Thursday, 18 June 2020

ಶರಾವತಿ ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

#ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

ಅಂತಹ *ಜಲದ ಸಿಂಚನದ ನದಿಗಳ ಬಗ್ಗೆ ತಿಳಿಯೋಣ ಬನ್ನಿ.

              *#ಶರಾವತಿ*

ಶ್ರೀ ರಾಮಚಂದ್ರ ತಂದೆಯ ಮಾತನ್ನು ಸತ್ಯವಾಗಿಸಲು ವನವಾಸ  ಕೈಗೊಂಡ ಕಥೆ ತಿಳಿಯದವರು ವಿರಳ . ಅದಕ್ಕೆ ಹಿನ್ನೆಲೆ *ಚಕ್ರವರ್ತಿ ದಶರಥನ ಬದುಕಿನಲ್ಲಿ ನಡೆದ ಒಂದು ಘಟನೆ* ಶಂಬರನೆಂಬ ರಾಕ್ಷಸನು ದೇವ ಲೋಕಕ್ಕೆ ಧಾಳಿ ಮಾಡಿದ್ದ . ಆತನನ್ನು ಹೊಡೆದೋಡಿಸಲು.‌ದೇವೇಂದ್ರ ದಶರಥನ ಸಹಾಯ ಯಾಚಿಸಿದ್ದ ದಶರಥ ಸ್ವರ್ಗದ ಯುದ್ಧಕ್ಕೆ ಹೋಗುವಾಗ ಕೈಕೆಯನ್ನೂ ಜತೆಗೆ ಕರೆದುಕೊಂಡು ಹೋಗಿದ್ದ . ಸ್ವರ್ಗದಲ್ಲಿ ಯುದ್ಧ ಆರಂಭವಾಯಿತು . ದಶರಥ ಶಂಬರರೊಡನೆ ಮೈಮರೆತು ಹೋರಾಡುತ್ತಿದ್ದ . ಈ ಸಂದರ್ಭದ ಲ್ಲಿ  ಆತನ ರಥಚಕ್ರದ ಕೀಲು ಜಾರಿದ್ದು ಅವನ ಅರಿವಿಗೆ ಬಂದಿರಲಿಲ್ಲ . ಅದನ್ನು ಕೈಕೆ ಗಮನಿಸಿದಳು . ಬೇರೆ ಕೀಲು ಜೋಡಿಸೋಣವೆಂದರೆ ಅಲ್ಲಿರಲಿಲ್ಲ. ತಕ್ಷಣ ಆಕೆ ತನ್ನ ಕಿರುಬೆರಳನ್ನೇ ರಥದ ಚಕ್ರಕ್ಕೆ ಕೀಲಾಗಿಸಿ, ಯುದ್ಧ ಸಾಂಗವಾಗಿ ನಡೆಯುವಂತೆ ನೋಡಿಕೊಂಡಳು. ದಶರಥ ಯುದ್ಧದಲ್ಲಿ ವಿಜಯಿಯಾದ ‌ . ಕೈಕೆಯ ಪ್ರಸಂಗಾವಧಾನತೆ , ಸಾಹಸ , ಸಹಿಷ್ಣುತೆ , ಕಂಡ ದಶರಥ ಆಕೆ ಎರಡು ಆಸೆಗಳನ್ನು ಕೇಳಿಕೊಳ್ಳುವಂತೆ ಹೇಳಿದ . ಆಕೆ ಏನೂ ಕೇಳದೆ ಸಂದರ್ಭ ಬಂದಾಗ ಕೇಳುತ್ತೇನೆ ಎಂದು ಆ ವರಗಳನ್ನು ಪತಿಯಲ್ಲೇ ನ್ಯಾಸವಾಗಿರಿಸಿದಳು. ಶ್ರೀರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ " *ಭರತನಿಗೆ ಪಟ್ಟಕಟ್ಟಬೇಕೆಂದೂ , ರಾಮನು ಹದಿನಾಲ್ಕು ವರ್ಷ ವನವಾಸ ಅನುಭವಿಸಬೇಕು*" ಎಂದೂ ಕೇಳಿಕೊಂಡಳು. 

