ಶಿವ ಗೌರಿ ಪುತ್ರ ಗಣೇಶನ ತಲೆ ಕತ್ತರಿಸಿದಾಗ ಗಜರಾಜನ ಮುಖ ಏಕೆ ತಂದು ಜೋಡಿಸಲಾಯಿತು ಎಂಬ ಕೌತುಕ ಪ್ರಶ್ನೆಗಳಿಗೆ ಕಥೆಗಳು ಹೀಗಿವೆ.
ಒಂದಾನೊಂದು ಕಾಲದಲ್ಲಿ ಗಜಾಸುರನೆಂಬ ರಕ್ಕಸನಿದ್ದ. ಶಿವನನ್ನು ಒಲಿಸಿಕೊಳ್ಳಲು ಗಜಾಸುರ ರುದ್ರ ತಪಸ್ಸನ್ನಾಚರಿಸಿದ್ದ. ಗಜಾಸುರನ ಭಕ್ತಿಗೆ ಮೆಚ್ಚಿದ ಶಿವ ಆತನಿಗೆ ಬೇಕಾದ ವರವನ್ನು ಕರುಣಿಸಲು ಮುಂದಾದ. ತನ್ನಬಳಿ ಯಾರೂ ಸುಳಿಯದಂತೆ ತನ್ನ ದೇಹದಿಂದ ಸದಾ ಬೆಂಕಿಯ ವಿಕಿರಣಗಳು ಹೊರಸೂಸುವಂತೆ ಮಾಡಬೇಕು ಎಂದು ಕೇಳಿಕೊಂಡ. ಗಜಾಸುರ ತನ್ನ ತಪಸ್ಸನ್ನು ಮತ್ತೆ ಮುಂದುವರಿಸಿದ. ಶಿವ ಮತ್ತೆ ಪ್ರತ್ಯಕ್ಷವಾದಾಗ, ಶಿವ ತನ್ನ ಉದರದಲ್ಲಿ ಜೀವಿಸುವಂತಾಗಬೇಕು ಎಂಬ ವರಬೇಡಿದ. ಇದಕ್ಕೂ ಶಿವ ತಥಾಸ್ತು ಅಂದ.
ಶಿವನನ್ನು ಒಲಿಸಿಕೊಳ್ಳುವುದು ತುಂಬ ಸುಲಭ. ಆತ ಸಂತುಷ್ಟನಾದರೆ ಏನೂ ಬೇಕಾದರೂ ಕೊಡುವ ಕಾರಣ ಆತನಿಗೆ ಬೋಳೇ (ನಿಷಕಲ್ಮಷ,ಕಪಟವಿಲ್ಲದ) ಶಂಕರ ಎಂಬ ಹೆಸರಿದೆ.
ತನ್ನ ಪತಿ ಕಾಣದಾದಾಗ ಪಾರ್ವತಿ ಎಲ್ಲೆಲ್ಲು ಹುಡುಕಿದರೂ ಶಿವ ಕಾಣಲಿಲ್ಲ. ಕೊನೆಗೆ ಪಾರ್ವತಿ ತನ್ನ ಸಹೋದರ ವಿಷ್ಣುವಿನ ಬಳಿ ತೆರಳಿ ತನ್ನ ಪತಿಯನ್ನು ಹುಡುಕಿ ಕೊಡುವಂತೆ ಕೇಳಿಕೊಂಡಳು.
ಎಲ್ಲವನ್ನು ತಿಳಿದಿದ್ದ ವಿಷ್ಣು, ಚಿಂತಿಸದಿರುವಂತೆ ತನ್ನ ಸಹೋದರಿಯನ್ನು ಸಮಾಧಾನಿಸಿ, ನಿನ್ನ ಗಂಡ ಬೋಳೆ ಶಂಕರ ತನ್ನ ಭಕ್ತರಿಗೆ ಕೇಳಿದ್ದನ್ನೆಲ್ಲ ಕೊಡುತ್ತಾನೆ. ಅದರ ಪರಿಣಾಮವೇನೆಂದು ಆಲೋಚಿಸದ ಕಾರಣ ತೊಂದರೆಗೆ ಸಿಲುಕಿಕೊಳ್ಳುತ್ತಾನೆ. ಏನಾಗಿದೆ ಎಂದು ತಾನು ತಿಳಿಯುವುದಾಗಿ ಭರವಸೆ ನೀಡುತ್ತಾನೆ.
