Sunday, 9 August 2020

ಈ ವಿವಾಹಗಳಲ್ಲಿ ಧರ್ಮಶಾಸ್ತ್ರಗಳ ಪ್ರಕಾರ ಎಂಟು ವಿಧಗಳಿವೆ

🚩 *ಬ್ರಾಹ್ಮಣ ಪ್ರಿಯ* 🚩

*“ವಿಶೇಷೇಣ ವಹತೀತಿ ವಿವಾಹಃ”* 💕

ಈ ವಿವಾಹಗಳಲ್ಲಿ ಧರ್ಮಶಾಸ್ತ್ರಗಳ ಪ್ರಕಾರ ಎಂಟು ವಿಧಗಳಿವೆ ಅವು 

💟1) ಬ್ರಾಹ್ಮವಿವಾಹ 
💟2) ದೈವ 
💟3) ಆರ್ಷ 
💟4) ಪ್ರಜಾಪತ್ಯ 
💟5) ಅಸುರ 
💟6) ಗಾಂಧರ್ವ 
💟7) ರಾಕ್ಷಸ 
💟8) ಪೈಶಾಚ 

ವಿವಾಹವೆಂಬುದಾಗಿ ವಿಂಗಡಿಸಲಾಗಿದೆ.

💟 1 *ಬ್ರಾಹ್ಮ ವಿವಾಹ* :-ಕನ್ಯೆಯ ತಂದೆಯು ತಾನಾಗಿ ವರನಿಗೆ ಕನ್ಯಾದಾನಮಾಡುವುದು.

💟2. *ದೈವ ವಿವಾಹ*  :-ಯಜ್ಞಯಾಗಾದಿಗಳನ್ನು ಮಾಡುವಾಗ, ದೈವಿಕಸಂಭಂದಿ ಕಾರ್ಯಗಳನ್ನು           ಮಾಡುವಾಗ ಕನ್ಯಾದಾನಮಾಡುವುದು.

💟3. *ಆರ್ಷವಿವಾಹ*  :-ವರನಿಂದ ಒಂದು ಅಥವಾ ಎರಡು ಗೋಮಿಥುನವನ್ನು(ಹಸು ಮತ್ತು ಎತ್ತು)           ಪಡೆದು ಕನ್ಯಾದಾನವನ್ನು ಮಾಡುವುದು.

💟4. *ಪ್ರಜಾಪತ್ಯ ವಿವಾಹ:*-ವಧು-ವರರನ್ನು ಜೊತೆಯಾಗಿ ಬಾಳಿರಿ ಎಂದು ಹೇಳುತ್ತಾ ವರನನ್ನು            ಪೂಜಿಸಿ ಆದರಿಸಿ ಕನ್ಯಾದಾನ ಮಾಡುವುದು. ಈಗ ನಾವು ಭಾರತೀಯ ಸಂವಿಧಾನದ ಹಿಂದೂ ವಿವಾಹ ಪದ್ದತಿಯೂ ಇದೆ ಯಾಗಿದೆ.

💟5. *ಅಸುರ ವಿವಾಹ* :-ಶಕ್ತ್ಯಾನುಸಾರ ಕನ್ಯೆಯ ಮಾತಪಿತೃಗಳಿಗೆ ಹಾಗೂ ಸಂಬಂಧಿಕರಿಗೆ ಮತ್ತು             ಕನ್ಯೆಗೂ ಸಹ ಧನವನ್ನು ಕೊಟ್ಟು ಸ್ವಚ್ಛಂದದಿಂದ ಮದುವೆಯಾಗುವುದು. 

