ನಾಗಾರಾಧನೆ
ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ., ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.
ನಾಗನಿಗೇಕೀ ಮಹತ್ವ?
ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಆದುದರಿಂದ ಸರ್ಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.
ಸರ್ಪಗಳ ಜನ್ಮ, ಸರ್ಪ ಸಂಕುಲ
ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು. ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ.
ಸರ್ಪ ಶಾಪ ಬರುವುದು ಹೇಗೆ?
ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷ ,ಸರಿಸೃಪನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಾರೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗಾರಾಧನೆಯನ್ನು ಮಾಡಲಾಗುತ್ತದೆ.
*ಸರ್ಪರಾಜ ಅಷ್ಟೋತ್ತರ..*
ಓಂ ಅನಂತಾಯ ನಮಃ
ಓಂ ವಾಸುದೇವಾಯ ನಮಃ
ಓಂ ತಕ್ಷಕಾಯ ನಮಃ
ಓಂ ವಿಶ್ವತೋಮುಖಾಯ ನಮಃ
ಓಂ ಕರ್ಕೋಟಕಾಯ ನಮಃ
ಓಂ ಮಹಾಪದ್ಮಾಯ ನಮಃ
ಓಂ ಪದ್ಮಾಯ ನಮಃ
ಓಂ ಶಂಖಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಧೃತರಾಷ್ಟ್ರಾಯ ನಮಃ ||೧೦||
ಓಂ ಶಂಖಪಾಲಾಯ ನಮಃ
ಓಂ ಕುಳಿಕಾಯ ನಮಃ
ಓಂ ಸರ್ಪನಾಥಾಯ ನಮಃ
ಓಂ ಇಷ್ಠದಾಯಿನೇ ನಮಃ
ಓಂ ನಾಗರಾಜಾಯ ನಮಃ
ಓಂ ಪುರಾಣಾಯ ನಮಃ
ಓಂ ಪುರುಷಾಯ ನಮಃ
ಓಂ ಅನಘಾಯ ನಮಃ
ಓಂ ವಿಶ್ವರೂಪಾಯ ನಮಃ
ಓಂ ಮಹೀಧಾರಿಣೇ ನಮಃ
||೨೦||
ಓಂ ಕಾಮದಾಯಿನೇ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಕುಂಡಪ್ರಭಾಯ ನಮಃ
ಓಂ ಬಹುಶಿರಸೇ ನಮಃ
ಓಂ ದಕ್ಷಾಯ ನಮಃ
ಓಂ ದಾಮೋದರಾಯ ನಮಃ
ಓಂ ಅಕ್ಷರಾಯ ನಮಃ
ಓಂ ಗಣಾಧಿಪಾಯ ನಮಃ
ಓಂ ಮಹಾಸೇನಾಯ ನಮಃ
ಓಂ ಪುಣ್ಯಮೂರ್ತಯೇ ನಮಃ
ಓಂ ಗಣಪ್ರಿಯಾಯ ನಮಃ
||೩೦||
ಓಂ ವರಪ್ರದಾಯ ನಮಃ
ಓಂ ವಾಯುಭಕ್ಷಕಾಯ ನಮಃ
ಓಂ ವಿಶ್ವಧಾರಿಣೇ ನಮಃ
ಓಂ ವಿಹಂಗಮಾಯ ನಮಃ
ಓಂ ಪುತ್ರಪ್ರದಾಯ ನಮಃ
ಓಂ ಪುಣ್ಯರೂಪಾಯ ನಮಃ
ಓಂ ಬಿಲೇಶಾಯ ನಮಃ
ಓಂ ಪರಮೇಷ್ಠಿನೇ ನಮಃ
ಓಂ ಪಶುಪತಯೇ ನಮಃ
ಓಂ ಪವನಾಶಿನೇ ನಮಃ
||40||
