Thursday, 18 June 2020

ಬೃಹದಾರಣ್ಯಕ_ಉಪನಿಷತ್

#ಹಿಂದೂ_ಧರ್ಮದ_ಇತಿಹಾಸ

#ಬೃಹದಾರಣ್ಯಕ_ಉಪನಿಷತ್

ಬೃಹದಾರಣ್ಯಕ ಉಪನಿಷತ್ ಒಂದು ಪ್ರಮುಖ ಉಪನಿಷತ್ತು. ಇದನ್ನು ಸುಮಾರು ಕ್ರಿ.ಪೂ ೮ರಿಂದ ೭ನೇ ಶತಮಾನದಲ್ಲಿ ರಚಿಸಲಾಯಿತು.ಇದು ಶುಕ್ಲ ಯಜುರ್ವೇದದ ಕಾಣ್ವ ಶಾಖೆಗೆ ಸೇರಿದುದಾಗಿದೆ.ಇದರಲ್ಲಿ ಮಧುಕಾಂಡ,ಯಾಜ್ಞವಲ್ಕೀಯ ಕಾಂಡ ಮತ್ತು ಖಿಲಕಾಂಡ ಎಂದು ಮೂರು ಕಾಂಡಗಳೂ ಆರು ಅಧ್ಯಾಯಗಳೂ ಇವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಆತ್ಮವಿದ್ಯೆಯ ವಿಚಾರವಾಗಿ ವಿವೇಚನೆ,ವಿವರಣೆ ಹಾಗೂ ವಿಶದೀಕರಣಗಳಿವೆ.ಈ ಉಪನಿಷತ್ತಿನಲ್ಲಿರುವ ಪ್ರಸಿದ್ಧ ಶ್ಲೋಕ ಇಂತಿದೆ.

ಅಸತೋ ಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ

#ಈಶಾವಾಸ್ಯೋಪನಿಷತ್

ಈಶಾವಾಸ್ಯೋಪನಿಷತ್ ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಮೊದಲನೆಯದು.ಇದರ ಪ್ರಧಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ.ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ್ದು ಗಾತ್ರದಲ್ಲಿ ಚಿಕ್ಕದು.ಇದು ಶುಕ್ಲಯಜುರ್ವೇದದ ವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯಸಂಹಿತೋಪನಿಷತ್'ಎಂದೂ ಹೆಸರಿದೆ. ಇದರಲ್ಲಿ ಜೀವನಕ್ಕೆ ಬೇಕಾದ ನಿಜ ಬೆಳಕು ಅಡಗಿದೆ ಎಂದು ಗಾಂಧೀಜಿ ಅಭಿಪ್ರಾಯ ಪಟ್ಟಿದ್ದಾರೆ.ಈ ಉಪನಿಷತ್ತು ಜ್ಞಾನ-ಅಜ್ಞಾನ,ವಿದ್ಯೆ-ಅವಿದ್ಯೆ,ಕರ್ಮ-ಆತ್ಮಗಳ ಕುರಿತಾಗಿ ಬೆಳಕನ್ನು ಬೀರುತ್ತದೆ.ಭಗವಂತನನ್ನು ಈಶ ಎಂದು ಕರೆದಿರುವ ಈ ಉಪನಿಷತ್ತು,ಜಗತ್ತೆಲ್ಲಾ ಈಶನಿಂದ ಆವೃತವಾಗಿದೆ ಎಂದು ನಂಬುತ್ತದೆ.ಪರದ್ರವ್ಯವನ್ನು ಮುಟ್ಟದೆ,ಜಗತ್ತಿನಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಭೋಧಿಸುತ್ತದೆ.ಇದರ ಪ್ರಥಮ ಶ್ಲೋಕ:

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ | 
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||
ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಇದೆಲ್ಲವೂ ಈಶನಿಂದ ಮುಚ್ಚಲ್ಪಡತಕ್ಕದ್ದು. ಅದರ ತ್ಯಾಗದಿಂದ (ನಿನ್ನನ್ನು)ಕಾಪಾಡಿಕೊ.ಯಾರ ಧನವನ್ನೂ ಬಯಸಬೇಡ.,

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment