#ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ
#ಅಂತಹ
ಜಲದ ಸಿಂಚನದ ನದಿಗಳ ಬಗ್ಗೆ ತಿಳಿಯೋಣ ಬನ್ನಿ
#ಕುಬ್ಜಾ
ಬೆಳ್ಳಿಯ ಬೆಟ್ಟದಲ್ಲಿರುವ ಶಿವನಿಗೆ ನಟರಾಜ ಎಂಬ ಹೆಸರಿದೆ . ಈತ ನೃತ್ಯಪ್ರಿಯ . ನಿತ್ಯ ತಾಂಡವ ನೃತ್ಯ ಕುಣಿಯುತ್ತಾ ಇರುವನಂತೆ . ನೃತ್ಯಕ್ಕೆ ಲಯ ಬಹಳ ಮುಖ್ಯ . *ಶಿವನಿಗೆ ಶಕ್ತಿ ತುಂಬಿಸುವಾಕೆ ಶಕ್ತಿ ಸದವರೂಪಿಣಿಯಾದ ಪಾರ್ವತೀದೇವಿ* ಈಕೆ ಕೂಡ ಲಾಸ್ಯ ನೃತ್ಯಪ್ರಿಯೆ . ಇವಳು ಪ್ರಕೃತಿ ಶಿವನು ಪುರುಷ ಇವರೀರ್ವರೂ ನಿತ್ಯ ನರ್ತಿಸುತ್ತಾ ಇರುತ್ತಾರೆ. ಒಂದು ದಿನ ಇವರು ಕುಣಿತದೆ ಕೈಲಾಸದಲ್ಲಿ ಕುಳಿತಿದ್ದರು. *ಶಿವ ಪಾರ್ವತೀ ದೇವಿಗೆ ಹಿಮಾಲಯದ ಚೇತೋಹಾರಿ ಸೌಂದರ್ಯವನ್ನು ತೋರಿಸುತ್ತಾ ವರ್ಣಿಸುತ್ತಿದ್ದನು* ಅವನು ಹಿಮಗಿರಿಯ ಸೊಬಗನ್ನು ನೋಡುತ್ತಿದ್ದಳು. ಪತಿಯ ಮಾತನ್ನು ಕೇಳುತ್ತಿದ್ದಳು. *ಎಲ್ಲವೂ ಯಾಂತ್ರಿಕವಾಗಿತ್ತು. ಅವಳು ಯಾಕೋ ನಿರುತ್ಸಾಹದಿಂದ ಇದ್ದಳು*. ಜಾಣ ಶಿವ ಪತ್ನಿಯ ಮುಖದ ಭಾವರೇಖೆಗಳನ್ನು ನೋಡಿ ಅವಳಲ್ಲಿ ಉಲ್ಲಾಸವಿಲ್ಲವೆಂದು ತಿಳಿದುಕೊಂಡನು. ಯಾವುದೋ ಬಯಕೆ ಅವಳನ್ನು ಉತ್ಸಾಹ ತುಂಬಲು ಪ್ರಯತ್ನಿಸುತ್ತ *ಪ್ರಿಯೇ ನೀನು ನಿರುತ್ಸಾಹದಿಂದ ಇರಲು ಕಾರಣವೇನು*? ಎಂದು ಆಕೆಯನ್ನೇ ಪ್ರಶ್ನಿಸಿದ. ಆಕೆ ಹೇಳಿದಳು *ನನಗೆ ಸ್ವರ್ಗದ ಅಪ್ಸರೆಯರ ನರ್ತನವನ್ನು ನೋಡಬೇಕು* ರಂಭೆ ಊರ್ವಶಿ ......ಈ ಪ್ರಸಿದ್ಧರು ಬೇಡ . ಪ್ರಸಿದ್ಧಿಯ *ಮುಖ್ಯವಾಹಿನಿಯಲ್ಲಿ ಇಲ್ಲದ ಅನೇಕ ಪ್ರತಿಭಾವಂತರು ಕಲಾಲೋಕದಲ್ಲಿರುತ್ತಾರೆ .* ಪ್ರತಿಭೆಯಿದ್ದೂ ಪ್ರಸಿದ್ಧಿಯಿಲ್ಲದ ಕಲಾವಿದೆಯೋರ್ವಳ ನಾಟ್ಯವನ್ನು ನನಗೆ ನೋಡಬೇಕು.
