ಯಜುರ್ವೇದದ ಉಪಾಕರ್ಮ ನಡೆಯುವ ಸಂಧರ್ಭದಲ್ಲಿ
ಸಾಧಾರಣವಾಗಿ ಆಚರಣೆ ಮಾಡುವ ಮಾಹಿತಿ.
ಉಪಾಕರ್ಮ ( ಜನಿವಾರದ ಹಬ್ಬ ) ನೂಲು ಹುಣ್ಣಿಮೆ ಮತ್ತು ರಕ್ಷಾ ಬಂಧನ RAKSHA BANDHAN : ಶ್ರಾವಣ ಮಾಸದ ಹುಣ್ಣಿಮೆ ದಿನ ಯಜುರ್ವೇದ ಉಪಾಕರ್ಮವನ್ನು, ಚತುರ್ದಶಿ ದಿನ ಋಗ್‌ವೇದ ಉಪಾಕರ್ಮವನ್ನು ಆಚರಿಸುತ್ತ ಬಂದಿರುವುದು ನಮ್ಮ ಭಾರತದ ದೇಶಾದ್ಯಂತ ಆಚರಿಸಲಾಗುತ್ತದೆ.
ಒಂದೊಂದು ಬಾರಿ ಎರೂಡ ಒಟ್ಟಿಗೆಯೂ ಬರಬಹುದು. ಈ ಹಬ್ಬವನ್ನು ಜನಿವಾರದ ಹಬ್ಬ ಎಂದೂ ಕರೆಯುತ್ತಾರೆ. ಉಪಾಕರ್ಮ ಒಂದು ವೈದಿಕ ಕ್ರಿಯಾವಿಧಿ , ಈ ಕ್ರಿಯಾವಿಧಿಯನ್ನು ದೈನಂದಿನ ಜೀವನದಲ್ಲಿ ಸಂಧ್ಯಾ ವಂದನೆ ಮಾಡುವ ಸಮುದಾಯದವರು ಆಚರಿಸುತ್ತಾರೆ . ಇದನ್ನು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿ, ಭಜನೆಮನೆಗಳಲ್ಲಿ , ಯಜಮಾನರ ಪೇಟೆ ಮನೆಗಳಲ್ಲಿ, ಮತ್ತು ದೇವಾಲಯದಲ್ಲಿ ಸಾಮೂಹಿಕವಾಗಿ ಆಚರಿಸುವರು.
ಜಾತಕದಲ್ಲಿ 3ನೇ ಭಾವ ಸೋದರ ಸೋದರಿಯರ ವಿಷಯ ತಿಳಿಯಬಹುದು. ಈ ಭಾವದಲ್ಲಿ ಶುಭ ಗ್ರಹಗಳಿದ್ದರೆ ಪ್ರೀತಿ-ಪ್ರೇಮ ಇರುವ ಸಹೋದರ ಸಹೋದರಿಯರು ಸಿಗುತ್ತಾರೆ. ಪಾಪಗ್ರಹ ಇದ್ದರೆ ಬಾಂಧವ್ಯ ಕಡಿಮೆ ಇರುವುದು ಎನ್ನಲಾಗುತ್ತದೆ.
ಉಪಾಕರ್ಮದ ದಿನ ಗಾಯಿತ್ರಿ ಜಪವನ್ನು ಲೋಕ ಕಲ್ಯಾಣದ ದೃಷ್ಟಿಯಲ್ಲಿ ಮಾಡುತ್ತಾರೆ ಹಾಗೂ ಹಳೆಯ ಜನಿವಾರವನ್ನು ವಿಸರ್ಜಿಸುತ್ತಾರೆ.
ವರ್ಷದಲ್ಲಿ ಮಾಡಿದ ಪಾಪವನ್ನು ಕಳೆಯಲು ಗಾಯಿತ್ರಿ ಮಂತ್ರ ಜಪಿಸುವ ಸಂಪ್ರದಾಯ ವಾಗಿರುತ್ತದೆ .
