ಅಗಸ್ತ್ಯ ಋಷಿ
----------------------
ಶ್ರೀ ಅಗಸ್ತ್ಯ ಮಹರ್ಷಿಗಳು ಸಪ್ತ ಋಷಿಗಳಲ್ಲಿ ಒಬ್ಬರು ಪುರಾಣಗಳಲ್ಲಿ ಅತ್ಯಂತ ಪ್ರಮುವಾಗಿ ಕಂಡು ಬರುವ ಋಷಿ ಮುನಿ.
ವೇದಗಳ ಕಾಲದಲ್ಲಿ ಈತ ಜಗತ್ ಕಲ್ಯಾಣ ಸಲುವಾಗಿ ವಾತಾಪಿ ಮತ್ತು ಇಲ್ವರೆಂಬ ಅಸುರರನ್ನು ತನ್ನ ಸಂಕಲ್ಪ ಸಾಮರ್ಥ್ಯ ದಿಂದಲೇ ಸಂಹರಿಸಿದನು, ವಿಂದ್ಯಾ ಪರ್ವತವನ್ನ ತಮ್ಮ ತಪಶಕ್ತಿ ಯಿಂದ ಎತ್ತರ ಬೆಳೆಯದಂತೆ ಮಾಡಿದ ಕೀರ್ತಿ ಅವರದು .
ರಾಕ್ಷಸ ಸಂಹಾರಕ್ಕಾಗಿ ತಮ್ಮ ತಪಶಕ್ತಿ ಯಿಂದ ಸಪ್ತ ಸಮುದ್ರದ ನೀರುಎಲ್ಲವನ್ನು ಕುಡಿದವರು ಅನಂತರ ಸಮುದ್ರದ ಅಡಿಯಲ್ಲಿ ಅಡಗಿದ ರಾಕ್ಷಸ ಸಂಹಾರ ಅತ್ಯಂತ ಪ್ರಖ್ಯಾತ ಪುರಾಣಗಳಲ್ಲಿ ಕಂಡು ಬರುವ ಘಟನೆ.
ಇವರ ಚರಿತ್ರೆ ಐತಿಹಾಸಿಕ ವಾಸ್ತುಶಿಲ್ಪ ಶಾಸನ ಪರೀಕ್ಷೆ ಮಾಡಿದಾಗ ಇವರ ಕುರುಹು ಕಾಶಿ ಕ್ಷೇತ್ರದಲ್ಲಿ ವಾಸವಾಗಿದ್ದ .ಅಗಸ್ತ್ಯ ಕುಂಡ ಇತ್ತು ನಶಿಸಿ ಹೋದ ಆ ಪ್ರದೇಶದಲ್ಲಿ ಇಂದಿಗೂ ಆ ಪ್ರದೇಶ ಅಗಸ್ತ್ಯ ಕುಂಡವೆಂತಲೇ ಕರೆಯಲಾಗುತ್ತದೆ. ಅಗಸ್ತ್ಯ ಋಷಿ ಯ ಶಿಷ್ಯ ಎಂದು ಹೇಳಲಾಗುವ ವಿಂಧ್ಯೆ ಎಂಬ ಬಗ್ಗೆ ತಿಳಿದು ಬರುತ್ತದೆ. ಕಾಶಿ ಸಮೀಪದಲ್ಲಿ ವಿಂಧ್ಯಾಚಲವೆಂಬ ಪರ್ವತವಿದೆ. ವಿಂಧ್ಯವಾಸೀನಿ ಎಂಬ ಶಕ್ತಿ ಪೀಠವು ಸಹ ರಾರಾಜಿಸುತ್ತಿದೆ.
ಕಾಲಾಂತರದಲ್ಲಿ ವಿಂದ್ಯಾ ಪರ್ವತ ವನ್ನು ದಾಟಿ ದಕ್ಷಿಣ ಭಾರತಕ್ಕೆ ತೆರಳಿದನು. ಮಾರ್ಗದಲ್ಲಿ ಮಹಾರಾಷ್ಟ್ರ ಪ್ರದೇದಲ್ಲಿಯ ನಾಶಿಕದ ಸಮೀಪ ಒಂದು ಆಶ್ರಮ ನಿರ್ಮಿಸಿ ಕೆಲಕಾಲ ಇದ್ದ ಬಗ್ಗೆ ತಿಳಿದುಬರುತ್ತದೆ.
