#
#ಬ್ರಹ್ಮದೇವಪೂಜೆಯಾಕಿಲ್ಲ
#ಬ್ರಹ್ಮದೇವನಿಗೆನಾಲ್ಕುತಲೆಗಳು.
#ಈನಾಲ್ಕುತಲೆಗಳುಸದಾವೇದಗಳನ್ನುಪಠಿಸುತ್ತವೆ. ಪುರಾಣಗಳ ಪ್ರಕಾರ ಹಿಂದೆ #ಬ್ರಹ್ಮದೇವನಿಗೆಐದುತಲೆಗಳಿದ್ದವು. ಐದನೆಯ ತಲೆಯನ್ನು ಶಿವ ಕತ್ತರಿಸಿ ಹಾಕಿದ್ದ.
#ಶಿವಯಾಕೆಬ್ರಹ್ಮನತಲೆಕತ್ತರಿಸಿದ ಎಂಬ ಬಗ್ಗೆ ಹಲವಾರು ಕಥೆಗಳಿವೆ. ಉದ್ಭವ ಶಿವಲಿಂಗದ ಮೂಲ ಹುಡುಕಲು ವಿಫಲರಾದ ವಿಷ್ಣು ಮತ್ತು ಬ್ರಹ್ಮರ ನಡುವಿನ ಪಂಥದಲ್ಲಿ #ಬ್ರಹ್ಮಸುಳ್ಳುಹೇಳಿದ್ದಎನ್ನುವುದುಒಂದುಕಥೆ. ಈ ತಪ್ಪಿಗಾಗಿ ಶಿವ ಬ್ರಹ್ಮದೇವನ ಒಂದು ತಲೆಯನ್ನು ಕತ್ತರಿಸಿ ಹಾಕಿದ್ದು ಮಾತ್ರವಲ್ಲದೇ, #ಬ್ರಹ್ಮದೇವನಿಗೆಭೂಲೋಕದಲ್ಲಿಯಾರೂಪೂಜೆಸಲ್ಲಿಸಬಾರದು, ಬ್ರಹ್ಮನ ಪರವಾಗಿ ಸಾಕ್ಷಿ ಹೇಳಿದ್ದ #ಕೇದಗೆಯನ್ನುಯಾವುದೇಪೂಜೆಗೆಬಳಸಬಾರದುಎಂದುಶಾಪನೀಡಿದ್ದಎನ್ನುತ್ತದೆಈಕಥೆ.
ಬ್ರಹ್ಮದೇವನ ತನ್ನ ಪುತ್ರಿ #ಸರಸ್ವತಿಯನ್ನೇಮೋಹಿಸಿದಕಾರಣವೂಅವನಿಗೆಪೂಜೆಇಲ್ಲಎನ್ನುತ್ತದೆಇನ್ನೊಂದುಕಥೆ.
#ಬ್ರಹ್ಮಶತರೂಪಾ ಎಂಬ ಸುರಸುಂದರಿಯನ್ನು ಸೃಷ್ಟಿಸಿದ್ದ, ಅವಳನ್ನು ನಿರಂತರ ನೋಡುವ ಸಲುವಾಗಿ ಐದು ತಲೆಗಳನ್ನು ಬೆಳೆಸಿಕೊಂಡಿದ್ದ, ಶಿವ ಕೋಪದಲ್ಲಿ ಅವನ ಒಂದು ತಲೆಯನ್ನು ಕತ್ತರಿಸಿ, ಅವನಿಗೆ ಪೂಜೆ ಸಲ್ಲಬಾರದು ಎಂದು ಶಾಪ ನೀಡಿದ್ದ ಎನ್ನುತ್ತದೆ ಮತ್ತೊಂದು ಕಥೆ.
#ಬ್ರಹ್ಮದೇವತನ್ನಮಹಾಯಾಗದಲ್ಲಿಆಹುತಿನೀಡುವಸಲುವಾಗಿಎರಡನೆಯಮದುವೆಯಾಗಿದ್ದ. ಇದರಿಂದ ಸಿಟ್ಟಿಗೆದ್ದ ಪ್ರಥಮ ಪತ್ನಿ ಸಾವಿತ್ರಿ ದೇವಿ #ಬ್ರಹ್ಮದೇವನಿಗೆಪುಷ್ಕರಒಂದನ್ನುಬಿಟ್ಟರೆಬೇರೆಲ್ಲೂಪೂಜೆಸಲ್ಲಬಾರದುಎಂದುಶಾಪನೀಡಿದ್ದ ಪುಷ್ಕರದ ಸ್ಥಳಪುರಾಣ. ಕಥೆಗಳು ಏನೇ ಇರಲಿ, ಬ್ರಹ್ಮದೇವನ ದೇವಾಲಯಗಳು ತೀರಾ ವಿರವಾಗಿವೆ ಎನ್ನುವುದಂತೂ ನಿಜ.
