Thursday, 23 April 2020

ಶಂಖದ_ಬಗ್ಗೆ_ಸ್ವಲ್ಪ_ಮಾಹಿತಿ

#ಶಂಖದ_ಬಗ್ಗೆ_ಸ್ವಲ್ಪ_ಮಾಹಿತಿ 

ಶಂಖನಾದದಿಂದ ಬರುವ ಕಂಪನ ಭೂಮಿಯಲ್ಲಿರುವ ಅನೇಕ ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ.. ಪರಿಸರ ಮಾಲಿನ್ಯದಿಂದ ಒಜೋನ್ ಪದರಗಳಲ್ಲಿ ರಂದ್ರಗಳುಂಟಾಗುವುದು ಸಹಜ... ಶಂಖನಾದದಿಂದ ತಕ್ಕಮಟ್ಟಿಗೆ ಒಜೋನ್ ಪದರಗಳಲ್ಲಿ ರಂಧ್ರಗಳುಂಟಾಗದಂತೇ ತಡೆಯಬಹುದೆಂದು ವಿಜ್ಞಾನಿಗಳು ತಿಳಿಸಿದ್ದಾರೆ.. ಹಾಗೇ ಶಂಖನಾದವನ್ನು ಕೇಳಿದಾಗ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಗಳ (Positive Psychological Vibrations ) ಸಂಚಾರವಾಗುತ್ತದೆ.. ಇದರಿಂದ ಧೈರ್ಯ, ನಿರ್ಣಯ, ನಂಬಿಕೆ, ಆತ್ಮವಿಶ್ವಾಸ, ಮುಂತಾದ ಗುಣಗಳು ಜಾಗೃತವಾಗುತ್ತವೆ.. ಶಂಖವನ್ನು ನಿಯಮಿತವಾಗಿ ಊದುವುದರಿಂದ ಶ್ವಾಸಕೋಶಗಳು ಬಲಿಷ್ಟಗೊಳ್ಳುತ್ತವೆ.. ಶ್ವಾಸಸಂಬಂಧಿ ಖಾಯಿಲೆಗಳು ಕಡಿಮೆಯಾಗುತ್ತವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.. ನಮ್ಮ ಸನಾತನ ಸಂಸ್ಕೃತಿಯಲ್ಲಿ ಶಂಖಕ್ಕೆ ಪೂಜ್ಯಸ್ಥಾನವನ್ನು ನೀಡಲಾಗಿದೆ.. ಧಾರ್ಮಿಕಕಾರ್ಯಕ್ರಮಗಳನ್ನು ಶಂಖನಾದದ ಮೂಲಕವೇ ಪ್ರಾರಂಭಿಸಲಾಗುತ್ತದೆ.. ಜಗತ್ತಿನ ಪರಿಪಾಲಕನಾದ ಮಹಾವಿಷ್ಣುವಿನ ಕೈಯ್ಯಲ್ಲೂ ಶಂಖವನ್ನು ಕಾಣಬಹುದು. ಮಹಾಭಾರತ ಯುದ್ಧದಲ್ಲೂ ಯುದ್ಧ ಪ್ರಾರಂಭವಾಗುವಾಗ ಶಂಖನಾದ ಮೊಳಗುತ್ತಿತ್ತು.. ಶಂಖದ ಹೆಸರುಗಳು :- ವಿಷ್ಣುವಿನ ಶಂಖದ ಹೆಸರು ಪಾಂಚಜನ್ಯ, ಅರ್ಜುನನ ಶಂಖದ ಹೆಸರು ದೇವದತ್ತ, ಯುಧಿಷ್ಠಿರನ ಶಂಖದ ಹೆಸರು ಅನಂತವಿಜಯ, ನಕುಲನ ಸುಘೋಷ , ಸಹದೇವನ ಮಣಿಪುಷ್ಫಕ ಶಂಖಗಳನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.. ಶಂಖಗಳಲ್ಲೂ ಅನೇಕ ವಿಧಗಳಿವೆ.. ಶಂಖಗಳ ಆಕೃತಿಗೆ ಅನುಗುಣವಾಗಿ ಈ ರೀತಿ ವಿಂಗಡಿಸಲಾಗಿದೆ.. ದಕ್ಷಿಣಾವರ್ತಿ ಶಂಖ, ವಾಮವರ್ತಿ ಶಂಖ, ಗೌಮುಖಿ ಶಂಖ, ಗಣೇಶ ಶಂಖ, ಕಾವುರಿ ಶಂಖ , ಮೋತಿ ಶಂಖ , ಹೀರಾಶಂಖ ಮುಂತಾದವುಗಳಾಗಿವೆ.

#ಸರ್ವೆ_ಜನ_ಸುಖಿನೋಭವಂತು

No comments:

Post a Comment