🙏ಶುಭ ಸುಪ್ರಭಾತ 🙏
**ಪರಮಾತ್ಮನ ಆಶ್ರಯ ದಲ್ಲಿ ಇದ್ದವರು ಖಂಡಿತವಾಗಿ ಸುಖವಾಗಿರುತ್ತಾರೆ**
ಒಂದು ಗುಬ್ಬಚ್ಚಿಯ ನಂಬಿಕೆಯ ಕತೆ - ಮಹಾಭಾರತದ ಕತೆಯಿಂದ .
🕊🕊🕊🕊🕊🕊🕊🕊🕊🕊🕊🕊🕊🕊
ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ಸೈನ್ಯದ ಮತ್ತು ಆನೆಗಳ ಕುದುರೆಗಳ ರಥದ ಚಲನೆಗೆ ರಣರಂಗದ ಸಿದ್ಧತೆಯು ನಡೆಯುತ್ತಿತ್ತು ,ಅದಕ್ಕಾಗಿ ಆನೆಗಳನ್ನು ದೊಡ್ಡ ದೊಡ್ಡ ಮರಗಳನ್ನು ಉರುಳಿಸಿ ನೆಲವನ್ನು ಸಮತಟ್ಟು ಮಾಡಲು ಉಪಯೋಗಿಸುತ್ತಿದ್ದರು ,
ಅಲ್ಲಿಯ ಒಂದು ಮರದಮೇಲೆ ಒಂದು ಸಣ್ಣ ಗುಬ್ಬಚ್ಚಿಯು ತನ್ನ ನಾಲ್ಕು ಮರಿಗಳೊಂದಿಗೆ ವಾಸಿಸುತ್ತಿತ್ತು, ಹಾಗಿರುವಾಗ ಅದು ವಾಸವಾಗಿದ್ದ ಮರವು ಉರುಳಿಸಾಲಾಗಿ ಗುಬ್ಬಚ್ಚಿಯ ಗೂಡು ತನ್ನ ಮರಿಗಳೊಂದಿಗೆ ನೆಲಕ್ಕೆ ಬಿತ್ತು
ದೇವರ ದಯೆಯಿಂದ ಮರಿಗಳು ಬದುಕಿ ಉಳಿದವು..ಆದರೆ ಮರಿಗಳು ಇನ್ನು ಸಣ್ಣದಾದ ಕಾರಣ ಅವುಗಳಿಗೆ ಹಾರಾಡಲು ತಿಳಿದಿರಲಿಲ್ಲ ಬಿದ್ದ ಮರಿಗಳಿಗೆ ತೊಂದರೆ ಆಗಲಿಲ್ಲ.
ದುರ್ಬಲ ಮತ್ತು ಹೆದರಿದ ಗುಬ್ಬಚ್ಚಿಯು ಸಹಾಯಕ್ಕಾಗಿ ಸುತ್ತ ನೋಡಲು ದೂರದಲ್ಲಿ ಶ್ರೀ ಕೃಷ್ಣ ಅರ್ಜುನನ ಜೊತೆಗೆ ಸಮರಾಂಗಣವನ್ನು ವೀಕ್ಷಿಸುವುದನ್ನು ಕಂಡಿತು.
ಅದನ್ನು ನೋಡುತ್ತಲೇ ಗುಬ್ಬಚ್ಚಿಯು ತನ್ನ ಸಣ್ಣ ಸಣ್ಣ ರೆಕ್ಕೆಗಳನ್ನು ಬಡಿಯುತ್ತ ಶ್ರೀ ಕೃಷ್ಣನ ರಥದ ಬಳಿಗೆ ಹೋಗಿ ,
ಹೇ ಕೃಷ್ಣ ನನ್ನ ಕಂದಮ್ಮಗಳನ್ನು ಉಳಿಸು , ಇಲ್ಲದಿದ್ದರೆ ನಾಳೆ ಯುದ್ಧ ಆರಂಭವಾದಾಗ ನನ್ನ ಮರಿಗಳು ಕಾಲಿನಡಿಗೆ ಬಿದ್ದು ನಾಶವಾಗುತ್ತವೆ....!!
