Wednesday, 4 March 2026

ನೇಮಿ (ದಶರಥ)

ಸೂರ್ಯವಂಶದ ಅಜ ಮಹಾರಾಜನ ಮಗ ನೇಮಿ. ಅವನು ಮಹಾಪರಾಕ್ರಮಿಯಾಗಿದ್ದು ಹತ್ತು ದಿಕ್ಕುಗಳಲ್ಲಿಯೂ ರಥ ಓಡಿಸಬಲ್ಲವನಾದುದರಿಂದ ಅವನು ದಶರಥನೆಂದೇ ಖ್ಯಾತಿವೆತ್ತನಾದನು. ಒಮ್ಮೆ ದೇವತೆಗಳಿಗೂ ರಕ್ಕಸರಿಗೂ ಯುದ್ಧವಾದಾಗ ಶಂಭಾಸುರನೆಂಬವನು ಅಜೇಯನಾಗಿ ಮೆರೆಯುತ್ತಿದ್ದ. ಆಗ ದಶರಥನು ದೇವತೆಗಳಿಗೆ ಸಹಾಯ ಮಾಡಲು ತಾನೇ ಯುದ್ಧಭೂಮಿಗೆ ತೆರಳುತ್ತಾನೆ. ಅವನ ಪತ್ನಿ ಕೈಕೇಯೀ ಅವನ ಸಾರಥಿಯಾಗಿರುತ್ತಾಳೆ. ಯುದ್ಧದ ಮಧ್ಯೆ ದಶರಥನ ರಥದ ಚಕ್ರದ ಕೀಲು ತುಂಡಾಗಿ ದಶರಥ ಸೋಲುವ ಹಂತದಲ್ಲಿದ್ದಾಗ ಕೈಕೇಯಿ ರಥವನ್ನು ಸುರಕ್ಷಿತವಾದ ಸ್ಥಳಕ್ಕೆ ಕೊಂಡುಹೋಗಿ ಚಕ್ರವನ್ನು ಸರಿಪಡಿಸಿ, ದಶರಥನನ್ನು ಉಪಚರಿಸಿ ಮತ್ತೆ ಯುದ್ಧ ಕ್ಕೆ ಅಣಿ ಮಾಡುತ್ತಾಳೆ. ಅವಳ ಕಾರ್ಯದಿಂದ ತೃಪ್ತನಾದ ದಶರಥ ಅವಳಿಗೆ ಎರಡು ವರಗಳನ್ನು ಕೊಡುತ್ತಾನೆ. ಆಗ ಕೈಕೇಯೀ ಆ ವರಗಳು ನ್ಯಾಸ ರೂಪದಲ್ಲಿ ನಿಮ್ಮಲ್ಲಿಯೇ ಇರಲಿ ಬೇಕಾದಾಗ ಕೇಳುತ್ತೇನೆ ಅನ್ನುತ್ತಾಳೆ.
ರಾಮನಿಗೆ ಅಯೋಧ್ಯೆಯ ಪಟ್ಟಾಭಿಷೇಕಕ್ಕೆ ಸಿದ್ದತೆ ಆಗುತ್ತಿದ್ದಾಗ, ಕೈಕೇಯೀ, ಮಂಥರೆಯು ಮಾತುಕೇಳಿ, ಅದೇ ವರದಂತೆ ತನ್ನ ಮಗ ಭರತನಿಗೆ ಪಟ್ಟಾಭಿಷೇಕವಾಗಬೇಕು, ರಾಮ ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು ಅಂತ ಕೇಳುತ್ತಾಳೆ. ಕೊಟ್ಟ ಮಾತಿಗೆ ತಪ್ಪಲಾರದೆ ಧಶರಥ ಸುಮ್ಮನಿದ್ದು, ರಾಮನ ವಿಯೋಗವನ್ನು ತಡೆಯಲಾರದೆ ಅದೇ ದುಃಖದಲ್ಲಿ ಸ್ವರ್ಗಸ್ತನಾಗುತ್ತಾನೆ.

No comments:

Post a Comment