ಬ್ರಹ್ಮಾಂಡದ ಆಗು ಹೋಗುಗಳ ಕುರಿತು ಸಕಲಜ್ಞಾನ ಹೊಂದಿದ್ದ, ವಿಷ್ಣು ಸಣ್ಣದೊಂದು ವಿನೋದವನ್ನಾಡಿದ. ಶಿವನ ವಾಹನ ನಂದಿಯನ್ನು ನರ್ತಿಸುವ ನಂದಿಯನ್ನಾಗಿ ಪರಿವರ್ತಿಸಿ ಗಜಾಸುರನ ಎದುರು ನರ್ತಿಸುವಂತೆ ಮಾಡಿ, ತಾನು ಕೊಳಲುವಾದಕನಂತೆ ಕಾಣಿಸಿಕೊಂಡ.
ನಂದಿಯ ನರ್ತನಕಂಡು ಸಂತೋಷಗೊಂಡ ಗಜಾಸುರ ಏನು ಬೇಕೆಂದು ಕೊಳಲು ವಾದಕನಿಗೆ ಕೇಳಿದ. ತಾನು ಕೇಳಿದ್ದು ಕೊಡುವೆಯಾ ಎಂದು ವಿಷ್ಣು ಕೇಳಿದ. ತನ್ನನ್ನು ಯಾರೆಂದು ತಿಳಿದಿದ್ದಿಯಾ, ನೀನು ಏನೇ ಕೇಳಿದರೂ ನಾನು ತಕ್ಷಣಕೊಡಬಲ್ಲೆನೆಂದು ಗಜಾಸುರ ಹೇಳುತ್ತಲೇ, ಹಾಗಾದರೆ ನಿನ್ನ ಉದರದಲ್ಲಿರುವ ಶಿವನನ್ನು ಮುಕ್ತಿಗೊಳಿಸು ಅಂದ. ಇದನ್ನು ಕೇಳುತ್ತಲೇ, ಇದು ವಿಷ್ಣುವಲ್ಲದೆ ಮತ್ತಾರಲ್ಲ; ವಿಷ್ಣುವಿಗಲ್ಲದೇ ಇನ್ನಾರಿಗೂ ಈ ರಹಸ್ಯ ತಿಳಿದಿರದು ಎಂದು ಒಡನೆಯೇ ವಿಷ್ಣುವಿನ ಕಾಲಿಗೆ ಬಿದ್ದ.
ಶಿವನನ್ನು ತನ್ನ ಉದರದಿಂದ ಮುಕ್ತಿಗೊಳಿಸಿದ ಗಜಾಸುರ, ಶಿವನ ಬಳಿ ಕೊನೆಯದೊಂದು ವರ ಕೇಳಿದ. ಬೇಡಿದ ವರವನ್ನೆಲ್ಲ ಕರುಣಿಸಿದ ನೀನು ಕೊನೆ ಇಚ್ಛೆಯನ್ನು ನೆರವೇರಿಸಬೇಕೆಂದು ಬೇಡಿಕೊಂಡಿದ್ದು, ತಾನು ಸತ್ತ ಬಳಿಕ ತನ್ನ ತಲೆಯನ್ನು ಪೂಜಿಸುವ ಮೂಲಕ ಎಲ್ಲರೂ ತನ್ನನ್ನು ಪೂಜಿಸುವಂತಾಗಬೇಕು ಎಂದು ಕೇಳಿಕೊಳ್ಳುತ್ತಾನೆ. ಶಿವ ತನ್ನದೇ ಮಗನನ್ನು ಕರೆತಂದು ಅವನಿಗೆ ಗಜಾಸುರನ ತಲೆಯನ್ನು ಜೋಡಿಸುತ್ತಾನೆ. ಅಂದಿನಿಂದ ಮೊದಲ ಪೂಜೆ ಏನಿದ್ದರೂ ಗಣೇಶನಿಗೆ ಸಲ್ಲಬೇಕು ಎಂಬ ಸಂಪ್ರದಾಯ ಹುಟ್ಟಿಕೊಂಡಿತು. ಇದು ಶಿವ ಗಜಾಸುರನಿಗೆ ನೀಡಿದ ಉಡುಗೊರೆ
-ಕೃಪೆ ವೆಬ್ದುನಿಯಾ
ಸಮುದ್ರ ಮಂಥನದ ಸಮಯದಲ್ಲಿ ಹಾಲಾಹಲ ವಿಷ ಹೊರಬಂದಾಗ ಶಿವ ಸೃಷ್ಟಿಯನ್ನು ರಕ್ಷಿಸಲು ಆ ವಿಷಪ್ರಾಶನ ಮಾಡುತ್ತಾನೆ. ಆ ವಿಷ ಕುಡಿದ ಶಿವನ ಕಂಠ ಹೊಂದಿರೊದರಿಂದ ವಿಷಕಂಠ ನಾಮ ಶಿವನಿಗೆ.
ಶಿವನು ವಿಷ ಸೇವನೆ ಮಾಡುವಾಗ ಅದರಲ್ಲಿ ಸ್ವಲ್ಲ ವಿಷವನ್ನು ಸರ್ಪಗಳು ಸೇವಿಸಿ ಪ್ರಾಣ ತ್ಯಾಗ ಮಾಡಿದ್ವೋ ಅದರಿಂದ ಅವುಗಳು ಮರಣ ಹೊಂದಿ ಮತ್ತೆ ಶಿವನ ಪ್ರೀತ ನಾಗಿ ಅವುಗಳಿಗೆ ಜೀವದಾನ ಆಯ್ತು ಅದರಿಂದ ಶೇಷ ವಿಷ ಸರ್ಪದ ಹಲ್ಲಿನಲ್ಲಿ ಉಳಿಯಿತು ತನಗೆ ಪ್ರಾಣ,ತ್ಯಾಗ ಮಾಡಿದ ಸರ್ಪಗಳನ್ನು ತನ್ನಪಕ್ಕದಲ್ಲಿ ಇಟ್ಟುಕೊಂಡು ಅವುಗಳನ್ನು ಆಭರಣವಾಗಿಸಿಕೊಂಡ
ಎನ್ನುವುದು ಒಂದು ಕಥೆ
ವಿಷ ಸೇವನೆಯಿಂದ ಗಂಟಲ ಭಾದೆ ಬಂದಾಗ ರುದ್ರದೇವರ ವಿಷಭಾದೆ ನಿವಾರಣೆಗೆ ತಲೆಯ ಮೇಲೆ ತಂಪು ಆಗಲು ಚಂದ್ರನನ್ನು ಗಂಗೆಯನ್ನು ಶಿರದಲ್ಲಿ ಧರಿಸಿದ
ಹಾಗೆ ಕಂಠದ ಉರಿ ಸಮನಕ್ಕೆ ಶೀತರಕ್ತ ಪ್ರಾಣಿ ಯಾದ ಸರ್ಪವನ್ನು ಧಾರಣೆ ಮಾಡಿಸಿದ್ರು
ನಾಗನನ್ನು ಹಿಂದೂ ಧರ್ಮದಲ್ಲಿ ದೇವರೆಂದು ಪೂಜೆ ಮಾಡಲಾಗುತ್ತದೆ. ಅಲ್ಲದೇ ಸಮುದ್ರ ಮಥನದ ವೇಳೆ ಬಂದ ವಿಷವನ್ನು ಶಿವ ಕುಡಿದಾಗ ಅದು ಆತನ ಹೊಟ್ಟೆ ಸೇರಬಾರದು ಎಂದು ವಾಸುಕಿ ಬಂದು ಆತನ ಕುತ್ತಿಗೆಯನ್ನ ಬಿಗಿದನು ಎನ್ನಲಾಗುತ್ತದೆ.
