಂಡಿಕೇಶ್ವರ ಮೂರ್ತಿಗಳನ್ನು ಇಟ್ಟಿರುತ್ತಾರೆ. ಶಿವನ ಗಣಗಳಲ್ಲಿ ನಂದಿ- ಬೃಂಗಿಯರ ಹಿನ್ನೆಲೆ ಸಾಧಾರಣ ಗೊತ್ತಿರುತ್ತದೆ. 'ಚಂಡಿಕೇಶ್ವರ'ನ  ಕುರಿತಾಗಿ ಒಂದು ಕಥೆ ಇದೆ.

ದಕ್ಷಿಣ ಭಾರತದಲ್ಲಿ ಮಣಿಯಾರ್ ನದಿಯ ದಡದಲ್ಲಿ ಒಂದು ಅಗ್ರಹಾರವಿದ್ದು 
ಅಲ್ಲಿ 'ಈಚದತ್ತ' ಶರ್ಮಾ ಎಂಬ ಬ್ರಾಹ್ಮಣ ವೇದಪಂಡಿತನಿದ್ದು ಮಕ್ಕಳಿಗೆ ವೇದ ಪಾಠ ಹೇಳಿಕೊಡುತ್ತಿದ್ದರು.  ಚಂದೇಶನು ತಂದೆಯಂತೆ ವೇದಪಾರಂಗತ
ನಾಗಿದ್ದು, ಆರಾಧ್ಯ ದೈವ ವಾದ ಶಿವನ ಭಕ್ತನಾಗಿದ್ದನು. ಶಿವಧ್ಯಾನ ಶಿವ ಪೂಜೆ ಮಾಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನ, ದೇವತಾರಾಧನೆ ಮಾಡಿ ವೇದಾಧ್ಯಯನ ಮಾಡುತ್ತಿದ್ದ.  ಅಂದು ನದಿಯಲ್ಲಿ ಸ್ನಾನ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಬರುತ್ತಿರುವಾಗ ಒಬ್ಬ ಗೋಪಾಲಕ ಒಂದು ಹಸುವನ್ನು ಮನ ಬಂದಂತೆ ಹೊಡಿಸುತ್ತಿದ್ದ ಇದನ್ನು ಕಂಡ ಚಂದೇಶನ ಮನಸ್ಸಿಗೆ ನೋವಾಯಿತು. ಆತ ಹೇಳಿದ ಹೇ ಗೋಪಾಲಕ ಗೋವು ದೈವ ಸಮಾನವಾದದು ಅದನ್ನು ಹಿಂಸಿಸುವುದು ಹೊಡೆಯುವುದು ಸರಿಯಲ್ಲ ನಿನಗೆ ಈ ಹಸುವನ್ನು ಸಾಕುವುದು ಕಷ್ಟವಾದರೆ ನಾನು ಆದರ ಪಾಲನೆ ಪೋಷಣೆ ಮಾಡುತ್ತೇನೆ ಎಂದು ಹೇಳಿದ. ಕೋಪದಲ್ಲಿದ್ದ ಗೋಪಾಲಕ ಆಯಿತು ನನ್ನ ಎಲ್ಲಾ ಗೋವುಗಳನ್ನು ನಿನಗೆ ಕೊಡುತ್ತೇನೆ ಅದರ ಎಲ್ಲಾ ಜವಾ ಬ್ದಾರಿ ನಿನ್ನ ಮೇಲಿದೆ ಆದರೆ ಅದರ ಮೇಲಿನ ಹಕ್ಕು ನನ್ನದು ಅವುಗಳ ಹಾಲು ನನಗೆ ಸಿಗಬೇಕು ಎಂದನು. ಚಂದೇಶನು ಷರತ್ತುಗಳಿಗೆ  ಸಂತೋಷದಿಂದ ಒಪ್ಪಿ ಅವನು ನದಿಯ ದಡದಲ್ಲಿ ಇದ್ದು ಗೋ ಪೋಷಣೆ ಮಾಡುತ್ತಾ, ಜೊತೆ ಯಲ್ಲಿ ವೇದಾಧ್ಯಯನ ಮುಂದುವರೆಸಿದ. ಚಂದೇಶನ ಪಾಲನೆ ಪೋಷಣೆ ಯಿಂದ ಗೋವುಗಳು ತೃಪ್ತಿ ಹೊಂದಿ ಚಂದೇಷನನ್ನು ಪ್ರೀತಿಸತೊಡಗಿದವು.

