ಮಕ್ಕಳಿಗೆ ಪರಿಚಯಿಸಿ
🙏☘🙏💐
ಕರೋನಾ ರಜೆ ಕಳೆಯಲು ಕೆಲವು ಮಾಹಿತಿಗಳು.
ಟಿವಿ ಧಾರಾವಾಹಿ ನೋಡಿ ಪಾತ್ರಗಳ ಹೆಸರು ನೆನಪಿಡುವುದು ಕಷ್ಟ ಸಾಧ್ಯ. ಅದಕ್ಕೇ ನಮ್ಮ ಸ್ನೇಹಾತರು ಕಳುಹಿಸಿದ ರಾಮಾಯಣದ ಪಾತ್ರಗಳ ಪರಿಚಯ ಪ್ರಶ್ನೋತ್ತರ ಮಾಲಿಕೆಯಲ್ಲಿ.
1. ರಾಮಚಂದ್ರನ ವಂಶ ಯಾವುದು ?
ಉತ್ತರ – ಸೂರ್ಯವಂಶ, ರಘುವಂಶ, ಇಷ್ವಾಕು ವಂಶ
2. ರಾಮಚಂದ್ರನ ತಾಯಿ ಯಾರು?
ಉತ್ತರ – ಕೌಸಲ್ಯೆ
3. ರಾಮಚಂದ್ರನಿಗೆ ಹೆಣ್ಣು ಕೊಟ್ಟ ಜನಕರಾಜನ ಹೆಸರೇನು?
ಉತ್ತರ – ಸೀರಧ್ವಜ
4. ಜನಕರಾಜನ ರಾಜ್ಯ ಯಾವುದು?
ಉತ್ತರ – ಮಿಥಿಲಾನಗರ / ವಿಧೇಹರಾಜ್ಯ
5. ರಾಮನ ರಾಜ್ಯ ಯಾವುದು?
ಉತ್ತರ – ಅಯೋಧ್ಯೆ
6. ಜನಕರಾಜನ ಸಹೋದರನ ಹೆಸರೇನು?
ಉತ್ತರ – ಕುಶಧ್ವಜ
7. ದಶರಥನ ಮಕ್ಕಳು ಮತ್ತು ಸೊಸೆಯರ ಹೆಸರೇನು?
ಉತ್ತರ – ರಾಮ – ಸೀತೆ, ಲಕ್ಷ್ಮಣ – ಊರ್ಮಿಳೆ
ಭರತ – ಮಾಂಡವಿ ಶತ್ರುಜ್ಞ – ಶ್ರುತಕೀರ್ತಿ
8. ದಶರಥನ ಮೂರು ಮುಖ್ಯ ಪತ್ನಿಯರು ಯಾರು?
ಉತ್ತರ – ಕೌಸಲ್ಯೆ, ಸುಮಿತ್ರ, ಕೈಕೇಯಿ
9. ದಶರಥನು ಯಾವ ಯಾಗ ಮಾಡಿದನು?
ಉತ್ತರ – ಪುತ್ರಕಾಮೇಷ್ಠಿ ಯಾಗ
10. ಆ ಯಾಗ ಯಾರು ಮಾಡಿಸಿದರು?
ಉತ್ತರ – ಋಷ್ಯಶೃಂಗ ಋಷಿ.
11. ದಶರಥನ ಪುತ್ರಕಾಮೇಷ್ಟಿ ಯಾಗ ಮಾಡಿಸಿದವರು ಅವನಿಗೆ ಏನಾಗಬೇಕು?
ಉತ್ತರ : ದಶರಥನ ಮಗಳು ಶಾಂತಾಳ ಪತಿ
12. ಅಲ್ಲಿ ಅಗ್ನಿದೇವ ನೀಡಿದ ಪಾಯಸವನ್ನು ಯಾವ ಪ್ರಮಾಣದಲ್ಲಿ ಹಂಚಿದನು?
ಉತ್ತರ – ಕೌಸಲ್ಯೆಗೆ ಅರ್ಧಭಾಗ, ರಾಣಿ ಸುಮಿತ್ರಾ ಕಾಲುಭಾಗ ಸೇವಿಸಿ ಮತ್ತು ರಾಣಿ ಕೈಕೇಯಿ ಉಳಿದ ಕಾಲುಭಾಗದಲ್ಲಿ ಸ್ವಲ್ಪ ಸೇವಿಸಿ ಮತ್ತೊಮ್ಮೆ ಎರಡನೇ ಬಾರಿಗೆ ಪಾಯಸ ಸೇವಿಸಲು ಸುಮಿತ್ರಾಳಿಗೆ ಮಡಕೆಯನ್ನು ನೀಡಿದರು. ಈ ರೀತಿಯಲ್ಲಿ ಪಾಯಸವನ್ನು ಹಂಚಿಕೊಂಡಿದ್ದರಿಂದ, ಹೆಚ್ಚು ಭಾಗವನ್ನು ಸೇವಿಸಿದ ರಾಣಿ ಕೌಸಲ್ಯ ಶ್ರೀ ರಾಮನಿಗೆ ಜನ್ಮ ನೀಡಿದರು. ರಾಣಿ ಕೈಕೇಯಿ ಭರತನಿಗೆ ಜನ್ಮ ನೀಡಿದರು ಮತ್ತು ಎರಡು ಬಾರಿ ಪಾಯಸ ಸೇವಿಸಿದ ರಾಣಿ ಸುಮಿತ್ರಾ ಲಕ್ಷ್ಮಣ ಮತ್ತು ಶತ್ರುಘ್ನರಿಗೆ ಜನ್ಮ ನೀಡಿದರು.
13. ದಶರಥನ ಮಂತ್ರಿ ಯಾರು?
ಉತ್ತರ – ಸುಮಂತ
14. ದಶರಥನ ಕುಲ ಪುರೋಹಿತರಾರು?
ಉತ್ತರ – ವಸಿಷ್ಠರು
15. ಕೈಕೇಯಿ ದಶರಥನಿಗೆ ಯಾವ ವರ ಕೇಳಿದಳು ?
ಉತ್ತರ – ರಾಮನನ್ನು 14 ವರ್ಷ ವನವಾಸ ಕಳಿಸಿ ಭರತನಿಗೆ ಪಟ್ಟಾಭಿಷೇಕ ಮಾಡಬೇಕು
16 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?
ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ; ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂರಕ್ಷಣೆ, ಪ್ರದ್ಯುಮ್ನ ಅನಿರುದ್ಧ ರೂಪಗಳು.
17. ರಾಮಚಂದ್ರನ ಜನ್ಮದಿನ, ನಕ್ಷತ್ರ ಯಾವುದು?
ಉತ್ತರ – ಚೈತ್ರ ಶುಕ್ಲ ನವಮಿ, ಪುನರ್ವಸು ನಕ್ಷತ್ರ , ಬುಧವಾರ
18. ಬಾಲಕ ರಾಮನನ್ನು ತನ್ನ ಜೊತೆ ಕಳಿಸೆಂದು ಕೇಳಿದ ಋಷಿಗಳು ಯಾರು?
ಉತ್ತರ – ವಿಶ್ವಾಮಿತ್ರ
19. ರಾಮಚಂದ್ರನು ಮೊದಲು ಕೊಂದಿದ್ದು ಯಾರನ್ನು?
ಉತ್ತರ – ತಾಟಕಿಯನ್ನು
20. ರಾಮನ ಬಾಣದ ಗುರಿಗೆ ನೂರಾರು ಮೈಲಿ ದಾಟಿ ಬಿದ್ದವನಾರು?
ಉತ್ತರ – ಮಾರೀಚ
21. ದಶರಥನು ಯಾರ ಅವತಾರ?
ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.
22. ಕೇಸರಿ ಮತ್ತು ಅಂಜನಿ ಯಾರ ಅವತಾರ?
ಉತ್ತರ : ಕೇಸರಿಯು ಮರುತ್ ದೇವತೆಯ ಅವತಾರ ಮತ್ತು ಅಂಜನಿಯು ಪುಂಜಕಸ್ಥಲೀ ಎಂಬ ಅಪ್ಸರೆಯ ಅವತಾರ.
23. ಯಾವ ಯಾವ ದೇವತೆಗಳು ಯಾವ ಯಾವ ವಾನರಾದಿ ರೂಪದಿ ಅವತರಿಸಿದರು?