ಜಾತಕದಲ್ಲಿ 9ನೇ ಬಾವದಲ್ಲಿ ಶನಿಗ್ರಹವು ಇದ್ದು ಅದಕ್ಕೆ ಯಾವ ದೃಷ್ಟಿಯಿಲ್ಲದೆ ಇದ್ದರೆ ಆತನು ಜಪ ಧ್ಯಾನ ಹೆಚ್ಚು ಹೆಚ್ಚು ಮಾಡುತ್ತಾರೆ. ಧಾರ್ಮಿಕ ಕಾರ್ಯಗಳು ಸಹ ಹೆಚ್ಚು ಮಾಡುತ್ತಾರೆ.
ನೂಲು ಹುಣ್ಣಿಮೆ ದಿನ ತಮ್ಮ ಮನೆಯಲ್ಲಿನ ನೂಲುಗಳನ್ನು ತಂದು ಕಳಸ ಪ್ರತಿಷ್ಠೆ ಮಾಡಿ ಎಲ್ಲಾ ರೀತಿಯ ನೇಕಾರಿಕೆಯ ವಸ್ತುಗಳನ್ನು ಮತ್ತು ಕತ್ತಿ ಗುಂಡು ಇತರೆ ಆಯುಧಗಳ ಪೂಜೆ ಮಾಡುವ ಪದ್ಧತಿ ಇರುತ್ತೆ.
ಅದೇ ದಿನ ರಕ್ಷಾ ಬಂಧನ ಅಥವಾ ರಾಖಿ ಹಬ್ಬವನ್ನು ಸೋದರ ಸೋದರಿಯರು ಆಚರಿಸುತ್ತಾರೆ. ಇವರುಗಳ ಅಕ್ಕರೆ, ಅನುರಾಗಗಳು ಜೀವನ ಪರ್ಯಂತ ಇರಬೇಕೆಂದು ನೆನಪಿಸುವ ದಿನವಿದು.
ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.
ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತ ದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನನ್ನ ಮನದಲ್ಲಿ ಮೂಡಿಸುತ್ತದೆ.
ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ
ಆದರೆ ಈ ಬಾರಿ ಶ್ರವಣ ಮಾಸದ ಬದಲಾಗಿ ಈ ಬಾರಿ ಗ್ರಹಣ ದೋಷವಿದ ಕಾರಣ ಭಾದ್ರಪದ ಮಾಸದಲ್ಲಿ ಉಪಾಕರ್ಮ ವನ್ನು ಮಾತ್ರ ಆಚರಣೆ ನಡೆಯುತ್ತಿದೆ.
ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ
ಹಿಂದಿನ ಕಾಲದಲ್ಲಿ ಇಂದಿನ ರೀತಿಯಲ್ಲಿ ಜಾತಿ ಪದ್ದತಿಗಳು ಇಲ್ಲದೇ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ವರ್ಣಾಶ್ರಮ ಪದ್ದತಿ ಜಾರಿಯಲ್ಲಿತ್ತು. ಈ ವರ್ಣಾಶ್ರಮಗಳು ಹುಟ್ಟಿನಿಂದ ಬಾರದೇ ಅವರವರ ಪಾಲಿಸುವ ವೃತ್ತಿಯಿಂದ ನಿರ್ಧರಿಸಲ್ಪಡುತ್ತಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಕ್ಕೆ ಮಕ್ಕಳನ್ನು ಕಳುಹಿಸುವ ಮುಂಚೆ ಉತ್ತಮವಾದ ಸಂಸ್ಕಾರ ಮತ್ತು ಮನಸ್ಸಿನ ಕೊಳೆಗಳನ್ನು ಕಳೆದು ಪರಬ್ರಹ್ಮಪ್ರಾಪ್ತಿಗಾಗಿ, ಮತ್ತು ತನ್ಮೂಲಕ ಸತ್ಪುರುಷರಾಗುವುದಕ್ಕಾಗಿ ಉಪನಯನವನ್ನು ಮಾಡುತ್ತಿದ್ದರು.
ಸಾಮಾನ್ಯವಾಗಿ ಆರರಿಂದ ಎಂಟು ವಯಸ್ಸಿನ ಒಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವುದು ನಡೆದು ಬಂದಿರುವ ಸಂಪ್ರದಾಯ. ಹುಟ್ಟಿನಿಂದ ಅಲ್ಲಿಯವರೆಗೂ ತಾಯಿಯ ಮಡಿಲಲ್ಲೇ ಬೆಳೆದ ಗಂಡು ಮಕ್ಕಳು ಅಂದಿನ ಕಾಲದಲ್ಲಿ ಕೆಲವೊಂದು ಬಾರೀ ಇನ್ನೂ ತಾಯಿಯ ಹಾಲನ್ನೇ ಕುಡಿಯುತ್ತಿದ್ದ ಮಕ್ಕಳಿಗೆ ಕಡೆಯದಾಗಿ ಮಾತೃ ಭೋಜನ ಮಾಡಿಸಿ ಬ್ರಹ್ಮೋಪದೇಶ ಮಾಡಿಸುತ್ತಿದ್ದರು. ಈ ರೀತಿಯಾಗಿ ಬ್ರಹ್ಮೋಪದೇಶ ಮಾಡಿದ ನಂತರವೇ ಅವರಿಗೆ ಎರಡನೇ ಜನ್ಮ ಪ್ರಾಪ್ತಿಯಾದಂತೆ ಎಂದು ದ್ವಿಜ ಎಂದೂ ಕರೆಯುತ್ತಿದ್ದರು. ಮಕ್ಕಳಿಗೆ ಆಚಾರ್ಯ ಮುಖೇನ ಶಾಸ್ತ್ರೋಕ್ತವಾಗಿ ತಂದೆಯಿಂದ ಗಾಯತ್ರೀ ಮಂತ್ರದ ಉಪದೇಶವಾಗಿ ಸ್ವಸಾಮರ್ಥ್ಯ, ಪಾಂಡಿತ್ಯ ಮತ್ತು ಸಮೃದ್ಧಿಯ ಸಂಕೇತವಾದ ಮೂರು ಎಳೆಗಳ ಬ್ರಹ್ಮ ಗಂಟು ಉಳ್ಳ ಜನಿವಾರವನ್ನು ಧಾರಣೆ ಮಾಡಿಸುತ್ತಾರೆ. ಆ ಮೂರು ಎಳೆಗಳು, ಸ್ವಸಾಮರ್ಥ್ಯದ ದೇವಿ (ಪಾರ್ವತಿ), ಪಾಂಡಿತ್ಯದ ದೇವಿ (ಸರಸ್ವತಿ) ಮತ್ತು ಸಮೃದ್ದಿ ಅಥವಾ ಧನ ದೇವಿ (ಲಕ್ಷ್ಮಿ) ಈ ಮೂರೂ ದೇವಿಯರ ಆಶೀರ್ವಾದ ಸುಖಜೀವನ ನಡೆಸಲು ಇರಲೇ ಬೇಕಾದ ಕಾರಣ ಸದಾ ಕಾಲವೂ ಮೂರು ಎಳೆಗಳ ಜನಿವಾರವನ್ನು ಧರಿಸಿರುವುದು ಅವಶ್ಯಕವಾಗಿತ್ತು.
