#ಹಿಂದೂ_ಧರ್ಮ_ಶಾಸ್ತ್ರ_ಪುರಾಣಗಳ ಪ್ರಕಾರ ಮಹಿಳೆಯರು ಮತ್ತು ಪುರುಷರು ಮಾಡಬಹುದಾದ ಮತ್ತು ಮಾಡಬಾರದ ಕೆಲಸಗಳು ಯಾವುವು ಎಂದು ಈ ಕೆಳಗೆ ತಿಳಿಸ ಲಾಗಿದೆ .
ನಮಗೆ ಗೊತ್ತೋ ಇಲ್ಲ ಗೊತ್ತಿಲ್ಲದೆಯೋ ಹಲವಾರು ತಪ್ಪು ಕೆಲಸಗಳನ್ನು ಮಾಡಿ ಬಿಡುತ್ತೇವೆ . ಆಗಲೇ ನಮಗೆ ದಾರಿದ್ರ್ಯಾ ಮತ್ತು ಸಂಕಷ್ಟಗಳು ಬರುವುದು .
ಅದಕ್ಕಾಗಿ ಈ ಕೆಳಗಿನ ಅಂಶಗಳನ್ನು ಸದಾ ಪಾಲಿಸಿ ಕಷ್ಟಗಳಿಂದ ಪಾರಾಗಿ .
#ನಮ್ಮ_ಪುರಾಣಗಳಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಅದೇ ರೀತಿ ಆಚಾರ ವಿಚಾರ ಸಂಪ್ರದಾಯಗಳನ್ನು ಹೇಗೆ ಪಾಲಿಸಬೇಕು, ಏನು ಮಾಡಿದರೆ ಏನು ಪ್ರಯೋಜನವಾಗುತ್ತದೆ ಎಂಬಂತಹ ಸಂಗತಿಗಳನ್ನು ಹೇಳಲಾಗಿದೆ. ಅದೇ ರೀತಿ ಮಹಿಳೆಯರಿಗೂ ಸಾಕಷ್ಟು ಸೂಚನೆಗಳು ಪುರಾಣಗಳಲ್ಲಿ ಸಿಗುತ್ತವೆ. ಮುಖ್ಯವಾಗಿ ಮಹಿಳೆಯರು ಮಾಡಬಹುದಾದ ಹಾಗೂ ಮಾಡಬಾರದ ಕೆಲಸಗಳು ಯಾವುದು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಿದ್ದರೆ ಅವು ಏನು ಎಂದು ನೋಡೋಣ ಬನ್ನಿ…...
#ಮಹಿಳೆಯರು ಯಾವುದೇ ಕಾರಣಕ್ಕೂ ಕುಂಬಳಕಾಯಿ ಒಡೆಯಬಾರದು. ಯಾಕೆಂದರೆ ಗರ್ಭಚೀಲ ಕೆಳಕ್ಕೆ ಜಾರುವ ಅವಕಾಶಗಳು ಹೆಚ್ಚಾಗಿರುತ್ತವೆ .
#ಗ್ರಹಣ ಸಂದರ್ಭದಲ್ಲಿ ಭೂಮಿಯ ಆಕರ್ಷಣೆ ಶಕ್ತಿಯಲ್ಲಿ ಬದಲಾವಣೆ ಆಗುತ್ತದೆ. ಅದರ ಪ್ರಭಾವ ನಮ್ಮ ಮೇಲೂ ಇರುತ್ತದೆ. ಮುಖ್ಯವಾಗಿ ನಮ್ಮ ಹೊಟ್ಟೆಯಲ್ಲಿನ ಆಹಾರ ಪದಾರ್ಥಗಳು ಜೀರ್ಣವಾಗಲು ಬೇಕಾದ ಆಮ್ಲಗಳು ಬಿಡುಗಡೆಯಾಗಲ್ಲ. ಹಾಗಾಗಿ ಜೀರ್ಣವಾಸುಖಿನೋಭವಂತು
ಕಾರಣದಿಂದಲೇ ಗ್ರಹಣಕ್ಕೂ ಮುನ್ನ ಮೊದಲ ಮೂರು ಗಂಟೆಗಳ ಮೊದಲೇ ನಮ್ಮ ಹೊಟ್ಟೆಯಲ್ಲಿ ಏನೂ ಇರಬಾರದು ಎನ್ನುತ್ತಾರೆ.
