#ಹಿಂದೂ_ಧರ್ಮದ_ಇತಿಹಾಸ
#ಪ್ರಶ್ನೋಪನಿಷತ್
ಇದು ಅಥರ್ವವೇದದ ಪೈಪ್ಪಲಾದ ಶಾಖೆಗೆ ಸೇರಿದೆಸಾಂಖ್ಯ ದರ್ಶನದ ಮೂಲ ಸಿದ್ಧಾಂತಗಳನ್ನು ನಾವು ಈ ಉಪನಿಷತ್ತಿನಲ್ಲಿ ಕಾಣಬಹುದು.ಪ್ರಶ್ನೋಪನಿಷತ್ ಪಿಪ್ಪಲಾದ ಮಹರ್ಷಿಗಳಿಗೆ ಆರು ಮಂದಿ ಜಿಜ್ಞಾಸುಗಳು ಕೇಳಿದ ಪ್ರಶ್ನೆ ಹಾಗೂ ಮಹರ್ಷಿಗಳು ನೀಡಿದ ಉತ್ತರಗಳನ್ನೊಳಗೊಂಡಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.
ಜಗತ್ತಿನ ಜೀವಿಗಳ ಹುಟ್ಟು, ಪ್ರಾಣ, ಪ್ರಾಣಕ್ಕೂ ದೇಹಕ್ಕೂ ಇರುವ ಸಂಬಂಧ, ಜಾಗ್ರತಾವಸ್ಠೆ ಹಾಗೂ ನಿದ್ರಾವಸ್ಥೆಗಳ ರಹಸ್ಯ, ಸುಖ ದುಖ ವಿವೇಕ, ಓಂ ಶಬ್ದದ ಮಹತ್ವ, ಷೋಡಶ ಭಾಗಾತ್ಮಕ ಶಕ್ತಿಯ ನೆಲೆ ಎಂಬ ಆರು ವಿಷಯಗಳ ಬಗೆಗೆ ಪ್ರಶ್ನೋತ್ತರಗಳು ಇದರಲ್ಲಿವೆ
#ಶ್ವೇತಾಶ್ವತರೋಪನಿಷತ್
ಶ್ವೇತಾಶ್ವತರೋಪನಿಷತ್ ಯಜುರ್ವೇದದ ತೈತ್ತೀರಿಯ ಶಾಖೆಗೆ ಸೇರಿದ ಉಪನಿಷತ್ತು. ಪ್ರಾಚೀನವೂ,ಸತ್ವಪೂರ್ಣವೂ ಆಗಿರುತ್ತದೆ. ಶ್ವೇತಾಶ್ವತರ ಮಹರ್ಷಿಗಳು ಇದನ್ನು ಪ್ರಕಟಪಡಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.ಇದರಲ್ಲಿ ಆರು ಅಧ್ಯಾಯಗಳೂ ೧೧೩ ಮಂತ್ರಗಳೂ ಇವೆ.
Namma Kannada Naadu
No comments:
Post a Comment