Thursday, 18 June 2020

ಶೋಣಾನದಿ ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

#ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

ಅಂತಹ *ಜಲದ ಸಿಂಚನದ ನದಿಗಳ ಬಗ್ಗೆ ತಿಳಿಯೋಣ ಬನ್ನಿ

#ಶೋಣಾನದಿ

ಒಬ್ಬ ಅಂಧಕನೆಂಬ ರಾಕ್ಷಸನಿದ್ದನು. *ವಿಶ್ವವನ್ನೇ ಆಳಬೇಕೆಂದು ಬಯಸಿದ ಮಹತ್ವಾಕಾಂಕ್ಷಿ ಈತ*. ಅದಕ್ಕೆ ಬೇಕಾದ ಶಕ್ತಿಯನ್ನು ಸಂಗ್ರಹಿಸಲು ತಪಸ್ಸಿಗಾಗಿ ಕಾಡಿಗೆ ಹೋದನು. ಬ್ರಹ್ಮ ದೇವರನ್ನು ಕುರಿತು ಉಗ್ರವಾದ ತಪಸ್ಸನ್ನು ಕೈಗೊಂಡನು . ಬಹಳ ಕಾಲ ಕಳೆಯಿತು. ದೇವರು ಪ್ರತ್ಯಕ್ಷನಾಗಲಿಲ್ಲ. ಅದಕ್ಕಾಗಿ ತನ್ನ ದೇಹದ ಮಾಂಸ ಖಂಡಗಳನ್ನೇ ಕಡಿದು ಕಡಿದು ಹೋಮಾಗ್ನಿಯಲ್ಲಿ ಅರ್ಪಿಸಿದನು . *ಈತನ  ಹಠಯೋಗವನ್ನು ನೋಡಿದ ಬ್ರಹ್ಮದೇವರು ಪ್ರತ್ಯಕ್ಷರಾದರು* ವರ ಕೇಳುವಂತೆ ಹೇಳಿದರು.  ಅಂಧಕನು ಎಲ್ಲಾ ರಾಕ್ಷಸರಂತೆ " ಮರಣವೇ ಬಾರದಂತೆ ಅನುಗ್ರಹಿಸಬೇಕೆಂದು ಕೇಳಿಕೊಂಡನು. *ಬ್ರಹ್ಮದೇವರು ಆ ವರ ಕೊಡಲು ನಿರಾಕರಿಸಿದರು* ಸಾವಿನಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ . ಆದರೆ ಅದಕ್ಕೊಂದು ಕಠಿಣ ಮಾರ್ಗವನ್ನು ನೀನು ಆಯ್ದುಕೊಳ್ಳಬಹುದು ಎಂದು ಹೇಳಿದರು. 
ಬ್ರಹ್ಮದೇವರ ಮಾತು ಕೇಳಿದ ಅಂಧಕನು *ಹಾಗಾದರೆ ಭವಿಷ್ಯದಲ್ಲಿ ನಾನು ಎಂದಾದರೂ ಜಗತ್ತಿನ ತಾಯಿಯಾದ ಪಾರ್ವತಿದೇವಿಯನ್ನು ಮೋಹಿಸಿದರೆ ಜಗತ್ತಿನ ತಂದೆಯಾದ ಪರಮೇಶ್ವರನಿಂದ ನನ್ನ ಪಾಲಿಗೆ ಮರಣ ಬರಲಿ ಎಂದು ಕೇಳಿಕೊಂಡನು* ತಥಾಸ್ತು ಎಂದು ಬ್ರಹ್ಮದೇವರು ಅದೃಶ್ಯರಾದರು ಅಂಧಕನು ಸಂಭ್ರಮದಿಂದ ಅರಮನೆಗೆ ಸೇರಿದನು. ಅರಮನೆಗೆ ಬಂದ ಅಂಧಕನನ್ನು