Thursday, 18 June 2020

ವಾರಾಹಿ ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

#ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

ಅಂತಹ *ಜಲದ ಸಿಂಚನದ ನದಿಗಳ ಬಗ್ಗೆ ತಿಳಿಯೋಣ ಬನ್ನಿ

                                   #ವಾರಾಹಿ

ಹರಾಡಿ ನದಿ ಎಂದೂ ಕರೆಯಲ್ಪಡುವ ವರಾಹಿ ನದಿ, ಭಾರತದಲ್ಲಿ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಮೂಲಕ ಹರಿಯುತ್ತದೆ. ಇದು ಹಾಲಾಡಿ, ಬಸರುರ್, ಕುಂದಾಪುರ ಮತ್ತು ಗುಂಗಲ್ಲಿ ಮೂಲಕ ಸಮುದ್ರಕ್ಕೆ ಸೇರುತ್ತದೆ. ಇದು ಸೂಪಾರ್ಣಿಕಾ ನದಿ, ಕೆಡಾಕ ನದಿ, ಚಕ್ರ ನದಿ, ಮತ್ತು ಕುಬ್ಜಾ ನದಿಯನ್ನು ಸೇರಿಕೊಂಡು ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ

*ಕಶ್ಯಪ ಮಹರ್ಷಿಗಳು ಅಗ್ನಕಾರ್ಯ ಪೂರಯಿಸಿ ಅಸ್ತಮಿಸುವ ಸೂರ್ಯನನ್ನು ನೋಡುತ್ತಾ ಏನೋ ಯೋಚಿಸುತ್ತಿದ್ದರು* ಆ ಹೂತ್ತಿನಲ್ಲಿ ಅವರ ಹಿರಿಯ ಹೆಂಡತಿ ದಿತಿದೇವಿ ಅವರ ಬಳಿಗೆ ಬಂದಳು. ಪತಿಯನ್ನು ಓಲೈಸುತ್ತಾ "ನನ್ನ ಸವತಿಯರೆಲ್ಲಾ ಪುತ್ರವತಿಯಾರಾಗಿ ಸುಖ-ಸಂತೋಷದಿಂದ ನಲಿದಾಡುತ್ತಿದ್ದಾರೆ ಆದರೆ ನಾನು ಆಪುತ್ರವತಿಯಾಗಿದ್ದೇನೆ. ನನಗೆ ಸಂತಾನವನ್ನು ಕರುಣಿಸು" ಎಂದು ವಿನಯದಿಂದ ಬೇಡಿಕೊಂಡಳು. 

ಕಶ್ಯಪರು ದಿತಿಯನ್ನು ಸಮಾಧಾನ ಪಡಿಸುತ್ತಾ ಇದು ಸಂಧ್ಯಾ ಸಮಯ . ಭೂತ-ಬೇತಾಳಾದಿಗಳು ಸಂಚರಿಸುವ ಭಯಂಕರ ಕಾಲ. ಇಂತಹ ಸಂದರ್ಭದಲ್ಲಿ ನಾನು ಮಕ್ಕಳನ್ನು ಅನುಗ್ರಹ ಮಾಡಿದರೆ ಘೋರ ರಾಕ್ಷಸರು ಹುಟ್ಟುತ್ತಾರೆ. ಆದುದರಿಂದ ಇಂದು ನಿನ್ನೆ ಆಸೆಯನ್ನು ಪೂರೈಸಲು ಆಗುವುದಿಲ್ಲ .ಮುಂದೆ ಶುಭ ಮುಹೂರ್ತ ಬಂದಾಗ ಸತ್ಪುತ್ರನನ್ನು ನಾನು ಕರುಣಿಸುತ್ತೇನೆ ಎಂದನು.

*ಹಠಮಾರಿಯಾದ ಹೆಣ್ಣು ದಿತಿ. ಕಶ್ಯಪರ ಮಾತು ಕೇಳಲೇ ಇಲ್ಲ. ಪುತ್ರಿವತಿಯಾಗ ಬೇಕೆಂಬ ಆಸೆಯಿಂದ ಪತಿಯನ್ನು ಪೀಡಿಸಿದಳು .ಹೆಂಡತಿಯ ಒತ್ತಾಯಕ್ಕೆ ಕಟ್ಟು ಬಿದ್ದು ಮಹರ್ಷಿಗಳಾದ ಕಶ್ಯಪರು ದಿತಿಗೆ ಸಂತಾನವನ್ನು ಅನುಗ್ರಹಿಸಿದನು.