💟6. *ಗಾಂಧರ್ವ ವಿವಾಹ:*- ಕನ್ಯೆಯು ಹಾಗೂ ವರನು ತಾವೇ ಪರಸ್ಪರವಾಗಿ                                      ಇಚ್ಛಾಪೂರ್ವಕವಾಗಿ, ಅನ್ಯೋನ್ಯವಾಗಿ ಸಂಗಮಿಸಿ ಮಾಡಿಕೊಳ್ಳುವ ವಿವಾಹ

💟7. *ರಾಕ್ಷಸ ವಿವಾಹ* :-ವಿವಾಹಕ್ಕೆ ವಿರೋಧಿಸುವ ಕನ್ಯೆಯ ಸಂಬಂಧಿಗಳನ್ನು ಹಿಂಸಿಸಿ ಅವರ ಮೇಲೆ         ದೌರ್ಜನ್ಯಮಾಡಿ  ಕನ್ಯೆಯನ್ನು ಅಪಹರಿಸಿ ವಿವಾಹವಾಗುವುದು.

💟8. *ಪೈಶಾಚ ವಿವಾಹ:*-ಕನ್ಯೆಯ ಶೀಲಭಂಗಮಾಡಿ ಮದುವೆಯಾಗುವುದು ಇದು ಪಾಪಕಾರವು                ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.
 
🛑ಈ ವಿವಾಹಗಳಲ್ಲಿ ನಾವು ಈಗ ಆಚರಿಸುವ ಪ್ರಜಾಪತ್ಯ ವಿವಾಹದಲ್ಲಿರುವ ಆಚರಣೆಗಳು ಮತ್ತು ಅದರ ಹಿನ್ನಲೆಯ ಬಗ್ಗೆ ಗಮನ ಹರಿಸೋಣ. 

🛑ಹದಿನಾರು ಬಗೆಯ ವಿಧಿಗಳಿಂದ ವಿವಾಹವನ್ನು ಮಾಡಲಾಗುತ್ತದೆ. ಅವುಗಳೆಂದರೆ

🕉️1)   ಸಂಕಲ್ಪ - ಗಣಪತಿ ಪೂಜೆ, ಪುಣ್ಯಾಃ, ನಾಂದಿ
🕉️2)   ವರಪೂಜೆ
🕉️3)   ನಿಶ್ಚಿತಾರ್ಥ/ವಾಜ್ಞಿಶ್ಚಯ
🕉️4)   ಮಧುಪರ್ಕ
🕉️5)   ಗೌರೀಪೂಜೆ
🕉️6)   ನಿರೀಕ್ಷಣೆ/ಮುಹೂರ್ತ
🕉️7)   ಕನ್ಯಾದಾನ
🕉️8)   ಮಾಂಗಲ್ಯ
🕉️9)   ಅಕ್ಷತಾರೋಪಣ
🕉️10) ಲಾಜಾಹೋಮ
🕉️11)  ಸಪ್ತಪದಿ
🕉️12) ಐರಣೀ ದಾನ
🕉️13) ಅರುಂದತಿ ದರ್ಶನ
🕉️14) ಗೃಹಪ್ರವೇಶ
🕉️15) ದೇವತೋತ್ಥಾಪನ
🕉️16) ಔಪಾಸನ ಉಪಕ್ರಮ

🛑ಸಂಕಲ್ಪ - ಗಣಪತಿ ಪೂಜೆ, ಪುಣ್ಯಾಃ, ನಾಂದಿ
       ಇಲ್ಲಿ ವರನ ತಂದೆ-ತಾಯಿ ಮತ್ತು ಮನೆಯವರು ತಮ್ಮ ಗುರುಹಿರಿಯರಲ್ಲಿ ಹಾಗೂ ದೇವ ವರ್ಗ ಮತ್ತು ಪಿತೃವರ್ಗಗಳಲ್ಲಿ ಸರ್ವವೂ ಮಂಗಳವಾಗಲಿ ಎಂದು ಪ್ರಾರ್ಥಿಸಿ ಎಲ್ಲವೂ ನಿರ್ವಿಘ್ನವಾಗಿ ನೆಡೆಯಲಿ ಎಂದು ಮಹಾಗಣಪತಿಯನ್ನು ಪ್ರಾರ್ಥಿಸುತ್ತಾ ಕರ್ಮ ದೀಕ್ಷೆಯನ್ನು ಸ್ವೀಕರಿಸುವುದೇ ಸಂಕಲ್ಪ.
     
