Saturday, 11 April 2020

ಹಾವಿನ ತಲೆಯಲ್ಲಿ ನಾಗಮಣಿ ಹೇಗೆ ಉತ್ಪತ್ತಿಯಾಗುತ್ತದೆ?ಇದರ ಹಿಂದಿರುವ ರಹಸ್ಯವೇನು ಎಂದು ನಿಮಗೆ ಗೊತ್ತೇ ?

ಹಾವು ಎಂದಾಕ್ಷಣ ಬೆಚ್ಚಿ ಬೀಳುವ ಜನರೇ ಹೆಚ್ಚು. ಆದರೂ ಹಾವಿಗೆ ಹಾಲೆರೆಯುತ್ತಾರೆ. ಗುಡಿ ಕಟ್ಟಿಸಿ ದೇವರಂತೆ ಪೂಜಿಸುತ್ತಾರೆ. ಆದರೆ ವಿವಿಧ ಜಾತಿಯ ಹಾವುಗಳಲ್ಲಿ ನಾಗರ ಹಾವನ್ನು ಮಾತ್ರ ದೇವರಂತೆ ಪೂಜಿಸಲು ಕಾರಣವಿದೆ. ನಾಗರಹಾವಿಗೆ ಶಕ್ತಿಯುತವಾದ ನಾಗಮಣಿ ಇರುತ್ತದೆ ಎಂದು ಜನರ ನಂಬಿಕೆಯಾಗಿದೆ.

ಹಲವು ಚಲನಚಿತ್ರ ಹಾಗು ಧಾರಾವಾಹಿಗಳಲ್ಲಿ ನಾಗಮಣಿಯ ಬಗ್ಗೆ ತೋರಿಸುವ ಕಥೆಗಳನ್ನು ನೋಡಿದರೆ ಇದು ನಿಜವೇ ಎನ್ನುವ ಸಂಶಯ ಕೂಡ ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತದೆ.ನಮ್ಮ ಹಿರಿಯರು ಹೇಳುವ ಕತೆಗಳು ಹಾಗೂ ಪುರಾಣಗಳ ಪ್ರಕಾರ ನಾಗಿಣಿ ಮತ್ತು ನಾಗ ಮಣಿಗಳು ನಿಜವಾಗಿಯೂ ಇರಬಹುದೇ ಎನ್ನುವ ಆಶ್ಚರ್ಯ ಉಂಟಾಗುತ್ತದೆ.

ಇನ್ನೂ ನಾಗಮಣಿಯ ಕುರಿತು ಹೇಳುವುದಾದರೆ ವಿಷ ಚಿಮ್ಮುವ ನಾಗರಹಾವಿನಲ್ಲಿ ನಾಗ ಮಣಿಯು ಹೇಗೆ ಉಂಟಾಗುತ್ತದೆ ಇದರ ಹಿಂದಿರುವ ರಹಸ್ಯವೇನು ಮಣಿಯನ್ನು ಯಾರಾದರೂ ಅಳವಡಿಸಿರುತ್ತಾರೆಯೇ ಅಥವಾ ಮಣಿಯನ್ನು ಉತ್ಪತ್ತಿ ಮಾಡುವ ಶಕ್ತಿ ಹಾವಿನಲ್ಲಿ ನಿಜವಾಗಿ ಇದೆಯೇ ಈ ಶಕ್ತಿಯುತವಾದ ನಾಗಮಣಿಯ ನಮಗೆ ಹೇಗೆ ಸಿಗುತ್ತವೆ ನಾಗಿಣಿ ಮತ್ತು ನಾಗಮಣಿ ಈ ಕಾಲದಲ್ಲಿಯೂ ಇರುತ್ತವೆಯೇ ಇಂತಹ ಹಲವು ಪ್ರಶ್ನೆಗಳ ಬಗ್ಗೆ ಆಸಕ್ತಿಕರ ವಿಷಯಗಳನ್ನು ತಿಳಿಯೋಣ.

ನಾಗ ಎಂದರೆ ಗಂಡು ಹಾವು, ನಾಗಿಣಿ ಎಂದರೆ ಹೆಣ್ಣು ಹಾವು ಎಂದರ್ಥ. ಹಾವು ತಮ್ಮ ರೂಪವನ್ನು ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ವಿಷಪೂರಿತವಾದ ಹಾವಿಗೆ ಮಾತ್ರ ಯಾವುದಾದರೂ ಒಂದು ಜೀವಿಯೊಳಗೆ ಪ್ರವೇಶಿಸುವ ಶಕ್ತಿ ಇರುತ್ತದೆ. ಕೆಲವು ಶಾಸ್ತ್ರಗಳು ಹೇಳುವಂತೆ ಇವು ಹೆಚ್ಚಾಗಿ ಮಾನವನ ರೂಪ ತಾಳುತ್ತವೆ.