ಆಗ ಶ್ರೀಕೃಷ್ಣ ನನಗೆ ನಿನ್ನ ಮಾತು ಕೇಳುತ್ತಿದೆ ...ಆದರೆ ನಾನು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಏನನ್ನು ಮಾಡಲಾರೆ. ಮಾಡಲಾಗುವುದಿಲ್ಲ ...!!!
ಆಗ ಗುಬ್ಬಚ್ಚಿಯು ನನಗೆ ತಿಳಿದಿದೆ ನೀನು ಜಗದ ರಕ್ಷಕ , ನಾನು ನನ್ನ ಮಕ್ಕಳ ಕ್ಷೇಮವನ್ನು ನಿನ್ನ ಕೈಯಲ್ಲಿಡುತ್ತಿದ್ದೇನೆ ಅವುಗಳನ್ನು ನೀನು ನಾಶ ಪಡಿಸಬಹುದು ಇಲ್ಲ ಪೊರೆದು ಸಲಹ ಬಹುದು , ಅದು ನಿನಗೆ ಬಿಟ್ಟಿದ್ದು...!!
ಆಗ ಶ್ರೀ ಕೃಷ್ಣ ಜನ ಸಾಮಾನ್ಯರಂತೆ ...ಕಾಲಚಕ್ರವು ತನ್ನಷ್ಟಕ್ಕೆ ತಾನೇ ಸುತ್ತುತ್ತದೆ ಯಾವುದೇ ಅಡೆತಡೆಗಳಿಲ್ಲದೆ...
ಹಾಗಾಗಿ ನಾನು ಏನನ್ನು ಮಾಡಲಾರೆ..
ಈ ಎಲ್ಲ ತತ್ವಶಾಸ್ತ್ರ ನಾನರಿಯೆ, ನಾನರಿತಿರುವುದು ನೀನೇ ಕಾಲ ಕಾಲನಿಯಾಮಕ ಜಗದ ರಕ್ಷಕ ಹಾಗಾಗಿ ನಾನು ನಿನಗೆ ಶರಾಣಾಗಿದ್ದೇನೆ ...!!
ಅದಕ್ಕೆ ಶ್ರೀಕೃಷ್ಣ ಹಾಗಿದ್ದರೆ ಮೂರು ವಾರಕ್ಕೆ ಬೇಕಾಗುವಷ್ಟು ಆಹಾರವನ್ನು ನಿನ್ನ ಗೂಡಿನಲ್ಲಿ ಸಂಗ್ರಹಿಸಿಡು...!!
ಇದನ್ನು ಅರಿಯದ ಅರ್ಜುನ ಗುಬ್ಬಚ್ಚಿಯನ್ನು ನೋಡಿ ಅದನ್ನು ರಥದ ಸನಿಹದಿಂದ ಓಡಿಸುವ ಪ್ರಯತ್ನದಲ್ಲಿರಲು .. ಕೃಷ್ಣ ಗುಬ್ಬಚ್ಚಿಯತ್ತ ಒಂದು ಮುಗುಳುನಗೆ ಬೀರಲು ಅದು ತಕ್ಕ ರೆಕ್ಕೆ ಬಡಿದು ಧನ್ಯವಾದಗಳನ್ನು ಹೇಳಿ ಸಂತೋಷದಿಂದ ಹಾರಿ ಹೋಯಿತು...!!
ಮತ್ತೆರಡು ದಿನಗಳ ಬಳಿಕ ಯಾವಾಗ ಯುದ್ಧಾರಂಭದ ಶಂಖನಾದ ಕೇಳಿಸಿತೋ ,, ಆಗ ಕೃಷ್ಣ ಅರ್ಜುನನಬಳಿ ಅವನ ಬಿಲ್ಲುಬಾಣವನ್ನು ಕೇಳಲು , ಆಶರ್ಯ ಚಕಿತನಾದ ಅರ್ಜುನ ..
ಹೌದು ನೀನು ಯುದ್ಧರಂಗದಲ್ಲಿ ಅಸ್ತ್ರವನ್ನು ಎತ್ತಲಾರೆ ಅಂದಿದ್ದೆ ಮತ್ತೇಕೆ? .... ಅಲ್ಲದೆ ತನ್ನಂತ ಮೇಧಾವಿ ಬಿಲ್ಲುಗಾರನಿರಲು ಕೃಷ್ಣನೇಕೆ ಅಸ್ತ್ರ ಹಿಡಿಯಬೇಕು?... ಎನ್ನುವ ಮನೋಭಾವದಿಂದ ...
