🌺🌺 #ಶ್ರೀ #ಮಹಾಲಕ್ಷ್ಮೀ #ಅಷ್ಟಕಮ್ 🌺🌺
🌺 ನಮಸ್ತೇಸ್ಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ||
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺 ಭಾವಾರ್ಥ :- ಹೇ ಮಹಾಮಯಾರೂಪಿಣಿಯೇ! ಸೌಭಾಗ್ಯದ ಗದ್ದುಗೆಯ ಮೇಲೆ ವಿರಾಜಿಸುವವಳೇ, ದೇವಾನುದೇವತೆಗಳಿಂದ ಪೂಜಿಸಿಕೊಂಬವಳೇ; ನಿನಗೆ ನಮಸ್ಕರಿಸುವೆ. ಹೇ! ಶಂಖ, ಚಕ್ರ, ಗಧೆಗಳನ್ನು ಧರಿಸಿರುವಾಕೆಯೇ, ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌺 ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ ||
ಸರ್ವಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺ಭಾವಾರ್ಥ:- ಹೇ ದೇವಿ ಗರುಢ ವಾಹನೆಯೇ! ಕೋಲನೆಂಬ ರಕ್ಕಸನನ್ನು ನಾಶಗೊಳಿಸಿದವಳೇ, ನಿನಗಿದೋ ನಮಸ್ಕಾರಗಳು. ಎಲ್ಲಾ ಪಾಪಗಳನ್ನು ನಾಶ ಮಾಡುವ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌺 ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ ||
ಸರ್ವ ದು:ಖಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺 ಭಾವಾರ್ಥ:- ಹೇ! ದೇವಿ; ಸಮಸ್ತವನ್ನೂ ಬಲ್ಲಾಕೆಯೇ, ಎಲ್ಲವನ್ನೂ ಅನುಗ್ರಹಿಸುವಾಕೆಯೇ, ದುಷ್ಟರಿಗೆ ಭಯಂಕರ ರೂಪಿಣಿಯೂದವಳೇ, ಸಮಸ್ತ ದು:ಖವನ್ನು ಪರಿಹರಿಸುವವಳೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌺ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ||
ಮಂತ್ರಮೂರ್ತೇ ಸದಾ ದೇವೀ ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺 ಭಾವಾರ್ಥ:- ಹೇ ದೇವಿ; ಸಿದ್ಧಿ ಹಾಗೂ ಬುದ್ಧಿಗಳನ್ನು ಕರುಣಿಸುವವಳೇ, ಭೋಗ ಮತ್ತು ಮುಕ್ತಿಯನ್ನು ದಯಪಾಲಿಸುವಾಕೆಯೇ, ಮಂತ್ರಗಳಲ್ಲಿ ಅನುದಿನವೂ ನೆಲೆಸಿರುವವಳೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌺 ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ ||
ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺 ಭಾವಾರ್ಥ:- ಆದಿಯೂ ಅಂತ್ಯವೂ ಇಲ್ಲದಿರುವ ದೇವಿಯೇ, ಆದಿಶಕ್ತಿಯೇ, ಮಹೇಶ್ವರಿಯೇ, ಯೋಗವನ್ನು ಕರುಣಿಸುವಾಕೆಯೇ, ಯೋಗಮಾಯೆಯಿಂದ ಜನಿಸಿದಾಕೆಯೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌺 ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ ||
ಮಹಾಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺 ಭಾವಾರ್ಥ:- ಅಸಾಮಾನ್ಯಳೂ, ಸಾಮಾನ್ಯಳೂ, ಮಹಾರುದ್ರ ಸ್ವರೂಪಳೂ, ಮಹಾಶಕ್ತಿರೂಪಿಣಿಯೂ ಆಗಿರುವ ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌺 ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ ||
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺 ಭಾವಾರ್ಥ:- ಹೇ ದೇವಿ; ಕಮಲದ ಮೇಲೆ ಆರೂಢಳಾಗಿರುವಾಕೆಯೇ, ಪರಬ್ರಹ್ಮ ರೂಪಿಣಿಯೇ, ಪರಮೇಶ್ವರಿಯೇ, ಜಗತ್ತಿನ ತಾಯಿಯೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌺 ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ ||
ಜಗತ್ ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ ||
🌺 ಭಾವಾರ್ಥ:- ಶುಭ್ರವಾಗಿರುವ ಬಿಳಿಯ ವಸ್ತ್ರವನ್ನು ಧರಿಸಿರುವಾಕೆಯೇ, ವಿವಿಧಾಲಂಕಾರಗಳಿಂದ ಶೋಭಿಸುತ್ತಿರುವಾಕೆಯೇ, ಜಗತ್ತಿಗೆ ಆಧಾರಶಕ್ತಿಯಾಗಿರುವಾಕೆಯೇ, ಜಗತ್ತಿನ ತಾಯಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.
🌹🌹 ಶ್ರೀ ಮಹಾಲಕ್ಷ್ಮೀ ನಮೋಸ್ತುತೆ 🌹🌹
🌷🌿ಶುಭವಂದನೆಗಳು, ಶುಭೋದಯ, ಶುಭದಿನ, ಸರ್ವೇ ಜನಾಃ ಸುಖೀನೋ ಭವಂತು🌿🌷
No comments:
Post a Comment