ದಶರಥನಿಗೆ ಆ ವರಗಳನ್ನು  ಕೊಡುವ ಮನಸ್ಸಾಗಲಿಲ್ಲ. ರಾಮನಿಗೆ ಇದು ತಿಳಿಯಿತು. ತಂದೆಯನ್ನು ಸತ್ಯವಂತನನ್ನಾಗಿಸುವ ಹೊಣೆಗಾರಿಕೆ ರಾಮನದಾಯಿತು. *ಶ್ರೀ ರಾಮನ ಸತ್ಯಪ್ರಿಯತೆ ಆತನ ಅಪ್ಪನನ್ನು ಸುಳ್ಳನ್ನಾಗಿಸಲು ಬಿಡಲಿಲ್ಲ. ಕಾಡಿಗೆ ಹೊರಟೇಬಿಟ್ಟ. ಸತ್ಯವನ್ನು ಕಾಪಾಡಲು ಆತ ಮಾಡಿದ ತ್ಯಾಗ ಆತನನ್ನು ಮನುಷ್ಯತ್ವದಿಂದ ದೈವತ್ವಕ್ಕೇರಿಸಿತು* ಸತ್ಯಕ್ಕೆ ಅಷ್ಟು ಅದ್ಭುತವಾದ ಶಕ್ತಿಯಿದೆ. ಮುಗಿಲಿನಾಚೆಯ ದೇವರಿಗಾಗಿ ಖರ್ಚು ಮಾಡಿ ಕಾಲಹರಣ ಮಾಡುವುದಕ್ಕಿಂತ ಸತ್ಯವನ್ನು ರಕ್ಷಿಸಿದರೆ ನಾವೆಲ್ಲರೂ ದೇವರಾಗಿ ಭೂಮಿಯಲ್ಲೇ ದೈವತ್ವದ ಆನಂದವನ್ನು ಅನುಭವಿಸಬಹುದು. 

ಶ್ರೀ ರಾಮ ಕಾಡಿಗೆ ಹೊರಟಾಗ ಆತನ ಪತ್ನಿ ಸೀತಾದೇವಿ ಮತ್ತು ತಮ್ಮ ಲಕ್ಷ್ಮಣ ಅವನನ್ನು ಹಿಂಬಾಲಿಸಿದರು. ಮೂವರು ವನಾಭಿಮುಖರಾದರು. ತಂದೆ - ತಾಯಿ - ಸೇವಕರು ಮಾತ್ರವಲ್ಲ ಊರಿಗೆ ತಡೆದರೂ ರಾಮ ತಾನಿಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಿಲ್ಲ ನಾರುಡೆಯನ್ನಿಟ್ಟು ತನ್ನನ್ನು ಉತ್ಕಟವಾಗಿ ಪ್ರೀತಿಸುವ ಪತ್ನಿಯನ್ನೂ ತಮ್ಮನನ್ನೂ ಕೊಡಿಕೊಂಡು ಕಾಡಿಗೆ ನಡೆದೇ ಬಿಟ್ಟ. 

ಕಾಡುದಾರಿಯಲ್ಲಿ ಅವರ ಪ್ರಯಾಣ ಸಾಗಿತು . ಕಾಡಿನ ಪಯಣ ನಮಗೆ ಕಲ್ಪಿಸಲು ಕೂಡಾ ಭಯವಾಗುತ್ತದೆ. *ಅಂತಹ ದುರ್ಗಮ ವನಾಂತರದಲ್ಲಿ ಇವರು ಬರಿಗಾಲಲ್ಲಿ ನಡೆಯುತ್ತಿದ್ದರು*.

