Monday, 6 January 2020

ಕ್ಷೌರದ ನಿಯಮಗಳು



 ಕ್ಷೌರಕ್ಕೆ ವಿಹಿತ ಮತ್ತು ನಿಷಿದ್ಧ ವಾರಗಳು ಯಾವವು". 
  ಕ್ಷೌರಕ್ಕೂ, ಆಯುಷ್ಯಕ್ಕು ಸಮಬಂಧವಿದೆ.
ಅದಕ್ಕೋಸ್ಕರವಾಗಿಯೇ ಕ್ಷೌರಕ್ಕೆ " ಆಯುಷ್ಕರ್ಮ" ಎಂಬ ಶಬ್ದ ಪ್ರಸಿದ್ಧವಾಗಿತ್ತು.

ಕ್ಷೌರಕ್ಕೆ ಮಂಗಳವಾರ-ಶನಿವಾರ ಮತ್ತು ಭಾನುವಾರ - ನಿಷಿದ್ಧ ದಿವಸಗಳು.
                  
ಬುಧವಾರ. ಸೋಮವಾರ, ಗುರುವಾರ. ಮತ್ತು ಶುಕ್ರವಾರ ಈ ನಾಲಕ್ಕು ದಿನಗಳು ವಿಹಿತವಾದುವು.

                  ಭಾನುವಾರ ಭಯ 
                  ಸೋಮವಾರ ಕಾಂತಿ 
                  ಮಂಗಳವಾರ ಮೃತ್ಯು
                  ಬುಧವಾರ ರಾಜ್ಯ ಸಂಪತ್ತು 
                  ಗುರುವಾರ ವಿಜಯ 
                  ಶುಕ್ರವಾರ ಲೋಕಪ್ರಿಯತೆ
                  ಶನಿವಾರ ವ್ಯಾಧಿ.

                  ಭಾನುವಾರವೂ ಕ್ಷೌರ ಮಾಡಿಸಬಹುದೆಂಬ
ಕೆಲವು ಶಾಸ್ತ್ರಕಾರರ ಅಭಿಪ್ರಾಯವೂ ಇದೆ:

ಕ್ಷೌರಕ್ಕೆ ನಿಷಿದ್ಧವಾದ ಕಾಲ??
                   ದಶಮೀ ಏಕಾದಶಿ ದ್ವಾದಶೀ ಈ ದಿನತ್ರಯದಲ್ಲಿ ಸಂಕ್ರಾದಿ ಪರ್ವಕಾಲದಲ್ಲಿ
                  ಹುಣ್ಣಿಮೆ ಅಮವಾಸ್ಯಾದಿ ತಿಥಿಗಳು ಮತ್ತು ಊಟವಾದಮೇಲೆ,
                  ಆಸನದಲ್ಲಿ ಕುಳಿತುಕೊಳ್ಳದೆ ಪ್ರಯಾಣಕ್ಕೆ ಹೊರಡುವ ಕಾಲದಲ್ಲಿ. 
                  
                  ಅಭ್ಯಂಗ ಸ್ನಾನದ ನಂತರ ಬಂಗಾರಾದಿ ಒಡವೆ ಧರಿಸಿಕೊಂಡು ಕ್ಷೌರವನ್ನು 
                  ಮಾಡಿಸುವವನ ಮನೆಗೆ ದೇವತೆಗಳು ಪಿತೃಗಳು ಪ್ರವೇಶಿಸುವುದಿಲ್ಲ.
                  ಕ್ಶೌರಕರ್ಮ ಜನ್ಮ ಮಾಸ ಮತ್ತು ಜನ್ಮ ನಕ್ಷತ್ರದಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳಬಾರದು.

ಪ್ರಾತಃಕಾಲದಲ್ಲಿ-ಮಾತಾ ಪಿತೃಗಳ ಶ್ರಾದ್ಧದ ದಿನದಲ್ಲಿ-
                ದಶಮೀ-ಏಕಾದಶಿ ಮತ್ತು ದ್ವಾದಶೀ 
                ಈ ಮೂರು ದಿನಗಳಲ್ಲಿ (ತಿಥಿತ್ರಯದಲ್ಲಿ) ಕ್ಷೌರವನ್ನು ಮಾಡಿಸಿಕೊಳ್ಳಬಾರದು
ಪ್ರಾಥಃ ಕಾಲದಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳಬಾರದು. ಸಂಗವಾದಿಕಾಲಗಳಲ್ಲಿ ಮಾಡಿಸಿಕೊಳ್ಳಬೇಕು.
                ಆದ್ದರಿಂದ ಪ್ರಾತಃ ಕಾಲದಲ್ಲಿ ಸ್ನಾನ-ಅಹ್ನೀಕ-ದೇವಪೂಜಾದಿಗಳನ್ನು 
                ಮುಗಿಸಿಕೊಂಡು ಸಂಗವಾದಿ ಕಾಲದಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳುವುದು ಸಂಪ್ರದಾಯ.

 ಕ್ಷೌರಕ್ಕೆ ನಿಷಿದ್ಧವಾದ ತಿಥಿಗಳು ಯಾವುವು?"
                    ಷಷ್ಠಿ
                   ಅಮವಾಸ್ಯೆ
                   ಹುಣ್ಣಿಮೆ
                   ವ್ಯತಿಪಾತ ಎಂಬ ಯೋಗವಿರುವ ತಿಥಿ
                   ಚತುರ್ದರ್ಶೀ
                   ಅಷ್ಟಮಿ

 ರಂಗ ಭೂಮಿ ನಟರು, ರಾಜರು,ಕಲಾವಿದರು ಬ್ಯೂಟಿ ಷೋದವರ.ರಾಜಕಾರ್ಯದಲ್ಲಿ ನಿಯುಕ್ತರು- ನಟರು-ಸೌಂದರ್ಯದಿಂದ 
               ಬದುಕುವವರು  ಇವರಿಗೆ ಮೀಸೆ, ಕೂದಲು ಉಗುರು ಕತ್ತರಿಸಲು ನಿಬಂಧನೆಯೇ ಇಲ್ಲ .
 ತೀರ್ಥಾದಿ ಕ್ಷೇತ್ರ ನಿಮಿತ್ತವಾದ ಕ್ಷೌರವನ್ನು ನಿಷಿದ್ಧ ದಿನಗಳಲ್ಲೂ ಮಾಡ ಬಹುದು.

 ಅಶೌಚದಲ್ಲಿ ಕ್ಷೌರದ ಬಗ್ಗೆ  ಹೇಗೆ
 ಒಬ್ಬ ಮೃತನಾದರೆ ಅಲ್ಲಿಯೆ ಸನ್ನಿಹಿತರಾದ ಸಪಿಂಡರಿಗೆ
 ( ೧೦ ದಿನದ ದಾಯಾದಿಗಳಿಗೆ) ಕ್ಷೌರವು ವಿಹಿತವಾದುದು
   ಮೃತನ ಸನ್ನಿಧಿಯಲ್ಲಿ ಸಪಿಂಡರು ಇಲ್ಲದಿದ್ದರೆ ಅವರು ಯಾವಾಗಲೂ  ಮರಣ ನಿಮಿತ್ತವಾದ ಕ್ಷೌರವನ್ನು ಮಾಡಿಸ್ಬೇಕಾಗಿಲ್ಲ.

ಹುಟ್ಟಿದ  ಗಂಡು ಮಗುವಿಗೆ ಎಷ್ಟು ವರ್ಷದೊಳಗೆ ಕ್ಷೌರ ಸಂಸ್ಕಾರ ಮಾಡಬೇಕು?"
 ಹುಟ್ಟಿದ ಗಂಡು ಮಗುವಿಗೆ ಐದು ವರುಷದೊಳಗೆ ಕ್ಷೌರ  ಸಂಸ್ಕಾರವನ್ನು ಮಾಡಿಸಬೇಕು. 
                    
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

No comments:

Post a Comment