"ಜೋತಿಷ್ಯ ಮತ್ತು ಪ್ರಶ್ನ ಶಾಸ್ತ್ರ "
ಶಿಕ್ಷಾ, ಕಲ್ಪ,ನಿರುಕ್ತ,ಛಂದಸ್ಸು,ವ್ಯಾಕರಣ & ಜೋತಿಷ್ಯ ಈ ಆರು ಷಡಂಗಗಳನ್ನು ಒಳಗೊಂಡಿರುವ ವೇದ ದ ಕಣ್ಣು ಎಂದರೆ ಜೋತಿಷ್ಯ.
ಸಾಮಾನ್ಯವಾಗಿ ಈಗ ಜ್ಯೋತಿಷಿಗಳು ಎಲ್ಲ ಭಾಗದಲ್ಲಿಯೂ ಸಿಗುತ್ತಾರೆ ..ನ್ಯೂಮರಾಲಜಿ ...ವೈದಿಕ ಜ್ಯೋತಿಷ್ಯ .. ಪಂಚಾಂಗ ಜ್ಯೋತಿಷ್ಯ ..ಹಸ್ತ ಸಾಮುದ್ರಿಕ, ಕವಡೆ ಶಾಸ್ತ್ರ ,ಮುಖಲಕ್ಷಣ ಜ್ಯೋತಿಷ್ಯ, ಹುಟ್ಟು ಮಚ್ಚೆಗಳನ್ನು ನೋಡಿ ಹೇಳುವವರು ಹೀಗೆ ಹಲವು ರೀತಿ.
ಮನುಷ್ಯನಲ್ಲಿ ಸಾಮಾನ್ಯವಾಗಿ ಒಂದಲ್ಲ ಒಂದು ರೀತಿಯಲ್ಲಿ ಮುಂದಿನ ಕಾಲಘಟ್ಟದ ಜೀವನವನ್ನು ತಿಳಿದುಕೊಳ್ಳಬೇಕು ಎಂಬ ಉತ್ಸಾಹವಿದ್ದೇ ಇರುತ್ತದೆ. ಈ ರೀತಿಯ ಭವಿಷ್ಯವನ್ನು ಕೇಳಿ ತಿಳಿದುಕೊಳ್ಳುವ , ತಿದ್ದಿಕೊಳ್ಳುವ ಹಾದಿಯಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚು.
ಜೋತಿಷ್ಯ ಮತ್ತು ಪ್ರಶ್ನ ಶಾಸ್ತ್ರ ಅಭ್ಯಾಸ ಮಾಡುವವರಿಗೆ ದೈವಾನುಗ್ರಹ ಇರಬೇಕು. ಅನುಷ್ಠಾನವಂತರಾಗಿರಬೇಕು.
