ರಾಮ, ಲಕ್ಷ್ಮಣ ಹಾಗು ಸೀತಾಮಾತೆ ವನವಾಸದ ಸಂದರ್ಭದಲ್ಲಿ ನಡೆದ ಹಲವಾರು ಘಟನೆಗಳು ಈಗಲೂ ಪ್ರಸ್ತುತವಾಗಿವೆ ಹಾಗು ಜನರ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇವೆ. ರಾಮ ವನವಾಸದಲ್ಲಿದ್ದ ಸಂದರ್ಭದಲ್ಲಿ ಅವರ ತಂದೆ ದಶರಥರ ದೇಹಾಂತ್ಯವಾಗಿರುವ ಸುದ್ದಿ ಬರುತ್ತದೆ. ಆ ಸುದ್ದಿ ಕೇಳಿದಾಕ್ಷಣ ಶ್ರೀರಾಮನಿಗೆ ಒಮ್ಮೆ ಸಿಡಿಲು ಬಡಿದ ಅನುಭವವಾಗುತ್ತದೆ. ಆದರೆ 14 ವರ್ಷ ವನವಾಸ ಮುಗಿಸಿತೇ ಆಯೋಧ್ಯೆಗೆ ಬರಬೇಕು ಎನ್ನುವ ಕೈಕೆಯಿ ಮಾತನ್ನ ಮೀರದ ರಾಮ ತಂದೆಯ ಅಂತ್ಯಕ್ರಿಯೆಗೆ ಹೋಗಲು ಸಾಧ್ಯವಾಗುವುದಿಲ್ಲ.
ಮಾವನವರ ದೇಹಾಂತ್ಯವಾಗಿದೆ ಎಂಬ ವಿಷಯ ತಿಳಿದ ಕೂಡಲೇ ತನ್ನ ಮೈದುನನಾದ ಲಕ್ಷ್ಮಣನಿಗೆ ಸುದ್ದಿ ತಿಳಿಸಿ ದಶರಥ ಮಹಾರಾಜರಿಗೆ ಪಿಂಡದಾನ ಮಾಡಲು ಬೇಕಾದ ಸಾಮಗ್ರಿಗಳನ್ನ ತರಲು ಸೀತಾಮಾತೆ ಲಕ್ಷ್ಮಣನಿಗೆ ತಿಳಿಸುತ್ತಾಳೆ. ಅತ್ತಿಗೆಯ ಆಜ್ಞೆಯನ್ನ ಪಾಲಿಸಲು ಲಕ್ಷ್ಮಣ ಪಿಂಡಪ್ರದಾನಕ್ಕೆ ಬೇಕಾದ ಸಾಮಗ್ರಿಗಳನ್ನ ತರಲು ಕಾಡಿನಲ್ಲಿ ಹೊರಟುಹೋದ. ಬಹಳ ಹೊತ್ತಾದರೂ ಲಕ್ಷ್ಮಣ ಬರಲೇ ಇಲ್ಲ. ಕಾಯುತ್ತ ಕೂತಿದ್ದ ಸೀತಾಮಾತೆ ಯಾಕೋ ಲಕ್ಷ್ಮಣ ಬರೋಕೆ ಇನ್ನೂ ತಡವಾಗಬಹುದು ಎಂದರಿತು ತಾವೇ ಸುತ್ತಮುತ್ತಲಿನ ಪ್ರದೇಶದಲ್ಲಿ ತಮಗೆ ಬೇಕಾದ ವಸ್ತುಗಳನ್ನ ಜೋಡಿಸಿಕೊಂಡು ದಶರಥ ಮಹಾರಾಜರ ಪಿಂಡದಾನವನ್ನ ಮಾಡುತ್ತಾಳೆ. ಇದಕ್ಕೆ ಸಾಕ್ಷಿಯಾಗಿ ಒಬ್ಬ ಪಂಡಿತ, ಹಸು, ಕಾಗೆ ಹಾಗು ಫಲ್ಗು ನದಿಯ ಸಮ್ಮುಖದಲ್ಲಿ ಪಿಂಡ ಪ್ರದಾನ ಮಾಡುತ್ತಾಳೆ.
