Monday, 6 January 2020

ಗಣೇಶನ ಮದುವೆಸಿದ್ಧಿ- ಬುದ್ಧಿಯರ ಒಡೆಯ

ಆಧಾೄತ್ಮ ಧೀವಿಗೆ.....
ಗಣೇಶನ ಮದುವೆ

ಸಿದ್ಧಿ- ಬುದ್ಧಿಯರ ಒಡೆಯ

ಪ್ರಜಾಪತಿ ಬ್ರಹ್ಮನಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಪುತ್ರಿಯರಿದ್ದರು. ಅವರಲ್ಲಿ ಒಬ್ಬಳನ್ನು ಗಣೇಶನಿಗೂ, ಇನ್ನೊಬ್ಬಳನ್ನು ಕಾರ್ತಿಕೇಯನಿಗೂ ವಿವಾಹ ಮಾಡಿಕೊಡಬೇಕೆಂಬುದು ಆತನ ಇಷ್ಟ. ಇದನ್ನು ಆತ ಶಿವನಲ್ಲಿ ಹೇಳಿದ. ಆದರೆ ಶಿವ ಹೇಳಿದ ‘ಬರಿಯ ಸಿದ್ಧಿಯಿದ್ದು ಬುದ್ಧಿ ಇಲ್ಲದಿದ್ದರೆ ಪ್ರಯೋಜನವಿಲ್ಲ, ಬರಿಯ ಬುದ್ಧಿಯಿದ್ದು ಸಿದ್ಧಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ಆದ್ದರಿಂದ ಇಬ್ಬರೂ ಜತೆಗೇ ಇರಲಿ. ಗಣಪತಿ ಜ್ಞಾನದ ಅಧಿಪತಿಯಾದುದರಿಂದ ಇಬ್ಬರೂ ಅವನನ್ನೇ ವರಿಸಲಿ’ ಎಂದ. ಹಾಗೇ ಸಿದ್ಧಿ- ಬುದ್ಧಿ ಇಬ್ಬರೂ ಗಣಪನನ್ನು ಮದುವೆಯಾದರು. ಇವರಿಬ್ಬರಿಗೆ ಶುಭ- ಲಾಭ ಎಂಬ ಮಕ್ಕಳು ಜನಿಸಿದರು.

ಗಣಪತಿಗೆ ಈ ಐದು ಇಷ್ಟವಂತೆ

ಗಣೇಶ ಚತುದರ್ಶಿಯಂದು ಗಣಪತಿ ದೇವರನ್ನು ಸಂಭ್ರಮದಿಂದ ಪೂಜಿಸಲಾಗುವುದು. ಎಲ್ಲರಿಗೂ ತುಂಬ ಇಷ್ಟ ದೇವರು ಎಂದರೆ ಅದು ಗಣಪತಿ. ಡೊಳ್ಳು ಹೊಟ್ಟೆ, ಗಜಮುಖನೆಂದು ಪೂಜಿಸಲ್ಪಡುವ ಗಣೇಶ ದೇವರು ಕೆಡುಕು ಹಾಗೂ ಪಾಪ ವಿಮೋಚನೆ ಮಾಡುವ ಎಲ್ಲರ ಸ್ನೇಹಿತ ದೇವರು. ಗಣಪತಿ ದೇವರನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ ಬೇರೆ ಧರ್ಮದವರು ಕೂಡ ಪೂಜಿಸುವುದು ಅವರ ಸುಂದರ ದೇಹ ಹಾಗೂ ಭಕ್ತರಿಗೆ ಒಲಿಯುವ ಕಾರಣಕ್ಕಾಗಿ. ಗಣೇಶ ದೇವರನ್ನು ಜನರ ಅಧಿಪತಿ ಗಣಪತಿ ಎಂದು ಕರೆಯಲಾಗುತ್ತದೆ.

ಮೋದಕ

ಗಣಪತಿ ದೇವರು ತಿಂಡಿ ಪ್ರಿಯ ಎಂದೇ ಪ್ರತೀತಿ. ಗಣೇಶ ದೇವರ ವಿಗ್ರಹದ ಕೈಗಳಲ್ಲಿ ಹಾಗೂ ಅವರ ಎದುರಿಗೆ ಇರುವಂತಹ ತಿಂಡಿಗಳನ್ನು ನೋಡಿದಾಗ ಗಣಪತಿ ದೇವರಿಗೆ ಆಹಾರ ತುಂಬಾ ಇಷ್ಟ ಎಂದು ತಿಳಿದುಬರುವುದು. ಗಣಪತಿ ದೇವರನ್ನು ಬೇಗನೆ ಪ್ರಸನ್ನರಾಗಿಸಲು ಅವರಿಗೆ ಪ್ರಿಯವಾದ ತಿಂಡಿ ಮಾಡಬೇಕು. ಮೋದಕವು ಗಣಪತಿಗೆ ತುಂಬಾ ಇಷ್ಟವಾದ ತಿಂಡಿ. ಗಣೇಶ ಚತುದರ್ಶಿಯಂದು ಮೋದಕವನ್ನು ಮಾಡಿ ಬಡಿಸುತ್ತಾರೆ.

