*ಜಪ ವಿಧಗಳು ಪರಿಣಾಮ*
*ಜಪ ಮತ್ತು ಜಪ ಮಾಲೆಯ ವಿಧಗಳು ಅನುಸರಿಸಿ ಜಪ ಮಾಡುವುದರಿಂದ ಆಗುವ ಪರಿಣಾಮಗಳು*
*"ಜಪ"*
ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ನಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ.
★ಈ ಕಾರಣದಿಂದಲೇ ಇವರು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ.
★ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ.
★ "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ.
“ "ಜ" ಕಾರೋ ಜನ್ಮ ವಿಚ್ಚೇಧನ
"ಪ" ಕಾರೋ ಪಾಪನಾಶಕ
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕ “
"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ
"ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,
ಜನ್ಮ ಪವಿತ್ರವಾಗಬೇಕಾದರೆ "ಜಪ" ಅವ್ಶಕವೆಂದಾಗುತ್ತದೆ.
★"ಜಪ" ಅಂದರೇನು?
ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸನಲ್ಲಾಗಲಿ ಧ್ಯಾನಿಸುವುದೇ "ಜಪ",
ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೆ ಕೇಳಿಸುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೋರಕುತ್ತದೆ.
★ಜಪಿಸುವ ಮಂತ್ರ ಬೀಜಮಂತ್ರವಾಗಲೀ, ತಾರಕ ಮಂತ್ರವಾಗಲೀ ಅಥವಾ ಇಷ್ಟ ದೇವತಾ ಮಂತ್ರವಾಗಲೀ ಗುರುಗಳಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.
★ಜಪದಲ್ಲಿ ಮೂರು ವಿಧಾನಗಳಿವೆ.
"ವಾಚಿಕ" - ಬೇರೆಯವರ ಕಿವಿಗೆ ಕೇಳಿಸುವಂತೆ ಪಠಿಸುವುದು.
"ಉಪಾಂಶು" - ತುಟಿಗಳು ಅಲುಗಾಡುತ್ತಿದ್ದರೂ ಶಬ್ದವು ಹೊರಗೆ ಕೇಳಿಸದಂತೆ ಜಪ ಮಾಡುವುದು
"ಮಾನಸಿಕ - ಮನಸ್ಸಿನಲ್ಲಿ ಧ್ಯಾನಿಸುವುದು.
★ "ವಾಚಿಕ" ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾಂಶು", ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.
★★★ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ★★★
*★★★ಗುರು ಎಂಬ ಶಬ್ದಕ್ಕೆ ಅರ್ಥ ★★★
"ಗು" ಎಂದರೆ ಕತ್ತಲು ಅಥವ ಅಜ್ನಾನ
"ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ.ಗುರುಉಪದೇಶ ಮಾಡುವುದರ ಜೊತೆಗೆಆಶಿರ್ವಾದವನ್ನೂ ಮಾಡುತ್ತಾನೆ.
ಜಪಸರದಲ್ಲಿ ೧೦೮ ಮಣಿಗಳಿರಬೇಕೆಂಬ ನಿಯಮವಿದೆ.
ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ.
ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ.
ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು.
ಜಪದಲ್ಲಿ ವಿಧಗಳಿವೆ★★★
ನಿತ್ಯಜಪ
ವೈಯಕ್ತಿಕ ಜಪ
ಪ್ರಾಯಶ್ಚಿತ ಜಪ
ಅಚಲ ಜಪ
ಜಲ ಜಪ
ಅಖಂಡ ಜಪ
ಪ್ರದಕ್ಷಿಣ ಜಪ
ಲಿಖಿತ ಜಪ
ಕಾಮ್ಯ ಜಪ
ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂರ್ಧಭಗಳಲ್ಲಿ ಪಠಿಸಲಾಗುತ್ತದೆ.
ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ.★★★
ಅವುಗಳೆಂದರೆ,
★ಜಪ ಮಾಡುವ ಸ್ಥಳವು ಪರಿಶುದ್ದವಾಗಿರಯೂ, ಶಾಂತ ವಾತಾವರಣದಿಂದ ಕೂಡಿರಬೇಕು.
★ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು.
ಮರದ ಮಣೆ, ಅಥವ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋದ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸಬೇಕು.
★ ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು.
★ ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ.
★ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. "ಅಸಂಖ್ಯಾ ಮಸುರಂ ಯಸ್ಮಾತ್, ತಸ್ಮಾದತೆ ಗಣೀಯತೆ ದೈವಂ" ಎಂಬುದಾಗಿ ತಿಳಿಸಲಾಗಿದೆ.
★ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರಬೆಕು.★
★★ಪ್ರತಿನಿತ್ಯವೂ ಜಪ ಮಡುವುದರಿಂದ ★★
★ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ.
★ಮನಸ್ಸನ್ನು ಭಗವಂತನ ಕಡೆಗೆ ಒಲೆಯುವಂತೆ ಮಾಡು ತ್ತದೆ.
★ ದುಷ್ಕಾರ‍್ಯಗಳನ್ನು ಮಾಡದಂತೆ ತಡೆಹಿಡಿಯುತ್ತದೆ.
★ ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿಯೊಂದು ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ.
★ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ.
★ ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ.
★ ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
★ ಆದರೆ ತೋರಾಣಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯಾವಾಗಲೀ, ಪುರುಷಾರ್ಥವಾಗಲೀ ದೊರಕುವುದಿಲ್ಲ.
★ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.★
★ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೆ ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.
*ಜಪ*
ಹೆಚ್ಚು ಹೆಚ್ಚು ನಾಮಜಪವನ್ನು ಮಾಡುವುದರಿಂದ ಆಗುವ ಪ್ರಯೋಜನಗಳು
ಒಂದು ಸಂಸ್ಕ್ರತ ಶ್ಲೋಕ ದಿಂದ ಇದನ್ನು ಸಂಪೂರ್ಣ ಅನ್ವಯ ಮಾಡುವ ಪ್ರಯತ್ನ. ಸತ್ಯ.ಪಿ.ಎ......
"ಜ" ಕಾರೋ ಜನ್ಮ ವಿಚ್ಛೇದಃ "ಪ" ಕಾರೋ ಪಾಪನಾಶಕಃ|
ತಸ್ಮಾಜ್ಜಪ ಇತಿಪ್ರೋಕ್ತೋ ಜನ್ಮ ಪಾಪವಿನಾಶಕಃ||
"ಜ" ಎನ್ನುವ ಅಕ್ಷರವು ಜನ್ಮಗಳನ್ನು ನಾಶಮಾಡುತ್ತದೆ ಎಂದು ತಿಳಿಸುತ್ತದೆ.
"ಪ" ಎನ್ನುವ ಅಕ್ಷರವು ಪಾಪಗಳನ್ನು ನಾಶ ಮಾಡುತ್ತದೆ ಎಂದು ಹೇಳುತ್ತದೆ.
ಜನ್ಮಗಳು ಇಲ್ಲದೆ ಮಾಡಿ ಇರುವ ಪಾಪಗಳನ್ನು ನಾಶ ಮಾಡಿ ಮೋಕ್ಷ ಜ್ಞಾನವನ್ನು ನೀಡುವ ದಾರಿ ಜಪ ಎಂದು ತಿಳಿಯಬಹುದು
ಯಾರು ನಿತ್ಯ ಭಗವಂತನ ನಾಮವನ್ನು ಜಪಿಸುತ್ತಾರೋ ಅವನ ಜವಾಬ್ದಾರಿ ಭಗವಂತನದ್ದು ಆಗಿರುತ್ತದೆ.
ಅಂದರೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಬುದ್ಧಿಯನ್ನು ಪ್ರಚೋದನೆ ಮಾಡಿತ್ತಾನೆ.
ಎಲ್ಲರೂ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಭಗವಂತನ ನಾಮವನ್ನು ಜಪ ಮಾಡಿ
ಕೃಷ್ಣಾರ್ಪಣ ಮಸ್ತು
No comments:
Post a Comment