Monday, 6 January 2020

ಹನುಮಂತ ಬ್ರಹ್ಮಚಾರಿ ಆಗಿದ್ದರೂ ಕೂಡ ಆತನಿಗೆ ಮಗ ಹುಟ್ಟಿದ್ದು ಹೇಗೆ ಮತ್ತು ಹನುಮಂತನ ಮಗನ ತಾಯಿ ಯಾರು, ತನಗೆ ಒಬ್ಬ ಮಗನಿದ್ದಾನೆ ಅನ್ನುವುದು ಹನುಮಂತನಿಗೆ ತಿಳಿದಿದ್ದು ಹೇಗೆ??

ಸ್ನೇಹಿತರೆ ಹನುಮಂತ ಬ್ರಹ್ಮಚಾರಿ ಆಗಿದ್ದರೂ ಕೂಡ ಆತನಿಗೆ ಮಗ ಹುಟ್ಟಿದ್ದು ಹೇಗೆ ಮತ್ತು ಹನುಮಂತನ ಮಗನ ತಾಯಿ ಯಾರು, ತನಗೆ ಒಬ್ಬ ಮಗನಿದ್ದಾನೆ ಅನ್ನುವುದು ಹನುಮಂತನಿಗೆ ತಿಳಿದಿದ್ದು ಹೇಗೆ ಅನ್ನುವುದು ಇನ್ನು ಹಲವು ಜನರಿಗೆ ತಿಳಿದಿಲ್ಲ. ಸ್ನೇಹಿತರೆ ಹನುಮಂತನನ್ನ ಬಾಲಬ್ರಹ್ಮಚಾರಿ ಎಂದು ನಂಬಲಾಗಿದೆ, ಆದರೆ ಹನುಮಂತನಿಗೆ ಒಬ್ಬ ಮಗನಿದ್ದಾನೆ ಮತ್ತು ಅವನ ಹೆಸರೇ ಮಕರಧ್ವಜ, ಮಕರಧ್ವಜ ನನ್ನ ಮಗನೆನ್ನುವ ವಿಷಯ ಮೊದಮೊದಲು ಹನುಮಂತನಿಗೂ ಕೂಡ ತಿಳಿದಿರಲಿಲ್ಲ ಮತ್ತು ಇದರ ಹಿಂದೆ ಒಂದು ರೋಚಕ ಘಟನೆ ಕೂಡ ಇದೆ. ಹಾಗಾದರೆ ಇದರ ಹಿಂದೆ ಇರುವ ಆ ರೋಚಕ ಕಥೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ವನವಾಸದ ಸಮಯದಲ್ಲಿ ರಾವಣ ಸೀತೆಯನ್ನ ಅಪಹರಿಸಿಕೊಂಡು ಲಂಕೆಗೆ ಹೋಗುತ್ತಾನೆ ಮತ್ತು ಆರಂಭದಲ್ಲಿ ಸೀತೆಯನ್ನ ಅಪಹರಿಸಿದ್ದು ಯಾರು ಎಂದು ತಿಳಿಯದೆ ಇದ್ದರೂ ನಂತರ ಅಪಹರಿಸಿದ್ದು ರಾವಣ ಅನ್ನುವುದು ಎಲ್ಲರಿಗೂ ತಿಳಿಯುತ್ತದೆ.

ಇನ್ನು ಸೀತೆಯನ್ನ ಹುಡುಕಿಕೊಂಡು ಲಂಕೆಗೆ ಹನುಮಂತ ಹೋಗುತ್ತಾನೆ ಮತ್ತು ಲಂಕೆಗೆ ಹೋದ ಹನುಮಂತನಿಗೆ ತುಂಬಾ ಹಸಿವಾಗುತ್ತದೆ ಮತ್ತು ಹಸಿವಾದ ಕಾರಣ ಅಲ್ಲೇ ಮರದಲ್ಲಿ ಇದ್ದ ಹಣ್ಣನ್ನ ಇಂದು ತನ್ನ ಹಸಿವನ್ನ ತೀರಿಸಿಕೊಳ್ಳುತ್ತಾನೆ ಹನುಮಂತ. ಇನ್ನು ಹನುಮಂತ ಲಂಕೆಯನ್ನ ಧ್ವಂಸ ಮಾಡಲು ಮುಂದಾಗುತ್ತಾನೆ ಮತ್ತು ಅಲ್ಲೇ ಇದ್ದ ರಾವಣನ ಸೈನಿಕರು ಹನುಮಂತನನ್ನ ಹಿಡಿಯಲು ತುಂಬಾ ಪ್ರಯತ್ನ ಮಾಡುತ್ತಾರೆ ಆದರೆ ಅದೂ ಸಾಧ್ಯವಾಗಲಿಲ್ಲ. ಇನ್ನು ಈ ಸಮಯದಲ್ಲಿ ಅಲ್ಲಿಗೆ ಬಂದ ರಾವಣನ ಮಗ ಮೇಘನಾದ ಹನುಮಂತನನ್ನ ಬಂದಿ ಮಾಡಿ ರಾವಣನ ಬಳಿ ಕರೆದುಕೊಂಡು ಹೋಗುತ್ತಾನೆ, ರಾವಣನ ಬಳಿ ಬಂದ ಹನುಮಂತನಿಗೆ ರಾವಣ ಕುಳಿತುಕೊಳ್ಳಲು ಒಂದು ಕುರ್ಚಿಯನ್ನ ಕೂಡ ಕೊಡುವುದಿಲ್ಲ ಮತ್ತು ಹನುಮಂತನನ್ನ ಅವಮಾನ ಮಾಡುತ್ತಾನೆ ರಾವಣ.