ಪಾಂಡ್ಯ ದೇಶಕ್ಕೆ ಹೋಗಿ ಅಲ್ಲಿ ರಾಜಗುರುಪದವಿ ಪಡೆದಕೊಂಡ ಕನ್ಯಾಕುಮಾರಿ ಸಮೀಪದ ಪರ್ವತ ಪ್ರದೇಶದಲ್ಲಿ ಕೆಲವು ವರ್ಷ ತಪಸ್ಸಾಚರಿಸಿದ ಬಗ್ಗೆ ತಿಳಿದು ಬರುತ್ತದೆ.
ತನ್ನ ತಪಶಕ್ತಿ ಯಿಂದ ಈತ ಈಗಿನ ಜಾವಾ ದೇಶದ ಪೂರ್ವಭಾಗದಲ್ಲಿಯ "ದಿನಮಯ" ಎಂಬ ಪ್ರದೇಶದಲ್ಲಿ ಹೋದ ಬಗ್ಗೆ ತಿಳಿದುಬರುತ್ತದೆ.
ಕಾಂಬೋಡಿಯಾದ ' ಅಂಕೋರವಾಟ' ದಲ್ಲಿರುವ ಶಿಲಾಲೇಖದ ಆಧಾರದ ಮೇಲೆ ತನ್ನ ಯೋಗ ಸಿದ್ದೀಯ ಸಾಮರ್ಥ್ಯ ದಿಂದ ಅಲೌಕಿಕ ಶಕ್ತಿಯಿಂದ ಇಲ್ಲಿ ಮಹಾದೇವ ಹಾಗೂ ಭದ್ರೇಶ್ವರನನ್ನ ಪೂಜಿಸಿದ ಬಗ್ಗೆ ಪ್ರಾಚೀನ ದೇವಾಲಯ ಕಂಡುಬರುತ್ತದೆ.
ಜಾವಾ ದೇಶದ ಕ್ರಿ.ಪೂ770 ದ್ದು ಎಂದು ತಿಳಿದು ಬರುವ ಶಿಲಾಲೇಖದಲ್ಲಿ ಅಗಸ್ತ್ಯ ಮಹರ್ಷಿ ಯ ಮೂರ್ತಿ ಕೆತ್ತಲ್ಪಟ್ಟಿರುವುದು ಕಾಣಬಹುದಾಗಿದೆ.
ಅಗಸ್ತ್ಯ ರನ್ನ ಶಿವಗುರುವೆಂತಲೂ ,ಭಟ್ಟಾರಕಗುರುವೆಂತಲೂ ಸಂಬೋಧಿಸಲಾಗಿದೆ.
ಕರ್ನಾಟಕದ ಪ್ರದೇಶದಲ್ಲಿ ಆತ ದಕ್ಷಿಣ ಪ್ರಾಂತದಲ್ಲೆಲ್ಲಾ ಸಂಚಾರ ಮಾಡಿದ ಬಗ್ಗೆ ತಿಳಿದುಬರುತ್ತದೆ.
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ "ಕಳಸ" ಎಂಬ ಹೆಸರಿನ ಗ್ರಾಮದಲ್ಲಿ ಇಂದಿಗೂ ಅಗಸ್ತ್ಯ ಸ್ಮಾರಕದ ಕೆಲ ಅವಶೇಷಗಳು ಸಿಗುವುದುಂಟು.
ಪುರಾಣಗಳಲ್ಲಿ ಅಗಸ್ತ್ಯ ಮಹಾಋಷಿಗೆ ಕಲಶೋದ್ಭವ, ಕುಂಭಸಂಭವ ಎಂಬ ಹೆಸರು ಗಳಿಂದ ಸಂಬೋಧಿಸಲಾಗಿದೆ.