ಸಾಧಾರವಾಗಿ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯ ವರ್ಣಾಶ್ರಮ ಪಾಲಿಸುವುವರು ತಮ್ಮ ಗಂಡು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಈ ರೀತಿಯಲ್ಲಿ ಬ್ರಹ್ಮೋಪದೇಶ ಮಾಡಿಸಿ ಗುರು ಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿ ಕೊಡುತ್ತಿದ್ದರು. ಗುರುಕುಲದಲ್ಲಿ ಆ ವಿಧ್ಯಾರ್ಥಿಗಳು ಗಾಯತ್ರಿಯ ಔಪಾಸನೆಯೊಂದಿಗೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾ ತಮ್ಮ ಸ್ವಸಾಮಥ್ಯದ ಅನುಗುಣವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಸಾಧಾರಣವಾಗಿ ಎಲ್ಲಾ ವಸ್ತುಗಳಿಗೆ ಒಂದು ನಿರ್ಧಿಷ್ಟ ಅವಧಿಯಿರುತ್ತದೆ. ಆ ಅವಧಿ ಮುಗಿದಂತೆಲ್ಲಾ ಅದನ್ನು ಬದಲಿಸುವುದು ಜಗದ ನಿಯಮ. ಹಾಗಾಗಿ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮ ಬಟ್ಟೆ, ಗೃಹೋಪಯೋಗಿ ವಸ್ತುಗಳು, ವಾಹನ ಇತ್ಯಾದಿಗಳನ್ನು ಹೊಸದರೊಂದಿಗೆ ಬದಲಾಯಿಸುತ್ತಿರುತ್ತೇವೆ. ಅಂತಯೇ ಈ ಜನಿವಾರವನ್ನೂ ಮೈಲಿಗೆ, ಪುರುಡು ಮತ್ತು ಸೂತಕಗಳ ಹೊರತಾಗಿ ವರ್ಷಕ್ಕೊಮ್ಮೆ ಬದಲಿಸುವ ಸಂಪ್ರದಾಯವಿದೆ. ಹಾಗೆ ಜನಿವಾರವನ್ನು ಬದಲಾಯಿಸುವ ದಿನವನ್ನು ಉಪಾಕರ್ಮ ಎನ್ನುತ್ತಾರೆ. ಉಪಾಕರ್ಮ ಪದದ ಅರ್ಥ “ಹೊಸ ಆರಂಭ”. ಸಮಯದೊಂದಿಗೆ ಹಳೆಯದಾದ ಯಾವುದನ್ನಾದರೂ ಬದಲಾಯಿಸಬೇಕು
ಅಥವಾ ನವೀಕರಿಸಬೇಕು ಇಲ್ಲವೇ ಪುನಃ ಶಕ್ತಿಯುತಗೊಳಿಸಬೇಕು ಎಂದರ್ಥ. ಉಪಾಕರ್ಮವನ್ನು ವರ್ಷಕ್ಕೆ ಒಂದು ಬಾರಿ ಶ್ರಾವಣ ಮಾಸದ ಶುಕ್ಲ ಪಕ್ಷದ ಶ್ರವಣ ನಕ್ಷತ್ರದ ದಿನದಂದು ಋಗ್ವೇದಿಗಳು ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳು ಆಚರಿಸುತ್ತಾರೆ. ಹಾಗಾಗಿ ಈ ದಿನವನ್ನು ನೂಲು ಹುಣ್ಣಿಮೆ ಎಂದೂ ಕರಾವಳಿಯ ಕಡೆ ಕರೆಯುವುದುಂಟು. ಅಂದು ಉಪನಯನವಾದವರು ಶಾಸ್ತ್ರೋಕ್ತವಾಗಿ ತಮ್ಮ ಜನಿವಾರವನ್ನು ಗೌತಮಾದಿ ಸಪ್ತ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ನೀಡುವುದರ ಮೂಲಕ ಬದಲಾಯಿಸುತ್ತಾರೆ.