ಚಂದೇಶನು ನಿತ್ಯವೂ ಕಾಡಿಗೆ ಹೋಗಿ ಹುಲ್ಲು ಸೊಪ್ಪು ತಂದು ಹಸುಗಳಿಗೆ ಮೇವನ್ನು ಹಾಕುತ್ತಿದ್ದನು. ಮೇವು ತರುವ ಸಲುವಾಗಿ ಅವನ ಬಳಿ ಚಿಕ್ಕ ಕೊಡಲಿಯನ್ನು ಇಟ್ಟುಕೊಂಡಿದ್ದನು.  ಚಂದೇಶನ ಪ್ರೀತಿಯ ಆರೈಕೆಯಿಂದ ಗೋವುಗಳು ಅವಾಗಿಯೇ ಹಾಲು ಸುರಿಸಲು ಪ್ರಾರಂಭಿಸಿದವು. ಹಾಲನ್ನು ಸಂಗ್ರಹಿಸಲು ಮಣ್ಣಿನ ದೋಣಿ  ಮಾಡಿ ಹಾಲನ್ನು ಸಂಗ್ರಹಿಸುತ್ತಿದ್ದನು. ಅವನ ನಿತ್ಯ ಪೂಜೆಗಾಗಿ ನದಿಯಿಂದ  ಮರಳನ್ನು ತಂದು ಶಿವಲಿಂಗ  ತಯಾರಿಸಿದನು. ಮಣ್ಣಿನ ದೋಣಿಗಳಲ್ಲಿ ಹಾಲನ್ನು  ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದನು.