ಗಿರಿಜಾದೇವಿಯ ಮಾತು ಕೇಳಿ ಶಂಕರನು ಸ್ವರ್ಗ ಲೋಕಕ್ಕೆ ದೂತನನ್ನು ಅಟ್ಟಿದನು. *ಪಾರ್ವತಿದೇವಿಯ ಅಪೇಕ್ಷೆಯಂತೆ ಓರ್ವ ನಾಟ್ಯಗಾತಿಯನ್ನು ಕಳುಹಿಸಿಕೊಡಬೇಕೆಂದು ಆದೇಶಿಸಿದನು* ಚಾರಕನು ಶಿವನ ಸಂದೇಶವನ್ನು ಇಂದ್ರನಿಗೆ ತಿಳುಹಿದನು. *ತಕ್ಷಣ ದೇವೇಂದ್ರ ಪಿಂಗಳೆ ಕೆಲವು ದಿನ ಅಲ್ಲೇ ಇದ್ದಳು* ನಿತ್ಯ ನರ್ತನ ಸೇವೆಯಿಂದ ಪಾರ್ವತೀ ದೇವಿಯನ್ನು ಸಂತಸಪಡಿಸುತ್ತಿದ್ದಳು. ವಿವಿಧ ಭಂಗಿಗಳಿಂದ ವೈವಿಧ್ಯಮಯ ನೃತ್ಯಗಳಿಂದ , ವಿನೂತನ ಪ್ರಯೋಗಗಳಿಂದ ಆಕೆ ಪಾರ್ವತೀದೇವಿಯನ್ನು ಸಂತೃಪ್ತಿಪಡಿಸುತ್ತಿದ್ದಳು. *ಪಿಂಗಳೆಯ ಪ್ರತಿಭಾ ವಿಲಾಸಕ್ಕೆ ಸ್ವತಃ ನಾಟ್ಯ ವಿದುಷಿಯಾಗಿರುವ ಗಿರಿಜಾ ದೇವಿ ತಲೆದೂಗಿದಳು* ನಿತ್ಯವೂ ನರ್ತನ ಸೇವೆ ನಡೆಯುತ್ತಿತ್ತು.
ಒಂದು ದಿನ ಶಿವನು ಸ್ವರ್ಗದ ಎಲ್ಲಾ ಅಪ್ಸರೆಯರನ್ನು ಕರೆಸಿ, *ನಾಟ್ಯಹಬ್ಬ ನಡೆಸಿದನು* ರಂಭೆ ಊರ್ವಶಿ ಮೇನಕೆ ಮೊದಲಾದ ಅಪ್ಸರೆಯರೂ ತುಂಬುರ , ನಾರದ ಚಿತ್ರಸೇನ , ಮೊದಲಾದ ಸಂಗೀತಗಾರರೂ ಕೈಲಾಸದಲ್ಲಿ ನೆರೆದರು. *ಮೂರು ಲೋಕದ ಪ್ರಜ್ಞಾವಂತ ಸಹೃದಯಿ ಪ್ರೇಕ್ಷಕರೆಲ್ಲರೂ ನಾಟ್ಯೋತ್ಸವ ನೋಡಲು ಕೈಲಾಸಕ್ಕೆ ಬಂದಿದ್ದರು* ಕಾರ್ಯಕ್ರಮ ಆರಂಭವಾಯಿತು ಸ್ವರ್ಗಲೋಕದ ಸುಂದರಿಯರು ತಮ್ಮ ಪ್ರತಿಭೆ ಪರಿಶ್ರಮಗಳಿಂದ ಅಭೂತಪೂರ್ವ ಪ್ರದರ್ಶನ ನೀಡಿದರು . *ಪಿಂಗಳೆ ಮಾತ್ರ ಹೊತ್ತಿಗೆ ಸರಿಯಾಗಿ ರಂಗವೇರಲೇ ಇಲ್ಲ* ತಡವಾಗಿ ಬಂದ ಪಿಂಗಳೆಯನ್ನು