#ರಾಮಾನುಜಾಚಾರ್ಯರ_ಜಯಂತಿಯ_ಪ್ರಯುಕ್ತ_ವಿಶೇಷ_ಲೇಖನ
ರಾಮಾನುಜ ಅಥವಾ ರಾಮಾನುಜಾಚಾರ್ಯ (ಜೀವಾವಧಿ: ೧೦೧೭ - ೧೧೩೭ ಮಧ್ಯೆ) ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾಡಿನ ಪೆರಂಬದೂರಿನಲ್ಲಿಸುಮಾರು ೧೦೧೭ರಲ್ಲಿ ಹುಟ್ಟಿದರು. ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ.ಇವರು ಬಹು ದೊಡ್ಡ ವಿದ್ವಾಂಸರು.ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು.ಶ್ರೀ ವೈಷ್ಣವ ಸಂಪ್ರದಾಯದ ಪ್ರಕಾರ ರಾಮಾನುಜನು ತನ್ನ ಗುರುಗಳ ವಿರುದ್ದ ನಿಂತು ಅವನು ಪರಿಪೂರ್ಣ ಅದ್ವೈತ ವೇದಾಂತವನ್ನು ಪಾಲಿಸಿದ ಎಂದು ಹೇಳಲಾಗಿದೆ.
ರಾಮಾನುಜರವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಇವರ ತಂದೆ ಅಸುರಿ ಕೇಶವ ಸೊಮಯಾಜಿ ದೀಕ್ಷೀತರು. ತಾಯಿಯ ಹೆಸರು ಕಾಂತಿಮತಿ
ರಾಮಾನುಜರ ಪ್ರಕಾರ ಜೀವ, ಜಗತ್ತು, ಈಶ್ವರ, (ದೇವರು-ವಿಷ್ಣು) ಈ ಮೂರೂ ಸತ್ಯಗಳೇ. ಇವನ್ನೇ ಸತ್ , ಚಿತ್, ಈಶ್ವರ ಎನ್ನುವರು. ಜೀವ ಜಗತ್ತುಗಳು ಈಶ್ವರನನ್ನು ಅವಲಂಬಿಸಿವೆ . ಅವನೇ ಅವುಗಳ ನಿಯಂತ್ರಕ. ಜೀವ ಜಗತ್ತುಗಳು ಅವನ ಶರೀರಗಳಂತಿವೆ. ಬೇರೆಯಾಗಿ ಇರುವಿಕೆ , ಬೇರೆಯಾಗದೇ ಇರುವಿಕೆ , -ಅಪಾರ್ಥ ಸಿದ್ಧಿ -ಒಂದೇ ಆಗಿರುವಿಕೆ -ಒಂದೇ ಆಗಿಲ್ಲದಿರುವಿಕೆ ; (ಮೂರೂ) ಚಿತ್ (ಜೀವ) ; ಅಚಿತ್ (ಜಗತ್ತು) ಭಗವಂತನ ವಿಶೇಷಣಗಳು. ಭಗವಂತನು ಇವು ಕೂಡಿದ ಐಕ್ಯವೇ ವಿಶಿಷ್ಟಾದ್ವೈತ ..
ತತ್ವಮಸಿ ಯ ಅರ್ಥ -ತತ್ ಎಂದರೆ ಬ್ರಹ್ಮ (ವಿಷ್ಣು ) ; ತ್ವಂ ಎಂದರೆ ಜೀವನನ್ನು ಪ್ರಾಕಾರವಾಗಿ (ರೂಪಾಂತರದಿಂದ ) ಹೊಂದಿರುವ ಬ್ರಹ್ಮ -(ಜಗತ್ ಕಾರಣವಾದ ಬ್ರಹ್ಮ) . ಜೀವನಲ್ಲಿರುವ ಬ್ರಹ್ಮವೂ ಒಂದೇ /ಎಂದರೆ ಜೀವ ಮತ್ತು ಬ್ರಹ್ಮ ; ಜೀವ - ಬ್ರಹ್ಮ (ವಿಷ್ಣು)( ಒಂದೇಅಲ್ಲ. // ಇದೇ ವಿಶಿಷ್ಟಾದ್ವೈತ.
ಪ್ರಕೃತಿ
ಸಾಂಸಾರಿಕ ಅನುಭವಗಳಿಗೆ ಆಧಾರವಾದುದು.-ಪ್ರಕೃತಿ (ಅಕ್ಷರಾ, ಮಾಯಾ, ಅವಿದ್ಯಾ) ಭಗವಂತನ ಶರೀರ. ಸೃಷ್ಟಿ ಎಂದರೆ ಕಾರಣದ ((ಬ್ರಹ್ಮ) ಇನ್ನೊಂದು ರೂಪಾಂತರ. ನೂಲಿನಿಂದ ಬಟ್ಟೆ ಇದ್ದಂತೆ. ವಿಷ್ಟುವಿನ ಪ್ರಕೃತಿ ಲಕ್ಷ್ಮಿ. ಇವರಿಬ್ಬರ ಅನುಗ್ರಹದಿಂದ ಜೀವನಿಗೆ ಮೋಕ್ಷ (ಮುಕ್ತಿ) ಸಿಗುವುದು.