( ಕೆಲವೊಂದು ಪುರಾಣಗಳಲ್ಲಿ ಪಾರ್ವತಿ ಶಿವನ ಕುತ್ತಿಗೆ ಹಿಡಿದು ವಿಷವನ್ನು ಗಂಟಲಲ್ಲಿ ನಿಲ್ಲಿಸಿದ್ದಾಳೆ ಅಂತ ಉಲ್ಲೇಖಿಸಲಾಗಿದೆ )
ಅಲ್ಲದೇ ಶಿವನ ಕುತ್ತಿಗೆಯಲ್ಲಿ ಸೃಷ್ಟಿ ಲಯ, ಸ್ಥಿತಿಗಳಿದ್ದು ನಾಗ ಇದರ ಸಂಕೇತ ಎನ್ನಲಾಗುತ್ತದೆ. ಅಹಂಕಾರವನ್ನು ತಡೆಯುವ ಶಕ್ತಿಯಾಗಿ ಕಾರ್ಯ ನಿರ್ವಹಿಸುವ ಗುರುತು ಎನ್ನಲಾಗುತ್ತದೆ.
ಶಿವ ಆಭರಣದಂತೆಯೂ ಅದನ್ನು ಧರಿಸಿದ್ದ ಎನ್ನುವ ಮಾತುಗಳೂ ಕೂಡ ಇದೆ. ಶಿವ ಮದುವೆ ಸಂದರ್ಭದಲ್ಲಿ ಆಭರಣದಂತೆ ಎಲ್ಲಾ ಹಾವುಗಳೂ ಕೂಡ ಕುತ್ತಿಗೆ ತೋಳುಗಳಲ್ಲಿ ಧರಿಸಿದ್ದ ಎನ್ನಲಾಗುತ್ತದೆ.
ಅಲ್ಲದೇ ಕೈಲಾಸದಲ್ಲಿ ಶಿವ ಪಾರ್ವತಿ ಇರುವಾದ ನಾಗನ ಮಣಿಯೂ ಬೆಳಕನ್ನು ನೀಡುತ್ತದೆ. ಇದರಿಂದಲೇ ನಾಗವನ್ನು ಧರಿಸುತ್ತಾನೆ ಎನ್ನುವ ಪ್ರತೀತಿಯೂ ಕೂಡ ಇದೆ.
ಸಕಲ ಚರಾಚರಗಳನ್ನೂ ನಿಯಂತ್ರಣ ಮಾಡುವ ಶಿವ ಅತ್ಯಂತ ಭಯವನ್ನು ಹುಟ್ಟಿಸುವ ನಾಗನನ್ನು ಕುತ್ತಿಗೆಯಲ್ಲಿ ಧರಿಸಿ ಭಯವನ್ನು ಹೋಗಲಾಡಿಸುವ ಯತ್ನ ಮಾಡಿರುವನೆಂದೂ ಕೂಡ ಹಿಂದೂ ಶಾಸ್ತ್ರಗಳು ಹೇಳುತ್ತವೆ.
ಮೂರು ಸುತ್ತು ಸುತ್ತಿಕೊಂಡಿರುವ ನಾಗ ಭೂತ, ಭವಿಷ್ಯ ವರ್ತಮಾನವನ್ನು ಪ್ರತಿನಿಧಿಸುತ್ತಾದೆ ಎಂದೂ ಕೂಡ ಹೇಳಲಾಗುತ್ತದೆ.
ಕೈಲಾಸದಲ್ಲಿ ಒಮ್ಮೆ ಹೆಚ್ಚಿನ ಚಳಿ ಇದ್ದಾಗ ಹಾವುಗಳು ಬಂದು ಶಿವನಲ್ಲಿ ಆಶ್ರಯ ಬೇಡಿದವು., ಆಗ ಅವುಗಳಿಗೆ ಆಶ್ರಯ ಕೊಡುವ ನಿಟ್ಟಿನಲ್ಲಿ ತನ್ನ ಕುತ್ತಿಗೆಯಲ್ಲಿ ಧರಿಸಿದ್ದನೆನ್ನುವ ಮಾತುಗಳೂ ಇದೆ. ಪ್ರಕೃತಿ ನಿಯಂತ್ರಣದ ಸಂಕೇತವಾಗಿಯೂ ನಾಗನನ್ನು ಧರಿಸಿದ್ದಾನೆ ಎನ್ನಲಾಗುತ್ತದೆ.
ಓಂ ನಮಃ ಶಿವಾಯ
No comments:
Post a Comment