ಆದ್ರೆ 500 ಬಿಸಿಯಿಂದ 300 ಏಡಿ ಮಧ್ಯದಲ್ಲಿ ಬಂದ ಸಾಹಿತ್ಯಗಳಲ್ಲಿ ಈ ದೇವಾಲಯದ ಉಲ್ಲೇಖಗಳಿವೆ ಅಂತ ಹೇಳ್ತಾರೆ 9 ನೇ ಶತಮಾನದ ಕವಿ ನಮಾಲ್ವರ್ ತನ್ನ ಕವನಗಳಲ್ಲಿ ಈ ದೇವಾಲಯದ ಬಗ್ಗೆ ತುಂಬಾ ಅದ್ಭುತವಾಗಿ ಬರೆದಿದ್ದಾರಂತೆ, ಆಗಿನ ಕಾಲದಲ್ಲಿ ಈ ದೇವಾಲಯವನ್ನು ದೇವಾಲಯದ ಹತ್ತಿರ ಇರುವ ಕೆಲವು ಸ್ಥಳಗಳನ್ನು ಪ್ಯೂರ್ ಗೋಲ್ಡ್ ನಿಂದ ನಿರ್ಮಾಣ ಮಾಡಿರುವುದರಿಂದ ಈ ದೇವಾಲಯವನ್ನು ಬಂಗಾರದ ದೇವಾಲಯ ಅಂತ ಕೂಡ ಕರೀತಾರೆ.
ತಿರುವಂಕೋರ್ ರಾಜ ಕುಟುಂಬದ ಆಳ್ವಿಕೆಯಲ್ಲಿದ್ದ ಈ ದೇವಾಲಯ ಮಹಾ ವಿಷ್ಣುವನ್ನು ಪೂಜಿಸುವ ನೂರಾ ಎಂಟು ದಿವ್ಯ ಕ್ಷೇತ್ರಗಳಲ್ಲಿ ಒಂದು ಆದ್ರೆ ಈ ದೇವಾಲಯದಲ್ಲಿರುವ ಆರು ಗ್ರೌಂಡ್ ಪ್ಲೋರ್ ಕೊಠಡಿಗಳು ಪ್ರಪಂಚ ವನ್ನು ತನ್ನ ಕಡೆ ಸೆಳೆಯೊ ರೀತಿ ಮಾಡುತ್ತೆ.
2011ರಲ್ಲಿ ಸುಪ್ರೀಂ ಕೋರ್ಟ್ ಆದೇಶದಿಂದ ಆ ಆರು ಕೊಠಡಿಗಳನ್ನು ಓಪನ್ ಮಾಡ್ತಾರೆ ಈ ಆರು ಕೊಠಡಿಗಳಿಗೆ ಎ , ಬಿ , ಸಿ , ಡಿ , ಈ , ಎಫ್ ಎನ್ನುವ ಹೆಸರಿಡ್ತಾರೆ ಆದ್ರೆ ಈ ಆರು ಕೊಠಡಿಗಳಲ್ಲಿ ಬಿ ಕೊಠಡಿಯನ್ನು ಮಾತ್ರ ಓಪನ್ ಮಾಡಲಿಲ್ಲ ಉಳಿದ ಐದು ಕೊಠಡಿಗಳಲ್ಲಿ ಸಿಕ್ಕ ನಿಧಿ ಪ್ರಪಂಚವನ್ನೇ ಆಶ್ಚರ್ಯ ಪಡುವ ರೀತಿ ಮಾಡುತ್ತೆ ಸಾವಿರಾರು ವಜ್ರ ವೈಢೂರ್ಯಗಳು ಚಿನ್ನದ ನಾಣ್ಯಗಳು ವಜ್ರದ ಕಿರೀಟಗಳು ಮುತ್ತು ರತ್ನಗಳು ಮೂರೂವರೆ ಅಡಿ ಮಹಾವಿಷ್ಣುಮೂರ್ತಿ ವಿಗ್ರಹ ರೋಮ್ ನೆಪೋಲಿಯನ್ ಕಾಲದ ನಾಣ್ಯಗಳು ಸಿಕ್ಕಿವೆ.
