Thursday, 18 June 2020

ಮೋಹಿನಿ_ಏಕಾದಶಿ_ಮಹಾತ್ಮೆ

#ಮೋಹಿನಿ_ಏಕಾದಶಿ_ಮಹಾತ್ಮೆ...!!!! 🚩🚩🚩🚩🚩🚩🚩

ಅಂದರೆ ವೈಶಾಖ ಮಾಸ ಶುಕ್ಲ ಪಕ್ಷ ಏಕದಶಿಯಾಗಿದ್ದು, ಅದನ್ನು ಮೋಹಿನಿ ಏಕಾದಶಿ ಎಂದು ಕರೆಯಲಾಗಿದೆ. ಈ ದಿನವು ಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಪವಿತ್ರ ದಿನವಾಗಿದೆ. ಮೋಹಿನಿ ಏಕಾದಶಿ ವ್ರತಾಚರಣೆಯು ಶುಭತರಲಿ ಮೋಹಿನಿ ಏಕಾದಶಿ ಮಹಾತ್ಮೆ ವೈದೇಹಿ ಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಲೇ ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ | ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯಃ ಪರಮ್ ವ್ಯಾಖ್ಯಾತಂ ಭರತಾದಿಭಿಃ ಪರಿವ್ರತಂ ರಾಮಂಭಜೇ ಶ್ಯಾಮಲಮ್ || ವೈಶಾಖ ಶುಕ್ಲ ಏಕಾದಶಿಗೆ ಮೋಹಿನಿ ಏಕಾದಶಿ ಎಂಬ ಹೆಸರಿದೆ. ಇಂದು ಶ್ರೀರಾಮನಿಗೆ ಪೂಜೆ ಸಲ್ಲಿಸಿ ಏಕಾದಶಿ ವ್ರತ ಆಚರಿಸಬೇಕು. ಈ ವ್ರತ ಕುರಿತು ಕೂರ್ಮ ಪುರಾಣ ಮತ್ತು ಸೂರ್ಯ ಪುರಾಣದಲ್ಲಿ ಉಲ್ಲೇಖವಿದೆ. ಮೋಹಿನಿ ಏಕಾದಶಿಯ ಮಹಾತ್ಮೆಯನ್ನು ವಶಿಷ್ಠ ಋಷಿಗಳು ಶ್ರೀರಾಮಚಂದ್ರನಿಗೆ ದೃಷ್ಟಾಂತ ಸಹಿತ ಹೇಳಿದ್ದಾರೆ. ದೃಷ್ಟಾಂತ: ಸರಸ್ವತಿ ನದಿ ದಂಡೆಯ ಮೇಲಿರುವ ಸುಂದರ ನಗರ ಭದ್ರಾವತಿ. ಅದನ್ನು ಚಂದ್ರವಂಶದ ದ್ಯುತಿಮಾನ್ ಎಂಬ ರಾಜ ಆಳುತ್ತಿದ್ದ. ಆತ ಧರ್ಮಾತ್ಮನಾಗಿದ್ದ. ಆತನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲರೂ ಸುಖದಿಂದಿದ್ದರು. ಅದೇ ನಗರದಲ್ಲಿ ಧನಪಾಲನೆಂಬ ವ್ಯಾಪಾರಿಯೂ ಇದ್ದ. ಅವನೂ ಕೂಡ ಧರ್ಮಿಷ್ಠನೆನಿಸಿದ್ದ. ನಗರದಲ್ಲಿ ಜನರ ಅನುಕೂಲಕ್ಕಾಗಿ ಸುಂದರವಾದ ಕೊಳಗಳನ್ನು ನಿರ್ಮಿಸಿದ್ದ. ಧಾರ್ಮಿಕ ಕಾರ್ಯಕ್ಕಾಗಿ ಅನೇಕ ಧಾಮಗಳನ್ನೂ, ಉದ್ಯಾನವನಗಳನ್ನು