ಒಂದು ದಿನ  ಅಗ್ರಹಾರದಿಂದ ಬರುತ್ತಿದ್ದ ಒಬ್ಬ ವ್ಯಕ್ತಿ . ಅಲ್ಲಿ ಗೋವುಗಳು ತಾವಾಗಿಯೇ ಹಾಲು ಸುರಿಸುವುದನ್ನು ಹಾಗೂ ಚಂದೇಶನು ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದನು. ಇದನ್ನು  ಅಗ್ರಹಾರದಲ್ಲಿದ್ದ  ಗೋವುಗಳ ಯಜಮಾನನಿಗೆ ತಿಳಿಸಿದನು.  ಯಜಮಾನ ಚಂದೇಶನ ತಂದೆಯಲ್ಲಿ  ದೂರು ಹೇಳಿದನು. ತನ್ನ ಮಗ ಅನ್ಯರ ಹಸುವಿನ ಹಾಲನ್ನು  ಶಿವನಿಗೆ ಅಭಿಷೇಕ ಮಾಡುವುದನ್ನು ಕೇಳಿ ಕೋಪಗೊಂಡು ಕಣ್ಣಾರೆ ನೋಡಬೇಕೆಂದು ಚಂದೇಶನಿದ್ದಲ್ಲಿಗೆ ಬಂದನು.
ಆದರೆ ಆ ಸಮಯದಲ್ಲಿ ಚಂದೇಶನ  ಏಕಾಗ್ರತೆಯಿಂದ ಶಿವನಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದನು. ಗೋವುಗಳು ಸಹ ಇದನ್ನು ನೋಡುತ್ತಿದ್ದವು  ಈಚದತ್ತ ಶರ್ಮನು ಮಗನನ್ನು ಕರೆದನು, ಕೇಳಲಿಲ್ಲವೆಂದು ಹತ್ತಿರಕ್ಕೆ ಹೋಗಿ ಅಲುಗಾಡಿಸಿದರೂ, ಧ್ಯಾನ ಮಗ್ನನಾಗಿದ್ದ ಚಂದೇಶನಿಗೆ ಎಚ್ಚರ ಆಗಲಿಲ್ಲ ಕೋಪಗೊಂಡ ಈಚದತ್ತ ಹಾಲು ತುಂಬಿಸಿ ಸಂಗ್ರಹಿಸಿಟ್ಟ ಮಣ್ಣಿನ ದೋಣಿ ಗಳನ್ನು  ಕಾಲಿಂದ ಒದ್ದನು. ಹಾಲು ತುಂಬಿದ ಮಡಿಕೆಗಳು ಒಡೆದ
ತುಂಡುಗಳು ಮರಳಿನ ಶಿವಲಿಂಗಕ್ಕೆ ತಾಗಿ ಶಿವಲಿಂಗವು ಬಿರಿಯಿತು. ತಕ್ಷಣ ಎಚ್ಚರಗೊಂಡ  ಚಂದೇಶ, ಕೋಪಗೊಂಡು ತನ್ನ ಶಿವ ಧ್ಯಾನವನ್ನು ಭಂಗ ಮಾಡಿ, ಅಭಿಷೇಕಕ್ಕೆ ಇಟ್ಟ ಹಾಲಿನ ಮಡಿಕೆಗಳನ್ನು ಕಾಲಿನಿಂದ ಒದ್ದು ಒಡೆದು ಆ ಚೂರುಗಳಿಂದ ಶಿವನ ಲಿಂಗವನ್ನು ಭಿನ್ನ  ಮಾಡಿದ ನಿನ್ನ ಕಾಲುಗಳಿಗೆ ತಕ್ಕ ಶಾಸ್ತಿ ಮಾಡುವೆ ಎಂದು ತಂದೆಯೆನ್ನದೇ ಅವನ  ಎರಡು ಕಾಲುಗಳನ್ನು ಕತ್ತರಿಸಿದನು. ತಂದೆಯ ಎರಡು ಕಾಲಿನಿಂದಲೂ ರಕ್ತ ಹರಿಯುವುದು ನೋವಿನಿಂದ ನೆರಳುತ್ತಾ ರಕ್ತದ ಮೇಲೆ ಕುಳಿತುಬಿಟ್ಟನು. 

ತಂದೆ ಎನ್ನದೆ ತನ್ನ ಆರಾಧ್ಯ ದೈವ ಶಿವನ ಧ್ಯಾನಕ್ಕೆ ಅಪಚಾರ ಮಾಡಿದವನ ಕಾಲುಗಳನ್ನು ಕತ್ತರಿಸಿದ ಚಂದೇಶನ ಭಕ್ತಿಗೆ ಮೆಚ್ಚಿ  ಭಿನ್ನವಾದ ಮರಳಿನ ಲಿಂಗದೊಳಗಿಂದ ಶಿವನು  ಪ್ರತ್ಯಕ್ಷನಾದನು.  ಸಾಮಾನ್ಯ ಮಾನವನಾದ ಚಂದೇಶನ  ಶಿವ ಭಕ್ತಿಗೆ ಮೆಚ್ಚಿ ಚಂದೇಷನನ್ನು ತನ್ನ ಕುಟುಂಬದ ಸದಸ್ಯರನ್ನು ಗಣಪತಿ - ಸುಬ್ರಹ್ಮಣ್ಯರ ಜೊತೆ ಇವನು ತನ್ನ ಮಗನೆಂದು ಸ್ವೀಕರಿಸಿದನು.
ಚಂದೇಷನ  ಹೆಸರನ್ನು ಚಂಡಿಕೇಶ್ವರ ಎಂದು ಮರುನಾಮಕರಣ ಮಾಡಿದನು. ಶಿವನ ಅನುಗ್ರಹದಿಂದ ಈಚದತ್ತ ಶರ್ಮನಿಗೆ ಕಾಲುಗಳು ಬಂದವು. 

