*ಜೀವಕ್ಕೆ ಜೀವನಕ್ಕೆ ಜೀವನದಿಗಳ ಕೊಡುಗೆ ಅಪಾರ* ಅಂತಹ *ಜಲದ ಸಿಂಚನದ ನದಿಗಳ ಬಗ್ಗೆ ತಿಳಿಯೋಣ ಬನ್ನಿ
#ಮಧುವಾಹಿನಿ
ಒಂದಾನೊಂದು ಕಾಲದಲ್ಲಿ ಬ್ರಹ್ಮದೇವರು ಯಜ್ಞವೊಂದನ್ನು ಮಾಡಲು ಸಂಕಲ್ಪಿಸಿದರು. *ಯಜ್ಣ ಅಂದರೆ ಅರ್ಪಣೆ ಪ್ರತಿಯೊಬ್ಬನಲ್ಲಿ ಒಂದು ವಿಶೇಷವಾದ ಶಕ್ತಿ ಮತ್ತು ಸಂಪತ್ತು ಇರುತ್ತದೆ* ಅದನ್ನು ಸಮಾಜಕ್ಕೆ ಸಮರ್ಪಿಸಬೇಕೆಂಬ ಅಪೇಕ್ಷೆಯೂ ಇರುತ್ತದೆ. ಆದರೆ ಅದನ್ನು ಹೇಗೆ ಅರ್ಪಿಸಬೇಕೆಂಬ ಅರಿವು ಇರುವುದಿಲ್ಲ . *ಅದಕ್ಕಾಗಿ ಎಲ್ಲರೂ ಒಂದೆಡೆ ಕಲೆತು ತಮ್ಮ ಸಂಪತ್ತು ಮತ್ತು ಸಾಮರ್ಥ್ಯಗಳನ್ನು ಹೇಗೆ ಸದ್ವಿನಿಯೋಗಗೊಳಿಸಬೇಕೆಂದು ಸಮಾಲೋಚಿಸುವ ಸಂದರ್ಭಗಳು ಯಜ್ಞದಲ್ಲಿ ನಡೆಯುತ್ತಿತ್ತು* ಆದ್ದರಿಂದ ವಿದ್ಯಾವಂತರು , ಶ್ರೀಮಂತರು, ಕಲಾವಿದರು ಮತ್ತು ಸಮಾಜದ ಎಲ್ಲಾ ವರ್ಗದ ಜನರು ಆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುತ್ತಿದ್ದರು. *ಬ್ರಹ್ಮದೇವರು ತನ್ನ ಯಜ್ಞ ಸಮಾರಂಭವನ್ನು ನಡೆಸಲು ಭೂಲೋಕದ ಮೇರು ಪರ್ವತದ ಪೃಷ್ಠ ಭಾಗವನ್ನು ಆರಿಸಿದ , ಮರ ಗಿಡ, ಬಳ್ಳಿ , ಪ್ರಾಣಿ, ಪಕ್ಷಿ, ನದಿ ಸರೋವರಗಳಿಂದ ಸಮೃದ್ಧವಾಗಿದ್ದ ಆ ಸುವರ್ಣ ಪರ್ವತವು ಯಜ್ಞ ಕಾರ್ಯದ ಸಾರ್ಥಕತೆಯನ್ನು ಸಾರಲು ಅತ್ಯಂತ ಪ್ರಶಸ್ತವಾಗಿತ್ತು . ಅಲ್ಲಿರುವ ಜಡ- ಚೇತನ - ಸ್ಧಾವರ - ಜಂಗಮಗಳೆಲ್ಲಾ ಕಾಯಕವನ್ನು ಸಮರ್ಪಾಣ ಮನೋಭಾವದಿಂದ ನಡೆಸಬೇಕೆಂದು ಸೂಚಿಸುವ ಸಂಕೇತಗಳಾಗಿದ್ದುವು* ಬಹಳ ಕಾಲ ಯಜ್ಞ ನಡೆಯಿತು ಕಾರ್ಯಕ್ರಮ ಸಮಾಪನಗೊಂಡ ಬಳಿಕ ಕೆಲವು ಸ್ವಾರ್ಥಿ ವಿದ್ವಾಂಸರು ಬ್ರಹ್ಮದೇವರನ್ನು ಭೇಟಿಯಾಗಿ *ನಿಮ್ಮ ಪಾವನ ಪಾದ ಸ್ಪರ್ಶದಿಂದ ಧನ್ಯವಾಗಿರುವ ಈ ಬ್ರಹ್ಮದೇವರು ಅವರ ಅಪೇಕ್ಷೆಯಂತೆ ಸುವರ್ಣ ಪರ್ವತವನ್ನು ಅವರಿಗೆ ದಾನಮಾಡಿ ಸತ್ಯಲೋಕಕ್ಕೆ ತೆರಳಿದರು* ವಿದ್ವಾಂಸರು ಆ ಪರ್ವತವನ್ನು ಹಂಚಿಕೊಳ್ಳಲು ಯೋಚಿಸಿದರು . ಸುವರ್ಣಮಯವಾದ ಆ ಪರ್ವತವನ್ನು ಆಕ್ರಮಿಸಿ ವಿಭಾಗಿಸಲು ಪ್ರಯತ್ನಿಸಿದ ಅವರು ಅಸಾಧ್ಯವಾಗಿ ತುಂಬಾ ಬಳಲಿದರು. *ಅನಂತರ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸರಳ ಸತ್ಯವನ್ನು ಅರ್ಥಮಾಡಿಕೊಂಡ ಅವರು ಪರ್ವತವನ್ನು ಉರುಳಿಸಿ ಬಳಿಕ ಹಂಚಿಕೊಳ್ಳಲು ನಿರ್ಧರಿಸಿದರು* ಬಳಲಿಕೆ ಪರಿಹಾರವಾದ ಬಳಿಕ ಎಲ್ಲರೂ ಒಂದಾಗಿ ಪರ್ವತವನ್ನು ಉರುಳಿಸಲು ಸನ್ನದ್ಧರಾದರು. ಆ ಸಮಯದಲ್ಲಿ ಬಳಿಯಲ್ಲೇ ಇದ್ದ ಸುಪಾರ್ಶ್ವಕ ಎಂಬ ಪರ್ವತವು ಎದ್ದು ಬಂದು ವಿದ್ವಾಂಸರಿಗೆ ವಿನಯದಿಂದ ವಂದಿಸಿ *ಪೂಜ್ಯರೇ ನೀವೆಲ್ಲರೂ ವಿದ್ಯಾವಂತರು , ಬುದ್ಧಿವಂತರು . ವಿದ್ಯಾ ಬುದ್ಧಿಗಳನ್ನು ಕೇವಲ ಹೊಟ್ಟೆ ಹೊರೆಯಲು ಸಂಪತ್ತು ಕೊಡಿಸಲು ವಿನಿಯೋಗಿಸುವುದು ಮೂರ್ಖತನ* ಪ್ರಕೃತಿಗಿಂತ ಶ್ರೇಷ್ಠ ಸಂಪತ್ತು ಬೇರೆಯಿಲ್ಲ ಬಾಳಿಗೆ ಭದ್ರ ನೆಲೆಯೂ ಈ ಪ್ರಕೃತಿಯೇ . ಆದುದರಿಂದ ವಿಶ್ವದ ಸಕಲ ಚೇತನ ಅಚೇತನಗಳನ್ನು ಪ್ರೀತಿಸಿ ಕಾಪಾಡುವುದೇ ಕಲಿತ ವಿದ್ಯೆಯ ಸಾರ್ಥಕತೆ. *ನೀವು ಪರ್ವತವನ್ನು ಉರುಳಿಸುವುದರಿಂದ ಅಸಂಖ್ಯಾತ ಮರಗಿಡಗಳು ನಾಶವಾಗುತ್ತದೆ* ವೈವಿಧ್ಯಮಯ ಜೀವಿಗಳ ವಂಶ ಮಾಯವಾಗುತ್ತದೆ. *ಅದ್ಭುತ ಔಷಧಿಗಳು ಅಳಿದು ಹೋಗುತ್ತವೆ*. ಬಂಡೆಗಳು ಉರುಳಿ ಭೂಮಿ ಕುಸಿಯುತ್ತದೆ. ಪ್ರಕೃತಿಯ ಸಮತೋಲನ ತಪ್ಪುತ್ತದೆ. *ಬಂಗಾರದ ಆಸೆಯಿಂದ ಸಕಲ ಜೀವ ಸಂಕುಲಗಳ ಅನ್ನದ ಬಟ್ಟಲನ್ನು ನಾಶಮಾಡಬೇಡಿ ನಿಸರ್ಗವೇ ಜೀವಿಗಳ ಆಪ್ತ ಬಂಧು . ಆದುದರಿಂದ ಪರ್ವತವನ್ನು ಉರುಳಿಸಬೇಡಿ . ಉಳಿಸಿ ಆಗ ನಿಮ್ಮ ಒಗ್ಗಟ್ಟಿನ , ವಿದ್ಯಾ , ಬುದ್ಧಿಗಳ ಶಕ್ತಿ ಅರ್ಥಪೂರ್ಣವಾಗುತ್ತದೆ. ಎಂದು ಹೇಳಿತು*.