*ಕಶ್ಯಪರ ಮಾತು ಸತ್ಯವಾಯಿತು .ಇದ್ದಕ್ಕಿದ್ದ ಹಾಗೇ ಜಗತ್ತಿಗೆ ಕತ್ತಲು ಕವಿಯಿತು ಅಂತರಿಕ್ಷದಲ್ಲಿ ಅನೇಕ ಉತ್ಪಾತಗಳು  ಕಾಣಿಸಿಕೊಂಡವು . ಭೂಮಿ ನಡುಗತೊಡಗಿತು* ಪರ್ವತಗಳು ಅಲ್ಲಾಡಿದುವು . ಎಂಟು ದಿಕ್ಕುಗಳಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ಉಲ್ಕೆಗಳು ಉದುರುತ್ತಿದ್ದುವು . ಧೂಮಕೇತುಗಳು ಕಾಣಿಸಿಕೊಂಡವು . ಬಿರುಗಾಳಿ ಸುಳಿಗಾಳಿ ಬೀಸತೊಡಗಿತು. ಸೂರ್ಯ- ಚಂದ್ರರಿಗೆ ಗ್ರಹಣ ಕವಿಯಿತು. ಕಾಗೆ- ಗೂಗೆಗಳು ಕೂಗುತ್ತಿತ್ತು . *ನರಿ- ನಾಯಿಗಳು ಊಳಿಡತೊಡಗಿದವು. ಗುಡುಗು ಮಿಂಚುಗಳೊಂದಿಗೆ ಧಾರಕಾರವಾಗಿ ಮಳೆ ಸುರುಯುತ್ತಿತ್ತು ಇಂತಹ ಭಯಂಕರ ಹೊತ್ತಿನಲ್ಲಿ ದಿತಿ ಅವಳಿ ಮಕ್ಕಳಿಗೆ ಜನ್ಮವಿತ್ತು . *ಕಶ್ಯಪ ಋಷಿಗಳು ಆ ಮಕ್ಕಳಿಗೆ ಹಿರಣ್ಯಾಕ್ಷ -ಹಿರಣ್ಯ ಕಶ್ಯಪ ಎಂದು ಹೆಸರಿಸಿದರು* ಇವರೀರ್ವರೂ ಬೆಳೆದು ದೊಡ್ಡವರಾಗಿ ಬ್ರಹ್ಮ ದೇವರಿಂದ ವರವನ್ನು ಪಡೆದು ಅಜೇಯರಾಗಿದ್ದರು. *ಹಿರಣ್ಯಾಕ್ಷನು ದಿನವೊಂದಕ್ಕೆ ನೂರು ಹಂದಿಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತಿದ್ದನು* ಮಾತ್ರವಲ್ಲ ಜಗತ್ತಿನ ಯಾವುದೇ ಪ್ರಾಣಿ - ಪಕ್ಷಿಗಳಿಂದಾಗಲೀ ಮಾನವ ದೇವತೆ , ರಾಕ್ಷಸರಿಂದಾಗಲೀ ಮರಣವೇ ಬಾರದಂತಹ ವರವನ್ನು ಸಂಪಾದಿಸಿ ಕೊಂಡಿದ್ದನು. ಒಂದು ವೇಳೆ ಈತನಿಗೆ ಸಾವು ಬಂದರೂ ಬರಬಹುದಾದ ಸಾಧ್ಯತೆ ಹಂದಿ ಯಿಂದ ಮಾತ್ರವಿತ್ತು . ತನ್ನ ನಿತ್ಯದ ಆಹಾರದ ಪ್ರಾಣಿಯಿಂದ ತನಗೆ ಎಂದಿಗೂ ಸಾವು ಬಾರದೆಂದು ದೃಢವಾಗಿ ನಂಬಿದ್ದನು *ಆದ್ದುದರಿಂದ ತಾನು ಮೃತ್ಯುಂಜಯನೆಂದು ಅಹಂಕಾರದಿಂದ ಬೀಗಿದ್ದನು* ಹೀಗೆ  ಮದದಿಂದ ಮೆರೆಯುತ್ತಿದ್ದ *ಹಿರಣ್ಯಾಕ್ಷ ಕೈಯಲ್ಲಿ ಗದೆಯನ್ನು ಹಿಡಿದುಕೊಂಡು ಕಂಡ- ಕಂಡವರನ್ನೆಲ್ಲಾ ಯುದ್ಧಕ್ಕೆ ಕರೆಯುತ್ತಿದ್ದನು. ಸ್ವರ್ಗ , ಮರ್ತ್ಯ ಪಾತಾಳಗಳನ್ನು ಗೆದ್ದುಕೊಂಡನು. ಅಖಂಡ ವಿಶ್ವಕ್ಕೆ ಒಡೆಯನಾಗಿ ಋಷಿಗಳನ್ನು ಹಿಂಸಿಸಿದನು*. ಸ್ತ್ರೀ ಯರನ್ನು ಕೆಡಿಸಿದನು. ಈತನ ದೌಷ್ಟ್ರ ಮಿತಿಮೀರಿತು. 

