ನರಸಿಂಹ ಜಯಂತಿ ಹಬ್ಬದ ಮಹತ್ವ ತಿಳಿದಿದೆಯೇ?
ವಿಷ್ಣುವಿನ ಹತ್ತವತಾರದಲ್ಲಿ ನರಸಿಂಹ ಅವತಾರವು ಒಂದು. ಅರ್ಧ ಮನುಷ್ಯ ಅರ್ಧ ಸಿಂಹ ಇರುವ ರೂಪ. ಭಕ್ತ ಪ್ರಹ್ಲಾದನ ಮೊರೆಯನ್ನು ಕೇಳಿ ಕಂಭ ಒಡೆದು ಪ್ರತ್ಯಕ್ಷನಾಗಿ, ಹಿರಣ್ಯ ಕಷಿಪುವನ್ನು ವಧೆ ಮಾಡಿ ಪ್ರಹ್ಲಾದನನ್ನು ಶ್ರೀ ನೃಸಿಂಹ ಕಾಪಾಡಿದನು.
ನರಸಿಂಹ ಜಯಂತಿ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದನ್ನು ಶ್ರೀ ವೈಷ್ಣವರು, ಸೌರಮಾನ ಪಂಚಾಂಗ ಅನುಸರಿಸುವರು ಬೇರೆ ತಿಥಿ ನಕ್ಷತ್ರದಲ್ಲಿ ಆಚರಿಸುತ್ತಾರೆ. ಈ ದಿನ ಲಕ್ಷ್ಮಿ ನರಸಿಂಹ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ. ಕೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತ ಮಾಡುತ್ತಾರೆ. ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ. ಇಲ್ಲಿ ನೀಡಿರುವ ಮಂತ್ರವನ್ನು ಭಕ್ತಿಯಿಂದ ಪಠಿಸಿ ಹಾಗೂ ದೇವರ ಕೃಪೆಗೆ ಪಾತ್ರರಾಗಿ
ಶ್ರೀನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ ಮಹಾಬಲಃ ಉಗ್ರಸಿಂಹೋ ಮಹಾದೇವ ಸ್ಮಂಭಜಸ್ ಚೋಗ್ರಲೋಚನಃ
ವೈಶಾಖಮಾಸ ಶುಕ್ಲ ಪಕ್ಷ ಚತುರ್ದಶಿಯ ದಿನದಂದು ಶ್ರೀ ನರಸಿಂಹ ದೇವರ ಜಯಂತಿಯನ್ನು ಆಚರಿಸಬೇಕು.
ಆಚರಣೆಯ ವಿಧಾನ :
ನಿರ್ಮಲಮನಸ್ಕರಾಗಿ ಬೆಳಿಗ್ಗೆ ಎದ್ದು ತನ್ನ ನಿತ್ಯಕರ್ಮಗಳನ್ನು ಮುಗಿಸಿ ಶುಚಯಾದ ವಸ್ತ್ರವನ್ನು ದರಿಸಿ ಶಕ್ತ್ಯಾನುಸಾರವಾಗಿ ಮನೆಯಲ್ಲಿಯೇ ಶ್ರೀ ನರಸಿಂಹ ದೇವರ ಪ್ರತಿಷ್ಠಾಪಿಸಿ ನನಾವಿಧವಾದ ಪುಷ್ಪಗಳಿಂದ ಅಲಂಕರಿಸಿ ರಂಗವಲ್ಲಿಯನ್ನು ಬಿಟ್ಟು ಜೊತೆಯಲ್ಲಿ ಲಕ್ಷ್ಮೀದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು.
ಆಚಾರ್ಯರನ್ನು ಕರೆಯಿಸಿ ಅವರಿಂದ ಷೋಡಶೋಪಚಾರ ಪೂಜೆಗಳನ್ನು ಕ್ರಮಬದ್ದವಾಗಿ ವೇದೋಕ್ತಮಂತ್ರಗಳಿಂದ ನರಸಿಂಹ ಮತ್ತು ಲಕ್ಷ್ಮೀದೇವಿಯನ್ನು ಪೂಜೆ ಮಾಡಿಸಬೇಕು. ನೈವೇದ್ಯಕ್ಕೆ ವಿಷ್ಣು ಪ್ರಿಯವಾದ ಪುಳಿಯೋಗರೆ, ಮೊಸರನ್ನವನ್ನು ಮಾಡಬೇಕು.
ನಂತರ ಬಂದ ಆಚಾರ್ಯರಿಗೆ ಧನದಾನ್ನವನ್ನು ಶಕ್ತ್ಯಾಸಾರವಾಗಿ ಕೊಟ್ಟು ಅವರಿಂದ ಆರ್ಶಿವಾದವನ್ನು ತೆಗೆದುಕೊಳ್ಳಬೇಕು. ಪೂಜೆಗೆ ಬಂದವರಿಗೂ ಪ್ರಸಾದವನ್ನು ಕೊಡಬೇಕು.
ಬಡವರಿಗೂ ಅಂಗವಿಕಲರಿಗೂ ಊಟವನ್ನು ಮಾಡಿಸಿ ಅವರಿಗೆ ಯಥಾಶಕ್ತಿ ಸಹಾಯವನ್ನು ಮಾಡಬೇಕು ಹೀಗೆ ಶ್ರೀ ನರಸಿಂಹ ಮತ್ತು ಲಕ್ಷ್ಮೀದೇವಿಯನ್ನು ಪೂಜಿಸಿದರೆ ಸಕಲ
ಸುಖಗಳನ್ನು ಅನುಭವಿಸಬಹುದು.
ಪಾಪವಿಮುಕ್ತರಾಗುವರು ಮತ್ತು ಈ ಪೂಜೆಯಿಂದ ಸಕಲವಾದ ಇಷ್ಟರ್ಥಗಳು ಹಿಡೇರುವುದು.
ಇದಕ್ಕೆ ಈ ಮಂತ್ರವನ್ನು ಜಪಿಸಿ
ಮಂತ್ರ
ಓಂ ನೃಸಿಂಹಾಯ ವಿದ್ಮಹೇ
ವಜ್ರನಖಾಯ ಧೀಮಹಿ
ತನ್ನಃ ಸಿಂಹಃ ಪ್ರಚೋದಯಾತ್
ಓಂ ಮಹಾದೇವ್ಯೈ ಚ ವಿದ್ಮಹೇ
ವಿಷ್ಣು ಪತ್ನ್ಯೈಚ ಧೀಮಹಿ
ತನ್ನೋ ಲಕ್ಷ್ಮೀಃ ಪ್ರಚೋದಯಾತ್
#ಶ್ರೀ_ಕೃಷ್ಣಾರ್ಪಣ_ಮಸ್ತು
No comments:
Post a Comment