-:ಸೌದಾಸ:-
ಇವನು ಸುದಾಸ ಚಕ್ರವರ್ತಿಯ ಮಗ. ಒಮ್ಮೆ ಇವನು ಹಿರಿಯರಿಗೆ ಶ್ರಾದ್ಧ ಮಾಡುತ್ತಿರುವಾಗ ವಸಿಷ್ಟರಿಗಾಗಿ ಭೋಜನವನ್ನು ತಯಾರಿಸಿರುತ್ತಾನೆ. ಇವನ ಹಗೆಯಾದ ಒಬ್ಬ ರಾಕ್ಷಸ ಅದರಲ್ಲಿ ಸೌದಾಸನಿಗೆ ತಿಳಿಯದಂತೆ ನರಮಾಂಸವನ್ನು ಬೆರೆಸಿರುತ್ತಾನೆ. ತನಗೆ ನರಮಾಂಸವನ್ನು ಬಡಿಸಿದುದಕ್ಕಾಗಿ ಕ್ರುದ್ಧರಾದ ವಸಿಷ್ಟರು ಹಿಂದೆ ಮುಂದೆ ನೋಡದೆ, ಸೌದಾಸನಿಗೆ, ನರಮಾಂಸವನ್ನು ಭಕ್ಷಿಸುವ ರಕ್ಕಸನಾಗೆಂದು ಶಾಪಕೊಡುತ್ತಾರೆ.
ಸೌದಾಸನೂ ಶಾಪಕೊಡಲು ಸಮರ್ಥನಿದ್ದ
ಸೌದಾಸನು ವಸಿಷ್ಟರಿಗೆ ಶಾಪಕೊಡಲು ಅಂಗೈಯಲ್ಲಿ ಜಲವನ್ನು ತೆಗೆದುಕೊಂಡು ಸಿದ್ದನಾದ. ಆಗ ಅವನ ಪತ್ನಿಯಾದ ಮದಯಂತಿ ಅವನನ್ನು ತಡೆಯುತ್ತಾಳೆ. ಆಗ ಅವನು ಪಶ್ಚಾತಾಪ ಪಟ್ಟು ಆ ಶಾಪಜಲವನ್ನು ತನ್ನದೇ ಪಾದಗಳ ಮೇಲೆ ಹಾಕಿದಾಗ ಅವನ ಪಾದಗಳು ಕಪ್ಪಾಗುತ್ತವೆ. ಆದುದರಿಂದ ಅವನಿಗೆ "ಕಲ್ಮಾಶಪಾದ"ನೆಂದು ಹೆಸರಾಯಿತು.
ಸಂ.: ದಾಮೋದರ ಶೆಟ್ಟಿ, ಇರುವೈಲು
No comments:
Post a Comment