ಹಿಂದೆ ಜ್ಯೋತಿಷ್ಯ ಹೇಳುವವರನ್ನು ಜ್ಯೋತಿಷಿ ಎಂದು ಕರೆಯುತ್ತಿರಲಿಲ್ಲ ಆತನಿಗೆ ವಿಶೇಷವಾದಂತಹ ದೈವಜ್ಞ ಎಂಬ ಪದವನ್ನು ಪ್ರಯೋಗ ಮಾಡಲಾಗುತ್ತಿತ್ತು ...ಈತನಿಗೆ ಗ್ರಹ ವಿಜ್ಞಾನ ಗಣಿತ ಶಾಸ್ತ್ರ ವಿಜ್ಞಾನದ ಪೂರ್ಣ ತಿಳಿವಳಿಕೆ ಹಾಗೂ ಮನಃಶಾಸ್ತ್ರದ ಸಂಪೂರ್ಣ ಪರಿಚಯ ಇರುತ್ತಿತ್ತು ... ಜೊತೆಗೆ ವೇದಪಾಠ ಮೂಲಿಕಾ ಶಾಸ್ತ್ರ ,ಯಂತ್ರ ಶಾಸ್ತ್ರಗಳ ಪರಿಚಯ ಇರುತ್ತಿತ್ತು ...ಜೊತೆಗೆ ಅತ್ಯಂತ ಶ್ರೇಷ್ಠವಾದ ವೈದಿಕ ಚಿಂತನೆ ಇತ್ತು..ಅಲ್ಲದೆ ಭಗವಂತನ ಅನುಷ್ಠಾನವನ್ನು ತಾನು ಇಟ್ಟುಕೊಂಡಿರುತ್ತಿದ್ದರು ಅನುಷ್ಠಾನವೂ ಎಷ್ಟು ತೀವ್ರವಾಗಿತ್ತೆಂದರೆ ನಿತ್ಯ ಪೂಜೆ ಅನುಷ್ಠಾನ ಜೊತೆಗೆ ತಾನು ಮಾಡುತ್ತಿರುವ ಸಾತ್ವಿಕವಾದ ಜಪ ಮುಗಿಸದೆ ಜ್ಯೋತಿಷ ಹೇಳಲು ತಾನು ಕೂರುತ್ತಿರಲಿಲ್ಲ .ಜಪ ತಪ ಅನುಷ್ಠಾನಗಳು ಇಲ್ಲ ಎ೦ದರೆ ನಾವು ಹೇಳಿದ ಜ್ಯೋತಿಷ ಫಲಿಸುವುದಿಲ್ಲ ಎಂಬುದು ಅವರಿಗೆ ಸಂಪೂರ್ಣವಾಗಿ ಗೊತ್ತಿದ್ದ ವಿಷಯ. ಈ ರೀತಿಯಾಗಿ ತನ್ನ ಅನುಷ್ಠಾನವೆಲ್ಲ ಮುಗಿಸಿದ ಮೇಲೆ ದೈವಜ್ಞ ಭಗವಂತನನ್ನು ತನ್ನ ಮನಸ್ಸಿನಲ್ಲಿ ಸ್ಥಾಪಿಸುತ್ತಾ ಆ ಕ್ಷಣದ ಸಂಪೂರ್ಣ ಗ್ರಹ ಗಣಿತವನ್ನು ಲೆಕ್ಕ ಮಾಡಿ ದಾಖಲು ಮಾಡಿಕೊಂಡು ಹೊರಗೆ ತಾನು ಬಂದು ಕುಳಿತುಕೊಳ್ಳುತ್ತಾರೆ.
ಪ್ರಶ್ನೆಗಾಗಿ ತಾನು ಕುಳಿತುಕೊಂಡ ಗಳಿಗೆಯಿಂದಲೂ ಸಹ ತನ್ನ ಉಸಿರಾಟದ ಏರಿಳಿತಗಳನ್ನು ತನ್ನ ಮನಸ್ಸಿನಲ್ಲಿ ಉಂಟಾಗುವ ಸಮಸ್ತ ಏರುಪೇರುಗಳನ್ನು ಎಲ್ಲವನ್ನೂ ಸಹ ಅಂದಿನ ವಾತಾವರಣದ ಸಮಸ್ತ ಪ್ರಕೃತಿಯ ಸಮತೋಲನ ಅಸಮತೋಲನವನ್ನು ತಲ್ಲಣವನ್ನು ಗಮನಿಸುತ್ತಾ ತಮ್ಮ ಮನಸ್ಸಿಗೆ ಎಲ್ಲವನ್ನೂ ತಂದುಕೊಂಡು ಲೆಕ್ಕಾಚಾರವನ್ನು ಹಾಕುತ್ತಾರೆ...ಪದ್ಮಾಸನದಲ್ಲಿ ಕುಳಿತುಕೊಂಡು ತನ್ನ ಮನಸ್ಸಿನಲ್ಲಿ ಪರಮೇಶ್ವರನನ್ನು ಪ್ರತಿಷ್ಠಾಪಿಸಿ ಆ ದಿನ ನನ್ನನ್ನು ಅರಸಿ ಬರುವ ಮನುಷ್ಯನಿಗೆ ನಾನು ಉತ್ತರವನ್ನು ಕೊಟ್ಟು ಅವರನ್ನು ಸಮಸ್ಯೆಯಿಂದ ಹೊರಗೆ ತರುತ್ತೇನೆ ಎಂಬ ದೃಢವಾದ ವಿಶ್ವಾಸದಿಂದ ..ತನಗೆ ಯಾವುದೇ ಸ್ವಾರ್ಥವಿಲ್ಲದೇ ಕುಳಿತಿರುತ್ತಾರೆ ..ಇಂಥವರು ದಿನಕ್ಕೆ ಸಿಕ್ಕುವುದು ಒಂದರಿಂದ ಎರಡು ಗಂಟೆ ಅವಧಿಯಲ್ಲಿ ಮಾತ್ರ
ಹಣಕ್ಕಾಗಿ ಜೀವನೋಪಾಯಕ್ಕಾಗಿ ಇದು ವ್ಯಾಪಾರವಲ್ಲ. ಹಣದಾಸೆಯಿಂದ ಇದನ್ನು ಉಪಯೋಗಿಸಿದರೆ ಅಥವ ಸುಳ್ಳು ಕಪಟ ಮಾಡಿದರೆ
ಜೀವನ ಪರ್ಯಂತ ಇದರಿಂದ ತೊಂದರೆ ತಪ್ಪಿದ್ದಲ್ಲ.
.....
ಯಾವ ರಾಶಿಗೆ ಯಾವ ಹರಳು(ರತ್ನ)?
ನೀವು ಜ್ಯೋತಿಷ್ಯರಿಗೆ ಕೇಳುವ ಪ್ರಶ್ನೆ ಇದು.
ಕೆಲವು ಜ್ಯೋತಿಷ್ಯರನ್ನು ಕೇಳಿದಾಗ ಹೆಸರಿನ ಆಧಾರದಲ್ಲಿ, ಸಂಖ್ಯಾಶಾಸ್ತ್ರದ ಆಧಾರದಲ್ಲಿ ರತ್ನಗಳ ನಿರ್ಧಾರ ಹೇಳುತ್ತಾರೆ.ಕೆಲವು ರತ್ನ ವ್ಯಾಪಾರಿಗಳು ಅಂಗಡಿಯಲ್ಲಿ ರತ್ನ ಧಾರಣೆಯ ಕೆಟ್ಲಾಗ್ ತಯಾರಿಸಿ ನಮಗೆ ನೀಡುತ್ತಾರೆ.
ಇದು ಹೇಗೆಂದರೆ ಉದಾಃಗೆ ಮೇಷರಾಶಿಯಲ್ಲಿ ಜನಿಸಿದವರಿಗೆ ರಾಶ್ಯಾಧಿಪ ಕುಜನ ಪ್ರೀತ್ಯರ್ಥ ಹವಳವನ್ನು ಧರಿಸಬೇಕು ಎನ್ನುತ್ತಾರೆ ಒಬ್ಬರು.ಇನ್ನೊಬ್ಬರು ಆ ರಾಶಿಯ ಯೋಗಕಾರಕ ರವಿಯ ಪ್ರೀತ್ಯರ್ಥ ಮಾಣಿಕ್ಯ,ಯೋಗಕಾರಕ ಗುರು ಪ್ರೀತ್ಯರ್ಥ ಕನಕ ಪುಷ್ಯರಾಗ ಉತ್ತಮ ಎಂದು ಹೇಳುತ್ತಾರೆ. ಈ ರೀತಿಯ ಗೊಂದಲಗಳಿಂದ ಜನರು ಅದು ಸರಿಯೋ ಇದು ಸರಿಯೋ ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಕೊನೆಗೆ ಈ ಸಲಹೆಯ ಮೇರೆಗೆ ರತ್ನ ಧರಿಸಿ ಉಲ್ಟಾ ಹೊಡೆಯುವುದೂ ಇದೆ. ಹಾಗಾದರೆ ,ನಿಜವಾದ ರತ್ನಧಾರಣೆಯ ಕ್ರಮ ಹೇಗೆ?
ರತ್ನ ಧಾರಣೆಯ ವಿಚಾರವನ್ನು ಕೇವಲ ರಾಶಿ ಆಧಾರದಲ್ಲಿ ಸಲಹೆ ನೀಡುವುದು ಸರಿಯಾಗಲಾರದು.
ಇದೊಂದು ಸುಲಭೋಪಾಯವಷ್ಟೆ. ನಿನ್ನ ರಾಶಿಯಾವುದು.ಹಾಗಾದರೆ ಇಂತಹ ರತ್ನ ಸೂಕ್ತ ಎಂದು ಹೇಳಿದರೆ ಮುಗಿಯಿತು.
ಇದೊಂದು ಕೈತೊಳೆದುಕೊಳ್ಳುವ ಕೆಲಸವಾಯಿತಷ್ಟೆ. ಇದು ಹಿಗಾಗಬಾರದು.ಪೃಚ್ಛಕನು ತನ್ನ ಒಳಿತಿಗಾಗಿ ಕೇಳುವಾಗ ಒಳಿತಾಗುವಂತದ್ದನ್ನೇ ಹೇಳುವುದು ಜ್ಯೋತಿಷಿಯ ಧರ್ಮ.
ಮಾನವ ಶರೀರಕ್ಕೆ ಮುಖ್ಯ ಬಲ ನೀಡುವಂತದ್ದು ಕುಜಾದಿ ಪಂಚ ಗ್ರಹರು.ಅದರ ನಿಯಂತ್ರಣವನ್ನು ರವಿ ಚಂದ್ರರು ಮಾಡುತ್ತಾರೆ. ಇದರ ಬಲ ವೃದ್ಧಿ ಕ್ಷಯಗಳನ್ನು ರಾಹು ಕೇತುಗಳು ಮಾಡುತ್ತಾರೆ. ಜಾತಕದಲ್ಲಿ ಈ ಗ್ರಹರ ಬಲಾಬಲ ನೋಡಬೇಕು.
ಉದಾಃಗೆ ಜಾತಕದಲ್ಲಿ ಗುರು ಕೇವಲ 2°ಇದ್ದು ದಾಗಿದ್ದಾಗ ಜ್ಞಾನಕ್ಕೆ ಕೊರತೆಗಳಾಗುತ್ತದೆ.
ಇನ್ನು ಈ ಗುರುವಿಗೆ ಸ್ಥಾ ನಾದಿ ಬಲಗಳಿವೆಯೇ ಎಂಬುದನ್ನೂ ವಿಮರ್ಷಿಸಬೇಕು.ಯಾವ ಗ್ರಹನ ಬಲ ಅತ್ಯಂತ ಕ್ಷೀಣವಿದೆಯೋ ಅದಕ್ಕನುಗುಣವಾದ ರತ್ನ ಧಾರಣೆಯು ಯೋಗ್ಯವಾಗುತ್ತದೆ.ಗುರುವಿನಿಂದ ಜ್ಞಾನ, ಬುಧನಿಂದ ಚತುರತೆ, ವಾಕ್ ಪ್ರೌಢಿಮೆ ಕುಜನಿಂದ ಮತ್ತು ರವಿಯಿಂದ ಪರಾಕ್ರಮ, ಸಾಧನೆ personality, ಚಂದ್ರ ಶುಕ್ರರಿಂದ ಅಲಂಕಾರ, ರೂಪ, ದಾಂಪತ್ಯ ಸುಖ, ರಾಹು ಕೇತುಗಳಿಂದ ಯಾವುದೇ ರೀತಿಯ ಮೋಹಾದಿಗಳ ವಿಚಾರವನ್ನು ತಿಳಿಯಬೇಕು.