ಹೀಗೆ ಶಿವನ ಗುಡಿಯಲ್ಲಿ ಇರುವ ಚಂಡಿಕೇಶ್ವನಿಗೆ ಮುಂದೆ ಚಪ್ಪಾಳೆ  ಅಥವಾ ಚಿಟಿಕೆ ಹೊಡೆಯಬೇಕು ಏಕೆಂದರೆ  ಪರಮೇಶ್ವರನು ಧ್ಯಾನದಲ್ಲಿ ನಿರತನಾಗಿ ದ್ದುಳು.  ಚಂಡಿಕೇಶ್ವರ ಸದಾ ಕಾಲವು ಶಿವನ ಧ್ಯಾನದಲ್ಲಿ ಮಗ್ನ ನಾಗಿರುತ್ತಾನೆ. ಹಾಗೆಂದ ಮಾತ್ರಕ್ಕೆ ಅವನಿಗೆ ಗೊತ್ತಿಲ್ಲದಂತೆ ಭಕ್ತರು ಶಿವನ ಪತ್ರ ಪುಷ್ಪ ಪ್ರಸಾದ ಭಸ್ಮ, ಇಂಥ ಯಾವುದೇ ವಸ್ತುವನ್ನು ತೆಗೆದುಕೊಂಡು ಹೋಗಬೇಕಾ ದರೆ, ಧ್ಯಾನದಲ್ಲಿ ಮುಳುಗಿರುವ ಚಂಡಿಕೇಶವನಿಗೆ ಚಪ್ಪಾಳೆ ತಟ್ಟಿ ಎಚ್ಚರ ಮಾಡಿ ಒಯ್ಯುವ ಶಿವನಿಗೆ ಪೂಜೆ ಮಾಡಿದ ಪ್ರಸಾದಗಳನ್ನು ಅವನಿಗೆ ತೋರಿಸಿ ತೆಗೆದುಕೊಂಡು ಹೋಗುವ ಪದ್ಧತಿ ಬಂದಿದೆ. ಇದನ್ನು ಕೆಲವರು ಈಶ್ವರನಿಗೆ ಕಿವಿ ಕೇಳುವುದಿಲ್ಲ ಎಂದು ತಿಳಿದಿದ್ದಾರೆ ಆದರೆ ಅವನು ಧ್ಯಾನದಲ್ಲಿ ಮಗ್ನನಾಗಿ ರುತ್ತಾನೆ ಧ್ಯಾನದಿಂದ ಎಚ್ಚರಗೊಳಿಸಲು ಚಪ್ಪಾಳೆ ತಟ್ಟಬೇಕು. ಈ ರೀತಿ
ಸಾಮಾನ್ಯ ಮಾನವನಾಗಿದ್ದ ಸಂದೇಶನ ಭಕ್ತಿಗೆ ಶಿವನು ಮೆಚ್ಚಿ ತನ್ನ ಕುಟುಂಬದ ಸದಸ್ಯನನ್ನಾಗಿ ( ಮಗನಾಗಿ) ಮಾಡಿಕೊಂಡನು.

ಕರ ಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ  ವಾ ಮಾನಸಂ ವಾಪರಾಧಮ್
ನಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ!!

ನನ್ನ ಕೈ ಕಾಲುಗಳ ಕ್ರಿಯೆಗಳಿಂದ ಮಾತಿನಿಂದ,
ಶರೀರದಿಂದ, ಕಣ್ಣು ಕಿವಿಗಳಿಂದ, ಮನಸ್ಸಿನಿಂದ,
ಅಥವಾ ಕರ್ಮಗಳಿಂದ, ನಿರ್ಧಾರಿತ ಕೆಲಸವನ್ನು ಮಾಡುವಾಗ,
ಯಾವ ಪಾಪಗಳಾಗಿದೆಯೋ, ಅವೆಲ್ಲವನ್ನು ಕ್ಷಮಿಸು
ಹೇ ಮಹಾದೇವ ಶಂಭೋ ಜಯವಾಗಲಿ,
ಕರುಣಾ ಸಾಗರನಾದ ನಿನ್ನಲ್ಲಿ ಅವೆಲ್ಲವನ್ನು ಅರ್ಪಿಸುತ್ತೇನೆ.