ಕಂಡು ಪರಿವಾರದವರು ಅತ್ಯಂತ ಸಂತೋಷದಿಂದ ಹೊಗಳಿದರು. ಪ್ರಜಾಜನರು ಆನಂದಾತಿರೇಕದಿಂದ ನಲಿದು ನರ್ತಿಸಿದರು. ಅಭಿಮಾನಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಅಂಧಕನು ತನ್ನ ಸೇನೆಯನ್ನು ಬಲಪಡಿಸಿದನು. *ಭೂಲೋಕವನ್ನು ಗೆದ್ದನು ಸ್ವರ್ಗದಲ್ಲಿ ಅಧಿಕಾರ ಸ್ಥಾಪಿಸಿ ಇಂದ್ರಾದಿಗಳನ್ನು ಆಳುಗಳನ್ನಾಗಿ ಮಾಡಿಕೊಂಡನು* ಪಾತಾಳಕ್ಕೆ ಇಳಿದನು . ನಾಗಗಳ ಸಂಪತ್ತನ್ನು ಸೂರೆಗೊಂಡನು. ಹೀಗೆ *ಯಕ್ಷ , ಗಂಧರ್ವ , ಗರುಡರನ್ನು, ಗೆದ್ದು ತನ್ನ ಕ್ರೌರ್ಯಶೌರ್ಯಗಳಿಂದ ವಿಶ್ವಕ್ಕೆ ನಾಯಕನಾದನು . ರಾಕ್ಷಸರು ಸಂತಸಪಟ್ಟರು ಸಜ್ಜನರು ಭಯದಿಂದ ನಡುಗಿದರು* ಅಂಧಕನಿಗೆ ಒಂದು ದೌರ್ಬಲ್ಯವಿತ್ತು.  ತಾನು ಅಧಿಕಾರ ಸ್ಥಾಪಿಸಿದ ದೇಶಗಳಿಂದ ಸಂಪತ್ತನ್ನು ಮಾತ್ರ ಈತ ತರುತ್ತಿರಲಿಲ್ಲ. ಅಲ್ಲಿರುವ ಚೆಲುವೆಯರನ್ನೂ ಬಲಾತ್ಕಾರದಿಂದ ಕರೆತಂದು ಅಂತಃಪುರದಲ್ಲಿ ಸೇರಿಸುತ್ತಿದ್ದನು. ಆ ಸಂಖ್ಯೆ ಸಾವಿರ, ಲಕ್ಷ , ಕೋಟಿ ದಾಟಿತ್ತು. ಇವನು ಬಿಡುವಿನ ಸಮಯಗಳಲ್ಲಿ  ಆ ಸುಂದರಿಯರೊಡನೆ ಪರ್ವತ ಪ್ರದೇಶಗಳಲ್ಲಿ ವಿಹರಿಸುತ್ತಿದ್ದನು.
ಹೀಗೆ ಬಹಳ ವರುಷಗಳು ಕಳೆದವು . ಭೂಭಾರ ಅತಿಯಾಯಿತು.ಒಂದು ದಿನ ಈತ ವಿಲಾಸಿನಿಯರ ಜತೆ ಮೇರು ಗಿರಿಯಲ್ಲಿ ವಿಹರಿಸುವಾಗ ಸುಂದರಿಯೋರ್ವಳನ್ನು ಕಂಡನು. *ಆಕೆ  ಪಾರ್ವತೀ ದೇವಿ ಎಂದು ತಿಳಿಯಿತು. ಪಾರ್ವತೀ ದೇವಿಯನ್ನು ಕಂಡು ಅಂಧಕನಿಗೆ ಮೋಹ ಅಂಕುರಿಸಿತು. ಆಕೆಯನ್ನು ಕೂಡಾ ತನ್ನ ಅಂತಃಪುರ ಸೇರಿಸುವ ಮನಸ್ಸು ಆತನಿಗಾಯಿತು. ತಕ್ಷಣ ಆಕೆಗೆ ತನ್ನೊಂದಿಗೆ ಬರುವಂತೆ ಆಜ್ಞಾಪಿಸಿದನು*. ಪಾರ್ವತಿ ಅಂಧಕನನ್ನು ತಿರಸ್ಕರಿಸಿ ಅದೃಶ್ಯಳಾದಳು .
