ಶ್ರೀಕೃಷ್ಣ ಮತ್ತು ಬಲರಾಮರು ::
ಯಾದವ ಕುಲದ ಮಹಾರಾಜ ವಸುದೇವನಿಗೆ ರೋಹಿಣಿ ಮೊದಲ ಪತ್ನಿ. ದೇವಕಿ 2 ನೇ ಪತ್ನಿ. ದೇವಕಿ,ವಸುದೇವನ ಮದುವೆಯನ್ನು ತುಂಬಾ ಸಂತೋಷದಿಂದ ಮಾಡಿಕೊಟ್ಟ ದೇವಕಿಯ ಅಣ್ಣ ಕಂಸನಿಗೆ "ನಿನ್ನ ತಂಗಿ ದೇವಕಿಗೆ ಹುಟ್ಟಿದ 8ನೇ ಮಗುವಿನಿಂದ ನಿನಗೆ ಮರಣವಾಗುತ್ತದೆ" ಅಂತ ಒಂದು ಅಶರೀರವಾಣಿ ಕೇಳುತ್ತದೆ. ಆದ್ದರಿಂದ ಸಿಟ್ಟಿನಿಂದ ಕಂಸನು ತಂಗಿ ದೇವಕಿ ಮತ್ತು ವಸುದೇವನನ್ನು ಸೆರೆಮನೆಗೆ ತಳ್ಳಿದ.
ಆದ್ದರಿಂದ ವಸುದೇವ " ತನ್ನ ಮೊದಲ ಪತ್ನಿಯನ್ನು ತನ್ನ ಗೆಳೆಯ ನಂದಗೋಪ ಮತ್ತು :: ಯಶೋದೆಯ ಮನೆಯಲ್ಲಿರಲು" ಹೇಳಿದನು. ಹೀಗಾಗಿ ರೋಹಿಣಿಯು ಇವರ ಮನೆಯಲ್ಲಿ ಇದ್ದಳು.
ಇತ್ತ ದೇವಕಿ ವಸುದೇವನಿಗೆ ಹುಟ್ಟಿದ ಮೊದಲನೆಯ ಮಗುವಿನಿಂದ ಹಿಡಿದು ಮಕ್ಕಳನ್ನು ಕಂಸನು ಕೊಲ್ಲುತಿದ್ದ. 7 ನೇ ಮಗುವೇ ಬಲರಾಮ. ಇವನ ಭ್ರೂಣವನ್ನು ರೋಹಿಣಿಯ ಗರ್ಭಕ್ಕೆ ಟ್ರಾನ್ಸ್ಫರ್ ಮಾಡಿದರು. ಆದ್ದರಿಂದ ವಸುದೇವ ತಂದೆ, ರೋಹಿಣಿ ಬಾಡಿಗೆ ತಾಯಿಯಾಗಿ ಬಲರಾಮನು ವಸುದೇವನ ಮೊದಲ ಮಗನಾಗಿ ಹುಟ್ಟಿದ. ಇವನಿಗೆ ಕೃಷಿಯಲ್ಲಿ ಆಸಕ್ತಿ. ಆದ್ದರಿಂದ ನೇಗಿಲು ಬಲರಾಮನ ಗುರುತು ಮತ್ತು ಅಸ್ತ್ರ.
ದೇವಕಿ ವಸುದೇವನಿಗೆ ನಂತರದ ಮಗು ಹೆಣ್ಣು ಮಗು ಹುಟ್ಟಿತು. ಆದರೂ ಕೂಡ ಕಂಸ ಕೊಲ್ಲಲು ಹೋದ. ಆದರೆ "ಕೂಡಲೇ ಅವನ ಕೈತಪ್ಪಿಸಿಕೊಂಡು ಮಹಾಶಕ್ತಿ ದೇವಿಯಾಗಿ ಬದಲಾಗಿ, ಮುಂದಿನ ಮಗುವೇ ನಿನ್ನ ಮರಣಕ್ಕೆ ಕಾರಣ. ನೀನು ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ" ಎಂದು ಹೇಳಿ ಮಾಯವಾಯಿತು.
ಕೊನೆಯಲ್ಲಿ 8ನೇ ಗಂಡುಮಗುವಾಗಿ ಶ್ರೀಕೃಷ್ಣ ಹುಟ್ಟಿದ. ಇತ್ತ ನಂದಗೋಪನಿಗೆ ಹೆಣ್ಣುಮಗು ಹುಟ್ಟಿತ್ತು. ತಂದೆತಾಯಿ ಶ್ರೀಕೃಷ್ಣನನ್ನು ಕಾಪಾಡುವ ಸಲುವಾಗಿ ಶ್ರೀಕೃಷ್ಣನನ್ನು ಯಶೋದೆಯ ಪಕ್ಕದಲ್ಲಿ ಮಲಗಿಸಿ, ಅವರಿಗೆ ಹುಟ್ಟಿದ ಹೆಣ್ಣುಮಗುವನ್ನು ವಸುದೇವ ಸೆರೆಮನೆಗೆ ತಂದನು. ಹೀಗಾಗಿ ಶ್ರೀಕೃಷ್ಣ ದೇವಕಿ ವಸುದೇವನ ಎರಡನೇ ಮಗನಾಗುತ್ತಾನೆ. ಬಲರಾಮ ಮತ್ತು ಕೃಷ್ಣರಿಬ್ಬರೂ ವಸುದೇವ ಮತ್ತು ದೇವಕಿ ದಂಪತಿಗಳ ಪುತ್ರರು.
ಬಲರಾಮ ಮತ್ತು ಕೃಷ್ಣರಿಬ್ಬರೂ ಒಟ್ಟಿಗೆ ಬೆಳೆಯುತ್ತಾರೆ. ಕಂಸನ ವಧೆಯನ್ನು ಮಾಡಿದ ಮೇಲೆ ದೇವಕಿ ವಸುದೇವನ ಸೆರೆಮನೆವಾಸ ಮುಗಿಯುತ್ತದೆ. ನಂತರ ರೋಹಿಣಿ ಮತ್ತು ವಸುದೇವರಿಗೆ ಒಂದು ಹೆಣ್ಣುಮಗು ಹುಟ್ಟುತ್ತದೆ. ಅವಳೇ ಸುಭದ್ರ ಅಥವಾ ಸುಭದ್ರೆ.ಬಲರಾಮ ಮತ್ತು ಶ್ರೀಕೃಷ್ಣರ ಪ್ರೀತಿಯ ತಂಗಿ.
ಪುರಿ ಜಗನ್ನಾಥದಲ್ಲಿ ಬಲರಾಮ ಮತ್ತು ಶ್ರೀಕೃಷ್ಣರ ಜೊತೆಗೆ ತಂಗಿ ಸುಭದ್ರೆಗೂ ನಿತ್ಯ ಪೂಜೆ ನಡೆಯುತ್ತದೆ.
ಅಷ್ಟೇ ಅಲ್ಲ, ಶ್ರೀ ಮಹಾವಿಷ್ಣುವಿನ ಅವತಾರವೇ ಶ್ರೀಕೃಷ್ಣ. ಆದಿಶೇಷನೇ ಬಲರಾಮ.
No comments:
Post a Comment