ಹೀಗೆ ನಡೆಯುತ್ತಾ ಬಂದವರು *ಅಂಬುತೀರ್ಥದ ಸ್ಥಳ ಪುರಾಣ ಕಥೆಯಂತೆ ಅವರು ಸಹ್ಯಾದ್ರಿಯನ್ನು  ಸೇರಿದರು* . ನಡೆ ನಡೆದು ಬಳಲಿ ಬಂದ ಅವರು ಒಂದೆಡೆ ವಿಶ್ರಾಂತಿಗಾಗಿ ನಿಂತರು . *ಅಲ್ಲಿ ಸೀತಾದೇವಿಗೆ ಬಹಳ ಬಾಯಾರಿಕೆ ಆಯಿತು*. ಸುತ್ತಮುತ್ತ ಎಲ್ಲಿ ಹುಡುಕಿದರೂ ನೀರು ಸಿಗಲಿಲ್ಲ. ತಕ್ಷಣ *ಶ್ರೀ ರಾಮಚಂದ್ರ ದೇವರು ತನ್ನ ಬತ್ತಳಿಕೆಯಿಂದ ಒಂದು ಬಾಣ ತೆಗೆದು ಕೆಳಮುಖವಾಗಿ ಪ್ರಯೋಗಿಸಿದರು ಅದು ಭೂಮಿಯ ಬಸಿರನ್ನು ಸೀಳಿಕೊಂಡು ಹೋಯಿತು*. ತಕ್ಷಣ ನೀರಿನ ಬುಗ್ಗೆಯೊಂದು ಚಿಮ್ಮಿ ತೂರಿತು. *ಸೀತೆ ಸಂತೋಷ - ಸಂಭ್ರಮದಿಂದ ಧಾರಳಾ ನೀರು ಕುಡಿದು ಸಂತೃಪ್ತಳಾದಳು . ನೀರಿನ ಬುಗ್ಗೆ ನದಿಯಾಗಿ ಹರಿಯಿತು* 

*ಸಹ್ಯಾದ್ರಿ ಖಂಡದ ಕಥೆ ಇನ್ನೊಂದು ರೀತಿಯಲ್ಲಿದೆ. ರಾಮ ,ಸೀತೆ , ಲಕ್ಷ್ಮಣ , ಪಂಚವಟಿಯಲ್ಲಿ ಇರುವಾಗ ದುಷ್ಟ ರಾವಣ ಸಂನ್ಯಾಸಿ ವೇಷದಿಂದ ಬಂದು ಸೀತೆಯನ್ನು ಅಪಹರಿಸಿಕೊಂಡು ಹೋದ. ರಾಮ- ಲಕ್ಷ್ಮಣರು ಸೀತಾದೇವಿಯನ್ನು ಸೇರಿದರು . ಒಂದೆಡೆ ವಿಶ್ತಾಂತಿಯನ್ನನುಭವಿಸಿದರು. ನಿತ್ಯವೂ ಸೂರ್ಯನಿಗೆ ಅರ್ಘ್ಯವನ್ನು ಕೊಡುವುದು ಶ್ರೀ ರಾಮಚಂದ್ರರ ದಿನಚರಿಯ ಅವಿಭಾಜ್ಯ ಅಂಗ ಅಂದು ಅರ್ಘ್ಯವೀಯಲು ನೀರೇ ಸಿಗಲಿಲ್ಲ . ಆಗ ರಾಮ ಬಾಣ ಪ್ರಯೋಗ ಮಾಡಿ ಭೂಮಿಯಿಂದ ಒರತೆಯನ್ನು ಉಕ್ಕಿಸಿದ ಅರ್ಘ್ಯವಿತ್ತು ಮುನ್ನಡೆದ* 

ಈ ರೀತಿ ಭಿನ್ನ ಪಾಠಗಳಿದ್ದರೂ *ಶರಾವತಿ ನದಿಯ ಉಗಮ ಶ್ರೀ ರಾಮನ ಶರದಿಂದಲೇ ಆಯಿತು . ಶರಪ್ರಯೋಗದಿಂದ ಬುಗ್ಗೆ ಚಿಮ್ಮಿದ ಕಾರಣದಿಂದಲೇ ಅದು ಶರಾವತಿ ನದಿ ಎಂದು ಪ್ರಸಿದ್ದವಾಯಿತು*

ಶರಾವತಿ ನಮ್ಮ ಹೆಮ್ಮೆಯ *ಜೋಗದ ಜಲಪಾತ*
ಶರಾವತಿಯ ಉಗಮ ಸ್ಥಾನ ತೀರ್ಥಹಳ್ಳಿಯ ಹತ್ತಿರ *ಅಂಬುತೀರ್ಥ*
ಹೊನ್ನೆಮರಡು ಎಂಬ ಸುಂದರ ಹಿನ್ನೀರಿನ ತಾಣ.

#ಮುಂದುವರೆಯುವುದು......*💐

*ಮತ್ತೊಂದು ನದಿಯ ಮಾಹಿತಿಯೊಂದಿಗೆ*✍

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment