Tuesday, 18 February 2020

ಎಲ್ಲಾ ಗುಡಿಗಳಲ್ಲಿ ಪ್ರದಕ್ಷಿಣೆ ಬೇರೆ.. ಶಿವಾಲಯಗಳಲ್ಲಿ ಪ್ರದಕ್ಷಿಣೆ ಬೇರೆ… ಇಗೋ ಈ ರೀತಿ ಮಾಡಿ.!

ಎಲ್ಲಾ ಗುಡಿಗಳಲ್ಲಿ ಪ್ರದಕ್ಷಿಣೆ ಬೇರೆ.. ಶಿವಾಲಯಗಳಲ್ಲಿ ಪ್ರದಕ್ಷಿಣೆ ಬೇರೆ… ಇಗೋ ಈ ರೀತಿ ಮಾಡಿ.!
👇🏻👇🏻👇🏻👇🏻👇🏻👇🏻👇🏻👇🏻
ದೇವಾಲಯಗಳೆಂದರೇನೇ ಪ್ರಶಾಂತತೆಗೆ ಚಿಹ್ನೆಗಳು.

 ಅಲ್ಲಿಗೆ ಹೋದರೆ ಮನಸ್ಸಿಗೆ ನೆಮ್ಮದಿ ಸಿಗುವುದಷ್ಟೇ ಅಲ್ಲ, ಆ ಪರಿಸರಗಳಲ್ಲಿ 
 ಪಾಸಿಟೀವ್ ಎನರ್ಜಿ ನಮ್ಮಲ್ಲಿ ಪ್ರವೇಶಿಸುತ್ತದೆ.

 ಇದರಿಂದ ಹೊಸ ಉತ್ಸಾಹ ಬರುತ್ತದೆ. 

ಆದರೆ ಯಾರು ಯಾವ ದೇವಾಲಯಕ್ಕೆ ಹೋದರೂ ದೇವರನ್ನು ದರ್ಶಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ಪ್ರದಕ್ಷಿಣೆ ಮಾಡಬೇಕು.

 ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚು ಪ್ರದಕ್ಷಿಣೆ ಮಾಡಿದರೆ ಕೆಲವರು 3 ಪ್ರದಕ್ಷಿಣೆ ಸಾಕೆಂದು ಹೇಳಿ ಆ ಬಳಿಕ ದೇವರ ದರ್ಶನಕ್ಕಾಗಿ ಹೋಗುತ್ತಾರೆ.

 ಈ ರೀತಿ ಭಕ್ತರು ಬೇರೆ ಗುಡಿಗೆ ಹೋದಾಗ ಆ ರೀತಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದಕ್ಷಿಣೆ ಮಾಡಬಹುದು.

 ಆದರೆ ಶಿವನ ಆಲಯಕ್ಕೆ ಹೋದಾಗ ಮಾತ್ರ ಕೆಳಗೆ ತಿಳಿಸಿದ ರೀತಿಯಲ್ಲಿ ಪ್ರದಕ್ಷಿಣೆ ಮಾಡಬೇಕಂತೆ. 

ಆಗ ಯಾವ ರೀತಿಯ ಪ್ರತಿಫಲ ಸಿಗುತ್ತದೋ, ಇಷ್ಟಕ್ಕೂ ಆ ಪ್ರದಕ್ಷಿಣೆ ಹೇಗೆ ಮಾಡಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಚಿತ್ರಗಳಲ್ಲಿ ನೋಡಿದಿರಲ್ಲವೇ..! ಗರ್ಭಗುಡಿಯಲ್ಲಿ ಇರುವ ಶಿವನ ಎದುರಾಗಿ ನಂದಿ ಇದೆ.

 ಪಕ್ಕದಲ್ಲೇ ಲಿಂಗಕ್ಕೆ ಅಭಿಷೇಕ ಮಾಡಿದ ಜಲ ಹೋಗುತ್ತಿದೆ. 

