Sunday, 6 October 2019

ಹಣ ಖರ್ಚು ಇಲ್ಲದೆ ಮನೆಯ ವಾಸ್ತು ದೋಷ ನಿವಾರಣೆ ಮಾಡಿಕೊಳ್ಳಿ

ವಾಸ್ತು ಎಂಬುದು ಅತೀ ಮುಖ್ಯ. ನಮ್ಮ ಜನರಲ್ಲಿ ಎರಡು ರೀತಿಯ ವಿಧ ಇರುತ್ತದೆ ಮೊದಲನೇ ತರಹದ ಜನರು ಅಂದ್ರೆ ಇವರು ಶಸ್ತ್ರ ಸಂಪ್ರದಾಯ ಮತ್ತು ದೇವರು ಧರ್ಮ ಯಾವುದನ್ನು ಸಹ ನಂಬುವುದಿಲ್ಲ ಇವರು ತಮ್ಮದೇ ಆದ ಜೀವನ ಶೈಲಿಯಲ್ಲಿ ಬದುಕುತ್ತಾ ಇರುತ್ತಾರೆ ಹಾಗೆಯೇ ಎರಡನೇ ವಿಧದ ಜನರು ಅಂದ್ರೆ ಈ ತರಹದ ಜನರು ದೇವರು ಧರ್ಮ ವಾಸ್ತು ಶಾಸ್ತ್ರ ನಂಬಿಕೆ ಎಲ್ಲದಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ ಹಾಗೆಯೇ ಧರ್ಮವನ್ನು ಪರಿಪಾಲನೆ ಮಾಡುವುದರಿಂದ ಜೀವನದಲ್ಲಿ ಹೆಚ್ಚಿನ ಏಳಿಗೆ ಪಡೆಯುತ್ತಾರೆ.

ವಾಸ್ತು ಶಾಸ್ತ್ರ ನಿಜಕ್ಕೂ ಅತೀ ಮುಖ್ಯ. ಮನೆಯಲ್ಲಿ ಅಗ್ನಿ ಮೂಲೆ, ವಾಯು ಮೂಲೆ, ಕುಭೇರ ಮೂಲೆ, ಹೀಗೆ ಇರುತ್ತದೆ ನಾವು ಸರಿಯಾದ ಕ್ರಮದಲ್ಲಿ ಮನೆಯನ್ನು ಕಟ್ಟದೆ ತಪ್ಪು ತಪ್ಪಾಗಿ ವಿನ್ಯಾಸ ಮಾಡಿದರೆ ಮತ್ತು ಏನಾಗುತ್ತೆ ಬಿಡು ಅಂತ ಅಸಡ್ಡೆ ಮಾಡಿದ್ದರೆ ಖಂಡಿತ ಒಂದಲ್ಲ ಒಂದು ದಿನ ನಮ್ಮ ದೈನಂದಿನ ಜೀವನದ ಮೇಲೆ ಅದು ಹೆಚ್ಚಿನ ಪರಿಣಾಮ ಬೀರುವುದು ನಿಶ್ಚಿತ. ಸಾಕಷ್ಟು ಜನರು ಕಷ್ಟಗಳನ್ನುಹೇಳುತ್ತಾರೆ ನಾವು ಎಷ್ಟೇ ಕಷ್ಟ ಪಟ್ಟರು ನಮಗೆ ಏಳಿಗೆ ಎಂಬುದು ಇಲ್ಲವೇ ಇಲ್ಲ ನಾವು ಸಾಕಷ್ಟು ಹಣ ಉಳಿತಾಯ ಮಾಡುತ್ತೇವೆ ಆದರು ಅದೆಲ್ಲವೂ ಯಾವುದೋ ಒಂದು ಸಮಸ್ಯೆಗಳು ಬಂದು ಖರ್ಚು ಆಗುತ್ತಾ ಇರುತ್ತದೆ ಎಂದು.