ಗರಿಕೆ

ಗಣಪತಿ ದೇವರಿಗೆ ಇಷ್ಟವಾಗುವಂತಹ ಮತ್ತೂಂದು ಹೂವು ಅಥವಾ ಆಹಾರ ಗರಿಕೆ. ಗಣಪತಿ ದೇವರಿಗೆ ಗರಿಕೆ ಯಾಕೆ ಇಷ್ಟ ಎನ್ನುವ ಬಗ್ಗೆ ಒಂದು ಕಥೆಯೇ ಇದೆ. ದೇವರುಗಳಿಗೆ ಕೆಡುಕನ್ನು ಉಂಟು ಮಾಡುತ್ತಿದ್ದ ಅನಲಾಸುರನನ್ನು ಗಣಪತಿ ದೇವರು ಒಂದು ಸಲ ತಿಂದರಂತೆ. ಅನಲಾಸುರ ಜೀರ್ಣವಾಗದೆ ಗಣಪತಿಯ ಹೊಟ್ಟೆಯಲ್ಲಿ ಉರಿ ತಾಳಲಾರದೇ ಇರುವಾಗ ಋಷಿಮುನಿಗಳು ಗಣಪತಿ ದೇವರ ಹೊಟ್ಟೆಯ ಮೇಲೆ 21 ಸಲ ದೇವರ ಸ್ತುತಿ ಮಾಡಿ ಗರಿಕೆ ಹುಲ್ಲನ್ನು ಹಾಕುತ್ತಾರೆ. ಈ ವೇಳೆ ಗಣಪತಿ ದೇವರ ಹೊಟ್ಟೆ ಉರಿ ಶಮನವಾಗುತ್ತದೆ. ಇದರ ಬಳಿಕ ಗಣಪತಿ ದೇವರಿಗೆ ಗರಿಕೆ ಹುಲ್ಲು ತುಂಬಾ ಇಷ್ಟ.

ಚೆಂಡು ಹೂ

ಗಣೇಶನನ್ನು ಮನೆಗೆ ತರುವಾಗ ಹೆಚ್ಚಿನ ಮನೆಗಳಲ್ಲಿ ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂಗಳಿಂದ ಮನೆಯನ್ನು ಅಲಂಕಾರ ಮಾಡಲಾಗುತ್ತದೆ. ಗಣಪತಿಗೆ ಚೆಂಡು ಹೂ ತುಂಬಾ ಇಷ್ಟ. ಗಣಪತಿ ದೇವರು ಯಾವಾಗಲು ಚೆಂಡು ಹೂವು ಮತ್ತು ಗರಿಕೆ ಹುಲ್ಲಿನ ಮಾಲೆ ಹಾಕಿರುತ್ತಾರೆ.

ಶಂಖ

ಗಣಪತಿಗೆ ನಾಲ್ಕು ಕೈಗಳಿವೆ ಮತ್ತು ಒಂದು ಕೈಯಲ್ಲಿ ಶಂಖವನ್ನು ಹಿಡಿದುಕೊಂಡಿದ್ದಾರೆ.  ಹಬ್ಬಗಳ ವೇಳೆ ಶಂಖನಾದ ಮೊಳಗಿಸಲಾಗುತ್ತದೆ. ಶಂಖನಾದವೆಂದರೆ ಗಣಪತಿ ದೇವರಿಗೆ ತುಂಬಾ ಇಷ್ಟವಂತೆ. ಗಣಪತಿ ಆರತಿ ಮಾಡುವಾಗ ಶಂಖನಾದ ಮೊಳಗಿಸುವರು. ಶಂಖನಾದವು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ನಂಬಿಕೆ ಇದೆ. ಅದಕ್ಕಾಗಿಯೇ ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ ಎಂದು ಪೂಜಾರಂಭದಲ್ಲಿ ಘಂಟಾನಾದ ಮೊಳಗಿಸಲಾಗುತ್ತದೆ.

ಹಣ್ಣುಗಳು

ತೆಂಗಿನಕಾಯಿ ಮತ್ತು ಬಾಳೆಹಣ್ಣು ಗಣಪತಿ ದೇವರಿಗೆ ತುಂಬಾ ಪ್ರಿಯವಾಗಿರುವ ಹಣ್ಣುಗಳು. ಗಣಪತಿ ದೇವರ ತಲೆಯು ಆನೆಯದ್ದಾಗಿರುವ ಕಾರಣದಿಂದ ಬಾಳೆಹಣ್ಣು ಗಣೇಶ ದೇವರಿಗೆ ತುಂಬಾ ಇಷ್ಟ. ಗಣೇಶನ ಮೂರ್ತಿಯ ಸುತ್ತ ಬಾಳೆಎಲೆಗಳು ಹಾಗೂ ಬಾಳೆಗಿಡಗಳಿಂದ ಶೃಂಗರಿಸಲಾಗುತ್ತದೆ. ಈ ಐದು ವಸ್ತುಗಳು ಗಣಪತಿ ದೇವರಿಗೆ ತುಂಬಾ ಇಷ್ಟ ಎಂದು ನಂಬಲಾಗಿದೆ.
ಕೃಪೆ:
-- (ಸಂ.) ಲಕ್ಷ್ಮೀ ಮಚ್ಚಿನ

No comments:

Post a Comment