🛑ಪುಣ್ಯಾಃವೆಂದರೆ ಅಲ್ಲಿ ನೆರೆದಿರುವ ಪುರೋಹಿತವರ್ಗ ಮೂರು ವೇದಗಳ ಮಂಗಳ ಸಂಜ್ಞಕಗಳನ್ನು ಹೇಳಿ ಪುಣ್ಯಾ:, ಸ್ವಸ್ತಿ, ವೃಧ್ಧಿ, ಶ್ರೀಗಳು ಬಂದು ಒದಗಲಿ ಎಂದು ಆಶೀರ್ವದಿಸುವ ಕ್ರಮ.
     
🛑ನಾಂದಿ ಎಂದರೆ ನಮ್ಮ ಪೂರ್ವಿಕರ ಸ್ಮರಣಾರ್ಥ ಆಶೀರ್ವಾದ ಅಪೇಕ್ಷೆ ಅದಕ್ಕಾಗಿ ಮಾಡುವ ಪೂಜೆ ಇದರಲ್ಲಿ ಲೌಕಿಕ ಮತ್ತು ಅಲೌಕಿಕ  ಪಿತೃಸಂಭಂದಗಳನ್ನು ಆರಾಧಿಸುವುದು.

🛑ವರಪೂಜೆ
     ಕನ್ಯಾರ್ಥಿಯಾಗಿ ಬರುವ ವರನನ್ನು ಮತ್ತು ಅವರ ಬಂಧು ಬಳಗವನ್ನು ಆಹ್ವಾನಿಸಿ ವರನಿಗೆ ಉಪಚರಿಸುವ ವಿಧಾನವೇ ವರಪೂಜೆ.

🛑ನಿಶ್ಚಿತಾರ್ಥ/ವಾಜ್ಞಿಶ್ಚಯ
     ತ್ರಿಪುರುಷ ನಾಮಗಳನ್ನು(ತಂದೆ,ತಾತ ಮತ್ತು ಮುತ್ತಾತರ ಹೆಸರುಗಳು) ಹೇಳಿ ಇಂತಹ ಹೆಸರಿನ ವಧುವನ್ನು ಇಂತಹ ಹೆಸರಿನ ವರನಿಗೆ ದೇವ-ದ್ವಿಜ ಸನ್ನಿದಾನದಲ್ಲಿ ವಿವಾಹಮಾಡಿಕೊಡುತ್ತೇನೆ ಎಂದು ಕನ್ಯೆಯ ಪಿತೃವು ಹೇಳುವುದೇ ವಾಜ್ಞಿಶ್ಚಯ/ನಿಶ್ಚಿತಾರ್ಥ

🛑ಮಧುಪರ್ಕ
     ಮಧುವೆಂದರೆ ಜೇನುತುಪ್ಪ, ವರನನ್ನು ಆಸನದಲ್ಲಿ ಕೂರಿಸಿ ಅವನ ಕೈಕಾಲು ತೊಳೆದು ಆಚಮನಮಾಡಿಸಿ ಜೇನುತುಪ್ಪವನ್ನು ಕುಡಿಸುವುದೇ ಮಧುಪರ್ಕ

🛑ಗೌರೀಪೂಜೆ
     ಕನ್ಯೆಯು ತನಗೆ ಉತ್ತಮವಾದ ವರಸಿಗಲಿ ಮತ್ತು ದೀರ್ಘಸುಮಂಗಲಿತನವು ಲಭಿಸಲಿ ಎಂದು ಶಚಿದೇವಿಯನ್ನು ಪೂಜೆಸಿ ಸುಮಂಗಲಿಯರಿಗೆ ಬಾಗೀನವನ್ನು ನೀಡುವುದೇ ಗೌರೀಪೂಜೆ.

🛑ನಿರೀಕ್ಷಣೆ/ಮುಹೂರ್ತ
     ಶುಭ ಮುಹೂರ್ತದಲ್ಲಿ ಧಾನ್ಯರಾಶಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ವರ ಮತ್ತು ಪಶ್ಚಿಮಾಭಿಮುಖವಾಗಿ ನಿಂತಿರುವ ವಧು ಅಂತರ್ಪಟದಿಂದಾಚೆಗೆ ಮೊದಲ ಬಾರಿ ಪರಸ್ಪರ ಮುಖನೋಡುವುದೇ ನಿರೀಕ್ಷಣೆ. ಈ ಸಂದರ್ಭದಲ್ಲಿ ಜೀರ್ಗೆ,ಮಾಲೆಗಳನ್ನು ಪರಸ್ಪರ ಹಾಕುವುದು ಸಂಪ್ರದಾಯವಾಗಿದೆ.