ಬಾಳೆಹೊನ್ನೂರ ಸಮೀಪದ ಈ ಚಿಕ್ಕಮಗಳೂರು ಜಿಲ್ಲೆಯ ಮಲಯ ಪರ್ವತ ಪ್ರದೇಶದಲ್ಲಿರುವ "ಕಲಶ" ಎಂಬ ಗ್ರಾಮ ದಲ್ಲಿ ಅಗಸ್ತ್ಯ ಋಷಿ ವಾಸಿಸುತ್ತಿದ್ದ ಬಗ್ಗೆ ತಿಳಿದುಬರುತ್ತದೆ.
ಶ್ರೀ ಜಗದ್ಗುರು ರೇಣುಕಾಚಾರ್ಯ ಭಗವತ್ಪಾದರು ಅಗಸ್ತ್ಯ ನ ಈ ಆಶ್ರಮಕ್ಕೆ ದಯಮಾಡಿಸಿ ಅವನಿಗೆ ಶಿವಾದ್ವೈತ ಸಿದ್ದಾಂತ ಉಪದೇಶಿಸಿದರು.
ಹೀಗೆ ಕಲಶಾಗ್ರಾಮದ ತನ್ನ ಆಶ್ರಮದಲ್ಲಿ ಗುರೂಪದೇಶವನ್ನು ಪಡೆದು ಗುರುಸಂಜಾತನಾದ ಕಾರಣ ದಿಂದಾಗಿ ಇವನಿಗೆ "ಕಲಶಸಂಭವ" ಅಥವಾ "ಕುಂಭೋದ್ಭವ " ಎಂಬ ಹೆಸರುಗಳು ಪ್ರಚಲಿತ ವಾಗಿ ಪ್ರಖ್ಯಾತ ಪಡೆದಿರಬಹುದು.
ವೈದಿಕರಲ್ಲಿ 'ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ' ಎಂಬ ಉಕ್ತಿಯಲ್ಲಿ ಉಪನಯನ ದೀಕ್ಷೆ ಪಡೆದವರನ್ನು ದ್ವಿಜ ಎನ್ನಲಾಗಿದೆ.
ಶೈವ ಸಂಸ್ಕಾರ ದಲ್ಲಿ ಲಿಂಗದೀಕ್ಷೆ ಸಂಸ್ಕಾರ ಪಡೆದವರನ್ನ ದ್ಜಿಜ" ರೆಂಬುದಾಗಿ ಸಂಬೋಧಿಸಲಾಗಿದೆ.
ದ್ವಿಜ ಎಂದರೆ ಎರಡನೆಯ ಜನ್ಮವನ್ನು ಪಡೆದವನು ಎಂದರ್ಥ.
ಗುರುವಿನಿಂದ ದೀಕ್ಷಾದಿ ಸಂಸ್ಕಾರವನ್ನು ಪಡೆದು ಉಪದೇಶವನ್ನು ಪಡೆದು ಕೊಂಡಾಗ ಮನುಷ್ಯನಿಗೆ ಒಂದು ಹೊಸ ಜನ್ಮವಾದಂತೆ ಎಂಬುದು ಶಾಸ್ತ್ರೀಯ ವಿಚಾರವಾಗಿದೆ.
ತಂದೆ ತಾಯಿ ಗಳಿಂದ ನಮಗೆ ಸಂಸ್ಕಾರಹೀನವಾದ ಮಾಂಸಪಿಂಡವು ಪ್ರಾಪ್ತವಾದರೆ, ಗುರು ಅದಕ್ಕೆ ಸಂಸ್ಕಾರ ವನ್ನು ಕೊಟ್ಟು ಅದನ್ನು ಮಂತ್ರ ಪಿಂಡವಾಗಿಸುತ್ತಾನೆ.
ಹೀಗೆ ಪಡೆಯುವ ಸಂಸ್ಕಾರ ಸಹ ಒಂದು ವಿಧವಾದ ಪುನರ್ಜನ್ಮ ವಿದ್ದಂತೆಯೆ.
