Tuesday, 8 December 2020

ಪಂಚಪ್ರಾಣ

ನಿಮಗಿದು ತಿಳಿದಿರಲಿ 

#ಪಂಚಪ್ರಾಣ - ಬಹುಷಃ ನೀವು ಆಗಾಗ ನಿಮ್ಮ ಆತ್ಮೀಯರಿಗೆ ಹೇಳಿರಬಹುದು ನೀವೆಂದರೆ ನನಗೆ ಪಂಚ ಪ್ರಾಣ ವೆಂದು .‌ ಪಂಚಪ್ರಾಣ ಅಂದರೆ ಐದು ಪ್ರಾಣ ಅಂತಲಾ ? ಪ್ರಾಣ ಅಂದರೆ ವಾಯು , ವಾಯು ಇದ್ದರೇನೇ ಈ ಭೌತಿಕ ದೇಹ ಉಸಿರಾಡುವುದು ಅಲ್ವಾ .  ಪಂಚಪ್ರಾಣವೆಂದರೆ ಪಂಚ ವಾಯುಗಳು . 

#ಪಂಚ‌ಪ್ರಾಣಗಳು ಎಂದರೇನು ಮತ್ತು ಅದರ ಮಹತ್ವ 

ಮೊದಲು ಪ್ರಾಣಾಅಂದರೆ ಏನು ಅನ್ನುವುದನ್ನು ತಿಳಿಯೋಣ  . 
#ಪ್ರಾಣ ಎಂದರೆ ವಾಯು (ಗಾಳಿ , ಉಸಿರು ), ವಾಯುವೇ ಪ್ರಾಣ ಎಂದು . 

ಈ ವಾಯುವು ಮಾನವನ ದೇಹದಲ್ಲಿ ಐದು ಮುಖ್ಯ ವಾಯುಗಳಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆ ಐದು ಮುಖ್ಯ ಕಾರ್ಯಗಳನ್ನು ಪಂಚ ಪ್ರಾಣಗಳು ಎಂದು ಕರೆಯುತ್ತೇವೆ.

ಪಂಚ ಅಂದರೆ ಐದು
ಪ್ರಾಣ ಎಂದರೆ ವಾಯು
ಜೀವಿಗಳ ದೇಹದಲ್ಲಿ ಇರುವ ಐದು ವಾಯುಗಳೇ ಪಂಚ ಪ್ರಾಣಗಳು . 

1. ಪ್ರಾಣ, 2. ಅಪಾನ, 3. ವ್ಯಾನ, 4. ಉದಾನ, 5. ಸಮಾನ 

1. #ಪ್ರಾಣ ವಾಯುವು  - ಮೂಗಿನ ಮುಖಾಂತರ ಹೃದಯವನ್ನು ಪ್ರವೇಶಮಾಡಿ ನಂತರ ದೇಹದ ಎಲ್ಲಾ ಭಾಗಗಳಿಗೂ ಇದು ರವಾನೆಯಾಗುತ್ತದೆ. ಅದಕ್ಕೆ ಇದನ್ನು ಪ್ರಾಣ ವಾಯು ಎಂದು ಮತ್ತು ಪಂಚ ಪ್ರಾಣಗಳಲ್ಲಿ ಇದು ಮೊದಲಿನದು.

2. #ಅಪಾನ ವಾಯುವು  - ಇದು ಪಂಚ ಪ್ರಾಣಗಳಲ್ಲಿ ಎರಡೆನೆಯದು. ಶ್ವಾಸಕೋಶ ಮತ್ತು ಇತರೆ ಕೆಲವು ಭಾಗಗಳಲ್ಲಿ ಇರುತ್ತದೆ ಮಲ ಮೂತ್ರಗಳ ವಿಸರ್ಜನೆಗೆ, ಈ ವಾಯುವು ಸಹಾಯವಾಗುತ್ತದೆ. ಇದು ಒಂದು ರೀತಿಯ ತಳ್ಳುವಿಕೆಯ (pushing) ರೀತಿಯಲ್ಲಿ ಸಹಾಯ ಆಗುತ್ತದೆ.ಅಪಾನ ವಾಯುವು  ಕರುಳುಗಳ ಮೂಲಕ ವ್ಯರ್ಜ್ಯವಾದ ಮಲವನ್ನು ಹೊರಕ್ಕೆ ತಳ್ಳುತ್ತದೆ ಅದಕ್ಕೆ ವಾಯು ಆಗಾಗ ಹೊರಬರುವುದು ಮಲ ವಿಸರ್ಜನೆ ಮಾಡುವಾಗ . 

3.#ವ್ಯಾನ ವಾಯುವು - ಇದು ಮೂರನೇ ವಾಯು. ಇದು ಕೈಕಾಲುಗಳ, ದೇಹದ ಭಾಗಗಳು ಅಂದರೆ ದೇಹದ ಭಾಗಗಳ ಸಂಕೋಚನೆ ವ್ಯಾಕೋಚನಗಳಿಗೆ ಸಹಾಯ ಆಗುತ್ತದೆ. 

4. #ಉದಾನ ವಾಯುವು  - ಇದು ನಾಲ್ಕನೇ ವಾಯು. ಇದು ವಾಕ್ಕಿಗೆ ಸಹಕಾರಿಯಾದ ವಾಯುವು. ಹಾಡು ಹಾಡುವಾಗ ಮಾತನಾಡುವುದು ಉದಾನವಾಯುವಿನ ಸಹಾಯದಿಂದ .‌

5. #ಸಮಾನ ವಾಯು - ಇದು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಯಾಗುತ್ತದೆ. ತಿಂದ ಆಹಾರ ಜೀರ್ಣವಾಗಲು ಸಹಾಯಕಾರಿ.

ಇವು ಐದು ರೀತಿಯ ಪ್ರಾಣಗಳು ಅಥವಾ ಪ್ರಾಣಯಾವುಗಳು...
ಇವುಗಳನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡವನು ಮಹಾನ್ ಯೋಗಿಯಾಗುತ್ತಾನೆ... ಮತ್ತು ಅತ್ಯಂತ ಆರೋಗ್ಯವಂತ ಮನುಷ್ಯನಾಗಿ ಇರುತ್ತಾನೆ .‌

ಧನ್ಯವಾದಗಳು 

ಮಮತಾ ಎಸ್ ಗೌಡ

No comments:

Post a Comment