ಉತ್ತರ : ಬೃಹಸ್ಪತಿ – ತಾರ, ಚಂದ್ರ – ಅಂಗದ; ಶಚೀದೇವಿ – ತಾರೆ
ಯಮ – ಜಾಂಬವಂತ ; ವರುಣ – ಸುಷೇಣ;
ಅಶ್ವಿನಿ ದೇವತೆಗಳು – ಮೈಂದ ವಿವಿಧ. ;
ಅಗ್ನಿ – ನೀಲ ; ವಾಲಿ – ಇಂದ್ರ; ಸುಗ್ರೀವ – ಸೂರ್ಯ
24. ಭರತ, ಲಕ್ಷ್ಮಣ, ಶತ್ರುಜ್ಞರ ಮೂಲ ರೂಪ ಯಾವುದು?
ಉತ್ತರ –
ಭರತನು ಕಾಮನ ಅವತಾರ, ಲಕ್ಷ್ಮಣನು ಆದಿ ಶೇಷನ ಅವತಾರ, ಶತ್ರುಜ್ಞನು ಅನಿರುದ್ಧನ ಅವತಾರ.
25 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?
ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ; ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂರಕ್ಷಣೆ, ಪ್ರದ್ಯುಮ್ನ ಅನಿರುದ್ಧ ರೂಪಗಳು
26. ರಾಮಚಂದ್ರಾದಿ ನಾಲ್ಕು ಪುತ್ರರಿಗೆ ನಾಮಕರಣ ಮಾಡಿಸಿದ ಪುರೋಹಿತರು ಯಾರು?
ಉತ್ತರ – ವಸಿಷ್ಠರು
27 ದಶರಥನ ಸಭೆಗೆ ಆಗಮಿಸಿ ಯಜ್ಞ ರಕ್ಷಣೆಗಾಗಿ ಮಕ್ಕಳನ್ನು ಕಳಿಸೆಂದವರಾರು?
ಉತ್ತರ : ವಿಶ್ವಾಮಿತ್ರರು
28. ದಶರಥನಿಗೆ ಎಷ್ಟು ವರ್ಷ ಕಾಲ ಗಂಡು ಮಕ್ಕಳಿರಲಿಲ್ಲ?
ಉತ್ತರ : 9000 ವರ್ಷಗಳ ಕಾಲ.
29. ವಿಶ್ವಾಮಿತ್ರರ ಇನ್ನೊಂದು ಹೆಸರೇನು?
ಉತ್ತರ : ಕೌಶಿಕ
30. ವಿಶ್ವಾಮಿತ್ರರು ರಾಮನಿಗೆ ಯಾವ ವಿದ್ಯೆಯನ್ನು ಹೇಳಿಕೊಟ್ಟರು?
ಉತ್ತರ : ಬಲಾ, ಅತಿಬಲಾ ಎಂಬ ವಿದ್ಯೆಯನ್ನು ಸಮರ್ಪಿಸಿದರು.
31 ವಿಶ್ವಾಮಿತ್ರರ ಜೊತೆ ಬಂದ ರಾಮಲಕ್ಷ್ಮಣರು ಎಲ್ಲಿ ಸಂಧ್ಯೋಪಾಸನೆ ಮಾಡಿದರು?
ಉತ್ತರ : ಅನಂಗಾಶ್ರಮದಲ್ಲಿ.
32. ಶಿವನು ಕಾಮನನ್ನು ದಹಿಸಿದ ಸ್ಥಳವಾವುದು?
ಉತ್ತರ ; ಅನಂಗಾಶ್ರಮ
33 ತಾಟಕೆಯ ಪತಿ ಯಾರು? ತಾಟಕಿಯ ಮಕ್ಕಳಾರು?
ಉತ್ತರ : ತಾಟಕೆಯ ಪತಿ ಸುಂದ. ಅವಳ ಮಕ್ಕಳು ಮಾರೀಚ ಮತ್ತು ಸುಬಾಹು.
34. ಮಾರೀಚನ ಸಂಹರಿಸಲು ರಾಮನು ಉಪಯೋಗಿಸಿದ ಬಾಣ ಯಾವುದು?