#ನಿಮ್ಮ ಗಂಡ ಮತ್ತು ಮಕ್ಕಳು ಮಂಗಳವಾರದ ದಿನ ಕ್ಷೌರ ಗಡ್ಡವನ್ನು ಕೆರೆದುಕೊಳ್ಳುವಂತಹ ಕೆಲಸ ಮಾಡಲು ಬಿಡಬೇಡಿ. ಈ ಪ್ರಕ್ರಿಯೆ ದರಿದ್ರವನ್ನು ಉಂಟು ಮಾಡುತ್ತದೆ.
#ಒಳ್ಳೆಯ ಕೆಲಸಗಳನ್ನು ಶುಕ್ಲಪಕ್ಷದಿಂದ ಅಂದರೆ ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಮಾಡಬೇಕು.
#ದಿಂಬಿನ ಮೇಲೆ ಕೂರಬಾರದು. ಆದರೆ ಈ ಕಾಲದಲ್ಲಿ ಎಲ್ಲರೂ ಇದನ್ನು ಮಾಡುತ್ತಿದ್ದಾರೆ.
#ದುಃಖ ವಿಚಾರಿಸಲು ಬಂದವರನ್ನು ಆಹ್ವಾನಿಸಬಾರದು ಅದೇ ರೀತಿ ಅವರು ಹೋಗುವಾಗ ಹೋಗಿಬರುತ್ತೇನೆ ಎಂದು ಹೇಳಬಾರದು. ಈ ನಡುವೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬನ್ನಿ ಎಂದು ಆಹ್ವಾನಿಸಿ ಸ್ಥಳ ಕೊಟ್ಟು ಕೂರಿಸಿ ಕಾಫಿ ಕೊಟ್ಟು ತುಂಬಾ ಅತಿಥಿ ಮರ್ಯಾದೆಗಳನ್ನು ಮಾಡುತ್ತಿದ್ದಾರೆ. ಪರೋಕ್ಷವಾಗಿ ನಾವು ಅಶುಭವನ್ನು ಕೋರಿಕೊಳ್ಳಲು ಇದು ನಾಂದಿ ಆಗುತ್ತದೆ.
#ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಅದಕ್ಕೆ ಸ್ವಲ್ಪ ಅರಿಶಿಣವನ್ನು ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚಬೇಕು. ಅರಿಶಿಣ ಕ್ರಿಮಿನಾಶಕ.
#ಒಬ್ಬರು ಧರಿಸಿದ ಹೂವನ್ನು ಇನ್ನೊಬ್ಬರು ಧರಿಸಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೆಲಸ ಬಹಳಷ್ಟು ಕಡೆ ಸಹಜವಾಗಿದೆ.
#ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬೇಡಿ. ಇತ್ತೀಚೆಗೆ ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸುವವರ ಸಂಖ್ಯೆ ಅಧಿಕವಾಗುತ್ತಿದೆ.
#ಉಪ್ಪು, ಹುಣಸೆಹಣ್ಣು ಇವುಗಳನ್ನು ಯಾರಿಗೆ ಕೊಟ್ಟರೂ ಕೈಗೆ ಕೊಡಬಾರದು. ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಉಪ್ಪನ್ನು ಕೈಯಾರೆ ಬಡಿಸುವುದನ್ನು ಗಮನಿಸುತ್ತಿದ್ದೇವೆ.
#ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನ ಇಡಿ. ಇದು ಪಿತೃದೇವತೆಗಳಿಗೆ ಪ್ರೀತಿ. ಕಾಗೆಗೆ ನಾವು ಊಟ ಮಾಡುವ ಮುನ್ನ, ನಾಯಿಗೆ ಊಟ ಮಾಡಿದ ಬಳಿಕ ಇಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ನಾಯಿಗಳನ್ನು ಮುದ್ದಾಗಿ ಬೆಳೆಸಿ ಅದಕ್ಕೆ ಎಲೆಯಲ್ಲಿ ಊಟ ಇಡುವುದು ಹೆಚ್ಚಾಗಿದೆ.
#ತೆಂಗಿನ ಚಿಪ್ಪು ತಾಂಬೂಲ ನೀಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಇತರರಿಗೆ ಕೊಡಬೇಕು.
#ಮಹಿಳೆಯರು ಯಾವಾಗಲೂ ಕೂದಲು ಬಿಟ್ಟುಕೊಂಡು ಇರಬಾರದು. ಇದು ಜ್ಯೇಷ್ಠಾದೇವಿ ಸ್ವರೂಪ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲು ವಿಘ್ನವಾಗುತ್ತದೆ.
