ಕಲ್ಕಿ ಅವತಾರ :-
ಧರ್ಮ ನಾಶವಾಗಿ ಅಧರ್ಮ ತಲೆ ಎತ್ತಿ ದುಷ್ಟರ ಕೃತ್ಯ ಹೆಚ್ಚಾದಾಗ ಪಾಪದ ಕೊಡ ತುಂಬಿದಾಗ ಭಗವಂತ ಅವತಾರ ಎತ್ತಿ ಬರುತ್ತಾನೆ ಎನ್ನುವುದು ನಮಗೆ ಭಗವಂತ ವಿಷ್ಣುವಿನ ದಶಾವತಾರ ಗಳಿಂದ ತಿಳಿಯುತ್ತದೆ. ತ್ರೇತಾಯುಗದಲ್ಲಿ ರಾವಣನ ಸಂಹಾರ ಮಾಡಲು ರಾಮ ಅವತಾರ ಎತ್ತಿದ ಹಾಗೆ ದ್ವಾಪರದಲ್ಲಿ ಕಂಸನ ಸಂಹಾರ ಮಾಡಲು 'ಕೃಷ್ಣ' ಅವತಾರವೆತ್ತಿ ಬರುತ್ತಾನೆ. ಅದೇ ರೀತಿ ಕಲಿಕಾಲದಲ್ಲಿ ಕಲಿಯ ಆರ್ಭಟ ಜಾಸ್ತಿಯಾದಾಗ ಧರ್ಮ ರಕ್ಷಣೆ ಮಾಡಲು ಭಗವಂತ ಅವತಾರ ಎತ್ತಿ ಬರುತ್ತಾನೆ ಎಂದು ಭಾಗವತದಲ್ಲೂ ತಿಳಿಸಿದ್ದಾರೆ. ಹಿಮಾಲಯದ ತಪ್ಪಲಲ್ಲಿರುವ 'ಶಂಭಲಾ' ಎಂಬ ಗ್ರಾಮದಲ್ಲಿ' ವಿಷ್ಣುವೀಷ' ಎಂಬ ಬ್ರಾಹ್ಮಣ ನಿದ್ದನು. ಇವನ ಪತ್ನಿ ಸುಮತಿ. ಇವನು ದಾನ ಧರ್ಮದಂಥ ಪುಣ್ಯಕಾರ್ಯ ಗಳನ್ನು ಮಾಡಿ ಭಗವಂತನನ್ನು ಧ್ಯಾನಿಸುತ್ತಾ ಪೂಜಿಸುತ್ತಾ ನೇಮ ನಿಷ್ಠ ನಾಗಿದ್ದನು. ಇವರಿಗೆ ನಾಲ್ಕು ಜನ ಮಕ್ಕಳು ಕವಿ -ಪ್ರಾಜ್ಯ ಸುಮಂತ, ಎಂಬ ಮೂರು ಮಕ್ಕಳನ್ನು ಪಡೆದು ನೆಮ್ಮದಿಯ ಸಂಸಾರ ಸಾಗಿಸುತ್ತಿದ್ದ. ಈ ಬ್ರಾಹ್ಮಣನ ಸಂಸಾರ ಮತ್ತು ಮನೆ ಆ ಗ್ರಾಮಕ್ಕೆ ಮಂಗಳಕರವಾಗಿ ಶೋಭಾಯಮಾನವಾಗಿತ್ತು.