ಈ ವಿಚಾರದಂತೆ ಕಲಶಾಗ್ರಾಮದ ತನ್ನ ಆಶ್ರಮದಲ್ಲಿ ಅಗಸ್ತ್ಯ ಮಹರ್ಷಿ ಶ್ರೀ ಜಗದ್ಗುರು ರೇಣುಕರಿಂದ ಸಂಸ್ಕಾರವನ್ನು ಪಡೆದು ತತ್ತ್ವೋಪದೇಶವನ್ನು ಪಡೆದು ಕೊಂಡ ಕಾರಣ ಕಲಶಾಗ್ರಾಮ ಸಂಸ್ಕಾರ ಪಡೆದು ದ್ವೀತಿಯ ಜನ್ಮಪಡೆದ ಎಂದು ಹೇಳುವುದು ಶಾಸ್ತ್ರೀಯ ವಾಗಿದೆ.
ಶ್ರೀ ಸಿದ್ದಾಂತ ಶಿಖಾಮಣಿಯಲಿ ಮಲಯ ಪರ್ವತದ ಹಾಗೂ ಅಗಸ್ತ್ಯಾಶ್ರಮದ ವಿಸ್ತೃತ ವರ್ಣನೆ ಕಂಡುಬರುತ್ತದೆ.
ಶ್ರೀ ರೇಣುಕಾ ಅಗಸ್ತ್ಯ ರ ಸಂವಾದ ರೂಪದಲ್ಲಿ ಗ್ರಂಥ ರಚನಾಕಾರ ಶ್ರೀ ಶಿವಯೋಗಿ ಶಿವಾಚಾರ್ಯ ರು ಆ ಗ್ರಾಮ ವರ್ಣಿಸುವ ಅವಶ್ಯಕತೆ ಗೃಂಥಕರ್ತೃವಿಗೆ ಕಂಡು ಬಂದಿರಲಿಕಿಲ್ಲ.
ಅಗಸ್ತ್ಯ ಮಹರ್ಷಿಯು ಬ್ರಹ್ಮಸೂತ್ರಗಳ ಮೇಲೆ ವೀರಶೈವ ಸಿದ್ದಾಂತ ಪರವಾದ ವೃತ್ತಿಯನ್ನು ಬರೆದಿರುವುದು ಪ್ರಸಿದ್ಧವಾಗಿದೆ.
ಶ್ರೀಪತಿ ಪಂಡಿತಾರಾಧ್ಯರು ಆ ಅಗಸ್ತ್ಯ ವೃತ್ತಿಯನ್ನೆ ಆಧಾರವಾಗಿಟ್ಟುಕೊಂಡು ಶ್ರೀಕರ ಭಾಷ್ಯವನ್ನು ಬರೆದಿರುವುದು ಕಂಡುಬರುತ್ತದೆ.
"ಅಗಸ್ತ್ಯ ಮುನಿ ಚಂದ್ರೇಣ ಕೃತಾಂ ವೈಯ್ಯಾಶಿಕೀಂ ಶುಭಾಮ್|
ಸೂತ್ರವೃತ್ತಿಂ ಸಮಾಲೋಕ್ಯ ಕೃತಂ ಭಾಷ್ಯಂ ಶಿವಂ ಕರಮ್||
ಶ್ರೀಕರ ಭಾಷ್ಯದ ಆರಂಭದಲ್ಲಿ ಈ ಶ್ಲೋಕದಲ್ಲಿ ಕಂಡುಬರುತ್ತದೆ.
ಅಂದರೆ ರೇಣುಕಾಚಾರ್ಯ ರಿಂದ ವೀರಶೈವ ಸಿದ್ದಾಂತ ಉಪದೇಶವನ್ನು ಪಡೆದ ನಂತರ ಮಹರ್ಷಿ ಅಗಸ್ತ್ಯ ನು ಬಾದಾರಾಯಣ ಸೂತ್ರಗಳಿಗೆ ವೀರಶೈವ ಸಿದ್ದಾಂತ ವೃತ್ತಿಯನ್ನು ಬರೆದಿದ್ದ ಎಂಬುದು ತಿಳಿದುಬರುತ್ತದೆ.