#ಶುಕ್ರವಾರದ ದಿನ ಸಂಬಳ ಬಂದ ಕೂಡಲೆ ಆ ಹಣದಿಂದ ಮೊದಲು ಉಪ್ಪನ್ನು ಕೊಳ್ಳಬೇಕು. ಈ ಕ್ರಿಯೆಯಿಂದ ಮುಂದೆಮುಂದೆ ಹಣ ಹೆಚ್ಚಾಗಿ ಬರುವ ಸಾಧ್ಯತೆಗಳಿರುತ್ತದೆ.
#ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು, ಕಾಲು ಅಲುಗಾಡಿಸುತ್ತಾ ಕೂರುವುದು, ಒಂಟಿಕಾಲಿನಲ್ಲಿ ನಿಲ್ಲುವುದು, ಸ್ಥಿರವಾಗಿ ನಿಲ್ಲದೆ ಅಲ್ಲಾಡುತ್ತಿರುವಂತಹ ಕೆಲಸಗಳನ್ನು ಮಾಡಬಾರದು. ಇದರಿಂದ ದರಿದ್ರ ಉಂಟಾಗುತ್ತದೆ. ಅದೇ ರೀತಿ ಆ ಭಾಗ ಬಲಹೀನವಾಗುವ ಸಾಧ್ಯತೆಗಳೂ ಇವೆ.
#ಯಾವಾಗಲೂ ಕೊಟ್ಟು ತಗೊಳ್ಳಲು ಬಲಗೈಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಎಡಗೈಯನ್ನು ಬಳಸಬಾರದು.
#ಸುಮಂಗಲಿ ಸ್ತ್ರೀಯರು ಮುನಿಸಿಕೊಂಡು ರಾತ್ರಿ ಹೊತ್ತು ಊಟ ಮಾಡದೆ ಮಲಗಬಾರದು.
ಮಹಿಳೆಯರು ಮುಟ್ಟಾದಾಗ ಹೂವನ್ನು ಇಟ್ಟುಕೊಳ್ಳಬಾರದು.
#ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದು. ಅದಕ್ಕೆ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು.
#ಯಾವಾಗಲೂ ನಮ್ಮ ಬಾಯಲ್ಲಿ ಪೀಡೆ, ದರಿದ್ರ, ಶನಿ, ಕಷ್ಟ ಎಂಬ ಪದಗಳನ್ನು ಜಾಸ್ತಿ ಉಪಯೋಗಿಸಬಾರದು.
ಮನೆಯಲ್ಲಿ ಧೂಳು, ಕಸ, ಜೇಡರ ಬಲೆ ಕಟ್ಟುವುದು ದರಿದ್ರ. ಹತ್ತು ದಿನಗಳಿಗೆ ಒಮ್ಮೆ , ಮಂಗಳ ಶುಕ್ರವಾರ ಅಲ್ಲದೆ ಬೇರೆ ದಿನಗಳಲ್ಲಿ ಧೂಳು, ಗೂಡುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
#ಶ್ರಾದ್ಧ ದಿನದಂದು ಮನೆಯ ಮುಂದೆ ರಂಗೋಲಿ ಹಾಕಬಾರದು. ಶ್ರಾದ್ಧದ ಬಳಿಕ ರಂಗೋಲಿ ಹಾಕಿ ಬಳಿಕ ಮನೆಯವರು ಊಟ ಮಾಡಬೇಕು.
#ದಿಂಬಿನ ಕವರ್, ಬೆಡ್ ಶೀಟ್‌ಗಳನ್ನು ಆಗಾಗ ಒಗೆಯುತ್ತಿರಬೇಕು. ಇವುಗಳಲ್ಲಿ ನಮಗೆ ಗೊತ್ತಿಲ್ಲದ ಸೂಕ್ಷ್ಮ ಕ್ರಿಮಿಗಳು ಸಾಕಷ್ಟು ಇರುತ್ತವೆ. ಇದರಿಂದ ನಮಗೆ ಹಾನಿಯುಂಟಾಗುತ್ತದೆ .
#ಸರ್ವಂ_ಶ್ರೀ_ಕೃಷ್ಣಾರ್ಪಣ_ಮಸ್ತು
🌺🌺🌺🌺🌺🌺🌺🌺🌺🌺🌺🌺🌺🌺🌺🌺
No comments:
Post a Comment