ಸುಮತಿ ನಾಲ್ಕನೇ ಗರ್ಭ ಧರಿಸಿ ದಿನ ತುಂಬಿದಾಗ ಮುದ್ದಾದ ಗಂಡು ಮಗು ವಿಗೆ ಜನ್ಮ ನೀಡಿದಳು. ಆಗ ಬಂದ ಜ್ಯೋತಿಷ್ಯರು- ಋಷಿಮುನಿಗಳು ಮಗು ವನ್ನು ನೋಡಿ ಈ ಮಗು ಸಾಧಾರಣವಾದ ಮಗುವಲ್ಲ ಸಾಕ್ಷಾತ್ ವಿಷ್ಣು ಅವ ತರಿಸಿ ಬಂದಂತಿದೆ. ಈ ಮಗು ವಿಷ್ಣುವಿನ ಅಂಶವಾಗಿದೆ ಎಂದು ಹರಸಿ ಹೊರ ಟರು. ಮತ್ತೆ ಕೆಲ ದಿನಗಳಲ್ಲಿ ಚಿರಂಜೀವಿಗಳಾದ ಪರಶುರಾಮ, ವ್ಯಾಸರು, ಹನುಮಂತ, ಬಲಿಚಕ್ರವರ್ತಿ,ವಿಭೀಷಣ ಮುಂತಾದ ವರೆಲ್ಲ ದಾನ ಕೇಳುವ ಬ್ರಾಹ್ಮಣರ ವೇಶದಲ್ಲಿ ಬಂದರು. ವಿಷ್ಣುವೀಶ ಅವರನ್ನು ಆದರಿಸಿ ಒಳಗೆ ಕರೆದು ಆದರೋಪಚಾರ ಮಾಡಿ ಅವರಿಗೆ ಯಥೋಚಿತ ಸತ್ಕಾರ ನೀಡಿದನು. ವಿಷ್ಣುವೀಶ ನ ಸತ್ಕಾರ ಸ್ವೀಕರಿಸಿ ಅವರೆಲ್ಲರೂ ಮಗುವಿನ ಬಳಿ ಬಂದು ಮಗು ವಿಗೆ 'ಕಲ್ಕಿ'ಎಂದು ನಾಮಕರಣ ಮಾಡಿ ಬ್ರಾಹ್ಮಣನಿಗೆ ಧನ್ಯವಾದ ಹೇಳಿ ಅವರವರ ಆಶ್ರಮಕ್ಕೆ ತೆರಳಿದರು.
ಕಲ್ಕಿ ಹುಣ್ಣಿಮೆಯ ಚಂದ್ರನಂತೆ ಶೋಭಿಸುತ್ತಿದ್ದ. ಮಗು ಬೆಳೆದು ಬಾಲಕನಾದ ತಂದೆ ಅವನಿಗೆ ಆಚಾರ್ಯರ ಮೂಲಕ ವಿದ್ಯೆ ಕಲಿಸುವ ವ್ಯವಸ್ಥೆ ಮಾಡಿದನು ಕಲ್ಕಿ ಬಹಳ ಶ್ರದ್ಧೆಯಿಂದ ವಿದ್ಯೆ ಕಲಿತು ಎಲ್ಲಾ ವಿದ್ಯೆಯನ್ನು ಕರಗತ ಮಾಡಿ ಕೊಂಡನು. ಒಂದು ದಿನ ಒಬ್ಬ ಕಡ್ಡಿ ಗಾತ್ರದಂತ ಕೃಶ ಶರೀರದ ವೃದ್ಧ ಬ್ರಾಹ್ಮ ಣನೊಬ್ಬ ಬಂದನು. ಕಲ್ಕಿ ಅವನನ್ನು ನೋಡಿ ವಿಚಾರಿಸಿ ಕರೆದು ಸತ್ಕರಿಸಿದ. ಆ ಬ್ರಾಹ್ಮಣ ಕಲ್ಕಿಗೆ ಹೇಳಿದ ನೋಡು ಮಗು ನಾನು 'ಕೃತ' ಚತುರ್ಯುಗಗಳಿಗೂ ನಾನೇ ಮೊದಲನೆಯವನು. ಈಗ ಕಲಿಯುಗ ನಡೆಯುತ್ತಿದೆ ಅನ್ಯಾಯ ಅಧರ್ಮ ತಾಂಡವವಾಡಿ ತಲೆಯೆತ್ತಿ ಮೆರೆಯುತ್ತಿದೆ. ಜನರು ಮೋಸ ವಂಚನೆ ಯಲ್ಲಿ ತೊಡಗಿದ್ದಾರೆ. ಧರ್ಮದ ವಿಚಾರ ಧರ್ಮಾಚರಣೆಗಳಿಗೆ ಬಾಯಿ ಕಟ್ಟಿ ದ್ದಾರೆ. ಇಂಥ ಅಧರ್ಮ ಅನೀತಿಯಿಂದಾಗಿ ನಾನು ವೃದ್ಧನಾಗಿ ಕೃಶನಾಗಿದ್ದೇನೆ ಎಂದಾಗ ಬಾಲಕ ಆಶ್ಚರ್ಯದಿಂದ ನೀವು ಹೇಳುತ್ತಿರುವುದು ನಿಜವೇ ಹಾಗಾ ದರೆ ಆ 'ಕಲಿ' ಯಾರು? ಅವನು ಯಾಕೆ ಜನರನ್ನು ಅಧರ್ಮ ಮಾರ್ಗಕ್ಕೆ ಎಳೆ ದೊಯ್ಯುತ್ತಾನೆ ಎಂದು ಕೇಳಿದ.