ಆದರೆ ರಾಮ ಹಾಗು ಲಕ್ಷ್ಮಣ ವಾಪಸ್ಸಾದ ಬಳಿಕ ಸೀತಾಮಾತೆ ತಾನು ಪಿಂಡದಾನವನ್ನ ಮಾಡಿದ್ದಾಗಿ ಹಾಗು ಅದಕ್ಕೆ ಈ ನಾಲ್ವರು ಸಾಕ್ಷಿ, ಬೇಕಿದ್ದರೆ ನೀವು ಇವರನ್ನ ಕೇಳಬಹುದು ಎನ್ನುತ್ತಾಳೆ. ಯಾವಾಗ ರಾಮ ಎಂಬ ನಾಲ್ವರನ್ನ ಈ ಬಗ್ಗೆ ಪ್ರಶ್ನಿಸಿದಾಗ ಅವರ‌್ಯಾರೂ ಉತ್ತರಿಸದೆ ಮೌನವಾಗಿ ಬಿಡುತ್ತಾರೆ. ಆಗ ಶ್ರೀರಾಮ ಸೀತೆಯ ಮೇಲೆ ಕೋಪಗೊಳ್ಳುತ್ತಾನೆ. ಈ ವಿಷಯದಿಂದ ಸೀತಾಮಾತೆ ಬೇಸರಗೊಳ್ಳುತ್ತಾಳೆ, ಬಳಿಕ ಆಕೆ ತಕ್ಷಣವೇ ದಶರಥ ಮಹಾರಾಜರ ಆತ್ಮವನ್ನ ಕರೆದು ಈ ಬಗ್ಗೆ ತಿಳಿಸುತ್ತಾಳೆ. ದಶರಥ ಮಹಾರಾಜರ ಆತ್ಮವು ಸೀತೆ ನನ್ನ ಪಿಂಡದಾನ ಮಾಡಿದ್ದಾಳೆ, ಈ ನಾಲ್ವರೂ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತದೆ.
ಮತ್ತೇನು, ತನ್ನ ಅಪಮಾನ ಮಾಡಿದ ಈ ನಾಲ್ವರ ಮೇಲೂ ಕ್ರೋಧಿತರಾಗಿ ಅವರೆಲ್ಲರಿಗೂ ಶಾಪ ನೀಡುತ್ತಾಳೆ. ಪಂಡಿತನಿಗೆ ಶಾಪ ನೀಡುತ್ತ ನಿನಗೆ ತಿನ್ನಲು ಅದೆಷ್ಟ ಆಹಾರ ಸಿಗಲಿ, ರಾಜಮಹಾರಾಜರ ಬಳಿ ಹಣ ಸಿಕ್ಕರೂ ಕೂಡ ನೀನು ಸದಾ ದರಿದ್ರನಾಗೆ ಇರು ಎನ್ನುತ್ತಾಳೆ, ಫಲ್ಗು ನದಿಗೆ ಶಾಪ ನೀಡುತ್ತ ಎಷ್ಟೇ ಮಳೆ ಬಂದರೂ ನೀನೂ ಒಣಗಿಹೋಗು ಎಂದು ಶಾಪ ನೀಡುತ್ತಾಳೆ. ನಿನ್ನನ್ನ ಜನ ಪೂಜಿಸಿದರೂ ನೀನು ಅಲ್ಲಿ ಇಲ್ಲಿ ಓಡಾಡುತ್ತ ಮೇವಿಗಾಗಿ ಪರದಾಡು ಎಂದು ಆಕಳಿಗೆ ಶಾಪ ನೀಡುತ್ತಾಳೆ. ಕೊನೆಯದಾಗಿ ನೀನು ಒಬ್ಬನೇ ತಿಂದರೂ ನಿನ್ನ ಹೊಟ್ಟೆ ತುಂಬದೆ ನೀನು ನಿನ್ನ ಕಾಗೆಗಳ ಗುಂಪಲ್ಲೇ ಕಚ್ಚಾಡಿ ತಿಂದು ಹೊಟ್ಟೆ ತುಂಬಿಸಿಕೋ ಎಂದು ಕಾಗೆಗೆ ಶಾಪ ಕೊಡುತ್ತಾಳೆ.
ಸೀತಾಮಾತೆ ಅಂದು ನೀಡಿದ್ದ ಶಾಪದ ಪರಿಣಾಮಗಳನ್ನ ನಾವು ಇಂದಿಗೂ ಕಾಣಬಹುದಾಗಿದ್ದು ಅದನ್ನ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇದೇ ಕಾರಣದಿಂದ ರಾಮಾಯಣ ಇಂದಿಗೂ ನಮ್ಮ ಜೀವನಕ್ಕೆ ಪ್ರಸ್ತುತವಾಗೇ ಕಾಣುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ ಹಾಗು ಈ ಅಂಕಣವನ್ನ ನಿಮ್ಮ ಸ್ನೇಹಿತರ, ಕುಟುಂಬಸ್ಥರ ಜೊತೆ ಹಂಚಿಕೊಳ್ಳಿ.
No comments:
Post a Comment