#ಪುಷ್ಕರದಜಗತ್ಪಿತಬ್ರಹ್ಮದೇವಾಲಯ ಬ್ರಹ್ಮದೇವನ ಬಹುಮುಖ್ಯ ದೇವಾಲಯ. ಅಲ್ಲಿನವರೇ ಪ್ರಕಾರ ಇದು #ಜಗತ್ತಿನಏಕೈಕಬ್ರಹ್ಮದೇವಾಲಯ. ಆದರೆ ಈ ಮಾತು ನಿಜವಲ್ಲ. ಭಾರತದ ಕೆಲವು ಭಾಗಗಳಲ್ಲಿ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಹಲವಾರು ಬ್ರಹ್ಮ ದೇವಾಲಯಗಳಿವೆ.
#ರಾಜಸ್ಥಾನದಲ್ಲೇಬ್ರಹ್ಮದೇವನಇನ್ನೊಂದುದೇವಾಲಯಇದೆ. ಬಾಮೇರ್ ಜಿಲ್ಲೆಯ ಬಲೋತ್ರಾ ತಾಲೂಕಿನ ಅಸೋತ್ರಾ ಎಂಬ ಹಳ್ಳಿಯಲ್ಲಿರುವ ಈ ಸುಪ್ರಸಿದ್ಧ ಬ್ರಹ್ಮ ದೇವಾಲಯಕ್ಕೆ ಖೇತೇಶ್ವರ ಬ್ರಹ್ಮಾಂಡಮ್ ತೀರ್ಥ ಎಂದು ಹೆಸರಿದೆ. ಇಲ್ಲಿ ಬ್ರಹ್ಮದೇವನ ಜೊತೆಗೆ ಗಾಯತ್ರೀ ದೇವಿಗೆ ಪೂಜೆ ಸಲ್ಲುತ್ತದೆ.
ವೈಷ್ಣವರಿಗೆ ಪವಿತ್ರವಾದ ದಿವ್ಯ ದೇಶಂಗಳ ಸಾಲಿಗೆ ಬರುವ #ಉತ್ತಮರ್ಕೋವಿಲ್ನಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹಾದೇವರಿಗೆ ಜೊತೆಯಾಗಿ ಪುಜೆ ಸಲ್ಲುತ್ತದೆ. ಈ ದೇವಾಲಯ ಇರುವುದು #ತಮಿಳುನಾಡಿನತಿರುಚಿರಪಳ್ಳಿಯಹೊರವಲಯದಲ್ಲಿ.ಪೊನ್ಮೇರಿ ಶಿವ ದೇವಾಲಯ, #ಮಿತ್ರಾನಂತಪುರಮ್ತ್ರಿಮೂರ್ತಿದೇವಾಲಯ, ತ್ರಿಪಾಯ ತ್ರಿಮೂರ್ತಿ ದೇವಾಲಯ ಮುಂತಾದ ತ್ರಿಮೂರ್ತಿ ದೇವಾಲಯಗಳಲ್ಲೂ ವಿಷ್ಣು, ಮಹೇಶ್ವರರ ಜೊತೆಗೆ ಬ್ರಹ್ಮನಿಗೆ ಪೂಜೆ ಸಲ್ಲುತ್ತದೆ. #ತಿರುಚಿರಪಳ್ಳಿಯಬ್ರಹ್ಮಪುರೀಶ್ವರರ್ದೇವಾಲಯ ಮತ್ತು #ಕುಂಭಕೋಣಂನಬ್ರಹ್ಮದೇವಾಲಯಗಳು ತಮಿಳುನಾಡಿನಲ್ಲಿ ಬ್ರಹ್ಮದೇವನಿಗೆ ಮೀಸಲಾದ ಇನ್ನಿತರ ದೇವಾಲಯಗಳು.