ಮಗು ಕಲಿಯ ಕಥೆ ಬಹಳ ವಿಸ್ತಾರವಾಗಿದೆ. ಬ್ರಹ್ಮನಿಂದಲೇ ಮೊದಲು ಪಾಪ ಹುಟ್ಟಿತು. ಪಾಪದ ಇನ್ನೊಂದು ರೂಪ ಅಧರ್ಮ. ಅಧರ್ಮನು ಮಿಥ್ಯೆಯನ್ನು ಮದುವೆಯಾದನು. ಇವರಿಬ್ಬರ ಸಂತಾನ 'ಧಂಬ' ಎಂಬವನು ಹುಟ್ಟಿದನು. ಮುಂದೆ ಇವನು ಬೆಳೆದು ಮಾಯೆಯನ್ನು ಮದುವೆಯಾದ, ಧಂಬ ಮತ್ತು ಮಾಯೆ ಯಿಂದ ಲೋಭ ಮತ್ತು ವಿಕೃತಿ ಎಂಬುವರನ್ನು ಪಡೆದರು. ಇವರಿ ಬ್ಬರು ಮುಂದೆ 'ಕ್ರೋದ' ಗಳನ್ನು ಪಡೆದರು. ಮುಂದೆ ಕ್ರೋಧ ಮತ್ತು ಹಿಂಸೆ ಯಿಂದ 'ಕಲಿ' ಹುಟ್ಟಿದ. ಕಲಿಯ ಪೀಳಿಗೆಯಿಂದ ನರಕ- ಮೃತ್ಯು- ಭಯ -ದುರುಕ್ತಿ. ಇವರೆಲ್ಲ ಉತ್ಪತ್ತಿ ಆದರು. ಇವರೆಲ್ಲರ ರಾಜ ಕಲಿಯಾದ್ದರಿಂದ ಎಲ್ಲಾ ಕಡೆ ವ್ಯಸನ -ಭಯ -ಚಿಂತೆ - ಪಾಪ ಕೃತ್ಯಗಳೇ ತುಂಬಿದವು. ಇವುಗ ಳಿಂದಾಗಿ 'ಧರ್ಮ' ಮಂಕಾಗಿ ಯಾರಿಗೂ ಕಾಣದೆ ಸಂಕಟ ಪಡುತ್ತಿದ್ದಾನೆ . ಹೀಗೆ ಎಲ್ಲೆಡೆಯೂ ಅಧರ್ಮವೇ ಮೆರೆದಾಡುತ್ತಿದೆ. ಎಂದು ಬ್ರಾಹ್ಮಣ ಹೇಳಿ ದ್ದನ್ನು ಕೇಳಿ ಕಲ್ಕಿ ಕೇಳಿದ ಹಾಗಾದರೆ ಇದಕ್ಕೆ ಪರಿಹಾರ ಏನು ಇದೆ ಎಂದು.