ಅಂಧಕನಿಗೆ ಸಿಟ್ಟು ಬಂತು ಮಂತ್ರಿಗಳನ್ನು ಕರೆದು ಕೈಲಾಸದೆಡೆಗೆ ಕಳುಹಿಸಿ ಪತ್ನಿಯನ್ನು ಕಳುಹಿಸಿಕೊಡುವಂತೆ ಶಿವನಿಗೆ ಆಜ್ಞಾಪಿಸಿದನು. *ಶಿವನು ಆತನ ಮಂತ್ರಿಗಳೂಡನೆ ಸಾಧ್ಯವಾದರೆ ಅಂಧಕ ಯುದ್ಧದಲ್ಲಿ ನನ್ನನ್ನು ಗೆದ್ದು ನನ್ನ ಪತ್ನಿಯನ್ನು ಕರೆದುಕೊಂಡು ಹೋಗಲಿ ಎಂದು ಹೇಳಿ ಕಳುಹಿದನು. ಮಂತ್ರಿಗಳು ಪರಮೇಶ್ವರನ ನಿರ್ಧಾರವನ್ನು ತಮ್ಮ ನಾಯಕನಿಗೆ ತಿಳುಹಿಸಿದರು*. ಅಂಧಕಾಸುರ ಕೋಪದಿಂದ ಕುದಿದನು. ಕೂಡಲೇ ಸೇನೆಯನ್ನು ಒಗ್ಗೂಡಿಸಿ ಕೈಲಾಸವನ್ನು ಮುತ್ತಿದನು. *ಶಿವನ ಸೇನೆಗೂ ರಾಕ್ಷಸನ ಸೇನೆಗೂ ಯುದ್ಧ ನಡೆಯಿತು . ಶಿವನ ಸೇನೆಗೆ ಸೋಲು ಸವನಿಸಲು ಶಿವನು ತಕ್ಷಣ ಅಂಧಕನನ್ನು ಎದುರಿಸಿದನು. ನಿಗೂಪರಮೇಶ್ವರನಿಗೂ ಭಯಂಕರ ಸಂಗ್ರಾಮ ನಡೆಯಿತು ಅಂಧಕ ಈಶ್ವರನು ತನ್ನಲ್ಲಿರುವ ದಿವ್ಯ ತೇಜಸ್ಸನ್ನು ಹೊರಗಡೆಹಿದನು*. ಆ ತೇಜಸ್ಸು ಅಂಧಕನ ದೇಹದ ರಕ್ತಮಾಂಸವನ್ನು ಬತ್ತಿಸಿತು. *ತಕ್ಷಣ ಪರಶಿವ ತನ್ನ ತ್ರಿಶೂಲದಿಂದ ಚುಚ್ಚಿ ಅಂಧಕನ ದೇಹವನ್ನು ಎತ್ತಿ ಹಿಡಿದನು. ರಾಕ್ಷಸರಿಗೆ ಜ್ಞಾನೋದಯವಾಯಿತು*. ದೇವರಲ್ಲಿ ಕ್ಷಮೆಯಾಚಿಸಿದ ಅಂಧಕ ಕಾಪಾಡಬೇಕೆಂದು ಬೇಡಿಕೊಂಡನು . *ಶಿವನು ಅವನನ್ನು ಕ್ಷಮಿಸಿ ತನ್ನ ಗಣಗಳಲ್ಲಿ ಸೇರಿಸಿಕೊಂಡನು* ಅಂಧಕನೊಡನೆ ಹೋರಾಡಿ ಪರಮೇಶ್ವರನು ಬಳಲಿದ್ದನು. ಆತ ಒಂದೆಡೆ ತನ್ನ ತ್ರಿಶೂಲವನ್ನು ಊರಿ ತಪಸ್ಸಿಗೆ ಕುಳಿತನು. *ಆಗ ತ್ರಿಶೂಲದಿಂದ ಚಿಮ್ಮಿದ ನೀರು ನದಿಯಾಗಿ ಹರಿಯಿತು ಆ ನದಿ ಶೋಣಾ ಎಂದು ಪ್ರಸಿದ್ಧವಾಯಿತು*

*ಮುಂದುವರೆಯುವುದು ಮತ್ತೊಂದು ನದಿಯ ಮಾಹಿತಿಯೊಂದಿಗೆ* 💐✍

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment