#ಪರಶಿವನ__ವಿಭೂತಿಯ__ಮಹಿಮೆಯ__ಕಥೆ____
ಹಣೆ, ಎದೆ, ತೋಳುಗಳ ಮೇಲೆ ಅಡ್ಡಲಾಗಿ ಎಳೆದಿರುವ ಭಸ್ಮದ ಮೂರು ಪಟ್ಟೆಗಳು ಪ್ರಮುಖ ಲಾಂಛನ. ಈ ಮೂರು ಪಟ್ಟಿಗಳು ಇಚ್ಛಾ, ಕ್ರಿಯಾ, ಜ್ಞಾನಶಕ್ತಿಗಳ ಸಂಕೇತ. ಹಾಗೆ ಪರಬ್ರಹ್ಮನ ಪ್ರತಿಕವಾಗಿರುವ 'ಓಂ'ನ ಸಂಕೇತ ಕೂಡ. ಈ ಲಾಂಛನ ಮೂರು ವೇದಗಳಾದ ಋಗ್, ಯಜುರ್, ಸಾಮವೇದಗಳನ್ನು ಪ್ರತಿನಿಧಿಸುತ್ತದೆ.
ಹಣೆ, ಎದೆ, ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಳ್ಳುವುದರಿಂದ
ಶಿವನು ಸಂಪ್ರೀತನಾಗುತ್ತಾನೆ, ಮಹಾ ಪಾಪಗಳಿಂದ ಮುಕ್ತಿ ಪಡೆಯಲು ಇದೊಂದು ಸುಲಭ ಹಾಗೂ ಸರಳ ಮಾರ್ಗ ಎನ್ನುತ್ತದೆ ಪುರಾಣ ಹಾಗೆ ಪುರಾಣದಲ್ಲಿ ಪರಶಿವನ ವಿಭೂತಿ ಮಹಿಮೆ ಕುರಿತಾಗಿ ಒಂದು ಕಥೆ ಬರುತ್ತದೆ.
ಸರಸ್ವತಿ ಲಕ್ಷ್ಮಿ ಎಲ್ಲರು ಬಂಗಾರ ಹಾಕಿಕೊಂಡಿದ್ದಾರೆ. ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬರದೆಂದು ಕೇಳಿದಳು. ಸ್ವಾಮಿ ನನಗೆ ಬಂಗಾರ
ಹಾಕಿಕೊಳ್ಳುವ ಬಯಕೆಯಾಗಿದೆ. ನನಗೆ ಅನುಗ್ರಹಿಸು ಎಂದು.
ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ
ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ!
ನನ್ನಲ್ಲಿರುವುದು ಇದೆ. ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ
ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ ಎಂದ.
ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ) ಕ್ಕೆ ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು.
ಆಗ ಕುಬೇರ ನಗುತ್ತಾ ಇದಕ್ಕೆ ಏನು ತುಕದ ಬಂಗಾರವ ಕೊಡಲಾಗುತ್ತದೆ.
ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ. ಇಲ್ಲ ನನಗೆ ಇದರ ತೂಕವೇ ಬೇಕು. ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ
ಅಣತಿಯಂತೆ, ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ
ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ..
ಕುಬೇರ ಎಷ್ಟು ಬಂಗಾರ ಹಾಕಿದರೂ ತೂಕವದು ಮೇಲೆಳಲೇ ಇಲ್ಲ ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ.
ಕುಬೇರನಿಗೂ ನಾನೆಂಬ ಆಹಂ ಭಾವವಿತ್ತು ಅದಕ್ಕೆ ಹೀಗಾಯಿತು.
ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ
ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು.
ಆಗ ಕುಬೇರನು ತಾಯಿ ನಾನು ಆಹಂಕಾರದಿಂದ ನುಡಿದೆ ಕ್ಷಮಿಸಿ. ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ. ಹಾಕಿದರೂ, ಸರಿದೂಗಲಾರದು ಎಂದು
ಕೈ ಮುಗಿದ. ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ "ಶಿವ ಕೊಟ್ಟ ಭಸ್ಮವೇ ಬಂಗಾರ" ಎಂದು ಧರಿಸಿಕೊಂಡಳು.
No comments:
Post a Comment