ವಾಸ್ತು ಶಾಸ್ತ್ರ ಬಗ್ಗೆ ಹೆಚ್ಚಿನ ಅರಿವು ಇರುವ ಜನರು ಏನು ಹೇಳುತ್ತಾರೆ ಅಂದ್ರೆ ನಾವು ವಾಸ್ತು ಶಾಸ್ತ್ರ ಪಾಲನೆ ಮಾಡಿದ ನಂತರ ಸಾಕಷ್ಟು ಖುಷಿ ಆಗಿದ್ದೇವೆ ಜೀವನದಲ್ಲಿ ನಮಗೆ ನೆಮ್ಮದಿ ಸಿಕ್ಕಿದೆ ಎಂಬ ಮಾತು ತಿಳಿಸುತ್ತಾರೆ. ಮನೆಯಲ್ಲಿ ವಾಸ್ತು ಶಾಸ್ತ್ರ ಪಾಲಿಸಿಲ್ಲ ಅಂದ್ರೆ ಅದು ನೇರವಾಗಿ ಮನೆ ಯಜಮಾನನ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ನೀವು ಎಷ್ಟೇ ಹಣ ಉಳಿತಾಯ ಮಾಡಿದರು ಸಹ ಅದು ನಿಮ್ಮ ಕೈಯಲ್ಲಿ ಇರೋದಿಲ್ಲ. ನೀವು ಮಾಡದ ತಪ್ಪಿಗೆ ಸಾಕಷ್ಟು ಶಿಕ್ಷೆ ಮತ್ತು ನಿಂದನೆ ಅನುಭವಿಸುತ್ತೀರಿ.

ಹಾಗಾದ್ರೆ ಜನರು ಪ್ರಶ್ನೆ ಕೇಳುತ್ತಾರೆ ನಾನು ಬಡವ ನಾನು ನನ್ನ ಮನೆಯನ್ನು ಒಡೆದು ಕಟ್ಟಬೇಕೆ ಎಂದು. ನಿಜಕ್ಕೂ ಇದಕ್ಕೆ ನಮ್ಮ ಉತ್ತರ ಎಂದು ಅಂದ್ರೆ ನಿಮಗೆ ವಾಸ್ತು ಬದಲಾವಣೆ ಮಾಡಿಕೊಳ್ಳಲು ಸಾಧ್ಯ ಆಗಲಿಲ್ಲ ಅಂದ್ರೆ ಒಂದಿಷ್ಟು ಪಿರಮಿಡ್ ಸಿಗುತ್ತದೆ ಅವುಗಳನ್ನು ನೀವು ಮನೆಯ ಕೆಲವೊಂದು ದಿಕ್ಕಿನಲ್ಲಿ ಇಟ್ಟು ಸಾಕಷ್ಟು ಬದಲಾವಣೆ ಪಡೆಯಬಹುದು. ಕೆಲವು ಜನಕ್ಕೆ ಪ್ರಶ್ನೆ ಉದ್ಬವ ಆಗುತ್ತದೆ ಪಿರಮಿಡ್ ಇಟ್ಟರೆ ನಮ್ಮ ವಾಸ್ತು ದೋಷ ಕಳೆಯುತ್ತದೆಯೇ ಎಂಬುದು ನಿಜಕ್ಕೂ ಇದು ಸತ್ಯ ಕೆಲವೊಂದು ಕಣ್ಣಿಗೆ ಕಾಣದ ಶಕ್ತಿಗಳು ನಿಮಗೆ ಒಳಿತು ಮಾಡುತ್ತದೆ. ನೀವು ಜೀವನದಲ್ಲಿ ಕಳೆದುಕೊಂಡಿರುವ ಎಷ್ಟೋ ಖುಷಿ ಸಮಯ ನಿಮಗೆ ಮರಳಿ ಬರುತ್ತದೆ. ನಿಮ್ಮ ಹಲವು ದಿನಗಳ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

No comments:

Post a Comment