ಉತ್ತರ : ವಾಯುವ್ಯಾಸ್ತ್ರ.
35. ವಿಶ್ವಾಮಿತ್ರರ ತಂದೆ ಯಾರು?
ಉತ್ತರ : ಗಾಧಿ ಮಹಾರಾಜ (ಇಂದ್ರನೇ ಗಾಂಧಿ ರಾಜನಾಗಿ ಅವತರಿಸಿದ್ದು)
36. ಶಿಲಾಸ್ಪರ್ಶದಿಂದ ರಾಮ ಯಾರನ್ನು ಉದ್ಧರಿಸಿದ?
ಉತ್ತರ : ಅಹಲ್ಯಾ
37. ಶಿಲೆಯಾಗೆಂದು ಶಪಿಸಿದವರಾರು?
ಉತ್ತರ : ಶಪಿಸಿದವರು ಅಹಲ್ಯಾ ಪತಿಯಾದ ಗೌತಮರು.
38. ಜನಕರಾಜನ ಯಜ್ಞಶಾಲೆ ಯಾವ ನಗರಕ್ಕೆ ಬಂದನು?
ಉತ್ತರ : ಮಿಥಿಲಾನಗರಕ್ಕೆ ಬಂದನು.
39. ಜನಕರಾಜನಿಗೆ ಸೀತಾ ಪ್ರಕಟವಾಗಿದ್ದು ಹೇಗೆ?
ಉತ್ತರ : ಯಜ್ಞ ಮಾಡಲು ಭೂಮಿ ಅಗೆಯುತ್ತಿದ್ದಾಗ ಭೂಮಿಯಲ್ಲಿ ಪ್ರಾಪ್ತಳಾದಳು.
40. ಜನಕರಾಜನಿಗೆ ಶಿವಧನಸ್ಸು ನೀಡಿದವರಾರು?
ಉತ್ತರ : ಪಿನಾಕಪಾಣಿ ಶಿವ
41. ಸೀತಾ ಸ್ವಯಂವರಕ್ಕೆ ಜನಕರಾಜನ ಷರತ್ತು ಏನು?
ಉತ್ತರ : ಯಾರು ಶಿವಧನಸ್ಸು ಎತ್ತುವರೋ ಅವರಿಗೆ ಸೀತಾ ವಿವಾಹ ಎಂಬ ಶರತ್ತು.
42. ಸೀತಾ ಸ್ವಯಂವರ ನಂತರ ರಾಮನು ಕೊಂದಿದ್ದು ಯಾರನ್ನು?
ಉತ್ತರ : ಅತುಲ ಎಂಬ ದೈತ್ಯನನ್ನು.
43. ಕ್ಷತ್ರಿಯ ಕುಲ ಧ್ವಂಸಕ ಯಾರು ?
ಉತ್ತರ : ಪರಶುರಾಮ
44. ಅತುಲನು ಎಲ್ಲಿ ಅಡಗಿದ್ದ?
ಉತ್ತರ : ಪರಶುರಾಮನ ಉದರದಲ್ಲಿದ್ದ.
45. ಹರಿ ಮತ್ತು ಹರರ ಧನಸ್ಸು ಯಾವುದು?
ಉತ್ತರ : ಹರಿಯ ಧನಸ್ಸು ಶಾಂಙ್ಗ ಮತ್ತು ಹರನ ಧನಸ್ಸು ಪಿನಾಕ.
46. ಪರಮಾತ್ಮನ ಎರಡು ರೂಪಗಳು ಸೀತಾ ಸ್ವಯಂವರದಲ್ಲಿ ಕಂಡುಬಂದವು. ಅವು ಯಾವುದು?
ಉತ್ತರ : ರಾಮ ಮತ್ತು ಪರಶುರಾಮ.
47. ದಶರಥನ ಇಚ್ಛೆಯಂತೆ ರಾಮನ ಪಟ್ಟಾಭಿಷೇಕದ ಸಿದ್ಧತೆ ಮೊದಲು ಅಪ್ರಿಯವೆನಿಸಿದ್ದು ಯಾರಿಗೆ?
ಉತ್ತರ : ಮೊದಲು ಕ್ಷೋಭೆಗೊಳಗಾದವಳು ಮಂಥರೆ.