ಇನ್ನು ಇದರಿಂದ ಕೋಪ ಮಾಡಿಕೊಂಡ ಹನುಮಂತ ತನ್ನ ಬಾಲವನ್ನ ಕುರ್ಚಿಯನ್ನಾಗಿ ಮಾಡಿಕೊಂಡು ಕುಳಿತುಕೊಳ್ಳುತ್ತಾನೆ ಮತ್ತು ಇದನ್ನ ನೋಡಿದ ರಾವಣ ಕೆರಳಿ ಕೆಂಡದಂತಾಗುತ್ತಾನೆ ಮತ್ತು ಸೈನಿಕರ ಬಳಿ ಹನುಮಂತನ ಬಲಕ್ಕೆ ಬೆಂಕಿ ಇಡೀ ಎಂದು ಆದೇಶವನ್ನ ಮಾಡುತ್ತಾನೆ ರಾವಣ. ಇನ್ನು ಸೈನಿಕರು ತನ್ನ ಬಾಲಕ್ಕೆ ಬೆಂಕಿ ಇಟ್ಟರೂ ಕೂಡ ಹನುಮಂತ ಹೆದರದೆ ಇಡೀ ಲಂಕೆಯ ಸುತ್ತ ಹರಡಿ ಇಡೀ ಲಂಕೆಗೆ ಬೆಂಕಿ ಬೀಳುವಂತೆ ಮಾಡುತ್ತಾನೆ ಮತ್ತು ಎಲ್ಲಾ ಕಡೆ ಬೆಂಕಿಯನ್ನ ಇಟ್ಟ ನಂತರ ಸಮುದ್ರಕ್ಕೆ ಬಂದು ತನ್ನ ಬಾಲಕ್ಕೆ ತಾಗಿದ್ದ ಬೆಂಕಿಯನ್ನ ಆರಿಸಿಕೊಳ್ಳುತ್ತಾನೆ ಹನುಮಂತ. ಇನ್ನು ಈ ಸಮಯದಲ್ಲಿ ಬೆಂಕಿಯ ಶಾಖಕ್ಕೆ ಒಂದು ಹನಿ ಹನುಮಂತನ ಬೆವರು ಸಮುದ್ರಕ್ಕೆ ಬೀಳುತ್ತದೆ ಮತ್ತು ಆ ಬೆವರು ಒಂದು ಮೀನಿನ ಹೊಟ್ಟೆಯಲ್ಲಿ ಸೇರಿಕೊಳ್ಳುತ್ತದೆ ಮತ್ತು ಇದರಿಂದ ಆ ಮೀನು ಗರ್ಭವತಿಯಾಗುತ್ತದೆ.