🛑ಕನ್ಯಾದಾನ
     ವರನ ಗೋತ್ರ ಪ್ರವರ ತ್ರಿಪುರುಷರ ನಾಮವನ್ನು ಹೇಳಿ ಚತುಥ್ರ್ಯಂತ್ಯವಾಗಿ ವರನ ಹೆಸರು ಹೇಳಿ ಹಾಗೆಯೆ ಕನ್ಯೆಯ ಹೆಸರನ್ನು ದ್ವಿತಿಯಾಂತ್ಯವಾಗಿ ಹೇಳಿ ನಾರಾಯಣ ಸ್ವರೂಪಿಯಾದ ವರನಿಗೆ ಲಕ್ಷ್ಮಿಸ್ವರೂಪಿಯಾದ ವಧುವನ್ನು ಪ್ರಜೋತ್ಪಾದನೆಗಾಗಿ ಸಮರ್ಪಿಸುತ್ತಿದ್ದೇನೆ ಎಂದು ವಧುವಿನ ತಂದೆ ದಾರೆಯೇರೆಯುವುದೇ ಕನ್ಯಾದಾನ.

🛑ಮಾಂಗಲ್ಯ
     ಹರಿದ್ರಾ ಕುಂಕುಮ ಸೌಭಾಗ್ಯಾವತಿಯಾಗಿ ಶೋಭಿತವಾಗಿರುವ ವಧುವಿಗೆ  *“ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ| ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾಂಶತಂ||”* ಎಂದು ಮೂರು ಬಾರಿ ಉಚ್ಛರಿಸಿ ಕರಿಮಣಿ ಮಂಗಲ ಸೂತ್ರವನ್ನು ವಧುವಿನ ಕಂಠದಲ್ಲಿ ಧಾರಣೆ ಮಾಡುವುದೇ ಮಾಂಗಲ್ಯ.

🛑ಅಕ್ಷತಾರೋಪಣ
     ವಧು ವರರು ಆಯುವೃದ್ಧಿಕರವಾದ ಹರಿದ್ರಾಶ್ವೇತಾಕ್ಷತೆಯನ್ನು ಪರಸ್ಪರ ತಲೆಯ ಮೇಲೆ ಹಾಕಿ ಕೊಳ್ಳುವುದೇ ಅಕ್ಷತಾರೋಪಣ.

🛑ಲಾಜಾಹೋಮ
     ವರನು ವಧುವಿನ ತಮ್ಮನಿಂದ ಎರಡು ಮುಷ್ಠಿ ಲಾಜವನ್ನು ಪಡೆದು ಅದಕ್ಕೆ ಆಜ್ಯವನ್ನು ಬೆರೆಸಿ ವಧುವಿನ ಅಂಜಲಿಯನ್ನು ಹಿಡಿದು ಯಜ್ಞಕ್ಕೆ ಸಮರ್ಪಿಸಿ ನಂತರ ವಧು-ವರರು ಪಾಣಿಗ್ರಹಿತರಾಗಿ ಹೋಮದ ಪ್ರದಕ್ಷಿಣೆ ಮಾಡುವುದು ಲಾಜಾಹೋಮ.