48. ರಾಮನ ಪಟ್ಟಾಭಿಷೇಕದ ವಾರ್ತೆಯಿಂದ ಖಿನ್ನಳಾದ ಮಂಥರೆ ಯಾರಿಗೆ ದುಷ್ಟ ಬುದ್ಧಿ ಪ್ರೇರೇಪಿಸಿದರು?
ಉತ್ತರ : ಮಂಥರೆ ಕೈಕೇಯಿಗೆ ದುಷ್ಟ ಬುದ್ಧಿ ಪ್ರಚೋದಿಸಿದಳು.
49. ಹಿಂದೆ ಕೈಕೇಯಿ ದಶರಥನಿಗೆ ಮಾಡಿದ್ದು ಸಹಾಯವೇನು?
ಉತ್ತರ : ಹಿಂದೆ ಶಂಬರಾಸುರನೊಂದಿಗೆ ಯುದ್ಧ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿದ್ದ ದಶರಥನ ರಥವನ್ನು ತಾನೇ ಓಡಿಸಿ, ರಥದ ಕೀಲು ಕಳಚಿದ್ದನ್ನು ಗಮನಿಸಿ, ತನ್ನ ಬೆರಳನ್ನೇ ಕೀಲಿನಂತಿರಿಸಿ, ರಥವನ್ನು ರಕ್ಷಿಸಿದ್ದಳು.
50. ರಾಮನಿಗೆ ವನವಾಸ ಹೋಗಬೇಕೆಂದು ವಿಷಯ ತಿಳಿಸಿದವರಾರು?
ಉತ್ತರ : ಸ್ವತಃ: ಕೈಕೇಯಿ
51. ರಾಮನೊಂದಿಗೆ ವನವಾಸಕ್ಕೆ ಹೊರಟವರಾರು?
ಉತ್ತರ : ಲಕ್ಷ್ಮಣ ಮತ್ತು ಸೀತಾ
52. ವನವಾಸ ಪೂರ್ವದಲ್ಲಿ ರಾಮನು ಯಾರಿಗೆ ಸಾವಿರ ಗೋವುಗಳ ದಾನ ನೀಡಿದ?
ಉತ್ತರ : ತ್ರಿಜಟನೆಂಬ ಬಡ ಬ್ರಾಹ್ಮಣನಿಗೆ.
53. ದಶರಥನು ಯಾರ ಅವತಾರ?
ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.
54. ಕೈಕೇಯಲ್ಲಿ ಯಾರ ಆವೇಶವಿತ್ತು?
ಉತ್ತರ : ಕೈಕೇಯಿಯಲ್ಲಿ ನಿಕೃತಿ ಎಂಬ ರಾಕ್ಷಸಿಯ ಆವೇಶವಿತ್ತು.
55. ವನವಾಸಕ್ಕೆ ಹೊರಟ ರಾಮನನ್ನು ಗಂಗಾತೀರದಲ್ಲಿ ಯಾರು ಪೂಜಿಸಿದರು?
ಉತ್ತರ : ಗಂಗಾತೀರದಲ್ಲಿ ನಿಷಾದರಾಜ ಗುಹ ಪೂಜಿಸಿದನು..
56. ಭಾರದ್ವಾಜ ಮುನಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಪ್ರಯಾಗ ಕ್ಷೇತ್ರದಲ್ಲಿತ್ತು.
57. ದಶರಥನು ಸತ್ತಾಗ ರಾಮ ವನವಾಸಕ್ಕೆ ಹೋಗಿ ಎಷ್ಟು ದಿನವಾಗಿತ್ತು?
ಉತ್ತರ : ಆರು ದಿನವಾಗಿತ್ತು.
58. ಭರತನು ರಾಮನನ್ನು ಎಲ್ಲಿ ಭೇಟಿಯಾದರು?
ಉತ್ತರ : ಚಿತ್ರಕೂಟದಲ್ಲಿ ಭೇಟಿಯಾದನು
59. ರಾಮನು ತಿರುಗಿ ಬರಲು ಒಪ್ಪದುದರಿಂದ ಭರತನು ರಾಮನಲ್ಲಿ ಏನನ್ನು ಕೇಳಿ ಪಡೆದನು?
