Monday, 6 January 2020

" ಶ್ರೀ ವ್ಯೆಕು0ಠ ಏಕಾದಶಿ "


  -----  ------   ------   -----   
   
. ಶುಕ್ಲ ಪಕ್ಷದ ಧನುರ್ಮಾಸದಲ್ಲಿ ಬರುವ ಏಕಾದಶಿಗೆ
" ವೈಕುಂಠ ಏಕಾದಶಿ' ಎಂದು ಕರೆಯುತ್ತಾರೆ.
 ಈ ದಿನ ಉಪವಾಸ ಮಾಡುವವರು
ಉಳಿದ 23 ಏಕಾದಶಿ  ಕ್ಯೆಗೊ0ಡ0ತೆ.
  "ಮುಕ್ಕೋಟಿ ಏಕಾದಶಿ " ಎ0ತಲೂ ಏಕಾದಶಿ
ಯನ್ನು ಕರೆಯುತ್ತಾರೆ.ಈ ದಿನ ವಿಷ್ಣುವಿನ ಆರಾಧನೆ ಮಾಡುವದರಿ0ದ  ಜನನ ಮತ್ತು
ಮರಣ ನೋವಿನಿ0ದ ಮುಕ್ತಿಯನ್ನು ಪಡೆಯುತ್ತಾರೆ.
 ಅಸುರ ' ಮೂರ'ನನ್ನು ವಧಿಸಲು ವಿಷ್ಣುವಿಗೆ
ವಿಷೇಶ ಆಯುಧ ಅಗತ್ಯವಿರುತ್ತದೆ.ವಿಷ್ಣುವಿನ
ದೇಹದಿ0ದ ಉದ್ಭವಿಸಿದ ಶಕ್ತಿಯು ಮೂರನನ್ನು
ವಧಿಸುತ್ತದೆ. ವಿಷ್ಣುವು ಆ ಶಕ್ತಿಯನ್ನು 'ಏಕಾದಶಿ
ಎ0ದು ಹೆಸರನ್ನಿಡುತ್ತಾನೆ.
ಹಾಗೆಯೇ  ಏಕಾದಶಿಗೆ ' ಹರಿದಿನ" ವೆಂತಲೂ
ಕರೆಯುತ್ತಾರೆ.  ಏಕಾದಶಿ ಅಂದರೆ 11.
ಕತ್ತಲೆಯಿಂದ  - ಸುಜ್ಞಾನದಡೆಗೆ ಸಾಗುವ
ಮಾಸವೇ ಉತ್ತರಾಯಣ.ವೈಕುಂಠ ಏಕಾದಶಿ
ಯಂದು ಉತ್ತರ ದ್ವಾರದಿಂದ ಪ್ರವೇಶಿಸಿ
ಭಗವಂತನನ್ನು ದರ್ಶಿಸಬೇಕು ಎನ್ನುವ ಮಾತಿದೆ.
  ವೈಕುಂಠ ಅಂದರೆ ವಿಷ್ಣುಲೋಕ. ಚಾಕ್ಷುಕು 
ಮನ್ವಂತರದಲ್ಲಿ ವಿಷ್ಣುವು" ವಿಕಂಠ"  ಸ್ತ್ರೀ
ರೂಪದಲ್ಲಿ ಅವತರಿಸಿದ್ದರಿಂದ" ವೈಕುಂಠ"
 ಹೆಸರು ಬಂದಿದೆ ಎಂದು ಮಹಾ ಭಾರತದ
' ಶಾಂತಿ ಪರ್ವ" ದಲ್ಲಿ ಹೇಳಿದೆ.
ಯಾರು ಈ ದಿನದ0ದು ಉಪವಾಸ ಕ್ಯೆಗೊಳ್ಳು
ತ್ತಾರೋ ,ಅವರಿಗೆ ವ್ಯೆಕು0ಠಕ್ಕೆ ಹೋಗುವ
ಸಿದ್ಧಿಯನ್ನು ವೆ0ಕಟೇಶ್ವರನು ಕರುಣಿಸುತ್ತಾನೆ.
ಶ್ರೀ ವೆ0ಕಟೇಶ್ವರ ಸ್ತೋತ್ರ ,ಅಷ್ಟೋತ್ತರ ,ವೆ0ಕ
ಟೇಶ್ವರ ಭಕ್ತಿಗೀತೆ ,ಗೀತೋಧ್ಯಾಯ ,ವಿಷ್ಣು ಪುರಾಣ ,ವಿಷ್ಣು ಸಹಸ್ರ ನಾಮ ಪಠಿಸುತ್ತಾರೋ
ಅವರಿಗೆ ಶ್ರೀ ಮನ್ನಾರಯಣನು  ಎಲ್ಲಾ ಇಷ್ಟಾರ್ಥ
ಗಳನ್ನು ಕರುಣಿಸುತ್ತಾನೆ.
ಪ್ರಸಿದ್ಧ ವೆ0ಕಟೇಶ ದೇವಾಲಯಗಳಲ್ಲಿ  ಈ ದಿನ
ಪ್ರಾಥಃಕಾಲ 4.0 ಘ0ಟೆಯಿ0ದ  ಮಧ್ಯರಾತ್ರಿಯ ವರೆಗೂ  ಶ್ರೀ ಶ್ರೀನಿವಾಸನ
ದರ್ಶನಕ್ಕಾಗಿ  ದೇವಾಲಯದ ಪ್ರವೇಶ ದ್ವಾರಗಳು ತೆಗೆದಿರುತ್ತವೆ.
ಭಕ್ತರು ಬ0ದ ಭಕ್ತಾದಿಗಳಿಗೆ ಅರ್ಚನೆ ,ಅಷ್ಟೋ
ತ್ತರ ಪಠಿಸಲು  ಅನುಕೂಲ ಮಾಡಿಕೊಡು
ತ್ತಾರೆ.
ಕೃಪೆ -ಅ0ತರ್ಜಾಲ
- -----  -----  ---ಶ್ರೀ ವ್ಯೆಕು0ಠ ಏಕಾದಶಿಯು
ಸರ್ವರಿಗೂ ಕಲ್ಯಾಣ ಮಾಡಲಿ.ಭಕ್ತರ ಇಷ್ಟಾರ್ಥ
ಗಳು ಈಡೇರಲಿ.ಎಲ್ಲರಿಗೂ ಏಕಾದಶಿಯ 
ಶುಭಾಷಯಗಳು.
ಎನ್.ಆರ್.ಸ0ಗಾ

No comments:

Post a Comment