🛑ಸಪ್ತಪದಿ
    ಅಗ್ನಿಯ ಈಶಾನ್ಯದಿಕ್ಕಿನಲ್ಲಿ ಸ್ಥಾಪಿಸಲ್ಪಟ್ಟ ಧಾನ್ಯದ ರಾಶಿಯ ಮೇಲೆ ವಧುವಿನ ಹೆಜ್ಜೆಯನ್ನು ವರನು ಇರಿಸುತ್ತಾ ಅನ್ನಕ್ಕಾಗಿ, ಬಲಕ್ಕಾಗಿ, ಧನಸಮೃಧ್ಧಿಗಾಗಿ, ಸುಖಕ್ಕಾಗಿ, ಪ್ರಜೆಗಳಿಗಾಗಿ, ಋತುಗಳಿಗಾಗಿ, ಅನುಗಾಲ ಮೈತ್ರಿಗಾಗಿ ಕ್ರಮವಾಗಿ ಧಾನ್ಯದ ಮೇಲೆ ಇಡುವ ಹೆಜ್ಜೆಯೆ ಸಪ್ತಪದಿ. ಭಾರತೀಯ ಸಂವಿಧಾನದಲ್ಲಿ ಹಿಂದೂ ವಿವಾಹ ಪದ್ದತಿಯಲ್ಲಿ ಈ ಸಪ್ತಪದಿ ಪ್ರಮುಖ ಸ್ತಾನ ಪಡೆದಿದೆ.

🛑ಐರಣೀ ದಾನ
     ವಧುವಿನ ತಂದೆ-ತಾಯಿ ವರನ ತಂದೆ ತಾಯಿಗೆ ದೀಪಗಳನ್ನು ದಾನಮಾಡಿ, ವಧುವಿನ ತಾಯಿಯು ಬಾಗೀನ ನೀಡಿ ವರನಿಗೆ ಒಪ್ಪಿಸುವುದೇ ಐರಣೀ ದಾನ.

🛑ಅರುಂದತಿ ದರ್ಶನ
           ವಿವಾಹ ವ್ರತದಲ್ಲಿರುವ ವಧು-ವರರು ಸಪ್ತಋಷಿ ನಕ್ಷತ್ರ ಪುಂಜ ಮತ್ತು ಅರುಂದತಿ ನಕ್ಷತ್ರ ದರ್ಶನನಂತರ ವಿವಾಹ ವ್ರತದಿಂದ ವಿಮುಕ್ತರಾಗುತ್ತಾರೆ.

🛑ಗೃಹಪ್ರವೇಶ
     ವಿವಾಹ ನಂತರ ವರನು ವಧುವಿನ ಬೈತಲೆಗೆ ಸಿಂಧೂರವನ್ನು ಹಚ್ಚಿಬೇಕು, ನಂತರ ಆಕೆ ಸುಮಂಗಲಿ, ಹೀಗೆ ಸುಮಂಗಲಿಯಾದ ವಧುವು ವರನ ಗೃಹವನ್ನು ಧಾನ್ಯತುಂಬಿದ ಸೇರನ್ನು ಒದ್ದು ಈ ಮನೆಯು ಲಕ್ಷ್ಮೀ ನಿವಾಸವಾಗಲಿ ಎಂದು ಪ್ರಾರ್ಥೀಸಿ ಪ್ರವೇಶಿಸುವುದೇ ಗೃಹಪ್ರವೇಶ.

🛑ದೇವತೋತ್ಥಾಪನ
     ಗೃಹಪ್ರವೇಶವಾದೊಡನೆ ವಿವಾಹ ಸಂಪನ್ನವಾಗುತ್ತದೆ, ಇದಾದ ನಂತರ ಆಹ್ವಾನಿಸಿದ ದೇವಗಣ ಮತ್ತು ಪಿತೃಗಣವನ್ನು ವಿಸರ್ಜಿಸಿ ಯತಾಸ್ಥಾನಕ್ಕೆ ಮರಳಿಸುವುದೇ ದೇವತೋತ್ಥಾಪನ.

🛑ಔಪಾಸನ ಉಪಕ್ರಮ
     ಬ್ರಹ್ಮಚಾರಿಯಾಗಿದ್ದ ವರನು ವಿವಾಹನಂತರ ಗೃಹಸ್ಥನಾಗುತ್ತಾನೆ ತದನಂತರ ಪತಿ ಪತ್ನಿಯರು ಒಟ್ಟಿಗೆ ಮಾಡುವ ಹೋಮವೇ ಔಪಾಸನ.

No comments:

Post a Comment