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Monday, 4 September 2023

ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ? ಕಾರಣ ಇಲ್ಲಿದೆ.

ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ? ಕಾರಣ ಇಲ್ಲಿದೆ.  🌹

ಶ್ರಿರಾಮ,ಸೀತೆ,ಲಕ್ಷ್ಮಣರು ವನವಾಸಕ್ಕೆಂದು,ಅಯೋಧ್ಯೆಯಿಂದ ಹೊರಟು,ಗುಹನಿಂದ ಗಂಗೆಯನ್ನು ದಾಟಿ,ಮುಂದೆ ಸಾಗಿ,ದಟ್ಟಡವಿಯನ್ನು ಪ್ರವೇಶಿಸಿದರು.
ನಡೆದು ದಣಿದ  ಸೀತಾಮಾತೆಗೆ ಬಹಳ ಬಾಯಾರಿಕೆಯಾಗಿತ್ತು.
ಅಡವಿಯಲ್ಲಿ ಹತ್ತಿರದಲ್ಲೆಲ್ಲಿಯೂ ನೀರು
ಕಾಣಿಸಲಿಲ್ಲ.ದೂರ ದೂರದ ವರೆಗೆ ಬರೀ ಕಾಡೇ ಕಾಣುತ್ತಿತ್ತು. 
ಆಗ ಶ್ರೀ ರಾಮನು ವಿಧಿಯನ್ನು ಪ್ರಾರ್ಥಿಸಿ,
"ಹೇ,ವನದೇವತೆಯೇ! ಕೃಪೆ ಮಾಡಿ ಎಲ್ಲಾದರೂ ಹತ್ತಿರದಲ್ಲಿ ನೀರಿದ್ದರೆ,ಅಲ್ಲಿಗೆ ಹೋಗುವ ಮಾರ್ಗವನ್ನು ತೋರಿಸು",ಎಂದು ಬೇಡಿಕೊಂಡನು.
ಆಗ ಅಲ್ಲೊಂದು ನವಿಲು ಬಂದು ಶ್ರೀ ರಾಮನಿಗೆಹೇಳಿತು...
"ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಾಶಯವಿದೆ.ನಡೆಯಿರಿ ನಾನು ಮಾರ್ಗವನ್ನು ತೋರಿಸುವೆನು.ಆದರೆ ಮಾರ್ಗದಲ್ಲಿ ನೀವು ದಾರಿ ತಪ್ಪುವ ಸಾಧ್ಯತೆ ಇದೆ" ಎಂದಿತು.
ಶ್ರೀರಾಮನು ಹಾಗೇಕೆ ? ಎಂದು ಕೇಳಿದ್ದಕ್ಕೆ, ನವಿಲು "ನಾನು ಹಾರುತ್ತಾ ಹೋಗುತ್ತೇನೆ.
ನೀವು ನಡೆಯುತ್ತಾ ಬರುವಿರಿ.
ಹಾರುತ್ತಿರುವ ನನ್ನನ್ನು ನೀವು ಹಿಂಬಾಲಿಸಲಾಗದೆ ದಾರಿ ತಪ್ಪಬಹುದು.
ನಿಮಗೆ ದಾರಿ ತಿಳಿಯಲು,ನಾನು ಹಾರುತ್ತ ನನ್ನ ಒಂದೊಂದೇ  ಗರಿಯನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುವೆನು.ನೀವು ಬಿದ್ದ ಗರಿಯನ್ನು ಅನುಸರಿಸಿ ಬಂದರೆ ಜಲಾಶಯವನ್ನು ಸುಲಭವಾಗಿ ತಲುಪುವಿರಿ" ಎಂದು ಹೇಳಿತು.

ನವಿಲು ಗರಿಗಳು ವಿಶೇಷ ಸಮಯ ಹಾಗೂ ವಸಂತ ಋತುವಿನಲ್ಲಿ ಮಾತ್ರ ತಾವಾಗಿಯೇ ಉದುರುತ್ತವೆ. ಬಲವಂತವಾಗಿ ತೆಗೆದರೆ ನವಿಲಿನ ಸಾವು ನಿಶ್ಚಿತ.
ಇಲ್ಲಾಗಿದ್ದೂ ಅದೇ!!