ಒಂದು ನಾಣ್ಯ ಎರಡು ಕೋಟಿಗಿಂತ ಹೆಚ್ಚು ಬೆಲೆ ಬಾಲ್ಯೂತ್ತಂತೆ ಇನ್ನು ಎಷ್ಟೊ ಊಹಿಸಲಾರದ ಬಂಗಾರ ವಜ್ರಗಳು ಸಿಕ್ಕಿವೆ ಇವುಗಳ ಬೆಲೆ ಸುಮಾರು ಒಂದು ಟ್ರಿಲಿಯನ್ ಡಾಲರ್ ಇರಬಹುದು ಅಂತ ಅಂದಾಜು ಮಾಡಿದ್ದಾರೆ ನಂತರ ಇದು ನಮ್ಮ ದೇಶದಲ್ಲೇ ಅತಿ ಹೆಚ್ಚು ಸಂಪತ್ತು ಇರುವ ದೇವಾಲಯವಾಗಿ ಪ್ರಸಿದ್ಧಿಯಾಗುತ್ತದೆ, ಇನ್ನು ಮಿಸ್ಟ್ರೀಯಾಗಿ ಉಳಿದಿರುವ ಬಿ ಕೊಠಡಿ ಬಗ್ಗೆ ಹೇಳ್ಬೇಕು ಅಂದ್ರೆ ಈ ಕೊಠಡಿಗೆ ಉಳಿದ ಕೊಠಡಿಗಳ ರೀತಿ ಲಾಕ್ ಸಿಸ್ಟಮ್ ಇಲ್ಲ ಚರಿತ್ರೆ ಏನು ಹೇಳುತ್ತೆ ಅಂದರೆ ಬಿ ಕೊಠಡಿಯನ್ನು ನಾಗ ಬಂಧದಿಂದ ಮುಚ್ಚಿ ಹಾಕಿದ್ದಾರೆ ಅಂತ.
ನಾಗಬಂಧ ಅಂದ್ರೆ ಪುರಾತನ ಕಾಲದ ಪವರ್ ಫುಲ್ ಲಾಕಿಂಗ್ ಮ್ಯಾಕಾನಿಸಮ್ ಅಂದುಕೊಳ್ಳೋಣ ಆದರೆ ಇದು ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೆ ಮಂತ್ರಗಳ ಸಹಾಯದಿಂದ ಮುಚ್ಚಿರುವ ವಿಧಾನ ಇದು ತುಂಬಾ ಅಪಾಯ ಕೂಡ ಈ ಬಿ ಕೊಠಡಿಯ ಬಾಗಿಲ ಮೇಲೆ ಕೆತ್ತಿರುವ ಎರಡು ನಾಗರಹಾವುಗಳು ಈ ನಾಗ ಬಂಧ ಶಕ್ತಿಯಿಂದ ಆ ಕೊಠಡಿಯನ್ನು ರಕ್ಷಿಸುತ್ತಿವೆ ಅಂತ ಹೇಳ್ತಾರೆ. ತುಂಬಾ ಶಕ್ತಿಯುತವಾದ ಗರುಡ ಮಂತ್ರವನ್ನು ಉಪಯೋಗಿಸಿದಾಗ ಮಾತ್ರ ಈ ನಾಗಬಂಧ ಬಿಡುಗಡೆಯಾಗುತ್ತಂತೆ ಆ ಗರುಡ ಮಂತ್ರ ಸರಿಯಾಗಿ ಗೊತ್ತಿರುವ ಮಹಾ ಸಾಧುಗಳಿಗೆ ಮಾತ್ರ ಈ ಕೊಠಡಿಯನ್ನು ತೆಗೆಯಲು ಸಾಧ್ಯವಾಗುತ್ತದೆ ಇದು ಸಾಮಾನ್ಯ ಜನರಿಂದ ಆಗುವ ಕೆಲಸವಲ್ಲ.
ಆ ಗರುಡ ಮಂತ್ರವನ್ನು ಬಿಟ್ಟು ಬೇರೆ ರೀತಿಯಲ್ಲಿ ಈ ಬಾಗಿಲನ್ನು ತೆರೆಯಲು ಸಾಧ್ಯವಿಲ್ಲ ಒಂದು ವೇಳೆ ಪ್ರಯತ್ನ ಮಾಡಿದರೆ ತೆರೆಯುವುದಕ್ಕೆ ಪ್ರಯತ್ನ ಮಾಡೋ ವ್ಯಕ್ತಿಗಳು ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಆಧುನಿಕ ಕಾಲದಲ್ಲಿ ನಾಗ ಬಂಧವನ್ನು ಹಾಕುವುದಾಗಲಿ ತೆಗೆಯುವರಾಗಲಿ ಯಾರೂ ಇಲ್ಲ ಎಲ್ಲಾ ಫೇಕ್ ಮಂತ್ರವಾದಿಗಳು ಬಾಬಾಗಳೆ ಇದ್ದಾರೆ, ಈ ಒಂದು ಬಿ ಕೊಠಡಿಯಲ್ಲಿ ಉಳಿದ ಐದು ಕೊಠಡಿಗಳಿಗಿಂತ ಬೆಲೆಬಾಳುವ ವಸ್ತುಗಳು ಇರೋದ್ರಿಂದ ಇದಕ್ಕೆ ನಾಗಬಂಧ ಇದೆ ಅಂತ ಕೆಲವರು ಏನು ಅಪಾಯ ಇರುವುದರಿಂದ ಮಂತ್ರಗಳನ್ನು ಬಳಸಿ ನಾಗ ಬಂಧ ಹಾಕಿದ್ದಾರೆ ಎಂದು ಕೆಲವರು ವಾದ ಮಾಡ್ತಾರೆ ಈ ಬಿ ಕೊಠಡಿಯನ್ನು ಬಲವಂತವಾಗಿ ಖಂಡಿತ ಯಾವುದೋ ಒಂದು ದುರಂತ ನಡೆಯುತ್ತದೆ ಅಂತ ನಂಬುವವರೇ ತುಂಬಾ ಜನ ಇದ್ದಾರೆ.
ಕೆಲವು ಜನರ ನಂಬಿಕೆ ಏನು ಅಂದ್ರೆ ಈ ಬಿ ಕೊಠಡಿಯ ಒಳಗೆ ಇನ್ನೊಂದು ಕೊಠಡಿ ಇದೆ ಅಂತ ಅದರ ಒಳಗೆ ಹೋದ್ರೆ ಪ್ಯೂರ್ ಗೋಲ್ಡ್ನಿಂದ ಮಾಡಿದ ಕೋಣೆ ಇರುತ್ತೆ ಅಂತ ಅಲ್ಲಿನ ನಿಜವಾದ ರಹಸ್ಯ ಅಡಗಿದೆ ಅಂತ ಹೇಳ್ತಿದ್ದಾರೆ, ಅಲ್ಲಿ ಮಾನವರ ಊಹೆಗೆ ಸಿಗದ ಅದ್ಭುತ ಅಡಗಿದೆ ಅಂತ ಹೇಳುವವರು ತುಂಬಾ ಜನ ಇದ್ದಾರೆ ಅದಕ್ಕೆ ಕೇರಳ ಗೌರ್ಮೆಂಟ್ ಪದ್ಮನಾಭ ಸ್ವಾಮಿ ದೇವಾಲಯವನ್ನು ಸ್ಪೆಷಲ್ ಸೆಕ್ಯುರಿಟಿ ಝೋನ್ ಅಂತ ಡಿಕ್ಲೇರ್ ಮಾಡುತ್ತೆ. ಮೆಟಲ್ ಡಿಟೆಕ್ಟರ್, ಎಕ್ಸ್ ರೇ ಬ್ಯಾಗೇಜ್ ಸ್ಕ್ಯಾನರ್, ಸೆಕ್ಯುರಿಟಿ ಕ್ಯಾಮರಾ ನಿಂದ ಸುಮಾರು 250 ಜನ ಪೊಲೀಸ್ ಫೋರ್ಸ್ ನಿಂದ ದೇವಾಲಯವನ್ನು ರಕ್ಷಣೆ ಮಾಡುತ್ತಿದ್ದಾರೆ ಈ ಆಧುನಿಕ ವಿಜ್ಞಾನ ಅರ್ಥ ಮಾಡಿಕೊಳ್ಳಲಿಕ್ಕೆ ಆಗದ ವಿಷಯಗಳು ಇನ್ನೂ ಇದೆ ಅಂತ ತಿಳಿದುಕೊಳ್ಳಲು ಈ ಮಿಸ್ಟ್ರಿ ಒಂದು ಉದಾಹರಣೆ ಇದೆಲ್ಲ ನಿಜನೋ ಸುಳ್ಳೋ ಅನ್ನೋದನ್ನು ಪಕ್ಕಕೆ ಇಟ್ರೆ ತಕ್ಷಣಕ್ಕೆ ಇದೊಂದು ದೊಡ್ಡ ಮಿಸ್ಟರಿನೆ, ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಸಂಬಂಧಪಟ್ಟ ಮಾಹಿತಿ.
No comments:
Post a Comment