ವೃದ್ಧನಾಗಿದ್ದ 'ಕೃತ'ನು ಹೇಳಿದ ನೀನು ಈಗ ಮಹೇಂದ್ರ ಪರ್ವತಕ್ಕೆ ಹೋಗಿ ಪರಶುರಾಮರಲ್ಲಿ ಎಲ್ಲಾ ಶಸ್ತ್ರ ಶಾಸ್ತ್ರ ವಿದ್ಯೆಗಳನ್ನು ಕಲಿತು ಮುಂದೆ ಧರ್ಮ ವನ್ನು ನೀನು ರಕ್ಷಣೆ ಮಾಡಬೇಕು ಎಂದನು. ಕೃತನಿಗೆ ಕಲ್ಕಿ ಯು ನಮಸ್ಕರಿಸಿ ಬೀಳ್ಕೊಟ್ಟನು. ನಂತರ ತಂದೆಯ ಅನುಮತಿ ಪಡೆದು ಪರಶುರಾಮರನ್ನು ಕಾಣಲು ಮಹೇಂದ್ರ ಪರ್ವತಕ್ಕೆ ಹೊರಟನು.
ಪರಶುರಾಮರನ್ನು ಹುಡುಕಿ ಅವರಲ್ಲಿ ಶಿಷ್ಯನನ್ನಾಗಿ ಪಡೆಯುವಂತೆ ಪ್ರಾರ್ಥಿಸಿ ಅವರಿಂದ ಸಕಲ ವಿದ್ಯಾಭ್ಯಾಸವನ್ನು ಮುಗಿಸಿದನು. ಹೊರಡುವಾಗ ಗುರುಗಳಲ್ಲಿ ಗುರುದಕ್ಷಿಣೆ ಏನು ಕೊಡಲಿ ಎಂದು ಕೇಳಿದನು ಆಗ ಪರಶುರಾಮರು ನನಗೆ ಗುರುದಕ್ಷಿಣೆ ಏನೂ ಬೇಡ ಮಗು ಈ ಜಗತ್ತಿನಲ್ಲಿ ನಡೆಯುತ್ತಿರುವ ಅನ್ಯಾಯ ಅಧರ್ಮಗಳನ್ನು ನಿಲ್ಲಿಸಿ ಧರ್ಮಸ್ಥಾಪನೆ ಮಾಡು
ಇದೇನೇ ನೀನು ನನಗೆ ಕೊಡುವ ಗುರುದಕ್ಷಿಣೆ ಎಂದು ಹರಸಿ ಬೀಳ್ಕೊಟ್ಟರು.
ಕಲ್ಕಿಗೆ ಇಬ್ಬರು ಪತ್ನಿಯರು ಮೊದಲನೇ ಪತ್ನಿ ಲಕ್ಷ್ಮಿ ರೂಪವಾದ ಪದ್ಮಾವತಿ, ಎರಡನೇ ಪತ್ನಿ ವೈಷ್ಣವ ಶಕ್ತಿ ರೂಪ ಹೊಂದಿದವಳು. ತ್ರೇತಾಯುಗದಿಂದಲೂ ವಿಷ್ಣುವನ್ನು ವಿವಾಹವಾಗುವ ಕನಸನ್ನು ಕಂಡವಳು, ರಾಮನನ್ನೇ ಪಡೆಯಲು ಕಾತರಿಸಿ ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭದ ನಡುವಿನ ಸಮಯದಲ್ಲಿ ವೈಷ್ಣವಿ ದೇವಿಯಾಗಿ ಕಲ್ಕಿಯನ್ನು ವಿವಾಹವಾದಳು. ಕಲ್ಕಿ
ತಂದೆ ಇಬ್ಬರು ಪತ್ನಿಯರಿಂದ ನಾಲ್ಕು ಜನ ಮಕ್ಕಳನ್ನು ಪಡೆದನು. ಅವರು ಜಯ- ವಿಜಯ- ಮೇಘವಾಹ- ಬಲಾಹಕ. ಕಲ್ಕಿಯ ಬರುವಿಕೆಗಾಗಿ ಚಿರಂಜೀವಿಗಳು ಮುಕ್ತಿ ಮತ್ತು ಮೋಕ್ಷಕ್ಕಾಗಿ ಕಾಯುತ್ತಿದ್ದರು. ಪರಶುರಾಮರ ಶಿಷ್ಯನಾಗಿ ದಿವ್ಯ ಅಸ್ತ್ರ ಶಸ್ತ್ರ ಶಾಸ್ತ್ರಗಳ ವಿದ್ಯೆಯನ್ನು ಕಲಿತನು. ಮುಂದೆ ಕಲಿಯನ್ನು ನಿಗ್ರಹಿಸಲು ಜೊತೆಗೆ ತನ್ನ ನಾಲ್ಕು ಜನ ಸಹೋದರರು ಮತ್ತು ಏಳು ಜನ ಚಿರಂಜೀವಿಗಳು ಪರಶುರಾಮ- ಹನುಮಂತ -ವ್ಯಾಸರು- ಕೃಪಾ ಚಾರ್ಯರು- ಅಶ್ವತ್ಥಾಮ -ವಿಭೀಷಣ- ಬಲಿ ಚಕ್ರವರ್ತಿ ಇವರುಗಳ ಸಹಾಯ ಪಡೆದು ಕಲಿಯನ್ನು ನಿಗ್ರಹಿಸಿದನು.
ಕಲಿಯನ್ನು ನಿಗ್ರಹಿಸುವುದು ಒಬ್ಬರಿಂದ ಸಾಧ್ಯವಿಲ್ಲ ರಾಮಾವತಾರದಲ್ಲಿ ರಾಮನ ಬಂಟನಾಗಿದ್ದ ಹನುಮಂತನ ಒಬ್ಬನೇ ಎಲ್ಲವನ್ನು ಮಾಡುತ್ತಿದ್ದ ಹಾಗೆ ಕೃಷ್ಣಾವತಾರದಲ್ಲಿ ಕೌರವರನ್ನು ನಿಗ್ರಹಿಸಲು ಐದು ಜನ ಪಾಂಡವರನ್ನು ಜೊತೆಯಲ್ಲಿಟ್ಟುಕೊಂಡನು ಹಾಗೆ ನಿಮಿತ್ತ ಮಾತ್ರಕ್ಕೆ ದ್ರೌಪದಿ ಇದ್ದಳು. ಕಲ್ಕಿಯ
ಉದ್ದೇಶಿತ ಕಾರ್ಯ ಮುಗಿಯುವ ತನಕ ಚಿರಂಜೀವಿಗಳು ಕಲ್ಕಿಯ ನಾಲ್ಕು ಜನ ಸಹೋದರರು ಕಲ್ಕಿಯ ಜೊತೆ ಇರುತ್ತಾರೆ.
ಪರಶುರಾಮಲಿಂದ ನಾನಾರ್ಜನೆ ಪಡೆದು ಮಹೇಂದ್ರ ಪರ್ವತದಿಂದ ಬಂದ ಕಲ್ಕಿ ಶಿವನನ್ನು ಕುರಿತು ಘೋರ ತಪಸ್ಸು ಮಾಡಿದನು. ಶಿವನು ತಪಸ್ಸಿಗೆ ಮೆಚ್ಚಿ
ದಿನಾಂಕ. ಕಲ್ಕಿಯು ಶಿವನಿಂದ ದೇವದತ್ತ ಎಂಬ ಒಂದು ಶ್ವೇತಾಶ್ವ, ಮತ್ತು ಶಕ್ತಿಯುತ ವಾದ ಖಡ್ಗ, ಹಾಗೂ ಲೋಕದ ವಿಷಯಗಳನ್ನೆಲ್ಲ ಬಲ್ಲಂತ ಒಂದು ಗಿಳಿಯನ್ನು ಪಡೆದುಕೊಂಡನು. ಅದಾಗಲೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದ
'ಧರ್ಮ'ದೇವತೆ ಸದ್ಗುಣಗಳ ಪರಿವಾರ ಸಮೇತ ವಾಗಿ ಕಲ್ಕಿಯ ಎದುರಿಗೆ ಬಂದು ನಮ್ಮನ್ನೆಲ್ಲ ಕಾಪಾಡಿ ಧರ್ಮ ವನ್ನು ರಕ್ಷಿಸಬೇಕು ಎಂದು ಪ್ರಾರ್ಥಿಸಿ ದಾಗ ಅವರಿಗೆಲ್ಲ ರಕ್ಷಿಸುವೆನೆಂದು ಮಾತುಕೊಟ್ಟು ಕಳಿಸಿ ನಂತರ ಶ್ವೇತಾಶ್ವ ಏರಿ, ಕೈಯಲ್ಲಿ ಖಡ್ಗ ಹಿಡಿದು ಚಂಡಮಾರುತದಂತೆ ಕುದುರೆಯನ್ನು ಹಾರಿಸಿ 'ಕಲಿ' ನೆಲೆಯಾದ 'ವಿಷಸನ' ಪಟ್ಟಣಕ್ಕೆ ಬಂದನು. ಎಲ್ಲೆಂದರಲ್ಲಿ ಗೋ ಮಾಂಸದ ರಾಶಿ ರಾಶಿಗಳು ಕಣ್ಣಿಗೆ ರಾಚುತಿದ್ದು, ಹಾದಿ ಬೀದಿಗಳಲ್ಲಿ ಜೂಜಾಟ ಮಧ್ಯ ಸೇವನೆ ಮಾಡುತ್ತಿದ್ದ ವ್ಯಸನಿಗಳ ಮೇಲೆ ದಾಳಿ ನಡೆಸಿ ಎಲ್ಲವನ್ನು ನಾಶ ಮಾಡಿದನು. ವಿಷಯ ತಿಳಿದ 'ಕಲಿ' ತನ್ನ ವಾಹನವಾದ ಗೂಬೆ ಮೇಲೆ ಬಂದು 'ಕಲ್ಕಿ' ಮೇಲೆ ಯುದ್ಧ ನಡೆಸಿದನು. 'ಕಲ್ಕಿ'ವೀರಾವೇಶದಿಂದ ಹೋರಾಡಿ 'ಕಲಿ' ಯನ್ನು ಹೊಡೆದು ಓಡಿಸಿದನು. ಅಡಗಿದ್ದ 'ಧರ್ಮದೇವತೆ' ಹೊರಗೆ ಬಂದೆ ನೆಮ್ಮದಿಯಾಗಿ ನೆಲೆಸುವಂತೆ ಮಾಡಿದನು.
( ಕಲ್ಕಿ ಹುಟ್ಟೇ ಇಲ್ಲ ಕಲಿಯುಗದ ಅಂತ್ಯ ಬಂದೇ ಇಲ್ಲ ಅದು ಹೇಗೆ ಎಂದು
ಅನ್ನಿಸಬಹುದು. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಭಾಗವಹಿಸಿ ದಾಗ 90 ವರ್ಷವಾಗಿತ್ತು. ಹಾಗೆ ಭೂಲೋಕದ ಒಂದು ವರ್ಷ ಬ್ರಹ್ಮನಿಗೆ ಒಂದು ದಿನ, ಹೀಗಿರುವಾಗ ' ಕಲ್ಕಿ' ಈಗಾಗಲೇ ಜನ್ಮ ತಾಳಿದ್ದು ಗೋಚರ ವಾಗದಂತೆ ಇರಬಹುದು. ಅಧರ್ಮ ಪೂರ್ತಿ ತುಂಬಿದಾಗ ಹಾರುವ ಬಿಳಿ ಕುದುರೆ ಏರಿ ಖಡ್ಗ ಝಳಪಿಸುತ್ತಾ ಬರುತ್ತಾನೆ ಕಾಯಬೇಕು ಅಷ್ಟೇ, ಇದು ನನ್ನ ಅನಿಸಿಕೆ)
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ!
ಅಭ್ಯುಥ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ !!
ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕೃತಾಂ!
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ!!
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
No comments:
Post a Comment