ಉತ್ತರ – ರಾಮನ ಪಾದುಕೆಗಳನ್ನು ಪಡೆದನು.
60. ಭರತನು ಎಲ್ಲಿ ವಾಸಿಸತೊಡಗಿದನು ?
ಉತ್ತರ : ಅಯೋಧ್ಯೆಯ ಹೊರಗಿರುವ ನಂದಿ ಗ್ರಾಮದಲ್ಲಿ.
61. ಸೀತಾದೇವಿಯ ಕುಕ್ಕಿದ ಪ್ರಾಣಿ ಯಾವುದು?
ಉತ್ತರ : ಕಾಗೆ
62. ಕಾಗೆ ರೂಪದಿ ಬಂದವನಾರು? ಅವನಲ್ಲಿದ್ದ ಅಸುರನಾರು?
ಉತ್ತರ : ಕಾಗೆ ರೂಪದಿ ಬಂದವನು ಇಂದ್ರಪುತ್ರ ಜಯಂತ.
ಅವನಲ್ಲಿದ್ದ ಅಸುರ – ಕುರಂಗ.
63. ರಾಮ ಜಯಂತನಿಗೆ ನೀಡಿದ ಶಿಕ್ಷೆ ಏನು?
ಉತ್ತರ : ರಾಮನು ಪ್ರಯೋಗಿಸಿದ ಹುಲ್ಲು ಕಡ್ಡಿಯಿಂದ ಜಯಂತ ವಾಯಸದ ಕಣ್ಣಿನಲ್ಲಿದ್ದ ಕುರಂಗ ಸಂಹಾರ. ಆ ಅಸುರ ಶಿವವರದಿಂದ ಎಲ್ಲಾ ಕಾಗೆಗಳ ಕಣ್ಣಿನಲ್ಲಿ ಸೇರಿದ್ದ. ಶಿವನ ವಿಚಾರವೇನೆಂದರೆ ಎಲ್ಲಿಯವರೆಗೂ ಕಾಗೆಗಳಿಗೆ ಎರಡೂ ಕಣ್ಣು ಇರುವುದೋ ಅಲ್ಲಿಯವರೆಗೂ ಕುರಂಗನಿಗೆ ಸಾವಿಲ್ಲ. ರಾಮ ಕಾಗೆಗಳ ಒಂದು ಕಣ್ಣು ತೆಗೆದು ಕುರಂಗ ಸಂಹರಿಸಿದ.
64. ದಂಡಕಾರಣ್ಯದಲ್ಲಿ ರಾಮ ಯಾರನ್ನು ಕೊಂದನು?
ಉತ್ತರ : ರಾಮನು ಖರ ದೂಷಣರನ್ನು ಕೊಂದನು. ಅವರು ರಾವಣನ ಮಲ ಸಹೋದರರು.
65. ರಾವಣನು ಯಾರ ಮಗ?
ರಾವಣನು ವಿಶ್ರವಸ್ ಮುನಿ ಮತ್ತು ರಾಕ್ಷಸೀ ಕೈಕಸೀ ಮಗ. ಪುಲಸ್ತ್ಯನ ಮೊಮ್ಮಗ.
66. ದಶರಥನ ಮರಣವನ್ನಪ್ಪಿದಾಗ ಜೊತೆಗೆ ಯಾವ ಮಕ್ಕಳಿದ್ದರು?
ಉತ್ತರ : ಯಾವ ಮಕ್ಕಳೂ ಹತ್ತಿರವಿರಲಿಲ್ಲ. ರಾಮಲಕ್ಷ್ಮಣರು ಕಾಡಿಗೂ, ಭರತ ಶತ್ರುಘ್ನರು ತಮ್ಮ ಮಾವನ ಮನೆಗೂ ಹೋಗಿದ್ದರು.
67. ಮರಣವನ್ನಪ್ಪಿದ ದಶರಥನನ್ನು ಹೇಗೆ ಸಂರಕ್ಷಿಸಿದ್ದರು?
ಉತ್ತರ : ಎಣ್ಣೆಯ ಕೊಪ್ಪರಿಗೆ ನಲ್ಲಿಟ್ಟು ದೇಹವನ್ನು ರಕ್ಷಿಸಿದ್ದರು.