ಕಂಡ ಶಿವ *ನೀನು ಸಮಯಪ್ರಜ್ಞೆ ಇಲ್ಲದ ಅಶಿಸ್ತಿನ ಕಲಾವಿದೆ* ಎಂದು ಬೈದ ಆಕೆಗೆ ಸಿಟ್ಟು ಬಂತು *ಅಶಿಸ್ತಿನವಳು ನಾನಲ್ಲ ನೀನು ಸರಿಯಾಗಿ ಬಟ್ಟೆಯನ್ನು ಧರಿಸಿದ ತಲೆ ಬಾಚಿಕೊಳ್ಳದ ಹುಚ್ಚರಂತೆ ತಿರುಗುವ ಗೊರವ ನೀನು , ನನ್ನ ಅಶಿಸ್ತಿನ ಬಗ್ಗೆ ಹೇಳುವೆಯಾ? ಎಂದು ಎದುರುತ್ತರಿಸಿದಳು. ಅವಳ ಮಾತು ಕೇಳಿ ಶಿವನು ಸುಮ್ಮನಾದರೂ ಪಾರ್ವತಿ ಮಾತ್ರ ಸುಮ್ಮನಿರಲಿಲ್ಲ. ಆಕೆಗೆ ಸಿಟ್ಟು ಬಂತು ಅವಳು ಪಿಂಗಳೆಯನ್ನು ದುರುಗುಟ್ಟಿ ನೋಡಿ ನೀನು ಕುಬ್ಜೆಯಾಗು ಎಂದು ಶಪಿಸಿದಳು* ಕುಬ್ಜೆ ನಡುಗಿದಳು . ಅವಳಿಗೆ ತನ್ನ ತಪ್ಪಿನ ಅರಿವಾಯಿತು. *ಶಿವೆಯ ಪಾದಗಳಿಗೆ ಬಿದ್ದು ಕ್ಷಮೆ ಕೇಳಿದಳು ಪ್ರಸನ್ನಳಾದ ಆಕೆ* ನೀನು ಕುಬ್ಜೆಯಾಗಿ ಭೂಲೋಕದಲ್ಲಿ ಹುಟ್ಟು ಭವಿಷ್ಯದಲ್ಲಿ ಶ್ರೀ ಕೃಷ್ಣನ ಅನುಗ್ರಹದಿಂದ ನಿನ್ನ ಕುಬ್ಜತ್ವವು ನೀಗುತ್ತದೆ . *ಅನಂತರ ನೀನು ನದಿಯಾಗಿ ಸಹ್ಯಾದ್ರಿಯಲ್ಲಿ ಹುಟ್ಟಿ ಹರಿಯಬೇಕು* ಎಂದು ಅನುಗ್ರಹ ಮಾಡಿದಳು ಪಾರ್ವತಿಯ ಮಾತು ನಿಜವಾಯಿತು. ಆಕೆ *ಕುಬ್ಜಾ ನದಿಯಾದಳು*
*ಈಗಲೂ #ಕುಂದಾಪುರದ_ಕಮಲಶಿಲೆಯ_ಕ್ಷೇತ್ರದಲಿ ಹರಿವ ಈ ನದಿಯ ಹರಿವು* ನೋಡಲು ಸೊಬಗು ಹೌದು ಪ್ರತಿ ಪರ್ವದಿನಗಳಲ್ಲಿ ದೇಗುಲದೊಳಗೇ ನುಗ್ಗುವ ಪರಿಯಂತೂ ಅದ್ಭುತವೇ ಸರಿ.
#ಮುಂದುವರೆಯುವುದು...........*.✍💐
#ಮತ್ತೊಂದು_ನದಿಯ_ಮಾಹಿತಿಯೊಂದಿಗೆ
#ಸಂಗ್ರಹ
No comments:
Post a Comment