ಅದರ ಕೆಳಗೆ ಚಂಡೀಶ್ವರನು ನೆಲೆಸಿದ್ದಾನೆ. 
ಆದರೆ ಶಿವಾಲಯದೊಳಗೆ ಹೋದ ಕೂಡಲೆ ನೇರವಾಗಿ ಶಿವನ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಮಾಡಬಾರದಂತೆ. 

ಮೊದಲು ನಂದೀಶ್ವರನಿಗೆ ಪ್ರದಕ್ಷಿಣೆ ಪ್ರಾರಂಭಿಸಿ ಚಂಡೀಶ್ವರ ಬಳಿಗೆ ಹೋಗಿ ದರ್ಶನ ಮಾಡಿಕೊಂಡು ಮತ್ತೆ ಹಿಂದಕ್ಕೆ ಬರಬೇಕು.

 ಆ ಬಳಿಕ ಚಿತ್ರದಲ್ಲಿ ತೋರಿಸಿದಂತೆ ಬಾಣದ ಗುರುತಿನ ಪ್ರಕಾರ ಪ್ರದಕ್ಷಿಣೆ ಮಾಡಬೇಕು. 

ಒಮ್ಮೆ ಚಂಡೀಶ್ವರನ ದರ್ಶಿಸಿಕೊಂಡು ಹಿಂದಕ್ಕೆ ಬಂದು 
ನಂದೀಶ್ವರನ ಬಳಿ ನಿಂತು ಗರ್ಭಗುಡಿಯಲ್ಲಿ ಲಿಂಗವನ್ನು ಅಭಿಷೇಕ ಮಾಡುವ ಜಲದ ಬಳಿ ಬರಬೇಕು. 

ಅಲ್ಲಿಂದ ಹಿಂದಕ್ಕೆ ತಿರುಗಿ ನಂದೀಶ್ವರನ ಬಳಿ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು. 
ಈ ರೀತಿ 3 ಸಲ ಮಾಡಿದರೆ ಸಾಕು ಅದರಿಂದ ಸಾಕಷ್ಟು ಪ್ರತಿಫಲ ಸಿಗುತ್ತದೆ.

ಸಾಮಾನ್ಯವಾಗಿ ಭಕ್ತರು ದೇವಾಲಯಗಳಲ್ಲಿ 3 ಸಲ ಪ್ರದಕ್ಷಿಣೆ ಮಾಡುತ್ತಾರೆ ಅಲ್ಲವೇ. 

ಆದರೆ ಮೇಲೆ ತಿಳಿಸಿದ ರೀತಿಯಲ್ಲಿ ಶಿವಾಲಯದಲ್ಲಿ ಪ್ರದಕ್ಷಿಣೆ ಮಾಡಿದರೆ ಅದು 10 ಸಾವಿರ ಪ್ರದಕ್ಷಿಣೆಗಳಿಗೆ ಸಮಾನ. 

ಇದರ ಬಗ್ಗೆ ಲಿಂಗ ಪುರಾಣದಲ್ಲಿ ಹೇಳಲಾಗಿದೆ.

 ಆದರೆ ಮೇಲೆ ತಿಳಿಸಿದಂತೆ ಅಲ್ಲದೆ ಶಿವನ ಗರ್ಭಗುಡಿಯ ಸುತ್ತಲೂ ವೃತ್ತಾಕಾರವಾಗಿ ಪ್ರದಕ್ಷಿಣೆ ಮಾಡಬಾರದು.

 ಯಾಕೆಂದರೆ ಲಿಂಗವನ್ನು ಅಭಿಷೇಕ ಮಾಡಿದ ಜಲ ಹೋಗುವ ದಾರಿ ಬಳಿ ಪ್ರಮಥ ಗಣಗಳು ನೆಲೆಸಿರುತ್ತವೆ. 

ಅವನ್ನು ದಾಟಿ ಪ್ರದಕ್ಷಿಣೆ ಮಾಡಬಾರದಂತೆ.

 ಆ ರೀತಿ ಮಾಡಿದರೆ ತಪ್ಪು ಮಾಡಿದಂತಾಗುತ್ತದೆ. 