ಪರ್ವತದ ಮಾತು ಕೇಳಿ ವಿದ್ವಾಂಸರು ವಿವೇಕದಿಂದ ಯೋಚಿಸಿದರು. ಅದರ ಮಾತು ಅಹುದೆನಿಸಿತು . ಅನಂತರ ಅವರು ಪ್ರಕೃತಿಯು ಮೇಲೆ ಆಕ್ರಮಣ ಮಾಡದೆ ಅದು ಪ್ರೀತಿಯಿಂದ ನೀಡಿದ್ದನು ಗೌರವದಿಂದ ಸ್ವೀಕರಿಸಿ ಸಂತೃಪ್ತಿ ಜೀವನ ಸಾಗಿಸಿದರು. ಬದುಕು ಸಮೃದ್ಧವಾಯಿತು ಈ ಸಂದರ್ಭದಲ್ಲಿ *ಮಧು ಎಂಬ ರಾಕ್ಷಸನು ಅವರಿಗೆ ಹಿಂಸೆಯನ್ನು ನೀಡಿದನು.* ಅನಂತರ ಆತ ಸ್ವರ್ಗಕ್ಕೆ ದಾಳಿಯನ್ನಿಟ್ಟನು. ಮೂರು ಲೋಕಗಳನ್ನು ಸ್ವಾಧೀನ ಪಡಿಸಿ ಕ್ರೌರ್ಯದಿಂದ ಎಲ್ಲರನ್ನೂ ಪೀಡಿಸಿದನು *ದೇವತೆಗಳೂ , ಋಷಿಗಳೂ ಮಹಾವಿಷ್ಣುವಿನ ಹತ್ತಿರ ತಮ್ಮ ಕಷ್ಟಗಳನ್ನು ಹೇಳಿಕೊಂಡರು* ಮಹಾವಿಷ್ಣು ಚಕ್ರಪಾಣಿಯಾಗಿ ಬಂದು ರಾಕ್ಷಸನನ್ನು ಹುಡುಕಿದನು ಘೋರ ಸಂಗ್ರಾಮ ನಡೆಯಿತು. *ಶ್ರೀ ಹರಿಯು ಮಧು ರಾಕ್ಷಸನನ್ನು ಚಕ್ರದಿಂದ ಸೀಳಿ ಎಸೆದನು ಆ ದೇಹ ಸುಪಾರ್ಶ್ವಕ ಪರ್ವತದಲ್ಲಿ ಬಿತ್ತು* ಆಗ ಆತನಿಗೆ ಜ್ಞಾನೋದಯವಾಯಿತು ವಿಷ್ಣುವಿನೊಡನೆ ಕ್ಷಮೆಯಾಚಿಸಿ *ನನ್ನ ಹೆಸರು ಲೋಕದಲ್ಲಿ ಸ್ಥಿರವಾಗಿರುವಂತೆ ಅನುಗ್ರಹಿಸು* ಎಂದು ಬೇಡಿಕೊಂಡನು. ವಿಷ್ಣುವು ತನ್ನ ದೇಹದಿಂದ ನದಿಯೊಂದನ್ನು ಸೃಷ್ಠಿಸಿ ಸುಪಾರ್ಶ್ವಕ ಪರ್ವತದಲ್ಲಿ ಇರಿಸಿದನು . *ಪ್ರಕೃತಿಯ ನಾಶವನ್ನು ತಪ್ಪಿಸಿದ ಪರ್ವತವು ಲೋಕೋಪಕಾರಿಯಾದ ನದಿಯೊಂದನ್ನು ಪಡೆದು ಧನ್ಯವಾಯಿತು* . ಶ್ರೀ ಹರಿ ಆ ನದಿಗೆ *ಮಧುವಾಹಿನೀ* ಎಂದು ಹೆಸರಿಟ್ಟು ವೈಕುಂಠಕ್ಕೆ ತೆರಳಿದನು.🙏🏻
*ಮಧುವಾಹಿನಿ ನದಿ* ಪಶ್ಚಿಮವಾಗಿ ಹರಿಯುವ ಸುಂದರವಾದ ನದಿಯಾಗಿದೆ ಇದು *ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿದೆ.*
#ಮತ್ತೊಂದು_ನದಿಯ_ಮಾಹಿತಿಯೊಂದಿಗೆ✍💐
*ಮುಂದುವರೆಯುವುದು......*
(ಸಂಗ್ರಹ)
No comments:
Post a Comment