ಪಂಜಾಬ್ ರಾಜ್ಯದ ಲುಧಿಯಾನಾ ಜಿಲ್ಲೆಯಲ್ಲಿ "ಜಗರಾವೋ" ಎಂಬಲ್ಲಿ ಪಂಜಾಬ್ ಸಂಸ್ಕೃತ ಅಕಾಡೆಮಿಯು ಅಗಸ್ತ್ಯ ಮಹರ್ಷಿ ಸಾಹಿತ್ಯ ಸಂಶೋಧನೆ ಮಾಡುತಿದ್ದಾರೆ.
ಬಾದರಾಯಣನು ಬರೆದಿರುವ ಬ್ರಹ್ಮಸೂತ್ರಗಳ ಮೇಲೆ ಪಂಡಿತಾರಾಧ್ಯರು ವೀರಶೈವ ಸಿದ್ದಾಂತ ಪ್ರತಿಪಾದಕವಾದ ಭಾಷ್ಯವನ್ನು ಬರೆದಿದ್ದಾರೆ ಅದುವೇ ಶ್ರೀಕರಭಾಷ್ಯವೆಂಬುದಾಗಿ ಸುಪ್ರಸಿದ್ಧ ವಾಗಿದೆ.
"ಪವಿತ್ರಂತೇ (ಋಗ್ವೇದದ9-83-1) ಇತಿ ಋಗ್ವೇದ ಮಂತ್ರಸ್ಯ
ಋಗಿತ್ಯಾಹ ಪವಿತ್ರಂತೇಮಿತತಂ ಬ್ರಹ್ಮಣಸ್ವತೇ|
ತಸ್ಮಾತ್ ಪವಿತ್ರಂ ತಲ್ಲಿಂಗಂ ಧಾರ್ಯಂ ಶೈವಮನಾಯಮ್||
ದೀಕ್ಷಯಾ ರಹಿತಃ ಸಾಕ್ಷಾನ್ನೋಪ್ನುಯಾಲ್ಲಿಂಗಮುತ್ತಮಮ್|
ಇತಿ ಸಿದ್ದಾಂತ ಶಿಖಾಮಣೌ ಶ್ರೀ ರೇಣುಕಾಚಾರ್ಯಣ ಲಿಂಗಧಾರಣಪರತ್ತ್ವೇನ ನಿರ್ದೇಶಾತ್.
(ಬ್ರ.ಸೂ. ಶ್ರೀಕರಭಾಷ್ಯ)
ಹೀಗೆ ಶ್ರೀ ಸಿದ್ದಾಂತ ಶಿಖಾಮಣಿ ಗ್ರಂಥನಾಮನಿರ್ದೆಶವನ್ನು ನೋಡಿದರೆ ಶ್ರೀ ಸಿದ್ದಾಂತ ಶಿಖಾಮಣಿಯು ಶ್ರೀಪತಿ ಪಂಡಿತಾರಾಧ್ಯರಿಗಿಂತಲೂ ಪೂರ್ವ ಕಾಲದ್ದೆಂಬುದು ಸಿದ್ದವಾಗುತ್ತದೆ.
ಆಂದ್ರಪ್ರದೇಶದ ವಿಜಯವಾಡದಲ್ಲಿ ಇರುವ ಪಲ್ಲಕೇತರಾಜನಿಂದ ಬರೆಯಿಸಲ್ಪಟ್ಟ ಶಿಲಾಲೇಖ ಆಧಾರದ ಮೇಲೆ ಶ್ರೀ ಪತಿಪಂಡಿತಾರಾಧ್ಯರ ಕಾಲವನ್ನು ಕ್ರಿ.ಶ 1070 ಎಂದಿದೆ. ಅಂದರೆ ಶ್ರೀಕರಭಾಷ್ಯದ ಕಾಲವು ಹನ್ನೊಂದನೇ ಶತಮಾನವೆಂಬುದು ಸಿದ್ದವಾಗುತ್ತದೆ.
ಆಧಾರ: ಕಾಶಿ ಜಗದ್ಗುರು ರಚಿತ ಕನ್ನಡ ಅನುವಾದ ಶ್ರಿ ಸಿದ್ದಾಂತ ಶಿಖಾಮಣಿ ವ್ಯಾಖ್ಯಾನ ಗ್ರಂಥ ಪ್ರವಚನ ಪ್ರಭೆ
Dattatreya S Mulge
No comments:
Post a Comment