ಹಿಂದೆಲ್ಲಾ ಕುಲಪುರೋಹಿತರೇ ಮನೆಗಳಿಗೇ ಆಗಮಿಸಿ ನಡೆಸುತ್ತಿದ್ದ ಉಪಾಕರ್ಮ ಇಂದು ಸಮಯಾ ಭಾವದಿಂದ ದೇವಸ್ಥಾನಗಳಲ್ಲಿಯೋ ಇಲ್ಲವೇ ಕೆಲವು ಸಂಘ ಸಂಸ್ಥೆಗಳ ಮುಖಾಂತರವೋ ಇಲ್ಲವೇ ಹಿರಿಯ ಪುರೋಹಿತರ ಮನೆಗಳಲ್ಲಿ ಸಾಮೂಹಿಕವಾಗಿ ಆಚರಿಸಲ್ಕಡುತ್ತಿದೆ. ಹಾಗೆ ಸಾಮೂಹಿಕವಾಗಿ ಆಚರಿಸಲ್ಪಡುವ ಕಡೆ , ಮೊದಲು ವಿಘ್ನವಿನಾಶಕ ಗಣೇಶನ ಪೂಜೆ ಮಾಡಿ ನಂತರ ಸಪ್ತ ಋಷಿಗಳ ಮಂಡಲಗಳನ್ನು ಮಾಡಿ ಅಲ್ಲಿ ಸಪ್ತ ಋಷಿಗಳ ಆಹ್ವಾನೆ ಮಾಡಿ ಅವರಿಗೆ ಶ್ರಧ್ಧಾ ಭಕ್ತಿಯಿಂದ ಶೋಡಶೋಪಚಾರ ಪೂಜೆ ಮಾಡಿದ ನಂತರ ತಂದಿದ್ದ ಜನಿವಾರಗಳಿಗೆ ಪೂಜೆ ಮಾಡಿ ಆಚಾರ್ಯರಿಗೂ ಮತ್ತು ಅಲ್ಲಿರುವ ಹಿರಿಯರಿಗೂ ಯಥಾ ಶಕ್ತಿ ದಕ್ಷಿಣೆಯೊಂದಿಗೆ ಜನಿವಾರವನ್ನು ದಾನ ಮಾಡಿ, ಅಕ್ಕಿಯ ಹಿಟ್ಟಿನ ಗುಳಿಗೆಯನ್ನು ಹಲ್ಲಿಗೆ ತಾಕದಂತೆ ಸ್ವೀಕರಿಸಿ ಶ್ರೌತ ಸ್ಮಾರ್ತಾದಿ ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನ ಯೋಗ್ಯತಾ ಸಿದ್ಯರ್ಥಂ ಎಂದು ಸಂಕಲ್ಪ ಮಾಡಿ ಮೂರು ವೇದಗಳ ಛಂದಸ್ಸನ್ನು ಮತ್ತು ಬ್ರಹ್ಮ , ವಿಷ್ಣು , ರುದ್ರ ಈ ಮೂವರು ದೇವತೆಗಳ ಹೆಸರಿನಲ್ಲಿ (ಜನಿವಾರದ 3 ದಾರಗಳು ಪ್ರತಿನಿಧಿಸುತ್ತವೆ ಎಂದೂ ನಂಬಿಕೆ ಇದೆ ) ಯಜ್ಞೋಪವೀತ ಧಾರಣ ಮಂತ್ರವನ್ನು ಕರ ಷಡಂಗ-ವಿನ್ಯಾಸ ಪೂರ್ವಕ, ದೇಹಕ್ಕೆ ಆವಾಹನೆ ಮಾಡಿಕೊಂಡು ಸೂರ್ಯನ ಮತ್ತು ಪೃಥಿವೀ ಸ್ತುತಿಯ ವೇದ ಮಂತ್ರಗಳೊಂದಿಗೆ – ದಾರಣಮಂತ್ರ ಹೇಳಿ ಧರಿಸಲಾಗುವುದು.
ಯಜ್ಞೋಪವೀತ ಧಾರಣ ಮಂತ್ರ
ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. “ತತ್ಸವಿತುರ್ವರೇಣ್ಯಮ್” ಮೊದಲ ಚರಣ. “ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ”. “ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.
ಯಜ್ಞೋಪವೀತಂ ಪರಮಂಪವಿತ್ರಂ | ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |ಯಜ್ಞೋಪವೀತಂ ಬಲಮಸ್ತು ತೇಜಃ||
ಈ ಶ್ಲೋಕದ ಅರ್ಥ ಹೀಗಿದೆ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು.
ಈ ಮಂತ್ರೋಚ್ಛಾರ ಮಾಡಿದ ನಂತರ ಜನಿವಾರವನ್ನು ಧಾರಣೆ ಮಾಡಿ ಯಥಾ ಶಕ್ತಿ 32, 64, 108 ಅಥವಾ 1000 ಗಾಯತ್ರಿ ಜಪ ಮಾಡಬೇಕು.
ಬ್ರಹ್ಮಚಾರಿಗಳು ಮೂರೆಳೆಯ ಒಂದು ಜನಿವಾರವನ್ನು ಮಾತ್ರಾ ಧರಿಸಿದರೆ,
ಗೃಹಸ್ಥರು / ವಿವಾಹಿತರು ಮೂರೆಳೆಯ ಎರಡು ಜನಿವಾರ ಧಾರಣೆ ಮಾಡುತ್ತಾರೆ. ಮೊದಲನೇ ಜನಿವಾರ ತನ್ನದಾದರೆ ಮತ್ತೊಂದು ತನ್ನ ಪತ್ನಿಯ ಪರವಾಗಿ ಧರಿಸುತ್ತಾರೆ. ಅಕಸ್ಮಾತ್ ಎರಡನೇ ಮದುವೆ ಯಾದವರು ಮೂರನೇ ಜನಿವಾರವನ್ನೂ ಧರಿಸುತ್ತಾರೆ.
ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ, ದೇವರಿಗೆ ಅಥವಾ ಹಿರಿಯರಿಗೆ ನಮಸ್ಕರಿಸುವಾಗ ಹೆಗಲ ಮೇಲೆ ಉತ್ತರೀಯ(ಶಾಲು) ಇರಲೇ ಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ. ಹಾಗಾಗಿ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬಾರದಂತೆ ಉತ್ತರೀಯದ ಬದಲಾಗಿ ಮತ್ತೊಂದು ಹೆವ್ವಿನ ಜನಿವಾರನ್ನೂ ಧರಿಸುವುದು ರೂಢಿಯಲ್ಲಿದೆ.
ಇನ್ನೂ ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಅಕಸ್ಮಾತ್ ಕಾರಾಣಾಂತರಗಳಿಂದ ಜನಿವಾರ ಕಿತ್ತು ಹೋದಲ್ಲಿ, ಅದನ್ನು ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಕಿತ್ತು ಹೋದರೂ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ಹಾಗಾಗಿ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವರು
ಹಾಗೆ ಜನಿವಾರ ಬದಲಾಯಿಸಿದ ನಂತರ ತಂದೆ ಇಲ್ಲದವರು ತಮ್ಮ ಪಿತೃಗಳಿಗೆ ತರ್ಪಣ ನೀಡಿದ ನಂತರ ಸಪ್ತ ಋಷಿ ಮಂಡಲಗಳಿಗೆ
ಸತ್ವದ ಹಿಟ್ಟಿನ ನೈವೇದ್ಯ ಮಾಡಿ, ಮಹಾ ಮಂಗಳಾರತಿ ಮಾಡುವ ಮೂಲಕ ಉಪಾಕರ್ಮ ವಿಧಿ ವಿಧಾನಗಳು ಸಂಪೂರ್ಣಗೊಳ್ಳುತ್ತದೆ.
ಹಳೆಯ ಜನಿವಾರವನ್ನು ಮಾರನೇಯ ದಿನ ಸಂಧ್ಯಾವಂದನೆ ಮಾಡಿದ ನಂತರ ಸೊಂಟದ ಕೆಳಗಿನ ಮೂಲಕ ತೆಗೆದು ಅದನ್ನು ಛಿನ್ನ ಮಾಡಿ (ಒಂದೆಳೆಯನ್ನು ಕತ್ತರಿಸಿ) ಕೆರೆ/ನದಿಯ ನೀರಿಗೋ ಇಲ್ಲವೇ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸುತ್ತಾರೆ.