ನಾಗರ ಹಾವು ಹೊಂದಿರುವ ರತ್ನವನ್ನು ನಾಗಮಣಿ ಎನ್ನುವರು. ಇದು ಅತ್ಯಂತ ಶಕ್ತಿಯುತವಾದದ್ದು, ಬೆಲೆ ಬಾಳುವಂಥದ್ದು, ಇದು ಮಾತ್ರ ಶಕ್ತಿಯನ್ನು ಹೊಂದಿರುತ್ತದೆ ಎನ್ನುವುದು ಹಿಂದೂಗಳ ನಂಬಿಕೆಯಾಗಿದೆ. ಈ ನಾಗಮಣಿಯನ್ನು ಕದಿಯಲು ಹೋದ ಹಲವರಿಗೆ ಹಾವು ಕಡಿತದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಪುರಾಣಗಳು ಹೇಳುತ್ತವೆ. ನಾಗಮಣಿಯು ಹೇಗೆ ಉತ್ಪತ್ತಿಯಾಗುತ್ತದೆ ಎಂದು ಹಲವು ಪುಸ್ತಕಗಳಲ್ಲಿ ಈಗ ವಿವರಿಸಿ ತಿಳಿಸಿದ್ದಾರೆ.

ಪವಿತ್ರವಾದ ನವರತ್ನಗಳಲ್ಲಿ ನಾಗಮಣಿಯ ಕೂಡ ಒಂದು. ಸ್ವಾತಿ ನಕ್ಷತ್ರದಲ್ಲಿ ಬೀಳುವ ಮಳೆಯ ಹನಿಯ ನೀರು ನಾಗರ ಹಾವಿನ ಬಾಯಿಯೊಳಗೆ ಪ್ರವೇಶಿಸುವುದರಿಂದ ಮಣಿಯು ಉತ್ಪತ್ತಿಯಾಗುತ್ತದೆ. ನಾಗಮಣಿ ಹಲವು ಬಣ್ಣಗಳಲ್ಲಿ ಲಭಿಸುತ್ತದೆ. ಆದೂ ಹಳದಿ ಜೇನಿನ ಬಣ್ಣ, ತಿಳಿ ಹಸಿರು, ಕೆಂಪು ,ಬಿಳಿ ಬಣ್ಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತ.

ಕತ್ತಿಲಿನಲ್ಲಿ ಮಾತ್ರ ಹೊಳೆಯುವ ಶಕ್ತಿ ಈ ಮಣಿಗಳಿಗೆ ಇರುತ್ತದೆಯಂತೆ. ಇತಿಹಾಸ ಹೇಳುವಂತೆ ಭೂಮಿಯ ಮೇಲೆ ನೂರು ವರ್ಷಗಳ ಕಾಲ ಬದುಕುವ ನಾಗರಹಾವಿನಲ್ಲಿ ಮಾತ್ರವೇ ಈ ನಾಗ ಮಣಿಯು ಉತ್ಪತ್ತಿಯಾಗುತ್ತದೆ. ಒಂದು ಸಲ ನಾಗರ ಹಾವಿನಲ್ಲಿ ನಾಗಮಣಿ ಉಂಟಾದಲ್ಲಿ ಹಾವಿಗೆ ಅದ್ಭುತವಾದ ಶಕ್ತಿ ಸಾಮರ್ಥ್ಯಗಳು ಬರುತ್ತವೆ .

ಆಗ ಮಾತ್ರ ಈ ಹಾವು ಯಾವುದೇ ರೂಪಕ್ಕೆ ಬೇಕಾದರೂ ಬದಲಾಗಲು ಸಾಧ್ಯವಾಗುತ್ತದೆ. ಮಣಿಯನ್ನು ಹಾವಿನಿಂದ ದೂರ ಮಾಡಿದಲ್ಲಿ ಹಾವು ಸಾವನ್ನಪ್ಪುತ್ತದೆ. ಇನ್ನು ನಾಗಮಣಿಯನ್ನು ಹೊಂದಿರುವವರು ಅದೃಷ್ಟವಂತರು ಎಂದು ಭಾವಿಸುತ್ತಾರೆ. ಆ ವ್ಯಕ್ತಿಯು ಐಶ್ವರ್ಯವಂತನಾಗುತ್ತಾನೆ.

ಹಾವು ಮಣಿಯನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದ ಆ ಹಾವುಗಳನ್ನು ಮಾರಿ ಕೋಟಿಗಟ್ಟಲೆ ಹಣವನ್ನು ಗಳಿಸುವವರು ಸಹ ಇದ್ದಾರೆ. ಹಾವಿನ ತಲೆಯ ಒಳಗಾಗಲಿ, ತಲೆಯ ಮೇಲಾಗಲಿ, ಯಾವುದೇ ಮಣಿ ಇಲ್ಲವೆಂದು ಇದು ಬರೀ ಮೂಢನಂಬಿಕೆ ಎಂದು ಹೇಳುವವರು ಸಹ ಕೆಲವು ಜನರು ಇದ್ದಾರೆ.ಆದರೆ ಅದೇನೇ ಇರಲಿ ಈ ನಾಗ ಮಣಿಯನ್ನು ಕಣ್ಣಾರೆ ನೋಡಿರುವವರಿಗೆ ಮಾತ್ರ ಇದರ ಬಗ್ಗೆ ನಂಬಿಕೆ ಮತ್ತು ತಿಳುವಳಿಕೆ ಇರುತ್ತದೆ.


No comments:

Post a Comment