ರಾಮಾನುಜರ ಪ್ರಕಾರ ಪ್ರತ್ಯಕ್ಷ, ಅನುಮಾನ, ಮತ್ತು , ಶಬ್ದ (ವೇದ-ಪುರಾಣ ವಾಕ್ಯ) ಇವು ಪ್ರಮಾಣಗಳು. ವೇದದ ಜ್ಞಾನ ಕಾಂಡ ಕರ್ಮಕಾಂಡ ಆಗಮಗಳು (ವೈಖಾನಸ ಆಗಮಗಳು), ಆಳ್ವಾರರ ಸ್ತೋತ್ರಗಳು (ವೇದದಂತೆ) ಶಬ್ದ ಪ್ರಮಾಣಗಳು. ನಮಗೆ ಉಂಟಾಗುವ ಎಲ್ಲಾ ಜ್ಞಾನಗಳೂ ಸತ್ಯ. ಸ್ವಪ್ನ , ಭ್ರಮೆಯಲ್ಲೂ ಸತ್ಯಾಂಶವಿದೆ .ಪ್ರಕೃತಿ , ಕಾಲ , ಶುದ್ಧ ಸತ್ಯ , ಧರ್ಮಭೂತ ಜ್ಞಾನ, ಜೀವ , ಈಶ್ವರ ಇವು ದ್ರವ್ಯಗಳು (ಸತ್ಯವಾದ ಶಕ್ತಿಗಳು). "ಅ ದ್ರವ್ಯ"ಗಳು ಹತ್ತು -> ಅವು ಪಂಚ ತನ್ಮಾತ್ರೆ , ತ್ರಿಗುಣಗಳು, ಸಂಯೋಗ ಮತು ಶಕ್ತಿ .
ರಾಮಾನುಜಚಾರ್ಯರ ಕಾರ್ಯ ಸಾಧನೆ ಇನ್ನೂ ಹಲವಾರಿವೆ. ಆದರೆ ಅದು ಯಾವುದೂ ಸಹ ಜನ ಸಾಮಾನ್ಯರಿಗೆ ತಿಳಿದಿಲ್ಲ. ಬಸವಣ್ಣನವರು ಅಂಬೇಡ್ಕರರೂ ಸಹ ಸಮಾನತೆಗಾಗಿ ಹೋರಾಡಿದ್ದರೂ ಆದರೆ ಧರ್ಮವನ್ನು ಧಿಕ್ಕರಿಸಿ ಬಸವಣ್ಣನವರು ಶರಣ ಪಂಥವನ್ನು ಸ್ಥಾಪಿಸಿದರು, ಅಂಬೇಡ್ಕರ್ರರು ಹಿಂದೂತ್ವವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಆದರೆ ರಾಮಾನುಜರು ಧರ್ಮವನ್ನು ಬಿಡದೆ ಎಲ್ಲರೂ ಶ್ರೀಹರಿಯ ದಾಸರು ಎಂದು ನುಡಿದರು.
ಇಂತಹ ಮಹಾನ್ ಚೇತನರ ಆದರ್ಶಗಳು ಬಹುಪಾಲೂ ಶ್ರೀವೈಷ್ಣವರಿಗೆ ತಿಳಿದೇ ಇಲ್ಲ ಎಂಬುದು ದುರಾದೃಷ್ಟಕರ.
ಗುರು ರಾಘವೇಂದ್ರ ಸಾರ್ವಭೌಮರು, ಜಗದ್ಗುರು ಆದಿ ಶಂಕರರು, ಸ್ವಾಮಿ ವಿವೇಕಾನಂದರೂ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಆದರೆ ರಾಘವೇಂದ್ರ ಸ್ವಾಮಿಗಳ ದೈವಿಕಶಕ್ತಿ, ಆದಿಶಂಕರರ ತತ್ವಸಿದ್ಧಾಂತಗಳು, ವಿವೇಕಾನಂದರ ಚಿಂತನೆಗಳು, ಬಸವಣ್ಣನವರ ಸಾಮಾಜಿಕ ಕಳಕಳಿ, ಎಲ್ಲದರ ಸಂಗಮ ರಾಮಾನುಜಾಚಾರ್ಯರು. 120 ವರ್ಷಗಳ ಸಾಧನೆಯ ದೀರ್ಘಾಯುಷ್ಯವನ್ನು ಪೂರೈಸಿ ವೈಕುಂಠವನ್ನು ತಲುಪಿ ಶ್ರೀನಾರಾಯಣನನ್ನು ಸೇರಿದ ಮೇಲೂ ಅವರ ಭೌತಿಕ ದೇಹ 800 ವರ್ಷವಾದರು ರಾಸಾಯನಿಕ ಕ್ರಿಯೆಯೇ ನಡೆಯದೆ ಇನ್ನೂ ದರ್ಶನ ಯೋಗ್ಯವಾಗಿದೆ. ಅಂತಹ ಮಹಾನ್ ತಪಸ್ವಿ ರಾಮಾನುಜರು.
No comments:
Post a Comment