ಇನ್ನು ಕೆಲವು ಸಮಯದ ನಂತರ ಪಾತಾಳ ಲೋಕದ ರಾಜನಾಗಿದ್ದ ಐರಾವನ್ ಸೈನಿಕರು ಆ ಮೀನನ್ನ ಹಿಡಿದು ಪಾತಾಳ ಲೋಕಕ್ಕೆ ತೆಗೆದುಕೊಂಡು ಹೋಗುತ್ತಾರೆ ಮತ್ತು ಅಲ್ಲಿ ಆ ಮೀನಿನ ಹೊಟ್ಟೆ ಬಗೆದಾಗ ಒಂದು ಮಗುವಿನ ಜನನ ಆಗುತ್ತದೆ. ಇನ್ನು ಇದನ್ನ ನೋಡಿ ಐರಾವನ್ ಶಾಕ್ ಆಗುತ್ತಾನೆ ಮತ್ತು ಆ ಮಗುವಿಗೆ ಮಕರಧ್ವಜ ಅನ್ನುವ ಹೆಸರನ್ನ ಇಡುತ್ತಾನೆ ಮತ್ತು ಮಕರಧ್ವಜನನ್ನ ತನ್ನ ದ್ವಾರಪಾಲಕನಾಗಿ ನೇಮಕ ಮಾಡಿಕೊಳ್ಳುತ್ತಾನೆ ಪಾತಾಳ ಲೋಕದ ರಾಜ. ಇನ್ನು ಕೆಲವು ಸಮಯದ ನಂತರ ರಾವಣನು ತನ್ನ ಸಹೋದರ ಐರಾವಣನ ಮೂಲಕ ರಾಮ ಲಕ್ಷ್ಮಣರನ್ನ ಅಪಹರಿಸಿ ಪಾತಾಳ ಲೋಕದಲ್ಲಿ ಇಡುತ್ತಾನೆ ಮತ್ತು ಈ ವಿಚಾರ ತಿಳಿದ ರಾಮ ಲಕ್ಷ್ಮಣರನ್ನ ಬಿಡಿಸಿಕೊಂಡು ಬರಲು ಹೋಗುತ್ತಾನೆ. ಇನ್ನು ಪಾತಾಳ ಲೋಕಕ್ಕೆ ಹನುಮಂತ ಬಂದಾಗ ಅಲ್ಲಿ ದ್ವಾರಪಾಲಕನಾಗಿದ್ದ ಮಕರಧ್ವಜ ಹನುಮಂತನನ್ನ ತಡೆಯುತ್ತಾನೆ ಮತ್ತು ಹನುಮಂತ ಅವನು ತನ್ನ ಮಗ ಅನ್ನುವುದನ್ನ ತಿಳಿಯದೆ ಆತನ ಜೊತೆ ಯುದ್ಧವನ್ನ ಮಾಡುತ್ತಾನೆ ಮತ್ತು ಯುದ್ಧ ಮಾಡುತ್ತ ಮಾಡುತ್ತಾ ಮಕರಧ್ವಜ ತುಂಬಾ ಶಕ್ತಿಶಾಲಿ ಅನ್ನುವುದು ಹನುಮಂತನಿಗೆ ತಿಳಿಯುತ್ತದೆ.

ಇನ್ನು ಯುದ್ಧದಲ್ಲಿ ಹನುಮಂತ ಗೆದ್ದರು ಕೂಡ ಮಕರಧ್ವಜನ ಪರಾಕ್ರಮಕ್ಕೆ ಮೆಚ್ಚಿ ನೀವು ಯಾರು ಎಂದು ಮಕರಧ್ವಜನಲ್ಲಿ ಕೇಳುತ್ತಾನೆ ಹನುಮಂತ, ಆಗ ಮಕರದ್ವಜನು ನಾನು ಹನುಮಂತನ ಮಗ ಎಂದು ಹೇಳುತ್ತಾನೆ. ನಾನು ಒಬ್ಬ ಬ್ರಹ್ಮಚಾರಿ ಹೀಗಿರುವಾಗ ನೀನು ನನ್ನ ಮಗನಾಗಲು ಹೇಗೆ ಸಾಧ್ಯ ಎಂದು ಕೇಳುತ್ತಾನೆ, ಆಗ ಹಿಂದೆ ನಡೆದ ವಿಷಯವನ್ನ ಮಕರಧ್ವಜ ವಿವರವಾಗಿ ಹನುಮಂತನಿಗೆ ಹೇಳುತ್ತಾನೆ ಮತ್ತು ಇದನ್ನ ಕೇಳಿ ಸ್ವತಃ ಹನುಮಂತ ಆಶ್ಚರ್ಯ ಆಗುತ್ತಾನೆ. ನಂತರ ಐರಾವನ್ ಜೊತೆ ಯುದ್ಧ ಮಾಡಿ ಗೆದ್ದ ಹನುಮಂತ ರಾಮ ಲಕ್ಷ್ಮಣರನ್ನ ಬಿಡಿಸಿ ತನ್ನ ಮಗನನ್ನ ಪರಿಚಯ ಮಾಡಿಸುತ್ತಾನೆ ಮತ್ತು ರಾಮನು ಮಕರಧ್ವಜನನ್ನ ಪಾತಾಳಲೋಕಕ್ಕೆ ರಾಜನನ್ನಾಗಿ ಮಾಡಿ ಧರ್ಮದ ಹಾದಿಯಲ್ಲಿ ಆಡಳಿತ ಮಾಡುವಂತೆ ಹೇಳುತ್ತಾರೆ.

ಕೃಪೆ:- ವಾಟ್ಸಪ್

No comments:

Post a Comment