ಈ ಗ್ರಹರು ಪ್ರಭಲವಾಗಿದ್ದರೆ ಮತ್ತು ರಾಶಿಗೆ ಯೋಗಕಾರಕರೆಂದು ಆ ಗ್ರಹನಿಗೆ ತಕ್ಕ ರತ್ನವನ್ನು ಹೇಳಿದರೆ ಪ್ರಯೋಜನವಾಗದು. ಹಾಗಾಗಿ ರತ್ನ ಧಾರಣೆಗೆ ಗ್ರಹರ ಬಲಾಬಲ ಗಳೇಮುಖ್ಯವಲ್ಲದೆ, ರಾಶಿ ಆಧಾರದಿಂದ ಹೇಳುವುದು ಖಂಡಿತವಾಗಿಯೂ ಸರಿಯಾಗದು.ಇಲ್ಲೊಂದು ವಿಚಾರ ಗಮನಿಸಿರಿ - ಒಬ್ಬ ರಾಶ್ಯಾಧಿಪ ಗ್ರಹನು ಯಾವುದೋ ಒಂದು ಭಾವಕ್ಕೆ ಮಾರಕನಾಗಿರಲೇ ಬೇಕು. ಆಗ ಅವನ ಪ್ರಯುಕ್ತ ಧರಿಸಿದ ರತ್ನವು ಇನ್ನೊಂದು ಭಾವಕ್ಕೆ ಮಾರಕವೇ ಆಗುವುದಿಲ್ಲವೇ. ರಾಶ್ಯಾಧಾರಿತ ರತ್ನ ಧಾರಣೆ ಯಾರಿಗೋ ಕಾಕತಾಳಿಯವಾಗಿ ಸರಿಯಾಗಿರಬಹುದು.ಆದರೆ ರಾಶ್ಯಾಧಾರವು ಸಿದ್ಧಾಂತವಲ್ಲ. ಗ್ರಹಗಳ ಬಲಾಬಲ ಆಧಾರಿತವು ಪೂರ್ಣ ಸೈದ್ಧಾಂತಿಕವಾಗಿದೆ.
ಸಂಕಲ್ಪದಲ್ಲೂ ಆದಿತ್ಯಾದಿ ನವಗ್ರಹ 'ಶುಭ' ಏಕಾದಾಶ ಸ್ಥಾನ ಫಲಪ್ರಾಪ್ತಿ ದ್ವಾರಾ........ಕರಿಷ್ಯೆ ಎಂದು ಹೇಳುವುದು ಸಕಲ ಗ್ರಹಗಳ ಬಲಿಷ್ಟತೆಯ ಪ್ರಾಪ್ತಿಗಾಗಿ.ಒಟ್ಟಿನಲ್ಲಿ ಕುಜಾದಿ ಪಂಚಗ್ರಹರು ಪಂಚಭೂತಗಳ ಅಧಿಪರಾಗಿ ಶರೀರದ ಬೆಳವಣಿಗೆಗೆ ಬೇಕು.ರವಿ ಚಂದ್ರರು ಈ ಗುಣಗಳನ್ನು ಬೇಕಾದಂತೆ ವೃದ್ಧಿಮಾಡಬೇಕು. ರಾಹು ಕೇತುಗಳು ಈ ಗುಣಗಳನ್ನು ಹೆಚ್ಚಿಸುವ ಮತ್ತು ಕಡಿಮೆಮಾಡುವ ಗುಣ ಹೊಂದಿರುತ್ತಾರೆ. depression or existing ತತ್ವ ಇವರಲ್ಲಿದೆ.
ಮುಂದುವರೆಯುವುದು
ಪ್ರಶಾಂತಭಟ್ ಕೋಟೇಶ್ವರ
No comments:
Post a Comment