ಹೇ ಕೃಷ್ಣ ಹೇಳು ಎಲ್ಲಿ ಯಾರನ್ನು ಹೊಡೆದುರುಳಿಸಬೇಕು...?
ಅರ್ಜುನನ ಕೈಯಿಂದ ಬಿಲ್ಲುಬಾಣ ತೆಗೆದುಕೊಂಡ ಕೃಷ್ಣ ದೂರದಲ್ಲಿದ್ದ ಆನೆಯತ್ತ ಗುರಿಹಿಡಿದು ಅದನ್ನು ಹೊಡೆದುರುಳಿಸದೆ ಅದರ ಕುತ್ತಿಗೆಯ ಗಂಟೆ ಗೆ ಗುರಿಯಿಟ್ಟು ಅಲ್ಲಿ ಕಿಡಿಗಳು ಹಾರುವಂತೆ ಮಾಡಿದ .ಘಂಟೆ ಕೆಳಗೆ ಬೀಳುವಂತೆ ಮಾಡಿದ ..
ಸುಲಭವಾಗಿ ಹೊಡೆಯಬೇಕಾದುದನ್ನು ಹೊಡೆಯದೆ ತಪ್ಪುಗುರಿಯಿಟ್ಟದ್ದನ್ನು ಕಂಡ ಅರ್ಜುನ ...
ನಾನು ಹೊಡೆಯಲೇ....
ಅದಕ್ಕುತ್ತರಿಸದೆ ಕೃಷ್ಣ ಆತನ ಬಿಲ್ಲುಬಾಣವನ್ನು ಆತನಿಗೆ ಹಿಂದಕ್ಕೆ ಕೊಟ್ಟು ಅದರ ಅಗತ್ಯವಿಲ್ಲ ನನ್ನ ಕೆಲಸವಾಯಿತು..ಅನ್ನುತ್ತಲೇ..
ಹೌದು ಯಾತಕ್ಕಾಗಿ ಆನೆಗೆ ಗುರಿಯಿಟ್ಟೆ ಕೇಶವ....?
ಈ ಆನೆಯು ಆ ಗುಬ್ಬಚ್ಚಿ ವಾಸವಾಗಿದ್ದ ಮರವನ್ನು ಉರುಳಿಸಿತ್ತು.
ಹೌದಾ ಯಾವ ಗುಬ್ಬಚ್ಚಿ ... ಮತ್ತೆ ಆನೆಗೆ ಯಾವುದೇ ಹಾನಿಯಾಗಲಿಲ್ಲ ಆದರೆ ಅದರ ಕುತ್ತಿಗೆಯ ಘಂಟೆ ಹೋಯಿತು.?..ಎಂದು ಕೇಳಲು...
ಕೃಷ್ಣ ಮಾತನ್ನು ತಳ್ಳಿಹಾಕುತ್ತ ಶಂಖವನ್ನು ಊದುವಂತೆ ಹೇಳಲು... ಶಂಖನಾದದೊಂದಿಗೆ ..
ಯುದ್ಧ ಆರಂಭವಾಯಿತು...
ಸಹಸ್ರಾರು ಜೀವಹಾನಿಯಾಯಿತು ಆ ಕುರುಕ್ಷೇತ್ರದ 18 ದಿನದ ಯುದ್ಧದಲ್ಲಿ ...
ಪಾಂಡವರು ವಿಜಯಶಾಲಿಗಳಾದರು...
ಮತ್ತೆ ಶ್ರೀಕೃಷ್ಣ ಅರ್ಜುನನ ಜೊತೆಗೆ ಯುದ್ಧ ಭೂಮಿಯ ವೀಕ್ಷಣೆಗೆ ಹೊರಟ..
ಹಲವು ಹೆಣಗಳು ಅವುಗಳ ಅಂತ್ಯಕ್ರಿಯೆಗೆ ಕಾಯುವಂತಿತ್ತು...
ರಣರಂಗದಲ್ಲಿ ತುಂಡಾದ ಕೈಗಳು ಜರ್ಜರಿತವಾದ ದೇಹಗಳು. ಅರೆಬರೆ ಸತ್ತ ಆನೆಗಳು...
ಒಮ್ಮೆಲೇ ಕೃಷ್ಣ ಅಲ್ಲೇ ನಿಂತು ಅಲ್ಲಿ ಬಿದ್ದಿರುವ ಆನೆಯ ಘಂಟೆಯತ್ತ ನೋಡಿದ ...
ಹೇ ಅರ್ಜುನ ನನಗಾಗಿ ಆ ಆನೆಯ ಘಂಟೆಯನ್ನು ಎತ್ತು..
ಶ್ರೀಕೃಷ್ಣನ ಆದೇಶ ವಿಶೇಷವಲ್ಲದಿದ್ದರೂ ಏನೋ ಅರ್ಥವಾದವನಂತೆ .. ಈ ಯುದ್ಧಭೂಮಿ...ವಿಶಾಲವಾದ ಕ್ಷೇತ್ರದಲ್ಲಿ ಸಾಕಷ್ಟು ಇತರ ವಿಷಯಗಳನ್ನು ತೆರವುಗೊಳಿಸುವ ಅಗತ್ಯವಿದೆ.. ಹಾಗಿರುವಾಗ ಈ ಒಂದು ಸಣ್ಣ ಘಂಟೆಯನ್ನು ಯಾಕೆ ಎತ್ತಲು ಹೇಳಿದ ಎನ್ನುವಂತೆ ಕೃಷ್ಣನತ್ತ ಪ್ರಶ್ನಿಸುವಂತೆ ನೋಡಲು...!¡
ಹೌದು ಇದು ಅದೇ ಘಂಟೆ... ನಾನು ಆನೆಗೆ ಹೊಡೆದು ಉರುಳಿಸಿದ ಘಂಟೆ ..
ಅರ್ಜುನನು ಮರುಮಾತಿಲ್ಲದೆ ಘಂಟೆಯನ್ನು ಎತ್ತಲು ಬಾಗಿ ಅದನ್ನು ಎತ್ತಿದಾಗ .. ಅರ್ಜುನನ ಪ್ರಪಂಚವೇ ಬದಲಾಯಿತು....ನೋಡುತ್ತಿದ್ದಂತೆ...
ಒಂದು. ಎರಡು ಮೂರು ನಾಲ್ಕು ... ನಾಲ್ಕು ಮರಿಗಳು ಹಾರುತ್ತಲೇ ತಾಯಿ ಗುಬ್ಬಚ್ಚಿಯು ಹಾರಿಯೂ ಹಾರಿತು. .
ಸಂತಸದಲ್ಲಿ ಹಾರುತ್ತಲೇ ಶ್ರೀಕೃಷ್ಣನಿಗೆ ಸುತ್ತು ಬಂದು ತನ್ನ ಕೃತಜ್ಞತೆಯನ್ನು ತೋರಿಸಿತು..
ಆ ಒಂದು ಘಂಟೆ 18 ದಿನ.....
ಗುಬ್ಬಚ್ಚಿಮತ್ತು ಸಂಸಾರಕ್ಕೆ ರಕ್ಷಣೆ ಕೊಟ್ಟಿತು .
ಕ್ಷಮಿಸು ಕೃಷ್ಣ .. ನಿನ್ನನ್ನು ನರರೂಪದಲ್ಲಿ ಕಂಡು ಸಾಮಾನ್ಯ ಮನುಜರಂತೆ ನಾನು ನೀನಾರೆಂಬುದನು ಮರೆತೆ...
ಮಹಾಭಾರತದಲ್ಲಿ ಕೇಳಿದ ವಿಷಯ ...
ಲಾಕ್ ಡೌನ್ ಸಮಯದಲ್ಲಿ ಉಚಿತವೆನಿಸಿತು. ಘಂಟೆಯೊಳಗೆ ಕುಳಿತು ಜೀವ ಬದುಕಿಸಿಕೊಂಡಂತೆ... ಮನೆಯೊಳಗಿದ್ದು ಅಮೂಲ್ಯ ಜೀವವನ್ನು ಉಳಿಸಿಕೊಳ್ಳೋಣ ...
🙏 ಶ್ರೀ ಕೃಷ್ಣಾರ್ಪಣಮಸ್ತು 🙏
No comments:
Post a Comment