ಆ ನವಿಲು ತನ್ನ ಕೊನೆಯ ಗರಿಯನ್ನು ಕಿತ್ತು ಉದುರಿಸಿ,ಕೊನೆಯ ಉಸಿರು ತೆಗೆದುಕೊಳ್ಳುವ ಮುನ್ನ ಅದರ ಮನಸ್ಸಿನಲ್ಲೊಂದು ಭಾವನೆ ಬಂದಿತು.!!

"ಯಾರು ಜಗತ್ತಿನ ಬಾಯಾರಿಕೆಯನ್ನು ತೀರಿಸುವರೋ,ಅಂತಹ ಪ್ರಭುವಿನ ಬಾಯಾರಿಕೆ ತೀರಿಸುವ ಸೌಭಾಗ್ಯ ಇಂದು ನನ್ನ ಪಾಲಿಗೆ ಬಂದಿದೆ.ನನ್ನ ಜೀವನ ಪಾವನವಾಯಿತು.ಇನ್ನು ನನ್ನ ಜೀವನದಲ್ಲಿ ಯಾವ ಆಸೆಯೂ ಉಳಿದಿಲ್ಲ" ಎಂದುಕೊಂಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಭು ಶ್ರೀರಾಮನು ನವಿಲಿಗೆ ಹೇಳಿದನು.  "ನನಗಾಗಿ ನೀನು ನಿನ್ನ ಗರಿಗಳನ್ನ ಕಿತ್ತು ಜೀವನವನ್ನೇ ತ್ಯಾಗ ಮಾಡುತ್ತಿರುವೆ. ನನ್ನ ಮೇಲೆ ನಿನ್ನ ಋಣವಿದೆ. ಈ ಋಣವನ್ನು ನನ್ನ ಮುಂದಿನ ಅವತಾರದಲ್ಲಿ ಖಂಡಿತವಾಗಿಯೂ ತೀರಿಸುವೆನು.  
ನಿನ್ನ ಗರಿಯನ್ನು ಸದಾ ನನ್ನ ತಲೆಯಲ್ಲಿ  ಧರಿಸುವೆನು" ಎಂದನು.
ನವಿಲಿನ ಪ್ರಾಣಪಕ್ಷಿಯು ಹಾರಿ ಹೋಯಿತು.ಪ್ರಭುವು ಅದಕ್ಕೆ ಮೋಕ್ಷವನ್ನು ಕರುಣಿಸಿದನು.

ಆನಂತರ ಮುಂದಿನ  ಶ್ರೀಕೃಷ್ಣಾವತಾರದಲ್ಲಿ ಸದಾ ತನ್ನ ಮುಕುಟದ ಮೇಲೆ ನವಿಲುಗರಿ ಧರಿಸುವುದರ ಮೂಲಕ ನವಿಲಿಗೆಕೊಟ್ಟ ವಚನವನ್ನು ಈಡೇರಿಸಿದನು.

ಇದರಲ್ಲಿರುವ ತತ್ವ...

ಋಣ ತೀರಿಸಲು,ಭಗವಂತನಿಗೇ ಪುನಃ ಜನ್ಮಧರಿಸ ಬೇಕಾಗುವುದೆಂದಮೇಲೆ,
ನಾವಂತೂ ಹುಲು ಮಾನವರು.ನಾವು ಎಷ್ಟೊಂದು ಋಣದಲ್ಲಿ ಇದ್ದೇವೆ.
ಅಳೆಯಲು ಸಾಧ್ಯವೇ? ಆ ಋಣ ಕಳೆಯಲು ಎಷ್ಟು ಜನ್ಮವೆತ್ತಿ ಬರಬೇಕಾಗುವುದೋ ಏನೋ??
ಆದ್ದರಿಂದ ಬದುಕಿದ್ದಾಗಲೇ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡೋಣ.

🦚ಜೈ ಶ್ರೀ ಕೃಷ್ಣ 🦚