ಆಂಧ್ರಪ್ರದೇಶದಲ್ಲಿ ಶ್ರೀ #ಕಾಳಹಸ್ತಿಯಲ್ಲಿಒಂದುಬ್ರಹ್ಮದೇವಾಲಯಇದೆ. ಚೆಬ್ರೋಲು ಎಂಬಲ್ಲಿ ಚತುರ್ಮುಖಿ ಬ್ರಹ್ಮದೇವಾಲಯ ಇದೆ. #ಬೆಂಗಳೂರಿನಲ್ಲಿಚತುರ್ಮಖಿಬ್ರಹ್ಮನದೇವಾಲಯಇದೆ. ಗೋವಾದ ಸತ್ತರಿ ತಾಲೂಕಿನ #ಕರಂಬೋಲಿಮ್ಎಂಬಹಳ್ಳಿಯಲ್ಲಿಐದನೆಯಶತಮಾನದಲ್ಲಿನಿರ್ಮಾಣವಾಗಿದ್ದಒಂದುಪ್ರಾಚೀನದೇವಾಲಯಪತ್ತೆಯಾಗಿದೆ.
ಮಹಾರಾಷ್ಟದಲ್ಲಿ #ಮಂಗಲ್ವೇಡೆ ಎಂಬ ಹಳ್ಳಿಯಲ್ಲಿ ಬ್ರಹ್ಮನ ವಿಗ್ರಹ ಇದೆ. ಗುಜರಾತ್ ನ #ಖೇಡಬ್ರಹ್ಮಎಂಬಲ್ಲಿ 12ನೆಯ ಶತಮಾನದ ಬ್ರಹ್ಮ ದೇವಾಲಯ ಇದೆ. #ಕಾನ್ಪರದಲ್ಲಿಬ್ರಹ್ಮಕುಟಿ ಎಂಬ ದೇವಾಲಯ ಇದೆ. ಉತ್ತರ ಪ್ರದೇಶದ #ಬಿಥೂರ್ಎಂಬಲ್ಲಬ್ರಹ್ಮ ದೇವಾಲಯ ಇದೆ.
ಬ್ರಹ್ಮದೇವನ ದೇವಾಲಯಗಳು ವಿದೇಶಗಳಲ್ಲೂ ಸಾಕಷ್ಟು ಇವೆ. #ಕಂಬೋಡಿಯಾದಪ್ರಾಚೀನಅಂಗಾರವತಿ (ಅಂಕೋರ್ ವಾಟ್) ಯಲ್ಲಿ ಸುಪ್ರಸಿದ್ಧ ಬ್ರಹ್ಮ ಪ್ರತಿಮೆ ಇದೆ. #ಇಂಡೋನೇಶಿಯಾದಜಾವಾದ್ವೀಪಗಳಲ್ಲಿ ಎಂಬಲ್ಲಿರುವ ಪ್ರಸಿದ್ಧ ಪ್ರಬಾನನ್ ದೇವಾಲಯ ಸಂಕುಲಗಳ ಮುಖ್ಯ ಮೂರು ದೇವಾಲಯಗಳಲ್ಲಿ ಒಂದುಬ್ರಹ್ಮನಿಗೆಮೀಸಲಾಗಿದೆ. ಬಾಲಿಯ ಬೇಸಾಖಿ ಮಾತೃ ದೇವಾಲಯದಲ್ಲಿ ಬ್ರಹ್ಮನ ಗುಡಿ ಇದೆ.
#ಬ್ಯಾಂಕಾಕ್ ನಲ್ಲಿ ಇರಾವನ್ ಗುಡಿಯಲ್ಲಿರುವ ಬ್ರಹ್ಮನಿಗರ ಇಂದಿಗೂ ಪೂಜೆ ಸಲ್ಲುತ್ತದೆ. ##ಥಾಯ್ಲೆಂಡ್ ನಲ್ಲಿ ಬ್ರಹ್ಮನಿಗೆ ಫ್ರಾ ಫ್ರೋಮ್ ಎಂದು ಹೆಸರು. ಥಾಯ್ಲೆಂಡ್ ವಿಧಾನಸಭೆಯ ಸ್ವರ್ಣಗುಂಬಜದ ಒಳಗೆ ಫ್ರಾ ಫ್ರೋಮ್ ನ ಪ್ರತಿಮೆ ಪ್ರಧಾನವಾಗಿದೆ.
##ಬರ್ಮಾ ದೇಶಕ್ಕೆ ಬ್ರಹ್ಮದೇವನಿಗೆ ಹೆಸರು ಬಂದಿತ್ತು. ####ಮಧ್ಯಕಾಲೀನ ಬರಹಗಳಲ್ಲಿ ಈ ಪ್ರದೇಶವನ್ನು ಬ್ರಹ್ಮದೇಶ ಎಂದೇ ಉಲ್ಲೇಖಿಸಲಾಗುತ್ತಿತ್ತು. Sainath Naikal
No comments:
Post a Comment