ಮುಂದೆ ಇವನು ಶ್ರೀಹರಿಯನ್ನು ಕೊಲ್ಲಬೇಕೆಂಬ ಸಂಕಲ್ಪಿಸಿದನು . ನಾರದನಲ್ಲಿ ಆತನಿರುವ ಜಾಗವನ್ನು ತೋರಿಸೆಂದು ಹೇಳಿದನು ಕುತಂತ್ರಗಳಲ್ಲಿ ನಿಪುಣನಾದ ನಾರದ *ಭೂದೇವಿ ಶ್ರೀಹರಿಯ ಪತ್ನಿ . ಆಕೆಯನ್ನು ಪೀಡಿಸಿದರೆ ಹರಿ ನಿನ್ನನ್ನು ವಿಚಾರಿಸಲು ಬರುತ್ತಾನೆ* ಆಗ ಬಹಳ ಸುಲಭವಾಗಿ ಹರಿಯನ್ನು ಕೊಲ್ಲಬಹುದು. ಎಂದು ಉಪಾಯದಿಂದ ಸಲಹೆಯಿತ್ತನು. ನಾರದನ ಕುತಂತ್ರ ಹಿರಣ್ಯಾಕ್ಷನಿಗೆ ತಿಳಿಯಲೇ ಇಲ್ಲ. ಅವನ ಮಾತು ನಿಜವೆಂದು ನಂಬಿ ದೇಹಬಲದಿಂದ ಕೊಬ್ಬಿದ ಹಿರಣ್ಯಾಕ್ಷ ಭೂದೇವಿಯನ್ನು ಪೀಡಿಸಿದನು . *ಭೂಮಿಯನ್ನು ಚಾಪೆಯಂತೆ ಸುತ್ತಿ ಕಂಕುಳಲ್ಲಿ ಇಟ್ಟು ರಸಾತಳವನ್ನು ಸೇರಿದನು* ಹಿರಣ್ಯಾಕ್ಷ ಪಡೆದ ವರದ ರಹಸ್ಯವನ್ನು ತಿಳಿದ ಶ್ರೀ ಹರಿ ತಕ್ಷಣ ಹಂದಿಯ ರೂಪವನ್ನು ತಾಳಿದನು. ಕಡಲಿನ ಆಳಕ್ಕಿಳಿದು ರಾಕ್ಷಸನನ್ನು ಹುಡುಕುತ್ತಾ ರಸಾತಳದವರೆಗೆ ಹೋದನು. ಅಲ್ಲಿದ್ದ ರಾಕ್ಷಸನನ್ನು ತುಡುಕಿ ಕಾದಾಡಿ ತನ್ನ ಕೋರೆ ದಾಡೆಗಳಿಂದ ಅವನನ್ನು ತಿವಿದುಕೊಂದನು . *ಭೂಮಿಯನ್ನು ಯಥಾ ಸ್ಥಾನದಲ್ಲಿರಿಸಿ ಸಹ್ಯ ಪರ್ವತವನ್ನು ಏರಿ ನಿಂತನು . ಆತನ ಮೈ ಬೆವರತೊಡಗಿತು ಅದು ನದಿಯಾಗಿ ಹರಿಯಿತು* 

#ಮುಂದುವರೆಯುವುದು_ಮತ್ತೊಂದು_ನದಿಯ

#ಮಾಹಿತಿಯೊಂದಿಗೆ ✍💐

(ಸಂಗ್ರಹ)

No comments:

Post a Comment