ಉಪಾಕರ್ಮದ ಸತ್ವದ ಹಿಟ್ಟು
ಉಪಾಕರ್ಮದ ದಿನ ಮಾತ್ರವೇ ಸಿದ್ಧ ಪಡಿಸುವ ವಿಶೇಷವಾದ ಪ್ರಸಾದವೇ ಸತ್ವದ ಹಿಟ್ಟು. ಪೂಜೆಗೆ ಬಂದವರೆಲ್ಲರೂ ತಂದಿದ್ದ ಬಗೆ ಬಗೆಯ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಅಕ್ಕಿ ಹಿಟ್ಟು, ಬೆಲ್ಲ, ಜೇನುತುಪ್ಪಾ, ಹಾಲು, ಮೊಸರು, ತುಪ್ಪಾ ಮತ್ತು ಎಳ್ಳನ್ನು ಜೊತೆಗೆ ಕಾಯಿ ತುರಿ ಸೇರಿಸಿ ಹದವಾಗಿ ಬೆರೆಸಿದರೆ ಸತ್ವದ ಹಿಟ್ಟು ಸಿದ್ಧವಾಗುತ್ತದೆ. ಎಲ್ಲಾ ಪರಿಕರಗಳು ಹಸಿ ಪದಾರ್ಥಗಳಾಗಿದ್ದರೂ ತಿನ್ನಲು ಬಹಳ ರುಚಿಯಾಗಿತ್ತದೆ. ಸಾಧಾರಣವಾಗಿ ಬಂದವರೆಲ್ಲರೂ ಯಥಾ ಶಕ್ತಿ ತಾವು ತಂದ ಡಬ್ಬಿಗಳಲ್ಲಿ ಈ ಪ್ರಸಾದವನ್ನು ತುಂಬಿ ಕೊಂಡು ಮನೆಗೆ ಹೋಗಿ ತಮ್ಮ ಕುಟುಂಬದೊಡನೆ ಉಪಾಕರ್ಮದ ಪ್ರದಾದವಾಗಿ ಸ್ವೀಕರಿಸುವ ಪದ್ದತಿ ಇದೆ.
ಹೀಗೆ ಉಪಾಕರ್ಮ ಮುಗಿಸಿಕೊಂಡು ಮನೆಯೊಳಗೆ ನೇರವಾಗಿ ನುಗ್ಗುವಂತಿಲ್ಲ. ಉಪಾಕರ್ಮದ ನಂತರ ಮನೆಗ ಮುಂಬಾಗಿಲಿನ ಹೊಸಿಲಿನಲ್ಲಿ ನಿಂತರೆ ಒಳಗಿನಿಂದ ಹಿರಿಯ ಮುತ್ತೈದೆಯರು ಇಲ್ಲವೇ ಚಿಕ್ಕ ಹೆಣ್ಣು ಮಕ್ಕಳು ನೂತನ ಜನಿವಾರಧಾರಿಗಳಿಗೆ ಆರತಿ ಬೆಳಗಿ ಒಳಗೆ ಬರಮಾಡಿಕೊಳ್ಳುತ್ತಾರೆ. ನಂತರ ಜನಿವಾರ ಧಾರಿಗಳೆಲ್ಲರೂ ಆರತಿ ಬೆಳಗಿದವರಿಗೆ ಯಥಾ ಶಕ್ತಿ ಕಾಣಿಕೆಯನ್ನು ನೀಡುವ ಸಂಪ್ರದಾಯ ಕೆಲವರ ಮನೆಯಲ್ಲಿ ರೂಢಿಯಲ್ಲಿದೆ. ಅಂದಿನ ಉಪಹಾರಕ್ಕೆ ಜನಿವಾರದ ಸಂಕೇತವಾಗಿ ಉದ್ದುದ್ದನೆಯ ಒತ್ತು ಶ್ಯಾವಿಗೆಯನ್ನು ಮಾಡುವ ರೂಢಿ ಹಲವರ ಮನೆಯಲ್ಲಿದೆ.