ಸ್ವಲ್ಪ ಪ್ರಯತ್ನಿಸಿದರೆ ಮೇಲೆ ತಿಳಿಸಿದಂತೆ ಪ್ರದಕ್ಷಿಣೆ ಮಾಡುವುದು ಸುಲಭ ಎಂದು ಪಂಡಿತರು ಹೇಳುತ್ತಿದ್ದಾರೆ.

*🕉ಪ್ರದಕ್ಷಿಣೆ ಫಲ🕉*

ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. 
ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರು ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ.
ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಬಾರಿ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ.

ದೇವಸ್ಥಾನದಲ್ಲಿ 5 ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ. 

7ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಶತ್ರುಗಳನ್ನು ಪರಜಯ ಮಾಡಬಹುದು. 

9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನಪ್ರಾಪ್ತಿಯಾಗುತ್ತದೆ. 

11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ದಿಯಾಗುತ್ತದೆ.

ದೇವಸ್ಥಾನಕ್ಕೆ 13 ಬಾರಿ ಪ್ರದಕ್ಷಿಣೆ ಹಾಕಿದರೆ ಪ್ರಾರ್ಥನೆ ಸಿದ್ದಿಯಾಗುತ್ತದೆ. 

15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗುತ್ತದೆ. 

17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ವೃದ್ದಿಯಾಗುತ್ತದೆ. 

19 ಬಾರಿ ಪ್ರದಕ್ಷಿಸಿದರೆ ರೋಗ ನಿವಾರಣೆಯಾಗುತ್ತದೆ.

ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆಯಾಗುತ್ತದೆ.

ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ.

ಸಂಜೆ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರವಾಗುತ್ತದೆ. 

ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ದಿಯಾಗುತ್ತದೆ.

🕉 *ದೇವರಿಗೆ ತೆಂಗಿನಕಾಯಿಯನ್ನು ಒಡೆಯುವುದರ ಉದ್ದೇಶವೇನು..?*🕉

ಸಾಮಾನ್ಯ ಆಚರಣೆಯ ಹಿಂದಿರುವ ಅಸಾಮಾನ್ಯ ಆಧ್ಯಾತ್ಮ..!!

ಸನಾತನ ಧರ್ಮದ ಜಾಡು ಹಿಡಿದು ಹೊರಟರೆ ದೇವರನ್ನು ಬಿಟ್ಟು ಯಾವ ಆಚರಣೆಯೂ ಇಲ್ಲ ಅನ್ನುವುದಕ್ಕೆ ಇದೊಂದು ನಿದರ್ಶನ..!
ಮನುಷ್ಯನ ದೇಹದಲ್ಲಿ ಏಳು ಸಮುದ್ರಗಳಿವೆ.!

ಕ್ರಮವಾಗಿ...

1. ಉಪ್ಪು ನೀರಿನ ಸಮುದ್ರ (ಮೂತ್ರಕೋಶ)

2. ಕಬ್ಬಿನ ಹಾಲಿನ ಸಮುದ್ರ (ಜನನಾಂಗ)

3.ಕಳ್ಳು (ಮದ್ಯದ) ಸಮುದ್ರ- ಹೊಟ್ಟೆ

4. ಬೆಣ್ಣೆಯ ಸಮುದ್ರ (ಹೃದಯ-ಕೃಷ್ಣ ಕದ್ದ ನಿಜವಾದ ಭಕ್ತಿಯೆಂಬ ಬೆಣ್ಣೆ)

5. ಮೊಸರಿ‌ನ ಸಮುದ್ರ (ಗಂಟಲು)

6. ಹಾಲಿನ ಸಮುದ್ರ -  (ಹುಬ್ಬುಗಳ ಮಧ್ಯೆ ಇರುವ ಜಾಗ)

7. ಅಮೃತದ ಸಮುದ್ರ - (ಮೆದುಳಿನೊಳಗೆ-ನೆತ್ತಿಯ ಹತ್ತಿರ)

ತೆಂಗಿನಕಾಯಿಗೂ ಈ ಸಮುದ್ರಗಳಿಗೂ...ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನುವ ಹಾಗಿದೆ ಅಲ್ಲವೇ...?

ನಮ್ಮ ದೇಹದಲ್ಲಿನ ಇಡಾ, ಪಿಂಗಳಾ ಹಾಗೂ ಸುಷುಮ್ನಾ ನಾಡಿಗಳು ಸಂಧಿಸುವ ಸ್ಥಳಗಳಿವು..!!ಅಲ್ಲೇ ನಿರ್ನಾಳ ಗ್ರಂಥಿಗಳೂ ಇವೆ.!
ಉದಾ:
ಥೈಮಸ್ ಗ್ಲಾಂಡ್-ಹೃದಯದಲ್ಲಿ
ಪಿಟ್ಯುಟರಿ ಗ್ಲಾಂಡ್-ಮೆದುಳಿನ ಮಧ್ಯಭಾಗದಲ್ಲಿ (ಅಮೃತದ ಸಮುದ್ರ)

ವಿಷಯಕ್ಕೆ ಬರೋಣ..

ದೇವರನ್ನೇ ಸೇರುವುದನ್ನು ಜೀವನದ ಗುರಿಯಾಗಿಟ್ಟುಕೊಂಡಿದ್ದ ನಮ್ಮ ಪೂರ್ವಜರು ಇಂತಹ ಸಾಮಾನ್ಯವಾದ ಆಚರಣೆಯಲ್ಲೂ ಅಸಾಮಾನ್ಯ ಆಧ್ಯಾತ್ಮವನ್ನು ಹುದುಗಿಸಿಟ್ಟರು..!!

ತೆಂಗಿನಕಾಯಿ ಮನುಷ್ಯನ ತಲೆಯ ಭಾಗಕ್ಕೆ ಹೋಲುತ್ತದೆ.
ಮನುಷ್ಯ ಸಾಯುವಾಗ (ಹೌದು, ಸಾವಿಗೂ ತೆಂಗಿನಕಾಯಿಗೂ ಅವಿನಾಭಾವ ಸಂಬಂಧವಿದೆ.!) ಪ್ರಾಣ ಶರೀರದ ಯಾವ ಭಾಗದಿಂದ ಬೇಕಾದರೂ ಹೋಗಬಹುದು. 
ಉದಾ::ಕಣ್ಣು ಬಿಟ್ಟು, ಬಾಯಿ ತೆಗೆದು ಅಥವಾ ಮಲಮೂತ್ರ ದ್ವಾರಗಳಿಂದಲೂ ಸಹ.!
ಪ್ರಾಣ ಊರ್ಧ್ವಮುಖವಾಗಿ ಹೋಗಿ ಬ್ರಹ್ಮರಂದ್ರದ (ನೆತ್ತಿಯ ಭಾಗ) ಮೂಲಕ ಹೋದರೆ ಅವನಿಗೆ ಪುನಃ ಹುಟ್ಟಿಲ್ಲ..!! ಅದೇ ಅಮೃತದ ಸಮುದ್ರ.! ಅಂತಹ ಜೀವ ಶಾಶ್ವತವಾಗಿ ಪರಮಾತ್ಮನನ್ನು ಸೇರುತ್ತದೆ.
ಒಮ್ಮೆ ಒಡೆದ ತೆಂಗಿನಕಾಯಿ ಮತ್ತೆ ಹುಟ್ಟಿದ್ದುಂಟೇ.!?

ತೆಂಗಿನ ಕಾಯಿ ಒಡೆಯುವಾಗ...
"ನನ್ನ ಪ್ರಾಣ ಅದರಂತೆಯೇ ಬ್ರಹ್ಮರಂಧ್ರದಿಂದ ಊರ್ಧ್ವಮುಖವಾಗಿ ಹೋಗಲಿ ಎನ್ನುವುದೇ ತೆಂಗನ್ನು ಒಡೆಯುವುದರ ಹಿಂದಿನ ಮರ್ಮ..!! ಇಷ್ಟು ಬೇಡಿಕೊಂಡೇ ಒಡೆಯಬೇಕು..!!" 

ಇಲ್ಲದಿದ್ದರೆ ಚಟ್ನಿಗೋ... ವಡೆಗೋ...ಪಾಯಸಕ್ಕೋ... ಕೆಟ್ಟರೆ ದೇವರಿಗೋ..!!

ಇನ್ನೂ ಒಂದು ಅನುಸಂಧಾನವಿದೆ...!
ನಮಗೆ ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಲಿಂಗ ಶರೀರಗಳಿವೆ..!

ತೆಂಗಿನಕಾಯಿಯ ಹೊರಭಾಗ (ಸಿಪ್ಪೆ, ನಾರು ಇತ್ಯಾದಿ) ಸ್ಥೂಲ ಶರೀರದಂತೆ..ಬಿದ್ದು ಹೋಗುವುದು.

ಸೂಕ್ಷ್ಮ ಶರೀರ(ಎಲೆಕ್ಟ್ರಿಕಲ್ ಶರೀರ ಅನ್ನಬಹುದು)
ಇದು ಅದರ ಚರಟ, ಪೊರಟೆ-ಪ್ರಯತ್ನದಿಂದ ಒಡೆಯಬೇಕು.!

ಮೂರನೆಯದು ಲಿಂಗ ಶರೀರ...ಒಂಥರ ಕೊಬ್ಬರಿ ಇದ್ದ ಹಾಗೆ..!!
ಒಳಗಿರುವುದೇ ಅಮೃತತ್ವ.

ಒಂದು ಜೀವಿ ಮೋಕ್ಷ ಸಾಧಿಸುವುದೆಂದರೆ ಈ ಮೂರೂ ಶರೀರಗಳನ್ನು ನಾಶಪಡಿಸಿಕೊಳ್ಳಬೇಕು..!!
ಇಷ್ಟು ಅನುಸಂಧಾನವಿಟ್ಟುಕೊಂಡೇ ತೆಂಗಿನಕಾಯಿಯನ್ನು ಒಡೆಯಬೇಕು..!!

ಓಂ ಶಿವೋಹಂ ಶುಭಮಸ್ತು ಶಿವಾನುಗ್ರಹ ಪ್ರಾಪ್ತಿರಸ್ತು.

Thursday, 13 February 2020

ಭವಸಾಗರದಿಂದ ಪಾರಾಗಲು ಸುಲಭೋಪಾಯ ಹರಿನಾಮ.

1)ಭವಸಾಗರದಿಂದ ಪಾರಾಗಲು ಸುಲಭೋಪಾಯ ಹರಿನಾಮ.

 2)ತನುವನ್ನು ದಂಡಿಸಬೇಕಿಲ್ಲ. 

3)ನೀರಿನಲ್ಲಿ ಸದಾಕಾಲ ಮುಳುಗಿ ಚಳಿಯಿಂದ ನಡುಗಬೇಕಿಲ್ಲ.

4) ಉಪವಾಸ ವ್ರತಗಳಾಚರಣೆ ಯನ್ನು ಮಾಡಲೇಬೇಕೆಂದಿಲ್ಲ.

5) ನಾರಾಯಣನ ಪಾದವನ್ನು ಸೇರಲು, ಹರಿನಾಮಸ್ಮರಣೆಗಿಂತ ಮಿಗಿಲಾದುದಿಲ್ಲ. 

6)ಮಾನವರ ಹೃದಯದಲ್ಲಿ 'ನಾಮ'ಬೀಜವನ್ನು ಬಿತ್ತಿದವರು ಮಹರ್ಷಿ ಗಳಾದ ನಾರದರು.

7) ಆ ಬೀಜವು ಮೊಳೆತು ಸಸಿಯಾಗಿ, ಚಿಗುರಿ, ಹೂವಾಗಿ, ಕಾಯಾಗಿ, ಪಕ್ವವಾದ ಹಣ್ಣಾಗಿ ಅದನ್ನು ಸವಿಯುವ ಭಾಗ್ಯ ನಮ್ಮದಾಗಿದೆ.

8) ಪರಮಾತ್ಮನ ದಿವ್ಯನಾಮ ಕಲ್ಲು ಸಕ್ಕರೆಯಂತೆ ಬಲುಸವಿಯಾದುದು.

9)ಕೃಷ್ಣ ನಾಮವೆಂಬ ಕಲ್ಲು ಸಕ್ಕರೆಯನ್ನು ಸವಿದುಆನಂದಿಸು ವವರೇ
 ಮಹಾಭಾಗ್ಯಶಾಲಿಗಳು.

 

10)ಭಾಗವತದ ಶ್ರವಣದಿಂದ ಜೀವಿಯ ವಾಸನಾ ಸಮುದ್ರ ಬತ್ತಿಹೋಗುತ್ತದೆ. 

11)ಈ ಜಗತ್ತನ್ನು ಬಿಟ್ಟು ಹೋಗುವಾಗ ಆ ಜೀವಿ ಹುರಿದ ಬೀಜದಂತಾಗುವನು.

 12)ಇನ್ನವನು ಮೊಳೆಯಲಾರ. ಇನ್ನೊಮ್ಮೆ ಅವನು ಪ್ರಪಂಚಕ್ಕೆ ಬರುವುದಿಲ್ಲ. 

13)ಭಗವದ್ಭಕ್ತಿಯ ಆವುಗೆಯಲ್ಲಿ ಬೆಂದ ಆ ಜೀವ ಮತ್ತೊಮ್ಮೆ ಸಂಸಾರಚಕ್ರದಮೇಲೆ ಬರುವುದಿಲ್ಲ.

14)ಭಾಗವತವು ಭಕ್ತಿ ರಸಪ್ರಧಾನವಾಗಿದ್ದು ಜ್ಞಾನ ವೈರಾಗ್ಯಗಳ ಕಡೆಗೆ ಕರೆದೊಯ್ಯುತ್ತದೆ.

15)ವೇದೋಪನಿಷತ್ತುಗಳ ಸಾರದಿಂದ ಭಾಗವತ ಕಥೆ ಹುಟ್ಟಿದೆ. ವೇದವೆಂಬ ಕಲ್ಪವೃಕ್ಷದಿಂದ ಭಾಗವತ ವೆಂಬ ಹಣ್ಣು ದೊರಕಿದೆ. ಇದು ಅಮೃತದಿಂದ ತುಂಬಿದೆ. ಸಿಹಿಯಾಗಿ ರಸವತ್ತಾಗಿದೆ. ಈ ಅಮೃತವನ್ನು ತೃಪ್ತಿಯಾಗುವವರೆಗೂಕುಡಿದುಪರಮಾನಂದವನ್ನು ಪಡೆಯಬಹುದು.

16)ಸಂಸಾರವೆಂಬಕಗ್ಗತ್ತಲೆಗೆ ಸಿಕ್ಕಿ, ಜ್ಞಾನವೆಂಬ ಕಣ್ಣು ಕಾಣದಂತಾಗಿರುವ ಜನರ ಉದ್ಧಾರಕ್ಕಾಗಿ ಈ ಭಾಗವತವೆಂಬ ಸೂರ್ಯನು ಹುಟ್ಟಿದ್ದಾನೆ.'

OM SRI GURU RAGHAVENDRAYA NAMAHA.

ಉಡುಪಿಯ ಶ್ರೀ ಕೃಷ್ಣನ ಬಗ್ಗೆ ನಿಮಗೆಷ್ಟು ಗೊತ್ತು

ಉಡುಪಿಯ ಶ್ರೀ ಕೃಷ್ಣನ ಬಗ್ಗೆ ನಿಮಗೆಷ್ಟು ಗೊತ್ತು......

ದಕ್ಷಿಣ ಭಾರತದ ಪ್ರಸಿದ್ದ ಕೃಷ್ಣನ ಕ್ಷೇತ್ರಗಳಲ್ಲಿ ಕಡೆಗೋಲು ಕೃಷ್ಣನ ಉಡುಪಿಯೂ ಒಂದು.
ಭಗವಾನ್ ಶ್ರೀ ಕೃಷ್ಣ ನೆಲೆಸಿದ ಅತಿ ಪುರಾತನ ಜಗತ್ಪ್ರಸಿದ್ದ ಕೃಷ್ಣ ದೇವಾಲಯವಿದು.

ಕುರುಕ್ಷೇತ್ರ ಯುದ್ದದ ನಂತರದ ದಿನಗಳು. 
ಶ್ರೀ ಕೃಷ್ಣನು ದ್ವಾರಕೆಯ ಮಹಾರಾಜ.. 

ತನ್ನ ಹೆತ್ತತಾಯಿ ದೇವಕಿಗೆ ತನ್ನ ಮಗನ ಬಾಲ ಲೀಲೆಗಳನ್ನು ನೋಡುವ ಮನಸ್ಸಾಯಿತಂತೆ.
ಸಾಕು ತಾಯಿ ಯಶೋಧೆ ಕೃಷ್ಣನ  ಮದುವೆ ಹೇಗೆ ನೋಡಿರುವುದಿಲ್ಲವೋ ಹಾಗೇ ದೇವಕಿಗೆ ಕೃಷ್ಣನ ಬಾಲ್ಯಲೀಲೆಗಳನ್ನು ನೋಡಿರುವುದಿಲ್ಲ. ಆವತ್ತು ಮೊಸರು ಕಡಿಯುತ್ತಿದ್ದ ದೇವಕಿಗೆ ಅದೆಂತದೋ ಬಯಕೆ ತನ್ನ ಮಗನ ಬಾಲ ಲೀಲೆಗಳನ್ನು ಕಣ್ಣಾರೆ ನೋಡಬೇಕೆಂದು. ಅದನ್ನು ಕೇಳಿದ ಶ್ರೀ ಕೃಷ್ಣ ತನ್ನ ತಾಯಿಯ ಆಸೆಯಂತೆ ಬಾಲಕೃಷ್ಣನಾಗಿ ತಾಯಿ ಮೊಸರು ಕಡೆಯುತ್ತಿದ್ದ ಕಡೆಗೋಲು ಮತ್ತು ಹಗ್ಗ ಹಿಡಿದು ಕೊಂಡು ತನ್ನ ಗೋಕುಲದ ಬಾಲ ಲೀಲೆಗಳನ್ನು ತೋರಿಸುತ್ತಾನೆ.  ದೇವಕಿಯ ಆಸೆಯನ್ನು ಪೂರೈಸುತ್ತಾನೆ.

ಇದನ್ನೆಲ್ಲ ಬಾಗಿಲ ಬದಿಯಲ್ಲಿ ನೋಡುತ್ತಿದ್ದ ರುಕ್ಮಿಣಿಗೆ ತನ್ನ ಗಂಡನ ಬಾಲಲೀಲೆಗಳನ್ನು ನೋಡಿ ವಿಶ್ವಕರ್ಮನಲ್ಲಿ ಅಂತಹುದೇ ಸಾಲಿಗ್ರಾಮದ ಮೂರ್ತಿ ಮಾಡಿಸಿ ಪೂಜಿಸುತ್ತಾಳೆ. ಮುಂದೆ ದ್ವಾಪರ ಯುಗದ ಅಂತ್ಯದಲ್ಲಿ ದ್ವಾರಕೆ ಮುಳುಗುವ ಸಮಯದಲ್ಲಿ ರುಕ್ಮಿಣಿ ಆ ಮುದ್ದಾದ ಮೂರ್ತಿಯನ್ನು (ಗೋಪಿಚಂದನ) ಮಣ್ಣಿನ ಮುದ್ದೆಯಲ್ಲಿ ಮೂರ್ತಿಯನ್ನು ಬಚ್ಚಿಡುತ್ತಾಳೆ.