ಓಂ ಬಲಪ್ರದಾಯ ನಮಃ
ಓಂ ದಾಮೋದರಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಯಾರೂಪಾಯ ನಮಃ
ಓಂ ಧನಪ್ರದಾಯ ನಮಃ
ಓಂ ಮತಿದಾಯಿನೇ ನಮಃ
ಓಂ ಮಹಾಮಾಯನೇ ನಮಃ
ಓಂ ಮಧುವೈರಿಣೇ ನಮಃ
ಓಂ ಮಹೋರಗಾಯ ನಮಃ
ಓಂ ಭುಜಗೇಶಾಯ ನಮಃ
ಓಂ ಭೂಮರೂಪಾಯ ನಮಃ ||೫೦||
ಓಂ ಭೀಮಕಾಮಾಯ ನಮಃ
ಓಂ ಭಯಾಪಹತೇ ನಮಃ
ಓಂ ಸಕಲರೂಪಾಯ ನಮಃ
ಓಂ ಶುದ್ಧದೇಹಾಯ ನಮಃ
ಓಂ ಶೋಕಹಾರಿಣೇ ನಮಃ
ಓಂ ಶುಭಪ್ರದಾಯ ನಮಃ
ಓಂ ಸಂತಾನದಾಯನೇ ನಮಃ
ಓಂ ಸರ್ಪೇಶಾಯ ನಮಃ
ಓಂ ಸವದಾಯನೇ ನಮಃ
ಓಂ ಸರೀಸೃಪಾಯ ನಮಃ
||೬೦||
ಓಂ ಲಕ್ಷ್ಮೀಕರಾಯ ನಮಃ
ಓಂ ಲಾಭದಾಯಿನೇ ನಮಃ
ಓಂ ಲಲಿತಾಯ ನಮಃ
ಓಂ ಲಕ್ಷ್ಮಣಾಕೃತಯೇ ನಮಃ
ಓಂ ದಯಾರಾಶಯೇ ನಮಃ
ಓಂ ದಾಶರಥಾಯ ನಮಃ
ಓಂ ದಾಶರಥಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಮಾಶ್ರಮಾಯ ನಮಃ
ಓಂ ರಮ್ಯರೂಪಾಯ ನಮಃ
ಓಂ ರಾಮಭಕ್ತಾಯ ನಮಃ
ಓಂ ರಾಮಭಕ್ತಾಯ ನಮಃ
||೭೦||
ಓಂ ರಣಧೀರಾಯ ನಮಃ
ಓಂ ರತಿಪ್ರದಾಯ ನಮಃ
ಓಂ ಸೌಮಿತ್ರಿಯೇ ನಮಃ
ಓಂ ಸೋಮಸಂಕಾಶಾಯ ನಮಃ
ಓಂ ಸರ್ಪರಾಜಾಯ ನಮಃ
ಓಂ ಸತಾಂಪ್ರಿಯಾಯ ನಮಃ
ಓಂ ಕರ್ಬುರಾಯ ನಮಃ
ಓಂ ಕಾಮಫಲಪ್ರದಾಯ ನಮಃ
ಓಂ ಕಿರೀಟಿನೇ ನಮಃ
ಓಂ ಕಿನ್ನರಾರ್ಚಿತಾಯ ನಮಃ
||೮೦||
ಓಂ ಪಾತಾಳವಾಸಿನೇ ನಮಃ
ಓಂ ಪರಾಯ ನಮಃ
ಓಂ ಫಣಿಮಂಡಲಮಂಡಿತಾಯ ನಮಃ
ಓಂ ಆಶೀವಿಷಾಯ ನಮಃ
ಓಂ ವಿಷಧರಾಯ ನಮಃ
ಓಂ ಭಕ್ತನಿಧಯೇ ನಮಃ
ಓಂ ಭೂಮಿಧಾರಿಣೇ ನಮಃ
ಓಂ ಭವಪ್ರಿಯಾಯ ನಮಃ
ಓಂ ನಾರಾಯಣಾಯ ನಮಃ
ಓಂ ನಾಗರಾಜಾಯ ನಮಃ
ಓಂ ನಾನಾರೂಪಾಯ ನಮಃ
||೯೦||
ಓಂ ಜನಪ್ರಿಯಾಯ ನಮಃ
ಓಂ ಕಾಕೋದರಾಯ ನಮಃ
ಓಂ ಕಾವ್ಯರೂಪಾಯ ನಮಃ
ಓಂ ಕಲ್ಯಾಣಾಯ ನಮಃ
ಓಂ ಕಾಮಿತಾರ್ಥದಾಯಿನೇ ನಮಃ
ಓಂ ಹತಾಸುರಾಯ ನಮಃ
ಓಂ ಹಲ್ಯಹೀನಾಯ ನಮಃ
ಓಂ ಹರ್ಷದಾಯನೇ ನಮಃ
ಓಂ ಹರಭೂಷಣಾಯ ನಮಃ
ಓಂಜಗದಾಧಾರಯೇ ನಮಃ
ಓಂ ಜರಾಹೀನಾಯ ನಮಃ
ಓಂ ಜಾತಿಶೂನ್ಯಾಯ ನಮಃ
ಓಂ ಜಗನ್ಮಯಾಯ ನಮಃ
ಓಂ ವಂಧ್ಯಾತ್ವದೋಷ ಶಮನಾಯ ನಮಃ
ಓಂ ವರಪುತ್ರಫಲಪ್ರದಾಯ ನಮಃ
ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ ||108||
*ಇತಿ ಶ್ರೀ ನಾಗರಾಜ ಅಷ್ಟೋತ್ತರ ಸಂಪೂರ್ಣಂ ..*
No comments:
Post a Comment