68. ದಶರಥನಿಗೆ ಶಾಪವನಿತ್ತವರಾರು?
ಉತ್ತರ : ವೃದ್ಧ ಕುರುಡ ದಂಪತಿಗಳು
69. ದಶರಥನ ಔರ್ಧ್ವ ದೈಹಿಕ ಕಾರ್ಯ ಯಾರು ಮಾಡಿದರು?
ಉತ್ತರ : ವಸಿಷ್ಠ ಮತ್ತು ಜಾಬಾಲಿ ಋಷಿಗಳ ಅಪ್ಪಣೆಯಂತೆ ಭಾರತ ಶತ್ರುಜ್ಞರು ಮಾಡಿದರು.
70. ರಾಮನಿಗೆ “ಧರ್ಮ ಅವಶ್ಯಕತೆ ಇಲ್ಲ. ಜಗತ್ತಿಗೇ ದೇವನಾದ ನೀನು ತಂದೆಯಾಜ್ಞೆ ಪಾಲಿಸಬೇಕಿಲ್ಲ” ಎಂದವರಾರು?
ಉತ್ತರ : ಜಾಬಾಲಿ ಋಷಿಗಳು
71. ವಿಶ್ರವಸ್ ಮುನಿಗಳ ಮಕ್ಕಳು ಯಾರ್ಯಾರು?
ಉತ್ತರ : ಮೊದಲ ಪತ್ನಿ ಇಲಾವಿದಳಲ್ಲಿ (ಇಲಾವಿದಳು ಭಾರದ್ವಾಜರ ಪುತ್ರಿ) ಕುಬೇರ ಜನಿಸಿದನು.
ಕೈಕಸಿಯಿಂದ ರಾವಣ, ಕುಂಭಕರ್ಣ, ವಿಭೀಷಣ ಮತ್ತು ಶೂರ್ಪಣಖಿ
ಇನ್ನೊಬ್ಬ ಪತ್ನಿಯಲ್ಲಿ ಖರ ದೂಷಣರು ಜನಿಸಿದರು
72. ಶರೀರ ತ್ಯಾಗ ಮಾಡಲು ಇಚ್ಛಿಸಿದವನಿಗೆ ರಾಮ ಯಾರಿಗೆ ಅಪ್ಪಣೆ ನೀಡಿದ?
ಉತ್ತರ : ಶರಭಂಗನಿಗೆ ಅಪ್ಪಣೆಯಿತ್ತ.
73. ತನ್ನ ವಿಶಾಲ ಬಾಹುಗಳಿಂದ ರಾಮ ಲಕ್ಷ್ಮಣರನ್ನು ಹೊತ್ತೊಯ್ದು ಯಾರನ್ನು ರಾಮ ಎರಡೂ ತೋಳುಗಳ ಕತ್ತರಿಸಿದನು.
ಉತ್ತರ : ವಿರಾಧನನ್ನು.
74. ಇಂದ್ರನು ರಾಮನಿಗೆ ಯಾರ ಮೂಲಕ ಶಾಂಘ ಧನಸ್ಸು ಕಳಿಸಿದನು.?
ಉತ್ತರ : ಕುಂಭಸಂಭವ ಅಗಸ್ತ್ಯರಿಂದ
75. ಶೂರ್ಪಣಖಿಯ ಪತಿಯನ್ನು ಕೊಂದವರಾರು?
ಉತ್ತರ : ಶೂರ್ಪನಖಿಯ ಪತಿ ವಿದ್ವಜ್ಜಿಹ್ವನನ್ನು ರಾವಣನೇ ಯುದ್ಧದಲ್ಲಿ ಶತ್ರುವೆಂದು ಭಾವಿಸಿ ಕೊಂದನು.
ಮಕ್ಕಳಿಗೆ ಪರಿಚಯಿಸಿ
ಧನ್ಯವಾದಗಳು
ಮಾಹಿತಿ ಒದಗಿಸಿದ ಮಿತ್ರರಿಗೆ ಅನಂತಾನಂತ ವಂದನೆಗಳು
ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮಿಸಿ ಸರಿ ಎನಿಸಿದರೆ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳವುದನ್ನು ಮರೆಯಬೇಡಿ
No comments:
Post a Comment