ಮುಂದೆ ದ್ವಾರಕೆಯಲ್ಲಿ ಮುತ್ತುಗಳು ಹೇರಳವಾಗಿ ಸಿಗುತ್ತಿದ್ದಾಗ ವ್ಯಾಪಾರಿಗಳು ಹಡಗಿನಲ್ಲಿ ಸರಕುಗಳನ್ನು ಹೇರಿಕೊಂಡು ಬರುವಾಗ ಕಡಿಮೆ ತೂಕದ ಮುತ್ತುಗಳು ಹಡಗು ಗಾಳಿಗೆ ಸಿಲುಕಬಾರದೆಂದು ಸಮುದ್ರದ ದಂಡೆಯಲ್ಲಿನ ಮಣ್ಣಿನ ಮುದ್ದೆಯನ್ನು ಹಡಗಿಗೆ ತುಂಬಿಸುತ್ತಾರೆ. ಅದರಲ್ಲಿ ಭಗವಂತನ ಮೂರ್ತಿಯೂ ಇರುತ್ತದೆ. ಆ ಹಡಗು ದಕ್ಷಿಣ ಭಾರತದ ಕಡೆ ಬರುವಾಗ ಉಡುಪಿಯ ಮಲ್ಪೆಯ ಸಮೀಪ ಭಯಂಕರ ಬಿರುಗಾಳಿಗೆ ಸಿಲುಕಿ ಹಡಗು ಮುಳುಗುತ್ತದೆ...  ಮಧ್ವಾಚಾರ್ಯರು  ಮಾರ್ಗಶಿರ ಮಾಸದ ಎಳ್ಳಮಾವಾಸ್ಯೆಯ ಸ್ನಾನಕ್ಕೆ ಬಂದಾಗ ತಮ್ಮ ಶಲ್ಯ ಬೀಸಿ ಸಮುದ್ರವನ್ನು ಶಾಂತ ಮಾಡುತ್ತಾರೆ. ತ್ರಿಕಾಲ ಜ್ಞಾನಿಗಳಾದ ಮಧ್ವಾಚಾರ್ಯರಿಗೆ ಶ್ರೀ ಕೃಷ್ಣನ ಆಗಮನ ಮೊದಲೇ ತಿಳಿದಿದ್ದರಿಂದ ಅದರಲ್ಲಿ ಬಂದಿದ್ದ ಕಡೆಗೋಲು ಕೃಷ್ಣನ ಮೂರ್ತಿಯನ್ನು ತಂದು ಉಡುಪಿಯಲ್ಲಿ ಪೂಜಿಸುತ್ತಾರೆ. ಮುಂದೆ ಎಂಟು ಬಾಲಯತಿಗಳನ್ನು ನೇಮಿಸಿ ಪೂಜೆಯ ಕೈಂಕರ್ಯಗಳನ್ನು ಒಪ್ಪಿಸುತ್ತಾರೆ. ಅದೇ ಪೊಡವಿಗೊಡೆಯ ಉಡುಪಿಯ ಭಗವಂತನ ಪುಣ್ಯ ನೆಲೆಯಾಗುತ್ತದೆ.

ಇಂದಿಗೂ ಕಡೆಗೋಲು ಶ್ರೀ ಕೃಷ್ಣನನ್ನು ಅಷ್ಟ ಮಠದ ಯತಿಗಳು ಪೂಜಿಸುತ್ತಾ ಬರುತ್ತಿದ್ದಾರೆ. ದೇವಕಿಗೆ ದರ್ಶನ‌ ನೀಡಿದ ರೂಪದಲ್ಲೇ ಒಂದು ಕೈಯ್ಯಲ್ಲಿ ಕಡೆಗೋಲು ಇನ್ನೊಂದು ಕೈಯ್ಯಲ್ಲಿ ಹಗ್ಗ ಹಿಡಿದು ತಲೆಗೆ ಜುಟ್ಟು ಕಟ್ಟಿದ ಮುದ್ದಾದ ಬಾಲ ಕೃಷ್ಣ ಉಡುಪಿಯಲ್ಲಿ ದರ್ಶನ ಕೊಡುತ್ತಿದ್ದಾನೆ ಮತ್ತು ಈ ಜಗತ್ತನ್ನು ಉದ್ದರಿಸುತ್ತಿದ್ದಾನೆ.......!

               'ಕೃಷ್ಣಂ ವಂದೇ ಜಗದ್ಗುರು'