ನಿರ್ಮಾಣ ಮಾಡಿದ್ದ. ಆತ ವಿಷ್ಣುವಿನ ಭಕ್ತನಾಗಿದ್ದ. ಅವನಿಗೆ ಸುಮನಾ, ಸದ್ಬುದ್ಧಿ, ಮೇಧಾವಿ, ಸುಕೃತಿ, ದುಷ್ಟಬುದ್ಧಿ ಎಂಬ ಐವರು ಪುತ್ರರಿದ್ದರು. ಹೇಸರೇ ಹೇಳುವಂತೆ ಅವರಲ್ಲಿ ನಾಲ್ವರು ತಂದೆಯಂತೆ ಸದ್ಗುಣಿಗಳಾಗಿದ್ದರು. ಆದರೆ ದುಷ್ಟಬುದ್ಧಿ ಮಾತ್ರ ಸದಾಕಾಲ ಪಾಪಕಾರ್ಯದಲ್ಲಿ ತೊಡಗಿರುತ್ತಿದ್ದ. ಜೂಜಾಡುವುದು, ದೇವ-ಬ್ರಾಹ್ಮಣ, ಗುರು-ಹಿರಿಯರಿಗೆ ಗೌರವ ಕೊಡದಿರುವುದು, ತಂದೆ ಗಳಿಸಿದ ಹಣವನ್ನು ದುರಾಚಾರಕ್ಕೆ ಬಳಸುವುದು, ತಿನ್ನಬಾರದ್ದನ್ನು ತಿನ್ನುತ್ತಾ, ಮಾಡಬಾರದ್ದನ್ನು ಮಾಡುತ್ತಾ ಇದ್ದ. ಒಂದು ದಿನ ಧನಪಾಲನು ತನ್ನ ಮಗ ದುಷ್ಟಬುದ್ಧಿಯು ಓರ್ವ ವೇಶ್ಯೆಯೊಂದಿಗೆ ಹೋಗುವುದನ್ನು ನೋಡಿದ. ಆತ ಮಗನಿಗೆ ಏನನ್ನೂ ಹೇಳಲಿಲ್ಲ. ಬಂಧುಗಳೆಲ್ಲ ದೂರ ಸರಿದರು. ದುಷ್ಟಬುದ್ಧಿಗೆ ಬುದ್ಧಿ ಬರಲಿಲ್ಲ. ತಂದೆಯಿಂದ ಬಂದ ಆಭರಣಗಳು, ಆಸ್ತಿಯನ್ನೆಲ್ಲ ಕಳೆದುಕೊಂಡ. ಬಡತನಕ್ಕೆ ಗುರಿಯಾದ. ಆತನೊಂದಿಗೆ ಇದ್ದ ವೇಶ್ಯೆ ಕೂಡ ಆತನ ಬಡತನ ನೋಡಿ ಅವಮಾನಿಸಿದಳು. ಆಗ ದುಷ್ಟಬುದ್ಧಿಗೆ ಸಿಟ್ಟು ಬಂತು. ಬಡತನ ನೀಗಿಸಲು ಕಳ್ಳತನಕ್ಕಿಳಿದ, ರಾಜಭಟರು ಇವನನ್ನು ಹಿಡಿದು ಥಳಿಸುತ್ತಿದ್ದರು. ನಂತರ ವರ್ತಕ ಧನಪಾಲನ ಮಗನೆಂದು ಬಿಟ್ಟುಬಿಡುತ್ತಿದ್ದರು. ಹೀಗೇ ಹಲವಾರು ಬಾರಿ ನಡೆಯಿತು. ಇವನ ಉಪಟಳ ಅತಿಯಾಯಿತು. ಆಗ ರಾಜಭಟರು ಅವನಿಗೆ ನಗರದಲ್ಲಿ ಸ್ಥಾನವಿಲ್ಲ ಎಂದು ಹೊರಹಾಕಿದರು. ಅಡವಿಗೆ ತೆರಳಿದ. ಹಸಿವು ನೀರಡಿಕೆಯಿಂದ ಬಳಲಿ ಬೆಂಡಾದಾಗ ಕಾಡುಪ್ರಾಣಿ, ಪಕ್ಷಿಗಳನ್ನು ಕೊಂದು ತಿಂದ. ಸಾಕಷ್ಟು ಪಾಪಕಾರ್ಯ ಮಾಡಿದ. ಯಾವಾಗಲೂ ದು:ಖಿತನಾಗಿ ಜೀವಿಸುತ್ತಿದ್ದ. ಹಿಂದಿನ ಜನ್ಮದ ಪುಣ್ಯದ ಫಲವೇನೋ ಅಲೆದಾಡುತ್ತಾ ಕೌಂಡಿನ್ಯ ಋಷಿಯ ಆಶ್ರಮಕ್ಕೆ ಬಂದ. ಋಷಿಗಳು ಆಗತಾನೆ ಗಂಗೆಯಲ್ಲಿ ಮಿಂದು ಬಂದಿದ್ದರು. ಅವರ ಬಟ್ಟೆಯಲ್ಲಿನ ಒಂದೆರಡು ಹನಿ ಗಂಗೆಯ ನೀರು ಇವನ ಮೇಲೆ ಬಿತ್ತು. ಆಗಲೇ ಅವನ ಅರ್ಧ ಪಾಪ ನಾಶವಾಯಿತು. ಕೆಟ್ಟಬುದ್ಧಿ ಮಾಯವಾಯಿತು. ಋಷಿಗಳಿಗೆ ಕೈಮುಗಿದು "ನಾನು ಜೀವನದಲ್ಲಿ ಸಾಕಷ್ಟು ಪಾಪ ಮಾಡಿದ್ದೇನೆ. ಇದರಿಂದ ಮುಕ್ತಿ ಹೇಗೆ ತಿಳಿಸಿ" ಎಂದು ಬೇಡಿಕೊಂಡ. ಅದಕ್ಕೆ ಕೌಂಡಿನ್ಯರು ಮೋಹಿನಿ ಏಕಾದಶಿ ಆಚರಿಸು ಬೆಟ್ಟದಂತಹ ಪಾಪ ನಾಶವಾಗಿ ಶ್ರೀಹರಿಯ ಪ್ರೀತಿಗೆ ಪಾತ್ರನಾಗುವಿ ಎಂದರು. ಅದರಂತೆ ದುಷ್ಟಬುದ್ಧಿ ವ್ರತಾಚರಣೆ ಮಾಡಿ ದೇವರ ಕೃಪೆಗೆ ಪಾತ್ರನಾಗಿ ಸುಂದರ ರೂಪ ತಾಳಿ ಗರುಡವಾಹನದಲ್ಲಿ ದೇವಲೋಕಕ್ಕೆ ತೆರಳಿದ. ತ್ರೇತಾಯುಗದಲ್ಲಿ ಶ್ರೀರಾಮ ಸೀತೆಯ ಹುಡುಕಾಟದಲ್ಲಿದ್ದಾಗ ವಶಿಷ್ಠ ಮುನಿಗಳು ಹೇಳಿದಂತೆ ಲೋಕಕಲ್ಯಾಣಕ್ಕಾಗಿ ಹಾಗೂ ಲೋಕಶಿಕ್ಷಣಕ್ಕಾಗಿ ಸ್ವತಃ ಆಚರಿಸಿದ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಹೇಳಿದ್ದಕ್ಕೆ ಜೇಷ್ಠ ಪಾಂಡವ ಯುಧಿಷ್ಠಿರನೂ ಸಹ ಆಚರಿಸಿರುವನು. ಎಲ್ಲ ಏಕಾದಶಿಯಂತೆಯೇ ವ್ರತ ಆಚರಣೆ ಕ್ರಮವಿದೆ. ಶ್ರೀರಾಮದೇವರ ಪ್ರತಿಮಾ ಪೂಜೆಯನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಮಾಡಬೇಕು. ವಿಷ್ಣು ಸಹಸ್ರನಾಮ, ಶ್ರೀರಾಮರಕ್ಷಾ ಸ್ತೋತ್ರ ಮುಂತಾದ ಸ್ತೋತ್ರ-ಮಂತ್ರಗಳ ಪಾರಾಯಣ ಮಾಡಬೇಕು. ದೇವರಿಗೆ ಹಣ್ಣುಗಳನ್ನು ಸಮರ್ಪಿಸಬೇಕು. ದೇವರ ಧ್ಯಾನ, ಭಜನೆ, ಗೀತ-ನೃತ್ಯಗಳಿಂದ ಅರ್ಚಿಸಬೇಕು.. ಈ ವ್ರತ ಆಚರಣೆಯಿಂದ ಜನ್ಮಾಂತರದ ಪಾಪನಾಶವಾಗುತ್ತದೆ. ಅನೇಕ ಸಂಕಷ್ಟಕ್ಕೆ ಪರಿಹಾರ ದೊರೆಯುತ್ತದೆ. ಶ್ರೀಹರಿಯ ಕೃಪೆಯಿಂದ ಎಲ್ಲ ತಾಪತ್ರಯಗಳಿಂದ ಮುಕ್ತಿ ದೊರೆಯುತ್ತದೆ. ಕೇವಲ ಕಥೆ ಕೇಳಿದರೂ, ಓದಿದರೂ ಸಹ ಒಂದು ಸಾವಿರ ಗೋದಾನ ಮಾಡಿದ ಫಲ ಪ್ರಾಪ್ತಿಯಾಗುತ್ತದೆ. ವಿಷ್ಣು ದೇವರ ಆಶೀರ್ವಾದವನ್ನು ಪಡೆಯಲು, ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನ ವಿಷ್ಣು ದೇವರು ಮೋಹಿನಿಯ ಅವತಾರ ತಾಳಿದರೆಂಬ ಪ್ರತೀತಿಯಿದೆ. ರಾಮ ದೇವರಿಗೂ ಈ ಹಬ್ಬಕ್ಕೂ ಇರುವ ಕಥೆ ಇಂತಿದೆ. ರಾವಣ ಸೀತೆಯನ್ನು ಅಪಹರಿಸಿದ ನಂತರ ರಾಮನು ಪರಿತ್ಯಕ್ತ ಭಾವದಲ್ಲಿದ್ದನು. ಇದನ್ನು ಗಮನಿಸಿದ ವಶಿಷ್ಟ ಮುನಿಗಳು ಮೋಹಿನಿ ಏಕಾದಶಿಯನ್ನು ಆಚರಿಸುವ ಮೂಲಕ ಜೀವನದಲ್ಲಿನ ಎಲ್ಲ ದುಃಖಗಳಿಗೂ ಕೊನೆ ಹಾಡಬಹುದು ಎಂದು ತಿಳಿಹೇಳಿ ಈ ಹಬ್ಬದ ದಂತಕಥೆಯನ್ನು ವಿವರಿಸಿದರು. ಒಂದನೊಂದು ಕಾಲದಲ್ಲಿ ಸರಸ್ವತಿ ನದಿ ದಂಡೆಯ ಮೇಲಿನ ರಾಜ್ಯವನ್ನು ಧನಪಾಲನೆಂಬ ರಾಜನು ಆಳುತ್ತಿದ್ದನು. ಅವನಿಗೆ ಸುಮನ, ದ್ಯುತಿಯಂ, ಮೇಧಾವಿ, ಸುಕ್ತಿ ಮತ್ತು ದೃಷ್ಟಬುದ್ಧಿ ಎಂಬ ಮಕ್ಕಳಿದ್ದರು. ಅವನ ಮಕ್ಕಳಲ್ಲಿ, ದೃಷ್ಟಬುದ್ದಿಯು ಕೆಟ್ಟ ಜನರ ಸಹವಾಸ ಮಾಡಿ, ತನ್ನೆಲ್ಲ ಧನ ಸಂಪತ್ತನ್ನು ಕಳೆದುಕೊಂಡು, ಹಣಕ್ಕಾಗಿ ರಾಜ್ಯದಲ್ಲಿ ಜನರನ್ನು ಸುಲಿಗೆ ಮಾಡುವಾಗ ಸಿಕ್ಕಿಬಿದ್ದು ರಾಜ್ಯದಿಂದ ಹೊರಹಾಕಲ್ಪಟ್ಟನು. ಅಂದಿನಿಂದ ಆಹಾರಕ್ಕಾಗಿ ಕಾಡಿನಲ್ಲಿ ಬೇಟೆ ಆಡುತ್ತಾ, ದಾರಿಹೋಕರನ್ನು ದೋಚುತ್ತಿದ್ದನು. ಒಂದು ಬಾರಿ ದೋಚುವಾಗ ಮುನಿಯ ತೇಜಸ್ಸನ್ನು, ದೋಚಲು ಮನಸ್ಸು ಬಾರದೆ ಪಾಪ ಪರಿಹಾರದ ಮಾರ್ಗಕ್ಕಾಗಿ ಬೇಡಿದನು. ಆಗ ಮುನಿಯು ಮೋಹಿನಿ ಏಕಾದಶಿಯೆಂದು ಉಪವಾಸ ಆಚರಿಸಲು ಹೇಳಿದರು. ನಂತರ ಹಾಗೆ ಮಾಡಿ ತನ್ನ ಪಾಪಕರ್ಮಗಳನ್ನು ಕಳೆದುಕೊಂಡನು.

#ಶ್ರೀ_ಕೃಷ್ಣಾರ್ಪಣ_ಮಸ್ತು. 🙏 🌺

ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺!!!🚩🚩🚩

Read more at: https://www.mymandir.com/p/l5mbv

No comments:

Post a Comment