ಸಮಯಾಭಾವದಿಂದಲೋ ಇಲ್ಲವೇ ನಾನಾ ಕಾರಣಗಳಿಂದ ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ಉಪಾಕರ್ಮದ ನಿಯಮಿತ ವಿಧಿ ವಿಧಾನಗಳ ಮುಖಾಂತರ ಜನಿವಾರ ಬದಲಿಸಿಕೊಳ್ಳಲು ಆಗದಿದ್ದವರು ಮನೆಯಲ್ಲಿಯೇ ಬೆಳಿಗ್ಗೆ ಸಂಧ್ಯಾವಂಧನೆ ಮಾಡಿ ಜನಿವಾರಗಳಿಗೆ ಅರಿಶಿನ ಹಚ್ಚಿ ಕುಂಕುಮದ ಮೂಲಕ ಪೂಜೆ ಮಾಡಿ ಯಜ್ಞೋಪವೀತ ಧಾರಣೆಯ ಮಂತ್ರ ಪಠಿಸುತ್ತಾ ನೂತನ ಜನಿವಾರ ಧರಿಸಿ ಯಥಾ ಶಕ್ತಿ ಗಾಯತ್ರೀ ಮಂತ್ರ ಜಪಿಸಿ ಮಾರನೆಯ ದಿನ ಸಂಧ್ಯಾವಂದನೆ ಮಾಡಿದ ನಂತರ ಹಳೆಯ ಜನಿವಾರವನ್ನು ವಿಸರ್ಜಿಸ ಬೇಕು.
ಜನಿವಾರ ಕೇವಲ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯರಿಗೇ ಮಾತ್ರವೇ ಮೀಸಲಾಗಿಲ್ಲದೇ, ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದಾಗಿದೆ . ಅದಕ್ಕೆ ನಮ್ಮ ಶಾಸ್ತ್ರ ಸಂಪ್ರದಾಯಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ಹಾಗೆ ಸರಿಯಾಗಿ ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿ ಹೋಗಿ ಯಜ್ಞೋಪವೀತ ಫಲ ಆತನಿಗೆ ಲಭಿಸುವುದಿಲ್ಲ.
*ಯಜ್ಞೋಪವೀತ(ಜನಿವಾರ)*
🌺🌺🌺🌺🌺🌺🌺
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ *ಯಜ್ಞೋಪವೀತ ಧಾರಣೆ* ಜನಿವಾರದ ಧರಿಸಿದರೇ ಏನು ಪ್ರಯೋಜನ ವಿದೆ...! ಬಲ ಕಿವಿಯಲ್ಲಿ ಹಾಕಿದರೆ.. ಏನು ಆಗುವುದು.! ನಿಯಮಗಳನ್ನು ಪಾಲಿಸಬೇಕು.. ಬೇಡ ವೇ.. ಬ್ರಹ್ಮಾ ಗಂಟು.. ಗಾಯತ್ರಿ ಮಂತ್ರ ಕ್ಕೆ.. ಸೂರ್ಯ ದೇವನು ಕೊಟ್ಟ ವೇದ ಮಾತೇ ಯಾ ಕೊಡುಗೆಯನ್ನು ಏನು....
ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.
" *ಉಪನಯನ* " ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.
ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.
ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.
ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.
ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು. ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.
ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.
ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು, ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ, ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.
ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.
*ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ*:-
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||
ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ
*ಯಜ್ಞೋಪವೀತದ ನಿಯಮಗಳು*:-
* ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.
* ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸ ಬೇಕು.
* ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.
* ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.
*ಯಜ್ಞೋಪವೀತದ ವೈಜ್ಞಾನಿಕ ಮಹತ್ವ*:-
* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.
* ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.
* ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.
* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.
* ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.
* ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.
* ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.
* ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು
ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ
ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ
ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.
ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.
▬▬▬▬▬ஜ۩۞۩ஜ▬▬▬۩۞۩ஜ▬▬▬▬▬*॥ಸರ್ವೆಜನಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು||
▬▬▬▬▬ஜ۩۞۩ஜ▬▬▬▬▬
.
No comments:
Post a Comment